Dina Bhavishya read your daily horoscope predictions for july 05 2023Dina Bhavishya : ಇಂದು ಈ ರಾಶಿಯವರ ಆದಾಯ ಮೂಲ ಹೆಚ್ಚಾಗಲಿದೆ! - Vistara News

ಪ್ರಮುಖ ಸುದ್ದಿ

Dina Bhavishya : ಇಂದು ಈ ರಾಶಿಯವರ ಆದಾಯ ಮೂಲ ಹೆಚ್ಚಾಗಲಿದೆ!

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷದ ಬಿದಿಗೆಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (dina bhavishya) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

dina bhavishya kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರವಣ ನಕ್ಷತ್ರದ ಈ ದಿನ ಚಂದ್ರನು ಕುಂಭ ರಾಶಿಯಲ್ಲಿ ಸಂಚಾರ ನಡೆಸಿದ್ದಾನೆ. ಹೀಗಾಗಿ ಮೇಷ, ಕಟಕ, ಸಿಂಹ, ವೃಶ್ಚಿಕ, ಮಕರ ಹಾಗೂ ಮೀನ ರಾಶಿಗೆ ಚಂದ್ರನ ಬಲ ದೊರೆಯಲಿದೆ. ಮಿಥನು ರಾಶಿಯವರು ಇಂದು ಕುಟುಂಬದವರ ಬೆಂಬಲ ಪಡೆಯಲಿದ್ದಾರೆ. ಕುಂಭ ರಾಶಿಯ ಉದ್ಯೋಗಿಗಳು ಒತ್ತಡವನ್ನು ಎದುರಿಸಬೇಕಾಗುತ್ತದೆ. ನಿಮ್ಮ ಇಂದಿನ ದಿನ ಹೇಗಿದೆ, ಭವಿಷ್ಯ ಏನು ಹೇಳುತ್ತದೆ (kannada dina bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (05-07-2023)

ಶ್ರೀ ಶಕೇ 1945, ಶೋಭಕೃತ್‌ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ

ತಿಥಿ: ಬಿದಿಗೆ 10:01 ವಾರ: ಬುಧವಾರ
ನಕ್ಷತ್ರ: ಶ್ರವಣ 26:55 ಯೋಗ: ವೈಧೃತಿ 07:46
ಕರಣ: ಗರಜ 10:01
ಅಮೃತಕಾಲ: ಸಂಜೆ 05 ಗಂಟೆ 43 ನಿಮಿಷದಿಂದ 07 ಗಂಟೆ 08 ನಿಮಿಷದವರೆಗೆ.

ಸೂರ್ಯೋದಯ : 05:58 ಸೂರ್ಯಾಸ್ತ : 06:50

ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (dina bhavishya in kannada)

Horoscope Today

ಮೇಷ: ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ. ಆಪ್ತರಿಂದ ಸಿಹಿ ಸುದ್ದಿ. ದಿನದ ಮಟ್ಟಿಗೆ ಖರ್ಚು. ಸಂಗಾತಿಯ ಮಧುರ ಮಾತುಗಳು ಹಿತವೆನಿಸುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಕುಟುಂಬದ ಆಪ್ತರಿಂದ ಆರ್ಥಿಕ ಸಹಾಯದ ಬೇಡಿಕೆ ಬರಬಹುದು. ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಮನೋಬಲ ಹೆಚ್ಚಿಸಿಕೊಳ್ಳುವುದು ಅವಶ್ಯಕ. ಅಧೈರ್ಯ ಕಾಡಬಹುದು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರೋಗ್ಯ ಮಧ್ಯಮ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ಸದಾ ಕಲ್ಪನೆ ಮಾಡುತ್ತಾ, ಹಗಲುಗನಸು ಕಾಣುತ್ತಾ ಸಮಯ ವ್ಯರ್ಥಮಾಡಬೇಡಿ. ಬೇರೆಯವರಿಗೆ ಆರ್ಥಿಕ ಸಹಾಯ ಮಾಡಿ ನೀವು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕುವುದು ಬೇಡ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕುಟುಂಬದ ಸದಸ್ಯರಿಂದ ಆರ್ಥಿಕ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಶುಭ ಫಲ. ಹಣದ ಹರಿವು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಪ್ರಗತಿ. ಆರೋಗ್ಯ ಪರಿಪೂರ್ಣ. ಆಪ್ತ ವ್ಯಕ್ತಿಗಳೊಂದಿಗೆ ಮಾತುಕತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಸಿಂಹ: ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರುವುವು. ಆರೋಗ್ಯ ಪರಿಪೂರ್ಣ. ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಕ್ಷೇತ್ರ ದರ್ಶನ, ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಪಡೆಯುವಿರಿ. ಉದ್ಯೋಗಿಗಳಿಗೆ ಕಿರಿಕಿರಿಯಾಗುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ದೀರ್ಘಕಾಲದ ಕೆಲಸ ಕಾರ್ಯಗಳು ಇಂದು ಯಶಸ್ಸನ್ನು ತಂದು ಕೊಡಲಿವೆ. ಆದಾಯದ ಮೂಲ ಹೆಚ್ಚಾಗಲಿದೆ. ಆಪ್ತರೊಂದಿಗೆ ಮಾತುಕತೆ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ, ಕುಟುಂಬದ ವಾತಾವರಣ ಹದಗೆಡುವ ಸಾಧ್ಯತೆ. ಉದ್ಯೋಗಿಗಳಿಗೆ ಕಿರಿ ಕಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆತ್ಮವಿಶ್ವಾಸದಿಂದ ಕೆಲಸಕಾರ್ಯಗಳಲ್ಲಿ ಪ್ರಗತಿ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ಹಣಕಾಸು, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಕಾಲ. ಆರೋಗ್ಯ ಪರಿಪೂರ್ಣ .ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆರೋಗ್ಯದ ಕುರಿತು ಕಾಳಜಿ ಇರಲಿ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ವಿಜಯವನ್ನು ತಂದುಕೊಡುವ ಸಾಧ್ಯತೆ. ಹಣಕಾಸು, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ವಿವಾಹ ಅಪೇಕ್ಷಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಯಶಸ್ಸು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಹಾದಿ ಅತ್ಯವಶ್ಯಕ. ಹಣಕಾಸು ವಿಷಯದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಮಿಶ್ರ ಫಲ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಬುಧವಾರ ಯಾವೆಲ್ಲಾ ಕೆಲಸ ಮಾಡಿದರೆ ಒಳಿತು? ತಿಳಿಯಲು ಈ ವಿಡಿಯೋ ನೋಡಿ.
Horoscope Today

