ಸಂಪಾದಕೀಯ: ಸ್ಫೋಟ ಆಘಾತಕಾರಿ, ಕೇರಳದ ಮತಾಂಧರನ್ನು ಮಟ್ಟ ಹಾಕಿ - Vistara News

ದೇಶ

ಸಂಪಾದಕೀಯ: ಸ್ಫೋಟ ಆಘಾತಕಾರಿ, ಕೇರಳದ ಮತಾಂಧರನ್ನು ಮಟ್ಟ ಹಾಕಿ

ಇಡೀ ದೇಶದಲ್ಲೇ ಕೇರಳ ಮೂಲಭೂತವಾದಿಗಳ ಆಡೊಂಬೊಲವಾಗಿ, ಒಂದಲ್ಲ ಒಂದು ಹಿಂಸಾಕೃತ್ಯಗಳ ತವರಾಗಿ ಮಾರ್ಪಟ್ಟಿದೆ. ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಮತ ಬ್ಯಾಂಕ್‌ ರಾಜಕಾರಣದ ಫಲವಾಗಿ ಕೇರಳದಲ್ಲಿ ಉಗ್ರ ಸಂಘಟನೆಗಳಿಗೆ ಪುಷ್ಟಿ ಸಿಗುತ್ತಿದೆ. ಇದು ಕೇರಳ ಮಾತ್ರವಲ್ಲ, ಇಡೀ ದೇಶಕ್ಕೇ ಅಪಾಯಕಾರಿಯಾಗಿ ಪರಿಣಮಿಸಿದೆ.

VISTARANEWS.COM


on

Bomb Blast
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೇರಳದ ಎರ್ನಾಕುಲಂನ ಚರ್ಚ್‌ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜೆಹೊವಾಹ್ ವಿಟ್ನೆಸಸ್ ಸಮಾವೇಶದಲ್ಲಿ ಸರಣಿ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರು ಪ್ರಾಣ ಕಳೆದುಕೊಂಡು, ಮೂವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಕಳವಳಕಾರಿ. ಮಕ್ಕಳೂ ಸೇರಿದಂತೆ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಪೊಲೀಸರ ಪ್ರಾರಂಭಿಕ ತನಿಖೆ ಪ್ರಕಾರ ಇದು ದುಷ್ಕೃತ್ಯ ಎನ್ನುವುದು ಖಚಿತವಾಗಿದೆ. ಸಭಾಂಗಣದ ಕೆಲವೆಡೆ ಟಿಫನ್‌ ಬಾಕ್ಸ್‌ನಲ್ಲಿ ಸುಧಾರಿತ ಸ್ಫೋಟಕಗಳನ್ನು ಇರಿಸಿ ಕುಕೃತ್ಯ ಎಸಗಿರುವುದು ಖಚಿತವಾಗಿದೆ. ಇದೊಂದು ಹೇಯ ಕೃತ್ಯ ಮತ್ತು ಖಂಡನೀಯ.

ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಈ ಸ್ಫೋಟದ ಜವಾಬ್ದಾರಿ ಹೊತ್ತಿದ್ದು, ವಿಡಿಯೊ ಮೂಲಕ ತಾನು ಎಸಗಿದ ಕೃತ್ಯವನ್ನು ವಿವರಿಸಿದ್ದಾನೆ ಮತ್ತು ಪೊಲೀಸರಿಗೆ ಶರಣಾಗಿದ್ದಾನೆ. ಕ್ರಿಶ್ಚಿಯನ್ ಪಂಥವನ್ನು ಗುರಿಯಾಗಿಸಿ ತಾನು ಈ ಸ್ಫೋಟ ನಡೆಸಿದೆ ಎನ್ನುವುದನ್ನು ಆತ ವಿವರಿಸಿದ್ದಾನೆ. ಆರೋಪಿ ಡೊಮಿನಿಕ್ ಮಾರ್ಟೀನ್ ಕೂಡ, ಭಾನುವಾರ ಬೆಳಗ್ಗೆ ಕಾರ್ಯಕ್ರಮ ಆಯೋಜಿಸಿದ್ದ ಜೆಹೊವಾಹ್ ವಿಟ್ನೆಸಸ್ ಗುಂಪಿನ ಸದಸ್ಯ ಎಂದು ತಿಳಿದು ಬಂದಿದೆ. ತಾನು ಎಸಗಿರುವ ಕೃತ್ಯಕ್ಕೆ ಆರೋಪಿ ಡೊಮಿನಿಕ್ ಮಾರ್ಟೀನ್ ಪೊಲೀಸರಿಗೆ ಸಾಕ್ಷ್ಯವನ್ನೂ ಒದಗಿಸಿರುವುದು ಆಶ್ಚರ್ಯಕರ ಮತ್ತು ವಿಲಕ್ಷಣ ಸಂಗತಿಯಾಗಿದೆ. ತಾನು ಜೆಹೊವಾಹ್ ವಿಟ್ನೆಸಸ್ ಬೋಧನೆಗಳನ್ನು ಒಪ್ಪುವುದಿಲ್ಲ. ಹಾಗಾಗಿ ಅವರ ಚಟುವಟಿಕೆಗಳನ್ನು ನಿಲ್ಲಿಸಲು ಈ ಕೃತ್ಯ ಎಸಗಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದಾನೆ. ಈ ಕೃತ್ಯ ಎಸಗಿರುವುದು ಇದೇ ವ್ಯಕ್ತಿಯೇ ಅಥವಾ ಇದು ದಾರಿ ತಪ್ಪಿಸುವ ಉಪಾಯವೇ ಎಂಬ ಬಗ್ಗೆಯೂ ಪೊಲೀಸರು ಸಮಗ್ರ ತನಿಖೆ ನಡೆಸಬೇಕಿದೆ.

