Healthy Monsoon Drinks: ಜಿಟಿಜಿಟಿ ಮಳೆಯಲ್ಲಿ ನಿಮ್ಮನ್ನು ಬೆಚ್ಚಗಿಟ್ಟು ರೋಗನಿರೋಧಕತೆ ಹೆಚ್ಚಿಸುವ ಪೇಯಗಳಿವು! - Vistara News

ಆರೋಗ್ಯ

Healthy Monsoon Drinks: ಜಿಟಿಜಿಟಿ ಮಳೆಯಲ್ಲಿ ನಿಮ್ಮನ್ನು ಬೆಚ್ಚಗಿಟ್ಟು ರೋಗನಿರೋಧಕತೆ ಹೆಚ್ಚಿಸುವ ಪೇಯಗಳಿವು!

ಮಳೆಗಾಲದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯನ್ನು (Immunity drinks) ಹೆಚ್ಚು ಮಾಡಿಕೊಳ್ಳುತ್ತಲೇ ಇರಬೇಕು. ಬನ್ನಿ ಯಾವೆಲ್ಲ ಪೇಯಗಳಿಂದ (Healthy monsoon drinks) ನಮ್ಮ ರೋಗ ನಿರೋಧಕತೆ ಹೆಚ್ಚಾಗುತ್ತದೆ ನೋಡೋಣ.

VISTARANEWS.COM


on

kadha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಳೆಗಾಲವೆಂದರೆ ಮನಸ್ಸು ಕವಿಯಾಗುತ್ತದೆ ನಿಜ. ಆದರೆ, ದೇಹ ಮಾತ್ರ ಆಲಸ್ಯದ ಗೂಡಾಗುತ್ತದೆ. ಅಷ್ಟೇ ಅಲ್ಲ, ಸುಲಭವಾಗಿ ಶೀತ, ನೆಗಡಿ, ಕೆಮ್ಮು ಮತ್ತಿತರ ಸಮಸ್ಯೆಗಳಿಗೂ ತುತ್ತಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಆಗಾಗ ಬಿಸಿಬಿಸಿಯಾದ ಪೇಯಗಳು ನಮ್ಮ ದೇಹ ಸೇರಬೇಕು. ದೇಹ ಬೆಚ್ಚಗಿರಬೇಕು. ಅದಕ್ಕಾಗಿ, ಆಗಾಗ ಕಾಫಿ ಚಹಾಗಳನ್ನೇ ಕುಡಿಯುವುದಲ್ಲ, ಇಂತಹ ಬಗೆಬಗೆಯ ಪೇಯಗಳನ್ನು ಹೀರಿ ನಮ್ಮ ರೋಗ ನಿರೋಧಕ ಶಕ್ತಿಯನ್ನು (Immunity drinks) ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಳ್ಳುತ್ತಲೇ ಇರಬೇಕು. ಬನ್ನಿ ಯಾವೆಲ್ಲ ಪೇಯಗಳಿಂದ (Healthy monsoon drinks) ನಮ್ಮ ರೋಗ ನಿರೋಧಕತೆ ಹೆಚ್ಚಾಗುತ್ತದೆ ನೋಡೋಣ.

1. ಓಂಕಾಳು ಅರಿಶಿನ ಹಾಲು: ಅರಿಶಿನ ಹಾಲು ಎಂಬ ಗೋಲ್ಡನ್‌ ಡ್ರಿಂಕ್‌ ಕೇವಲ ಬಣ್ಣದಲ್ಲಿ ಮಾತ್ರ ಚಿನ್ನ ಅಲ್ಲ. ಗುಣದಲ್ಲೂ ಕೂಡಾ. ಅನಾದಿಕಾಲದಿಂದಲೂ ಅರಿಶಿನ ಹಾಕಿ ಕುದಿಸಿ ಹಾಲು ಕುಡಿಯುವುದರಿಂದಾಗುವ ಲಾಭಗಳನ್ನು ನಮಗೆ ದಾಟಿಸಿ ಹೋಗಿದ್ದಾರೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ದೇಹಕ್ಕೆ ಶಕ್ತಿ ಸಾಮರ್ಥ್ಯವನ್ನೂ ನೀಡುತ್ತದೆ. ಮಳೆಗಾಲಕ್ಕೆ ಅಗತ್ಯ ಬೇಕಾಗುವ ಹಾಗೂ ನಿತ್ಯವೂ ಕುಡಿಯಲೇಬೇಕಾದ ಪೇಯ ಇದು. ಮಳೆಗಾಲದಲ್ಲಿ ಈ ಅರಿಶಿನ ಹಾಲಿಗೆ ಕೊಂಚ ಓಂಕಾಳನ್ನೂ ಸೇರಿಸುವುದು ಒಳ್ಳೆಯದು.

Turmeric Milk

2. ಬಾದಾಮ್‌ ಖಾವಾ: ಕಾಶ್ಮೀರದ ಖಾವಾ ಕೂಡಾ ಮಳೆಗಾಲಕ್ಕೆ ಅತ್ಯಂತ ಒಳ್ಳೆಯ ಪೇಯ. ಕಾಶ್ಮೀರದ ಕೇಸರಿ, ಬಾದಾಮಿಯನ್ನೂ ಹಾಕಿ ಮಾಡುವ ಪೇಯವಿದು. ಗ್ರೀನ್‌ ಟೀ ಬ್ಯಾಗ್‌ಗಳನ್ನೂ ಇದರ ಜೊತೆಗೆ ಸೇರಿಸಬಹುದು. ಏಲಕ್ಕಿ, ಚೆಕ್ಕೆ, ಲವಂಗ, ಕೇಸರಿ ಎಲ್ಲವನ್ನೂ ಕುಟ್ಟಿ ಪುಡಿ ಮಾಡಿಕೊಂಡು ನೀರಿಗೆ ಹಾಕಿ ಕುದಿ ಬರಿಸಿ ಅದಕ್ಕೆ ಒಂದು ಗ್ರೀನ್‌ ಟೀ ಬ್ಯಾಗನ್ನೂ ಮುಳುಗಿಸಿಟ್ಟು ತೆಗೆಯಬಹುದು. ಇದಕ್ಕೆ ಬಾದಾಮಿಯ ಚೂರುಗಳನ್ನು ಸೇರಿಸಿ, ರುಚಿಗೆ ತಕ್ಕಷ್ಟು ಜೇನುತುಪ್ಪ ಸೇರಿಸಿ ಕುಡಿಯಬಹುದು. ಇದೂ ಕೂಡಾ, ಚಳಿಚಳಿ ಮಳೆಗೆ ಬಿಸಿ ಬಿಸಿ ಖಾವಾ ಗಂಟಲಿಗಷ್ಟೇ ಒಳ್ಳೆಯದು ಅಂದುಕೊಂಡರೆ ತಪ್ಪಾದೀತು. ದೇಹಕ್ಕೆ ರೋಗನಿರೋಧಕತೆಯ ಸಾಮರ್ಥ್ಯ ನೀಡುವಲ್ಲಿ ಇದರ ಪಾತ್ರ ದೊಡ್ಡದು.

