Anna Bhagya: ಕೇಂದ್ರ ಸರ್ಕಾರ ಹೊಲಸು ರಾಜಕೀಯ ಮಾಡಿದೆ: ಅನ್ನ ಭಾಗ್ಯ ಹಣ ಬಿಡುಗಡೆ ಮಾಡಿದ ಸಿದ್ದರಾಮಯ್ಯ ಆಕ್ರೋಶ - Vistara News

ಕರ್ನಾಟಕ

Anna Bhagya: ಕೇಂದ್ರ ಸರ್ಕಾರ ಹೊಲಸು ರಾಜಕೀಯ ಮಾಡಿದೆ: ಅನ್ನ ಭಾಗ್ಯ ಹಣ ಬಿಡುಗಡೆ ಮಾಡಿದ ಸಿದ್ದರಾಮಯ್ಯ ಆಕ್ರೋಶ

ಮನಮೋಹನ್‌ ಸಿಂಗ್‌ ಅವರ ನೇತೃತ್ವದ ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ, ಕೆಲಸದ ಹಕ್ಕು ಕಾಯ್ದೆ, ಆಹಾರದ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆಗಳನ್ನು ಜಾರಿ ಮಾಡಿತು ಎಂದು ಅನ್ನ ಭಾಗ್ಯ (Anna Bhagya) ಚಾಲನೆ ನೀಡಿ ಸಿದ್ದರಾಮಯ್ಯ ಹೇಳಿದರು.

VISTARANEWS.COM


on

Siddaramaiah launched Anna bhagya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಕೇಂದ್ರ ಸರ್ಕಾರ ಹೊಲಸು ರಾಜಕಾರಣ (Dirty Politics) ಮಾಡಿದ್ದರಿಂದಾಗಿ ಈಗ ಅನ್ನ ಭಾಗ್ಯ (Anna Bhagya) ಯೋಜನೆಯಲ್ಲಿ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ 170 ರೂ.ನಂತೆ ನೇರ ನಗದು ವರ್ಗಾವಣೆ ಆರಂಭದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋಲಾರ, ಮೈಸೂರು ಜಿಲ್ಲೆಗಳಿಗೆ ನಗದು ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಾಯಿತು. ಧಾರವಾಡ, ರಾಮನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ ಹಾಗೂ ಯಾದಗಿರಿ ಜಿಲ್ಲೆಗಳಿಗೆ ನೇರ ವರ್ಗಾವಣೆ ಆಗಲಿದೆ. ಹಂತಹಂತವಾಗಿ ಎಲ್ಲ ಜಿಲ್ಲೆಗಳಿಗೆ ಹಣ ವರ್ಗಾವಣೆ ಆಗಲಿದೆ.

ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ನೇತೃತ್ವದ ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ, ಕೆಲಸದ ಹಕ್ಕು ಕಾಯ್ದೆ, ಆಹಾರದ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆಗಳನ್ನು ಜಾರಿ ಮಾಡಿತು. ಅದರ ಆಧಾರದಲ್ಲಿ 1.28 ಕೋಟಿ ಕುಟುಂಬಗಳಿಗೆ ಈಗ ಅನ್ನಭಾಗ್ಯ ಯೋಜನೆ ಜಾರಿ ಮಾಡಲಾಗುತ್ತಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ 4.42 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ಇದರಿಂದ ಸಿಗುತ್ತದೆ.

ಕೋವಿಡ್‌ ನಂತರದಲ್ಲಿ ತಲಾ 3 ರೂ. ಕೆ.ಜಿ.ಯಂತೆ ನೀಡುತ್ತಿದ್ದ ಅಕ್ಕಿಯನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ. ಫ್ರೀಯಾಗಿ ಕೊಟ್ಟವರು ಯಾರು? ಎಂದು ಅನೇಕರು ಕೇಳುತ್ತಿದ್ದರು. ಈ ಹಿಂದೆ ಏಳು ಕೆ.ಜಿ. ಕೊಡುತ್ತಿದ್ದರು, ಈಗ ಐದು ಕೆ.ಜಿ. ಕೊಡುತ್ತಿದ್ದಾರೆ ಎಂದು ಹೇಳುತ್ತಿದ್ದರು. ಏಳು ಕೆ.ಜಿ. ಯಾಕೆ? ಹತ್ತು ಕೆ.ಜಿ. ಕೊಡುತ್ತೇವೆ ಎಂದು ಹೇಳಿದ್ದೆವು. ನಾವೇ ಹತ್ತು ಕೆ.ಜಿ. ಕೊಡುತ್ತೇವೆ ಎಂದು ಹೇಳಿರಲಿಲ್ಲ. ಈಗಾಗಲೆ ಐದು ಕೆ.ಜಿ. ಕೊಡುತ್ತಿದ್ದಾರೆ, ಹೆಚ್ಚುವರಿಯಾಗಿ ಐದು ಕೆ.ಜಿ. ಕೊಡುತ್ತೇವೆ ಎಂದು ತಿಳಿಸಿದ್ದೆವು, ಅದರಂತೆ ನಡೆದುಕೊಂಡಿದ್ದೇವೆ.

