Vladimir Putin: ರಷ್ಯ ಅಧ್ಯಕ್ಷ ಪುಟಿನ್‌ ವಿರುದ್ಧ ಬಂಡಾಯ ಎದ್ದಿದ್ದ ಖಾಸಗಿ ಸೇನೆ ಮಾಲಿಕ ಬರ್ಬರ ಸಾವು! - Vistara News

ವಿದೇಶ

Vladimir Putin: ರಷ್ಯ ಅಧ್ಯಕ್ಷ ಪುಟಿನ್‌ ವಿರುದ್ಧ ಬಂಡಾಯ ಎದ್ದಿದ್ದ ಖಾಸಗಿ ಸೇನೆ ಮಾಲಿಕ ಬರ್ಬರ ಸಾವು!

ʼಇದೊಂದು ನಿರೀಕ್ಷಿತ ಸಾವುʼ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ. ಪುಟಿನ್‌ (Vladimir Putin) ತಮ್ಮ ವಿರುದ್ಧ ಧ್ವನಿಯೆತ್ತುವ ವಿರೋಧಿಗಳನ್ನು ಸದ್ದಿಲ್ಲದೆ ಮುಗಿಸಿಬಿಡುವ ಕುಖ್ಯಾತಿ ಹೊಂದಿದ್ದಾರೆ.

VISTARANEWS.COM


on

Yevgeny Prigozhin
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಾಸ್ಕೋ: ಈ ವರ್ಷದ ಜೂನ್‌ನಲ್ಲಿ ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ವಿರುದ್ಧ ಬಂಡಾಯವೆದ್ದಿದ್ದ ಖಾಸಗಿ ಸೈನ್ಯ ವ್ಯಾಗ್ನರ್ (Wagner Group) ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ (Yevgeny Prigozhin), ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಬುಧವಾರ ರಷ್ಯಾದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ (plane crash) ಯೆವ್ಗೆನಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಈ ವಿಮಾನದಲ್ಲಿದ್ದ ಪ್ರಯಾಣಿಕರ ಪಟ್ಟಿಯಲ್ಲಿ ಯೆವ್ಗೆನಿ ಹೆಸರಿತ್ತು. ರಷ್ಯಾದ ಸುದ್ದಿ ಏಜೆನ್ಸಿಗಳು ಯೆವ್ಗೆನಿ ಸಾವನ್ನು ಘೋಷಿಸಿವೆ. ʼಇದೊಂದು ನಿರೀಕ್ಷಿತ ಸಾವುʼ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ. ಪುಟಿನ್‌ ತಮ್ಮ ವಿರುದ್ಧ ಧ್ವನಿಯೆತ್ತುವ ವಿರೋಧಿಗಳನ್ನು ಸದ್ದಿಲ್ಲದೆ ಮುಗಿಸಿಬಿಡುವ ಕುಖ್ಯಾತಿ ಹೊಂದಿದ್ದಾರೆ.

“ಟ್ವೆರ್ ಪ್ರದೇಶದಲ್ಲಿ ಅಪಘಾತಕ್ಕೀಡಾದ ವಿಮಾನದ ಪ್ರಯಾಣಿಕರ ಪಟ್ಟಿಯಲ್ಲಿ ಯೆವ್ಗೆನಿ ಪ್ರಿಗೋಜಿನ್ ಹೆಸರು ಇದೆ. ರಷ್ಯಾದ ವಾಯುಯಾನ ಸಂಸ್ಥೆ ರೊಸಾವಿಯಾಟ್ಸಿಯಾ ಇದನ್ನು ತಿಳಿಸಿದೆ ಎಂದು ರಷ್ಯನ್‌ ಸುದ್ದಿ ಸಂಸ್ಥೆಗಳಾದ ಟಾಸ್‌, ರಿಯಾ, ಇಂಟರ್‌ಫ್ಯಾಕ್ಸ್ ವರದಿ ಮಾಡಿವೆ. ವಿಮಾನದಲ್ಲಿ 3 ಸಿಬ್ಬಂದಿ ಸೇರಿದಂತೆ 10 ಜನರಿದ್ದರು. ಪ್ರಾಥಮಿಕ ಮಾಹಿತಿಗಳ ಪ್ರಕಾರ ಎಲ್ಲರೂ ಸತ್ತಿದ್ದಾರೆ.

ವಿಮಾನ ಮಾಸ್ಕೋದಿಂದ ಸೇಂಟ್ ಪೀಟರ್ಸ್‌ಬರ್ಗ್‌ಗೆ ಪ್ರಯಾಣಿಸುತ್ತಿತ್ತು. ಇದೊಂದು ಖಾಸಗಿ ಎಂಬ್ರೇಯರ್ ಲೆಗಸಿ ವಿಮಾನ ಆಗಿತ್ತು. ಟ್ವೆರ್ ಪ್ರದೇಶದ ಕುಜೆಂಕಿನೋ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ ಎಂದು ರಷ್ಯಾ ವಿಮಾನಯಾನ ಸಚಿವಾಲಯ ತಿಳಿಸಿದೆ. ಶೋಧಕಾರ್ಯ ನಡೆಸಲಾಗುತ್ತಿದೆ. ವ್ಯಾಗ್ನರ್‌ನ ಅಧಿಕೃತ ಟೆಲಿಗ್ರಾಂ ಖಾತೆಯಲ್ಲಿ ಉರಿಯುತ್ತಿರುವ ವಿಮಾನದ ವಿಡಿಯೊವೊಂದನ್ನು ಪೋಸ್ಟ್ ಮಾಡಲಾಗಿದೆ. ‌

