ವೈರಲ್‌ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು! - Vistara News

ವೈರಲ್ ನ್ಯೂಸ್

ವೈರಲ್‌ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!

ಕಳ್ಳ ಮನೆಗೆ ನುಗ್ಗಿ ಜಾಲಾಡಿ ಸಿಕ್ಕಿದ್ದನ್ನೆಲ್ಲಾ ಮೂಟೆ ಕಟ್ಟಿದ. ಆಮೇಲೆ ಅವನಿಗೆ ಗೊತ್ತಾದ್ದು- ಅದು ಅವನ ಅಧ್ಯಾಪಕರ ಮನೆ! ಆಮೇಲೇನು ಮಾಡಿದ ಗೊತ್ತೆ?

VISTARANEWS.COM


on

theft
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅದೊಂದು ನಿವೃತ್ತ ಮುಖ್ಯೋಪಾಧ್ಯಾಯರ ಮನೆ. ಅವರ ಹೆಸರು ಹರಿಶ್ಚಂದ್ರ ರಾಯ್.‌ ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಅವರು ನಿವೃತ್ತರಾಗಿ ೨೫ ವರ್ಷ ಕಳೆದಿದ್ದರೂ, ಸ್ಥಳೀಯರ ಗೌರವಕ್ಕೆ ಪಾತ್ರರಾದವರು. ಬದಲಿಗೆ, ಸುತ್ತಮುತ್ತಲಿನ ಬಡ ಮಕ್ಕಳ ಓದು-ವಿದ್ಯೆಗೆ ನೆರವಾಗುತ್ತಾ ನಿವೃತ್ತ ಜೀವನವನ್ನು ಕಳೆಯುತ್ತಿರುವವರು. ಕೆಲಕಾಲದಿಂದ ಅನಾರೋಗ್ಯಕ್ಕೆ ಈಡಾಗಿರುವ ರಾಯ್‌ ಅವರೊಂದಿಗೆ ಅವರ ಸಹೋದರರ ಕುಟುಂಬವಿದ್ದು ಆರೈಕೆ ಮಾಡುತ್ತಿದೆ. ದಿನಂಪ್ರತಿ ಔಷಧ ಮತ್ತು ಫಿಸಿಯೊಥೆರಪಿಯ ಅಗತ್ಯವಿದೆ ನಿವೃತ್ತ ಅಧ್ಯಾಪಕರಿಗೆ.

ವಿಷಯ ಈವರೆಗಿನದ್ದಲ್ಲ: ಇನ್ನು ಮುಂದೆ ಪ್ರಾರಂಭ. ಅದೊಂದು ರಾತ್ರಿ ಊಟದ ನಂತರ ಹವಾ ಸೇವನೆಗೆಂದು ಮನೆಯ ಬಾಗಿಲು ತೆರೆಯುತ್ತಿದ್ದಂತೆ, ಹರಿತ ಆಯುಧಗಳನ್ನು ಹೊಂದಿದ ಇಬ್ಬರು ಮುಸುಕುಧಾರಿ ಆಗಂತುಕರು ಮನೆಯೊಳಗೆ ದಾಂಗುಡಿಯಿಟ್ಟರು. ಅವರನ್ನು ತಡೆಯಲು ಯತ್ನಿಸಿದ ರಾಯ್‌ ಅವರ ತಮ್ಮನನ್ನು ತಳ್ಳಿ, ಟಾಯ್ಲೆಟ್ಟಿನೊಳಗೆ ಕೂಡಿಟ್ಟರು. ವೃದ್ಧ ಅಧ್ಯಾಪಕರನ್ನು ಬೆದರಿಸಿದ ಚೋರರು, ಇರುವ ಹಣ ಮತ್ತು ಒಡವೆಯನ್ನೆಲ್ಲಾ ನೀಡುವಂತೆ ಒತ್ತಾಯಿಸಿದರು. ಹೆದರಿದ ರಾಯ್‌, ತಮ್ಮಲ್ಲಿದ್ದ ಸುಮಾರು ೧೭ ಸಾವಿರ ರೂ.ಗಳನ್ನು ಕಳ್ಳರಿಗೆ ಒಪ್ಪಿಸಿದರು. ಈ ಹೊತ್ತಿಗೆ ಮನೆಯನ್ನೆಲ್ಲಾ ಜಾಲಾಡಿದ ಖದೀಮರು, ಎದುರಿಗಿದ್ದ ಎರಡು ಮೊಬೈಲ್‌ ಫೋನ್‌ಗಳನ್ನೂ ಕಿಸೆಗಿಳಿಸಿದರು. ಈವರೆಗೆ ನಡೆದಿದ್ದೆಲ್ಲಾ ಮಾಮೂಲಿ ದರೋಡೆಯ ಪ್ರಕರಣವೇ. ನಂತರ ಒಂದು ವಿಲಕ್ಷಣ ಘಟನೆ ನಡೆಯಿತು.