ಇಡೀ ದೇಶದಲ್ಲೇ ಕೇರಳ ಮೂಲಭೂತವಾದಿಗಳ ಆಡೊಂಬೊಲವಾಗಿ, ಒಂದಲ್ಲ ಒಂದು ಹಿಂಸಾಕೃತ್ಯಗಳ ತವರಾಗಿ ಮಾರ್ಪಟ್ಟಿದೆ. ದಶಕಗಳ ಹಿಂದೆ ದೇಶಾದ್ಯಂತ ಭಯೋತ್ಪಾದಕ ಕೃತ್ಯ ಎಸಗುತ್ತಿದ್ದ ʼಸಿಮಿʼ ಸಂಘಟನೆಯ ಕ್ರಿಮಿಗಳು ಕುಕೃತ್ಯಗಳ ಜಾಲವನ್ನು ಕೇರಳದಲ್ಲೇ ಕುಳಿತು ಹೆಣೆಯುತ್ತಿದ್ದರು. ಸಿರಿಯಾ ಮತ್ತಿತರ ಇಸ್ಲಾಮಿಕ್‌ ದೇಶಗಳಲ್ಲಿ ಬಾಲ ಬಿಚ್ಚಿ ಕೆಲ ಕಾಲ ವಿಶ್ವವನ್ನೇ ಭೀತಿಯಲ್ಲಿ ಮುಳುಗಿಸಿದ್ದ ಐಸಿಸ್‌ ಉಗ್ರರು ಸಕ್ರಿಯವಾಗಿದ್ದುದೂ ಕೇರಳದಲ್ಲೇ. ಲವ್‌ ಜಿಹಾದ್‌ ಜಾಲ ಮೊದಲು ಸುದ್ದಿಯಾಗಿದ್ದು ಈ ರಾಜ್ಯದಲ್ಲೇ. ಕೇರಳದ ಹಲವಾರು ಹಿಂದೂ ಮತ್ತು ಕ್ರಿಶ್ಚಿಯನ್‌ ಯುವತಿಯರನ್ನು ಲವ್‌ ಜಿಹಾದ್‌ ಖೆಡ್ಡಾಗೆ ಬೀಳಿಸಿ ಸಿರಿಯಾ ಮತ್ತಿತರ ಕಡೆಗಳಲ್ಲಿನ ಇಸ್ಲಾಮಿಕ್‌ ಉಗ್ರರ ಕೈಗೆ ಒಪ್ಪಿಸಿ ಕ್ರೌರ್ಯ ಮೆರೆದವರ ನೆಲೆ ಕೇರಳ ಎನ್ನುವುದನ್ನು ಮರೆಯುವಂತಿಲ್ಲ. ಹಲವಾರು ಮೂಲಭೂತ ಸಂಘಟನೆಗಳು ಕೇರಳದಲ್ಲಿ ಸಕ್ರಿಯವಾಗಿ ಇಡೀ ದೇಶದಲ್ಲಿ ಭೀತಿ ಹರಡುತ್ತಿವೆ. ಕೆಲ ತಿಂಗಳ ಹಿಂದೆ ಮತಾಂಧನೊಬ್ಬ ರೈಲ್ವೆ ಬೋಗಿಯಲ್ಲಿ ಮಲಗಿದ ಅಮಾಯಕರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಸಾಯಿಸಿದ್ದ. ಈ ಘಟನೆ ನಡೆದಿದ್ದೂ ಕೇರಳದಲ್ಲೇ. ದೇಶದ ಯಾವುದೇ ಮೂಲೆಯಲ್ಲಿ ವಿಧ್ವಂಸಕ ಕೃತ್ಯ ನಡೆದರೂ ಅದರ ಬೇರು ಇರುವುದು ಕೇರಳದಲ್ಲಿ ಎನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ಕಳೆದ ಹಲವು ದಶಕಗಳಿಂದ ಮತಾಂಧ ಶಕ್ತಿಗಳು ಕೇರಳದ ಹಿಂದೂ ಮತ್ತು ಕ್ರೈಸ್ತರ ಮೇಲೆ ದಾಳಿ ನಡೆಸುತ್ತ, ಸರಣಿ ಕೊಲೆಗಳನ್ನು ನಡೆಸುತ್ತ ಬಂದಿವೆ.

ಇದನ್ನೂ ಓದಿ: ಸಂಪಾದಕೀಯ: ಕಳಪೆ ಕ್ರಿಕೆಟ್ ಅಂಪೈರಿಂಗ್, ತಂತ್ರಜ್ಞಾನ ಆಧರಿತ ತೀರ್ಪಿನಲ್ಲೂ ವ್ಯತ್ಯಯ ಆಗದಿರಲಿ

ಕೇರಳದಲ್ಲಿ ನಿರಂತರವಾಗಿ ಎಡ ಪಕ್ಷಗಳು ಮತ್ತು ಕಾಂಗ್ರೆಸ್‌ ಸರದಿಯಂತೆ ಅಧಿಕಾರ ನಡೆಸುತ್ತ ಬಂದಿವೆ. ಕೇರಳದಲ್ಲಿ ಮೂಲಭೂತವಾದಿ ಸಂಘಟನೆಗಳು ಬಲಗೊಳ್ಳಲು, ಅಲ್ಲಿ ನಿರಂತರವಾಗಿ ಒಂದಲ್ಲ ಒಂದು ಭಯೋತ್ಪಾದಕ ಘಟನೆಗಳು ನಡೆಯಲು ಇಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳೇ ಹೊಣೆ. ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಮತ ಬ್ಯಾಂಕ್‌ ರಾಜಕಾರಣದ ಫಲವಾಗಿ ಕೇರಳದಲ್ಲಿ ಉಗ್ರ ಸಂಘಟನೆಗಳಿಗೆ ಪುಷ್ಟಿ ಸಿಗುತ್ತಿದೆ. ಇದು ಕೇರಳ ಮಾತ್ರವಲ್ಲ, ಇಡೀ ದೇಶಕ್ಕೇ ಅಪಾಯಕಾರಿಯಾಗಿದೆ. ಇತ್ತೀಚೆಗೆ ಕೇರಳದಲ್ಲಿ ಹಮಾಸ್‌ ಉಗ್ರರ ಪರ ಕಾರ್ಯಕ್ರಮವನ್ನೇ ನಡೆಸಲಾಗಿದೆ. ಅಷ್ಟೇ ಅಲ್ಲ ಹಮಾಸ್‌ ಉಗ್ರನೊಬ್ಬ ಆನ್‌ಲೈನ್‌ ಮೂಲಕ ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾನೆ ಎಂದು ವರದಿಯಾಗಿದೆ. ಇದು ಕೇರಳದಲ್ಲಿನ ಮತಾಂಧ ವಾತಾವರಣಕ್ಕೆ ತಾಜಾ ಸಾಕ್ಷಿಯಷ್ಟೆ.