ಮೇ ತಿಂಗಳಲ್ಲಿ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಪುಟಿನ್‌ ವಿರುದ್ಧ ಬಂಡೆದ್ದಿದ್ದರು. ರಷ್ಯಾದ ಮಿಲಿಟರಿ ನಾಯಕರು ತನ್ನ ಪಡೆಗಳಿಗೆ ಮದ್ದುಗುಂಡುಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿದ್ದರು. ಜೂನ್ 23ರ ರಾತ್ರಿ, ರಷ್ಯಾದ ಮಿಲಿಟರಿ ಕಮಾಂಡ್ ಅನ್ನು ಉರುಳಿಸಲು ಯೆವ್ಗೆನಿ ಪ್ರಿಗೊಜಿನ್ ಕರೆ ನೀಡಿದ್ದರು. 24 ಗಂಟೆಗಳ ಬಿಗಿ ಪರಿಸ್ಥಿತಿಯ ಬಳಿಕ ಪ್ರಿಗೋಜಿನ್ ತನ್ನ ಪಡೆಗಳನ್ನು ಹಿಂದೆ ತೆಗೆದುಕೊಂಡಿದ್ದ. ಯೆವ್ಗೆನಿ ಮತ್ತು ಪುಟಿನ್‌ ನಡುವೆ ರಾಜಿ ಸಂಧಾನ ನಡೆದಿದೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ವಿಸ್ತಾರ Explainer: Russian Coup: ರಷ್ಯ ಅಧ್ಯಕ್ಷ ಪುಟಿನ್‌ಗೆ ಪರಮವೈರಿಯಾದ ಪರಮಾಪ್ತ; ಯಾರಿವನು ಯೆವ್ಗೆನಿ ಪ್ರಿಗೋಜಿನ್‌?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

ರಾಜಮಾರ್ಗ ಅಂಕಣ: ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

VISTARANEWS.COM


on

ರಾಜಮಾರ್ಗ ಅಂಕಣ euthanasia zoraya ter beek
Koo

ನೆದರ್‌ಲ್ಯಾಂಡ್ ದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆಕೆ ಲೋಕೋತ್ತರ ಸುಂದರಿ. ವಯಸ್ಸು ಇನ್ನೂ 28. ಆಕೆ ಉತ್ಸಾಹದ ಖಣಿ. ಮೇಲ್ನೋಟಕ್ಕೆ 100% ಫಿಟ್ ಮತ್ತು ಆರೋಗ್ಯಪೂರ್ಣ ಆಗಿದ್ದಾರೆ. ಆದರೆ ಆಕೆ ತನ್ನ ದೇಶದ ಕಾನೂನಿನ ನೆರವು ಪಡೆದುಕೊಡು ತನ್ನ ಜೀವನಕ್ಕೊಂದು ಪೂರ್ಣವಿರಾಮ ಇಡಲು ನಿರ್ಧಾರ ಮಾಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ವಿಧಾನ ಅಂದರೆ ದಯಾಮರಣ (euthanasia)! ಅಂದರೆ ತನ್ನ ಇಷ್ಟದ ಪ್ರಕಾರ, ಇಷ್ಟದ ಜಾಗದಲ್ಲಿ, ಇಷ್ಟದ ಜನರ ಮುಂದೆ, ಇಷ್ಟದ ರೀತಿಯಲ್ಲಿ ಸಾಯುವುದು..!

ದಯಾಮರಣ – ನೆದರ್‌ಲ್ಯಾಂಡ್‌ನಲ್ಲಿ ಕಾನೂನು ಸಮ್ಮತ

ನೆದರ್‌ಲ್ಯಾಂಡ್ (Netherlands) ದೇಶವು ದಯಾಮರಣಕ್ಕೆ ಕಾನಾನು ಸಮ್ಮತಿ ನೀಡಿ 22 ವರ್ಷಗಳೇ ಸಂದಿವೆ! ಅಸಹನೀಯ ನೋವು, ಗುಣಪಡಿಸಲು ಆಗದ ಕಾಯಿಲೆ, ಮಾನಸಿಕ ಅಸ್ವಾಸ್ಥ್ಯ ಸೇರಿದಂತೆ ಆರು ಕಾರಣಕ್ಕೆ ಸರಕಾರ ದಯಾಮರಣಕ್ಕೆ ಅನುಮತಿಯನ್ನು ನೀಡುತ್ತದೆ. 2022ರಲ್ಲಿ ಆ ದೇಶದಲ್ಲಿ ಕಾನೂನಿನ ನೆರವು ಪಡೆದು 8730 ಮಂದಿ ದಯಾಮರಣದ ಮೂಲಕ ತಮ್ಮ ಬದುಕನ್ನು ಕೊನೆಗೊಳಿಸಿದ್ದಾರೆ! ಇದು ಕಳೆದ ವರ್ಷಕ್ಕಿಂತ 14% ಅಧಿಕ ಎಂದು ಅಲ್ಲಿನ ಸರಕಾರ ಹೇಳಿದೆ.

