Kannada New Movie: `ಕೆಂಡ'ದಂಥಾ ಕಲಾವಿದರ ಪರಿಚಯ ಮಾಡಿಸಿದ್ರು ರೂಪಾ ರಾವ್-ಸಹದೇವ್! - Vistara News

South Cinema

Kannada New Movie: `ಕೆಂಡ’ದಂಥಾ ಕಲಾವಿದರ ಪರಿಚಯ ಮಾಡಿಸಿದ್ರು ರೂಪಾ ರಾವ್-ಸಹದೇವ್!

Kannada New Movie: ಮೋಷನ್ ಪೋಸ್ಟರ್ ಮತ್ತು ಅದರ ಸಲುವಾಗಿ ಚಿತ್ರತಂಡ ಹಂಚಿಕೊಂಡಿದ್ದ ಒಂದಷ್ಟು ವಿವರಗಳಿಂದಾಗಿಯೇ ಕೆಂಡ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು.

VISTARANEWS.COM


on

Kannada New Movie Kenda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮೋಷನ್ ಪೋಸ್ಟರ್ ಮೂಲಕ ಚರ್ಚೆ ಮತ್ತು ಕುತೂಹಲ ಹುಟ್ಟುಹಾಕಿದ್ದ ಚಿತ್ರ ʻಕೆಂಡ’ (Kannada New Movie). ಈ ಹಿಂದೆ ʻಗಂಟುಮೂಟೆ’ ಎಂಬ ಭಿನ್ನ ಕಥಾನಕದ ಮೂಲಕ ಸೆಳೆದಿದ್ದ ತಂಡವೇ ಕೆಂಡದ ರೂವಾರಿಯಾಗಿರುವುದು ಕೂಡಾ ಅದಕ್ಕೊಂದು ಕಾರಣ. ಗಂಟುಮೂಟೆ ಮೂಲಕ ಬೆರಗೊಂದನ್ನು ತೆರೆದಿಟ್ಟಿದ್ದ ರೂಪಾ ರಾವ್ ಮತ್ತು ಛಾಯಾಗ್ರಾಹಕರಾಗಿದ್ದುಕೊಂಡು, ನಿರ್ಮಾಣದಲ್ಲಿಯೂ ಭಾಗಿಯಾಗಿದ್ದ ಸಹದೇವ್ ಕೆಲವರು ಒಟ್ಟುಗೂಡಿ ಕೆಂಡವನ್ನು ರೂಪಿಸಿದ್ದಾರೆ. ಈ ಮೂಲಕ ಛಾಯಾಗ್ರಾಹಕ ಸಹದೇವ್ ಕೆಲವಡಿ ನಿರ್ದೇಶಕರಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ.

ಮೋಷನ್ ಪೋಸ್ಟರ್ ಮತ್ತು ಅದರ ಸಲುವಾಗಿ ಚಿತ್ರತಂಡ ಹಂಚಿಕೊಂಡಿದ್ದ ಒಂದಷ್ಟು ವಿವರಗಳಿಂದಾಗಿಯೇ ಕೆಂಡ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಇದೀಗ ಚಿತ್ರತಂಡ ಕೆಂಡದ ಒಡಲಲ್ಲಿರುವ ವಿಭಿನ್ನವಾದ ಪಾತ್ರಗಳನ್ನು ಪರಿಚಯ ಮಾಡಿಸಿದೆ. ಒಂದು ವೀಡಿಯೊ ಮೂಲಕ ಕೆಂಡದೊಳಗಿನ ಪಾತ್ರಗಳು ಅನಾವರಣಗೊಂಡಿವೆ.

ಸಚ್ಚಾ ನಿರ್ವಹಿಸಿರುವ ಲೋಕೇಶ್ ಎಂಬ ಪಾತ್ರ, ಜಯರಾಮ್ ಆಗಿ ನಟಿಸಿರುವ ಶರತ್ ಗೌಡ, ಪ್ರಣವ್ ಶ್ರೀಧರ್ ಅವರ ವಿನಾಯಕ ಎಂಬ ಪಾತ್ರ, ಕೇಶವನಾಗಿರುವ ಬಿ.ವಿ ಭರತ್ ಒಂದೇ ಸಲಕ್ಕೆ ಸೆಳೆಯುವಂಥಹ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಈ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ಕೆಲ ಪಾತ್ರಗಳೇ ಅಗಾಧವಾದ ಕ್ರೇಜ್ ಸೃಷ್ಟಿಸಿದ್ದವು. ಇಲ್ಲಿನ ಪಾತ್ರಗಳೂ ಕೂಡಾ ಅಂಥಾದ್ದರ ರೂವಾರಿಯಾಗುವ ಲಕ್ಷಣಗಳು ದಟ್ಟವಾಗಿವೆ.

