ಕನ್ನಡದ ಹುಡುಗರಿಗೆ ಬೇಕು ಕನ್ನಡದ ಡೇಟಿಂಗ್‌ ಆಪ್‌! - Vistara News

ಲೈಫ್‌ಸ್ಟೈಲ್

ಕನ್ನಡದ ಹುಡುಗರಿಗೆ ಬೇಕು ಕನ್ನಡದ ಡೇಟಿಂಗ್‌ ಆಪ್‌!

ಜನರೇಷನ್‌ z ಹಾಗೂ ಜನರೇಷನ್‌ ಆಲ್ಫಾ ಹುಡುಗ ಹುಡುಗೀರಿಗೆ ತಮ್ಮ ಪ್ರೀತಿಯನ್ನು ಕಂಡುಕೊಳ್ಳೋಕೆ ಕನ್ನಡದಲ್ಲೇ ಡೇಟಿಂಗ್‌ ಆಪ್ಸ್ ಬೇಕು ಅನ್ನೋದು ಬಡಪಾಯಿ ಕನ್ನಡ ಹುಡುಗರ ಆಗ್ರಹ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂಗ್ಲಿಷ್‌ ಚೆನ್ನಾಗಿ ಬಲ್ಲ ಈ ತಲೆಮಾರಿನ ಹದಿ ಹರೆಯದವರು ಡೇಟಿಂಗ್‌ ಆಪ್‌ಗಳ ಮೂಲಕ ತಮ್ಮ ಸಂಗಾತಿಗಳನ್ನು ಕಂಡುಕೊಳ್ಳುತ್ತಾರೆ. ಸದ್ಯ tinder ಎಂಬ ಡೇಟಿಂಗ್‌ ಆಪ್‌ ತುಂಬಾ ಪ್ರಚಲಿತದಲ್ಲಿದೆ. ಇದನ್ನು ಬಳಸುವವರ ಸಂಖ್ಯೆ ಎಷ್ಟೆಂದು ಊಹಿಸುವುದೂ ಕಷ್ಟ. ಆದರೆ ಈ ರೀತಿಯ ಆಪ್‌ಗಳು ಬಹುತೇಕ ವಿದೇಶ ಮೂಲದ್ದು. ಈ ಮಾದರಿಯ ಆಪ್‌ ಒಂದು ನಮ್ಮ ನಾಡಿನದ್ದೇ ಆಗಿದ್ದರೆ ಹೇಗಿರುತ್ತದೆ? ಕನ್ನಡದಲ್ಲಿ, ಕನ್ನಡಿಗರಿಗಾಗಿ ಹೀಗೊಂದು ಡೇಟಿಂಗ್‌ ಆಪ್‌ ಇದ್ದರೆ ಹೇಗೆ ಅಲ್ವಾ.


ಈವರೆಗೆ ಅತಿ ಹೆಚ್ಚು ಬಳಕೆಯಾಗಿರುವ ಟಿಂಡರ್‌ ಕೂಡ ಹಲವರಿಗೆ ಬೋರ್‌ ಎನ್ನಿಸಿದ್ದು ನಿಜ. ಆದ್ದರಿಂದ, ಮತ್ತೊಂದಿಷ್ಟು ಹೊಸ ಆಪ್‌ಗಳನ್ನು ಈ ಜನರೇಷನ್ ಶೋಧಿಸಿತು. ಆಗ ಬಂಬಲ್‌, ಹ್ಯಾಪ್ನ್‌, ಓಕೆ ಕ್ಯೂಪಿಡ್‌ನಂಥ ಹೊಸ ಆಪ್‌ಗಳು ಹುಟ್ಟಿವೆ. ಎಲ್ಲವೂ ವಿದೇಶದ ಆಪ್‌ಗಳು. ಇವೆಲ್ಲದರ ನಡುವೆ ಭಾರತದಲ್ಲೂ ಟ್ರೂಲಿಮ್ಯಾಡ್ಲಿ ಎಂಬ ಡೇಟಿಂಗ್‌ ಆಪ್ ಆವಿಷ್ಕರಿಸಲಾಯಿತು. ಆದರೆ ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಕಂಡುಬಂದಿಲ್ಲ. ಟಿಂಡರ್‌, ಬಂಬಲ್‌ನಂತಹ ಆಪ್‌ಗಳ ಬಳಕೆ ಸಾಮಾನ್ಯ ಕನ್ನಡಿಗರಿಗೆ ಕಷ್ಟ. ಹಾಗಾಗಿ ಕನ್ನಡದಲ್ಲೊಂದು ಡೇಟಿಂಗ್‌ ಆಪ್ ಇದ್ದರೆ ಅನುಕೂಲವಾಗಬಹುದು.

ಈ ಆಪ್‌ಗಳ ಬಳಕೆ ಹೇಗೆ?
ಒಂದೊಂದು ಆಪ್‌ನಲ್ಲಿ ಒಂದೊಂದು ವಿಶೇಷ ಫೀಚರ್‌ಗಳನ್ನು ನೀಡಲಾಗಿದೆ. ಕೆಲವು ಆಪ್‌ಗಳಲ್ಲಿ ಕೇವಲ ಡೇಟಿಂಗ್‌ಗೆ ಸೀಮಿತಗೊಳಿಸಿಲ್ಲ. ಡೇಟಿಂಗ್‌ ಜೊತೆ ವೃತ್ತಿಗೆ ಸಂಬಂಧಿಸಿದ ಕಾರ್ಯಗಳಿಗೂ ವ್ಯಾಪಿಸಿದೆ. ಟಿಂಡರ್‌ ಆಪ್‌ ಅತಿ ಹೆಚ್ಚು ಜನಪ್ರೀಯತೆ ಪಡೆದುಕೊಂಡಿದೆ. ಇದು ಸಂಪೂರ್ಣ ಡೇಟಿಂಗ್‌ ಆಪ್‌. ಇದರಲ್ಲಿ ಇಷ್ಟಪಟ್ಟವರನ್ನು ಬಲಕ್ಕೆ ಸ್ವೈಪ್‌ ಮಾಡಬಹುದು ಅಥವಾ ಇಷ್ಟವಿಲ್ಲದವರನ್ನು ಮುಕ್ತವಾಗಿ ಎಡಕ್ಕೆ ಸ್ವೈಪ್‌ ಮಾಡಬಹುದು. ಟಿಂಡರ್‌ಗೆ ನಿಮ್ಮ ಫೇಸ್ಬುಕ್‌ ಅಥವಾ ಜಿಮೇಲ್‌ ಐಡಿ ಮೂಲಕ ಪ್ರವೇಶಿಸಬಹುದು. ನಿಮ್ಮ ಇಷ್ಟಗಳು, ಹವ್ಯಾಸಗಳು, ವೃತ್ತಿಯ ಬಗ್ಗೆ ಮಾಹಿತಿಯನ್ನೂ ನೀಡಬೇಕು. ಆದರೆ, ಎಲ್ಲದಕ್ಕಿಂತ ಮುಖ್ಯವಾಗಿ ನೀವು ನಿಮ್ಮ ಬಗ್ಗೆ ಕೆಲವೇ ಪದಗಳಲ್ಲಿ ಹೆಳಬೇಕು. ಅದನ್ನು ಎಷ್ಟು ಸುಂದರವಾಗಿ ವಿವರಿಸುತ್ತೀರಿ ಎನ್ನುವುದು ತುಂಬಾ ಮುಖ್ಯ. ಆ ಆಧಾರದ ಮೇಲೆ ಜನ ನಿಮ್ಮನ್ನು ʼಇಂಟರೆಸ್ಟಿಂಗ್‌ ಪರ್ಸ್ನಾಲಿಟಿʼ ಎಂದು ಇಷ್ಟಪಡುತ್ತಾರೆ. ಇಲ್ಲದಿದ್ದರೆ ನೀವು ತುಂಬಾ ಬೋರಿಂಗ್‌ ಎಂದು ಟ್ಯಾಗ್‌ ಮಾಡುತ್ತಾರೆ. ನಂತರ ರಿಜೆಕ್ಟ್‌ ಮಾಡುತ್ತಾರೆ. ಆಪ್‌ ಖರೀದಿ ಮಾಡಿದರೆ, ಅನೇಕ ಫೀಚರ್‌ಗಳು ಲಭ್ಯವಾಗುತ್ತದೆ. ಎಷ್ಟು ಜನ ನಿಮ್ಮ ಪ್ರೊಫೈಲ್‌ನ್ನು ನೋಡಿದರು, ಯಾರಿಗೆ ನೀವು ಇಷ್ಟವಾಗಿದ್ದೀರಿ ಎಂದು ತಿಳಿಯಬಹುದು.