ಮಕರ: ಬುದ್ಧಿವಂತಿಕೆಯಿಂದ ಮಾಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಿಗುವುದು. ಶೀಘ್ರಕೋಪ ಅಪಾಯ ತರುವುದು. ಆರೋಗ್ಯ ಪರಿಪೂರ್ಣ. ಆರ್ಥಿಕ ಲಾಭ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ದುಂದುವೆಚ್ಚವನ್ನು ತಪ್ಪಿಸಿ. ಬು‌ದ್ಧಿವಂತಿಕೆಯಿಂದ ಕೆಲಸಮಾಡಿ ವ್ಯರ್ಥ ಪ್ರಯತ್ನ ಮಾಡುವುದು ಬೇಡ. ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಇದನ್ನೂ ಓದಿ : Shukra Gochar 2023 : ಜು.7 ರಂದು ಸಿಂಹ ರಾಶಿಗೆ ಶುಕ್ರನ ಸಂಚಾರ; ಈ ಮೂರು ರಾಶಿಯವರಿಗೆ ಶುಭ ಫಲ

Horoscope Today

ಮೀನ: ಮನರಂಜನೆಗಾಗಿ ಸಮಯ ವಿನಿಯೋಗಿಸುವ ಸಾಧ್ಯತೆ. ಆರೋಗ್ಯ ಮಧ್ಯಮ. ಆರ್ಥಿಕವಾಗಿ ಪ್ರಗತಿ. ಸಂಗಾತಿ ಇಂದು ನಿಮ್ಮೊಂದಿಗೆ ಮುಖ್ಯ ವಿಷಯದ ಕುರಿತು ಚರ್ಚಿಸಬಹುದು. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Bangalore Rural Lok Sabha Constituency : ಡಿ.ಕೆ ಸುರೇಶ್​​ ನಾಗಾಲೋಟಕ್ಕೆ ಡಾ. ಮಂಜುನಾಥ್​ ಅಡ್ಡಿಯಾಗುವ ಆತಂಕ

Bangalore Rural Lok Sabha Constituency : ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸಲು ಎಚ್.ಡಿ.ಕುಮಾರಸ್ವಾಮಿ ಅವರ ಭಾವ ಡಾ.ಸಿ.ಎನ್.ಮಂಜುನಾಥ್ ಅವರನ್ನು ನಿಲ್ಲಿಸಿದೆ.

VISTARANEWS.COM


on

Bangalore Rural Lok Sabha Constituency
Koo

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ (Bangalore Rural Lok Sabha Constituency) 24 ಲಕ್ಷ ಮತದಾರರನ್ನು ಹೊಂದಿರುವ ದೇಶದ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಸ್ಥಾನವು 2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂತು. ಇಲ್ಲಿ ಮೊದಲ ಚುನಾವಣೆ 2009ರಲ್ಲಿ ಇಲ್ಲಿ ನಡೆಯಿತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ (JDS) ನಾಯಕ ಎಚ್.ಡಿ.ಕುಮಾರಸ್ವಾಮಿ (HD kumaraswmay) ಈ ಕ್ಷೇತ್ರದ ಮೊದಲ ಸಂಸದ. ಆದರೆ, 2013ರ ಉಪಚುನಾವಣೆ ಸೇರಿದಂತೆ ಸತತ ಎರಡು ಬಾರಿ ಕಾಂಗ್ರೆಸ್ ಈ ಸ್ಥಾನವನ್ನು ಗೆದ್ದುಕೊಂಡಿದೆ. ಇಲ್ಲಿನ ಹಾಲಿ ಸಂಸದ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರ ಸಹೋದರ ಡಿ.ಕೆ ಸುರೇಶ್​.

