Ghulam Nabi Azad: ಮುಸ್ಲಿಮರು ಹಿಂದುಗಳಾಗಿದ್ದರು ಎಂಬ ಗುಲಾಂ ನಬಿ ಹೇಳಿಕೆಗೆ ಬಜರಂಗದಳ, ವಿಎಚ್‌ಪಿ ಹೇಳಿದ್ದೇನು? - Vistara News

ದೇಶ

Ghulam Nabi Azad: ಮುಸ್ಲಿಮರು ಹಿಂದುಗಳಾಗಿದ್ದರು ಎಂಬ ಗುಲಾಂ ನಬಿ ಹೇಳಿಕೆಗೆ ಬಜರಂಗದಳ, ವಿಎಚ್‌ಪಿ ಹೇಳಿದ್ದೇನು?

Ghulam Nabi Azad: ಭಾರತದಲ್ಲಿರುವ ಮುಸ್ಲಿಮರು ಮೊದಲು ಹಿಂದುಗಳಾಗಿದ್ದರು. ಅವರನ್ನು ಮತಾಂತರಗೊಳಿಸಲಾಗಿದೆ ಎಂದು ಗುಲಾಂ ನಬಿ ಆಜಾದ್‌ ಅವರು ಹೇಳಿದ್ದರು. ಅವರ ಹೇಳಿಕೆಯನ್ನು ಬಜರಂಗದಳ ಹಾಗೂ ವಿಎಚ್‌ಪಿ ಸ್ವಾಗತಿಸಿವೆ.

VISTARANEWS.COM


on

Ghulam Nabi Azad On Hindutva
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಹಿಂದುತ್ವ ಹಾಗೂ ಇಸ್ಲಾಂ ಕಾಲಘಟ್ಟ, ಮತಾಂತರದ ಕುರಿತು ಡೆಮಾಕ್ರಸಿ ಪ್ರೊಗ್ರೆಸ್ಸಿವ್‌ ಆಜಾದ್‌ ಪಕ್ಷದ ಮುಖ್ಯಸ್ಥ, ಕಾಂಗ್ರೆಸ್‌ ಮಾಜಿ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಅವರು ನೀಡಿದ ಹೇಳಿಕೆಯನ್ನು ಹಿಂದು ಸಂಘಟನೆಗಳಾದ ಬಜರಂಗದಳ (Bajrang Dal) ಹಾಗೂ ವಿಶ್ವ ಹಿಂದು ಪರಿಷತ್‌ (Vishwa Hindu Parishad) ಸ್ವಾಗತಿಸಿವೆ. “ಗುಲಾಂ ನಬಿ ಆಜಾದ್‌ ಅವರು ನೀಡಿದ ಹೇಳಿಕೆಯನ್ನು ಸ್ವಾಗತಿಸುತ್ತೇವೆ” ಎಂದು ಸಂಘಟನೆಗಳು ತಿಳಿಸಿವೆ.

“ಗುಲಾಂ ನಬಿ ಆಜಾದ್‌ ಅವರು ನೀಡಿದ ಹೇಳಿಕೆ ಸಮಂಜಸವಾಗಿದೆ. ಭಾರತದಲ್ಲಿದ್ದ ಹಿಂದುಗಳನ್ನು ಹೇಗೆ ಇಸ್ಲಾಂ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲಾಯಿತು ಎಂಬುದಕ್ಕೆ ಇವರ ಹೇಳಿಕೆ ಸಾಕ್ಷಿಯಾಗಿದೆ” ಎಂದು ಬಜರಂಗದಳ ರಾಷ್ಟ್ರೀಯ ಸಂಚಾಲಕ ನೀರಜ್‌ ದೌನೆರಿಯಾ ತಿಳಿಸಿದ್ದಾರೆ. ಇನ್ನು ವಿಎಚ್‌ಪಿ ಕೇಂದ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ವಿನಾಯಕರಾವ್‌ ದೇಶಪಾಂಡೆ ಅವರು ಕೂಡ ಗುಲಾಂ ನಬಿ ಆಜಾದ್‌ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. “ಭಾರತದ ಮುಸ್ಲಿಮರ ಮೂಲ ಹಿಂದುತ್ವವಾಗಿದೆ ಹಾಗೂ ಕಾಶ್ಮೀರ ಮುಸ್ಲಿಮರು ಮೊದಲು ಪಂಡಿತರಾಗಿದ್ದರು ಎಂಬ ಹೇಳಿಕೆಯನ್ನು ಸ್ವಾಗತಿಸುತ್ತೇವೆ” ಎಂದಿದ್ದಾರೆ.

ಗುಲಾಂ ನಬಿ ಆಜಾದ್‌ ಹೇಳಿದ್ದೇನು?

