Deepavali Gift: ನೌಕರರ ಖಾತೆಗೆ ಪಿಎಫ್ ಬಡ್ಡಿ ಜಮೆ ಆರಂಭ; ಬ್ಯಾಲೆನ್ಸ್‌ ಹೀಗೆ ಪರಿಶೀಲಿಸಿ - Vistara News

ದೀಪಾವಳಿ

Deepavali Gift: ನೌಕರರ ಖಾತೆಗೆ ಪಿಎಫ್ ಬಡ್ಡಿ ಜಮೆ ಆರಂಭ; ಬ್ಯಾಲೆನ್ಸ್‌ ಹೀಗೆ ಪರಿಶೀಲಿಸಿ

Deepavali Gift: ನೌಕರರ ಪಿಎಫ್ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡಲು ಸರ್ಕಾರ ಆರಂಭಿಸಿದೆ. ಸದ್ಯದಲ್ಲೇ ಎಲ್ಲರ ಖಾತೆಗಳಿಗೂ ಬಡ್ಡಿ ಜಮೆ ಆಗಲಿದ್ದು, ಸಹನೆಯಿಂದ ಕಾಯಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

notes new
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation-EPFO) ಪಿಎಫ್ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ನೌಕರರಿಗೆ ದೀಪಾವಳಿ ಉಡುಗೊರೆ ಸಿಕ್ಕಂತಾಗಿದೆ (Deepavali Gift). 2022-23ರ ಹಣಕಾಸು ವರ್ಷದಲ್ಲಿ ಪಿಎಫ್ ಖಾತೆ ಹೂಡಿಕೆಯ ಮೇಲಿನ ಬಡ್ಡಿದರ 8.15% ಇದೆ.

ಕೆಲವು ಬಳಕೆದಾರರ ಖಾತೆಗಳಿಗೆ ಈಗಾಗಲೇ ಬಡ್ಡಿ ದರ ಪಾವತಿಸಲಾಗಿದೆ. ಎಲ್ಲ ಖಾತೆಗಳಲ್ಲಿ ಬಡ್ಡಿ ದರ ಒದಗಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಇಪಿಎಫ್ಒ ಹೇಳಿದೆ. ʼʼಬಡ್ಡಿದರ ಪಾವತಿಸುವ ಪ್ರಕ್ರಿಯೆ ಆರಂಭವಾಗಿದೆ. ಬಡ್ಡಿಯನ್ನು ಪೂರ್ಣವಾಗಿ ಎಲ್ಲ ಖಾತೆಗಳಿಗೆ ಪಾವತಿಸಲಾಗುತ್ತದೆ. ಯಾರಿಗೂ ನಷ್ಟವಾಗುವುದಿಲ್ಲ. ದಯವಿಟ್ಟು ತಾಳ್ಮೆಯಿಂದ ನಿರೀಕ್ಷಿಸಿʼʼ ಎಂದು ಇಪಿಎಫ್ಒ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದೆ.

ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಮಾತನಾಡಿ, ʼʼಈಗಾಗಲೇ 24 ಕೋಟಿ ಖಾತೆಗಳಿಗೆ ಬಡ್ಡಿ ಹಣವನ್ನು ಜಮಾ ಮಾಡಲಾಗಿದೆʼʼ ಎಂದು ತಿಳಿಸಿದ್ದಾರೆ. ಬಡ್ಡಿ ಜಮೆ ಆದ ಬಳಿಕ ಅದರ ಮಾಹಿತಿ ವ್ಯಕ್ತಿಯ ಪಿಎಫ್ ಖಾತೆಯಲ್ಲಿ ಗೊತ್ತಾಗಲಿದೆ. ಭವಿಷ್ಯ ನಿಧಿ ಖಾತೆಯ ಬ್ಯಾಲೆನ್ಸ್ ಅನ್ನು ಸಂದೇಶ, ಮಿಸ್ಡ್ ಕಾಲ್, ಉಮಾಂಗ್ (UMANG) ಅಪ್ಲಿಕೇಶನ್ ಮತ್ತು ಇಪಿಎಫ್ಒ ವೆಬ್‌ಸೈಟ್‌ ಮೂಲಕ ಅನೇಕ ರೀತಿಯಲ್ಲಿ ಪರಿಶೀಲಿಸಬಹುದು.

ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿ ಇಪಿಎಫ್ಒನ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (Central Board of Trustees-CBT) ಪ್ರತಿ ವರ್ಷ ಪಿಎಫ್ ಬಡ್ಡಿದರವನ್ನು ನಿರ್ಧರಿಸುತ್ತದೆ. ಈ ವರ್ಷ ಇಪಿಎಫ್ಒ ಬಡ್ಡಿದರವನ್ನು ಜುಲೈಯಲ್ಲಿ ಘೋಷಿಸಿತ್ತು.