3. ಜೀರಿಗೆ ಕಷಾಯ: ಹೊಟ್ಟೆ ಸರಿಯಿಲ್ಲ, ಗ್ಯಾಸ್‌ ಆಗಿದೆ ಎಂದ ತಕ್ಷಣ ಜೀರಿಗೆ ಕಷಾಯ ನೆನಪಾಗುವುದು ಸಹಜ. ಆದರೆ, ಮಳೆಗಾಲದಲ್ಲೂ ಜೀರಿಗೆ ಕಷಾಯ ಬಹಳ ಒಳ್ಳೆಯದು. ಚಹಾ ಕಾಫಿ ಬೇಡ ಅಂತನಿಸಿದಾಗಲೆಲ್ಲ, ಈ ಕಷಾಯ ಕುಡಿಯಬಹುದು. ಜೀರಿಗೆ, ಕೊತ್ತಂಬರಿ, ಬಡೇಸೊಪ್ಪು ಈ ಮೂರೂ ಸೇರಿ ಒಂದೆರಡು ಚಮಚ ನೀರಿಗೆ ಹಾಕಿ ಕುದಿಸಿ ಮಾಡಬಹುದಾದ ಪೇಯ. ಮೊದಲೇ ಈ ಮೂರನ್ನೂ ಹುರಿದು ಪುಡಿ ಮಾಡಿಯೂ ಇಟ್ಟುಕೊಳ್ಳಬಹುದು. ಹಾಗೆಯೇ ಬಿಸಿಯಾಗಿ ನೀರಾಗಿಯೂ ಕುಡಿಯಬಹುದು ಅಥವಾ ಸ್ವಲ್ಪ ಹಾಲು ಸೇರಿಸಿಯೂ ಕುಡಿಯಬಹುದು. ರುಚಿಗೆ ತಕ್ಕಷ್ಟು ಬೆಲ್ಲವೋ ಸಕ್ಕರೆಯೋ ಸೇರಿಸಿಕೊಂಡರೆ ಕೆಫಿನ್‌ ಮುಕ್ತ, ಈ ಆರೋಗ್ಯವರ್ಧಕ ಕಷಾಯ ಮಳೆಗಾಲಕ್ಕೆ ಬಹಳ ಒಳ್ಳೆಯದು.

monsoon drinks

ಇದನ್ನೂ ಓದಿ: Monsoon Food: ಮಳೆಗಾಲದಲ್ಲಿ ನಿದ್ದೆ ಹೊಡೆದೋಡಿಸಬೇಕೆ? ಹಾಗಾದರೆ ಇವನ್ನೆಲ್ಲ ಸೇವಿಸಬಹುದು!

4. ಮುಲೇತಿ- ಶುಂಠಿ ಚಹಾ: ರೋಗ ನಿರೋಧಕ ಶಕ್ತಿಯೂ ಸೇರಿಸಿ ಸರ್ವಗುಣ ಸಂಪನ್ನ ಪೇಯವಿದು. ಮಳೆಗಾಲದ ಇನ್ಫೆಕ್ಷನ್‌ಗಳಿಗೆ ಇದು ಹೇಳಿ ಮಾಡಿಸಿದ್ದು ಕೂಡಾ, ನೆಗಡಿ, ಗಂಟಲುನೋವು, ಶೀತ, ವಿಪರೀತ ಸೀನು, ಅಲರ್ಜಿ ಇವೆಲ್ಲವುಗಳಿಗೆ ರಾಮಬಾಣವೂ ಹೌದು. ಶುಂಠಿಯನ್ನು ಒಂದು ಚಮಚವಾಗುವಷ್ಟು ತುರಿದು ಕುದಿಯುವ ನೀರಿಗೆ ಹಾಕಿ. ಅರ್ಧ ಚಮಚ ಮುಲೇತಿಯನ್ನೂ ಜೊತೆಗೇ ಸೇರಿಸಿ. ಸೋಸಿಕೊಂಡು, ಬೇಕಿದ್ದರೆ ನಿಂಬೆಹಣ್ಣನ್ನು ಹಿಂಡಬಹುದು, ಜೇನುತುಪ್ಪ ಸೇರಿಸಿಕೊಳ್ಳಬಹುದು. ಅಥವಾ ಹಾಗೆಯೇ ಕುಡಿಯಲೂಬಹುದು.

5. ಚೆಕ್ಕೆ ಹಾಕಿದ ಬ್ಲ್ಯಾಕ್‌ ಕಾಫಿ: ಕಾಫಿ ಪ್ರಿಯರು ನೀವಾಗಿದ್ದರೆ, ಈ ಬಗೆಯ ಬ್ಲ್ಯಾಕ್‌ ಕಾಫಿ ಕುಡಿಯಲೇಬೇಕು. ಬ್ಲ್ಯಾಕ್‌ ಕಾಫಿಗೆ ಸ್ವಲ್ಪವೇ ಸ್ವಲ್ಪ ಚೆಕ್ಕೆ ಪುಡಿಯನ್ನೂ ಸೇರಿಸಿ ಕುದಿಸಿ ನೋಡಿ. ಒಂದು ಅತ್ಯಾಕರ್ಷಕ ಘಮ ನಿಮ್ಮ ಕಾಫಿಯದ್ದಾಗುತ್ತದೆ. ಬಿಸಿಬಿಸಿಯಾಗಿ ಹೀರಿದರೆ, ಈಡೀ ದೇಹದಲ್ಲಿ ಉಲ್ಲಾಸ ಮೂಡಿ ಮಳೆಗಾಲದ ಆಲಸ್ಯವೆಲ್ಲ ಮಾಯವಾಗು ಮೈಮನ ಚುರುಕಾಗದಿದ್ದರೆ ಕೇಳಿ!

ಇದನ್ನೂ ಓದಿ: Monsoon Diet: ಮಳೆಗಾಲದಲ್ಲಿ ಆಹಾರ ಸೇವನೆ ಹೀಗಿರಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದಾವಣಗೆರೆ

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

Medical negligence: ವೈದ್ಯನೊಬ್ಬನ ನಿರ್ಲಕ್ಷ್ಯಕ್ಕೆ ಶಿಶುವೊಂದು ಕಣ್ಣು ಬಿಡುವ ಮುನ್ನವೇ ಕಣ್ಣು ಮುಚ್ಚಿದೆ. ಸಿಸೇರಿಯನ್ ಮಾಡುವಾಗ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗವನ್ನೇ ವೈದ್ಯ ಕೊಯ್ದಿದ್ದಾನೆ. ಪರಿಣಾಮ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ.