ಬಂದಿದ್ದ ಕಳ್ಳರ ಪೈಕಿ ಒಬ್ಬ ಇದ್ದಕ್ಕಿದ್ದಂತೆ ನಿವೃತ್ತ ಅಧ್ಯಾಪಕರ ಎದುರು ಗೌರವ ತೋರುವಂತೆ ಬಾಗಿದ. ತಾನು ಕದಿಯುತ್ತಿರುವುದು ತನಗೆ ಪಾಠ ಹೇಳಿಕೊಟ್ಟ ಗುರುಗಳ ಮನೆಯಲ್ಲಿ, ದೋಚುತ್ತಿರುವುದು ಅವರನ್ನೇ ಎಂಬುದು ಅರ್ಥವಾದವರಂತೆ, ಸುಮ್ಮನೆ ನಿಂತ. ಈ ಚೋರರು ತನಗಾಗಲೀ, ತನ್ನ ಮನೆಯವರಿಗಾಗಲೀ ಅಪಾಯ ಮಾಡುವುದಿಲ್ಲ ಎಂಬುದನ್ನು ಅರಿತ ರಾಯ್‌ ಅವರು, ಮರುದಿನ ಬೆಳಗಿನ ಹಾಲು-ತರಕಾರಿಗೆ ಮತ್ತು ಫಿಸಿಯೊಥೆರಪಿಗೆ ಸ್ವಲ್ಪ ಹಣ ಕೊಟ್ಟು ಹೋಗಿ ಎಂದು ಕೇಳಿದರು. ತಕ್ಷಣ ೨೦೦ ರೂ.ಗಳನ್ನು ಮತ್ತು ಒಂದು ಮೊಬೈಲ್‌ ಫೋನನ್ನು ಅವರ ಪಾದಮೂಲದಲ್ಲಿಟ್ಟು ಅಲ್ಲಿಂದ ಪರಾರಿಯಾದರು.

ʻಇರುವ ಹಣವನ್ನೆಲ್ಲಾ ಅವರ ಕೈಗಿತ್ತರೂ, ಇಡೀ ಮನೆಯನ್ನು ಕಳ್ಳರು ಕಿತ್ತಾಡಿದರು. ಆದರೆ ಹೋಗುವಾಗ ನನ್ನೆದುರು ಬಾಗಿ ವಂದಿಸಿದರುʼ ಎಂದು ರಾಯ್‌ ಹೇಳಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಗಾಬರಿ ಹುಟ್ಟಿಸಿದ್ದು, ಪ್ರದೇಶದಲ್ಲಿ ಭದ್ರತೆ ಹೆಚ್ಚಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಉದ್ಯೋಗಿಯೊಬ್ಬ ರಜೆ ಕೇಳಿ ಬಾಸ್‌ಗೆ ಕಳಿಸಿದ ಇ-ಮೇಲ್‌ ವೈರಲ್‌; ಪ್ರಾಮಾಣಿಕತೆ ಮೆಚ್ಚುವಂಥದ್ದು !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

MS Dhoni: ಗೆಳತಿಯ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ಬ್ರೇಕಪ್ ಆದ ಧೋನಿ ಅಭಿಮಾನಿ

MS Dhoni: ಮಹೇಂದ್ರ ಸಿಂಗ್‌ ಧೋನಿಯ ಅಪ್ಪಟ ಅಭಿಮಾನಿಯೊಬ್ಬ ತನ್ನ ಗೆಳತಿಯ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ಬ್ರೇಕಪ್ ಮಾಡಿದ್ದಾನೆ. ಭಾನುವಾರ ನಡೆದ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪೋಸ್ಟರ್​ ಹಿಡಿಯುವ ಮೂಲಕ ಈ ಅಭಿಮಾನಿ ತನ್ನ ಬ್ರೇಕಪ್ ವಿಚಾರವನ್ನು ಬಹಿರಂಗಪಡಿಸಿದ್ದಾನೆ.

VISTARANEWS.COM


on

MS Dhoni
Koo

ಚೆನ್ನೈ: ಮಹೇಂದ್ರ ಸಿಂಗ್‌ ಧೋನಿ(MS Dhoni) ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿ ಹಲವು ವರ್ಷ ಕಳೆದರೂ ಅವರು ಈಗಲೂ ಕ್ರಿಕೆಟಿನ ಸೂಪರ್‌ ಸ್ಟಾರ್‌ ಆಗಿದ್ದಾರೆ. ಅವರ ಅಭಿಮಾನಿಗಳ ಸಂಖ್ಯೆಗೇನೂ ಕೊರತೆ ಇಲ್ಲ. ಐಪಿಎಲ್​ನಲ್ಲಿ(IPL 2024) ಚೆನ್ನೈ ಪರ ಆಡುತ್ತಿರುವ ಧೋನಿ ಮೈದಾನಕ್ಕೆ ಇಳಿದರೆ ಸಾಕು ಇಡೀ ಸ್ಟೇಡಿಯಂ ತುಂಬಾ ಧೋನಿಯ ಹೆಸರಿನದ್ದೇ ಸದ್ದು. ಧೋನಿಯನ್ನು ನೋಡಲೆಂದೇ ಅವರ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಇದೀಗ ಅವರ ಅಪ್ಪಟ ಅಭಿಮಾನಿಯೊಬ್ಬ ತನ್ನ ಗೆಳತಿಯ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ಬ್ರೇಕಪ್ ಮಾಡಿದ್ದಾನೆ. ಭಾನುವಾರ ನಡೆದ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪೋಸ್ಟರ್​ ಹಿಡಿಯುವ ಮೂಲಕ ಈ ಅಭಿಮಾನಿ ತನ್ನ ಬ್ರೇಕಪ್ ವಿಚಾರವನ್ನು ಬಹಿರಂಗಪಡಿಸಿದ್ದಾನೆ.