ಕಳೆದ ವರ್ಷ ಇಪಿಎಫ್ಒ ತನ್ನ ಗ್ರಾಹಕರಿಗೆ ಬಡ್ಡಿದರವನ್ನು ನಾಲ್ಕು ದಶಕಗಳ ಕನಿಷ್ಠ ಶೇ. 8.10ಕ್ಕೆ ಇಳಿಸಿತ್ತು. 1977-78ರಲ್ಲಿ ಇಪಿಎಫ್ ಬಡ್ಡಿದರವು ಶೇ. 8ರಷ್ಟಿದ್ದ ನಂತರ ಇದು ಅತ್ಯಂತ ಕಡಿಮೆ ದರವಾಗಿತ್ತು.

ಬ್ಯಾಲೆನ್ಸ್‌ ಹೀಗೆ ಚೆಕ್‌ ಮಾಡಿ

ಎಸ್‌ಎಂಎಸ್‌ ಮೂಲಕ: ನಿಮ್ಮ ಮೊಬೈಲ್‌ ನಂಬರ್‌ ಯುಎಎನ್ ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟಿದ್ದರೆ, 7738299899 ಎಸ್ಎಂಎಸ್ ಕಳುಹಿಸುವ ಮೂಲಕ ಪಿಎಫ್ ಬ್ಯಾಲೆನ್ಸ್ ವಿವರಗಳನ್ನು ನೀವು ಪಡೆಯಬಹುದು. 7738299899 ನಂಬರ್‌ಗೆ EPFOHO UAN ENG ಎಂದು ಸಂದೇಶ ಕಳುಹಿಸಿ.

ಮಿಸ್ಡ್ ಕಾಲ್ ಮೂಲಕ: ಮಿಸ್ಡ್ ಕಾಲ್ ಕೊಡುವ ಮೂಲಕವೂ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಅದಕ್ಕಾಗಿ ನೀವು 011-22901406 ನಂಬರ್‌ಗೆ ನೋಂದಾಯಿಸಿದ ಮೊಬೈಲ್‌ ನಂಬರ್‌ನಿಂದ ಮಿಸ್ಡ್ ಕಾಲ್ ಕೊಡಿ.

ಉಮಾಂಗ್ ಆ್ಯಪ್‌ ಮೂಲಕ: ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆ್ಯಪಲ್‌ ಆ್ಯಪ್‌ ಸ್ಟೋರ್‌ನಲ್ಲಿ ‘UMANG’ ಆ್ಯಪ್‌ ಡೌನ್‌ಲೋಡ್‌ ಮಾಡಿ. ಬಳಿಕ ನಿಮ್ಮ ಹೆಸರು ನೋಂದಾಯಿಸಿ. ‘Service’ ಆಯ್ಕೆ ಕ್ಲಿಕ್‌ ಮಾಡಿ. ನಂತರ ‘View Passbook’ ಕ್ಲಿಕ್‌ ಮಾಡಿ. ಅದಾದ ಬಳಿಕ ‘Employee-centric service’ ಆಪ್ಶನ್‌ ಆಯ್ಕೆ ಮಾಡಿ. ಮುಂದಿನ ಹಂತದಲ್ಲಿ ಮತ್ತೊಂದು ಹೊಸ ಪುಟ ತೆರೆಯುತ್ತದೆ. ಇಪಿಎಫ್ಒನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗಿದೆ ಎಂಬ ಸಂದೇಶ ಇದರಲ್ಲಿ ಮೂಡುತ್ತದೆ. ಒಮ್ಮೆ ನೀವು ಒಟಿಪಿಯನ್ನು ನಮೂದಿಸಿ ಮತ್ತು ‘OK’ ಬಟನ್ ಕ್ಲಿಕ್ ಮಾಡಿದ ನಂತರ, ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಇಪಿಎಫ್ ಪಾಸ್‌ಬುಕ್‌ ಅನ್ನು ನೋಡಬಹುದು ಮತ್ತು ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು.

ಇದನ್ನೂ ಓದಿ: KSET Exam : ನ. 26ರಂದು ನಡೆಯಬೇಕಿದ್ದ ಕೆ-ಸೆಟ್‌ ಪರೀಕ್ಷೆ ಮುಂದೂಡಿಕೆ; Next Date ಯಾವಾಗ?

ಇಪಿಎಫ್ಒ ವೆಬ್‌ಸೈಟ್‌ ಮೂಲಕ: www.epfindia.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಬಳಿಕ ‘Our Services’ ಆಯ್ಕೆಯ ಒಳಗೆ ಬರುವ ‘For Employees’ ಅನ್ನು ಸೆಲೆಕ್ಟ್‌ ಮಾಡಿ. ನಂತರ ‘Services’ ಆಯ್ಕೆ ಕ್ಲಿಕ್‌ ಮಾಡಿ ‘Member Passbook’ ಸೆಲೆಕ್ಟ್‌ ಮಾಡಿದರೆ ವಿವರ ಲಭ್ಯವಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೀಪಾವಳಿ

After Deepavali Skin Care: ದೀಪಾವಳಿ ನಂತರ ತ್ವಚೆಯ ಆರೈಕೆಗೆ 5 ಸಿಂಪಲ್‌ ಸಲಹೆ

ದೀಪಾವಳಿ ಹಬ್ಬದ ನಂತರ ನಿಮ್ಮ ತ್ವಚೆಯ ಆರೈಕೆ (After Deepavali Skin Care) ಮಾಡುವುದು ಅತ್ಯಗತ್ಯ. ಇದಕ್ಕಾಗಿ ನೀವು ಏನೆಲ್ಲಾ ಮಾಡಬಹುದು? ಎಂಬುದನ್ನು ಬ್ಯೂಟಿ ಎಕ್ಸ್‌ಪಟ್ರ್ಸ್ ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

After Deepavali Skin Care
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ದೀಪಾವಳಿ ಹಬ್ಬದ ನಂತರ ನಿಮ್ಮ ತ್ವಚೆಯ ಆರೈಕೆ (After Deepavali Skin Care) ಅತ್ಯವಶ್ಯ. ಅದ್ಯಾಕೆ? ಎಂದು ಯೋಚಿಸುತ್ತಿದ್ದೀರಾ! ಹಬ್ಬದ ಸಂಭ್ರಮಕ್ಕಾಗಿ ಪ್ರತಿದಿನ ಹಚ್ಚಿದ ಗ್ರ್ಯಾಂಡ್‌ ಓವರ್‌ ಮೇಕಪ್‌, ಒಂದರ ಮೇಲೊಂದು ಸವಿದ ಸಿಹಿ ತಿಂಡಿ ಹಾಗೂ ಜಂಕ್‌ ಪದಾರ್ಥ ಸೇವನೆ ಎಲ್ಲವೂ ತ್ವಚೆಯನ್ನು ಡಲ್‌ ಆಗಿಸಬಹುದು. ಕೆಲವರಿಗೆ ಇದರಿಂದ ಮೊಡವೆ ಹಾಗೂ ಜಿಡ್ಡಿನಿಂದ ಚರ್ಮದ ಸಮಸ್ಯೆ ಎದುರಾಗಬಹುದು. ಇವೆಲ್ಲವನ್ನು ನಿಭಾಯಿಸಲು ಫೆಸ್ಟಿವ್‌ ಸೀಸನ್‌ ಮುಗಿದ ನಂತರ ಮುಖದ ಆರೈಕೆಯತ್ತ ಗಮನ ನೀಡುವುದು ಉತ್ತಮ. ಇದರಿಂದ ನಾನಾ ಸ್ಕಿನ್‌ ಸಮಸ್ಯೆಗಳಿಂದ ದೂರಾಗಿ, ಎಂದಿನಂತೆ ನವೋಲ್ಲಾಸದಿಂದ ಕಾಣುವ ತ್ವಚೆಯನ್ನು ತಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ. ಇದಕ್ಕೆ ಪೂರಕ ಎಂಬಂತೆ ಅವರು 5 ಸಿಂಪಲ್‌ ಸಲಹೆ ನೀಡಿದ್ದು, ಪಾಲಿಸಿ ನೋಡಿ ಎಂದಿದ್ದಾರೆ.

Give the makeup a break first

ಮೊದಲು ಮೇಕಪ್‌ಗೆ ಬ್ರೇಕ್‌ ನೀಡಿ

ಪ್ರತಿದಿನ ಮೇಕಪ್‌ ಹಚ್ಚಿದ ಮುಖಕ್ಕೆ ಕೊಂಚ ಬ್ರೇಕ್ ಹಾಕಿ. ಮಾಯಿಶ್ಚರೈಸ್‌ ಮಾಡಿ. ಮುಖದ ತ್ವಚೆಗೆ ಉಸಿರಾಡಲು ಅವಕಾಶ ನೀಡಿ. ಬೇಕಿದ್ದಲ್ಲಿ ರಿಜುನುವೇಟ್‌ ಆಗಲು ಸಹಾಯ ಮಾಡುವ ಹೈಡ್ರೋ ಫೇಶಿಯಲ್‌ ಮಾಡಿಸಿ.

ಕ್ಲೆನ್ಸಿಂಗ್‌- ಟೋನಿಂಗ್‌-ಮಾಯಿಶ್ಚರೈಸಿಂಗ್

ಪ್ರತಿದಿನ ಕ್ಲೆನ್ಸಿಂಗ್‌-ಟೋನಿಂಗ್‌ ಹಾಗೂ ಮಾಯಿಶ್ಚರೈಸಿಂಗ್‌ ಮಾಡಿ. ಇದು ತ್ವಚೆಯನ್ನು ರಿಲ್ಯಾಕ್ಸ್‌ ಮಾಡುವುದರೊಂದಿಗೆ ಸ್ಕಿನ್‌ ಆರೋಗ್ಯ ಸುಧಾರಿಸುತ್ತದೆ.