ಝೋರಯಾಗೆ ಮಾನಸಿಕ ಕಾಯಿಲೆ

ಈ ಚಂದದ ಹುಡುಗಿ ಝೊರೆಯಾ (Zoraya Ter Beek) ಬಳಲುತ್ತಿರುವುದು ಖಿನ್ನತೆ, ಉದ್ವೇಗ ಆಕೆಯ ಬಾಲ್ಯದ ಒಡನಾಡಿಗಳು. ಇತ್ತೀಚೆಗೆ ಆಟಿಸಂ ಕೂಡ ಸೇರಿಕೊಂಡು ಆಕೆಗೆ ಬದುಕೇ ಅಸಹನೀಯವಾಗುತ್ತು. ಯಾವುದೆಲ್ಲ ಔಷಧಿ, ಚಿಕಿತ್ಸಾ ವಿಜ್ಞಾನ ಮತ್ತು ಕೌನ್ಸೆಲಿಂಗ್ ನಡೆದರೂ ಅವಳಿಗೆ ಅದ್ಯಾವುದೂ ರಿಲೀಫ್ ಕೊಡಲಿಲ್ಲ. ವೈದ್ಯರೂ ʼಇನ್ನು ಸಾಧ್ಯವಿಲ್ಲ’ ಎಂದು ಹೇಳಿದ ನಂತರ ಆಕೆ ಆರಿಸಿಕೊಂಡದ್ದು ಸಾವನ್ನು! ಆತ್ಮಹತ್ಯೆ ಮಾಡಿ ಸಾಯಲು ಮನಸಿಲ್ಲ ಎಂದಾಕೆ ಗಟ್ಟಿಯಾದ ನಿರ್ಧಾರ ತೆಗೆದುಕೊಂಡ ನಂತರ ಆಕೆಗೆ ಉಳಿದದ್ದು ಒಂದೇ ಪರಿಹಾರ – ಅದು ದಯಾಮರಣ! ಆಕೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದು 2020ರಲ್ಲಿ. ಅದೀಗ ಪರ ವಿರೋಧ ಚರ್ಚೆಯಾಗಿ ಈಗ ತೀರ್ಪು ಆಕೆಯ ಪರವಾಗಿ ಬಂದಿದೆ. ಅಂದರೆ ದಯಾಮರಣಕ್ಕೆ ಅನುಮತಿ ದೊರೆತಿದೆ.

ರಾಜಮಾರ್ಗ ಅಂಕಣ euthanasia zoraya ter beek

ದಯಾಮರಣ ಹೇಗೆ?

ಅರ್ಜಿದಾರರು ಇಷ್ಟಪಡುವ ಸ್ಥಳದಲ್ಲಿ, ಇಷ್ಟಪಡುವ ಸನ್ನಿವೇಶವನ್ನು ಕ್ರಿಯೇಟ್ ಮಾಡಿ ನಿಗದಿ ಪಡಿಸಿದ ದಿನದಂದು ವೈದ್ಯರು ಆಕೆಗೆ ಒಂದು ಅರಿವಳಿಕೆಯ ಇಂಜೆಕ್ಷನ್ ನೀಡುತ್ತಾರೆ. ಆಕೆ ಕೋಮಾ ತಲುಪುವುದನ್ನು ಕಾಯುವ ವೈದ್ಯರು ನಂತರ ಹೃದಯವು ನಿಧಾನವಾಗಿ ನಿಲ್ಲುವ ಔಷಧಿ ಕೊಡುತ್ತಾರೆ. ಒಂದಿಷ್ಟೂ ನೋವು ಪಡದೆ ಅರ್ಜಿದಾರರು ನಿಧಾನವಾಗಿ ಶಾಶ್ವತ ನಿದ್ದೆಗೆ ಜಾರುತ್ತಾರೆ. ಆಗ ದಯಾಮರಣ ಸಮಿತಿಯು ಅವರನ್ನು ಪರಿಶೀಲನೆ ಮಾಡಿ ಸಾವು ಸಂಭವಿಸಿದೆ ಎಂದು ಘೋಷಣೆ ಮಾಡಿದಲ್ಲಿಗೆ ಪ್ರಕ್ರಿಯೆ ಪೂರ್ತಿ ಆಗುತ್ತದೆ.

ಸಾವನ್ನು ಸ್ವಾಗತಿಸಲು ಮಾನಸಿಕ ಸಿದ್ಧತೆ

ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

`ನನಗೆ ಪಾಪಪ್ರಜ್ಞೆ ಕಾಡುತ್ತಿಲ್ಲ. ನನಗಾಗಿ ಯಾರೂ ಕಣ್ಣೀರು ಸುರಿಸುವ ಅಗತ್ಯ ಇಲ್ಲ. ಇದು ನಾನೇ ಆರಿಸಿಕೊಂಡ ಸಾವು. ಹಾಗಾಗಿ ನನಗೆ ಯಾವ ವಿಷಾದವೂ ಇಲ್ಲ’ ಎಂದಾಕೆ ನಗುನಗುತ್ತಾ ಹೇಳುವಾಗ ಯಾರ ಮನಸ್ಸಾದರೂ ಕರಗದೆ ಇರದು!

ಹೋಗಿ ಬಾ ಝೊರೆಯಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

Continue Reading

ಪ್ರಮುಖ ಸುದ್ದಿ

Ebola Virus: ಲ್ಯಾಬ್‌ನಲ್ಲಿ ಮತ್ತೊಂದು ಡೆಡ್ಲಿ ವೈರಸ್‌ ಸೃಷ್ಟಿಸಿದ ಚೀನಾ; ಈ ಲಕ್ಷಣ ಕಂಡರೆ ಮರಣ ನಿಶ್ಚಿತ!