ಚೆನ್ನೈಯ ಚೆಪಾಕ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಐಪಿಎಲ್​(IPL 2024) ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಚೆನ್ನೈ(Chennai Super Kings) ತಂಡ ನಾಯಕ ಋತುರಾಜ್​ ಗಾಯಕ್ವಾಡ್​, ಡೇರಿಯಲ್​ ಮಿಚೆಲ್​ ಮತ್ತು ಶಿವಂ ದುಬೆ ಅವರ ಆಕ್ರಮಣಕಾರಿ ಬ್ಯಾಟಿಂಗ್​ ಸಾಹಸದಿಂದ ನಿಗದಿತ 20 ಓವರ್​ಗಳಲ್ಲಿ ಕೇವಲ 3 ವಿಕೆಟ್​ ನಷ್ಟಕ್ಕೆ 212 ರನ್​ ಬಾರಿಸಿತು. ಈ ಹಿಂದಿನ ಪಂದ್ಯಗಳಲ್ಲಿ ಸಲೀಸಾಗಿ ಮೂರು ಬಾರಿ 250ರ ಗಡಿ ದಾಟಿದ್ದ ಸನ್​ರೈಸರ್ಸ್​ ತಂಡಕ್ಕೆ ಈ ಮೊತ್ತ ಎಲ್ಲಿಂದಲೂ ಸಾಲದು ಎಂದು ನಿರೀಕ್ಷೆ ಮಾಡಿದ್ದವರಿಗೆ ಚೆನ್ನೈ ತಂಡದ ಮಧ್ಯಮ ವೇಗಿ ತುಷಾರ್​ ದೇಶ್​ಪಾಂಡೆ ಘಾತಕ ಸ್ಫೆಲ್ ಮೂಲಕ ಕಟ್ಟಿಹಾಕಿದರು. ಅಂತಿಮವಾಗಿ ಹೈದರಾಬಾದ್​ 18.5 ಓವರ್​ಗಳಲ್ಲಿ 134 ರನ್​ಗೆ ಸರ್ವಪತನ ಕಂಡು ಹೀನಾಯವಾಗಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024 Points Table: ಚೆನ್ನೈ ಗೆಲುವಿನಿಂದ ಅಂಕಪಟ್ಟಿಯಲ್ಲಿ 3 ತಂಡಗಳಿಗೆ ಭಾರೀ ಹೊಡೆತ

ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ಧೋನಿ ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ.

ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಕಳೆದ ವರ್ಷ ಮುಂಬೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಕಳೆದ ಮುಂಬೈ ಮತ್ತು ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಿದ ವೇಳೆ ಕುಂಟುತಾ ನಡೆದಾಡಿದ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು. ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯಗೆ ಹ್ಯಾಟ್ರಿಕ್​ ಸಿಕ್ಸರ್​ಗಳ ರುಚಿ ತೋರಿಸಿದ್ದರು. ವಯಸ್ಸು 42 ಆದರೂ, ತಮ್ಮ ಬ್ಯಾಟಿಂಗ್​ ಫಾರ್ಮ್​ ಮಾತ್ರ ಈ ಹಿಂದಿನಂತೆಯೇ ಇದೆ.​

Continue Reading

ವೈರಲ್ ನ್ಯೂಸ್

Viral Video: ಪಾಪಿ ಮಗನಿಂದ ತಂದೆ ಮೇಲೆ ಇದೆಂಥಾ ಕ್ರೌರ್ಯ! ವಿಡಿಯೋ ನೋಡಿ

Viral Video:ಪಾಪಿ ಮಗನೋರ್ವ ತನ್ನ ತಂದೆಯ ಮುಖಕ್ಕೆ ಒಂದೇ ಸಮನೇ ಗುದ್ದಿ ಕ್ರೌರ್ಯ ಮೆರೆದಿರುವ ಘಟನೆ ತಮಿಳುನಾಡಿನ ಪೆರಂಬಲೂರಿನಲ್ಲಿ ನಡೆದಿದೆ.

