Planning to retire early : 40 ವರ್ಷಕ್ಕೇ ನಿವೃತ್ತಿಯಾಗಲು ಬಯಸುತ್ತೀರಾ? ಮೊದಲು ಈ ಪ್ರಶ್ನೆಗಳನ್ನು ಕೇಳಿ - Vistara News

ಮನಿ-ಗೈಡ್

Planning to retire early : 40 ವರ್ಷಕ್ಕೇ ನಿವೃತ್ತಿಯಾಗಲು ಬಯಸುತ್ತೀರಾ? ಮೊದಲು ಈ ಪ್ರಶ್ನೆಗಳನ್ನು ಕೇಳಿ

Planning to retire early‌ ನೀವು 40ನೇ ವರ್ಷಕ್ಕೆ ಉದ್ಯೋಗದಿಂದ ನಿವೃತ್ತರಾಗಿ ಜೀವನವನ್ನು ನಿಮ್ಮ ಇಷ್ಟದಂತೆ ಎಂಜಾಯ್‌ ಮಾಡಬೇಕು ಎಂದು ಭಾವಿಸಿದ್ದೀರಾ? ಆತುರ ಬೇಡ. ಓದಿರಿ ವಿಸ್ತಾರ ಮನಿಗೈಡ್.

VISTARANEWS.COM


on

An young employee at office work
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವರು ಉದ್ಯೋಗದಲ್ಲಿ ಬೇಸತ್ತು 40 ವರ್ಷಕ್ಕೆಲ್ಲ ನಿವೃತ್ತಿಯಾಗಿ ಇರಲು ಬಯಸುತ್ತಾರೆ. ದಿನ ನಿತ್ಯ ಕಚೇರಿಗೆ ಹೋಗಿ ಕೆಲಸ ಮಾಡುವುದು, ಹೈರಾಣಾಗುವುದು ಸಾಕಪ್ಪಾ ಸಾಕು ಎಂದು ಎಷ್ಟೋ ಸಲ ಅನ್ನಿಸುತ್ತದೆ. ನಮಗೆ ಬೇಕಾದ ಸ್ಥಳಗಳಿಗೆ ಭೇಟಿ ನೀಡಬೇಕು. ಜಗತ್ತಿನ ನಾನಾ ದೇಶಗಳನ್ನು ಸುತ್ತಾಡಬೇಕು. ಇದೆಲ್ಲ ಕೈಕಾಲು ಗಟ್ಟಿಯಾಗಿದ್ದಾಗ ಮಾತ್ರ ಸಾಧ್ಯ ಎಂಬ ಮಾತೇನೋ ನಿಜ. ಹೀಗೆ ಹೇಳುವುದು ಸುಲಭ. ಆದರೆ ಇದು ಎಲ್ಲರಿಗೂ ಹಲವು ಕಾರಣಗಳಿಂದಾಗಿ ಸಾಧ್ಯವಾಗುವುದಿಲ್ಲ. (early retirement) ಆದ್ದರಿಂದ ಇಂಥ ಯೋಚನೆಗೆ ಮುನ್ನ ಕೆಲವು ಪ್ರಶ್ನೆಗಳನ್ನು ನೀವು ನಮ್ಮಲ್ಲೇ ಕೇಳಿಕೊಂಡು ಬಳಿಕ ಉತ್ತರವನ್ನೂ ಕಂಡುಕೊಳ್ಳಬೇಕು. ಬಳಿಕ ಅಂತಿಮವಾಗಿ ನಿರ್ಣಯ ತೆಗೆದುಕೊಳ್ಳಬಹುದು.

ಮೊದಲನೆಯದಾಗಿ ನೀವು 40ನೇ ವರ್ಷಕ್ಕೆ ನಿವೃತ್ತಿಯಾಗುವುದಿದ್ದರೆ, ಉಳಿದ ಬದುಕಿಗೆ ಬೇಕಾದ ಏರ್ಪಾಟುಗಳನ್ನು ಮಾಡಿದ್ದೀರಾ, ಅದರ ಸಮಗ್ರ ವಿವರಗಳು ನಿಮ್ಮಲ್ಲಿ ಇದೆಯಾ ಎಂದು ಕೇಳಿಕೊಳ್ಳಬೇಕು. ಎರಡನೆಯದಾಗಿ ಮುಂದಿನ ಬದುಕಿನುದ್ದಕ್ಕೂ ಎಷ್ಟು ಹಣ ಬೇಕಾಗಬಹುದು ಎಂದು ಅಂದಾಜಿಸಿದ್ದೀರಾ? ಎಂದು ಕೇಳಿಕೊಳ್ಳಿ. ಇನ್ನು ಮುಂದೆ ಕಚೇರಿ ಕೆಲಸದ ಹೊರೆ ಹೊತ್ತುಕೊಳ್ಳಲು ಸಾಧ್ಯವೇ ಇಲ್ಲ ಎಂದು ಬೇಸತ್ತುಕೊಂಡಿರುವವರು ಈ ಎರಡು ಪ್ರಶ್ನೆಗಳನ್ನು ಕೇಳಿಕೊಳ್ಳಲೇಬೇಕು. (personal finance advice) ಏಕೆಂದರೆ ಇದು ಮೂಲಭೂತ ಪ್ರಶ್ನೆ. ಈ ಎರಡು ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆ ಅವಸರದಲ್ಲಿ ನಿವೃತ್ತಿಯ ಆಲೋಚನೆ ಮಾಡದಿರಿ.

man sitting in easy chair

ಮೇಲ್ಕಂಡ ಎರಡೂ ಪ್ರಶ್ನೆಗಳು ತುಸು ಕಹಿ ಎನ್ನಿಸಬಹುದು. ಆದರೆ ಅದು ವಸ್ತುನಿಷ್ಠ. ವಾಸ್ತವ ಆಧರಿತ. ಅದನ್ನು ಬಗೆಹರಿಸದೆ ಬೇರೆ ವಿಧಿ ಇಲ್ಲ. ಉದ್ಯೋಗ ಬಿಟ್ಟ ಕೆಲ ವರ್ಷಗಳು ಗ್ರೇಟ್‌ ಎನ್ನಿಸುತ್ತವೆ. ನಮ್ಮ ಎಲ್ಲ ಹವ್ಯಾಸಗಳಿಗೆ ಬಹಳಷ್ಟು ಸಮಯ, ಸಂದರ್ಭ ಸಿಗುತ್ತದೆ ಎಂದು ಅನ್ನಿಸುತ್ತದೆ. ಸುತ್ತಮುತ್ತಲಿನ ಸಮಾಜ, ಬಂಧು ಬಳಗದವರು ಕೂಡ ನಿವೃತ್ತಿಗೆ ಉತ್ತೇಜಿಸಬಹುದು. ಆದರೆ ಕ್ಷಣ ಭಂಗುರದಂತೆ ಕಾಲ ಸಾಗಿದಂತೆ ಭ್ರಮ ನಿರಸನವಾಗುವ ರಿಸ್ಕ್‌ ಕೂಡ ಇದ್ದೇ ಇರುತ್ತದೆ ಎಂಬುದನ್ನು ಮರೆಯಬಾರದು.

ಒಬ್ಬ ವ್ಯಕ್ತಿ ತನ್ನಲ್ಲಿರುವ ಎನರ್ಜಿ, ಸಮಯ, ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ಸದಾ ಬಯಸುತ್ತಾನೆ. ಇವೆಲ್ಲ ಇದ್ದೂ ಸುಮ್ಮನಿರುವುದು ಕಷ್ಟ. ನಮ್ಮ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಬಯಕೆ ಸುಪ್ತವಾಗಿರುತ್ತದೆ. ದಿನ ನಿತ್ಯ ಪ್ರಯಾಣ, ಟ್ರೆಕ್ಕಿಂಗ್‌ ಸಾಧ್ಯವಾಗುವುದಿಲ್ಲ. ಆರೋಗ್ಯ ಸಮಸ್ಯೆ ನಿವೃತ್ತಿಯ ಬಳಿಕವೂ ಬರುವುದಿಲ್ಲ ಎಂದು ಖಾತರಿಯಾಗಿ ಹೇಳಲು ಸಾಧ್ಯವಿಲ್ಲ.

