India Bloc Meeting: ಎಲೆಕ್ಷನ್‌ಗೆ 'ಇಂಡಿಯಾ' ಕೂಟ ಭರ್ಜರಿ ಸಿದ್ಧತೆ, ವಿವಿಧ ಸಮಿತಿ ರಚನೆ, ಯಾರಿಗೆಲ್ಲ ಹೊಣೆ? - Vistara News

ದೇಶ

India Bloc Meeting: ಎಲೆಕ್ಷನ್‌ಗೆ ‘ಇಂಡಿಯಾ’ ಕೂಟ ಭರ್ಜರಿ ಸಿದ್ಧತೆ, ವಿವಿಧ ಸಮಿತಿ ರಚನೆ, ಯಾರಿಗೆಲ್ಲ ಹೊಣೆ?

India Bloc Meeting: ಪ್ರತಿಪಕ್ಷಗಳ ಇಂಡಿಯಾ ಕೂಟದ ಮೂರನೇ ಸಭೆ ಮುಂಬೈನಲ್ಲಿ ಗುರುವಾರ ಮತ್ತು ಶುಕ್ರವಾರ ನಡೆಯಿತು.

VISTARANEWS.COM


on

INDIA Alliance partners Congress and AAP Seal seat deal for Goa, Haryana, Gujarat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ, ಮಹಾರಾಷ್ಟ್ರ: 2024ರ ಲೋಕಸಭೆ ಚುನಾವಣೆ (Lok Sabha Election 2024) ಎದುರಿಸಲು ಪ್ರತಿಪಕ್ಷಗಳು ಸಜ್ಜಾಗಿವೆ(Opposition Parties). ‘ಇಂಡಿಯಾ’ ಹೆಸರಿನಡಿ ಒಂದಾಗಿರುವ ಪ್ರತಿಪಕ್ಷಗಳ ಮೂರನೇ ಸಭೆ (INDIA bloc Meeting) ಶುಕ್ರವಾರ ಮುಂಬೈನಲ್ಲಿ (Mumbai City) ಮುಕ್ತಾಯವಾಗಿದ್ದು, ಹಲವು ಸಮಿತಿಗಳನ್ನು ರಚಿಸಲಾಗಿದೆ. ಗುರುವಾರ ಮತ್ತು ಶುಕ್ರವಾರ ನಡೆದಿರುವ ಈ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಸಾಧ್ಯವಾದಷ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ತೀರ್ಮಾನ ಮಾಡಲಾಗಿದೆ.

ಶುಕ್ರವಾರ ಮುಕ್ತಾಯವಾದ ಇಂಡಿಯಾ ಕೂಟದ ಮೂರನೇ ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ಅವುಗಳಿಗೆ ವಿಶೇಷ ಜವಾಬ್ದಾರಿಗಳನ್ನು ವಹಿಸಲಾಗಿದೆ. ಯಾವೆಲ್ಲ ಸಮಿತಿಗಳೆಂದು ನೋಡೋಣ ಬನ್ನಿ.

ಸಮನ್ವಯ ಸಮಿತಿ ಮತ್ತು ಚುನಾವಣಾ ಕಾರ್ಯತಂತ್ರ ಸಮಿತಿ

-ಕೆಸಿ ವೇಣುಗೋಪಾಲ್, INC
-ಶರದ್ ಪವಾರ್, ಎನ್‌ಸಿಪಿ
-ಟಿಆರ್ ಬಾಲು, ಡಿಎಂಕೆ
-ಹೇಮಂತ್ ಸೊರೆನ್, JMM
-ಸಂಜಯ್ ರಾವುತ್, ಎಸ್.ಎಸ್
-ತೇಜಸ್ವಿ ಯಾದವ್, ಆರ್ಜೆಡಿ
-ಅಭಿಷೇಕ್ ಬ್ಯಾನರ್ಜಿ, ಟಿಎಂಸಿ
-ರಾಘವ್ ಚಡ್ಡಾ, ಎಎಪಿ
-ಜಾವೇದ್ ಅಲಿ ಖಾನ್, ಎಸ್ಪಿ
-ಲಲ್ಲನ್ ಸಿಂಗ್, ಜೆಡಿಯು
-ಡಿ ರಾಜಾ, ಸಿಪಿಐ
-ಒಮರ್ ಅಬ್ದುಲ್ಲಾ, NC
-ಮೆಹಬೂಬ ಮುಫ್ತಿ, PDP

ಇಂಡಿಯಾ ಮೈತ್ರಿಕೂಟದ ಪ್ರಚಾರ ಸಮಿತಿ

-ಗುರುದೀಪ್ ಸಿಂಗ್ ಸಪ್ಪಲ್, INC
-ಸಂಜಯ್ ಝಾ, ಜೆಡಿಯು
-ಅನಿಲ್ ದೇಸಾಯಿ, ಎಸ್.ಎಸ್
-ಸಂಜಯ್ ಯಾದವ್, RJD
-ಪಿ.ಸಿ ಚಾಕೋ, ಎನ್‌ಸಿಪಿ
-ಚಂಪೈ ಸೊರೆನ್, JMM
-ಕಿರಣ್ಮೋಯ್ ನಂದಾ, ಎಸ್ಪಿ
-ಸಂಜಯ್ ಸಿಂಗ್, ಎಎಪಿ
-ಅರುಣ್ ಕುಮಾರ್, ಸಿಪಿಐ(ಎಂ)
-ಬಿನೋಯ್ ವಿಶ್ವಂ, ಸಿಪಿಐ
-ಹಸನೈನ್ ಮಸೂದಿ, NC
-ಶಾಹಿದ್ ಸಿದ್ದಿಕಿ, RLD
-ಎನ್.ಕೆ.ಪ್ರೇಮಚಂದ್ರನ್, ಆರ್.ಎಸ್.ಪಿ
-ಜಿ.ದೇವರಾಜನ್, ಎಐಎಫ್‌ಬಿ
-ರವಿ ರೈ, ಸಿಪಿಐ(ಎಂಎಲ್)
-ತಿರುಮಾವಲನ್, ವಿಸಿಕೆ
-ಕೆ.ಎಂ.ಕಾದರ್ ಮೊಯ್ದಿನ್, ಐಯುಎಂಎಲ್
-ಜೋಸ್ ಕೆ ಮಣಿ, ಕೆಸಿ(ಎಂ)

