Shraddha Kapoor: ಲ್ಯಾಂಬೊರ್ಗೀನಿ ಕಾರು ಖರೀದಿಸಿದ ಶ್ರದ್ಧಾ ಕಪೂರ್; ರೇಂಜ್ ರೋವರ್ ಜತೆ ಪೂಜಾ ಹೆಗ್ಡೆ ಪೋಸ್‌! - Vistara News

ಬಾಲಿವುಡ್

Shraddha Kapoor: ಲ್ಯಾಂಬೊರ್ಗೀನಿ ಕಾರು ಖರೀದಿಸಿದ ಶ್ರದ್ಧಾ ಕಪೂರ್; ರೇಂಜ್ ರೋವರ್ ಜತೆ ಪೂಜಾ ಹೆಗ್ಡೆ ಪೋಸ್‌!

Shraddha Kapoor: ಮತ್ತೊಂದೆಡೆ, ಪೂಜಾ ತನ್ನ ಹೊಸ ರೇಂಜ್ ರೋವರ್ ಎಸ್‌ವಿಯಲ್ಲಿ ಡ್ರೈವ್‌ಗಾಗಿ ಹೊರಡುವ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ. ನೀಲಿ ಅನಾರ್ಕಲಿಯಲ್ಲಿ ಕಾಣಿಸಿಕೊಂಡರು.

VISTARANEWS.COM


on

Shraddha Kapoor buys Lamborghini
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶ್ರದ್ಧಾ ಕಪೂರ್ (Shraddha Kapoor) ಮತ್ತು ಪೂಜಾ ಹೆಗ್ಡೆ ಈ ಬಾರಿ ದಸರಾವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ಶ್ರದ್ಧಾ ಕಪೂರ್ 4 ಕೋಟಿ ರೂಪಾಯಿ ಬೆಲೆಯ ಲ್ಯಾಂಬೊರ್ಗೀನಿ ಹುರಾಕಾನ್ ಕಾರು ಖರೀದಿಸಿದ್ದಾರೆ. ಪೂಜಾ ಅದೇ ಬೆಲೆಯ ತನ್ನ ಹೊಸ ಸಿಲ್ವರ್ ರೇಂಜ್ ರೋವರ್ ಎಸ್‌ವಿ ಜತೆ ಪೋಸ್‌ ಕೊಟ್ಟಿದ್ದಾರೆ.

ಪೂಜಾ ಚೌಧರಿ ಅವರು ಕೆಂಪು ಲ್ಯಾಂಬೊರ್ಗೀನಿ ಮುಂದೆ ಶ್ರದ್ಧಾ ಅವರೊಂದಿಗೆ ಪೋಸ್ ನೀಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. “ಇಂದು ನನಗೆ ನಿಜವಾದ ವಿಶೇಷ ಕ್ಷಣವಾಗಿದೆ! ನಂಬಲಾಗದಷ್ಟುʼʼಎಂದು ಬರೆದುಕೊಂಡಿದ್ದಾರೆ. ಕಾರು ಖರೀದಿಸಿದ ಬಳಿಕ ಅವರು ಮುಂಬೈ ರಸ್ತೆಗಳಲ್ಲಿ ಸುತ್ತಾಡಿದ್ದಾರೆ. ಈ ಕಾರು ಖರೀದಿ ಮಾಡಿದ್ದರಿಂದ ನಟಿಯ ಖುಷಿ ಹೆಚ್ಚಾಗಿದೆ.

ಲ್ಯಾಂಬೊರ್ಗೀನಿ ಹುರಾಕಾನ್ ಕಾರು ಗರಿಷ್ಠ ವೇಗ 310 ಕಿಲೋಮೀಟರ್​ ಇದೆ. ಈ ಕಾರಿನಲ್ಲಿ ಇಬ್ಬರು ಮಾತ್ರ ಕುಳಿತುಕೊಳ್ಳಬಹುದು. 5204 ಸಿಸಿ ಇಂಜಿನ್​ನ ಇದು ಹೊಂದಿದೆ. 9.6 ಸೆಕೆಂಡ್​ನಲ್ಲಿ ಜೀರೋದಿಂದ 100 ಕಿಲೋಮೀಟರ್ ವೇಗ ತಲುಪಬಹುದು. ವಿ10 ಇಂಜಿನ್​ ಹೊಂದಿದೆ.

