College fashion trends 2023 : ಕಾಲೇಜು ಯುವಕ-ಯುವತಿಯರನ್ನು ಆವರಿಸಿಕೊಂಡ ಕೆ-ಪಾಪ್‌ ಸ್ಟಾರ್ಸ್ ಹೇರ್‌ಸ್ಟೈಲ್ಸ್! - Vistara News

ಫ್ಯಾಷನ್

College fashion trends 2023 : ಕಾಲೇಜು ಯುವಕ-ಯುವತಿಯರನ್ನು ಆವರಿಸಿಕೊಂಡ ಕೆ-ಪಾಪ್‌ ಸ್ಟಾರ್ಸ್ ಹೇರ್‌ಸ್ಟೈಲ್ಸ್!

K Popstars Trendy Hairstyles: ಕೆ ಪಾಪ್‌ ಸ್ಟಾರ್ಸ್ ಹೇರ್‌ಸ್ಟೈಲ್ಸ್, ಇದೀಗ ಕಾಲೇಜಿನ ಯಂಗ್‌ಸ್ಟರ್ಸನ್ನು ಯಾವ ಮಟ್ಟಿಗೆ ಸೆಳೆದಿದೆ ಎಂದರೇ, ಇರುವ ಹೇರ್‌ಸ್ಟೈಲ್‌ಗಳನ್ನೇ ಪ್ರಯೋಗ ಮಾಡಲಾರಂಭಿಸಿದ್ದಾರೆ. ಯಾವ್ಯಾವ ಪಾಪುಲರ್‌ ಹೇರ್‌ಸ್ಟೈಲ್ಸ್ ಈ ಲಿಸ್ಟ್‌ನಲ್ಲಿವೆ ಎಂಬುದರ ಬಗ್ಗೆ ಹೇರ್‌ ಸ್ಪೆಷಲಿಸ್ಟ್‌ ಜಾನ್‌ ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

K Popstars Trendy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಾಲೇಜ್‌ ಕ್ಯಾಂಪಸ್‌ಗಳಲ್ಲಿ ಇದೀಗ ಕೆ ಪಾಪ್‌ ಸ್ಟಾರ್ಸ್ ಹೇರ್‌ಸ್ಟೈಲ್‌ ಹವಾ! ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಕಾಣುವಂತಹ ಈ ಹೇರ್‌ಸ್ಟೈಲ್‌ಗಳಿಗಾಗಿ ಈಗಾಗಲೇ ಯುವಕರನ್ನು ಹುಚ್ಚೆಬ್ಬಿಸಿರುವ ಕೊರಿಯನ್‌ ಕೆ ಪಾಪ್‌ ಸ್ಟಾರ್ಸ್‌ಗಳಿದ್ದಾರೆ ಎಂದರೇ ನಂಬುತ್ತೀರಾ! ಆದರೆ. ಇದು ಸತ್ಯ. ಹಾಲಿವುಡ್‌, ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ ಸ್ಟಾರ್‌ಗಳನ್ನು ಸ್ಪೂರ್ತಿಯಾಗಿರಿಸಿಕೊಂಡು ಹೇರ್‌ಸ್ಟೈಲ್‌ ಮಾಡುವ ಯಂಗ್‌ ಜಮಾನಾ ಈಗಿಲ್ಲ! ಈಗೇನಿದ್ದರೂ ಕೆ ಪಾಪ್‌ ಸ್ಟಾರ್ಸ್‌ಗಳ ಹೇರ್‌ಸ್ಟೈಲ್‌ ರಿಪ್ಲಿಕಾ ಮಾಡುವಂತಹ ಸ್ಟೈಲಿಂಗ್‌ ಕಾನ್ಸೆಪ್ಟ್‌ ಟ್ರೆಂಡಿಯಾಗಿದೆ.

ಈ ಸ್ಟೈಲಿಂಗ್‌ ಮಾಡುವವರು ಹುಡುಗಿಯಾಗಿರಬಹುದು ಅಥವಾ ಹುಡುಗರಾಗಬಹುದು. ಕಂಪ್ಲೀಟ್‌ ಕೆ ಪಾಪ್‌ ಸ್ಟಾರ್ಸ್‌ಗಳಂತೆ ಕಾಣಲು ಸಾಧ್ಯವಾಗದಿದ್ದರೂ, ಸ್ಥಳೀಯ ಹೇರ್‌ ಟೆಕ್ಚರ್‌ ಹಾಗೂ ಕಲರ್‌ಗೆ ಮ್ಯಾಚ್‌ ಆಗುವಂತೆಯೇ ತಮ್ಮದೇ ಆದ ಕಸ್ಟಮೈಸ್ಡ್‌ ಹೇರ್‌ ಸ್ಟೈಲಿಂಗ್‌ ಮಾಡಿಸಿಕೊಂಡು ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಹೇರ್‌ ಸ್ಪೆಷಲಿಸ್ಟ್‌ ಜಾನ್‌.