ಅಕ್ಕಿ ಕೊಡುತ್ತೇವೆ ಎಂದು ಕೇಂದ್ರ ಸರ್ಕಾರದ ಎಫ್‌ಸಿಐ ಹೇಳಿತ್ತು. ಆದರೆ ನಂತರ ಕೇಂದ್ರ ಸರ್ಕಾರ ಇದನ್ನು ತಡೆಯಿತು. ಇದು ಕೇಂದ್ರ ಸರ್ಕಾರದ Dirty Politics ಅಲ್ಲವೇ? ಇದನ್ನು ರಾಜಕೀಯ ಧ್ವೇಷ ಎಂದು ಕರೆಯಬೇಕ? ಬಡವರ ವಿರೋಧಿ ಕ್ರಮ ಎಂದು ಕರೆಯಬೇಕ? ಏನೆಂದು ಕರೆಯಬೇಕು? ನಮಗೆ ಅಕ್ಕಿ ಕೊಡುವುದಿಲ್ಲ ಎಂದು ಹೇಳಿ ಸಾರ್ವಜನಿಕ ಹರಾಜಿಗೆ ಹೋದರು. ಆದರೆ ಅಲ್ಲಿ ಟೆಂಡರ್‌ನಲ್ಲಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ.

ಅಕ್ಕಿ ಇಟ್ಟುಕೊಂಡು, ನಮಗೆ 34 ರೂ.ಗೆ ಕೊಡಲು ಒಪ್ಪಿದ್ದರು. ನಾವೇನು ಫ್ರೀಯಾಗಿ ಕೇಳಿಲ್ಲ. ಆದರೂ ಕೊಡಲಿಲ್ಲ. ಬಡವರಿಗೆ ದ್ರೋಹ ಮಾಡುವ ರಾಜಕಾರಣ ಇದು. ಅಕ್ಕಿ ಕೊಡುವುದಿಲ್ಲ ಎಂದು ಎಫ್‌ಸಿಐ ಹೇಳಿದ ಮೇಲೆ ಛತ್ತೀಸ್‌ಗಢ, ಪಂಜಾಬ್‌, ತೆಲಂಗಾಣ, ಆಂಧ್ರ ಪ್ರದೇಶದ ಸಿಎಂಗಳ ಜತೆಗೆ ಮಾತನಾಡಿದೆವು. ಆದರೆ 2.29 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಕೊಡುತ್ತೇವೆ ಎಂದು ಯಾರೂ ಹೇಳಲಿಲ್ಲ. ನಂತರದಲ್ಲಿ ತಲಾ 170 ರೂ. ಕೊಡಲು ಅನಿವಾರ್ಯವಾಗಿ ತೀರ್ಮಾನ ಮಾಡಿದ್ದೇವೆ. ಈಗ ಅಕ್ಕಿ ಖರೀದಿಗೆ ಟೆಂಡರ್‌ ಕರೆದಿದ್ದೇವೆ ಎಂದರು.

ಫಲಾನುಭವಿಗಳು ಈ ಹಣ ಬಳಸಿಕೊಂಡು ಅಕ್ಕಿ ಕೊಂಡುಕೊಳ್ಳಿ. ಹೊಟ್ಟೆತುಂಬ ಊಟ ಮಾಡಿ, ನೆಮ್ಮದಿಯಾಗಿರಿ. ನಮ್ಮನ್ನು ಟೀಕೆ ಮಾಡುವವರಿಗೆ ಸೊಪ್ಪು ಹಾಕುವುದಿಲ್ಲ. ನಮ್ಮ ಕರ್ತವ್ಯ ಇದು, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.

