First Light: 1.6 ಕೋಟಿ ಕಿಮೀ ದೂರದ ಬಾಹ್ಯಾಕಾಶದಿಂದ ಭೂಮಿಗೆ ಬಂತು ಮೊದಲ ಲೇಸರ್‌ ಸಂದೇಶ! - Vistara News

ತಂತ್ರಜ್ಞಾನ

First Light: 1.6 ಕೋಟಿ ಕಿಮೀ ದೂರದ ಬಾಹ್ಯಾಕಾಶದಿಂದ ಭೂಮಿಗೆ ಬಂತು ಮೊದಲ ಲೇಸರ್‌ ಸಂದೇಶ!

ನಾಸಾದ (NASA news) ಸೈಕ್ ಬಾಹ್ಯಾಕಾಶ ನೌಕೆಯಲ್ಲಿ (Psyche spacecraft) ಪ್ರಯಾಣಿಸುತ್ತಿರುವ ʼಡೀಪ್ ಸ್ಪೇಸ್ ಆಪ್ಟಿಕಲ್ ಕಮ್ಯುನಿಕೇಷನ್ಸ್ʼ (ಡಿಎಸ್ಒಸಿ) ಉಪಕರಣದಿಂದ ಈ ಪ್ರಯೋಗ ಸಾಧ್ಯವಾಗಿದೆ.

VISTARANEWS.COM


on

laser message firts light
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಬಲು ದೂರದ ಬಾಹ್ಯಾಕಾಶದಿಂದ 16 ಮಿಲಿಯ ಕಿಮೀ ದೂರದಿಂದ ಮೊದಲ ಲೇಸರ್ ಬೆಳಕಿನ ಸಂದೇಶವನ್ನು (Laser message) ಭೂಮಿ ಸ್ವೀಕರಿಸಿದೆ‌. ನಾಸಾದ ಪ್ರಕಾರ, ಇದು ಭೂಮಿ ಮತ್ತು ಚಂದ್ರನ ನಡುವಿನ ಅಂತರಕ್ಕಿಂತ 40 ಪಟ್ಟು ಹೆಚ್ಚು ದೂರ. ಇದು ನಮ್ಮಲ್ಲಿರುವ ಆಪ್ಟಿಕಲ್ ಸಂವಹನ ಸಾಧನಗಳ ಗರಿಷ್ಠ ಸಾಧನೆಯಾಗಿದೆ.

ನಾಸಾದ (NASA news) ಸೈಕ್ ಬಾಹ್ಯಾಕಾಶ ನೌಕೆಯಲ್ಲಿ (Psyche spacecraft) ಪ್ರಯಾಣಿಸುತ್ತಿರುವ ʼಡೀಪ್ ಸ್ಪೇಸ್ ಆಪ್ಟಿಕಲ್ ಕಮ್ಯುನಿಕೇಷನ್ಸ್ʼ (ಡಿಎಸ್ಒಸಿ) ಉಪಕರಣದಿಂದ ಈ ಪ್ರಯೋಗ ಸಾಧ್ಯವಾಗಿದೆ. ಇದು ಅಕ್ಟೋಬರ್ 13ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಹೊರಟಿತು ಮತ್ತು ನಂತರ ಲೇಸರ್ ಕಿರಣದ ಸಂದೇಶವನ್ನು ಭೂಮಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ. ನವೆಂಬರ್ 14ರಂದು, ಸೈಕ್ ಬಾಹ್ಯಾಕಾಶ ನೌಕೆಯು ಕ್ಯಾಲಿಫೋರ್ನಿಯಾದ ಪಾಲೋಮರ್ ವೀಕ್ಷಣಾಲಯದ ಹೇಲ್ ಟೆಲಿಸ್ಕೋಪ್‌ನೊಂದಿಗೆ ಸಂಪರ್ಕವನ್ನು ಸ್ಥಾಪಿಸಿತು. ಪರೀಕ್ಷೆಯ ಸಮಯದಲ್ಲಿ DSOCಯ ಸಮೀಪದ ಅತಿಗೆಂಪು ಫೋಟಾನ್‌ಗಳು ಸೈಕ್‌ನಿಂದ ಭೂಮಿಗೆ ಪ್ರಯಾಣಿಸಲು ಸುಮಾರು 50 ಸೆಕೆಂಡುಗಳನ್ನು ತೆಗೆದುಕೊಂಡವು.

