VISTARA TOP 10 NEWS : ಭಾರತದ ಜಿ 20 ನಾಯಕತ್ವಕ್ಕೆ ಜಾಗತಿಕ ಮೆಚ್ಚುಗೆ, ಬೆಂಗಳೂರಿನಲ್ಲಿ ಸೋಮವಾರ ಸಂಚಾರ ಸಂಕಟ ಇತ್ಯಾದಿ ಸುದ್ದಿಗಳು - Vistara News

ಕ್ರೀಡೆ

VISTARA TOP 10 NEWS : ಭಾರತದ ಜಿ 20 ನಾಯಕತ್ವಕ್ಕೆ ಜಾಗತಿಕ ಮೆಚ್ಚುಗೆ, ಬೆಂಗಳೂರಿನಲ್ಲಿ ಸೋಮವಾರ ಸಂಚಾರ ಸಂಕಟ ಇತ್ಯಾದಿ ಸುದ್ದಿಗಳು

ISTARA TOP 10 NEWS : ದಿಲ್ಲಿಯಲ್ಲಿ ನಡೆದ ಐತಿಹಾಸಿಕ ಜಿ20 ಶೃಂಗ ಸಭೆ ಅದ್ಧೂರಿಯಾಗಿ ಮುಕ್ತಾಯಗೊಂಡಿರುವುದು ಸೇರಿದಂತೆ ಪ್ರಮುಖ ಸುದ್ದಿಗಳ ಗುಚ್ಛ.

VISTARANEWS.COM


on

Top 10 news august 10
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1. G20 Summit 2023: ಅದ್ಧೂರಿ ಜಿ 20 ಶೃಂಗಸಭೆ ಮುಕ್ತಾಯ; ವಿಶ್ವ ನಾಯಕರಿಗೆ ಮೋದಿ ಧನ್ಯವಾದ, ಭಾರತಕ್ಕೆ ಜಗತ್ತು ಮೆಚ್ಚುಗೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ದಿನ ಅದ್ಧೂರಿಯಾಗಿ ನಡೆದ ಜಿ 20 ಶೃಂಗಸಭೆಯು (G20 Summit 2023) ಭಾನುವಾರ (ಸೆಪ್ಟೆಂಬರ್‌ 10) ಮುಕ್ತಾಯಗೊಂಡಿದೆ. ಬ್ರೆಜಿಲ್‌ಗೆ ಜಿ 20 ಅಧ್ಯಕ್ಷತೆಯನ್ನು ಹಸ್ತಾಂತರಿಸಿದ ಪ್ರಧಾನಿ ನರೇಂದ್ರ ಮೋದಿ ಸಮಾರೋಪ ಭಾಷಣ ಮಾಡಿದರು. “ಭಾರತವು ನವೆಂಬರ್‌ವರೆಗೆ ಜಿ 20 ಶೃಂಗಸಭೆಯ ಅಧ್ಯಕ್ಷತೆಯನ್ನು ಹೊಂದಿರುತ್ತದೆ. ನವೆಂಬರ್‌ ಕೊನೆಯಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ಆಯೋಜಿಸಲಾಗುತ್ತದೆ. ಭಾರತದಲ್ಲಿ ಜಿ 20 ಆಯೋಜಿಸಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : 2023: ಜಿ 20 ಶೃಂಗಸಭೆಯ 2 ದಿನದಲ್ಲಿ ಏನೇನಾಯ್ತು? ಪ್ರಮುಖ ತೀರ್ಮಾನಗಳು ಇಲ್ಲಿವೆ
ಇದನ್ನೂ ಓದಿ : ಮೋದಿ ಆಹ್ವಾನದಿಂದ ಸಮಾರೋಪದವರೆಗೆ; ಜಿ20 ಮೋಡಿ, ಚಿತ್ರಗಳಲ್ಲಿ ನೋಡಿ
ಜಿ 20 ಶೃಂಗ ಸಭೆಯ ಸಮಗ್ರ ಮಾಹಿತಿಗಾಗಿ ಕ್ಲಿಕ್‌ ಮಾಡಿ

2. ನಾಳೆ ರಸ್ತೆಗಿಳಿಯಲ್ಲ ಸ್ಕೂಲ್‌ ಬಸ್‌, ವ್ಯಾನ್‌;‌ ಮಕ್ಕಳಿಗೆ ಶಾಲೆ ಇದ್ಯಾ? ಇಲ್ವಾ?
ಬೆಂಗಳೂರು: ಪೋಷಕರೇ ನೀವೇನಾದರೂ ಸೋಮವಾರ (ಸೆ.11) ಬೆಳಗ್ಗೆ ಮನೆ ಮುಂದೆ ಸ್ಕೂಲ್‌ ವ್ಯಾನ್‌, ಬಸ್‌, ಆಟೋ, ಕಾರು ಬರುತ್ತೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ ಎಂದುಕೊಂಡರೆ ತೊಂದರೆ ಗ್ಯಾರಂಟಿ. ಯಾಕೆಂದರೆ ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟ ಸಮರಕ್ಕೆ ಮುಂದಾಗಿದ್ದು, ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

