Murder Case: ಕಲಾಸಿಪಾಳ್ಯದಲ್ಲಿ ಕೊಲೆ; ಪತ್ನಿಗೆ ಬೇರೆ ಮದುವೆ ಮಾಡಿಸಿದವನನ್ನು ಕೊಂದು ಸುಟ್ಟು ಹಾಕಿದ - Vistara News

ಕ್ರೈಂ

Murder Case: ಕಲಾಸಿಪಾಳ್ಯದಲ್ಲಿ ಕೊಲೆ; ಪತ್ನಿಗೆ ಬೇರೆ ಮದುವೆ ಮಾಡಿಸಿದವನನ್ನು ಕೊಂದು ಸುಟ್ಟು ಹಾಕಿದ

ಕಲಾಸಿಪಾಳ್ಯದಲ್ಲಿ ದೊರೆತ ಅರೆ ಬೆಂದ ಹೆಣದ ಹಿಂದಿನ ಕೊಲೆ (Murder case) ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

kalasipaly murder
ಕೊಲೆಯಾದ ಸುಧಾಹರನ್‌, ಆರೋಪಿ ವಿಜಯ್‌ ಕುಮಾರ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ (KR Market) ಅರ್ಧ ಬೆಂದ ಹೆಣವೊಂದರ (burnt body) ಬೆನ್ನು ಹತ್ತಿ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಕೊಲೆ (Murder Case) ಆರೋಪಿಯನ್ನು ಕಲಾಸಿಪಾಳ್ಯ ಪೊಲೀಸರು (Bangalore police) ಬಂಧಿಸಿದ್ದಾರೆ.

ಪತ್ನಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡ ಹಾಗೂ ಆಕೆಗೆ ಬೇರೊಬ್ಬನ ಜತೆ ಮದುವೆ ಮಾಡಿಸಿದ್ದರಿಂದ ಆಕ್ರೋಶಗೊಂಡ ಆರೋಪಿ, ಸುಧಾಹರನ್ ಎಂಬಾತನನ್ನು ಹತ್ಯೆ ಮಾಡಿದ್ದ. ನಂತರ ಸುಟ್ಟು ಹಾಕಿ ಪರಾರಿಯಾಗಿದ್ದ.

ವಿಜಯ್‌ ಕುಮಾರ್‌ ಎನ್ನುವವನೇ ಆರೋಪಿ. ವಿಚಾರಣೆ ವೇಳೆ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ. ಸುಧಾಹರನ್ ಅಲಿಯಾಸ್ ಕುಳ್ಳ ಎನ್ನುವವನನ್ನು ಈತ ಮರ್ಡರ್ ಮಾಡಿದ್ದಾನೆ. ಸುಧಾಹರನ್ ಮತ್ತು ವಿಜಯ್ ಕುಮಾರ್ ಸ್ನೇಹಿತರಾಗಿದ್ದು, ಇಬ್ಬರೂ ಕಲಾಸಿಪಾಳ್ಯದ ತರಕಾರಿ ಮಾರ್ಕೆಟ್‌ನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದರು.

ವಿಜಯ್ ಕುಮಾರ್ ಮದ್ಯ ಮತ್ತು ಸಿಗರೇಟ್ ಸೇದುವ ಚಟಕ್ಕೆ ಬಿದ್ದಿದ್ದ. ಇದರಿಂದ 2015ರಲ್ಲಿ‌ ವಿಜಯ್‌ನನ್ನು ಆತನ ತಾಯಿ ಮದ್ಯವರ್ಜನ ಕೇಂದ್ರಕ್ಕೆ ಸೇರಿಸಿದ್ದರು. 11 ತಿಂಗಳು ಮದ್ಯವರ್ಜನ ಕೇಂದ್ರದಲ್ಲಿ ಬಂದಿಯಾಗಿದ್ದ ವಿಜಯ್ ಕುಮಾರ್. ಈ ವೇಳೆ ವಿಜಯ್ ಪತ್ನಿ ನಂದಿನಿಗೆ ಸುಧಾಹರನ್ ಬೇರೊಬ್ಬನ ಜತೆಗೆ ಮದುವೆ ಮಾಡಿಸಿದ್ದ.