ಮತ್ತೊಂದೆಡೆ, ಪೂಜಾ ತನ್ನ ಹೊಸ ರೇಂಜ್ ರೋವರ್ ಎಸ್‌ವಿಯಲ್ಲಿ ಡ್ರೈವ್‌ಗಾಗಿ ಹೊರಡುವ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ. ನೀಲಿ ಅನಾರ್ಕಲಿಯಲ್ಲಿ ಕಾಣಿಸಿಕೊಂಡರು. ಮನೆಯಲ್ಲಿ ಸಾಂಪ್ರದಾಯಿಕ ದಸರಾ ಹಬ್ಬದ ಬಗ್ಗೆ ಅದೇ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ದಸರಾ ಸಂದರ್ಭದಲ್ಲಿ, ಅವರ ಮುಂಬರುವ ಚಿತ್ರ ದೇವಾ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಲಾಯಿತು. ಚಿತ್ರದ ಮೊದಲ ಲುಕ್‌ ಔಟ್‌ ಆಗಿದೆ. ಶಾಹಿದ್ ಕಪೂರ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Shraddha Kapoor: ಕೂದಲಿಗೆ ಕತ್ತರಿ ಹಾಕಿದ ಶ್ರದ್ಧಾ ಕಪೂರ್‌; ಗಗನಯಾತ್ರಿ ಪಾತ್ರದಲ್ಲಿ ಸ್ಟಾರ್‌ ನಟಿ?

ಕೆಲವು ದಿನಗಳ ಹಿಂದೆಯಷ್ಟೇ ಪೂಜಾ ಹೆಗ್ಡೆ ಖ್ಯಾತ ಕ್ರಿಕೆಟಿಗನ ಜತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ ಎಂದು ವರದಿಯಾಗಿತ್ತು. ಮದುವೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆ ಎಂತಲೂ ವರದಿಯಾಗಿತ್ತು. ಆ ಖ್ಯಾತ ಕ್ರಿಕೆಟಿಗ ಯಾರು ಎಂಬುದರ ಬಗ್ಗೆ ಎಲ್ಲೂ ರಿವೀಲ್ ಆಗಿಲ್ಲ.ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ ಆದರೆ ತೆಲುಗು ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಿದ್ದವು. ಪೂಜಾ ಹೆಗ್ಡೆ ತೆಲುಗು ಸಿನಿಮಾ ಹಾಗೂ ಬಾಲಿವುಡ್​ನಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ಹಿಂದಿಯಲ್ಲಿ ಹಲವು ಸಿನಿಮಾ ಮಾಡಿದ್ದರೂ ಮೂವಿ ಯಾವುದೂ ಅಷ್ಟಾಗಿ ಹಿಟ್ ಆಗಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Naseeruddin Shah: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌ ಮೇಲೆ ಗರಂ ಆದ ನಟ ನಾಸಿರುದ್ದೀನ್ ಶಾ!

Naseeruddin Shah: ನಾಸಿರುದ್ದೀನ್ ಶಾ ಶೀಘ್ರದಲ್ಲೇ ವೆಬ್ ಸಿರೀಸ್‌ ʻಶೋಟೈಮ್‌ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಮಿತ್ ರಾಯ್ ಮತ್ತು ಮಿಹಿರ್ ದೇಸಾಯಿ ರಚಿಸಿದ್ದಾರೆ. ಅರ್ಚಿತ್ ಕುಮಾರ್ ನಿರ್ದೇಶಿಸಿದ್ದಾರೆ. ಮಲ್ಟಿ-ಸ್ಟಾರರ್ ವೆಬ್ ಸೀರೀಸ್ ಮಾರ್ಚ್ 8 ರಿಂದ ಸ್ಟ್ರೀಮ್ ಆಗಲಿದೆ.