ಜಮ್ಮು-ಕಾಶ್ಮೀರದ ದೋಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, “ನಾವು ಹಿಂದುಗಳು, ಮುಸ್ಲಿಮರು, ದಲಿತರ ಹಾಗೂ ಕಾಶ್ಮೀರಿಗರಿಗಾಗಿ ರಾಜ್ಯವನ್ನು ನಿರ್ಮಿಸಿದ್ದೇವೆ. ಯಾರೂ ಹೊರಗಿನಿಂದ ಇಲ್ಲಿಗೆ ಬಂದಿಲ್ಲ. ಸಂಸತ್ತಿನಲ್ಲಿ ನಮ್ಮ ಸಂಸದರೊಬ್ಬರು ಕಾಶ್ಮೀರಕ್ಕೆ ಹೊರಗಿನಿಂದ ಬಂದವರ ಕುರಿತು ಮಾತನಾಡಿದರು. ಆದರೆ, ನಾನು ಅದನ್ನು ನಿರಾಕರಿಸಿದೆ. ಇಸ್ಲಾಂ ಕೇವಲ 1,500 ವರ್ಷದ ಇತಿಹಾಸ ಹೊಂದಿದೆ. ಆದರೆ, ಹಿಂದುತ್ವವು ಇದಕ್ಕಿಂತ ತುಂಬ ಹಳೆಯದು” ಎಂದು ಹೇಳಿದ್ದರು.

“ಕಾಶ್ಮೀರದಲ್ಲಿ 600 ವರ್ಷಗಳ ಹಿಂದೆ ಮುಸ್ಲಿಮರು ಎಲ್ಲಿದ್ದರು? ಕಣಿವೆಯಲ್ಲಿ ಇದ್ದವರೆಲ್ಲ ಕಾಶ್ಮೀರಿ ಪಂಡಿತರೇ ಆಗಿದ್ದರು. ಅಂದರೆ, ಈಗಿರುವ ಮುಸ್ಲಿಮರು ಮೊದಲು ಕಾಶ್ಮೀರಿ ಪಂಡಿತರೇ ಆಗಿದ್ದರು. ಹಾಗಾಗಿ, ಇಲ್ಲಿನ ಮುಸ್ಲಿಮರ ಮೂಲ ಹಿಂದು ಧರ್ಮವೇ ಆಗಿತ್ತು. ಹಿಂದು ಧರ್ಮದ ಆಧಾರದ ಮೇಲೆಯೇ ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರ ಇದೆ. ಹಾಗಾಗಿ, ನಮ್ಮ ಮೂಲ ಹಿಂದು ಧರ್ಮವೇ ಆಗಿದೆ” ಎಂದು ಗುಲಾಂ ನಬಿ ಆಜಾದ್‌ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Rahul Gandhi: ನರೇಂದ್ರ ಮೋದಿ ಪ್ರಧಾನಿಯಲ್ಲ, ಮಹಾರಾಜ ಎಂದ ರಾಹುಲ್ ಗಾಂಧಿ

Rahul Gandhi: ನಾನು ನಿಜವನ್ನೇ ಹೇಳುತ್ತಿದ್ದೇನೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಅಲ್ಲ ಬದಲಾಗಿ ಅವರು ರಾಜ. ಅವರಿಗೆ ಸಂಪುಟ, ಸಂಸತ್‌ ಅಥವಾ ಸಂವಿಧಾನ ಇದ್ಯಾವುದೂ ಸಂಬಂಧವೇ ಇಲ್ಲ. ಅವರು 21ನೇ ಶತಮಾನ ಮಹಾರಾಜ. ನಿಜವಾದ ಅಧಿಕಾರವನ್ನು ತಮ್ಮ ಕೈಯಲ್ಲಿಟ್ಟುಕೊಂಡಿರು ಒಂದಿಬ್ಬರು ಶ್ರೀಮಂತರ ಎದುರು ಅವರು ಮಹಾರಾಜ. ನಾನು ಪ್ರಧಾನಿ ಮೋದಿವರಿಗೆ ಚರ್ಚೆಗೆ ಬರುವಂತೆ ಬಹಿರಂಗ ಸವಾಲು ಎಸೆಯುತ್ತಿದ್ದೇನೆ ಎಂದು ರಾಹುಲ್‌ ಗಾಂಧಿ ಹೇಳಿದರು.

VISTARANEWS.COM


on

Rahul Gandhi
Koo

ಲಕ್ನೋ: ಲೋಕಸಭಾ ಚುನಾವಣೆಯ(Lok Sabha election 2024) ಪ್ರಚಾರದ ವೇಳೆ ನಾಯಕರ ನಡುವೆ ಪರಸ್ಪರ ಟೀಕಾ ಪ್ರಹಾರ, ವಾಗ್ದಾಳಿ ಬಿರುಸಿನಿಂದ ಸಾಗಿದೆ. ಇಷ್ಟು ದಿನ ತಮ್ಮನ್ನು ಶೆಹಜಾದೆ(ರಾಜಕುಮಾರ) ಎಂದು ಟೀಕಿಸುತ್ತಿದ್ದ ಪ್ರಧಾನಿ ನರೇಂದ್ರ(Narendra Modi)ಯವರನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ(Rahul Gandhi) ರಾಜ ಎಂದು ಕರೆದಿದ್ದಾರೆ. ಲಕ್ನೋದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಅಲ್ಲ.. ಅವರು ರಾಜ ಇದ್ದಂತೆ ಎಂದು ವ್ಯಂಗ್ಯವಾಡಿದ್ದಾರೆ