3. ಎಚ್‌.ಡಿ. ಕುಮಾರಸ್ವಾಮಿಗೆ ಬಿಜೆಪಿ ಸೇರಿ ಸಿಎಂ ಆಗಲು ಮೋದಿ ಆಫರ್‌ ಕೊಟ್ಟಿದ್ದರು: ಎಚ್.ಡಿ. ದೇವೇಗೌಡ
ಬೆಂಗಳೂರು: ನನ್ನ ಮಗ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಇರುವವರೆಗೂ ಮುಖ್ಯಮಂತ್ರಿ ಮಾಡುತ್ತೇನೆ. ಇಂದೇ ರಾಜೀನಾಮೆ ಕೊಟ್ಟು ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ (PM Nanrenda Modi) ಅವರು ಆಫರ್‌ ಕೊಟ್ಟಿದ್ದರು. ಇಂದು ರಾಜೀನಾಮೆ ಕೊಟ್ಟು ಬಂದರೆ ನಾಳೆಯೇ ಸಿಎಂ ಮಾಡುತ್ತೇನೆ ಎಂದು ಹೇಳಿದ್ದರು. ಈ ವಿಷಯವನ್ನು ನಾನು ಇಂದು ಬಹಿರಂಗವಾಗಿ ಹೇಳುತ್ತಿದ್ದೇನೆ. ಆದರೆ, ಕುಮಾರಸ್ವಾಮಿ ಇದನ್ನು ನಿರಾಕರಿಸಿ ಬಂದರು. ಮತ್ತೆ ತಂದೆಯವರಿಗೆ ನೋವು ಕೊಡುವುದಿಲ್ಲ ಎಂದು ತಿರಸ್ಕರಿಸಿ ಬಂದಿದ್ದರು ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister HD Deve Gowda) ಮಾಹಿತಿ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಬಿಜೆಪಿ-ಜೆಡಿಎಸ್‌ ಮೈತ್ರಿ ನಿಜ; ಸೀಟು ಹಂಚಿಕೆಯನ್ನು ಮೋದಿ-ಎಚ್‌ಡಿಕೆ ಡಿಸೈಡ್‌ ಮಾಡ್ತಾರೆ: ಎಚ್.ಡಿ. ದೇವೇಗೌಡ

4. ನಾನು ಸಂಘ ಪರಿವಾರಕ್ಕೆ ಸೇರದೇ ಇದ್ದಿದ್ದರೆ ಬೀಡಿ ಸೇದಿಕೊಂಡು ಎಲ್ಲೋ ಇರುತ್ತಿದ್ದೆ: ಈಶ್ವರಪ್ಪ
ಬೆಂಗಳೂರು: ಬಿಜೆಪಿ ಎಂಬುದು ಶಿಸ್ತಿನ (BJP disciplined party) ಪಕ್ಷವಾಗಿದೆ. ಬೂತ್‌ ಮಟ್ಟದ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿ ಐದು ಬಾರಿ ಗೆಲ್ಲಿಸಿ ಅನೇಕ ಇಲಾಖೆಯಲ್ಲಿ ಸಚಿವ ಸ್ಥಾನದ ಜವಾಬ್ದಾರಿಯನ್ನು ನೀಡಿದೆ. ಅಲ್ಲದೆ, ಉಪ ಮುಖ್ಯಮಂತ್ರಿ ಮಾಡಿದೆ. ಈಗ ಸಂಘಟನೆಯ ಕೆಲಸವನ್ನು ನೀನು ಮಾಡಬೇಕು ಎಂದು ಪಕ್ಷ ಸೂಚನೆ ನೀಡಿದೆ. ಹೀಗಾಗಿ ನಾನು ಹಿರಿಯರ ಆದೇಶವನ್ನು ಪಾಲನೆ ಮಾಡಿದ್ದೇನೆ. ನನ್ನ ಅಪ್ಪ ಅಡಿಕೆ ಮಂಡಿಯಲ್ಲಿ ಗುಮಾಸ್ತರು, ಅಮ್ಮ ಅಲ್ಲಿ ಅಡಿಕೆ ಆರಿಸುತ್ತಿದ್ದ ಕೂಲಿ ಹೆಣ್ಣು ಮಗಳಾಗಿದ್ದಾಳೆ. ಆದರೆ, ನಾನು ಸಂಘ ಪರಿವಾರಕ್ಕೆ ಸೇರಿರಲಿಲ್ಲವಾಗಿದ್ದರೆ ಎಲ್ಲಿಯೋ ಬೀಡಿ ಸೇದಿಕೊಂಡು ಇರುತ್ತಿದ್ದೆನೇನೋ ಎಂದು ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಕೆ.ಎಸ್.‌ ಈಶ್ವರಪ್ಪ ಅವರು ತಾವು ಬೆಳೆದು ಬಂದ ಹಾದಿಯನ್ನು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ವಿವರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

5. ವಿಶ್ವ ಕಪ್​ ವೇಳಾಪಟ್ಟಿಯಲ್ಲಿ ಮತ್ತೆ ಗೊಂದಲ, ಪಾಕಿಸ್ತಾನದ ಪಂದ್ಯ ಮತ್ತೆ ಮುಂದೂಡಿಕೆ
ಹೈದರಾಬಾದ್​: 2023ರ ಏಕದಿನ ವಿಶ್ವಕಪ್ (World Cup 2023) ವೇಳಾಪಟ್ಟಿ ಗೊಂದಲದಿಂದಾಗಿ ಬಿಸಿಸಿಐ (BCCI) ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. 2023ರ ಏಕದಿನ ವಿಶ್ವಕಪ್ ಪಂದ್ಯಗಳ ದಿನಾಂಕವನ್ನು ಬದಲಾಯಿಸುವಂತೆ ಮತ್ತೊಂದು ರಾಜ್ಯ ಅಸೋಸಿಯೇಷನ್ ಭಾರತೀಯ ಕ್ರಿಕೆಟ್ ಮಂಡಳಿಯನ್ನು (BCCI) ಕೇಳಿದೆ. ಹೀಗಾಗಿ ಅನಿವಾರ್ಯವಾಗಿ ಮತ್ತೊಂದು ಪಂದ್ಯದ ದಿನಾಂಕವನ್ನು ಬದಲಿಸುವ ಅನಿವಾರ್ಯತೆಗೆ ಬಿಸಿಸಿಐಗೆ ಒಳಗಾಗಿದೆ. ಇದೆಲ್ಲ ಕಾರಣದಿಂದಾಗಿ ಕ್ರಿಕೆಟ್​ ಪ್ರೇಮಿಗಳು ಹಾಗೂ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

6. ಸಿದ್ದರಾಮಯ್ಯ ವಿರುದ್ಧ ಅಹಿಂದ ಪಾಲಿಟಿಕ್ಸ್; ಸೆಡ್ಡು ಹೊಡೆದ ಬಿ.ಕೆ. ಹರಿಪ್ರಸಾದ್!