VISTARANEWS.COM


on

Naseeruddin Shah Shouts At Fans At Delhi Airport
Koo

ಬೆಂಗಳೂರು: ಹಿರಿಯ ನಟ ನಾಸಿರುದ್ದೀನ್ ಶಾ (Naseeruddin Shah) ದೆಹಲಿ ವಿಮಾನ ನಿಲ್ದಾಣದಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾರ್ಕಿಂಗ್ ಸ್ಥಳಕ್ಕೆ ನಾಸಿರುದ್ದೀನ್ ಶಾ ಆಗಮಿಸುತ್ತಿದ್ದಾಗ, ಅವರ ಫ್ಯಾನ್ಸ್‌ ಒಂದೇ ಸಮನೆ ಸೆಲ್ಫಿಗಾಗಿ ನಟನ ಹಿಂದೆ ಮುಗಿಬಿದ್ದರು. ಈ ವೇಳೆ ನಟನಿಗೆ ಕಿರಿಕಿರಿ ಉಂಟಾಗಿದ್ದು, ಫ್ಯಾನ್ಸ್‌ ಮೇಲೆ ಕೂಗಾಡಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವೈರಲ್‌ ವಿಡಿಯೊದಲ್ಲಿ ನಟ ನಾಸಿರುದ್ದೀನ್ ಶಾ ಮಾಸ್ಕ್‌ ಧರಿಸಿದ್ದರು. ಫ್ಯಾನ್ಸ್‌ ಮೇಲೆ ನಟ ಕೂಗಾಡಿ ʻʻನೀವು ನನಗೆ ತುಂಬಾ ತೊಂದರೆ ಕೊಟ್ಟಿದ್ದೀರಿ. ನಿಮಗೆ ಅರ್ಥವಾಗುವುದಿಲ್ಲ ಇದುʼʼಎಂದು ಹೇಳಿದ್ದಾರೆ. ಆ ಬಳಿಕ ನಟ ಅಲ್ಲಿಂದ ಹೊರಟರು. ವೀಡಿಯೊ ಮಾಡುವ ಜನರು ಕೂಡ ನಟನ ಈ ವರ್ತನೆಗೆ ನಗುವುದು ಮತ್ತು ಚಪ್ಪಾಳೆ ತಟ್ಟುವುದು ಕೇಳಬಹದು. ಇದೀಗ ನಟನ ಈ ನಡವಳಿಕೆಗೆ ನೆಟ್ಟಿಗರು ಸಾಥ್‌ ಕೊಟ್ಟಿದ್ದಾರೆ. ʻʻನೀವು ಸರಿಯಾಗಿಯೇ ಮಾಡಿದ್ದೀರಿ ಸರ್ʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʻʻಅವರು ಕೂಡ ಮನುಷ್ಯರು. ಮಾಧ್ಯಮಗಳು ಯಾವಾಗಲೂ ಹೀಗೆʼʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ನಾಸಿರುದ್ದೀನ್ ಶಾ ಶೀಘ್ರದಲ್ಲೇ ವೆಬ್ ಸಿರೀಸ್‌ ʻಶೋಟೈಮ್‌ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಮಿತ್ ರಾಯ್ ಮತ್ತು ಮಿಹಿರ್ ದೇಸಾಯಿ ರಚಿಸಿದ್ದಾರೆ. ಅರ್ಚಿತ್ ಕುಮಾರ್ ನಿರ್ದೇಶಿಸಿದ್ದಾರೆ. ಮಲ್ಟಿ-ಸ್ಟಾರರ್ ವೆಬ್ ಸೀರೀಸ್ ಮಾರ್ಚ್ 8 ರಿಂದ ಸ್ಟ್ರೀಮ್ ಆಗಲಿದೆ.

ಇದನ್ನೂ ಓದಿ: Naseeruddin Shah: ದೇಶಭಕ್ತಿ ಸಿನಿಮಾ ಬಗ್ಗೆ ನಾಸಿರುದ್ದೀನ್ ಶಾ ಕಟು ನುಡಿ; ನಟಿ ಪಲ್ಲವಿ ಜೋಶಿ ಮಾರ್ಮಿಕ ಪ್ರತಿಕ್ರಿಯೆ

ನಾಸಿರುದ್ದೀನ್ ಶಾ ಮೇಲೆ ಇತ್ತೀಚೆಗೆ ಲವ್ ಜಿಹಾದ್ ಆರೋಪ ಕೇಳಿ ಬಂದಿತ್ತು. ನಟ 1982ರಲ್ಲಿ ನಟಿ ರತ್ನಾ ಪಾಠಕ್ ಅವರೊಂದಿಗೆ ಅಂತರ್ ಧರ್ಮೀಯ ವಿವಾಹವಾಗಿದ್ದರು. ಇದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ನಾಸಿರುದ್ದೀನ್ ಶಾ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ‘ಹಿಂದೂ ಯುವತಿಯನ್ನು ಮದುವೆಯಾಗಲು ನನಗೆ ಯಾವುದೇ ಹಿಂಜರಿಕೆ ಇರಲಿಲ್ಲ, ರತ್ನಾ ನನ್ನನ್ನು ಮದುವೆಯಾಗಲು ಹಿಂಜರಿಯಲಿಲ್ಲ’ ಎಂದು ಹೇಳಿದ್ದರು.