ನಿಮ್ಮ ಸುತ್ತಮುತ್ತಲಿನ ಜಾಗದಲ್ಲಿ ಯಾರಾದರೂ ನಿಮಗೆ ಮ್ಯಾಚ್‌ ಆಗುವಂಥವರು ಇದ್ದಾರ? ಎಂದು ಕೂಡ ತಿಳಿಯಬಹುದು. ಹಾಗೆ ಯಾರಾದರೂ ನಿಮ್ಮನ್ನು ಇಷ್ಟಪಟ್ಟರೆ ನೀವು ಅವರೊಂದಿಗೆ ವೈಯ್ಯಕ್ತಿಕ ಮೆಸೇಜ್‌ ಮಾಡನಹುದು. ಚಾಟ್‌ ಮಾಡಿ ಮಾತನಾಡಬಹುದು. ಇಬ್ಬರೂ ಪರಸ್ಪರ ಭೇಟಿಯಾಗಬಹುದು. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬಹುದು. ಆಸಕ್ತಿ ಇದ್ದರೆ, ಹೊಂದಾಣಿಕೆಯಾದರೆ ರಿಲೇಷನ್‌ಶಿಪ್‌ ಮುಂದುವರೆಸಬಹುದು. ಇಲ್ಲದಿದ್ದರೆ ಜೀವನದಲ್ಲಿ ಎಡಕ್ಕೆ ಸ್ವೈಪ್‌ ಮಾಡಿ ತಿರಸ್ಕರಿಸಬಹುದು. ಇದೊಂದು ಮಾಯಾಲೋಕ. ಇಷ್ಟೊಂದು ಸ್ವಾತಂತ್ರ್ಯ ಇರುವ ಕಾರಣದಿಂದಲೇ ಡೇಟಿಂಗ್‌ ಆಪ್‌ಗಳು ಹೆಚ್ಚು ಪ್ರಚಲಿತದಲ್ಲಿವೆ.


ಹೀಗೆ ಅಪರಿಚತರೊಂದಿಗೆ ಸಂಬಂಧ ಬೆಸೆಯುವ ಕೆಲಸ ಈ ಮಾದರಿಯ ಆಪ್‌ಗಳು ಮಾಡುತ್ತಿವೆ. ಎಷ್ಟೋ ಸಂಬಂಧಗಳು ಡೇಟಿಂಗ್‌ ಆಪ್‌ ಮೂಲಕ ಶುರುವಾಗಿವೆ. ಈ ಸಂಬಂಧಗಳು ಒಟ್ಟಿಗೆ ಜೀವನ ಮಾಡುತ್ತಿರುವ, ಗಟ್ಟಿಯಾಗಿ ಉಳಿದಿರುವ ಎಷ್ಟೋ ಉದಾಹರಣೆಗಳಿವೆ.

ಕನ್ನಡದ್ದೇ ಬೇಕೆನ್ನಲು ಕಾರಣಗಳು:

  1. ವಿದೇಶಿಗರು ಪ್ರೀತಿಸುವ ರೀತಿ ಬೇರೆ. ಭಾರತೀಯರು ಪ್ರೀತಿಯನ್ನು ನೋಡುವ ದೃಷ್ಟಿ ವಿಭಿನ್ನವಾಗಿದೆ. ಅಮೆರಿಕ ಹಾಗೂ ಯುರೋಪ್‌ನ ಪ್ರೀತಿಯ ಅಭಿವ್ಯಕ್ತಿ ನಮ್ಮದಲ್ಲ. ಕನ್ನಡದ ಜಾಯಮಾನ ಬೇರೆ.
  2. ಕನ್ನಡಿಗರು ಕನ್ನಡದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸಬಹುದು. ಅದಕ್ಕೆ ಕನ್ನಡದ್ದೇ ಫೀಚರ್‌ಗಳನ್ನು ಬಳಸಲು ಇಷ್ಟಪಡಬಹುದು.
  3. ಗ್ರಾಮೀಣ ಪ್ರದೇಶದವರು ಇಂಗ್ಲಿಷ್‌ ಎಂದರೆ ಮಾರು ದೂರ ಹಾರುತ್ತಾರೆ. ಇಂಥವರಿಗೆ ಕನ್ನಡ ನೆರವಾಗುತ್ತದೆ.
  4. ಕನ್ನಡದ ಸಿನಿಮಾ, ತಿಂಡಿಗಳು ಸೇರಿದಂತೆ ಸ್ವಂತ ಭಾಷೆಯ ಇಮೇಜ್‌ಗಳು ಸೃಷ್ಟಿಸುವ ಮಧುರ ಭಾವವೇ ಬೇರೆ.
  5. ಈಗಾಗಲೇ ಫೇಸ್ಬುಕ್‌ನಂತಹ ಆಪ್‌ಗಳು ಕನ್ನಡ ಭಾಷೆಯಲ್ಲಿ ಕೂಡ ಬಳಸುವ ಸೌಲಭ್ಯ ನೀಡಿದೆ. ಹಲವು ಶಾಪಿಂಗ್‌ ಆಪ್‌ಗಳು ಕೂಡ ಕನ್ನಡದಲ್ಲಿ ಬಳಸುವ ಅವಕಾಶ ಕಲ್ಪಿಸಿದೆ. ಆದರೆ ಕನ್ನಡದಲ್ಲಿ ಸುಲಭವಾಗಿ ಬಳುಸುವಂಥ ಡೇಟಿಂಗ್‌ ಆಪ್‌ ಇನ್ನೂ ಮೂಡಿಬಂದಿಲ್ಲ.

ಕನ್ನಡದಲ್ಲಿ ಹೀಗೊಂದು ಆಪ್‌ ಬಂದರೆ ಹೇಗಿರಬಹುದು?

