Talwar Movie : ಧರ್ಮ  ಕೈಯಲ್ಲಿ ತಲ್ವಾರ್; ನಾಯಕ್ ನಹೀ ಖಳ್ ನಾಯಕ್ ಹೂಂ ಮೈ ಅಂದ್ರು ಕ್ಯಾಟ್ಬರೀಸ್! ಇದು U/A ಸಿನಿಮಾ - Vistara News

Latest

Talwar Movie : ಧರ್ಮ  ಕೈಯಲ್ಲಿ ತಲ್ವಾರ್; ನಾಯಕ್ ನಹೀ ಖಳ್ ನಾಯಕ್ ಹೂಂ ಮೈ ಅಂದ್ರು ಕ್ಯಾಟ್ಬರೀಸ್! ಇದು U/A ಸಿನಿಮಾ

Talwar Movie : ಧರ್ಮ ಕೀರ್ತಿರಾಜ್‌ಗೆ ಹೊಸ ಇಮೇಜ್‌ ನೀಡಬಲ್ಲ ಸಿನಿಮಾ ತಲ್ವಾರ್‌ಗೆ ಸೆನ್ಸಾರ್‌ ಮಂಡಳಿ U/A ಸರ್ಟಿಫಿಕೆಟ್‌ ನೀಡಿದೆ. ನಾಲ್ಕು ಒಳ್ಳೆಯ ಹಾಡುಗಳನ್ನು ಹೊಂದಿರುವ ಈ ಗ್ಯಾಂಗ್‌ಸ್ಟರ್‌ ಸಿನಿಮಾದ ಟೀಸರ್‌ ಸದ್ಯವೇ ಬಿಡುಗಡೆಯಾಗಲಿದೆ. ಚಿತ್ರದ ಇನ್ನೂ ಹಲವು ವಿಶೇಷ ಸಂಗತಿಗಳು ಇಲ್ಲಿವೆ.

VISTARANEWS.COM


on

Dharma Keerthiraj in Talwar Cinema
ಧರ್ಮ ಚಿತ್ರದಲ್ಲಿ ವಿಲನ್‌ ಆಗಿ ಧರ್ಮ ಕೀರ್ತಿರಾಜ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಧರ್ಮ ಕೀರ್ತಿರಾಜ್ (Dharma Keerthiraj) ಹಾಗೂ ಅದಿತಿ (Adithi) ಅಭಿನಯದ ತಲ್ವಾರ್ ಚಿತ್ರ (Talwar Movie) ವೀಕ್ಷಿಸಿದ ಸೆನ್ಸಾರ್ ಮಂಡಳಿ (Censor Board) ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ (U/A Certificate) ನೀಡಿದೆ. ಇದೊಂದು ವಿಭಿನ್ನ ರೌಡಿಸಂ ಕಥಾಹಂದರ ಇರುವ ಸಿನಿಮಾ. ಈ ಚಿತ್ರದಲ್ಲಿ  ಕ್ಯಾಟ್ ಬರೀಸ್ ಎಂದೇ ಕರೆಸಿಕೊಳ್ಳುವ ಧರ್ಮ ಕೀರ್ತಿರಾಜ್ ಖಳನಟನ  ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧರ್ಮ ಕೀರ್ತಿರಾಜ್ ಅವರಿಗೂ ಈ ಸಿನಿಮಾದಿಂದ ಹೊಸ ಇಮೇಜ್ ಸಿಗುತ್ತದೆ ಎಂಬ ಭರವಸೆ ಇದೆ.

Dharma in Talwar Cinema

ಕಥೆ, ಚಿತ್ರಕಥೆ  ಸಂಭಾಷಣೆ ಬರೆದು ರಾಘವ ಮುರಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ `ಮುಮ್ತಾಜ್’ ಚಿತ್ರ ನಿರ್ದೇಶಿಸಿದ್ದ ರಾಘವ ಮುರಳಿ ಮತ್ತು ಧರ್ಮ ಕೀರ್ತಿರಾಜ್ ಕಾಂಬಿನೇಷನ್‌ನ ಎರಡನೇ ಸಿನಿಮಾ ಇದು.

Talwar Movie
ತಲ್ವಾರ್‌ ಚಿತ್ರದ ವಿಶಿಷ್ಟ ಪೋಸ್ಟರ್‌

ನಿರ್ಮಾಪಕರೇ ಕ್ಯಾಮೆರಾಮ್ಯಾನ್!

ಈ ಚಿತ್ರ ಟಚ್ ಸ್ಟೋನ್ ಪಿಕ್ಚರ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದು, ಸುರ್ನಳ್ಳಿ ಜಯರಾಮ್ ಅರ್ಪಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಬೈರಸಂದ್ರ ಬಂಡವಾಳ ಹಾಕಿದ್ದಾರೆ, ಶ್ರೀನಗರ ಕಿಟ್ಟಿ ಅಭಿನಯದ ಬಹುಪರಾಕ್ ಚಿತ್ರಕ್ಕೆ  ಸಹ ನಿರ್ಮಾಪಕರಾಗಿದ್ದ ಇವರು ಈ ಚಿತ್ರವನ್ನು ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಇವರು ಅನುಭವ ಇರುವ ಛಾಯಾಗ್ರಾಹಕರು ಆಗಿರುವುದರಿಂದ ಈ ಚಿತ್ರಕ್ಕೆ ತಾವೇ ಕ್ಯಾಮೆರಾಮ್ಯಾನ್ ಆಗಿ ತಮ್ಮ ಕೈ ಚಳಕ ತೋರಿಸಿರುವುದು ಮತ್ತೊಂದು ವಿಶೇಷ.‌

Dharma Keerthiraj
ತಲ್ವಾರ್‌ ಚಿತ್ರದಲ್ಲಿ ಧರ್ಮ ಕೀರ್ತಿರಾಜ್‌ ಸ್ಟೈಲಿಶ್‌ ಲುಕ್‌

ನಾಲ್ಕು ಹಾಡು, ಐದು ಭರ್ಜರಿ ಫೈಟ್‌; ಹಾಡುಗಳಿಗೆ ಆಗಲೇ ಭಾರಿ ಬೇಡಿಕೆ

ಕೆ.ಬಿ. ಪ್ರವೀಣ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರದ ಹಾಡುಗಳ ಹಕ್ಕುಗಳನ್ನು ಈಗಾಗಲೇ ಸರಿಗಮ ಆಡಿಯೋ ಕಂಪನಿ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಈ ಚಿತ್ರದಲ್ಲಿ 5 ಭರ್ಜರಿ ಸಾಹಸ ದೃಶ್ಯಗಳಿವೆ.  ವಿನೋದ್, ಡ್ಯಾನಿ ಮತ್ತು ಕುಂಫು ಚಂದ್ರು ಅವರುಗಳು ಸಾಹಸ ನಿರ್ದೇಶನ ಮಾಡಿದ್ದಾರೆ.

Dharma and Adithi
ಹೀರೊಯಿನ್‌ ಅದಿತಿ ಜತೆ ಧರ್ಮ

ರೌಡಿಸಂ ಚಿತ್ರಕ್ಕೆ ಎಮೋಷನಲ್‌ ಟಚ್‌

ಇದೊಂದು ರೌಡಿಸಂ ಚಿತ್ರವಾದರೂ ಎಮೋಷನಲ್‌ ಟಚ್‌ ಇದೆ. ಹೀಗಾಗಿ ಎಲ್ಲರನ್ನೂ ಟಚ್‌ ಮಾಡುತ್ತದೆ ಎನ್ನುವುದು ಸಿನಿಮಾ ಟೀಮ್‌ ಮಾತು. ‘ರೋಜಾ ಹಿಡಿದು ಲವ್ ಮಾಡಿದ್ರೆ ಪ್ರೀತಿಸಿದ ಇಬ್ಬರೂ ನೋವು ಪಡ್ತಾರೆ. ಆದರೆ ಲಾಂಗ್ ಹಿಡ್ಕೊಂಡು ಜೀವನ ಮಾಡಿದ್ರೆ ಆ ಲಾಂಗ್‌ನಿಂದ ಅದೆಷ್ಟೋ ಫ್ಯಾಮಿಲಿಗಳು ಹಾಳಾಗ್ತವೆʼʼ ಎನ್ನೋ ಸಂದೇಶವೂ ಚಿತ್ರದಲ್ಲಿದೆಯಂತೆ.

ಸದ್ಯ ಯು/ಎ  ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರ ರಿಲೀಸ್ ಆಗಲು ತಯಾರಿ ನಡೆಸಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ  ಟೀಸರ್ ರಿಲೀಸ್ ಬಿಡುಗಡೆಯಾಗಲಿದೆ.