Continue Reading

ಕ್ರೀಡೆ

Janhvi Kapoor : ನಟಿ ಜಾಹ್ನವಿ ಕಪೂರ್​ಗೆ ಆರ್​​ಸಿಬಿಯ ಇಬ್ಬರು ಆಟಗಾರರು ಇಷ್ಟ

Janhvi Kapoor : ಜಾಹ್ನವಿ ಕಪೂರ್ ಅವರು ಹೊಸ ತಲೆಮಾರಿನ ನಟಿಯರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.

VISTARANEWS.COM


on

Janhavi Kapoor
Koo

ಬೆಂಗಳೂರು: ಬಾಲಿವುಡ್ ಮತ್ತು ಕ್ರಿಕೆಟ್ ನಡುವಿನ ನಂಟು ಹಲವು ವರ್ಷಗಳದ್ದು. ಕ್ರಿಕೆಟಿಗರು ಹಾಗೂ ಬಾಲಿವುಡ್ ನಟಿಯರು ಜತೆಯಾಗಿ ಸುತ್ತಾಡುವುದು ಮದುವೆಯಾಗುವುದು ಮಾಮೂಲಿಯಾಗಿದೆ. ಕಾಲ ಕಾಲಕ್ಕೆ ಬರುವ ಹೊಸ ನಟ- ನಟಿಯರು ಕ್ರಿಕೆಟಿಗರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಂತೆಯೆ ಸದ್ಯ ಬಾಲಿವುಡ್​ನ ಸೆನ್ಷೇಷನ್​ ಜಾಹ್ನವಿ ಕಪೂರ್ (Janhvi Kapoor) ತಮ್ಮ ನೆಚ್ಚಿನ ಕ್ರಿಕೆಟಿಗರು ಯಾರು ಎಂಬುದನ್ನು ಹೇಳಿಕೊಂಡಿದ್ದಾರೆ. ಆರ್​ಸಿಬಿ ಪಾಲಿಗೆ ಖುಷಿಯ ವಿಚಾರ ಏನೆಂದರೆ ಅವರಿಬ್ಬರೂ ಆರ್​​ಸಿಬಿ ಆಟಗಾರರು.

ಜಾಹ್ನವಿ ಕಪೂರ್​ ಹೊಸ ತಲೆಮಾರಿನ ನಟಿಯರಲ್ಲಿ ದೊಡ್ಡ ಅಭಿಮಾನಿ ಬಳವನ್ನು ಹೊಂದಿದೆ. ಧಡಕ್, ರೂಹಿ ಮತ್ತು ಮಿಲಿಯಂತಹ ಚಲನಚಿತ್ರಗಳಲ್ಲಿ ಅದ್ಭುತ ಅಭಿನಯವನ್ನು ನೀಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​​ಸಿಬಿ) ಇಬ್ಬರು ಆಟಗಾರರಾದ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ತಮ್ಮ ನೆಚ್ಚಿನವರು ಎಂದು ಬಹಿರಂಗಪಡಿಸಿದ್ದಾರೆ.

ಆಜ್ ತಕ್ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಆರಂಭದಲ್ಲಿ ತಾವು ಕ್ರಿಕೆಟ್ ನೋಡುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಈಗ ಕ್ರಿಕೆಟ್​ ನೋಡಲೇಬೇಕಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಅವರು ತಮ್ಮ ಹೊಸ ಚಿತ್ರಕ್ಕಾಗಿ ದಿನೇಶ್​ ಕಾರ್ತಿಕ್​ ತರಬೇತಿ ನೀಡಿರುವ ವಿಷಯವನ್ನೂ ಹೇಳಿಕೊಂಡಿದ್ದಾರೆ. ಈ ವೇಳೆ ದಿನೇಶ್​ ಇಷ್ಟವಾಗಿದ್ದಾರೆ ಎಂದು ಹೇಳಿದ್ದಾರೆ.