Get a good night's sleep

ಕಣ್ತುಂಬ ನಿದ್ರೆ ಮಾಡಿ

ಹಬ್ಬದ ಗಡಿಬಿಡಿಯಲ್ಲಿ ಸಾಕಷ್ಟು ಜನ ನಿದ್ರೆ ಕಡಿಮೆ ಮಾಡುತ್ತಾರೆ. ಇದು ಮುಖದ ಮೇಲೆ ಎದ್ದು ಕಾಣದಂತೆ ಮಾಡಲು ಮೇಕಪ್‌ ಹಚ್ಚುತ್ತಾರೆ. ಆದರೆ. ಇದು ತಾತ್ಕಲಿಕ ಪರಿಹಾರ. ನ್ಯಾಚುರಲ್‌ ಆಗಿ ತ್ವಚೆ ಚೆನ್ನಾಗಿ ಕಾಣಲು ಕನಿಷ್ಠ 7-8 ಗಂಟೆಯಾದರೂ ಕಣ್ತುಂಬ ನಿದ್ರೆ ಮಾಡುವುದು ಅಗತ್ಯ. ಮಲಗಿದಾಗ ತ್ವಚೆಯ ರಿಜುನುವೆಟ್‌ಗೆ ಅಗತ್ಯವಿರುವ ಕೊಲಾಜೆನ್‌ ಉತ್ಪತ್ತಿಯಾಗುತ್ತದೆ.

ಶೀಟ್‌ ಮಾಸ್ಕ್‌ ಉಪಯೋಗಿಸಿ

ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ತ್ವಚೆಯ ಫ್ರೆಂಡ್ಲಿ ಹಾಗೂ ಅಗತ್ಯ ಪೌಷ್ಟಿಕಾಂಶಗಳನ್ನು ಪೂರೈಸುವ, ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ಶೀಟ್‌ ಮಾಸ್ಕ್‌ ಆಯ್ಕೆ ಮಾಡಿ ಬಳಸಿ. ಇದು ಮುಖವನ್ನು ಕಾಂತಿಯುಕ್ತಗೊಳಿಸುತ್ತದೆ.

Use a scrub

ಸ್ಕ್ರಬ್‌ ಬಳಸಿ

ಸ್ಕ್ರಬ್‌ ಬಳಕೆಯಿಂದ ಚರ್ಮದ ಮೇಲಿನ ಡೆಡ್‌ ಸ್ಕಿನ್‌ ಹೋಗುತ್ತದೆ. ಜೊತೆಗೆ ರಕ್ತ ಸಂಚಾರ ಸುಗಮವಾಗುತ್ತದೆ. ಹೋಮ್‌ ಮೇಡ್‌ ಸ್ಕ್ರಬ್‌ ಉತ್ತಮ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Deepavali Mens Fashion: ದೀಪಾವಳಿ ಹಬ್ಬದ ಮೆನ್ಸ್ ಟ್ರೆಡಿಷನಲ್‌ ಸ್ಟೈಲಿಂಗ್‌ಗೆ ಸಾಥ್‌ ನೀಡುವ ಎಥ್ನಿಕ್‌ವೇರ್ಸ್

Continue Reading

ದೀಪಾವಳಿ

ದೀಪಾವಳಿ ಆಚರಣೆ ವೇಳೆ ಹಿಂದುಗಳ ಮೇಲೆ ಖಲಿಸ್ತಾನಿಗಳ ದಾಳಿ; ಕಲ್ಲು ತೂರಿದ ಉಗ್ರರು!

ಕೆನಡಾದಲ್ಲಿ ಖಲಿಸ್ತಾನಿ ಉಗ್ರರು, ಪ್ರತ್ಯೇಕವಾದಿಗಳು ಇದಕ್ಕೂ ಮೊದಲು ಕೂಡ ಹಿಂದುಗಳ ಮೇಲೆ ದಾಳಿ ನಡೆಸಿದ್ದಾರೆ. ಹಿಂದು ದೇವಾಲಯಗಳ ಮೇಲೆ ದಾಳಿ ನಡೆಸಲಾಗಿದೆ. ಈಗ ದೀಪಾವಳಿ ಆಚರಣೆ ವೇಳೆಯೂ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ.

VISTARANEWS.COM


on

Khalistani Attack
Koo

ಒಟ್ಟಾವ: ಕೆನಡಾದಲ್ಲಿ ಹಿಂದುಗಳ ಮೇಲೆ ಖಲಿಸ್ತಾನಿ ಉಗ್ರರು (Khalistani Terrorists), ಮೂಲಭೂತವಾದಿಗಳ ದಾಳಿ ಮುಂದುವರಿದಿದೆ. ಟೊರೊಂಟೊ ಹೊರವಲಯದ ಮಿಸ್ಸಿಸ್ಸೌಗ ಪಟ್ಟಣದಲ್ಲಿ ಹಿಂದುಗಳು ದೀಪಾವಳಿ (Deepavali 2023) ಆಚರಣೆ ಮಾಡುವ ವೇಳೆ ಖಲಿಸ್ತಾನಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳ ಮೇಲೆ ಕಲ್ಲು ತೂರಾಟ ಮಾಡುವ, ಖಲಿಸ್ತಾನಿ ಧ್ವಜ ಹಾರಿಸಿ ಉದ್ಧಟತನ ಮಾಡಿರುವ ವಿಡಿಯೊ (Viral Video) ಈಗ ಲಭ್ಯವಾಗಿದೆ.

