ಬೆಟ್ಟಿಂಗ್‌ ಆ್ಯಪ್‌ನಿಂದ ಕಾಂಗ್ರೆಸ್‌ ಸಿಎಂಗೆ 508 ಕೋಟಿ ರೂ. ಲಂಚ; ಇ.ಡಿ ಸ್ಫೋಟಕ ಹೇಳಿಕೆ - Vistara News

ದೇಶ

ಬೆಟ್ಟಿಂಗ್‌ ಆ್ಯಪ್‌ನಿಂದ ಕಾಂಗ್ರೆಸ್‌ ಸಿಎಂಗೆ 508 ಕೋಟಿ ರೂ. ಲಂಚ; ಇ.ಡಿ ಸ್ಫೋಟಕ ಹೇಳಿಕೆ

ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನ ಬಾಕಿ ಇರುವ ಹೊತ್ತಿನಲ್ಲೇ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರ ವಿರುದ್ಧ 508 ಕೋಟಿ ರೂ. ಲಂಚ ಸ್ವೀಕರಿಸಿದ ಆರೋಪ ಕೇಳಿಬಂದಿದೆ. ಇದು ಈಗ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

VISTARANEWS.COM


on

Bhupesh Baghel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಯ್‌ಪುರ: ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗೆ (Chhattisgarh Polls) ಕೆಲವೇ ದಿನಗಳು ಬಾಕಿ ಇರುವ ಮಧ್ಯೆಯೇ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರಿಗೆ ಸಂಕಷ್ಟ ಎದುರಾಗಿದೆ. ಮಹಾದೇವ್‌ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್ ಪ್ರಮೋಟರ್‌ಗಳಿಂದ (Mahadev Betting App Promoters) ಇದುವರೆಗೆ ಭೂಪೇಶ್‌ ಬಘೇಲ್‌ (Bhupel Bhaghel) ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಹೇಳಿದ್ದಾರೆ. ಚುನಾವಣೆ ಹೊತ್ತಿನಲ್ಲೇ ಇ.ಡಿ ಪ್ರಸ್ತಾಪಿಸಿದ ವಿಷಯವೀಗ ಚರ್ಚೆಗೆ ಗ್ರಾಸವಾಗಿದೆ.

ಅಕ್ರಮವಾಗಿ ಹಣದ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಈಗಾಗಲೇ ಮಹಾದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರನ್ನು ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿ 5.39 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದೆ. ಅಷ್ಟೇ ಅಲ್ಲ, 15 ಕೋಟಿ ರೂ. ಇರುವ ಬ್ಯಾಂಕ್‌ ಖಾತೆಯನ್ನೂ ಜಪ್ತಿ ಮಾಡಿದೆ. ಆಸಿಂ ದಾಸ್‌ ಎಂಬಾತನನ್ನು ಕೂಡ ಇ.ಡಿ ಬಂಧಿಸಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರೇ ಲಂಚ ಸ್ವೀಕರಿಸಿದ್ದಾರೆ ಎಂದು ಇ.ಡಿ ತಿಳಿಸಿದೆ.

“ಆಸಿಂ ದಾಸ್‌ನನ್ನು ವಿಚಾರಣೆ ನಡೆಸಲಾಗಿದೆ. ಆತನ ಮೊಬೈಲ್‌ಅನ್ನೂ ಪರಿಶೀಲನೆ ನಡೆಸಲಾಗಿದೆ. ಮಹಾದೇವ್‌ ಆ್ಯಪ್ ಪ್ರಮೋಟರ್‌ಗಳಿಂದ ಇದುವರೆಗೆ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರಿಗೆ ಸುಮಾರು 508 ಕೋಟಿ ರೂ. ಸಂದಾಯವಾಗಿದೆ ಎಂಬ ವಿಷಯವನ್ನು ಆಸಿಂ ದಾಸ್‌ ತಿಳಿಸಿದ್ದಾನೆ. ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ” ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ಛತ್ತೀಸ್‌ಗಢದಲ್ಲಿ ನವೆಂಬರ್‌ 7 ಹಾಗೂ ನವೆಂಬರ್‌ 17ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: Ranbir Kapoor: ಮಹಾದೇವ್ ಬೆಟ್ಟಿಂಗ್ ಆ್ಯಪ್ ಕೇಸ್ ಸಂಬಂಧ ನಟ ರಣಬೀರ್ ಕಪೂರ್‌ಗೆ ಇಡಿ ಸಮನ್ಸ್

ಏನಿದು ಪ್ರಕರಣ?

ಮಹಾದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ತಿಂಗಳಿಂದ ಇ.ಡಿ ತನಿಖೆ ನಡೆಸುತ್ತಿದೆ. ಅದರಲ್ಲೂ, ಮಹಾದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರಲ್ಲಿ ಒಬ್ಬರಾದ ಸೌರಭ್ ಚಂದ್ರಕರ್ ಅವರು 2023ರ ಫೆಬ್ರವರಿಯಲ್ಲಿ ಯುಎಇನಲ್ಲಿ 200 ಕೋಟಿ ರೂ. ವ್ಯಯಿಸಿ ವಿವಾಹ ಮಾಡಿಕೊಂಡ ಬಳಿಕ ಪ್ರಕರಣ ಗಂಭೀರವಾಗಿದೆ. ಚಂದ್ರಕರ್ ಅವರು ಮದುವೆಗೆ ವೆಚ್ಚ ಮಾಡಿದ ಅಷ್ಟೂ 200 ಕೋಟಿ ರೂಪಾಯಿಯನ್ನು ನಗದಿನಲ್ಲಿ ಪಾವತಿಸಿದ್ದು ಬಯಲಾದ ಬಳಿಕ ತನಿಖೆ ನಡೆಸಲಾಗುತ್ತಿದೆ.

ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹವಾಲ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಖ್ಯಾತ ನಟ ರಣಬೀರ್ ಕಪೂರ್, ನಟಿ ಶ್ರದ್ಧಾ ಕಪೂರ್‌, ಹಾಸ್ಯ ಕಲಾವಿದ ಕಪಿಲ್‌ ಶರ್ಮಾ, ಹುಮಾ ಖುರೇಷಿ, ಹೀನಾ ಖಾನ್‌ ಅವರಿಗೂ ಇ.ಡಿ ಸಮನ್ಸ್‌ ನೀಡಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Anant-Radhika Wedding: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮಕ್ಕೆ ಕೆನಡಾದ ಖ್ಯಾತ ಗಾಯಕ ಆಗಮನ; ಸಂಭಾವನೆ ಕೇಳಿದ್ರೆ ದಂಗಾಗ್ತೀರಾ!

Anant-Radhika Wedding: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇದರ ವಿವರವನ್ನು ಬಹಿರಂಗಪಡಿಸುವ ಆಹ್ವಾನ ಪತ್ರಿಕೆ ರಿಲೀಸ್‌ ಆಗಿ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜುಲೈ 14ರವರೆಗೆ ಶುಭ ವಿವಾಹ, ಶುಭ ಆಶೀರ್ವಾದ ಮತ್ತು ಮಂಗಳ ಉತ್ಸವ ಎನ್ನುವ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Anant-Radhika Wedding Justin Bieber arrives in Mumbai
Koo

ಬೆಂಗಳೂರು: ಜುಲೈ 12ರಂದು ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ (Anant-Radhika Wedding) ಅವರ ಕಿರಿಯ ಮಗ ಅನಂತ್ ಅಂಬಾನಿ ಮದುವೆ ಅದ್ಧೂರಿಯಾಗಿ ನೆರವೇರುತ್ತಿದೆ. ಇಂದು (ಜುಲೈ 5) ಮುಂಬೈನಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕೆನಡಾದ ಖ್ಯಾತ ಗಾಯಕ ಜಸ್ಟಿನ್ ಬೀಬರ್ (Justin Bieber) ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈಗಾಗಲೇ ಗಾಯಕ ಮುಂಬೈಗೆ ಬಂದಿರುವ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ.

ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್ ಮತ್ತು ರಾಧಿಕಾ ವಿವಾಹವಾಗಲಿದ್ದಾರೆ. ಪಾಪರಾಜೋ ಹಂಚಿಕೊಂಡ ಕ್ಲಿಪ್‌ನಲ್ಲಿ,ಖ್ಯಾತ ಗಾಯಕ ಜಸ್ಟಿನ್ ಬೀಬರ್ ಅವರ ಕಾರು ಮುಂಬೈನಲ್ಲಿ ಕಂಡುಬಂದಿದೆ. ಮುಂಬೈನಲ್ಲಿ ಅನಂತ್ ಮತ್ತು ರಾಧಿಕಾ ಅವರ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಡೆಲೆ, ಡ್ರೇಕ್ ಮತ್ತು ಲಾನಾ ಡೆಲ್ ರೇ ಕೂಡ ಅಂಬಾನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಮಾಡಿದೆ.