ಇದನ್ನೂ ಓದಿ: Stock trading : ನೀವೂ ಸ್ಟಾಕ್‌ ಟ್ರೇಡಿಂಗ್‌ ಮಾಡ್ತೀರಾ? ವಿಸ್ತಾರ ಮನಿ ಪ್ಲಸ್‌ ವಿಡಿಯೊ ವೀಕ್ಷಿಸಿ

ಎಲ್ಲಕ್ಕಿಂತ ಮುಖ್ಯವಾಗಿ ಕೆಲ ಆರ್ಥಿಕ ಲೆಕ್ಕಾಚಾರಗಳನ್ನು ಕರಾರುವಕ್ಕಾಗಿ ಮಾಡಬೇಕು. ಅನೇಕ ಮಂದಿ ತಮ್ಮ ಕೂಡಿಟ್ಟ ಒಟ್ಟು ಹಣದಲ್ಲಿ ಪ್ರತಿ ವರ್ಷ 4% ಮೊತ್ತವನ್ನು ಹಿಂತೆಗೆದುಕೊಂಡರೆ ಜೀವನದ ಖರ್ಚು ವೆಚ್ಚಗಳಿಗೆ ಸಾಕಾಗುತ್ತದೆ ಎಂದು ಭಾವಿಸಿದ್ದಾರೆ. ಆದರೆ 4% ವಿತ್‌ ಡ್ರಾವಲ್ಸ್‌ ನಿಮ್ಮ ವರ್ಷದ ವೆಚ್ಚಗಳಿಗೆ ಸಾಕಾಗಬೇಕಿದ್ದರೆ ಬಂಡವಾಳವೂ ದೊಡ್ಡ ಮೊತ್ತದಲ್ಲಿ ಇರಬೇಕಾಗುತ್ತದೆ. ನಿಮಗೆ ತಿಂಗಳಿಗೆ 50,000 ರೂ. ಖರ್ಚು ವೆಚ್ಚ ಇದೆ ಎಂದಿಟ್ಟುಕೊಳ್ಳಿ. ವರ್ಷಕ್ಕೆ 6 ಲಕ್ಷ ರೂ. ವೆಚ್ಚವಾಗುತ್ತದೆ. ಆಗ ನಿಮ್ಮ ಅಸಲು ಸಂಪತ್ತು 1.5 ಕೋಟಿ ರೂ. ಬೇಕಾಗುತ್ತದೆ. (investment corpus) ಸಾಲದ್ದಕ್ಕೆ ಅನಿರೀಕ್ಷಿತವಾಗಿ ಖರ್ಚುಗಳು ಬಂದಾಗ ಕೂಡ ಅಸಲು ಸಂಪತ್ತು ಕರಗುತ್ತದೆ.

ಹಣದುಬ್ಬರ ಕೂಡ ಏರುಗತಿಯಲ್ಲಿದ್ದರೆ, ಅದು ಹಣದ ಮೌಲ್ಯವನ್ನು ಕಳೆಯುತ್ತದೆ. ನೀವು 40 ವರ್ಷಕ್ಕೇ ನಿವೃತ್ತಿಯಾಗುವುದಿದ್ದರೆ, ಮುಂದಿನ 50 ವರ್ಷಗಳ ಅವಧಿಗೆ ಎಷ್ಟು ಹಣ ಬೇಕಾಗಬಹುದು ಎಂದು ಅಂದಾಜಿಸುವುದು ಕಷ್ಟಕರ. ಹೀಗಾಗಿ ಈ ಪ್ರಶ್ನೆಯನ್ನು ಬಗೆಹರಿಸಲುವ ಮುನ್ನ ಪ್ರತಿಯೊಂದು ವಿಷಯದಲ್ಲೂ ಆಳವಾಗಿ, ಸಮಗ್ರವಾಗಿ ಹಾಗೂ ಸಾಧ್ಯವಾದಷ್ಟು ನಿಖರವಾಗಿ ಯೋಚಿಸಿ, ಬಳಿಕವಷ್ಟೇ 40ನೇ ವಯಸ್ಸಿಗೆ ನಿವೃತ್ತಿಯ ಬಗ್ಗೆ ನಿರ್ಧರಿಸಿ. ಆತುರದ ನಿರ್ಣಯ ಬೇಡ. ಅದಕ್ಕೂ ಮುನ್ನ ಆರ್ಥಿಕ ಭದ್ರತೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ. ಸಾಕಷ್ಟು ವಿಮೆಯನ್ನು ಖರೀದಿಸಿ. ಪಿಂಚಣಿ ಯೋಜನೆಗಳನ್ನೂ ವ್ಯವಸ್ಥೆಗೊಳಿಸಿ. ಹಲವಾರು ಆದಾಯ ಮೂಲಗಳನ್ನು ಖಚಿತಪಡಿಸಿಕೊಳ್ಳಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಈ ಸಂಗತಿ ತಿಳಿದಿರಲೇಬೇಕು!

ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವ ಪ್ರಕ್ರಿಯೆಯು ಸ್ವಲ್ಪ ಸಂಕೀರ್ಣ ಮತ್ತು ಸವಾಲಿನದ್ದಾಗಿರಬಹುದು. ತೆರಿಗೆದಾರರು ತಮ್ಮ ಐಟಿಆರ್ (ITR Filing) ಅನ್ನು ಸಲ್ಲಿಸುವಾಗ ತಿಳಿದಿರಬೇಕಾದ ಮತ್ತು ಗಮನ ಹರಿಸಬೇಕಾದ ಕೆಲವು ಪ್ರಮುಖ ವಿಷಯಗಳಿವೆ. ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವ ಮೊದಲು ಈ ಮಹತ್ವದ ಸಂಗತಿಗಳನ್ನು ತಿಳಿದುಕೊಂಡಿರಿ.

VISTARANEWS.COM


on

By

ITR Filing
Koo

ಆದಾಯ ತೆರಿಗೆ ರಿಟರ್ನ್ (ITR Filing) ಸಲ್ಲಿಸುವ ಮೊದಲು ತಿಳಿದುಕೊಳ್ಳಬೇಕಾದ ಹಲವಾರು ಸಂಗತಿಗಳಿವೆ. ಆದಾಯ ತೆರಿಗೆಯು (Income tax) ಜನರು ಮತ್ತು ಸಂಸ್ಥೆಗಳು ಗಳಿಸುವ ಆದಾಯ ಮತ್ತು ಲಾಭದ ಮೇಲೆ ಪಾವತಿಸುವ ತೆರಿಗೆಯಾಗಿದೆ. ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸುವುದು ತೆರಿಗೆದಾರರು ಮಾಡಲೇಬೇಕಾದ ವಾರ್ಷಿಕ ಆಥಿಕ ಕಾರ್ಯವಾಗಿದೆ.

ಭಾರತದಲ್ಲಿ (India) ತೆರಿಗೆದಾರರು (taxpayer) ತಮ್ಮ ಆದಾಯ ಮತ್ತು ತೆರಿಗೆಗಳ ವಾರ್ಷಿಕ ಲೆಕ್ಕಾಚಾರವನ್ನು ಸಲ್ಲಿಸುವ ಮೂಲಕ ಸರ್ಕಾರಕ್ಕೆ ವರದಿ ಮಾಡಬೇಕಾಗುತ್ತದೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಇದು ಅತ್ಯಮೂಲ್ಯವಾಗಿದೆ. 2023– 24ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವ ಪ್ರಕ್ರಿಯೆಯು ಸ್ವಲ್ಪ ಸಂಕೀರ್ಣ ಮತ್ತು ಸವಾಲಿನದ್ದಾಗಿರಬಹುದು. ತೆರಿಗೆದಾರರು ತಮ್ಮ ಐಟಿಆರ್ ಅನ್ನು ಸಲ್ಲಿಸುವಾಗ ತಿಳಿದಿರಬೇಕಾದ ಮತ್ತು ಗಮನ ಹರಿಸಬೇಕಾದ ಕೆಲವು ಪ್ರಮುಖ ವಿಷಯಗಳಿವೆ.

ಗಡುವು ತಿಳಿದಿರಿ

ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವ ಮೊದಲು ಎಲ್ಲಾ ತೆರಿಗೆದಾರರು ಗಮನಿಸಬೇಕಾದ ಮೊದಲ ಮತ್ತು ಪ್ರಮುಖ ವಿಷಯವೆಂದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಾಮಾನ್ಯವಾಗಿ ಪ್ರತಿ ಹಣಕಾಸು ವರ್ಷದ ಜುಲೈ 31 ಕೊನೆಯ ದಿನವಾಗಿದೆ. ಈ ವರ್ಷ ಆದಾಯ ತೆರಿಗೆ ಇಲಾಖೆಯು 2023-24ಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.

