Dina Bhavishya : ಈ ರಾಶಿಯವರಿಗೆ ಕಲಹದಿಂದಲೇ ದಿನ ಶುರು! ಇರಲಿ ಜಾಗ್ರತೆ - Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರಿಗೆ ಕಲಹದಿಂದಲೇ ದಿನ ಶುರು! ಇರಲಿ ಜಾಗ್ರತೆ

Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷದ ನವಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Dina Bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಸಿಂಹ ರಾಶಿಯಿಂದ ಸೋಮವಾರ ಮಧ್ಯಾಹ್ನ 02:39ಕ್ಕೆ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ಹಾಗೂ ಮೀನ ರಾಶಿಯವರು ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ವೃಷಭ ರಾಶಿಯವರು ಅತಿರೇಕದಲ್ಲಿ ಮಾತನಾಡುವ ಮುನ್ನ ಯೋಚಿಸಿ. ವೃಶ್ಚಿಕ ರಾಶಿಯವರಿಗೆ ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ ಇದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (6-11-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ
ತಿಥಿ: ನವಮಿ 29:50 ವಾರ: ಸೋಮವಾರ
ನಕ್ಷತ್ರ: ಆಶ್ಲೇಷಾ 13:21 ಯೋಗ: ಶುಕ್ಲ 14:23
ಕರಣ: ತೈತುಲ 16:33 ಅಮೃತ ಕಾಲ: ಬೆಳಗ್ಗೆ 11:35ರಿಂದ 1:23ರವರೆಗೆ

ಸೂರ್ಯೋದಯ : 06:15  ಸೂರ್ಯಾಸ್ತ : 05:52

ರಾಹುಕಾಲ : ಬೆಳಗ್ಗೆ 7:42 ರಿಂದ 09:09
ಗುಳಿಕಕಾಲ: ಮಧ್ಯಾಹ್ನ 1:30 ರಿಂದ 2: 57
ಯಮಗಂಡಕಾಲ: ಬೆಳಗ್ಗೆ 10:36 ರಿಂದ 12:03

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ಆಪ್ತ ವ್ಯಕ್ತಿಗಳಿಂದ ಸಹಾಯ ಬೇಡುವಿರಿ. ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಉಂಟಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಷಭ: ಅತಿರೇಕದಲ್ಲಿ ಮಾತನಾಡುವ ಮುನ್ನ ಯೋಚಿಸಿ. ತಿಳಿಯದೆ ನಿಮ್ಮ ಅಭಿಪ್ರಾಯಗಳು ಬೇರೊಬ್ಬರ ಭಾವನೆಗಳಿಗೆ ಧಕ್ಕೆಯುಂಟು ಮಾಡಬಹುದು. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಶುಭ ಫಲ.ಕುಟಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ಆರೋಗ್ಯ ಪರಿಪೂರ್ಣವಾಗಿರಲಿದೆ. ಸ್ನೇಹಿತರಿಗೆ ಸಹಾಯ ಮಾಡುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಸಕರಾತ್ಮಕ ಆಲೋಚನೆಗಳು ಪುಷ್ಠಿ ನೀಡುತ್ತದೆ. ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿಯನ್ನುಂಟು ಮಾಡುತ್ತದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕೆಲಸ ಕಾರ್ಯಗಳಲ್ಲಿ ಒತ್ತಡ ಉಂಟು ಮಾಡುವ ವಿಚಾರಗಳಿಂದ ದೂರ ಇರಿ. ತಾಳ್ಮೆ ಇರಲಿ. ಅಗತ್ಯಕ್ಕಾಗಿ ಯಾರದಾದರೂ ಹಣದ ಸಹಾಯ ಬೇಡುವ ಸಾಧ್ಯತೆ ಇದೆ. ಆಲೋಚಿಸಿ ಮುಂದುವರಿಯಿರಿ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ಇತರರು ನಿಮ್ಮ ಕಾರ್ಯಗಳಿಗೆ ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ .ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗ, ಆರೋಗ್ಯ, ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ನಿಮ್ಮ ಒತ್ತಡವನ್ನು ಇತರರ ಮೇಲೆ ಹಾಕಿ ಕೋಪಗೊಳ್ಳುವುದು ಬೇಡ. ಸಮಾಧಾನದಿಂದ ವರ್ತಿಸಿ. ಆರ್ಥಿಕವಾಗಿ ಸಾಧಾರಣವಾಗಿರಲಿದೆ. ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆಪ್ತರೊಂದಿಗೆ ಬಾಲ್ಯದ ನೆನಪು ಹಂಚಿಕೊಳ್ಳುವಿರಿ. ಮನಸ್ಸಿನ ಒತ್ತಡ ಈ ಮೂಲಕ ಹೊರಹಾಕುವಿರಿ. ಆರೋಗ್ಯ ಮಧ್ಯಮವಾಗಿರಲಿದೆ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಕಾರ್ಯದಲ್ಲಿ ನಿಧಾನಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಧನಸ್ಸು: ಚುರುಕುತನದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಲಾಭ ಸಿಗಲಿದೆ. ಹೊಸ ಸ್ನೇಹಿತರ ಪರಿಚಯ ಆಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಮಕರ: ಸಮಯ ವ್ಯರ್ಥಮಾಡಿ ಕೊರಗುವುದು ಬೇಡ. ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಉತ್ತಮ ಆಲೋಚನೆಗಳು ಇರಲಿ. ಹಳೆಯ ನೆನಪುಗಳು ಮಾನಸಿಕ ಒತ್ತಡ ಉಂಟು ಮಾಡುವ ಸಾಧ್ಯತೆ ಇದೆ. ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ವಿನಾಕಾರಣ ಕುಟುಂಬದ ಸದಸ್ಯರೊಂದಿಗೆ ಕಲಹಗಳು ಸೃಷ್ಟಿ ಆಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕುಂಭ: ಅಧಿಕ ಶ್ರಮದಿಂದ ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ಕಾಳಜಿ ಇರಲಿ. ಸಾಂಕ್ರಮಿಕ ರೋಗ ಕಾಡಬಹುದು, ಆದಷ್ಟು ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಸ್ನೇಹಿತರ ಸಹಕಾರ ಸಿಗಲಿದೆ. ಸಂಗಾತಿಯೊಂದಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮೀನ: ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣ ವಾಗಿರಲಿದೆ. ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ಮಾಡಿಕೊಡಬೇಡಿ. ಉದ್ಯೋಗದಲ್ಲಿ ಹೊಸ ಭರವಸೆ ಮೂಡಲಿದೆ. ಮನಸ್ಸಿನ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಸಾಧನೆಯಿಂದ ತಂದುಕೊಳ್ಳಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