ಇದನ್ನೂ ಓದಿ: Anna Bhagya: ಅನ್ನ ಭಾಗ್ಯ ಹಣ ವರ್ಗಾವಣೆಗೆ ಚಾಲನೆ: ಎರಡು ಜಿಲ್ಲೆ ಫಲಾನುಭವಿಗಳ ಖಾತೆಗೆ ತಲಾ 170 ರೂ. ರವಾನೆ

ಇದಕ್ಕೂ ಮೊದಲು ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿ, ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದರಿಂದಾಗಿ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ ಎನ್ನುವುದನ್ನು ಬಿಜೆಪಿ ಸ್ನೇಹಿತರು ಮರೆಯಬಾರದು. ಕೇಂದ್ರ ಸರ್ಕಾರ ಹೃದಯ ವೈಶಾಲ್ಯ ತೋರಿದ್ದರೆ ಈ ಯೋಜನೆಗೆ ಸಹಕಾರ ನೀಡಬಹುದಾಗಿತ್ತು. ಆದರೆ ರಾಜಕೀಯ ಮಾಡುತ್ತಿದ್ದಾರೆ ಎಂದರು.

ಈಗಾಗಲೆ ಕೇಂದ್ರ ಸರ್ಕಾರ ನೀಡುತ್ತಿರುವ ತಲಾ ಐದು ಕೆ.ಜಿ. ಅಕ್ಕಿ ಜತೆಗೆ ಮತ್ತೆ ಐದು ಕೆ.ಜಿ. ಸೇರಿಸಿ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್‌ ಪಕ್ಷ ಚುನಾವಣೆಗೂ ಮುನ್ನ ಭರವಸೆ ನೀಡಿತ್ತು. ಅದರಂತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷ ಮೊದಲ ಸಂಪುಟ ಸಭೆಯಲ್ಲೇ ಎಲ್ಲ ಐದು ಗ್ಯಾರಂಟಿಗಳನ್ನೂ ಈಡೇರಿಸುವುದಾಗಿ ತಿಳಿಸಿತ್ತು.ಆದರೆ ಅನ್ನ ಭಾಗ್ಯ ಯೋಜನೆಗೆ 2.3 ಮೆಟ್ರಿಕ್‌ ಟನ್‌ ಅಕ್ಕಿ ಬೇಕಾಗಿದ್ದರಿಂದ ಕೇಂದ್ರ ಸರ್ಕಾರದ ಅಧೀನದ ಭಾರತೀಯ ಆಹಾರ ನಿಗಮವನ್ನು (ಎಫ್‌ಸಿಐ) ರಾಜ್ಯ ಸರ್ಕಾರ ಸಂಪರ್ಕಿಸಿತ್ತು. ಮೊದಲಿಗೆ ಅಕ್ಕಿಯನ್ನು ತಲಾ 34 ರೂ.ನಂತೆ ನೀಡುವುದಾಗಿ ಎಫ್‌ಸಿಐ ಒಪ್ಪಿತ್ತು. ಆದರೆ ದೇಶದಲ್ಲಿ ಅಕ್ಕಿ ದರ ನಿಯಂತ್ರಿಸುವ ಸಲುವಾಗಿ ರಾಜ್ಯಗಳಿಗೆ ಅಕ್ಕಿ ನೀಡದಂತೆ ಕೇಂದ್ರ ಸರ್ಕಾರ ಎಫ್‌ಸಿಐಗೆ ಪತ್ರ ಬರೆದಿತ್ತು.

ಇದನ್ನೂ ಓದಿ: Congress Guarantee: ಅಕ್ಕಿಗಾಗಿ ಮತ್ತೆ ಕೇಂದ್ರಕ್ಕೆ ಮೊರೆಯಿಟ್ಟ ಕರ್ನಾಟಕ: ಫಲಿತಾಂಶ ಜೀರೊ ಎಂದ ಸಚಿವ ಮುನಿಯಪ್ಪ

ಇದರ ನಂತರ ರಾಜಕೀಯ ಹಗ್ಗಜಗ್ಗಾಟ ನಡೆದಿದೆ. ಕೇಂದ್ರ ಸರ್ಕಾರವು ಕಾಂಗ್ರೆಸ್‌ ಪಕ್ಷದ ಯೋಜನೆಯ ಸಫಲತೆಯನ್ನು ತಡೆಯಲು ಅನಗತ್ಯವಾಗಿ ಅಡ್ಡಿಪಡಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಸೇರಿ ಅನೇಕರು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಯೋಜನೆಯನ್ನು ಜಾರಿ ಮಾಡಲಾಗದೆ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ.