ಕ್ಷೇತ್ರ ವಿಂಗಡಣೆಗೆ ಮೊದಲು ಇದನ್ನು ಕನಕಪುರ ಲೋಕಸಭಾ ಕ್ಷೇತ್ರವಾಗಿ ಗುರುತಿಸಲಾಗಿತ್ತು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಅವರು ಇಲ್ಲಿ ಕೊನೇ ಬಾರಿ ಗೆದ್ದಿದ್ದರು. ಎಂ.ವಿ.ಚಂದ್ರಶೇಖರ ಮೂರ್ತಿ ಈ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ, ಅವುಗಳಲ್ಲಿ ಏಳು ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರದ ಭಾಗವಾಗಿದ್ದವು. ತುಮಕೂರು ಜಿಲ್ಲೆಯ ಕುಣಿಗಲ್ ಜೊತೆಗೆ ಬೆಂಗಳೂರು ದಕ್ಷಿಣ, ಆನೇಕಲ್ ಮತ್ತು ರಾಜರಾಜೇಶ್ವರಿ ನಗರ ಹೊಸ ವಿಧಾನಸಭಾ ಕ್ಷೇತ್ರಗಳು ಇದರ ಭಾಗವಾಗಿವೆ.

ಡಿಕೆಸು ವೇಗಕ್ಕೆ ಅಡ್ಡಿಯಾಗುವರೇ ಮಂಜುನಾಥ್​​?

ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸಲು ಎಚ್.ಡಿ.ಕುಮಾರಸ್ವಾಮಿ ಅವರ ಭಾವ ಡಾ.ಸಿ.ಎನ್.ಮಂಜುನಾಥ್ ಅವರನ್ನು ನಿಲ್ಲಿಸಿದೆ.

ಇಲ್ಲಿ ಗೆದ್ದವರು ಯಾರು?

2014ರ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಮುನಿರಾಜು ಗೌಡ ಅವರನ್ನು 2.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಸುರೇಶ್ 6.52 ಲಕ್ಷ ಮತಗಳನ್ನು ಪಡೆದರೆ, ದೇವೇಗೌಡರು 4.21 ಲಕ್ಷ ಮತಗಳನ್ನು ಮಾತ್ರ ಪಡೆದರು.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಅಶ್ವತ್ಥನಾರಾಯಣ ಗೌಡ ಅವರನ್ನು 2,06,870 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ 2019 ರಲ್ಲಿ ಕಾಂಗ್ರೆಸ್ 54.12% ಮತಗಳನ್ನು ಹೊಂದಿತ್ತು.

ಇದನ್ನೂ ಓದಿ: Bangalore Central Election : ಮನ್ಸೂರ್ ಅಲಿ ಖಾನ್ ವಿರುದ್ಧ ಗೆದ್ದು ಅಜೇಯ ಓಟ ಮುಂದುವರಿಸುವರೇ ಪಿ. ಸಿ ಮೋಹನ್​

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಮುನಿರಾಜು ಗೌಡ ಪಿ ಅವರನ್ನು 2,31,480 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ 44.76% ಮತಗಳನ್ನು ಗಳಿಸಿದೆ.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯ ಸಿ.ಪಿ.ಯೋಗೀಶ್ವರ್ ಅವರನ್ನು 1,30,275 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಶೇ.44.73ರಷ್ಟು ಮತಗಳನ್ನು ಪಡೆದಿತ್ತು.

ವ್ಯಾಪ್ತಿ ಹೇಗಿದೆ?

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಣಿಗಲ್, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಆನೇಕಲ್, ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ 5, ಬಿಜೆಪಿ 2, ಜೆಡಿಎಸ್ 1 ಸ್ಥಾನ ಹೊಂದಿವೆ. ಭಾರತದ ಚುನಾವಣಾ ಆಯೋಗದ ಪ್ರಕಾರ, 2019 ರಲ್ಲಿ ಒಟ್ಟು ಮತದಾರರ ಸಂಖ್ಯೆ 24,97,458. 2019ರಲ್ಲಿ ಶೇ.64.9ರಷ್ಟು ಮತದಾನವಾಗಿತ್ತು. 2011 ರ ಜನಗಣತಿಯ ಅಂಕಿಅಂಶಗಳ ಪ್ರಕಾರ ನಗರ ಮತದಾರರು ಒಟ್ಟು ಮತದಾರ ಪೈಕಿ 54.2% ರಷ್ಟಿದ್ದಾರೆ. ಸರಾಸರಿ ಸಾಕ್ಷರತಾ ಪ್ರಮಾಣವು 68.91% ಆಗಿತ್ತು.