ನಾನು ನಿಜವನ್ನೇ ಹೇಳುತ್ತಿದ್ದೇನೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಅಲ್ಲ ಬದಲಾಗಿ ಅವರು ರಾಜ. ಅವರಿಗೆ ಸಂಪುಟ, ಸಂಸತ್‌ ಅಥವಾ ಸಂವಿಧಾನ ಇದ್ಯಾವುದೂ ಸಂಬಂಧವೇ ಇಲ್ಲ. ಅವರು 21ನೇ ಶತಮಾನ ಮಹಾರಾಜ. ನಿಜವಾದ ಅಧಿಕಾರವನ್ನು ತಮ್ಮ ಕೈಯಲ್ಲಿಟ್ಟುಕೊಂಡಿರು ಒಂದಿಬ್ಬರು ಶ್ರೀಮಂತರ ಎದುರು ಅವರು ಮಹಾರಾಜ. ನಾನು ಪ್ರಧಾನಿ ಮೋದಿವರಿಗೆ ಚರ್ಚೆಗೆ ಬರುವಂತೆ ಬಹಿರಂಗ ಸವಾಲು ಎಸೆಯುತ್ತಿದ್ದೇನೆ ಎಂದರು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 180 ಸ್ಥಾನಗಳನ್ನೂ ಪಡೆಯುವುದಿಲ್ಲ. ಅಲ್ಲದೇ ಈ ಬಾರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ ಎಂಬುದನ್ನು ನಾನು ಬೇಕಿದ್ದರೆ ಬರೆದು ಕೊಡುತ್ತೇನೆ ಎಂದ್ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ರಾಹುಲ್‌ ಗಾಂಧಿ ಹಾಗೂ ಅಖಿಲೇಶ್‌ ಯಾದವ್‌ ಅವರನ್ನು ರಾಜಕುಮಾರರು ಎಂದು ಟೀಕಿಸಿದ್ದರು. ತುಷ್ಠೀಕರಣ ರಾಜಕೀಯ ನಡೆಸುವ ಉದ್ದೇಶದಿಂದ ಇಬ್ಬರು ರಾಜಕುಮಾರರು ಒಗ್ಗೂಡಿದ್ದಾರೆ ಎಂದು ಅವರು ಹೇಳಿದ್ದರು.

ಕಾಂಗ್ರೆಸ್‌ ತಪ್ಪು ಮಾಡಿದೆ, ತಿದ್ದಿಕೊಳ್ಳುತ್ತೇವೆ

ಇದೇ ವೇಳೆ ಅವರು ಹಿಂದೆ ಕಾಂಗ್ರೆಸ್‌ ತಪ್ಪುಗಳು ಮಾಡಿವೆ. ಅದನ್ನು ತಿದ್ದಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿ ಬದಲಾವಣೆ ಬೇಕಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಬಹಳಷ್ಟು ಬದಲಾವಣೆಗಳನ್ನು ಅಳವಡಿಸಿಕೊಳ್ಳಲಿದೆ. ನಾನೊಬ್ಬ ಕಾಂಗ್ರೆಸ್ಸಿಗನಾಗಿ ಕಾಂಗ್ರೆಸ್‌ ಪಕ್ಷ ಕೂಡ ತಪ್ಪುಗಳನ್ನು ಮಾಡಿದೆ ಎಂದು ನಾನು ಹೇಳುತ್ತೇನೆ ಎಂದರು. ನಾನು ಅಧಿಕಾರಗಳ ನಡುವೆಯೇ ಹುಟ್ಟಿದವನು. ಆದರೂ ನನಗೆ ಅಧಿಕಾರದ ಬಗ್ಗೆ ಯಾವುದೇ ವ್ಯಾಮೋಹ ಇಲ್ಲ. ಇದು ಜನರಿಗೆ ಸಹಾಯ ಮಾಡಲು ಇರುವ ವ್ಯವಸ್ಥೆ ಅಷ್ಟೇ ಎಂದರು.

ಇದನ್ನೂ ಓದಿ: Prajwal Revanna case: ಪ್ರಜ್ವಲ್‌ ರೇವಣ್ಣ ವಿರುದ್ಧ ರೆಡ್‌ ಕಾರ್ನರ್ ಬ್ರಹ್ಮಾಸ್ತ್ರ; ಯಾವ ದೇಶದಲ್ಲಿದ್ದರೂ ಅರೆಸ್ಟ್‌ ಮಾಡಲು ಸಿದ್ಧತೆ?