ಈ ಮೊದಲ ಸಂವಹನವನ್ನು ʼಮೊದಲ ಬೆಳಕುʼ (First Light) ಎಂದು ಕರೆಯಲಾಗುತ್ತದೆ. “ಮೊದಲ ಬೆಳಕನ್ನು ಸಾಧಿಸಿದ್ದು ಅನೇಕ ನಿರ್ಣಾಯಕ DSOC ಮೈಲಿಗಲ್ಲುಗಳಲ್ಲಿ ಒಂದಾಗಿದೆ. ಇದು ಮಾನವಕುಲದ ಮುಂದಿನ ದೈತ್ಯ ಹೆಜ್ಜೆಯನ್ನು ಬೆಂಬಲಿಸಲು ವೈಜ್ಞಾನಿಕ ಮಾಹಿತಿ, ಹೈ-ಡೆಫಿನಿಷನ್ ಚಿತ್ರಣ ಮತ್ತು ಸ್ಟ್ರೀಮಿಂಗ್ ವೀಡಿಯೊವನ್ನು ಕಳುಹಿಸುವ ಸಾಮರ್ಥ್ಯವನ್ನು ಹೊಂದಿರುವ ಉನ್ನತ-ಡೇಟಾ-ರೇಟ್ ಸಂವಹನಗಳ ಕಡೆಗೆ ದಾರಿ ಮಾಡಿಕೊಡುತ್ತದೆʼʼ ಎಂದು NASA ಪ್ರಧಾನ ಕಚೇರಿಯಲ್ಲಿ ತಂತ್ರಜ್ಞಾನ ಪ್ರದರ್ಶನಗಳ ನಿರ್ದೇಶಕರಾಗಿರುವ ಟ್ರುಡಿ ಕೊರ್ಟೆಸ್ ಹೇಳಿದ್ದಾರೆ.

NASA ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ DSOCಗಾಗಿ ಪ್ರಾಜೆಕ್ಟ್ ತಂತ್ರಜ್ಞರಾದ ಅಬಿ ಬಿಸ್ವಾಸ್, “ಮೊದಲ ಬೆಳಕನ್ನು ಪಡೆದುದು ಅದ್ಭುತವಾದ ಸಾಧನೆಯಾಗಿದೆ. ಸೈಕ್‌ನಲ್ಲಿರುವ DSOCನ ಫ್ಲೈಟ್ ಟ್ರಾನ್ಸ್‌ಸಿವರ್‌ನಿಂದ ಆಳವಾದ ಬಾಹ್ಯಾಕಾಶ ಲೇಸರ್ ಫೋಟಾನ್‌ಗಳನ್ನು ನೆಲದ ಉಪಕರಣಗಳ ಮೂಲಕ ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ. ನಾವು ಡೇಟಾವನ್ನು ಪಡೆಯಬಹುದು ಮತ್ತು ʼಬೆಳಕಿನ ಬಿಟ್‌ʼಗಳನ್ನು ಆಳವಾದ ಬಾಹ್ಯಾಕಾಶಕ್ಕೆ ತಲುಪಿಸಬಹುದು.”

ಸೈಕ್ ಬಾಹ್ಯಾಕಾಶ ನೌಕೆಯ ಪ್ರಾಥಮಿಕ ಉದ್ದೇಶವೆಂದರೆ ವಿಶಿಷ್ಟವಾದ ಲೋಹವಿರುವ ಕ್ಷುದ್ರಗ್ರಹಗಳನ್ನು ಅನ್ವೇಷಿಸುವುದು ಮತ್ತು ಅಧ್ಯಯನ ಮಾಡುವುದು, ಗ್ರಹಗಳ ರಚನೆ ಮತ್ತು ಕೋರ್ ಡೈನಾಮಿಕ್ಸ್‌ ಇತಿಹಾಸದ ಒಳನೋಟಗಳನ್ನು ತಿಳಿಯುವುದು. ಈ ಪ್ರಯೋಗವನ್ನು ಎರಡು ವರ್ಷಗಳವರೆಗೆ ಯೋಜಿಸಲಾಗಿದೆ. ತನ್ನ ಅಂತಿಮ ಗಮ್ಯಸ್ಥಾನಕ್ಕೆ ಹೋಗುವ ದಾರಿಯಲ್ಲಿ ಸೈಕ್‌ ಇನ್ನಷ್ಟು ದೂರದ ಸ್ಥಳಗಳಿಂದ ಲೇಸರ್ ಸಂಕೇತಗಳನ್ನು ಕಳುಹಿಸುತ್ತದೆ ಮತ್ತು ಸ್ವೀಕರಿಸುತ್ತದೆ. ಬಾಹ್ಯಾಕಾಶ ನೌಕೆಯು 2029ರಲ್ಲಿ ಕ್ಷುದ್ರಗ್ರಹವನ್ನು ತಲುಪುವ ನಿರೀಕ್ಷೆಯಿದೆ ಮತ್ತು ನಂತರ ಕಕ್ಷೆಗೆ ಮುಂದುವರಿಯುತ್ತದೆ.