ಮದ್ಯವರ್ಜನ ಕೇಂದ್ರದಿಂದ ಹೊರಬಂದಿದ್ದ ವಿಜಯ್‌ಗೆ ಇದರಿಂದ ಶಾಕ್ ಆಗಿತ್ತು. ಪತ್ನಿ‌ಗೆ ಬೇರೆ ಮದುವೆಯಾಗಿ ಹೋಗಿದ್ದರಿಂದ ಆತ ಡಿಪ್ರೆಶನ್‌ಗೆ ಹೋಗಿದ್ದ. ಈ ವಿಚಾರವಾಗಿ ಹಲವು ಬಾರಿ ಸುಧಾಹರನ್‌ನೊಂದಿಗೆ ಜಗಳವಾಡಿದ್ದ. ನಾಲ್ಕು ತಿಂಗಳ ಹಿಂದೆ ತನ್ನ ಪತ್ನಿ ನಂದಿನಿ ಮತ್ತು ಆನಂದ್ ಎಲ್ಲಿದ್ದಾರೆ ಎಂದು ಕೇಳಿದ್ದ. ಈ ವೇಳೆ ಆನಂದ್‌ಗೆ ಸುಧಾಹರನ್ ಫೋನ್ ಮಾಡಿದ್ದ. ಆಗ ಆನಂದ್ ಮತ್ತು ನಂದಿನಿ ಫೋನ್ ರಿಸೀವ್ ಮಾಡಿರಲಿಲ್ಲ.

ಇದರಿಂದ ಸುಧಾಹರನ್ ಮೇಲೆ ದ್ವೇಷ ಸಾಧಿಸಿದ್ದ ವಿಜಯ್, ತನ್ನ ಹೆಂಡತಿಗೆ ಮತ್ತೊಂದು ಮದುವೆ ಮಾಡಿಸಿ ಮೋಸ ಮಾಡಿದ್ದಿ ಎಂದು ಪದೇ ಪದೆ ಜಗಳ ಕಾಯುತ್ತಿದ್ದ. ಕೊನೆಗೆ ಸುಧಾಹರನ್ ಹತ್ಯೆ ಮಾಡಲು ನಿರ್ದರಿಸಿದ್ದ. ನವಂಬರ್ 11ರಂದು ಕಲಾಸಿಪಾಳ್ಯ ಮಾರ್ಕೆಟ್‌ನಲ್ಲಿ ಸುಧಾಹರನ್‌ನನ್ನು ಭೇಟಿಯಾಗಿ ತನ್ನ ಬಳಿ ಇದ್ದ ಒಂದೂವರೆ ಕ್ವಾರ್ಟರ್ ಮದ್ಯದ ಬಾಟಲು ನೀಡಿದ್ದ. ನನಗೆ ಆರೋಗ್ಯ ಸರಿಯಿಲ್ಲ ನೀನೇ ಕುಡಿಯೆಂದು ಸುಧಾಹರನ್‌ಗೆ ಮನವೊಲಿಸಿದ್ದ.

ನಂತರ ಸುಧಾಹರನ್‌ಗೆ ಮತ್ತೊಂದು ಕ್ವಾರ್ಟರ್ ಮದ್ಯ ಕುಡಿಸಿ, ಮಧ್ಯಾಹ್ನ 12 ಗಂಟೆಗೆ ವಿಶ್ರಾಂತಿ ಮಾಡೋಣ ಬಾ ಎಂದು‌ ತರಕಾರಿ ಮಾರ್ಕೆಟ್ ಮೇಲ್ಛಾವಣಿಗೆ ಕರೆದುಕೊಂಡು ಹೋಗಿದ್ದ. ನನ್ನ ಬಳಿ ಇದ್ದ 140 ರೂಪಾಯಿ ಕದ್ದಿದ್ದೀ ಎಂದು ಜಗಳ ತೆಗೆದಿದ್ದ. ಇದರಿಂದ ಮಾತಿಗೆ ಮಾತು ಬೆಳೆದು ಸಿಟ್ಟಿನಿಂದ ವಿಜಯ್ ಕಪಾಳಕ್ಕೆ ಸುಧಾಹರನ್ ಹೊಡೆದಿದ್ದ. ನಂತರ ವಿಜಯ್‌ ತನ್ನ ಬಳಿ ಇದ್ದ ಹಣ್ಣು ಕತ್ತರಿಸುವ ಚಾಕಿನಿಂದ ಸುಧಾಹರನ್ ಕುತ್ತಿಗೆಗೆ ಚುಚ್ಚಿದ್ದ.

ಈ ವೇಳೆ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದ ಸುಧಾಹರನ್. ಶವದ ಗುರುತು ಸಿಗದಂತೆ ಮಾಡಲು ಗೋಣಿಚೀಲ ಸುತ್ತಿ ಬೆಂಕಿ ಹಾಕಿ ವಿಜಯ್‌ ಎಸ್ಕೇಪ್ ಆಗಿದ್ದ. ಪೊಲೀಸ್ ವಿಚಾರಣೆಯಿಂದ ಇದೀಗ ಕೊಲೆ ಹಿಂದಿನ ಸತ್ಯ ಹೊರಹಾಕಿದ್ದಾನೆ.

