Dina Bhavishya : ಈ ರಾಶಿಯವರಿಗೆ ಇಂದು ಲಾಭಕ್ಕಿಂತ ನಷ್ಟವೇ ಜಾಸ್ತಿ! - Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರಿಗೆ ಇಂದು ಲಾಭಕ್ಕಿಂತ ನಷ್ಟವೇ ಜಾಸ್ತಿ!

Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷದ ಚತುರ್ಥಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

dina bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಮಿಥುನ ರಾಶಿಯಿಂದ ಬುಧವಾರ ಸಂಜೆ 05:30ಕ್ಕೆ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಮಿಥುನ, ಸಿಂಹ, ಕನ್ಯಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ಪ್ರಮುಖ ಜನರ ಜತೆಗೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ಮಿಥುನ ರಾಶಿಯ ಪ್ರೇಮಿಗಳಿಗೆ ಶುಭ ಸೂಚನೆ ಸಿಗಲಿದೆ. ಧನಸ್ಸು ರಾಶಿಯವರು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (1-11-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ
ತಿಥಿ:
ಚತುರ್ಥಿ 21:18 ವಾರ: ಬುಧವಾರ
ನಕ್ಷತ್ರ: ಮೃಗಶಿರಾ 28:35 ಯೋಗ:ಪರಿಘ 14:05
ಕರಣ: ಭವ 09:18 ಅಮೃತ ಕಾಲ: ರಾತ್ರಿ 7:34 ರಿಂದ 9: 13 ರವರೆಗೆ
ದಿನದ ವಿಶೇಷ: ಕನ್ನಡ ರಾಜ್ಯೋತ್ಸವ, ಸಂಕಷ್ಟ ಚತುರ್ಥಿ

ಸೂರ್ಯೋದಯ : 06:13  ಸೂರ್ಯಾಸ್ತ : 5:53

ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಪ್ರಮುಖ ಜನರ ಜತೆಗೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಸಂಗಾತಿಯ ಒರಟು ವರ್ತನೆ ನಿಮ್ಮ ಮೇಲೆ ಒತ್ತಡ ಹಾಕಬಹುದು. ವ್ಯಾಪಾರ-ವ್ಯವಹಾರದಲ್ಲಿ ಲಾಭ ಇರಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ತಿಂಗಳ ಆರಂಭದ ದಿನವೇ ಉದ್ಯೋಗದ ಸ್ಥಳದಲ್ಲಿ ನೀವು ಕಿರಿಕಿರಿ ಅನುಭವಿಸುವ ಸಾಧ್ಯತೆ ಇರುವುದರಿಂದ ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ಚೈತನ್ಯ ಮತ್ತು ಉತ್ಸಾಹ ನಿಮ್ಮನ್ನು ಆವರಿಸುತ್ತದೆ ಮತ್ತು ನೀವು ಯಾವುದೇ ಅವಕಾಶವನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಲಿದ್ದೀರಿ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ. ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ. ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವದಿಂದ ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡಲಿದೆ. ಆರೋಗ್ಯ ಪರಿಪೂರ್ಣ.ಉದ್ಯೋಗಿಗಳಿಗೆ ವಿಶೇಷ ಅನುಕೂಲ ಸಿಗಲಿದೆ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮಿಥುನ: ಜೀವನ ಸಂಗಾತಿಯೊಂದಿಗೆ ಸೇರಿ ಇಂದು ನೀವು ಭವಿಷ್ಯಕ್ಕೆ ಯಾವುದೇ ಆರ್ಥಿಕ ಯೋಜನೆಯನ್ನು ಮಾಡಬಹುದು ಮತ್ತು ಈ ಯೋಜನೆ ಯಶಸ್ವಿಯಾಗಲಿದೆ.
ಹತಾಶೆಯ ಭಾವನೆ ನಿಮ್ಮನ್ನು ಆವರಿಸಲು ಬಿಡಬೇಡಿ. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಪ್ರೇಮಿಗಳಿಗೆ ಶುಭ ಸೂಚನೆ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಕಟಕ: ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಅನಿರೀಕ್ಷಿತ ಲಾಭದ ಮೂಲಕ ಆರ್ಥಿಕ ಬಲಗಳು ಸುಧಾರಿಸುತ್ತವೆ. ನಿಮ್ಮ ಸಹೋದ್ಯೋಗಿಗಳು ಎಂದಿಗಿಂತಲೂ ಉತ್ತಮವಾಗಿ ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಸಿಂಹ: ಧರ್ಮಕಾರ್ಯಗಳು, ಹವನಗಳು , ಮಂಗಳಕರ ಸಮಾರಂಭಗಳನ್ನು ಮನೆಯಲ್ಲಿ ಕೈಗೊಳ್ಳವ ಸಾಧ್ಯತೆ ಇದೆ. ಅತಿಯಾದ ದ್ವೇಷದ ಭಾವನೆಯಿಂದ ನಿಮ್ಮ ಮನಸ್ಸುನ್ನು ಹಾಳು ಮಾಡಿಕೊಳ್ಳುವುದು ಬೇಡ. ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಲಾಭ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಕನ್ಯಾ: ಕೆಲವು ಅನಿವಾರ್ಯ ಸಂದರ್ಭಗಳು ನಿಮಗೆ ಅಹಿತಕರವೆನಿಸಬಹುದು. ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಇದು ನಿಮ್ಮ ಮನಸ್ಥಿತಿಯನ್ನು ಬದಲಾಯಿಸುವುದಷ್ಟೇ ಅಲ್ಲದೇ ನಿಮ್ಮ ತಪ್ಪು ತಿಳುವಳಿಕೆಗಳನ್ನೂ ಹೋಗಲಾಡಿಸುತ್ತದೆ. ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ದಿನದ ಮಟ್ಟಿಗೆ ಆದಾಯಕ್ಕಿಂತ ಹೆಚ್ಚಿನ ಖರ್ಚು ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಸ್ನೇಹಿತರ ಜತೆಗಿನ ನಿಮ್ಮ ಅಪಾರ್ಥ ಕೆಲವು ಅಹಿತಕರ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು – ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಂಯಮದಿಂದ ವರ್ತಿಸಿ. ನಿಮ್ಮ ವೈಯಕ್ತಿಕ ಕೆಲಸದಲ್ಲಿ ಮುಖ್ಯ ಬೆಳವಣಿಗೆಯಾಗುತ್ತಿದ್ದು ಇದು ನೀವು ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಸಂತೋಷ ತರಲಿದೆ. ಆರ್ಥಿವಾಗಿ ಉತ್ತಮ ಫಲ ಇರಲಿದೆ. ಆರೋಗ್ಯದ ಬಗೆಗೆ ಜಾಗೃತಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ: ಅತಿಥಿಗಳ ಆಗಮನದಿಂದಾಗಿ ಕೊಂಚಮಟ್ಟಿಗೆ ಪ್ರಮುಖ ಕೆಲಸಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಅನೇಕ ಒತ್ತಡದಿಂದ ಹೊರಬರವಿರಿ. ಹಣಕಾಸಿನಲ್ಲಿ ಸುಧಾರಣೆ, ದೀರ್ಘಕಾಲದ ಬಾಕಿ ಮರುಪಾವತಿ ಆಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕುಟುಂಬದಲ್ಲಿ ದಿನದ ಕೊನೆಯಲ್ಲಿ ಮನಸ್ತಾಪ ಆಗಬಹುದು. ಆದಷ್ಟು ಮಾತಿಗೆ ವಿರಾಮವಿರಲಿ.
ಅದೃಷ್ಟ ಸಂಖ್ಯೆ: 9