ಇವರು ಸುಮಾರು 10 ಮಿಲಿಯನ್ ಅಮೆರಿಕನ್ ಡಾಲರ್ ಚಾರ್ಜ್ ಮಾಡಿದ್ದಾರೆ. ಅಂದರೆ ಭಾರತದ ರೂಪಾಯಿಗೆ ಲೆಕ್ಕ ಹಾಕಿದರೆ ಅವರ ಸಂಭಾವನೆ ಬರೋಬ್ಬರಿ 83.51 ಕೋಟಿ ರೂ.

ಜಸ್ಟಿನ್‌ ಬೀಬರ್‌ ಅವರ ಸಂಗೀತ ಕಾರ್ಯಕ್ರಮಕ್ಕೆ ವಿಶ್ವಾದ್ಯಂತ ಬೇಡಿಕೆ ಇದೆ. ಜಗತ್ತಿನ ಮಹಾನ್‌ ಗಾಯಕರಲ್ಲಿ ಒಬ್ಬನೆಂದು ಗುರುತಿಸಲಾಗುತ್ತಿರುವ ಜಸ್ಟಿನ್‌ನ್ನು ಫೇಮಸ್‌ ಮಾಡಿದ್ದು ಅವನ ತಾಯಿ. ಜಸ್ಟಿನ್‌ಗೆ 13 ವರ್ಷ ಆಗಿದ್ದಾಗ ಅವನು ಹಾಡುತ್ತಿದ್ದ ಹಾಡುಗಳನ್ನು ಅಮ್ಮ ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಅದು‌ ಜನಪ್ರಿಯವಾಗಿ ಜಾಗತಿಕ ಜನಪ್ರಿಯತೆ ಪಡೆಯಿತು. ಎರಡು ಗ್ರಾಮಿ ಸೇರಿದಂತೆ 22 ಜಾಗತಿಕ ಪ್ರಶಸ್ತಿಗಳು ದೊರೆತವು. 2022ರಲ್ಲಿ ಜಸ್ಟಿನ್ ಬೀಬರ್​ ಮುಖಕ್ಕೆ ಪಾರ್ಶವಾಯು ಆಗಿತ್ತು. ಹೀಗಾಗಿ ಅವರ ಅನೇಕ ಶೋಗಳು ಕ್ಯಾನ್ಸಲ್ ಆಗಿತ್ತು. ಈಗ ಅವರು ಇದರಿಂದ ಚೇತರಿಕೆ ಕಂಡಿದ್ದಾರೆ.

ಇದನ್ನೂ ಓದಿ: Anant-Radhika Wedding: ಅನಂತ್‌ ಅಂಬಾನಿ ಮದುವೆಗೆ ಪೂರ್ವಭಾವಿಯಾಗಿ ಸಾಮೂಹಿಕ ವಿವಾಹ; ಪ್ರತಿ ವಧುವಿಗೆ ಚಿನ್ನಾಭರಣ, 1 ಲಕ್ಷ ರೂ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇದರ ವಿವರವನ್ನು ಬಹಿರಂಗಪಡಿಸುವ ಆಹ್ವಾನ ಪತ್ರಿಕೆ ರಿಲೀಸ್‌ ಆಗಿ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜುಲೈ 14ರವರೆಗೆ ಶುಭ ವಿವಾಹ, ಶುಭ ಆಶೀರ್ವಾದ ಮತ್ತು ಮಂಗಳ ಉತ್ಸವ ಎನ್ನುವ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ. ಕೆಲವು ದಿನಗಳ ಹಿಂದೆ ಮೂರು ದಿನಗಳ ಅದ್ದೂರಿ ಮದುವೆ ಪೂರ್ವ ಸಮಾರಂಭ ನಡೆದಿತ್ತು. ದೇಶ-ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು.

