Thane: 40 ಅಂತಸ್ತುಗಳ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿದು 6 ಜನರ ದುರ್ಮರಣ - Vistara News

ದೇಶ

Thane: 40 ಅಂತಸ್ತುಗಳ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿದು 6 ಜನರ ದುರ್ಮರಣ

Thane: ಭಾನುವಾರ ಸಂಜೆ ಸಂಭವಿಸದ ಲಿಫ್ಟ್ ಕುಸಿತದಲ್ಲಿ ಮೃತಪಟ್ಟವರೆಲ್ಲರೂ ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದಾರೆ.

VISTARANEWS.COM


on

Six dead after lift collapses in building in Thane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಥಾಣೆ: ನಿರ್ಮಾಣದ ಹಂತದ ಕಟ್ಟಡದ (Under Construction Building) ಲಿಫ್ಟ್ (Lift Collapses) ಕುಸಿದು, 6 ಜನರು ಮೃತಪಟ್ಟ ಕೆಲವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ (Thane) ನಡೆದಿದೆ. ಭಾನುವಾರ ಸಂಜೆ 5:30 ರ ಸುಮಾರಿಗೆ 40 ಅಂತಸ್ತಿನ ಕಟ್ಟಡದಿಂದ ಕಾರ್ಮಿಕರು ಟೆರೇಸ್‌ನಲ್ಲಿ ವಾಟರ್‌ಫ್ರೂಫಿಂಗ್ ಕೆಲಸ ಮುಗಿಸಿ ಇಳಿಯುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಥಾಣೆ ಮಹಾನಗರ ಪಾಲಿಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮೃತಪಟ್ಟವರು ಮತ್ತು ಗಾಯಗೊಂಡವರೆಲ್ಲರೂ ಕಾರ್ಮಿಕರಾಗಿದ್ದಾರೆ. ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತು. ಅಲ್ಲದೇ, ನೆಲಮಾಳಿಗೆಯ ಪಾರ್ಕಿಂಗ್‌ನಿಂದ ಕಾರ್ಮಿಕರನ್ನು ರಕ್ಷಣೆ ಮಾಡಿತು. ಮೃತರನ್ನ ಮಹೇಂದ್ರ ಚೌಪಾಲ್(32), ರೂಪೇಶ್ ಕುಮಾರ್ ದಾಸ್(21), ಹರುಣ್ ಶೇಖ್(47), ಮಿಥಲೇಶ್(35), ಕರಿದಾಸ್(38) ಎಂದು ಗುರುತಿಸಲಾಗಿದೆ. ಇನ್ನೂಬ್ಬ ಮೃತಪಟ್ಟವರು ಗುರುತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ನಿರ್ಮಾಣ ಹಂತದ ಕಟ್ಟಡದ ಲಿಫ್ಟ್‌ನ ಸಪೋರ್ಟಿಂಗ್ ಕೇಬಲ್‌ಗಳಲ್ಲಿ ಒಂದು ತುಂಡಾದ ಪರಿಣಾಮ ಲಿಫ್ಟ್ ಕುಸಿತ ಕಂಡಿದೆ. ಆದರೆ, ಲಿಫ್ಟ್ ಕೇಬಲ್ ತುಂಡಾಗಿದ್ದು ಹೇಗೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ ಎಂದು ಎಂದು ಥಾಣೆಯ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Lift Collapses | ಗುಜರಾತ್​​ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಕುಸಿತ; 7 ಕಾರ್ಮಿಕರು ಸಾವು

ನೋಯ್ಡಾದಲ್ಲಿ ಕಳೆದ ತಿಂಗಳು ಇದೇ ರೀತಿಯ ಘಟನೆ ನಡೆದಿತ್ತು. ನೋಯ್ಡಾದ ಹೌಸಿಂಗ್ ಕಾಂಪ್ಲೆಕ್ಸ್‌ನ ಲಿಫ್ಟ್ ಕುಸಿದ ಪರಿಣಾಮ, ಆಘಾತದಿಂದ ಹಿರಿಯಮ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಕೇಬಲ್ ತುಂಡಾದ ಪರಿಣಾಮ ಲಿಫ್ಟ್ ಕುಸಿತವಾಗಿತ್ತು ಎಂದು ಪೊಲೀಸರು ತಿಳಿಸಿದ್ದರು. ಮೃತ ಮಹಿಳೆಯನ್ನು 73 ವರ್ಷದ ಸುಶೀಲಾ ದೇವಿ ಎಂದು ಗುರುತಿಸಲಾಗಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Mumbai Rain : ಭಾನುವಾರ ರಾತ್ರಿ ಪೂರ್ತಿ ಸುರಿದ ಮಳೆಗೆ ಮುಂಬೈ ನಗರದ ಹಲವು ಪ್ರದೇಶಗಳು ಜಲಾವೃತ

