Style Statement: ಚಳಿಗಾಲದಲ್ಲಿ ಬ್ಯೂಟಿ ಕೇರ್ ಹೇಗಿರಬೇಕು? ಕಾರ್ಪೋರೇಟ್ ಕ್ವೀನ್ ಸಲಹೆ ಹೀಗಿದೆ - Vistara News

ಫ್ಯಾಷನ್

Style Statement: ಚಳಿಗಾಲದಲ್ಲಿ ಬ್ಯೂಟಿ ಕೇರ್ ಹೇಗಿರಬೇಕು? ಕಾರ್ಪೋರೇಟ್ ಕ್ವೀನ್ ಸಲಹೆ ಹೀಗಿದೆ

ಮಿಸೆಸ್‌ ಇಂಡಿಯಾ ಕರ್ನಾಟಕ ಬ್ಯೂಟಿ ಪೇಜೆಂಟ್‌ನಲ್ಲಿ ಕಾರ್ಪೋರೇಟ್‌ ಕ್ವೀನ್‌ ಟೈಟಲ್‌ ಗೆದ್ದಿರುವ ಮೈಸೂರಿನ ಮಲ್ಲಮ್ಮ ಗಾಣಿಗಿ ಅವರಿಗೆ ರ್ಯಾಂಪ್‌ ಬಗ್ಗೆ ಪ್ರೀತಿ ಮಾತ್ರವಲ್ಲ, ಬೈಕ್‌ ಚಾಲನೆ ಮಾಡುವುದು ಇಷ್ಟವಂತೆ. ಈ ಬಾರಿಯ ಮಾಡೆಲ್‌ ಲೈಫ್‌ ಕಾಲಂನಲ್ಲಿ ಅವರು ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ (Style Statement) ಬಗ್ಗೆ ಹಂಚಿಕೊಂಡಿದ್ದಾರೆ.

VISTARANEWS.COM


on

Corporate Queen Style Statement
ಚಿತ್ರಗಳು: ಮಲ್ಲಮ್ಮ ಗಾಣಿಗಿ, ಮಿಸೆಸ್‌ ಇಂಡಿಯಾ ಕರ್ನಾಟಕ ಕಾರ್ಪೋರೇಟ್‌ ಕ್ವೀನ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ,ಬೆಂಗಳೂರು
ತಾಯಿ, ಪತ್ನಿ, ಮಗಳು, ಸ್ನೇಹಿತೆ ಹೀಗೆ ನಾನಾ ಪಾತ್ರಗಳನ್ನು ನಿರ್ವಹಿಸುವ ಹೆಣ್ಣು ಫ್ಯಾಷನ್‌ ಲೋಕದಲ್ಲೂ ಛಾಪು ಮೂಡಿಸಬಲ್ಲಳು. ಮೂಲತಃ ಆರ್ಕಿಟೆಕ್ಟ್ ಆಗಿರುವ ನಾನು ಪ್ರತಿ ಮಹಿಳೆ ಸ್ವಾವಲಂಬಿಯಾಗಿ ಬದುಕಬೇಕೆಂದುಕೊಳ್ಳುತ್ತೇನೆ ಎನ್ನುವ ಮಿಸೆಸ್‌ ಇಂಡಿಯಾ ಕರ್ನಾಟಕ ಬ್ಯೂಟಿ ಪೇಜೆಂಟ್‌ನಲ್ಲಿ ಮಿಸೆಸ್‌ ಕಾರ್ಪೋರೇಟ್‌ ಕ್ವೀನ್ ಟೈಟಲ್‌ ಪಡೆದ ಮೈಸೂರಿನ ಮಲ್ಲಮ್ಮ ಗಾಣಿಗಿ ಅವರಿಗೆ ಬೈಕ್‌ ಚಾಲನೆ ಮಾಡುವುದು ಇಷ್ಟವಂತೆ. ನಾನು ಕೇವಲ ಮಾಡೆಲ್‌ ಆಗಿ ಸೀಮಿತವಾಗಿಲ್ಲ, ತಾನು ಕಂಪ್ಲೀಟ್‌ ವುಮೆನ್‌ ಎಂದು ಹೇಳುತ್ತಾರೆ. ಈ ಬಾರಿಯ ಮಾಡೆಲ್‌ ಲೈಫ್‌ ಕಾಲಂನಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಫ್ಯಾಷನ್‌ ಲೈಫ್‌ ಬಗ್ಗೆ (Style Statement) ಹಂಚಿಕೊಂಡಿದ್ದಾರೆ.

a girl wear lehenga with crop top

ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಏನು?

ನನಗೆ ಆರ್ಟಿಸ್ಟಿಕ್‌, ಟ್ರೆಡಿಷನಲ್‌ ಹಾಗೂ ಕಂಟೆಪರರಿ ಸ್ಟೈಲ್‌ ಇರುವಂತಹ ಅಟೈರ್‌ಗಳನ್ನು ಪ್ರಯೋಗಿಸುವುದು ನನಗಿಷ್ಟ. ಪ್ರಯೋಗಾತ್ಮಕ ಫ್ಯಾಷನ್‌ ನನ್ನ ಲಿಸ್ಟ್‌ನಲ್ಲಿದೆ. ಇದು ನಮ್ಮತನವನ್ನು ಬಿಂಬಿಸಲು ಸಾಧ್ಯವಾಗುತ್ತದೆ. ನನಗೆ ಬ್ರೈಟ್‌ ಹಾಗೂ ಪಾಸ್ಟೆಲ್‌ ಕಲರ್ಸ್‌ನ ಔಟ್‌ಫಿಟ್‌ಗಳಿಷ್ಟ.

ಸ್ಟೈಲ್‌ ಸ್ಟೇಟ್‌ಮೆಂಟ್‌ ಬಗ್ಗೆ ಹೇಳುವೀರಾ?

ಮುಖದ ಮೇಲಿನ ನಗು ನನ್ನ ಯೂನಿಕ್‌ ಸ್ಟೈಲ್‌ ಸ್ಟೇಟ್‌ಮೆಂಟ್‌. ಇನ್ನು ಔಟ್‌ಫಿಟ್‌ಗಳನ್ನು ಮಿಕ್ಸ್‌ ಮ್ಯಾಚ್‌ ಮೂಲಕ ಪ್ರಯೋಗಿಸುವುದು ಸ್ಟೈಲ್‌ನ ಪ್ರತೀಕ ಎನ್ನಬಹುದು.

A woman wearing a lehenga who give a cute pose

ವಿಂಟರ್‌ ಫ್ಯಾಷನ್‌ ಬಗ್ಗೆ ಹೇಳಿ?