VISTARANEWS.COM


on

Koo

ತಮಿಳುನಾಡು: ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ಚೆನ್ನಾಗಿ ಥಳಿಸಿ ಫ್ಲೈ ಓವರ್‌ನಿಂದ ಕೆಳಗೆ ತಳ್ಳಿ ಕೊಲೆಗೆ ಯತ್ನಿಸಿದ ವಿಡಿಯೋ ವೈರಲ್‌(Viral Video) ಆಗಿದ್ದ ಬೆನ್ನಲ್ಲೇ ಇದೀಗ ತಮಿಳುನಾಡಿ(Tamil nadu)ನಲ್ಲಿ ಮತ್ತೊಂದು ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಾಪಿ ಮಗನೋರ್ವ ತನ್ನ ತಂದೆಯ ಮುಖಕ್ಕೆ ಒಂದೇ ಸಮನೇ ಗುದ್ದಿ ಕ್ರೌರ್ಯ ಮೆರೆದಿರುವ ಘಟನೆ ತಮಿಳುನಾಡಿನ ಪೆರಂಬಲೂರಿ(Perambaluru)ನಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ತಂದೆ ಸ್ಥಳದಲ್ಲೇ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಕೃಷ್ಣಪುರಂನಲ್ಲಿ ಈ ಭೀಕರ ಘಟನೆ ನಡೆದಿದ್ದು, 68ವರ್ಷದ ಕುಲಂಡೈವೇಲು ಎಂಬ ವ್ಯಕ್ತಿಯ ಮೇಲೆ ಆತನ ಮಗ 40ವರ್ಷದ ಸಂತೋಷ್‌ ಎಂಬಾತ ಮುಖಾಮೂತಿ ನೋಡದೇ ಚಚ್ಚಿದ್ದಾನೆ. ಕುಲಂಡೈವೇಲು ಶ್ರೀ ಅಮೃತ ಸಾಗೋ ಎಂಬ ಅಕ್ಕಿ ಗಿರಣಿ ನಡೆಸುತ್ತಿದ್ದರು. ಅದರ ಅಧಿಕಾರವನ್ನು ತನಗೆ ವಹಿಸುವಂತೆ ಆಗಾಗ ಸಂತೋಷ್‌ ಕಿರುಕುಳ ನೀಡುತ್ತನಂತೆ. ಇದೇ ವಿಚಾರಕ್ಕೆ ಕೋಪದಲ್ಲಿ ತಂದೆ ಮುಖಕ್ಕೆ ಗುದ್ದಿ ಆತನ ಸಾವಿಗೆ ಸಂತೋಷ್‌ ಕಾರಣನಾಗಿದ್ದಾನೆ. ತಂದೆ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರೂ ಬಿಡದ ಸಂತೋಷ್‌ ಬಿಡದೇ ಮುಖಕ್ಕೆ ಗುದ್ದಿದ್ದಾನೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಆತನನ್ನು ತಡೆದು ಕುಲಂಡೈವೇಲು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಫೆಬ್ರುವರಿ 16ರಂದು ಈ ಘಟನೆ ನಡೆದಿದ್ದು, ಒಂದು ತಿಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಲಂಡೈವೇಲು ಕೊನೆಯುಸಿರೆಳೆದಿದ್ದಾರೆ.

ಕುಲಂಡೈವೇಲು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರು ಮೊದಲಿಗೆ ತಮ್ಮ ಮಗನ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ಅದನ್ನು ಹಿಂಪಡೆದಿದ್ದರು ಎನ್ನಲಾಗಿದೆ. ಇದೀಗ ಮತ್ತೆ ಕುಟುಂಬಸ್ಥರು ಸಂತೋಷ್‌ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಅರೆಸ್ಟ್‌ ಮಾಡಿದ್ದಾರೆ. ಸದ್ಯ ಅವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪಾಪಿ ಮಗನ ಕೃತ್ಯಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:Dubai Airport : ದುಬೈನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಏರ್​ಪೋರ್ಟ್​​; ಏನಿದರ ವಿಶೇಷತೆ? ಎಲ್ಲ ಮಾಹಿತಿ ಇಲ್ಲಿದೆ

ಎರಡು ದಿನಗಳ ಹಿಂದೆಯಷ್ಟೇ ತಮಿಳುನಾಡಿನ ಕೊಯಂಬೆಡು ಸೇತುವೆ ಬಳಿ ವ್ಯಕ್ತಿಯೊಬ್ಬ ಪತ್ನಿಯನ್ನು ಥಳಿಸಿ ನಡು ಫ್ಲೈ ಓವರ್‌ ನಿಂದ ಕೆಳಗೆ ಎಸೆಯಲು ಯತ್ನಿಸಿದ್ದ. ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿತ್ತು. ಬಳಿಕ ಆರೋಪಿ ರೋಶನ್‌ನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದರು.

Continue Reading

ವೈರಲ್ ನ್ಯೂಸ್

Prachi Nigam: “ನಾನು ಟಾಪ್‌ ಬರಲೇಬಾರದಿತ್ತು…” ಮೀಸೆಯಿಂದಾಗಿ ಟ್ರೋಲ್‌ಗೊಳಗಾದ ಬೋರ್ಡ್‌ ಎಕ್ಸಾಮ್‌ ಟಾಪರ್‌ ಹುಡುಗಿಯ ನೋವು

Prachi Nigam: ತನ್ನ ನೋಟಕ್ಕಾಗಿ ವೈಯಕ್ತಿಕವಾಗಿ ತಾನು ಎದುರಿಸುತ್ತಿರುವ ನಿರಂತರ ಗೇಲಿಗಳ ಬಗ್ಗೆ ಮಾತನಾಡಿರುವ ಆಕೆ, “ಇದು ನೋವುಂಟುಮಾಡುವಂಥದು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಜನರು ತಮಗೆ ಬೇಕಾದುದನ್ನು ಹೇಳುತ್ತಾರೆ. ಅವರನ್ನು ತಡೆಯಲು ಸಾಧ್ಯವಿಲ್ಲ” ಎಂದಿದ್ದಾಳೆ.