  1. ಕನ್ನಡದ ಡೇಟಿಂಗ್‌ ಆಪ್ ಕನ್ನಡಿಗರೇ ತುಂಬಿರುವ ಮನೆಯ ಹಾಗಿರಬಹುದು. ಅಲ್ಲಿ ಪರಸ್ಪರ ಸಂವಹನ ಮಾಡುವ ಭಾಷೆ ಕನ್ನಡವಾಗಿರುತ್ತದೆ. ನೀವು ಮೆಸೇಜ್‌ ಮಾಡುವವರು ಇಂಗ್ಲಿಂಷ್‌ನಲ್ಲಿ ಉತ್ತರ ನೀಡಿದರೆ ಅದಕ್ಕೆ ಪ್ರತಿಕ್ರಿಯೆ ಹೇಗೆ ನೀಡಬೇಕೆಂಬ ಭಯವಿರುವುದಿಲ್ಲ. ಯಾವುದೇ ಮಾತುಕತೆಯ ಆರಂಭಕ್ಕೆ ಭಾಷೆ ತುಂಬಾ ಮುಖ್ಯವಾಗುತ್ತದೆ. ಹಾಗಾಗಿ, ಪರಿಚಿತ ಭಾಷೆಯನ್ನು ಇಂತಹ ಆಪ್‌ಗಳಲ್ಲಿ ಬಳಸಿದಾಗ ಮೆಸೇಜ್‌ಗಳ ಆಪ್ತತೆ ಹೆಚ್ಚುತ್ತದೆ.
  2. ನೀವು ಉಳಿದ ಡೇಟಿಂಗ್‌ ಆಪ್‌ ಬಳಸುವಾಗ ಏನಾದರೂ ತೊಡಕು ಉಂಟಾಗಬಹುದು. ಆಗೆಲ್ಲ ಯಾರನ್ನಾದರೂ ಸಹಾಯ ಕೇಳಿಕೊಂಡು ಹೋಗಬೇಕಾಗುತ್ತದೆ. ಆಗ, ಅವರು ನಿಮ್ಮ ಮೆಸೇಜ್‌ಗಳನ್ನು ಓದಿದರೆ ಎಂಬ ಚಿಂತೆ ಮೂಡುತ್ತದೆ. ಅಥವಾ ಯಾರಾದರೂ ನಿಮ್ಮನ್ನು ರಿಜೆಕ್ಟ್‌ ಮಾಡಿದ್ದು ನೋಡಿದರೆ ಅವಮಾನವಾಗುವ ಭಯವಿರುತ್ತದೆ. ಆದರೆ, ನಿಮ್ಮದೇ ಭಾಷೆಯವರಿರುವ ಆಪ್‌ ಇದ್ದಾಗ ಆ ಸಮಸ್ಯೆ ದೂರವಾಗುತ್ತದೆ. ನೀವು ಯಾರನ್ನೂ ಸಹಾಯ ಕೇಳಿಕೊಂಡು ಹೋಗಬೇಕಾಗಿಲ್ಲ.
  3. ಎದುರಿರುವವರು ಯಾರೋ, ಏನೋ? ಎಂಬ ಭಯ ಕಡಿಮೆಯಾಗುತ್ತದೆ. ಕೊನೇಪಕ್ಷ ಕನ್ನಡದವರು ಎಂಬ ಧೈರ್ಯದ ಭಾವನೆ ಇರುತ್ತದೆ. ಇದನ್ನು ಬಳಸುವುದು ಸುಲಭ. ಹಾಗಾಗಿ ಸಾಂಗತ್ಯದ ಹಂಬಲದಲ್ಲಿರುವ ಹಿರಿಯರು ಕೂಡ ಯಾವುದೇ ತೊಡಕುಗಳಿಲ್ಲದೇ ಬಳಸಬಹುದು.
  4. ಇದರ ವ್ಯಾಪ್ತಿ ಕನ್ನಡಿಗರಿಗೆ ಸೀಮಿತಗೊಳ್ಳುವುದರಿಂದ ಹೆಚ್ಚಿನ ಆಪ್ಷನ್‌ಗಳು ಇಲ್ಲದಿರಬಹುದು. ಹಾಗಾಗಿ ಗೆಳೆಯ-ಗೆಳತಿಯರನ್ನು ಹುಡುಕುತ್ತಾ ಅಣ್ಣ-ಅಕ್ಕಂದಿರು ಸಿಕ್ಕಬಹುದು! ಈ ಬಗ್ಗೆ ಸ್ವಲ್ಪ ಎಚ್ಚರ ವಹಿಸಬೇಕಾಗಬಹುದು.

ಹೆಚ್ಚಿನ ಓದಿಗಾಗಿ: ಇದು ಮನುಷ್ಯರನ್ನು ಓದೋ ‌ಹ್ಯೂಮನ್‌ ಲೈಬ್ರರಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Amla For Your Hair: ತಲೆಗೂದಲ ಆರೈಕೆಯಲ್ಲಿ ನೆಲ್ಲಿಕಾಯಿಯ ಬಳಕೆ ಹೇಗೆ?

Amla For Your Hair: ತಲೆಗೂದಲ ಬೆಳವಣಿಗೆಗೆ ನೆಲ್ಲಿಕಾಯಿ ಎಣ್ಣೆ ಪರಾಂಪರಾಗತ ಔಷಧಿಯಲ್ಲಿ ಪ್ರಸಿದ್ಧವಾದುದು. ತಲೆಗೆ ಹಾಕುವುದು ಮಾತ್ರವಲ್ಲ, ಇದನ್ನು ಹೊಟ್ಟೆಗೆ ಹಾಕಿದರೂ ಕೂದಲುಗಳಿಗೆ ಲಾಭವಿದೆ. ತಲೆಯ ಚರ್ಮದ ಆರೋಗ್ಯ ಹೆಚ್ಚಿಸಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ನೆಲ್ಲಿಕಾಯಿಯ ಇನ್ನಷ್ಟು ಉಪಯೋಗಗಳ ಬಗ್ಗೆ, ಹೇರ್‌ಮಾಸ್ಕ್‌ ಮಾಡುವ ಬಗ್ಗೆಯೂ ಇಲ್ಲಿವೆ ವಿವರ.

VISTARANEWS.COM


on

Hair Care Habits
Koo

ಆಯುರ್ವೇದದಲ್ಲಿ ಶತಶತಮಾನಗಳಿಂದ ಬಳಕೆಯಲ್ಲಿರುವ ನೆಲ್ಲಿಕಾಯಿ ಅಥವಾ ಆಮಲಕಿ ತನ್ನ ವಿಶೇಷ ಸತ್ವಗಳಿಂದ ಈಗ ವಿಶ್ವದೆಲ್ಲೆಡೆ ಹೆಸರಾಗಿದೆ. ವಿಟಮಿನ್‌-ಸಿಯಂಥ ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಇದು, ದೃಷ್ಟಿಗೆ, ಕೂದಲಿಗೆ, ಚರ್ಮಕ್ಕೆ ಉಪಯುಕ್ತ ಸತ್ವಗಳನ್ನು ಹೊಂದಿದೆ. ಮಧುಮೇಹ ನಿಯಂತ್ರಣಕ್ಕೆ ಮತ್ತು ತೂಕ ಇಳಿಕೆಗೆ ಅನುಕೂಲಕರವಾಗಿದೆ. ಜೊತೆಗೆ, ಹಲವು ರೀತಿಯ ಜೀವಸತ್ವಗಳು, ಖನಿಜಗಳು, ಫೈಟೊಕೆಮಿಕಲ್‌ಗಳು ಇಡೀ ದೇಹಕ್ಕೆ ಬೇಕಾದಂಥ ಸತ್ವಗಳನ್ನು ಒದಗಿಸಬಲ್ಲವು. ಹೀಗೆ ಬಹೂಪಯೋಗಿ ಎನಿಸಿರುವ ನೆಲ್ಲಿಕಾಯಿಯಿಂದ ಆಗುವಂಥ ಅನುಕೂಲಗಳನ್ನು ಒಮ್ಮೆ ಗಮನಿಸೋಣ. ಜೊತೆಗೆ ಹಲವು ಬಗೆಯ ಹೇರ್‌ಮಾಸ್ಕ್‌ಗಳನ್ನು ಮಾಡುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ. ನಳನಳಿಸುವ (Amla For Your Hair) ಕೂದಲು ನಿಮ್ಮದಾಗಲಿ.

Skin Health Cucumber Benefits

ಚರ್ಮಕ್ಕೆ ಕಾಂತಿ

ಇದರಲ್ಲಿರುವ ವಿಟಮಿನ್‌ ಸಿ ಅಂಶವು ಕೊಲಾಜಿನ್‌ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಹಾಗಾಗಿ ಚರ್ಮದಲ್ಲಿ ಸುಕ್ಕು ಬರುವುದು ಕಡಿಮೆಯಾಗಿ, ತಾರುಣ್ಯಭರಿತ ತ್ವಚೆಯನ್ನು ಹೊಂದಬಹುದು. ಜೊತೆಗೆ, ಚರ್ಮದ ಹೊಳಪು ಹೆಚ್ಚಿಸಿ, ತ್ವಚೆಯನ್ನು ಬಿಗಿ ಮಾಡಿ, ಕಪ್ಪುಕಲೆಗಳನ್ನು ತೆಗೆಯುತ್ತದೆ. ಹಾಗಾಗಿ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಈ ಮೂಲಕ ನೆರವಾಗುತ್ತದೆ.

Image Of Egg Benefits For Hair

ಕೂದಲು ಸೊಂಪು

ತಲೆಗೂದಲ ಬೆಳವಣಿಗೆಗೆ ನೆಲ್ಲಿಕಾಯಿ ಎಣ್ಣೆ ಪರಾಂಪರಾಗತ ಔಷಧಿಯಲ್ಲಿ ಪ್ರಸಿದ್ಧವಾದುದು. ತಲೆಗೆ ಹಾಕುವುದು ಮಾತ್ರವಲ್ಲ, ಇದನ್ನು ಹೊಟ್ಟೆಗೆ ಹಾಕಿದರೂ ಕೂದಲುಗಳಿಗೆ ಲಾಭವಿದೆ. ತಲೆಯ ಚರ್ಮದ ಆರೋಗ್ಯ ಹೆಚ್ಚಿಸಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ಕೂದಲೆಳೆಗಳ ಬುಡವನ್ನು ಸದೃಢ ಮಾಡಿ, ಕೂದಲು ತುಂಡಾಗದಂತೆ ಅಥವಾ ಉದುರದಂತೆ ತಡೆಯುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಗೂ ಪೋಷಣೆ ನೀಡುತ್ತದೆ.