7. ಸೆ.11ಕ್ಕೆ ಕರಾವಳಿಯಲ್ಲಿ ಅಬ್ಬರಿಸುವ ಮಳೆ; ಮೀನುಗಾರಿಕೆಗೆ ಬ್ರೇಕ್‌

8. ಕೆವೈಸಿ ಸರಿಯಾಗದೆ ಬ್ಯಾಂಕ್‌ ಖಾತೆ ನಿಷ್ಕ್ರಿಯವಾದರೆ ಸಕ್ರಿಯಗೊಳಿಸೋದು ಹೇಗೆ?

9. ವಿಭಿನ್ನ ಅವತಾರದಲ್ಲಿ ಬರಲಿದ್ದಾರೆ ರಮೇಶ್‌ ಅರವಿಂದ್‌; ಸೆಟ್ಟೇರಲಿದೆ ʻದೈಜಿʼ!

10 ಶುಚಿ ಯೋಜನೆಯಲ್ಲಿ ಹೊಸ ಪ್ರಯೋಗ; ನ್ಯಾಪ್ಕಿನ್‌ಗೆ ಪರ್ಯಾಯವಾಗಿ ಮೆನ್‌ಸ್ಟ್ರುಯಲ್ ಕಪ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

SA vs SL: ಲಂಕಾ ದಹನ ಮಾಡಿದ ನೋರ್ಜೆ; ಹರಿಣ ಪಡೆಗೆ 6 ವಿಕೆಟ್​ ಜಯ

SA vs SL: ಈ ಬಾರಿಯ ಐಪಿಎಲ್​ನಲ್ಲಿ ಓವರ್​ಗೆ 30 ರನ್​ ಹೊಡೆಸಿಕೊಳ್ಳುತ್ತಾ ದುಬಾರಿಯಾಗಿ ಕಂಡುಬಂದಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಅನ್ರಿಚ್ ನೋರ್ಜೆ ವಿಶ್ವಕಪ್​ ಟೂರ್ನಿಯಲ್ಲಿ ತಮ್ಮ ಅತ್ಯತ್ತಮ ಬೌಲಿಂಗ್​ ಪ್ರದರ್ಶನ ತೋರ್ಪಡಿಸುವಲ್ಲಿ ಯಶಸ್ವಿಯಾದರು. 4 ಓವರ್​ ಬೌಲಿಂಗ್​ ನಡೆಸಿ ಕೇವಲ 7 ರನ್​ಗೆ 4 ವಿಕೆಟ್​ ಕಿತ್ತು ಮಿಂಚಿದರು.

VISTARANEWS.COM


on

SA vs SL
Koo

ನ್ಯೂಯಾರ್ಕ್​: ವೇಗಿ ಅನ್ರಿಜ್​ ನೋರ್ಜೆ(7 ರನ್​ಗೆ 4 ವಿಕೆಟ್​) ಅವರ ಘಾತಕ ಬೌಲಿಂಗ್​ ದಾಳಿಗೆ ತತ್ತರಿಸಿದ ಶ್ರೀಲಂಕಾ(SA vs SL) ತಂಡ ಸೋಮವಾರದ ಟಿ20 ವಿಶ್ವಕಪ್​ ಪಂದ್ಯದಲ್ಲಿ(ICC Mens T20 World Cup 2024) ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್​ಗಳ ಸೋಲಿಗೆ ತುತ್ತಾಗಿದೆ.

ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ(Nassau County International Cricket Stadium) ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಶ್ರೀಲಂಕಾ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಯಿತು. ಬ್ಯಾಟಿಂಗ್​ ಮರೆತವರಂತೆ ಆಡಿ 19.1 ಓವರ್​ಗಳಲ್ಲಿ ಕೇವಲ 77 ರನ್​ಗೆ ಸರ್ವಪತನ ಕಂಡಿತು. ಇದು ಟಿ20 ವಿಶ್ವಕಪ್​ನಲ್ಲಿ ದಾಖಲಾದ 13ನೇ ಕನಿಷ್ಠ ಮೊತ್ತದ ನಿದರ್ಶನ. ಈ ಸಣ್ಣ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ ಪರದಾಟ ನಡೆಸಿ 16.2 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 80 ರನ್​ ಬಾರಿಸಿ ಪ್ರಯಾಸದ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್​ ವೇಳೆ ದಕ್ಷಿಣ ಆಫ್ರಿಕಾ ಕೂಡ ಲಂಕಾ ತಂಡದಂತೇ ಆರಂಭಿಕ ಆಘಾತ ಎದುರಿಸಿತು. 10 ರನ್​ಗೆ ರೀಜಾ ಹೆಂಡ್ರಿಕ್ಸ್(4) ರೂಪದಲ್ಲಿ ಮೊದಲ ವಿಕೆಟ್​ ಕಳೆದುಕೊಂಡಿತು. ಈ ವಿಕೆಟ್​ ಪತನದ ಬಳಿಕ ನಾಯಕ ಐಡೆರ್ನ್​ ಮಾರ್ಕ್ರಮ್​ ಕೂಡ 12ರನ್​ಗೆ ಆಟ ಮುಗಿಸಿದರು. ಟ್ರಿಕ್ಕಿ ಬ್ಯಾಟಿಂಗ್​ ಟ್ರ್ಯಾಕ್​ನಲ್ಲಿ ಹರಿಣ ಪಡೆಯ ಬ್ಯಾಟರ್​ಗಳು ಕೂಡ ಸರಾಗವಾಗಿ ರನ್​ ಗಳಿಸಲು ಕಷ್ಟ ಪಟ್ಟರು. ಹೀಗಾಗಿ ಪವರ್​ ಪ್ಲೇಯಲ್ಲಿ 27 ರನ್​ ಮಾತ್ರ ಒಟ್ಟುಗೂಡಿತು.