ಇದೆಲ್ಲದರ ನಡುವೆ, ಅಕ್ಕಿ ದೊರೆಯುವವರೆಗೂ ಪ್ರತಿ ಫಲಾನುಭವಿಗೆ ತಲಾ ಕೆ.ಜಿ. ಅಕ್ಕಿಗೆ ತಗಲುತ್ತಿದ್ದ 34 ರೂ.ನಂತೆ 5 ಕೆ.ಜಿ. ಅಕ್ಕಿಗೆ 170 ರೂ.ನಂತೆ ಕುಟುಂಬದ ಮುಖ್ಯಸ್ಥರ ಪಡಿತರ ಚೀಟಿಯೊಂದಿಗೆ ಸಂಪರ್ಕ ಹೊಂದಿರುವ ಖಾತೆಗೆ ಜಮಾ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಮೇನಲ್ಲಿ ನಡೆಯಲಿದೆ ಪ್ಯಾನ್-ಐಐಟಿ ಬೆಂಗಳೂರು ಸಮ್ಮಿಟ್-2026

VISTARANEWS.COM


on

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಪ್ಯಾನ್ ಐಐಟಿ ಅಲ್ಯೂಮ್ನಿ ಇಂಡಿಯಾ ಅಸೋಸಿಯೇಷನ್ ಜಂಟಿಯಾಗಿ ಮೇ 16ರಂದು ನಗರದಲ್ಲಿ “ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026” ಆಯೋಜಿಸಿವೆ.
“ತಂತ್ರಜ್ಞಾನದಲ್ಲಿನ ಸ್ವಾಯತ್ತತೆ” ಎಂಬ ವಿಷಯದಡಿ ಈ ಸಮ್ಮಿಟ್ ನಡೆಯಲಿದೆ ಎಂದು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ, ವಿಶೇಷವಾಗಿ ಬೆಂಗಳೂರು, ಇಂದು ಭಾರತದ ತಂತ್ರಜ್ಞಾನ ಮಹತ್ವಾಕಾಂಕ್ಷೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ದೇಶದ ಪ್ರಮುಖ ಜಿಡಿಪಿ ಕೊಡುಗೆ ನೀಡುವ ನಗರಗಳಲ್ಲಿ ಬೆಂಗಳೂರು ಒಂದಾಗಿದೆ, ವೆಂಚರ್ ಕ್ಯಾಪಿಟಲ್ ಹೂಡಿಕೆಗಳ ಪ್ರಮುಖ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.
ಸ್ಟಾರ್ಟ್‌ಅಪ್‌ಗಳ ನಿಧಿ ಸಂಗ್ರಹ ಹಾಗೂ ನವೀನ ಚಟುವಟಿಕೆಗಳಲ್ಲಿ ಮಹತ್ತರ ಪಾತ್ರವಹಿಸಿದ್ದು, ಸಾವಿರಾರು ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ವಿಶ್ವದ ಅತಿ ದೊಡ್ಡ ಪ್ರತಿಭಾ ಸಂಪನ್ಮೂಲಗಳಲ್ಲಿ ಒಂದನ್ನು ಹೊಂದಿರುವುದರಿಂದ ಬೆಂಗಳೂರು “ಪೂರ್ವದ ಸಿಲಿಕಾನ್ ವ್ಯಾಲಿ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ವಲಯ ಮತ್ತು ತಾಂತ್ರಿಕ ಕಂಪನಿಗಳ ಮೂಲಕ ಏರೋಸ್ಪೇಸ್, ರಕ್ಷಣಾ ಹಾಗೂ ಮೂಲ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕರ್ನಾಟಕ ಬಲವಾದ ನೆಲೆ ನಿರ್ಮಿಸಿತು. ಬಳಿಕ ಇನ್ಫೋಸಿಸ್, ಟಿಸಿಎಸ್, ಎಚ್‌ಸಿಎಲ್ ಮತ್ತು ವಿಪ್ರೋ ಮುಂತಾದ ಐಟಿ ದಿಗ್ಗಜಗಳ ಉದಯದೊಂದಿಗೆ ಭಾರತವನ್ನು ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಅವರು ವಿವರಿಸಿದರು.
ಪ್ರಸ್ತುತ ಭಾರತ ಡೀಪ್ ಟೆಕ್, ಕೃತಕ ಬುದ್ಧಿಮತ್ತೆ ಮತ್ತು ವೈಜ್ಞಾನಿಕ ನವೀನತೆಯ ಹಂತಕ್ಕೆ ಸಾಗುತ್ತಿದೆ. ಈ ಹಂತದಲ್ಲಿ ಅಕಾಡೆಮಿಯಾ, ಕೈಗಾರಿಕೆ ಮತ್ತು ಸರ್ಕಾರಗಳ ನಡುವಿನ ಗಟ್ಟಿಯಾದ ಸಹಕಾರ ಅತ್ಯಾವಶ್ಯ. ತಂತ್ರಜ್ಞಾನ ಸ್ವಾಯತ್ತತೆ ಸಾಧಿಸಲು ಇದು ಪ್ರಮುಖ ಹಂತವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ರೂಪುಗೊಂಡಿದೆ ಎಂದು ತಿಳಿಸಿದರು.
ಪ್ಯಾನ್ ಐಐಟಿ ಅಧ್ಯಕ್ಷರಾದ ಶ್ರೀ ಪ್ರಭಾತ್ ಕುಮಾರ್ (ಐ.ಆರ್.ಎಸ್) ಅವರು ಮಾತನಾಡಿ, ಸಮ್ಮಿಟ್‌ನಲ್ಲಿ ಉನ್ನತ ಮಟ್ಟದ ಪ್ಲೀನರಿ ಸೆಷನ್‌ಗಳು, ಆಳವಾದ ಪ್ಯಾನೆಲ್ ಚರ್ಚೆಗಳು ಹಾಗೂ ಎಐ, ರಕ್ಷಣಾ, ಸೆಮಿಕಂಡಕ್ಟರ್, ಇಂಧನ, ಮೊಬೈಲಿಟಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಮಾಂತರ ಚರ್ಚೆಗಳು ನಡೆಯಲಿವೆ ಎಂದರು.
23 ಐಐಟಿಗಳ 5 ಲಕ್ಷಕ್ಕೂ ಹೆಚ್ಚು ಅಲ್ಯೂಮ್ನಿಗಳ ಸಂಯುಕ್ತ ಚಿಂತನೆಯ ಫಲವಾಗಿರುವ ಈ ಸಮ್ಮಿಟ್, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ, ವ್ಯವಹಾರ ಮತ್ತು ನೀತಿ ರೂಪಣೆಯಲ್ಲಿ ಸಕ್ರಿಯ ಸಮುದಾಯವನ್ನು ಒಂದೇ ವೇದಿಕೆಗೆ ತರಲಿದೆ. ನವೀನತೆ, ಉದ್ಯಮಶೀಲತೆ ಮತ್ತು ರಾಷ್ಟ್ರ ನಿರ್ಮಾಣದ ಮುಂದಿನ ಹಂತವನ್ನು ಉತ್ತೇಜಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.