“ವಿರಾಟ್ ಕೊಹ್ಲಿ ಸರ್ ಮತ್ತು ದಿನೇಶ್ ಕಾರ್ತಿಕ್ ವಿಶ್ವದ ನನ್ನ ನೆಚ್ಚಿನ ಕ್ರಿಕೆಟಿಗರು. ಕಾರ್ತಿಕ್ ಅವರು ಕಷ್ಟಪಟ್ಟು ಕೆಲಸ ಮಾಡುವುದನ್ನು ನಾನು ನೋಡಿದ್ದೇನೆ, ಅವರು ತುಂಬಾ ಸುಂದರ ವ್ಯಕ್ತಿ” ಎಂದು ಜಾನ್ವಿ ಕಪೂರ್ ಹೇಳಿದರು.

‘ಮಿಸ್ಟರ್ ಆ್ಯಂಡ್ ಮಿಸಸ್ ಮಹಿ’ ಚಿತ್ರವು ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕತೆಯ ಸುತ್ತ ಸುತ್ತುತ್ತದೆ, ಅವರ ಕ್ರಿಕೆಟ್ ಪ್ರಯಾಣವನ್ನು ಆಧರಿಸಿದ ‘ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಎಂಬ ಜೀವನಚರಿತ್ರೆ ಈಗಾಗಲೇ ಬಂದಿದೆ. ಇದೀಗ ಮತ್ತೊಂದು ಚಿತ್ರ ತೆರೆ ಕಾಣಲಿದೆ.

ಇದನ್ನೂ ಓದಿ : Sajeevan Sajana : ಲಾಸ್ಟ್​ ಬಾಲ್​ನಲ್ಲಿ ಸಿಕ್ಸರ್ ಬಾರಿಸಿ ಮಿಂಚಿದ ಬುಡಕಟ್ಟು ಸಮುದಾಯದ ಸಜೀವನ್​ ಸಜನಾ

ಕೊಹ್ಲಿ ಮತ್ತು ಕಾರ್ತಿಕ್ ಇಬ್ಬರೂ ಭಾರತಕ್ಕಾಗಿ ಆಡುವುದರ ಹೊರತಾಗಿ, ಆರ್​ಸಿಬಿಯಲ್ಲಿ ಸಹ ಆಟಗಾರರಾಗಿದ್ದಾರೆ – ಪ್ರಸ್ತುತ ಕೊಹ್ಲಿ ತಮ್ಮ ಕೌಟುಂಬಿಕ ಕಾರಣಕ್ಕಾಗಿ ಕ್ರಿಕೆಟ್​ನಿಂದ ದೂರ ಉಳಿದಿದ್ದರೆ, ಕಾರ್ತಿಕ್ ಪ್ರಸ್ತುತ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೀಕ್ಷಕವಿವರಣೆಯಲ್ಲಿ ತೊಡಗಿದ್ದಾರೆ.

Continue Reading

ಸಿನಿಮಾ

Shah Rukh Khan: ಪ್ರಿಯಾಂಕಾ ಜತೆ ರಹಸ್ಯವಾಗಿ ಡೇಟಿಂಗ್ ಮಾಡ್ತಿದ್ರಾ ಶಾರುಖ್‌?

Shah Rukh Khan: ಡಾನ್ 2 ಚಿತ್ರೀಕರಣದ ಸಮಯದಲ್ಲಿ ಶಾರುಖ್ ಮತ್ತು ಪ್ರಿಯಾಂಕಾ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ಅವರ ಸ್ನೇಹಿತ ವಿವೇಕ್ ವಾಸ್ವಾನಿ ಹೇಳಿದ್ದೇನು? ಇಲ್ಲಿದೆ ವಿವರ.

VISTARANEWS.COM


on

Shah Rukh Khan Friend BREAKS Silence on Rumour of Him Dating
Koo

ಬೆಂಗಳೂರು: ಶಾರುಖ್ ಖಾನ್ (Shah Rukh Khan) ಅವರ ಆಪ್ತ ಸ್ನೇಹಿತ ವಿವೇಕ್ ವಾಸ್ವಾನಿ (Vivek Vaswani)ʻ ರಾಜು ಬನ್ ಗಯಾ ಜಂಟಲ್‌ಮ್ಯಾನ್‌ʼ ಸಿನಿಮಾ ಮೂಲಕ ನಟನೆಯನ್ನು ಪ್ರಾರಂಭಿಸಿದ್ದರು. ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಶಾರುಖ್ ಡೇಟಿಂಗ್ ವದಂತಿಗಳ ಬಗ್ಗೆ ಸಂದರ್ಶನವೊಂದರಲ್ಲಿ ಅವರೀಗ ಮಾತನಾಡಿದ್ದಾರೆ. ಡಾನ್ 2 ಚಿತ್ರೀಕರಣದ ಸಮಯದಲ್ಲಿ ಶಾರುಖ್ ಮತ್ತು ಪ್ರಿಯಾಂಕಾ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ವಿವೇಕ್ ವಾಸ್ವಾನಿ ಹೇಳಿದ್ದು ಹೀಗೆ:

ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ವಿವೇಕ್ ವಾಸ್ವಾನಿ ಮಾತನಾಡಿ ʻʻಶಾರುಖ್‌ ಕುರಿತು ಇರುವ ವದಂತಿಗಳು ಸುಳ್ಳು. ನಾನು ಶಾರುಖ್‌ ಒಂದೇ ಮನೆಯಲ್ಲಿ ಇದ್ದಿದ್ದು. ನನ್ನ ಜತೆ ಹೆತ್ತವರು ಇದ್ದರು. ಶಾರುಖ್‌ಗೆ ಆಗ ಇದಿದ್ದು, ವೃತ್ತಿಜೀವನದ ಬಗ್ಗೆ ಒತ್ತಡ. ಗೌರಿಯನ್ನು ಮದುವೆಯಾಗಬೇಕಿತ್ತು, ನನಗೆ ಗೊತ್ತಿರುವ ಸಮಯದಿಂದ, ಅವನು ಪ್ರೀತಿ ಮಾಡಿದ್ದು ಒಬ್ಬರನ್ನೇ. ಅದು ಗೌರಿ ಅವರನ್ನು ಮಾತ್ರʼʼ ಎಂದರು.

ಬಾಲಿವುಡ್‌ನಲ್ಲಿ ಎರಡು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ಪ್ರಿಯಾಂಕಾ ಅವರು ಶಾಹಿದ್ ಕಪೂರ್, ಹರ್ಮನ್ ಬವೇಜಾ ಮತ್ತು ಶಾರುಖ್‌ ಹೆಸರುಗಳ ಜತೆ ತುಳುಕು ಹಾಕಿಕೊಂಡಿತ್ತು. ಕೊನೆಗೆ ಪ್ರಿಯಾಂಕಾ 2018ರಲ್ಲಿ ನಿಕ್ ಜೋನಾಸ್ ಅವರೊಂದಿಗೆ ಮದುವೆಯಾದರು. ಮಾಲತಿ ಮೇರಿ ಚೋಪ್ರಾ ಜೋನಾಸ್ ಎಂಬ ಮಗಳೂ ಇದ್ದಾಳೆ.

ಇದನ್ನೂ ಓದಿ: Shah Rukh Khan: ಹಾಲಿವುಡ್‌ನಿಂದ ನನಗೆ ಈವರೆಗೂ ಆಫರ್‌ ಬಂದಿಲ್ಲ ಎಂದ ಶಾರುಖ್ ಖಾನ್

ಪ್ರತಿಷ್ಠಿತ ದಾದಾಸಾಹೇಬ್‌ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಅವಾರ್ಡ್‌ 2024 (Dadasaheb Phalke International Film Festival Awards 2024)ರ ವಿಜೇತರ ಹೆಸರನ್ನು ಇತ್ತೀಚೆಗೆ ಘೋಷಿಸಲಾಗಿತ್ತು. ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ (Shah Rukh Khan) ಅಭಿನಯದ ʼಜವಾನ್‌ʼ (Jawan) ಚಿತ್ರ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

Continue Reading

ಸಿನಿಮಾ

WPL 2024: ಆಟಗಾರ್ತಿ ಮೆಗ್ ಲ್ಯಾನಿಂಗ್‌ಗೆ ಸಿಗ್ನೇಚರ್ ಸ್ಟೆಪ್ಸ್‌ ಹೇಳಿಕೊಟ್ಟ ಶಾರುಖ್‌: ವಿಡಿಯೊ ವೈರಲ್‌!

WPL 2024: ವುಮೆನ್‌ ಪ್ರೀಮಿಯರ್‌ ಲೀಗ್‌ ಆರಂಭಕ್ಕೂ ಮೊದಲು ಭಾರತೀಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ತಂಡದ ಜತೆಗೂ ಶಾರುಖ್‌ ಸಮಯ ಕಳೆದಿದ್ದಾರೆ. ಇದೇ ವೇಳೆ ಅವರು ಆಸ್ಟ್ರೇಲಿಯಾ ಆಟಗಾರ್ತಿಗೆ ತಮ್ಮ ಸಿಗ್ನೇಚರ್‌ ಸ್ಟೆಪ್ಸ್‌ ಹೇಳಿಕೊಟ್ಟರು.