ಇಂಡಿಯಾ ಕೂಟ ಸಾಮಾಜಿಕ ಜಾಲತಾಣ ವಿಭಾಗ

-ಶ್ರೀಮತಿ ಸುಪ್ರಿಯಾ ಶ್ರೀನಾಟೆ, INC
-ಸುಮಿತ್ ಶರ್ಮಾ, RJD
-ಆಶಿಶ್ ಯಾದವ್, ಎಸ್ಪಿ
-ರಾಜೀವ್ ನಿಗಮ್, ಎಸ್ಪಿ
-ರಾಘವ್ ಚಡ್ಡಾ, ಎಎಪಿ
-ಶ್ರೀಮತಿ ಅವಿಂದಾನಿ, ಜೆಎಂಎಂ-
-ಶ್ರೀಮತಿ ಇಲ್ತಿಜಾ ಮೆಹಬೂಬ, PDP
-ಪ್ರಾಂಜಲ್, ಸಿಪಿಎಂ
-ಡಾ.ಭಾಲಚಂದ್ರನ್ ಕಾಂಗೋ, ಸಿಪಿಐ
-ಶ್ರೀಮತಿ ಇಫ್ರಾ ಜಾ, NC
-ವಿ ಅರುಣ್ ಕುಮಾರ್, ಸಿಪಿಐ(ಎಂಎಲ್)

ಈ ಸುದ್ದಿಯನ್ನೂ ಓದಿ: India Bloc Meeting: ಇಂಡಿಯಾ ಕೂಟದ ಸಭೆಯಲ್ಲಿ ‘ಕೈ’ ಮಾಜಿ ನಾಯಕ ಕಪಿಲ್ ಸಿಬಲ್ ಪ್ರತ್ಯಕ್ಷ, ಕಾಂಗ್ರೆಸ್ ಆಕ್ಷೇಪ

ಇಂಡಿಯಾ ಕೂಟ ಮಾಧ್ಯಮ ವಿಭಾಗ

-ಜೈರಾಮ್ ರಮೇಶ್, INC
-ಮನೋಜ್ ಝಾ, RJD
-ಅರವಿಂದ್ ಸಾವಂತ್, ಎಸ್.ಎಸ್
-ಜಿತೇಂದ್ರ ಅಹ್ವಾದ್, NCP
-ರಾಘವ್ ಚಡ್ಡಾ, ಎಎಪಿ
-ರಾಜೀವ್ ರಂಜನ್, ಜೆಡಿಯು
-ಪ್ರಾಂಜಲ್, ಸಿಪಿಎಂ
-ಆಶಿಶ್ ಯಾದವ್, ಎಸ್ಪಿ
-ಸುಪ್ರಿಯೋ ಭಟ್ಟಾಚಾರ್ಯ, ಜೆಎಂಎಂ
-ಅಲೋಕ್ ಕುಮಾರ್, ಜೆಎಂಎಂ
-ಮನೀಶ್ ಕುಮಾರ್, ಜೆಡಿಯು
-ರಾಜೀವ್ ನಿಗಮ್, ಎಸ್ಪಿ
-ಡಾ.ಭಾಲಚಂದ್ರನ್ ಕಾಂಗೋ, ಸಿಪಿಐ
-ತನ್ವಿರ್ ಸಾದಿಕ್, ಎನ್ ಸಿ
-ಪ್ರಶಾಂತ್ ಕನ್ನೋಜಿಯಾ
-ನರೇನ್ ಚಟರ್ಜಿ, AIFB
-ಶ್ರೀಮತಿ ಸುಚೇತಾ ಡಿ, ಸಿಪಿಐ(ಎಂಎಲ್)
-ಮೋಹಿತ್ ಭಾನ್, PDP

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Agnipath Scheme: ಸರ್ಕಾರ ರಚನೆಗೂ ಮುನ್ನ ನಿತೀಶ್‌ ಕುಮಾರ್‌ ಬಿಗ್‌ ಡಿಮ್ಯಾಂಡ್‌! ಬಿಜೆಪಿಗೆ ʼಅಗ್ನಿʼ ಪರೀಕ್ಷೆ ಗ್ಯಾರಂಟಿ!

Agnipath Scheme: ಜೆಡಿಯು ನಾಯಕ ಕೆ.ಸಿ. ತ್ಯಾಗಿ ಪ್ರತಿಕ್ರಿಯಿಸಿದ್ದು, ನಿತೀಶ್ ಕುಮಾರ್ ಅವರ ಜೆಡಿಯು ಸೇನೆಗೆ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಮರುಪರಿಶೀಲಿಸುವಂತೆ ಮಿತ್ರ ಪಕ್ಷ ಬಿಜೆಪಿಗೆ ಒತ್ತಾಯಿಸುತ್ತಾರೆ. ಜನರಿಗೆ ಅಗ್ನಿಪಥ ಯೋಜನೆ ವಿರುದ್ಧ ಅಸಮಾಧಾನವಿದ್ದು, ಚುನಾವಣೆ ಸಂದರ್ಭದಲ್ಲಿ ಅದು ಗೋಚರಿಸುತ್ತಿತ್ತು ಎಂದು ಹೇಳಿದ್ದಾರೆ. ನಾವು ಈ ಬಗ್ಗೆ ಮಿತ್ರ ಪಕ್ಷಗಳ ಜೊತೆ ಜಿದ್ದಾಜಿದ್ದಿಗೆ ಬೀಳುವುದಿಲ್ಲ. ಅಗ್ನಿಪಥ್ ಯೋಜನೆ ಪರಿಚಯಿಸಿದಾಗ, ಸಶಸ್ತ್ರ ಪಡೆಗಳ ದೊಡ್ಡ ವರ್ಗದಲ್ಲಿ ಅಸಮಾಧಾನವಿತ್ತು. ಅವರ ಕುಟುಂಬಗಳು ಚುನಾವಣೆಯ ಸಮಯದಲ್ಲಿ ಪ್ರತಿಭಟನೆ ನಡೆಸಿದ್ದರು. ಆದ್ದರಿಂದ, ಈ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