VISTARANEWS.COM


on

prachi nigam online troll
Koo

ಹೊಸದಿಲ್ಲಿ: 98.50 ಪ್ರತಿಶತ ಅಂಕದೊಂದಿಗೆ ಯುಪಿ ಬೋರ್ಡ್ (UP Board) 10ನೇ ತರಗತಿಯ ಟಾಪರ್ (Board exam topper) ಆಗಿ ಹೊರಹೊಮ್ಮಿರುವ ಪ್ರಾಚಿ ನಿಗಮ್ (Prachi Nigam), ತಮ್ಮ ಮುಖದ ಕೂದಲಿನ (facial hair) ಬಗೆಗೆ ಬರುತ್ತಿರುವ ಆನ್‌ಲೈನ್ ಟ್ರೋಲಿಂಗ್‌ನಿಂದಾಗಿ (Online trolling) ನೊಂದಿದ್ದಾಳೆ. ಬಿಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ತನ್ನ ಅತ್ಯುತ್ತಮ ಶೈಕ್ಷಣಿಕ ಸಾಧನೆಗಿಂತ ಹೆಚ್ಚಾಗಿ ತನ್ನ ಲುಕ್‌ನಿಂದಾಗಿಯೇ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ (viral news) ಆಗಿರುವ ಬಗ್ಗೆ ವೇದನೆ ವ್ಯಕ್ತಪಡಿಸಿದ್ದಾಳೆ.

“ನಾನು ಟಾಪರ್‌ ಆಗಬಾರದಿತ್ತು. ಕೇವಲ 1-2 ಅಂಕ ಕಡಿಮೆ ಗಳಿಸಿದ್ದರೆ, ಈ ಸೋಶಿಯಲ್‌ ಮೀಡಿಯಾದ ಜನಪ್ರಿಯತೆ ಮತ್ತು ನನ್ನ ಲುಕ್‌ನಿಂದಾಗಿ ಬಂದ ಇಂತಹ ಟ್ರೋಲಿಂಗ್ ಅನ್ನು ಎದುರಿಸಬೇಕಾಗಿರಲಿಲ್ಲ” ಎಂದಿದ್ದಾಳೆ ಪ್ರಾಚಿ. ತನ್ನ ನೋಟಕ್ಕಾಗಿ ವೈಯಕ್ತಿಕವಾಗಿ ತಾನು ಎದುರಿಸುತ್ತಿರುವ ನಿರಂತರ ಗೇಲಿಗಳ ಬಗ್ಗೆ ಮಾತನಾಡಿರುವ ಆಕೆ, “ಇದು ನೋವುಂಟುಮಾಡುವಂಥದು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಜನರು ತಮಗೆ ಬೇಕಾದುದನ್ನು ಹೇಳುತ್ತಾರೆ. ಅವರನ್ನು ತಡೆಯಲು ಸಾಧ್ಯವಿಲ್ಲ” ಎಂದಿದ್ದಾಳೆ.

ಕೆಲವು ಪ್ರಜ್ಞಾವಂತ ಸೋಶಿಯಲ್‌ ಮೀಡಿಯಾ ಬಳಕೆದಾರರು ಆಕೆಗಾಗಿ ನಿಜವಾಗಿಯೂ ಮಿಡಿದಿದ್ದಾರೆ. “ನಾವು ಒಂದು ಸಮಾಜವಾಗಿ ಆಕೆಯೆದುರು ವಿಫಲರಾಗಿದ್ದೇವೆ” ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. “ಅವಳ ಜೀವನದ ಅತ್ಯುತ್ತಮ ಕ್ಷಣ ಈಗ ನೋವಿನ ಕ್ಷಣವೂ ಆಗಿದೆ. ಸಾಮಾಜಿಕ ಮಾಧ್ಯಮವು ತುಂಬಾ ವಿಷಕಾರಿ ಮತ್ತು ಕ್ರೂರ” ಎಂದಿದ್ದಾರೆ ಇನ್ನೊಬ್ಬರು. “ಸಮಾಜಕ್ಕಿಂತ ಹೆಚ್ಚಾಗಿ ಅವಳನ್ನು ಟ್ರೋಲ್ ಮಾಡಿದವರು ನಿಜವಾದ ಸೋತವರು. ನಮ್ಮದು ಸೋತವರಿಂದ ತುಂಬಿದ ಸಮಾಜ. ಪ್ರತಿಯೊಬ್ಬ ಯಶಸ್ವಿ ಮಹಿಳೆಯನ್ನೂ ಟ್ರೋಲ್‌ ಮಾಡುತ್ತಾರೆ” ಎಂದಿದ್ದಾರೆ ಮತ್ತೊಬ್ಬರು. “ಅವಳು ಅನುಭವಿಸಿದ ಭಾವನಾತ್ಮಕ ಆಘಾತವನ್ನು ಊಹಿಸಿ. ಜಗತ್ತಿನಿಂದ ಈ ಮಟ್ಟದ ದ್ವೇಷದ ವಿರುದ್ಧ ನಿಲ್ಲಲು ದೊಡ್ಡ ಧೈರ್ಯ ಬೇಕು. ಹೀಗಾಗಿ ಆಕೆ ತುಂಬಾ ಬಲಶಾಲಿಯಾಗಿದ್ದಾಳೆ” ಎಂಬುದು ಇನ್ನೊಬ್ಬರ ಕಾಮೆಂಟ್.