Continue Reading

ಕ್ರೀಡೆ

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ದೇಶದ ಕ್ರೀಡಾಪಟುಗಳ ಶ್ರೇಷ್ಠ ಪ್ರದರ್ಶನ; ಮೋದಿ ವಿಶ್ವಾಸ

Paris Olympics 2024: ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಅಥ್ಲೀಟಿಕ್​ ತಂಡಕ್ಕೆ ನಾಯಕನಾಗಿದ್ದಾರೆ. 28 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡದ ಕಿರುಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸ್ಪರ್ಧಾವಳಿಯು ಆಗಸ್ಟ್ 1ರಿಂದ 11ರ ತನಕ ಪ್ಯಾರಿಸ್ ನಲ್ಲಿ ನಡೆಯಲಿದೆ

VISTARANEWS.COM


on

Paris Olympics 2024
Koo

ನವದೆಹಲಿ: ಜುಲೈ 26ರಂದು ಆರಂಭಗೊಳ್ಳಲಿರುವ ಬಹುದೊಡ್ಡ ಕ್ರೀಡಾಕೂಟವಾದ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics 2024) ಪಾಲ್ಗೊಳ್ಳುವ ಭಾರತೀಯ ತಂಡವು ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತದೆ ಮತ್ತು 140 ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಒಲಿಂಪಿಕ್ಸ್‌ಗಾಗಿ ಪ್ಯಾರಿಸ್‌ಗೆ ತೆರಳುತ್ತಿರುವ ಭಾರತೀಯ ತಂಡದೊಂದಿಗೆ ಪ್ರಧಾನಿ ಮೋದಿ ಅವರು ಸಂವಾದ ನಡೆಸಿದರು. ಈ ಸಂವಾದದ ಬಳಿಕ ಟ್ವೀಟ್​ ಮಾಡಿದ ಮೋದಿ, “ನಮ್ಮ ಅಥ್ಲೀಟ್​ಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ದೇಶವನ್ನು ಹೆಮ್ಮೆಪಡಿಸುವ ವಿಶ್ವಾಸ ನನಗಿದೆ. ಅವರ ಜೀವನ ಪಯಣ ಮತ್ತು ಯಶಸ್ಸು 140 ಕೋಟಿ ಭಾರತೀಯರಿಗೆ ಭರವಸೆಯನ್ನು ನೀಡುತ್ತದೆ” ಎಂದು ಬರೆದುಕೊಂಡಿದ್ದಾರೆ. ಈ ಬಾರಿ ಪ್ಯಾರಿಸ್‌ ಗೇಮ್ಸ್‌ಗೆ ಭಾರತೀಯ ತಂಡವು ಸರಿಸುಮಾರು 120 ಅಥ್ಲೀಟ್​ಗಳನ್ನು ಕಳುಹಿಸಲಿದ್ದು ಕಳೆದ ಟೋಕಿಯೊ ಗೇಮ್ಸ್‌ಗಿಂತ ಉತ್ತಮ ಮಟ್ಟದ ನಿರ್ವಹಣೆಯನ್ನು ನೀಡುವ ಭರವಸೆ ಇಡಲಾಗಿದೆ.

ಅಥ್ಲೀಟಿಕ್​ ತಂಡಕ್ಕೆ ನೀರಜ್​ ನಾಯಕ


ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಅಥ್ಲೀಟಿಕ್​ ತಂಡಕ್ಕೆ ನಾಯಕನಾಗಿದ್ದಾರೆ. 28 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡದ ಕಿರುಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸ್ಪರ್ಧಾವಳಿಯು ಆಗಸ್ಟ್ 1ರಿಂದ 11ರ ತನಕ ಪ್ಯಾರಿಸ್​ನಲ್ಲಿ ನಡೆಯಲಿದೆ.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಇದನ್ನೂ ಓದಿ Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ 9 ಅಥ್ಲೀಟ್​ಗಳು

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸುವ ಉದ್ದೇಶದಿಂದ ರಿಲಯನ್ಸ್‌ ಸಂಸ್ಥೆ “ಇಂಡಿಯಾ ಹೌಸ್​”(India House)​ ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿದೆ. ಭಾರತೀಯ ಕ್ರೀಡಾಪಟುಗಳು ಇದರಲ್ಲೇ ಉಳಿದುಕೊಳ್ಳಲಿದ್ದಾರೆ.