ವಿಂಟರ್‌ ಫ್ಯಾಷನ್‌ ಲೇಯರ್‌ ಲುಕ್‌ಗೆ ಸಾಥ್‌ ನೀಡುತ್ತದೆ. ಜೊತೆಗೆ ಮಿಕ್ಸ್‌ ಮ್ಯಾಚ್‌ ಅಪ್ಷನ್‌ ಪ್ರಯೋಗಿಸಲು ಸಹಾಯ ಮಾಡುತ್ತದೆ. ಚಳಿಗಾಲದ ಸೀಸನ್‌ಗೆ ತಕ್ಕಂತೆ ಬದಲಾಗುವುದು, ಸೀಸನ್‌ಗೆ ತಕ್ಕಂತೆ ಸ್ಟೈಲಿಂಗ್‌ ಮಾಡುವುದು ರೂಢಿಯಲ್ಲಿದೆ.

ವಿಂಟರ್‌ ಬ್ಯೂಟಿ ಕೇರ್‌ ಬಗ್ಗೆ ಏನು ಟಿಪ್ಸ್ ನೀಡುತ್ತೀರಾ?

ಚಳಿಗಾಲದಲ್ಲಿ ಬ್ಯೂಟಿ ಕೇರ್‌ ಅತ್ಯಗತ್ಯ. ಅದರಲ್ಲೂ ಮುಖಕ್ಕೆ ಫ್ರೆಶ್‌ ಆಗಿರಲು ಫೇಸ್‌ ವ್ಯಾಯಾಮಗಳನ್ನು ಮಾಡಬೇಕು. ಇದರೊಂದಿಗೆ ಮಾಯಿಶ್ಚರೈಸರ್‌ ಹಚ್ಚುವುದನ್ನು ರೂಢಿಸಿಕೊಳ್ಳಬೇಕು. ಹೆಚ್ಚು ಹೊತ್ತು ಶವರ್‌ನಲ್ಲಿ ಮುಖ ಒಡ್ಡಬಾರದು. ನೀರು ಹೆಚ್ಚು ಕುಡಿಯಬೇಕು. ಹೊರಗೆ ಹೋಗಿ ಬಂದ ನಂತರ ಮುಖದ ಕ್ಲೆನ್ಸಿಂಗ್ ಮಾಡಬೇಕು.

a woman wear mixedcolore saree and she is setting

ನಿಮ್ಮ ವಾರ್ಡ್ ರೊಬ್‌ನಲ್ಲಿರುವ ಕಲೆಕ್ಷನ್‌ ಹೇಳಿ?

ನಾನು ಆದಷ್ಟೂ ಉಡುಪುಗಳನ್ನು ಮರುಬಳಕೆ ಮಾಡುತ್ತೇನೆ. ಉಡುಪನ್ನು ಮಿಕ್ಸ್‌ ಮ್ಯಾಚ್‌ ಮಾಡಿ ಧರಿಸುತ್ತೇನೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಖರೀದಿಸುತ್ತೇನೆ. ಕಾಟನ್‌, ಹ್ಯಾಂಡ್‌ಲೂಮ್‌ ಸೀರೆ ನನ್ನ ಫೇವರೇಟ್‌ ಲಿಸ್ಟ್‌ನಲ್ಲಿದೆ. ಡಿಸೈನರ್‌ ಬ್ಲೌಸ್‌ಗಳಿವೆ. ಸಲ್ವಾರ್‌, ಕುರ್ತಾ, ಜೀನ್ಸ್ ಸೇರಿದಂತೆ ಸಾಕಷ್ಟು ಕ್ಯಾಶುವಲ್‌ಗಳಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Sweater Fashion: ಚಳಿಗಾಲದಲ್ಲಿ ಹೀಗಿರಲಿ ವುಲ್ಲನ್‌ ಸ್ವೆಟರ್ಸ್‌ ಜೊತೆ ಔಟ್‌ಫಿಟ್ಸ್ ಸ್ಟೈಲಿಂಗ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Back Button Saree Blouse: ಮತ್ತೆ ಬಂದಿದೆ ರೆಟ್ರೊ ಸ್ಟೈಲ್‌ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌!

ಒಂದೆರೆಡು ದಶಕಗಳ ಹಿಂದೆ ಟ್ರೆಂಡಿಯಾಗಿದ್ದ ರೆಟ್ರೋ ಸ್ಟೈಲ್‌ನ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ಗಳು (Back Button Saree Blouse) ಇದೀಗ ಮತ್ತೊಮ್ಮೆ ಫ್ಯಾಷನ್‌ನಲ್ಲಿ ವೆರೈಟಿ ಡಿಸೈನ್‌ನಲ್ಲಿ ಮರಳಿವೆ. ಸೀರೆಪ್ರಿಯ ಮಹಿಳೆಯರನ್ನು ಸಿಂಗರಿಸಿವೆ. ಯಾವ್ಯಾವ ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ? ಸ್ಟೈಲಿಂಗ್‌ ಹೇಗೆ ಎಂಬುದರ ಬಗ್ಗೆ ಬ್ಲೌಸ್‌ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Back button saree blouse
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಒಂದೆರೆಡು ದಶಕಗಳ ಹಿಂದೆ ಸಖತ್‌ ಟ್ರೆಂಡಿಯಾಗಿದ್ದ, ರೆಟ್ರೋ ಸ್ಟೈಲ್‌ನ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ಗಳು (Back Button Saree Blouse) ಇದೀಗ ಮತ್ತೊಮ್ಮೆ ವೆರೈಟಿ ಡಿಸೈನ್‌ನಲ್ಲಿ ತಮ್ಮ ಜಾದೂ ಮಾಡಿವೆ. ಸೀರೆ ಪ್ರಿಯ ಮಾನಿನಿಯರನ್ನು ಸಿಂಗರಿಸಲಾರಂಭಿಸಿವೆ.