ವಿಕೆಟ್​ ಕಳೆದುಕೊಳ್ಳವ ಭಯದಲ್ಲಿ ಕೇವಲ ಒಂದೆರಡು ರನ್​ಗಳ ಓಟಗಳಿಗೆ ಸೀಮಿತರಾಗಿ ಕೊನೆಗೂ ತಂಡವನ್ನು ಗೆಲುವಿನ ದಡ ಸೇರಿದರು. ಚೇಸಿಂಗ್​ ವೇಳೆ ದಾಖಲಾದದ್ದು ಕೇವಲ 3 ಸಿಕ್ಸರ್​ ಮತ್ತು 3 ಬೌಂಡರಿ ಮಾತ್ರ. ಅಷ್ಟರ ಮಟ್ಟಿಗೆ ಆಘಾತಕಾರಿಯಾಗಿತ್ತು ಈ ಪಿಚ್​. ಆರಂಭಿಕ ಆಟಗಾರ ಕ್ವಿಂಟನ್​ ಡಿ ಕಾಕ್​ 10 ಓವರ್​ ತನಕ ಬ್ಯಾಟಿಂಗ್​ ನಡೆಸಿ ಗಳಿಸಿದ್ದು 20 ರನ್ ಮಾತ್ರ. ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಯುವ ಬ್ಯಾಟರ್​ ಟ್ರಿಸ್ಟಾನ್ ಸ್ಟಬ್ಸ್ 28 ಎಸೆತ ಎದುರಿಸಿ 13 ರನ್​ ಕಲೆ ಹಾಕಿದರು. ಕನಿಷ್ಠ ಒಂದು ಬೌಂಡರಿ ಕೂಡ ಬಾರಿಸಲು ಸ್ಟಬ್ಸ್​ಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಹೆನ್ರಿಚ್​ ಕ್ಲಾಸೆನ್​(19*) ಮತ್ತು ಡೇವಿಡ್​ ಮಿಲ್ಲರ್​(6*) ರನ್​ ಗಳಿಸಿ ಅಜೇಯರಾಗಿ ಉಳಿದು ತಂಡದ ಗೆಲುವು ಸಾರಿದರು.

ಲಂಕಾ ಬ್ಯಾಟರ್​ಗಳಿಂದ ಪೆವಿಲಿಯನ್ ಪರೇಡ್


ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ ತಂಡದ ಬ್ಯಾಟರ್​ಗಳು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್​ ಕಳೆದುಕೊಂಡು ಪೆವಿಲಿಯನ್ ಪರೇಡ್​ ನಡೆಸಿದರು. ಯಾರಿಂದಲೂ 20ರ ಗಡಿ ದಾಟಲೂ ಕೂಡ ಅಸಾಧ್ಯವಾಯಿತು. 19 ರನ್​ ಗಳಿಸಿದ ಕುಸಾಲ್ ಮೆಂಡಿಸ್ ಅವರದ್ದೇ ತಂಡದ ಪರ ಅತ್ಯಧಿಕ ಗಳಿಕೆ. ಉಳಿದಂತೆ ಅನುಭವಿ, ಹಿರಿಯ ಆಟಗಾರ ಏಂಜೆಲೊ ಮ್ಯಾಥ್ಯೂಸ್ 16 ರನ್​ ಬಾರಿಸಿದರು. ಉಭಯ ಆಟಗಾರರ ಈ ಸಣ್ಣ ಹೋರಾಟದ ನೆರವಿನಿಂದ ತಂಡ 50ರ ಗಡಿ ದಾಟಲು ಸಾಧ್ಯವಾಯಿತು. ಲಂಕಾ ಪರ ಒಟ್ಟು ನಾಲ್ಕು ಮಂದಿ ಶೂನ್ಯ ಸುತ್ತಿದರು. ಇವರೆಂದರೆ, ಎನ್ ತುಷಾರ, ಮತೀಶ ಪತಿರಾಣ, ನಾಯಕ ವಾನಿಂದು ಹಸರಂಗ ಮತ್ತು ಸಮರವಿಕ್ರಮ. ತಂಡದ ಮೊತ್ತ 50 ಆಗುವ ಮುನ್ನವೇ 6 ವಿಕೆಟ್​ ಕಳೆದುಕೊಂಡ ಲಂಕಾ ತನ್ನ ಸೋಲನ್ನು ಖಚಿತಪಡಿಸಿಕೊಂಡಿತು.

ನೋರ್ಜೆ ಘಾತಕ ಬೌಲಿಂಗ್​


ಈ ಬಾರಿಯ ಐಪಿಎಲ್​ನಲ್ಲಿ ಓವರ್​ಗೆ 30 ರನ್​ ಹೊಡೆಸಿಕೊಳ್ಳುತ್ತಾ ದುಬಾರಿಯಾಗಿ ಕಂಡುಬಂದಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಅನ್ರಿಚ್ ನೋರ್ಜೆ ವಿಶ್ವಕಪ್​ ಟೂರ್ನಿಯಲ್ಲಿ ತಮ್ಮ ಅತ್ಯತ್ತಮ ಬೌಲಿಂಗ್​ ಪ್ರದರ್ಶನ ತೋರ್ಪಡಿಸುವಲ್ಲಿ ಯಶಸ್ವಿಯಾದರು. ಇವರ ಘಾತಕ ಎಸೆತಗಳಿಗೆ ಲಂಕಾ ಬ್ಯಾಟರ್​ಗಳು ತರಗೆಲೆಯಂತೆ ಉದುರಿಕೊಂಡರು. ಒಟ್ಟು 4 ಓವರ್​ ಬೌಲಿಂಗ್​ ನಡೆಸಿದ ನೋರ್ಜೆ ಕೇವಲ 7 ರನ್​ಗೆ 4 ವಿಕೆಟ್​ ಕಿತ್ತು ಜೀವಮಾನ ಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಉಳಿದಂತೆ ಸ್ಪಿನ್ನರ್​ ಕೇಶವ್ ಮಹಾರಾಜ್​(22ಕ್ಕೆ 2) ಮತ್ತು ಕಗಿಸೊ ರಬಾಡ(21ಕ್ಕೆ 2) ವಿಕೆಟ್​ ಕಿತ್ತರು.​