Ebola Virus: ಎಬೋಲಾ ಸಾಂಕ್ರಾಮಿಕವಾಗಿದ್ದು, ಇದು ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಕೋತಿ, ಬಾವಲಿಯ ರಕ್ತ, ಸೋಂಕಿನಿಂದ ಕೂಡಿದ ಗಾಳಿ ಅಥವಾ ಎಬೋಲಾ ಸೋಂಕಿತನ ವೀರ್ಯದಿಂದ ಹರಡುತ್ತದೆ ಎಂದು ತಿಳಿದುಬಂದಿದೆ. ಸೋಂಕು ತಗುಲಿದವರು ಬಹು ಅಂಗಾಂಗ ವೈಫಲ್ಯದಿಂದ ಮೃತಪಡುತ್ತಾರೆ ಎಂಬುದಾಗಿ ಚೀನಾದ ವಿಜ್ಞಾನಿಗಳು ಹೇಳಿದ್ದಾರೆ. ಇದರಿಂದಾಗಿ ಭಾರತ ಸೇರಿ ಜಗತ್ತಿನಾದ್ಯಂತ ಭೀತಿ ಎದುರಾಗಿದೆ.

VISTARANEWS.COM


on

Ebola Virus
Koo

ಬೀಜಿಂಗ್: ಜಗತ್ತಿಗೇ ಕೊರೊನಾ (Corona Virus) ಎಂಬ ಮಹಾಮಾರಿಯನ್ನು ಹರಡಿ, ಕೋಟ್ಯಂತರ ಜನರ ಪ್ರಾಣಕ್ಕೆ ಕುತ್ತು ತಂದ ಚೀನಾ ಈಗ ಮತ್ತೊಂದು ಜೈವಿಕ ಯುದ್ಧಕ್ಕೆ ಮುಂದಾಗಿದೆ. ಮಾರಣಾಂತಿಕ ಎಬೋಲಾ ರೂಪಾಂತರಿ ಸೋಂಕನ್ನು (Ebola Mutant Virus) ಚೀನಾದ ವಿಜ್ಞಾನಿಗಳು ಸೃಷ್ಟಿಸಿದ್ದು, ಇದರಿಂದ ಜಗತ್ತಿಗೇ ಆತಂಕ ಎದುರಾಗಿದೆ. ಹೆಬೈ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ವಿಜ್ಞಾನಿಗಳು ಎಬೋಲಾ ರೂಪಾಂತರಿ ವೈರಸ್‌ಅನ್ನು ಸೃಷ್ಟಿಸಿದ್ದಾರೆ. ಹ್ಯಾಮ್‌ಸ್ಟರ್‌ಗಳಿಗೆ (ಕಿರುಕಡಿಗ-ಇಲಿಯಂತ ಚಿಕ್ಕ ಪ್ರಾಣಿ) ವೈರಸ್‌ ಇಂಜೆಕ್ಟ್‌ ಮಾಡಿದರೆ, ಮೂರೇ ದಿನಗಳಲ್ಲಿ ಅವರು ಸಾಯುತ್ತವೆ ಎಂದು ಸೈನ್ಸ್‌ ಡೈರೆಕ್ಟ್‌ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ.

ಸಿರಿಯಾ ಮೂಲದ, ಮೂರು ವಾರಗಳ ಹಿಂದೆ ಜನಿಸಿದ ಹ್ಯಾಮ್‌ಸ್ಟರ್‌ಗಳಿಗೆ ಎಬೋಲಾ ರೂಪಾಂತರಿ ತಳಿಯ ವೈರಸ್‌ಅನ್ನು ಇಂಜೆಕ್ಟ್‌ ಮಾಡಲಾಗಿತ್ತು. 5 ಗಂಡು ಹಾಗೂ 5 ಹೆಣ್ಣು ಹ್ಯಾಮ್‌ಸ್ಟರ್‌ಗಳಿಗೆ ಸೋಂಕನ್ನು ಇಂಜೆಕ್ಷನ್‌ ಮೂಲಕ ನೀಡಲಾಗಿತ್ತು. ಮೂರು ದಿನಗಳಲ್ಲಿಯೇ ಅವರು ಮೃತಪಟ್ಟವು” ಎಂಬುದಾಗಿ ವಿಜ್ಞಾನಿಗಳೇ ಹೇಳಿದ್ದಾರೆ. ಹಾಗಾಗಿ, ಇದು ಕೂಡ ಕೊರೊನಾ ಸಾಂಕ್ರಾಮಿಕದಂತೆ ಮಾರಣಾಂತಿಕವಾಗಿದ್ದು, ಭಾರತ ಸೇರಿ ಜಗತ್ತಿನ ಹಲವು ರಾಷ್ಟ್ರಗಳಿಗೆ ಕಮ್ಯುನಿಸ್ಟ್‌ ರಾಷ್ಟ್ರವು ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.

ಮನುಷ್ಯರಿಗೆ ಹೇಗೆ ಅಪಾಯ?

ಹ್ಯಾಮ್‌ಸ್ಟರ್‌ಗಳಿಗೆ ಉಂಟಾದ ಪರಿಣಾಮವೇ ಮನುಷ್ಯರಿಗೂ ಆಗಲಿದೆ. ಮೊದಲು ಜೀವಕೋಶಗಳಿಗೆ ಹರಡುವ ಸೋಂಕು, ಹೃದಯ, ಶ್ವಾಸಕೋಶ, ಹೊಟ್ಟೆ, ಲಿವರ್‌ ಸೇರಿ ಹಲವು ಅಂಗಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಕೊನೆಗೆ, ಬಹು ಅಂಗಾಂಗ ವೈಫಲ್ಯದಿಂದ ಮನುಷ್ಯನು ಕೂಡ ಮೂರ್ನಾಲ್ಕು ದಿನಗಳಲ್ಲಿಯೇ ಮೃತಪಡಲಿದ್ದಾನೆ ಎಂಬುದಾಗಿ ಚೀನಾ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಜಗತ್ತಿನಾದ್ಯಂತ ಭೀತಿ ಎದುರಾಗಿದೆ.

ಎಬೋಲಾ ಹರಡುವುದು ಹೇಗೆ?