ಕೆ ಪಾಪ್‌ ಸ್ಟಾರ್ಸ್ ಹೇರ್‌ಸ್ಟೈಲ್ಸ್‌

ಬಿಟಿಎಸ್‌ ಬಾಯ್ಸ್ ಹಾಗೂ ಗಲ್ರ್ಸ್ ಹೇರ್‌ಸ್ಟೈಲ್ಸ್, ಬ್ಲಾಕ್‌ ಪಿಂಕ್‌ನ ಲಿಸಾಳದ್ದು, ಮಾಮಾಮೂ ಬ್ಯಾಂಡ್‌ನ ವೀನ್‌ರದ್ದು, ಟ್ವೈಸ್‌ನ ಜಿಹ್ಯೋ, ರೆಡ್‌ ವೆಲ್ವೆಟ್‌ನ ಜಾಯ್‌ರದ್ದು, ಮೊಮೊಲ್ಯಾಂಡ್‌ನ ಹೈಬಿನ್‌ರ ಹೇರ್‌ಸ್ಟೈಲ್‌ಗಳು ಜಾಗತೀಕ ಮಟ್ಟದಲ್ಲಿ ಈಗಾಗಲೇ ಸಖತ್‌ ಪಾಪ್ಯುಲರ್‌ ಆಗಿವೆ. ಹೀಗೆ ನಾನಾ ಬ್ಯಾಂಡ್ ಸ್ಟಾರ್‌ಗಳ ಹೇರ್‌ ಸ್ಟೈಲಿಂಗ್‌ ಇಲ್ಲಿನ ಲೋಕಲ್‌ ಯೌತ್‌ಗೂ ಸ್ಪೂರ್ತಿಯಾಗಿದೆ. ಅವರಂತೆ ಕಾಣಿಸಿಕೊಳ್ಳಲಾಗದಿದ್ದರೂ ಕೂಡ ಆದಷ್ಟು ಸ್ಟೈಲಿಶ್‌ ಹೇರ್‌ಕಟ್‌ನ ರಿಪ್ಲಿಕಾದಲ್ಲೆ ಸಂತಸಪಡುತ್ತಿದ್ದಾರೆ ಎನ್ನುತ್ತಾರೆ ಹೇರ್‌ ಸ್ಟೈಲಿಶ್‌ ರಾಕೇಶ್‌.

ಇದನ್ನೂ ಓದಿ: Jewel Trend: ಮರಳಿದ ವೈವಿಧ್ಯಮಯ ಫ್ರಿಂಜ್‌ ನೆಕ್ಲೇಸ್‌ ಫ್ಯಾಷನ್‌

ಹುಡುಗ –ಹುಡುಗಿಯರು ಮೆಚ್ಚಿದ ಪಾಪ್ಯುಲರ್‌ ಹೇರ್‌ಸ್ಟೈಲ್ಸ್ :

ಬೇಬಿ ಬ್ರೈಡ್ಸ್, ವಿಸ್ಪಿ ಬ್ಯಾಂಗ್ಸ್, ಲೇಯರ್ಡ್‌ ಕಟ್‌ನಂತೆ ಕಾಣುವ ವೊಲ್ಫ್‌ ಕಟ್‌, ವೈಟುಕೆ ಅಪ್‌ಡೂಸ್‌, ಮೆಸ್ಸಿ ಸ್ಪೇಸ್‌ ಬನ್ಸ್, ಟೆಕ್ಷರ್ಡ್‌ ಬಾಬ್‌, ಶೇವ್ಡ್ ಸೈಡ್, ದಿ ಬೋಲ್ಡ್‌ ಬ್ರೈಡೆಡ್‌ ಅಪ್‌ಡೂ, ಸ್ಲೀಕ್‌ ಸೆಂಟರ್‌, ಶ್ಯಾಗಿ ಚಾಪ್ಸ್, ಟೂ ಬ್ಲಾಕ್‌, ಸೈಡ್‌ ಪಾರ್ಟಿಂಗ್‌, ಮೆಸ್ಸಿ ಬನ್ಸ್, ಸೆವಂಟೀಸ್‌ ಬ್ಯಾಂಗ್ಸ್ ಹುಡುಗಿಯರನ್ನು ಆಕರ್ಷಿಸಿದ್ದರೇ, ಹುಡುಗರನ್ನು ಬ್ರೊಕ್ಲಿ ಅಥವಾ ವೆಟ್‌ ಮಾಪ್‌ ಹೇರ್‌ ಕಟ್‌, ಮಿಡಲ್‌ ಪಾರ್ಟ್ ಕ್ರಾಪ್‌, ಅಂಡರ್‌ ಕಟ್‌, ಕ್ವಿಫ್‌, ಸ್ಕ್ವೇರ್‌ ಕಟ್‌, ಫ್ರೆಂಚ್‌ ಕ್ರಾಪ್‌, ಬಾಕ್ಸ್ ಸ್ಟೈಲ್‌, ಹಾಕಿ ಕಟ್‌, ಬಝ್‌ ಕಟ್‌ ಆವರಿಸಿಕೊಂಡಿವೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

ಸಮ್ಮರ್‌ ಸೀಸನ್‌ನಲ್ಲಿ ಅದರಲ್ಲೂ ಮಾವಿನ ಹಣ್ಣಿನ ಸೀಸನ್‌ನಲ್ಲಿ ಮ್ಯಾಂಗೋ ನೇಲ್‌ ಆರ್ಟ್ (Mango Nail Art) ಟ್ರೆಂಡಿಯಾಗಿದೆ. ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಇವುಗಳ ನಾನಾ ರೂಪ ದರ್ಶನವಾಗುತ್ತಿದೆ ಎನ್ನುವ ನೇಲ್‌ ಆರ್ಟ್ ಡಿಸೈನರ್‌ ರಿಂಕಿ ಒಂದಿಷ್ಟು ಮಾಹಿತಿ ನೀಡಿದ್ದಾರೆ.

VISTARANEWS.COM


on

Mango Nail Art
ಚಿತ್ರಕೃಪೆ: ಇನ್ಸ್‌ಟಾಗ್ರಾಮ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮ್ಯಾಂಗೋ ನೇಲ್‌ ಆರ್ಟ್ ಸದ್ಯ ನೇಲ್‌ ಆರ್ಟ್ (Mango Nail Art) ಲೋಕದಲ್ಲಿ ಟ್ರೆಂಡಿಯಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ನಾನಾ ಬಗೆಯ ಮಾವಿನ ಹಣ್ಣಿನ ಚಿತ್ತಾರಗಳು ನೇಲ್‌ ಆರ್ಟ್ ಡಿಸೈನ್‌ನಲ್ಲಿ ಮೂಡಿ ಬಂದಿದ್ದು, ಬ್ಯೂಟಿ ಪ್ರಿಯರು ತಮ್ಮ ಊಹೆಗೆ ತಕ್ಕಂತೆ ಬಗೆಬಗೆಯ ಡಿಸೈನ್‌ನಲ್ಲಿ ಇವುಗಳ ಚಿತ್ತಾರವನ್ನು ಬೆರಳುಗಳ ಉಗುರುಗಳ ಮೇಲೆ ಮೂಡಿಸತೊಡಗಿದ್ದಾರೆ.