Continue Reading

ದೇಶ

Bangalore North Lok Sabha Constituency : ಕ್ಷೇತ್ರ ಬದಲಾಯಿಸಿದ ಶೋಭಾ ಕರಂದ್ಲಾಜೆಗೆ ಒಲಿಯವುದೇ ಬೆಂಗಳೂರು ಉತ್ತರ

Bangalore North Lok Sabha Constituency:ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದ್ದಾರೆ. ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸತತವಾಗಿ ಗೆದ್ದಿದ್ದಾರೆ. ಬಿಜೆಪಿಯಿಂದ ಪ್ರತಿಷ್ಠಿತ ಸ್ಥಾನವನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ತನ್ನ ರಾಷ್ಟ್ರೀಯ ವಕ್ತಾರ ಮತ್ತು ಮಾಜಿ ರಾಜ್ಯಸಭಾ ಸಂಸದ ರಾಜೀವ್ ಗೌಡ ಅವರನ್ನು ಕಣಕ್ಕಿಳಿಸಿದೆ.

VISTARANEWS.COM


on

Bangalore North Lok Sabha Constituency
Koo

ಬೆಂಗಳೂರು: 1962ರಲ್ಲಿ ಕ್ಷೇತ್ರ ಮರುವಿಂಗಡಣೆಯಾಗುವ ಮೊದಲು ಬೆಂಗಳೂರು ಉತ್ತರ ಕ್ಷೇತ್ರ ಬೆಂಗಳೂರು ನಗರ ಕ್ಷೇತ್ರದ ವ್ಯಾಪ್ತಿಯಲ್ಲಿದೆ. 1957 ರಿಂದ 1962ರವರೆಗೆ ಬೆಂಗಳೂರು ಉತ್ತರ ಬೆಂಗಳೂರು ನಗರ ಕ್ಷೇತ್ರದ ಭಾಗವಾಗಿತ್ತು. 1951ರಲ್ಲಿ ಈ ಕ್ಷೇತ್ರದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೇಶವ್ ಲಿಂಗಾರ್ ಗೆದ್ದರು. ಅಂದಿನಿಂದ 1996 ರವರೆಗೆ 45 ವರ್ಷಗಳ ಕಾಲ, ಕಾಂಗ್ರೆಸ್ ಪಕ್ಷ ಸತತವಾಗಿ ತನ್ನದಾಗಿಸಿಕೊಂಡಿತ್ತು. 1996ರಲ್ಲಿ ಜನತಾದಳದ ಸಿ. ನಾರಾಯಣಸ್ವಾಮಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ನಂತರ, ಬಿಜೆಪಿ ಇಲ್ಲಿ ಗೆಲ್ಲಲು ಪ್ರಾರಂಭಿಸಿತು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಈವರೆಗೆ ನಡೆದ 17 ಚುನಾವಣೆಗಳಲ್ಲಿ ಕಾಂಗ್ರೆಸ್ 12 ಬಾರಿ ಗೆಲುವು ಸಾಧಿಸಿದೆ. ಆದಾಗ್ಯೂ ಇತ್ತೀಚಿನ ಕೆಲವು ವರ್ಷಗಳಲ್ಲಿ ಅಲ್ಲಿ ಬಿಜೆಪಿ ಪ್ರಭಾವ ಹೆಚ್ಚಿದೆ.

ಕಳೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಿದೆ. ಈ ಸ್ಥಾನದಲ್ಲಿ ಜನತಾದಳ ಕೂಡ ಒಮ್ಮೆ ಗೆದ್ದಿದೆ. ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್ ಈ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 1977-96 ರ ನಡುವೆ ಸತತ ಐದು ಗೆಲುವುಗಳು ಸೇರಿದಂತೆ ಏಳು ಬಾರಿ ಗೆದ್ದಿದ್ದರು. ಈ ಸ್ಥಾನವು ರಾಜ್ಯದ ಅತಿದೊಡ್ಡ ಮತ್ತು ದೇಶದ ಮೂರನೇ ಅತಿದೊಡ್ಡ ಲೋಕಸಭಾ ಸ್ಥಾನವಾಗಿದೆ.

ಕಣದಲ್ಲಿ ಇರುವವರು ಯಾರು?

ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದ್ದಾರೆ. ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸತತವಾಗಿ ಗೆದ್ದು ಇ ಬಾರಿ ಇಲ್ಲಿಂದ ಟಿಕೆಟ್​ ಗಿಟ್ಟಿಸಿದ್ದಾರೆ. ಬಿಜೆಪಿಯಿಂದ ಈ ಪ್ರತಿಷ್ಠಿತ ಸ್ಥಾನವನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ತನ್ನ ರಾಷ್ಟ್ರೀಯ ವಕ್ತಾರ ಮತ್ತು ಮಾಜಿ ರಾಜ್ಯಸಭಾ ಸಂಸದ ರಾಜೀವ್ ಗೌಡ ಅವರನ್ನು ಕಣಕ್ಕಿಳಿಸಿದೆ.