ಎನ್‌ಐಎ ಇತ್ಯಾದಿ ಕೇಂದ್ರದ ತನಿಖಾ ಸಂಸ್ಥೆಗಳು ಕೇರಳದಲ್ಲಿನ ಮೂಲಭೂತವಾದಿ ಚಟುವಟಿಕೆಗಳ ಮೇಲೆ ಮತ್ತಷ್ಟು ನಿಗಾ ವಹಿಸಿ, ಉಗ್ರ ಸಂಘಟನೆಗಳನ್ನು ಬಗ್ಗು ಬಡಿಯಬೇಕಿದೆ. ಎರ್ನಾಕುಲಂನಲ್ಲಿ ನಡೆದ ಘಟನೆಗೆ ಬೇರೆ ಏನಾದರು ಆಯಾಮ ಇದೆಯೇ, ಇಸ್ರೇಲ್‌-ಪ್ಯಾಲೆಸ್ತಿನ್‌ ಬಿಕ್ಕಟ್ಟಿನ ನಂಟು ಇದೆಯೇ ಎಂಬ ಬಗ್ಗೆಯೂ ಆಳವಾಗಿ ತನಿಖೆ ನಡೆಸಬೇಕಿದೆ. ಕೇರಳದ ಮತಾಂಧರನ್ನು ಮಟ್ಟ ಹಾಕಿದರೆ ಇಡೀ ದೇಶಕ್ಕೇ ಕ್ಷೇಮ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Rahul Gandhi: ಬಿಜೆಪಿ ಮಾನನಷ್ಟ ಕೇಸ್‌ನಲ್ಲಿ ಸಿಎಂ, ಡಿಸಿಎಂಗೆ ಶರತ್ತುಬದ್ಧ ಜಾಮೀನು; ರಾಹುಲ್‌ ಗಾಂಧಿ ಮೇಲೆ ಕೋರ್ಟ್‌ ಗರಂ

Rahul Gandhi: ವಿಚಾರಣೆಗೆ ಮುನ್ನ ಆಗಮಿಸಿದ ಸಿಎಂ ಹಾಗೂ ಡಿಸಿಎಂ, ಕೋರ್ಟ್ ಹಾಲ್ ಮುಂದೆ ಸಾಮಾನ್ಯರಂತೆ, ಜೊತೆಯಾಗಿ ಕುಳಿತರು. ನಂತರ ನ್ಯಾಯಾಲಯಕ್ಕೆ ಆಗಮಿಸಿದ ನ್ಯಾಯಾಧೀಶ ಕೆ. ಎನ್. ಶಿವಕುಮಾರ್ ಮುಂದೆ ಇಬ್ಬರೂ ಹಾಜರಾದರು.

VISTARANEWS.COM


on

rahul gandhi
Koo

ಬೆಂಗಳೂರು: ಬಿಜೆಪಿಗೆ (BJP) ಮಾನನಷ್ಟ (Defamation Case) ಮಾಡಿರುವ ಪ್ರಕರಣದಲ್ಲಿ ಎಸಿಎಂಎಂ ಕೋರ್ಟ್‌ (ACMM court) ಮುಂದೆ ಇಂದು ಹಾಜರಾದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಶರತ್ತುಬದ್ಧ ಜಾಮೀನು (Bail) ಪಡೆದರು. ಪ್ರಕರಣದ ಇನ್ನೊಬ್ಬ ಆರೋಪಿ ರಾಹುಲ್‌ ಗಾಂಧಿ (Rahul Gandhi) ಗೈರು ಹಾಜರಾಗಿರುವ ಕುರಿತು ನ್ಯಾಯಾಧೀಶರು ಗರಂ ಆದರು.

ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.‌ ಕೇಶವ ಪ್ರಸಾದ್ ಅವರು ಸಲ್ಲಿಸಿರುವ ಖಾಸಗಿ ದೂರು ಇಂದು ವಿಚಾರಣೆಗೆ ಬಂದಿದ್ದು, ನ್ಯಾಯಾಧೀಶರ ಮುಂದೆ ಸಿಎಂ, ಡಿಸಿಎಂ ಹಾಜರಾದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಕೈ ನಾಯಕರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ A4 ಆರೋಪಿಯಾಗಿದ್ದಾರೆ.

ವಿಚಾರಣೆಗೆ ಮುನ್ನ ಆಗಮಿಸಿದ ಸಿಎಂ ಹಾಗೂ ಡಿಸಿಎಂ, ಕೋರ್ಟ್ ಹಾಲ್ ಮುಂದೆ ಸಾಮಾನ್ಯರಂತೆ, ಜೊತೆಯಾಗಿ ಕುಳಿತರು. ನಂತರ ನ್ಯಾಯಾಲಯಕ್ಕೆ ಆಗಮಿಸಿದ ನ್ಯಾಯಾಧೀಶ ಕೆ. ಎನ್. ಶಿವಕುಮಾರ್ ಮುಂದೆ ಇಬ್ಬರೂ ಹಾಜರಾದರು. ಪಾರ್ಟಿ ಪ್ರೆಸಿಡೆಂಟ್ ಹಾಗೂ ಎರಡನೇ ಆರೋಪಿ ಒಂದೇ ಎಂದು ವಕೀಲರು ತಿಳಿಸಿದರು. ಇಬ್ಬರನ್ನೂ ಹೊರ ಹೋಗಬಹುದೆಂದು ಜಡ್ಜ್‌ ಸೂಚಿಸಿದರು. ಇಬ್ಬರಿಗೂ ಶರತ್ತುಬದ್ಧ ಜಾಮೀನು ಮಂಜೂರು ಮಾಡಲಾಯಿತು. ಡಿಸಿಎಂ ಪರ ಎಎಜಿ ಎಸ್.ಎ ಅಹಮದ್ ವಾದಿಸಿದರು.

ನಾಲ್ಕನೇ ಆರೋಪಿ ರಾಹುಲ್ ಗಾಂದಿ ದೆಹಲಿಯಲ್ಲಿದ್ದಾರೆ. ಇಂದು ಇಂಡಿಯಾ ಕೂಟದ ಮೀಟಿಂಗ್ ಇದೆ. ಹೀಗಾಗಿ ರಾಹುಲ್ ಗಾಂಧಿ ಹಾಜರಾಗಲಾಗುತ್ತಿಲ್ಲ. ನಾಲ್ಕನೇ ತಾರೀಕು ಚುನಾವಣೆ ರಿಸಲ್ಟ್ ಇದೆ. ಹೀಗಾಗಿ ಕಾಲಾವಕಾಶ ನೀಡುವಂತೆ ವಿನಂತಿಸಿದರು. ಹಾಗಿದ್ದರೆ ಇಂದೇ ಬಂದು ಮುಗಿಸಿಕೊಂಡು ಹೋಗಬಹುದಿತ್ತಲ್ಲ, ದೆಹಲಿಗೆ ಹೋಗೋದಕ್ಕೆ ಐದು ದಿನ ಬೇಕಾಗಿಲ್ಲವಲ್ಲ ಎಂದು ಜಡ್ಜ್ ಪ್ರಶ್ನಿಸಿದರು. ನಂತರ ಮಧ್ಯಾಹ್ನ ಮೂರು ಗಂಟೆಗೆ ತಮ್ಮ ಆದೇಶವನ್ನು ಕಾಯ್ದಿರಿಸಿದರು.