NASA ನಿರ್ವಾಹಕ ಬಿಲ್ ನೆಲ್ಸನ್ ಹೇಳುವಂತೆ, “ಭವಿಷ್ಯದ ನಾಸಾ ಕಾರ್ಯಾಚರಣೆಗಳಲ್ಲಿ ಬಳಸಬಹುದಾದ ತಂತ್ರಜ್ಞಾನವನ್ನು ಪರೀಕ್ಷಿಸುವಾಗ ಸೈಕ್ ಮಿಷನ್ ಮನುಕುಲಕ್ಕೆ ಗ್ರಹ ರಚನೆಯ ಬಗ್ಗೆ ಹೊಸ ಮಾಹಿತಿಯನ್ನು ಒದಗಿಸುತ್ತದೆʼʼ. ಸದ್ಯ ಆಳವಾದ ಬಾಹ್ಯಾಕಾಶದಲ್ಲಿ ಸಂವಹನವನ್ನು ರೇಡಿಯೊ ಸಿಗ್ನಲ್‌ಗಳ ಮೂಲಕ ಸಾಧಿಸಲಾಗುತ್ತದೆ. ಭೂಮಿಯ ಮೇಲಿನ ವಿಶಾಲವಾದ ಆಂಟೆನಾಗಳಿಂದ ಕಳುಹಿಸಲಾಗುತ್ತದೆ ಮತ್ತು ಸ್ವೀಕರಿಸಲಾಗುತ್ತದೆ. ಆದರೆ ಅವುಗಳ ಬ್ಯಾಂಡ್‌ವಿಡ್ತ್ ಸೀಮಿತವಾಗಿದೆ. ಈ ಪ್ರಯೋಗದೊಂದಿಗೆ, ರೇಡಿಯೊ ತರಂಗಗಳ ಬದಲಿಗೆ ಬೆಳಕನ್ನು ಬಳಸಿಕೊಂಡು ಭೂಮಿ ಮತ್ತು ಬಾಹ್ಯಾಕಾಶ ನೌಕೆಗಳ ನಡುವೆ ಮಾಹಿತಿಯನ್ನು ವಿನಿಮಯ ಮಾಡಲು ಲೇಸರ್‌ಗಳನ್ನು ಬಳಸಲು NASA ಆಶಿಸಿದೆ. ಈ ವ್ಯವಸ್ಥೆಯು ಪ್ರಸ್ತುತ ಬಾಹ್ಯಾಕಾಶ ಸಂವಹನ ಸಾಧನಗಳಿಗಿಂತ 10ರಿಂದ 100 ಪಟ್ಟು ವೇಗವಾಗಿ ಮಾಹಿತಿಯನ್ನು ಪ್ರಸಾರ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ವಿಸ್ತಾರ Explainer: ಬಾಹ್ಯಾಕಾಶದಲ್ಲಿ ಚೀನಾದ ಸೇನಾ ನೆಲೆ; ಇನ್ನು ಆಕಾಶದಿಂದಲೇ ಎರಗಲಿದೆ ಹೈಪರ್‌ಸಾನಿಕ್ ಕ್ಷಿಪಣಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

WhatsApp AI: WhatsAppಗೂ ಬಂತು ಎಐ; ನಿಮ್ಮ ಪ್ರೊಫೈಲ್‌ ಫೋಟೊ ಇನ್ನು AI ಜನರೇಟೆಡ್!‌

WhatsApp AI: ವಾಟ್ಸ್‌ಆ್ಯಪ್‌ ಫೀಚರ್‌ಗಳ ಕುರಿತು ವಿಶ್ವಾಸಾರ್ಹ ಮಾಹಿತಿ ನೀಡುವ ಡಬ್ಲ್ಯೂಎ ಬೀಟಾ ಇನ್ಫೋ ಈ ಕುರಿತು ಮಾಹಿತಿ ನೀಡಿದೆ. ವಾಟ್ಸ್‌ಆ್ಯಪ್‌ ಬಳಕೆದಾರರು ಆ್ಯಪ್‌ನಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನದ ಮೂಲಕ ತಮ್ಮ ಪ್ರೊಫೈಲ್‌ ಫೋಟೊ ಸೆಟ್‌ ಮಾಡಬಹುದಾಗಿದೆ. ಹೊಸ ಫೀಚರ್‌ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