Horoscope Today

ಧನಸ್ಸು: ಚಿಕ್ಕ ಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವುದು ಬೇಡ. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಉದ್ಯೋಗಿಗಳಿಗೆ ಆಲಸ್ಯದಿಂದಾಗಿ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಮಕರ: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಲಸ ಕಾರ್ಯಗಳು ಯಶಸ್ಸನ್ನು ತಂದುಕೊಡಲಿದೆ. ವಿದೇಶ ಪ್ರವಾಸಕ್ಕೆ ಕಾಯುತ್ತಿರುವವರಿಗೆ ಶುಭ ಸೂಚನೆ ಸಿಗಲಿದೆ. ಸೃಜನಶೀಲ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ.ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.
ಅದೃಷ್ಟ ಸಂಖ್ಯೆ: 6

Horoscope Today

ಕುಂಭ: ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು. ಹಣದ ಲಾಭವನ್ನು ಪಡೆಯಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆ ಇಮ್ಮಡಿ ಆಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮೀನ: ಆರೋಗ್ಯ ಉತ್ತಮವಾಗಿರಲಿದೆ. ಚುರುಕುತನವು ಹೆಚ್ಚಾಗಲಿದೆ. ಕೆಲವು ಊಹೆಗಳು ಲಾಭ ತರುತ್ತವೆ. ಪ್ರಮುಖ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಜಾಗೃತೆ ಇರಲಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ.ಆರ್ಥಿಕವಾಗಿ ಲಾಭ ಸಿಗಲಿದೆ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Hardik Pandya : ವಿಶ್ವ ಕಪ್​ ಗೆದ್ದ ಹಾರ್ದಿಕ್​ ಪಾಂಡ್ಯಗೆ ಮುತ್ತು ಕೊಟ್ಟು ಅಭಿನಂದಿಸಿದ ಇಶಾನ್ ಕಿಶನ್​

Hardik Pandya : ಹಾರ್ದಿಕ್ ಪಾಂಡ್ಯ ಟಿ20 ವಿಶ್ವ ಕಪ್​ ಪಂದ್ಯಾವಳಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ದೊಡ್ಡ ಪಾತ್ರ ವಹಿಸಿದ್ದರು. ಅವರೆಲ್ಲರ ಪ್ರಯತ್ನ ಭಾರತ ತಂಡದ ಐಸಿಸಿ ಟ್ರೋಫಿಗಾಗಿ ದೀರ್ಘಕಾಲದ ಕಾಯುವಿಕೆ ಕೊನೆಯಾಗಿತು.. 2007ರ ಬಳಿಕ ಭಾರತ ಟಿ20 ವಿಶ್ವಕಪ್ ಗೆದ್ದಿಲ್ಲ. ಅಂತಿಮವಾಗಿ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನೊಂದಿಗೆ ದೀರ್ಘ ಕಾಯುವಿಕೆ ಕೊನೆಗೊಳಿಸುವಲ್ಲಿ ಯಶಸ್ವಿಯಾದರು.