VISTARANEWS.COM


on

By

Medical negligence
ವೈದ್ಯ ನಿಜಾಮುದ್ದೀನ್ ಯಡವಟ್ಟಿಗೆ ಮಗು ಸಾವು
Koo

ದಾವಣಗೆರೆ: ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯಕ್ಕೆ (Medical negligence) ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ವೈದ್ಯನ ಭಾರೀ ಯಡವಟ್ಟಿಗೆ ಹುಟ್ಟಿದಾಕ್ಷಣ ಮಗುವೊಂದು ಪ್ರಾಣವನ್ನೇ ಕಳೆದುಕೊಂಡಿದೆ. ವೈದ್ಯನೊಬ್ಬ ಹೆರಿಗೆ ಮಾಡುವಾಗ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗವನ್ನೇ ಕೊಯ್ದಿದ್ದಾನೆ.

ದಾವಣಗೆರೆ ಕೊಂಡಜ್ಜಿ ರಸ್ತೆಯಲ್ಲಿರುವ ಅರ್ಜುನ್ ಎಂಬುವವರ ಪತ್ನಿ ಅಮೃತಾ ಹೆರಿಗೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನಾರ್ಮಲ್‌ ಡೆಲಿವರಿ ಆಗದ ಹಿನ್ನೆಲೆಯಲ್ಲಿ ಸಿಸೇರಿಯನ್ ಮಾಡಲು ವೈದ್ಯರು ಮುಂದಾಗಿದ್ದರು. ಅದರಂತೆ ಕಳೆದ ಜೂನ್ 27ರಂದು ಅಮೃತಾಗೆ ಸಿಸೇರಿಯನ್ ಮಾಡಿ ಮಗು ತೆಗೆಯಲಾಗಿತ್ತು.

ಆದರೆ ಸಿಸೇರಿಯನ್‌ ಮಾಡುವಾಗ ವೈದ್ಯ ನಿಜಾಮುದ್ದೀನ್ ಮಗು ತೆಗೆಯುವಾಗ ಮರ್ಮಾಂಗವನ್ನೇ ಕೊಯ್ದಿದ್ದಾರೆ. ನಂತರ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಕೂಡಲೇ ಜಿಲ್ಲಾಸ್ಪತ್ರೆಯಿಂದ ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಶುಕ್ರವಾರ ಮೃತಪಟ್ಟಿದೆ.

ಮಗುವಿನ ಸಾವಿಗೆ ವೈದ್ಯರು ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದರು. ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟಿಸಿ, ಮಗುವಿನ ಸಾವಿಗೆ ಕಾರಣನಾದ ವೈದ್ಯನನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.

Medical negligence

ಇದನ್ನೂ ಓದಿ: Medical Ethics : ಎದೆ ನೋವೆಂದು ಕ್ಲಿನಿಕ್​ಗೆ ಬಂದ ಯುವತಿ; ತಪಾಸಣೆ ನೆಪದಲ್ಲಿ ಅಂಗಿ ಬಿಚ್ಚಿಸಿ ಮುತ್ತಿಟ್ಟ ವೈದ್ಯ; ಕೇಸ್​ ದಾಖಲಿಸಲು ಕೋರ್ಟ್​ ಸೂಚನೆ

ಮೊದಲ ರಾತ್ರಿಯ ಟೆನ್ಶನ್‌ಗೆ ವರ ಆತ್ಮಹತ್ಯೆ? ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ

ಮದುವೆಯಾದ ಮೇಲೆ ಗಂಡನ ಮನೆಗೆ ಬರುವ ವಧು ತನ್ನ ಪತಿಯ ಜೊತೆ ಸುಖವಾಗಿ ಸಂಸಾರ ನಡೆಸುವಂತಹ ಹಲವಾರು ಕನಸುಗಳನ್ನು ಹೊತ್ತು ಬರುತ್ತಾಳೆ. ಆದರೆ ಅಂತಹ ವಧುವಿನ ಕನಸು ಕ್ಷಣಮಾತ್ರದಲ್ಲಿ ನುಚ್ಚು ನೂರಾದರೆ ಅವಳಿಗೆ ಆಘಾತವಾಗುವುದು ಖಂಡಿತ. ಅಂತಹದೊಂದು ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ. ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ಮೊದಲ ರಾತ್ರಿಗಾಗಿ ಕೋಣೆಗೆ ಹಾಲು ತೆಗೆದುಕೊಂಡು ಹೋದಾಗ ಅಲ್ಲಿ ವರನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Self Harming) ಶರಣಾಗಿದ್ದ.

ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ರತನ್ಪುರ ಗ್ರಾಮದಲ್ಲಿ ಸಂಭ್ರಮದ ಮದುವೆ ಆಚರಣೆಗಳು ಮುಗಿದು ವಧು ಮೊದಲ ರಾತ್ರಿಗೆಂದು ವರನಿಗೆ ಹಾಲು ತೆಗೆದುಕೊಂಡು ಕೋಣೆಗೆ ಹೋದಾಗ ವರನು ಆತ್ಮಹತ್ಯೆ ಮಾಡಿಕೊಂಡಿದ್ದನು. ಇದರಿಂದ ಆ ಕುಟುಂಬದಲ್ಲಿ ಗೋಳಾಟ ಮುಗಿಲುಮುಟ್ಟಿದೆ.

Self Harming

24 ವರ್ಷದ ಸತ್ಯೇಂದ್ರ ಆತ್ಮಹತ್ಯೆ ಮಾಡಿಕೊಂಡ ವರ. ಈತ ಆತನ ವಧು ವಿನಿತಾ ಕುಮಾರಿ ಅವರೊಂದಿಗೆ ಅದ್ಧೂರಿಯಾಗಿ ಮದುವೆಯಾಗಿದ್ದು, ನಂತರ ದಿಬ್ಬಣ ಭರ್ಜರಿ ಮೆರವಣಿಗೆಯೊಂದಿಗೆ ಆತನ ಗ್ರಾಮಕ್ಕೆ ಮರಳಿದೆ. ನವವಿವಾಹಿತ ವಧುವನ್ನು ಮನೆಗೆ ಸಂಭ್ರಮದಿಂದ ಸ್ವಾಗತಿಸಲಾಗಿತ್ತು. ಹಾಗೇ ವಧುವರರ ಮೊದಲ ರಾತ್ರಿಗೆಂದು ಸಿದ್ಧತೆ ನಡೆಯುತ್ತಿದ್ದು, ವಧು ಹಾಲು ಹಿಡಿದುಕೊಂಡು ಪತಿಯ ಕೋಣೆಗೆ ಹೋದಾಗ ಆತ ಮದುವೆಯ ಉಡುಗೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಇದನ್ನು ಕಂಡು ವಧು ಆಘಾತಕ್ಕೊಳಗಾಗಿದ್ದಾಳೆ. ಈ ಸುದ್ದಿ ಕುಟುಂಬಸ್ಥರು ಮತ್ತು ಅತಿಥಿಗಳಿಗೆ ನಂಬಲು ಅಸಾಧ್ಯವಾಗಿದೆ.