ಭಾರತದ ಚುನಾವಣಾ ಆಯೋಗದ ಪ್ರಕಾರ 2019 ರ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 28,49,250. 2019ರಲ್ಲಿ ಶೇ.54.6ರಷ್ಟು ಮತದಾನವಾಗಿತ್ತು. 2011 ರ ಜನಗಣತಿಯ ಅಂಕಿಅಂಶಗಳ ಪ್ರಕಾರ ನಗರ ಮತದಾರರು ಒಟ್ಟು ಮತದಾರರಲ್ಲಿ ಸುಮಾರು 92% ರಷ್ಟಿದ್ದಾರೆ. ಕ್ಷೇತ್ರದ ಸರಾಸರಿ ಸಾಕ್ಷರತಾ ಪ್ರಮಾಣವು ಸುಮಾರು 78% ರಷ್ಟಿತ್ತು. ಎಸ್ಸಿ ಮತದಾರರು ಮತದಾರರಲ್ಲಿ ಸುಮಾರು 11% ರಷ್ಟಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆ.ಆರ್.ಪುರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ ಮತ್ತು ಪುಲಕೇಶಿನಗರ ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಬಿಜೆಪಿ 5 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ 3 ಸ್ಥಾನಗಳನ್ನು ಹೊಂದಿದೆ.

ಹಿಂದಿನ ಚುನಾವಣಾ ಫಲಿತಾಂಶಗಳು

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ವಿ.ಸದಾನಂದ ಗೌಡ ಅವರು ಭಾರತೀಯ ಜನತಾ ಪಾರ್ಟಿ ಪಕ್ಷದ ಕೃಷ್ಣ ಬೈರೇಗೌಡ ಅವರನ್ನು 1,47,518 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.52.84ರಷ್ಟು ಮತಗಳನ್ನು ಪಡೆದಿತ್ತು.

ಇದನ್ನೂ ಓದಿ: Bangalore Central Election : ಮನ್ಸೂರ್ ಅಲಿ ಖಾನ್ ವಿರುದ್ಧ ಗೆದ್ದು ಅಜೇಯ ಓಟ ಮುಂದುವರಿಸುವರೇ ಪಿ. ಸಿ ಮೋಹನ್​

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ವಿ.ಸದಾನಂದ ಗೌಡ ಅವರು ಕಾಂಗ್ರೆಸ್​​ನ ಸಿ.ನಾರಾಯಣ ಸ್ವಾಮಿ ಅವರನ್ನು 2,29,764 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.52.95ರಷ್ಟು ಮತಗಳನ್ನು ಗಳಿಸಿತ್ತು.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಡಿ .ಬಿ.ಚಂದ್ರೇಗೌಡ ಅವರು ಕಾಂಗ್ರೆಸ್​​ನ ಸಿ.ಕೆ.ಜಾಫರ್ ಷರೀಫ್ ಅವರನ್ನು 59,665 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.45.21ರಷ್ಟು ಮತಗಳನ್ನು ಪಡೆದಿತ್ತು.

ಮತದಾನ ದಿನಾಂಕ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26, 2024 ರಂದು ಎರಡನೇ ಹಂತದ ಮತದಾನ ನಡೆಯಿತು. ಜೂನ್ 4, 2024 ರಂದು ಮತ ಎಣಿಕೆ ನಡೆಯಲಿದೆ.

Continue Reading

ರಾಯಚೂರು

Raichur Lok Sabha Constituency: ರಾಯಚೂರಿನಲ್ಲಿ ನಾಯಕರ ನಡುವಿನ ಕಾಳಗದಲ್ಲಿ ಯಾರು ರಾಜ?

Raichur Lok Sabha Constituency: ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ರಾಜಾ ಅಮರೇಶ್ವರ್‌ ನಾಯಕ್‌ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ನಿವೃತ್ತ ಐಎಎಸ್‌ ಅಧಿಕಾರಿ ಜಿ. ಕುಮಾರ್‌ ನಾಯಕ್‌ ಅವರು ಖಾತೆ ತೆರೆಯುವ ಉತ್ಸಾಹದಲ್ಲಿದ್ದಾರೆ. ರಾಜಾ ಅಮರೇಶ್ವರ ನಾಯಕ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಮದ ಬಲ ಇದ್ದರೆ, ಕುಮಾರ್‌ ನಾಯಕ್‌ ಪರ ಯುವಕರ ಒಲವಿದೆ ಎನ್ನಲಾಗುತ್ತಿದೆ.

VISTARANEWS.COM


on

Raichur Lok Sabha Constituency
Koo

ರಾಯಚೂರು: ಭತ್ತದ ಜಿಲ್ಲೆಯಾದ ರಾಯಚೂರಿನಲ್ಲಿ ಲೋಕಸಭೆ ಚುನಾವಣೆ (Raichur Lok Sabha Constituency) ಸಮರವು ಮಹತ್ವ ಪಡೆದಿದ್ದು, ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ (Raja Amareshwara Naik) ಹಾಗೂ ಕಾಂಗ್ರೆಸ್‌ನ ಜಿ. ಕುಮಾರ್‌ ನಾಯಕ್‌ (G Kumar Nayak) ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ರಾಜಾ ಅಮರೇಶ್ವರ್‌ ನಾಯಕ್‌ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ನಿವೃತ್ತ ಐಎಎಸ್‌ ಅಧಿಕಾರಿ ಜಿ. ಕುಮಾರ್‌ ನಾಯಕ್‌ ಅವರು ಖಾತೆ ತೆರೆಯುವ ಉತ್ಸಾಹದಲ್ಲಿದ್ದಾರೆ.