VISTARANEWS.COM


on

Hardik Pandya
Koo

ಬೆಂಗಳೂರು: ಟಿ20 ವಿಶ್ವ ಕಪ್​​ ಗೆದ್ದು ಖುಷಿಯಲ್ಲಿರುವ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಐಪಿಎಲ್​ನಲ್ಲಿ ಅವರ ಮುಂಬಯಿ ಇಂಡಿಯನ್ಸ್ ಜತೆಗಾರ ಇಶಾನ್ ಕಿಶನ್ ಶುಕ್ರವಾರ ಭೇಟಿಯಾದರು. ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಭಾರತದ ವಿಜಯ ಅಭಿಯಾನದಲ್ಲಿ ಅವರ ಪಾತ್ರಕ್ಕಾಗಿ ಅಭಿನಂದಿಸಿದರು. ಈ ವೇಳೆ ಅವರು ಎರಡೂ ಕೆನ್ನೆಗಳಿಗೆ ಮುತ್ತು ನೀಡಿ ಶುಭಾಶಯ ತಿಳಿಸಿದರು.

ಹಾರ್ದಿಕ್ ಪಾಂಡ್ಯ ಟಿ20 ವಿಶ್ವ ಕಪ್​ ಪಂದ್ಯಾವಳಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ದೊಡ್ಡ ಪಾತ್ರ ವಹಿಸಿದ್ದರು. ಅವರೆಲ್ಲರ ಪ್ರಯತ್ನ ಭಾರತ ತಂಡದ ಐಸಿಸಿ ಟ್ರೋಫಿಗಾಗಿ ದೀರ್ಘಕಾಲದ ಕಾಯುವಿಕೆ ಕೊನೆಯಾಗಿತು.. 2007ರ ಬಳಿಕ ಭಾರತ ಟಿ20 ವಿಶ್ವಕಪ್ ಗೆದ್ದಿಲ್ಲ. ಅಂತಿಮವಾಗಿ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನೊಂದಿಗೆ ದೀರ್ಘ ಕಾಯುವಿಕೆ ಕೊನೆಗೊಳಿಸುವಲ್ಲಿ ಯಶಸ್ವಿಯಾದರು.

ಟಿ20 ವಿಶ್ವಕಪ್ ಟೂರ್ನಿಯ 9ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಮಣಿಸಿ ಚಾಂಪಿಯನ್ ಆಯಿತು. ಹಾರ್ದಿಕ್ ಪಾಂಡ್ಯ ಪಂದ್ಯಾವಳಿಯುದ್ದಕ್ಕೂ ಟೀಮ್ ಇಂಡಿಯಾಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದರು ಮತ್ತು ಫೈನಲ್​​ನಲ್ಲಿಯೂ ಭಾರಿ ಪ್ರಭಾವ ಬೀರಿದ್ದರು. 177 ರನ್​ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 16 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು.

ನಂತರ ಭಾರತದ ಉಪನಾಯಕ 17 ನೇ ಓವರ್​ನ ಮೊದಲ ಎಸೆತದಲ್ಲಿ ಅಪಾಯಕಾರಿಯಾಗಿದ್ದ ಹೆನ್ರಿಕ್ ಕ್ಲಾಸೆನ್ ಅವರನ್ನು 52 ರನ್​ಗಳಿಗೆ ಔಟ್ ಮಾಡುವ ಮೂಲಕ ಪಂದ್ಯವನ್ನು ಭಾರತ ಕಡೆಗೆ. ನಂತರ ಅಂತಿಮ ಓವರ್​ನಲ್ಲಿ ಡೇವಿಡ್ ಮಿಲ್ಲರ್ ಅವರನ್ನು ಔಟ್​ ಮಾಡಿದರು. ಪಾಂಡ್ಯ 48 ಸರಾಸರಿಯಲ್ಲಿ 144 ರನ್ ಗಳಿಸಿದ್ದಾರೆ ಮತ್ತು 17.36 ಸರಾಸರಿಯಲ್ಲಿ 11 ವಿಕೆಟ್​ಗಳನ್ನು ಪಡೆದಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಶುಭಾಶಯ ಸಲ್ಲಿಸಿದ ಇಶಾನ್ ಕಿಶನ್

ಶುಕ್ರವಾರ ಇಶಾನ್ ಕಿಶನ್ ತಮ್ಮ ಐಪಿಎಲ್​ ಸಹ ಆಟಗಾರನಿಗೆ ಶುಭಾಶಯವನ್ನು ಇನ್​​ಸ್ಟಾಗ್ರಾಮ್​ ಮೂಲಕ ಸಲ್ಲಿಸಿದರು. ಅದರಲ್ಲಿ ಅವರು ಪಾಂಡ್ಯ ಅವರ ನಿವಾಸಕ್ಕೆ ಅನಿರೀಕ್ಷಿತ ಭೇಟಿ ನೀಡಿದರು. ಅವರ ಪ್ರದರ್ಶನಕ್ಕಾಗಿ ಅವರನ್ನು ಅಭಿನಂದಿಸಿದರು. ಕಿಶನ್ ಪಾಂಡ್ಯಗೆ ಮುತ್ತಿಡುವ ಮೊದಲು ಇಬ್ಬರೂ ಅಪ್ಪಿಕೊಂಡರು.