Back button saree blouse

ಬ್ಯಾಕ್‌ ಬಟನ್ ಬ್ಲೌಸ್‌ ಪುರಾಣ

“ಬಹುತೇಕ ಸೀರೆ ಬ್ಲೌಸ್‌ಗಳಿಗೆ ಫ್ರಂಟ್‌ ಬಟನ್‌ ಡಿಸೈನ್‌ ಇರುವುದು ಸಾಮಾನ್ಯ. ಎಲ್ಲರಿಗೂ ತಿಳಿದಿರುವಂತೆ ಈ ಡಿಸೈನ್‌ ಮೊದಲಿನಿಂದಲೂ ಎವರ್‌ಗ್ರೀನ್‌ ವಿನ್ಯಾಸದಲ್ಲಿ ಸೇರಿ ಹೋಗಿದೆ. ವಯಸ್ಸಿನ ಪರಿಮಿತಿಯಿಲ್ಲದೇ ಎಲ್ಲರೂ ಈ ಡಿಸೈನ್‌ನ ಸೀರೆಯನ್ನು ಉಡುವುದು ಸಾಮಾನ್ಯವಾಗಿದೆ. ಇನ್ನು, ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ ವಿಷಯಕ್ಕೆ ಬಂದಲ್ಲಿ, ಒಂದೆರೆಡು ದಶಕಗಳ ಹಿಂದೆ ಈ ಫ್ಯಾಷನ್‌ ಬಂತು. ಈ ಫ್ಯಾಷನ್‌ ಯಾವ ಮಟ್ಟಿಗೆ ಹಿಟ್‌ ಆಯಿತೆಂದರೇ, ಅಂದು ಈ ಶೈಲಿಯ ಸೀರೆ ಬ್ಲೌಸ್‌ ಧರಿಸಿದವರನ್ನು ಮಾಡರ್ನ್ ಹುಡುಗಿಯರು ಎಂದು ಗುರುತಿಸಲಾಗುತ್ತಿತ್ತು. ಆ ಮಟ್ಟಿಗೆ ಈ ರೀತಿಯ ಬ್ಲೌಸ್‌ಗಳು ಜನಪ್ರಿಯಗೊಂಡಿದ್ದವು” ಎನ್ನುತ್ತಾರೆ ಬ್ಲೌಸ್‌ ಡಿಸೈನರ್ಸ್ ರಾಘವ್‌.

Back button saree blouse

ಟ್ರೆಂಡ್‌ನಲ್ಲಿರುವ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌

ಅಂದಹಾಗೆ, ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ಗಳಲ್ಲಿ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ. ಅವುಗಳಲ್ಲಿ ಡೀಪ್‌ ಹಾರ್ಟ್ ಶೇಪ್‌ ಕಟ್‌ ಇರುವಂತಹ ಡಿಸೈನ್‌ನವು, ಹೈ ನೆಕ್‌ ಬಟನ್‌ ಬ್ಲೌಸ್‌, ಡೀಪ್‌ ನೆಕ್‌ ಬ್ಯಾಕ್‌ ಬಟನ್‌ ಬ್ಲೌಸ್‌, ಟ್ಯಾಸೆಲ್ಸ್ & ಬಟನ್‌ ಬ್ಯಾಕ್‌ ಲೆಸ್‌ ಬ್ಲೌಸ್, ವೈಡ್‌ ಕಟ್ ಬಟನ್‌ ಬ್ಲೌಸ್‌, ಟೈಯಿಂಗ್‌ ಬ್ಯಾಕ್‌ ಬಟನ್‌ ಬ್ಲೌಸ್‌, ಕ್ರಾಪ್‌ ಟಾಪ್‌ ಶೈಲಿಯ ಬ್ಯಾಕ್‌ ಬಟನ್‌ ಬ್ಲೌಸ್‌ ಸೇರಿದಂತೆ ನಾನಾ ವಿನ್ಯಾಸದವು ಮಾನಿನಿಯರನ್ನು ಸಿಂಗರಿಸಿವೆ. ಆಯಾ, ಸೀರೆಯ ಫ್ಯಾಬ್ರಿಕ್‌ನ ಆಧಾರದ ಮೇಲೆ ಬ್ಲೌಸ್‌ ಡಿಸೈನರ್‌ಗಳು ಇಂತಹ ವಿನ್ಯಾಸವನ್ನು ನಿರ್ಧರಿಸುತ್ತಿದ್ದಾರೆ. ಅದರಲ್ಲೂ ಯಂಗ್‌ ಹೆಣ್ಣುಮಕ್ಕಳು ಈ ವಿನ್ಯಾಸದ ಸೀರೆ ಬ್ಲೌಸ್‌ಗಳನ್ನು ಅತಿ ಹೆಚ್ಚು ಧರಿಸುತ್ತಿದ್ದಾರೆ ಎನ್ನುತ್ತಾರೆ ಬ್ಲೌಸ್‌ ಡಿಸೈನರ್‌ ದಿಯಾ ಹಾಗೂ ರಕ್ಷಾ. ಅವರ ಪ್ರಕಾರ, ಬ್ಯಾಕ್‌ ಬಟನ್‌ ಬ್ಲೌಸ್‌ಗಳು ಮಾಡರ್ನ್ ಲುಕ್‌ ನೀಡುವುದರೊಂದಿಗೆ ಯಂಗ್‌ ಲುಕ್‌ ನೀಡುತ್ತವಂತೆ.

Back button saree blouse

ಸೀರೆಗೆ ತಕ್ಕ ಡಿಸೈನ್‌ ಆಯ್ಕೆ

ಉಡುವ ಸೀರೆಗೆ ತಕ್ಕಂತೆ ಈ ಬ್ಯಾಕ್‌ ಬಟನ್‌ ಬ್ಲೌಸ್‌ ಡಿಸೈನ್‌ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಸ್‌. ಡಿಸೈನರ್‌ ಸೀರೆಗೆ ಕಾಕ್‌ಟೈಲ್‌ ಡಿಸೈನ್ಸ್, ರೇಷ್ಮೆ ಸೀರೆಗೆ ಡೀಪ್‌ ನೆಕ್‌ ಹಾಗೂ ಟಾಸೆಲ್ಸ್ ಇರುವಂತವು, ಎಂಬ್ರಾಯ್ಡರಿ ಹ್ಯಾಂಡ್‌ ವರ್ಕ್ ಇರುವಂತವು, ಸಾದಾ ಸೀರೆಗೆ ಹೈ ನೆಕ್‌ ಶೈಲಿಯವು ಮ್ಯಾಚ್‌ ಆಗುತ್ತವೆ ಎನ್ನುತ್ತಾರೆ.

ಇದನ್ನೂ ಓದಿ: Star Cricket Theme Fashion: ಕ್ರಿಕೆಟ್‌ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್‌!

ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ ರೆಟ್ರೋ ಲುಕ್‌ಗೆ 3 ಟಿಪ್ಸ್

  • ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ನಲ್ಲಿ ರೆಟ್ರೋ ಲುಕ್‌ ಪಡೆಯಲು ವಿಂಟೇಜ್‌ ಲುಕ್‌ ನೀಡುವ ಮೇಕಪ್‌ ಮಾಡಬೇಕು.
  • ಹೇರ್‌ಸ್ಟೈಲ್‌ ಕೂಡ ಆದಷ್ಟೂ ಈ ಲುಕ್‌ಗೆ ಮ್ಯಾಚ್‌ ಆಗಬೇಕು.
  • ಸೀರೆ ಡ್ರೇಪಿಂಗ್‌, ರೆಟ್ರೋ ಲುಕ್‌ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star Cricket Theme Fashion: ಕ್ರಿಕೆಟ್‌ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್‌!