ಪ್ರತಿರೋಧಕ ಶಕ್ತಿ ಹೆಚ್ಚಳ

ವಿಟಮಿನ್‌ ಸಿ ಜೀವಸತ್ವ ನೆಲ್ಲಿಕಾಯಿಯಲ್ಲಿ ಅತ್ಯಧಿಕವಾಗಿದೆ. ದೇಹದ ಮೇಲೆ ದಾಳಿ ಮಾಡುವ ರೋಗಾಣುಗಳು ಮತ್ತು ಸೋಂಕುಗಳನ್ನು ತಡೆಯುವುದಕ್ಕೆ ವಿಟಮಿನ್‌ ಸಿ ದೊರೆಯಬೇಕಾದ್ದು ಅಗತ್ಯ. ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಜ್ವರದಂಥ ತೊಂದರೆಗಳನ್ನು ದೂರ ಮಾಡಬಹುದು.

Antioxidants in it keep immunity strong Benefits Of Mandakki

ಉತ್ಕರ್ಷಣ ನಿರೋಧಕಗಳು

ಹಲವು ರೀತಿಯ ಫ್ಲೆವನಾಯ್ಡ್‌ಗಳು, ಪಾಲಿಫೆನಾಲ್‌ಗಳು ನೆಲ್ಲಿಕಾಯಿಯಲ್ಲಿ ವಿಫುಲವಾಗಿವೆ. ಇವು ದೇಹದಲ್ಲಿ ಉರಿಯೂತ ಶಮನ ಮಾಡುವುದಕ್ಕೆ ಸಹಕಾರಿ. ಜೊತೆಗೆ, ಬೀಡಾಡಿಗಳಂತೆ ಅಲೆದುಕೊಂಡಿರುವ ಮುಕ್ತ ಕಣಗಳನ್ನು ನಿರ್ಬಂಧಿಸಲು ಇವು ಅಗತ್ಯ. ಇದರಿಂದ ಮಧುಮೇಹ, ಹೃದಯ ಸಮಸ್ಯೆಗಳು, ಕ್ಯಾನ್ಸರ್‌ನಂಥ ರೋಗಗಳ ಭೀತಿ ದೂರವಾಗುತ್ತದೆ.

Improves digestion Peach Benefits

ಜೀರ್ಣಾಂಗಗಳು ಚುರುಕು

ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸಲು ನೆಲ್ಲಿಕಾಯಿ ಪ್ರಚೋದನೆ ನೀಡುತ್ತದೆ. ಇದರಿಂದ ಜೀರ್ಣಾಂಗಗಳು ಚುರುಕಾಗುತ್ತವೆ. ಆಹಾರ ಸುಲಲಿತವಾಗಿ ಪಚನವಾಗುತ್ತವೆ ಎಂಬುದಷ್ಟೇ ಅಲ್ಲ, ಸತ್ವಗಳನ್ನೂ ಚೆನ್ನಾಗಿ ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗುತ್ತದೆ. ಲಘುವಾದ ವಿರೇಚನದ ಗುಣವನ್ನೂ ಆಮಲಕಿ ಹೊಂದಿದೆ. ಹಾಗಾಗಿ ಮಲಬದ್ಧತೆಯನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.

May support eye health Peach Benefits

ದೃಷ್ಟಿ ಉತ್ತಮ

ನೆಲ್ಲಿಕಾಯಲ್ಲಿರುವ ವಿಟಮಿನ್‌ ಎ ಅಂಶವು ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದಂಥ ಪೋಷಕ ಸತ್ವ. ಜೊತೆಗೆ, ಕೆರೊಟಿನಾಯ್ಡ್‌ಗಳಂಥ ಉತ್ಕರ್ಷಣ ನಿರೋಧಕಗಳು ದೃಷ್ಟಿ ಮಂದವಾಗದಂತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಯಸ್ಸಾದಂತೆ ಕಾಡುವ ಕ್ಯಾಟರಾಕ್ಟ್‌ ನಂಥ ಸಮಸ್ಯೆಗಳು ಬಾರದಂತೆ ಮುಂದೂಡುತ್ತವೆ.

ನೆಲ್ಲಿಕಾಯಿ ಎಣ್ಣೆ:

ಅಗಲವಾದ ಬಾಯಿಯ ಪಾತ್ರೆಯಲ್ಲಿ ಒಂದು ಕಪ್‌ ನೆಲ್ಲಿಕಾಯಿ ಪುಡಿಯನ್ನು ಎರಡು ಕಪ್‌ ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರ ಮಾಡಿ. ಇದನ್ನು ಮಂದವಾದ ಉರಿಯಲ್ಲಿ ಕುದಿಯುವುದಕ್ಕೆ ಬಿಡಿ. ಸುಮಾರು ೧೦-೧೫ ನಿಮಿಷಗಳ ನಂತರ ತಿಳಿಯಾದ ಹಸಿರು ಬಣ್ಣದ ಎಣ್ಣೆ ಸಿದ್ಧವಾಗುತ್ತದೆ. ಇದನ್ನು ಸೋಸಿ, ಗಾಜಿನ ಬಾಟಲಿಗೆ ತುಂಬಿಟ್ಟುಕೊಳ್ಳಿ. ಈ ನೆಲ್ಲಿಕಾಯಿ ಎಣ್ಣೆಯನ್ನು ನಿಯಮಿತವಾಗಿ ತಲೆಕೂದಲಿಗೆ ಉಪಯೋಗಿಸುವುದರಿಂದ ಆರೋಗ್ಯಕರ ಕೇಶರಾಶಿಯನ್ನು ಹೊಂದಲು ಸಾಧ್ಯ.

ಇದನ್ನೂ ಓದಿ: Home Remedies for Skin: ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಹೇರ್‌ ಮಾಸ್ಕ್‌

ನಾಲ್ಕು ಚಮಚ ನೆಲ್ಲಿಕಾಯಿ ಪುಡಿಯನ್ನು ಅಷ್ಟೇ ಪ್ರಮಾಣದ ಮೊಸರಿನೊಂದಿಗೆ ಸೇರಿಸಿ ಪೇಸ್ಟ್‌ ಮಾಡಿ. ಇದನ್ನು ತಲೆಗೂದಲು ಬುಡದಿಂದ ತುದಿಯವರೆಗೆ ಲೇಪಿಸಿ. ಅರ್ಧ ತಾಸಿನ ನಂತರ ಉಗುರು ಬಿಸಿ ನೀರಿನಿಂದ ತಲೆಸ್ನಾನ ಮಾಡಿ. ಹಾಗೆಯೇ, ಸಮ ಪ್ರಮಾಣದಲ್ಲಿ ನೆಲ್ಲಿಕಾಯಿ ಪುಡಿ, ಮದರಂಗಿ ಪುಡಿ ಮತ್ತು ಮೊಸರನ್ನು ಮಿಶ್ರ ಮಾಡಿ ಪೇಸ್ಟ್‌ ಮಾಡಿ. ಇದನ್ನು ತಲೆಯ ರೋಮರೋಮಗಳಿಗೆ ಹಚ್ಚಿ, ಅರ್ಧ ತಾಸಿನ ನಂತರ ಉಗುರು ಬಿಸಿಯಾದ ನೀರಿನಿಂದ ತಲೆಸ್ನಾನ ಮಾಡಿ. ಇನ್ನೊಂದು ಉತ್ತಮ ಹೇರ್‌ ಮಾಸ್ಕ್‌ ಎಂದರೆ- ೪ ಚಮಚ ನೆಲ್ಲಿಕಾಯಿ ಪುಡಿಗೆ ಕಾಲು ಕಪ್‌ ತೆಂಗಿನಕಾಯಿ ಹಾಲು ಸೇರಿಸಿ, ಹದವಾಗಿ ಪೇಸ್ಟ್‌ ತಯಾರಿಸಿ. ಇದನ್ನು ತಲೆಗೆಲ್ಲ ಆಮೂಲಾಗ್ರವಾಗಿ ಲೇಪಿಸಿ ಒಂದು ತಾಸು ಹಾಗೆಯೇ ಬಿಡಿ. ನಂತರ ಹದ ಉಷ್ಣತೆಯ ನೀರಿನಿಂದ ತೊಳೆಯಿರಿ.