Continue Reading

ಕರ್ನಾಟಕ

ಡಿಕೆಶಿ ಪದೇ ಪದೇ ದೆಹಲಿಗೆ ಹೋಗುತ್ತಿರುವುದೇಕೆ? ಸತೀಶ್ ಜಾರಕಿಹೊಳಿ ನೀಡಿದ ಆ ಗೊಂದಲದ ಹೇಳಿಕೆಯಲ್ಲಿದೆಯೇ ದೊಡ್ಡ ಸುಳಿವು

VISTARANEWS.COM


on

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ಚರ್ಚೆಗಳು ಈಗ ಹೊಸ ತಿರುವು ಪಡೆದಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸತತವಾಗಿ ದೆಹಲಿಗೆ ಪ್ರವಾಸ ಕೈಗೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. “ಹೈಕಮಾಂಡ್ ಏನು ತೀರ್ಮಾನ ಮಾಡಿದೆಯೋ, ಅದು ಸಮಯ ಬಂದಾಗ ಜಾರಿಗೆ ಬರಲಿದೆ” ಎಂದು ಡಿಕೆಶಿ ನೀಡಿರುವ ಮಾರ್ಮಿಕ ಹೇಳಿಕೆಯು, ಅಧಿಕಾರ ಹಸ್ತಾಂತರದ ಪ್ರಕ್ರಿಯೆ ಚುರುಕಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಅವರು ನಡೆಸಿದ ಸುದೀರ್ಘ ಮಾತುಕತೆ ಈ ಗುಮಾನಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಇನ್ನೊಂದೆಡೆ, ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷದೊಳಗೆ ‘ಗೊಂದಲ’ ಇರುವುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. “ನಾಯಕತ್ವ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ” ಎಂದು ಅವರು ಹೇಳಿದ್ದರೂ, ಪಕ್ಷದ ಒಳಗಿನ ಆಂತರಿಕ ಅಸಮಾಧಾನ ಮತ್ತು ಗೊಂದಲಗಳ ಬಗ್ಗೆ ಅವರು ನೀಡಿರುವ ಸುಳಿವು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಮುನ್ಸೂಚನೆಯಂತೆ ಕಾಣುತ್ತಿದೆ. ಸಿದ್ದರಾಮಯ್ಯ ಬಣ ಮತ್ತು ಡಿಕೆಶಿ ಬಣದ ನಡುವಿನ ಈ ಹಗ್ಗಜಗ್ಗಾಟ ಈಗ ಕ್ಲೈಮಾಕ್ಸ್ ಹಂತಕ್ಕೆ ತಲುಪಿದಂತೆ ಭಾಸವಾಗುತ್ತಿದೆ.