Continue Reading

ದೇಶ

Narendra Modi: “ದಿವ್ಯಾಂಗ ಸಹೋದರಿಯರಿಗೆ ವ್ಯವಸ್ಥೆ ಮಾಡಿ.. ಅಲ್ಲಿವರೆಗೆ ಭಾಷಣ ಮುಂದುವರೆಸಲ್ಲ”; ಪ್ರಧಾನಿ ಮೋದಿ ವಿಡಿಯೋ ವೈರಲ್

Narendra Modi:ತೆಲಂಗಾಣದ ಮೆಹಬೂಬ್ ನಗರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಚೇತನ ಮಹಿಳೆಯರಿಗಾಗಿ ಮಾಡಿದ ಕಾರ್ಯ ಎಲ್ಲರ ಹೃದಯ ಗೆದ್ದಿದೆ. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮನ್ನು ಆಶೀರ್ವದಿಸಲು ಅಲ್ಲಿಗೆ ಬಂದಿದ್ದ ದಿವ್ಯಾಂಗ ಸಹೋದರಿಯರಿಗೆ ದಾರಿ ಮಾಡಿಕೊಡುವಂತೆ ನೆರೆದಿದ್ದ ಜನರಿಗೆ ಮನವಿ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ವೈರಲ್‌ ಆಗಿದೆ.

VISTARANEWS.COM


on

Narendra Modi
Koo

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ(Narendra Modi) ತಮ್ಮ ಚುನಾವಣಾ ಪ್ರಚಾರ(Lok Sabha Elction 2024)ದ ವೇಳೆ, ರ್ಯಾಲಿಗಳಲ್ಲಿ ಅದೆಷ್ಟು ಅಬ್ಬರದ ಭಾಷಣದಲ್ಲಿ ತೊಡಗಿದ್ದರೂ ಎದುರಿಗೆ ನೆರೆದಿರುವ ಜನರ ಮೇಲೆ ಪ್ರತ್ಯೇಕ ಗಮನ ಇದ್ದೇ ಇರುತ್ತದೆ. ಕೆಲವೊಮ್ಮೆ ಸಭಿಕರ ನಡುವೆ ಏನಾದರೂ ವಿಚಾರಗಳು ಕಂಡು ಬಂದಲ್ಲಿ ತಕ್ಷಣ ಅಲ್ಲೇ ಅದಕ್ಕೆ ಪ್ರತಿಕ್ರಿಯಿಸಿ ಗಮನ ಸೆಳೆದದ್ದೂ ಇದೆ. ಇದೀಗ ಮತ್ತೆ ಅಂತಹದ್ದೇ ಒಂದು ಘಟನೆ ತೆಲಂಗಾಣದಲ್ಲಿ ನಡೆದಿದೆ. ನೆಚ್ಚಿನ ನಾಯಕನ್ನು ಕಾಣಲೆಂದು ಬಂದಿದ್ದ ದಿವ್ಯಾಂಗ ಸಹೋದರಿಯರನ್ನು ವೇದಿಕೆ ಮೇಲಿದ್ದ ಪ್ರಧಾನಿ ಗಮನಿಸಿ ಅವರಿಗೆ ಕೂರಲು ಸರಿಯಾದ ವ್ಯವಸ್ಥೆ ಮಾಡಿಕೊಡುವಂತೆ ಕಾರ್ಯಕರ್ತರಿ(BJP Workers)ಗೆ ಸೂಚನೆ ನೀಡಿದ್ದಾರೆ.

ತೆಲಂಗಾಣದ ಮೆಹಬೂಬ್ ನಗರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಚೇತನ ಮಹಿಳೆಯರಿಗಾಗಿ ಮಾಡಿದ ಕಾರ್ಯ ಎಲ್ಲರ ಹೃದಯ ಗೆದ್ದಿದೆ. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮನ್ನು ಆಶೀರ್ವದಿಸಲು ಅಲ್ಲಿಗೆ ಬಂದಿದ್ದ ದಿವ್ಯಾಂಗ ಸಹೋದರಿಯರಿಗೆ ದಾರಿ ಮಾಡಿಕೊಡುವಂತೆ ನೆರೆದಿದ್ದ ಜನರಿಗೆ ಮನವಿ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ವೈರಲ್‌ ಆಗಿದೆ.