ಈ ಬಗ್ಗೆ ಉಸ್ರಾಹರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸತೇಂದ್ರ ಅವರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದರೆ ಸತ್ಯೇಂದ್ರ ಅವರ ಆತ್ಮಹತ್ಯೆಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಮೊದಲ ರಾತ್ರಿಯ ಟೆನ್ಶನ್‌ಗೆ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸತ್ಯೇಂದ್ರ ಅವರ ಅಕಾಲಿಕ ಸಾವಿನ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಸಂಭ್ರಮಾಚರಣೆಯಲ್ಲಿ ತೇಲಾಡುತ್ತಿದ್ದ ಕುಟುಂಬವನ್ನು ಈ ಘಟನೆ ಶೋಕಾಚರಣೆಯಲ್ಲಿ ಮುಳುಗುವಂತೆ ಮಾಡಿದೆ. ಇನ್ನೂ ಮದುವೆಯಾಗಿ ಕ್ಷಣಗಳೇ ಕಳೆದಿದ್ದು, ಜೀವನಪರ್ಯಂತ ಒಟ್ಟಿಗೆ ಇರುತ್ತಾನೆ ಎಂದು ಭಾವಿಸಿದ ಪತಿ ಸಾವಿಗೆ ಶರಣಾಗಿದ್ದನ್ನು ಕಂಡು ವಧು ಆಘಾತಕ್ಕೊಳಗಾಗಿದ್ದಾಳೆ. ಅಲ್ಲದೇ ಸಾಲಸೂಲ ಮಾಡಿ ಮಗಳು ಗಂಡನ ಮನೆಯಲ್ಲಿ ಸುಖವಾಗಿರಲಿ ಎಂದು ಬಯಸಿದ ಆಕೆಯ ಪೋಷಕರಿಗೆ ಈ ಘಟನೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ ಭಾಸವಾಗಿದೆ. ಒಟ್ಟಾರೆ ಈ ಮದುವೆ ಸಂಭ್ರಮ ದುರಂತದ ತಿರುವು ತೆಗೆದುಕೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Brain-Eating Amoeba: ಮೆದುಳು ತಿನ್ನುವ ಅಮೀಬಾಕ್ಕೆ ಮತ್ತೊಂದು ಬಲಿ; 2 ತಿಂಗಳ ಅಂತರದಲ್ಲಿ 3ನೇ ಪ್ರಕರಣ

Brain-Eating Amoeba: ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಕೇರಳದಲ್ಲಿ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ಬುಧವಾರ ರಾತ್ರಿ ಮೃತಪಟ್ಟ ಕೇರಳದ ಕೋಝಿಕ್ಕೋಡ್‌ ಜಿಲ್ಲೆಯ 12 ವರ್ಷ ಬಾಲಕನಿಗೆ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ (ಮೆದುಳು ತಿನ್ನುವ ಅಮೀಬಾ) ಸೋಂಕು ತಗುಲಿದ್ದು ದೃಧಪಟ್ಟಿದ್ದು, ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ ಇಂತಹ ಮೂರನೇ ಸಾವಿನ ಪ್ರಕರಣ ಇದಾಗಿದೆ.

VISTARANEWS.COM


on

Brain-Eating Mmoeba
Koo

ತಿರುವನಂತಪುರಂ: ಅಪರೂಪದ ಮೆದುಳು ತಿನ್ನುವ ಅಮೀಬಾ (Brain-Eating Amoeba) ಸೋಂಕಿಗೆ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ಬುಧವಾರ ರಾತ್ರಿ ಮೃತಪಟ್ಟ ಕೇರಳದ ಕೋಝಿಕ್ಕೋಡ್‌ ಜಿಲ್ಲೆಯ 12 ವರ್ಷ ಬಾಲಕನಿಗೆ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ (ಮೆದುಳು ತಿನ್ನುವ ಅಮೀಬಾ) ಸೋಂಕು ತಗುಲಿದ್ದು ದೃಧಪಟ್ಟಿದ್ದು, ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ ಇಂತಹ ಮೂರನೇ ಸಾವಿನ ಪ್ರಕರಣ ಇದಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಬಾಲಕನನ್ನು ಮೃದುಲ್‌ ಇ.ಪಿ. ಎಂದು ಗುರುತಿಸಲಾಗಿದೆ. ಕೋಝಿಕ್ಕೋಡ್‌ ಜಿಲ್ಲೆಯ ಫೆರೊಕೆ ಮೂಲದ ಈತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 7ನೇ ತರಗತಿಯಲ್ಲಿ ಓದುತ್ತಿದ್ದ ಮೃದುಲ್‌ನಲ್ಲಿ ಕೆಲವು ದಿನಗಳ ಹಿಂದೆ ಸೋಂಕಿನ ಲಕ್ಷಣಗಳಾದ ತೀವ್ರ ತಲೆನೋವು, ವಾಕರಿಕೆ, ವಾಂತಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಜೂನ್‌ 24ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊಳದಲ್ಲಿ ಸ್ನಾನ ಮಾಡಿದ ನಂತರ ಬಾಲಕನಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಕೊಳಗಳು ಮತ್ತು ಸರೋವರಗಳಂತಹ ಸಿಹಿನೀರಿನ ಮೂಲಗಳಲ್ಲಿ ಕಂಡುಬರುವ ಈ ಅಮೀಬಾ ಮೂಗಿನ ಮೂಲಕ ಶರೀರವನ್ನು ಸೇರಿ ಮಾರಣಾಂತಿಕವಾಗುತ್ತದೆ. ಇದು ಮೆದುಳಿನ ಜೀವಕೋಶಗಳನ್ನು ತಿನ್ನುವುದರಿಂದ ಇದನ್ನು ಮೆದುಳು ತಿನ್ನುವ ಅಮೀಬಾ ಎಂದೇ ಕರೆಯಲಾಗುತ್ತದೆ.

ಆರಂಭದಲ್ಲಿ ಮೃದುಲ್‌ನನ್ನು ಎರಡು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಮತ್ತು ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಆ್ಯಂಟಿ ಮೈಕ್ರೊಬಿಯಲ್ ಚಿಕಿತ್ಸೆ ನೀಡಲಾಯಿತು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಬಳಿಕ ರಾಮನಾಟುಕರ ಮುನ್ಸಿಪಾಲಿಟಿ ಮೃದುಲ್‌ ಸ್ನಾನ ಮಾಡಿದ್ದ ಕೊಳಕ್ಕೆ ಸಾರ್ವಜನಿಕರ ಪ್ರವೇಸವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಮೂರನೇ ಪ್ರಕರಣ