VISTARANEWS.COM


on

Agnipath scheme
Koo

ನವದೆಹಲಿ: ಮೂರನೇ ಬಾರಿ ಅಧಿಕಾರಕ್ಕೆ ಬರುತ್ತಿರುವ ಬಿಜೆಪಿ(BJP) ನೇತೃತ್ವದ ಎನ್‌ಡಿಎ(NDA) ಸರ್ಕಾರಕ್ಕೆ ಈ ಬಾರಿ ಸಾಗಲಿರುವ ಹಾದಿ ಹೂವಿನ ಹಾಸಿಗೆಯಂತಿಲ್ಲ. ಈ ಬಾರಿ ಮಿತ್ರಗಳ ನೆರವಿನ ಜೊತೆಗೇ ಹೆಜ್ಜೆ ಹಾಕಬೇಕಾಗಿರುವ ಕಾರಣ ಮಿತ್ರ ಪಕ್ಷಗಳಿಂದ ಭಾರೀ ಅಗ್ನಿ ಪರೀಕ್ಷೆ ಎದುರಿಸಬೇಕಾದ ಸ್ಥಿತಿ ಇದೆ. ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರ ಹಾಕಿಕೊಂಡಿದ್ದ ಕೆಲವೊಂದು ಯೋಜನೆಗಳ ಜಾರಿಗೆ ಮಿತ್ರ ಪಕ್ಷಗಳೇ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಜೆಡಿಯು ಏನು ಬೇಡಿಕೆ ಇಡುತ್ತದೋ ಎಂಬ ಚಿಂತೆ ಬಿಜೆಪಿಗೆ ಇದ್ದೇ ಇದೆ. ಅದಕ್ಕೆ ಪೂರಕ ಎಂಬಂತೆ ಕೇಂದ್ರದ ಮಹತ್ವದ ಅಗ್ನಿಪಥ ಯೋಜನೆ(Agnipath Scheme)ಯನ್ನು ಮರುಪರಿಶೀಲಿಸುವಂತೆ ಜೆಡಿಯು ಬೇಡಿಕೆ ಇಟ್ಟಿದೆ.

ಈ ಬಗ್ಗೆ ಜೆಡಿಯು ನಾಯಕ ಕೆ.ಸಿ. ತ್ಯಾಗಿ ಪ್ರತಿಕ್ರಿಯಿಸಿದ್ದು, ನಿತೀಶ್ ಕುಮಾರ್ ಅವರ ಜೆಡಿಯು ಸೇನೆಗೆ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಮರುಪರಿಶೀಲಿಸುವಂತೆ ಮಿತ್ರ ಪಕ್ಷ ಬಿಜೆಪಿಗೆ ಒತ್ತಾಯಿಸುತ್ತಾರೆ. ಜನರಿಗೆ ಅಗ್ನಿಪಥ ಯೋಜನೆ ವಿರುದ್ಧ ಅಸಮಾಧಾನವಿದ್ದು, ಚುನಾವಣೆ ಸಂದರ್ಭದಲ್ಲಿ ಅದು ಗೋಚರಿಸುತ್ತಿತ್ತು ಎಂದು ಹೇಳಿದ್ದಾರೆ. ನಾವು ಈ ಬಗ್ಗೆ ಮಿತ್ರ ಪಕ್ಷಗಳ ಜೊತೆ ಜಿದ್ದಾಜಿದ್ದಿಗೆ ಬೀಳುವುದಿಲ್ಲ. ಅಗ್ನಿಪಥ್ ಯೋಜನೆ ಪರಿಚಯಿಸಿದಾಗ, ಸಶಸ್ತ್ರ ಪಡೆಗಳ ದೊಡ್ಡ ವರ್ಗದಲ್ಲಿ ಅಸಮಾಧಾನವಿತ್ತು. ಅವರ ಕುಟುಂಬಗಳು ಚುನಾವಣೆಯ ಸಮಯದಲ್ಲಿ ಪ್ರತಿಭಟನೆ ನಡೆಸಿದ್ದರು. ಆದ್ದರಿಂದ, ಈ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಶಸ್ತ್ರ ಪಡೆಗಳ ರಕ್ಷಣಾ ಪಿಂಚಣಿ ಬಿಲ್ ಅನ್ನು ಕಡಿಮೆ ಮಾಡಲು ಕೇಂದ್ರವು 2022 ರಲ್ಲಿ ಅಗ್ನಿಪಥ್ ಯೋಜನೆಯನ್ನು ಅನಾವರಣಗೊಳಿಸಿತ್ತು. ಯೋಜನೆಯಡಿಯಲ್ಲಿ, ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಒಟ್ಟು ವಾರ್ಷಿಕ ನೇಮಕಾತಿಗಳಲ್ಲಿ, 25% ಮಾತ್ರ ಶಾಶ್ವತ ಆಯೋಗದ ಅಡಿಯಲ್ಲಿ ಇನ್ನೂ 15 ವರ್ಷಗಳವರೆಗೆ ಮುಂದುವರೆಯಲು ಅನುಮತಿಸಲಾಗಿದೆ. ಈ ಯೋಜನೆಯು ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಪ್ರತಿಭಟನೆಗಳನ್ನು ಹುಟ್ಟುಹಾಕಿತು.

ಜಾತಿ ಆಧಾರಿತ ಜನಗಣತಿ ಕುರಿತು ಮಾತನಾಡಿದ ಕೆ.ಸಿ.ತ್ಯಾಗಿ, ದೇಶದ ಯಾವ ಪಕ್ಷವೂ ಜಾತಿ ಆಧಾರಿತ ಜನಗಣತಿಯನ್ನು ತಿರಸ್ಕರಿಸಿಲ್ಲ. ಜಾತಿ ಆಧಾರಿತ ಜನಗಣತಿ ಇಂದಿನ ಅಗತ್ಯವಾಗಿದೆ. ನಾವು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ಯಾವುದೇ ಪೂರ್ವ ಷರತ್ತುಗಳಿಲ್ಲ. ಬೇಷರತ್ ಬೆಂಬಲವಿದೆ. ಆದರೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಗಬೇಕು ಎಂಬುದು ನಮ್ಮ ಮನಸ್ಸಲ್ಲಿದೆ ಎಂದರು.