ತನಗೆ ಒಮ್ಮೆ ಕಚ್ಚಿದ ಹಾವಿಗೆ ಮೂರು ಬಾರಿ ಕಚ್ಚಿ ಸೇಡು ತೀರಿಸಿಕೊಂಡ ವ್ಯಕ್ತಿ; ಕೊನೆಗೆ ಬದುಕುಳಿದಿದ್ದು ಯಾರು?

ಬಿಹಾರದ ರಾಜೌಲಿ ಪ್ರದೇಶದಲ್ಲಿ ಜಾರ್ಖಂಡ್‌ ಮೂಲದ ಸಂತೋಷ್‌ ಲೋಹರ್‌ ಎಂಬ ವ್ಯಕ್ತಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ಬಳಿಕ ಗಾಬರಿಯಾಗದ ಆತನು ಆಸ್ಪತ್ರೆಗೆ ಓಡದೆ, ಹಾವಿಗೇ ವಾಪಸ್‌ ಮೂರು ಬಾರಿ ಕಚ್ಚಿದ್ದಾನೆ. ಇದಾದ ಬಳಿಕವೇ ಆತನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಹಾವು ಹಾಗೂ ವ್ಯಕ್ತಿ ನಡುವಿನ ಕಾಳಗದಲ್ಲಿ ಯಾರು ಗೆದ್ದರು? ಇಲ್ಲಿದೆ ಮಾಹಿತಿ.

VISTARANEWS.COM


on

Snake
Koo

ಪಟನಾ: ಹಾವುಗಳು (Snakes) ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಸಣ್ಣ ಹಾವು ಕಚ್ಚಿದರೂ ಗಾಬರಿಯಾಗುತ್ತದೆ. ಕೂಡಲೇ ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡೆಯುತ್ತೇವೆ. ಹಳ್ಳಿಯಲ್ಲಾದರೆ ಆಯುರ್ವೇದದಿಂದ ಹಾವಿನ ವಿಷಯವನ್ನು ನಿಗ್ರಹಿಸಲಾಗುತ್ತದೆ. ಅಷ್ಟರಮಟ್ಟಿಗೆ, ಹಾವು ಕಚ್ಚಿದರೆ (Snake Bite) ಗಾಬರಿ, ಆತಂಕ, ಭಯ ಆಗುತ್ತದೆ. ಆದರೆ, ಬಿಹಾರದಲ್ಲೊಬ್ಬ (Bihar) ಭೂಪನು, ತನಗೆ ಕಚ್ಚಿದ ಹಾವಿಗೇ ವಾಪಸ್‌ ಮೂರು ಬಾರಿ ಕಚ್ಚಿದ್ದಾನೆ. ಎಂತಹ ಅದೃಷ್ಟ ನೋಡಿ, ಹಾವು ಕಚ್ಚಿಸಿಕೊಂಡ ವ್ಯಕ್ತಿಯು ಬದುಕುಳಿದರೆ, ಈತನಿಂದ ಕಚ್ಚಿಸಿಕೊಂಡ ಹಾವು ಸತ್ತುಹೋಗಿದೆ.

ಹೌದು, ಬಿಹಾರದ ರಾಜೌಲಿ ಪ್ರದೇಶದಲ್ಲಿ ಇಂತಹದ್ದೊಂದು ವಿಸ್ಮಯಕಾರಿ ಘಟನೆ ನಡೆದಿದೆ. ಜಾರ್ಖಂಡ್‌ ಮೂಲದ ಸಂತೋಷ್‌ ಲೋಹರ್‌ ಎಂಬ ವ್ಯಕ್ತಿಯು ರೈಲ್ವೆ ಲೈನ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಈತನ ದಿನದ ಕೆಲಸ ಮುಗಿಸಿ ರೌಜಲಿಯಲ್ಲಿರುವ ಕ್ಯಾಂಪ್‌ನಲ್ಲಿ ಕಳೆದ ಮಂಗಳವಾರ (ಜುಲೈ 2) ಮಲಗಿದ್ದಾನೆ. ಇದೇ ವೇಳೆ ಹಾವೊಂದು ಸಂತೋಷ್‌ ಲೋಹರ್‌ಗೆ ಕಚ್ಚಿದೆ. ಹಾವು ಕಚ್ಚಿದ ಬಳಿಕ ಗಾಬರಿಯಾಗದ, ಆಸ್ಪತ್ರೆಗೆ ಓಡದ ಈತನು ಕಬ್ಬಿಣದ ರಾಡ್‌ನಿಂದ ಹಾವನ್ನು ಹಿಡಿದು, ಅದಕ್ಕೇ ಮೂರು ಬಾರಿ ಕಚ್ಚಿದ್ದಾನೆ. ಈತನು ಕಚ್ಚಿದ ತೀವ್ರತೆಗೆ ಹಾವೇ ಸತ್ತುಹೋಗಿದೆ.