ಇದನ್ನೂ ಓದಿ:K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್‌

ದಿವ್ಯಾಂಗ ಸಹೋದರಿಯರು ನನ್ನನ್ನು ಆಶೀರ್ವದಿಸಲು ಬರುತ್ತಿದ್ದಾರೆ, ಅವರು ಮುಂದೆ ಬರಲಿ.ಈ ಮಹಿಳೆಯರಿಗೆ ಸರಿಯಾದ ವ್ಯವಸ್ಥೆ ಮಾಡುವವರೆಗೂ ತಾವು ಭಾಷಣವನ್ನ ಮುಂದುವರಿಸುವುದಿಲ್ಲ ಎಂದು ಪ್ರಧಾನಿ ಹೇಳಿದರು. ಅವರು ನೋವಿನಿಂದ ಬಳಲುತ್ತಿರುವುದನ್ನು ನಾನು ನೋಡಲಾರೆ, ದಯವಿಟ್ಟು ಅವರಿಗೆ ವ್ಯವಸ್ಥೆ ಮಾಡಿ” ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಆಗ ಅಲ್ಲಿ ನೆರದಿದ್ದ ಜನರು ವಿಶೇಷ ಚೇತನ ಮಹಿಳೆಯರನ್ನ ಎತ್ತಿಕೊಂಡು ಜನಸಮೂಹದ ಮುಂದಿನ ಸಾಲಿನಲ್ಲಿ ಕೂರಿಸಿದರು. ಬಳಿಕ ಪ್ರಧಾನಿ ಭಾಷಣ ಮುಂದುವರೆಸಿದರು. ಪ್ರಧಾನಿ ಮೋದಿಯವರ ಈ ಕಾರ್ಯಕ್ಕೆ ನೆರೆದಿದ್ದ ಸಾವಿರಾರು ಜನ ಚಪ್ಪಾಳೆ ಮೂಲಕ ಮೆಚ್ಚುಗೆ ಸೂಚಿಸಿದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್‌ ಆಗಿದ್ದು, ಅನೇಕ ಜನ ಪ್ರಶಂಸೆ ವ್ಯಕ್ತಪಡಿದ್ದಾರೆ. ಇನ್ನು ಕೆಲವರು ಇದು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವುದು ಎಂದು ಕಮೆಂಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ನಿನ್ನೆ ತೆಲಂಗಾಣದ ಹೈದರಾಬಾದ್‌ ಮತ್ತು ಮೆಹಬೂಬ್‌ ನಗರದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದರು. ಈ ವೇಳೆ ಮಾತನಾಡಿದ ಅವರು, ತೆಲಂಗಾಣದ ಜನರಿಗೆ ಈ ಚುನಾವಣೆ ದೇಶದ ಭವಿಷ್ಯ ನಿರ್ಧರಿಸುತ್ತದೆ ಎಂಬುದು ತಿಳಿದಿದೆ ಎಂದರು. ಇದೇ ವೇಳೆ ಅವರು ಕಾಂಗ್ರೆಸ್‌ ಮತ್ತು ಬಿಆರ್‌ ಎಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

Continue Reading

ದೇಶ

K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್‌

K.S. Rajanna:ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸಿದ ವಿಕಲಚೇತನ ಸಾಮಾಜಿಕ ಕಾರ್ಯಕರ್ತ ಕೆ.ಎಸ್.ರಾಜಣ್ಣ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಲು ವೇದಿಕೆಗೆ ತೆರಳುವ ಮುನ್ನ ರಾಜಣ್ಣ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಬಂದು ಅವರ ಕೈ ಕುಲುಕಿ, ಮಾತನಾಡಿದರು.

ರಾಜಣ್ಣ ನಂತರ ಪಕ್ಕದಲ್ಲೇ ಕುಳಿತಿದ್ದ ಅಮಿತ್‌ ಅವರ ಜೊತೆಯೂ ಮಾತನಾಡಿ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಸನದ ಕಡೆಗೆ ಸಾಗಿದರು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ರಾಷ್ಟ್ರಪತಿಗಳಿಗೆ ತಲೆಬಾಗಿ ನಮಸ್ಕರಿಸಿದರು.

VISTARANEWS.COM


on

K S Rajanna
Koo

ನವದೆಹಲಿ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಮನೋಬಲ, ಆತ್ಮವಿಶ್ವಾಸ, ದೃಢವಾದ ನಂಬಿಕೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ. ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಈ ಸಾಲಿನ ನಾಗರಿಕ ಪದ್ಮ ಪ್ರಶಸ್ತಿ(Padma Award)ಯನ್ನು ಪ್ರದಾನ ಮಾಡಿದರು. ಅಲ್ಲಿ ಪದ್ಮಶ್ರೀ ಪ್ರಶಸ್ತಿ(Padmashri Award) ಸ್ವೀಕರಿಸಲು ಬಂದಿದ್ದ ಈ ವ್ಯಕ್ತಿಯನ್ನು ಕಂಡು ಒಂದು ಕ್ಷಣ ಅಲ್ಲಿದ್ದ ಗಣ್ಯರು ಭಾವುಕರಾದ್ದದ್ದು ನಿಜ. ಬಾಲ್ಯದಲ್ಲಿ ಪೋಲಿಯೋದಿಂದ ಎರಡೂ ಕೈ ಕಾಲುಗಳನ್ನು ಕಳೆದುಕೊಂಡರೂ ಛಲ ಬಿಡದೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಉದ್ಯಮಿಯಾಗಿ ಹಲವು ಅಂಗವಿಕಲರಿಗೆ ಉದ್ಯೋಗ ನೀಡಿ, ಪ್ಯಾರಾ-ಒಲಂಪಿಕ್ಸ್ ನಲ್ಲಿ ಪಾಲ್ಗೊಂಡು ದೇಶಕ್ಕೆ ಚಿನ್ನದ ಪದಕದ ಗರಿಯನ್ನೂ ತಂದಿದ್ದ ಈ ವ್ಯಕ್ತಿ ಬೇರೆ ಯಾರೂ ಅಲ್ಲ ಹೆಮ್ಮೆಯ ಕನ್ನಡಿಗ ಕೆ.ಎಸ್.ರಾಜಣ್ಣ(K.S. Rajanna)

ಗುರುವಾರ ನಡೆದ ಪದ್ಮ ಪ್ರಶಶ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸಿದ ವಿಕಲಚೇತನ ಸಾಮಾಜಿಕ ಕಾರ್ಯಕರ್ತ ಕೆ.ಎಸ್.ರಾಜಣ್ಣ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಲು ವೇದಿಕೆಗೆ ತೆರಳುವ ಮುನ್ನ ರಾಜಣ್ಣ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಬಂದು ಅವರ ಕೈ ಕುಲುಕಿ, ಮಾತನಾಡಿದರು.