VISTARANEWS.COM


on

WhatsApp AI
Koo

ನವದೆಹಲಿ: ಮೆಟಾ ಒಡೆತನದ ವಾಟ್ಸ್‌ಆ್ಯಪ್‌ (WhatsApp) ನಿಯಮಿತವಾಗಿ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ನೂತನ ಅನುಭವ, ಸೌಕರ್ಯಗಳನ್ನು ನೀಡುತ್ತದೆ. ಈಗ ವಾಟ್ಸ್‌ಆ್ಯಪ್‌ ಮತ್ತೊಂದು ಫೀಚರ್‌ ಬಿಡುಗಡೆ ಮಾಡಲಿದ್ದು, ಗ್ರಾಹಕರ ಡಿಪಿ ಅಥವಾ ಪ್ರೊಫೈಲ್‌ ಫೋಟೊಗಳು (Profile Photo) ಇನ್ನು ಎಐ ಜನರೇಟೆಡ್‌ (ಕೃತಕ ಬುದ್ಧಿಮತ್ತೆ) (WhatsApp AI) ಆಗಲಿವೆ. ಇತ್ತೀಚೆಗಷ್ಟೇ ಎಐ ಸ್ಟಿಕ್ಕರ್‌ಗಳನ್ನು (ಎಮೋಜಿ) ಪರಿಚಯಿಸಿದ್ದ ವಾಟ್ಸ್‌ಆ್ಯಪ್‌ ಈಗ ಮತ್ತೊಂದು ಫೀಚರ್‌ ಮುಂದಿಡುತ್ತಿದೆ.

ವಾಟ್ಸ್‌ಆ್ಯಪ್‌ ಫೀಚರ್‌ಗಳ ಕುರಿತು ವಿಶ್ವಾಸಾರ್ಹ ಮಾಹಿತಿ ನೀಡುವ ಡಬ್ಲ್ಯೂಎ ಬೀಟಾ ಇನ್ಫೋ ಈ ಕುರಿತು ಮಾಹಿತಿ ನೀಡಿದೆ. ವಾಟ್ಸ್‌ಆ್ಯಪ್‌ ಬಳಕೆದಾರರು ಆ್ಯಪ್‌ನಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನದ ಮೂಲಕ ತಮ್ಮ ಪ್ರೊಫೈಲ್‌ ಫೋಟೊ ಸೆಟ್‌ ಮಾಡಬಹುದಾಗಿದೆ. ಐಎ ಆಧಾರಿತ, ಬಳಕೆದಾರರ ವ್ಯಕ್ತಿತ್ವ, ಆಸಕ್ತಿ ಅಥವಾ ಮನಸ್ಸಿನ ಸ್ಥಿತಿ (Mood) ಆಧಾರದ ಮೇಲೆ ಹೊಸ ಪ್ರೊಫೈಲ್‌ ಫೋಟೊ ಕ್ರಿಯೇಟ್‌ ಮಾಡಬಹುದಾಗಿದೆ ಎಂದು ಡಬ್ಲ್ಯೂಎ ಬೀಟಾ ಇನ್ಫೋ ಮಾಹಿತಿ ನೀಡಿದೆ.

employee attacked the boss and broke the iPhone for removing him from the WhatsApp group