Snake bite

ಸಂತೋಷ್‌ ಲೋಹರ್‌ನನ್ನು ಕೂಡಲೇ ಆತನ ಸಹೋದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಈತನು ಬಹುತೇಕ ಗುಣಮುಖನಾಗಿದ್ದಾನೆ. “ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ ಕಾರಣ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶೀಘ್ರದಲ್ಲೇ ಆತನನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗುವುದು” ಎಂದು ಚಿಕಿತ್ಸೆ ನೀಡಿದ ಡಾ.ಸತೀಶ್‌ ಚಂದ್ರ ಅವರು ಮಾಹಿತಿ ನೀಡಿದ್ದಾರೆ. ಈತನ ಸಾಹಸವನ್ನು ಕೇಳಿದ ಸುತ್ತಮುತ್ತಲಿನ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಂತೋಷ್‌ ಲೋಹರ್‌ನು ಹಾವಿಗೆ ವಾಪಸ್‌ ಕಚ್ಚಿದ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈತನ ಸಂದರ್ಶನವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. “ನಮ್ಮ ಊರಿನಲ್ಲಿ ಒಂದು ಮಾತಿದೆ. ನಮಗೇನಾದರೂ ಹಾವು ಕಚ್ಚಿದರೆ, ಅದಕ್ಕೆ ಎರಡು ಬಾರಿ ವಾಪಸ್‌ ಕಚ್ಚಬೇಕು ಎಂಬ ಪದ್ಧತಿ ಇದೆ. ಅದರಂತೆ, ನಾನು ಹಾವಿಗೆ ವಾಪಸ್‌ ಕಚ್ಚಿದೆ. ಇದರಿಂದ ನಾನು ಬದುಕುಳಿದೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ, ಈತನಿಗೆ ಕಚ್ಚಿದ ಹಾವಿನಲ್ಲಿ ವಿಷ ಇರಲಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral News: ಒಂದು ತಿಂಗಳಲ್ಲಿ ಐದು ಬಾರಿ ಹಾವು ಕಡಿತ; ಪವಾಡ ರೀತಿಯಲ್ಲಿ ವ್ಯಕ್ತಿ ಬಜಾವ್‌!

Continue Reading

ಪ್ರಮುಖ ಸುದ್ದಿ

Mohammed Siraj : ವೇಗದ ಬೌಲರ್​ ಮೊಹಮ್ಮದ್​ ಸಿರಾಜ್​ಗೆ ಹೈದರಾಬಾದ್​​ನಲ್ಲಿ ಭರ್ಜರಿ ಸ್ವಾಗತ, ಇಲ್ಲಿದೆ ವಿಡಿಯೊ

Mohammed Siraj : ವಿಜಯಶಾಲಿ ಭಾರತೀಯ ತಂಡವು ಓಪನ್-ಟಾಪ್ ಬಸ್​ನಲ್ಲಿ ವಿಜಯ ಮೆರವಣಿಗೆಯಲ್ಲಿ ಭಾಗವಹಿಸಿತು. ಸಾವಿರಾರು ಅಭಿಮಾನಿಗಳು ಅವರಿಗೆ ಉತ್ಸಾಹಭರಿತ ಸ್ವಾಗತ ನೀಡಿದರು. ಮೆರವಣಿಗೆಯು ಮರೀನ್ ಡ್ರೈವ್ ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ನಡೆಯಿತು. 30,000 ಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣದಲ್ಲಿದ್ದರು,