ತೆರಿಗೆ ಪದ್ಧತಿಯನ್ನು ಅರ್ಥಮಾಡಿಕೊಳ್ಳಿ

ತೆರಿಗೆದಾರರು ಈಗ ಹಳೆಯ ತೆರಿಗೆ ಪದ್ಧತಿ ಮತ್ತು ಬಜೆಟ್ 2020ರಲ್ಲಿ ಪರಿಚಯಿಸಲಾದ ಹೊಸ ತೆರಿಗೆ ಪದ್ಧತಿಯ ನಡುವೆ ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿದ್ದಾರೆ. ಎರಡೂ ತನ್ನದೇ ಆದ ಸಾಧಕ-ಬಾಧಕಗಳನ್ನು ಹೊಂದಿವೆ. ಹೊಸ ಪದ್ದತಿಯು ಕಡಿಮೆ ತೆರಿಗೆ ದರಗಳನ್ನು ನೀಡುತ್ತದೆ. ಆದರೆ ಕೆಲವು ವಿಷಯಗಳ ಮೇಲೆ ಕಡಿತ ಮತ್ತು ವಿನಾಯಿತಿಗಳನ್ನು ಮಿತಿಗೊಳಿಸುತ್ತದೆ.

ಹಳೆಯ ಪದ್ದತಿಯು ತುಲನಾತ್ಮಕವಾಗಿ ಹೆಚ್ಚಿನ ತೆರಿಗೆ ದರಗಳನ್ನು ಹೊಂದಿದೆ. ಆದರೆ ಕಡಿತ ಮತ್ತು ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡುವ ಮೂಲಕ ಹಣವನ್ನು ಉಳಿಸಲು ಜನರಿಗೆ ಅವಕಾಶ ನೀಡುತ್ತದೆ. ಒಬ್ಬರ ಪರಿಸ್ಥಿತಿಗೆ ಅನುಗುಣವಾಗಿ ಯಾವ ಪದ್ಧತಿ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿಕೊಳ್ಳಬೇಕು.

ಯಾವ ತೆರಿಗೆ ವರ್ಗಕ್ಕೆ ಸೇರುತ್ತೀರಿ?

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ತೆರಿಗೆ ವರ್ಗಕ್ಕೆ ಸೇರುತ್ತೀರಿ ಎಂಬುದನ್ನು ತಿಳಿದುಕೊಂಡಿರಬೇಕು. ತೆರಿಗೆಯ ಆದಾಯವನ್ನು ತಿಳಿದುಕೊಳ್ಳುವುದು ತೆರಿಗೆ ಹೊಣೆಗಾರಿಕೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ, ಇದು ಭರ್ತಿ ಮಾಡಲು ಅರ್ಹವಾದ ಕಡಿತಗಳನ್ನು ಕ್ಲೈಮ್ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಹಣಕಾಸು ಮತ್ತು ಹೂಡಿಕೆಗಳನ್ನು ಯೋಜಿಸಲು ಆದಾಯ ತೆರಿಗೆ ರಿಟರ್ನ್ ಅನ್ನು ಸಮರ್ಥ ಮತ್ತು ದೋಷ-ಮುಕ್ತ ರೀತಿಯಲ್ಲಿ ಸಲ್ಲಿಸುವುದನ್ನು ಖಚಿತಪಡಿಸುತ್ತದೆ.

ಅಗತ್ಯವಿರುವ ದಾಖಲೆಗಳನ್ನು ಪರಿಶೀಲಿಸಿ

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವೇಳೆ ದಾಖಲೆಗಳನ್ನು ಪರಿಶೀಲಿಸುವುದು ಬಹುಮುಖ್ಯವಾಗಿದೆ. ಆದಾಯ ತೆರಿಗೆ ಇಲಾಖೆಯು ತೆರಿಗೆದಾರರು ತಮ್ಮ ಆದಾಯ, ಕಡಿತಗಳು ಮತ್ತು ತೆರಿಗೆ ಪಾವತಿಗಳನ್ನು ದೃಢೀಕರಿಸಲು ವಿವಿಧ ದಾಖಲೆಗಳನ್ನು ಸಲ್ಲಿಸಬೇಕು. ಆದ್ದರಿಂದ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯು ಹೆಚ್ಚು ಸುವ್ಯವಸ್ಥಿತ ಮತ್ತು ಡಿಜಿಟೈಸ್ ಆಗಿರುವುದರಿಂದ ಡಿಜಿಟಲ್ ಸಾಧನದಲ್ಲಿ ಅಗತ್ಯ ದಾಖಲೆಗಳನ್ನು ಸಂಘಟಿಸುವುದು ಮತ್ತು ಉಳಿಸುವುದು ಫೈಲಿಂಗ್ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ಹೆಚ್ಚು ನಿಖರವಾಗಿ ಮಾಡಲು ಸಹಾಯ ಮಾಡುತ್ತದೆ.


ಸರಿಯಾದ ಐಟಿಆರ್ ಅರ್ಜಿಯನ್ನು ಆಯ್ಕೆ ಮಾಡಿ

ಆದಾಯದ ಮೂಲ ಮತ್ತು ಒಟ್ಟು ಆದಾಯದ ಆಧಾರದ ಮೇಲೆ ಅನ್ವಯವಾಗುವ ಐಟಿಆರ್ ಫಾರ್ಮ್ ಅನ್ನು ಗುರುತಿಸುವುದು ಮತ್ತು ಆಯ್ಕೆ ಮಾಡುವುದು ಮುಖ್ಯವಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ತೆರಿಗೆದಾರರಿಂದ ಆರಂಭಿಕ ರಿಟರ್ನ್ ಫೈಲಿಂಗ್ ಅನ್ನು ಉತ್ತೇಜಿಸಲು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಐಟಿಆರ್ ಫಾರ್ಮ್‌ಗಳು ಲಭ್ಯವಾಗುವಂತೆ ಮಾಡಿತು.

ಐಟಿಆರ್-1 ಆದಾಯದ ಮೂಲ ಸಂಬಳವಾಗಿದ್ದು, ಮನೆ ಆಸ್ತಿ ಮತ್ತು ಇತರ ಮೂಲಗಳಿಂದ ಬಡ್ಡಿ, ಲಾಭಂಶ ಸೇರಿ ಒಟ್ಟು 50 ಲಕ್ಷ ರೂ. ಆದಾಯವಿದ್ದವರು ಇದರಲ್ಲಿ ಅರ್ಜಿ ಸಲ್ಲಿಸಬೇಕು.

ಐಟಿಆರ್ -2 ಬಂಡವಾಳ ಅಥವಾ ವಿದೇಶಿ ಆಸ್ತಿಗಳಿಂದ ಆದಾಯದ ಮೂಲ ಹೊಂದಿರುವ ಹಿಂದೂ ಅವಿಭಜಿತ ಕುಟುಂಬಗಳು ಇದರಲ್ಲಿ ಅರ್ಜಿ ಸಲ್ಲಿಸಬೇಕು.

ಐಟಿಆರ್- 3 ವ್ಯಾಪಾರ ಅಥವಾ ಸ್ವಯಂ ವೃತ್ತಿಯಿಂದ ಆದಾಯ ಹೊಂದಿರುವ ವ್ಯಕ್ತಿಗಳು, ಐಟಿಆರ್- 4 ವ್ಯಾಪಾರ ಅಥವಾ ಸ್ವಂತ ವೃತ್ತಿಯಿಂದ ಆದಾಯ ಹೊಂದಿರುವವರು ಇದರಲ್ಲಿ ಅರ್ಜಿ ಸಲ್ಲಿಸಬಹುದು.

ವೈಯಕ್ತಿಕ ಮತ್ತು ಬ್ಯಾಂಕ್ ಖಾತೆ ವಿವರ ಪರಿಶೀಲಿಸಿ

ಐಟಿಆರ್ ಅನ್ನು ಸಲ್ಲಿಸುವ ಮೊದಲು ತೆರಿಗೆ ಮರುಪಾವತಿ ಪ್ರಕ್ರಿಯೆಯಲ್ಲಿ ವಿಳಂಬವನ್ನು ತಪ್ಪಿಸಲು ತೆರಿಗೆದಾರರು ತಮ್ಮ ವೈಯಕ್ತಿಕ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಬೇಕು. ಹೆಸರು, ವಿಳಾಸ, ಇಮೇಲ್ ಮತ್ತು ಪಾನ್ ನಂತಹ ವಿವರಗಳನ್ನು ಲಿಂಕ್ ಮಾಡಲಾಗಿದೆ ಮತ್ತು ತೆರಿಗೆ ರಿಟರ್ನ್‌ನಲ್ಲಿ ನಿಖರವಾಗಿ ನಮೂದಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸರಿಯಾದ ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿ

ತೆರಿಗೆ ರಿಟರ್ನ್‌ನಲ್ಲಿ ಸರಿಯಾದ ಮೌಲ್ಯಮಾಪನ ವರ್ಷವನ್ನು ನಮೂದಿಸಿ. ಇದರಲ್ಲಿ ತಪ್ಪುಗಳಾದರೆ ಹೆಚ್ಚು ತೆರಿಗೆ ಮತ್ತು ಅನಗತ್ಯ ದಂಡಗಳಿಗೆ ಕಾರಣವಾಗಬಹುದು.