Continue Reading

ಕ್ರೀಡೆ

T20 World Cup 2024: ದೂರದರ್ಶನದಲ್ಲಿಯೂ ಪ್ರಸಾರಗೊಳ್ಳಲಿದೆ ಟಿ20 ವಿಶ್ವಕಪ್​ ಪಂದ್ಯಾವಳಿ

T20 World Cup 2024: ಕೇವಲ ಟಿ20 ಕ್ರಿಕೆಟ್​ ವಿಶ್ವಕಪ್​ ಮಾತ್ರವಲ್ಲದೆ, ಮುಂದಿನ ತಿಂಗಳು 26ರಿಂದ ಆರಂಭಗೊಳ್ಳುವ ಪ್ಯಾರಿಸ್ ಒಲಿಂಪಿಕ್ಸ್ ಗೇಮ್ಸ್ 2024, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೇಮ್ಸ್ ಭಾರತ ಮತ್ತು ಜಿಂಬಾಬ್ವೆ ಬಿರುದ್ಧ ಕ್ರಿಕೆಟ್​ ಸರಣಿ (ಜುಲೈ 6 ರಿಂದ ಜುಲೈ 1, 2024) ಮತ್ತು ಭಾರತ-ಶ್ರೀಲಂಕಾ (ಜುಲೈ 27 ರಿಂದ ಆಗಸ್ಟ್ 7, 2024) ನಡುವಣ ಸರಣಿ, ಫ್ರೆಂಚ್ ಓಪನ್ 2024ರ ಮಹಿಳಾ ಮತ್ತು ಪುರುಷರ ಫೈನಲ್​ ಪಂದ್ಯ ಕೂಡ ನೇರ ಪ್ರಸಾರ ಆಗಲಿವೆ ಎಂದು ಪ್ರಸಾರ ಭಾರತಿ ಸಿಇಓ ಗೌರವ್ ದ್ವಿವೇದಿ ಹೇಳಿದ್ದಾರೆ.

VISTARANEWS.COM


on

T20 World Cup 2024
Koo

ನವದೆಹಲಿ: ಪ್ರಸಕ್ತ ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ಸಾಗುತ್ತಿರುವ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯ ಪಂದ್ಯವಾಳಿಗಳು ಇನ್ನು ಮುಂದೆ ಡಿಡಿ(Doordarshan) ಚಾನೆಲ್​ನಲ್ಲಿಯೂ ವೀಕ್ಷಿಸಬಹುದಾಗಿದೆ. ಪ್ರಸಾರ ಭಾರತಿ ಈ ನಿರ್ಧಾರವನ್ನು ಇಂದು(ಸೋಮವಾರ) ಪ್ರಕಟಿಸಿದೆ. ಭಾರತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8ಗಂಟೆಗೆ ಆರಂಭವಾಗಲಿದೆ. ಇತರ ತಂಡಗಳ ಕೆಲವು ಪಂದ್ಯಗಳು ಬೆಳಗ್ಗೆ 6 ಗಂಟೆಗೆ ಪ್ರಸಾರಗೊಳ್ಳಲಿದೆ. 

ಕೇವಲ ಟಿ20 ಕ್ರಿಕೆಟ್​ ವಿಶ್ವಕಪ್​ ಮಾತ್ರವಲ್ಲದೆ, ಮುಂದಿನ ತಿಂಗಳು 26ರಿಂದ ಆರಂಭಗೊಳ್ಳುವ ಪ್ಯಾರಿಸ್ ಒಲಿಂಪಿಕ್ಸ್ ಗೇಮ್ಸ್ 2024, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೇಮ್ಸ್ ಭಾರತ ಮತ್ತು ಜಿಂಬಾಬ್ವೆ ಬಿರುದ್ಧ ಕ್ರಿಕೆಟ್​ ಸರಣಿ (ಜುಲೈ 6 ರಿಂದ ಜುಲೈ 1, 2024) ಮತ್ತು ಭಾರತ-ಶ್ರೀಲಂಕಾ (ಜುಲೈ 27 ರಿಂದ ಆಗಸ್ಟ್ 7, 2024) ನಡುವಣ ಸರಣಿ, ಫ್ರೆಂಚ್ ಓಪನ್ 2024ರ ಮಹಿಳಾ ಮತ್ತು ಪುರುಷರ ಫೈನಲ್​ ಪಂದ್ಯ ಕೂಡ ನೇರ ಪ್ರಸಾರ ಆಗಲಿವೆ ಎಂದು ಪ್ರಸಾರ ಭಾರತಿ ಸಿಇಓ ಗೌರವ್ ದ್ವಿವೇದಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಮಹತ್ವದ ಟೂರ್ನಿಯನ್ನು ನೇರ ಪ್ರಸಾರ ಮಾಡಲು ವಿವಿಧ ಸಂಘಟಕರ ಜತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕಳೆದ ವರ್ಷದಲ್ಲಿ, ಡಿಡಿ ಸ್ಪೋರ್ಟ್ಸ್ ದೇಶಾದ್ಯಂತ ಹಲವಾರು ಬಹು ಕ್ರೀಡಾ ಕಾರ್ಯಕ್ರಮಗಳನ್ನು ನಿರ್ಮಿಸಿ ಪ್ರಸಾರ ಮಾಡಿತ್ತು. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್, ತಮಿಳುನಾಡಿನಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್, ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟ, ನವದೆಹಲಿಯಲ್ಲಿ ನಡೆದಿದ್ದ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಸೃಇ ಹಲವು ದೇಶೀಯ ಮಟ್ಟದ ಟೂರ್ನಿಯ ನೇರ ಪ್ರಸಾರ ಮಾಡಿತ್ತು.

ಇದನ್ನೂ ಓದಿ T20 World Cup 2024 Prize Money: ದಾಖಲೆಯ ಬಹುಮಾನ ಮೊತ್ತ ಘೋಷಿಸಿದ ಐಸಿಸಿ

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಂತೆ ಈ ಬಾರಿಯೂ ಟಿ20 ವಿಶ್ವಕಪ್​ ಪಂದ್ಯಾವಳಿಗಳನ್ನು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಉಚಿತವಾಗಿ ನೋಡಬಹುದಾಗಿದೆ. ​ಡಿಸ್ನಿ + ಹಾಟ್‌ಸ್ಟಾರ್(Disney+ Hotstar) ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಈ ಅವಕಾಶ ಕಲ್ಪಿಸಿದೆ. OTT ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ.