ಇದನ್ನೂ ಓದಿ: Murder Case : ಫೋಟೊ ಶೂಟ್‌ ತಗಾದೆ ; ನಾಲ್ವರ ಗ್ಯಾಂಗ್‌ನಿಂದ ಯುವಕನ ಕೊಲೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಳ್ಳಾರಿ

Drowned in water : ಮೀನು ಹಿಡಿಯುವಾಗ ಫಿಟ್ಸ್‌ ಬಂದು ನದಿಗೆ ಬಿದ್ದ ಮೀನುಗಾರ

Drowned In water :ಬಳ್ಳಾರಿಯಲ್ಲಿ ಮೀನು ಹಿಡಿಯುವಾಗ ಫಿಟ್ಸ್‌ ಬಂದು ಮೀನುಗಾರ ನದಿಗೆ ಬಿದ್ದಿದ್ದಾರೆ. ಇತ್ತ ಬಾಗಲಕೋಟೆಯಲ್ಲಿ ಮೇವು ತರಲು ಹೊಲಕ್ಕೆ ಹೋದ ರೈತ ನೀರುಪಾಲಾಗಿದ್ದಾರೆ.

VISTARANEWS.COM


on

By

Drowned in water
Koo

ಬಳ್ಳಾರಿ: ಬಳ್ಳಾರಿಯ ಕಂಪ್ಲಿಯಲ್ಲಿ ಮೀನು ಹಿಡಿಯುವಾಗ ಫಿಟ್ಸ್‌ ಬಂದು ಮೀನುಗಾರ ನದಿಗೆ ಬಿದ್ದ (Drowned In water) ಘಟನೆ ನಡೆದಿದೆ. ಕಂಪ್ಲಿ ಕೋಟೆಯ ಬಳಿ ತುಂಗಭದ್ರಾ ನದಿ ತಟದಲ್ಲಿ ಮೀನುಗಾರ ಕರ್ಪಣ್ಣ ಮೀನು ಹಿಡಿಯುವಾಗ ಫಿಟ್ಸ್ ಬಂದಿದೆ. ಈ ವೇಳೆ ಏಕಾಏಕಿ ನದಿಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ನದಿಯಲ್ಲಿ ಮುಳುಗಿದ್ದ ಕರ್ಪಣರನ್ನು ಕಂಡು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಂಪ್ಲಿ‌ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಕರೆದುಕೊಂಡು ಹೋಗಿದ್ದಾರೆ.

ಮೇವು ತರಲು ಹೊಲಕ್ಕೆ ಹೋದ ರೈತ ನೀರುಪಾಲು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಆಲಗೂರು ಗ್ರಾಮದಲ್ಲಿ ಮೇವು ತರಲು ಹೊದ ರೈತ ಹೊಲದಲ್ಲಿ ನೀರುಪಾಲಾಗಿದ್ದಾರೆ. ಕೃಷ್ಣಾ ನದಿ ಪ್ರವಾಹಕ್ಕೆ ರೈತ ಸಿದ್ದಪ್ಪ ಅಡಹಳ್ಳಿ(60) ಕೊಚ್ಚಿ ಹೋಗಿದ್ದಾರೆ. ಸದ್ಯ ಕೊಚ್ಚಿಹೋದ ಸಿದ್ದಪ್ಪನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸೈಕಲ್‌ ನಿಲ್ಲಿಸಿ ಮೇವು ತರಲು ಹೊಲಕ್ಕೆ ಹೋಗಿದ್ದಾಗ ನದಿ ನೀರು ಹೆಚ್ಚಾಗಿದೆ. ಹರಿಯುವ ನೀರಿನಲ್ಲಿ ನಡೆದುಕೊಂಡು ಬರುವಾಗ ಕೊಚ್ಚಿ ಹೋಗಿದ್ದಾರೆ.

ಇದನ್ನೂ ಓದಿ: Karnataka Rain : ಮಳೆಗೆ ಮನೆ ಮುಳುಗಡೆಯಾದ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವು

ಓರಿಯಂಟಲ್ ಕಾರ್ಖಾನೆ ಕಾರ್ಮಿಕನ ಶವ ಪತ್ತೆ

ಓರಿಯಂಟಲ್ ಕಾರ್ಖಾನೆ ಕಾರ್ಮಿಕನ ಅನುಮಾನಾಸ್ಪದಾಗಿ ಶವ ಪತ್ತೆಯಾಗಿದೆ. ಕಲಬುರಗಿಯ ಚಿತ್ತಾಪೂರ ಪಟ್ಟಣದ ಪ್ರಗತಿ ಕಾಲೋನಿ ಬಳಿ ಶವ ಪತ್ತೆಯಾಗಿದೆ. ಶರೀಫ್ ನಿಜಾಮುದ್ದಿನ್ (22) ಎಂಬಾತನ ಮೃತದೇಹ ಸಿಕ್ಕಿದೆ. ಚಿತ್ತಾಪೂರ ಪಟ್ಟಣದ ನಾಸರಗಂಜ್ ಕಾಲೋನಿಯ ನಿವಾಸಿಯಾದ ಶರೀಫ್‌, ಚಿತ್ತಾಪೂರನ ಓರಿಯಂಟಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ಶುಕ್ರವಾರ ಮಧ್ಯಾಹ್ನ ಹೋದ ಶರೀಫ್‌ ಶನಿವಾರ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈಲ್ವೆ ಟ್ರ್ಯಾಕ್‌ ಪಕ್ಕ ಮಹಿಳೆ ಮೃತದೇಹ ಪತ್ತೆ

ರೈಲ್ವೆ ಟ್ರ್ಯಾಕ್‌ ಪಕ್ಕದಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ನಗರದ ಸವಳಂಗ ರಸ್ತೆ ರೈಲ್ವೆ ಗೇಟ್ ಬಳಿ ಮೃತದೇಹ ಪತ್ತೆಯಾಗಿದೆ. ತಾಳಗುಪ್ಪ ಬೆಂಗಳೂರಿಗೆ ತೆರಳುತ್ತಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತಳ ಗುರುತು ಪತ್ತೆಯಾಗಿಲ್ಲ. ಸುಮಾರು 50 ವರ್ಷದ ಆಸುಪಾಸಿನ ಮಹಿಳೆಯ ಶವ ಪತ್ತೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಮನಗರ

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

Govt School : ಶಾಲೆಗೆ ಬರುವ ಬಾಲಕಿಯರು ಎರಡು ಜಡೆ ಹಾಕಿಲ್ಲ ಎಂದು ಅತಿಥಿ ಶಿಕ್ಷಕರು ಮೂವರ ತಲೆಕೂದಲನ್ನೇ (Ramanagar News) ಕತ್ತರಿಸಿದ್ದಾರೆ. ಶಿಕ್ಷಕರ ಕಾರ್ಯಕ್ಕೆ ಪೋಷಕರು ಕಿಡಿಕಾರಿದ್ದಾರೆ. ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

VISTARANEWS.COM


on

By

ramanagara news
Koo

ರಾಮನಗರ: ಸರ್ಕಾರಿ ಶಾಲೆಯಲ್ಲಿ (Ramanagar News) ಎರಡು ಜಡೆ ಹಾಕಿಲ್ಲವೆಂದು ಶಿಕ್ಷಕರಿಬ್ಬರು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ್ದಾರೆ. ಶಿಕ್ಷಕರ ನಡೆಗೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ.

ಶಾಲೆಗೆ ಬರುವಾಗ ಎರಡು ಜಡೆ ಹಾಕಿಲ್ಲವೆಂದು ಸಿಟ್ಟಾದ ಇಬ್ಬರು ಶಿಕ್ಷಕರು ಮೂವರು ವಿದ್ಯಾರ್ಥಿನಿಯರಿಗೆ ಕೂದಲು ಕತ್ತರಿಸಿದ್ದಾರೆ. ಹೆಣ್ಮಕ್ಕಳ ತಲೆಗೂದಲು ಕಟ್ ಮಾಡುವುದು ಯಾವ ಸಂಸ್ಕೃತಿ ಸ್ವಾಮಿ ಎಂದು ಪೋಷಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಪವಿತ್ರ ಹಾಗೂ ಶಿವಕುಮಾರ್ ಎಂಬ ಶಿಕ್ಷಕರು ವಿದ್ಯಾರ್ಥಿನಿಯರ ಮೇಲೆ ದರ್ಪ ತೋರಿದ್ದಾರೆ. ವಿದ್ಯಾರ್ಥಿನಿಯರು ಪ್ರತಿನಿತ್ಯ ಒಂದು ಜಡೆ ಹಾಕಿಕೊಂಡು ಬರುತ್ತಿದ್ದರು. ಹಾಗಾಗಿ ಕೂದಲು ಕಟ್ ಮಾಡಿದ್ದವಿ ಎಂದು ಸಮಜಾಯಿಷಿಯನ್ನು ನೀಡಿದ್ದಾರೆ. ಪೋಷಕರ ಎದುರು ಘಟನೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Electric shock : ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದವನಿಗೆ ಕರೆಂಟ್‌ ಶಾಕ್‌; ಕ್ಷಣಾರ್ಧದಲ್ಲಿ ಹಾರಿಹೋಯ್ತು ಪ್ರಾಣ