ಎಬೋಲಾ ಸಾಂಕ್ರಾಮಿಕವಾಗಿದ್ದು, ಇದು ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಕೋತಿ, ಬಾವಲಿಯ ರಕ್ತ, ಸೋಂಕಿನಿಂದ ಕೂಡಿದ ಗಾಳಿ ಅಥವಾ ಎಬೋಲಾ ಸೋಂಕಿತನ ವೀರ್ಯದಿಂದ ಹರಡುತ್ತದೆ ಎಂದು ತಿಳಿದುಬಂದಿದೆ. ಗಂಟಲು ನೋವು, ಸ್ನಾಯು ನೋವು ಮತ್ತು ತಲೆನೋವು, ಯಕೃತ್ತು ಮತ್ತು ಮೂತ್ರ ಕಾರ್ಯನಿರ್ವಹಣೆಯ ಹದಗೆಡುತ್ತದೆ. ಸಾಮಾನ್ಯವಾಗಿ ವಾಕರಿಕೆ, ವಾಂತಿ ಮತ್ತು ಭೇದಿ ಇದರ ಲಕ್ಷಣಗಳಾಗಿವೆ. ಬಾವಲಿ, ಕೋತಿಯಂತಹ ಪ್ರಾಣಿಗಳಿಂದ ದೂರ ಇರುವುದು ಒಳಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Chocolate: ಏನಿದು ಮೀಲಿಬಗ್‌ ವೈರಸ್‌? ಚಾಕೊಲೇಟ್ ದರ ಏರಿಕೆಗೂ ಇದಕ್ಕೂ ಏನು ಸಂಬಂಧ?

Continue Reading

ವಿದೇಶ

Youngest Artist: ಅಂಬೆಗಾಲಿಡುವ ಬಾಲಕ ಈಗ ವಿಶ್ವದ ಅತಿ ಕಿರಿಯ ಚಿತ್ರ ಕಲಾವಿದ!

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ವಿಶ್ವದ ಕಿರಿಯ ಚಿತ್ರಕಲಾವಿದ (Youngest Artist) ಘಾನಾದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ್ದಾನೆ! ಈ ಅತಿ ಕಿರಿಯ ಕಲಾವಿದನ ಕುರಿತು ವ್ಯಾಪಕ ಕುತೂಹಲ ಉಂಟಾಗಿದೆ.

VISTARANEWS.COM


on

By

Youngest Artist
Koo

ಅಂಬೆಗಾಲಿಡುವ (Toddler) ಮಗು ವರ್ಣಚಿತ್ರಗಳನ್ನು (Youngest Artist) ರಚಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records) ಬರೆದಿದೆ. ವಿಶ್ವದ ಅತ್ಯಂತ ಕಿರಿಯ ಚಿತ್ರ ಕಲಾವಿದ ಎನ್ನುವ ಖ್ಯಾತಿಗೆ ಈ ಮಗು ಪಾತ್ರವಾಗಿದೆ. ಘಾನಾದ (Ghana) 1 ವರ್ಷ 152 ದಿನಗಳ ಏಸ್-ಲಿಯಾಮ್ ನಾನಾ ಸ್ಯಾಮ್ ಆಂಕ್ರಾ (Ace-Liam Nana Sam Ankrah) ತಾನೇ ರಚಿಸಿದ 9 ವರ್ಣಚಿತ್ರಗಳನ್ನು ಮಾರಾಟ ಮಾಡಿ ಈ ದಾಖಲೆ ನಿರ್ಮಿಸಿದೆ.

ಏಸ್- ಲಿಯಾಮ್ ನಾನಾ ಸ್ಯಾಮ್ ಆಂಕ್ರಾ ವಿಶ್ವದ ಅತ್ಯಂತ ಕಿರಿಯ ಪುರುಷ ಚಿತ್ರ ಕಲಾವಿದನಾಗಿ ಪ್ರತಿಷ್ಠಿತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ.

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ವರ್ಣಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ. ಆಂಕ್ರಾನ ಈ ಸಾಧನೆ ಹಲವಾರು ಮಂದಿಯ ಗಮನ ಸೆಳೆದಿದ್ದ್ದು, ಜಾಗತಿಕ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ವಿಶ್ವ ದಾಖಲೆ ಪಟ್ಟಿಯಲ್ಲಿ ಆಂಕ್ರಾ ಹೆಸರು ಸೇರ್ಪಡೆಗೆ ಸಾಕಷ್ಟು ಮಂದಿ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.


ಯಾವಾಗ ಚಿತ್ರಕಲೆ ಪ್ರಾರಂಭಿಸಿದ್ದು?

ಈಗಷ್ಟೇ ಅಂಬೆಗಾಲಿಡುತ್ತಿರುವ ಆಂಕ್ರಾ ಕೇವಲ ಆರು ತಿಂಗಳಲ್ಲೇ ಚಿತ್ರಕಲೆಯನ್ನು ಪ್ರಾರಂಭಿಸಿದನು ಎನ್ನುತ್ತಾರೆ ಆತನ ತಾಯಿ. ಚಿತ್ರಕಲೆಯ ಮೇಲಿನ ಆತನ ಉತ್ಸಾಹವು ಚಿಕ್ಕ ವಯಸ್ಸಿನಿಂದಲೂ ಸ್ಪಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆತ ಕಲಿಯಲು ಪ್ರಾರಂಭ ಮಾಡಿದಾಗಲೇ ಕ್ಯಾನ್ವಾಸ್‌ನ ತುಂಡನ್ನು ನೆಲದ ಮೇಲೆ ಹರಡಿ ಅದರ ಮೇಲೆ ಸ್ವಲ್ಪ ಬಣ್ಣವನ್ನು ಬೀಳಿಸಿದೆ. ಕ್ಯಾನ್ವಾಸ್‌ನಾದ್ಯಂತ ಆತ ಬಣ್ಣವನ್ನು ಹರಡಿ ಕೊನೆಗೊಳಿಸಿದ. ಇದು ಆತನ ಮೊದಲ ವರ್ಣಚಿತ್ರ ‘ದಿ ಕ್ರಾಲ್’ ಎಂದು ಅವರು ವಿವರಿಸಿದರು.