Mango Nail Art

ಸೀಸನ್‌ಗೆ ಬಂತು ಮಾವಿನ ಚಿತ್ತಾರ

“ನೇಲ್‌ ಆರ್ಟ್ ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಆಯಾ ಸೀಸನ್‌ನಲ್ಲಿ ಪ್ರಚಲಿತದಲ್ಲಿರುವ ಟಾಪಿಕ್‌ ಆಗಬಹುದು, ಕಲರ್‌ ಆಗಬಹುದು, ಹಬ್ಬ ಆಗಬಹುದು ಅಥವಾ ಹಣ್ಣು-ತರಕಾರಿಯೂ ಆಗಬಹುದು. ಇನ್ನು ಈ ಸೀಸನ್‌ನಲ್ಲಿ ಎಲ್ಲರಿಗೂ ತಿಳಿದಿರುವಂತೆ ಮಾವಿನ ಹಣ್ಣುಗಳ ಅಬ್ಬರ. ಇದಕ್ಕೆ ಪೂರಕ ಎಂಬಂತೆ, ನಾನಾ ಜಾತಿಯ ಅಂದರೇ, ವೆರೈಟಿ ಮಾವಿನ ಹಣ್ಣಿನ ರೂಪಗಳು ಮಿನಿಯೇಚರ್‌ ರೂಪದಲ್ಲಿ ಉಗುರುಗಳ ಮೇಲೆ ಸಿಂಗಾರಗೊಳ್ಳುತ್ತಿವೆ. ಕೆಲವರು, ನೇಲ್‌ ಪಾರ್ಲರ್‌ಗೆ ಹೋಗಿ ಡಿಸೈನ್‌ ಮಾಡಿಸಿಕೊಂಡರೇ, ಇನ್ನು ಕೆಲವರು ಖುದ್ದು ತಾವೇ ವಿನ್ಯಾಸ ಮಾಡಿಕೊಳ್ಳುತ್ತಾರೆ. ಇಲ್ಲವೇ ತಮ್ಮ ಆಪ್ತರಿಗೆ ಸಹೋದರಿಯರಿಗೆ ತಾವೇ ಬಿಡಿಸುತ್ತಾರೆ ಎನ್ನುವ ನೇಲ್‌ ಆರ್ಟ್ ಡಿಸೈನರ್‌ ರಿಂಕಿ ಪ್ರಕಾರ, ಯಾವುದೇ ಡಿಸೈನ್‌ ಮೂಡಿಸಲು ಕಲಾವಿದರ ಮನಸ್ಸು ಅಗತ್ಯ ಎನ್ನುತ್ತಾರೆ.

Mango Nail Art

ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಆರಂಭವಾದ ಟ್ರೆಂಡ್‌

ಈ ಸಮ್ಮರ್‌ ಸೀಸನ್‌ನಲ್ಲಿ ಅದರಲ್ಲೂ ಮಾವಿನ ಹಣ್ಣಿನ ಸೀಸನ್‌ನಲ್ಲಿ ಇದೀಗ ನೇಲ್‌ ಆರ್ಟ್ ಪ್ರಿಯರು ಮ್ಯಾಂಗೋ ನೇಲ್‌ ಆರ್ಟ್ ಚಿತ್ತಾರಗಳಿಗೆ ಮನ ಸೋತಿದ್ದಾರೆ. ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಇವುಗಳ ನಾನಾ ರೂಪ ದರ್ಶನವಾಗುತ್ತಿದೆ. ಬ್ಯೂಟಿ ಹಾಗೂ ಫ್ಯಾಷನ್‌ ಇನ್ಫೂಯೆನ್ಸರ್ಸ್ ತಮ್ಮ ನೇಲ್‌ ಆರ್ಟ್‌ಗಳನ್ನು ಪ್ರದರ್ಶಿಸುತ್ತಿರುವುದು ಟ್ರೆಂಡ್‌ಗೆ ಕಾರಣವಾಗಿದೆ ಎನ್ನುತ್ತಾರೆ ಎಕ್ಸ್‌ಫರ್ಟ್ಸ್.

Mango Nail Art

ಪ್ರಯೋಗಾತ್ಮಕ ವಿನ್ಯಾಸ

ಇನ್ನು, ಪ್ರಯೋಗಾತ್ಮಕ ಶೇಡ್‌ ಚಿತ್ತಾರ ಮೂಡಿಸಿರುವ ಕೆಲವು ನೇಲ್‌ ಆರ್ಟ್‌ ಪ್ರೇಮಿಗಳು ಸೋಷಿಯಲ್‌ ಮೀಡಿಯಾದ ತಮ್ಮ ಬ್ಯೂಟಿ ಪೇಜ್‌ಗಳಲ್ಲಿ, ಬೆರಳ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಫ್ರೂಟ್ಸ್‌ ನೇಲ್‌ ಆರ್ಟ್‌ ಡಿಸೈನ್‌ನಲ್ಲಿ ಮಾವಿನ ಹಣ್ಣಿನ ಡಿಸೈನ್‌ ಟ್ರೆಂಡಿಯಾಗಿದೆ. ಹಾಗೆಂದು ಇಂಟರ್‌ನ್ಯಾಷನಲ್‌ ಫ್ಯಾಷನ್‌ನಲ್ಲಿ ಸದ್ಯಕ್ಕೆ ಇದು ಇಲ್ಲ. ಈ ಡಿಸೈನ್‌ ಏನಿದ್ದರೂ ನಮ್ಮ ರಾಷ್ಟ್ರದಲ್ಲಿ ಮಾತ್ರ. ಅದರಲ್ಲೂ ಸೌತ್‌ ಇಂಡಿಯಾದಲ್ಲಿ ಎಂಬುದು ಗೊತ್ತಿರಲಿ ಎನ್ನುತ್ತಾರೆ ಡಿಸೈನರ್ಸ್‌.