ರಾಜಣ್ಣ ನಂತರ ಪಕ್ಕದಲ್ಲೇ ಕುಳಿತಿದ್ದ ಅಮಿತ್‌ ಅವರ ಜೊತೆಯೂ ಮಾತನಾಡಿ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಸನದ ಕಡೆಗೆ ಸಾಗಿದರು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ರಾಷ್ಟ್ರಪತಿಗಳಿಗೆ ತಲೆಬಾಗಿ ನಮಸ್ಕರಿಸಿದರು. ಇದಾದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಗೌರವ ಸ್ವೀಕರಿಸಿದರು. ಈ ವೇಳೆ ಅಲ್ಲಿ ನೆರೆದಿದ್ದ ಗಣ್ಯರು ಚಪ್ಪಾಳೆ ಹೊಡೆದು ಅವರನ್ನು ಅಭಿನಂದಿಸಿದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿದ್ದು, ನೋಡುಗರು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜಣ್ಣ ಹಿನ್ನೆಲೆ ಏನು?

ಕೇವಲ 11 ತಿಂಗಳ ಮಗುವಾಗಿದ್ದಾಗ ಮಹಾಮಾರಿ ಪೋಲಿಯೋದಿಂದ ತಮ್ಮ ಎರಡೂ ಕೈಗಳು ಮತ್ತು ಕಾಲುಗಳನ್ನು ಕಳೆದುಕೊಂಡಿದ್ದ ರಾಜಣ್ಣ, ತಮ್ಮ ಕೊರತೆಗಳ ಬಗ್ಗೆ ಕುಗ್ಗದೇ ಅದನ್ನೇ ಸವಾಲಾಗಿ ಸ್ವೀಕರಿಸಿ ಮೆಕ್ಯಾನಿಕಲ್ ಎಂಜಿನಿಯರ್ ಪದವಿ ಪಡೆದ ಅವರು ಉದ್ಯಮಿಯಾದರು. ತಮ್ಮ ರೀತಿಯೇ ಸಮಾಜದಲ್ಲಿ ಅಂಗವೈಕಲ್ಯಕ್ಕೆ ತುತ್ತಾಗಿ ಸಂಕಷ್ಟ ಎದುರಿಸುತ್ತಿರವ ಅನೇಕರಿಗೆ ಕೆಲಸ ನೀಡುವ ಮೂಲಕ ವಿಭಿನ್ನರಾಗಿ ನಿಂತವರು ರಾಜಣ್ಣ. 2002ರ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ರಾಜಣ್ಣ ಅವರು ಡಿಸ್ಕಸ್ ಥ್ರೋದಲ್ಲಿ ಚಿನ್ನ ಹಾಗೂ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದರು.

ಇದನ್ನೂ ಓದಿ: CAA: ಕೇಂದ್ರ ಸೂಚನೆ ಕೊಟ್ಟ ಕೂಡಲೇ ಮಧ್ಯಪ್ರದೇಶದಲ್ಲಿ ಸಿಎಎ ಜಾರಿ; ಸಿಎಂ ಮೋಹನ್‌ ಯಾದವ್‌

ಸಕ್ಕರೆ ಸವಿದಷ್ಟೇ ಖುಷಿಯಾಯ್ತು ಎಂದ ರಾಜಣ್ಣ

ಇನ್ನು ಪದ್ಮ ಪ್ರಶಸ್ತಿ ಪಡೆದಿರುವ ಬಗ್ಗೆ ರಾಜಣ್ಣ, ಮಂಡ್ಯ ಜಿಲ್ಲೆ ಮೂಲದವನಾದ ನನಗೆ ಈ ಪ್ರಶಸ್ತಿಯು ಸಕ್ಕರೆ ತಿಂದಂತೆ ಸಿಹಿ ಎನಿಸುತ್ತಿದೆ. ದೈಹಿಕ ನ್ಯೂನತೆ ಹೊಂದಿರುವ ವ್ಯಕ್ತಿಗಳಿಗೆ ರಾಜಕೀಯ ಮೀಸಲಾತಿ ಇಲ್ಲ. ಈ ಪ್ರಶಸ್ತಿಯು ವಿಧಾನ ಪರಿಷತ್ ಅಥವಾ ರಾಜ್ಯಸಭೆಗೆ ಸದಸ್ಯರಾಗಿ ಅಂಗವೈಕಲ್ಯವುಳ್ಳ ವ್ಯಕ್ತಿಯನ್ನು ನೇಮಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರೇರಣೆ ನೀಡಲಿದೆ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