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಸಮಯದಲ್ಲಿ, ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್‌ನಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡಲಾಯಿತು. ಇದು ಏಕಕಾಲದಲ್ಲಿ ಅತ್ಯಧಿಕ ವೀಕ್ಷಣೆ ಕಂಡ 5 ಬಾರಿಯ ದಾಖಲೆಗಳನ್ನು ಮುರಿದಿತ್ತು. ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್‌ನಲ್ಲಿ ಪಂದ್ಯ ಏಕಕಾಲಕ್ಕೆ 5.9 ಕೋಟಿ ವೀಕ್ಷಣೆ ಕಂಡಿತ್ತು. ಈ ದಾಖಲೆ ಟಿ20 ವಿಶ್ವಕಪ್​ನಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಶಿವಾನಂದನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. 

Continue Reading

ಕ್ರೀಡೆ

MS Dhoni Europe Trip: ಐಪಿಎಲ್​ ಮುಗಿಸಿ ಕುಟುಂಬದ ಜತೆ ಯುರೋಪ್​ಗೆ ಪ್ರವಾಸ ಹೋದ ಧೋನಿ

MS Dhoni Europe Trip:ಹಿಂದೊಮ್ಮೆ ಧೋನಿ ಅವರು ನನ್ನ ಪತ್ನಿಗೆ ಟ್ರಾವೆಲ್​ ಎಂದರೆ ಬಲು ಇಷ್ಟ. ಕ್ರಿಕೆಟ್​ ನಿವೃತ್ತಿ ಬಳಿಕ ನಾನು ಖಂಡಿತಾ ಹಲವು ದೇಶಕ್ಕೆ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಹೇಳಿದ್ದರು. ಇದೀಗ ಬಿಡುವಿನ ವೇಳೆಯಲ್ಲಿ ಕುಟುಂಬದ ಜತೆ ಧೋನಿ ಯುರೋಪ್​ನ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಭೇಟಿ ನೀಡುತ್ತಾ ಪ್ರವಾಸವನ್ನು ಎಂಜಾಯ್​ ಮಾಡುತ್ತಿದ್ದಾರೆ.

VISTARANEWS.COM


on

MS Dhoni Europe Trip
Koo

ಬ್ರಸೆಲ್ಸ್: ಸರಿ ಸುಮಾರು 3 ತಿಂಗಳು ಐಪಿಎಲ್​ ಟೂರ್ನಿಯಲ್ಲಿ ಬ್ಯೂಸಿಯಾಗಿದ್ದ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಈಗ ವಿಶ್ರಾಂತಿ ಮೂಡ್​ನಲ್ಲಿದ್ದಾರೆ. ತಮ್ಮ ಪತ್ನಿ ಮತ್ತು ಮಗಳ ಜತೆ ಯುರೋಪ್(MS Dhoni Europe Trip)​ ಪ್ರವಾಸದಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಈ ಫೋಟೊಗಳನ್ನು ಧೋನಿ ಪತ್ನಿ ಸಾಕ್ಷಿ(Sakshi ) ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಿಂದೊಮ್ಮೆ ಧೋನಿ ಅವರು ನನ್ನ ಪತ್ನಿಗೆ ಟ್ರಾವೆಲ್​ ಎಂದರೆ ಬಲು ಇಷ್ಟ. ಕ್ರಿಕೆಟ್​ ನಿವೃತ್ತಿ ಬಳಿಕ ನಾನು ಖಂಡಿತಾ ಹಲವು ದೇಶಕ್ಕೆ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಹೇಳಿದ್ದರು. ಇದೀಗ ಬಿಡುವಿನ ವೇಳೆಯಲ್ಲಿ ಕುಟುಂಬದ ಜತೆ ಧೋನಿ ಯುರೋಪ್​ನ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಭೇಟಿ ನೀಡುತ್ತಾ ಪ್ರವಾಸವನ್ನು ಎಂಜಾಯ್​ ಮಾಡುತ್ತಿದ್ದಾರೆ.

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಧೋನಿ ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಐಪಿಎಲ್​ಗೂ ವಿದಾಯ ಹೇಳುವ ಮೂಲಕ ಎಲ್ಲ ಕ್ರಿಕೆಟ್​ಗೆ ಗುಡ್​ ಬೈ ಹೇಳಲಿದ್ದಾರೆ ಎನ್ನಲಾಗಿತ್ತು. ಚೆನ್ನೈ ತಂಡ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಆದರೆ ಧೋನಿ ಮಾತ್ರ ಐಒಇಎಲ್​ ವಿದಾಯ ಹೇಳಿಲ್ಲ. ಮುಂದಿನ ಆವೃತ್ತಿಯಲ್ಲಿಯೂ ಆಡುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ MS Dhoni’s last-ball Heroics: ಧೋನಿ ಮಿಂಚಿನ ವೇಗದ ರನೌಟ್​; ಭಾರತಕ್ಕೆ 1 ರನ್‌ ರೋಚಕ ಜಯ; ಇದು ಮರೆಯಲಾಗದ ನೆನಪು

ಭಾರತ ಸುತ್ತುವ ಆಸೆ ಇದೆ

ಕಳೆದ ವರ್ಷ ಸಂದರ್ಶನವೊಂದರಲ್ಲಿ ಅಭಿಮಾನಿಯೊಬ್ಬರು ಪ್ರವಾಸದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೇಳೆ, “ಪ್ರಮಾಣಿಕವಾಗಿ ಹೇಳಬೇಕೆಂದರೆ ನಾನು ಹೆಚ್ಚು ಪ್ರಯಾಣ ಮಾಡಿದ್ದೇನೆ. ಆದರೆ, ಅದು ಪ್ರವಾಸವಲ್ಲ. ನನ್ನ ಕ್ರಿಕೆಟ್ ಆಡುವ ಸಮಯದಲ್ಲಿ ಮಾಡಿದ ಪ್ರಯಾಣ. ಕ್ರಿಕೆಟ್​ ಸರಣಿಗಾಗಿ ನಾನು ಹಲವು ದೇಶಕ್ಕೆ ಭೇಟಿ ನೀಡಿದ್ದೇನೆ. ಆದರೆ ಅಲ್ಲಿರುವ ಯಾವುದೇ ಪ್ರವಾಸಿ ತಾಣಗಳಿಗೆ ಹೋಗಿಲ್ಲ. ಕ್ರಿಕೆಟ್​ ಆಡಿದ ಬಳಿಕ ನೇರವಾಗಿ ಭಾರತಕ್ಕೆ ಬರುತ್ತಿದೆ. ನನ್ನ ಪತ್ನಿಗೆ ಟ್ರಾವೆಲ್​ ಎಂದರೆ ಬಲು ಇಷ್ಟ. ಕ್ರಿಕೆಟ್​ ನಿವೃತ್ತಿ ಬಳಿಕ ನಾನು ಖಂಡಿತಾ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ಈಗಾಗಲೇ ರೂಪಿಸಿದ್ದೇನೆ. ಭಾರತವೇ ನನ್ನ ಮೊದಲ ಆಯ್ಕೆ ಮತ್ತು ಆದ್ಯತೆ ಎಂದು ಧೋನಿ ಹೇಳಿದ್ದರು.