“ಭವಿಷ್ಯದಲ್ಲಿ ಇಂಜಿನಿಯರ್ ಆಗುವ ಗುರಿ ಹೊಂದಿದ್ದೇನೆ ಮತ್ತು ತನ್ನ ಕನಸುಗಳನ್ನು ಮುಂದುವರಿಸುವತ್ತ ಸಂಪೂರ್ಣ ಗಮನಹರಿಸಿದ್ದೇನೆ” ಎಂದು ಪ್ರಾಚಿ ತನ್ನ ಆಕಾಂಕ್ಷೆಗಳನ್ನು ಹಂಚಿಕೊಂಡಿದ್ದಾಳೆ. ಟ್ರೋಲಿಂಗ್ ಪ್ರಾರಂಭವಾದ ನಂತರ ಆಕೆಯ ತಾಯಿ ಮಮತಾ ನಿಗಮ್ ಅವರು ತಮ್ಮ ಮಗಳನ್ನು ಹೇಗೆ ಬೆಂಬಲಿಸಿದರು ಎಂಬುದರ ಕುರಿತು ಮಾತನಾಡುತ್ತಾ, “ಟ್ರೋಲ್‌ಗಳನ್ನು ನಿರ್ಲಕ್ಷಿಸುವಂತೆ ಆಕೆಯನ್ನು ನಾನು ಪ್ರೋತ್ಸಾಹಿಸಿದೆ. ಆಶ್ಚರ್ಯ ಎನಿಸುವಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕೆಲವು ದಿನಗಳ ನಂತರ ಅವಳನ್ನು ಬೆಂಬಲಿಸಿದರು” ಎಂದಿದ್ದಾರೆ.

ಪ್ರಾಚಿಯ ತಂದೆ ಚಂದ್ರಪ್ರಕಾಶ್ ನಿಗಮ್ ಅವರು ಟ್ರೋಲಿಂಗ್‌ನಿಂದ ಆಗಿರುವ ನಿರಾಶೆಯನ್ನು ಒಪ್ಪಿಕೊಂಡರು. ಆದರೆ ಮಗಳ ಸಾಧನೆಯಿಂದ ಆಗಿರುವ ಹೆಮ್ಮೆಯ ಬಗ್ಗೆ ಹೇಳಿದರು. “ಸಮಾಜದಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ನಮ್ಮ ಮಗಳು ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ” ಎಂದು ಅವರು ಹೇಳಿದರು. ಮಮತಾ ನಿಗಮ್ ಅವರು ತಮ್ಮ ಮಗಳ ಚಿಕಿತ್ಸೆಗಾಗಿ ವೈದ್ಯಕೀಯ ಸಲಹೆಯನ್ನು ಪಡೆಯಲು ಯೋಜಿಸಿದ್ದರು. “ಅವಳ ಚಿಕಿತ್ಸೆಯನ್ನು ಈಗ ಸರ್ಕಾರವು ಕೈಗೊಳ್ಳಲಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: Lok Sabha Election 2024 : ಬೋಟ್‌ನಲ್ಲಿ ಬಂದು ವೋಟ್‌ ಮಾಡಿದ 150ಕ್ಕೂ ಮತದಾರರು

Continue Reading

ವೈರಲ್ ನ್ಯೂಸ್

Viral Video: ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿ; ಮಹಿಳಾ ಪೇದೆಯಿಂದ ರಕ್ಷಣೆ-ರೋಚಕ ವಿಡಿಯೋ ವೈರಲ್‌

Viral Video: ಚಲಿಸುತಿದ್ದ ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದಿದ್ದು, ತಕ್ಷಣ ಅಲ್ಲೇ ಇದ್ದ ಮಹಿಳಾ ಪೊಲೀಸ್‌ ಸಿಬ್ಬಂದಿ ಆತನನ್ನು ರಕ್ಷಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

VISTARANEWS.COM


on

Koo

ಉತ್ತರಾಖಂಡ: ಕೆಲವೊಮ್ಮೆ ಅದೃಷ್ಟ ನೆಟ್ಟಗಿದ್ದರೆ ಸಾವಿಗೂ ಸವಾಲೆಸೆದು ಬರಬಹುದು ಎಂಬ ಮಾತಿದೆ. ಇನ್ನು ಕೆಲವೊಮ್ಮೆ ಸಾವಿನ ಬಾಯಿಗೆ ಇನ್ನೇನು ತುತ್ತಾಗುತ್ತಿದ್ದೇವೆ ಅನ್ನೋವಾಗಲೇ ಯಾರಾದರೂ ಆಪದ್ಬಾಂಧವರಂತೆ ಬಂದು ಕಾಪಾಡಿ ಬಿಡುತ್ತಾರೆ. ಅಂತಹದ್ದೇ ಒಂದು ಘಟನೆ(Viral Video) ಉತ್ತರಾಖಂಡ(Uttarakhanda)ದಲ್ಲಿ ನಡೆದಿದೆ. ಚಲಿಸುತಿದ್ದ ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದಿದ್ದು, ತಕ್ಷಣ ಅಲ್ಲೇ ಇದ್ದ ಮಹಿಳಾ ಪೊಲೀಸ್‌ ಸಿಬ್ಬಂದಿ ಆತನನ್ನು ರಕ್ಷಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್‌ ಆಗಿದ್ದು, ಸಿಬ್ಬಂದಿಯ ಶಕ್ತಿ ಸಾಮರ್ಥ್ಯ ಹಾಗೂ ಕರ್ತವ್ಯ ಪ್ರಜ್ಞೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ?