ಅತಿಥಿ ಶಿಕ್ಷಕರ ತಲೆದಂಡ

ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ್ದ ಅತಿಥಿ ಶಿಕ್ಷಕರಿಗೆ ತಲೆದಂಡವಾಗಿದೆ. ಇಬ್ಬರು ಶಿಕ್ಷಕರು ಅಮಾನತು ಮಾಡುವಂತೆ ಶಿಫಾರಸು ಮಾಡಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಮರಿಗೌಡ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಘಟನೆ ಬಗ್ಗೆ ಮೇಲಾಧಿಕಾರಿಗೆ ಪತ್ರ ಬರೆದು, ಅತಿಥಿ ಶಿಕ್ಷಕರಾದ ಶಿವಕುಮಾರ್ ಹಾಗೂ ಪವಿತ್ರ ಅವರಿಗೆ ಅಮಾನತು ಆದೇಶಕ್ಕೆ ರಾಮನಗರ ಜಿಲ್ಲಾ ಡಿಡಿಪಿಐ ಬಸವರಾಜೇಗೌಡಗೆ ವರದಿ ಸಲ್ಲಿಸಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ವಿವರಣೆ ಮೂಲಕ ವರದಿ ಸಲ್ಲಿಸಿದ್ದು, ಕೂಡಲೇ ಇಬ್ಬರು ಅತಿಥಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮೈಸೂರು

Electric shock : ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದವನಿಗೆ ಕರೆಂಟ್‌ ಶಾಕ್‌; ಕ್ಷಣಾರ್ಧದಲ್ಲಿ ಹಾರಿಹೋಯ್ತು ಪ್ರಾಣ

Electric shock : ಜಮೀನು ಕೆಲಸಕ್ಕೆ ಹೊರಟಿದ್ದ ಯುವಕನೊಬ್ಬ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ವಿದ್ಯುತ್‌ ನಿಗಮದ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

VISTARANEWS.COM


on

By

Electric shock
Koo

ಮೈಸೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ (Electric shock) ತುಳಿದು ಯುವಕನೊರ್ವ ದಾರುಣವಾಗಿ ಮೃತಪಟ್ಟಿದ್ದಾನೆ. ಮೈಸೂರಿನ ಹುಣಸೂರು ತಾಲೂಕಿನ ಹೊಸರಾಮನಹಳ್ಳಿಯಲ್ಲಿ ಘಟನೆ ನಡೆದಿದೆ. ಮಂಚೂನಾಯಕ (18) ಮೃತ ದುರ್ದೈವಿ.

ಮಂಚೂನಾಯಕ ತಮ್ಮ ಜಮೀನಿನಲ್ಲಿ ಬಾಳೆ ಗೊನೆ ಕೊಯ್ಯಲು ತೆರಳಿದಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ತಂತಿ ತುಂಡಾಗಿ ಬಿದ್ದು ಎರಡು ದಿನ ಕಳೆದರೂ ಇಲಾಖಾ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಎರಡು ದಿನಗಳಿಂದ ಹಲವು ಬಾರಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯ ಸಂಪರ್ಕ ಕಡಿತಗೊಳಿಸುವಂತೆ ಮನವಿ ಮಾಡಿದ್ದರೂ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದೆ. ಲೈನ್ ಮ್ಯಾನ್‌ ವಸಂತ್ ಎಂಬಾತನ ನಿರ್ಲಕ್ಷ್ಯದಿಂದ ಯುವಕ ಮೃತಪಟ್ಟಿದ್ದಾಗಿ ಆರೋಪಿಸಿದ್ದಾರೆ.

ಸ್ಥಳಕ್ಕೆ ವಿದ್ಯುತ್ ಇಲಾಖೆಯ ಎಇ ಜಯರತ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲಾಖೆಯಿಂದ ಪರಿಹಾರ ತಲುಪಿಸುವ ಭರವಸೆ ನೀಡಿದ್ದಾರೆ. ಕುಟುಂಬದ ಒಬ್ಬ ವ್ಯಕ್ತಿಗೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಜತೆಗೆ ನಿರ್ಲಕ್ಷ್ಯತೆಗೆ ಕಾರಣರಾದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಗ್ರಾಮಸ್ಥರು ಕುಟುಂಬದ ಒಬ್ಬರಿಗೆ ಶಾಶ್ವತ ಕೆಲಸ ಕೊಡಿಸುವಂತೆ ಒತ್ತಾಯಿಸಿದರು.