ಫಾರ್ಮ್ 16ರಲ್ಲಿ ವಿವರಗಳನ್ನು ಪರಿಶೀಲಿಸಿ

ಫಾರ್ಮ್ 16ರಲ್ಲಿನ ಸಂಬಳದ ಭಾಗಗಳು, ಟಿಡಿಎಸ್ ಕಡಿತ ಮತ್ತು ತೆರಿಗೆ-ಉಳಿತಾಯ ಹೂಡಿಕೆಗಳಂತಹ ವಿವರಗಳು ಸರಿಯಾಗಿವೆಯೇ ಎಂದು ಮುಂಚಿತವಾಗಿ ಖಚಿತಪಡಿಸಿಕೊಳ್ಳಿ. ಪೇ ಸ್ಲಿಪ್‌ ಮತ್ತು ಹೂಡಿಕೆ ಹೇಳಿಕೆಗಳೊಂದಿಗೆ ಮಾಹಿತಿಯನ್ನು ಕ್ರಾಸ್-ಚೆಕ್ ಮಾಡಿ. ಯಾವುದೇ ವ್ಯತ್ಯಾಸಗಳನ್ನು ಸರಿಪಡಿಸಲು ಉದ್ಯೋಗದಾತರಿಗೆ ವರದಿ ಮಾಡಬೇಕು.

ಹಣಕಾಸು ವರ್ಷದಲ್ಲಿ ಒಬ್ಬರು ಬಹು ಉದ್ಯೋಗದಾತರನ್ನು ಹೊಂದಿದ್ದರೆ ರಿಟರ್ನ್ ಸಲ್ಲಿಸುವ ಮೊದಲು ನಿಮ್ಮ ಎಲ್ಲಾ ಫಾರ್ಮ್ 16ರಿಂದ ಆದಾಯವನ್ನು ಒಟ್ಟುಗೂಡಿಸಿರುವುದು ಖಚಿತಪಡಿಸಿಕೊಳ್ಳಿ. ಸರಿಯಾದ ಕಡಿತಗಳನ್ನು ಕ್ಲೈಮ್ ಮಾಡಲು ಮತ್ತು ಒಟ್ಟು ಆದಾಯವನ್ನು ನಿಖರವಾಗಿ ವರದಿ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ನಿಖರ ವರದಿ ಖಚಿತಪಡಿಸಿ

ಫಾರ್ಮ್ 26ಎಎಸ್ (ತೆರಿಗೆ ಕ್ರೆಡಿಟ್ ಸ್ಟೇಟ್‌ಮೆಂಟ್) ಮತ್ತು ಎಐಎಸ್ /ಟಿಐಎಸ್ (ವಾರ್ಷಿಕ ಮಾಹಿತಿ ಹೇಳಿಕೆ/ತೆರಿಗೆ ಮಾಹಿತಿ ಹೇಳಿಕೆ) ನಲ್ಲಿ ಲಭ್ಯವಿರುವ ಮಾಹಿತಿಯೊಂದಿಗೆ ಒಟ್ಟು ಆದಾಯವನ್ನು ಸಂಪೂರ್ಣವಾಗಿ ಸಮನ್ವಯಗೊಳಿಸಿ. ಯಾಕೆಂದರೆ ಇದು ಯಾವುದೇ ವ್ಯತ್ಯಾಸಗಳನ್ನು ಗುರುತಿಸಲು ಮತ್ತು ಎಲ್ಲಾ ಆದಾಯ ಮೂಲಗಳನ್ನು ನಿಖರವಾಗಿ ವರದಿ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

Continue Reading

ಮನಿ-ಗೈಡ್

Money Guide: ವಿದೇಶ ಪ್ರವಾಸಕ್ಕೆ ಮುಂದಾಗಿದ್ದೀರಾ? ಅತ್ಯುತ್ತಮ ಕೊಡುಗೆ ನೀಡುವ ಈ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ ಬಗ್ಗೆ ತಿಳಿಯಿರಿ

Money Guide: ವಿದೇಶ ಪ್ರವಾಸ ಅಂದುಕೊಂಡಷ್ಟು ಸುಲಭವಲ್ಲ. ಪಾಸ್‌ಪೋರ್ಟ್‌, ವೀಸಾ ಹೊಂದಿಸುವುದರಿಂದ ಹಿಡಿದು ಟಿಕೆಟ್‌ ಬುಕ್‌ ಮಾಡುವುದು, ಅಲ್ಲಿನ ಪ್ರವಾಸ ತಾಣಗಳ ಬಗ್ಗೆ ಮಾಹಿತಿ ಕಲೆ ಹಾಕುವುದು, ಉಳಿದುಕೊಳ್ಳುವ ವ್ಯವಸ್ಥೆ, ಶಾಪಿಂಗ್‌ ಮಾಡುವ ರೀತಿ ಹೀಗೆ ಎಲ್ಲ ವಿಚಾರದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಸೂಕ್ತ ಪ್ಲ್ಯಾನ್‌ ಮಾಡಬೇಕಾಗುತ್ತದೆ. ಜತೆಗೆ ಅಲ್ಲಿ ನಿಮ್ಮ ಹಣವನ್ನು ಹೇಗೆ ಖರ್ಚು ಮಾಡುವುದು ಎನ್ನುವ ವಿಚಾರವೂ ಮುಖ್ಯವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ಗಳಂತೆ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳನ್ನೂ ಪರಿಚಯಿಸಿವೆ. ಅಂತಹ ಕೆಲವು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳ ವಿವರ ಇಂದಿನ ಮನಿಗೈಡ್‌ನಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರವಾಸ ಕೈಗೊಳ್ಳಬೇಕು ಎಂದು ಬಹುತೇಕರು ಅಂದುಕೊಳ್ಳುತ್ತಾರೆ. ಅಲ್ಲಿನ ಪ್ರಕೃತಿ, ಆಹಾರ ಪದ್ಧತಿ, ಜನ ಜೀವನ ಹೀಗೆ ಪ್ರತಿಯೊಂದದನ್ನು ಹತ್ತಿರದಿಂದಲೇ ನೋಡಬೇಕು, ನಮ್ಮ ದೇಶಕ್ಕಿಂತ ಅಲ್ಲಿ ಜೀವನ ವಿಧಾನ ಹೇಗೆ ಭಿನ್ನ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಬಯಸುತ್ತಾರೆ. ಆದರೆ ವಿದೇಶ ಪ್ರವಾಸ ಅಂದುಕೊಂಡಷ್ಟು ಸುಲಭವಲ್ಲ. ಪಾಸ್‌ಪೋರ್ಟ್‌, ವೀಸಾ ಹೊಂದಿಸುವುದರಿಂದ ಹಿಡಿದು ಟಿಕೆಟ್‌ ಬುಕ್‌ ಮಾಡುವುದು, ಅಲ್ಲಿನ ಪ್ರವಾಸ ತಾಣಗಳ ಬಗ್ಗೆ ಮಾಹಿತಿ ಕಲೆ ಹಾಕುವುದು, ಉಳಿದುಕೊಳ್ಳುವ ವ್ಯವಸ್ಥೆ, ಶಾಪಿಂಗ್‌ ಮಾಡುವ ರೀತಿ ಹೀಗೆ ಎಲ್ಲ ವಿಚಾರದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಸೂಕ್ತ ಪ್ಲ್ಯಾನ್‌ ಮಾಡಬೇಕಾಗುತ್ತದೆ. ಜತೆಗೆ ಅಲ್ಲಿ ನಿಮ್ಮ ಹಣವನ್ನು ಹೇಗೆ ಖರ್ಚು ಮಾಡುವುದು ಎನ್ನುವ ವಿಚಾರವೂ ಮುಖ್ಯವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ಗಳಂತೆ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ (International Travel Debit Card)ಗಳನ್ನೂ ಪರಿಚಯಿಸಿವೆ. ಅಂತಹ ಕೆಲವು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಈ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳು ಪ್ರಯಾಣ ರಿಯಾಯಿತಿಗಳು, ಲಾಂಜ್ ಪ್ರವೇಶ, ವಿದೇಶಿ ಖರೀದಿಗಳ ಮೇಲೆ ಹೆಚ್ಚಿದ ರಿವಾರ್ಡ್ ಪಾಯಿಂಟ್‌ಗಳು ಮತ್ತಿತರ ಕೊಡುಗೆಗಳನ್ನು ನೀಡುತ್ತವೆ.