ಉತ್ತರಾಖಂಡದ ಲಸ್ಕರ್‌ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೋಲ್ಕತ್ತಾ-ಜಮ್ಮು ಟವಿ ಎಕ್ಸ್‌ಪ್ರೆಸ್‌ ರೈಲಿಗೆ ಹತ್ತಲು ಹೋಗಿದ್ದ ವ್ಯಕ್ತಿ ಫ್ಲ್ಯಾಟ್‌ಫಾರ್ಮ್‌ ಮತ್ತು ರೈಲಿನ ನಡುವಿನ ಸಂದಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಜಿಆರ್‌ಪಿ ಕಾನ್‌ಸ್ಟೇಬಲ್‌ ಉಮಾ, ಆಪದ್ಬಾಂಧವಳಂತೆ ಬಂದು ಆತನನ್ನು ರಕ್ಷಿಸಿದ್ದಾರೆ. ಇನ್ನು ಈ ಘಟನೆ ಏ.24ರಂದು ನಡೆದಿದ್ದು, ಆಹಾರ ಮತ್ತು ಜ್ಯೂಸ್‌ ತೆಗೆದು ಕೊಳ್ಳಲೆಂದು ಆ ವ್ಯಕ್ತಿ ರೈಲಿನಿಂದ ಇಳಿದಿದ್ದ. ತಕ್ಷಣ ಹೊರಡುತ್ತಿದ್ದನ್ನು ಗಮನಿಸಿದ ಆ ಓಡಿ ಹೋಗಿ ಹತ್ತಿದ್ದಾನೆ ಎನ್ನಲಾಗಿದೆ. ಕೈನಲ್ಲಿ ಆಹಾರ ಪೊಟ್ಟಣಗಳು ಇದ್ದ ಕಾರಣ ಆತನಿಗೆ ಸುಲಭವಾಗಿ ಹತ್ತಲು ಸಾಧ್ಯವಾಗಿಲ್ಲ. ಹೀಗಾಗಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾನೆ.

5 ಗಂಟೆ ರೈಲು ವಿಳಂಬ

ಇನ್ನು ಘಟನೆ ಬಳಿಕ ಕೋಲ್ಕತ್ತಾ-ಜಮ್ಮು ಟವಿ ಎಕ್ಸ್‌ಪ್ರೆಸ್‌ ರೈಲು ಐದು ಗಂಟೆ ತಡವಾಗಿ ಲಕ್ಷರ್‌ ರೈಲು ನಿಲ್ದಾಣಕ್ಕೆ ತಲುಪಿದೆ. ಆ ವ್ಯಕ್ತಿ ಕೆಳಗೆ ಬೀಳುತ್ತಿದ್ದನ್ನು ಗಮನಿಸಿದ ಸಹ ಪ್ರಯಾಣಿಕರು ತಕ್ಷಣ ರೈಲಿನ ಚೈನ್‌ ಎಳೆದು ರೈಲನ್ನು ನಿಲ್ಲಿಸಿದ್ದರು. ಜನರಲ್ಲಾ ರೈಲಿನಿಂದ ಕೆಳಗಿಳಿದು ಆ ವ್ಯಕ್ತಿಯ ರಕ್ಷಣೆಗೆ ಮುಂದಾಗಿದ್ದರು. ಇನ್ನು ಆತನಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ, ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಲ್ಲಿ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.

ಪುಣೆಯಲ್ಲೂ ನಡೆದಿತ್ತು ಇಂತಹದ್ದೇ ಘಟನೆ

ಅದು ಪುಣೆಯ ಸಿವಿಲ್ ಕೋರ್ಟ್ ಎಲಿವೇಟೆಡ್ ನಿಲ್ದಾಣದ ಪ್ಲಾಟ್‌ಫಾರ್ಮ್‌ ಸಂಖ್ಯೆ 2. ಗಂಟೆ ಅಪರಾಹ್ನ 2.22ರ ಸುಮಾರು. ರೈಲ್ವೆ ನಿಲ್ದಾಣದಲ್ಲಿ ಓಡಾಡುತ್ತಿದ್ದ ಸುಮಾರು 2ರಿಂದ 3 ವರ್ಷದ ಬಾಲಕ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಹಳಿಗಳ ಮೇಲೆ ಬಿದ್ದು ಬಿಟ್ಟ. ತಾಯಿ ತನ್ನ ಮಗುವನ್ನು ರಕ್ಷಿಸಲು ಹಳಿಗಳ ಮೇಲೆ ಹಾರಿದರು. ಇನ್ನೇನು ರೈಲು ಬರುವ ಹೊತ್ತು. ಎಲ್ಲರೂ ದಂಗಾಗಿ, ಉಸಿರು ಬಿಗಿ ಹಿಡಿದು ನೋಡುತ್ತಿದ್ದರು. ಯಾರಿಗೆ ಏನು ಮಾಡಬೇಕೆಂದು ತೋಚದ ಕ್ಷಣವದು.