VISTARANEWS.COM


on

Shah Rukh Khan teaches Meg Lanning his iconic pose
Koo

ಬೆಂಗಳೂರು: ಮಹಿಳೆಯರ ವರ್ಣರಂಜಿತ ಟಿ20 ಕ್ರಿಕೆಟ್​ ಲೀಗ್ ಡಬ್ಲ್ಯೂಪಿಎಲ್ (WPL 2024) 2ನೇ ಆವೃತ್ತಿಗೆ ಇಂದು (ಫೆ.23) ಚಾಲನೆ ಸಿಗಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(chinnaswamy stadium) ಬಾಲಿವುಡ್‌ ಗ್ಲ್ಯಾಮರ್‌ನೊಂದಿಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಹಿಳಾ ಕ್ರಿಕೆಟ್ ತಂಡಕ್ಕೆ ಬೆಂಬಲ ನೀಡಲು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್‌ಖಾನ್‌ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಈ ವೇಳೆ ಆಸ್ಟ್ರೇಲಿಯಾ ಕ್ರಿಕೆಟ್‌ ಆಟಗಾರ್ತಿ ಮೆಗ್ ಲ್ಯಾನಿಂಗ್ (Meg Lanning) ಅವರಿಗೆ ತಮ್ಮ ಸಿಗ್ನೇಚರ್ ಸ್ಟೆಪ್ಸ್‌ ಹೇಳಿಕೊಟ್ಟಿದ್ದಾರೆ ಶಾರುಖ್‌. ಜತೆಗೆ ಶಾತುಖ್‌ ಅವರು ಮೈದಾನದಲ್ಲಿ ತಮ್ಮ ಸಣ್ಣ ಪುಟ್ಟ ಚೇಷ್ಟೆಗಳನ್ನು ಮಾಡಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ʻಚಕ್ ದೇ! ಇಂಡಿಯಾʼ ಶಾರುಖ್‌ ನಟನೆಯ ಸಿನಿಮಾ. 2007ರಲ್ಲಿ ತೆರೆ ಕಂಡಿತ್ತು. ಭಾರತದ ಹಾಕಿ ಕುರಿತ ಈ ಸಿನಿಮಾ ಇತ್ತು. ಇದರಲ್ಲಿ ಶಾರುಖ್‌ ಅವರು ʻಕೋಚ್ ಕಬೀರ್ ಖಾನ್ʼ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ ಭಾರತೀಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ತಂಡದ ಜತೆಗೂ ಶಾರುಖ್‌ ಸಮಯ ಕಳೆದಿದ್ದಾರೆ. ʻಕೋಚ್ ಕಬೀರ್ ಖಾನ್’ ಪ್ರೀತಿಯಿಂದ ನಮಗೆ ಹಾರೈಸಿದರು ಎಂದು ಜೆಮಿಮಾ ರಾಡ್ರಿಗಸ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ವೀಡಿಯೊಗಳಲ್ಲಿ, ಶಾರುಖ್ ಅವರು ಮುಂಬರುವ ಪಂದ್ಯದ ಆಟಗಾರರಿಗೆ ಶುಭ ಹಾರೈಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: WPL 2024: ನಾಳೆಯಿಂದ ಡಬ್ಲ್ಯೂಪಿಎಲ್ ಆರಂಭ; ವೇಳಾಪಟ್ಟಿ, ತಂಡಗಳ ಮಾಹಿತಿ ಹೀಗಿದೆ

ಅಷ್ಟೇ ಅಲ್ಲದೆ, ಉದ್ಘಾಟನಾ ಸಮಾರಂಭಕ್ಕೆ ಶಾರುಖ್‌ ಪಠಾಣ್ ಸಿನಿಮಾ ಹಾಡಿಗೆ ಸ್ಟೆಪ್ಸ್‌ ಕೂಡ ಹಾಕಲಿದ್ದಾರೆ. ರಿಹರ್ಸಲ್‌ ಮಾಡುತ್ತಿರುವ ವಿಡಿಯೊಗಳು ಕೂಡ ವೈರಲ್‌ ಆಗಿವೆ.