Dharma Keerthiraj in talwar

ತಲ್ವಾರ್‌ ಸಿನಿಮಾದಲ್ಲಿ ಸ್ಪೆಷಲ್‌ ಥಿಂಗ್ಸ್‌!

  1. ಮಿನಿ ದರ್ಶನ್‌ ಅವಿನಾಶ್‌ಗೆ ಪಾತ್ರ: ಚಿತ್ರದಲ್ಲಿ ಮಜಾಭಾರತ ಖ್ಯಾತಿಯ ಮಿನಿ ದರ್ಶನ್ ಎಂದೇ ಕರೆಸಿಕೊಳ್ಳುವ ಅವಿನಾಶ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಪಡೆಯುತ್ತಿರುವ ಅವಿನಾಶ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
  2. ರೌಡಿ ಕಲ್ಕಿಯಾಗಿ ಜೆಕೆ: ಚಿತ್ರ ವಿಶೇಷ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ (JK) ಕಾಣಿಸಿಕೊಂಡಿದ್ದಾರೆ. ಇವರು ಮಂಗಳೂರಿನ ರೌಡಿ ಕಲ್ಕಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: Roopesh Shetty : ರೂಪೇಶ್ ಶೆಟ್ಟಿಗೆ ಜೋಡಿಯಾಗಿ ಎಂಟ್ರಿ ಕೊಟ್ಟ ಗಿಚ್ಚಿ ಗಿಲಿಗಿಲಿ ಜಾಹ್ನವಿ

Dharma Keerthiraj

ಧರ್ಮ ಕೀರ್ತಿರಾಜ್‌ಗೆ ಹೊಸ ಇಮೇಜ್‌

ನವಗ್ರಹ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಧರ್ಮ ಕೀರ್ತಿರಾಜ್‌ಗೆ ಮುಮ್ತಾಜ್‌, ಓ ಮನಸೇ, ಖಡಕ್‌, ಚಾಣಾಕ್ಷ, ಬಿಂದಾಸ್‌ ಗೂಗ್ಲಿ ಮೊದಲಾದ ಚಿತ್ರಗಳ ಮೂಲಕ ತನ್ನ ಪ್ರತಿಭೆಯನ್ನು ಮೆರೆದಿದ್ದಾರೆ. ಮುಮ್ತಾಜ್‌ನಂಥ ಸಿನಿಮಾ ಮಾಡಿದ ರಾಘವ ಮುರಳಿ ಜತೆ ಇದೀಗ ತಲ್ವಾರ್‌ ಹಿಡಿದು ಬರುತ್ತಿರುವ ಧರ್ಮಗೆ ಈ ಸಿನಿಮಾ ಹೊಸ ಇಮೇಜ್‌ ತಂದು ಕೊಡಲಿದೆ ಎನ್ನುತ್ತಿದೆ ಚಿತ್ರತಂಡ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Nutrition Alert: ಎಳನೀರು ಕುಡಿಯುವುದರಿಂದಲೂ ನಮ್ಮ ದೇಹಕ್ಕೆ ಸೈಡ್‌ ಎಫೆಕ್ಟ್‌ ಇದೆಯೆ?

ಒಂದು ಕಪ್ ಎಳನೀರಿನಲ್ಲಿ ಎಷ್ಟು ಪೋಷ್ಟಿಕಾಂಶ ಇದೆ ಗೊತ್ತೇ? ಎಳನೀರು ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನಗಳಿವೆ ಎಂಬುದು ತಿಳಿದಿದೆಯೇ ? ಹೆಚ್ಚು ಎಳನೀರು ಸೇವನೆ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬಿರುವುದು ಎನ್ನುವ ಕುರಿತು ಮಾಹಿತಿ (Nutrition Alert) ಇಲ್ಲಿದೆ.

VISTARANEWS.COM


on

By

Nutrition Alert
Koo

ವ್ಯಾಯಾಮದ ಬಳಿಕ ಸುಸ್ತಾಗಿದ್ದೀರಾ, ಕೂಡಲೇ ರಿಫ್ರೆಶ್ (refreshing beverage) ಆಗಬೇಕು ಎಂದುಕೊಂಡು ಅತ್ಯಧಿಕ ಪೌಷ್ಠಿಕಾಂಶವುಳ್ಳ (Nutrition Alert) ನೈಸರ್ಗಿಕವಾದ ದಾರಿಯನ್ನು ಹುಡುಕುತ್ತಿರುವಾಗ ನೆನಪಿಗೆ ಬರುವುದು ತೆಂಗಿನ ನೀರು (coconut water). ಎಳೆಯ ಹಸಿರು ತೆಂಗಿನಕಾಯಿಗಳಿಂದ ಪಡೆದ ಈ ಪಾನೀಯವು ಇತ್ತೀಚಿನ ವರ್ಷಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ.

ರುಚಿಕರವಾದ ತೆಂಗಿನ ನೀರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಎಲೆಕ್ಟ್ರೋಲೈಟ್‌ಗಳನ್ನು ಮರುಪೂರಣಗೊಳಿಸುವುದರಿಂದ ಹಿಡಿದು ಜೀರ್ಣಕ್ರಿಯೆಗೆ ಸಹಾಯ ಮಾಡುವವರೆಗೆ ಈ ನೈಸರ್ಗಿಕ ಮೂಲವು ದೇಹಕ್ಕೆ ಬೇಕಾದ ಎಲ್ಲ ಶಕ್ತಿಯನ್ನು ತುಂಬಿಸುವ ಮೂಲವಾಗಿದೆ. ಬೇಸಿಗೆಯ ತಿಂಗಳುಗಳಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ತೆಂಗಿನ ನೀರು ಅತ್ಯುತ್ತಮ ಆಯ್ಕೆಯಾಗಿದೆ. ತೆಂಗಿನ ನೀರಿನಲ್ಲಿರುವ ಎಲೆಕ್ಟ್ರೋಲೈಟ್ ಅಂಶವು ಬೆವರುವಿಕೆಯ ಮೂಲಕ ಕಳೆದುಹೋದದ್ದನ್ನು ಪುನಃ ತುಂಬಲು ಸಹಾಯ ಮಾಡುತ್ತದೆ. ಇದು ಹೊರಾಂಗಣ ಚಟುವಟಿಕೆಗಳ ಅನಂತರ ಅಥವಾ ಬಿಸಿ ವಾತಾವರಣದಲ್ಲಿ ವ್ಯಾಯಾಮದ ಬಳಿಕ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಎಳನೀರಿನಲ್ಲಿರುವ ಪೌಷ್ಟಿಕಾಂಶ ಏನೇನು?

240 ಮಿಲಿ (ಒಂದು ಕಪ್) ಎಳನೀರಿನಲ್ಲಿ ಕ್ಯಾಲೋರಿಗಳು ಸುಮಾರು 45 ಕೆ.ಕೆ.ಎಲ್, ಕಾರ್ಬೋಹೈಡ್ರೇಟ್ ಗಳು ಸುಮಾರು 9 ಗ್ರಾಂ, ಸಕ್ಕರೆಗಳು ಪ್ರಾಥಮಿಕವಾಗಿ ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್ ಪ್ರೋಟೀನ್ 1 ಗ್ರಾಂಗಿಂತ ಕಡಿಮೆ, ಕೊಬ್ಬು ಅತ್ಯಲ್ಪ, ಸಾಮಾನ್ಯವಾಗಿ 1 ಗ್ರಾಂಗಿಂತ ಕಡಿಮೆ ಸೋಡಿಯಂ ಸುಮಾರು 45 ಮಿಗ್ರಾಂ, ಪೊಟ್ಯಾಸಿಯಮ್ ಸರಿಸುಮಾರು 600 ಮಿಗ್ರಾಂ ಅನ್ನು ಒಳಗೊಂಡಿದೆ. ಸೂಕ್ಷ್ಮ ಪೋಷಕಾಂಶಗಳು, ಸಣ್ಣ ಪ್ರಮಾಣದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ವಿಟಮಿನ್ ಸಿ ಅನ್ನು ಎಳನೀರು ಹೊಂದಿರುತ್ತದೆ.

ಎಳನೀರಿನಿಂದ ಆರೋಗ್ಯ ಪ್ರಯೋಜನಗಳು ಹಲವು. ಎಳನೀರು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ:

ಹೈಡ್ರೇಶನ್ ಮಾಡುತ್ತದೆ:

ಎಳನೀರು ದೇಹದಲ್ಲಿ ನೀರಿನ ಅಂಶ ಇರುವಂತೆ ಮಾಡುತ್ತದೆ. ಇದು ವ್ಯಾಯಾಮದ ನಂತರ ಅಥವಾ ಬಿಸಿ ವಾತಾವರಣದಲ್ಲಿ ನಿರ್ಜಲೀಕರಣ ದೂರ ಮಾಡುತ್ತದೆ.