ಅಂದಹಾಗೆ, ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಈ ಚಿತ್ರ ನಿರ್ಮಾಣಗೊಂಡಿದೆ. ಪ್ರಸಕ್ತ ಸನ್ನಿವೇಷಗಳಿಗೆ ತಕ್ಕುದಾಗಿರುವ ಈ ಕಥನ ರಗಡ್ ಶೈಲಿಯಲ್ಲಿದೆ ಎಂಬುದನ್ನು ಶೀರ್ಷಿಕೆಯೇ ಸಾರಿ ಹೇಳಿತ್ತು. ಇದೀಗ ತೆರೆದುಕೊಂಡಿರುವ ಪಾತ್ರಗಳು ಆ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಕೆಂಡದ ತಾರಾಗಣವೆಲ್ಲ ಹೊಸಬರಿಂದಲೇ ತುಂಬಿಕೊಂಡಿದೆ. ರಂಗಭೂಮಿ ಪ್ರತಿಭೆಗಳಿಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ ದೇಶಪಾಂಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಇದನ್ನೂ ಓದಿ: Kannada New Movie: ಡ್ಯಾಡ್ ಟೀಸರ್‌ಗೆ ಬಾಲಿವುಡ್ ನಿರ್ದೇಶಕ ಸುಭಾಶ್ ಘಾಯ್ ಫಿದಾ!

ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕಥೆಯೊಂದಿಗೆ ಹೊಸೆದುಕೊಂಡಂತ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ.

ಯುವ ಸಮೂಹದ ಕನಸು, ನಿರಾಸೆ, ತವಕ ತಲ್ಲಣಗಳನ್ನು ಹೊಂದಿರುವ ಈ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಅಂತಿಮ ಘಟ್ಟದಲ್ಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್‌!

Kannada New Movie: 90ರ ದಶಕದಲ್ಲಿ ಯಶಸ್ವಿಯ ಉತ್ತುಂಗದಲ್ಲಿದ್ದ ಶಶಿಕುಮಾರ್ ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು ಸೈ ಎನಿಸಿಕೊಂಡಿದ್ದರು. `ಕಾದಾಡಿ’ (Kaadaadi Movie Kannada) ಎನ್ನುವ ಚಿತ್ರದಲ್ಲಿ ಆದಿತ್ಯ ಶಶಿಕುಮಾರ್ ನಟಿಸಿದ್ದಾರೆ. ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ.

VISTARANEWS.COM


on

Kannada New Movie Aditya Shashikumar Kaadaadi Movie Lyrical song out
Koo

ಬೆಂಗಳೂರು: ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ (Kannada New Movie) ಈಗ ಆದಿತ್ಯ ಶಶಿಕುಮಾರ್ (Aditya Shashikumar) ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. `ಕಾದಾಡಿ’ (Kaadaadi Movie Kannada) ಎನ್ನುವ ಚಿತ್ರದಲ್ಲಿ ಆದಿತ್ಯ ಶಶಿಕುಮಾರ್ ನಟಿಸಿದ್ದಾರೆ. ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆಯಷ್ಟೇ ನಾಯಕನ ಪರಿಚಯದ ಎರಡನೇ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಎನ್.ಮಾರುತಿ ಸಾಹಿತ್ಯದ ’ಕಲೆಯು ಇರಬೇಕು, ಮನೆಯು ಇರಬೇಕುʼʼ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದಾರೆ. ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಇಂತಹ ಅಂಶಗಳನ್ನು ಥ್ರಿಲ್ಲರ್ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.

ಲಾವಣ್ಯಸಾಹುಕಾರ, ಚಾಂದಿನಿತಮಿಳರಸನ್ ಈ ಸಿನಿಮಾಗೆ ನಾಯಕಿಯರು. ಉಳಿದಂತೆ ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್‌ಮನೋಹರ್, ಶ್ರವಣ್‌ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಡಿ.ಯೋಗಿಪ್ರಸಾದ್ ಛಾಯಾಗ್ರಹಣ ಡಿ.ಯೋಗಿಪ್ರಸಾದ್, ಕಲೆ ಅರ್ಜುನ್‌ ಸೂರಿ ಸೆಟ್ಟಿ, ಪ್ರಕಾಶ್‌ತೋಟ ಸಂಕಲನ, ನೃತ್ಯ ರಾಜ್‌ಪಿಡಿ-ರಾಜ್‌ಕೃಷ್ಣ, ಸಾಹಸ ಸಿನಿಮಾಕ್ಕಿದೆ.