ಒನ್ ನೇಷನ್ ಒನ್ ಪೋಲ್, ಏಕರೂಪ ಕಾನೂನು

ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ, ಬಿಹಾರ ಮುಖ್ಯಮಂತ್ರಿಗಳು ಕಾನೂನು ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ನಾವು ಅದನ್ನು ವಿರೋಧಿಸುವುದಿಲ್ಲ ಆದರೆ ಎಲ್ಲಾ ಮಿತ್ರಪಕ್ಷಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಪಕ್ಷವು ಬಿಜೆಪಿಯ ‘ಒಂದು ರಾಷ್ಟ್ರ ಒಂದು ಚುನಾವಣೆ’ ನೀತಿಯ ಪರವಾಗಿದೆ ಎಂದು ತ್ಯಾಗಿ ಹೇಳಿದ್ದಾರೆ.

ಇದನ್ನೂ ಓದಿ: Love jihad : ಬಿಹಾರದ ಹಿಂದೂ ಯುವತಿಯನ್ನು ಉತ್ತರಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಆರಿಫ್; ಲವ್​ ಜಿಹಾದ್ ಆರೋಪ

“ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ನಮ್ಮ ನಿಲುವು ಇಂದಿಗೂ ಒಂದೇ ಆಗಿರುತ್ತದೆ. ಈ ವಿಷಯದ ಬಗ್ಗೆ ಎಲ್ಲಾ ಪಾಲುದಾರರನ್ನು ಕರೆದೊಯ್ದು ಅವರ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ನಿತೀಶ್ ಕುಮಾರ್ ಯುಸಿಸಿ ಕುರಿತು ಕಾನೂನು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು ಹೇಳಿದರು. ನಾವು ಅದನ್ನು ವಿರೋಧಿಸುವುದಿಲ್ಲ, ಆದರೆ ಅದರ ಬಗ್ಗೆ ವ್ಯಾಪಕವಾದ ಚರ್ಚೆಯ ಅಗತ್ಯವಿದೆ, ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಏಕೀಕೃತ ನಿರ್ಧಾರವನ್ನು ತೆಗೆದುಕೊಳ್ಳಬೇಕು, ”ಎಂದು ತ್ಯಾಗಿ ಹೇಳಿದರು.

Continue Reading

ಪ್ರಮುಖ ಸುದ್ದಿ

Love jihad : ಬಿಹಾರದ ಹಿಂದೂ ಯುವತಿಯನ್ನು ಉತ್ತರಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಆರಿಫ್; ಲವ್​ ಜಿಹಾದ್ ಆರೋಪ

Love jihad : ಬರೇಲಿಯ ಬಹೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 4 ರಂದು ಈ ಘಟನೆ ಬೆಳಕಿಗೆ ಬಂದಿದೆ. ಸುನ್ನಿನಗರ ನಿವಾಸಿಯಾಗಿರು ಆರಿಫ್​ ವಿರುದ್ಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಹಾಗೂ ಆತನ ತಮ್ಮ ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

VISTARANEWS.COM


on

Love Jihad
Koo

ಬೆಂಗಳೂರು: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಮಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿ ಇಸ್ಲಾಂಗೆ ಮತಾಂತರ ಮಾಡಲು ಯತ್ನಿಸಿದ್ದಾನೆ (Love jihad ) ಎಂಬ ಆರೋಪ ಕೇಳಿ ಬಂದಿದೆ. ಬಿಹಾರದ ಹಿಂದೂ ಹುಡುಗಿಯನ್ನು ದೆಲ್ಲಿಯಿಂದ ಕರೆದುಕೊಂಡು ಬಂದ ಮೊಹಮ್ಮದ್ ಆರಿಫ್ ತನ್ನನ್ನು ಪ್ರೇಮ ಬಲೆಗೆ ತಳ್ಳಿ ನಂತರ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆರಿಫ್​ನ ಕೃತ್ಯಕ್ಕೆ ಆರಿಫ್ ಸಹೋದರ ಮೊಹಮ್ಮದ್ ತಾಲಿಬ್ ಸಹಕಾರ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಈ ಬಗ್ಗೆ ಸ್ಥಳೀಯ ವೆಬ್​ಸೈಟ್​ಗಳು ವರದಿ ಮಾಡಿವೆ.

ಬರೇಲಿಯ ಬಹೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 4 ರಂದು ಈ ಘಟನೆ ಬೆಳಕಿಗೆ ಬಂದಿದೆ. ಸುನ್ನಿನಗರ ನಿವಾಸಿಯಾಗಿರು ಆರಿಫ್​ ವಿರುದ್ಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಹಾಗೂ ಆತನ ತಮ್ಮ ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂತ್ರಸ್ತೆ ತನ್ನ ದೂರಿನಲ್ಲಿ ತಾನು ಮೂಲತಃ ಬಿಹಾರದ ನವಾಡಾ ಪ್ರದೇಶದವಳು ಎಂದು ಹೇಳಿಕೊಂಡಿದ್ದಾಳೆ. ಆಕೆ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಬರೇಲಿ ನಿವಾಸಿ ಮೊಹಮ್ಮದ್ ಆರಿಫ್ ನನ್ನು ಭೇಟಿಯಾಗಿದ್ದಳು. ಸ್ವಲ್ಪ ಸಮಯದ ನಂತರ, ಆರಿಫ್ ತನ್ನನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಬಹೇರಿಯಲ್ಲಿರುವ ತನ್ನ ನಿವಾಸಕ್ಕೆ ಕರೆದುಕೊಂಡು ಹೋಗಿದ್ದ. ಈ ಸಮಯದಲ್ಲಿ, ಅವಳ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದ. ಸುಮಾರು ಒಂದು ವರ್ಷದಿಂದ ಇಸ್ಲಾಂಗೆ ಮತಾಂತರಗೊಳ್ಳುವಂತೆ ಸಂತ್ರಸ್ತೆಯ ಮೇಲೆ ಒತ್ತಡ ಹೇರಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೆಸರು ಬದಲಾವಣೆ

ಆರೋಪಿ ಆರಿಫ್ ಯುವತಿಯನ್ನು ಇಸ್ಲಾಂಗೆ ಮತಾಂತರಿಸಿದ್ದ. ಆಕೆಗೆ ಸನಾ ಎಂದು ಮರುನಾಮಕರಣ ಮಾಡಿದ್ದ. ಇದಾದ ಬಳಿಕ ಆರಿಫ್​ನ ಸಹೋದರನೂ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದ, ರಾತ್ರಿ ಕೊಠಡಿಗೆ ನುಗ್ಗಿ ಅತ್ಯಾಚಾರ ಮಾಡಿದ್ದ. ಹೆದರಿದ ಆಕೆ ದೂರು ನೀಡಿದ್ದಾಳೆ.