ಇದನ್ನೂ ಓದಿ: T20 World Cup : ಮಹಾರಾಷ್ಟ್ರದ ಆಟಗಾರರಿಗೆ 11 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಮಹಾ ಸಿಎಂ ಶಿಂಧೆ

ಕಿಶನ್ ತಮ್ಮ ವಿಶ್ವಕಪ್​ ವಿಚಾರದಲ್ಲಿ ಯಾವುದೂ ಪೂರಕವಾಗಿ ನಡೆಯದಿದ್ದ ಪಾಂಡ್ಯ ಹೇಗೆ ಶಾಂತವಾಗಿ ಮತ್ತು ಏಕಾಗ್ರತೆಯಿಂದ ಇರಲು ಸಾಧ್ಯವಾಯಿತು ಎಂಬುದನ್ನು ಎತ್ತಿ ತೋರಿಸಿದ್ದಾರೆ. ಏಸ್ ಆಲ್ರೌಂಡರ್ ಐಪಿಎಲ್ ಅಭಿಯಾನದುದ್ದಕ್ಕೂ ಅಭಿಮಾನಿಗಳಿಂದ ಟೀಕೆಗಳನ್ನು ಎದುರಿಸಿದ್ದರು. ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ನಾಯಕನನ್ನಾಗಿ ಮಾಡಿದ ಬಗ್ಗೆ ಅಭಿಮಾನಿಗಳು ತಮ್ಮ ಕೋಪವನ್ನು ಹೊರಹಾಕಿದ್ದರು.

ಕಳೆದ ಕೆಲವು ತಿಂಗಳುಗಳಲ್ಲಿ ನೀವು ಅನೇಕ ಕಷ್ಟದ ದಿನಗಳನ್ನು ಎದುರಿಸಿದ್ದೀರಿ. ಆದರೂ ನೀವು ಶಾಂತವಾಗಿ ಮತ್ತು ಇಂದು ನೀವು ನಿಮ್ಮ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಪ್ರಾಮಾಣಿಕತೆಯ ಫಲಿತಾಂಶವನ್ನು ಪಡೆದಿದ್ದೀರಿ. ಇನ್ನೂ ಹೆಚ್ಚಿನದನ್ನು ಸಾಧನೆ ಮಾಡಿದ್ದೀರಿ. ಅದನ್ನು ಹೇಳಲು ಆದರೆ ಪದಗಳು ಕಡಿಮೆಯಾಗುತ್ತವೆ ಎಂದು ಇಶಾನ್ ಕಿಶನ್ ಬರೆದಿದ್ದಾರೆ.

Continue Reading

ಉತ್ತರ ಕನ್ನಡ

Weather News: ಭಾರಿ ಮಳೆ; ಕರಾವಳಿಯಾದ್ಯಂತ ಶಾಲೆ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

Weather News: ಕರಾವಳಿಯಲ್ಲಿ ಮಳೆಯು (Rain news) ಅಬ್ಬರಿಸುತ್ತಿದ್ದು, ಅವಾಂತರವೇ ಸೃಷ್ಟಿಯಾಗಿದೆ. ಶುಕ್ರವಾರವೂ ಹಲವೆಡೆ ಮಳೆಯಾಗಿದ್ದು, ಸಂರ್ಪಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ. ಮತ್ತೆ ಕೆಲವೆಡೆ ಗುಡ್ಡ ಕುಸಿತದ ಭೀತಿ ಹೆಚ್ಚಾಗಿದೆ. ಶನಿವಾರವಂತೂ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ.

VISTARANEWS.COM


on

Weather News
Koo

ಕಾರವಾರ/ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ವರುಣನ ಆರ್ಭಟ (Rain News) ಮುಂದುವರಿದಿದ್ದು, ಉತ್ತರ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆ ಸೇರಿ ಕರಾವಳಿಯಾದ್ಯಂತ ಶನಿವಾರ (ಜುಲೈ 6) ರಜೆ ಘೋಷಣೆ ಮಾಡಲಾಗಿದೆ. ಭಾರಿ ಮಳೆಯ (Weather News) ಕುರಿತು ಹವಾಮಾನ ಇಲಾಖೆ ವರದಿ ನೀಡಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆ-ಕಾಲೇಜುಗಳಿಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಐದು ತಾಲೂಕುಗಳ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜುಲೈ 6ರಂದು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ರಜೆ ಘೋಷಣೆ ಮಾಡಿದ್ದಾರೆ. ಪದವಿ ಕಾಲೇಜು ಹೊರತುಪಡಿಸಿ ಉಳಿದ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಹಲವು ಕಟ್ಟಡಗಳು ಕುಸಿದಿವೆ.

karnataka Weather Forecast

ಉಡುಪಿ ಜಿಲ್ಲೆಯಲ್ಲೂ ರಜೆ

ಮಳೆಯ ಹಿನ್ನೆಲೆಯಲ್ಲಿ ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕುಗಳು ಸೇರಿ ಜಿಲ್ಲಾದ್ಯಂತ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ವಿಭಾಗಕ್ಕೆ ರಜೆ ಘೋಷಿಸಲಾಗಿದೆ. ಆದರೆ, ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮಾ ,ಎಂಜಿನಿಯರಿಂಗ್, ಐಟಿಐ ವಿದ್ಯಾಸಂಸ್ಥೆಗಳಿಗೆ ರಜೆ ಇಲ್ಲ ಎಂಬುದಾಗಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರು ಆದೇಶ ಹೊರಡಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಎರಡು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಕೃಷ್ಣಾ ವೇದಗಂಗಾ ಹಾಗೂ ದೂದಗಂಗಾ ನದಿ ಮೈದುಂಬಿ ಹರಿಯುತ್ತಿದ್ದು, ನಿಪ್ಪಾಣಿ ತಾಲೂಕಿನ ಬಾರವಾಡ-ಕುನ್ನೂರ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ.

ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದೆ. ದೂದಗಂಗಾ ನದಿಯಿಂದ ಕಾರದಗಾ-ಭೋಜ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ಕೃಷ್ಣಾ ನದಿಗೆ ಸುಮಾರು 50 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತದಿಂದ ನದಿ ಪಾತ್ರದ ಜನರಿಗೆ ಸೂಚನೆ ನೀಡಿದೆ. ಆದರೆ ಜಿಲ್ಲಾಡಳಿತದ ಮನವಿಗೆ ಕ್ಯಾರೇ ಎನ್ನದ ಜನರು ನದಿಯಲ್ಲಿ ಇಳಿದು ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿ ಮೀನು ಹಿಡಿಯಲು ಮುಂದಾಗಿದ್ದಾರೆ. ಹೀಗಾಗಿ ನದಿ ಬಳಿ ಬಂದೋಬಸ್ತ್ ಸಲುವಾಗಿ ಜಿಲ್ಲಾಡಳಿತದಿಂದ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ

Continue Reading

ಪ್ರಮುಖ ಸುದ್ದಿ

Mahindra Marazzo : ಈ 7 ಸೀಟರ್​ ಕಾರಿನ ಉತ್ಪಾದನೆ ನಿಲ್ಲಿಸಿದ ಮಹೀಂದ್ರಾ

Mahindra Marazzo: ಮುಂದಿನ ಎರಡು ತಿಂಗಳ ಅವಧಿಯಲ್ಲಿ ಎಂಪಿವಿ ಉತ್ಪಾದನೆ ಕೊನೆಗೊಳಿಸಲು ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವೆರಿಟೊ ಕಂಪನಿಯು ಉತ್ಪಾದಿಸಿದ ಕೊನೆಯ ಸೆಡಾನ್ ಇದಾಗಿದೆ. ಎಂಪಿವಿ ಮಾರುಕಟ್ಟೆ ಇಂದು ಒಟ್ಟು ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಸುಮಾರು 16 ಪ್ರತಿಶತ ಪಾಲನ್ನು ಹೊಂದಿದೆ. ಟೊಯೊಟಾ ಮತ್ತು ಮಾರುತಿ ಸುಜುಕಿ ಈ ವಿಭಾಗದಲ್ಲಿ ಪಾರಮ್ಯ ಹೊಂದಿವೆ.

VISTARANEWS.COM


on

Mahindra Marazzo
Koo

ಬೆಂಗಳೂರು: ಮಹೀಂದ್ರಾ ಕಂಪನಿಯು ಬಿಡುಗಡೆ ಮಾಡಿದ ಆರು ವರ್ಷಗಳ ನಂತರ ಮರಾಜೊ (Mahindra Marazzo) ಎಂಪಿವಿಯ ಮಾರಾಟವನ್ನು ನಿಲ್ಲಿಸಿದೆ. ಇದು ಕಾರು ತಯಾರಕರು ನಿರೀಕ್ಷಿಸಿದ ಮಟ್ಟಕ್ಕೆ ಮಾರಾಟದಲ್ಲಿ ಯಶಸ್ಸನ್ನು ಹೊಂದಿಲ್ಲ. ಮಾರುತಿ ಎರ್ಟಿಗಾ, ಎಕ್ಸ್ ಎಲ್ 6 ಮತ್ತು ಕಿಯಾ ಕ್ಯಾರೆನ್ಸ್ ಪ್ರತಿಸ್ಪರ್ಧಿಯಾಗಿದ್ದ ಇದನ್ನು ಸೆಪ್ಟೆಂಬರ್ 2018 ರಲ್ಲಿ 9.99 ಲಕ್ಷದಿಂದ 13.90 ಲಕ್ಷ ರೂ.ಗಳ ನಡುವೆ ಬಿಡುಗಡೆ ಮಾಡಲಾಗಿತ್ತು. ಇದು ನಾಲ್ಕು ಟ್ರಿಮ್ ಗಳು ಮತ್ತು 7- ಮತ್ತು 8-ಸೀಟರ್ ಕಾನ್ಫಿಗರೇಶನ್ ಗಳಲ್ಲಿ ಬಂದಿತ್ತು. ಆದರೆ, ಗ್ರಾಹಕರ ಗಮನ ಸೆಳೆಯಲು ವಿಫಲಗೊಂಡಿತ್ತು.