ಇಂಡಿಯಾ ಹೌಸ್​ಗೆ ಎಲ್ಲ ದೇಶಗಳ ಪತ್ರಕರ್ತರಿಗೆ ಮುಕ್ತ ಪ್ರವೇಶವಿದೆ ಎಂದು ನೀತಾ ಅಂಬಾನಿ(Nita Ambani) ಹೇಳಿದ್ದಾರೆ. ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಒಸಿ.) ಸದಸ್ಯೆಯಾಗಿದ್ದಾರೆ. ಅಮೆರಿಕಾದ ಲಾಸ್ ಏಂಜಲಿಸ್​ನಲ್ಲಿ 2028ರಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಸೇರ್ಪಡೆಗೊಳ್ಳುವಲ್ಲಿ ನೀತಾ ಅಂಬಾನಿ ಅವರ ಪಾತ್ರವೂ ಪ್ರಮುಖವಾಗಿತ್ತು. ಕಳೆದ ವರ್ಷ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನ(International Olympic Committee Session) ಮುಂಬೈಯಲ್ಲಿ ನಡೆದ ವೇಳೆಯೂ ನೀತಾ ಅಂಬಾನಿ ಈ ಸಭೆಯ ವಕಾಲತ್ತು ವಹಿಸಿದ್ದರು.

Continue Reading

ದೇಶ

Hathras Stampede: ಇಂದು ಹತ್ರಾಸಕ್ಕೆ ರಾಹುಲ್‌ ಗಾಂಧಿ; ಕಾಲ್ತುಳಿತ ಸಂತ್ರಸ್ತರ ಭೇಟಿ

Hathras Stampede: ಉತ್ತರಪ್ರದೇಶದ ಹತ್ರಾಸಕ್ಕೆ ಇಂದು (ಜುಲೈ 5) ಲೋಕಸಭೆಯ ಪ್ರತಿಪಕ್ಷದ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಭೇಟಿ ನೀಡಲಿದ್ದು, ಜುಲೈ 2ರಂದು ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.

VISTARANEWS.COM


on

Hathras Stampede
Koo

ಲಖನೌ: ಉತ್ತರಪ್ರದೇಶದ ಹತ್ರಾಸಕ್ಕೆ ಇಂದು (ಜುಲೈ 5) ಲೋಕಸಭೆಯ ಪ್ರತಿಪಕ್ಷದ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) ಭೇಟಿ ನೀಡಲಿದ್ದು, ಜುಲೈ 2ರಂದು ನಡೆದ ಕಾಲ್ತುಳಿತ (Hathras Stampede)ದಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಕಾಲ್ತುಳಿತಕ್ಕಿ ಸಿಲುಕಿ ಮೃತಪಟ್ಟಪಟ್ಟವರ ಸಂಖ್ಯೆ 123ಕ್ಕೆ ಏರಿದ್ದು, ಹಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ದುರಂತದ ಹಿನ್ನೆಲೆ

ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಜುಲೈ 2ರಂದು ಸ್ವಯಂ ಘೋಷಿತ ʼದೇವ ಮಾನವʼ ಭೋಲೆ ಬಾಬಾ (Bhole Baba) ಅವರ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಕ್ಕಟ್ಟಾದ ಸ್ಥಳದಲ್ಲಿ ಲಕ್ಷಾಂತರ ಮಂದಿ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು.

ಪೊಲೀಸ್‌ ತನಿಖೆಯ ಪ್ರಾಥಮಿಕ ವರದಿಯು, ʼʼ80 ಸಾವಿರ ಜನರಿಗಾಗಿ ಅನುಮತಿ ಪಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಭೋಲೆ ಬಾಬಾ ಮಧ್ಯಾಹ್ನ 12.30ರ ಸುಮಾರಿಗೆ ಸತ್ಸಂಗ ಪೆಂಡಾಲ್‌ಗೆ ಆಗಮಿಸಿದ್ದರು. ಕಾರ್ಯಕ್ರಮವು 1 ಗಂಟೆ ನಡೆಯಿತು. ನಂತರ ಮಧ್ಯಾಹ್ನ 1.40ರ ಸುಮಾರಿಗೆ ಭೋಲೆ ಬಾಬಾ ಪೆಂಡಾಲ್‌ನಿಂದ ಹೊರಬಂದರು. ಭೋಲೆ ಬಾಬಾ ಹೊರಡುವ ವೇಳೆ ವೇಳೆ ಲಕ್ಷಾಂತರ ಮಂದಿ ಅವರ ಪಾದ ಮುಟ್ಟಿ, ಅವರು ಮೆಟ್ಟಿದ ನೆಲದ ಮಣ್ಣನ್ನು ತೆಗೆದುಕೊಳ್ಳಲು ಓಡಿ ಹೋಗಿದ್ದಾರೆ. ಹಾಗೆ ಓಡಿ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಗಿದೆ. ಒಬ್ಬರನ್ನೊಬ್ಬರು ತುಳಿದುಕೊಂಡು ಮುಂದೆ ಸಾಗಿದ್ದು ಹಾಗೂ ಚರಂಡಿಯಲ್ಲಿ ಬಿದ್ದಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಲು ಕಾರಣ” ಎಂದು ವಿವರಿಸಿದೆ.