ದೂರುದಾರರ ಪರ ಹಾಜರಾದ ವಕೀಲ ವಿನೋದ್ ಕುಮಾರ್, “ನ್ಯಾಯಾಲಯದಿಂದ ಸಮನ್ಸ್ ಜಾರಿ ಆದಾಗ ಬರಬೇಕು. ಪದೇ ಪದೆ ಕಾರಣ ನೀಡಿದ್ರೆ ಹೇಗೆ? ಎರಡು ಮೂರು ಸಲ ವಿನಾಯಿತಿ ನೀಡಲು ಅವಕಾಶ ಇಲ್ಲ ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಮುಂದೆಯೂ ಬೇರೆ ಬೇರೆ ಸಭೆ ಇದೆ ಅಂತ ಹಾಜರಾಗದೇ ಇರಬಹುದು. ಇವತ್ತಿಗೆ ಎಲೆಕ್ಷನ್ ಮುಗಿಯುತ್ತೆ. ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರೇ ಆಗಿರಲಿ, ಕಾನೂನಿನ ಮುಂದೆ ಎಲ್ಲರೂ ಒಂದೇ. ಹೀಗಾಗಿ ರಾಹುಲ್ ಗಾಂಧಿಗೆ ವಾರೆಂಟ್ ಜಾರಿ ಮಾಡಿ” ಎಂದು ಮನವಿ ಮಾಡಿದರು.

ಶರತ್ತುಬದ್ಧ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಸಿಎಂ ಹಾಗೂ ಡಿಸಿಎಂ ಶ್ಯೂರಿಟಿ ಪತ್ರಗಳಿಗೆ ಸಹಿ ಹಾಕಿ ತೆರಳಿದರು. “ನನಗೂ ಮತ್ತು ಸಿಎಂಗೆ ಸಮನ್ಸ್ ನೀಡಲಾಗಿತ್ತು. ಹೀಗಾಗಿ ಬಂದಿದ್ದೇವೆ. ರಾಹುಲ್ ಗಾಂಧಿ ಅವರು ಸಹ ಬರಬೇಕಿತ್ತು. ಆದರೆ INDIA ಕೂಟದ ಸಭೆ ಇದೆ. ರಾಹುಲ್ ಗಾಂಧಿ ಸಹ ಬರುತ್ತಾರೆ. ಅವರಿಗೆ ನ್ಯಾಯಾಂಗದ ಮೇಲೆ ಗೌರವ ಇದೆ. ನಾವು ಯಾರನ್ನೂ ರಕ್ಷಣೆ ಮಾಡಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.

ರಾಹುಲ್‌ ಗಾಂಧಿ ಅವರಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ ವಕೀಲ ಬಿ.ಎನ್ ಜಗದೀಶ್ ವಾದ ಮಂಡಿಸಿದರು.

ಏನಿದು ಪ್ರಕರಣ?

08-05-2023ರಂದು 42ನೇ ವಿಶೇಷ ನ್ಯಾಯಾಲಯದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.‌ ಕೇಶವ ಪ್ರಸಾದ್ ಖಾಸಗಿ ದೂರ ದಾಖಲು ಮಾಡಿದ್ದರು. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ A4 ಆರೋಪಿಯಾಗಿ ರಾಹುಲ್ ಗಾಂಧಿ ಅವರನ್ನು ಹೆಸರಿಸಲಾಗಿದೆ.

“ಬಿಜೆಪಿ ಸರ್ಕಾರ 2019ರಿಂದ 2023ರವರೆಗೆ ಭ್ರಷ್ಟ ಆಡಳಿತ ನಡೆಸಿತ್ತು. ಆಗಿನ ಸಿಎಂ ಹುದ್ದೆ ರೂ. 2500 ಕೋಟಿಗೆ ಮಾರಾಟವಾಗಿತ್ತು. ಮಂತ್ರಿಗಳ ಹುದ್ದೆ ರೂ. 500 ಕೋಟಿ ಬಿಜೆಪಿ ಹೈಕಮಾಂಡ್‌ಗೆ ನೀಡಿ ಪಡೆದಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ. ಇದಲ್ಲದೆ ಕೋವಿಡ್ ಕಿಟ್ ಪೂರೈಕೆ ಟೆಂಡರ್‌ನಲ್ಲಿ 75% ಡೀಲ್ ನಡೆದಿದೆ. ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್‌ಗಳಲ್ಲಿ 40% ಡೀಲ್, ಮಠಕ್ಕೆ ನೀಡುವ ಅನುದಾನದಲ್ಲಿ 30% ಡೀಲ್, ಉಪಕರಣಗಳ ಪೂರೈಕೆಯಲ್ಲಿ 40% ಡೀಲ್, ಮಕ್ಕಳಿಗೆ ನೀಡುವ ಮೊಟ್ಟೆ ಪೂರೈಕೆಯ ಟೆಂಡರ್‌ನಲ್ಲಿ 30% ಡೀಲ್, ರಸ್ತೆ ಕಾಮಗಾರಿಗಳ ಟೆಂಡರ್‌ನಲ್ಲಿ 40% ಡೀಲ್ ನಡೆದಿದೆ” ಎಂದು ಆರೋಪಿಸಿದ್ದರು.

ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ಪಡೆದ ಆರೋಪ ಮಾಡಿ ಈ ಬಗ್ಗೆ ಅನೇಕ ಜಾಹೀರಾತುಗಳನ್ನೂ ಕಾಂಗ್ರೆಸ್‌ ನೀಡಿತ್ತು. ಇದರಿಂದ ಬಿಜೆಪಿ ಪಕ್ಷಕ್ಕೆ ಅಪಮಾನವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಐಪಿಸಿ 499, 500 ಅಡಿ ಖಾಸಗಿ ದೂರು ದಾಖಲು ಮಾಡಿದ್ದರು. ಈ ಬಗ್ಗೆ ವಾದ ಆಲಿಸಿ ಆರೋಪಿಗಳನ್ನು ಹಾಜರು ಪಡಿಸಲು ಕೋರ್ಟ್‌ ಸೂಚಿಸಿತ್ತು.

ಇದನ್ನೂ ಓದಿ: CM Siddaramaiah: ಸಿಎಂ, ಡಿಸಿಎಂ ಕೂಡ ಇಂದು ಕೋರ್ಟ್‌ ಕಟಕಟೆಯಲ್ಲಿ! ಏನಿದು ಕೇಸ್?‌

Continue Reading

ದೇಶ

Porsche Crash: ಕಾರು ಗುದ್ದಿ ಇಬ್ಬರನ್ನು ಸಾಯಿಸಿದ ಪ್ರಕರಣ; ಸಾಕ್ಷ್ಯ ತಿರುಚಿದ ಅಪ್ರಾಪ್ತನ ತಾಯಿಯ ಬಂಧನ

Porsche Crash: ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ 17 ವರ್ಷದ ಬಾಲಕ ಮದ್ಯಪಾನ ಮಾಡಿ ಐಷಾರಾಮಿ ಪೋರ್ಷೆ ಕಾರನ್ನು ಚಲಾಯಿಸಿ ಇಬ್ಬರು ಐಟಿ ವೃತ್ತಿಪರರನ್ನು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ಸಾಕ್ಷ್ಯಗಳನ್ನು ತಿರುಚಿದ್ದಕ್ಕಾಗಿ ಬಾಲಕನ ತಾಯಿಯನ್ನು ಬಂಧಿಸಲಾಗಿದೆ.