ವಾಟ್ಸ್‌ಆ್ಯಪ್‌ ಈಗ ಬೀಟಾ ವರ್ಷನ್‌ನಲ್ಲಿ (ನಿಯಮಿತ ಬಳಕೆದಾರರಿಗೆ ಅಪ್‌ಡೇಟೆಡ್‌ ವರ್ಷನ್‌ ಆ್ಯಪ್‌ ಬಳಸಲು ಕೊಟ್ಟು, ಅವರ ಅಭಿಪ್ರಾಯ ಸಂಗ್ರಹಿಸುವುದು) ಅಪ್‌ಡೇಟ್‌ ಆಗಿರುವ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ. ಆ್ಯಂಡ್ರಾಯ್ಡ್‌ ಬಳಕೆದಾರರಿಗೆ ಹೊಸ ಫೀಚರ್‌ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಅನಗತ್ಯವಾದ, ಅನ್‌ರೀಡ್‌ (Unread) ಮೇಸೇಜ್‌ಗಳನ್ನು ಅಳಿಸಿ ಹಾಕುವುದು ಸೇರಿ ಹಲವು ಫೀಚರ್‌ಗಳನ್ನೂ ಶೀಘ್ರದಲ್ಲೇ ಪರಿಚಯಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಒರಿಜಿನಲ್‌ ಫೋಟೊ ಬೇಕಾಗಿಲ್ಲ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ವಾಟ್ಸ್‌ಆ್ಯಪ್‌ ಪ್ರೊಫೈಲ್‌ ಫೋಟೊ ಕ್ರಿಯೇಟ್‌ ಮಾಡಲು ಒರಿಜಿನಲ್‌ ಫೋಟೊಗಳನ್ನು ಬಳಸಬೇಕಿಲ್ಲ. ಆಯಾ ವ್ಯಕ್ತಿಯ ಮನಸ್ಥಿತಿ, ಖುಷಿ, ದುಃಖವನ್ನು ಅಭಿವ್ಯಕ್ತಪಡಿಸುವ ರೀತಿಯಲ್ಲಿ ಕೃತಕ ಬುದ್ಧಿಮತ್ತೆ ಮೂಲಕ ಪ್ರೊಫೈಲ್‌ ಫೋಟೊ ತಯಾರಿಸಬಹುದಾಗಿದೆ. ಹಾಗೆಯೇ, ಬಳಕೆದಾರರ ಖಾಸಗಿತನವನ್ನು ಕಾಪಾಡಲು ವಾಟ್ಸ್‌ಆ್ಯಪ್‌ ಆದ್ಯತೆ ನೀಡಿದೆ. ಯಾರದ್ದೋ ವ್ಯಕ್ತಿಯ ಒರಿಜಿನಲ್‌ ಫೋಟೊ ಬಳಸಿ, ಎಐ ಮೂಲಕ ಇಮೇಜ್‌ ಕ್ರಿಯೇಟ್‌ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದನ್ನು ನಿಗ್ರಹಿಸುವ ತಂತ್ರಜ್ಞಾನ ಹೊಂದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Fake News: ವಾಟ್ಸ್‌ಆ್ಯಪ್‌ನಲ್ಲಿ ಸಿಕ್ಕಿದ್ದೆಲ್ಲ ಫಾರ್ವರ್ಡ್‌ ಮಾಡಿದರೆ 3 ವರ್ಷ ಜೈಲು; ಹೊಸ ಕಾನೂನು ಬಗ್ಗೆ ಇರಲಿ ಎಚ್ಚರಿಕೆ

Continue Reading

ಆಟೋಮೊಬೈಲ್

Magnite GEZA CVT : ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ನಿಸ್ಸಾನ್

Magnite GEZA CVT: ಜಪಾನೀಸ್ ಥಿಯೇಟರ್ ಮತ್ತು ಅದರ ಸಂಗೀತದ ಥೀಮ್‌ಗಳಿಂದ ಸ್ಫೂರ್ತಿ ಪಡೆದಿರುವ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ನಲ್ಲಿ ಸಂಗೀತ ಪ್ರೇಮಿಗಳಿಗೆಂದೇ ವಿಶೇಷ ಪ್ಯಾಕೇಜ್ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಪ್ರೀಮಿಯಂ ಸ್ಪೀಕರ್ ಗಳನ್ನು ಹೊಂದಿರುವ ದೊಡ್ಡದಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್​ ಮೂಲಕ ಅದ್ಭುತ ಸಂಗೀತ ಅನುಭವ ಪಡೆಯಬಹುದು.