Continue Reading

ದೇಶ

CAA: ಕೇಂದ್ರ ಸೂಚನೆ ಕೊಟ್ಟ ಕೂಡಲೇ ಮಧ್ಯಪ್ರದೇಶದಲ್ಲಿ ಸಿಎಎ ಜಾರಿ; ಸಿಎಂ ಮೋಹನ್‌ ಯಾದವ್‌

CAA:ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ದೇಶ ಒಂದೇ ಆಗಿದೆ. ನಾವು ಶೇ.100ರಷ್ಟು ಸಿದ್ದರಾಗಿದ್ದೇವೆ. ಕೇಂದ್ರದಿಂದ ಸೂಚನೆ ಬರುತ್ತಿದ್ದಂತೆ ರಾಜ್ಯದಲ್ಲಿ ಸಿಎಎ ಅನುಷ್ಠಾನಗೊಳಿಸಲಾಗುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ

VISTARANEWS.COM


on

CAA
Koo

ಮಧ್ಯಪ್ರದೇಶ: ಲೋಕಸಭಾ ಚುನಾವಣೆ(Lok Sabha Election 2024)ಯ ರಂಗೇರಿದೆ. ಇದರ ನಡುವೆಯೇ ಬಹುಚರ್ಚಿತ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತೆ ಸದ್ದು ಮಾಡುತ್ತಿದೆ. ದೇಶಾದ್ಯಂತ ಚುನಾವಣೆಗ ಅಂತ್ಯಗೊಳುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಈ ಕಾಯ್ದೆಯನ್ನು ಅನುಷ್ಠಾನಗೊಳಿಸಿ, ಪೌರತ್ವ ನೀಡುವ ಪ್ರಕ್ರಿಯೆ ಆರಂಭಿಸಬೇಕೆಂದು ಕೇಂದ್ರ ನಿರ್ಧರಿಸಿದೆ. ಇದಕ್ಕೆ ಪೂರಕವೆಂಬಂತೆ ಇದೀಗ ಮಧ್ಯಪ್ರದೇಶ(Madhya Pradesh) ಮುಖ್ಯಮಂತ್ರಿ ಮೋಹನ್‌ ಯಾದವ್‌(Mohan Yadav) ಕೇಂದ್ರ ಸೂಚನೆ ನೀಡಿದ ಕೂಡಲೇ ರಾಜ್ಯದಲ್ಲಿ ಸಿಎಎ ಅನುಷ್ಠಾನಗೊಳಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.

ಉಜ್ಜೈನ್‌ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿ ನಡೆಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ದೇಶ ಒಂದೇ ಆಗಿದೆ. ನಾವು ಶೇ.100ರಷ್ಟು ಸಿದ್ದರಾಗಿದ್ದೇವೆ. ಕೇಂದ್ರದಿಂದ ಸೂಚನೆ ಬರುತ್ತಿದ್ದಂತೆ ರಾಜ್ಯದಲ್ಲಿ ಸಿಎಎ ಅನುಷ್ಠಾನಗೊಳಿಸಲಾಗುತ್ತದೆ. ಈ ಬಾರಿ ರಾಜ್ಯದಲ್ಲಿ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಳ್ಳಲಿದೆ ಎಂಬುದರಲ್ಲಿ ಸಂಶಯ ಇಲ್ಲ. ಪ್ರಧಾನಿ ಮೋದಿ ಮತ್ತು ಬಿಜೆಪಿ ಪರ ಜನರು ಅತಿ ಹೆಚ್ಚು ಒಲವನ್ನು ಇಟ್ಟುಕೊಂಡಿದ್ದಾರೆ. ಇನ್ನು ಮುಸ್ಲಿಮರು ಮತ್ತು ಆದಿವಾಸಿಗಳು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬುದು ತಪ್ಪು ಕಲ್ಪನೆ ಎಂದು ಹೇಳಿದ್ದಾರೆ.

ಇನ್ನು ಪಾಕಿಸ್ತಾನದ ಬಗ್ಗೆ ಗೌರವ ಇರಬೇಕೆಂದು ಹೇಳಿಕೆ ನೀಡಿದ್ದ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ ಮುಖಂಡ ಮಣಿ ಶಂಕರ್‌ ಅಯ್ಯರ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತದ ಶಕ್ತಿಗಿಂತ ಹೆಚ್ಚು ಪಾಕಿಸ್ತಾನದ ಮೇಲೆಯೇ ಕಾಂಗ್ರೆಸ್‌ನವರಿಗೆ ನಂಬಿಕೆ ಇದೆ. ಇಂಧೋರ್‌ನಲ್ಲಿ ಅವರ ಅಭ್ಯರ್ಥಿ ಬಿಜೆಪಿ ಸೇರ್ಪಡೆಗೊಂಡ ಬಳಿಕ ಕಂಗೆಟ್ಟಿರುವ ಕಾಂಗ್ರೆಸ್‌ ನೋಟಾ ಚಲಾಯಿಸುವಂತೆ ಜನರಿಗೆ ಒತ್ತಾಯಿಸುತ್ತಿದೆ. ಇದು ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದ ಮೇಲೆ ಎಷ್ಟು ನಂಬಿಕೆ ಇದೆ ಎಂಬುದನ್ನು ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಅಡಿಯಲ್ಲಿ ಮೊದಲ ಪೌರತ್ವವನ್ನು ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದರು. ಸಿಎಎ ಅಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ನಿಯಮಗಳ ಪ್ರಕಾರ ಪರಿಶೀಲನೆ ನಡೆಯುತ್ತಿದೆ ಎಂದು ಅಮಿತ್ ಶಾ ನ್ಯೂಸ್ 18 ಗೆ ನೀಡಿರುವ ಸಂದರ್ಶನದಲ್ಲಿ ಲೋಕಸಭಾ ಚುನಾವಣೆ ಕೊನೆಯ ಹಂತದ ಮೊದಲು, ಪೌರತ್ವ ನೀಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:Cyber crime: ದೇಶಾದ್ಯಂತ 28,000ಕ್ಕೂ ಹೆಚ್ಚು ಮೊಬೈಲ್‌ ಫೋನ್‌ಗಳು ಬ್ಲಾಕ್‌!