ಕೆನಡಾದ ಟೊರೊಂಟೊ ಸೇರಿ ಹಲವೆಡೆ ಹಿಂದುಗಳು ಸಡಗರ-ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಆದರೆ, ಮಿಸ್ಸಿಸ್ಸೌಗ, ಬ್ರ್ಯಾಂಪ್ಟನ್‌ ಸೇರಿ ಕೆಲವೆಡೆ ಹಿಂದುಗಳು ಪಟಾಕಿ ಸಿಡಿಸಿ ದೀಪಾವಳಿ ಆಚರಣೆ ಮಾಡುವಾಗ ಖಲಿಸ್ತಾನಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳ ಆಚರಣೆಗೆ ಅಡ್ಡಿಪಡಿಸುವ ಜತೆಗೆ ಕಲ್ಲು ತೂರಾಟ ಮಾಡಿದ್ದಾರೆ. ಖಲಿಸ್ತಾನಿ ಧ್ವಜ ಹಾರಿಸಿದ ಅವರು ಭಾರತ ವಿರೋಧಿ ಘೋಷಣೆಗಳನ್ನೂ ಕೂಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ಕೆನಡಾದಲ್ಲಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಹಲವು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ಹಾಗೆಯೇ, ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದೆಲ್ಲ ಆರೋಪಿಸಿದ್ದಾರೆ. ಇದಕ್ಕೆಲ್ಲ ಸೊಪ್ಪು ಹಾಕದ ಭಾರತ ಸರ್ಕಾರವು ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಕೆನಡಾದಲ್ಲಿ ಹಿಂದುಗಳ ಮೇಲೆ ದಾಳಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಸ್ಫೋಟಕ್ಕೆ ಸಂಚು; ಭಾರತ ಆಗ್ರಹಿಸಿದ ಬಳಿಕ ತನಿಖೆಗೆ ಕೆನಡಾ ಆದೇಶ

ಏರ್‌ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಪನ್ನುನ್‌ ಎಚ್ಚರಿಕೆ

ನವೆಂಬರ್‌ 19ರಂದು ಏರ್‌ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಎಚ್ಚರಿಕೆ ನೀಡಿದ್ದಾನೆ. ನವೆಂಬರ್‌ 4ರಂದು ಗುರುಪತ್ವಂತ್‌ ಸಿಂಗ್‌ ಪನ್ನುನ್‌ ವಿಡಿಯೊ ಪೋಸ್ಟ್‌ ಮಾಡಿದ್ದ. “ನವೆಂಬರ್‌ 19ರಂದು ಸಿಖ್ಖರು ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬಾರದು.‌ ಅಂದು ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು” ಎಂದು ಹೇಳಿದ್ದ. ನವೆಂಬರ್‌ 19 ಇಂದಿರಾ ಗಾಂಧಿ ಜನ್ಮದಿನವಾದ ಕಾರಣ ಅಂದೇ ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು ಎಂದಿದ್ದಾನೆ. ಅಮೃತಸರದ ಸ್ವರ್ಣಮಂದಿರ ಹೊಕ್ಕಿದ್ದ ಉಗ್ರರ ವಿರುದ್ಧ ಇಂದಿರಾ ಗಾಂಧಿ ಅವರು ಆಪರೇಷನ್‌ ಬ್ಲ್ಯೂ ಸ್ಟಾರ್‌ಗೆ ಆದೇಶ ಮಾಡಿದ ಬಳಿಕ ಅವರು 1984ರಲ್ಲಿ ಹತ್ಯೆಗೀಡಾದರು. ಈಗ ಅವರ ಜನ್ಮದಿನದಂದೇ ಏರ್‌ ಇಂಡಿಯಾ ವಿಮಾನ ಸ್ಫೋಟಿಸಲು ಸಂಚು ರೂಪಿಸಲಾಗಿದೆ. ಭಾರತದ ಆಗ್ರಹದ ಬಳಿಕ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಕೆನಡಾ ತಿಳಿಸಿದೆ.

Continue Reading

ದೀಪಾವಳಿ

ಬ್ರಿಟನ್ ಪಿಎಂ ಕಚೇರಿಯಲ್ಲಿ ದೀಪಾವಳಿ! ಗಮನ ಸೆಳೆದ ಅಕ್ಷತಾ ಮೂರ್ತಿ ಉಡುಗೆ

Diwali 2023: ಬ್ರಿಟನ್ ಪಿಎಂ ಸರ್ಕಾರಿ ಅಧಿಕೃತ ನಿವಾಸದಲ್ಲಿ ಈ ಬಾರಿ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಕರ್ನಾಟಕದ ಅಳಿಯನಾಗಿರುವ ಬ್ರಿಟನ್ ಪಿಎಂ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.