ಇದನ್ನೂ ಓದಿ: Kannada New Movie: ʼಕೋಟಿʼ ಚಿತ್ರಕ್ಕೆ ಕಿಚ್ಚನ ಬಲ; ಹೊಸ ಪೋಸ್ಟರ್‌ ರಿಲೀಸ್‌

ಗೋವಾ, ಚಿಕ್ಕಮಗಳೂರು, ಹೈದರಬಾದ್, ಚೆನ್ನೈ ಸುಂದರ ತಾಣಗಳಲ್ಲಿ ಚಿತ್ರೀಕರಣ ಸನಡೆಸಲಾಗಿದೆ. ಅಂದಹಾಗೆ ಸಿನಿಮಾವು ಜೂನ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

90ರ ದಶಕದಲ್ಲಿ ಯಶಸ್ವಿಯ ಉತ್ತುಂಗದಲ್ಲಿದ್ದ ಶಶಿಕುಮಾರ್ ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು ಸೈ ಎನಿಸಿಕೊಂಡಿದ್ದರು. ಇದೀಗ ಅವರ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು ತಂದೆಯಂತೆ ಆದಿತ್ಯ ಸ್ಯಾಂಡಲ್ವುಡ್ ನಲ್ಲಿ ತಮ್ಮ ಮಿಂಚು ಹರಿಸುತ್ತಾರೆ ಕಾದು ನೋಡಬೇಕು.

Continue Reading

ಸ್ಯಾಂಡಲ್ ವುಡ್

Ambareesh Birthday: ಅಂಬಿ ನೆನೆದು ಸುಮಲತಾ ಭಾವನಾತ್ಮಕ ಪೋಸ್ಟ್‌ !

Ambareesh Birthday: ಕನ್ನಡ ಚಿತ್ರರಂಗದ ಅಜಾತಶತ್ರುವಾಗಿದ್ದ ಅಂಬಿ ನವೆಂಬರ್ 24, 2018ರಂದು ಹೃದಯಾಘಾತದಿಂದ ಮರಳಿ ಬಾರದ ಲೋಕಕ್ಕೆ ತೆರಳಿದರು. ಸಿನಿಮಾ ಮಾತ್ರವಲ್ಲದೆ, ರಾಜಕೀಯ ರಂಗದಲ್ಲೂ ಅಂಬರೀಶ್ ಸಾಧನೆ ಅಪಾರ. ಶಾಸಕ, ಸಂಸದ, ಸಚಿವ, ಕೇಂದ್ರ ಸಚಿವರಾಗಿಯೂ ಅವರು ಕೆಲಸ ಮಾಡಿದ್ದರು.‌ ಚಿತ್ರರಂಗದ ಯಾವುದೇ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸುವ ದೊಡ್ಡಣ್ಣನಂತಿದ್ದರು.

VISTARANEWS.COM


on

Ambareesh Birthday heartfelt note By sumalatha
Koo

ಬೆಂಗಳೂರು: ಮೇ 29 ಅಂಬರೀಶ್‌ (Ambareesh Birthday) ಅವರ 72ನೇ ಜನುಮದಿನ. ಕನ್ನಡದಲ್ಲಿ ಮಾತ್ರವಲ್ಲದೆ ಅಂಬರೀಶ್‌ ಅವರು ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ನಲ್ಲಿಯೂ ಅಪಾರ ಸ್ನೇಹ ಬಳಗ ಹೊಂದಿದ್ದರು. ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದರು.  ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಅಂಬಿ ಹುಟ್ಟು ಹಬ್ಬದ ಅಂಗವಾಗಿ ಸುಮಲತಾ ಅಂಬರೀಶ್‌ ಅವರು ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ.

ʻʻನಿವು ಸದಾ ನೆನಪಾಗುತ್ತೀರಿ. ನಿಮ್ಮನ್ನು ನೆನಸಿಕೊಂಡಾಗಲೆಲ್ಲ ಮುಖದಲ್ಲಿ ನಗು ಮೂಡುತ್ತದೆ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ನೀವು ಎಲ್ಲಿ ವಿಶ್ರಾಂತಿ ಪಡೆಯುತ್ತೀರೋ ಅಲ್ಲಿ ನಿಮ್ಮ ಸ್ಮರಣೆಯು ನನಗೆ ಅಮೂಲ್ಯ ಮತ್ತು ಉತ್ತಮ ಎಂದು ನಾನು ಭಾವಿಸುತ್ತೇನೆ. ನೀವು ನಮ್ಮ ಜೀವನದ ಒಂದು ಭಾಗ..ಪ್ರತಿ ಕ್ಷಣ ಮತ್ತು ಎಂದೆಂದಿಗೂ..ನೀವು ಬದುಕನ್ನು ಮೀರಿದವರು.. ನೀವೇ ಜೀವನ. ಸ್ವರ್ಗದಲ್ಲಿ ಜನ್ಮದಿನದ ಶುಭಾಶಯಗಳುʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ambareesh Birthday: ಅಂಬರೀಶ್‌ ಸಿನಿಮಾಗಳ ಹಾಡಿನ ರೀಲ್ಸ್‌ನಲ್ಲಿ ಕಮಾಲ್ ಮಾಡಿದ ಅಭಿಷೇಕ್‌-ಅವಿವ ಬಿಡಪ ಜೋಡಿ