Continue Reading

ಆರೋಗ್ಯ

Home Remedies for Skin: ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?

Home Remedies for Skin: ದೇಹಕ್ಕೆ ದೊರೆಯಬೇಕಾದ ಸತ್ವಗಳು ದೊರೆತಾಗ ಮಾತ್ರವೇ ಆರೋಗ್ಯಯುತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯ. ಅದರಲ್ಲೂ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಂಥ ಆಹಾರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೊತೆಗೆ ಕೆಲವು ಫೇಸ್‌ಪ್ಯಾಕ್‌ ಅಥವಾ ಫೇಸ್‌ ಮಾಸ್ಕ್‌ಗಳು ಸಹ ಒಳ್ಳೆಯ ಫಲಿತಾಂಶ ನೀಡಬಲ್ಲವು. ಅಂಥ ಕೆಲವನ್ನು ಇಲ್ಲಿ ವಿವರಿಸಲಾಗಿದೆ.

VISTARANEWS.COM


on

Monsoon Skincare
Koo

ಪ್ರಾಯವನ್ನು ಮುಚ್ಚಿಡುವುದಕ್ಕೆ ಸಾಧ್ಯವೇ ಎಂಬ ಬಗ್ಗೆ ಮಾನವನ ಶೋಧ ಕೊನೆಯರಿಯದ್ದು. ನಮ್ಮ ಆಹಾರ, ಜೀವನಶೈಲಿ, ವಂಶವಾಹಿಗಳೆಲ್ಲ ಸೇರಿ ನಮ್ಮ ಚರ್ಮದ ನಯ, ಹೊಳಪು, ಸುಕ್ಕು ಮುಂತಾದ ಬಹಳಷ್ಟನ್ನು ನಿರ್ಧರಿಸುತ್ತವೆ, ಎಂಬಲ್ಲಿಗೆ ನಮಗೆ ವಯಸ್ಸಾದಂತೆ ಕಾಣುವುದು ಅಥವಾ ಕಾಣದಿರುವುದನ್ನೂ ನಿರ್ಧರಿಸುತ್ತವೆ ಎಂದಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ದೇಹಕ್ಕೆ ದೊರೆಯಬೇಕಾದ ಸತ್ವಗಳು ದೊರೆತಾಗ ಮಾತ್ರವೇ ಆರೋಗ್ಯಯುತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯ. ಅದರಲ್ಲೂ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಂಥ ಆಹಾರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೊತೆಗೆ ಕೆಲವು ಫೇಸ್‌ಪ್ಯಾಕ್‌ ಅಥವಾ ಫೇಸ್‌ ಮಾಸ್ಕ್‌ಗಳು ಸಹ ಒಳ್ಳೆಯ ಫಲಿತಾಂಶ ನೀಡಬಲ್ಲವು. ಅಂಥ ಕೆಲವನ್ನು (Home Remedies for Skin) ಇಲ್ಲಿ ವಿವರಿಸಲಾಗಿದೆ.

beautiful asian young woman eating healthy food Sleep Tips

ಆಹಾರ

ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದ ಆಹಾರಗಳ ಸೇವನೆ ಅತಿಮುಖ್ಯ. ಇವುಗಳು ದೇಹದಲ್ಲಿ ಕೊಲಾಜಿನ್‌ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಿಂದ ಚರ್ಮ ಸುಕ್ಕಾಗುವುದನ್ನು ತಡೆಯುವುದು ಮಾತ್ರವಲ್ಲ, ಕೀಲುಗಳು ಸವೆಯದಂತೆಯೂ ಕಾಪಾಡಿಕೊಳ್ಳಬಹುದು. ಒಮೇಗಾ ೩ ಕೊಬ್ಬಿನಾಮ್ಲ ಹೆಚ್ಚಿರುವ ಆಹಾರಗಳು, ವಿಟಮಿನ್‌ ಸಿ ಅಧಿಕವಿರುವ ಹಣ್ಣು ತರಕಾರಿಗಳು, ವಿಟಮಿನ್‌ ಇ ಹೇರಳವಾಗಿರುವ ಕಾಯಿ-ಬೀಜಗಳು- ಇವೆಲ್ಲವೂ ದಿನವೂ ನಮ್ಮ ಆಹಾರದ ಭಾಗವಾಗಿರಬೇಕು.

Aloe Vera Herbs For Hair Growth Aloe vera contains enzymes that can promote healthy hair growth by removing dead skin cells from the scalp and promoting hair follicle health.

ಲೋಳೆಸರ

ಅಲೋವೇರಾ ಎಂದೇ ಕರೆಸಿಕೊಳ್ಳುವ ಇದನ್ನು ಯಾವುದೇ ಫೇಸ್‌ ಮಾಸ್ಕ್‌ಗೆ ಬಳಸುವ ಬದಲು, ಇದನ್ನೇ ಪ್ರತ್ಯೇಕವಾಗಿ ಮುಖಕ್ಕೆ ಲೇಪಿಸಬಹುದು. ಇದರಲ್ಲಿರುವ ಮ್ಯಾಲಿಕ್‌ ಆಮ್ಲವು ಚರ್ಮದ ಮೇಲೆ ಅತ್ಯಂತ ಪೂರಕ ಪರಿಣಾಮವನ್ನು ಬೀರುತ್ತದೆ. ಚರ್ಮವನ್ನು ಬಿಗಿಗೊಳಿಸಿ, ಸುಕ್ಕುಗಳನ್ನು ನಿವಾರಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಇದನ್ನು ಲೇಪಿಸಿ ಸುಮಾರು ೨೦ ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಮೊಟ್ಟೆ, ಜೇನುತುಪ್ಪದ ಮಾಸ್ಕ್‌

ಮೊಟ್ಟೆಯ ಬಿಳಿಯ ಭಾಗ ಇದಕ್ಕೆ ಸೂಕ್ತವಾದದ್ದು. ಇದರಲ್ಲಿರುವ ಅಲ್ಬುಮಿನ್‌ ಅಂಶವು ಚರ್ಮದಲ್ಲಿ ಕೊಲಾಜಿನ್‌ ಹೆಚ್ಚಳಕ್ಕೆ ನೆರವಾಗುತ್ತದೆ. ಜೊತೆಗೆ ಜೇನುತುಪ್ಪವು ಚರ್ಮದ ನೈಸರ್ಗಿಕ ತೇವಾಂಶ ನಾಶವಾಗದಂತೆ ನೋಡಿಕೊಳ್ಳುತ್ತದೆ. ಮೊಟ್ಟೆಯ ಬಿಳಿ ಭಾಗ ಮತ್ತು ಜೇನುತುಪ್ಪದ ಮಿಶ್ರಣವನ್ನು ಮುಖಕ್ಕೆಲ್ಲ ಲೇಪಿಸಿ ಕನಿಷ್ಟ ೨೦ ನಿಮಿಷಗಳಾದರೂ ಬಿಡಿ. ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆದರಾಯ್ತು.

Extra virgin olive oil Foods For Healthy Joints And Muscles

ಆಲಿವ್‌ ಎಣ್ಣೆ

ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಆಲಿವ್‌ ಎಣ್ಣೆಯಲ್ಲಿ ವಿಟಮಿನ್‌ ಎ ಮತ್ತು ಇ ಅಂಶಗಳು ಹೇರಳವಾಗಿವೆ. ಇವು ಚರ್ಮದ ಆರೋಗ್ಯ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ರಾತ್ರಿ ಮಲಗುವ ಮುನ್ನ, ಆಲಿವ್‌ ಎಣ್ಣೆಯ ಕೆಲವು ಹನಿಗಳನ್ನು ಅಂಗೈಗೆ ಹಾಕಿಕೊಂಡು ಅದನ್ನು ಮುಖಕ್ಕೆಲ್ಲ ಲೇಪಿಸಿ. ಲಘುವಾಗಿ ವೃತ್ತಾಕಾರವಾಗಿ ಮುಖವನ್ನೆಲ್ಲ ಮಸಾಜ್‌ ಮಾಡುತ್ತಾ ಬನ್ನಿ. ಇದನ್ನು ರಾತ್ರಿಡೀ ಹಾಗೆಯೇ ಇರಿಸಿಕೊಂಡು ಮಲಗುವುದು ಸೂಕ್ತ. ಇದರಿಂದ ಚರ್ಮದ ಆರೈಕೆಗೆ ಅನುಕೂಲವಾಗುತ್ತದೆ.