ಈ ಹಿಂದೆ ಜೂನ್ 25ರಂದು ಕಣ್ಣೂರು ಜಿಲ್ಲೆಯ 13 ವರ್ಷದ ಬಾಲಕಿ ಮತ್ತು ಮೇ 21ರಂದು ಮಲಪ್ಪುರಂನ 5 ವರ್ಷದ ಬಾಲಕಿ ಈ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದರು. “ನಾವು ರಾಜ್ಯದಲ್ಲಿ ಸಂಭವಿಸಿದ ಈ ಮೂರು ಸಾವುಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡುತ್ತಿದ್ದೇವೆ. ಕಣ್ಗಾವಲು ತೀವ್ರಗೊಳಿಸಿದ್ದೇವೆ. ನಾವು ಮೃದುಲ್‌ನಂತೆ ಅದೇ ಕೊಳದಲ್ಲಿ ಸ್ನಾನ ಮಾಡಿದ ಇತರರನ್ನು ಪರೀಕ್ಷಿಸಿದ್ದೇವೆ. ಆದರೆ ಇಲ್ಲಿಯವರೆಗೆ ಯಾರಲ್ಲಿಯೂ ಸೋಂಕಿನ ಲಕ್ಷಣ ಕಂಡು ಬಂದಿಲ್ಲʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಆರೋಗ್ಯ ಅಧಿಕಾರಿ ಹೇಳಿದ್ದಾರೆ. “ಕೊಳಗಳು ಅಥವಾ ಸರೋವರಗಳಲ್ಲಿ ಸ್ನಾನ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸುವ ಅಗತ್ಯವಿಲ್ಲ. ಏಕೆಂದರೆ ಇದು ಅತ್ಯಂತ ಅಪರೂಪದ ಸೋಂಕು. ಅಮೀಬಾ ಪ್ರಭೇದಗಳ ಉಪಸ್ಥಿತಿಯನ್ನು ಪರೀಕ್ಷಿಸಲು ನಾವು ವಿವಿಧ ಜಲ ಮೂಲಗಳ ಮಾದರಿಗಳನ್ನು ಪರೀಕ್ಷಿಸುತ್ತೇವೆ. ಮಳೆ ತೀವ್ರಗೊಳ್ಳುತ್ತಿದ್ದಂತೆ ಸೋಂಕುಗಳ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ” ಎಂದು ಅವರು ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: Brain eating amoeba | ಮೆದುಳು ತಿನ್ನುವ ಅಮೀಬಾ! ಏನಿದು ವಿಚಿತ್ರ ಕಾಯಿಲೆ?

ಹೇಗೆ ಹರಡುತ್ತದೆ?

ಈ ರೋಗಾಣು ಇರುವ ನೀರಿನಲ್ಲಿ ಈಜುವುದು ಅಥವಾ ಇನ್ನಾವುದಾದರೂ ರೀತಿಯಿಂದ ಈ ನೀರು ಮೂಗಿನೊಳಗೆ ಹೋದರೆ, ಆ ವ್ಯಕ್ತಿಗೆ ಈ ಅಮೀಬಾ ಸೋಂಕು ತಗುಲುತ್ತದೆ. ತುಂಬ ದಿನದಿಂದ ಈಜುಕೊಳದ ನೀರು ಬದಲಿಸದೆ ಇದ್ದರೆ ಅಲ್ಲಿಯೂ ಈ ಅಮೀಬಾ ಇರಬಹುದು. ಅದರಲ್ಲೂ ಕಲುಷಿತ ನೀರಿನಲ್ಲಿ ಈ ಅಮೀಬಾ ಉತ್ಪತ್ತಿ ಪ್ರಮಾಣ ಹೆಚ್ಚು. ನೀರೊಳಗೆ ಮುಖ ಒಳಗೆ ಹಾಕಿ ಈಜಿದಾಗ, ಸರೋವರ, ಕೊಳ, ನದಿ ನೀರಿನಲ್ಲಿ ಮುಖ ಮುಳುಗಿಸಿದಾಗ, ಕಲುಷಿತ ನೀರಿನಲ್ಲಿ ತಲೆ ಸ್ನಾನ ಮಾಡಿದಾಗ ಈ ಅಮೀಬಾ ಮೂಗಿನ ಮೂಲಕ ಮೆದುಳು ಸೇರುವ ಸಾಧ್ಯತೆ ಹೆಚ್ಚು.

Continue Reading

ಆರೋಗ್ಯ

Sleep Apnea: ಗೊರಕೆಯೆಂದು ನಿರ್ಲಕ್ಷಿಸಬೇಡಿ, ಇದು ಜೀವಕ್ಕೂ ಎರವಾದೀತು!

sleep apnea: ಸಣ್ಣ ಪ್ರಮಾಣದಲ್ಲಿ ಗೊರೆಯುವವರು, ಆಯಾಸವಾದಾಗ, ನಿದ್ದೆಗೆಟ್ಟಾಗ ಗೊರೆಯುವವರು ಬಹಳಷ್ಟು ಜನರಿದ್ದಾರೆ. ಆದರೆ ಇಂಥ ಸಂದರ್ಭಗಳಲ್ಲದೆ, ಸದಾ ಕಾಲ ಗೊರಕೆ ಹೊಡೆಯುವುದು, ಜೋರಾದ ಕರ್ಕಶವಾದ ಗೊರಕೆಗಳು, ಆಗಾಗ ಉಸಿರುಗಟ್ಟುವಂಥದ್ದು- ಇವೆಲ್ಲ ದೀರ್ಘ ಕಾಲದಲ್ಲಿ ಸಮಸ್ಯೆಗಳನ್ನು ತರುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Sleep Apnea
Koo

ನಾವೆಲ್ಲ ನಿದ್ದೆ ಮಾಡುವವರೇ (sleep apnea) ಆದರೂ, ನಮ್ಮಲ್ಲಿ ನಿದ್ದೆ ಸರಿಯಾಗಿ ಬಾರದೆ ಒದ್ದಾಡುವವರದ್ದು ಒಂದು ವರ್ಗ. ನಿದ್ದೆ ಬಂದ ಮೇಲೂ ಒದ್ದಾಡುವವರದ್ದು ಇನ್ನೊಂದು ವರ್ಗ. ಈ ಎರಡನೇ ಸಾಲಿಗೆ ಸೇರಿದವರು, ನಿದ್ದೆ ಬಂದ ಮೇಲೆ ತಾವು ಒದ್ದಾಡುವುದಿಲ್ಲ, ಆಚೀಚಿನವರನ್ನು ಒದ್ದಾಡಿಸುತ್ತಾರೆ- ಗೊರಕೆ ಹೊಡೆಯುವ ಮೂಲಕ. ಅರೆ! ಗೊರೆಯುವುದು ನಿದ್ದೆಯ ಅವಿಭಾಜ್ಯ ಅಂಗ ಎಂದು ತಿಳಿದವರೇ ಭಾರತದಲ್ಲಿ ಹೆಚ್ಚಿರುವಾಗ, ಗೊರೆದು ಒರಗುವವರ ಬಗ್ಗೆ ಹೀಗೆ ತಕರಾರು ತೆಗೆಯಬಹುದೇ ಎನ್ನಬಹುದು. ಬೇರೆ ದೇಶಗಳಲ್ಲಿ ಹಾಗಲ್ಲ, ಗೊರೆದು ನಿದ್ದೆಗೆಡಿಸುವ ಸಂಗಾತಿ ಬೇಡವೆಂದು ಸೋಡಾಚೀಟಿ ಕೊಟ್ಟ ನಿದರ್ಶನಗಳು ಸಾಕಷ್ಟಿವೆ. ಇರಲಿ, ಗೊರೆದರೆ ಪಕ್ಕದಲ್ಲಿ ಮಲಗಿದವರ ನಿದ್ದೆ ಹಾಳು ಎನ್ನುವುದು ದೊಡ್ಡ ವಿಷಯವೇ ಅಲ್ಲ. ಹಾಗೆ ಗಂಟಲು ಬಿರಿಯುವಂತೆ ಗೊರೆದರೆ, ಗೊರೆಯುವವರದ್ದೇ ಆರೋಗ್ಯ ಹಾಳು ಎನ್ನುವುದು ಮುಖ್ಯ ಸಂಗತಿ.