VISTARANEWS.COM


on

Diwali in British PM's office! Akshata Murthy fashionable dress caught attention
Koo

ಲಂಡನ್: ಬ್ರಿಟನ್ ಪ್ರಧಾನಿ ಅಧಿಕೃತ ಕಚೇರಿ ನಿವಾಸದಲ್ಲಿ (10 Downing Street) ಈ ಬಾರಿ ದೀಪಾವಳಿಯ ( Diwali 2023) ಕಲರವ ಮೇಳೈಸಿತ್ತು. ಪ್ರಧಾನಿ ರಿಷಿ ಸುನಕ್ (UK PM Rishi Sunak) ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ಹಾಗೂ ಮಕ್ಕಳು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅಕ್ಷತಾ ಅವರು ಯಾವಾಗಲೂ ಫ್ಯಾಶನೇಬಲ್ ಆಗಿರುತ್ತಾರೆ. ಈಗ ದೀಪಾವಳಿಯಂದು ಅವರ ಸಾಂಪ್ರದಾಯಿಕ ಉಡುಗೆ ಗಮನ ಸೆಳೆದಿದೆ. ಅಕ್ಷತಾ ಅವರು ಎಲೆಕ್ಟ್ರಿಕ್ ನೀಲಿ ಮೈಸೂರು ರೇಷ್ಮೆ ಸೀರೆಯಲ್ಲಿ ಸೊಗಸಾಗಿ ಕಾಣುತ್ತಿದ್ದರು. ಅವರು ಸೀರೆಯನ್ನು ಸೊಗಸಾಗಿ ಧರಿಸಿದ್ದರು. ಸೀರೆಯೊಂದಿಗೆ ಸಣ್ಣ ತೋಳಿನ ಕುಪ್ಪಸವನ್ನು ಧರಿಸಿದ್ದರು. ಸರಳವಾದ ಸೀರೆಯು ತೆಳುವಾದ ಚಿನ್ನದ ಅಂಚುಗಳನ್ನು ಪ್ರದರ್ಶಿಸಿತು ಮತ್ತು ಕುಪ್ಪಸವು ಹೂವಿನ ಮೋಟಿಫ್‌ಗಳನ್ನು ಒಳಗೊಂಡಿತ್ತು. ಅಕ್ಷತಾ ಒಂದು ಜೊತೆ ನೇತಾಡುವ ಕಿವಿಯೋಲೆಗಳು, ಗಂಡಬೇರುಂಡ ನೆಕ್ಲೇಸ್ ಮತ್ತು ಬಳೆಗಳನ್ನು ಧರಿಸಿದ್ದರು.

ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಯಾವಾಗಲೂ ಪ್ರೇಕ್ಷಕರ ಮೇಲೆ ಫ್ಯಾಶನ್ ಪ್ರಭಾವ ಬೀರಿದ್ದಾರೆ. ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಅಥವಾ ಅಂತರಾಷ್ಟ್ರೀಯ ಶೃಂಗಸಭೆಗಳಿಗೆ ಆಕೆಯ ವಿಶಿಷ್ಟ ತೊಡುಗೆ, ಆಕೆಯ ಶೈಲಿ ಮತ್ತು ಸೊಬಗುಗೆ ಮಿತಿಯಿರಲಿಲ್ಲ.

ದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಅಕ್ಷತಾ ಮೂರ್ತಿ ಅವರ ವಾರ್ಡ್ರೋಬ್ ಆಯ್ಕೆಗಳು ಉನ್ನತ ದರ್ಜೆಯದ್ದಾಗಿದ್ದವು ಎಂಬುದು ಮನವರಿಕೆಯಾಗಿತ್ತು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆದ ರಾಗಿ ಪ್ರದರ್ಶನಕ್ಕಾಗಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಆಯೋಜಿಸಿದ್ದ ಜಿ20 ಸಂಗಾತಿಗಳ ಕಾರ್ಯಕ್ರಮಕ್ಕೆ ಮುದ್ರಿತ ನೀಲಕ ಮಿಡಿ ಉಡುಗೆಯನ್ನು ಆರಿಸಿಕೊಂಡಿದ್ದರು. ಉಡುಪಿನಲ್ಲಿ ಹೂವಿನ ಮುದ್ರಿತ ನಾಟಕೀಯ ಪಫ್ಡ್ ಸ್ಲೀವ್‌ಗಳು ಎ-ಲೈನ್ ಸಿಲೂಯೆಟ್ ಮತ್ತು ಭುಗಿಲೆದ್ದ ಕೆಳಭಾಗವನ್ನು ಒಳಗೊಂಡಿತ್ತು. ಇದು ಆಕರ್ಷಕವಾಗಿತ್ತು.

ಈಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಕ್ಷತಾ ಮೂರ್ತಿ ಅವರು ತೊಡುಗೆ ಶೈಲಿಯ ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣಗೊಂಡಿದೆ. ಅಕ್ಷತಾ ಮೂರ್ತಿ ಅವರು ತಮ್ಮ ಫ್ಯಾಶನೇಬಲ್ ಸ್ಟೇಟ್‌ಮೆಂಟ್ ಮಾಡಿದ್ದಾರೆ. ಬ್ರಿಟನ್ ಪ್ರಧಾನಿಯ ಮನೆಯಲ್ಲಿ ನಡೆದ ದೀಪಾವಳಿ ಹಬ್ಬದ ಆಚರಣೆಯು ವಾವ್ ಎನ್ನುವಂತಿತ್ತು. ಇದಕ್ಕೆ ಅಕ್ಷತಾ ಮೂರ್ತಿ ಅವರು ಉಡುಗೆ-ತೊಡುಗೆ ಕಳಶವಿಟ್ಟಂತೆ ಇತ್ತು ಎಂದು ಫ್ಯಾಶನ್ ಜಗತ್ತಿನ ತಜ್ಞರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: 75 ವರ್ಷದಲ್ಲೇ ಮೊದಲ ಬಾರಿಗೆ ಕಾಶ್ಮೀರದ ಶಾರದಾ ದೇವಿ ದೇಗುಲದಲ್ಲಿ ದೀಪಾವಳಿ ಆಚರಣೆ!