ಐಸಿಐಸಿಐ ಮಾಸ್ಟರ್‌ಕಾರ್ಡ್‌ ವರ್ಲ್ಡ್‌ ಡೆಬಿಟ್‌ ಕಾರ್ಡ್‌

ಈ ಕಾರ್ಡ್‌ ಪ್ರತಿ ಖರೀದಿಯ ಮೇಲೆ ವಿಶಿಷ್ಟ ರಿಯಾಯಿತಿಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ. ಕಾರ್ಡ್ ಹೊಂದಿರುವವರು ಆಯ್ದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಾಂಜ್‌ಗಳಿಗೆ ಪ್ರತಿ ತ್ರೈಮಾಸಿಕದಲ್ಲಿ ಗರಿಷ್ಠ ಎರಡು ಕಾಂಪ್ಲಿಮೆಂಟರಿ ಭೇಟಿಗಳಿಗೆ ಅರ್ಹರಾಗಿರುತ್ತಾರೆ. ಬಳಕೆದಾರರಿಗೆ ಉಚಿತ ವೈಯಕ್ತಿಕ ಅಪಘಾತ ವಿಮೆ ಮತ್ತು ವಿಮಾನ ಅಪಘಾತ ರಕ್ಷಣೆಯನ್ನು ಸಹ ಒದಗಿಸಲಾಗುತ್ತದೆ.

ಎಸ್‌ಬಿಐ ಇಂಟರ್‌ನ್ಯಾಷನಲ್‌ ಡೆಬಿಟ್‌ ಕಾರ್ಡ್‌

ಎಸ್‌ಬಿಐಯ ಗ್ಲೋಬಲ್ ಇಂಟರ್‌ನ್ಯಾಷನಲ್‌ ಕಾಂಟ್ಯಾಕ್ಟ್‌ಲೆಸ್‌ ಡೆಬಿಟ್ ಕಾರ್ಡ್ ವಿಶ್ವದ ಯಾವುದೇ ಭಾಗದಿಂದ ಹಣವನ್ನು ಹಿಂಪಡೆಯಲು ನಿಮಗೆ ಅವಕಾಶ ನೀಡುತ್ತದೆ. ಈ ಡೆಬಿಟ್ ಕಾರ್ಡ್ ಅನ್ನು ವಸ್ತುಗಳನ್ನು ಖರೀದಿಸಲು ಮತ್ತು ಎಸ್‌ಬಿಐ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲು ಬಳಸಬಹುದು. ಗ್ರಾಹಕರು ಆಹಾರ ಸೇವನೆ, ಶಾಪಿಂಗ್, ಪೆಟ್ರೋಲ್ ಖರೀದಿ, ಆನ್‌ಲೈನ್‌ ಪಾವತಿಗಳು ಅಥವಾ ಪ್ರಯಾಣದ ಬುಕ್ಕಿಂಗ್‌ಗಾಗಿ ಖರ್ಚು ಮಾಡಿದ ಪ್ರತಿ 200 ರೂ.ಗೆ ಎರಡು ಎಸ್‌ಬಿಐ ರಿವಾರ್ಡ್ ಪಾಯಿಂಟ್‌ ಪಡೆಯುತ್ತಾರೆ. ಅಲ್ಲದೆ ಜನ್ಮದಿನದಂದು ಖರೀದಿಸಿದರೆ ಬಹುಮಾನಗಳು ದ್ವಿಗುಣಗೊಳ್ಳುತ್ತವೆ. ಈ ಡೆಬಿಟ್ ಅನ್ನು ಭಾರತದಲ್ಲಿ 52 ಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆ ಮತ್ತು ವಿಶ್ವಾದ್ಯಂತ 30 ದಶಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆಗಳಲ್ಲಿ ಬಳಸಬಹುದು.

ಇಂಡಸ್‌ಲ್ಯಾಂಡ್‌ ವರ್ಲ್ಡ್‌ ಎಕ್ಸ್‌ಕ್ಯೂಸಿವ್‌ ಡೆಬಿಟ್‌ ಕಾರ್ಡ್‌

ಕಾರ್ಡ್ ಹೊಂದಿರುವವರು ಆಯ್ದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಾಂಜ್‌ಗಳಿಗೆ ಪ್ರತಿ ತ್ರೈಮಾಸಿಕದಲ್ಲಿ ಗರಿಷ್ಠ ಎರಡು ಕಾಂಪ್ಲಿಮೆಂಟರಿ ಭೇಟಿಗಳಿಗೆ ಅರ್ಹರಾಗಿರುತ್ತಾರೆ. ಜತೆಗೆ ಬುಕ್‌ಮೈ ಶೋ ಅಪ್ಲಿಕೇಷನ್‌ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಸಿನಿಮಾ ಟಿಕೆಟ್‌ ಖರೀದಿಗೆ ಕೊಡುಗೆ ನೀಡುತ್ತದೆ. ಈ ಡೆಬಿಟ್ ಕಾರ್ಡ್ ಯಾವುದೇ ಕ್ರಾಸ್-ಕಂಟ್ರಿ ಮಾರ್ಕ್ಅಪ್ ಶುಲ್ಕವನ್ನು ವಿಧಿಸುವುದಿಲ್ಲ.

ಕೆನರಾ ಬ್ಯಾಂಕ್‌ ಪ್ಲಾಟಿನಂ ಡೆಬಿಟ್‌ ಕಾರ್ಡ್‌

ಕಾರ್ಡ್ ಹೊಂದಿರುವವರು ಆಯ್ದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಾಂಜ್‌ಗಳಿಗೆ ಪ್ರತಿ ತ್ರೈಮಾಸಿಕದಲ್ಲಿ ಗರಿಷ್ಠ ಎರಡು ಕಾಂಪ್ಲಿಮೆಂಟರಿ ಭೇಟಿಗಳಿಗೆ ಅರ್ಹರಾಗಿರುತ್ತಾರೆ. ಇದು 8 ಲಕ್ಷ ರೂ.ಗಳ ವಿಮಾನ ಅಪಘಾತ ವಿಮೆ ಮತ್ತು ಲಗೇಜ್ ವಿಮೆಯನ್ನು ಸಹ ಒದಗಿಸುತ್ತದೆ. ವ್ಯಾಪಾರಿ ಮಳಿಗೆಗಳ ಪಾಯಿಂಟ್-ಆಫ್-ಸೇಲ್ (ಪಿಒಎಸ್) ವಹಿವಾಟಿನ ಮಿತಿ 5 ಲಕ್ಷ ರೂ., ಪ್ರತಿದಿನ 1 ಲಕ್ಷ ರೂ. ವಿತ್‌ಡ್ರಾ ಮಾಡಬಹುದು.

ಇದನ್ನೂ ಓದಿ: Money Guide: ಫೊರೆಕ್ಸ್‌ ಕಾರ್ಡ್‌ V/S ಕ್ರೆಡಿಟ್‌ ಕಾರ್ಡ್‌: ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ?

Continue Reading

ವಾಣಿಜ್ಯ

New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಸೇವೆಗಳಲ್ಲಿ ಪರಿಷ್ಕರಣೆ, ಯೂನಿಯನ್ ಬಜೆಟ್‌ನ ಘೋಷಣೆ ಮತ್ತು ಆದಾಯ ತೆರಿಗೆ ರಿಟರ್ನ್ಸ್, ಡಿಜಿಟಲ್ ವ್ಯಾಲೆಟ್‌ಗಳಿಗೆ ಸಂಬಂಧಿಸಿ ಹೊಸ ನಿಯಮಗಳು (New Rules) ಜಾರಿ ಸೇರಿ ಈ ತಿಂಗಳಲ್ಲಿ ಹಲವು ಪ್ರಮುಖ ಬದಲಾವಣೆಗಳು ಆಗಲಿವೆ.

VISTARANEWS.COM


on

By

New Rules
Koo

ಜುಲೈ ತಿಂಗಳಿಗೆ ಹೆಜ್ಜೆ ಇಟ್ಟಿದ್ದೇವೆ. ಈ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ (credit card) ಬಳಕೆದಾರರು, ತೆರಿಗೆದಾರರು (taxpayers) ಮತ್ತು ಡಿಜಿಟಲ್ ವ್ಯಾಲೆಟ್ (digital wallet) ಹೊಂದಿರುವವರು ಗಮನಿಸಬೇಕಾದ ಪ್ರಮುಖ ವಿಷಯಗಳಿವೆ. 2024ರ ಜುಲೈನಲ್ಲಿ ಹಲವು ಪ್ರಮುಖ (New Rules) ಬದಲಾವಣೆಗಳು ಆಗಲಿವೆ.