ತಲೆ ಮರೆಸಿಕೊಂಡಿರುವ ಭೋಲೆ ಬಾಬಾ

ಘಟನೆ ನಡೆದ ಬಳಿಕ ಭೋಲೆ ಬಾಬಾ ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಭೋಲೆ ಬಾಬಾ ಅವರು ತಮ್ಮ ಮೈನ್ಪುರಿಯ ಆಶ್ರಮದಲ್ಲಿಯೂ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಭೋಲೆ ಬಾಬಾ ಅವರ ವಕೀಲರು ಮಾತನಾಡಿ, ʼʼಅವರು (ಭೋಲೆ ಬಾಬಾ) ಎಲ್ಲಿದ್ದಾರೆಂದು ತಿಳಿದಿಲ್ಲ. ಈ ದುರಂತಕ್ಕೆ ಅವರು ಕಾರಣರಲ್ಲ. ಅವರು ಕಾನೂನಿನ ಕಣ್ಣು ತಪ್ಪಿಸಿ ಓಡಾಡುವುದಿಲ್ಲ. ಅವು ಸಂವಿಧಾನವದಲ್ಲಿ ನಂಬಿಕೆ ಇರಿಸಿದ್ದಾರೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಅವರು ಪತ್ತೆಯಾದರೆ ಖಂಡಿತವಾಗಿತಯೂ ನಿಮಗೆ ತಿಳಿಸುತ್ತೇನೆʼʼ ಎಂದು ಭೋಲೆ ಬಾಬಾ ಅವರ ವಕೀಲ ಎ.ಪಿ.ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

ಭೋಲೆ ಬಾಬಾ ಅಜ್ಞಾತ ಸ್ಥಳದಿಂದ ಹೇಳಿಕೆ ಬಿಡುಗಡೆ ಮಾಡಿ, ಕಾಲ್ತುಳಿತಕ್ಕೆ ಸಮಾಜಘಾತಕ ಶಕ್ತಿಯೇ ಕಾರಣ ಎಂದು ಆರೋಪಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿ ತನಿಖೆ ಆರಂಭಿಸಿರುವ ಉತ್ತರ ಪ್ರದೇಶ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. “ಹತ್ರಾಸ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿ ಒಟ್ಟು ಆರು ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ” ಎಂದು ಅಲಿಗಢ ಐಜಿ ಶಾಲಾಭ್‌ ಮಾಥುರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Continue Reading

ದೇಶ

10 ರೂ.ಗಾಗಿ ಎಲ್ಲರ ಮುಂದೆ ಪ್ಯಾಂಟ್‌ ಬಿಚ್ಚಿ, ಆಟೋ ಡ್ರೈವರ್‌ ಮೇಲೆ ಮಂಗಳಮುಖಿ ಹಲ್ಲೆ; Video ಇಲ್ಲಿದೆ

ಇ-ರಿಕ್ಷಾದಿಂದ ಚಾಲಕನನ್ನು ಇಳಿಸಿ, ಆತನ ಕೊರಳಪಟ್ಟಿ ಹಿಡಿದು, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಆಟೋ ಚಾಲಕನು ಕೂಡ ಮಂಗಳಮುಖಿಗೆ ಹೊಡೆದಿದ್ದಾನೆ. ಇದೇ ವೇಳೆ, ಮಂಗಳಮುಖಿಗೆ ಏನು ಅನಿಸಿತೋ ಏನೋ, ಕೂಡಲೇ ತಮ್ಮ ಪ್ಯಾಂಟ್‌ ಬಿಚ್ಚಿ, ಬೆತ್ತಲೆಯಾಗಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Viral Video
Koo