Continue Reading

ಕ್ರಿಕೆಟ್

KL Rahul: ಕನ್ನಡದಲ್ಲೇ ದೀಪಾವಳಿಯ ಶುಭ ಕೋರಿದ ಕೆ.ಎಲ್​ ರಾಹುಲ್​

ಟೀಮ್ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರು ನಾಡಿದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ(diwali wishes) ಕೋರಿದ್ದಾರೆ.

VISTARANEWS.COM


on

kl rahul century celebration
Koo

ಬೆಂಗಳೂರು: ದೇಶಾದ್ಯಂತ ದೀಪಾವಳಿ(diwali 2023) ಹಬ್ಬದ ಸಂಭ್ರಮ ಜೋರಾಗಿದೆ. ಎಲ್ಲೆಲ್ಲೂ ಪಟಾಕಿ ಸದ್ದು ಕೇಳಿಸುತ್ತಿದೆ. ಕುಟುಂಬಸ್ಥರು, ಸಂಬಂಧಿಕರು, ಗೆಳೆಯರ ಜತೆ ಹಬ್ಬದ ಆಚರಣೆ ಭರ್ಜರಿಯಾಗಿದೆ. ಇದರ ಬೆನ್ನಲೇ ಟೀಮ್ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರು ನಾಡಿದ ಜನತೆಗೆ ದೀಪಾವಳಿ ಶುಭಾಶಯ(diwali wishes) ಕೋರಿದ್ದಾರೆ​. ಅದು ಕೂಡ ಕನ್ನಡದಲ್ಲೇ ಶುಭ ಕೋರಿ ಎಲ್ಲ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅವರು ಶತಕ ಬಾರಿಸಿ ಸಂಭ್ರಮಿಸಿದ್ದರು. ತಮ್ಮ ಶತಕದ ಮತ್ತು ಪಂದ್ಯದ ಫೋಟೊಗಳನ್ನು ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಾಕಿ ‘ದೀಪಾವಳಿಯ ಶುಭಾಶಯಗಳು’ ಎಂದು ಬರೆದು ತಿವರ್ಣ ಧ್ವಜ ಮತ್ತು ಹಣತೆಯ ಎಮೋಜಿಯನ್ನು ಹಾಕಿದ್ದಾರೆ.

ದಾಖಲೆ ಬರೆದ ರಾಹುಲ್​

ನೆದರ್ಲೆಂಡ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರು 2023 ರ (ಹಾಲಿ ಆವೃತ್ತಿಯ) ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆ ಅವರು ಮುರಿದರು.

ರಾಹುಲ್ 64 ಎಸೆತಗಳಲ್ಲಿ 102 ರನ್ ಗಳಿಸುವ ಹಾದಿಯಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್​ಗಳನ್ನು ಬಾರಿಸಿದರು, ಇದು ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಎರಡನೇ ಅತಿ ಹೆಚ್ಚು ಮೊತ್ತಕ್ಕೆ (410/4) ಮುನ್ನಡೆಸಿತು. ಇದು ರಾಹುಲ್ ಅವರ ಆರನೇ ಏಕದಿನ ಶತಕವಾಗಿದೆ. ಭಾರತದ 5ನೇ ಕ್ರಮಾಂಕದ ಬ್ಯಾಟರ್​ ಶ್ರೇಯಸ್ ಅಯ್ಯರ್ ಜೊತೆಗೂಡಿ 208 ರನ್​ಗಳ ಜೊತೆಯಾಟವಾಡಿದ್ದು, ಇದು ಏಕದಿನ ವಿಶ್ವಕಪ್​​ನಲ್ಲಿ ನಾಲ್ಕನೇ ವಿಕೆಟ್​ಗೆ ಅತಿ ಹೆಚ್ಚು ರನ್​ಗಳ ಜೊತೆಯಾಟದ ದಾಖಲೆಯಾಗಿದೆ.

ಇದನ್ನೂ ಓದಿ MS Dhoni: ಧೋನಿ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ ರಿಷಭ್​ ಪಂತ್​

ತವರಿನ ಅಂಗಳದಲ್ಲಿ ರಾಹುಲ್ ಅವರು ಪ್ರಚಂಡ ಬ್ಯಾಟಿಂಗ್​ ತೋರ್ಪಡಿಸುವ ಮೂಲಕ ನೆರೆದಿದ್ದ ತವರಿನ ಅಭಿಮಾನಿಗಳಿಗೆ ಭರಪೂರ ರಂಚನೆ ನೀಡಿದರು. ಬ್ಯಾಟಿಂಗ್​ ಮಾತ್ರವಲ್ಲದೆ ಕೀಪಿಂಗ್​ನಲ್ಲಿಯೂ ಮಿಂಚಿದ ಅವರು 2 ಅದ್ಭುತ ಕ್ಯಾಚ್​ಗಳನ್ನು ಕೂಡ ಹಿಡಿದು ಮಿಂಚಿದರು.