Difficulty Sleeping

ಸ್ಲೀಪ್‌ ಅಪ್ನಿಯ

ಗೊರಕೆ ಹೊಡೆಯುವ ಮತ್ತು ಹಾಗೆ ಮಾಡುವಾಗ ಕೆಲವು ಕ್ಷಣಗಳ ಕಾಲ ಉಸಿರಾಟ ನಿಲ್ಲಿಸುವ ಈ ಪ್ರಕ್ರಿಯೆಯನ್ನು ಅಬ್‌ಸ್ಟ್ರಕ್ಟಿವ್‌ ಸ್ಲೀಪ್‌ ಅಪ್ನಿಯ (ಒಎಸ್‌ಎ) ಎಂದು ಕರೆಯಲಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಗೊರೆಯುವವರು, ಆಯಾಸವಾದಾಗ, ನಿದ್ದೆಗೆಟ್ಟಾಗ ಗೊರೆಯುವವರು ಬಹಳಷ್ಟು ಜನರಿದ್ದಾರೆ. ಆದರೆ ಇಂಥ ಸಂದರ್ಭಗಳಲ್ಲದೆ, ಸದಾ ಕಾಲ ಗೊರೆಯುವುದು, ಜೋರಾದ ಕರ್ಕಶವಾದ ಗೊರಕೆಗಳು, ಆಗಾಗ ಉಸಿರುಗಟ್ಟುವಂಥದ್ದು- ಇವೆಲ್ಲ ದೀರ್ಘ ಕಾಲದಲ್ಲಿ ಆರೋಗ್ಯಕ್ಕೆ ಸಮಸ್ಯೆಗಳನ್ನು ತರುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಸ್ಥಿತಿಯನ್ನು ಸರಿಯಾಗಿ ನಿರ್ವಹಿಸದೇ ಹೋದಲ್ಲಿ, ಹೃದಯ ರೋಗಗಳು ಬರುವ ಸಾಧ್ಯತೆಯನ್ನು ಶೇ. 30ರಷ್ಟು ಮತ್ತು ಪಾರ್ಶ್ವವಾಯು ಬಡಿಯುವ ಸಾಧ್ಯತೆಯನ್ನು ಶೇ. 60ರಷ್ಟು ಹೆಚ್ಚಿಸುತ್ತದಂತೆ. ಅಂದರೆ ನಿದ್ರಿಸಿದವರು ಏಳದಿರುವ ಸಾಧ್ಯತೆ ಈ ಪ್ರಮಾಣದಲ್ಲಿದೆ.

ಲಕ್ಷಣಗಳೇನು?

ವಿಶ್ವದೆಲ್ಲೆಡೆಯ ಅಂಕಿ-ಅಂಶಗಳನ್ನು ನೋಡಿದರೆ, ಸುಮಾರು 936 ದಶಲಕ್ಷ ಮಂದಿ ಒಎಸ್‌ಎ ಹೊಂದಿದವರಿದ್ದಾರೆ. ಇವರಲ್ಲಿ ಹೆಚ್ಚಿನವರ ಲಕ್ಷಣಗಳು ಸೌಮ್ಯವಾದದ್ದು. ಈ ಲಕ್ಷಣಗಳು ತೀವ್ರವಾಗಿ ಇದ್ದವರಲ್ಲಿ, ನಿದ್ದೆಯಲ್ಲಿ ಆಗಾಗ ಉಸಿರುಗಟ್ಟುವುದು, ಕೆಮ್ಮುವುದು, ನಿದ್ದೆಯಿಂದ ಆಗಾಗ ಎಚ್ಚರವಾಗುವುದು, ಬಾತ್‌ರೂಂ ಓಡಾಟಗಳು, ನಿದ್ದೆಯಲ್ಲಿ ಬೆವರುವುದು ಇತ್ಯಾದಿಗಳು ಸಾಮಾನ್ಯ. ಇದರಿಂದಾಗಿ ಹಗಲಿಗೂ ಇವರು ಸುಸ್ತು, ಆಯಾಸ, ಏಕಾಗ್ರತೆಯ ಕೊರತೆ, ತಲೆನೋವು, ಎದೆ ಉರಿ, ಮೂಡ್‌ ಬದಲಾವಣೆ, ತೂಕಡಿಕೆಗಳಿಂದ ಮುಕ್ತರಾಗಿ ಇರುವುದಿಲ್ಲ. ಇದನ್ನು ವೈದ್ಯಕೀಯವಾಗಿ ನಿರ್ವಹಿಸದಿದ್ದರೆ ಮುಂದೆ ಗಂಭೀರ ಸಮಸ್ಯೆಗಳು ಬರಬಹುದು ಎನ್ನುವುದು ತಜ್ಞರ ಅಭಿಮತ.
ಬ್ರೆಜಿಲ್‌ ದೇಶದ ಸಾವೊ ಪೌಲೊ ವಿಶ್ವವಿದ್ಯಾಲಯದ ಅಧ್ಯಯನಕಾರರು ಹೇಳುವ ಪ್ರಕಾರ, ಒಂದು ಸರಳವಾದ ರಕ್ತ ಪರೀಕ್ಷೆಯ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು. ಇದನ್ನು ವಿವರಿಸಿ ಹೇಳುವುದಾದರೆ, ರಕ್ತದಲ್ಲಿರುವ ಹೋಮೋಸಿಸ್ಟೀನ್‌ ಎಂಬ ಅಮೈನೊ ಆಮ್ಲದ ಮಟ್ಟ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದ್ದರೆ ರಕ್ತ ಮತ್ತು ಹೃದಯದ ಸಮಸ್ಯೆಗಳು ಹೆಚ್ಚಾಗಬಹುದು. ಸರಿ, ಆದರೆ ಹೋಮೋಸಿಸ್ಟೀನ್‌ಗೂ ಗೊರೆಯುವುದಕ್ಕೂ ಎತ್ತಣಿದೆಂತ್ತ ಸಂಬಂಧ? ಇದಕ್ಕಾಗಿ ಈ ತಜ್ಞರು ನಡೆಸಿದ್ದ ಅಧ್ಯಯನದ ಬಗ್ಗೆ ಚುಟುಕಾಗಿ ಹೇಳಬೇಕಿದೆ.

ಇದನ್ನೂ ಓದಿ: Hair Oil Tips: ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಲಾಭವೋ ನಷ್ಟವೋ?