ರಾಜಾ ಅಮರೇಶ್ವರ ನಾಯಕ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಮದ ಬಲವಿದೆ. ಹಲವು ಅಭಿವೃದ್ಧಿ ಕಾಮಗಾರಿಗಳ ಬಲ ಇದ್ದರೂ, ಮೂಲ ಸೌಕರ್ಯ ಒದಗಿಸುವ ವಿಚಾರದಲ್ಲಿ ಸಂಸದ ಹಿಂದೆ ಬಿದ್ದಂತೆ ಕಾಣಿಸುತ್ತಿದೆ. ರೈತರ ಆಕ್ರೋಶವೂ ಅವರ ವಿರುದ್ಧ ಇದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಮತದಾರರು ರಾಷ್ಟ್ರ ಮಟ್ಟದ ಚಿಂತನೆಯೊಂದಿಗೆ ವೋಟು ಹಾಕುವುದರಿಂದ ಅಮರೇಶ್ವರ ನಾಯಕ್‌ ಅವರಿಗೆ ವರದಾನವಾಗುವ ಸಾಧ್ಯತೆ ಇದೆ.

ರಾಜಾ ಅಮರೇಶ್ವರ ನಾಯಕ್

ಇನ್ನು, 1990ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದ ಜಿ. ಕುಮಾರ್‌ ನಾಯಕ್‌ ಅವರು ನಿವೃತ್ತಿ ಹೊಂದಿದ್ದು, ಈಗ ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್‌ ಆರಂಭಿಸುವ ತವಕದಲ್ಲಿದ್ದಾರೆ. 1999ರಿಂದ 2002 ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಕುಮಾರ್‌ ನಾಯಕ್‌ ಅವರಿಗೆ ಜಿಲ್ಲೆಯ ಜತೆ ಒಡನಾಟವಿದೆ. ಐಎಎಸ್‌ ಅಧಿಕಾರಿಯಾಗಿದ್ದರು ಎಂಬ ಸಾಫ್ಟ್‌ ಕಾರ್ನರ್‌, ಯುವಕರ ಬೆಂಬಲವು ಅವರ ಜತೆಗಿದೆ. ಹಾಗಾಗಿ, ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ನಾಯಕ್‌ ಹಾಗೂ ಕುಮಾರ್‌ ನಾಯಕ್‌ ಮಧ್ಯೆ ಪೈಪೋಟಿ ಅಂತೂ ಇದೆ. ‌

ಜಿ ಕುಮಾರ್‌ ನಾಯಕ್

2019, 2014ರಲ್ಲಿ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ರಾಜಾ ಅಮರೇಶ್ವರ್‌ ನಾಯಕ್‌ ಅವರು ಕಾಂಗ್ರೆಸ್‌ನ ಬಿ.ವಿ. ನಾಯಕ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ರಾಜಾ ಅಮರೇಶ್ವರ್‌ ನಾಯಕ್‌ ಅವರು 1.17 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ವಿ. ನಾಯಕ್‌ ಅವರು ಬಿಜೆಪಿಯ ಶಿವನಗೌಡ ನಾಯಕ್‌ ವಿರುದ್ಧ ಕೇವಲ 1,499 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2019ರಲ್ಲಿ ರಾಜಾ ಅಮರೇಶ್ವರ್‌ ನಾಯಕ್‌ ಅವರಿಗೆ ಮೋದಿ ಅಲೆಯು ವರದಾನವಾಗಿತ್ತು.

ಮತದಾರರ ಸಂಖ್ಯೆ

ಪುರುಷರು9.55 ಲಕ್ಷ
ಮಹಿಳೆಯರು9.71 ಲಕ್ಷ
ಲಿಂಗತ್ವ ಅಲ್ಪಸಂಖ್ಯಾತರು367
ಒಟ್ಟು19.28 ಲಕ್ಷ

1957ರಿಂದ 2019ರ ಅವಧಿಯಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ 17 ಬಾರಿ ಚುನಾವಣೆ ನಡೆದಿದೆ. 17ರಲ್ಲಿ 13 ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ, ಎರಡು ಬಾರಿ ಬಿಜೆಪಿ, ಒಮ್ಮೆ ಸ್ವತಂತ್ರ ಪಕ್ಷ ಹಾಗೂ ಒಮ್ಮೆ ಜೆಡಿಎಸ್‌ ಅಭ್ಯರ್ಥಿಯು ಗೆಲುವು ಸಾಧಿಸಿದ್ದಾರೆ.

ರಾಯಚೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಯಾದಗಿರಿಯ ಮೂರು, ರಾಯಚೂರು ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಐದರಲ್ಲಿ ಕಾಂಗ್ರೆಸ್‌, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಭಾವವೂ ಇರುವುದು ಮೈತ್ರಿ ಪಕ್ಷವಾದ ಬಿಜೆಪಿಗೆ ಹೆಚ್ಚಿನ ಅನುಕೂಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Bidar Lok Sabha Constituency: ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಹಳೇ ಬೇರು Vs ಹೊಸ ಚಿಗುರು; ಖೂಬಾ, ಖಂಡ್ರೆ ಕದನದಲ್ಲಿ ಜಯ ಯಾರಿಗೆ?