ಇತ್ತೀಚೆಗೆ ನಟಿ ಜಾಹ್ನವಿ ಕಪೂರ್ ಧರಿಸುತ್ತಿರುವ ಒಂದೊಂದು ಬಗೆಯ ಕ್ರಿಕೆಟ್‌ ಥೀಮ್‌ನ ಔಟ್‌ಫಿಟ್‌ಗಳಿಗೆ ಅಭಿಮಾನಿಗಳು ಫಿದಾ ಆಗತೊಡಗಿದ್ದಾರೆ. ಹಾಗಾದಲ್ಲಿ, ಅವರು ಧರಿಸಿರುವ ಔಟ್‌ಫಿಟ್‌ಗಳ್ಯಾವುವು? ಅವುಗಳಲ್ಲಿ ಹೇಗೆಲ್ಲಾ ಕಾಣಿಸಿಕೊಂಡರು? ಎಂಬುದರ ಕುರಿತಾಗಿ (Star Cricket Theme Fashion) ಇಲ್ಲಿದೆ ಡಿಟೇಲ್ಸ್.

VISTARANEWS.COM


on

Star Cricket Theam Fashion
ಚಿತ್ರಗಳು: ನಟಿ ಜಾಹ್ನವಿ ಕಪೂರ್, ಬಾಲಿವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇತ್ತೀಚೆಗೆ ನಟಿ ಜಾಹ್ನವಿ ಕಪೂರ್ ಧರಿಸುತ್ತಿರುವ ಒಂದೊಂದು ಬಗೆಯ ಕ್ರಿಕೆಟ್‌ ಥೀಮ್‌ನ ಫ್ಯಾಷೆನಬಲ್‌ ಔಟ್‌ಫಿಟ್‌ಗಳಿಗೆ ಅಭಿಮಾನಿಗಳು ಫಿದಾ ಆಗತೊಡಗಿದ್ದಾರೆ. ಅಂದಹಾಗೆ, ಇದ್ಯಾಕೆ ಹೀಗೆ? ಎಂದುಕೊಳ್ಳುತ್ತಿದ್ದೀರಾ! ಅವರು ತಮ್ಮ ಮುಂಬರುವ ಕ್ರಿಕೆಟ್‌ ಆಧಾರಿತ ಸಿನಿಮಾ ಮಿಸ್ಟರ್ & ಮಿಸೆಸ್‌ ಮಾಹಿ ಪ್ರಮೋಷನ್‌ಗಾಗಿ ವಿಶೇಷವಾಗಿ ಕ್ರಿಕೆಟ್‌ ಥೀಮ್‌ ಫ್ಯಾಷನ್‌ವೇರ್‌ಗಳನ್ನು ಧರಿಸತೊಡಗಿದ್ದಾರೆ. ಇದು ಅವರ ಕ್ರಿಕೆಟ್‌ ಪ್ರೇಮದ ಜೊತೆಗೆ ಫ್ಯಾಷನ್‌ಗೂ ಸಾಥ್‌ ನೀಡಿದೆ (Star Cricket Theme Fashion) ಎನ್ನುತ್ತಿದ್ದಾರೆ ಫ್ಯಾಷನಿಸ್ಟ್‌ಗಳು.

Star Cricket Theam Fashion

ಕಟೌಟ್‌ ರೆಡ್‌ ಡ್ರೆಸ್‌ ಬ್ಯಾಕ್‌ ವಿನ್ಯಾಸದಲ್ಲಿ ಕ್ರಿಕೆಟ್‌ ಬಾಲ್‌ ಡಿಸೈನ್‌

ಜಾಹ್ನವಿಯ ವೆಸ್ಟರ್ನ್ ಶೈಲಿಯ ಕಟೌಟ್ ರೆಡ್‌ ಡ್ರೆಸ್‌ನ ಬ್ಯಾಕ್‌ ಡಿಸೈನ್‌ ಮಲ್ಟಿ ಕ್ರಿಕೆಟ್‌ ಬಾಲ್‌ಗಳನ್ನು ಜೋಡಿಸಿದಂತಹ ಸ್ಟ್ರಾಪ್‌ನಂತಹ ಡಿಸೈನ್‌ ಫ್ಯಾಷನ್‌ ಪ್ರೇಮಿಗಳನ್ನು ನಿಬ್ಬೆರಗಾಗಿಸಿತು.

Star Cricket Theam Fashion

ಸೀರೆಯಲ್ಲಿ ತ್ರಿಡಿ ಕ್ರಿಕೆಟ್‌ ಬಾಲ್‌ ಬಾರ್ಡರ್ ಚಿತ್ತಾರ

ಇನ್ನು, ಇವೆಂಟ್‌ನಲ್ಲಿ ಜಾಹ್ನವಿ ಧರಿಸಿದ್ದ ಎರಡು ಸೀರೆಗಳು ಕೂಡ ಕ್ರಿಕೆಟ್‌ ಕಾನ್ಸೆಪ್ಟ್ ಡಿಸೈನ್‌ ಹೊಂದಿದ್ದವು. ವಾರಾಣಾಸಿಯಲ್ಲಿ ಉಟ್ಟ ಸೀರೆ ಟ್ರೆಡಿಷನಲ್‌ ಆಗಿದ್ದರೂ, ಅದರ ಪಲ್ಲು ಕಂಪ್ಲೀಟ್‌ ಕ್ರಿಕೆಟ್‌ ಕ್ರೀಡಾಂಗಣದ ವರ್ಲಿ ಶೈಲಿಯ ಚಿತ್ತಾರವನ್ನು ಒಳಗೊಂಡಿತ್ತು. ಜಾಹ್ನವಿ ಧರಿಸಿದ್ದ, ಇನ್ನೊಂದು, ಜಾರ್ಜೆಟ್‌ ರೆಡ್‌ & ವೈಟ್‌ ಸ್ಟ್ರೈಪ್ಸ್ ಸೀರೆಯ ಬಾರ್ಡರ್‌, ಕ್ರಿಕೆಟ್‌ ಬಾಲ್‌ನ ತ್ರಿಡಿ ಚಿತ್ತಾರದಿಂದ ಸಿಂಗಾರಗೊಂಡಿತ್ತು. ಬಾಲ್‌ನ ಫ್ಯಾಬ್ರಿಕ್‌ನಂತೆ ಕಾಣಿಸುವ ಮೆಟೀರಿಯಲ್‌ನಿಂದ ಡಿಸೈನ್‌ ಮಾಡಲಾಗಿತ್ತು.

Star Cricket Theam Fashion

ಕ್ರಿಕೆಟ್‌ ಕ್ರಾಪ್ಡ್ ಜೆರ್ಸಿ ಟಾಪ್‌

ಜಾಹ್ನವಿ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ, ಕ್ರಿಕೆಟಿಗರ ಜೆರ್ಸಿಯಂತೆ ಕಾಣುವ ಕ್ರಾಪ್‌ ಟಾಪ್‌ನಲ್ಲಿ ಕಾಣಿಸಿಕೊಂಡರು. ಎಲ್ಲದಕ್ಕಿಂತ ಹೆಚ್ಚಾಗಿ, ಅದರ ಮೇಲೆ ಬರ್ತ್ ಡೇ ನಂಬರ್‌ ಮೂಡಿಸಿದ್ದು, ಅವರ ಖುಷಿಗೆ ಕಾರಣವಾಗಿತ್ತು.