Image Of Cucumber Benefits

ಸೌತೇಕಾಯಿ

ಈ ತರಕಾರಿಯಲ್ಲಿರುವ ನೀರಿನಂಶ ಮತ್ತು ಸಿಲಿಕಾಗಳು ಚರ್ಮದ ಬಿಗಿಯನ್ನು ಹೆಚ್ಚಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತವೆ. ಜೊತೆಗೆ ಚರ್ಮದ ಕಾಂತಿಯನ್ನು ಸಹ ಹೆಚ್ಚಿಸುತ್ತವೆ. ತಾಜಾ ಸೌತೇಕಾಯಿ ತುರಿಯನ್ನು ಮುಖದ ಮೇಲೆಲ್ಲ ಲೇಪಿಸಿ, ಅರ್ಧ ತಾಸು ಬಿಡಿ. ನಂತರ ತಂಪಾದ ನೀರಿನಲ್ಲಿ ಮುಖ ತೊಳೆಯುವುದರಿಂದ, ಇಡೀ ಮುಖದ ಚರ್ಮವೆಲ್ಲ ತಾಜಾ ಆಗುತ್ತದೆ.

ಇದನ್ನೂ ಓದಿ: Breastfeeding diet: ಹಾಲುಣಿಸುವ ಅಮ್ಮಂದಿರ ಆಹಾರ ಹೇಗಿರಬೇಕು?

ಅವಕಾಡೊ

ಬೆಣ್ಣೆ ಹಣ್ಣು ಚರ್ಮದ ಆರೈಕೆಯಲ್ಲಿ ಮಾತ್ರವೇ ಅಲ್ಲ, ಇಡೀ ಶರೀರಕ್ಕೆ ಬೇಕಾದ ಆರೈಕೆಯನ್ನೂ ಒದಗಿಸುವಷ್ಟು ಪೌಷ್ಟಿಕಾಂಶಗಳನ್ನು ಹೊಂದಿದೆ. ಚರ್ಮಕ್ಕೆ ಬೇಕಾದ ಕೊಲಾಜಿನ್‌ ಉತ್ಪಾದನೆಗೆ ಅಗತ್ಯವಾದ ಸತ್ವಗಳನ್ನು ಇದು ನೀಡುತ್ತದೆ. ಆರೋಗ್ಯಕರವಾದ ಕೊಬ್ಬಿನಂಶ, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಇದು ಚರ್ಮಕ್ಕೆ ಒದಗಿಸುತ್ತದೆ. ಚೆನ್ನಾಗಿ ಹಣ್ಣಾದ ಅವಕಾಡೊವನ್ನು ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿ. ಅರ್ಧ ತಾಸಿನ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ.

Continue Reading

ಫ್ಯಾಷನ್

Velevet Saree Fashion: ವೆಲ್ವೆಟ್‌ ಸೀರೆಯಲ್ಲಿ ನಟಿ ಮೇಘಾ ಶೆಟ್ಟಿಯಂತೆ ಕಾಣಿಸಲು ಇಲ್ಲಿದೆ 5 ಐಡಿಯಾ!

Velevet Saree Fashion: ಸ್ಯಾಂಡಲ್‌‌‌ವುಡ್‌ ನಟಿ ಮೇಘಾ ಶೆಟ್ಟಿಯಂತೆ ವೆಲ್ವೆಟ್‌ ಸೀರೆಯಲ್ಲಿ ನೀವೂ ಕೂಡ ಆಕರ್ಷಕವಾಗಿ ಕಾಣಿಸಬಹುದು. ಅದಕ್ಕಾಗಿ ಈ 5 ಸಿಂಪಲ್‌ ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Velevet Saree Fashion
ಚಿತ್ರಗಳು: ಮೇಘಾ ಶೆಟ್ಟಿ, ಸ್ಯಾಂಡಲ್‌ ವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಲ್ವೆಟ್‌ ಸೀರೆ (Velevet Saree Fashion) ಈ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ಇನ್ನು, ಇದಕ್ಕೆ ಪೂರಕ ಎಂಬಂತೆ ಬಾಲಿವುಡ್‌ ಸೆಲೆಬ್ರೆಟಿಗಳಿಂದಿಡಿದು ಸ್ಯಾಂಡಲ್‌ವುಡ್‌ ತಾರೆಯರು ಕೂಡ ಈ ಸೀರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಇದೀಗ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ ನಟಿ ಮೇಘಾ ಶೆಟ್ಟಿ ಕೂಡ ಇವೆಂಟ್‌ವೊಂದರಲ್ಲಿ ಟೀಲ್‌ ಬ್ಲ್ಯೂ ಶೇಡ್‌ನ ವೆಲ್ವೆಟ್‌ ಸೀರೆಯಲ್ಲಿ ಅಂದವಾಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ಸೆಳೆದಿದ್ದಾರೆ.

Velevet Saree Fashion

ಆಕರ್ಷಕವಾಗಿ ಕಾಣಿಸುವ ವೆಲ್ವೆಟ್‌ ಸೀರೆಗಳು

ನೋಡಲು ಸಿಂಪಲ್‌ ಹಾಗೂ ಎಲಿಗೆಂಟ್‌ ಲುಕ್‌ ನೀಡುವ ಈ ವೆಲ್ವೆಟ್‌ ಸೀರೆಗಳು, ಸೀಸನ್‌ನಲ್ಲಿ ಬೆಚ್ಚಗಿಡುವುದು ಮಾತ್ರವಲ್ಲ, ಸಿಂಪಲ್‌ ಲುಕ್‌ನಲ್ಲೆ ಆಕರ್ಷಕವಾಗಿ ಬಿಂಬಿಸುತ್ತವೆ. ಸದ್ಯ ಮೇಘಾ ಶೆಟ್ಟಿ ಉಟ್ಟಿರುವ ಈ ವೆಲ್ವೆಟ್‌ ಸೀರೆ, ಯುವತಿಯರನ್ನು ಸೆಳೆದಿದ್ದು, ಈ ಸೀರೆಯನ್ನು ಡಿಸೈನ್‌ ಹಾಗೂ ಸ್ಟೈಲಿಂಗ್‌ ಮಾಡಿರುವ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರು, ಈ ಲುಕ್‌ ಬಯಸುವ ಯುವತಿಯರಿಗೆ 5 ಸಿಂಪಲ್‌ ಐಡಿಯಾ ನೀಡಿದ್ದಾರೆ.

Velevet Saree Fashion

ರಾಯಲ್‌ ಲುಕ್‌ಗಾಗಿ ವೆಲ್ವೆಟ್‌ ಸೀರೆ

ರಾಯಲ್‌ ಲುಕ್‌ಗಾಗಿ ವೆಲ್ವೆಟ್‌ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಸಮಾರಂಭಗಳಲ್ಲೂ ಇತರರಿಗಿಂತ ವಿಭಿನ್ನವಾಗಿ ಕಾಣಿಸಲು ಕೂಡ ವೆಲ್ವೆಟ್‌ ಸೀರೆ ಉಡಬಹುದು.

Velevet Saree Fashion

ಸ್ಕಿನ್‌ ಟೋನ್‌ಗೆ ತಕ್ಕಂತೆ ಕಲರ್‌ ಚಾಯ್ಸ್

ನಿಮ್ಮ ಸ್ಕಿನ್‌ ಟೋನ್‌ಗೆ ತಕ್ಕಂತೆ ವೆಲ್ವೆಟ್‌ ಸೀರೆ ಆಯ್ಕೆ ಮಾಡಿ. ಪಾರ್ಟಿಗಳಿಗಾದಲ್ಲಿ ಡಾರ್ಕ್‌ ಶೇಡ್‌, ಡೇ ಟೈಮ್‌ ಸಮಾರಂಭಗಳಿಗಾದಲ್ಲಿ ಲೈಟ್‌ ಶೇಡ್ಸ್ ಹೀಗೆ ನಿಮ್ಮ ಸ್ಕಿನ್‌ ಟೋನ್‌ ಹಾಗೂ ಕಾರ್ಯಕ್ರಮಕ್ಕೆ ತಕ್ಕಂತೆ ಆಯ್ಕೆ ಮಾಡಬಹುದು.