Mumbai Rain : ಭಾನುವಾರ, ಗುಡುಗು ಮತ್ತು ಮಳೆಯಿಂದಾಗಿ ರೈಲು ಹಳಿಗಳ ಮೇಲೆ ಮರ ಬಿದ್ದ ಕಾರಣ ಕಸರಾ ಮತ್ತು ಟಿಟ್ವಾಲಾ ನಿಲ್ದಾಣಗಳ ನಡುವಿನ ಸ್ಥಳೀಯ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಇದಲ್ಲದೆ, ಭಾನುವಾರ ಅಟ್ಗಾಂವ್ ಮತ್ತು ಥಾನ್ಸಿಟ್ ನಿಲ್ದಾಣಗಳ ನಡುವಿನ ಹಳಿಗಳ ಮೇಲೆ ಮಣ್ಣು ಬಿದ್ದಿತ್ತು. ವಶಿಂಡ್ ನಿಲ್ದಾಣದ ಸಮೀಪ ಹಳಿಗಳ ಮೇಲೆ ಮರ ಬಿದ್ದು, ಅತ್ಯಂತ ಜನನಿಬಿಡ ಪ್ರದೇಶಗಳ ರೈಲು ಸೇವೆಗಳಿಗೆ ಅಡ್ಡಿಯಾಯಿತು.

VISTARANEWS.COM


on

Mumbai rain
Koo

ಮುಂಬೈ: ವಾಣಿಜ್ಯ ನಗರ ಮುಂಬೈನಲ್ಲಿ ಭಾನುವಾರ ಜೋರು ಮಳೆ ಸುರಿದಿದೆ (Mumbai Rain). ರಾತ್ರಿಯಿಡೀ ಸುರಿದ ವರ್ಷಧಾರೆಗೆ ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಕಲ್ಯಾಣ್-ಕಸರಾ ವಿಭಾಗದಲ್ಲಿ ಖಡವ್ಲಿ ಮತ್ತು ಟಿಟ್ವಾಲಾ ನಡುವಿನ ಸ್ಥಳೀಯ ರೈಲು ಸೇವೆಗಳಿಗೆ (Mumbai Local Train) ಅಡ್ಡಿಯಾಗಿದೆ. ನಗರದಲ್ಲಿ ರಾತ್ರಿಯಿಡೀ ಭಾರಿ ಮಳೆಯಾಗಿದ್ದು ನಗರದ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಜುಲೈ 8 ರ ಸೋಮವಾರ ಮುಂಬೈನಲ್ಲಿ ದಿನವಿಡೀ ಭಾರಿ ಮಳೆ ಬರುವ ಸಾಧ್ಯತೆಗಳಿವೆ. ಮೇಘಸ್ಪೋಟವೂ ಸಂಭವಿಸಬಹುದು ಎಂದು ಹೇಳಲಾಗಿದೆ. ಹೀಗಾಗಿ ಪ್ರವಾಹದ ಸಮಸ್ಯೆ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ.

ಭಾನುವಾರ, ಗುಡುಗು ಮತ್ತು ಮಳೆಯಿಂದಾಗಿ ರೈಲು ಹಳಿಗಳ ಮೇಲೆ ಮರ ಬಿದ್ದ ಕಾರಣ ಕಸರಾ ಮತ್ತು ಟಿಟ್ವಾಲಾ ನಿಲ್ದಾಣಗಳ ನಡುವಿನ ಸ್ಥಳೀಯ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಇದಲ್ಲದೆ, ಭಾನುವಾರ ಅಟ್ಗಾಂವ್ ಮತ್ತು ಥಾನ್ಸಿಟ್ ನಿಲ್ದಾಣಗಳ ನಡುವಿನ ಹಳಿಗಳ ಮೇಲೆ ಮಣ್ಣು ಬಿದ್ದಿತ್ತು. ವಶಿಂಡ್ ನಿಲ್ದಾಣದ ಸಮೀಪ ಹಳಿಗಳ ಮೇಲೆ ಮರ ಬಿದ್ದು, ಅತ್ಯಂತ ಜನನಿಬಿಡ ಪ್ರದೇಶಗಳ ರೈಲು ಸೇವೆಗಳಿಗೆ ಅಡ್ಡಿಯಾಯಿತು. ಸೋಮವಾರದಿಂದ ಈ ಮಾರ್ಗಗಳಲ್ಲಿ ರೈಲು ಸೇವೆಗಳು ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ಆದರೆ, ಮಳೆ ನಿಲ್ಲದಿದ್ದರೆ ಸಮಸ್ಯೆ ಮುಂದುವರಿಬಹುದು.