VISTARANEWS.COM


on

Mohammed Siraj
Koo

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ವಿಜಯದ ಅಭಿಯಾನದ ನಂತರ ಟೀಮ್ ಇಂಡಿಯಾ ತಾರೆಯರಿಗೆ ಭಾರತದಲ್ಲಿ ಭರ್ಜರಿ ಸ್ವಾಗತ ಸಿಗುತ್ತಿದೆ. ಮುಂಬೈನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅಮೋಘ ಬೆಂಬಲ ಪಡೆದುಕೊಂಡಿದ್ದ ಭಾರತ ತಂಡದ ಆಟಗಾರರು ಇದೀಗ ತಮ್ಮ ತಮ್ಮ ತವರಿಗೆ ಮರಳಿದ್ದಾರೆ. ಅವರಿಗೆ ಅಲ್ಲಿಯೂ ದೊಡ್ಡ ಮಟ್ಟ ಶ್ಲಾಘನೆ ದೊರಕಿದೆ. ವೇಗದ ಬೌಲರ್​ ಮೊಹಮ್ಮದ್ ಸಿರಾಜ್​ (Mohammed Siraj ) ಹೈದಾರಾದಬಾದ್​ನಲ್ಲಿ ಭರ್ಜರಿ ಸ್ವಾಗತ ಗಿಟ್ಟಿಸಿಕೊಂಡರು.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ 7 ರನ್​ಗಳ ಭರ್ಜರಿ ಜಯ ಸಾಧಿಸಿದೆ. 11 ವರ್ಷಗಳ ಅಂತರದ ನಂತರ ಐಸಿಸಿ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಭಾರತದ ಹಲವು ವರ್ಷಗಳ ನೋವನ್ನು ಮರೆಯಿತು. ಮೆನ್ ಇನ್ ಬ್ಲೂ ತಂಡವು ಹಲವಾರು ಸಂದರ್ಭಗಳಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಸೋತಿತ್ತು. ಕೊನೆಗೂ ಅವರು ತಮ್ಮ ನಿರೀಕ್ಷೆಯನ್ನು ಮೀರಿದ್ದಾರೆ.

ತಂಡವು ಮಂಗಳವಾರ ಭಾರತಕ್ಕೆ ಇಳಿಯಬೇಕಿತ್ತು. ಬೆರಿಲ್ ಚಂಡಮಾರುತದಿಂದಾಗಿ ವೆಸ್ಟ್​ ಇಂಡೀಸ್​​ನ ಬಾರ್ಬಡೋಸ್​ನಿಂದ ಅವರ ನಿರ್ಗಮನವು ಎರಡು ದಿನ ವಿಳಂಬವಾಯಿತು. ಅಂತಿಮವಾಗಿ ಬುಧವಾರ ದ್ವೀಪವನ್ನು ಬಿಡುವಲ್ಲಿ ಯಶಸ್ವಿಯಾದರು. ಗುರುವಾರ ಬೆಳಿಗ್ಗೆ ಭಾರತಕ್ಕೆ ಬಂದಿಳಿದರು. ಮುಂಬೈಗೆ ತೆರಳುವ ಮೊದಲು ತಂಡವು ನವದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಇಳಿದು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿತು.

ಇದನ್ನೂ ಓದಿ: Hardik Pandya : ವಿಶ್ವ ಕಪ್​ ಗೆದ್ದ ಹಾರ್ದಿಕ್​ ಪಾಂಡ್ಯಗೆ ಮುತ್ತು ಕೊಟ್ಟು ಅಭಿನಂದಿಸಿದ ಇಶಾನ್ ಕಿಶನ್​

ವಿಜಯಶಾಲಿ ಭಾರತೀಯ ತಂಡವು ಓಪನ್-ಟಾಪ್ ಬಸ್​ನಲ್ಲಿ ವಿಜಯ ಮೆರವಣಿಗೆಯಲ್ಲಿ ಭಾಗವಹಿಸಿತು. ಸಾವಿರಾರು ಅಭಿಮಾನಿಗಳು ಅವರಿಗೆ ಉತ್ಸಾಹಭರಿತ ಸ್ವಾಗತ ನೀಡಿದರು. ಮೆರವಣಿಗೆಯು ಮರೀನ್ ಡ್ರೈವ್ ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ನಡೆಯಿತು. 30,000 ಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣದಲ್ಲಿದ್ದರು, ಭಾರತ ತಂಡ ಮತ್ತು ಅಭಿಮಾನಿಗಳು ಒಟ್ಟಾಗಿ ಸ್ಮರಣೀಯ ವಿಜಯವನ್ನು ಆಚರಿಸಿದರು. ಬಿಸಿಸಿಐನಿಂದ ಸನ್ಮಾನಿಸಲ್ಪಡುವ ಮೊದಲು ಆಟಗಾರರು ಪ್ರೇಕ್ಷಕರೊಂದಿಗೆ ನೃತ್ಯ ಮಾಡಿದರು.

ಮೊಹಮ್ಮದ್ ಸಿರಾಜ್​​ಗೆ ಹೈದರಾಬಾದ್ ಸ್ವಾಗತ

ಗುರುವಾರ ಮುಂಬೈನಲ್ಲಿ ವಿಜಯೋತ್ಸವದ ನಂತರ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಶುಕ್ರವಾರ ಸಂಜೆ ತಮ್ಮ ತವರು ಪಟ್ಟಣ ಹೈದರಾಬಾದ್​ಗೆ ಬಂದಿಳಿದರು. ನಿರೀಕ್ಷೆಯಂತೆ, ವಿಮಾನ ನಿಲ್ದಾಣದ ಹೊರಗೆ ಭಾರಿ ಜನಸಮೂಹ ಅವರಿಗಾಗಿ ಕಾಯುತ್ತಿತ್ತು. ಅಭಿಮಾನಿಗಳು ತಮ್ಮ ತವರು ಆಟಗಾರನನ್ನು ಸ್ವಾಗತಿಸುತ್ತಿದ್ದಂತೆ ಎಲ್ಲೆಡೆ ‘ಇಂಡಿಯಾ, ಇಂಡಿಯಅ ‘ ಘೋಷಣೆಗಳು ಮೊಳಗಿದವು.