ಕನ್ನಡ ಚಿತ್ರರಂಗದ ಅಜಾತಶತ್ರುವಾಗಿದ್ದ ಅಂಬಿ ನವೆಂಬರ್ 24, 2018ರಂದು ಹೃದಯಾಘಾತದಿಂದ ಮರಳಿ ಬಾರದ ಲೋಕಕ್ಕೆ ತೆರಳಿದರು. ಸಿನಿಮಾ ಮಾತ್ರವಲ್ಲದೆ, ರಾಜಕೀಯ ರಂಗದಲ್ಲೂ ಅಂಬರೀಶ್ ಸಾಧನೆ ಅಪಾರ. ಶಾಸಕ, ಸಂಸದ, ಸಚಿವ, ಕೇಂದ್ರ ಸಚಿವರಾಗಿಯೂ ಅವರು ಕೆಲಸ ಮಾಡಿದ್ದರು.‌ ಚಿತ್ರರಂಗದ ಯಾವುದೇ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸುವ ದೊಡ್ಡಣ್ಣನಂತಿದ್ದರು.

ಅಂಬರೀಶ್ ಬರ್ತ್‌ಡೇ ಕಾಮನ್ ಡಿಪಿಯನ್ನು ನಟ ದರ್ಶನ್ ರಿವೀಲ್ ಮಾಡಿ ಶುಭ ಕೋರಿದ್ದರು. ಆ ಫೋಟೊ ವೈರಲ್ ಆಗುತ್ತಿದೆ.ನ್ನು ಅಭಿಮಾನಿಗಳು ಸ್ಪೆಷಲ್ ಡಿಪಿ ಪೋಸ್ಟ್ ಮಾಡಿ ಅಂಬಿ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.

ಅಂಬಿ ನಮ್ಮನ್ನಗಲಿ 5 ವರ್ಷಗಳು ಕಳೆದಿವೆ. ಅಂಬಿ ಸಮಾಧಿಗೆ ಅಂಬರೀಶ್ ಕುಟುಂಬಸ್ಥರಿಂದ ಪೂಜೆ ಆಗಲಿದೆ. ಪೂಜೆಯ ಬಳಿಕ ಮಂಡ್ಯಗೆ ಸುಮಲತಾ ತೆರಳಲಿದ್ದಾರೆ. ಮಂಡ್ಯದೆಲ್ಲೆಡೆ ಅಂಬರೀಶ್ ಹುಟ್ಟುಹಬ್ಬದ ಆಚರಣೆ ಆಗುತ್ತಿದೆ. ಮಧ್ಯಾಹ್ನ 3 ಗಂಟೆಗೆ ಮಂಡ್ಯದಲ್ಲಿ ಅಂಬಿ ಜನ್ಮ ಜಯಂತಿ ಆಚರಣೆ ಆಗುತ್ತಿದೆ. ಅಂಬರೀಶ್ ಹೆಸರಿನಲ್ಲಿ ಹಲವು ಗಣ್ಯರಿಗೆ ಪ್ರತಿಭಾ ಪುರಸ್ಕಾರ ನೆರವೇರಲಿದೆ.

Continue Reading

ಸ್ಯಾಂಡಲ್ ವುಡ್

Uttarakaanda Movie:  ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಶಿವರಾಜ್​ ಕುಮಾರ್​

Uttarakaanda Movie: ಏ.18ರಂದು ಚಿತ್ರತಂಡ ದೂದ್‌ಪೇಡ ದಿಗಂತ್‌ ಅವರ ಲುಕ್‌ ಅನಾವರಣಗೊಳಿಸಿತ್ತು. ಮಿರ್ಚಿ “ಮಲ್ಲಿಗೆ” ಎಂಬ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಟೋಬಿʼ, ʼಸಪ್ತ ಸಾಗರದಾಚೆ ಸೈಡ್‌ ಬಿʼ ಮುಂತಾದ ಸಿನಿಮಾಗಳಲ್ಲಿ ಗಮನ ಸೆಳೆದಿದ್ದ ಚೈತ್ರಾ ʼಉತ್ತರಕಾಂಡʼ ಚಿತ್ರತಂಡವನ್ನು ಸೇರಿದ್ದು, ಇನ್ನಷ್ಟು ನಿರೀಕ್ಷೆ ಮೂಡಿಸಿದೆ.ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯನ್ನು ಒಳಗೊಂಡ ʼಉತ್ತರಕಾಂಡʼ ಸಿನಿಮಾಕ್ಕೆ ರೋಹಿತ್ ಪದಕಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚೈತ್ರಾ ಆಚಾರ್ ಈ ಚಿತ್ರದಲ್ಲಿ ಲಚ್ಚಿ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Uttarakaanda Movie Shivarajkumar Visits Savadatti Yallamma Temple After Uttarakaanda Movie
Koo