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಕೇಂದ್ರ ರೈಲ್ವೆ ಉಪನಗರ ಸೇವೆಗಳ ಮೇಲೆ ಪರಿಣಾಮ ಬೀರಿದೆ, ಸೋಮವಾರ ಬೆಳಿಗ್ಗೆ ನಿಲ್ದಾಣಗಳು ಮತ್ತು ಹಳಿಗಳು ಜಲಾವೃತಗೊಂಡಿವೆ. ಸಿಯಾನ್ ಮತ್ತು ಭಾಂಡೂಪ್ ಮತ್ತು ನಹೂರ್ ನಿಲ್ದಾಣಗಳ ನಡುವೆ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಮಳೆ ನೀರು ಹಳಿಗಳ ಮೇಲೆ ಇತ್ತು, ಆದ್ದರಿಂದ ರೈಲುಗಳನ್ನು ಸುಮಾರು ಒಂದು ಗಂಟೆಗಳ ಕಾಲ ನಿಲ್ಲಿಸಲಾಯಿತು ಎಂದು ನಗರದ ರೈಲು ಅಧಿಕಾರಿಗಳು ಹೇಳಿದ್ದಾರೆ.

ಮಳೆ ಮುಂದುವರಿಯುತ್ತಿದ್ದಂತೆ, ಮುಂಬೈ ಪ್ರದೇಶದ ನಿವಾಸಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ಉತ್ತರ ಮತ್ತು ದಕ್ಷಿಣ ಮುಂಬೈನಲ್ಲಿ ಜಲಾವೃತವಾದ ಬೀದಿಗಳು ಮತ್ತು ಕಪ್ಪು ಗುಡುಗು ಸಹಿತ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. “ದಕ್ಷಿಣ ಮುಂಬೈನಲ್ಲಿ 1 ಗಂಟೆಯಲ್ಲಿ 50 ಮಿ.ಮೀ ಮಳೆಯಾಗಿದೆ. ಗುಡುಗು ಮಿಂಚು. ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗುವುದು ಸನ್ನಿಹಿತ. ಇದು ಮಧ್ಯರಾತ್ರಿಯ ನಂತರ ಮಳೆ ಹೆಚ್ಚಾಗಿದೆ ಎಂದು ಬಳಕೆದಾರರೊಬ್ಬರು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Karnataka Weather : ಬೆಂಗಳೂರಲ್ಲಿ ಗುಡುಗು ಸಹಿತ ಮಳೆ; ಕರಾವಳಿ, ಮಲೆನಾಡಿನಲ್ಲಿ ವರುಣಾರ್ಭಟ ಮುಂದುವರಿಕೆ

ಮಾನ್ಸೂನ್ ಋತುವಿನಲ್ಲಿ, ವಿಶೇಷವಾಗಿ ಜುಲೈನಲ್ಲಿ ಮುಂಬೈನಲ್ಲಿ ಮಿಂಚು ಮತ್ತು ಗುಡುಗು ಮಿಂಚು ಸಂಭವಿಸುವುದು ತುಂಬಾ ಸಾಮಾನ್ಯ ಎಂದು ಟ್ವಿಟರ್ ಬಳಕೆದಾರರು ಗಮನಸೆಳೆದಿದ್ದಾರೆ. ಥಾಣೆ ಮಳೆಯಿಂದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಶನಿವಾರದಿಂದ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಶಹಪುರ ಪ್ರದೇಶದ ಮನೆಗಳು ಮತ್ತು ಸೇತುವೆಗಳು ಮುಳುಗಿವೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡಲು ಎನ್​​ಡಿಆರ್​​ಎಫ್​ ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ಶಾಲೆಗಳಿಗೆ ರಜೆ: ಮಳೆಯ ಹಿನ್ನೆಲೆಯಲ್ಲಿ ಮುಂಬೈ ನಗರದ ಬಹುತೇಕ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಮಳೆಯಿಂದ ಸಂಚಾರ ವ್ಯವಸ್ಥೆಗೆ ಸಮಸ್ಯೆಯಾಗಿದ್ದು ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ರಜೆ ಘೋಷಿಸಲಾಗಿದೆ.

ಬಸ್​​ಗಳ ಸಂಚಾರ ಸ್ಥಗಿತ: ಮುಂಬೈನಗರದಲ್ಲಿ ಸಂಚರಿಸುವ ಬಸ್​ಗಳ ಕಾರ್ಯಾಚರಣೆಗೂ ಅಡಚಣೆ ಉಂಟಾಗಿದೆ. ಹಲವಾರು ಬಸ್​ಗಳ ಸೇವೆಯನ್ನು ನಿಲ್ಲಿಸಲಾಗಿದೆ. ಕೆಲವೊಂದು ಬಸ್​ಗಳನ್ನು ಬದಲಿ ಮಾರ್ಗಗಳ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಕಚೇರಿ ಕೆಲಸಕ್ಕೆ ಹೋಗುವವರಿಗೆ ಇದರಿಂದ ತೊಂದರೆ ಉಂಟಾಗಿದೆ.