Star Cricket Theam Fashion

ಜೆನ್‌ ಜಿ ಸೆಳೆದ ಕ್ರಾಪ್ಡ್ ಟೀ ಶರ್ಟ್–ಸ್ಕರ್ಟ್

ಕಾಲೇಜ್‌ವೊಂದರ ಇವೆಂಟ್‌ನಲ್ಲಿ ವೈಟ್‌ ಹಾಗೂ ಬ್ಲ್ಯೂ ಮತ್ತು ರೆಡ್‌ ಸ್ಟ್ರೈಪ್ಸ್ ಇರುವ ಕಾಲರ್‌ ಕ್ರಾಪ್ಡ್ ಟೀ ಶರ್ಟ್ ಜೊತೆಗೆ ವೈಟ್‌ ಸ್ಕರ್ಟ್ ಮಿಕ್ಸ್ ಮಾಡಿರುವ ಕ್ರಿಕೆಟ್‌ ಥೀಮ್‌ ಡ್ರೆಸ್‌ ಅಲ್ಲಿನ ಯಂಗ್‌ಸ್ಟರ್ಸ್‌ಗಳನ್ನು ಸೆಳೆಯಿತು.

Star Cricket Theam Fashion

ಬಾಡಿಕಾನ್‌ ಡ್ರೆಸ್‌ ಮೇಲೆ ಬ್ಯಾಟಿಂಗ್‌ ಸಿಕ್ವೀನ್ಸ್

ಜಾಹ್ನವಿಯ ಹೈ ಫ್ಯಾಷನ್‌ ಸ್ಟೈಲಿಂಗ್‌ನ ಶಿಮ್ಮರ್‌ನ ಬಾಡಿಕಾನ್‌ ಡ್ರೆಸ್‌ ಮೇಲೆ ಇದ್ದ ಬ್ಯಾಟಿಂಗ್‌ ಸಿಕ್ವೀನ್ಸ್ ಪ್ರಿಂಟ್ಸ್ ಚಿತ್ತಾರ ಹೈ ಫ್ಯಾಷನ್‌ ಲುಕ್‌ಗೆ ಸಾಥ್‌ ನೀಡಿತ್ತು.

ಇದನ್ನೂ ಓದಿ: Wedding Fashion: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ ಈ ಮಿರಮಿರ ಮಿನುಗುವ ಲೆಹೆಂಗಾಗಳು!

ಜಾಹ್ನವಿ ಕ್ರಿಕೆಟ್‌ ಥೀಮ್‌ ಆಕ್ಸೆಸರೀಸ್‌

ಕ್ರಿಕೆಟ್‌ ಬಾಲ್‌ ಆಕಾರದ ಕ್ಲಚ್‌, ಹ್ಯಾಂಡ್‌ ಪರ್ಸ್ ಸೇರಿದಂತೆ ನಾನಾ ಆಕ್ಸೆಸರೀಸ್‌ ಅವರನ್ನು ಮತ್ತಷ್ಟು ಕ್ರಿಕೆಟ್‌ ಪ್ರೇಮಿಯನ್ನಾಗಿಸಿತ್ತು. ಹೀಗೆ ಜಾಹ್ನವಿಯ ನಾನಾ ಬಗೆಯ ಕ್ರಿಕೆಟ್‌ ಥೀಮ್‌ ಔಟ್‌ಫಿಟ್‌ ಹಾಗೂ ಆಕ್ಸೆಸರೀಸ್‌ಗಳು, ಕ್ರಿಕೆಟ್‌ ಪ್ರೇಮಿಗಳನ್ನು ಮಾತ್ರವಲ್ಲ, ಫ್ಯಾಷನ್‌ ಪ್ರಿಯರನ್ನು ಸೆಳೆದವು ಎಂದು ವಿಶ್ಲೇಷಿಸಿದ್ದಾರೆ ಫ್ಯಾಷನ್‌ ವಿಮರ್ಶಕರು.

Continue Reading

ಫ್ಯಾಷನ್

Wedding Fashion: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ ಈ ಮಿರಮಿರ ಮಿನುಗುವ ಲೆಹೆಂಗಾಗಳು!

ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ (Wedding Fashion) ಮಿರಮಿರ ಮಿನುಗುವ ನಾನಾ ಬಗೆಯ ಗ್ರ್ಯಾಂಡ್‌ ಲೆಹೆಂಗಾಗಳು ಟ್ರೆಂಡಿಯಾಗಿವೆ. ಧರಿಸಿದಾಗ ಗ್ರ್ಯಾಂಡ್‌ ಲುಕ್‌ ನೀಡುವ ಈ ಡಿಸೈನರ್‌ವೇರ್‌ಗಳು ವೆರೈಟಿ ಡಿಸೈನ್‌ನಲ್ಲಿ ಬಂದಿವೆ. ಯಾವ್ಯಾವ ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ? ಆಯ್ಕೆ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.

VISTARANEWS.COM


on

Wedding Fashion
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ (Wedding Fashion) ಮಿರ ಮಿರ ಮಿನುಗುವ ಬಗೆಬಗೆಯ ಗ್ರ್ಯಾಂಡ್‌ ಲೆಹೆಂಗಾಗಳು ಟ್ರೆಂಡಿಯಾಗಿವೆ. ಮದುವೆಯಲ್ಲಿ ಧರಿಸಿದಾಗ ಗ್ರ್ಯಾಂಡ್‌ ಲುಕ್‌ ನೀಡುವ ಈ ಡಿಸೈನರ್‌ವೇರ್‌ಗಳು ಸಾದಾ, ಪ್ರಿಂಟೆಡ್‌, ಲೈನ್ಸ್, ಫ್ಲೋರಲ್‌, ಟ್ರಾಪಿಕಲ್‌ ಹಾಗೂ ಜೆಮೆಟ್ರಿಕಲ್‌ ಸೇರಿದಂತೆ ನಾನಾ ವೆರೈಟಿ ಡಿಸೈನ್‌ನಲ್ಲಿ ಆಗಮಿಸಿವೆ. ಪಾಸ್ಟೆಲ್‌ ಶೇಡ್‌ನವು ಹೆಚ್ಚು ಯುವತಿಯರನ್ನು ಸೆಳೆದಿವೆ. ಒಂದಕ್ಕಿಂತ ಒಂದು ಲೆಹೆಂಗಾಗಳು ಮನಮೋಹಕ ಡಿಸೈನ್‌ನಲ್ಲಿ ಆಗಮಿಸಿದ್ದು, ಹ್ಯಾಂಡ್‌ವರ್ಕ್ ಹಾಗೂ ಮೆಷಿನ್‌ ವರ್ಕ್‌ನಲ್ಲೂ ಪ್ರಚಲಿತದಲ್ಲಿವೆ.