ಇದನ್ನೂ ಓದಿ: Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಧಾರವಾಡದಲ್ಲಿ ವಿದ್ಯುತ್ ತಂತಿ ತಗುಲಿ ಜಾನುವಾರು ಸಾವು

ವಿದ್ಯುತ್ ತಂತಿ ತಗುಲಿ ಜಾನುವಾರು ಮೃತಪಟ್ಟಿದೆ. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಮನಗುಂಡಿ ರೈತ ಮಡಿವಾಳಪ್ಪ ಎಂಬುವವರಿಗೆ ಸೇರಿದ ಒಂದು ಎಮ್ಮೆ ಹಾಗೂ ಎಮ್ಮೆ ಕರು ಮೃತಪಟ್ಟಿದೆ. ಜಾನುವಾರುಗಳನ್ನು ಮೇಯಿಸಲು ಹೋದಾಗ ಬೋರವೆಲ್ ಮೋಟರ್ ಆರಂಭಿಸುವ ವಿದ್ಯುತ್ ತಗುಲಿ ಮೃತಪಟ್ಟಿವೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Actor Darshan: ದರ್ಶನ್ ದೈವ ಭಕ್ತ, ಜೈಲಿಗೆ ಸೇರಿದ್ದಾಗಿನಿಂದ ವಿಜಯಲಕ್ಷ್ಮಿ ಅತ್ತಿಗೆ ಹೋರಾಟ ಜಾಸ್ತಿ ಆಗಿದೆ ಎಂದ ಲತಾ ಜೈಪ್ರಕಾಶ್!

Actor Darshan: ವಿಜಯಲಕ್ಷ್ಮಿ ಆಪ್ತೆ ಹಾಗೂ ನಿರ್ಮಾಪಕಿ ಲತಾ ಜೈಪ್ರಕಾಶ್ ಕೂಡ ದರ್ಶನ್ ಅವರ ಬಗ್ಗೆ ಮಾತನಾಡಿದ್ದು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮಿ ಅವರು ಪ್ರತೀ ಬಾರಿ ಆಷಾಢದಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದವರು ಈ ಬಾರಿ ಬಂದಿಲ್ಲ. ದೇವಸ್ಥಾನದಲ್ಲಿ ಪ್ರತೀ ಆಷಾಢದಲ್ಲೂ ಅತ್ತಿಗೆ ನನಗೆ ಸಿಗುತ್ತಿದ್ದರು.ನನಗೆ ಸುಮಾರು ಹತ್ತು ವರ್ಷದಿಂದಲೂ ವಿಜಯಲಕ್ಷ್ಮಿ ಅತ್ತಿಗೆ ಪರಿಚಯವಿದೆ. ದರ್ಶನ್ ಅಣ್ಣ ‘ಅಂಬರೀಶ್’ ಸಿನಿಮಾ ಮೂಲಕ ಪರಿಚಯವಾಗಿ ನನ್ನ ತಮ್ಮನಿಗೂ ಕ್ಲೋಸ್ ಆಗಿದ್ದರು. ಅತ್ತಿಗೆನೇ ಅಣ್ಣನಿಗೆ ಬಲ ಆಗಿದ್ದಾರೆʼʼಎಂದರು.