VISTARANEWS.COM


on

Porsche Crash
Koo

ಮುಂಬೈ: ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ 17 ವರ್ಷದ ಬಾಲಕ ಮದ್ಯಪಾನ ಮಾಡಿ ಐಷಾರಾಮಿ ಪೋರ್ಷೆ ಕಾರನ್ನು (Porsche Crash) ಚಲಾಯಿಸಿ ಇಬ್ಬರು ಐಟಿ ವೃತ್ತಿಪರರನ್ನು (IT Engineers) ಸಾಯಿಸಿದ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆ ಕಾರಣವಾಗಿದೆ. ಸದ್ಯ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಬಾಲಕನ ತಾಯಿ ಶಿವಾನಿ ಅಗರ್‌ವಾಲ್‌ ಅವರನ್ನು ಬಂಧಿಸಲಾಗಿದೆ. ಬಾಲಕ ಮದ್ಯಪಾನ ಸೇವಿಸಿದ್ದಾನೆಯೇ ಎಂದು ಪರೀಕ್ಷಿಸಲು ಆತನ ರಕ್ತದ ಮಾದರಿ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಶಿವಾನಿ ಅಗರ್‌ವಾಲ್‌ ತಮ್ಮ ರಕ್ತವನ್ನು ನೀಡಿ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಅವರನ್ನೂ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾಕ್ಷ್ಯಗಳನ್ನು ತಿರುಚಿದ್ದಕ್ಕಾಗಿ ಮತ್ತು ರಕ್ತದ ಮಾದರಿಗಳನ್ನು ತೆಗೆದುಕೊಂಡಾಗ ಆಸ್ಪತ್ರೆಯಲ್ಲಿದ್ದ ಕಾರಣ ಶಿವಾನಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿ ಪುಣೆ ಅಪರಾಧ ವಿಭಾಗವು ಈ ಹಿಂದೆ ಶಿವಾನಿ ಅವರ ಹೇಳಿಕೆಯನ್ನು ದಾಖಲಿಸಿತ್ತು. ಅಲ್ಲದೆ ರಕ್ತ ಪರೀಕ್ಷೆ ನಡೆಸಿದ ಸಸೂನ್ ಆಸ್ಪತ್ರೆಯ ಕೆಲವು ಸಿಬ್ಬಂದಿಗೆ ಪುಣೆ ಅಪರಾಧ ವಿಭಾಗವು ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು. ರಕ್ತದ ಮಾದರಿಗಳನ್ನು ಬದಲಾಯಿಸಿರುವ ಬಗ್ಗೆ ಅವರನ್ನು ಪ್ರಶ್ನಿಸಲಾಗಿತ್ತು.

ಇಬ್ಬರು ವೈದ್ಯರ ಅರೆಸ್ಟ್‌

ರಕ್ತದ ಮಾದರಿ ಬದಲಾಯಿಸಿದ ಘಟನೆ ಸಂಬಂಧಿಸಿ ಕೆಲವು ದಿನಗಳ ಹಿಂದೆ ಇಬ್ಬರು ವೈದ್ಯರನ್ನು ಬಂಧಿಸಲಾಗಿತ್ತು. ʼʼಪುಣೆಯ ಸಾಸೂನ್‌ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಅಜಯ್‌ ತಾವರೆ ಮತ್ತು ಡಾ. ಶ್ರೀಹರಿ ಹರ್ನೂರ್‌ ಆರೋಪಿಯ ರಕ್ತದ ಮಾದರಿಯನ್ನೇ ಬದಲಿಸಿದ್ದಾರೆ. ಆಮೂಲಕ ಈ ಪ್ರರಕಣದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಅವರಿಬ್ಬರನ್ನೂ ಇದೀಗ ಬಂಧಿಸಲಾಗಿದೆʼʼ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದರು. ಅಲ್ಲದೆ ಪ್ರಕರಣದ ದಾರಿ ತಪ್ಪಿಸಲು ಪ್ರಯತ್ನಿಸಿದ್ದ ಎರವಾಡ ಪೊಲೀಸ್‌ ಠಾಣೆ ಇಬ್ಬರು ಪೊಲೀಸರನ್ನೂ ಅಮಾನತುಗೊಳಿಸಲಾಗಿತ್ತು.

ಪ್ರಕರಣದ ಹಿನ್ನೆಲೆ

ಇತ್ತೀಚೆಗೆ ಕಲ್ಯಾಣಿನಗರ ಪ್ರದೇಶದಲ್ಲಿನ ಬಾರ್‌ನಲ್ಲಿ ಮದ್ಯ ಸೇವಿಸಿ ಪಾನಮತ್ತನಾಗಿದ್ದ 17 ವರ್ಷದ ಬಾಲಕ ಚಾಲನೆ ಮಾಡುತ್ತಿದ್ದ ಪೋರ್ಷೆ ಕಾರು, ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮೃತಪಟ್ಟಿದ್ದರು. ಇದಾದ ಬಳಿಕ ಪೊಲೀಸರು ಬಾಲಾಪರಾಧಿ ನ್ಯಾಯಾಲಯದ ತೀರ್ಪಿನಂತೆ ಬಾಲಕನನ್ನು ಬಂಧಿಸಿ ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಬಳಿಕ ತಂದೆ ವಿಶಾಲ್​ ಅಗರ್ವಾಲ್​ರನ್ನು ಬಂಧಿಸಿದ್ದರು.