ಟ್ರೆಂಡ್‌ನಲ್ಲಿರುವ ಶಿಮ್ಮರ್‌ ಲೆಹೆಂಗಾಗಳು

ಶಿಮ್ಮರ್‌ ಫ್ಯಾಬ್ರಿಕ್‌ನವು, ಸಾದಾ ವರ್ಣದ ,ಮಾನೋಕ್ರೋಮ್‌ ಸಿಕ್ವೀನ್ಸ್‌ನವು, ಮಲ್ಟಿ ಶೇಡ್‌ ಸಿಕ್ವೀನ್ಸ್, ಪ್ರಿಂಟೆಡ್‌ ಶೈನಿಂಗ್‌ ಡಿಸೈನ್‌ನವು, ಶಿಫಾನ್‌ ಶಿಮ್ಮರ್‌ ಪ್ರಿಂಟ್ಸ್, ಜಾರ್ಜೆಟ್‌ ಶಿಮ್ಮರ್‌ ಲೈನ್ಸ್, ಡಿಸೈನರ್‌ ಬಾರ್ಡರ್‌ ಶಿಮ್ಮರ್‌ನ ಲೆಹೆಂಗಾಗಳು ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿವೆ.

Wedding Fashion

ಪಾಸ್ಟೆಲ್‌ ಶೇಡ್ಸ್‌ಗೆ ಬೇಡಿಕೆ

ಶಿಮ್ಮರ್‌ ಡಿಸೈನ್‌ನಲ್ಲಿ ಪಾಸ್ಟೆಲ್‌ ಶೇಡ್ಸ್‌ನ ಲೆಹೆಂಗಾಗಳು, ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಚಾಲ್ತಿಯಲ್ಲಿವೆ. ರೋಸ್‌, ಪಿಸ್ತಾ ಗ್ರೀನ್‌, ಪೀಚ್‌, ಲೈಟ್‌ ಬ್ಲ್ಯೂ, ಹೀಗೆ ನಾನಾ ತಿಳಿ ವರ್ಣದ ಪಾಸ್ಟೆಲ್‌ ಶೇಡ್‌ನ ಗ್ರ್ಯಾಂಡ್‌ ಲೆಹೆಂಗಾಗಳು ಮದುವೆಯಾಗುವ ಮದುಮಗಳನ್ನು ಮಾತ್ರವಲ್ಲ, ಮದುವೆಯಲ್ಲಿ ಪಾಲ್ಗೊಳ್ಳುವ ಮಾನಿನಿಯರನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Wedding Fashion

ಗ್ರ್ಯಾಂಡ್‌ ಶಿಮ್ಮರ್‌ ಮಿಕ್ಸ್ ಮ್ಯಾಚ್‌ ಡಿಸೈನ್‌ ದುಪಟ್ಟಾ

ಈ ಶಿಮ್ಮರ್‌ ಲೆಹೆಂಗಾಗಳು ಕಂಪ್ಲೀಟ್‌ ಶೈನಿಂಗ್‌ ಇರಲಿ, ಬಿಡಲಿ, ಇವುಗಳಿಗೆ ಹೊಂದುವಂತಹ ಮಿಕ್ಸ್ ಮ್ಯಾಚ್‌ ಅಥವಾ ಮಾನೋಕ್ರೋಮ್‌ ಶೇಡ್‌ನ ಮಿರಮಿರ ಮಿನುಗುವ ಡಿಸೈನ್‌ ಒಳಗೊಂಡ ದುಪಟ್ಟಾಗಳು ಈ ಶೈಲಿಯ ಲೆಹೆಂಗಾಗಳ ಸೌಂದರ್ಯವನ್ನು ಹೆಚ್ಚಿಸಿವೆ.

ಇದನ್ನೂ ಓದಿ: Summer Star Fashion: ಏನಿದು ನಟಿ ಅದಿತಿ ರಾವ್‌ ಹೈದರಿಯ ಕೋ-ಆರ್ಡ್ ಕೊಸ್ಟಾ ಪ್ಯಾಂಟ್‌ ಟ್ರೆಂಡ್‌?

ಶಿಮ್ಮರ್‌ ಲೆಹೆಂಗಾ ಆಯ್ಕೆಗೆ 7 ಸೂತ್ರ

  • ಒಂದೇ ಶೇಡ್‌ನ ಶಿಮ್ಮರ್‌ ಲೆಹೆಂಗಾಗಳು ಹೆಚ್ಚು ಡಿಸೈನ್‌ನಲ್ಲಿ ಲಭ್ಯ.
  • ಪಾಸ್ಟೆಲ್‌ ಶೇಡ್‌ನವನ್ನು ಸ್ಕಿನ್‌ಟೋನ್‌ಗೆ ತಕ್ಕಂತೆ ಆಯ್ಕೆ ಮಾಡಿ.
  • ದುಪಟ್ಟಾ ಕೂಡ ಗ್ರ್ಯಾಂಡ್‌ ಆಗಿರುವುದನ್ನು ಚೂಸ್‌ ಮಾಡಿ.
  • ಬಾರ್ಡರ್ ಲೆಹೆಂಗಾಗಳು ನೋಡಲು ಆಕರ್ಷಕವಾಗಿ ಕಾಣುತ್ತವೆ.
  • ಸಿಕ್ವಿನ್ಸ್‌ನವು ದುಬಾರಿಯಾದರೂ ನೋಡಲು ಸೆಲೆಬ್ರೆಟಿ ಲುಕ್‌ ನೀಡುತ್ತವೆ.
  • ಆದಷ್ಟೂ ಲೈಟ್‌ವೈಟ್‌ ಗ್ರ್ಯಾಂಡ್‌ ಲೆಹೆಂಗಾ ಆಯ್ಕೆ ನಿಮ್ಮದಾಗಿರಲಿ.
  • ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಲೆಹೆಂಗಾ ನೋಡಿಕೊಳ್ಳಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Summer Star Fashion: ಏನಿದು ನಟಿ ಅದಿತಿ ರಾವ್‌ ಹೈದರಿಯ ಕೋ-ಆರ್ಡ್ ಕೊಸ್ಟಾ ಪ್ಯಾಂಟ್‌ ಟ್ರೆಂಡ್‌?