ಮೇ 4 ರಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಆ ನಂತರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಡಿಕೆಶಿ ಬಣವು ಹಳೆಯ ವಾಗ್ದಾನಗಳನ್ನು ಈಡೇರಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದರೆ, ಸಿದ್ದರಾಮಯ್ಯ ಬಣವು ತನ್ನದೇ ಆದ ರಕ್ಷಣಾತ್ಮಕ ತಂತ್ರಗಳನ್ನು ಹೆಣೆಯುತ್ತಿದೆ. ಒಟ್ಟಿನಲ್ಲಿ, ಮೇ 15 ರ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಸುಮಾರಿಗೆ ಕಾಂಗ್ರೆಸ್ ಪಾಳಯದಲ್ಲಿ ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದ್ದು, ಅಲ್ಲಿಯವರೆಗೆ ಈ ಕುತೂಹಲ ಮುಂದುವರಿಯಲಿದೆ.

Continue Reading

Latest

ಮೇ 15ಕ್ಕೆ ಸಿಗುತ್ತಾ ಗುಡ್​ ನ್ಯೂಸ್?​ ಸಂಭ್ರಮಾಚರಣೆ ಬೇಡವೆಂದು ಬೆಂಬಲಿಗರಿಗೆ ಖಡಕ್​ ಸೂಚನೆ! ಡಿ ಕೆ ಬ್ರದರ್ಸ್‌ ಪ್ಲ್ಯಾನ್‌ಗೆ ಟಕ್ಕರ್‌ ಕೊಡ್ತಾರಾ ಸಿಎಂ

VISTARANEWS.COM


on

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮರಳಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಾಯಕತ್ವದ ಕುರಿತಾದ ಪ್ರಶ್ನೆಗಳಿಗೆ ಬಹಳ ಸಂಯಮದಿಂದ ಉತ್ತರಿಸಿದ್ದಾರೆ. “ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಎಲ್ಲವೂ ಪಕ್ಷದ ಶಿಸ್ತಿನ ಚೌಕಟ್ಟಿನಲ್ಲೇ ನಡೆಯಲಿದೆ” ಎಂದು ಹೇಳುವ ಮೂಲಕ ಸದ್ಯಕ್ಕೆ ಎದ್ದಿರುವ ಊಹಾಪೋಹಗಳಿಗೆ ಸೌಮ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ತಮ್ಮ ಆಪ್ತ ವಲಯದೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ಆಪ್ತರೊಬ್ಬರ ಮನೆಯಲ್ಲಿ ಆಯೋಜಿಸಲಾಗಿದ್ದ ಔತಣಕೂಟದ ನೆಪದಲ್ಲಿ ಸಿಎಂ ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದು, ರಾಜ್ಯದ ಪ್ರಚಲಿತ ರಾಜಕೀಯ ವಿದ್ಯಮಾನಗಳು ಮತ್ತು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ತಮ್ಮ ಬಣದ ನಾಯಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಸಿಎಂ ಈ ಭೇಟಿಯನ್ನು ಬಳಸಿಕೊಂಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಮುಂಬರುವ ಮೇ 15 ರಂದು ಡಿ.ಕೆ. ಶಿವಕುಮಾರ್ ಅವರ ಜನ್ಮದಿನವಿರುವ ಕಾರಣ, ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ಆದರೆ, ನಗರದ ಸೌಂದರ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಡಿಸಿಎಂ ಅವರು ತಮ್ಮ ಬೆಂಬಲಿಗರಿಗೆ ಪ್ರೀತಿಯ ಎಚ್ಚರಿಕೆ ನೀಡಿದ್ದಾರೆ. “ನನ್ನ ಹುಟ್ಟುಹಬ್ಬದಂದು ಯಾವುದೇ ಅನಧಿಕೃತ ಫ್ಲೆಕ್ಸ್ ಅಥವಾ ಬ್ಯಾನರ್‌ಗಳನ್ನು ಹಾಕಬೇಡಿ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ” ಎಂದು ಅವರು ತಿಳಿಸಿದ್ದಾರೆ. ಏಪ್ರಿಲ್ ಅಂತ್ಯದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ನಡೆಯಲಿರುವ ಭೇಟಿಯ ಬಳಿಕ ರಾಜ್ಯ ರಾಜಕಾರಣದ ಮುಂದಿನ ಹಾದಿ ಇನ್ನಷ್ಟು ಸ್ಪಷ್ಟವಾಗುವ ಸಾಧ್ಯತೆಯಿದೆ.