ಇದನ್ನೂ ಓದಿ: Sonu Nigam: ಅಯೋಧ್ಯೆ ಜನರಿಗೆ ಛೀಮಾರಿ ಹಾಕಿದ್ರಾ ಸೋನು ನಿಗಮ್?

ಸಂತ್ರಸ್ತೆ ದೂರು ನೀಡುವುದಾಗಿ ಹೇಳಿದಾಗ ಆರಿಫ್​ನ ತಮ್ಮ ತಾಲಿಬ್ “ನೀವು ಹೇಗಾದರೂ ಬಿಹಾರದವರು. ಯಾರಿಗಾದರೂ ಹೇಳಿದರೆ, ನಾನು ಕೊಲ್ಲುತ್ತೇನೆ ಎಂದು ಬೆದರಿಸಿದ್ದ. ಯವತಿ ಈ ಬಗ್ಗೆ ತನ್ನ ಆರಿಫ್​ನ ಬಳಿ ಹೇಳಿದ್ದಳು. ಆದರೆ ಆತ ಸಹೋದರನನ್ನೇ ಬೆಂಬಲಿಸಿದ್ದ.

ಆರಿಫ್, ಆತನ ಸಹೋದರ ತಾಲಿಬ್ ಮತ್ತು ಆತನ ತಂದೆ ಸಬೀರ್​ ಸೇರಿಕೊಂಡು ಯುವತಿ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಯಾರಿಗಾದರೂ ದೂರು ನೀಡಿದರೆ, ನಾವು ನಿಮ್ಮನ್ನು ಸುಟ್ಟುಹಾಕುತ್ತೇವೆ. ಎಂದು ಬೆದರಿಸಿದ್ದ. ತನ್ನ ಮೇಲೆ ಆಗುತ್ತಿರುವ ದೌರ್ಜನ್ಯದಿಂದ ಬೆದರಿದ ಯವತಿ ದೂರು ನೀಡಿದ್ದಾಳೆ. ಬಳಿಕ ಹಿಂದೂ ಸಂಘಟನೆಗಳು ಆಕೆಯ ನೆರವಿಗೆ ಬಂದಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸದ್ದಾರೆ.

Continue Reading

ದೇಶ

Election Results 2024: ರಾಮನೂರಿನಲ್ಲೇ ಬಿಜೆಪಿ ಹಿನ್ನಡೆ; ಹೀನಾಯ ಸೋಲಿಗೆ ಕಾರಣ ಏನು?

Election Results 2024:ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ (Faizabad Election Result) ಎಸ್‌ಪಿ (SP) ಅಭ್ಯರ್ಥಿಯ ಮುಂದೆ ಬಿಜೆಪಿ (BJP) ಅಭ್ಯರ್ಥಿ ಸೋತಿದ್ದಾರೆ. ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್‌ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅವಧೇಶ್ ಪ್ರಸಾದ್ ಮುಂದೆ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸೋತಿದ್ದಾರೆ. ಫೈಜಾಬಾದ್‌ನಿಂದ ಮೂರು ಬಾರಿ ಸಂಸದರಾಗಿರುವ ಸಿಂಗ್ ಅವರ ಈ ಸಲದ ಸೋಲು ಅಚ್ಚರಿದಾಯಕವಾಗಿದೆ.

VISTARANEWS.COM


on

Election Results 2024
Koo

ನವದೆಹಲಿ: ಉತ್ತರಪ್ರದೇಶ(Uttar Pradesh)ದಲ್ಲಿ ಈ ಬಾರಿ ಡಬಲ್‌ ಎಂಜಿನ್‌ ಸರ್ಕಾರವಾಗಲೀ, ಅಯೋಧ್ಯೆ(Ayodhya) ರಾಮ ಮಂದಿರವಾಗಲಿ ಬಿಜೆಪಿ(BJP)ಗೆ ವರವಾಗಿಲ್ಲ. ಇಡೀ ಸುಮಾರು 60ಕ್ಕಿಂತ ಹೆಚ್ಚಿನ ಸ್ಥಾನದ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಕನಸಿಗೆ ಈ ಬಾರಿ ತನ್ನೀರೆರಚಿದಂತಾಗಿದ್ದು, ಕೇವಲ 33 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು(Election Results 2024). ಇದರಿಂದ ಬಿಜೆಪಿಗೆ ಬಹಳ ಮುಖಭಂಗ ಎದುರಿಸುವಂತಾಗಿದೆ. ಅದರಲ್ಲೂ ಈ ಬಾರಿ ಶ್ರೀರಾಮನ ಮಂದಿರ ನಿರ್ಮಾಣಗೊಂಡು ಇಡೀ ಜಗತ್ತನ್ನೇ ಸೆಳೆದಿದ್ದ ಅಯೋಧ್ಯೆಯಲ್ಲೇ ಬಿಜೆಪಿ ಹಿನ್ನಡೆ ಅನುಭವಿಸಿರುವುದು ಪಕ್ಷಕ್ಕೆ ದೇಶ-ವಿದೇಶದಲ್ಲೂ ಮುಖಭಂಗ ಎದುರಿಸುವಂತಾಗಿದೆ. ಹಾಗಿದ್ದರೆ ಅಯೋಧ್ಯೆಯಲ್ಲೇ ಬಿಜೆಪಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಹಿನ್ನಡೆ ಅನುಭವಿಸಲು ಕಾರಣ ಏನು?

ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ (Faizabad Election Result) ಎಸ್‌ಪಿ (SP) ಅಭ್ಯರ್ಥಿಯ ಮುಂದೆ ಬಿಜೆಪಿ (BJP) ಅಭ್ಯರ್ಥಿ ಸೋತಿದ್ದಾರೆ. ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್‌ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅವಧೇಶ್ ಪ್ರಸಾದ್ ಮುಂದೆ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸೋತಿದ್ದಾರೆ. ಫೈಜಾಬಾದ್‌ನಿಂದ ಮೂರು ಬಾರಿ ಸಂಸದರಾಗಿರುವ ಸಿಂಗ್ ಅವರ ಈ ಸಲದ ಸೋಲು ಅಚ್ಚರಿದಾಯಕವಾಗಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಗಿಂತ 10,000ಕ್ಕೂ ಅಧಿಕ ಮತಗಳ ಅಂತರದಿಂದ ಸಿಂಗ್‌ ಹಿಂದುಳಿದರು. ಫೈಜಾಬಾದ್ ಜಿಲ್ಲೆಯನ್ನು 2018ರಲ್ಲಿ ಅಧಿಕೃತವಾಗಿ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಯಿತು. ಆದಾಗ್ಯೂ, ಲೋಕಸಭಾ ಸ್ಥಾನವನ್ನು ಇನ್ನೂ ಫೈಜಾಬಾದ್ ಎಂದು ಕರೆಯಲಾಗುತ್ತದೆ.

ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ಅಂಶಗಳಾವುದು?

ಬಿಜೆಪಿ ಈ ಬಾರಿ ಹಿಂದುಳಿದ ವರ್ಗ ಮತ್ತು ದಲಿತ ವರ್ಗದಿಂದ ಅಂತರ ಕಾಯ್ದುಕೊಂಡು ಬಂದಿರುವುದು ಕೂಡ ಎಸ್‌ಪಿಗೆ ಲಾಭದಾಯಕವಾಗಿತ್ತು. ಅದೂ ಅಲ್ಲದೇ ಮಂದಿರ ನಿರ್ಮಾಣಕ್ಕೆಂದು ಜನರ ಭೂಮಿಯನ್ನು ಪಡೆದಿದ್ದು, ಅದರ ಪರಿಹಾರ ಹಣ ಇನ್ನೂ ಒದಗಿಸಿಲ್ಲ ಎಂಬುದನ್ನು ಸರಿಯಾದ ರೀರಿಯಲ್ಲಿ ಜನರಿಗೆ ಮನದಟ್ಟು ಮಾಡುವಲ್ಲಿ ಅಖಿಲೇಶ್‌ ಯಾದವ್‌ ಬಣ ಯಶಸ್ವಿ ಆಗಿತ್ತು. ಅದೂ ಅಲ್ಲದೇ ರಾಜ್ಯ ಮತ್ತು ಕೇಂದ್ರ ಬಿಜೆಪಿ ನಡುವಿನ ಬಿಕ್ಕಟ್ಟನ್ನು ಜನರಿಗೆ ಎತ್ತಿ ತೋರಿಸಲಾಯಿತು. ಇವೆಲ್ಲಾ ಕಾರಣಗಳಿಂದಾಗಿ ಬಿಜೆಪಿ ಮೇಲಿನ ಒಲುವು ಜನರಿಗೆ ಕಡಿಮೆ ಆಯಿತು.

ಬಿಜೆಪಿಯ ‘400 ಪಾರ್’ ಘೋಷಣೆ ಹೇಗೆ ಹಿನ್ನಡೆಯಾಯಿತು?

ಚುನಾವಣೆ ಆರಂಭಕ್ಕೂ ಮುನ್ನ ಬಿಜೆಪಿ ಈ ಬಾರಿ ʼ400 ಪಾರ್ʼ ಘೋಷಣೆ ಕೂಗುತ್ತಲೇ ಬಂದಿದೆ. ಇದೆ ವಿಚಾರವನ್ನು ಎತ್ತಿಕೊಂಡ ಸಮಾಜವಾದಿ ಪಕ್ಷ ಬಿಜೆಪಿ ಒಂದು ವೇಳೆ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿದರೆ ಸಂವಿಧಾನವನ್ನೇ ಬದಲಿಸಿ ಬಿಡುತ್ತದೆ. ಆ ಮೂಲಕ ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ ಎಂದು ಪ್ರಚಾರ ಕಾರ್ಯಕ್ರಮದಲ್ಲಿ ಒತ್ತಿ ಒತ್ತಿ ಹೇಳಿತ್ತು.

ದಲ್ಲದೆ, ಸಮಾಜವಾದಿ ಪಕ್ಷದ ಮತಬ್ಯಾಂಕ್ ಪರವಾಗಿ ಪ್ರಬಲವಾದ ಜಾತಿ ಸಮೀಕರಣವನ್ನು ಹೊಂದಿರುವ ಸ್ಥಾನಗಳಲ್ಲಿ ಫೈಜಾಬಾದ್ ಕೂಡ ಒಂದಾಗಿದೆ. ಅಲ್ಲದೆ, ಸಮಾಜವಾದಿ ಪಕ್ಷಕ್ಕೆ ಕೆಲಸ ಮಾಡಿದಂತೆ ತೋರುತ್ತಿರುವುದು ಬಿಜೆಪಿಯು ಬ್ರೂಟ್ ಬಹುಮತವನ್ನು ಪಡೆದರೆ ಸಂವಿಧಾನವನ್ನು ಬದಲಾಯಿಸುವ ನಿರೂಪಣೆಯಾಗಿದೆ. ಸಮಾಜವಾದಿ ಪಕ್ಷದ ಆರೋಪಕ್ಕೆ ಸರಿಯಾದ ಸಷ್ಟನೆ ಕೊಡುವಲ್ಲಿ ಸೋತ ಬಿಜೆಪಿ ಜನರ ವಿಶ್ವಾಸವನ್ನೇ ಕಳೆದುಕೊಂಡಿತು.

ಫೈಜಾಬಾದ್‌ನಲ್ಲಿನ ಜಾತಿ ಸಮೀಕರಣವೇ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ಪರಿಗಣಿಸಲಾಗಿದೆ. ಅಯೋಧ್ಯೆಯು ಅತಿ ಹೆಚ್ಚು OBC ಮತದಾರರನ್ನು ಹೊಂದಿದೆ, ಕುರ್ಮಿಗಳು ಮತ್ತು ಯಾದವ ಸಮುದಾಯವೇ ಬಲಿಷ್ಟವಾಗಿದೆ. ಒಬಿಸಿಗಳು 22% ಮತದಾರರು ಮತ್ತು ದಲಿತರು 21% ರಷ್ಟಿದ್ದಾರೆ. ದಲಿತರ ಪೈಕಿ ಪಾಸಿ ಸಮುದಾಯದವರು ಗರಿಷ್ಠ ಮತದಾರರನ್ನು ಹೊಂದಿದ್ದಾರೆ. ವಿಜೇತ ಅಭ್ಯರ್ಥಿ ಅವಧೇಶ್ ಪ್ರಸಾದ್ ಪಾಸಿ ಸಮುದಾಯಕ್ಕೆ ಸೇರಿದವರು.