ನವದೆಹಲಿ: ರೈಲುಗಳಲ್ಲಿ, ಬಸ್‌ ಸ್ಟ್ಯಾಂಡ್‌ಗಳು, ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಮಂಗಳಮುಖಿಯರು (Transgenders) ಜನರಿಂದ 5-10 ರೂ. ಪಡೆಯುತ್ತಾರೆ. ಜನರೂ ಕರುಣೆ ತೋರಿಸಿ ಅವರಿಗೆ ಹಣ ನೀಡುತ್ತಾರೆ. ಕೆಲವೊಮ್ಮೆ ಕಾಡಿ-ಬೇಡಿ ಮಂಗಳಮುಖಿಯರು ಜನರಿಂದ ಹಣ ಪಡೆಯುತ್ತಾರೆ. ಇದರಿಂದ ಜಗಳಗಳೂ ನಡೆದಿರುವ ಉದಾಹರಣೆಗಳು ಇವೆ. ಇದಕ್ಕೆ ತಾಜಾ ನಿದರ್ಶನ ಎಂಬಂತೆ, ಮಂಗಳಮುಖಿಯೊಬ್ಬರು 10 ರೂ.ಗಾಗಿ ಎಲ್ಲರ ಮುಂದೆಯೇ ಪ್ಯಾಂಟ್‌ ಬಿಚ್ಚಿಕೊಂಡು, ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ವ್ಯಕ್ತಿಯು ಇ-ರಿಕ್ಷಾವನ್ನು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದು, ಈತನ ರಿಕ್ಷಾವನ್ನು ಮಂಗಳಮುಖಿ ಹತ್ತಿದ್ದಾರೆ. ಮಂಗಳಮುಖಿಯು ಇಳಿಯುವಾಗ ಎಂದಿನಂತೆ ಇ-ರಿಕ್ಷಾ ಚಾಲಕನು 10 ರೂ. ಬಾಡಿಗೆ ಕೊಡಿ ಎಂದಿದ್ದಾನೆ. ಇದರಿಂದ ಕುಪಿತಗೊಂಡ ಮಹಿಳೆಯು ಆತನ ಜತೆ ಜಗಳಕ್ಕೆ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಬಾಡಿಗೆ ಕೊಡುವುದಿಲ್ಲ ಎಂದು ಹೇಳುವ ಜತೆಗೆ ಬೈದಿದ್ದಾರೆ. ಇದಾದ ನಂತರ ಆಟೋ ಚಾಲಕನು ಕೂಡ ಗದರಿದ್ದಾನೆ. ಆಗ ಮಂಗಳಮುಖಿಯ ಕೋಪ ದ್ವಿಗುಣಗೊಂಡಿದೆ. ಕೂಡಲೇ ಆಟೋ ಚಾಲಕನ ಮೇಲೆ ದಾಳಿ ನಡೆಸಿದ್ದಾರೆ.‌ ಘಟನೆಯು ಎಲ್ಲಿ ನಡೆದಿದೆ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

ಇ-ರಿಕ್ಷಾದಿಂದ ಚಾಲಕನನ್ನು ಇಳಿಸಿ, ಆತನ ಕೊರಳಪಟ್ಟಿ ಹಿಡಿದು, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಆಟೋ ಚಾಲಕನು ಕೂಡ ಮಂಗಳಮುಖಿಗೆ ಹೊಡೆದಿದ್ದಾನೆ. ಇದೇ ವೇಳೆ, ಮಂಗಳಮುಖಿಗೆ ಏನು ಅನಿಸಿತೋ ಏನೋ, ಕೂಡಲೇ ತಮ್ಮ ಪ್ಯಾಂಟ್‌ ಬಿಚ್ಚಿ, ಬೆತ್ತಲೆಯಾಗಿದ್ದಾರೆ. ಪ್ಯಾಂಟ್‌ ಬಿಚ್ಚಿ ಬೆತ್ತಲೆಯಾದ ಬಳಿಕವೂ ಅವರು ಮತ್ತೆ ಚಾಲಕನ ಮೇಳೆ ಹಲ್ಲೆ ನಡೆಸಿದ್ದಾರೆ. ಕೇವಲ 10 ರೂ.ಗಾಗಿ ಇಬ್ಬರೂ ರಸ್ತೆ ಮಧ್ಯೆ ಕಾದಾಡಿಕೊಂಡಿರುವ ವಿಡಿಯೊ ಭಾರಿ ಸದ್ದು ಮಾಡುತ್ತಿದೆ.