Continue Reading

Latest

ಮುಂದೆ ಕಾದಿದೆ ಘೋರ ವಿಪತ್ತು: ಹವಾಮಾನ ವೈಪರಿತ್ಯ, ಅನ್ನ-ನೀರಿಗೂ ಹಾಹಾಕಾರ! ಕೋಡಿ ಶ್ರೀಗಳ ಭಯಾನಕ ಭವಿಷ್ಯಕ್ಕೆ ನಡುಗಿದ ನಾಡು

VISTARANEWS.COM


on

ತಮ್ಮ ನಿಖರ ಭವಿಷ್ಯವಾಣಿಗಳಿಗೆ ಹೆಸರಾಗಿರುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಇದೀಗ ದೇಶದ ಭವಿಷ್ಯದ ಕುರಿತು ಭಯಾನಕ ಮುನ್ಸೂಚನೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಶ್ರೀಗಳು, ಹವಾಮಾನ ವೈಪರಿತ್ಯದಿಂದ ಪ್ರಕೃತಿಯಲ್ಲಿ ಭಾರಿ ಏರುಪೇರು ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ. ಈ ಹವಾಮಾನ ಬದಲಾವಣೆಯು ದೇಶದ ಹಲವು ಭಾಗಗಳಲ್ಲಿ ಅನ್ನ ಮತ್ತು ನೀರಿಗಾಗಿ ತೀವ್ರ ಹಾಹಾಕಾರ ಸೃಷ್ಟಿಸಲಿದ್ದು, ಅಪಮೃತ್ಯುಗಳ (ಅಕಾಲಿಕ ಮರಣ) ಸಂಖ್ಯೆ ಹೆಚ್ಚಾಗಲಿದೆ ಎಂಬ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.

ಜಾಗತಿಕ ಮಟ್ಟದಲ್ಲಿಯೂ ಭಾರಿ ಅಪಾಯಗಳು ಸಂಭವಿಸುವ ಲಕ್ಷಣಗಳಿವೆ ಎಂದು ಹೇಳಿರುವ ಶ್ರೀಗಳು, 2026ರ ಸಾಲಿನ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ. ಜಗತ್ತಿನಾದ್ಯಂತ ಜಲಪ್ರಳಯ ಹಾಗೂ ಅಗ್ನಿ ಅವಘಡಗಳಿಂದ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ, ಆದರೆ ಅತೃಪ್ತ ಆತ್ಮಗಳಿಗೆ ಸರಿಯಾದ ಸಂಸ್ಕಾರ ನಡೆಯದ ಕಾರಣ ಅವು ಮನುಕುಲಕ್ಕೆ ಕಂಟಕವಾಗಲಿವೆ ಎಂದು ಭೀತಿ ವ್ಯಕ್ತಪಡಿಸಿದ್ದಾರೆ. ಹವಾಮಾನ ವೈಪರಿತ್ಯದ ಈ ಭೀಕರತೆಯ ನಡುವೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.

ಈ ಎಲ್ಲಾ ಆತಂಕಕಾರಿ ಬೆಳವಣಿಗೆಗಳ ನಡುವೆ ಕರ್ನಾಟಕದ ಜನತೆಗೆ ಶ್ರೀಗಳು ಸಮಾಧಾನದ ಸುದ್ದಿಯನ್ನೂ ನೀಡಿದ್ದಾರೆ. ದೇಶದ ಬೇರೆ ಭಾಗಗಳಲ್ಲಿ ಸಮಸ್ಯೆಗಳಿದ್ದರೂ, ಕರ್ನಾಟಕದಲ್ಲಿ ಜನರಿಗೆ ದೈವಾರಾಧನೆ ಮತ್ತು ಭಕ್ತಿಯ ಮೇಲಿನ ಶ್ರದ್ಧೆ ಹೆಚ್ಚಿರುವುದರಿಂದ ನಾಡಿನಲ್ಲಿ ಮಳೆ-ಬೆಳೆ ಸಮೃದ್ಧವಾಗಿರಲಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದ ಜನರಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಪ್ರಜ್ಞೆಯು ನಾಡನ್ನು ಬರಗಾಲದಿಂದ ರಕ್ಷಿಸಲಿದ್ದು, ಸಮೃದ್ಧ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಕೋಡಿ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