ಇದನ್ನೂ ಓದಿ: Saree Fashion: ಮಹಿಳೆಯರ ಮನಗೆದ್ದ ಕಟ್‌ ವರ್ಕ್ ಬಾರ್ಡರ್‌ ಪಾರ್ಟಿ ಸೀರೆ

ಮ್ಯಾಂಗೋ ನೇಲ್‌ ಆರ್ಟ್ ಟಿಪ್ಸ್

  • ಸನ್‌ ಕಲರ್‌ ಹಾಗೂ ಗ್ರೀನ್‌ ನೇಲ್‌ ಕಲರ್‌ ಬಳಸಿ.
  • ಒಂದು ಉಗುರಿಗೆ ಮಾತ್ರ ಡಿಸೈನ್‌ ಮಾಡುವ ಟ್ರೆಂಡ್‌ ಕೂಡ ಇದೆ.
  • ಮ್ಯಾಂಗೋ ಡಿಸೈನ್‌ ಮಾಡುವುದಿದ್ದಲ್ಲಿ ಮೊದಲೇ ಯಾವ ಬಗೆಯದ್ದನ್ನು ಚಿತ್ರಿಸಬೇಕು ಎಂಬುದನ್ನು ಮೊದಲೇ ಡಿಸೈಡ್‌ ಮಾಡಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Saree Fashion: ಮಹಿಳೆಯರ ಮನಗೆದ್ದ ಕಟ್‌ ವರ್ಕ್ ಬಾರ್ಡರ್‌ ಪಾರ್ಟಿ ಸೀರೆ

ಇದೀಗ ಎಂಬ್ರಾಯ್ಡರಿ, ಸಿಕ್ವೀನ್ಸ್ ಹಾಗೂ ಎಂಬಾಲಿಶ್ಡ್ ಡಿಸೈನ್‌ ಇರುವಂತಹ ಕಟ್‌ ವರ್ಕ್ ಬಾರ್ಡರ್ ಪಾರ್ಟಿ ಸೀರೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಆಕರ್ಷಕ ಡಿಸೈನ್‌ಗಳಲ್ಲಿ ಎಂಟ್ರಿ ನೀಡಿವೆ. ಏನಿದು ಕಟ್‌ ವರ್ಕ್ ಸೀರೆಗಳು? ಎಂಬುದರ ಬಗ್ಗೆ ಫ್ಯಾಷನಿಸ್ಟ್‌ಗಳು (Saree Fashion) ಇಲ್ಲಿ ಡಿಟೇಲ್ಸ್ ನೀಡಿದ್ದಾರೆ.

VISTARANEWS.COM


on

Saree Fashion
ಚಿತ್ರಗಳು: ಜರೀನ್‌ ಖಾನ್‌, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಟ್‌ ವರ್ಕ್ ಬಾರ್ಡರ್‌ ಪಾರ್ಟಿವೇರ್‌ ಸೀರೆಗಳು (Saree Fashion) ಇದೀಗ ಮಾನಿನಿಯರ ಮನ ಗೆದ್ದಿವೆ. ನೋಡಲು ಆಕರ್ಷಕವಾಗಿ ಕಾಣುವ ಈ ಸೀರೆಗಳು ಪಾರ್ಟಿವೇರ್‌ ಡಿಸೈನರ್‌ ಸೀರೆಗಳ ಕೆಟಗರಿಯಲ್ಲಿಬಿಡುಗಡೆಗೊಂಡಿವೆ. “ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಡಿಸೈನ್‌ನಲ್ಲಿ ಅಥವಾ ಹೊಸ ರೂಪದಲ್ಲಿ ಪಾರ್ಟಿವೇರ್‌ ಸೀರೆಗಳು ಬಿಡುಗಡೆಗೊಳ್ಳುತ್ತಿರುತ್ತವೆ. ಕೆಲವು ಜಗಮಗಿಸುವ ಪ್ರಿಂಟ್ಸ್‌ನಲ್ಲಿ ವಿನ್ಯಾಸಗೊಂಡಿದ್ದರೇ, ಇನ್ನು ಕೆಲವು ಡಿಸೆಂಟ್‌ ಲುಕ್‌ ನೀಡುವಂತವು, ಮತ್ತೆ ಕೆಲವು ಪ್ರಿಂಟೆಡ್‌ ಶೈಲಿಯವು ಚಾಲ್ತಿಗೆ ಬರುತ್ತವೆ. ಮಹಿಳೆಯರು ಕೂಡ ತಮ್ಮ ಮನೋಭಿಲಾಷೆಗೆ ತಕ್ಕಂತೆ ಸೀರೆಗಳ ಆಯ್ಕೆ ಮಾಡುತ್ತಾರೆ. ನೋಡಲು ಡಿಸೆಂಟಾಗಿಯೂ ಕಾಣಿಸಬೇಕು. ಹೆಚ್ಚು ಎದ್ದು ಕಾಣುವಂತಹ ಡಿಸೈನ್‌ ಇರಬಾರದು, ಆಕರ್ಷಕ ಡಿಸೈನ್‌ ಕೂಡ ಇರಬೇಕು ಎನ್ನುವವರು ಈ ರೀತಿಯ ಸಾದಾ ಸೀರೆ ಅದರಲ್ಲಿ ಕಟ್‌ ವರ್ಕ್ ಬಾರ್ಡರ್‌ ಇರುವಂತವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹ ಮಹಿಳೆಯರಿಗೆಂದೇ ನಾನಾ ಶೈಲಿಯ ಕಟ್‌ ವರ್ಕ್ ಬಾರ್ಡರ್‌ ಸೀರೆಗಳು ಹಲವು ವಿನ್ಯಾಸದಲ್ಲಿ ಬಂದಿವೆ” ಎನ್ನುತ್ತಾರೆ ಸೀರೆ ಎಕ್ಸ್‌ಫ ರ್ಟ್ ಜೀವಿತಾ. ಅವರ ಪ್ರಕಾರ, ಈ ಶೈಲಿಯ ಬಾರ್ಡರ್‌ ಸೀರೆಗಳು ಯೂನಿಕ್‌ ಲುಕ್‌ ನೀಡುತ್ತವಂತೆ.