“ಭಾರತದಲ್ಲಿ ಹಲವು ಸುಂದರ ತಾಣಗಳಿವೆ. ನಾನು ನನ್ನ ಮೊದಲ ಪ್ರವಾಸವನ್ನು ನಮ್ಮ ದೇಶದಲ್ಲೇ ಮಾಡಿ ಇಲ್ಲಿನ ಪ್ರವಾಸೋದ್ಯಮಕ್ಕೆ ಬೆಂಬಲ ಸೂಚಿಸುತ್ತೇನೆ” ಎಂದು ಧೋನಿ ಅಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

Continue Reading

ಕ್ರೀಡೆ

T20 World Cup 2024 Prize Money: ದಾಖಲೆಯ ಬಹುಮಾನ ಮೊತ್ತ ಘೋಷಿಸಿದ ಐಸಿಸಿ

T20 World Cup 2024 Prize Money: ಕಳೆದ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದ ಇಂಗ್ಲೆಂಡ್‌ ತಂಡವು 13.84 ಕೋಟಿ ನಗದು ಬಹುಮಾನ ‍ಪಡೆದುಕೊಂಡಿತ್ತು. ರನ್ನರ್‌ ಅಪ್‌ ಪಾಕಿಸ್ತಾನ ತಂಡವು 7.4 ಕೋಟಿ ಪಡೆ‌ದಿತ್ತು. ಸೆಮಿಫೈನಲ್‌ನಲ್ಲಿ ಇಂ‌ಗ್ಲೆಂಡ್ ವಿರುದ್ಧ ಸೋಲನುಭವಿಸಿದ ಭಾರತ 4.5 ಕೋಟಿ ರೂ., ‌ಪಾಕಿಸ್ತಾನ ವಿರುದ್ಧ ಸೋತ ನ್ಯೂಜಿಲ್ಯಾಂಡ್​ 4.19 ಕೋಟಿ ರೂ. ಬಹುಮಾನ ಪಡೆದಿತ್ತು.

VISTARANEWS.COM


on

T20 World Cup 2024 Prize Money
Koo

ದುಬೈ: ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯ ಬಹುಮಾನ ಮೊತ್ತವನ್ನು ಐಸಿಸಿ ಸೋಮವಾರ ಪ್ರಕಟಿಸಿದೆ. ಗೆದ್ದ ತಂಡಕ್ಕೆ ಭರ್ಜರಿ ನಗುದು ಬಹುಮಾನ ಸಿಗಲಿದೆ. ಚಾಂಪಿಯನ್​ ತಂಡಕ್ಕೆ 20 ಕೋಟಿ ರೂ. ಸಿಗಲಿದೆ. ಇದು ಈ ವರೆಗಿನ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲೇ ಅತ್ಯಧಿಕ ಮೊತ್ತದ ಬಹುಮಾನವಾಗಿದೆ. ಒಟ್ಟು ನಗದು ಬಹುಮಾನ ಮೊತ್ತ 93.50 ಕೋಟಿ ರೂ. ಆಗಿದೆ.

ಈಗಾಗಲೇ ಟೂರ್ನಿಯಲ್ಲಿ ಮೂರು ಪಂದ್ಯಗಳು ನಡೆದಿವೆ. ಟೂರ್ನಿಯ ಜಂಟಿ ಆತಿಥ್ಯವಹಿಸಿಕೊಂಡಿರುವ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆಡಿದ ಮೊದಲ ಪಂದ್ಯದಲ್ಲೇ ಗೆದ್ದು ಶುಭಾರಂಭ ಕಂಡಿದೆ. ಒಟ್ಟು ಈ ಬಾರಿ 20 ತಂಡಗಳು ಕಣಕ್ಕಿಳಿಯುತ್ತಿವೆ. ಇದೀಗ ಚಾಂಪಿಯನ್​ ತಂಡಕ್ಕೆ ಸಿಗುವ ಮೊತ್ತವನ್ನು ಐಸಿಸಿ ಪ್ರಕಟಿಸಿದೆ.

ಈ ಬಾರಿಯ ವಿಶ್ವಕಪ್ ಬಹುಮಾನದ ಗಾತ್ರ 11.25 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಇದು ಭಾರತೀಯ ರೂಪಾರಿಯಲ್ಲಿ ಸುಮಾರು ರೂ 93.50 ಕೋಟಿ ರೂ. ಆಗಿದೆ. ಚಾಂಪಿಯನ್ ತಂಡಕ್ಕೆ 2.45 ಮಿಲಿಯನ್ ಡಾಲರ್ (ಸುಮಾರು 20 ಕೋಟಿ ರೂ.) ಬಹುಮಾನ ಸಿಗಲಿದೆ. 1.28 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 10.64 ಕೋಟಿ ರೂ. ಬಹುಮಾನ ಸಿಗಲಿದೆ.