Continue Reading

ದೇಶ

Arvind Kejriwal: ತಿಹಾರ್‌ ಜೈಲಿಗೆ ಮರಳಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌; ಜೂ. 5ರಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ

Arvind Kejriwal: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಮಧ್ಯಂತರ ಜಾಮೀನು ಅವಧಿ ಪೂರ್ಣಗೊಂಡಿದ್ದು, ಇಂದು (ಜೂ. 2) ಅವರು ತಿಹಾರ್‌ ಜೈಲಿಗೆ ಮರಳಿದ್ದಾರೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ಮಧ್ಯಂತರ ಜಾಮೀನು ಅವಧಿ ಪೂರ್ಣಗೊಂಡಿದ್ದು, ಇಂದು (ಜೂ. 2) ಅವರು ತಿಹಾರ್‌ ಜೈಲಿಗೆ ಮರಳಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೋರ್ಟ್‌ ಈ ಹಿಂದೆ ಮೇ 10ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಚುನಾವಣೆ ಪೂರ್ಣಗೊಂಡ ಮರುದಿನವೇ ಜೈಲಿಗೆ ಮರಳುವಂತೆ ಕೋರ್ಟ್‌ ಹೇಳಿತ್ತು. ಅದರಂತೆ ಅವರು 21 ದಿನಗಳ ಬಳಿಕ ಶರಣಾಗಿದ್ದಾರೆ.

ಕೇಜ್ರಿವಾಲ್‌ ಜೈಲಿಗೆ ತೆರಳುವ ಮುನ್ನ ರಾಜ್‌ ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿದರು. ಬಳಿಕ ಪತ್ನಿ ಸುನೀತಾ ಅವರೊಂದಿಗೆ ಹನುಮಾನ್‌ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ಆಮ್‌ ಆದ್ಮಿ ಪಾರ್ಟಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಇನ್ನು ಅರವಿಂದ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿ ವಿಚಾರಣೆ ಜೂ. 5ರಂದು ದಿಲ್ಲಿ ಕೋರ್ಟ್‌ನಲ್ಲಿ ನಡೆಯಲಿದೆ. ಶನಿವಾರ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ʼʼಈ ಬಾರಿ ಅವರು ನನಗೆ ಹೆಚ್ಚು ಚಿತ್ರಹಿಂಸೆ ನೀಡುವ ಸಾಧ್ಯತೆಯಿದೆ. ಅದಕ್ಕೆ ನಾನು ತಲೆಬಾಗುವುದಿಲ್ಲ” ಎಂದು ಅವರು ಹೇಳಿದ್ದರು. ಜತೆಗೆ ʼʼದೆಹಲಿಯ ಜನರಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳು ಅವರ ಅನುಪಸ್ಥಿತಿಯಲ್ಲಿಯೂ ಮುಂದುವರಿಯುತ್ತವೆʼʼ ಎಂದು ಭರವಸೆ ನೀಡಿದ್ದರು.

ʼʼನೀವು ನಿಮ್ಮ ಬಗ್ಗೆ ಕಾಳಜಿ ವಹಿಸಿ, ಜೈಲಿನಲ್ಲಿ ನಿಮ್ಮ ಬಗ್ಗೆ ನಾನು ತುಂಬಾ ಚಿಂತೆ ಮಾಡುತ್ತೇನೆ. ನೀವು ಸಂತೋಷವಾಗಿದ್ದರೆ ನಿಮ್ಮ ಕೇಜ್ರಿವಾಲ್ ಕೂಡ ಸಂತೋಷವಾಗಿರುತ್ತಾರೆ. ನಾನು ಖಂಡಿತವಾಗಿಯೂ ನಿಮ್ಮ ನಡುವೆ ಇರುವುದಿಲ್ಲ, ಆದರೆ ನಿಮ್ಮ ಎಲ್ಲ ಕೆಲಸಗಳು ಮುಂದುವರಿಯುತ್ತವೆ. ಹಿಂದಿರುಗಿದ ನಂತರ ನಾನು ಪ್ರತಿ ತಾಯಿ ಮತ್ತು ಸಹೋದರಿಗೆ ಪ್ರತಿ ತಿಂಗಳು 1,000 ರೂ.ಗಳನ್ನು ನೀಡಲು ಪ್ರಾರಂಭಿಸುತ್ತೇನೆ” ಎಂದು ಕೇಜ್ರಿವಾಲ್‌ ಭಾವುಕರಾಗಿ ಹೇಳಿದ್ದರು.

ವೈದ್ಯಕೀಯ ಪರೀಕ್ಷೆಗಳಿಗಾಗಿ ಕೇಜ್ರಿವಾಲ್‌ ಅವರ ಮಧ್ಯಂತರ ಜಾಮೀನನ್ನು ಏಳು ದಿನಗಳವರೆಗೆ ವಿಸ್ತರಿಸುವ ಮನವಿಯನ್ನು ತುರ್ತಾಗಿ ಪರಿಗಣಿಸಲು ಮಾಡಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ನಿರಾಕರಿಸಿದ ನಂತರ ಅವರು ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರವಿಂದ್ ಕೇಜ್ರಿವಾಲ್ ಅವರು ವಿಚಾರಣಾ ನ್ಯಾಯಾಲಯದಿಂದ ನಿಯಮಿತ ಜಾಮೀನು ಪಡೆಯುವ ಆಯ್ಕೆಯನ್ನು ಹೊಂದಿರುವುದರಿಂದ ಅವರ ಮನವಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಹೈಕೋರ್ಟ್​ ಹೇಳಿತ್ತು.