ಅಂಬೆಗಾಲಿಡುವ ಘಾನಾದ ಆಂಕ್ರಾ ಈಗ ಸೆಲೆಬ್ರಿಟಿಯಾಗಿದ್ದಾನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಮಾತ್ರವಲ್ಲದೆ ಘಾನಾ ಗಣರಾಜ್ಯದ ಪ್ರಥಮ ಮಹಿಳೆಯ ಗಮನವನ್ನೂ ಆತ ಸೆಳೆದಿದ್ದಾನೆ.

ಮೊದಲ ಪ್ರದರ್ಶನ

ಏಸ್- ಲಿಯಾಮ್ ಆಂಕ್ರಾ ಇತ್ತೀಚೆಗೆ ತನ್ನ ಚಿತ್ರಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನ ನಡೆಸಿದ. ಇದರಲ್ಲಿ ಆತನ ಹತ್ತು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಅವುಗಳಲ್ಲಿ ಒಂಬತ್ತು ಮಾರಾಟವಾಗಿವೆ. ಏಸ್- ಲಿಯಾಮ್‌ನ ಕಲೆಯು ನಿರ್ದಿಷ್ಟ ಸಂದೇಶಗಳನ್ನು ರವಾನಿಸುವುದಕ್ಕಿಂತ ಹೆಚ್ಚಾಗಿ ಅಭಿವ್ಯಕ್ತಿ ಮತ್ತು ಅನ್ವೇಷಣೆಯ ಬಗ್ಗೆ ಹೆಚ್ಚಾಗಿದೆ ಎಂದು ಆತನ ತಾಯಿ ಹೇಳಿದ್ದಾರೆ.

ಅವನ ಅಮೂರ್ತ ವರ್ಣಚಿತ್ರಗಳು ಸುತ್ತಲಿನ ಪ್ರಪಂಚದಿಂದ ಪ್ರೇರಿತವಾಗಿವೆ. ಬಣ್ಣ, ಆಕಾರ, ಟೆಕಶ್ಚರ್ ಮತ್ತು ಅವನ ಮನಸ್ಥಿತಿಯನ್ನು ಇದು ಅವಲಂಬಿಸಿದೆ. ಪ್ರತಿ ಚಿತ್ರಕಲೆಯು ಹೊಸ ವಿಷಯಗಳನ್ನು ಕಂಡುಹಿಡಿಯುವಲ್ಲಿ ಆತನ ಕುತೂಹಲ ಮತ್ತು ಸಂತೋಷದ ಅಭಿವ್ಯಕ್ತಿಯಾಗಿದೆ ಎಂದಿದ್ದಾರೆ ಅವರು.


ಭವಿಷ್ಯದ ಯೋಜನೆಗಳು

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ವಿಶ್ವದ ಅತ್ಯಂತ ಕಿರಿಯ ಕಲಾವಿದ ಲಿಯಾಮ್ ಅವರ ದಾಖಲೆಯನ್ನು ಅನುಮೋದಿಸಿದ ಬಳಿಕ ಆತನ ಕುಟುಂಬವು ಆತನ ಕಲಾತ್ಮಕ ಪ್ರತಿಭೆಗೆ ಗುಣಮಟ್ಟದ ಶಿಕ್ಷಣದ ಮೂಲಕ ಪೋಷಿಸಲು ಅವಕಾಶಗಳನ್ನು ಹುಡುಕುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನದ ಅವಕಾಶಗಳು ಅವರಿಗೆ ದೊರೆಯುತ್ತದೆ ಮತ್ತು ಆತನ ಕಲಾಕೃತಿಗಳನ್ನು ಮಾರಾಟ ಮಾಡಲು ಬಯಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

ಏಸ್-ಲಿಯಾಮ್ ತಾಯಿಯ ಸಲಹೆ ಏನು?

ತಮ್ಮ ಆಸಕ್ತಿಗಳನ್ನು ಕಂಡುಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಲು ಪೋಷಕರಿಗೆ ಸಲಹೆ ನೀಡಿದ ಅವರು, ಪ್ರತಿ ಮಗು ಅನನ್ಯವಾಗಿದೆ ಮತ್ತು ಅವರ ಭಾವೋದ್ರೇಕಗಳನ್ನು ಪೋಷಿಸುವುದು ಅದ್ಭುತ ಆವಿಷ್ಕಾರಗಳು ಮತ್ತು ಸಾಧನೆಗಳಿಗೆ ಕಾರಣವಾಗಬಹುದು. ಅದನ್ನು ಪ್ರಯತ್ನಿಸುವ ಮೊದಲು ಅದನ್ನು ಮತ್ತೆ ಮತ್ತೆ ಓದಿ ಮತ್ತು ನೆನಪಿಡಿ. ಪ್ರಯಾಣ ಮತ್ತು ಅದು ತರುವ ಸಂತೋಷವು ತುಂಬಾ ತೃಪ್ತಿಕರವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Continue Reading

ವಿದೇಶ

17 ವರ್ಷದ ವಿದ್ಯಾರ್ಥಿಯ ಜತೆ 30 ಸಲ ಸೆಕ್ಸ್‌ ಮಾಡಿದ ಶಿಕ್ಷಕಿ; ಮುಂದೇನಾಯ್ತು ಅನ್ನೋದೇ ರೋಚಕ!