Saree Fashion

ಏನಿದು ಕಟ್‌ ವರ್ಕ್ ಬಾರ್ಡರ್ ಸೀರೆ?

ಅಂಚು ಅಂದರೇ, ಬಾರ್ಡರ್ ಕಟ್‌ ಆಗಿರುವಂತಹ ವಿನ್ಯಾಸಗೊಂಡಿರುವಂತಹ ಶೈಲಿಯಲ್ಲಿರುತ್ತವೆ. ಇತರೇ ಬಾರ್ಡರ್‌ಗಳಂತೆ ಒಂದೇ ಲೈನ್‌ನಲ್ಲಿರುವುದಿಲ್ಲ! ಕೆಲವು ಅಟ್ಯಾಚ್‌ ಆದಂತೆ ಕಾಣಿಸುತ್ತವೆ. ಈ ಕಟ್ವರ್ಕ್ ಡಿಸೈನ್‌ ಇಡೀ ಸೀರೆಯ ಲುಕ್ಕನ್ನು ಬದಲಿಸುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Saree Fashion

ಟ್ರೆಂಡಿಯಾಗಿರುವ ಕಟ್‌ ವರ್ಕ್ ಬಾರ್ಡರ್ ಪಾರ್ಟಿವೇರ್‌ ಸೀರೆ

ಇದೀಗ ಬಾರ್ಡರ್‌ನಲ್ಲಿ ಹ್ಯಾಂಡ್‌ ವರ್ಕ್ ಅಥವಾ ಮೆಷಿನ್‌ ವರ್ಕ್ ಇರುವಂತಹ ನಾನಾ ಬಗೆಯ ಎಂಬ್ರಾಯ್ಡರಿ ಡಿಸೈನ್ಸ್, ಬಗೆಬಗೆಯ ಶೇಡ್‌ನ ಅಥವಾ ಮಾನೋಕ್ರೋಮ್‌ ವರ್ಣದ ಸಿಕ್ವೀನ್ಸ್ ಹಾಗೂ ವೆರೈಟಿ ಎಂಬಾಲಿಶ್ಡ್ ಡಿಸೈನ್‌ ಇರುವಂತಹ ಕಟ್‌ ವರ್ಕ್ ಬಾರ್ಡರ್ ಪಾರ್ಟಿ ಸೀರೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

Saree Fashion

ಕಟ್‌ ವರ್ಕ್ ಬಾರ್ಡರ್ ಸೀರೆ ಬಗ್ಗೆ ತಿಳಿದಿರಬೇಕಾದ 3 ಸಂಗತಿಗಳು

  • ಜಾರ್ಜೆಟ್ ಸೀರೆಯಲ್ಲಿ ಕಟ್‌ ವರ್ಕ್ ಡಿಸೈನ್ಸ್ ಹೆಚ್ಚು ಹೈಲೈಟಾಗುತ್ತವೆ.
  • ಸೀರೆಯ ಫ್ಯಾಬ್ರಿಕ್‌ ನೋಡಿ, ಖರೀದಿಸುವುದು ಉತ್ತಮ.
  • ಸಾದಾ ಸೀರೆಯಲ್ಲಾದಲ್ಲಿ ಈ ಕಟ್‌ ವರ್ಕ್ ಡಿಸೈನ್ ಕಾಣುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Jeans Fashion: ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ಗೆ 3 ಸಿಂಪಲ್‌ ಐಡಿಯಾ

Continue Reading

ಫ್ಯಾಷನ್

Jeans Fashion: ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ಗೆ 3 ಸಿಂಪಲ್‌ ಐಡಿಯಾ

ಜೀನ್ಸ್ ಪ್ಯಾಂಟ್‌ (Jeans Fashion) ಧರಿಸಿ ಇಂಡೋ-ವೆಸ್ಟರ್ನ್ ಲುಕ್‌ ನೀಡಬೇಕೆಂದು ಬಯಸುತ್ತಿದ್ದೀರಾ! ಹಾಗಾದಲ್ಲಿ ಈ ಸ್ಟೈಲಿಂಗ್‌ ಐಡಿಯಾಗಳನ್ನು ಟ್ರೈ ಮಾಡಿ. ಸದ್ಯ ಟ್ರೆಂಡಿಯಾಗಿರುವ ಈ ಸ್ಟೈಲಿಂಗ್‌ ಅಳವಡಿಸಿಕೊಳ್ಳಿ ಎನ್ನುವ ಸ್ಟೈಲಿಸ್ಟ್‌ಗಳು ಹುಡುಗಿಯರಿಗೆ ಇಲ್ಲಿ 3 ಸಿಂಪಲ್‌ ಐಡಿಯಾ ನೀಡಿದ್ದಾರೆ.