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸವದತ್ತಿ ಯಲ್ಲಮ್ಮ (Savadatti Yallamma) ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆ ಸಂದರ್ಭದ ಫೋಟೋಗಳು ಲಭ್ಯವಾಗಿವೆ. ಬೆಳಗಾವಿಯಲ್ಲಿ “ಉತ್ತರಕಾಂಡ” ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ದೇವಿಯ ದರ್ಶನ ಪಡೆದ ಶಿವಣ್ಣನಿಗೆ ಈ ಕ್ಷೇತ್ರ ಅದೃಷ್ಟವಂತೆ. ಹಿಂದೆ “ಶ್ರೀರಾಮ್”, “ಮೈಲಾರಿ” ಮುಂತಾದ (Uttarakaanda Movie) ಬ್ಲಾಕ್ ಬಸ್ಟರ್ ಚಿತ್ರಗಳ ಪಾಲಿಗೂ ಸವದತ್ತಿ ಯಲ್ಲಮ್ಮ ಅದೃಷ್ಟ ದೇವತೆ. ಹಾಗಾಗಿ “ಉತ್ತರಕಾಂಡ‌”ದ ಚಿತ್ರೀಕರಣದ ನಂತರ ಶಿವಣ್ಣ ತಾಯಿ‌ ಆಶಿರ್ವಾದವನ್ನು ಪಡೆದಿದ್ದಾರೆ.

ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ “ಉತ್ತರಕಾಂಡ” ರೋಹಿತ್ ಪದಕಿ ನಿರ್ದೇಶನದ ಬಹು ನಿರೀಕ್ಷಿತ ಆಕ್ಷನ್ ಡ್ರಾಮಾ ಚಿತ್ರವಾಗಿದೆ. ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್, ನಟರಾಕ್ಷಸ ಡಾಲಿ‌ ಧನಂಜಯ, ಐಶ್ವರ್ಯ ರಾಜೇಶ್,ಭಾವನಾ‌ ಮೆನನ್, ದಿಗಂತ್ ಮಂಚಾಲೆ, ರಂಗಾಯಣ ರಘು, ವಿಜಯ್ ಬಾಬು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಬಾಲಿವುಡ್ ಹೆಸರಾಂತ ಗಾಯಕ,ಸಂಗೀತ ಸಂಯೋಜಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿದ್ದಾರೆ.

ಏ.18ರಂದು ಚಿತ್ರತಂಡ ದೂದ್‌ಪೇಡ ದಿಗಂತ್‌ ಅವರ ಲುಕ್‌ ಅನಾವರಣಗೊಳಿಸಿತ್ತು. ಮಿರ್ಚಿ “ಮಲ್ಲಿಗೆ” ಎಂಬ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಟೋಬಿʼ, ʼಸಪ್ತ ಸಾಗರದಾಚೆ ಸೈಡ್‌ ಬಿʼ ಮುಂತಾದ ಸಿನಿಮಾಗಳಲ್ಲಿ ಗಮನ ಸೆಳೆದಿದ್ದ ಚೈತ್ರಾ ʼಉತ್ತರಕಾಂಡʼ ಚಿತ್ರತಂಡವನ್ನು ಸೇರಿದ್ದು, ಇನ್ನಷ್ಟು ನಿರೀಕ್ಷೆ ಮೂಡಿಸಿದೆ.ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯನ್ನು ಒಳಗೊಂಡ ʼಉತ್ತರಕಾಂಡʼ ಸಿನಿಮಾಕ್ಕೆ ರೋಹಿತ್ ಪದಕಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚೈತ್ರಾ ಆಚಾರ್ ಈ ಚಿತ್ರದಲ್ಲಿ ಲಚ್ಚಿ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ `ಉತ್ತರಾಕಾಂಡ’ದಲ್ಲಿ (Uttarakaanda Movie) ನಟಿಸಲಿದ್ದಾರೆ‌. “ಪಾಟೀಲ” ಎಂಬ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ನಿರ್ದೇಶಕರಾಗಿ ಆ್ಯಕ್ಷನ್ ಕಟ್ ಹೇಳುತ್ತಿದ್ದ ಭಟ್ಟರು,‌ಇದೀಗ ವಿಭಿನ್ನವಾಗಿ ಆ್ಯಕ್ಷನ್ ಕಟ್ ಹೇಳಿಸಿಕೊಳ್ಳಲಿದ್ದಾರೆ‌.

ಇದನ್ನೂ ಓದಿ: Pushpa 2: ʼಪುಷ್ಪ 2ʼ ಸಿನಿಮಾ ತಂಡದಿಂದ ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ಎರಡನೇ ಹಾಡು ರಿಲೀಸ್‌ಗೆ ಮುಹೂರ್ತ ಫಿಕ್ಸ್‌

ನಾಯಕಿ ಯಾರು?