ದೇಹಕ್ಕೆ ಚೈತನ್ಯ

ಎಳನೀರಿನಲ್ಲಿರುವ ಪೊಟ್ಯಾಸಿಯಮ್ ಅಂಶವು ಬೆವರಿನ ಮೂಲಕ ಕಳೆದುಹೋದ ಚೈತನ್ಯವನ್ನು ಪುನಃ ತುಂಬಲು ಸಹಾಯ ಮಾಡುತ್ತದೆ. ಸ್ನಾಯುಗಳಿಗೆ ಶಕ್ತಿ ತುಂಬುತ್ತದೆ ಮತ್ತು ಸೆಳೆತವನ್ನು ತಡೆಯುತ್ತದೆ.

ರಕ್ತದೊತ್ತಡ ನಿಯಂತ್ರಣ

ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪೊಟ್ಯಾಸಿಯಮ್ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅಧಿಕ ರಕ್ತದೊತ್ತಡದ ಅಪಾಯವನ್ನು ಸಂಭಾವ್ಯವಾಗಿ ಕಡಿಮೆ ಮಾಡುತ್ತದೆ.

ಹೃದಯದ ಆರೋಗ್ಯ

ಕೆಲವು ಅಧ್ಯಯನಗಳು ತೆಂಗಿನ ನೀರಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಮೂಲಕ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಗುಣಲಕ್ಷಣಗಳು

ತೆಂಗಿನ ನೀರಿನಲ್ಲಿ ವಿಟಮಿನ್ ಸಿ ನಂತಹ ಉತ್ಕರ್ಷಣ ನಿರೋಧಕಗಳಿವೆ. ಇದು ಸ್ವತಂತ್ರ ರಾಡಿಕಲ್ ಗಳನ್ನು ತಟಸ್ಥಗೊಳಿಸಲು ಮತ್ತು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಧುಮೇಹಿಗಳು ಎಳನೀರು ಸೇವಿಸಬಹುದೇ?

ಅನೇಕ ಹಣ್ಣಿನ ರಸಗಳಿಗೆ ಹೋಲಿಸಿದರೆ ತೆಂಗಿನ ನೀರಿನಲ್ಲಿ ಸಕ್ಕರೆಯ ಅಂಶ ಗಮನಾರ್ಹವಾಗಿ ಕಡಿಮೆಯಿದ್ದರೂ ಇದು ಇನ್ನೂ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ. ಅದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಅದರ ಗ್ಲೈಸೆಮಿಕ್ ಇಂಡೆಕ್ಸ್ (GI) ಹೆಚ್ಚಿನ ಹಣ್ಣಿನ ರಸಗಳು ಮತ್ತು ಸೋಡಾಗಳಿಗಿಂತ ಕಡಿಮೆಯಾಗಿದೆ. ಅಂದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ನಿಧಾನಗತಿಯ ಏರಿಕೆಗೆ ಕಾರಣವಾಗುತ್ತದೆ. ಎಳನೀರು ಸೇವಿಸುವ ಮಧುಮೇಹಿಗಳು ತಮ್ಮ ಸೇವನೆಯನ್ನು ಪ್ರಮಾಣದಲ್ಲಿ ಎಚ್ಚರಿಕೆ ವಹಿಸಬೇಕು.


ಗರ್ಭಿಣಿಯರಿಗೆ ಇದು ಪ್ರಯೋಜನಕಾರಿಯೇ?

ತೆಂಗಿನ ನೀರು ಅದರ ನಮ್ಮನ್ನು ಹೈಡ್ರೇಟ್ ಮಾಡುವುದರಿಂದ ಮತ್ತು ಇದು ಅನೇಕ ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಗರ್ಭಿಣಿಯರಿಗೆ ಪ್ರಯೋಜನಕಾರಿಯಾಗಿದೆ.

ಗರ್ಭಾವಸ್ಥೆಯಲ್ಲಿ, ಹೈಡ್ರೀಕರಿಸಿದ ಸ್ಥಿತಿಯಲ್ಲಿರುವುದು ತಾಯಿಯ ಆರೋಗ್ಯ ಮತ್ತು ಮಗುವಿನ ಬೆಳವಣಿಗೆ ಎರಡಕ್ಕೂ ಮುಖ್ಯವಾಗಿದೆ. ತೆಂಗಿನ ನೀರಿನಲ್ಲಿರುವ ಎಲೆಕ್ಟ್ರೋಲೈಟ್‌ಗಳು ನಿರ್ಜಲೀಕರಣವನ್ನು ತಡೆಗಟ್ಟಲು ಮತ್ತು ವಾಕರಿಕೆ ಮತ್ತು ಮಲಬದ್ಧತೆಯಂತಹ ಸಾಮಾನ್ಯ ಗರ್ಭಧಾರಣೆಯ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ಅದರ ನೈಸರ್ಗಿಕ ಮಾಧುರ್ಯವು ಸಕ್ಕರೆ ಪಾನೀಯಗಳ ಕಡುಬಯಕೆಗಳನ್ನು ಪೂರೈಸುತ್ತದೆ, ಆರೋಗ್ಯಕರ ಪ್ರಯೋಜನವನ್ನು ಒದಗಿಸುತ್ತದೆ.

ಇದನ್ನೂ ಓದಿ: Healthy Diet: ಬೆಣ್ಣೆ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ? ಈ ಸಂಗತಿ ತಿಳಿದುಕೊಂಡಿರಿ

ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು

ಅಲರ್ಜಿಗಳು

ತೆಂಗಿನಕಾಯಿಂದಾಗುವ ಅಲರ್ಜಿಗಳು ವಿರಳವಾಗಿದ್ದರೂ, ಅಲರ್ಜಿಯನ್ನು ಹೊಂದಿರುವ ವ್ಯಕ್ತಿಗಳು ಎಚ್ಚರ ವಹಿಸಬೇಕು. ತೆಂಗಿನ ಉತ್ಪನ್ನಗಳನ್ನು ಸೇವಿಸುವ ಮೊದಲು ಇದರ ಬಗ್ಗೆ ಗಮನ ಹರಿಸಬೇಕು. ಬಹುತೇಕ ಜನರಿಗೆ ಎಳನೀರು ಸೇವನೆಯಿಂದ ಯಾವುದೇ ಅಲರ್ಜಿ ಆಗುವುದಿಲ್ಲ.

ಸಕ್ಕರೆ ಅಂಶ

ತೆಂಗಿನ ನೀರು ನೈಸರ್ಗಿಕ ಸಕ್ಕರೆಗಳನ್ನು ಹೊಂದಿದ್ದರೂ ಇದು ಪ್ಯಾಕೆಟ್ ಜ್ಯೂಸ್ ಗಳಿಗಿಂತ ಕಡಿಮೆ ಸಕ್ಕರೆ ಅಂಶವನ್ನು ಹೊಂದಿದೆ. ಆದಾಗ್ಯೂ, ಮಧುಮೇಹಿಗಳು ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಒಳ್ಳೆಯದು.

ಅತಿಯಾದ ಬಳಕೆ

ಅಧಿಕ ಪ್ರಮಾಣದಲ್ಲಿ ತೆಂಗಿನ ನೀರನ್ನು ಕುಡಿಯುವುದರಿಂದ ಹೆಚ್ಚು ಪೊಟ್ಯಾಸಿಯಮ್ ಸಂಗ್ರಹವಾಗುತ್ತದೆ. ಇದು ಹೈಪರ್‌ಕೆಲೆಮಿಯಾಕ್ಕೆ ಕಾರಣವಾಗಬಹುದು. ಹೈಪರ್‌ಕಲೇಮಿಯಾದ ಲಕ್ಷಣಗಳು ಸ್ನಾಯು ದೌರ್ಬಲ್ಯ, ಅನಿಯಮಿತ ಹೃದಯ ಬಡಿತ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಹೃದಯ ಸ್ತಂಭನಕ್ಕೆ ಕಾರಣವಾಗಿರುವುದರಿಂದ ಮಿತವಾಗಿ ಸೇವಿಸುವುದು ಒಳ್ಳೆಯದು.

Continue Reading

ದೇಶ

Driving Licence New Rules: ಡ್ರೈವಿಂಗ್‌ ಲೈಸೆನ್ಸ್‌; ಜೂನ್‌ 1ರಿಂದ ಹೊಸ ರೂಲ್ಸ್‌!