ವಿಷಯ ಏನೆಂದರೆ…

ಇದಕ್ಕಾಗಿ ಸುಮಾರು 20-80 ವರ್ಷ ವಯಸ್ಸಿನ ೮೦೦ಕ್ಕೂ ಹೆಚ್ಚಿನವರ ದತ್ತಾಂಶಗಳ ಅಧ್ಯಯನವನ್ನು ಈ ತಂಡ ನಡೆಸಿತು. ಇದರ ಪ್ರಕಾರ, ರಕ್ತದಲ್ಲಿ ಹೋಮೋಸಿಸ್ಟೀನ್‌ ಎಷ್ಟಿದೆ ಎನ್ನುವ ಆಧಾರದ ಮೇಲೆ ಕಡಿಮೆ, ಮಧ್ಯಮ, ಹೆಚ್ಚು ಎಂಬ ಮೂರು ಗುಂಪುಗಳನ್ನಾಗಿ ವಿಂಗಡಿಸಿದ್ದರು. ಈ ಗುಂಪುಗಳ ನಿದ್ದೆಯನ್ನು ಅಧ್ಯಯನಕ್ಕೆ (ಪಾಲಿಸೋಮ್ನೋಗ್ರಾಂ) ಒಳಪಡಿಸಿದಾಗ ಅಚ್ಚರಿಯ ಅಂಶಗಳು ಕಂಡವು. ಒಂದು ತಾಸಿನ ಸರಾಸರಿ ನಿದ್ದೆಯ ಹೊತ್ತಿನಲ್ಲಿ ಎಷ್ಟು ಬಾರಿ ಉಸಿರು ಕಡಿಮೆಯಾಗುತ್ತದೆ ಅಥವಾ ನಿಲ್ಲುತ್ತದೆ (ಒಎಸ್‌ಎ) ಎಂಬುದನ್ನು ಪರಿಶೀಲಿಸಲಾಯಿತು. ತಾಸಿಗೆ ಐದಕ್ಕಿಂತ ಕಡಿಮೆ ಬಾರಿ ಹೀಗಾದರೆ ಸಾಮಾನ್ಯ. 5-15 ಬಾರಿ ಹೀಗಾದರೆ ಸೌಮ್ಯ ಪ್ರಮಾಣದಲ್ಲಿ ಒಎಸ್‌ಎ ಇದೆ; 15-30 ಬಾರಿ ಹೀಗಾದರೆ ಮಧ್ಯಮ ಪ್ರಮಾಣದ ಒಎಸ್‌ಎ ಇದೆ; 30ಕ್ಕಿಂತ ಹೆಚ್ಚು ಬಾರಿ ಹೀಗಾದರೆ ತೀವ್ರ ತೆರನಾಗಿದೆ ಎಂಬುದು ಅಳತೆಗೋಲು. ಕಡಿಮೆ ಪ್ರಮಾಣದ ಒಎಸ್‌ಎ ಇದ್ದವರ ರಕ್ತದಲ್ಲಿ ಹೋಮೋಸಿಸ್ಟೀನ್‌ ಮಟ್ಟ ಕಡಿಮೆ ಇತ್ತು; ಮಧ್ಯಮ ಒಎಸ್‌ಎ ಇದ್ದವರಲ್ಲಿ ಹೋಮೋಸಿಸ್ಟೀನ್‌ ಮಟ್ಟವೂ ಮಧ್ಯಮ ಪ್ರಮಾಣದಲ್ಲೇ ಇತ್ತು; ಉಳಿದವರಲ್ಲಿ ಎರಡೂ ತೀವ್ರವಾಗಿಯೇ ಇದ್ದವು. ಹಾಗಾಗಿ ಇದೊಂದು ರಕ್ತ ಪರೀಕ್ಷೆ ಮುಂದಾಗುವುದನ್ನು ತಪ್ಪಿಸೀತು ಎನ್ನುವುದು ಅಧ್ಯಯನಕಾರರ ನಿಲುವು.

Continue Reading

ಕೋಲಾರ

Chemicals in Food: ಕ್ಯಾನ್ಸರ್​ ಕಾರಕ ಅಂಶವಿರುವ ರಾಸಾಯನಿಕ ಕಲರ್ ಬಳಸಿದ ಸ್ವೀಟ್​ ವಶಕ್ಕೆ

Chemicals in Food: ಇತ್ತೀಚೆಗಷ್ಟೇ ಕೋಲಾರದ ಕೆಜಿಎಫ್ ನಗರಸಭೆ ಅಧಿಕಾರಿಗಳು ಗೋಬಿ ಮಂಜೂರಿ, ಕಬಾಬ್‌ ಸೆಂಟರ್​ಗಳ ಮೇಲೆ‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವುಗಳಲ್ಲಿ ಬಳಸಲಾಗುತ್ತಿದ್ದ ಬಣ್ಣದ ಐಟಂಗಳನ್ನು ಬ್ಯಾನ್ ಮಾಡಿದ್ದರು.

VISTARANEWS.COM


on

chemicals in food
Koo

ಕೋಲಾರ: ಕ್ಯಾನ್ಸರ್‌ ಕಾರಕ (Carcinogenic) ಅಂಶಗಳನ್ನು ಹೊಂದಿರುವ ರಾಸಾಯನಿಕ ಬಣ್ಣಗಳನ್ನು (Chemical color) ಬಳಸುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಕೆಜಿಎಫ್​ (KGF) ನಗರಸಭೆ ವ್ಯಾಪ್ತಿಯಲ್ಲಿ ಸ್ವೀಟ್​​ ಅಂಗಡಿಗಳ (Sweet stalls) ಮೇಲೆ ನಗರಸಭೆ ಪೌರಾಯುಕ್ತ ಪವನ್​ ಕುಮಾರ್​ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ರಾಸಾಯನಿಕ ಹೊಂದಿದ (Chemicals in Food) ಕೃತಕ ಬಣ್ಣ ಬಳಸಿ ತಯಾರು ಮಾಡಿದ್ದ ಸ್ವೀಟ್​ ಹಾಗೂ ತಿಂಡಿಗಳನ್ನು (Seize) ವಶಕ್ಕೆ ಪಡೆಯಲಾಯಿತು.

ಜೊತೆಗೆ ಆಹಾರ ಸುರಕ್ಷತೆ ನಿಯಮ ಪಾಲಿಸದೆ ಸ್ವೀಟ್​ ತಯಾರು ಮಾಡುತ್ತಿದ್ದ ಅಂಗಡಿಗಳಿಗೆ ನೋಟೀಸ್​ ನೀಡಿ ದಂಡ ವಿಧಿಸಲಾಗಿದೆ. ಕಲರ್ ಬಳಸಿ ತಯಾರು ಮಾಡಿದ ಸ್ವೀಟ್​ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ಕಸದ ಲಾರಿಗೆ ತುಂಬಿಸಿದರು.