ಮೊಹಮ್ಮದ್ ಸಿರಾಜ್ ಟಿ 20 ವಿಶ್ವಕಪ್​​ನಲ್ಲಿ ಮೂರು ಪಂದ್ಯಗಳನ್ನು ಆಡಿದ್ದಾರೆ. ಪಂದ್ಯಾವಳಿಯ ಯುಎಸ್ಎ ಲೆಗ್ ಮುಗಿದ ಕೂಡಲೇ ಕುಲ್ದೀಪ್ ಯಾದವ್ ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸಲಾಗಿದೆ. ಕೆರಿಬಿಯನ್ ಪರಿಸ್ಥಿತಿಗಳು ಸ್ಪಿನ್ನರ್​ಗಳಿಗೆ ಹೆಚ್ಚು ಅನುಕೂಲಕರವಾಗಿದ್ದರಿಂದ, ಸಿರಾಜ್ ಬದಲಿಗೆ ಕುಲ್ದೀಪ್ ಅವರನ್ನು ತಂಡಕ್ಕೆ ಕರೆತಂದಿತು.

ಐದು ಪಂದ್ಯಗಳಲ್ಲಿ ಕುಲ್ದೀಪ್ 10 ವಿಕೆಟ್​ಗಳನ್ನು ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಿರಾಜ್ 3 ಪಂದ್ಯಗಳಲ್ಲಿ 1 ವಿಕೆಟ್ ಪಡೆದಿದ್ದರು. .

Continue Reading

ವಿದೇಶ

Akshata Murty: ರಿಷಿ ಸುನಕ್‌ ವಿದಾಯದ ಭಾಷಣದ ವೇಳೆ ಅಕ್ಷತಾ ಮೂರ್ತಿ ಧರಿಸಿದ್ದ ಡ್ರೆಸ್ ಬೆಲೆ 42 ಸಾವಿರ ರೂ.!

Akshata Murty: ಇದುವರೆಗೆ ಪ್ರಧಾನಿಯಾಗಿದ್ದ ಕನ್ಸರ್ವೇಟಿವ್‌ ಪಕ್ಷದ ರಿಷಿ ಸುನಕ್‌ (Rishi Sunak) ಅವರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಬಳಿಕ ದೇಶದ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ಇದೇ ವೇಳೆ, ಅವರ ಹಿಂದೆ ನಿಂತಿದ್ದ ಪತ್ನಿ ಅಕ್ಷತಾ ಮೂರ್ತಿ ಅವರು ಧರಿಸಿದ್ದ ಡ್ರೆಸ್‌ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

VISTARANEWS.COM


on

Akshata Murty
Koo

ಲಂಡನ್:‌ ಬ್ರಿಟನ್‌ ಸಾರ್ವತ್ರಿಕ ಚುನಾವಣೆಯ (Britain Election) ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್‌ ನಂಬರ್‌ 320 ಅನ್ನು ದಾಟುವ ಮೂಲಕ ಸರ್ಕಾರ ರಚಿಸಿದೆ. ಇನ್ನು ಇದುವರೆಗೆ ಪ್ರಧಾನಿಯಾಗಿದ್ದ ಕನ್ಸರ್ವೇಟಿವ್‌ ಪಕ್ಷದ ರಿಷಿ ಸುನಕ್‌ (Rishi Sunak) ಅವರು ರಾಜೀನಾಮೆ ನೀಡಿದ್ದಾರೆ. ಇನ್ನು ರಾಜೀನಾಮೆ ನೀಡಿ, ವಿದಾಯದ ಭಾಷಣ ಮಾಡುವಾಗ ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ಅವರು ಧರಿಸಿದ್ದ ಡ್ರೆಸ್‌ ಹಾಗೂ ಅದರ ಮೌಲ್ಯದ ಕುರಿತು ಭಾರಿ ಚರ್ಚೆ ಶುರುವಾಗಿದೆ.

ಚುನಾವಣೆಯಲ್ಲಿ ಹಿನ್ನಡೆಯಾಗುತ್ತಲೇ ದೇಶದ ಜನರನ್ನು ಉದ್ದೇಶಿಸಿ ರಿಷಿ ಸುನಕ್‌ ಮಾತನಾಡಿದರು. “ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ” ಎಂದು ಅವರು ಹೇಳಿದರು. ಇದೇ ವೇಳೆ, ಅವರ ಹಿಂದೆ ಅಕ್ಷತಾ ಮೂರ್ತಿ ಅವರು ನಿಂತಿದ್ದರು. ಅಷ್ಟೇ ಅಲ್ಲ, ಅಕ್ಷತಾ ಮೂರ್ತಿ ಅವರು ಧರಿಸಿದ್ದ, ಇಂಡಿಯನ್‌ ಲೇಬಲ್‌ನ ಡ್ರೆಸ್‌ ಕುರಿತು ಭಾರಿ ಚರ್ಚೆಯಾಗುತ್ತಿದೆ. ಬ್ರಿಟನ್‌ ರಾಷ್ಟ್ರಧ್ವಜದಲ್ಲಿರುವ ನೀಲಿ, ಕೆಂಪು ಹಾಗೂ ವೈಟ್‌ ಪಟ್ಟಿಗಳು ಇರುವ, ಹೈ ನೆಕ್ಡ್‌ ಆಗಿರುವ ಡ್ರೆಸ್‌ಅನ್ನು ಅಕ್ಷತಾ ಮೂರ್ತಿ ಧರಿಸಿದ್ದು, ಇದರ ಬೆಲೆ 42 ಸಾವಿರ ರೂ. ಇದೆ ಎಂದು ತಿಳಿದುಬಂದಿದೆ.