Driving Licence New Rules: ಚಾಲನಾ ಪರವಾನಗಿ ಪಡೆಯಲು ಸರ್ಕಾರ ನಿಯಮಾವಳಿಗಳನ್ನು ಬದಲಾಯಿಸಿದೆ. ಈ ನಿಯಮ ಸಮರ್ಪಕವಾಗಿ ಜಾರಿಗೆ ಬಂದರೆ ಪ್ರಾದೇಶಿಕ ಸಾರಿಗೆ ಕಚೇರಿಗೇ ಹೋಗಿ ಚಾಲನಾ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಬದಲಾಗಿ ಖಾಸಗಿ ಚಾಲನಾ ತರಬೇತಿ ಸಂಸ್ಥೆಗಳಿಗೆ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಅಂತಿಮವಾಗಿ ಪ್ರಮಾಣಪತ್ರ ನೀಡುವ ನಿಯಂತ್ರಣ ಸಾರಿಗೆ ಇಲಾಖೆಗೇ ಇರುತ್ತದೆ.

VISTARANEWS.COM


on

By

Driving Licence New Rules
Koo

ಇನ್ನು ಮುಂದೆ ಚಾಲನಾ ಪರವಾನಗಿ ಪಡೆಯಲು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಹೋಗಬೇಕಿಲ್ಲ. ಬದಲಾಗಿ ಖಾಸಗಿ ಸಂಸ್ಥೆಗಳಿಂದಲೂ ಚಾಲನಾ ಪರವಾನಗಿ (Driving Licence New Rules) ಪಡೆಯಬಹುದಾಗಿದೆ. ಸರ್ಕಾರವು ಚಾಲನಾ ಪರವಾನಗಿ ಪಡೆಯುವ ನಿಯಮವನ್ನು (New Rules) ಬದಲಾಯಿಸಿದ್ದು, ಜೂನ್ 1ರಿಂದ ಇದು ಜಾರಿಗೆ ಬರಲಿದೆ. ಮೊದಲು ಇದು ಆಯ್ದ ನಗರಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಜಾರಿಯಾಗಲಿದೆ.

ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಸುಮಾರು 9,00,000 ಹಳೆಯ ಸರ್ಕಾರಿ ವಾಹನಗಳನ್ನು ಹಂತಹಂತವಾಗಿ ತೆಗೆದುಹಾಕುವುದೂ ಹೊಸ ನಿಯಮಾವಳಿಯ ಗುರಿಗಳಲ್ಲಿ ಒಂದಾಗಿದೆ.

ಅತೀ ವೇಗದ ಚಾಲನೆಗೆ ದಂಡ 1000ರಿಂದ 2000 ರೂ. ಏರಿಕೆ, ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ 25,000 ರೂ. ದಂಡ ತೆರಬೇಕಾಗುತ್ತದೆ. ವಾಹನದ ಮಾಲೀಕರ ಡ್ರೈವಿಂಗ್ ನೋಂದಣಿ ಕಾರ್ಡ್ ಅನ್ನು ರದ್ದುಗೊಳಿಸಲಾಗುವುದು ಮತ್ತು ಅಪ್ರಾಪ್ತರು 25 ವರ್ಷ ವಯಸ್ಸಿನವರೆಗೆ ಪರವಾನಗಿ ಪಡೆಯಲು ಸಾಧ್ಯವಾಗುವುದಿಲ್ಲ.

ರಸ್ತೆಗಳು ಮತ್ತು ಹೆದ್ದಾರಿಗಳ ಸಚಿವಾಲಯವು ಹೊಸ ಚಾಲನಾ ಪರವಾನಗಿಗೆ ಅಗತ್ಯವಿರುವ ದಾಖಲಾತಿಗಳನ್ನು ನವೀಕರಿಸಿದೆ. ಹೊಸ ನಿಯಮಗಳು ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ಚಾಲಕರ ಅವಶ್ಯಕತೆಗಳಿಗೆ ಸ್ಪಂದಿಸುವಂತಿದೆ. ಈ ಬದಲಾವಣೆಯು ಆರ್‌ಟಿಒಗಳಲ್ಲಿ ದೈಹಿಕ ಪರೀಕ್ಷೆಗಳ ಅಗತ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತಿದೆ.

ತರಬೇತಿ ನೀಡುವವರಿಗೆ ಹೊಸ ನಿಯಮಗಳು ಏನೇನು?

ಖಾಸಗಿ ಚಾಲನಾ ತರಬೇತಿ ಕೇಂದ್ರಗಳು ಕನಿಷ್ಠ 1 ಎಕರೆ ಭೂಮಿಯನ್ನು ಹೊಂದಿರಬೇಕು. 4 ಚಕ್ರ ವಾಹನಗಳ ಚಾಲನಾ ಕೇಂದ್ರಗಳಲ್ಲಿ ಹೆಚ್ಚುವರಿ 2 ಎಕರೆ ಭೂಮಿ ಅಗತ್ಯವಿದೆ. ಡ್ರೈವಿಂಗ್ ತರಬೇತಿ ಕೇಂದ್ರವು ಸೂಕ್ತವಾದ ಪರೀಕ್ಷಾ ಸೌಲಭ್ಯಕ್ಕೆ ಪ್ರವೇಶವನ್ನು ಹೊಂದಿರಬೇಕು.

ತರಬೇತುದಾರರು ಕನಿಷ್ಠ ಹೈಸ್ಕೂಲ್ ಡಿಪ್ಲೊಮಾ ಅಥವಾ ತತ್ಸಮಾನ ಶಿಕ್ಷಣವನ್ನು ಹೊಂದಿರಬೇಕು. ಹೆಚ್ಚುವರಿಯಾಗಿ, ಅವರು ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು. ತರಬೇತುದಾರರು ಬಯೋಮೆಟ್ರಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳ ಮೂಲಭೂತ ಅಂಶಗಳನ್ನು ತಿಳಿದಿರಬೇಕು.

ಕನಿಷ್ಠ 29 ಗಂಟೆಗಳ ತರಬೇತಿಯೊಂದಿಗೆ ಲಘು ವಾಹನ ತರಬೇತಿಯನ್ನು 4 ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಈ ತರಬೇತಿಯನ್ನು ಕನಿಷ್ಠ ಎರಡು ವಿಭಾಗಗಳಾಗಿ ವಿಂಗಡಿಸಬೇಕು: ಥಿಯರಿ ಮತ್ತು ಪ್ರಾಯೋಗಿಕ. ಥಿಯರಿ ಘಟಕವು 8 ಗಂಟೆಗಳನ್ನು ಒಳಗೊಳ್ಳಬೇಕು. ಆದರೆ ಪ್ರಾಯೋಗಿಕ ಘಟಕವು 21 ಗಂಟೆಗಳ ಕಾಲ ವ್ಯಾಪಿಸಬೇಕು.

ಭಾರೀ ಮೋಟಾರು ವಾಹನಗಳಿಗೆ 8 ಗಂಟೆಗಳ ಬೋಧನೆ ಮತ್ತು 31 ಗಂಟೆಗಳ ಪ್ರಾಯೋಗಿಕ ತಯಾರಿಯನ್ನು ಒಳಗೊಂಡ 38 ಗಂಟೆಗಳ ತರಬೇತಿ ಇರುತ್ತದೆ. ಈ ತರಬೇತಿಯನ್ನು 6 ವಾರಗಳಲ್ಲಿ ಪೂರ್ಣಗೊಳಿಸಬೇಕು.

ಈ ನಿಯಮಾವಳಿಗಳು ಖಾಸಗಿ ಚಾಲನಾ ತರಬೇತಿ ಕೇಂದ್ರಗಳು ಲಘು ಮತ್ತು ಭಾರೀ ವಾಹನಗಳ ಚಾಲಕರಿಗೆ ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಸೂಕ್ತ ತಯಾರಿಯನ್ನು ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ.


ಶುಲ್ಕ ಎಷ್ಟಿದೆ?

ವಿವಿಧ ರೀತಿಯ ಚಾಲನಾ ಪರವಾನಿಗೆಗಳ ಸರ್ಕಾರಿ ಶುಲ್ಕ ಈ ಕೆಳಗಿನಂತಿರುತ್ತದೆ.
ಕಲಿಕಾ ಪರವಾನಿಗೆಗೆ 200 ರೂ., ಕಲಿಕಾ ಪರವಾನಗಿ ನವೀಕರಣಕ್ಕೆ 200 ರೂ., ಅಂತಾರಾಷ್ಟ್ರೀಯ ಪರವಾನಿಗೆಗೆ 1,000 ರೂ., ಶಾಶ್ವತ ಪರವಾನಗಿಗೆ 200 ರೂ.