Velevet Saree Fashion

ಸೆಲೆಬ್ರೆಟಿ ಲುಕ್‌ಗಾಗಿ ಸ್ಟೈಲಿಂಗ್‌

ವೆಲ್ವೆಟ್‌ ಸೀರೆಯಲ್ಲಿ ಸೆಲೆಬ್ರೆಟಿ ಲುಕ್‌ ಪಡೆಯಲು ಆದಷ್ಟೂ ಸ್ಟೈಲಿಂಗ್‌ಗೆ ಪ್ರಾಮುಖ್ಯತೆ ನೀಡಬೇಕು. ಮಿನಿಮಲ್‌ ಹಾಗೂ ಅಗತ್ಯವಿರುವಷ್ಟು ಆಕ್ಸೆಸರೀಸ್‌ ಧರಿಸಬೇಕು. ಹಾಗಾಗಿ ಧರಿಸುವ ಆಕ್ಸೆಸರೀಸ್‌ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು.

ವೆಲ್ವೆಟ್‌ ಸೀರೆ ಲೈಟ್‌ವೈಟಾಗಿರಲಿ

ಉಡುವ ವೆಲ್ವೆಟ್‌ ಸೀರೆಯ ಫ್ಯಾಬ್ರಿಕ್‌ ಆದಷ್ಟೂ ಲೈಟ್‌ವೈಟ್‌ ಆಗಿರಲಿ. ಆಗ ಧರಿಸಿದಾಗ ನೋಡಲು ಚೆನ್ನಾಗಿ ಕಾಣಿಸುವುದಲ್ಲದೇ, ಉಟ್ಟವರಿಗೂ ಕಂಫರ್ಟಬಲ್‌ ಫೀಲ್‌ ಆಗುತ್ತದೆ.

ಇದನ್ನೂ ಓದಿ: Shalini Rajaneesh: ಸೀರೆ, ಹಣೆಗೆ ಅಗಲವಾದ ರೆಡ್ ಬಿಂದಿ ಎಂದಿಗೂ ಬದಲಾಗದ ನನ್ನ ಯೂನಿಕ್ ಫ್ಯಾಷನ್ ಸ್ಟೇಟ್ಮೆಂಟ್!

ವೆಲ್ವೆಟ್‌ ಸೀರೆಗೆ ತಕ್ಕಂತೆ ಮೇಕಪ್‌-ಹೇರ್‌ಸ್ಟೈಲ್‌

ವೆಲ್ವೆಟ್‌ ಸೀರೆ ಉಟ್ಟಾಗ ಆ ಸೀರೆಗೆ ತಕ್ಕಂತೆ ಮೇಕಪ್‌ ಕೂಡ ಮಾಡಬೇಕು. ಹೇರ್‌ಸ್ಟೈಲ್‌ ಕೂಡ ಹೊಂದಬೇಕು. ಅತಿಯಾದ ಮೇಕಪ್‌ ಬೇಡ. ನೋಡಲು ಎಲಿಗೆಂಟ್‌ ಲುಕ್‌ ನೀಡುವ ಮೇಕಪ್‌ಗೆ ಸೈ ಎನ್ನಿ. ಇನ್ನು ಸೀರೆಯ ಶೇಡ್‌ಗೆ ತಕ್ಕಂತೆ ಲಿಪ್‌ಸ್ಟಿಕ್ ಹಾಗೂ ಐ ಮೇಕಪ್‌ ಮಾಡಬೇಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Spectrum Dress Fashion: ಮಳೆಗಾಲದ ಫ್ಯಾಷನ್‌ಗೆ ಕಾಲಿಟ್ಟಿವೆ ಗ್ಲಾಮರಸ್‌ ಸಿಕ್ವೀನ್ಸ್ ರೆಟ್ರೊ ಸ್ಪೆಕ್ಟ್ರಮ್‌ ಡ್ರೆಸ್

Spectrum Dress Fashion: ಈ ಬಾರಿಯ ಮಾನ್ಸೂನ್‌ ಸೀಸನ್‌ನಲ್ಲಿ ಹುಡುಗಿಯರಿಗೆ ಇಷ್ಟವಾಗುವಂತಹ ಡಿಸೈನ್‌ನಲ್ಲಿ ಗ್ಲಾಮರಸ್‌ ಲುಕ್‌ ನೀಡುವ ಸಿಕ್ವೀನ್ಸ್ ರೆಟ್ರೊ ಸ್ಪೆಕ್ಟ್ರಮ್‌ ಡ್ರೆಸ್‌ಗಳು ಎಂಟ್ರಿ ನೀಡಿವೆ. ಏನಿದು ಸ್ಪೆಕ್ಟ್ರಮ್‌ ಡ್ರೆಸ್? ಮೇಕೋವರ್‌ ಹೇಗೆ? ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Spectrum Dress Fashion
ಚಿತ್ರಗಳು: ಅದಾ ಖಾನ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಮಾನ್ಸೂನ್‌ ಸೀಸನ್‌ನಲ್ಲಿ ಹುಡುಗಿಯರಿಗೆ ಇಷ್ಟವಾಗುವಂತಹ ಡಿಸೈನ್‌ನಲ್ಲಿ ಗ್ಲಾಮರಸ್‌ ಲುಕ್‌ ನೀಡುವಂತಹ ಸಿಕ್ವೀನ್ಸ್ ರೆಟ್ರೋ ಸ್ಪೆಕ್ಟ್ರಮ್‌ ಡ್ರೆಸ್‌ಗಳು (Spectrum Dress Fashion) ಎಂಟ್ರಿ ನೀಡಿವೆ.

Spectrum Dress Fashion

ಸೀಸನ್‌ ಗ್ಲಾಮರಸ್‌ ಫ್ಯಾಷನ್‌ನಲ್ಲಿ ಸ್ಪೆಕ್ಟ್ರಮ್‌ ಡ್ರೆಸ್

ಮಳೆಗಾಲದಲ್ಲಿ ಗ್ಲಾಮರಸ್‌ ಆಗಿ ಕಾಣಿಸುವ ಔಟ್‌ಫಿಟ್‌ಗಳು ಬಿಡುಗಡೆಗೊಳ್ಳುವುದು ತೀರಾ ಕಡಿಮೆ. ಬಿಡುಗಡೆಗೊಂಡರೂ ಅವು ಹೈ ಫ್ಯಾಷನ್‌ ಅಥವಾ ಹೈ ಸ್ಟ್ರೀಟ್‌ ಫ್ಯಾಷನ್‌ ಇಲ್ಲವೇ ಸೆಲೆಬ್ರೆಟಿ ಔಟ್‌ಫಿಟ್‌ ಕೆಟಗರಿಗೆ ಸೇರಿಕೊಂಡಿರುತ್ತವೆ. ಹಾಗಾಗಿ ಬೆಲೆಯೂ ದುಬಾರಿಯಾಗಿರುತ್ತದೆ. ಇನ್ನು, ಮಾನ್ಸೂನ್‌ನಲ್ಲಿ ಸ್ಲಿವ್‌ಲೆಸ್‌ ಫ್ಯಾಷನ್‌ ಇಲ್ಲದಿದ್ದರೂ, ಈ ಸೀಸನ್‌ನಲ್ಲಿ ಗ್ಲಾಮರಸ್‌ ಆಗಿ ಕಾಣುವ ಸಲುವಾಗಿ ಈ ವಿನ್ಯಾಸಗಳು ಬಾಡಿಕಾನ್‌ ಡ್ರೆಸ್‌ನೊಳಗೆ ಸೇರಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರೀತು. ಅವರು ಹೇಳುವಂತೆ ಮಾನ್ಸೂನ್‌ನಲ್ಲಿ ಈ ಔಟ್‌ಫಿಟ್‌ಗಳು ಹುಡುಗಿಯರ ಮನಸೂರೆಗೊಂಡಿವೆ. ಹಾಗಾಗಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ.

ಏನಿದು ರೆಟ್ರೊ ಸ್ಪೆಕ್ಟ್ರಮ್‌ ಡ್ರೆಸ್‌?