ಚಿತ್ರತಂಡ ಆರಂಭದಲ್ಲಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಅವರನ್ನು ಹೆಸರಿಸಿತ್ತು. ಮಾತ್ರವಲ್ಲ ರಮ್ಯಾ ಚಿತ್ರದ ಮುಹೂರ್ತದಲ್ಲಿಯೂ ಭಾಗವಹಿಸಿದ್ದರು. ಆದರೆ ಇತ್ತೀಚೆಗೆ ಅವರು ಚಿತ್ರತಂಡದಿಂದ ಹೊರಬಂದು ಶಾಕ್‌ ನೀಡಿದ್ದರು. ಕಳೆದ ವರ್ಷ ʼಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರದ ನಾಯಕಿ ಪಾತ್ರದಿಂದ ಹಿಂದೆ ಸರಿದಿದ್ದ ರಮ್ಯಾ ಕೆಲವು ದಿನಗಳ ಹಿಂದೆ ʼಉತ್ತರಕಾಂಡʼ ಸಿನಿಮಾದಿಂದಲೂ ಹೊರ ಬಂದಿದ್ದರು. ʼ‘ಡೇಟ್ಸ್​ ಕೊರತೆಯಿಂದಾಗಿ ನಾನು ʼಉತ್ತರಕಾಂಡʼದಲ್ಲಿ ಕೆಲಸ ಮಾಡುತ್ತಿಲ್ಲ (ಸಿನಿಮಾ ಮತ್ತು ರಾಜಕೀಯದ ಕೆಲಸಗಳನ್ನು ನಾನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇನೆ). ಚಿತ್ರತಂಡಕ್ಕೆ ನಾನು ಶುಭ ಹಾರೈಸುತ್ತೇನೆ’ʼ ಎಂದು ರಮ್ಯಾ ಕಾರಣ ತಿಳಿಸಿದ್ದರು. ಆ ಮೂಲಕ ಅನೇಕ ವರ್ಷಗಳ ಬಳಿಕ ಅವರನ್ನು ತೆರೆ ಮೇಲೆ ನೋಡಬೇಕೆಂಬ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.

ಉತ್ತರಕಾಂಡʼದ ಮುಹೂರ್ತ 2022ರಲ್ಲಿ‌ಯೇ ಆಗಿತ್ತು. ಆದರೆ ಇದುವರೆಗೆ ಚಿತ್ರೀಕರಣ ಆರಂಭವಾಗಿರಲಿಲ್ಲ. ಚಿತ್ರಕಥೆಯು ಬಯಲುಸೀಮೆಯ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದರಿಂದ ಹಾಗೂ ಉತ್ತರ ಕರ್ನಾಟಕದ ಆಡುಭಾಷೆಯನ್ನು ಹೊಂದಿರುವುದರಿಂದ ಚಿತ್ರಕ್ಕೆ ನಿಖರವಾದ ಸಂಶೋಧನೆ ಮತ್ತು ಪ್ಲ್ಯಾನಿಂಗ್‌ನ ಅಗತ್ಯವಿತ್ತು. ಈ ಕಾರಣದಿಂದ ಮತ್ತು ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಚಿತ್ರೀಕರಣ ವಿಳಂಬಗೊಂಡಿತು. ಆದರೆ ಇದೀಗ ಸರ್ವ ಸಿದ್ಧತೆಗಳೊಂದಿಗೆ ಚಿತ್ರೀಕರಣ ಆರಂಭಗೊಂಡಿದೆʼʼ ಎಂದು ಚಿತ್ರತಂಡ ತಿಳಿಸಿದೆ. ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Continue Reading

ಸಿನಿಮಾ

Pushpa 2: ʼಪುಷ್ಪ 2ʼ ಸಿನಿಮಾ ತಂಡದಿಂದ ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ಎರಡನೇ ಹಾಡು ರಿಲೀಸ್‌ಗೆ ಮುಹೂರ್ತ ಫಿಕ್ಸ್‌

Pushpa 2: ಸದ್ಯ ದೇಶದ ಗಮನ ಸೆಳೆದಿರುವ ಚಿತ್ರಗಳ ಪೈಕಿ ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ 2ʼ ಚಿತ್ರದ ಎರಡನೇ ಹಾಡು ರಿಲೀಸ್‌ಗೆ ಮುಹೂರ್ತ ಫಿಕ್‌ ಆಗಿದೆ. ಈಗಾಗಲೇ ರಿಲೀಸ್‌ ಆಗಿರುವ ಮೊದಲ ಹಾಡು ಸೂಪರ್‌ ಹಿಟ್‌ ಆಗಿದ್ದು, ಎರಡನೇ ಹಾಡಿನ ಬಗ್ಗೆ ಕುತೂಹಲ ಮೂಡಿದೆ. ಹಾಗಾದರೆ ಎರಡನೇ ಹಾಡು ಯಾವಾಗ ರಿಲೀಸ್‌ ಆಗಲಿದೆ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Pushpa 2
Koo