ಅರ್ಜಿ ಸಲ್ಲಿಸುವ ವಿಧಾನ

ಚಾಲಕ ಪರವಾನಗಿಗೆ ಅರ್ಜಿ ಸಲ್ಲಿಸಲು https://parivahan.gov.in ಪೋರ್ಟಲ್‌ಗೆ ಭೇಟಿ ನೀಡಿ. ಮುಖಪುಟದಲ್ಲಿ ಒಮ್ಮೆ “ಚಾಲನಾ ಪರವಾನಗಿ ಅನ್ವಯಿಸು” ಆಯ್ಕೆಯನ್ನು ಪತ್ತೆ ಮಾಡಿ ಮತ್ತು ಕ್ಲಿಕ್ ಮಾಡಿ. ಇದು ಅರ್ಜಿ ನಮೂನೆಯನ್ನು ತೆರೆಯುತ್ತದೆ. ಅಗತ್ಯವಿದ್ದರೆ ನೀವು ಅದನ್ನು ಮುದ್ರಿಸಲು ಆಯ್ಕೆ ಮಾಡಬಹುದು.

ಇದನ್ನೂ ಓದಿ: Yamuna Bridge: ಯಮುನಾ ಸೇತುವೆಯ ಅದ್ಭುತ ಚಿತ್ರ ಹಂಚಿಕೊಂಡ ಭಾರತೀಯ ರೈಲ್ವೆ: ವಾವ್‌ ತಾಜ್‌ ಎಂದ ನೆಟ್ಟಿಗರು; ನೀವೂ ನೋಡಿ

Continue Reading

ವಿದೇಶ

Air Crashes: ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ 10 ಪ್ರಭಾವಿ ರಾಜಕಾರಣಿಗಳಿವರು

ಇರಾನ್ ಅಧ್ಯಕ್ಷರ ಸಾವು ವಿಶ್ವದಲ್ಲೇ ರಾಜಕೀಯ ನಾಯಕರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಮಾಡುವಂತೆ ಮಾಡಿದೆ. ವಿಮಾನ, ಹೆಲಿಕಾಪ್ಟರ್ ಅಪಘಾತದಲ್ಲಿ (Air Crashes) ರಾಜಕೀಯ ನಾಯಕರ ಸಾವು ಇದೇ ಮೊದಲಲ್ಲ. ವಿಶ್ವದ ಹತ್ತು ಪ್ರಮುಖ ನಾಯಕರು ಈ ರೀತಿಯ ದುರಂತದಲ್ಲಿ ಮೃತಪಟ್ಟಿದ್ದಾರೆ.

VISTARANEWS.COM


on

By

Air Crashes
Koo

ಇರಾನ್ ಅಧ್ಯಕ್ಷ (Iran President) ಇಬ್ರಾಹಿಂ ರೈಸಿ (Ebrahim Raisi) ಅವರು ಭಾನುವಾರ ರಾತ್ರಿ ದೇಶದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ (Air Crashes) ಸಾವನ್ನಪ್ಪಿದ್ದಾರೆ. ರೈಸಿ ಅವರ ದಣಿವರಿಯದ ಸ್ಫೂರ್ತಿಯ ಸೇವೆಯ ಮಾರ್ಗದಲ್ಲಿ ಮುಂದುವರಿಯುವುದಾಗಿ ಇರಾನ್‌ ಆಡಳಿತ ರಾಷ್ಟ್ರದ ಜನರಿಗೆ ಭರವಸೆ ನೀಡಿದೆ. ವಿಮಾನ ದುರಂತಗಳಲ್ಲಿ ರಾಜಕೀಯ ನಾಯಕರು ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಬೇರೆಬೇರೆ ರಾಷ್ಟ್ರಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಆ ಕುರಿತ ಹಿನ್ನೋಟ ಇಲ್ಲಿದೆ.


ಸ್ವೀಡನ್ ಪ್ರಧಾನಿ ಅರ್ವಿಡ್ ಲಿಂಡ್‌ಮನ್ (1936)

ಸ್ವೀಡನ್‌ನ ಹಿಂದಿನ ಅಡ್ಮಿರಲ್ ಮತ್ತು ಎರಡು ಬಾರಿ ಸ್ವೀಡನ್‌ನ ಪ್ರಧಾನಮಂತ್ರಿ ಆಗಿದ್ದ ಸಾಲೋಮನ್ ಅರ್ವಿಡ್ ಅಚಾಟೆಸ್ ಲಿಂಡ್‌ಮನ್ ಪ್ರಭಾವಿ ಸಂಪ್ರದಾಯವಾದಿ ರಾಜಕಾರಣಿಯಾಗಿದ್ದರು. 1936ರ ಡಿಸೆಂಬರ್ 9ರಂದು ಲಿಂಡ್‌ಮನ್ ಅವರು ಪ್ರಯಾಣಿಸುತ್ತಿದ್ದ ಡಗ್ಲಾಸ್ ಡಿಸಿ-2 ಯುನೈಟೆಡ್ ಕಿಂಗ್‌ಡಂನ ಕ್ರೊಯ್ಡಾನ್ ವಿಮಾನವು ನಿಲ್ದಾಣದ ಬಳಿ ದಟ್ಟವಾದ ಮಂಜಿನಿಂದ ಟೇಕಾಫ್ ಆದ ಸ್ವಲ್ಪ ಸಮಯದ ಅನಂತರ ಮನೆಗಳಿಗೆ ಅಪ್ಪಳಿಸಿದಾಗ ಮೃತಪಟ್ಟರು.

ಫಿಲಿಪೈನ್ಸ್ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ (1957)

ಫಿಲಿಪೈನ್ಸ್‌ನ ಏಳನೇ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರು ತಮ್ಮ ಬಲವಾದ ಭ್ರಷ್ಟಾಚಾರ ವಿರೋಧಿ ನಿಲುವು ಮತ್ತು ಜನಪ್ರಿಯ ಕಾರ್ಯಕ್ಕೆ ಹೆಸರುವಾಸಿಯಾಗಿದ್ದರು. ಅವರ ಅಧ್ಯಕ್ಷತೆಯು 1957ರ ಮಾರ್ಚ್ 17ರಂದು ಥಟ್ಟನೆ ಕೊನೆಗೊಂಡಿತು. “ಮೌಂಟ್ ಪಿನಾಟುಬೊ” ಎಂದು ಕರೆಯಲ್ಪಡುವ ಅವರ ಸಿ-47 ವಿಮಾನವು ಸೆಬು ನಗರದ ಮನುಂಗಲ್ ಪರ್ವತಕ್ಕೆ ಅಪ್ಪಳಿಸಿತು. ಆಗ ಮ್ಯಾಗ್ಸೆಸೆ ಮೃತಪಟ್ಟರು. 25 ಪ್ರಯಾಣಿಕರ ಪೈಕಿ ಒಬ್ಬರು ಮಾತ್ರ ಬದುಕುಳಿದಿದ್ದರು.


ಬ್ರೆಜಿಲ್ ಅಧ್ಯಕ್ಷ ನೆರೆಯು ರಾಮೋಸ್ (1958)

ಬ್ರೆಜಿಲ್‌ನ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೆರೆಯು ರಾಮೋಸ್ ಅವರು 1958ರ ಜೂನ್ 16ರಂದು ನಿಧನರಾದರು. ರಾಮೋಸ್ ಅವರು ಕ್ರೂಝೈರೊ ಡೊ ಸುಲ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪರಾನಾ ರಾಜ್ಯದ ಕುರಿಟಿಬಾ ಅಫೊನ್ಸೊ ಪೆನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ ಮೃತಪಟ್ಟರು.

ಇರಾಕ್ ಅಧ್ಯಕ್ಷ ಅಬ್ದುಲ್ ಸಲಾಂ ಆರಿಫ್ (1966)

ಇರಾಕ್‌ನ ಎರಡನೇ ಅಧ್ಯಕ್ಷರಾದ ಅಬ್ದುಲ್ ಸಲಾಂ ಆರಿಫ್ ರಾಜಪ್ರಭುತ್ವವನ್ನು ಉರುಳಿಸಿದ 1958ರ ಕ್ರಾಂತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 1966ರ ಏಪ್ರಿಲ್ 13ರಂದು ಆರಿಫ್ ಅವರ ಇರಾಕಿ ಏರ್ ಫೋರ್ಸ್ ವಿಮಾನ, ಡಿ ಹ್ಯಾವಿಲ್ಯಾಂಡ್ ಡಿಹೆಚ್ 104 ಡೋವ್, ಬಸ್ರಾ ಬಳಿ ಅಪಘಾತಕ್ಕೀಡಾದಾಗ ನಿಧನರಾದರು. ಅವರ ಸಹೋದರ ಅಬ್ದುಲ್ ರಹಮಾನ್ ಆರಿಫ್ ಅವರ ಅನಂತರ ಅಧ್ಯಕ್ಷರಾದರು.