VISTARANEWS.COM


on

Nissan Magnite GEZA CVT
Koo

ಬೆಂಗಳೂರು : 2023ರ ಮ್ಯಾಗ್ನೈಟ್ ಗೆಝಾದ ಸ್ಪೆಷಲ್ ಎಡಿಷನ್ ನ ಯಶಸ್ಸಿನಿಂದ ಪ್ರೇರಣೆಗೊಂಡಿರುವ ನಿಸ್ಸಾನ್ ಮೋಟಾರ್ ಇಂಡಿಯಾ 9.84 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಹೆಚ್ಚು ಫೀಚರ್​ಗಳನ್ನು ಒಳಗೊಂಡಿರುವ ನಿಸ್ಸಾನ್ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್​ ಎಡಿಷನ್ (Magnite GEZA CVT) ಕಾರನ್ನು ಗುರುವಾರ ಬಿಡುಗಡೆ ಮಾಡಿದೆ. 2023ರ ಗೆಝಾ ಸ್ಷೆಷಲ್ ಎಡಿಷನ್ ಗೆ ಸಿಕ್ಕ ಪ್ರತಿಕ್ರಿಯೆ ಮತ್ತು ವ್ಯಾಪಕವಾದ ಗ್ರಾಹಕರ ಪ್ರತಿಕ್ರಿಯೆಯಿಂದ ಹರ್ಷಗೊಂಡು ಮ್ಯಾಗ್ನೈಟ್ ಗೆಝಾ ಸ್ಪೆಷಲ್ ಎಡಿಷನ್ ನ ಮೊದಲ ವಾರ್ಷಿಕೋತ್ಸವದಂದೇ ನಿಸ್ಸಾನ್ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ.

ಜಪಾನೀಸ್ ಥಿಯೇಟರ್ ಮತ್ತು ಅದರ ಸಂಗೀತದ ಥೀಮ್‌ಗಳಿಂದ ಸ್ಫೂರ್ತಿ ಪಡೆದಿರುವ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ನಲ್ಲಿ ಸಂಗೀತ ಪ್ರೇಮಿಗಳಿಗೆಂದೇ ವಿಶೇಷ ಪ್ಯಾಕೇಜ್ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಪ್ರೀಮಿಯಂ ಸ್ಪೀಕರ್ ಗಳನ್ನು ಹೊಂದಿರುವ ದೊಡ್ಡದಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್​ ಮೂಲಕ ಅದ್ಭುತ ಸಂಗೀತ ಅನುಭವ ಪಡೆಯಬಹುದು.

ಇದೇ ಮೊದಲ ಬಾರಿಗೆ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ನಲ್ಲಿ ಅತ್ಯಾಧುನಿಕ ಇನ್ಫೋಟೈನ್‌ಮೆಂಟ್ ಫೀಚರ್​​ ನೀಡಲಾಗುತ್ತಿದೆ. ಈ ಕಾರಣಕ್ಕೆ ಗ್ರಾಹಕರು ಮತ್ತಷ್ಟು ಖುಷಿ ಪಡಬಹುದಾಗಿದೆ. ವಿಶೇಷವಾಗಿ ಇದು ನಿಸ್ಸಾನ್‌ನ ಅತ್ಯಂತ ಸುಲಭವಾಗಿ ಕೈಗೆಟಕುವ ಬಿ ಎಸ್​ಯುವಿ (ಸಬ್​ ಕಾಂಪ್ಯಾಕ್ಟ್​​​) ವಿಭಾಗದ ಪ್ರೀಮಿಯಂ ಸಿವಿಟಿ ಟರ್ಬೊ ಎಂಜಿನ್ ಹೊದಿರುವ ಕಾರು ಎನಿಸಿಕೊಂಡಿದೆ. ಹೀಗಾಗಿ ಕೊಟ್ಟ ಹಣಕ್ಕೆ ತಕ್ಕ ಕಾರು ಎಂಬ ಖ್ಯಾತಿ ಪಡೆದುಕೊಂಡಿದೆ.

ಇದನ್ನೂ ಓದಿ: 2024 Maruti Swift : ಹಲವಾರು ಆ್ಯಕ್ಸೆಸರಿ ಪ್ಯಾಕ್​ನೊಂದಿಗೆ ಬಂದಿದೆ ಮಾರುತಿ ಸ್ವಿಫ್ಟ್​​ ಎಪಿಕ್​