ಈ ಬಾರಿಯ ಸಮ್ಮರ್‌ ಎಂಡ್‌ನಲ್ಲಿ ಕೋ-ಆರ್ಡ್ ಕೊಸ್ಟಾ ಪ್ಯಾಂಟ್‌ ಸೆಟ್‌ಗಳು (Summer Star Fashion) ಬಿಡುಗಡೆಗೊಂಡಿವೆ. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್‌ ನಟಿ ಅದಿತಿ ರಾವ್‌ ಹೈದರಿ ಈ ಔಟ್‌ಫಿಟ್‌ ಧರಿಸಿ, ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಇದ್ಯಾವ ಬಗೆಯ ಫ್ಯಾಷನ್‌? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Summer Star Fashion
ಚಿತ್ರಗಳು: ಅದಿತಿ ರಾವ್‌ ಹೈದರಿ, ಬಾಲಿವುಡ್‌ ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ ನಟಿ ಅದಿತಿ ರಾವ್‌ ಹೈದರಿ ಧರಿಸಿದ, ಸಮ್ಮರ್‌ ಕೋ ಆರ್ಡ್ ಪ್ರಿಂಟೆಡ್‌ ಕೊಸ್ಟಾ ಪ್ಯಾಂಟ್‌ ಸೆಟ್ ಇದೀಗ ಸೀಸನ್‌ ಎಂಡ್‌ನಲ್ಲಿ ಟ್ರೆಂಡಿಯಾಗಿದೆ. ಅಂದಹಾಗೆ, ಇದ್ಯಾವ ಬಗೆಯ ಕೋ ಆರ್ಡ್ ಸೆಟ್ ಫ್ಯಾಷನ್‌ (Summer Star Fashion) ಎಂದು ಯೋಚಿಸುತ್ತಿದ್ದೀರಾ? ಅಂತಹದ್ದೇನಿಲ್ಲ! ಇವು ಸೆಲೆಬ್ರೆಟಿ ಲುಕ್‌ ನೀಡುವ ಶೋಲ್ಡರ್ಲೆಸ್‌ ಬಟನ್‌ ಟಾಪ್‌ ಹೊಂದಿರುವ ಕೋ ಆರ್ಡ್ ಸೆಟ್‌ಗಳಿವು. ಈಗಾಗಲೇ, ಈ ಬಾರಿಯ ಸಮ್ಮರ್‌ನಲ್ಲಿ ನಾನಾ ಬಗೆಯ ಕೋ ಆರ್ಡ್ ಪ್ಯಾಂಟ್‌ ಸೆಟ್‌ಗಳು ಬಿಡುಗಡೆಗೊಂಡಿದ್ದವು. ಅವುಗಳಲ್ಲಿ, ಇದೀಗ ಬಾಲಿವುಡ್‌ ಸೆಲೆಬ್ರೆಟಿಗಳು ಹಾಗೂ ಫ್ಯಾಷನ್‌ ಕ್ಷೇತ್ರದ ಮಾಡೆಲ್‌ಗಳು ಧರಿಸುತ್ತಿರುವ, ಈ ಡಿಸೈನ್‌ನ ಕೋ ಆರ್ಡ್ ಪ್ಯಾಂಟ್‌ ಸೆಟ್‌ಗಳು ಸದ್ಯ ಟ್ರೆಂಡಿಯಾಗಿವೆ. ಇದಕ್ಕೆ ಪೂರಕ ಎಂಬಂತೆ, ನಟಿ ಅದಿತಿ ರಾವ್‌ ಹೈದರಿ, ಕೂಡ ಈ ಔಟ್‌ಫಿಟ್‌ ಧರಿಸಿದ್ದು, ಪರಿಣಾಮ, ಈ ಶೈಲಿಯ ಪ್ರಿಂಟ್ಸ್ ಇರುವಂತಹ ಕೋ ಆರ್ಡ್ ಕೊಸ್ಟಾ ಪ್ಯಾಂಟ್‌ ಸೆಟ್‌ ಫ್ಯಾಷನ್‌ ಇದ್ದಕ್ಕಿದ್ದಂತೆ ಅಲ್ಟ್ರಾ ಮಾಡರ್ನ್ ಹುಡುಗಿಯರನ್ನು ಆವರಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Summer Star Fashion

ಏನಿದು ಕೊಸ್ಟಾ ಪ್ಯಾಂಟ್‌ ಕೋ -ಆರ್ಡ್ ಸೆಟ್?

ಒಂದೇ ಬಗೆಯ ಶೇಡ್‌ ಅಥವಾ ಪ್ರಿಂಟ್ಸ್ ಇರುವ ಕೋ -ಆರ್ಡ್ ಸೆಟ್‌ ಪ್ಯಾಂಟ್‌ ಫ್ಯಾಷನ್‌ಗೆ ಇವು ಸೇರುತ್ತವೆ. ಆದರೆ, ಪ್ಯಾಂಟ್‌ ಮಾತ್ರ ಪಲ್ಹಾಜೊ ರೀತಿಯಲ್ಲಿರುತ್ತವೆ. ನೋಡಲು ಫ್ಲೇರ್‌ ಇದ್ದರೂ, ಲೂಸಾಗಿರುವುದಿಲ್ಲ. ಬೇಸಿಗೆಗೆ ಹೊಂದುವಂತಿರುತ್ತವೆ. ಇನ್ನು ಇವಕ್ಕೆ ಶೋಲ್ಡರ್ ಲೆಸ್‌ ಅಥವಾ ಬಾರ್ಡಾಟ್ ಶೈಲಿಯ ಬಾಡಿ ಫಿಟ್‌ ಇರುವ ಬಟನ್‌ ಟಾಪ್‌ ಮ್ಯಾಚ್‌ ಮಾಡಲಾಗಿರುತ್ತದೆ. ಈ ಔಟ್‌ಫಿಟ್‌ಗಳನ್ನು ಸೆಲೆಬ್ರೆಟಿಗಳು ಅತಿ ಹೆಚ್ಚಾಗಿ ಧರಿಸುವುದರಿಂದ ಇವು ಸೆಲೆಬ್ರೆಟಿ ಔಟ್‌ಫಿಟ್ಸ್ ಎಂದೇ ಕರೆಸಿಕೊಳ್ಳುತ್ತವೆ. ಆದರೆ, ಇದೀಗ, ಹಾಲಿ ಡೇ, ಔಟಿಂಗ್‌ ಎಂದೆಲ್ಲಾ ಅಲೆದಾಡುವ ಯುವತಿಯರು ಈ ಉಡುಗೆಯನ್ನು ಧರಿಸುವುದು ಸಾಮಾನ್ಯವಾಗತೊಡಗಿದ್ದು, ಸೀಸನ್‌ ಎಂಡ್‌ನ ಟಾಪ್‌ ಲಿಸ್ಟ್‌ನಲ್ಲಿವೆ. ಫ್ಲೋರಲ್‌ ಪ್ರಿಂಟ್ಸ್ ಅಥವಾ ಟ್ರಾಪಿಕಲ್‌ ಪ್ರಿಂಟ್ಸ್‌ನವು ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ಗಳು.