ಬ್ರಿಟನ್‌ ಪ್ರಧಾನಿಯಾಗಿ ಲೇಬರ್‌ ಪಕ್ಷದ ಕೀರ್‌ ಸ್ಟಾರ್ಮರ್‌ ಆಯ್ಕೆಯಾಗಿದ್ದಾರೆ. ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ದೇಶದ ಜನರ ಸೇವೆ ಮಾಡುವುದೇ ನಮಗೆ ಭಾಗ್ಯವಾಗಿದೆ. ನೀವು ಲೇಬರ್‌ ಪಕ್ಷಕ್ಕೆ ಮತ ಹಾಕಿದ್ದೀರೋ, ಬಿಟ್ಟಿದ್ದೀರೋ ಅದು ಬೇಕಾಗಿಲ್ಲ. ದೇಶದ ಪ್ರತಿಯೊಬ್ಬರಿಗೂ ಉತ್ತಮ ಆಡಳಿತ ನೀಡುವುದು ನಮ್ಮ ಆದ್ಯತೆಯಾಗಿದೆ. ರಾಜಕೀಯ ಎಂದರೆ ಉತ್ತಮ ಆಡಳಿತ ನೀಡುವುದು, ರಾಜಕೀಯವನ್ನು ಸಕಾರಾತ್ಮಕ ಸಂಗತಿಗಾಗಿ ಬಳಸಿಕೊಳ್ಳುತ್ತೇವೆ. ಮತಗಳನ್ನು ನೀಡಿ ಗೆಲ್ಲಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು. ಕೀರ್‌ ಸ್ಟಾರ್ಮರ್‌ ಅವರು ನಿರ್ಗಮಿತ ಪ್ರಧಾನಿ ರಿಷಿ ಸುನಕ್‌ ಅವರ ಆಡಳಿತವನ್ನೂ ಹೊಗಳಿದ್ದು ವಿಶೇಷವಾಗಿತ್ತು.

ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ಅವರು ಆಯ್ಕೆಯಾಗುತ್ತಲೇ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಬ್ರಿಟನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕೀರ್‌ ಸ್ಟಾರ್ಮರ್‌ ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ-ಬ್ರಿಟನ್‌ ಒಗ್ಗೂಡಿ, ಸಂಬಂಧವನ್ನು ವೃದ್ಧಿಸಿಕೊಂಡು ಉಭಯ ದೇಶಗಳ ಏಳಿಗೆಗೆ ಶ್ರಮಿಸುವ ವಿಶ್ವಾಸವಿದೆ” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ಇದುವರೆಗೆ ಆಡಳಿತ ನಡೆಸಿದ, ಭಾರತದ ಮೂಲದ ರಿಷಿ ಸುನಕ್‌ ಅವರ ಬಗ್ಗೆಯೂ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: Keir Starmer: ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ನೇಮಕ; ಅಭಿನಂದನೆ ಸಲ್ಲಿಸಿದ ಮೋದಿ

Continue Reading

ಪ್ರಮುಖ ಸುದ್ದಿ

Hardik Pandya : ವಿಶ್ವ ಕಪ್​ ಗೆದ್ದ ಹಾರ್ದಿಕ್​ ಪಾಂಡ್ಯಗೆ ಮುತ್ತು ಕೊಟ್ಟು ಅಭಿನಂದಿಸಿದ ಇಶಾನ್ ಕಿಶನ್​

Hardik Pandya : ಹಾರ್ದಿಕ್ ಪಾಂಡ್ಯ ಟಿ20 ವಿಶ್ವ ಕಪ್​ ಪಂದ್ಯಾವಳಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ದೊಡ್ಡ ಪಾತ್ರ ವಹಿಸಿದ್ದರು. ಅವರೆಲ್ಲರ ಪ್ರಯತ್ನ ಭಾರತ ತಂಡದ ಐಸಿಸಿ ಟ್ರೋಫಿಗಾಗಿ ದೀರ್ಘಕಾಲದ ಕಾಯುವಿಕೆ ಕೊನೆಯಾಗಿತು.. 2007ರ ಬಳಿಕ ಭಾರತ ಟಿ20 ವಿಶ್ವಕಪ್ ಗೆದ್ದಿಲ್ಲ. ಅಂತಿಮವಾಗಿ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನೊಂದಿಗೆ ದೀರ್ಘ ಕಾಯುವಿಕೆ ಕೊನೆಗೊಳಿಸುವಲ್ಲಿ ಯಶಸ್ವಿಯಾದರು.

VISTARANEWS.COM


on

Hardik Pandya
Koo

ಬೆಂಗಳೂರು: ಟಿ20 ವಿಶ್ವ ಕಪ್​​ ಗೆದ್ದು ಖುಷಿಯಲ್ಲಿರುವ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಐಪಿಎಲ್​ನಲ್ಲಿ ಅವರ ಮುಂಬಯಿ ಇಂಡಿಯನ್ಸ್ ಜತೆಗಾರ ಇಶಾನ್ ಕಿಶನ್ ಶುಕ್ರವಾರ ಭೇಟಿಯಾದರು. ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಭಾರತದ ವಿಜಯ ಅಭಿಯಾನದಲ್ಲಿ ಅವರ ಪಾತ್ರಕ್ಕಾಗಿ ಅಭಿನಂದಿಸಿದರು. ಈ ವೇಳೆ ಅವರು ಎರಡೂ ಕೆನ್ನೆಗಳಿಗೆ ಮುತ್ತು ನೀಡಿ ಶುಭಾಶಯ ತಿಳಿಸಿದರು.