ರೂ.9.84 ಲಕ್ಷ ಬೆಲೆಯಲ್ಲಿ ಪರಿಚಯಿಸಲಾಗಿರುವ ಈ ವೇರಿಯಂಟ್ ಈಗ ರೂ.10 ಲಕ್ಷದ ಕೆಳಗಿನ ಬೆಲೆಯಲ್ಲಿ ಲಭ್ಯವಾಗುವ ಬಿ-ಎಸ್ ಯು ವಿ ವಿಭಾಗದ ಕೈಗೆಟುವ ದರದ ಪ್ರೀಮಿಯಂ ಸಿವಿಟಿ ಟರ್ಬೋ ಕಾರು ಆಗಿದೆ. ಗೆಝಾ ಜಪಾನೀಸ್ ಥಿಯೇಟರ್‌ ಮತ್ತು ಅದರ ಸಂಗೀತದ ಥೀಮ್ ನಿಂದ ಸ್ಫೂರ್ತಿ ಪಡೆದಿದೆ ಹಾಗೂ ಸಿವಿಟಿ ಟರ್ಬೋಗೆ ತಕ್ಕಂತೆ ಸುಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. 22.86 ಸೆಂಮೀನ ಹೈ ರೆಸೆಲ್ಯೂಶನ್ ಟಚ್‌ಸ್ಕ್ರೀನ್, ಜೆಬಿಎಲ್ ಸ್ಪೀಕರ್‌ಗಳನ್ನು ನೀಡಲಾಗಿದೆ. ಆಂಡ್ರಾಯ್ಡ್ ಕಾರ್ ಪ್ಲೇ ಜೊತೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಗೆಝಾ ಆಪ್ ಆಧಾರಿತ ಆಂಬಿಯೆಂಟ್ ಲೈಟ್ ವ್ಯವಸ್ಥೆಯನ್ನು ಹೊಂದಿದ್ದು, ಹಲವಾರು ಬಣ್ಣಗಳು ಲಭ್ಯವಿದೆ.

ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ವೈಶಿಷ್ಟ್ಯಗಳು

  • 22.86 ಸೆಂಮೀನ ಹೈ-ರೆಸೆಲ್ಯೂಶನ್ ಟಚ್‌ಸ್ಕ್ರೀನ್
  • ವೈರ್‌ಲೆಸ್ ಸಂಪರ್ಕ ಹೊಂದಿರುವ ಆಂಡ್ರಾಯ್ಡ್ ಕಾರ್ ಪ್ಲೇ
  • ಪ್ರೀಮಿಯಂ ಜೆಬಿಎಲ್ ಸ್ಪೀಕರ್ ಸಿಸ್ಟಮ್
  • ಟ್ರಾಜೆಕ್ಟರಿ ಲೈನ್ ಹೊಂದಿರುವ ರೇರ್ ಕ್ಯಾಮೆರಾ
  • ನಿಸ್ಸಾನ್ ಆಪ್ ಆಧಾರಿತ ಆಂಬಿಯೆಂಟ್ ಲೈಟಿಂಗ್
  • ಐಚ್ಛಿಕವಾಗಿ ಬೀಜ್ ಬಣ್ಣದ ಪ್ರೀಮಿಯಂ ಸೀಟ್ ಅಪ್ ಹೋಲ್ ಸ್ಟರಿ
  • ವಿಶಿಷ್ಟವಾದ ಗೆಝಾ ಎಡಿಷನ್ ಬ್ಯಾಡ್ಜ್

ಇದು ನಿಸ್ಸಾನ್ ಮ್ಯಾಗ್ನೈಟ್ ಸಿವಿಟಿ ವೇರಿಯಂಟ್ ಗಳಲ್ಲಿಯೇ ಅತ್ಯಾಧುನಿಕ ಇನ್ಫೋಟೈನ್ ಮೆಂಟ್ ವ್ಯವಸ್ಥೆಯನ್ನು ಹೊಂದಿದೆ. ಅತ್ಯಾಧುನಿಕ ಇನ್ಫೋಟೈನ್ ಮೆಂಟ್ ವ್ಯವಸ್ಥೆಯನ್ನು ಬಯಸುವವರಿಗೆ ಎಚ್ ಆರ್ 10 ಟರ್ಬೋ ಸಿವಿಟಿ ವೇರಿಯಂಟ್ ಲಭ್ಯವಿದೆ. ಈ ಕಾರು ಬಿಡುಗಡೆ ಸಂದರ್ಭದಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸೌರಭ್ ವತ್ಸ ಹರ್ಷ ವ್ಯಕ್ತಪಡಿಸಿದ್ದಾರೆ .