Summer Star Fashion

ಅದಿತಿ ರಾವ್‌ ಹೈದರಿ ಸಮ್ಮರ್‌ ಕೋ ಆರ್ಡ್ ಸೆಟ್‌ ಲುಕ್‌

ಇನ್ನು, ಸದ್ಯ ಹೀರಾ ಮಂಡಿ ಬಾಲಿವುಡ್‌ ಚಿತ್ರದಲ್ಲಿ ಎಥ್ನಿಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ, ನಟಿ ಅದಿತಿ ರಾವ್‌ ಹೈದರಿಯವರಿಗೆ ಈ ಇಮೇಜ್‌ನಿಂದ ಕೊಂಚ ಬ್ರೇಕ್‌ ಬೇಕಿತ್ತು. ಹಾಗಾಗಿ ವೆಸ್ಟರ್ನ್ ಲುಕ್‌ ನೀಡುವ ಕೊಸ್ಟಾ ಪ್ಯಾಂಟ್‌ ಔಟ್‌ಫಿಟ್‌ ಧರಿಸಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Summer Star Fashion

ಕೋ -ಆರ್ಡ್ ಕೊಸ್ಟಾ ಪ್ಯಾಂಟ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳು

  • ಹಾಲಿ ಡೇ, ಔಟಿಂಗ್‌ ಹಾಗೂ ಲಂಚ್‌-ಬ್ರಂಚ್‌ ಪಾರ್ಟಿಗಳಿಗೆ ಧರಿಸಲು ಮಾತ್ರ ಇವು ಸೂಕ್ತ.
  • ಫಿಟ್ಟಿಂಗ್‌ ಸರಿಯಾಗಿದ್ದಲ್ಲಿ ಮಾತ್ರ ಕಂಫರ್ಟಬಲ್‌ ಫೀಲ್‌ ನೀಡಬಲ್ಲವು.
  • ಶೋಲ್ಡರ್ ಲೆಸ್‌ ಆಗಿರುವುದರಿಂದ ಎಕ್ಸ್ಪೋಸ್‌ ಆಗುವ ಸಾಧ್ಯತೆ ಹೆಚ್ಚು.
  • ನೋಡಲು ಆಕರ್ಷಕವಾದರೂ ಟ್ರಯಲ್‌ ನೋಡದೇ ಧರಿಸುವುದು ಸೂಕ್ತವಲ್ಲ.
  • ತೀರಾ ಸ್ಲಿಮ್‌, ತೀರಾ ಪ್ಲಂಪಿ ಇಬ್ಬರಿಗೂ ನಾಟ್‌ ಓಕೆ. ಸರಿಯಾದ ಬಿಎಂಐ ಹೊಂದಿರುವವರಿಗೆ ಚೆನ್ನಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Cannes Star Fashion: ಕ್ರಾಪ್‌ ಟುಕ್ಸೆಡೊ ಧರಿಸಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ ಪ್ರತೀಕ್‌ ಬಬ್ಬರ್

Continue Reading
Advertisement
Prajwal Revanna case Siddaramaiah writes to PM narendra Modi
ಕ್ರೈಂ6 mins ago

Prajwal Revanna Case: ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದತಿಗಾಗಿ ಪಿಎಂಗೆ ಸಿದ್ದರಾಮಯ್ಯ ಇನ್ನೊಂದು ಪತ್ರ; ಚುರುಕಾದ ವಿದೇಶಾಂಗ ಇಲಾಖೆ

Physical Abuse
ಕ್ರೈಂ14 mins ago

Physical Abuse: ಹಿಂದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಮುಸ್ಲಿಂ ಯುವಕರಿಗೆ ಜೀವಾವಧಿ ಶಿಕ್ಷೆ

India Head Coach
ಕ್ರೀಡೆ18 mins ago

India Head Coach: ರಿಕಿ ಪಾಂಟಿಂಗ್ ಟೀಮ್​ ಇಂಡಿಯಾದ ಮುಂದಿನ ಕೋಚ್​!

Viral Video
ವೈರಲ್ ನ್ಯೂಸ್21 mins ago

Viral Video: ಸುಡುವ ಮರಳಿನಲ್ಲಿ ಹಪ್ಪಳ ಸುಟ್ಟ ಬಿಎಸ್‌ಎಫ್‌ ಯೋಧ; ಎಲ್ಲೆಡೆ ಇದೇ ವಿಡಿಯೋ ವೈರಲ್‌

Hanuman Chalisa
ಧಾರ್ಮಿಕ42 mins ago

Hanuman Chalisa: ಹನುಮಾನ್ ಚಾಲೀಸಾ ಪಠಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

RCB
ಕ್ರೀಡೆ46 mins ago

RCB: ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋಲಿಗೆ ವಿಜಯ್​ ಮಲ್ಯ ಕಾರಣವಂತೆ!

Cyber Crime
ಕ್ರೈಂ1 hour ago

ಎಐ ತಂತ್ರಜ್ಞಾನದಿಂದ ಹಿಂದು ಯುವತಿಯ ಅಶ್ಲೀಲ ವಿಡಿಯೊ ಸೃಷ್ಟಿಸಿ ಇಸ್ಲಾಂಗೆ ಮತಾಂತರಗೊಳಿಸಲು ಯತ್ನ: ಫೈಜಲ್ ವಿರುದ್ಧ ದೂರು

vegetable rates increase
ಪ್ರಮುಖ ಸುದ್ದಿ1 hour ago

Vegetable Rates: ತರಕಾರಿ ಮುಟ್ಟಿದರೆ ಶಾಕ್‌, ಕಿಲೋಗೆ 320 ದಾಟಿದ ಬೀನ್ಸ್!‌

Phalodi satta market
ದೇಶ1 hour ago

Phalodi Satta Bazar: ಚುನಾವಣಾ ಫಲಿತಾಂಶದ ಬಗ್ಗೆ ಸಟ್ಟಾ ಬಜಾರ್‌ನ ಪಕ್ಕಾ ಭವಿಷ್ಯವಾಣಿ; ಈ ಮಾರ್ಕೆಟ್‌ನ ಹಿನ್ನೆಲೆ ಏನು?

Virat Kohli
ಕ್ರೀಡೆ2 hours ago

Virat Kohli: ಅಂದು ವಿಶ್ವಕಪ್​ನಲ್ಲಿ, ಇಂದು ಐಪಿಎಲ್​ನಲ್ಲಿ ವಿಕೆಟ್​ ಬೇಲ್ಸ್​ ಹಾರಿಸಿ ಬೇಸರದಿಂದ ಮೈದಾನ ತೊರೆದ ಕೊಹ್ಲಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ6 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