ಹಾರ್ದಿಕ್ ಪಾಂಡ್ಯ ಟಿ20 ವಿಶ್ವ ಕಪ್​ ಪಂದ್ಯಾವಳಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ದೊಡ್ಡ ಪಾತ್ರ ವಹಿಸಿದ್ದರು. ಅವರೆಲ್ಲರ ಪ್ರಯತ್ನ ಭಾರತ ತಂಡದ ಐಸಿಸಿ ಟ್ರೋಫಿಗಾಗಿ ದೀರ್ಘಕಾಲದ ಕಾಯುವಿಕೆ ಕೊನೆಯಾಗಿತು.. 2007ರ ಬಳಿಕ ಭಾರತ ಟಿ20 ವಿಶ್ವಕಪ್ ಗೆದ್ದಿಲ್ಲ. ಅಂತಿಮವಾಗಿ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನೊಂದಿಗೆ ದೀರ್ಘ ಕಾಯುವಿಕೆ ಕೊನೆಗೊಳಿಸುವಲ್ಲಿ ಯಶಸ್ವಿಯಾದರು.

ಟಿ20 ವಿಶ್ವಕಪ್ ಟೂರ್ನಿಯ 9ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಮಣಿಸಿ ಚಾಂಪಿಯನ್ ಆಯಿತು. ಹಾರ್ದಿಕ್ ಪಾಂಡ್ಯ ಪಂದ್ಯಾವಳಿಯುದ್ದಕ್ಕೂ ಟೀಮ್ ಇಂಡಿಯಾಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದರು ಮತ್ತು ಫೈನಲ್​​ನಲ್ಲಿಯೂ ಭಾರಿ ಪ್ರಭಾವ ಬೀರಿದ್ದರು. 177 ರನ್​ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 16 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು.

ನಂತರ ಭಾರತದ ಉಪನಾಯಕ 17 ನೇ ಓವರ್​ನ ಮೊದಲ ಎಸೆತದಲ್ಲಿ ಅಪಾಯಕಾರಿಯಾಗಿದ್ದ ಹೆನ್ರಿಕ್ ಕ್ಲಾಸೆನ್ ಅವರನ್ನು 52 ರನ್​ಗಳಿಗೆ ಔಟ್ ಮಾಡುವ ಮೂಲಕ ಪಂದ್ಯವನ್ನು ಭಾರತ ಕಡೆಗೆ. ನಂತರ ಅಂತಿಮ ಓವರ್​ನಲ್ಲಿ ಡೇವಿಡ್ ಮಿಲ್ಲರ್ ಅವರನ್ನು ಔಟ್​ ಮಾಡಿದರು. ಪಾಂಡ್ಯ 48 ಸರಾಸರಿಯಲ್ಲಿ 144 ರನ್ ಗಳಿಸಿದ್ದಾರೆ ಮತ್ತು 17.36 ಸರಾಸರಿಯಲ್ಲಿ 11 ವಿಕೆಟ್​ಗಳನ್ನು ಪಡೆದಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಶುಭಾಶಯ ಸಲ್ಲಿಸಿದ ಇಶಾನ್ ಕಿಶನ್

ಶುಕ್ರವಾರ ಇಶಾನ್ ಕಿಶನ್ ತಮ್ಮ ಐಪಿಎಲ್​ ಸಹ ಆಟಗಾರನಿಗೆ ಶುಭಾಶಯವನ್ನು ಇನ್​​ಸ್ಟಾಗ್ರಾಮ್​ ಮೂಲಕ ಸಲ್ಲಿಸಿದರು. ಅದರಲ್ಲಿ ಅವರು ಪಾಂಡ್ಯ ಅವರ ನಿವಾಸಕ್ಕೆ ಅನಿರೀಕ್ಷಿತ ಭೇಟಿ ನೀಡಿದರು. ಅವರ ಪ್ರದರ್ಶನಕ್ಕಾಗಿ ಅವರನ್ನು ಅಭಿನಂದಿಸಿದರು. ಕಿಶನ್ ಪಾಂಡ್ಯಗೆ ಮುತ್ತಿಡುವ ಮೊದಲು ಇಬ್ಬರೂ ಅಪ್ಪಿಕೊಂಡರು.

ಇದನ್ನೂ ಓದಿ: T20 World Cup : ಮಹಾರಾಷ್ಟ್ರದ ಆಟಗಾರರಿಗೆ 11 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಮಹಾ ಸಿಎಂ ಶಿಂಧೆ

ಕಿಶನ್ ತಮ್ಮ ವಿಶ್ವಕಪ್​ ವಿಚಾರದಲ್ಲಿ ಯಾವುದೂ ಪೂರಕವಾಗಿ ನಡೆಯದಿದ್ದ ಪಾಂಡ್ಯ ಹೇಗೆ ಶಾಂತವಾಗಿ ಮತ್ತು ಏಕಾಗ್ರತೆಯಿಂದ ಇರಲು ಸಾಧ್ಯವಾಯಿತು ಎಂಬುದನ್ನು ಎತ್ತಿ ತೋರಿಸಿದ್ದಾರೆ. ಏಸ್ ಆಲ್ರೌಂಡರ್ ಐಪಿಎಲ್ ಅಭಿಯಾನದುದ್ದಕ್ಕೂ ಅಭಿಮಾನಿಗಳಿಂದ ಟೀಕೆಗಳನ್ನು ಎದುರಿಸಿದ್ದರು. ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ನಾಯಕನನ್ನಾಗಿ ಮಾಡಿದ ಬಗ್ಗೆ ಅಭಿಮಾನಿಗಳು ತಮ್ಮ ಕೋಪವನ್ನು ಹೊರಹಾಕಿದ್ದರು.