ಮುಂದಿನ ಎರಡು ತಿಂಗಳ ಅವಧಿಯಲ್ಲಿ ಎಂಪಿವಿ ಉತ್ಪಾದನೆ ಕೊನೆಗೊಳಿಸಲು ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವೆರಿಟೊ ಕಂಪನಿಯು ಉತ್ಪಾದಿಸಿದ ಕೊನೆಯ ಸೆಡಾನ್ ಇದಾಗಿದೆ. ಎಂಪಿವಿ ಮಾರುಕಟ್ಟೆ ಇಂದು ಒಟ್ಟು ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಸುಮಾರು 16 ಪ್ರತಿಶತ ಪಾಲನ್ನು ಹೊಂದಿದೆ. ಟೊಯೊಟಾ ಮತ್ತು ಮಾರುತಿ ಸುಜುಕಿ ಈ ವಿಭಾಗದಲ್ಲಿ ಪಾರಮ್ಯ ಹೊಂದಿವೆ.

ಮಹೀಂದ್ರಾ ಜೂನ್ 2024 ರವರೆಗೆ 44,793 ಮರಾಜೊಗಳನ್ನು ಮಾರಾಟ ಮಾಡಿದೆ. ಇದು ಮಾಸಿಕ ಸರಾಸರಿ ಸುಮಾರು 640 ಯುನಿಟ್​ಗಳು. ಕೋವಿಡ್ -19 ಲಾಕ್​ಡೌನ್​ ಸಮಯದಲ್ಲಿ ಮಾರಾಟವು ಕುಸಿಯಿತು. ಬಿಎಸ್ 6 ಹಂತ 2ರ ಮಾನದಂಡಗಳಿಂದಾಗಿ ಮರಾಜೊ ಕಾರಿನ ಡೀಸೆಲ್ ಎಂಜಿನ್ ಅನ್ನು ಅಪ್​ಡೇಟ್ ಮಾಡಲೂ ಸಾಧ್ಯವಾಗಲಿಲ್ಲ. ಮಾರಾಟದ ಅಂಕಿಅಂಶಗಳನ್ನು ದೃಷ್ಟಿಕೋನದಲ್ಲಿ ಹೇಳುವುದಾದರೆ ಮರಾಜೊ ಕಳೆದ ಐದು ತಿಂಗಳಲ್ಲಿ ಸರಾಸರಿ 34 ಯೂನಿಟ್​ ಮಾರಾಟ ಮಾಡಿದರೆ ಮಾರುತಿ ಮತ್ತು ಕಿಯಾ ಕ್ರಮವಾಗಿ ಸರಾಸರಿ 14,495 ಎರ್ಟಿಗಾಗಳು ಮತ್ತು 4,412 ಕ್ಯಾರೆನ್ಸ್ ಎಂಪಿವಿಗಳನ್ನು ಮಾರಾಟ ಮಾಡಿವೆ.

ಇದನ್ನೂ ಓದಿ: T20 World Cup : ಮಹಾರಾಷ್ಟ್ರದ ಆಟಗಾರರಿಗೆ 11 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಮಹಾ ಸಿಎಂ ಶಿಂಧೆ

ಈಗ 14.59 ಲಕ್ಷ-17 ಲಕ್ಷ ರೂ.ಗಳ ನಡುವೆ ಮಾರಾಟವಾಗುವ ಮತ್ತು ಮೂರು ಟ್ರಿಮ್ ಗಳನ್ನು ಹೊಂದಿರುವ ಮರಾಜೊ ಜೂನ್ ವರೆಗೆ 93,000 ರೂ.ಗಳವರೆಗೆ ರಿಯಾಯಿತಿಯೊಂದಿಗೆ ಲಭ್ಯವಿದೆ.

ಮರಾಜೊವನ್ನು ಭಾರತದಲ್ಲಿ ಅಭಿವೃದ್ಧಿ ಮಾಡಿಲ್ಲ. ಇದು ಅಮೆರಿಕದ ಮಿಚಿಗನ್ ನಲ್ಲಿರುವ ಮಹೀಂದ್ರಾ ನಾರ್ತ್ ಅಮೇರಿಕನ್ ಟೆಕ್ನಿಕಲ್ ಸೆಂಟರ್ (ಎಂಎನ್ ಎಟಿಸಿ) ರಚಿಸಿದ ಮೊದಲ ಕಾರು. ಮಾರಾಟಕ್ಕಿದ್ದ ಸಂಪೂರ್ಣ ಅವಧಿಯಲ್ಲಿ ಯಾವುದೇ ಅಪ್​​ಡೇಟ್ ಪಡೆಯಲಿಲ್ಲ. ಇದು ಅದರ ಮಾರಾಟ ಅಂಕಿಅಂಶಗಳ ಮೇಲೆ ಪರಿಣಾಮ ಬೀರಿತು. ಆರಂಭದಲ್ಲಿ ಎಎಂಟಿ- ಪೆಟ್ರೋಲ್ ಎಂಜಿನ್​ ಮಾದರಿಯ ಬಗ್ಗೆ ಮಾತುಕತೆಗಳು ನಡೆದರೂ ಕೊನೆಗೆ ಅದು ಬರಲಿಲ್ಲ.