ಹೈದರಾಬಾದ್‌: ಸದ್ಯ ದೇಶದ ಗಮನ ಸೆಳೆದಿರುವ ಚಿತ್ರಗಳ ಪೈಕಿ ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ 2ʼ (Pushpa 2) ಕೂಡ ಒಂದು. 2021ರಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುದ್ದ ಪ್ಯಾನ್‌ ಇಂಡಿಯಾ ಸಿನಿಮಾ ʼಪುಷ್ಪʼದ ಮುಂದುವರಿದ ಭಾಗ ಇದು. ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಮೊದಲ ಹಾಡು ಈಗಾಗಲೇ ರಿಲೀಸ್‌ ಆಗಿ ಧೂಳೆಬ್ಬಿಸುತ್ತಿದೆ. ಅದರಲ್ಲಿಯೂ ಯೂಟ್ಯೂಬ್‌ನಲ್ಲಿ ದಾಖಲೆಯ ವೀಕ್ಷಣೆ ಕಂಡಿದೆ. ʻಪುಷ್ಪ ಪುಷ್ಪʼ ಎಂದು ಶುರುವಾಗುವ ಹಾಡಿಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಇದರಲ್ಲಿನ ಹುಕ್ ಸ್ಟೆಪ್ ವೈರಲ್‌ ಆಗಿದೆ. ಇದೀಗ ಎರಡನೇ ಹಾಡಿನ ರಿಲೀಸ್‌ಗೆ ಮುಹೂರ್ತ ಫಿಕ್ಸ್‌ ಆಗಿದೆ.

ʻಪುಷ್ಪ ಪುಷ್ಪʼ ಅಲ್ಲು ಅರ್ಜುನ್‌ ಪಾತ್ರವನ್ನು ಪರಿಚಯಿಸುವ ಹಾಡಾದರೆ ಇದೀಗ ರಿಲೀಸ್‌ ಆಗಲಿರುವ ಎರಡನೇ ಹಾಡಿನಲ್ಲಿ ನಾಯಕಿ ರಶ್ಮಿಕಾ ಮಂದಣ್ಣ ಕೂಡ ಇರಲಿದ್ದಾರೆ ಎನ್ನುವ ಸೂಚನೆ ಈಗಾಗಲೇ ಸಿಕ್ಕಿದೆ. ಈ ಬಗ್ಗೆ ರಶ್ಮಿಕಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ಹಾಡು ರಿಲೀಸ್‌ ಯಾವಾಗ?

ʼಪುಷ್ಪ 2ʼ ಚಿತ್ರದ ಎರಡನೇ ಹಾಡು ನಾಳೆ (ಮೇ 29) ಬೆಳಿಗ್ಗೆ 11.07ಕ್ಕೆ ರಿಲೀಸ್‌ ಆಗಲಿದೆ ಎಂದು ರಶ್ಮಿಕಾ ತಿಳಿಸಿದ್ದಾರೆ. ರಶ್ಮಿಕಾ ಮತ್ತು ಅಲ್ಲು ಅರ್ಜುನ್‌ ಫೋಸ್‌ ಕೊಡುತ್ತಿರುವ ಪೋಸ್ಟರ್‌ ಈಗಾಗಲೇ ಗಮನ ಸೆಳೆದಿದೆ. ಗುಲಾಬಿ ಬಣ್ಣ, ಹಲವು ಡ್ಯಾನ್ಸರ್‌ಗಳ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ನಗುತ್ತಾ ಪೋಸ್‌ ನೀಡಿದ್ದಾರೆ. ದೇವಿಶ್ರೀ ಪ್ರಸಾದ್‌ ಸಂಗೀತ ನಿರ್ದೇಶನದಲ್ಲಿ ಶ್ರೇಯಾ ಘೋಷಾಲ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ.

6 ಭಾಷೆಗಳಲ್ಲಿಯೂ ಶ್ರೇಯಾ ಮೋಡಿ

ಈ ಹಾಡು 6 ಭಾಷೆಗಳಲ್ಲಿ ಮೂಡಿ ಬರಲಿದೆ. ಎಲ್ಲ ಭಾಷೆಗಳಲ್ಲಿಯೂ ಶ್ರೇಯಾ ಘೋಷಾಲ್‌ ಹಾಡಿಗೆ ಧ್ವನಿ ನೀಡುತ್ತಿರುವುದು ವಿಶೇಷ. ಸೂಸೆಕಿ (ತೆಲುಗು), ನೋಡೋಕ (ಕನ್ನಡ), ಅಂಗಾರೊನ್‌ (ಹಿಂದಿ), ಸೂಡಾನ (ತಮಿಳು), ಕಂಡಾಲೋ (ಮಲಯಾಳಂ) ಮತ್ತು ಆಗುನೆರ್‌ (ಬಂಗಾಳಿ) ಎಂದು ಆರಂಭವಾಗುವ ಹಾಡನ್ನು ಶ್ರೇಯಾ ಘೋಷಾಲ್‌ ಹಾಡಿದ್ದಾರೆ.

ಚಿತ್ರ ಬಿಡುಗಡೆ ಯಾವಾಗ?