VISTARANEWS.COM


on

Actor Darshan Lata Jaiprakash says that since Darshan is a devotee of God,
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಅವರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.  ವಿಜಯಲಕ್ಷ್ಮಿ ಆಪ್ತೆ ಹಾಗೂ ನಿರ್ಮಾಪಕಿ ಲತಾ ಜೈಪ್ರಕಾಶ್ ಕೂಡ ದರ್ಶನ್ ಅವರ ಬಗ್ಗೆ ಮಾತನಾಡಿದ್ದು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ʻʻನನಗೆ ದರ್ಶನ್‌ ಅಣ್ಣ ಅಷ್ಟು ಆತ್ಮೀಯರು ಅಲ್ಲ. ಆದರೆ ನನ್ನ ತಮ್ಮನಿಗೆ ಕ್ಲೋಸ್‌. ಮತ್ತೆ ಮನೆ ಮಂದಿ ತರವೇ ಇದ್ದಾರೆ. ನಮ್ಮ ಮನೆಯಲ್ಲಿ ಕಲಾವಿದರಿಗೆ ಪ್ರೋತಾಹ ಕೂಡ ಕೊಡುತ್ತೇವೆ. ಅದು ಅಲ್ಲದೇ ಅವರು ದೇವರ ಭಕ್ತರಾಗಿರುವುದರಿಂದ ಈ ರೀತಿ ಘಟನೆ ಎದುರಿಸುತ್ತಿದ್ದಾರೆ ಅಂದ್ರೆ ಆಶ್ಚರ್ಯವಾಗುತ್ತದೆ. ಹೆಣ್ಣು ಮಕ್ಕಳನ್ನು ಗೌರವಿಸುವ ರೀತಿ, ಮಾತನಾಡಿಸುವ ರೀತಿ ದರ್ಶನ್ ಮುಗ್ಧ ಮನಸ್ಸಿಗೆ ಮಾತ್ರ ಇರುವುದು. ಜೈಲಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊರ ಬರುವಾಗ ಉತ್ತಮ ಸ್ಟಾರ್ ಆಗಿ ಹೊರ ಬರಲು ಅವರ ಪತ್ನಿ ವಿಜಯಲಕ್ಷ್ಮಿನೇ ಕಾರಣ. ತಪ್ಪು ಮಾಡುವುದು ಸಹಜ. ಆದರೆ ಜೀವ ಮಾತ್ರ ವಾಪಸ್ಸು ಬರಲ್ಲ. ಆದರೆ ಇದೀಗ ದರ್ಶನ್‌ ಅವರನ್ನು ಕ್ಷಮಿಸಬೇಕು ಅಂತಲ್ಲ. ಅವರಿಗೆ ಅದು ಪ್ರಾಯಶ್ಚಿತ ಆಗಬೇಕು. ಕೋರ್ಟ್‌ನಿಂದ ಏನು ತೀರ್ಪು ಬರುತ್ತೋ ಆರೋಪ ಮುಕ್ತ ಬರಲಿ ಎಂದು ಪ್ರಾರ್ಥನಿಸುತ್ತೇನೆ. ದರ್ಶನ್‌ ಬಂಡಿಮಹಾಕಾಳಿ ದರ್ಶನ ಪಡೆದು ತಡೆ ಹೊಡೆಸಿಕೊಂಡು ಹೋಗುತ್ತಿದ್ದರು. ಅಲ್ಲದೆ ದೇವಿ ಮುಂದೆ ನಿಂತು ವಿಜಯಲಕ್ಷ್ಮಿ ಪ್ರಾರ್ಥನೆ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋ ಎರಡು ಮೂರು ತಿಂಗಳ ಹಳೆ ಫೋಟೋʼʼ ಎಂದು ಲತಾ ಜೈಪ್ರಕಾಶ್ ಸ್ಪಷ್ಟನೆ ಕೊಟ್ಟರು.

ಇದನ್ನೂ ಓದಿ: Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

ʻʻವಿಜಯಲಕ್ಷ್ಮಿ ಅವರು ತುಂಬ ಓಡಾಡುತ್ತಿದ್ದಾರೆ. ಇಬ್ಬರೂ ದೈವಭಕ್ತರು. ಏನೋ ಒಂದು ಗ್ರಹಚಾರ. ದರ್ಶನ್ ಅಣ್ಣ ದೇವಸ್ಥಾನಕ್ಕೆ ಬರುತ್ತಿದ್ದರು. ಆದರೆ ಅವರು ಜನ ಇದ್ದಾಗ ದೇವಸ್ಥಾನಕ್ಕೆ ಬರುತ್ತಿರಲಿಲ್ಲ. ದೇವಸ್ಥಾನಕ್ಕೆ ಬರಬೇಕು ಅನಿಸಿದಾಗ ಮಿಡ್ ನೈಟ್ ಆದರೂ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದರು. ಈ ಸಮಸ್ಯೆಯಿಂದ ದರ್ಶನ್ ಅಣ್ಣ ಬೇಗ ಹೊರಬರಲಿ. ವಿಜಯಲಕ್ಷ್ಮಿ ಅತ್ತಿಗೆ ಕೂಡ ಮನೆ ದೇವರು ಮುನೇಶ್ವರನಿಗೆ ಹರಕೆ ಕಟ್ಟಿಕೊಂಡಿದ್ದಾರೆʼʼ ಎಂದು ಬಂಡೆ ಮಹಾಕಾಳಮ್ಮ ದೇವಸ್ಥಾನದ ಟ್ರಸ್ಟಿ ಲತಾ ಜೈಪ್ರಕಾಶ್ ಹೇಳಿದರು.