ಸಾದಾ ಸಿಕ್ವೀನ್ಸ್ ಡ್ರೆಸ್‌ ಮೇಲೆ ಕಲರ್‌ಫುಲ್‌ ರೈನ್ಬೋ ಚಿತ್ತಾರದಂತೆ ವಿನ್ಯಾಸಗೊಂಡಿರುವ ಈ ಔಟ್‌ಫಿಟ್‌, ಕಾಳೇಜು ಹುಡುಗಿಯರ ಹಾಗೂ ಜೆನ್‌ ಜಿ ಗ್ಲಾಮರಸ್‌ ಯುವತಿಯರ ಫ್ಯಾಷನ್‌ ಚಾಯ್ಸ್ನಲ್ಲಿ ಸೇರಿಕೊಂಡಿವೆ. ಈ ಉಡುಪಿನಲ್ಲಿ ಅತಿಯಾದ ವಿನ್ಯಾಸದ ಹಾವಳಿ ಇರದ ಕಾರಣ, ಈ ಉಡುಗೆ , ನೋಡಲು ತೀರಾ ಸಿಂಪಲ್‌ ಡಿಸೈನ್‌ ಎಂದೆನಿಸುತ್ತದೆ. ಆದರೆ, ಲೈಟ್‌ನಲ್ಲಿ ಜಗಮಗಿಸುತ್ತದೆ. ಸಿಕ್ವೀನ್ಸ್ ಡಿಸೈನ್‌ ನಿಂದಾಗಿ ಪಾರ್ಟಿವೇರ್‌ನಂತೆಯೂ ಕಾಣಿಸುವುದು. ಇದರಿಂದಾಗಿ, ಬಹಳಷ್ಟು ಹುಡುಗಿಯರು ಈ ಡ್ರೆಸ್‌ಗಳನ್ನು ಪಾರ್ಟಿವೇರ್‌ಗಳಾಗಿಯೂ ಧರಿಸುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ. ಇನ್ನು, ರೆಟ್ರೊ ಶೈಲಿಯಲ್ಲಿ ಔಟ್‌ಫಿಟ್‌ ಕಾಣಿಸುವುದರಿಂದ ಈ ಡ್ರೆಸ್‌ಗೆ ರೆಟ್ರೊ ಸ್ಪೆಕ್ಟ್ರಮ್‌ ಡ್ರೆಸ್‌ ಎಂದೂ ಕೂಡ ಹೇಳಲಾಗುತ್ತದೆ ಎನ್ನುತ್ತಾರೆ ಡಿಸೈನರ್‌ ಶ್ರೀಜಾ.

ಇದನ್ನೂ ಓದಿ: Shalini Rajaneesh: ಸೀರೆ, ಹಣೆಗೆ ಅಗಲವಾದ ರೆಡ್ ಬಿಂದಿ ಎಂದಿಗೂ ಬದಲಾಗದ ನನ್ನ ಯೂನಿಕ್ ಫ್ಯಾಷನ್ ಸ್ಟೇಟ್ಮೆಂಟ್!

ಸ್ಪೆಕ್ಟ್ರಮ್‌ ಡ್ರೆಸ್ ಆಯ್ಕೆ & ಮೇಕೋವರ್‌ ಹೇಗೆ ?

  • ಆದಷ್ಟೂ ಬಾಡಿ ಟೈಪ್‌ಗೆ ಹೊಂದುವಂತಹ ಡಿಸೈನ್‌ನವನ್ನು ಕೊಳ್ಳಿ.
  • ಡಾರ್ಕ್‌ ಕಲರ್‌ನಲ್ಲಿ ಬ್ಲ್ಯಾಕ್‌ ಶೇಡ್‌ನ ಸ್ಪೆಕ್ಟ್ರಮ್‌ ಡ್ರೆಸ್‌ಗಳು ಟ್ರೆಂಡ್‌ನಲ್ಲಿವೆ.
  • ಈ ಔಟ್‌ಫಿಟ್‌ ಮೇಲೆ ಕ್ರಾಪ್‌ ಜಾಕೆಟ್‌ ಧರಿಸಿ, ಮಾನ್ಸೂನ್‌ ಲುಕ್‌ ನೀಡಬಹುದು.
  • ಹೀಲ್ಸ್ ಫುಟ್‌ವೇರ್‌ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.
  • ಮಿನಿಮಲ್‌ ಆಕ್ಸೆಸರೀಸ್‌ ಕೂಡ ಆಕರ್ಷಕವಾಗಿ ಬಿಂಬಿಸುತ್ತದೆ.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Yettinahole project lift work to be inaugurated on September 6 Gowri festival
ಬೆಂಗಳೂರು36 mins ago

Yettinahole Project: ಗೌರಿ ಹಬ್ಬದಂದು ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಉದ್ಘಾಟನೆ; ಪಕ್ಷಬೇಧ ಮರೆತು ಎಲ್ಲರಿಗೂ ಆಹ್ವಾನ- ಡಿಸಿಎಂ

Rain News
ಮಳೆ51 mins ago

Rain News : ವಿಜಯವಾಡದಲ್ಲಿ ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ; ಕಲಬುರಗಿಯಲ್ಲೂ ಅಬ್ಬರ

Bike rider in deadly accident Elderly woman dies of electric shock
ಬೆಂಗಳೂರು1 hour ago

Road Accident : ಡೆಡ್ಲಿ ಆ್ಯಕ್ಸಿಡೆಂಟ್‌ಗೆ ಬೈಕ್‌ ಸವಾರ ಸ್ಪಾಟ್‌ ಡೆತ್‌; ಕರೆಂಟ್‌ ಶಾಕ್‌ನಿಂದ ಒದ್ದಾಡಿ ಪ್ರಾಣಬಿಟ್ಟ ವೃದ್ಧೆ

Girl commits suicide after being fed up with rumours of love
ಮಂಡ್ಯ2 hours ago

Mandya News : ನಾಲ್ವರು ಬಾಲಕರ ಪ್ರೀತಿ-ಪ್ರೇಮದ ಅಪಪ್ರಚಾರ; ಗಾಳಿ ಸುದ್ದಿಗೆ ಬಾಲಕಿ ಆತ್ಮಹತ್ಯೆ

Do you know when Darshan got royalty in Central Jail
ಸಿನಿಮಾ3 hours ago

Actor Darshan : ಸೆಂಟ್ರಲ್‌ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಬಿಸ್ಕತ್‌ ಹಾಕಿಲ್ವಾ ಸುಮ್ಮಿನಿರು ಅಂದ್ರಾ ಕರಿಯಾ!

Actor Darshan shifted back to Bengaluru from Ballari
ಬಳ್ಳಾರಿ3 hours ago

Actor Darshan : ಬಳ್ಳಾರಿಯಿಂದ ನಟ ದರ್ಶನ್‌ ಮತ್ತೆ ಬೆಂಗಳೂರಿಗೆ ಶಿಫ್ಟ್‌! ಪತ್ನಿ ಬಂದು ಹೋದ್ಮೆಲೆ ಫುಲ್ ಆಕ್ಟೀವ್

police Firing
ಕಲಬುರಗಿ4 hours ago

Police Firing: ಪೊಲೀಸರ ಮೇಲೆ ಚಾಕುಯಿಂದ ದಾಳಿ ಮಾಡಿದ ದರೋಡೆಕೋರ; ಆರೋಪಿ ಕಾಲಿಗೆ ಫೈರಿಂಗ್‌ ಮಾಡಿದ ಖಾಕಿ

karnataka weather Forecast
ಮಳೆ9 hours ago

Karnataka Weather : ರಾಜ್ಯಾದ್ಯಂತ ಮುಂದಿನ 24 ಗಂಟೆಯಲ್ಲಿ ವ್ಯಾಪಕ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

Rishab Shetty And NTR
ಸಿನಿಮಾ18 hours ago

Rishab Shetty And NTR: ತಾಯಿ ಜತೆಗೆ ಉಡುಪಿ ಶ್ರೀಕೃಷ್ಣನಿಗೆ ನಮಿಸಿದ ತೆಲುಗು ನಟ ಜ್ಯೂ.ಎನ್‌ಟಿಆರ್‌; ಜತೆಯಾದ ಡಿವೈನ್‌ ಸ್ಟಾರ್‌ ರಿಷಬ್‌

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್1 day ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 days ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 week ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