ಮಾರ್ಚ್ 17ಕ್ಕೆ ಫೈನಲ್​


ಕಳೆದ ವರ್ಷದ ಸಂಪೂರ್ಣ ಕೂಟವು ಮುಂಬೈನಲ್ಲಿ ನಡೆದಿದ್ದು, ಈ ಬಾರಿ ಬೆಂಗಳೂರು ಮತ್ತು ನವದೆಹಲಿಯಲ್ಲಿ ನಡೆಯಲಿದೆ. ನಾಳೆ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್​ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯ ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಸಂಜೆ 7:30ಕ್ಕೆ ಆರಂಭವಾಗಲಿವೆ. ಮಾರ್ಚ್ 15 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.

Continue Reading
Advertisement
Star travel Fashion mokshith pai
ಫ್ಯಾಷನ್2 mins ago

Star travel Fashion: ಪಾರು ಖ್ಯಾತಿಯ ಮೋಕ್ಷಿತಾ ಪೈ ದುಬೈ ಟ್ರಾವೆಲ್‌ ಫ್ಯಾಷನ್‌ ವಿಶೇಷ ಇದು!

Girish Kasaravalli first film Ghatashraddha is another feather
ಸ್ಯಾಂಡಲ್ ವುಡ್3 mins ago

Ghatashraddha Movie: ಗಿರೀಶ್ ಕಾಸರವಳ್ಳಿಯವರ ಮೊದಲ ಚಿತ್ರ ‘ಘಟಶ್ರಾದ್ಧ ಚಿತ್ರಕ್ಕೆ ಇನ್ನೊಂದು ಪ್ರಶಸ್ತಿ!

Boy dies after being hit by a roll while playing jokali in Davangere
ಕರ್ನಾಟಕ9 mins ago

Davanagere News : ಕುತ್ತಿಗೆಗೆ ಬಿಗಿದ ಜೋಕಾಲಿ ಹಗ್ಗ; 4ನೇ ಕ್ಲಾಸ್‌ ಹುಡುಗ ದುರ್ಮರಣ

Drunk husband assaults wife
ಬೆಂಗಳೂರು44 mins ago

Assault Case :‌ ಹೊಡಿತಾನೆ ಬಡಿತಾನೆ ನನ್ನ ಗಂಡ; ಅನುಮಾನ ಪಿಶಾಚಿ ಕಾಟಕ್ಕೆ ಬೇಸತ್ತಳು ಹೆಂಡತಿ

indian penal code
ದೇಶ46 mins ago

New Laws: ಐಪಿಸಿ ಮೂಲೆಗೆ; ಜುಲೈ 1ರಿಂದಲೇ ಹೊಸ ಕಾನೂನು ಜಾರಿ, ಏನೆಲ್ಲ ಬದಲು?

bankok
ವೈರಲ್ ನ್ಯೂಸ್55 mins ago

Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

Amazon Sweets
ವಾಣಿಜ್ಯ1 hour ago

Empower HER Exhibition : ಎಫ್‌ಕೆಸಿಸಿಐ ಆವರಣದಲ್ಲಿ ಮಹಿಳಾ ಉದ್ದಿಮೆದಾರರಿಂದ ಯಶಸ್ವಿ ವಸ್ತು ಪ್ರದರ್ಶನ ಮತ್ತು ಮಾರಾಟ

Actor Manoj Rajput Arrested On Allegations Of Raping
ಸಿನಿಮಾ1 hour ago

Actor Manoj Rajput: ಅತ್ಯಾಚಾರ ಎಸಗಿದ ಆರೋಪದ ಮೇಲೆ ನಟ ಮನೋಜ್ ರಜಪೂತ್ ಬಂಧನ

40 percent commission Court summons CM No defamation if advertised says Siddaramaiah
ರಾಜಕೀಯ1 hour ago

40 percent commission: ಸಿಎಂಗೆ ಕೋರ್ಟ್‌ ಸಮನ್ಸ್;‌ ಜಾಹೀರಾತು ಕೊಟ್ಟರೆ ಮಾನನಷ್ಟ ಆಗಲ್ಲ: ವಕೀಲರು ಉತ್ತರಿಸುತ್ತಾರೆಂದ ಸಿದ್ದರಾಮಯ್ಯ

Shah Rukh Kahan
ಪ್ರಮುಖ ಸುದ್ದಿ1 hour ago

Shah rukh Khan : ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಶಾರುಖ್​ ಖಾನ್​

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Varthur Santhosh
ಮಂಡ್ಯ4 hours ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ11 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ23 hours ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು1 day ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ1 day ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು2 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ2 days ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ4 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

ಟ್ರೆಂಡಿಂಗ್‌