ಜತೆಯಾಟದಲ್ಲಿಯೂ ದಾಖಲೆ ಬರೆದ ರಾಹುಲ್​

ಈ ಪಂದ್ಯದಲ್ಲಿ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ಪರವಾಗಿ ನಾಲ್ಕನೇ ಅತ್ಯಧಿಕ ರನ್​ಗಳ ಜತೆಯಾಟ ನಡೆಸಿ ದಾಖಲೆಯ ಬರೆದರು. ಉಭಯ ಆಟಗಾರರು ನಾಲ್ಕನೇ ವಿಕೆಟ್​ಗೆ 208 ರನ್​ಗಳ ಜತೆಯಾಟ ನೀಡಿದರು. ಈ ಮೂಕಲ ವಿಶ್ವಕಪ್​ನಲ್ಲಿ ನಾಲ್ಕನೇ ವಿಕೆಟ್ ಅಥವಾ ಅದಕ್ಕಿಂತ ಕಡಿಮೆ ವಿಕೆಟ್​ಗೆ ಭಾರತದ ಅತ್ಯಧಿಕ ಜತೆಯಾಟ ನಡೆಸಿದ ದಾಖಲೆ ನಿರ್ಮಿಸಿದರು.

Continue Reading
Advertisement
Mohan Lal watching dr rajkumars super hit song
ಮಾಲಿವುಡ್9 mins ago

Mohan Lal: ಅಣ್ಣಾವ್ರ ಹಾಡನ್ನು ಎಂಜಾಯ್‌ ಮಾಡಿದ ಮೋಹನ್ ಲಾಲ್; ವಿಡಿಯೊ ವೈರಲ್‌!

Lok Sabha Election 2024
Lok Sabha Election 202417 mins ago

Lok Sabha Election 2024: ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ; ಬಂಧಿತರಾಗಿದ್ದ 46 ಮಂದಿಗೆ ಜಾಮೀನು

actor Chetan Kumar Ahimsa
ಸಿನಿಮಾ47 mins ago

Actor Chetan Kumar Ahimsa: ಸಿಎಂ ಸಿದ್ದರಾಮಯ್ಯಗೆ “ಸೋಮಾರಿ” ಎಂದ ನಟ ಚೇತನ್!‌

Ebrahim Raisi
ವಿದೇಶ1 hour ago

Ebrahim Raisi: ಹೆಲಿಕಾಫ್ಟರ್‌ ಪತನದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ವಿಧ್ವಂಸಕ ಕೃತ್ಯವೇ?

Viral News
ವೈರಲ್ ನ್ಯೂಸ್1 hour ago

Viral News: ಮೇಲಿಂದ ಬಿದ್ದು ಬದುಕುಳಿದಿದ್ದ ಮಗುವಿನ ತಾಯಿ ಸೂಸೈಡ್‌; ಸೋಶಿಯಲ್‌ ಮೀಡಿಯಾ ಕಮೆಂಟ್‌ನಿಂದಲೇ ಖಿನ್ನತೆಗೊಳಗಾಗಿದ್ಳಾ?

Actor Rajinikanth attends grandson Ved cricket themed birthday party
ಕಾಲಿವುಡ್1 hour ago

Actor Rajinikanth: ಮೊಮ್ಮಗನ ಕ್ರಿಕೆಟ್‌ ಥೀಮ್‌ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾದ ತಲೈವಾ!

Kamal Haasan Indian 2 to release on July 12
ಕಾಲಿವುಡ್2 hours ago

Kamal Haasan: ಕಮಲ್‌ ಹಾಸನ್‌ ಅಭಿನಯದ ‘ಇಂಡಿಯನ್ 2′  ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

rain news charamadi ghat traffic jam
ಮಳೆ2 hours ago

Rain news: ಚಾರ್ಮಾಡಿ ಘಾಟಿಯಲ್ಲಿ ಮಳೆಗೆ ಸಿಲುಕಿಕೊಂಡ ನೂರಾರು ಪ್ರಯಾಣಿಕರು

CET Result
ಶಿಕ್ಷಣ2 hours ago

CET Result: ಅಧಿಕಾರಿಗಳ ಎಡವಟ್ಟಿನಿಂದ ವಿಳಂಬ; ಸಿಇಟಿ ಫಲಿತಾಂಶ ಯಾವಾಗ ಪ್ರಕಟವಾಗಬಹುದು?

Lok Sabha Election 2024 Akshay Kumar casts vote for the first time
ಬಾಲಿವುಡ್2 hours ago

Lok Sabha Election 2024: ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್‌ ಕುಮಾರ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ20 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ20 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ22 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