ಬ್ರೆಜಿಲ್ ಅಧ್ಯಕ್ಷ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ (1967)

ಬ್ರೆಜಿಲ್‌ನ 26ನೇ ಅಧ್ಯಕ್ಷ ಮತ್ತು ಮಾಜಿ ಮಿಲಿಟರಿ ಸರ್ವಾಧಿಕಾರದ ಪ್ರಮುಖ ವ್ಯಕ್ತಿಯಾಗಿದ್ದ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ 1967ರ ಜುಲೈ 18ರಂದು ನಿಧನರಾದರು. ಅವರ ಅಧ್ಯಕ್ಷೀಯ ಅವಧಿ ಮುಗಿದ ಸ್ವಲ್ಪ ಸಮಯದ ಅನಂತರ ಕ್ಯಾಸ್ಟೆಲೊ ಬ್ರಾಂಕೋ ಅವರ ಪೈಪರ್ ಪಿಎ -23 ಅಜ್ಟೆಕ್ ವಿಮಾನ ಬ್ರೆಜಿಲಿಯನ್ ವಾಯುಪಡೆ ವಿಮಾನಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿತು. ಅವರ ಸಾವು ಭಾರಿ ಚರ್ಚೆಗೆ ಕಾರಣವಾಗಿತ್ತು.

ಇಂದಿರಾ ಗಾಂಧಿ ಮಗ ಸಂಜಯ್ ಗಾಂಧಿ (1980)

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ 1980ರ ಜೂನ್ 23ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ ತಾವು ಚಲಾಯಿಸುತ್ತಿದ್ದ ವಿಮಾನದ ನಿಯಂತ್ರಣವನ್ನು ಕಳೆದುಕೊಂಡು ದುರಂತ ಸಾವು ಕಂಡರು.


ಲೆಬನಾನ್ ಪ್ರಧಾನಿ ರಶೀದ್ ಕರಾಮಿ (1987)

ಲೆಬನಾನ್‌ನ ಅತಿ ಹೆಚ್ಚು ಬಾರಿ ಚುನಾಯಿತರಾದ ಪ್ರಧಾನಮಂತ್ರಿ ರಶೀದ್ ಕರಾಮಿ ಅವರು ಲೆಬನಾನಿನ ಅಂತರ್ಯುದ್ಧದ ಸಮಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. 1987ರ ಜೂನ್ 1ರಂದು, ಬೈರುತ್‌ಗೆ ಹೋಗುವ ಮಾರ್ಗದಲ್ಲಿ ಅವರ ಹೆಲಿಕಾಪ್ಟರ್‌ನಲ್ಲಿ ಬಾಂಬ್ ಸ್ಫೋಟಗೊಂಡು ಕರಾಮಿ ಕೊಲ್ಲಲ್ಪಟ್ಟರು.

ಪಾಕಿಸ್ತಾನದ ಅಧ್ಯಕ್ಷ ಮುಹಮ್ಮದ್ ಜಿಯಾ-ಉಲ್-ಹಕ್ (1988)

ಪಾಕಿಸ್ತಾನದ ಆರನೇ ಅಧ್ಯಕ್ಷರಾದ ಜನರಲ್ ಮುಹಮ್ಮದ್ ಜಿಯಾ-ಉಲ್-ಹಕ್ ಅವರು 1988ರ ಆಗಸ್ಟ್ 17ರಂದು ನಿಧನರಾದರು. ಅವರು ಪ್ರಯಾಣಿಸುತ್ತಿದ್ದ ಸಿ-130 ಹರ್ಕ್ಯುಲಸ್ ವಿಮಾನವು ಬಹವಾಲ್‌ಪುರದಿಂದ ಟೇಕಾಫ್ ಆದ ಸ್ವಲ್ಪ ಸಮಯದ ಅನಂತರ ಅಪಘಾತಕ್ಕೀಡಾಯಿತು. ಅಪಘಾತದ ಕಾರಣವು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಇದನ್ನೂ ಓದಿ: Ebrahim Raisi: ಹೆಲಿಕಾಫ್ಟರ್‌ ಪತನದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ವಿಧ್ವಂಸಕ ಕೃತ್ಯವೇ?


ಕಾಂಗ್ರೆಸ್‌ ನಾಯಕ ಮಾಧವರಾವ್ ಸಿಂಧಿಯಾ (2001)

ಮಾಧವರಾವ್ ಸಿಂಧಿಯಾ ಭಾರತದ ಪ್ರಮುಖ ರಾಜಕಾರಣಿ ಮತ್ತು ಕಾಂಗ್ರೆಸ್ ನಾಯಕರಾಗಿದ್ದರು. 2001ರ ಸೆಪ್ಟೆಂಬರ್ 30ರಂದು ವಿಮಾನ ಅಪಘಾತದಲ್ಲಿ ದಾರುಣ ಅಂತ್ಯ ಕಂಡರು. ಉತ್ತರ ಪ್ರದೇಶದ ಮೈನ್‌ಪುರಿ ಬಳಿ ಅವರ ಖಾಸಗಿ ಬೀಚ್‌ಕ್ರಾಫ್ಟ್ ಕಿಂಗ್ ಏರ್ ಸಿ 90 ಗಾಳಿಯಲ್ಲಿ ಬೆಂಕಿ ಹೊತ್ತಿಕೊಂಡು ಅಪಘಾತ ಸಂಭವಿಸಿತ್ತು.

ಚಿಲಿಯ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ (2024)

ಚಿಲಿಯ ಮಾಜಿ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿಮೆರಾ ಅವರು ಫೆಬ್ರವರಿ 2024ರಲ್ಲಿ ನಿಧನರಾದರು. ಪಿನೆರಾ ಅವರ ಹೆಲಿಕಾಪ್ಟರ್ ದಕ್ಷಿಣ ಚಿಲಿಯ ಸರೋವರಕ್ಕೆ ಅಪ್ಪಳಿಸಿತು. ಈ ದುರಂತದಲ್ಲಿ ಅವರು ಪ್ರಾಣ ಕಳೆದುಕೊಂಡರು. ಅವರು ಸತತ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈ ಎಸ್‌ ರಾಜಶೇಖರ್‌ ರೆಡ್ಡಿ ಅವರೂ ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತಪಟ್ಟಿದ್ದರು.

Continue Reading

ಆಹಾರ/ಅಡುಗೆ

History Of Ice Cream: ಎಲ್ಲರ ನೆಚ್ಚಿನ ಐಸ್‌ಕ್ರೀಮ್‌ ಹುಟ್ಟಿದ್ದು ಹೇಗೆ?

ಐಸ್‌ಕ್ರೀಮ್‌ ಪ್ರಿಯರಿಗೆ (History Of Ice Cream) ಕಾಲ-ದೇಶ-ಪಾತ್ರಗಳ ಹಂಗಿಲ್ಲ. ಚಳಿ-ಮಳೆ-ಬಿಸಿಲು ಎಂಬ ಭೇದವಿಲ್ಲದೆ, ಹಗಲು-ರಾತ್ರಿಗಳ ಲಕ್ಷ್ಯವಿಲ್ಲದಂತೆ ಐಸ್‌ಕ್ರೀಮ್‌ ತಿನ್ನಬಲ್ಲರು. ವಯಸ್ಸಿನ ಭೇದವನ್ನೂ ಮೀರಿ ಇಷ್ಟೊಂದು ಮೆಚ್ಚಾಗಿರುವ ಐಸ್‌ಕ್ರೀಮ್‌ (Ice Cream) ಹುಟ್ಟಿದ್ದು ಯಾವಾಗ? ಕುತೂಹಲಕರ ಹಿನ್ನೋಟ ಇಲ್ಲಿದೆ.