Continue Reading
Advertisement
Latest2 hours ago

ಮೇನಲ್ಲಿ ನಡೆಯಲಿದೆ ಪ್ಯಾನ್-ಐಐಟಿ ಬೆಂಗಳೂರು ಸಮ್ಮಿಟ್-2026

ಕರ್ನಾಟಕ3 hours ago

ಡಿಕೆಶಿ ಪದೇ ಪದೇ ದೆಹಲಿಗೆ ಹೋಗುತ್ತಿರುವುದೇಕೆ? ಸತೀಶ್ ಜಾರಕಿಹೊಳಿ ನೀಡಿದ ಆ ಗೊಂದಲದ ಹೇಳಿಕೆಯಲ್ಲಿದೆಯೇ ದೊಡ್ಡ ಸುಳಿವು

Latest3 hours ago

ಇರಾನ್‌ನಿಂದ ಹೊಸ ಶಾಂತಿ ಸಂಧಾನ: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕಕ್ಕೆ ಷರತ್ತುಬದ್ಧ ಪ್ರಸ್ತಾವನೆ ಸಲ್ಲಿಕೆ

Latest4 hours ago

ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾದ RCB! ಹೇಗಿರಲಿದೆ ಹೈವೋಲ್ಟೇಜ್‌ ಮ್ಯಾಚ್‌?

Latest20 hours ago

ಮೇ 15ಕ್ಕೆ ಸಿಗುತ್ತಾ ಗುಡ್​ ನ್ಯೂಸ್?​ ಸಂಭ್ರಮಾಚರಣೆ ಬೇಡವೆಂದು ಬೆಂಬಲಿಗರಿಗೆ ಖಡಕ್​ ಸೂಚನೆ! ಡಿ ಕೆ ಬ್ರದರ್ಸ್‌ ಪ್ಲ್ಯಾನ್‌ಗೆ ಟಕ್ಕರ್‌ ಕೊಡ್ತಾರಾ ಸಿಎಂ

Latest21 hours ago

ಮುಂದೆ ಕಾದಿದೆ ಘೋರ ವಿಪತ್ತು: ಹವಾಮಾನ ವೈಪರಿತ್ಯ, ಅನ್ನ-ನೀರಿಗೂ ಹಾಹಾಕಾರ! ಕೋಡಿ ಶ್ರೀಗಳ ಭಯಾನಕ ಭವಿಷ್ಯಕ್ಕೆ ನಡುಗಿದ ನಾಡು

Latest21 hours ago

ಮುಂದಿನ ಪಂದ್ಯದಿಂದ ‘ಯಂಗ್ ಸೆನ್ಸೇಷನ್’ ಔಟ್? ವೈಭವ್ ಸೂರ್ಯವಂಶಿ ಬಗ್ಗೆ ಕೋಚ್ ಕೊಟ್ಟ ಅಪ್ಡೇಟ್ ಏನು?

Latest22 hours ago

ಅಧ್ಯಕ್ಷ ಹುದ್ದೆ ಇಷ್ಟು ಡೇಂಜರ್ ಅಂತ ಗೊತ್ತಿರಲಿಲ್ಲ!”: ಗುಂಡಿನ ದಾಳಿಯಿಂದ ಬಚಾವಾದ ಬೆನ್ನಲ್ಲೇ ಟ್ರಂಪ್ ವ್ಯಂಗ್ಯ

Latest22 hours ago

ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹೊಸ ಬಲ: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿದ ಶಿಕ್ಷಣ ಇಲಾಖೆ

Latest22 hours ago

‘ಟಾಕ್ಸಿಕ್’ ಬೋಲ್ಡ್ ದೃಶ್ಯದ ವಿವಾದಕ್ಕೆ ರಾಕಿಂಗ್ ಸ್ಟಾರ್ ಖಡಕ್ ರಿಯಾಕ್ಷನ್: ಟೀಕಾಕಾರರಿಗೆ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟ ಯಶ್

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