ಕಳೆದ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದ ಇಂಗ್ಲೆಂಡ್‌ ತಂಡವು 13.84 ಕೋಟಿ ನಗದು ಬಹುಮಾನ ‍ಪಡೆದುಕೊಂಡಿತ್ತು. ರನ್ನರ್‌ ಅಪ್‌ ಪಾಕಿಸ್ತಾನ ತಂಡವು 7.4 ಕೋಟಿ ಪಡೆ‌ದಿತ್ತು. ಸೆಮಿಫೈನಲ್‌ನಲ್ಲಿ ಇಂ‌ಗ್ಲೆಂಡ್ ವಿರುದ್ಧ ಸೋಲನುಭವಿಸಿದ ಭಾರತ 4.5 ಕೋಟಿ ರೂ., ‌ಪಾಕಿಸ್ತಾನ ವಿರುದ್ಧ ಸೋತ ನ್ಯೂಜಿಲ್ಯಾಂಡ್​ 4.19 ಕೋಟಿ ರೂ. ಬಹುಮಾನ ಪಡೆದಿತ್ತು.

ಇದನ್ನೂ ಓದಿ T20 World Cup 2024 : ಒಮಾನ್ ವಿರುದ್ಧ ಹೊಸ ದಾಖಲೆ ಬರೆದ ನಮೀಬಿಯಾ ತಂಡದ ರುಬೆನ್ ಟ್ರಂಪೆಲ್ಮನ್

ಸೋತ ತಂಡಗಳಿಗೂ ನಗದು ಬಹುಮಾನ

ಸೆಮಿಫೈನಲ್​ನಲ್ಲಿ ಸೋತ ತಂಡಗಳಿಗೂ ಈ ಬಾರಿ ಭರ್ಜರಿ ಬಹುಮಾನ ಸಿಗಲಿದೆ. ಅದರಂತೆ ಸೆಮಿಫೈನಲ್​ನಲ್ಲಿ ಸೋತ ತಂಡಗಳಿಗೆ ತಲಾ 6.55 ಕೋಟಿ ರೂ. ಸಿಗಲಿದೆ. ಸೂಪರ್ 8 ಹಂತದಲ್ಲಿ ಸೋತು ಲೀಗ್​ನಿಂದ ಹೊರಬಿಳುವ ಪ್ರತಿಯೊಂದು ತಂಡಗಳಿಗೆ 3.18 ಕೋಟಿ ರೂ., ಹಾಗೆಯೇ ಪ್ರತಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆಯುವ ತಂಡಗಳಿಗೆ 2.06 ಕೋಟಿ ರೂ., ಉಳಿದ ತಂಡಗಳಿಗೆ 1.87 ಕೋಟಿ ರೂ. ಪ್ರೋತ್ಸಾಹಕ ಬಹುಮಾನ ಸಿಗಲಿದೆ. ಇದು ಮಾತ್ರವಲ್ಲದೆ, ಸೂಪರ್ 8 ಹಂತದವರೆಗೆ ಪ್ರತಿ ಪಂದ್ಯವನ್ನು ಗೆಲ್ಲುವ ತಂಡಗಳಿಗೆ 25.9 ಲಕ್ಷ ರೂಗಳನ್ನು ಬಹುಮಾನ ಮೊತ್ತ ಸಿಗಲಿದೆ.

Continue Reading
Advertisement
Mallikarjun Kharge
Lok Sabha Election 20243 hours ago

Mallikarjun Kharge: ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಿ: ಮತ ಎಣಿಕೆ ಸಿಬ್ಬಂದಿಗೆ ಮಲ್ಲಿಕಾರ್ಜುನ ಖರ್ಗೆ ಕರೆ

SA vs SL
ಕ್ರೀಡೆ3 hours ago

SA vs SL: ಲಂಕಾ ದಹನ ಮಾಡಿದ ನೋರ್ಜೆ; ಹರಿಣ ಪಡೆಗೆ 6 ವಿಕೆಟ್​ ಜಯ

Arecanut Price
ಕೃಷಿ3 hours ago

Arecanut Price: ಅಡಿಕೆ ಧಾರಣೆ ನಿರೀಕ್ಷೆ ಮೀರಿ ಏರಲಿದೆ! ಇದು ರೈತರ ‘ನಂಬಿಕೆ’ ಮತ್ತು ‘ಅಭಿಪ್ರಾಯ’ಗಳ ಎಕ್ಸಿಟ್ ಪೋಲ್!

First PU Class Commencement Programme at Vishwadarshana College
ಉತ್ತರ ಕನ್ನಡ4 hours ago

Uttara Kannada News: ವಿಶ್ವದರ್ಶನ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿ ಪ್ರಾರಂಭೋತ್ಸವ

Job News
ಉದ್ಯೋಗ4 hours ago

Job News: ಗುಡ್‌ನ್ಯೂಸ್‌; 35 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರದಿಂದ ಅನುಮತಿ

Road Accident
ಕರ್ನಾಟಕ5 hours ago

Road Accident: ಕೊಲ್ಹಾಪುರದಲ್ಲಿ ಭೀಕರ ಅಪಘಾತ; ಬೈಕ್‌ಗಳಿಗೆ ಕಾರು ಡಿಕ್ಕಿಯಾಗಿ ಪಲ್ಟಿ, ಮೂವರ ದುರ್ಮರಣ

T20 World Cup 2024
ಕ್ರೀಡೆ5 hours ago

T20 World Cup 2024: ದೂರದರ್ಶನದಲ್ಲಿಯೂ ಪ್ರಸಾರಗೊಳ್ಳಲಿದೆ ಟಿ20 ವಿಶ್ವಕಪ್​ ಪಂದ್ಯಾವಳಿ

Uttara Kannada Lok Sabha Constituency
ಉತ್ತರ ಕನ್ನಡ5 hours ago

Uttara Kannada Lok Sabha Constituency: ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಜಯಭೇರಿ?

Dr. K Sudhakar
ಕರ್ನಾಟಕ5 hours ago

Dr. K Sudhakar: ರಾಜ್ಯ ಸರ್ಕಾರದ ಚಿಹ್ನೆ ದುರ್ಬಳಕೆ; ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಎಫ್ಐಆರ್

Rave Party
ಕರ್ನಾಟಕ5 hours ago

Rave Party: ರೇವ್‌ ಪಾರ್ಟಿ ಕೇಸ್‌ನಲ್ಲಿ ತೆಲುಗು ನಟಿ ಹೇಮಾಗೆ 12 ದಿನ ನ್ಯಾಯಾಂಗ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ11 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ11 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು7 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