Continue Reading

ದೇಶ

Mumbai Hit And Run: ಹಿಟ್‌ ಆ್ಯಂಡ್‌ ರನ್‌ಗೂ ಮುನ್ನ ಪಬ್‌ಗೆ ಹೋಗಿದ್ದ ಆರೋಪಿ; ವೈರಲ್‌ ಆಗ್ತಿದೆ ಈ ವಿಡಿಯೋ

Mumbai Hit And Run: ನಿನ್ನೆ ಮುಂಬೈನ ವೊರ್ಲಿಯಲ್ಲಿ ರಾಜೇಶ್‌ ಶಾ (Rajesh Shah) ಅವರ ಪುತ್ರ ಮಿಹಿರ್‌ ಶಾ (Mihir Shah) ಕುಡಿದು ವಾಹನ ಚಲಾಸುವಾಗ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಆಕೆಯ ಪತಿಯು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ 24 ವರ್ಷದ ಮಿಹಿರ್‌ ಶಾ ಪರಾರಿಯಾಗಿದ್ದ, ಬಳಿಕ ಪೊಲೀಸರು ಅವನ ತಂದೆಯನ್ನು ವಶಪಡಿಸಿಕೊಂಡಿದ್ದಾರೆ.

VISTARANEWS.COM


on

Mumbai hit and run
Koo

ಮುಂಬೈ: ನಿನ್ನೆ ಮುಂಬೈನಲ್ಲಿ ನಡೆದ ಡ್ರಂಕ್‌ ಆಂಡ್‌ ಡ್ರೈವ್‌(Mumbai Hit And Run) ಕೇಸ್‌ನ ಪ್ರಮುಖ ಆರೋಪಿ ಶಿವಸೇನೆ ಮುಖಂಡನ ಪುತ್ರ ಘಟನೆಗೂ ಮುನ್ನ ಪಬ್‌ನಿಂದ ಹೋರಬರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ(Video Viral) ವೈರಲ್‌ ಆಗಿದೆ. ಆರೋಪಿ ಮಿಹಿರ್‌ ಶಾ ತನ್ನ ಸ್ನೇಹಿತರೊಂದಿಗೆ ಪಬ್‌ನಿಂದ ಹೊರಬಂದು ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿರುವುದನ್ನು ಸಿಸಿಟಿವಿ(CCTV Footage) ದೃಶ್ಯಾವಳಿಯಲ್ಲಿ ಕಾಣಬಹುದಾಗಿದೆ.

ನಿನ್ನೆ ಮುಂಬೈನ ವೊರ್ಲಿಯಲ್ಲಿ ರಾಜೇಶ್‌ ಶಾ (Rajesh Shah) ಅವರ ಪುತ್ರ ಮಿಹಿರ್‌ ಶಾ (Mihir Shah) ಕುಡಿದು ವಾಹನ ಚಲಾಸುವಾಗ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಆಕೆಯ ಪತಿಯು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ 24 ವರ್ಷದ ಮಿಹಿರ್‌ ಶಾ ಪರಾರಿಯಾಗಿದ್ದ, ಬಳಿಕ ಪೊಲೀಸರು ಅವನ ತಂದೆಯನ್ನು ವಶಪಡಿಸಿಕೊಂಡಿದ್ದಾರೆ.

ಕಾವೇರಿ ನಖ್ವಾ ಮತ್ತು ಪ್ರದೀಕ್‌ ನಖ್ವಾ ಎಂಬ ದಂಪತಿ ಹೋಗುತ್ತಿದ್ದ ಬೈಕ್‌ಗೆ BMW ಕಾರು ಡಿಕ್ಕಿ ಹೊಡೆದಿದ್ದು, ಕೂಡಲೇ ಮಿಹಿರ್‌ ಶಾ ಎಸ್ಕೇಪ್‌ ಆಗಿದ್ದಾನೆ. ಬೆಳಗ್ಗೆ 5:30ರ ಸಮಯದಲ್ಲಿ ದಂಪತಿ ಸಾಸಾನ್‌ ಡಾಕ್‌ ಮಾರುಕಟ್ಟೆಯಿಂದ ಮೀನು ಖರೀದಿಸಿ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ದಂಪತಿ ಪ್ರದೀಕ್‌ ನಖ್ವಾ ಮಾರುಕಟ್ಟೆಯಲ್ಲಿ ಮೀನಿನ ವ್ಯಾಪಾರಿಯಾಗಿದ್ದಾರೆ. ಕಾರು ಡಿಕ್ಕಿಯಗುತ್ತಿದ್ದಂತೆ ರಸ್ತೆಗೆ ಬಿದ್ದಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಕಾವೇರಿ ಮತ್ತು ಪ್ರದೀಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾವೇರಿ ಕೊನೆಯುಸಿರೆಳೆದಿದ್ದಾರೆ.

ಘಟನೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮಿಹಿರ್‌ ಶಾ ನಾಪತ್ತೆಯಾಗಿದ್ದ. ಮಿಹಿರ್‌ ಶಾ ತನ್ನ ಫೋನನ್ನೂ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದರು. ಮಿಹಿರ್‌ ಪೊಲೀಸರಿಗೆ ಹೆದರಿ ತನ್ನ ಪ್ರೇಯಸಿ ಮನೆಯಲ್ಲಿ ಅವಿತಿದ್ದ. ಪೊಲೀಸರು ಆತನನ್ನು ಅರೆಸ್ಟ್‌ ಮಾಡಿದ್ದಾರೆ. ಪೊಲೀಸರ ಪ್ರಕಾರ ಮಿಹಿರ್‌ ಕಳೆದ ರಾತ್ರಿ ಜೂಹೂ ಪ್ರದೇಶದಲ್ಲಿರುವ ಬಾರ್‌ನಲ್ಲಿ ಕಂಠಪೂರ್ತಿ ಕುಡಿದಿದ್ದು. ತನ್ನ ಮನೆಗೆ ಹಿಂದಿರುಗುವ ವೇಳೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗುವಂತೆ ಡ್ರೈವರ್‌ಗೆ ಹೇಳಿದ್ದಾನೆ. ವರ್ಲಿಗೆ ತಲುಪುತ್ತಿದ್ದಂತೆ ತಾನು ಕಾರು ಚಲಾಯಿಸುವುದಕ್ಕೆ ಮುಂದಾಗಿದ್ದಾನೆ. ಆಗ ಅತ್ಯಂತ ವೇಗವಾಗಿ ಕಾರು ಚಲಾಯಿಸಿದ ಮಿಹಿರ್, ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಇನ್ನು ಘಟನೆ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾತ್‌ ಶಿಂಧೆ ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ದುರಾದೃಷ್ಟಕರವಾದುದು. ಕಾನೂನಿನ ಎದುರು ಎಲ್ಲರೂ ಸಮಾನ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಪೊಲೀಸರು ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Self Harming: ಮೊದಲ ರಾತ್ರಿಯ ಟೆನ್ಶನ್‌ಗೆ ವರ ಆತ್ಮಹತ್ಯೆ? ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ

Continue Reading

ರಾಜಕೀಯ

Rahul Gandhi: ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಗೆ ಇರುವ ಅಧಿಕಾರ ಏನೇನು?

2014 ಮತ್ತು 2019ರಲ್ಲಿ ಲೋಕಸಭೆಯಲ್ಲಿ ಶೇ.10ಕ್ಕಿಂತ ಕಡಿಮೆ ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್‌ನ ಇದೀಗ ಹತ್ತು ವರ್ಷಗಳ ಬಳಿಕ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ವಿರೋಧ ಪಕ್ಷಕ್ಕೆ ಕನಿಷ್ಠ 55 ಸ್ಥಾನಗಳ ಅಗತ್ಯವಿದೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 99 ಸ್ಥಾನಗಳನ್ನು ಗಳಿಸಿದೆ. ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್‌ ಗಾಂಧಿ ಅವರಿಗೆ ಇರುವ ಅಧಿಕಾರ ಏನೇನು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Rahul Gandhi
Koo

ಇಂಡಿಯಾ ಮೈತ್ರಿ ಕೂಟವು (India alliance) ಎನ್‌ಡಿಎ (NDA) ಸರ್ಕಾರದ ವಿರುದ್ಧ ಕಾಂಗ್ರೆಸ್ (congress) ನಾಯಕ ರಾಹುಲ್ ಗಾಂಧಿ (rahul gandhi) ಅವರನ್ನು ಲೋಕಸಭೆಯ (loksabha) ವಿರೋಧ ಪಕ್ಷದ ನಾಯಕರನ್ನಾಗಿ (Leader of the Opposition) ನೇಮಿಸಿದೆ. ವಿರೋಧ ಪಕ್ಷದ ನಾಯಕನಿಗೆ ಸಂಸತ್ತಿನಲ್ಲಿ ಕೆಲವು ಅಧಿಕಾರಗಳಿವೆ. ಹತ್ತು ವರ್ಷಗಳ ಬಳಿಕ ಕಾಂಗ್ರೆಸ್ ಈ ಬಾರಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆದಿದೆ.

2014 ಮತ್ತು 2019ರಲ್ಲಿ ಲೋಕಸಭೆಯಲ್ಲಿ ಶೇ.10ಕ್ಕಿಂತ ಕಡಿಮೆ ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್‌ನ ಇದೀಗ ಹತ್ತು ವರ್ಷಗಳ ಬಳಿಕ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ವಿರೋಧ ಪಕ್ಷಕ್ಕೆ ಕನಿಷ್ಠ 55 ಸ್ಥಾನಗಳ ಅಗತ್ಯವಿದೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 99 ಸ್ಥಾನಗಳನ್ನು ಗಳಿಸಿತು.