VISTARANEWS.COM


on

History Of Ice Cream
Koo

ಬೇಸಿಗೆಯನ್ನು ದೂರುವವರು (History Of Ice Cream) ಇರುವಂತೆಯೇ ಅದನ್ನು ಇಷ್ಟ ಪಡುವವರೂ ಇದ್ದಾರೆ. ಯಾಕೆ ಇಷ್ಟ ಬೇಸಿಗೆ ಎಂದು ಕೇಳಿದರೆ ಜ್ಯೂಸ್‌, ಎಳನೀರು ಮುಂತಾದ ತಂಪು ಪೇಯಗಳನ್ನು ಕುಡಿಯುವುದಕ್ಕೆ ಎನ್ನುವವರಿರಬಹುದು; ಆದರೆ ಐಸ್‌ಕ್ರೀಮ್‌ (Ice Cream) ಮೆಲ್ಲುವುದಕ್ಕೆ ಎನ್ನುವವರದ್ದೇ ಬಹುಮತ. ತರಹೇವಾರಿ ಬಣ್ಣ, ಆಕಾರ, ರುಚಿಗಳಲ್ಲಿ ದೊರೆಯುವ ಇವುಗಳನ್ನೇ ನಂಬಿ-ನೆಚ್ಚಿ ಬದುಕಿದವರಿದ್ದಾರೆ. ಹಾಗಾಗಿ ಉಳಿದೆಲ್ಲ ತಿನಿಸುಗಳನ್ನೂ ಮೀರಿಸಿದ್ದು ಇವುಗಳ ಜನಪ್ರಿಯತೆ. ಹಾಗೆಂದೇ ಐಸ್‌ಕ್ರೀಮ್‌ ಪ್ರಿಯರಿಗೆ ಕಾಲ-ದೇಶ-ಪಾತ್ರಗಳ ಹಂಗಿಲ್ಲ. ಚಳಿ-ಮಳೆ-ಬಿಸಿಲು ಎಂಬ ಭೇದವಿಲ್ಲದೆ, ಹಗಲು-ರಾತ್ರಿಗಳ ಲಕ್ಷ್ಯವಿಲ್ಲದಂತೆ ಐಸ್‌ಕ್ರೀಮ್‌ ತಿನ್ನಬಲ್ಲರು. ವಯಸ್ಸಿನ ಭೇದವನ್ನೂ ಮೀರಿ ಇಷ್ಟೊಂದು ಮೆಚ್ಚಾಗಿರುವ ಐಸ್‌ಕ್ರೀಮ್‌ ಹುಟ್ಟಿದ್ದು (Ice Cream) ಯಾವಾಗ? ಶತಮಾನಗಳಿಂದ ವಿಕಾಸಕೊಳ್ಳುತ್ತಲೇ ಬಂದಿರುವ ಇದು ನಡೆದಿರುವ ಹಾದಿ ಹೇಗಿದೆ ಎಂಬ ಕುತೂಹಲದ ನೋಟವಿದು.

Ice Cream

ಹುಟ್ಟಿದ್ದು ಎಲ್ಲಿ?

ಹಳೆಯ ಮೆಸಪೊಟೇಮಿಯ ನಾಗರಿಕತೆಯಲ್ಲಿ ಯೂಫ್ರೆಟಿಸ್‌ ನದಿಯ ದಂಡೆಯಲ್ಲಿ ಐಸ್‌ ಮನೆಗಳಂತೆ ಮಾಡಿ, ಅಲ್ಲಿ ವಸ್ತುಗಳನ್ನು ತಣ್ಣಗೆ ಇರಿಸಿಕೊಳ್ಳುತ್ತಿದ್ದಂತೆ. ಇದೀಗ ಕ್ರಿ.ಪೂ. 4000 ವರ್ಷಗಳ ಹಿಂದಿನ ಕಥೆ! ಅಂದರೆ, ತಣ್ಣಗಿನ ವಸ್ತುಗಳನ್ನು ತಿನ್ನುವ ಖಯಾಲಿ ಅಷ್ಟೊಂದು ಸಾವಿರ ವರ್ಷಗಳ ಹಿಂದೆಯೇ ಮನುಷ್ಯರಿಗಿತ್ತು ಎಂದಾಯಿತು. ಹಳೆಯ ಅಥೆನ್ಸ್‌ನಲ್ಲಿ ವೈನ್‌ಗಳನ್ನು ತಣ್ಣಗಿರಿಸಲು ಐಸ್‌ ಬಳಸುತ್ತಿದ್ದ ಕಥೆಗಳಿವೆ. ಪ್ರಾಚೀನ ಚೀನಾದಲ್ಲಿ ಟಾಂಗ್‌ ರಾಜವಂಶದವರು ಹಾಲಿನಿಂದ ಮಾಡಿದ ಖಾದ್ಯಗಳನ್ನು ಹೀಗೆ ತಣ್ಣಗಾಗಿಸಿ ತಿನ್ನುತ್ತಿದ್ದ ಉಲ್ಲೇಖಗಳಿವೆ. ಭಾರತದಲ್ಲಿ ಮೊಘಲರೂ ಗಟ್ಟಿಯಾದ ಕೆನೆಭರಿತ ಹಾಲಿನಲ್ಲಿ ಕುಲ್ಫಿಯಂಥವನ್ನು ಮಾಡಿ ಸವಿಯುತ್ತಿದ್ದರಂತೆ. ಇವೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಇಂದಿನ ಐಸ್‌ಕ್ರೀಮಿನ ಪೂರ್ವಸ್ಥಿತಿಗಳು ಎಂದು ಹೇಳಲಾಗುತ್ತದೆ.

ಐಸ್‌ಕ್ರೀಮ್‌ನ ಆಧುನಿಕ ರೂಪ

ಈ ತಿನಿಸಿಗಿರುವ ಇಂದಿನ ರೂಪದ ಸಮೀಪಕ್ಕೆ ಮೊದಲು ಬಂದಿದ್ದು ಇಟಲಿಯಲ್ಲಿ, ಹದಿನೇಳನೇ ಶತಮಾನದ ನಡುವಿಗೆ. ನಂತರ, ಫ್ರಾನ್ಸ್‌, ಸ್ಪೇನ್‌ ಸೇರಿದಂತೆ ಯುರೋಪ್‌ನೆಲ್ಲೆಡೆ ಮೇಜವಾನಿಗಳ ಮೋಜು ಹೆಚ್ಚಿಸುವ ನೆಚ್ಚಿನ ವಸ್ತುವಾಯಿತು ಇದು. 1671ರಲ್ಲಿ ಬ್ರಿಟನ್‌ನ ರಾಜ ಎರಡನೇ ಚಾರ್ಲ್ಸ್‌ ಮೊದಲಿಗೆ ಐಸ್‌ಕ್ರೀಮ್‌ ಸವಿದ ದಾಖಲೆಗಳಿವೆ. ಆದರೆ ಇದರಿಂದಲೇ ಆರೋಗ್ಯದ ತುರ್ತು ಪರಿಸ್ಥಿತಿ ಇಂಗ್ಲೆಂಡ್‌ನಲ್ಲಿ ಉದ್ಭವವಾಗಿತ್ತು ಮಾತ್ರ ಕುತೂಹಲಕರ ಸಂಗತಿ.