VISTARANEWS.COM


on

Jeans Fashion
ಚಿತ್ರಗಳು: ದಿವ್ಯಾ ಕೋಸ್ಲಾ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೀನ್ಸ್ ಪ್ಯಾಂಟ್‌ಗೆ (Jeans Fashion) ಇಂಡೋ-ವೆಸ್ಟರ್ನ್ ಲುಕ್‌ ನೀಡುವ ಟ್ರೆಂಡ್‌ ಇದೀಗ ಚಾಲ್ತಿಯಲ್ಲಿದೆ. ನೋಡಲು ಮಾಡರ್ನ್ ಲುಕ್‌ ಜೊತೆಜೊತೆಗೆ ದೇಸಿ ಔಟ್‌ಫಿಟ್‌ ಮಿಕ್ಸ್ ಮಾಡುವ ಕಾನ್ಸೆಪ್ಟ್ ಇದೀಗ ಜೆನ್‌ ಜಿ ಹುಡುಗಿಯರಲ್ಲಿ ಹೆಚ್ಚಾಗಿದೆ. “ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಇಂದಿನ ಫ್ಯಾಷನ್‌ನಲ್ಲ! ದಶಕಗಳಿಂದಲೂ ಇದೆ. ಆದರೆ, ಆಗಾಗ್ಗೆ ಮರೆಯಾಗಿ ಹೊಸ ರೂಪದಲ್ಲಿ ಬಿಡುಗಡೆಗೊಳ್ಳುತ್ತಿರುತ್ತದೆ. ಸಿನಿಮಾ ತಾರೆಯರಿಂದ ಮರು ಹುಟ್ಟು ಪಡೆಯುತ್ತಿರುತ್ತದೆ” ಎನ್ನುತ್ತಾರೆ ಪ್ಯಾಷನಿಸ್ಟ್‌ಗಳು. ಇನ್ನು, ನೀವೂ ಕೂಡ ಜೀನ್ಸ್ ಪ್ಯಾಂಟ್‌ ಧರಿಸಿ ಇಂಡೋ-ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿದ್ದೀರಾ! ಹಾಗಾದಲ್ಲಿ, ಯೋಚಿಸಬೇಡಿ, ಈ ಸಿಂಪಲ್‌ ಸ್ಟೈಲಿಂಗ್‌ ಐಡಿಯಾಗಳನ್ನು ಟ್ರೈ ಮಾಡಿ. ಸದ್ಯ ಟ್ರೆಂಡಿಯಾಗಿರುವ ಈ ಸ್ಟೈಲಿಂಗ್‌ ನೀವೂ ಕೂಡ ಮಾಡಿ ಎನ್ನುವ ಸ್ಟೈಲಿಸ್ಟ್ ಜಾನ್‌ ಒಂದಿಷ್ಟು ಸಿಂಪಲ್‌ ಮಿಕ್ಸ್ ಮ್ಯಾಚ್‌ ಐಡಿಯಾ ನೀಡಿದ್ದಾರೆ.

Jeans Fashion

ಆಕರ್ಷಕ ಎಥ್ನಿಕ್‌ ಜಾಕೆಟ್‌

ನೀವು ಧರಿಸುವ ಯಾವುದೇ ಜಿನ್ಸ್ ಪ್ಯಾಂಟ್‌ಗೆ ಫಾರ್ಮಲ್‌ ಅಥವಾ ವೈಟ್‌ ಟೀ ಶರ್ಟ್ ಧರಿಸಿ. ಅದರ ಮೇಲೆ ರಾಜಸ್ಥಾನಿ ಶೈಲಿಯ ಎಥ್ನಿಕ್‌ ಟಚ್‌ ನೀಡುವ ವೇಸ್ಟ್ಕೋಟ್‌ ಆಯ್ಕೆ ಮಾಡಿ ಧರಿಸಿ. ಇದು ನೋಡಲು ಕ್ಲಾಸಿ ಲುಕ್‌ ನೀಡುತ್ತದೆ. ಜೊತೆಗೆ ಇಂಡೋ-ವೆಸ್ಟರ್ನ್ ಲುಕ್‌ ಸುಲಭವಾಗಿ ನೀಡುತ್ತದೆ.

Jeans Fashion

ಸ್ಲಿವ್‌ಲೆಸ್‌ ಟ್ರೆಡಿಷನಲ್‌ ಜಾಕೆಟ್‌

ಟ್ರೆಡಿಷನಲ್‌ ಲುಕ್‌ ನೀಡುವ ಯಾವುದೇ ಡಿಸೈನ್‌ನ ಅಥವಾ ಪ್ರಿಂಟ್ಸ್‌ನ ಸ್ಲಿವ್‌ಲೆಸ್‌ ಜಾಕೆಟ್‌ ಚೂಸ್‌ ಮಾಡಿ. ಧರಿಸಿರು ಜೀನ್ಸ್ ಪ್ಯಾಂಟ್‌ ಮೇಲೆ ಧರಿಸಿ. ಆದರೆ, ಈ ಜಾಕೆಟ್‌ ಒಳಗೆ ಧರಿಸುವ ಟೀ ಶರ್ಟ್ ಅಥವಾ ಶರ್ಟ್ ಮಾತ್ರ ಲೈಟ್‌ ಕಲರ್‌ನದ್ದಾಗಬೇಕು. ಕಾಂಟ್ರಾಸ್ಟ್ ಶೇಡ್‌ನದ್ದನ್ನು ಬಳಸಬಹುದು.

Jeans Fashion

ಕ್ವಿಲ್ಟೆಡ್‌ ಜಾಕೆಟ್‌

ಹ್ಯಾಂಡ್‌ಮೇಡ್‌ ಕ್ವಿಲ್ಟೆಡ್‌ ಜಾಕೆಟ್‌ಗಳು ನಾನಾ ಶೈಲಿಯಲ್ಲಿ ಲಭ್ಯ. ಬಟನ್‌ ಹಾಗೂ ಟೈಯಿಂಗ್‌ ಡಿಸೈನ್‌ನಲ್ಲೂ ದೊರೆಯುವ ಈ ಜಾಕೆಟ್‌ಗಳನ್ನು ಜೀನ್ಸ್‌ ಪ್ಯಾಂಟ್‌ ಹಾಗೂ ಡಾರ್ಕ್ ಟಾಪ್‌ ಮೇಲೆ ಧರಿಸಬಹುದು. ಇದು ಪಕ್ಕಾ ಟ್ರೆಡಿಷನಲ್‌ ಪ್ಲಸ್‌ ವೆಸ್ಟರ್ನ್ ಲುಕ್‌ ನೀಡುವಲ್ಲಿ ಸಹಕಾರಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

Continue Reading

ಫ್ಯಾಷನ್

Fashion Show News: ಬಿಎಂಎಸ್‌ ಕಾಲೇಜಿನಲ್ಲಿ ನೋಡುಗರನ್ನು ಸೆಳೆದ ವಿದ್ಯಾರ್ಥಿಗಳ ಫ್ಯಾಷನ್‌ ಶೋ

ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ–ವಿದ್ಯಾರ್ಥಿನಿಯರ ಥೀಮ್‌ ಆಧಾರಿತ ಫ್ಯಾಷನ್‌ ಶೋನ (Fashion Show News) ನಾನಾ ರೌಂಡ್‌ಗಳಲ್ಲಿ ಪಾಲ್ಗೊಂಡ ಹುಡುಗಿಯರು ಹಾಗೂ ಹುಡುಗರು ಪ್ರೊಫೆಷನಲ್‌ ಮಾಡೆಲ್‌ಗಳಂತೆ ವಾಕ್‌ ಮಾಡಿದರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Fashion Show news
ಚಿತ್ರಗಳು: ಬಿಎಂಎಸ್‌ ಕಾಲೇಜಿನಲ್ಲಿ ನಡೆದ ಫ್ಯಾಷನ್‌ ಶೋನ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾಲೇಜಿನ ಹುಡುಗಿಯರು ಹಾಗೂ ಹುಡುಗರು ರ‍್ಯಾಂಪ್‌ (Fashion Show News) ಮೇಲೆ ಹೆಜ್ಜೆ ಹಾಕುತ್ತಿದ್ದರೇ, ನೋಡುಗರ ಕಣ್ಣು ಕುಕ್ಕುವಂತಿತ್ತು. ಒಬ್ಬೊಬ್ಬರದು ಒಂದೊಂದು ಬಗೆಯ ಥೀಮ್‌! ಆ ಥೀಮ್‌ಗೆ ತಕ್ಕಂತೆ ಕಾಸ್ಟ್ಯೂಮ್ಸ್! ಇವನ್ನು ಧರಿಸಿದ ಯಂಗ್‌ಸ್ಟರ್ಸ್ ವೇದಿಕೆ ಮೇಲೆ ತಮ್ಮದೇ ಆದ ಸ್ಟೈಲ್‌ನಲ್ಲಿ ಕ್ಯಾಟ್‌ ವಾಕ್‌ ಮಾಡಿ ನೆರೆದಿದ್ದ ಕಾಲೇಜಿನ ಆಡಳಿತ ವರ್ಗವನ್ನು ಮಾತ್ರವಲ್ಲದೇ, ವಿದ್ಯಾರ್ಥಿಗಳ ಮನ ಗೆದ್ದರು. ಅಂದಹಾಗೆ, ಈ ಫ್ಯಾಷನ್‌ ಶೋ ನಡೆದದ್ದು, ಉದ್ಯಾನನಗರಿಯ ಬಿ ಎಂ ಎಸ್‌ ಕಾಲೇಜಿನ ಆವರಣದಲ್ಲಿ. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದ, ಈ ಫ್ಯಾಷನ್‌ ಶೋ ನಾನಾ ರೌಂಡ್‌ಗಳಲ್ಲಿ ನಡೆಯಿತು.

Fashion Show news

ಆದರ್ಶ್ ಜೈನ್‌ ಕೊರಿಯಾಗ್ರಾಫಿ & ಜಡ್ಜ್

ಕೊರಿಯಾಗ್ರಾಫರ್‌ ಹಾಗೂ ಫ್ಯಾಷನ್‌ ಶೋಗಳ ಡೈರೆಕ್ಟರ್‌ ಆದರ್ಶ್ ಜೈನ್‌ ಬಿ ಎಂ ಎಸ್‌ ಕಾಲೇಜಿನ ಫ್ಯಾಷನ್‌ ಶೋಗಳಿಗೆ ಜ್ಯೂರಿಯಲ್ಲಿದ್ದರು. ಇವರೊಂದಿಗೆ ಮಾಡೆಲ್‌ ಕಾವ್ಯಾ ಕೂಡ ಜ್ಯೂರಿ ಪಾನೆಲ್‌ನಲ್ಲಿದ್ದರು. ರ‍್ಯಾಂಪ್‌ ಮೇಲೆ ವಾಕ್‌ ಮಾಡಿದ ಕಾಲೇಜಿನ ಗ್ರೂಪ್‌ಗಳಿಗೆ ಪ್ರಶಂಸೆಯ ಸುರಿಮಳೆಯೊಂದಿಗೆ ಅವರ ರ‍್ಯಾಂಪ್‌ ವಾಕ್‌, ಟ್ಯಾಲೆಂಟ್‌ ಹಾಗೂ ಕಾಸ್ಟ್ಯೂಮ್ಸ್ ಎಲ್ಲವನ್ನು ಪರಿಗಣನೆಗೆ ತೆಗೆದುಕೊಂಡು ಜಡ್ಜ್‌ ಮಾಡಿದರು.

Fashion Show news

ಆದರ್ಶ್ ಜೈನ್‌ ಫ್ಯಾಷನ್‌ ಟಾಕ್‌

ವಿದ್ಯಾರ್ಥಿಗಳ ಈ ಫ್ಯಾಷನ್‌ ಶೋ ನೋಡಲು, ಪಕ್ಕಾ ಪ್ರೊಫೆಷನಲ್‌ ಮಾಡೆಲ್‌ಗಳ ರ‍್ಯಾಂಪ್‌ ವಾಕ್‌ನಂತಿತ್ತು. ಆಯೋಜನೆ ಕೂಡ ಪರ್ಫೆಕ್ಟಾಗಿತ್ತು. ಇಂದು ನಡೆದ ವಿದ್ಯಾರ್ಥಿಗಳು ಮುಂದೊಮ್ಮೆ ಮಾಡೆಲ್‌ಗಳಾಗಿ ಯಶಸ್ವಿಯೂ ಆಗಬಹುದು. ಇದು ಅವರೆಲ್ಲರ ಮೊದಲ ಹೆಜ್ಜೆ” ಎಂದು ಫ್ಯಾಷನ್‌ ಕೊರಿಯಾಗ್ರಾಫರ್‌ ಆದರ್ಶ್ ಜೈನ್‌ ಹೇಳಿದರು.