ವಿರೋಧ ಪಕ್ಷದ ನಾಯಕ ಸಾಂವಿಧಾನಿಕ ಹುದ್ದೆಯಲ್ಲದಿದ್ದರೂ, ಪ್ರಮುಖ ನೇಮಕಾತಿಗಳನ್ನು ಒಳಗೊಂಡಿರುವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕೆಲವು ಅಧಿಕಾರಗಳನ್ನು ಹೊಂದಿದೆ. ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಈ ಅಧಿಕಾರ ಚಲಾಯಿಸುವ ಅವಕಾಶ ಸಿಕ್ಕಿದೆ.

ವಿರೋಧ ಪಕ್ಷದ ನಾಯಕನಿಗೆ ಯಾವ ಅಧಿಕಾರವಿದೆ?

ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ನಿರ್ಣಾಯಕ ಸಂಸದೀಯ ಸಮಿತಿಗಳ ಸದಸ್ಯರಾಗಿರಲಿದ್ದಾರೆ. ಅವರು ಹಲವಾರು ಜಂಟಿ ಸಂಸದೀಯ ಸಮಿತಿಗಳು, ಸಾರ್ವಜನಿಕ ಖಾತೆಗಳ ಸಮಿತಿಗಳು, ಸಾರ್ವಜನಿಕ ಉದ್ಯಮ ಸೇರಿದಂತೆ ಹಲವು ಸಮಿತಿಗಳ ಸದಸ್ಯರಾಗಿರುತ್ತಾರೆ. ಪ್ರಮುಖ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಿಸುವ ವಿಚಾರದಲ್ಲಿಯೂ ಅವರ ಮಾತಿಗೆ ಪ್ರಾಮುಖ್ಯತೆ ಇರುತ್ತದೆ.

ಇದಲ್ಲದೆ ಶಾಸನಬದ್ಧ ಸಂಸ್ಥೆಗಳಾದ ಸೆಂಟ್ರಲ್ ವಿಜಿಲೆನ್ಸ್ ಕಮಿಷನ್, ಸೆಂಟ್ರಲ್ ಇನ್ಫಾರ್ಮೇಶನ್ ಕಮಿಷನ್, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್, ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಷನ್ ಆಫ್ ಇಂಡಿಯಾ, ಲೋಕಪಾಲ್ ಮತ್ತು ಹೆಚ್ಚಿನವುಗಳ ಮುಖ್ಯಸ್ಥರನ್ನು ನೇಮಿಸುವ ಜವಾಬ್ದಾರಿಯನ್ನು ಹೊಂದಿರುವ ಕೆಲವು ಸಮಿತಿಗಳ ಸದಸ್ಯರಾಗಿಯೂ ಸಹ ರಾಹುಲ್ ಗಾಂಧಿ ಅರ್ಹರಾಗಿದ್ದಾರೆ.

ಗಾಂಧಿ ಕುಟುಂಬದ ಮೂರನೇ ಸದಸ್ಯ

ರಾಹುಲ್ ಗಾಂಧಿ ಅವರು ಗಾಂಧಿ ಕುಟುಂಬದ ಮೂರನೇ ಸದಸ್ಯರಾಗಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರಿಗಿಂತ ಮೊದಲು ಅವರ ಅವರ ತಾಯಿ ಸೋನಿಯಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿ ಈ ಅಧಿಕಾರ ನಿಭಾಯಿಸಿದ್ದರು. ರಾಜೀವ್ ಗಾಂಧಿ ಅವರು 1989- 1990ರವರೆಗೆ ಈ ಹುದ್ದೆಯಲ್ಲಿದ್ದರೆ, ಸೋನಿಯಾ 1999ರಿಂದ 2004ರವರೆಗೆ ಈ ಅಧಿಕಾರ ವಹಿಸಿಕೊಂಡಿದ್ದರು.

ಉತ್ತರ ಪ್ರದೇಶದ ರಾಯ್ಬರೇಲಿಯ ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿಯವರು ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಹೆಚ್ಚುವರಿ ಸಂಬಳ ಮತ್ತು ಭತ್ಯೆ ಪಡೆಯಲಿದ್ದಾರೆ.

ಇದನ್ನೂ ಓದಿ: Narendra Modi: ಅಂಬೇಡ್ಕರ್‌ರನ್ನು ಷಡ್ಯಂತ್ರದಿಂದ ಸೋಲಿಸಿದ ನೆಹರೂ; ಕಾಂಗ್ರೆಸ್‌ನಿಂದ ದಲಿತರ ಶೋಷಣೆ ಎಂದ ಮೋದಿ


Continue Reading

ಪ್ರಮುಖ ಸುದ್ದಿ

Terrorists Killed : ನಕಲಿ ಬಂಕರ್​ನಲ್ಲಿ ಅಡಗಿ ಕುಳಿತಿದ್ದ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ ಭದ್ರತಾ ಪಡೆ