ಅರ್ಕನಾಸ್‌ನಲ್ಲಿರುವ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಹೀದರ್‌ ಕೇರ್‌ ಎಂಬ ಶಿಕ್ಷಕಿಯು ಇಂತಹ ಹೀನ ಕೃತ್ಯ ಎಸೆಗಿದ್ದಾರೆ. ಮದುವೆಯಾಗಿ, ಇಬ್ಬರು ಮಕ್ಕಳಿರುವ ಹೀದರ್‌ ಕೇರ್‌, ವಾಷಿಂಗ್ಟನ್‌ ಡಿಸಿಗೆ ಪ್ರವಾಸಕ್ಕೆ ಹೋದಾಗ 17 ವರ್ಷದ ವಿದ್ಯಾರ್ಥಿಯ ಜತೆ ಸೆಕ್ಸ್‌ ಮಾಡಿದ್ದಾರೆ. ಈ ವಿಷಯ ಬಹಿರಂಗವಾದ ಬಳಿಕ ನ್ಯಾಯಾಲಯವು ಆಕೆಗೆ 13 ವರ್ಷ ಜೈಲು ಶಿಕ್ಷೆ ವಿಧಿಸಿದೆ.

VISTARANEWS.COM


on

Teacher
Koo

ವಾಷಿಂಗ್ಟನ್: ತಂದೆ-ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ಕೊಡುತ್ತೇವೆ. ಗುರುವನ್ನೇ ತಂದೆಯ ಸ್ಥಾನದಲ್ಲಿಟ್ಟು ನೋಡುವವರು ಇದ್ದಾರೆ. ಇನ್ನು ಗುರು ಎನಿಸಿಕೊಂಡವರೂ ಅಷ್ಟೇ, ಶಿಷ್ಯಂದಿರು ಮಾಡಿದ ತಪ್ಪನ್ನು ಮನ್ನಿಸಿ, ದಾರಿ ತಪ್ಪಿದಾಗ ಮಾರ್ಗದರ್ಶನ ನೀಡಿ, ಅವರನ್ನು ಸರಿದಾರಿಗೆ ತರಬೇಕು. ಅಂತಹ ಗುರುಗಳು ಇರುವ ಕಾರಣಕ್ಕಾಗಿಯೇ ಆಧುನಿಕ ಕಾಲದಲ್ಲೂ ಗುರುಗಳ ಮೇಲೆ ಗೌರವ ಇದೆ. ಆದರೆ, ಅಮೆರಿಕದಲ್ಲಿ ಶಿಕ್ಷಕಿಯೊಬ್ಬಳು ಗುರುವಿನ ಪದಕ್ಕೇ ಕಳಂಕ ತರುವ ಕೆಲಸ ಮಾಡಿದ್ದಾಳೆ. 17 ವರ್ಷದ ವಿದ್ಯಾರ್ಥಿಯ ಜತೆ 30 ಬಾರಿ ಸೆಕ್ಸ್‌ ಮಾಡುವ ಮೂಲಕ ಈಗ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ.

ಹೌದು, ಅರ್ಕನಾಸ್‌ನಲ್ಲಿರುವ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಹೀದರ್‌ ಕೇರ್‌ ಎಂಬ ಶಿಕ್ಷಕಿಯು ಇಂತಹ ಹೀನ ಕೃತ್ಯ ಎಸೆಗಿದ್ದಾರೆ. ಮದುವೆಯಾಗಿ, ಇಬ್ಬರು ಮಕ್ಕಳಿರುವ ಹೀದರ್‌ ಕೇರ್‌, ವಾಷಿಂಗ್ಟನ್‌ ಡಿಸಿಗೆ ಪ್ರವಾಸಕ್ಕೆ ಹೋದಾಗ 17 ವರ್ಷದ ವಿದ್ಯಾರ್ಥಿಯ ಜತೆ ಸೆಕ್ಸ್‌ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸುದ್ದಿವಾಹಿನಿಯೊಂದರಲ್ಲಿ ಲೈವ್‌ ಬಂದಿದ್ದ ಶಿಕ್ಷಕಿಯು, ವಿದ್ಯಾರ್ಥಿಗಳಿಗೆ ಗುಡ್‌ ಬೈ ಹೇಳಿ ಭಾರಿ ಸುದ್ದಿಯಾಗಿದ್ದಾರೆ. ಇದಾದ ಕೆಲ ವರ್ಷಗಳಲ್ಲಿ ಶಿಕ್ಷಕಿಯ ಕರಾಳ ಮುಖ ಬಯಲಾಗಿದೆ.

2021-22ರಲ್ಲಿ ತರಗತಿಯ ಮಕ್ಕಳೊಂದಿಗೆ ಹೀದರ್‌ ಹೇರ್‌ ಅವರು ವಾಷಿಂಗ್ಟನ್‌ ಡಿಸಿಗೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ, ಜೆ.ಆರ್.‌ ಎಂಬ 17 ವರ್ಷದ ವಿದ್ಯಾರ್ಥಿಗೆ ಆಕೆ ಮೊದಲ ಬಾರಿಗೆ ಲೈಂಗಿಕ ಕಿರುಕುಳ ಮಾಡಿದ್ದಾರೆ. ಆತನ ಜತೆ ಸೆಕ್ಸ್‌ ಮಾಡಿದ ಬಳಿಕ ಪದೇಪದೆ ಸೆಕ್ಸ್‌ ಮಾಡುವಂತೆ ಒತ್ತಾಯಿಸಿದ್ದಾರೆ. ಶಿಕ್ಷಕಿಯು ವಿದ್ಯಾರ್ಥಿಯ ಜತೆ ಪಾರ್ಕ್‌, ಕಾರು, ಮನೆ, ಸ್ಕೂಲ್‌ ಪಾರ್ಕಿಂಗ್‌, ತರಗತಿಯ ಕೊಠಡಿಯಲ್ಲಿಯೇ ಸೆಕ್ಸ್‌ ಮಾಡಿದ್ದಾರೆ ಎಂಬ ಭೀಕರ ಮಾಹಿತಿಯು ಬಹಿರಂಗವಾಗಿದೆ.