ಇದನ್ನೂ ಓದಿ: Valmiki Corporation Scam: ಸಚಿವ ನಾಗೇಂದ್ರ ಇಂದೇ ರಾಜೀನಾಮೆ: ಖಚಿತಪಡಿಸಿದ ಡಿಸಿಎಂ ಡಿಕೆಶಿ

Continue Reading

ವೈರಲ್ ನ್ಯೂಸ್

K Annamalai: ಮೇಕೆಯ ತಲೆಗೆ ಅಣ್ಣಾಮಲೈ ಫೋಟೊ ಅಂಟಿಸಿ ಕಡಿದ ಡಿಎಂಕೆ ಕಾರ್ಯಕರ್ತರು!

K Annamalai: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಕೊಯಮತ್ತೂರು (Coimbatore) ಕ್ಷೇತ್ರದಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ (K Annamalai) ಕಣಕ್ಕೆ ಇಳಿದು ಕಾರ್ಯಕರ್ತರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದರು. ಪ್ರಬಲ ಪೈಪೋಟಿ ಒಡ್ಡಿದ್ದ ಅವರು ಕೊನೆಗೆ ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ವಿರುದ್ಧ ಸೋಲು ಕಂಡಿದ್ದರು. ಇದೀಗ ಡಿಎಂಕೆ ಕಾರ್ಯಕರ್ತರು ವಿಜಯೋತ್ಸವ ಆಚರಿಸುವ ವೇಳೆ ಅಣ್ಣಾಮಲೈ ವಿರುದ್ಧ ಅತಿರೇಕದ ವರ್ತನೆ ತೋರಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

K Annamalai
Koo

ಚೆನ್ನೈ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಕೊಯಮತ್ತೂರು (Coimbatore) ಕ್ಷೇತ್ರದಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ (K Annamalai) ಕಣಕ್ಕೆ ಇಳಿದು ಕಾರ್ಯಕರ್ತರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದರು. ಪ್ರಬಲ ಪೈಪೋಟಿ ಒಡ್ಡಿದ್ದ ಅವರು ಕೊನೆಗೆ ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ವಿರುದ್ಧ ಸೋಲು ಕಂಡಿದ್ದರು. ಇದೀಗ ಡಿಎಂಕೆ ಕಾರ್ಯಕರ್ತರು ವಿಜಯೋತ್ಸವ ಆಚರಿಸುವ ವೇಳೆ ಅಣ್ಣಾಮಲೈ ವಿರುದ್ಧ ಅತಿರೇಕದ ವರ್ತನೆ ತೋರಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video). ಜತೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಡಿಎಂಕೆ ಕಾರ್ಯಕರ್ತರು ಮೇಕೆಯ ತಲೆಗೆ ಅಣ್ಣಾಮಲೆ ಅವರ ಫೋಟೊ ತೂಗು ಹಾಕಿ ಬಳಿಕ ಅದರ ತಲೆ ಕಡಿಯುವ ವಿಡಿಯೊ ಇದಾಗಿದ್ದು, ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ರಸ್ತೆಯಲ್ಲಿ ನೆತ್ತರು ಚೆಲ್ಲಿದ್ದು, ವಿಕೃತಿ ಮೆರೆದ ಡಿಎಂಕೆ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಅದೊಂದು ಜನನಿಬಿಡ ರಸ್ತೆ. ಅಲ್ಲಿ ಡಿಎಂಕೆ ಕಾರ್ಯಕರ್ತರೆಲ್ಲ ಗುಂಪುಗೂಡಿದ್ದಾರೆ. ಇವರ ಮಧ್ಯೆ ಮೇಕೆಯೊಂದಿದೆ. ಮೇಕೆಯ ಕುತ್ತಿಗೆಗೆ ಅಣ್ಣಾಮಲೈ ಅವರ ಫೋಟೊವನ್ನು ತೂಗು ಹಾಕಲಾಗಿದೆ. ಬಳಿಕ ಓರ್ವ ಮೇಕೆಯ ಹಿಂದಿನ ಕಾಲನ್ನು ಹಿಡಿದುಕೊಳ್ಳುತ್ತಾನೆ. ಲುಂಗಿ ಸುತ್ತಿಕೊಂಡಿದ್ದ ಓರ್ವ ಕತ್ತಿ ಹಿಡಿದು ಬಳಿಗೆ ಬಂದು ಮೇಕೆಯ ಕತ್ತು ಕಡಿಯುತ್ತಾನೆ. ರಕ್ತ ರಸ್ತೆಯ ಮೇಲೆ ಚೆಲ್ಲುತ್ತದೆ. ಇಷ್ಟಕ್ಕೇ ಸುಮ್ಮನಾಗದ ಡಿಎಂಕೆ ಕಾರ್ಯಕರ್ತರು ಅಣ್ಣಾಮಲೈ ಅವರ ಫೋಟೊವನ್ನು ರಕ್ತದಲ್ಲಿ ಅದ್ದುತ್ತಾರೆ. ಜತೆಗೆ ʼʼಅಣ್ಣಾಮಲೈ ಮೇಕೆ ಬಲಿ” ಎಂದು ಘೋಷಣೆ ಕೂಗುತ್ತಾರೆ.