ಐಸಿಐಸಿಐ ಬ್ಯಾಂಕ್ (ICICI bank) ಮತ್ತು ಎಸ್‌ಬಿಐ (SBI) ಮೂಲಕ ಕ್ರೆಡಿಟ್ ಕಾರ್ಡ್ ಸೇವೆಗಳಲ್ಲಿ ಪರಿಷ್ಕರಣೆ, ಯೂನಿಯನ್ ಬಜೆಟ್‌ನ ಘೋಷಣೆ ಮತ್ತು ಆದಾಯ ತೆರಿಗೆ ರಿಟರ್ನ್ಸ್, ಡಿಜಿಟಲ್ ವ್ಯಾಲೆಟ್‌ಗಳಿಗೆ ಹೊಸ ನಿಯಮಗಳು ಸೇರಿವೆ.

ಯಾವುದೆಲ್ಲ ಪ್ರಮುಖ ಬದಲಾವಣೆ ?

ಆದಾಯ ತೆರಿಗೆ

2024-25ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (ITR) ಅನ್ನು 2024ರ ಜುಲೈ 31ರೊಳಗೆ ಸಲ್ಲಿಸಬೇಕು. ಸುಗಮ ಮತ್ತು ಸಮಯೋಚಿತ ಸಲ್ಲಿಕೆಯನ್ನು ಖಚಿತಪಡಿಸಿಕೊಳ್ಳಲು ತೆರಿಗೆದಾರರು ಫೈಲಿಂಗ್ ಪ್ರಕ್ರಿಯೆಯನ್ನು ಮೊದಲೇ ಪ್ರಾರಂಭಿಸುವುದು ಸೂಕ್ತ.

ಕ್ರೆಡಿಟ್ ಕಾರ್ಡ್

ಐಸಿಐಸಿಐ ಬ್ಯಾಂಕ್ ಚಾರ್ಜ್ ಸ್ಲಿಪ್ ವಿನಂತಿ, ಚೆಕ್/ನಗದು ಪಿಕ್ ಅಪ್, ಡಯಲ್-ಎ-ಡ್ರಾಫ್ಟ್ ವಹಿವಾಟು, ಔಟ್‌ಸ್ಟೇಷನ್ ಚೆಕ್ ಪ್ರಕ್ರಿಯೆ ಮತ್ತು ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳಂತಹ ವಿವಿಧ ಸೇವೆಗಳಿಗೆ ಶುಲ್ಕವನ್ನು ನಿಲ್ಲಿಸಲಿದ್ದು, ಕಾರ್ಡ್ ಬದಲಾವಣೆಗೆ 200 ರೂ. ಶುಲ್ಕ ಜಾರಿ ಮಾಡಿದೆ.

ಎಸ್‌ಬಿಐ ಕಾರ್ಡ್‌ಗಳು ಜುಲೈ 15ರಿಂದ ಅನೇಕ ಕಾರ್ಡ್‌ಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುವುದನ್ನು ನಿಲ್ಲಿಸುತ್ತವೆ.

ಆಕ್ಸಿಸ್ ಬ್ಯಾಂಕ್‌ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಜುಲೈ 15ರೊಳಗೆ ನಿಲ್ಲಿಸಲಿದೆ. ಹೊಸ ಕಾರ್ಡ್ ಹೆಸರು ಮತ್ತು ರಿವಾರ್ಡ್ ಪಾಯಿಂಟ್‌ಗಳೊಂದಿಗೆ ಬರಲಿದೆ.

ಆರ್‌ಬಿಐ ಎಲ್ಲಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಜುಲೈ 1ರಿಂದ ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಮೂಲಕ ಪ್ರಕ್ರಿಯೆಗೊಳಿಸಬೇಕೆಂದು ಆದೇಶಿಸಿದೆ. ಇದು ಹಲವಾರು ಪ್ರಮುಖ ಬ್ಯಾಂಕ್‌ಗಳು ಮತ್ತು ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಪರಿಣಾಮ ಬೀರಲಿದೆ.

ಯೆಸ್ ಬ್ಯಾಂಕ್ ತನ್ನ ಲಾಂಜ್ ಪ್ರವೇಶ ನಿಯಮಗಳನ್ನು ಪರಿಷ್ಕರಿಸಿದೆ. ಪೂರಕ ಪ್ರವೇಶಕ್ಕಾಗಿ ಪ್ರತಿ ತ್ರೈಮಾಸಿಕಕ್ಕೆ ಕನಿಷ್ಠ 35,000 ರೂ. ಖರ್ಚು ಮಾಡಬೇಕಾಗುತ್ತದೆ.

2024ರ ಬಜೆಟ್ ಪರಿಣಾಮ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ತಿಂಗಳು ಕೇಂದ್ರ ಬಜೆಟ್ 2024 ಅನ್ನು ಪ್ರಕಟಿಸಲಿದ್ದಾರೆ. ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಆದಾಯ ತೆರಿಗೆಗಳಲ್ಲಿ ಹೊಂದಾಣಿಕೆ, ವೈದ್ಯಕೀಯ ವೆಚ್ಚ ಕಡಿತ, ಹೆಚ್ಚುವರಿ ತೆರಿಗೆ ರಿಯಾಯಿತಿ ಮತ್ತು ಪಿಂಚಣಿ ಪ್ರಯೋಜನಗಳನ್ನು ಇದು ಒಳಗೊಂಡಿರುವ ಸಾಧ್ಯತೆ ಇದೆ.

ಪೇಟಿಎಂ ವ್ಯಾಲೆಟ್‌ಗಳು

ಶೂನ್ಯ ಬ್ಯಾಲೆನ್ಸ್ ಹೊಂದಿರುವ, ಕಳೆದ ವರ್ಷ ಅಥವಾ ಹೆಚ್ಚಿನ ಅವಧಿಗೆ ಯಾವುದೇ ವಹಿವಾಟುಗಳಿಲ್ಲದ ಪೇಟಿಎಂ ನಿಷ್ಕ್ರಿಯ ವ್ಯಾಲೆಟ್‌ಗಳನ್ನು ಮುಚ್ಚಲಿದೆ. ಈ ಪ್ರಕ್ರಿಯೆ 2024ರ ಜುಲೈ 20ರಿಂದ ಪ್ರಾರಂಭವಾಗುತ್ತದೆ. ವ್ಯಾಲೆಟ್ ಮುಚ್ಚುವ ಮೊದಲು ಬಳಕೆದಾರರಿಗೆ ಸೂಚನೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Money Guide: ಸಾಲಕ್ಕೆ ಅಪ್ಲೈ ಮಾಡುವ ಮುನ್ನ ಈ ಅಂಶ ನಿಮಗೆ ತಿಳಿದಿರಲೇ ಬೇಕು

ಡೆಬಿಟ್ ಕಾರ್ಡ್

ಪಂಜಾಬ್ ನ್ಯಾಷನಲ್ ಬ್ಯಾಂಕ್ 2024ರ ಜುಲೈ 1ರಿಂದ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡುದಾರರಿಗೆ ಪಿಎನ್‌ಬಿ ತನ್ನ ಲಾಂಜ್‌ ಪ್ರವೇಶ ಪ್ರೋಗ್ರಾಂ ಅನ್ನು ನವೀಕರಿಸಿದೆ. ಇದರಲ್ಲಿ ಹೊಸ ನಿಯಮಗಳು ಅನ್ವಯವಾಗಲಿದೆ. ಪ್ರತಿ ತ್ರೈಮಾಸಿಕಕ್ಕೆ ದೇಶೀಯ ವಿಮಾನ ನಿಲ್ದಾಣ ಅಥವಾ ರೈಲ್ವೇ ಲಾಂಜ್ ಪ್ರವೇಶ ವರ್ಷಕ್ಕೆ ಅನುಮತಿ ನೀಡುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೋಣೆ ಪ್ರವೇಶ, ವಿಮಾನ ನಿಲ್ದಾಣದ ಲಾಂಜ್ ಪ್ರವೇಶಕ್ಕಾಗಿ 2 ರೂ. ಅಧಿಕೃತ ಶುಲ್ಕ ವಿಧಿಸಲಾಗುತ್ತದೆ.