Penny Lick

ʻಪೆನ್ನಿ ಲಿಕ್‌ʼ

19ನೇ ಶತಮಾನದ ಹೊತ್ತಿಗೆ ಇಂಗ್ಲೆಂಡ್‌ನಲ್ಲಿ ಇದೆಷ್ಟು ಜನಪ್ರಿಯವಾಯಿತೆಂದರೆ, ರಾಜರ, ಶ್ರೀಮಂತರ ಊಟದ ಟೇಬಲ್‌ನ ಸೀಮೆಯನ್ನು ಮೀರಿ, ಬೀದಿಬೀದಿಗಳಲ್ಲಿ ಮಾರಾಟವಾಗತೊಡಗಿತು. ಒಂದು ʻಪೆನ್ನಿʼಗೆ (ಅಲ್ಲಿನ ಪೈಸೆ) ಪುಟ್ಟ ಕಪ್‌ನಲ್ಲಿ ಐಸ್‌ಕ್ರೀಮ್‌ ತುಂಬಿಸಿ ಕೊಡಲಾಗುತ್ತಿತ್ತು. ಇದನ್ನು ನೆಕ್ಕಿ ಸ್ವಚ್ಛ ಮಾಡಿ ಗ್ರಾಹಕರು ಮರಳಿ ನೀಡುತ್ತಿದ್ದರು. ಇದು ʻಪೆನ್ನಿ ಲಿಕ್‌ʼ ಎಂದೇ ಪ್ರಸಿದ್ಧವಾಯಿತು. ಇದೆಷ್ಟು ಜನಪ್ರಿಯವಾಯಿತೆಂದರೆ ಬರುವ ಗ್ರಾಹಕರಿಗೆ ಐಸ್‌ಕ್ರೀಮ್‌ ಕಪ್‌ಗಳನ್ನು ತೊಳೆದು ತುಂಬಿಸಿಕೊಡುವಷ್ಟು ವ್ಯವಧಾನವಿಲ್ಲದ ವ್ಯಾಪಾರಿಗಳು, ಸ್ವಚ್ಛತೆಯನ್ನು ಕಡೆಗಣಿಸಿದರು. ಇದರಿಂದ ಕಾಲರಾ, ಕ್ಷಯದಂಥ ರೋಗಗಳು ತೀವ್ರವಾಗಿ ಹರಡಲಾರಂಭಿಸಿದವು. 1879ರಲ್ಲಿ ಕಾಲರಾ ಸಾಂಕ್ರಾಮಿಕ ಹರಡಿದ್ದು ʻಪೆನ್ನಿ ಲಿಕ್‌ʼನಿಂದಾಗಿಯೇ ಎಂದು ಅಲ್ಲಿನ ಆರೋಗ್ಯ ದಾಖಲೆಗಳು ಹೇಳುತ್ತವೆ.
ಅಂತಿಮವಾಗಿ ʻಪೆನ್ನಿ ಲಿಕ್‌ʼ ಮೇಲೆ ನಿಷೇಧ ಹೇರಲಾಯಿತು. ಇದರ ಪರಿಣಾಮವೆಂದರೆ ಹೊಸ ಆವಿಷ್ಕಾರಗಳನ್ನು ವರ್ತಕರು ಮಾಡಿದ್ದು. ಐಸ್‌ಕ್ರೀಮ್‌ ಕೋನ್‌ಗಳು ರೂಪುಗೊಂಡಿದ್ದು ಹೀಗೆ. ಸ್ವಚ್ಛತೆಯ ರಗಳೆಯಿಲ್ಲದೆ, ಕಪ್‌ ತೊಳೆದಿದ್ದಾರೋ ಇಲ್ಲವೋ ಎಂಬ ಹೆದರಿಕೆಗೆ ಅವಕಾಶವಿಲ್ಲದಂತೆ ಯಾರು, ಎಲ್ಲಿ ಬೇಕಾದರೂ ಸೇವಿಸಬೇಕಾದಂತೆ ಕೋನ್‌ಗಳನ್ನು ಸಿದ್ಧಪಡಿಸಲಾಯಿತು. ಹಾಗೆಯೇ ಕಡ್ಡಿ ಚುಚ್ಚಿ ಕೊಡುವ ಇನ್ನೂ ಅಗ್ಗದ ಕ್ಯಾಂಡಿಗಳು ಸಹ ಪ್ರಚಾರಕ್ಕೆ ಬಂದವು.

ಇದನ್ನೂ ಓದಿ: Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?

ಅಲ್ಲಿಂದ ಮುಂದುವರಿದು, ಹೊಸ ರುಚಿಗಳು, ಫ್ಲೇವರ್‌ಗಳು ರೂಪುಗೊಂಡವು. ಸರಳವಾದ ವೆನಿಲಾದಿಂದ ಹಿಡಿದು, ನಾನಾ ರೀತಿಯ ʻಸಂಡೇʼ ಫ್ಲೇವರ್‌ಗಳು, ಕಾಯಿ-ಬೀಜಗಳನ್ನು ಒಳಗೊಂಡ ದುಬಾರಿ ಬೆಲೆಯವು, ಎಲ್ಲೆಲ್ಲೋ ಬೆಳೆಯುವ ಹಣ್ಣುಗಳನ್ನು ಸೇರಿಸಿಕೊಂಡವು- ಹೀಗೆ ಲೆಕ್ಕವಿಲ್ಲದಷ್ಟು ನಮೂನೆಯ ಐಸ್‌ಕ್ರೀಮ್‌ಗಳು ಈಗ ಲಭ್ಯವಾಗುತ್ತವೆ. ಸುಡು ಬೇಸಿಗೆಯನ್ನು ಸಹನೀಯವಾಗಿಸಿ, ಮಕ್ಕಳಿಗೆ ಮೋಜು ನೀಡುತ್ತಿವೆ. ಆದರೆ ಅದು ಬೆಳೆದುಬಂದ ಚರಿತ್ರೆಯನ್ನು ನೋಡಿದಾಗ, ಎಷ್ಟೊಂದು ಶತಮಾನಗಳ ಹಿಂದೆ ಐಸ್‌ಕ್ರೀಮ್‌ನ ಈ ಪಯಣ ಆರಂಭವಾಯಿತು ಎಂಬುದು ತಿಳಿಯುತ್ತದೆ. ಜೊತೆಗೆ, ಸದಾಕಾಲ ವಿಕಾಸಗೊಳ್ಳುತ್ತಲೇ ಇರುವ ಮಾನವನ ಜಿಹ್ವಾ ಚಾಪಲ್ಯದ ಇತಿಹಾಸವೂ ಅನಾವರಣಗೊಳ್ಳುತ್ತದೆ.

Continue Reading
Advertisement
Prajwal Revanna Case
ಕರ್ನಾಟಕ4 hours ago

Prajwal Revanna Case: ಪ್ರಜ್ವಲ್ ರೇವಣ್ಣ ಪಾಸ್‌ ಪೋರ್ಟ್ ರದ್ದು ಮಾಡಲು ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ

Mobile
ದೇಶ4 hours ago

ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ನೋಡಿ 15 ವರ್ಷದ ಅಕ್ಕನನ್ನೇ ಗರ್ಭಿಣಿ ಮಾಡಿದ 13 ವರ್ಷದ ಬಾಲಕ!

Army Officer
Lok Sabha Election 20245 hours ago

101ನೇ ವಯಸ್ಸಿನಲ್ಲೂ ‘ಕರ್ತವ್ಯ’ ಮರೆಯದೆ ವೋಟ್‌ ಮಾಡಿದ ನಿವೃತ್ತ ಯೋಧ; ಸೆಲ್ಯೂಟ್‌ ಎಂದರು ಜನ

Congress Guarantee
ಪ್ರಮುಖ ಸುದ್ದಿ5 hours ago

Congress Guarantee: ಗ್ಯಾರಂಟಿ ಯೋಜನೆಗಳಿಗೆ ಒಂದು ವರ್ಷಕ್ಕೆ ಸರ್ಕಾರ ಮಾಡಿದ ಖರ್ಚು ಎಷ್ಟು ಸಾವಿರ ಕೋಟಿ?

Malaysia Masters
ಕ್ರೀಡೆ5 hours ago

Malaysia Masters: ವಿಶ್ರಾಂತಿ ಬಳಿಕ ಮಲೇಷ್ಯಾ ಮಾಸ್ಟರ್ಸ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ಸಿಂಧು

Rahul Gandhi
ದೇಶ5 hours ago

Rahul Gandhi: ರಾಯ್‌ಬರೇಲಿಯಲ್ಲಿ ಜನ ಜೈ ಶ್ರೀರಾಮ್‌ ಎನ್ನುತ್ತಲೇ ಕಾಲ್ಕಿತ್ತ ರಾಹುಲ್‌ ಗಾಂಧಿ! Video ಇದೆ

MS Dhoni Bike Riding
ಕ್ರೀಡೆ6 hours ago

MS Dhoni Bike Riding: ಐಪಿಎಲ್​ ಮುಗಿಸಿ ತವರಿಗೆ ಮರಳಿದ್ದೇ ತಡ, ಬೈಕ್ ರೈಡಿಂಗ್​ ಮಾಡಿದ ಧೋನಿ​

Self Harming
ಕರ್ನಾಟಕ6 hours ago

Self Harming: ಟಿಸಿ ಕೊಟ್ಟಿಲ್ಲವೆಂದು ಬೇಸರಗೊಂಡು ವಿದ್ಯಾರ್ಥಿ ಆತ್ಮಹತ್ಯೆ

AAP Funds
ದೇಶ6 hours ago

AAP Funds: ನಿಯಮ ಉಲ್ಲಂಘಿಸಿ ಬೇರೆ ದೇಶಗಳಿಂದ ಆಪ್‌ 7 ಕೋಟಿ ರೂ. ದೇಣಿಗೆ ಸ್ವೀಕಾರ; ಇ.ಡಿ ಸ್ಫೋಟಕ ಮಾಹಿತಿ!

Karnataka weather Forecast
ಕರ್ನಾಟಕ7 hours ago

Coastal Weather: ದಕ್ಷಿಣ ಕನ್ನಡ, ಉಡುಪಿಯಲ್ಲಿ ಎರಡು ದಿನ ಭಾರೀ ಮಳೆ ಸಾಧ್ಯತೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ15 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