ಐಎಸ್‌ಐಎಸ್‌ ರೀತಿಯ ಶೈಲಿ

ಸದ್ಯ ಈ ವಿಡಿಯೊ ದೇಶಾದ್ಯಂತ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಈ ವಿಡಿಯೊ ಹಂಚಿಕೊಂಡು ʼಐಸಿಸ್ ಶೈಲಿಯ ದ್ವೇಷʼ ಎಂದು ಕರೆದಿದ್ದಾರೆ. ʼʼಇದು ಐಸಿಸ್ ಮಾದರಿಯ ದ್ವೇಷ ಸಾಧನೆ. ಕೊಯಮತ್ತೂರಿನಲ್ಲಿ ತಮ್ಮ ವಿಜಯವನ್ನು ಆಚರಿಸಲು ಡಿಎಂಕೆ ಕಾರ್ಯಕರ್ತರು ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಅಣ್ಣಾಮಲೈ ಅವರ ಫೋಟೊ ಇರುವ ಮೇಕೆಯನ್ನು ಕೊಂದು ವಿಕೃತಿ ಮೆರೆದಿದ್ದಾರೆ. ಅಣ್ಣಾಮಲೈ ಒಬ್ಬ ರೈತನ ಮಗ ಮತ್ತು ಅವರ ಕುಟುಂಬವು ಮೇಕೆಗಳನ್ನು ಸಾಕುತ್ತದೆ. ಈ ಹಿಂದೆ ಮೇಕೆ ಸಾಕಣೆಯ ಬಗ್ಗೆ ಅಣ್ಣಾಮಲೈ ಅವರನ್ನು ಡಿಎಂಕೆ ಅಪಹಾಸ್ಯ ಮಾಡಿತ್ತು. ಇದೀಗ ಸಂವಿಧಾನ ಉಳಿಸಿ ಎಂದು ಕೂಗುವ ಗುಂಪು ನಿಶ್ಯಬ್ದವಾಗಿದೆʼʼ ಎಂದು ಅವರು ಬರೆದುಕೊಂಡಿದ್ದಾರೆ.

ಈ ವಿಡಿಯೊಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, “ಸನಾತನ ಧರ್ಮ ವಿರೋಧಿ ಇಂಡಿ ಮೈತ್ರಿಕೂಟವು ಎಂದಾದರೂ ಅಧಿಕಾರಕ್ಕೆ ಬಂದರೆ ಹಿಂದೂಗಳನ್ನು ಈ ರೀತಿ ಹತ್ಯೆ ಮಾಡುತ್ತದೆ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿದ ಆಘಾತದಿಂದ ಇನ್ನೂ ಹಲವರು ಹೊರ ಬಂದಿಲ್ಲ. ʼʼಈ ರೀತಿಯ ವರ್ತನೆಯನ್ನು ನೀವು ಸಮರ್ಥಿಸುತ್ತೀರಾ?ʼʼ ಎಂದು ಒಬ್ಬರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮತ್ತು ತಮಿಳುನಾಡು ಪೊಲೀಸರನ್ನು ಟ್ಯಾಗ್‌ ಮಾಡಿ ಪ್ರಶ್ನಿಸಿದ್ದಾರೆ. ʼʼರೋಗಗ್ರಸ್ಥ ರಾಜ್ಯʼʼ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಮಕ್ಕಳ ಎದುರೇ ತಂದೆಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

Continue Reading
Advertisement
IND vs PAK T20 Match
ಕ್ರಿಕೆಟ್2 mins ago

IND vs PAK T20 Match: 10 ಸೆಕೆಂಡ್‌ ಜಾಹೀರಾತಿಗೆ ಕನಿಷ್ಠ 50 ಲಕ್ಷ ನಿಗದಿ!

ಪ್ರಮುಖ ಸುದ್ದಿ2 mins ago

MLC Election: ವಿಧಾನ ಪರಿಷತ್ ಚುನಾವಣೆ; ಯತೀಂದ್ರ, ಸಿ.ಟಿ.ರವಿ ಸೇರಿ 11 ಅಭ್ಯರ್ಥಿಗಳ ಅವಿರೋಧ ಆಯ್ಕೆ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

prajwal Revanna
ಪ್ರಮುಖ ಸುದ್ದಿ8 mins ago

Prajwal Revanna : ಪ್ರಜ್ವಲ್​ ರೇವಣ್ಣ ಮತ್ತೆ ನಾಲ್ಕು ದಿನ ಎಸ್​​ಐಟಿ ಕಸ್ಟಡಿಗೆ

Agnipath scheme
ದೇಶ10 mins ago

Agnipath Scheme: ಸರ್ಕಾರ ರಚನೆಗೂ ಮುನ್ನ ನಿತೀಶ್‌ ಕುಮಾರ್‌ ಬಿಗ್‌ ಡಿಮ್ಯಾಂಡ್‌! ಬಿಜೆಪಿಗೆ ʼಅಗ್ನಿʼ ಪರೀಕ್ಷೆ ಗ್ಯಾರಂಟಿ!

Raja Rani Show performance Karnataka Jodi in colors
ಕಿರುತೆರೆ18 mins ago

Raja Rani Show: ‘ರಾಜಾ ರಾಣಿ’ ಶೋನಲ್ಲಿ ಕುಣಿದು ಕುಪ್ಪಳಿಸಿದ ‘ಕರ್ನಾಟಕ ಜೋಡಿ’; ಹುಣಸೆ ಮರ ಮುಪ್ಪಾದರೆ, ಹುಳಿ ಮುಪ್ಪಾ?

Love Jihad
ಪ್ರಮುಖ ಸುದ್ದಿ45 mins ago

Love jihad : ಬಿಹಾರದ ಹಿಂದೂ ಯುವತಿಯನ್ನು ಉತ್ತರಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಆರಿಫ್; ಲವ್​ ಜಿಹಾದ್ ಆರೋಪ

Road Accident
ಕ್ರೈಂ46 mins ago

Road Accident : ಬೈಕ್‌ಗಳಿಗೆ ಗುದ್ದಿ ಸವಾರರನ್ನು ಕೊಂದು ಪರಾರಿಯಾಗಲು ಯತ್ನಿಸಿದ ಕಾರು ಚಾಲಕ

Election Results 2024
ದೇಶ55 mins ago

Election Results 2024: ರಾಮನೂರಿನಲ್ಲೇ ಬಿಜೆಪಿ ಹಿನ್ನಡೆ; ಹೀನಾಯ ಸೋಲಿಗೆ ಕಾರಣ ಏನು?

Sonu Nigam Hit Backs To Ayodhya People For Not Vote For BJP
ಬಾಲಿವುಡ್59 mins ago

Sonu Nigam: ಅಯೋಧ್ಯೆ ಜನರಿಗೆ ಛೀಮಾರಿ ಹಾಕಿದ್ರಾ ಸೋನು ನಿಗಮ್?

K Annamalai
ವೈರಲ್ ನ್ಯೂಸ್1 hour ago

K Annamalai: ಮೇಕೆಯ ತಲೆಗೆ ಅಣ್ಣಾಮಲೈ ಫೋಟೊ ಅಂಟಿಸಿ ಕಡಿದ ಡಿಎಂಕೆ ಕಾರ್ಯಕರ್ತರು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