ಇದನ್ನೂ ಓದಿ:Sira News: ಬಿಸಿಲ ಬೇಗೆಗೆ ಮತ್ಸ್ಯಗಳ ಮಾರಣಹೋಮ; ನೀರಿಲ್ಲದೇ ವಿಲವಿಲನೇ ಒದ್ದಾಡಿ ಸಾವಿರಾರು ಮೀನುಗಳ ಸಾವು

ಆಗಲೇ ಆಪತ್ಬಾಂಧವನ ರೂಪದಲ್ಲಿ ನೆರವಿಗೆ ಧಾವಿಸಿದವರು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ವಿಕಾಸ್ ಬಂಗಾರ್. ತಮ್ಮ ಸಮಯೋಚಿತ ಕರ್ತವ್ಯ ಪ್ರಜ್ಞೆಯಿಂದ ನಡೆಯಬಹುದಾದ ಅತಿ ದೊಡ್ಡ ಅವಘಢವನ್ನು ತಪ್ಪಿಸಿ ಅಕ್ಷರಶಃ ಹೀರೋ ಎನಿಸಿಕೊಂಡರು. ಕೂಡಲೇ ಅವರು ತುರ್ತು ರೈಲು ನಿಲುಗಡೆ (Emergency stop plunger-ESP) ಬಟನ್‌ ಒತ್ತಿದರು. ಧಾವಿಸಿ ಬರುತ್ತಿದ್ದ ರೈಲು ನಿಲ್ದಾಣದಿಂದ ಕೇವಲ 30 ಮೀಟರ್ ದೂರದಲ್ಲಿ ಎರಡೂ ಬದಿಗಳಲ್ಲಿ ನಿಂತು ಬಿಟ್ಟಿತು. ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟು ಅಮ್ಮ-ಮಗುವಿನ ರಕ್ಷಣೆಗೆ ಧಾವಿಸಿದರು. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

Continue Reading
Advertisement
IPL 2024
ಕ್ರೀಡೆ20 mins ago

IPL 2024: ಆರ್​ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ; ಸದ್ಯದ​ ಲೆಕ್ಕಾಚಾರ ಹೇಗಿದೆ?

Hassan Pen Drive Case Where is Prajwal in Germany SIT is on lookout
ಕ್ರೈಂ24 mins ago

Hassan Pen Drive Case: ಜರ್ಮನಿಯಲ್ಲಿ ಪ್ರಜ್ವಲ್‌ ಎಲ್ಲಿದ್ದಾರೆ? ಪತ್ತೆ ಮಾಡುತ್ತಿದೆ ಎಸ್‌ಐಟಿ!

Hassan Pen Drive Case
ಕರ್ನಾಟಕ40 mins ago

Hassan Pen Drive Case: ಪ್ರಜ್ವಲ್ ರೇವಣ್ಣ ಉಚ್ಚಾಟನೆ ನಿರ್ಧಾರ ಆಗಿದೆ ಎಂದ ಎಚ್‌ಡಿಕೆ

Star Saree Fashion
ಫ್ಯಾಷನ್44 mins ago

Star Saree Fashion: ಪಾಸ್ಟೆಲ್‌ ಅರ್ಗಾನ್ಜಾ ಸೀರೆಯಲ್ಲಿ ಮಿಂಚಬೇಕೆ? ನಟಿ ಮೋಕ್ಷಿತಾ ಪೈ ನೀಡಿದ್ದಾರೆ 5 ಸಿಂಪಲ್‌ ಐಡಿಯಾ

Vinay Gowda Got three Film Offer
ಸ್ಯಾಂಡಲ್ ವುಡ್1 hour ago

Vinay Gowda: ಮೂರು ಸಿನಿಮಾಗಳಿಗೆ ಸಹಿ ಮಾಡಿದ ʻಬಿಗ್‌ ಬಾಸ್‌ʼ ಖ್ಯಾತಿಯ ವಿನಯ್‌ ಗೌಡ!

Hassan Pen Drive Case
ಕರ್ನಾಟಕ1 hour ago

ಪ್ರಜ್ವಲ್‌ ರೇವಣ್ಣ ವಿಡಿಯೊಗಳ ಕುರಿತು ಕೆಲ ತಿಂಗಳ ಮೊದಲೇ ಎಚ್ಚರಿಸಿದ್ದ ಬಿಜೆಪಿ ನಾಯಕ! ಯಾರವರು?

Politicians Scandals
Latest1 hour ago

Politicians Scandals : ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಲೈಂಗಿಕ ಹಗರಣಗಳಿವು!

MS Dhoni
ಕ್ರೀಡೆ1 hour ago

MS Dhoni: ಗೆಳತಿಯ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ಬ್ರೇಕಪ್ ಆದ ಧೋನಿ ಅಭಿಮಾನಿ

Hassan Pen drive case
ಕರ್ನಾಟಕ2 hours ago

Hassan Pen Drive Case: ಪ್ರಜ್ವಲ್‌ ಪ್ರಕರಣಕ್ಕೆ ಅಚ್ಚರಿಯ ತಿರುವು; ಅವರು ಹಾಗೆ ಮಾಡಿಯೇ ಇಲ್ಲ ಎಂದ ದೂರುದಾರೆಯ ಅತ್ತೆ!

Actor Dharmendra not spending enough time with parents
ಸಿನಿಮಾ2 hours ago

Actor Dharmendra: ಪೋಷಕರ ಜತೆ ಸಾಕಷ್ಟು ಸಮಯ ಕಳೆಯಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ರಾ ನಟ ಧರ್ಮೇಂದ್ರ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20245 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ13 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