Fashion Show news

ಸಂಸ್ಕೃತಿ-ಫ್ಯಾಷನ್‌ ಶೋ ಪ್ಲಸ್‌ ಟ್ಯಾಲೆಂಟ್‌ ಶೋ

ಫ್ಯಾಷನ್‌ ಶೋ ಮಾತ್ರವಲ್ಲದೇ, ಇದರೊಂದಿಗೆ ಹುಡುಗ-ಹುಡುಗಿಯರ ಟ್ಯಾಲೆಂಟ್‌ ಕಂಡು ಹಿಡಿಯುವ ಟ್ಯಾಲೆಂಟ್‌ ಶೋವನ್ನು ಜೊತೆಜೊತೆಗೆ ಆಯೋಜಿಸಲಾಗಿತ್ತು. ಸಂಸ್ಕೃತಿ ಹೆಸರಿನಲ್ಲಿ ನಡೆದ ಈ ಟ್ಯಾಲೆಂಟ್‌ ಶೋನಲ್ಲಿ ಕಾಲೇಜು ಹುಡುಗ-ಹುಡುಗಿಯರು ನಾನಾ ಕಾಯ್ರಕ್ರಮಗಳನ್ನು ನೀಡಿದರು. ಎಲ್ಲಾ ಪ್ರೋಗ್ರಾಮ್‌ಗಳು ಮೆಚ್ಚುಗೆ ಪಡೆದವು.

Fashion Show news

ಫ್ಯಾಷನ್‌ ಶೋ ವಿಜೇತರು

ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಟೀಮ್‌ನ ಫ್ಯಾಷನ್‌ ರ‍್ಯಾಂಪ್‌ ವಾಕ್‌ ಅತ್ಯಾಕರ್ಷಕವಾಗಿ ಮೂಡಿ ಬಂದಿತು. “ಸ್ಕಲ್ಪ್ಚರ್‌ ಆಫ್‌ ಬ್ಲೈಂಡ್‌ ಗಾಡೆಸ್‌ಆಫ್‌ ಜಸ್ಟೀಸ್‌ “ ಥೀಮ್‌ಗೆ ಹೊಂದುವಂತೆ ಅವರೆಲ್ಲರ ವಾಕ್‌, ಕಾಸ್ಟ್ಯೂಮ್ಸ್ ಸೇರಿದಂತೆ ಎಲ್ಲವೂ ಫಸ್ಟ್ ಕ್ಲಾಸ್‌ ಲಿಸ್ಟ್‌ಗೆ ಸೇರಿತು. ಪರಿಣಾಮ, ಈ ಕಾಲೇಜಿನ ಏರಿಯನ್‌ ಟೀಮ್‌ ಮೊದಲ ಸ್ಥಾನ ಗಳಿಸಿತು. ಬಿಎಂಎಸ್‌ ಆರ್ಕಿಟೆಕ್ಚರ್‌ ಎರಡನೇ ರನ್ನರ್‌ ಅಪ್‌ ಆಗಿ ಸ್ಥಾನ ಗಳಿಸಿತು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Summer Travel Fashion Tips: ಬೇಸಿಗೆ ಪ್ರವಾಸದ ವೇಳೆ ಯುವತಿಯರು ಗಮನಿಸಲೇಬೇಕಾದ 5 ಸಂಗತಿಗಳು

Continue Reading
Advertisement
Snake
ಕರ್ನಾಟಕ4 hours ago

Snake: ಸ್ಟ್ಯಾಂಡ್‌ನಲ್ಲಿಟ್ಟಿದ್ದ ಚಪ್ಪಲಿಯೊಳಗೆ ಕೂತಿದ್ದ ಬುಸ್‌ ಬುಸ್‌ ನಾಗಪ್ಪ; ಸ್ವಲ್ಪ ಹುಷಾರಾಗಿರ‍್ರಪ್ಪ! Video ಇಲ್ಲಿದೆ

Varanasi
ದೇಶ5 hours ago

Varanasi: ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಏನಂತಾರೆ? ಇಲ್ಲಿದೆ ‘ವಿಸ್ತಾರ ನ್ಯೂಸ್’ ಗ್ರೌಂಡ್‌ ರಿಪೋರ್ಟ್!

Virat kohli
ಕ್ರೀಡೆ5 hours ago

Virat Kohli : ಐಪಿಎಲ್​ 2024ರ ಆರೆಂಜ್ ಕ್ಯಾಪ್ ಗೆದ್ದು ಹೊಸ ದಾಖಲೆ ಬರೆದ ವಿರಾಟ್​ ಕೊಹ್ಲಿ

IPL 2024 Final
ಪ್ರಮುಖ ಸುದ್ದಿ5 hours ago

IPL 2024 Final : 3ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೆಕೆಆರ್​​; ಹೈದರಾಬಾದ್​ಗೆ ನಿರಾಸೆ

The Kapil Sharma Show
ದೇಶ5 hours ago

Physical Abuse: ಕಪಿಲ್‌ ಶರ್ಮಾ ಶೋನಲ್ಲಿ ಪಾತ್ರ ಕೊಡುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ

IPL 2024
ಕ್ರೀಡೆ5 hours ago

IPL 2024 Final : ಐಪಿಎಲ್ ಫೈನಲ್​​ನಲ್ಲಿ ಕಡಿಮೆ ಸ್ಕೋರ್​ನ ಕಳಪೆ ದಾಖಲೆ ಬರೆದ ಸನ್​ರೈಸರ್ಸ್​ ಹೈದರಾಬಾದ್​​

Hardik Pandya
ಕ್ರೀಡೆ6 hours ago

Hardik Pandya : ಡೈವೋರ್ಸ್​ ಗಾಸಿಪ್​ ನಡುವೆ ಹಾರ್ದಿಕ್ ಪಾಂಡ್ಯ ನಾಪತ್ತೆ!

Rain News
ಕರ್ನಾಟಕ7 hours ago

Rain News: ಮಳೆ ಅವಾಂತರ; ಮನೆಯ ಶೀಟ್‌ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವು

Phalody Satta Bazar
ದೇಶ7 hours ago

Phalodi Satta Bazar: ಮೋದಿಗೆ 330 ಸೀಟು ಖಚಿತ ಎಂದ ಸಟ್ಟಾ ಬಜಾರ್‌ ಸಮೀಕ್ಷೆ; ರಾಜ್ಯವಾರು ವರದಿ ಇಲ್ಲಿದೆ

Shivamogga News
ಕರ್ನಾಟಕ7 hours ago

Shivamogga News: ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಹುಚ್ಚಾಟ ಮೆರೆದ ಯುವಕ; ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ10 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು11 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ7 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