ಇದನ್ನೂ ಓದಿ: Pune Porsche accident: ಕಾರು ಗುದ್ದಿ ಇಬ್ಬರನ್ನು ಸಾಯಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ; ಇಬ್ಬರು ವೈದ್ಯರು ಅರೆಸ್ಟ್‌

ಎಲ್ಲೆಡೆ ಪೊಲೀಸರ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಾಲಕನ ಜಾಮೀನನ್ನು ರದ್ದುಗೊಳಿಸಿ ಮತ್ತೆ ಬಂಧಿಸಲಾಗಿತ್ತು. ಮೊದಲು ವಿಶಾಲ್ ಅಗರ್ವಾಲ್​ ತನ್ನ ಮಗ ಕಾರು ಓಡಿಸುತ್ತಿರಲಿಲ್ಲ ಕಾರಿಗೆ ಬೇರೆ ಡ್ರೈವರ್​ ಇದ್ದಾರೆ ಎಂದು ಹೇಳಿದ್ದರು. ಇನ್ನು ಬಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿರುವ ಶಂಕೆ ವ್ಯಕ್ತವಾಗಿತ್ತು. ಇದಕ್ಕೆ ಪೂರಕ ಎಂಬಂತೆ ಘಟನೆಗೂ ಮುನ್ನ ಆತ ಸ್ನೇಹಿತರ ಜತೆಗೂಡಿ ಬಾರ್‌ನಲ್ಲಿ ಕುಡಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ಹೀಗಾಗಿ ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

Continue Reading

Lok Sabha Election 2024

Narendra Modi: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಯುವ ಜನತೆಗೆ ಕರೆ ನೀಡಿದ ಪ್ರಧಾನಿ ಮೋದಿ

Narendra Modi: ಲೋಕಸಭಾ ಚುನಾವಣೆಯ 7ನೇ ಮತ್ತು ಅಂತಿಮ ಹಂತದ ಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಮತದಾರರಿಗೆ ವಿಶೇಷವಾಗಿ ಯುವ ಜನತೆ ಮತ್ತು ಮಹಿಳೆಯರಿಗೆ ಸಂದೇಶ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election)ಯ 7ನೇ ಮತ್ತು ಅಂತಿಮ ಹಂತದ ಮತದಾನ ನಡೆಯುತ್ತಿದೆ. ದೇಶದ 57 ಕ್ಷೇತ್ರಗಳಲ್ಲಿ ಇಂದು (ಜೂನ್‌ 1) ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಮತದಾರರಿಗೆ ವಿಶೇಷವಾಗಿ ಯುವ ಜನತೆ ಮತ್ತು ಮಹಿಳೆಯರಿಗೆ ಸಂದೇಶ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ, ʼʼಇಂದು 2024ರ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಆಯೋಜಿಸಲಾಗಿದೆ. 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 57 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿ. ಯುವ ಮತ್ತು ಮಹಿಳಾ ಮತದಾರರು ದಾಖಲೆ ಸಂಖ್ಯೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಾರೆ ಎನ್ನುವ ಭರವಸೆ ಇದೆ. ಎಲ್ಲರೂ ಒಟ್ಟಾಗಿ, ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸೋಣʼʼ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕರೆ ನೀಡಿದ್ದಾರೆ. “ದೇಶ ಮತ್ತು ಉತ್ತರ ಪ್ರದೇಶದಲ್ಲಿ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಹೈಸ್ಪೀಡ್ ರೈಲುಗಳು ಮತ್ತು ಇಂಟರ್‌ನೆಟ್‌ ಜಾಲವನ್ನು ನಿರ್ಮಿಸುವ ಪ್ರಾಮಾಣಿಕ ಸರ್ಕಾರವನ್ನು ಆಯ್ಕೆ ಮಾಡಲು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಎಲ್ಲ ಮತದಾರರು ವಿಶೇಷವಾಗಿ ಯುವಕರಿಗೆ ಮನವಿ ಮಾಡುತ್ತೇನೆ. ಪ್ರತಿಯೊಬ್ಬ ಬಡ ವ್ಯಕ್ತಿಗೆ ಮನೆ, ಅನಿಲ ಮತ್ತು ಉಚಿತ ಚಿಕಿತ್ಸೆಯನ್ನು ಒದಗಿಸುವ ವಿಶ್ವಾಸಾರ್ಹ ಸರ್ಕಾರವು ಭಾರತ ಮತ್ತು ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಾಯಿಸಬಹುದು” ಎಂದು ಶಾ ಹೇಳಿದ್ದಾರೆ.

ʼಇಂಡಿಯಾʼ ಒಕ್ಕೂಟಕ್ಕೆ ಅನುಕೂಲ ಎಂದ ಖರ್ಗೆ

ಇತ್ತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿಯ ಚುನಾವಣೆ ಪ್ರತಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟಕ್ಕೆ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼʼಇಂದು ಕೊನೆಯ ಹಂತದ ಮತದಾನ. ಸಂವಿಧಾನವನ್ನು ರಕ್ಷಿಸಲು ವೋಟು ಮಾಡಿ. ʼಇಂಡಿಯಾʼ ಮೈತ್ರಿಕೂಟ ಸರ್ವಾಧಿಕಾರಿ ಶಕ್ತಿಯ ವಿರುದ್ಧ ಹೋರಾಟ ನಡೆಸುತ್ತಿದೆ. ಆರು ಹಂತಗಳ ಮತದಾನದಲ್ಲಿಯೂ ನಾವು ಜಯ ಗಳಿಸಬೇಕೆಂದು ಮತದಾರರು ಬಯಸಿದ್ದಾರೆ. ಈ ಹಂತದಲ್ಲಿಯೂ ಕೈ ಹಿಡಿಯಲಿದ್ದಾರೆ. ಮೊದಲ ಬಾರಿ ಹಕ್ಕು ಚಲಾಯಿಸಲಿರುವ ಯುವ ಮತದಾರರ ಹೆಗಲ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ. ಅವರನ್ನು ನಾನು ಸ್ವಾಗತಿಸುತ್ತೇನೆ. ಬದಲಾವಣೆಗಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಿʼʼ ಎಂದು ಖರ್ಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ: Modi Meditation: ಮೋದಿ ಮಾಡ್ತಿರೋದು ‘ಧ್ಯಾನ’ ಅಲ್ಲ ‘ಡ್ರಾಮಾ’ ಎಂದ ಮಲ್ಲಿಕಾರ್ಜುನ ಖರ್ಗೆ!

ಉತ್ತರ ಪ್ರದೇಶದ 13 ಲೋಕಸಭೆ ಕ್ಷೇತ್ರಗಳು, ಪಂಜಾಬ್‌ 13, ಪಶ್ಚಿಮ ಬಂಗಾಳ 9, ಬಿಹಾರ 8, ಒಡಿಶಾ 6, ಹಿಮಾಚಲ ಪ್ರದೇಶ 4, ಜಾರ್ಖಂಡ್‌ 3 ಹಾಗೂ ಚಂಡೀಗಢದ 1 ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆವರೆಗೆ ಜನ ಹಕ್ಕು ಚಲಾಯಿಸಬಹುದಾಗಿದ್ದು, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಗಾಗಿ ಆಯೋಗವು ಬಿಗಿ ಬಂದೋಬಸ್ತ್‌ ಸೇರಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಲಿದೆ.