ವಿಡಿಯೊ ವೈರಲ್‌ ಆಗುತ್ತಲೇ ಹತ್ತಾರು ಅಭಿಪ್ರಾಯಗಳು ವ್ಯಕ್ತವಾಗಿವೆ. “ಆಟೋ ಚಾಲಕರು 10 ರೂ.ಗಾಗಿ ದುಡಿಯುತ್ತಾರೆ. ಮಂಗಳಮುಖಿಯರು ಅವರಿಗೆ ಬಾಡಿಗೆ ಕೊಡಬೇಕು. ಅವರು ಬೇಕಾದರೆ ಶ್ರೀಮಂತರ ಬಳಿ ಹಣ ಪಡೆಯಲಿ” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಮಂಗಳಮುಖಿಯರು ಕೆಲಸ ಮಾಡುತ್ತೇವೆ ಎಂದರೆ ಯಾರೂ ಕೆಲಸ ಕೊಡಲ್ಲ. ಅವರಿಗೆ ಮಾನವೀಯತೆ ಆಧಾರದ ಮೇಲೆ ಜನ ನೆರವು ನೀಡಬೇಕು” ಎಂಬುದಾಗಿ ಹೇಳಿದ್ದಾರೆ. ಹೀಗೆ ಪರ-ವಿರೋಧಗಳ ಚರ್ಚೆಯಾಗಿದೆ.

ಇದನ್ನೂ ಓದಿ: Assault Case: ಸಾಲ ವಾಪಸ್‌ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತ

Continue Reading
Advertisement
Anant-Radhika Wedding Justin Bieber arrives in Mumbai
ಬಾಲಿವುಡ್2 mins ago

Anant-Radhika Wedding: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮಕ್ಕೆ ಕೆನಡಾದ ಖ್ಯಾತ ಗಾಯಕ ಆಗಮನ; ಸಂಭಾವನೆ ಕೇಳಿದ್ರೆ ದಂಗಾಗ್ತೀರಾ!

Upcoming SUVs
ಆಟೋಮೊಬೈಲ್2 mins ago

Upcoming SUVs: ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಸ್ ಯು ವಿಗಳು

UK Election
ವಿದೇಶ6 mins ago

UK Election: ಬ್ರಿಟನ್‌ ಸಂಸತ್‌ ಚುನಾವಣೆ; ರಿಷಿ ಸುನಕ್ ಪಕ್ಷಕ್ಕೆ ಭಾರೀ ಹಿನ್ನಡೆ

Paris Olympics 2024
ಕ್ರೀಡೆ20 mins ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ದೇಶದ ಕ್ರೀಡಾಪಟುಗಳ ಶ್ರೇಷ್ಠ ಪ್ರದರ್ಶನ; ಮೋದಿ ವಿಶ್ವಾಸ

Prajwal Devaraj New Movie Rakshasa
ಸ್ಯಾಂಡಲ್ ವುಡ್27 mins ago

Prajwal Devaraj: ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಡೈನಾಮಿಕ್‌ ಪ್ರಿನ್ಸ್ `ಪ್ರಜ್ವಲ್ ದೇವರಾಜ್`

Hathras Stampede
ದೇಶ43 mins ago

Hathras Stampede: ಇಂದು ಹತ್ರಾಸಕ್ಕೆ ರಾಹುಲ್‌ ಗಾಂಧಿ; ಕಾಲ್ತುಳಿತ ಸಂತ್ರಸ್ತರ ಭೇಟಿ

Sleep Apnea
ಆರೋಗ್ಯ44 mins ago

Sleep Apnea: ಗೊರಕೆಯೆಂದು ನಿರ್ಲಕ್ಷಿಸಬೇಡಿ, ಇದು ಜೀವಕ್ಕೂ ಎರವಾದೀತು!

Job Interview
Latest44 mins ago

Job Interview: ಉದ್ಯೋಗ ಸಂದರ್ಶನವನ್ನು ಹೇಗೆ ಎದುರಿಸಬೇಕು? ಈ ಟಿಪ್ಸ್‌ ಫಾಲೋ ಮಾಡಿ

chemicals in food
ಕೋಲಾರ51 mins ago

Chemicals in Food: ಕ್ಯಾನ್ಸರ್​ ಕಾರಕ ಅಂಶವಿರುವ ರಾಸಾಯನಿಕ ಕಲರ್ ಬಳಸಿದ ಸ್ವೀಟ್​ ವಶಕ್ಕೆ

dengue fever hassan news
ಹಾಸನ1 hour ago

Dengue Fever: ಹಾಸನದಲ್ಲಿ ಶಂಕಿತ ಡೆಂಗ್ಯು ಜ್ವರದಿಂದ ನಾಲ್ಕನೇ ಬಾಲಕಿ ಬಲಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast Rain
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ14 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ16 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ17 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ19 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ19 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ21 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ21 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ3 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ4 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