Terrorists Killed: ದಕ್ಷಿಣ ಕಾಶ್ಮೀರದ ಕುಲ್ಗಾಮ್ನಲ್ಲಿ ನಡೆದ ಪ್ರತ್ಯೇಕ ಮುಖಾಮುಖಿಯಲ್ಲಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಇದೇ ವೇಲೆ ಒಟ್ಟು ಆರು ಹಿಜ್ಬುಲ್ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

VISTARANEWS.COM


on

Kashmir Encounter
Koo

ಬೆಂಗಳೂರು: ಶನಿವಾರ ರಾತ್ರಿ ಜಮ್ಮು- ಕಾಶ್ಮೀರ ಚಿನ್ನಿಗಮ್​​ನಲ್ಲಿ ನಡೆದ ಎನ್​ಕೌಂಟರ್​​​ನಲ್ಲಿ ನಾಲ್ವರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ (Terrorists Killed). ಅಂದ ಹಾಗೆ ಅವರು ಮನೆಯ ಅಲ್ಮೆರಾದಲ್ಲಿ ನಿರ್ಮಿಸಿದ್ದ ಬಂಕರ್​ನಲ್ಲಿ ಅಡಗಿಕೊಂಡು ದುಷ್ಕೃತ್ಯ ನಡೆಸಲು ಮುಂದಾಗಿದ್ದು. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚಿನ್ನಿಗಮ್ ಫ್ರಿಸ್​ನಲ್ಲಿ ಎನ್​ಕೌಂಟರ್ ನಡೆದಿದೆ. ಉಗ್ರರು ಅಲ್ಮೇರಾದ ಒಳಗೆ ಬಂಕರ್ ನಿರ್ಮಿಸಿಕೊಂಡಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅದೇ ರೀತಿ ಅವರಿಗೆ ಆಶ್ರಯ ನೀಡಿದ ಸ್ಥಳೀಯರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್​​ನಲ್ಲಿ ನಡೆದ ಪ್ರತ್ಯೇಕ ಮುಖಾಮುಖಿಯಲ್ಲಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಇದೇ ವೇಲೆ ಒಟ್ಟು ಆರು ಹಿಜ್ಬುಲ್ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮದೆರ್​ಗಾಮ್​​ನಲ್ಲಿ ನಡೆದ ಮೊದಲ ಎನ್​ಕೌಂಟರ್​ನಲ್ಲಿ ಸೈನಿಕ ಮೃತಪಟ್ಟಿದ್ದರು. ಕುಲ್ಗಾಮ್​​ನ ಚಿನಿಗಾಮದಲ್ಲಿ ನಡೆದ ಎರಡನೇ ಎನ್​ಕೌಂಟರ್​ನಲ್ಲಿ ನಾಲ್ವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಕಾರ್ಯಾಚರಣೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಪೊಲೀಸ್ ಇನ್​ಸ್ಪೆಕ್ಟರ್​ ಜನರಲ್ ವಿ.ಕೆ.ಬರ್ಡಿ ತಿಳಿಸಿದ್ದಾರೆ.

ಹತ್ಯೆಗೀಡಾದ ಎಲ್ಲಾ ಭಯೋತ್ಪಾದಕರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರು ಎಂದು ಅವರು ಹೇಳಿದ್ದಾರೆ. ಅವರಲ್ಲಿ ಒಬ್ಬರು ಹಿಜ್ಬುಲ್​ನ ಸ್ಥಳೀಯ ಕಮಾಂಡರ್ ಎಂದು ಮಾಹಿತಿ ನೀಡಿದ್ದಾರೆ.

ಚಿನಿಗಾಮ್​​ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ನಾಲ್ವರು ಭಯೋತ್ಪಾದಕರನ್ನು ಯಾವರ್ ಬಶೀರ್ ದಾರ್, ಜಾಹಿದ್ ಅಹ್ಮದ್ ದಾರ್, ತೌಹೀದ್ ಅಹ್ಮದ್ ರಾಥರ್ ಮತ್ತು ಶಕೀಲ್ ಅಹ್ ವಾನಿ ಎಂದು ಗುರುತಿಸಲಾಗಿದೆ. ಮಡೆರ್​ಗಾಮ್​ನಲ್ಲಿ ಹತ್ಯೆಗೀಡಾದ ಇಬ್ಬರನ್ನು ಫೈಸಲ್ ಮತ್ತು ಆದಿಲ್ ಎಂದು ಗುರುತಿಸಲಾಗಿದೆ.

ಪ್ಯಾರಾ ಕಮಾಂಡೋ ಮತ್ತು ಲ್ಯಾನ್ಸ್ ನಾಯಕ್ ಪ್ರದೀಪ್ ನೈನ್ ಹುತಾತ್ಮರಾಗಿದ್ದಾರೆ. ಫ್ರಿಸಲ್ ಪ್ರದೇಶದ ಚಾನಿಗಮ್ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 1 ರಾಷ್ಟ್ರೀಯ ರೈಫಲ್ಸ್​ನ ಹವಾಲ್ದಾರ್ ರಾಜ್ ಕುಮಾರ್ ಹುತಾತ್ಮರಾಗಿದ್ದಾರೆ.