Continue Reading

ಮನಿ-ಗೈಡ್

Money Guide: ಕಡಿಮೆ ಸಂಬಳ ಇದ್ದರೂ ಚಿಂತೆ ಬೇಡ; ಉಳಿತಾಯಕ್ಕಾಗಿ ಈ ಟಿಪ್ಸ್‌ ಫಾಲೋ ಮಾಡಿ

Money Guide: ಸಂಬಳ ಕೈಗೆ ಸಿಗಲು ಆರಂಭಿಸಿದ ದಿನದಿಂದ ಕಡ್ಡಾಯವಾಗಿ ಒಂದಷ್ಟು ಮೊತ್ತ ಉಳಿತಾಯ ಮಾಡಿ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಕೈಗೆ ಸಿಗುವುದೇ ಇಷ್ಟು ಸಣ್ಣ ಮೊತ್ತ. ಇದರಲ್ಲಿ ಉಳಿತಾಯ ಮಾಡುವುದಾದರೂ ಹೇಗೆ? ಎನ್ನುವುದು ಬಹುತೇಕರ ಪ್ರಶ್ನೆ. ಅದಕ್ಕೆ ಇಲ್ಲಿದೆ ಉತ್ತರ. ಎಷ್ಟೇ ಸಂಬಳ ಬರಲಿ ಅದರಲ್ಲಿ ಒಂದಷ್ಟು ಹಣ ಸೇವಿಂಗ್ಸ್‌ ಮಾಡುವುದು ಹೇಗೆ ಎನ್ನುವ ಟಿಪ್ಸ್‌ ಇಂದಿನ ಮನಿಗೈಡ್‌ನಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ದಿನ ಕಳೆದ ಹಾಗೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಎಷ್ಟು ದುಡಿದರೂ ಕಡಿಮೆಯೇ ಎನ್ನುವಂತಾಗಿದೆ. ಅದರಲ್ಲಿಯೂ ಈಗಷ್ಟೇ ಉದ್ಯೋಗಕ್ಕೆ ಸೇರಿದವರಿಗೆ ಇನ್ನಷ್ಟು ಚಿಂತೆ. ತಮ್ಮ ಖರ್ಚು ನೋಡಬೇಕು, ಮನೆಯವರಿಗೂ ಹಣ ಕಳುಹಿಸಬೇಕು, ಲೋನ್‌ ಇದ್ದರೆ ಅದನ್ನೂ ತುಂಬಬೇಕು. ಇಷ್ಟರ ನಡುವೆ ಉಳಿತಾಯ ಎನ್ನುವುದು ಕನಸಿನ ಮಾತು ಎಂದುಕೊಳ್ಳುತ್ತಾರೆ. ಆದರೆ ನೆನಪಿಡಿ ಸಂಬಳ ಎಷ್ಟೇ ಬರಲಿ ಅದರಲ್ಲಿ ಪ್ರತಿ ತಿಂಗಳು ಒಂದಷ್ಟು ಹಣವನ್ನು ಉಳಿತಾಯ ಮಾಡಲೇ ಬೇಕು. ಯಾವಾಗ, ಯಾವ ರೀತಿಯಲ್ಲಿ ಅಪಾಯ ಎದುರಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಸಂಬಳ ಕೈಗೆ ಸಿಗಲು ಆರಂಭಿಸಿದ ದಿನದಿಂದ ಕಡ್ಡಾಯವಾಗಿ ಒಂದಷ್ಟು ಮೊತ್ತ ಉಳಿತಾಯ ಮಾಡಿ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಕೈಗೆ ಸಿಗುವುದೇ ಇಷ್ಟು ಸಣ್ಣ ಮೊತ್ತ. ಇದರಲ್ಲಿ ಉಳಿತಾಯ ಮಾಡುವುದಾದರೂ ಹೇಗೆ? ಎನ್ನುವುದು ಬಹುತೇಕರ ಪ್ರಶ್ನೆ. ಅದಕ್ಕೆ ಇಲ್ಲಿದೆ ಉತ್ತರ. ಎಷ್ಟೇ ಸಂಬಳ ಬರಲಿ ಅದರಲ್ಲಿ ಒಂದಷ್ಟು ಹಣ ಸೇವಿಂಗ್ಸ್‌ ಮಾಡುವುದು ಹೇಗೆ ಎನ್ನುವ ಟಿಪ್ಸ್‌ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಬಜೆಟ್‌ ತಯಾರಿಸಿ

ಮೊದಲಿಗೆ ಬಜೆಟ್‌ ತಯಾರಿಸಿಕೊಳ್ಳಿ. ಕೈಗೆ ಎಷ್ಟು ಸಂಬಳ ಬರುತ್ತದೆ ಎನ್ನುವುದನ್ನು ಗಮನಿಸಿ ಬಜೆಟ್‌ ತಯಾರಿಸಿ. ತಿಂಗಳ ಆರಂಭದಲ್ಲೇ ಸಂಬಳದ ಮೊತ್ತವನ್ನು ಪ್ರತಿ ಖರ್ಚಿಗೆ ಇಷ್ಟೆಂದು ನಿರ್ಧರಿಸಿ. ಇದರಿಂದ ಅನಗತ್ಯ ಖರ್ಚನ್ನು ತಪ್ಪಿಸಬಹುದು. ಇದೇ ಕಾರಣಕ್ಕೆ ರಾಜ್ಯ, ಕೇಂದ್ರ ಸರ್ಕಾರಗಳು ಬಜೆಟ್‌ಗೆ ಒತ್ತು ನೀಡುತ್ತವೆ.

ಎಮರ್ಜೆನ್ಸಿ ಫಂಡ್‌

ಜೀವನ ಎನ್ನುವುದು ಅನಿರೀಕ್ಷಿತಗಳ ಆಗರ. ಇಲ್ಲಿ ಯಾವಾಗ, ಏನು ಸಂಭವಿಸುತ್ತದೆ ಎನ್ನುವುದನ್ನು ಮೊದಲೇ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಎಮರ್ಜೆನ್ಸಿ ಫಂಡ್‌ ಹೊಂದಿರುವುದು ಅತ್ಯಗತ್ಯ. ಅಂದರೆ 4-5 ತಿಂಗಳ ಸಂಬಳದಷ್ಟು ಹಣ ನಮ್ಮ ಸೇವಿಂಗ್ ಅಕೌಂಟ್‌ನಲ್ಲಿ ಯಾವತ್ತೂ ಇರಬೇಕು. ಅನಿರೀಕ್ಷಿತ ಅಗತ್ಯಗಳಿಗೆ ಇದು ನೆರವಾಗುತ್ತದೆ. ತಕ್ಷಣ ದುಡ್ಡು ಕೈಗೆ ಬರುವಂತಿರಬೇಕು. ಇದರಿಂದ ಕಷ್ಟ ಕಾಲದಲ್ಲಿ ಸಾಲಕ್ಕಾಗಿ ಇತರರ ಮುಂದೆ ಕೈ ಚಾಚುವುದು ತಪ್ಪುತ್ತದೆ.

ಸಾಧ್ಯವಿರುವಲ್ಲೆಲ್ಲ ಖರ್ಚು ಕಡಿಮೆ ಮಾಡಿ

ನಿಮ್ಮ ಸಂಬಳವನ್ನು ಉಳಿಸಲು ಇದೊಂದು ಅತ್ಯುತ್ತಮ ಮಾರ್ಗ. ಸಾಧ್ಯವಾದಷ್ಟು ಮನೆಯಲ್ಲೇ ಆಹಾರ ತಯಾರಿಸಿ. ಪ್ರತಿ ದಿನ ಹೋಟೆಲ್‌ ಆಹಾರ ಸೇವಿಸುವುದರಿಂದ ಖರ್ಚು ಅಧಿಕ. ಮಾತ್ರವಲ್ಲ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಆದಷ್ಟು ಕರೆಂಟ್‌ ಉಳಿತಾಯ ಮಾಡಿ. ಅನಗತ್ಯ ಬಳಕೆ ತಪ್ಪಿಸಿ. ಮನೆ ಸಮೀಪದಲ್ಲೇ ಆಫೀಸ್‌ ಇದ್ದರೆ ಆದಷ್ಟು ನಡೆದುಕೊಂಡೇ ಹೋಗಿ. ಇದರಿಂದ ವಾಕಿಂಗ್‌ ಮಾಡಿದಂತೂ ಆಗುತ್ತದೆ. ಇನ್ನು ಅಗತ್ಯ ವಸ್ತುಗಳನ್ನು ಆನ್‌ಲೈನ್‌ / ಆಫ್‌ಲೈನ್‌ನಲ್ಲಿ ಆಫರ್‌ ಇದ್ದಾಗ ಕಂಡುಕೊಳ್ಳಿ.

ವಿಮೆ ಮಾಡಿಸಿ

ಜೀವ ವಿಮೆ ಮತ್ತು ಆರೋಗ್ಯ ವಿಮೆ ಮಾಡಿಸಿಲ್ಲ ಎಂದಾದರೆ ಮೊದಲು ಇದನ್ನು ಮಾಡಿಸಿ. ಇದು ಅನಿವಾರ್ಯವೂ ಹೌದು. ಆರೋಗ್ಯ ವಿಮೆ ಕಠಿಣ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಈ ವಿಮೆ ವ್ಯಾಪ್ತಿಗೆ ಒಳಪಡುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಜತೆಗೆ ಜೀವ ವಿಮೆಯೂ ಪ್ರಮುಖವಾದುದು. ನಿಮ್ಮ ಜೀವ ವಿಮಾ ರಕ್ಷಣೆಯು ವಾರ್ಷಿಕ ಮನೆಯ ವೆಚ್ಚಗಳ ಮೂರು ಪಟ್ಟು ಇರುವಂತೆ ನೋಡಿಕೊಳ್ಳಿ. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಅಕೌಂಟ್‌ನಲ್ಲಿರುವ ಹಣವನ್ನು ಹಾಗೇ ಉಳಿಸಬಹುದು.