ಹಾಗಾಗಿ, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣದಿಂದ ನ್ಯಾಯಾಲಯವು ಹೈದರ್‌ ಹೇರ್‌ ಅವರಿಗೆ 13 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರವಾಸಕ್ಕೆ ಹೋಗುವ ಮೊದಲೇ ಬಾಲಕನ ಜತೆ ಸೆಕ್ಸ್‌ ಮಾಡುವ ಕುರಿತು ಟೀಚರ್‌ ಹೇಳಿದ್ದರು. ಇದಕ್ಕೆ ಬಾಲಕನು ಒಪ್ಪಿರಲಿಲ್ಲ. ಆದರೆ, ಬಲವಂತವಾಗಿ ಹೋಟೆಲ್‌ ರೂಮ್‌ಗೆ ಕರೆಸಿಕೊಂಡು, ಸೆಕ್ಸ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಬಳಿಕ ಬಾಲಕನು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಆತನ ಜತೆ ಆಪ್ತ ಸಮಾಲೋಚನೆ ನಡೆಯುತ್ತಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Salman Khan: ʻಅಲ್ಟಿಮೇಟ್ ಸೆಕ್ಸ್ ಸಿಂಬಲ್ʼ ನನ್ನ ಗಂಡ ಅಲ್ಲ, ಅದು ಸಲ್ಮಾನ್‌ ಖಾನ್‌ ಎಂದಳು ಖ್ಯಾತ ನಟಿ!

Continue Reading
Advertisement
lok sabha election 2024 jaishankar rahul sonia murmu
ಪ್ರಮುಖ ಸುದ್ದಿ17 mins ago

Lok Sabha Election: ಮತ ಚಲಾಯಿಸಿದ ರಾಷ್ಟ್ರಪತಿ ಮುರ್ಮು, ಸೋನಿಯಾ, ರಾಹುಲ್;‌ ಮತಕ್ಕಾಗಿ ಸರ್ಟಿಫಿಕೇಟ್ ಪಡೆದ ಜೈಶಂಕರ್‌!

Konark Tourist Destination
ಪ್ರವಾಸ19 mins ago

Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

Karthi next film Suriya to produce Meiyazhagan
ಕಾಲಿವುಡ್27 mins ago

Karthi next film: ಇಂದು ನಟ ಕಾರ್ತಿ ಬರ್ತ್‌ಡೇ: ತಮ್ಮನ ಚಿತ್ರಕ್ಕೆ ಅಣ್ಣ ಸೂರ್ಯ ಬಂಡವಾಳ!

IPL 2024
ಕ್ರೀಡೆ28 mins ago

IPL 2024: ಐಪಿಎಲ್​ ಟ್ರೋಫಿಯಲ್ಲಿರುವ ಸಂಸ್ಕೃತ ಶ್ಲೋಕದ ಮೂಲ ಸಾರವೇನು?

Best Tourist Places In Tamilnadu
ಪ್ರವಾಸ46 mins ago

Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

rave party culprit with jagan mohan reddy
ಪ್ರಮುಖ ಸುದ್ದಿ53 mins ago

Rave Party: ರೇವ್‌ ಪಾರ್ಟಿ ಆರೋಪಿಗೆ ಆಂಧ್ರ ಸಿಎಂ ಜಗನ್‌ ಜೊತೆ ಸ್ನೇಹ!

IPL 2024 Prize money
ಕ್ರೀಡೆ1 hour ago

IPL 2024 Prize money: ಐಪಿಎಲ್​ ವಿನ್ನರ್​ಗೆ ಸಿಗುವ ಬಹುಮಾನ ಮೊತ್ತವೆಷ್ಟು? 4ನೇ ಸ್ಥಾನಿ ಆರ್​ಸಿಬಿಗೆ ಸಿಕ್ಕ ಹಣವೆಷ್ಟು?

South Indian Monsoon Destinations
ಪ್ರವಾಸ1 hour ago

South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

Kiccha Sudeep Max cinema Pre climax Photo leak
ಸ್ಯಾಂಡಲ್ ವುಡ್1 hour ago

Kiccha Sudeep: ʻಮ್ಯಾಕ್ಸ್ʼ ಪ್ರಿ- ಕ್ಲೈಮ್ಯಾಕ್ಸ್ ಫೋಟೊ ಲೀಕ್‌? ಬೆಂಕಿ ಬಿರುಗಾಳಿ ಅಂದ್ರು ಫ್ಯಾನ್ಸ್‌!

lok sabha election 2024 jaishankar mufti
Lok Sabha Election 20242 hours ago

Lok Sabha Election: 58 ಕ್ಷೇತ್ರಗಳಲ್ಲಿ 6ನೇ ಹಂತದ ಮತದಾನ ಆರಂಭ; ಜೈಶಂಕರ್‌ ಮತಗಟ್ಟೆ ಗೊಂದಲ, ಮುಫ್ತಿ ಪ್ರತಿಭಟನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