Continue Reading

Lok Sabha Election 2024

OpenAI: ಇಸ್ರೇಲ್‌ನ ಸಂಸ್ಥೆಯಿಂದ ಬಿಜೆಪಿ ವಿರುದ್ಧ ಪ್ರಚಾರ; ಶಾಕಿಂಗ್‌ ಮಾಹಿತಿ ಹಂಚಿಕೊಂಡ ಓಪನ್ಎಐ

OpenAI: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಇಂದು (ಜೂನ್‌ 1) ನಡೆಯುತ್ತಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಚುನಾವಣೆಯ ಮೇಲೆ ಪ್ರಭಾವ ಬೀರಲು ಇಸ್ರೇಲ್‌ ಸಂಸ್ಥೆ ಕೃತಕ ಬುದ್ಧಿಮತ್ತೆ (AI) ಮಾದರಿಗಳನ್ನು ಬಳಸಲು ಪ್ರಯತ್ನಿಸಿದೆ ಎಂದು ಓಪನ್ಎಐ ಹೇಳಿದೆ. ಈ ಬಗ್ಗೆ ಬಿಜೆಪಿ ತೀವ್ರ ಕಳವಳ ವ್ಯಕ್ತಪಡಿಸಿದೆ.

VISTARANEWS.COM


on

OpenAI
Koo

ನವದೆಹಲಿ: ಸುಮಾರು ಎರಡು ತಿಂಗಳ ಕಾಲ ನಡೆದ ಲೋಕಸಭಾ ಚುನಾವಣೆ (Lok Sabha Election)ಯ ಕೊನೆಯ ಹಂತದ ಮತದಾನ ಇಂದು (ಜೂನ್‌ 1) ನಡೆಯುತ್ತಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಚುನಾವಣೆಯ ಮೇಲೆ ಪ್ರಭಾವ ಬೀರಲು ಇಸ್ರೇಲ್‌ ಸಂಸ್ಥೆ ಕೃತಕ ಬುದ್ಧಿಮತ್ತೆ (AI) ಮಾದರಿಗಳನ್ನು ಬಳಸಲು ಪ್ರಯತ್ನಿಸಿದೆ ಎಂದು ಚಾಟ್‌ಜಿಪಿಟಿ (ChatGPT)ಯ ಓಪನ್ಎಐ (OpenAI) ಹೇಳಿದೆ.

ಇಸ್ರೇಲ್‌ ಮೂಲದ ಸಂಸ್ಥೆಯಾದ STOIC ಅಭಿಯಾನ ನಡೆಸಿ ಬಿಜೆಪಿ ವಿರೋಧಿ ಚಟುವಟಿಕೆ ನಡೆಸಲು ಪ್ರಯತ್ನಿಸಿ, ವಿಫಲವಾಗಿದೆ ಎನ್ನಲಾಗಿದೆ. ಆಡಳಿತಾರೂಢ ಬಿಜೆಪಿಯನ್ನು ಟೀಕಿಸುವ ಮತ್ತು ಕಾಂಗ್ರೆಸ್ ಅನ್ನು ಶ್ಲಾಘಿಸುವ ಕಮೆಂಟ್‌, ಲೇಖನ, ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ರಚಿಸುವಂತಹ ಕಾರ್ಯಗಳಿಗಾಗಿ ಓಪನ್ಎಐಯ ಶಕ್ತಿಯುತ ಭಾಷಾ ಮಾದರಿಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಓಪನ್‌ಎಐ ಹೇಳಿದ್ದೇನು?

“ಮೇಯಲ್ಲಿ STOIC ನೆಟ್‌ವರ್ಕ್‌ ಭಾರತದ ಆಡಳಿತಾರೂಢ ಬಿಜೆಪಿಯನ್ನು ಟೀಕಿಸುವ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸುವ ಕಮೆಂಟ್‌ಗಳನ್ನು ರಚಿಸಲು ಪ್ರಾರಂಭಿಸಿತು. ಚುನಾವಣೆಯ ಮೇಲೆ ಪರಿಣಾಮ ಬೀರಬಹುದಾದ ಇಂತಹ ಕೆಲವು ಚಟುವಟಿಕೆಗಳನ್ನು ನಾವು ತಡೆದಿದ್ದೇವೆʼʼ ಎಂದು ಓಪನ್‌ಎಐ ಹೇಳಿದೆ. ʼʼಸಾಮಾಜಿಕ ಜಾಲತಾಣಗಳಾದ ಎಕ್ಸ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ವೆಬ್‌ಸೈಟ್‌ ಮತ್ತು ಯೂಟ್ಯೂಬ್‌ನಲ್ಲಿ ಪ್ರಭಾವ ಬೀರಲು ಯತ್ನಿಸುತ್ತಿದ್ದ ಇಸ್ರೇಲ್‌ನಿಂದ ಕಾರ್ಯನಿರ್ವಹಿಸುವ ಖಾತೆಗಳ ಸಮೂಹವನ್ನು ನಿಷೇಧಿಸಲಾಗಿದೆʼʼ ಎಂದೂ ವಿವರಿಸಿದೆ.

ʼʼಈ ಅಭಿಯಾನವನ್ನು ಕೆನಡಾ, ಅಮೆರಿಕ ಮತ್ತು ಇಸ್ರೇಲ್‌ನಲ್ಲಿರುವವರನ್ನು ಗುರಿಯಾಗಿಸಿ ಆರಂಭಿಸಲಾಗಿತ್ತು. ಇದಕ್ಕಾಗಿ ಸಂದೇಶಗಳಲ್ಲಿ ಇಂಗ್ಲಿಷ್‌ ಮತ್ತು ಹಿಬ್ರೂ ಭಾಷೆಗಳನ್ನು ಬಳಸಲಾಗುತ್ತಿತ್ತು. ಬಳಿಕ ಮೇಯಲ್ಲಿ ಭಾರತೀಯರನ್ನು ತಲುಪುವ ಉದ್ದೇಶದಿಂಧ ಇಂಗ್ಲಿಷ್‌ನಲ್ಲಿ ಕಮೆಂಟ್‌ ರಚಿಸಲಾಗಿತ್ತುʼʼ ಎಂದು ಓಪನ್‌ಎಐ ತಿಳಿಸಿದೆ.