ಕಂಡದ್ದೆಲ್ಲ ಕೊಂಡು ಗುಡ್ಡೆ ಹಾಕಬೇಡಿ

ಶಾಪಿಂಗ್‌ ಹೋದಾಗ ಅಥವಾ ಆನ್‌ಲೈನ್‌ನಲ್ಲಿ ಆಕರ್ಷಕವಾಗಿ ಕಂಡದ್ದನ್ನೆಲ್ಲ ಕೊಂಡುಕೊಳ್ಳುವ ಅಭ್ಯಾಸ ಕೆಲವರಿಗಿರುತ್ತದೆ. ಅದರ ಉಪಯೋಗವೇನು, ತಾವೆಷ್ಟು ಅದನ್ನು ಬಳಸುತ್ತೇವೆ ಎನ್ನುವ ಬಗ್ಗೆ ಯೋಚನೆಯನ್ನೂ ಮಾಡದೆ ಖರೀದಿಸಿ ಗುಡ್ಡೆ ಹಾಕುತ್ತಾರೆ. ಈ ಅಭ್ಯಾಸವನ್ನು ನಿಲ್ಲಿಸಿ. ಯಾವುದೇ ವಸ್ತು ಕಂಡುಕೊಳ್ಳಬೇಕಾದರೆ ನಿಜವಾಗಿಯೂ ಅಗತ್ಯ ಉಂಟಾ ಎನ್ನುವುದನ್ನು ಹಲವು ಬಾರಿ ಯೋಚಿಸಿ.

ಹೂಡಿಕೆ ಮಾಡಿ

ಇಂದಿನ ಉಳಿತಾಯವೇ ನಾಳೆಯ ಆದಾಯ. ಹೀಗಾಗಿ ನಿಮ್ಮ ಆದಾಯದ 10% ಅನ್ನು ಹೂಡಿಕೆ ಮಾಡಿ. ಆದರೆ ಎಲ್ಲವನ್ನೂ ಒಂದೇ ಕಡೆ ಹೂಡಿಕೆ ಮಾಡಬೇಡಿ. ಇದಕ್ಕಾಗಿ ಈಕ್ವಿಟಿ, ಚಿನ್ನ, ಮ್ಯೂಚುವಲ್‌ ಫಂಡ್‌ನಂತಹ ವೈವಿಧ್ಯಮಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಿ. ಮ್ಯೂಚುವಲ್‌ ಫಂಡ್‌ ಎಂದರೆ ಸಾಮೂಹಿಕ ಹೂಡಿಕೆಯ ಸಾಧನ. ಹಲವಾರು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಅದನ್ನು ವೃತ್ತಿಪರ ಫಂಡ್ ಮ್ಯಾನೇಜರ್‌ಗಳ ನೆರವಿನಿಂದ ಈಕ್ವಿಟಿ, ಬಾಂಡ್‌, ಸರ್ಕಾರಿ ಸೆಕ್ಯುರಿಟೀಸ್‌, ಮನಿ ಮಾರ್ಕೆಟ್‌ ಸಾಧನಗಳಲ್ಲಿ ಹೂಡಿಕೆ ಮಾಡುವುದು.‌ ಪ್ರತಿ ಮ್ಯೂಚುವಲ್‌ ಫಂಡ್‌ ಯೋಜನೆಗೂ ಅದರದ್ದೇ ಆದ ಉದ್ದೇಶ ಇರುತ್ತದೆ. ಸ್ಟಾಕ್‌ ಮಾರ್ಕೆಟ್‌ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದವರು ಹಾಗೂ ತಿಳಿಯಲು ಸಮಯದ ಅಭಾವ ಇರುವವರು ಮ್ಯೂಚುವಲ್‌ ಫಂಡ್‌ ಆಯ್ಕೆ ಮಾಡಬಹುದು. ನೆನಪಿಡಿ ಹೂಡಿಕೆಯಲ್ಲಿ ತೊಡಗುವ ಮುನ್ನ ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಇಎಂಐ ತಪ್ಪಿಸಬೇಡಿ

ದಂಡದ ಮೂಲಕ ನಿಮ್ಮ ಒಂದಷ್ಟು ಹಣ ಪೋಲಾಗುವುದನ್ನು ತಡೆಯುವ ಅತ್ಯುತ್ತಮ ಮಾರ್ಗ ಎಂದರೆ ಸರಿಯಾದ ಸಮಯಕ್ಕೆ ಇಎಂಐ ಪಾವತಿಸುವುದು. ಸರಿಯಾಗಿ ಇಎಂಐ ಪಾವತಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಇದರಿಂದ ನಿಮ್ಮ ಹಣ ವ್ಯರ್ಥವಾದಂತಾಗುತ್ತದೆ. ಅಲ್ಲದೆ ವಾಹನದಲ್ಲಿ ಸಂಚರಿಸುವಾಗ ದಾಖಲೆಗಳು ತಪ್ಪದೆ ನಿಮ್ಮ ಬಳಿ ಇರಲಿ. ಹೆಲ್ಮೆಟ್‌, ಸೀಟ್‌ ಬೆಲ್ಟ್‌ ಧರಿಸುವುದು ಮುಂತಾದ ನಿಯಮಗಳನ್ನು ಉಲ್ಲಂಘಿಸಲೇಬೇಡಿ.

ಇದನ್ನೂ ಓದಿ: Money Guide: ಅಸಂಘಟಿತ ವಲಯದ ಕಾರ್ಮಿಕರು ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಪಡೆಯಲು ಹೀಗೆ ಮಾಡಿ

Continue Reading
Advertisement
Aditya L1
ದೇಶ1 min ago

Aditya L1: ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದ ಆದಿತ್ಯ ಎಲ್‌ 1; ಇಸ್ರೋಗೆ ಭಾರಿ ಮುನ್ನಡೆ

David Miller :
ಪ್ರಮುಖ ಸುದ್ದಿ28 mins ago

David Miller : ಸೋಲಿನ ಬೇಸರದಲ್ಲಿ ವಿದಾಯ ಹೇಳಿದರೇ ಮಿಲ್ಲರ್​​; ದಕ್ಷಿಣ ಆಫ್ರಿಕಾ ಆಟಗಾರನ ಪ್ರತಿಕ್ರಿಯೆ ಏನು?

Sudha Murty
ದೇಶ55 mins ago

Sudha Murty: ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ!

Physical Abuse
ಕರ್ನಾಟಕ1 hour ago

Physical Abuse : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

Mahua Moitra
ಪ್ರಮುಖ ಸುದ್ದಿ2 hours ago

Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್‌ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?

Viral Video
Latest2 hours ago

Viral Video: ಲೈವ್‌ ವರದಿ ಮಾಡುತ್ತಿದ್ದಾಗ ಪಾಕ್ ಟಿವಿ ವರದಿಗಾರ್ತಿ ಮೇಲೆ ಗೂಳಿ ದಾಳಿ!

Hemant Nimbalkar
ಪ್ರಮುಖ ಸುದ್ದಿ3 hours ago

Hemant Nimbalkar: ವಾರ್ತಾ ಇಲಾಖೆ ಆಯುಕ್ತರಾಗಿ ಐಪಿಎಸ್​ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮರು ನೇಮಕ

Kolar News
ಕರ್ನಾಟಕ3 hours ago

Kolar News: ಕಾಲೇಜಿನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಯುವಕನ ಬಂಧನ

Tamanna Bhatia
Latest3 hours ago

Tamanna Bhatia: ‘ಜೀ ಕರ್ದಾ’ದಲ್ಲಿ ತಮನ್ನಾ ಭಾಟಿಯಾ ಪೂರ್ತಿ ಟಾಪ್‌ಲೆಸ್‌! ವಿಡಿಯೊ ಇದೆ

bengaluru student Vaishnavi M who won the prestigious award from IIT Bombay
ಬೆಂಗಳೂರು3 hours ago

Bengaluru News: ಬೆಂಗಳೂರಿನ ವಿದ್ಯಾರ್ಥಿನಿಗೆ ಐಐಟಿ ಬಾಂಬೆಯ ಪ್ರತಿಷ್ಠಿತ ಪ್ರಶಸ್ತಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ5 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ1 day ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