ಏನಿದು ಪೌರತ್ವ ತಿದ್ದುಪಡಿ ಕಾಯ್ದೆ ?

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಾರ್ಚ್‌ನಲ್ಲಿ ಸಿಎಎ ಅನ್ನು ಜಾರಿಗೆ ತಂದಿತು. 2014ರ ಡಿಸೆಂಬರ್ 31ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಬಿಜೆಪಿ ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಸಿಎಎಯನ್ನು 2019ರ ಡಿಸೆಂಬರ್ 11ರಂದು ಸಂಸತ್ತು ಅಂಗೀಕರಿಸಿತು. ಅದೇ ವರ್ಷದ ಡಿಸೆಂಬರ್ 12ರಂದು ಅಧಿಸೂಚನೆ ಹೊರಡಿಸಲಾಯಿತು. ಆದಾಗ್ಯೂ, ನಿಯಮಗಳನ್ನು ಸೂಚಿಸದ ಕಾರಣ ಕಾಯ್ದೆಯನ್ನು ಜಾರಿಗೆ ತರಲು ತಡವಾಯಿತು.

.

Continue Reading
Advertisement
SSLC Student missing In Kopala
ಕೊಪ್ಪಳ6 mins ago

SSLC Student Missing : ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌ ಆದ ಬಾಲಕ ನಾಪತ್ತೆ!

Rahul Gandhi
ದೇಶ13 mins ago

Rahul Gandhi: ನರೇಂದ್ರ ಮೋದಿ ಪ್ರಧಾನಿಯಲ್ಲ, ಮಹಾರಾಜ ಎಂದ ರಾಹುಲ್ ಗಾಂಧಿ

Murder Case in Bengaluru
ಬೆಂಗಳೂರು24 mins ago

Murder case : ಕೊಟ್ಟ ಹಣ ಕೇಳಿದ್ದಕ್ಕೆ ಗೆಳೆಯನನ್ನೇ ಕೊಂದಿದ್ದ ದ್ರೋಹಿ ಅರೆಸ್ಟ್‌

Prajwal Revanna Case
ಕರ್ನಾಟಕ39 mins ago

Prajwal Revanna Case: ಪ್ರಜ್ವಲ್ ರೇವಣ್ಣ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ!

Food Poisoning
ಚಿತ್ರದುರ್ಗ53 mins ago

Food Poisoning: ಮದುವೆ ಮನೆ ಊಟ ತಿಂದವರಿಗೆ ವಾಂತಿ, ಭೇದಿ; ನೂರಾರು ಮಂದಿ ಅಸ್ವಸ್ಥ

Gold Rate Today
ಕರ್ನಾಟಕ1 hour ago

Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

Heavy Rain
ಕರ್ನಾಟಕ1 hour ago

Heavy Rain: ಧಾರಾಕಾರ ಮಳೆಯಿಂದ ಮನೆಗೆ ನುಗ್ಗಿದ ನೀರು; ಮರ ಉರುಳಿ ವಾಹನಗಳು ಜಖಂ

Murder case in Bengaluru rural
ಬೆಂಗಳೂರು ಗ್ರಾಮಾಂತರ1 hour ago

Murder case : ತಡರಾತ್ರಿ ಹರಿದ ನೆತ್ತರು; ಕತ್ತು ಸೀಳಿ ಯುವಕನ ಬರ್ಬರ ಹತ್ಯೆ

Narendra Modi
ದೇಶ2 hours ago

Narendra Modi: “ದಿವ್ಯಾಂಗ ಸಹೋದರಿಯರಿಗೆ ವ್ಯವಸ್ಥೆ ಮಾಡಿ.. ಅಲ್ಲಿವರೆಗೆ ಭಾಷಣ ಮುಂದುವರೆಸಲ್ಲ”; ಪ್ರಧಾನಿ ಮೋದಿ ವಿಡಿಯೋ ವೈರಲ್

Prajwal Revanna Case
ಕರ್ನಾಟಕ2 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಎಸ್‌ಐಟಿಯ ವಿಶೇಷ ತಂಡ ರಚನೆ; ಶೀಘ್ರ ರೆಡ್‌ ಕಾರ್ನರ್ ನೋಟಿಸ್‌ ಜಾರಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ22 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ23 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ1 day ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ1 day ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ2 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ2 days ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

ಟ್ರೆಂಡಿಂಗ್‌