ʻʻದರ್ಶನ್ ಅಣ್ಣ ಜೈಲು ಸೇರಿದಾಗಿನಿಂದಲೂ ವಿಜಯಲಕ್ಷ್ಮಿ ಅತ್ತಿಗೆ ಅವರ ಹೋರಾಟ ಹಾಗೂ ಓಡಾಟ ಜಾಸ್ತಿ ಆಗಿದೆ. ಇದರಿಂದಾಗಿ ವಿಜಯಲಕ್ಷ್ಮಿ ಅವರು ಪ್ರತೀ ಬಾರಿ ಆಷಾಢದಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದವರು ಈ ಬಾರಿ ಬಂದಿಲ್ಲ. ದೇವಸ್ಥಾನದಲ್ಲಿ ಪ್ರತೀ ಆಷಾಢದಲ್ಲೂ ಅತ್ತಿಗೆ ನನಗೆ ಸಿಗುತ್ತಿದ್ದರು.ನನಗೆ ಸುಮಾರು ಹತ್ತು ವರ್ಷದಿಂದಲೂ ವಿಜಯಲಕ್ಷ್ಮಿ ಅತ್ತಿಗೆ ಪರಿಚಯವಿದೆ. ದರ್ಶನ್ ಅಣ್ಣ ‘ಅಂಬರೀಶ್’ ಸಿನಿಮಾ ಮೂಲಕ ಪರಿಚಯವಾಗಿ ನನ್ನ ತಮ್ಮನಿಗೂ ಕ್ಲೋಸ್ ಆಗಿದ್ದರು. ಅತ್ತಿಗೆನೇ ಅಣ್ಣನಿಗೆ ಬಲ ಆಗಿದ್ದಾರೆʼʼಎಂದರು.

Continue Reading
Advertisement
Joe Root
ಕ್ರೀಡೆ4 mins ago

Joe Root : ಟೆಸ್ಟ್ ಇತಿಹಾಸದ ರನ್​ ಗಳಿಕೆಯ ದಾಖಲೆಯ ಪಟ್ಟಿಯಲ್ಲಿ ಲಾರಾ ಹಿಂದಿಕ್ಕಿದ ಜೋ ರೂಟ್

CT Ravi
ಕರ್ನಾಟಕ8 mins ago

CT Ravi: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸಿ.ಟಿ.ರವಿ; ಇಲ್ಲಿದೆ ಪತ್ರದ ಸಾರಾಂಶ

Aishwarya Rai Bachchan
ಸಿನಿಮಾ9 mins ago

Aishwarya Rai Bachchan: ಐಶ್ವರ್ಯಾ ರೈ ಧರಿಸಿರುವ V ಆಕಾರದ ಈ ವಜ್ರದುಂಗುರದ ವಿಶೇಷತೆ ಗೊತ್ತೆ?

Mukesh Ambani
ವಾಣಿಜ್ಯ35 mins ago

Mukesh Ambani: ಮುಕೇಶ್ ಅಂಬಾನಿಯ ಒಂದು ದಿನದ ಆದಾಯ 163 ಕೋಟಿ ರೂ! ಒಟ್ಟು ಸಂಪತ್ತೆಷ್ಟು?

Minister Dinesh Gundurao drives for the 5th Kannada Sahitya Sammelana in Bengaluru
ಬೆಂಗಳೂರು46 mins ago

Kannada Sahitya Sammelana: ಬೆಂಗಳೂರಿನಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

The woman shows gray hair on her head. Hair with fragments of gray hair, hair roots requiring dyeing
ಆರೋಗ್ಯ47 mins ago

Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

Yadgiri News Kolluru bridge inundation MLA Channareddy Patil tunnuru visit inspection
ಯಾದಗಿರಿ47 mins ago

Yadgiri News: ಕೃಷ್ಣಾ ನದಿ ಪ್ರವಾಹದಿಂದ ಕೊಳ್ಳುರು ಸೇತುವೆ ಮುಳುಗಡೆ; ಶಾಸಕ ಚನ್ನಾರೆಡ್ಡಿ ಪಾಟೀಲ ಭೇಟಿ

Nirmala Sahaya Hasta programme by Okkaliga Yuva Brigade on 28th July and 1st 3rd and 5th August
ಬೆಂಗಳೂರು48 mins ago

Bengaluru News: ಒಕ್ಕಲಿಗ ಯುವ ಬ್ರಿಗೇಡ್‌ನಿಂದ ಜು.28ರಂದು ʼನಿರ್ಮಲ ಸಹಾಯ ಹಸ್ತʼ ಕಾರ್ಯಕ್ರಮ

Karnataka weather Forecast
ಮಳೆ49 mins ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

Drowned in water
ಬಳ್ಳಾರಿ1 hour ago

Drowned in water : ಮೀನು ಹಿಡಿಯುವಾಗ ಫಿಟ್ಸ್‌ ಬಂದು ನದಿಗೆ ಬಿದ್ದ ಮೀನುಗಾರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ49 mins ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ6 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ6 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