ಇತ್ತೀಚೆಗಷ್ಟೇ ಕೋಲಾರದ ಕೆಜಿಎಫ್ ನಗರಸಭೆ ಅಧಿಕಾರಿಗಳು ಗೋಬಿ ಮಂಜೂರಿ, ಕಬಾಬ್‌ ಸೆಂಟರ್​ಗಳ ಮೇಲೆ‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವುಗಳಲ್ಲಿ ಬಳಸಲಾಗುತ್ತಿದ್ದ ಬಣ್ಣದ ಐಟಂಗಳನ್ನು ಬ್ಯಾನ್ ಮಾಡಿದ್ದರು. ಜೊತೆಗೆ ಕಲರ್‌ ಬಳಸುವ ಎಲ್ಲಾ ಗೋಬಿ ಮಂಚೂರಿ, ಕಬಾಬ್ ಸೆಂಟರ್​ಗಳಿಗೆ ಭೇಟಿ ನೀಡಿ ಸರ್ಕಾರದ ಆದೇಶದಂತೆ ನಿಷೇಧಿತ ಕಲರ್ ಬಳಸದಂತೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸ್ವೀಟ್​​ ಅಂಗಡಿಗಳ ಮೇಲೆ ದಾಳಿ ನಡೆದಿದೆ.

ಪಾನಿಪುರಿಯಲ್ಲೂ ಹಾನಿಕಾರಕ ರಾಸಾಯನಿಕ, ಬ್ಯಾನ್‌ಗೆ ಚಿಂತನೆ

ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ ಕೊಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (food safety and standards authority of india) ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕೆ ಕಾರಣ, ಪಾನಿಪುರಿಯಲ್ಲಿ ಕಂಡುಬಂದಿರುವ ಕ್ಯಾನ್ಸರ್‌ಕಾರಕ (Carcinogenic), ಹಾನಿಕಾರಕ ರಾಸಾಯನಿಕ (Chemicals in Food) ವಿಷಗಳು.

ಹೌದು. ಗೋಬಿ ಮಂಚೂರಿ (Gobi Manchurian) ಹಾಗೂ ಕಬಾಬ್ (Kebab) ಬಳಿಕ ಇದೀಗ ಪಾನಿಪುರಿಯಲ್ಲಿಯೂ ಕ್ಯಾನ್ಸರ್ ಕಾರಕ ಅಂಶಗಳು ಇರುವುದನ್ನು ಪತ್ತೆ ಮಾಡಲಾಗಿದೆ. ಇದರ ಪರಿಶೀಲನೆಗಾಗಿ ಬೆಂಗಳೂರಿನ 49 ಪ್ರದೇಶಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಪರಿಶೀಲಿಸಿದಾಗ, ಎಲ್ಲ 19 ಕಡೆಯ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಲ್ಯಾಬ್‌ ಟೆಸ್ಟಿಂಗ್‌ನಲ್ಲಿ, ಪಾನಿಪೂರಿಗೆ ಬಳಸುವ ಐದು ಸಾಸ್, ಮೀಟಾ ಖಾರದಲ್ಲಿ ಐದು ಬಗೆಯ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳನ್ನು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಕ್ಯಾನ್ಸರ್ ಕಾರಕಗಳು ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡಲಾಗುತ್ತದೆ.

ರಾಜ್ಯದ ನಾನಾ ಭಾಗದಲ್ಲಿ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿಕೊಂಡು ಟೆಸ್ಟ್ ಮಾಡಲಾಗಿದೆ. ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ. ಹೀಗಾಗಿ, ಇನ್ನೊಂದು ವಾರದಲ್ಲಿ ಪಾನಿಪುರಿಗೆ ಹಾಕುವ ಸಾಸ್ ಮತ್ತು ಮಿಟಾ ಬ್ಯಾನ್ ಮಾಡಲು ನಿರ್ಧರಿಸಲಾಗಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ.

ಪಾನಿಪುರಿಯಲ್ಲಿ ವಿಷಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್, ಜನತೆ ವಿವೇಚನೆಯಿಂದ ಈ ಆಹಾರ ಸೇವಿಸಬೇಕು ಎಂದಿದ್ದಾರೆ.

ಇದನ್ನೂ ಓದಿ | Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

Continue Reading
Advertisement
Deadly Attack
ದೇಶ15 mins ago

Deadly Attack: ಹಾಡಹಗಲೇ ಶಿವಸೇನೆ ಮುಖಂಡನ ಮೇಲೆ ಡೆಡ್ಲಿ ಅಟ್ಯಾಕ್‌- ವಿಡಿಯೋ ಇದೆ

Viral Video
Latest17 mins ago

Viral Video: ಮೆಟ್ರೋದಲ್ಲಿ ಕೋತಿ ಚೇಷ್ಟೆಗೆ ಕೊನೆಯೇ ಇಲ್ಲ! ಈ ಮಂಗ್ಯಾನ ಡ್ಯಾನ್ಸ್‌ ನೋಡಿ!

Anganwadi workers should make good use of mobile phones says MLA Channareddy Patil Thunnur
ಯಾದಗಿರಿ27 mins ago

Yadgiri News: ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಉಪಯುಕ್ತ : ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

congratulation ceremony for Dr. Jinadatta Hadagali on 7th July in Dharwad
ಧಾರವಾಡ29 mins ago

Dharwad News: ಧಾರವಾಡದಲ್ಲಿ ಜು.7ರಂದು ಡಾ. ಜಿನದತ್ತ ಅ. ಹಡಗಲಿಗೆ ಅಭಿನಂದನಾ ಸಮಾರಂಭ

Virat kohli
ಪ್ರಮುಖ ಸುದ್ದಿ31 mins ago

Virat Kohli : ನಿವೃತ್ತಿ ಬಳಿಕ ಪತ್ನಿ ಜತೆ ಲಂಡನ್​ಗೆ ತೆರಳಿ ನೆಲೆಸಲಿದ್ದಾರೆ ವಿರಾಟ್​ ಕೊಹ್ಲಿ,

Porn Passport
ವಿದೇಶ34 mins ago

Porn Passport: ಪೋರ್ನ್ ಪಾಸ್‌ಪೋರ್ಟ್! ಅಶ್ಲೀಲ ವಿಡಿಯೊ ವೀಕ್ಷಿಸಲು ಇದು ಕಡ್ಡಾಯ!!

Lalu Prasad Yadav
ದೇಶ36 mins ago

Lalu Prasad Yadav: ಮುಂದಿನ ತಿಂಗಳು ಮೋದಿ ರಾಜೀನಾಮೆ; ಲಾಲು ಪ್ರಸಾದ್‌ ಯಾದವ್‌ ಸ್ಫೋಟಕ ಭವಿಷ್ಯ

New Fashion Trend
ಫ್ಯಾಷನ್52 mins ago

New Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಬೆರಳನ್ನು ಆಕ್ರಮಿಸಿದ ಫಂಕಿ ಉಂಗುರಗಳು!

CM Siddaramaiah
ಕರ್ನಾಟಕ1 hour ago

CM Siddaramaiah: ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಸಿಎಂ ಸಿದ್ದರಾಮಯ್ಯ

karnataka Weather Forecast
ಮಳೆ2 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ3 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ4 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ6 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ7 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು9 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು9 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ13 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಟ್ರೆಂಡಿಂಗ್‌