ಇದನ್ನೂ ಓದಿ: Accident: ಟೆರೇಸ್ ಮೇಲೆ ನಿಂತು ಜಗಳ ನೋಡುತ್ತಿದ್ದ ಮಹಿಳೆಗೇ ಬಿತ್ತು ಗುಂಡೇಟು!

ಎರಡೂ ಎನ್​ಕೌಂಟರ್​​ಗಳು ಕುಲ್​ಗಾಮ್​ನ ಒಳಭಾಗದಿಂದ ವರದಿಯಾಗಿದ್ದರೂ, ಅಮರನಾಥ ಯಾತ್ರೆಯ ದೃಷ್ಟಿಯಿಂದ ಭದ್ರತಾ ಅಧಿಕಾರಿಗಳು ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. “ಎನ್​ಕೌಂಟರ್​ಗಳು ರಾಷ್ಟ್ರೀಯ ಹೆದ್ದಾರಿಯಿಂದ ದೂರದಲ್ಲಿ ನಡೆದಿದೆ. ಪೊಲೀಸರು ಮತ್ತು ಇತರ ಏಜೆನ್ಸಿಗಳು ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Continue Reading
Advertisement
Actor Darshan Lost KG In 25 Days
ಕ್ರೈಂ10 mins ago

Actor Darshan: 25 ದಿನಕ್ಕೆ ದರ್ಶನ್‌ ತೂಕ ಕಳೆದುಕೊಂಡಿದ್ದು ಇಷ್ಟೊಂದಾ?

road accident vijayapura
ವಿಜಯಪುರ20 mins ago

Road Accident: ಬಸ್‌ ಹರಿದು ವ್ಯಕ್ತಿ ಸಾವು; ಮರಳೇಕಾಯಿ ತಿಂದು 8 ಮಕ್ಕಳು ಅಸ್ವಸ್ಥ

Virat kohli
ಪ್ರಮುಖ ಸುದ್ದಿ23 mins ago

Virat Kohli : ಇನ್​ಸ್ಟಾಗ್ರಾಮ್ ಪೋಸ್ಟ್​ ಮೂಲಕ ಬಿಟಿಎಸ್​ ಬ್ಯಾಂಡ್​ನ ದಾಖಲೆ ಮುರಿದ ವಿರಾಟ್​ ಕೊಹ್ಲಿ

Period Insomnia
ಆರೋಗ್ಯ33 mins ago

Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

Kundapura Kannada This time Kundapura Kannada Festival at the palace grounds Here is the list of program
ಉಡುಪಿ44 mins ago

Kundapura Kannada:  ಅರಮನೆ ಮೈದಾನದಲ್ಲಿ ಈ ಬಾರಿ `ವಿಶ್ವ ಕುಂದಾಪುರ ಕನ್ನಡ ಹಬ್ಬ’; ಕಾರ್ಯಕ್ರಮದ ವಿವರ ಪಟ್ಟಿ ಇಲ್ಲಿದೆ!

swamiji death kalaburagi viraktha math
ಕಲಬುರಗಿ46 mins ago

Swamiji Death: ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ ವಿಧಿವಶ

Smriti Mandhana
ಕ್ರಿಕೆಟ್49 mins ago

Smriti Mandhana : ಬಾಯ್​ಫ್ರೆಂಡ್​ ಜತೆಗಿನ ಐದು ವರ್ಷಗಳ ಬಾಂಧವ್ಯವನ್ನು ಕೇಕ್​ ಕಟ್​ ಮಾಡುವ ಮೂಲಕ ಸಂಭ್ರಮಿಸಿದ ಸ್ಮೃತಿ ಮಂದಾನಾ

child abandon
ಕ್ರೈಂ58 mins ago

Child Abandon: ಮೂರು ತಿಂಗಳ ಮಗು ಬಿಟ್ಟು ತಾಯಿ ಪರಾರಿ

Chandan Shetty talk about future decision
ಸ್ಯಾಂಡಲ್ ವುಡ್1 hour ago

Chandan Shetty: ಚಂದನ್‌ ಶೆಟ್ಟಿಗೆ ಒಳ್ಳೆ ಹುಡುಗಿ ಜತೆ ಮದುವೆಯಾಗುವ ಕನಸು ಏನೋ ಇತ್ತಂತೆ ಆದರೆ….

Mumbai rain
ಪ್ರಮುಖ ಸುದ್ದಿ1 hour ago

Mumbai Rain : ಭಾನುವಾರ ರಾತ್ರಿ ಪೂರ್ತಿ ಸುರಿದ ಮಳೆಗೆ ಮುಂಬೈ ನಗರದ ಹಲವು ಪ್ರದೇಶಗಳು ಜಲಾವೃತ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ14 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ16 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ17 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