ಮಹೀಂದ್ರಾ ಎಂಪಿವಿ ಏಕೈಕ 123 ಬಿಹೆಚ್ ಪಿ, 300 ಎನ್ಎಂ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಸಂ 17.3 ಕಿ.ಮೀ ಇಂಧನ ದಕ್ಷತೆಯ ರೇಟಿಂಗ್ ಅನ್ನು ಪಡೆದಿದೆ. ತನ್ನ ಎಂಪಿವಿ ಸಹೋದರರಲ್ಲಿಯೂ ಸಹ ಮರಾಜೊ ಲ್ಯಾಡರ್​ ಪ್ಲಾಟ್ ಫಾರ್ಮ್ ಹೊಂದಿದ್ದರೂ ಫ್ರಂಟ್-ವ್ಹೀಲ್-ಡ್ರೈವ್ ಸೆಟಪ್ ಅನ್ನು ಹೊಂದಿತ್ತು. ಹೀಗಾಗಿ ಬಿಡುಗಡೆಯಾದ ಸಮಯಕ್ಕೆ ಅಪೇಕ್ಷಿತವಾಗಿತ್ತು. ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಟೊಯೊಟಾದ ಇನ್ನೋವಾ ಕ್ರಿಸ್ಟಾದಂಥ ರಿಯರ್ ವೀಲ್ ಡ್ರೈವ್ ಮಾದರಿಯು ಹೆಚ್ಚು ಗಮನ ಸೆಳೆದಿತ್ತು. ಮರಾಜೊ ಎಂಪಿವಿಯನ್ನು ಸಂಪೂರ್ಣವಾಗಿ ಲೋಡ್ ಮಾಡಿದಾಗ ಅದರ ನಾಲ್ಕು ಸಿಲಿಂಡರ್​ ಎಂಜಿನ್ ಕಡಿಮೆ ಪವರ್ ಹೊಂದಿತ್ತು.

ಮಹೀಂದ್ರಾ ಮುಂಬರುವ ವಾರಗಳಲ್ಲಿ ಥಾರ್ 5-ಡೋರ್ ಅನ್ನು ಮಾರುಕಟ್ಟೆಗೆ ತರಲು ಸಜ್ಜಾಗುತ್ತಿದೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ಎಕ್ಸ್ ಯುವಿ 700 ಆಧಾರಿತ ಇವಿ ಕೂಡ ಮಾರುಕಟ್ಟೆಗೆ ಬರಲಿದೆ.

Continue Reading

ದೇಶ

BSP President: ತಮಿಳುನಾಡಿನಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಹತ್ಯೆ; ರಾಜಕೀಯ ವೈಷಮ್ಯ ಕಾರಣ?

BSP President: ಚೆನ್ನೈನ ಪೆರಂಬೂರ್‌ನಲ್ಲಿರುವ ಸದಯಪ್ಪನ್‌ ಸ್ಟ್ರೀಟ್‌ನಲ್ಲಿರುವ ಅವರ ನಿವಾಸದ ಬಳಿ ಶುಕ್ರವಾರ (ಜುಲೈ 5) ಸಂಜೆ 7.30ರ ವೇಳೆಗೆ ಸುಮಾರು 6 ಜನರ ಗ್ಯಾಂಗ್‌ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಆರ್ಮ್‌ಸ್ಟ್ರಾಂಗ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಉಪಯೋಗ ಆಗಲಿಲ್ಲ. ದಾಳಿಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

VISTARANEWS.COM


on

BSP President
Koo

ಚೆನ್ನೈ: ರಾಜಕೀಯ ಹತ್ಯೆ, ಹಿಂಸಾಚಾರ, ಬೇರೆ ರಾಜಕೀಯ ಪಕ್ಷದ ನಾಯಕರ ಮೇಲೆ ಹಲ್ಲೆಗಳು ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಲೇ ಇರುತ್ತವೆ. ಈಗ ಇಂತಹ ರಾಜಕೀಯ ದ್ವೇಷದ ಹತ್ಯೆಗಳು ತಮಿಳುನಾಡಿಗೂ ಕಾಲಿಟ್ಟಿವೆ. ಇದಕ್ಕೆ ನಿದರ್ಶನ ಎಂಬಂತೆ, ಬಹುಜನ ಸಮಾಜ ಪಕ್ಷದ (BSP President) ತಮಿಳುನಾಡು ಘಟಕದ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್‌ (Armstrong) ಅವರನ್ನು ಹತ್ಯೆ ಮಾಡಲಾಗಿದೆ. ಚೆನ್ನೈನಲ್ಲಿರುವ (Chennai) ಅವರ ನಿವಾಸದ ಬಳಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.