ಕಳೆದ ಕೆಲವು ತಿಂಗಳುಗಳಲ್ಲಿ ನೀವು ಅನೇಕ ಕಷ್ಟದ ದಿನಗಳನ್ನು ಎದುರಿಸಿದ್ದೀರಿ. ಆದರೂ ನೀವು ಶಾಂತವಾಗಿ ಮತ್ತು ಇಂದು ನೀವು ನಿಮ್ಮ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಪ್ರಾಮಾಣಿಕತೆಯ ಫಲಿತಾಂಶವನ್ನು ಪಡೆದಿದ್ದೀರಿ. ಇನ್ನೂ ಹೆಚ್ಚಿನದನ್ನು ಸಾಧನೆ ಮಾಡಿದ್ದೀರಿ. ಅದನ್ನು ಹೇಳಲು ಆದರೆ ಪದಗಳು ಕಡಿಮೆಯಾಗುತ್ತವೆ ಎಂದು ಇಶಾನ್ ಕಿಶನ್ ಬರೆದಿದ್ದಾರೆ.

Continue Reading
Advertisement
Snake
ವೈರಲ್ ನ್ಯೂಸ್4 mins ago

ತನಗೆ ಒಮ್ಮೆ ಕಚ್ಚಿದ ಹಾವಿಗೆ ಮೂರು ಬಾರಿ ಕಚ್ಚಿ ಸೇಡು ತೀರಿಸಿಕೊಂಡ ವ್ಯಕ್ತಿ; ಕೊನೆಗೆ ಬದುಕುಳಿದಿದ್ದು ಯಾರು?

Mohammed Siraj
ಪ್ರಮುಖ ಸುದ್ದಿ30 mins ago

Mohammed Siraj : ವೇಗದ ಬೌಲರ್​ ಮೊಹಮ್ಮದ್​ ಸಿರಾಜ್​ಗೆ ಹೈದರಾಬಾದ್​​ನಲ್ಲಿ ಭರ್ಜರಿ ಸ್ವಾಗತ, ಇಲ್ಲಿದೆ ವಿಡಿಯೊ

Akshata Murty
ವಿದೇಶ36 mins ago

Akshata Murty: ರಿಷಿ ಸುನಕ್‌ ವಿದಾಯದ ಭಾಷಣದ ವೇಳೆ ಅಕ್ಷತಾ ಮೂರ್ತಿ ಧರಿಸಿದ್ದ ಡ್ರೆಸ್ ಬೆಲೆ 42 ಸಾವಿರ ರೂ.!

Hardik Pandya
ಪ್ರಮುಖ ಸುದ್ದಿ55 mins ago

Hardik Pandya : ವಿಶ್ವ ಕಪ್​ ಗೆದ್ದ ಹಾರ್ದಿಕ್​ ಪಾಂಡ್ಯಗೆ ಮುತ್ತು ಕೊಟ್ಟು ಅಭಿನಂದಿಸಿದ ಇಶಾನ್ ಕಿಶನ್​

Weather News
ಉತ್ತರ ಕನ್ನಡ2 hours ago

Weather News: ಭಾರಿ ಮಳೆ; ಕರಾವಳಿಯಾದ್ಯಂತ ಶಾಲೆ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

Mahindra Marazzo
ಪ್ರಮುಖ ಸುದ್ದಿ2 hours ago

Mahindra Marazzo : ಈ 7 ಸೀಟರ್​ ಕಾರಿನ ಉತ್ಪಾದನೆ ನಿಲ್ಲಿಸಿದ ಮಹೀಂದ್ರಾ

BSP President
ದೇಶ2 hours ago

BSP President: ತಮಿಳುನಾಡಿನಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಹತ್ಯೆ; ರಾಜಕೀಯ ವೈಷಮ್ಯ ಕಾರಣ?

Dengue Fever
ಕರ್ನಾಟಕ3 hours ago

Dengue Fever: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 155 ಡೆಂಗ್ಯೂ ಕೇಸ್‌ಗಳು ಪತ್ತೆ!

Rohit Sharma
ಪ್ರಮುಖ ಸುದ್ದಿ3 hours ago

T20 World Cup : ಮಹಾರಾಷ್ಟ್ರದ ಆಟಗಾರರಿಗೆ 11 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಮಹಾ ಸಿಎಂ ಶಿಂಧೆ

RBI Fine
ದೇಶ3 hours ago

RBI Fine: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಆರ್‌ಬಿಐ 1.31 ಕೋಟಿ ರೂ. ದಂಡ; ಕಾರಣ ಹೀಗಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ6 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ8 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ8 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ10 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ11 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು13 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು13 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ18 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಟ್ರೆಂಡಿಂಗ್‌