ʼಪುಷ್ಪ 2ʼ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಮೈತ್ರಿ ಮೂವೀ‌ ಮೇಕರ್ಸ್ ದುಬಾರಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಜತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್, ಡಾಲಿ ಧನಂಜಯ್, ಅನಸೂಯಾ ಭಾರದ್ವಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ʼಪುಷ್ಪ 2ʼ ತಯಾರಕರು ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದರು. ಟೀಸರ್​ನಲ್ಲಿ ಅಲ್ಲು ಅರ್ಜುನ್ ಸೀರೆ ಉಟ್ಟು, ಮುಖವನ್ನು ನೀಲಿ ಮತ್ತು ಕೆಂಪು ಬಣ್ಣಗಳನ್ನು ಮೆತ್ತಿಕೊಂಡಿರುವುದು ಕಂಡು ಬಂದಿತ್ತು. ಭಾರವಾದ ಸಾಂಪ್ರದಾಯಿಕ ಚಿನ್ನ ಮತ್ತು ಹೂವಿನ ಆಭರಣಗಳೊಂದಿಗೆ ಮೇಕಪ್ ಧರಿಸಿ ಗೂಂಡಾಗಳನ್ನು ಹೊಡೆಯುತ್ತಿರುವುದು ಟೀಸರ್‌ ಕಂಡು ಬಂದು ವೀಕ್ಷಕರ ಕುತೂಹಲ ಕೆರಳಿಸಿತ್ತು. ಸದ್ಯ ಅಭಿಮಾನಿಗಳು ಚಿತ್ರ ಬಿಡುಗಡೆ ದಿನಾಂಕವನ್ನು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: Pushpa 2: ʻಪುಷ್ಪ 2ʼ ಅನಸೂಯಾ ಭಾರದ್ವಾಜ್ ಪಾತ್ರದ ಫಸ್ಟ್ ಲುಕ್ ಔಟ್!

Continue Reading
Advertisement
Kannada New Movie Aditya Shashikumar Kaadaadi Movie Lyrical song out
ಸ್ಯಾಂಡಲ್ ವುಡ್15 mins ago

Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್‌!

Viral Video
ವೈರಲ್ ನ್ಯೂಸ್15 mins ago

Viral Video: ಭಾರತ-ಚೀನಾ ಯೋಧರ ನಡುವೆ ಹಗ್ಗಜಗ್ಗಾಟ; ಗೆದ್ದವರು ಯಾರು? ವಿಡಿಯೊ ನೋಡಿ!

Aditi Prabhudeva is returning to reality show judge
ಕಿರುತೆರೆ31 mins ago

Aditi Prabhudeva: ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ!

Prajwal Revanna case
ಪ್ರಮುಖ ಸುದ್ದಿ37 mins ago

Prajwal Revanna Case: ಏರ್‌ಪೋರ್ಟ್‌ನಲ್ಲೇ ಎಸ್‌ಐಟಿ ಠಿಕಾಣಿ, ನಾಳೆ ಮಧ್ಯರಾತ್ರಿಯೇ ಪ್ರಜ್ವಲ್‌ ರೇವಣ್ಣ ವಶಕ್ಕೆ

Radhika Pandit
ಸ್ಯಾಂಡಲ್ ವುಡ್43 mins ago

Radhika Pandit: ನಟಿ ರಾಧಿಕಾ ಪಂಡಿತ್‌ ಕಮ್‌ ಬ್ಯಾಕ್‌ ಯಾವಾಗ? ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ

Ambareesh Birthday
ಸಿನಿಮಾ1 hour ago

Ambareesh Birthday: ರೆಬಲ್‌ ಸ್ಟಾರ್‌ 72 ನೇ ಹುಟ್ಟುಹಬ್ಬ; ಅಂಬಿ ಸ್ಮರಣಾರ್ಥ ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ

Ambareesh Birthday heartfelt note By sumalatha
ಸ್ಯಾಂಡಲ್ ವುಡ್1 hour ago

Ambareesh Birthday: ಅಂಬಿ ನೆನೆದು ಸುಮಲತಾ ಭಾವನಾತ್ಮಕ ಪೋಸ್ಟ್‌ !

Vastu Tips
ಧಾರ್ಮಿಕ1 hour ago

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಗಳು ಹೀಗಿರಬೇಕು

Mani Shankar Aiyar
ದೇಶ2 hours ago

Mani Shankar Aiyar: ಮಣಿಶಂಕರ್‌ ಅಯ್ಯರ್ ಮತ್ತೊಂದು ವಿವಾದ;‌ ಪಾಕ್‌ ಬಳಿಕ ಚೀನಾ ಪರ ಬ್ಯಾಟಿಂಗ್‌!

Uttarakaanda Movie Shivarajkumar Visits Savadatti Yallamma Temple After Uttarakaanda Movie
ಸ್ಯಾಂಡಲ್ ವುಡ್2 hours ago

Uttarakaanda Movie:  ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಶಿವರಾಜ್​ ಕುಮಾರ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ15 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು23 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