ಇದನ್ನೂ ಓದಿ: Arvind Kejriwal: ತಿಹಾರ್‌ ಜೈಲಿನಲ್ಲಿ ಅರವಿಂದ ಕೇಜ್ರಿವಾಲ್‌ ಫಸ್ಟ್‌ ನೈಟ್‌ ಹೇಗಿತ್ತು?

ಹೆಚ್ಚಿನ ಕೀಟೋನ್ ಮಟ್ಟ ಹೆಚ್ಚಳದಿಂದಾಗಿ ತೂಕ ನಷ್ಟದಿಂದಾಗಿ ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ಕೇಜ್ರಿವಾಲ್ ತಮ್ಮ ಮಧ್ಯಂತರ ಜಾಮೀನು ವಿಸ್ತರಣೆ ಕೋರಿದ್ದರು. ಈ ರೋಗಲಕ್ಷಣಗಳು ಮೂತ್ರಪಿಂಡದ ಸಮಸ್ಯೆಗಳು, ಗಂಭೀರ ಹೃದಯದ ಪರಿಸ್ಥಿತಿಗಳು ಅಥವಾ ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಆಪ್​ ವಕೀಲರು ವಾದಿಸಿದ್ದರು.

Continue Reading
Advertisement
Bangalore Rural Lok Sabha Constituency
ಪ್ರಮುಖ ಸುದ್ದಿ2 mins ago

Bangalore Rural Lok Sabha Constituency : ಡಿ.ಕೆ ಸುರೇಶ್​​ ನಾಗಾಲೋಟಕ್ಕೆ ಡಾ. ಮಂಜುನಾಥ್​ ಅಡ್ಡಿಯಾಗುವ ಆತಂಕ

Arvind Kejriwal
ದೇಶ29 mins ago

Arvind Kejriwal: ಮಧ್ಯಂತರ ಜಾಮೀನು ಅವಧಿ ಮುಗಿದು ಜೈಲಿಗೆ ಮರಳಿದ ಅರವಿಂದ್‌ ಕೇಜ್ರಿವಾಲ್‌; ಜೂ. 5ರ ತನಕ ನ್ಯಾಯಾಂಗ ಬಂಧನ

Bangalore North Lok Sabha Constituency
ದೇಶ32 mins ago

Bangalore North Lok Sabha Constituency : ಕ್ಷೇತ್ರ ಬದಲಾಯಿಸಿದ ಶೋಭಾ ಕರಂದ್ಲಾಜೆಗೆ ಒಲಿಯವುದೇ ಬೆಂಗಳೂರು ಉತ್ತರ

Congress leader Celebration
ಕರ್ನಾಟಕ35 mins ago

Congress leader Celebration: ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿದ ಕಾಂಗ್ರೆಸ್‌ ಮುಖಂಡ; ವಿಡಿಯೊ ವೈರಲ್‌

Karnataka Weather Forecast
ಮಳೆ1 hour ago

Karnataka Weather : ಕೋಲಾರದಲ್ಲಿ ಅಬ್ಬರಿಸಿದ ವರುಣ; ಒಳನಾಡಿನಲ್ಲಿ ತಾಪಮಾನ ಇಳಿಕೆ

Exit Polls
ವಾಣಿಜ್ಯ1 hour ago

Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Raichur Lok Sabha Constituency
ರಾಯಚೂರು2 hours ago

Raichur Lok Sabha Constituency: ರಾಯಚೂರಿನಲ್ಲಿ ನಾಯಕರ ನಡುವಿನ ಕಾಳಗದಲ್ಲಿ ಯಾರು ರಾಜ?

Accident Case
ಕ್ರೈಂ2 hours ago

Accident Case : ಕರೆಂಟ್‌ ಶಾಕ್‌ಗೆ ಕಂಬದಲ್ಲೇ ಕಾರ್ಮಿಕನ ನರಳಾಟ; ಭೀಕರ ಅಪಘಾತಕ್ಕೆ ಇಬ್ಬರು ಬಲಿ

Lok Sabha Election 2024
ಕರ್ನಾಟಕ2 hours ago

Lok Sabha Election 2024: ಮೈಸೂರು ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಶ್ವಾನದಿಂದ ಅಚ್ಚರಿಯ ಭವಿಷ್ಯ!

Aam Panna Recipe
ಆಹಾರ/ಅಡುಗೆ2 hours ago

Aam Panna Recipe: ಆಮ್‌ ಪನ್ನಾ! ಮಾವಿನಕಾಯಿಯ ಅದ್ಭುತ ಪೇಯ ಇದು; ನೀವೂ ಮಾಡಿ ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ9 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