ಅಪಾಯಕಾರಿ ಬೆದರಿಕೆ ಎಂದ ಬಿಜೆಪಿ

ಈ ಬೆಳವಣಿಗೆ ಬಗ್ಗೆ ಬಿಜೆಪಿ ಆತಂಕ ವ್ಯಕ್ತಪಡಿಸಿದೆ. ಇದು ಅಪಾಯಕಾರಿ ಬೆದಿಕೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಸಚಿವ ರಾಜೀವ್ ಚಂದ್ರಶೇಖರ್, ʼʼಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾಯಾದ ಬೆದರಿಕೆ. ಭಾರತ ಮತ್ತು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳು ಬಿಜೆಪಿ ವಿರುದ್ಧ ಕಾರ್ಯನಿರ್ವಹಿಸುತ್ತಿವೆ ಎನ್ನುವುದು ಇದರಿಂದ ಸ್ಪಷ್ವಾಗುತ್ತದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕಾಗಿದೆ ಮತ್ತು ಸತ್ಯವನ್ನು ಬಹಿರಂಗಪಡಿಸಬೇಕಾಗಿದೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇಂಟರ್‌ನೆಟ್‌ ಮೂಲಕ ನಮ್ಮ ಮಾದರಿಗಳನ್ನು ಬಳಸಿ ವಂಚನೆಯಲ್ಲಿ ತೊಡಗಿದ್ದ ಇಂತಹ ಸುಮಾರು ಐದು ರಹಸ್ಯ ಕಾರ್ಯಾಚರಣೆಗಳನ್ನು ಕಳೆದ ಮೂರು ತಿಂಗಳಲ್ಲಿ ಗುರುತಿಸಲಾಗಿದೆ ಎಂದು ಓಪನ್ಎಐ ಹೇಳಿದೆ. 2015ರಲ್ಲಿ ಸ್ಥಾಪಿಸಲಾದ ಕೃತಕ ಬುದ್ಧಿಮತ್ತೆ ಸಂಶೋಧನಾ ಸಂಸ್ಥೆಯೇ ಓಪನ್ಎಐ.

ಇದನ್ನೂ ಓದಿ: Lok Sabha Election: ಇಂದು ಕೊನೇ ಹಂತದ ಮತದಾನ; ಸಂಜೆ ಎಕ್ಸಿಟ್‌ ಪೋಲ್, ಇಂದೇ ತಿಳಿಯಲಿದೆ ಭವಿಷ್ಯ!

2024ರ ಲೋಕಸಭೆ ಚುನಾವಣೆಯ 7ನೇ ಮತ್ತು ಅಂತಿಮ ಹಂತದ ಮತದಾನ ಇಂದು (ಜೂನ್ 1) ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಾಲಿವುಡ್‌ ನಟಿ ಕಂಗನಾ ರಾಣಾವತ್‌, ಚರಣ್‌ಜೀತ್‌ ಸಿಂಗ್‌ ಚನ್ನಿ, ಅನುರಾಗ್ ಠಾಕೂರ್, ಅಭಿಷೇಕ್ ಬ್ಯಾನರ್ಜಿ, ಮೀಸಾ ಭಾರ್ತಿ ಮತ್ತಿತರರ ಪ್ರಮುಖ ನಾಯಕರ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.

Continue Reading
Advertisement
rahul gandhi
ಪ್ರಮುಖ ಸುದ್ದಿ15 mins ago

Rahul Gandhi: ಬಿಜೆಪಿ ಮಾನನಷ್ಟ ಕೇಸ್‌ನಲ್ಲಿ ಸಿಎಂ, ಡಿಸಿಎಂಗೆ ಶರತ್ತುಬದ್ಧ ಜಾಮೀನು; ರಾಹುಲ್‌ ಗಾಂಧಿ ಮೇಲೆ ಕೋರ್ಟ್‌ ಗರಂ

Salman Khan Cops arrest 4 with alleged links to Bishnoi gang
ಬಾಲಿವುಡ್16 mins ago

Salman Khan: ಸಲ್ಮಾನ್ ಖಾನ್ ಕಾರಿನ ಮೇಲೆ ಗುಂಡಿನ ದಾಳಿಗೆ ಸಂಚು; ನಾಲ್ವರ ಬಂಧನ

Chikkalluru Siddappaji temple
ಧಾರ್ಮಿಕ22 mins ago

Chikkalluru Siddappaji Temple : ಚಿಕ್ಕಲ್ಲೂರಲ್ಲಿ ಪೂಜೆ ವಿಚಾರಕ್ಕೆ ತ್ರಿಶೂಲದಲ್ಲಿ ಹೊಡೆದಾಟ; ಮೂವರು ಅರ್ಚಕರಿಗೆ ಗಾಯ

Gold Rate Today
ಚಿನ್ನದ ದರ22 mins ago

Gold Rate Today: ಚಿನ್ನ ಕೊಳ್ಳಲು ಇಂದೇ ಸಕಾಲ, ಬಂಗಾರದ ಬೆಲೆಯಲ್ಲಿ ಇಳಿಕೆ

T20 World Cup 2024
ಕ್ರಿಕೆಟ್29 mins ago

Team India: ವೆಸ್ಟ್​ ಇಂಡೀಸ್​ ಮೈದಾನ ಭಾರತದ ಪಾಲಿಗೆ ಅನ್ ಲಕ್ಕಿ; ಹಿಂದಿನ 2 ವಿಶ್ವಕಪ್ ಟೂರ್ನಿಯ​ ಹಿನ್ನೋಟ ಇಲ್ಲಿದೆ

Porsche Crash
ದೇಶ52 mins ago

Porsche Crash: ಕಾರು ಗುದ್ದಿ ಇಬ್ಬರನ್ನು ಸಾಯಿಸಿದ ಪ್ರಕರಣ; ಸಾಕ್ಷ್ಯ ತಿರುಚಿದ ಅಪ್ರಾಪ್ತನ ತಾಯಿಯ ಬಂಧನ

Physical Abuse
ಉಡುಪಿ57 mins ago

Physical Abuse : ವೈದ್ಯಾಧಿಕಾರಿ ಅಶ್ಲೀಲ ವರ್ತನೆ; ರಾತ್ರಿಯಾದರೆ ವಿಡಿಯೊ ಕಾಲ್‌ನಲ್ಲಿ ವೈದ್ಯೆಗೆ ಟಾರ್ಚರ್‌‌

Nandamuri Balakrishna touch actress anjali back
ಟಾಲಿವುಡ್1 hour ago

Nandamuri Balakrishna: ನಟಿ ಅಂಜಲಿಯ ಹಿಂಭಾಗ ಟಚ್ ಮಾಡಿದ್ರಾ ಬಾಲಯ್ಯ?

Shubman Gill
ಕ್ರೀಡೆ1 hour ago

Shubman Gill: ಕಿರುತೆರೆ​ ನಟಿಯೊಂದಿಗೆ ಶುಭಮನ್​ ಗಿಲ್ ಮದುವೆ?; ಸ್ವತಃ ಸ್ಪಷ್ಟನೆ ನೀಡಿದ ನಟಿ

Narendra Modi
Lok Sabha Election 20241 hour ago

Narendra Modi: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಯುವ ಜನತೆಗೆ ಕರೆ ನೀಡಿದ ಪ್ರಧಾನಿ ಮೋದಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