ಚೆನ್ನೈನ ಪೆರಂಬೂರ್‌ನಲ್ಲಿರುವ ಸದಯಪ್ಪನ್‌ ಸ್ಟ್ರೀಟ್‌ನಲ್ಲಿರುವ ಅವರ ನಿವಾಸದ ಬಳಿ ಶುಕ್ರವಾರ (ಜುಲೈ 5) ಸಂಜೆ 7.30ರ ವೇಳೆಗೆ ಸುಮಾರು 6 ಜನರ ಗ್ಯಾಂಗ್‌ ದಾಳಿ ಮಾಡಿದೆ. ಮಾರಕಾಸ್ತ್ರಗಳ ಸಮೇತ ಆಗಮಿಸಿದ ಅವರು ದಾಳಿ ನಡೆಸಿ, ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆರ್ಮ್‌ಸ್ಟ್ರಾಂಗ್‌ ಅವರನ್ನು ನಗರದಲ್ಲಿರುವ ಥೌಸಂಡ್‌ ಲ್ಯಾಂಪ್ಸ್‌ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ತಮಿಳುನಾಡು ಬಿಎಸ್‌ಪಿ ಘಟಕದ ಅಧ್ಯಕ್ಷರಾಗಿದ್ದ ಆರ್ಮ್‌ಸ್ಟ್ರಾಂಗ್‌ ಅವರು ಇದಕ್ಕೂ ಮೊದಲು ಗ್ರೇಟರ್‌ ಚೆನ್ನೈ ಕಾರ್ಪೊರೇಷನ್‌ನ ಕೌನ್ಸಿಲರ್‌ ಆಗಿದ್ದರು. ಚುನಾವಣಾ ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಳ್ಳದ ಆರ್ಮ್‌ಸ್ಟ್ರಾಂಗ್‌ ಅವರು ರಾಜ್ಯದಲ್ಲಿ ದಲಿತರ ಪರ ಚಿಂತಕ, ಅಂಬೇಡ್ಕರ್‌ವಾದಿ ಎಂಬುದಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದರು. ಹಾಗಾಗಿ, ಆರ್ಮ್‌ಸ್ಟ್ರಾಂಗ್‌ ಅವರು ರಾಜಕೀಯದಲ್ಲಿ ಹೆಚ್ಚಿನ ಶತ್ರುಗಳನ್ನು ಹೊಂದಿರಲಿಲ್ಲ. ಇಷ್ಟಾದರೂ ಅವರ ಮೇಲೆ ಹಲ್ಲೆ ನಡೆಸಿ, ಹತ್ಯೆಗೈಯಲಾಗಿದೆ.

ಆರ್ಮ್‌ಸ್ಟ್ರಾಂಗ್‌ ಜತೆಗೆ ಇನ್ನಿಬ್ಬರ ಮೇಲೆಯೂ ಹಲ್ಲೆ ನಡೆದಿದ್ದು, ಅವರು ಗಾಯಗೊಂಡಿದ್ದಾರೆ. ದಾಳಿ ಮಾಡಿದ ಆರು ಮಂದಿಯ ಕುರಿತು ಇದುವರೆಗೆ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯೂ, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: NEET Aspirant: ನೀಟ್‌ ಅಕ್ರಮ ಬಯಲಾದ ಬೆನ್ನಲ್ಲೇ 17 ವರ್ಷದ NEET ಅಭ್ಯರ್ಥಿ ಆತ್ಮಹತ್ಯೆ; ಸಾವಿಗೆ ಯಾರು ಹೊಣೆ?

Continue Reading
Advertisement
Hardik Pandya
ಪ್ರಮುಖ ಸುದ್ದಿ15 mins ago

Hardik Pandya : ವಿಶ್ವ ಕಪ್​ ಗೆದ್ದ ಹಾರ್ದಿಕ್​ ಪಾಂಡ್ಯಗೆ ಮುತ್ತು ಕೊಟ್ಟು ಅಭಿನಂದಿಸಿದ ಇಶಾನ್ ಕಿಶನ್​

Weather News
ಉತ್ತರ ಕನ್ನಡ1 hour ago

Weather News: ಭಾರಿ ಮಳೆ; ಕರಾವಳಿಯಾದ್ಯಂತ ಶಾಲೆ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

Mahindra Marazzo
ಪ್ರಮುಖ ಸುದ್ದಿ1 hour ago

Mahindra Marazzo : ಈ 7 ಸೀಟರ್​ ಕಾರಿನ ಉತ್ಪಾದನೆ ನಿಲ್ಲಿಸಿದ ಮಹೀಂದ್ರಾ

BSP President
ದೇಶ2 hours ago

BSP President: ತಮಿಳುನಾಡಿನಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಹತ್ಯೆ; ರಾಜಕೀಯ ವೈಷಮ್ಯ ಕಾರಣ?

Dengue Fever
ಕರ್ನಾಟಕ2 hours ago

Dengue Fever: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 155 ಡೆಂಗ್ಯೂ ಕೇಸ್‌ಗಳು ಪತ್ತೆ!

Rohit Sharma
ಪ್ರಮುಖ ಸುದ್ದಿ2 hours ago

T20 World Cup : ಮಹಾರಾಷ್ಟ್ರದ ಆಟಗಾರರಿಗೆ 11 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಮಹಾ ಸಿಎಂ ಶಿಂಧೆ

RBI Fine
ದೇಶ2 hours ago

RBI Fine: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಆರ್‌ಬಿಐ 1.31 ಕೋಟಿ ರೂ. ದಂಡ; ಕಾರಣ ಹೀಗಿದೆ

Namma Metro
ಕರ್ನಾಟಕ3 hours ago

Namma Metro: ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ

Viral Video
ವೈರಲ್ ನ್ಯೂಸ್3 hours ago

Viral Video: ಆಧಾರ್ ಕಾರ್ಡ್ ಫೋಟೋಗೆ ಸುಂದರ ಪೋಸ್ ಕೊಟ್ಟು ಮನ ಗೆದ್ದ ಪುಟಾಣಿ! ನಿಮಗೇನು ಅನಿಸಿತು?

Brain Eating Amoeba
ಆರೋಗ್ಯ3 hours ago

Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ5 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ7 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ8 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ10 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ11 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು12 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು13 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ17 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಟ್ರೆಂಡಿಂಗ್‌