Continue Reading

ಆಟೋಮೊಬೈಲ್

2024 Maruti Swift : ಹಲವಾರು ಆ್ಯಕ್ಸೆಸರಿ ಪ್ಯಾಕ್​ನೊಂದಿಗೆ ಬಂದಿದೆ ಮಾರುತಿ ಸ್ವಿಫ್ಟ್​​ ಎಪಿಕ್​

2024 Maruti Swift: ಹೊಸ ಸ್ವಿಫ್ಟ್‌ಗಾಗಿ ಎಪಿಕ್ ರೂಫ್ ಮತ್ತು ಬಾನೆಟ್ ಮೇಲೆ ರೇಸಿಂಗ್ ಸ್ಟ್ರೈಪ್‌ಗಳನ್ನು ಪಡೆಯುತ್ತದೆ. ಇಲ್ಲಿ ಕಾಣುವ ಬಿಳಿ ಸ್ವಿಫ್ಟ್ ಕಪ್ಪು ಪಟ್ಟಿಗಳನ್ನು ಪಡೆಯುತ್ತದೆ. ಈ ಪಟ್ಟೆಗಳು ಮುಂಭಾಗದ ಫೆಂಡರ್‌ಗಳಿಗೂ ವಿಸ್ತರಿಸುತ್ತವೆ. ಕಾರ್ ಮುಂಭಾಗದ ಗ್ರಿಲ್ ಮತ್ತು ಫಾಗ್ ಲ್ಯಾಂಪ್‌ಗಳಿಗೆ ಗ್ಲಾಸ್ ಕಪ್ಪು ಬಾಹ್ಯರೇಖೆಯನ್ನು ಪಡೆಯುತ್ತದೆ. ಫಾಗ್ ಲ್ಯಾಂಪ್‌ಗಳ ಪಕ್ಕದಲ್ಲಿ ಕ್ರೋಮ್ ಆಕ್ಸೆಂಟ್‌ಗಳಿವೆ.

VISTARANEWS.COM


on

2024 Maruti Swift
Koo

ಬೆಂಗಳೂರು: ಮಾರುತಿ ಸುಜುಕಿ ಕೆಲವು ವಾರಗಳ ಹಿಂದೆ ಭಾರತೀಯ ಮಾರುಕಟ್ಟೆ 2024ರ ಆವೃತ್ತಿಯ ಸ್ವಿಫ್ಟ್ ಕಾರನ್ನು (2024 Maruti Swift) ಬಿಡುಗಡೆ ಮಾಡಿತ್ತು. ಕಾರು ಈಗಾಗಲೇ ಡೀಲರ್‌ಶಿಪ್‌ಗಳನ್ನು ತಲುಪಿದೆ ಮತ್ತು ಡೆಲಿವರಿ ಸಹ ಪ್ರಾರಂಭವಾಗಿದೆ. ರಸ್ತೆಗೆ ಬಂದ ಕಾರುಗಳು ಆಫ್ಟರ್ ಮಾರ್ಕೆಟ್​ ಮಾಡಿಫಿಕೇಷನ್​ನೊಂದಿಗೆ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಮಾರುತಿ 2024 ಸ್ವಿಫ್ಟ್‌ ಲಾಂಚ್ ಮಾಡುವ ವೇಳೆ ಹಲವಾರು ಆ್ಯಕ್ಸೆಸರೀಸ್​ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. ಮಾರುತಿಯು ಬೇಸ್​ ವರ್ಷನ್ ಆಗಿರುವ ಎಲ್​ಎಕ್ಸ್​ಐಗೆ ಈ ಆ್ಯಕ್ಸೆಸರಿ ಪ್ಯಾಕ್ ಗಳನ್ನು ನೀಡಲಾಗಿದೆ. ಈ ಮಾದರಿನ್ನು ಎಪಿಕ್ ಎಡಿಷನ್ ಎಂದು ಕರೆಯಲಾಗಿದೆ.

ಹೊಸ ಸ್ವಿಫ್ಟ್‌ಗಾಗಿ ಎಪಿಕ್ ರೂಫ್ ಮತ್ತು ಬಾನೆಟ್ ಮೇಲೆ ರೇಸಿಂಗ್ ಸ್ಟ್ರೈಪ್‌ಗಳನ್ನು ಪಡೆಯುತ್ತದೆ. ಇಲ್ಲಿ ಕಾಣುವ ಬಿಳಿ ಸ್ವಿಫ್ಟ್ ಕಪ್ಪು ಪಟ್ಟಿಗಳನ್ನು ಪಡೆಯುತ್ತದೆ. ಈ ಪಟ್ಟೆಗಳು ಮುಂಭಾಗದ ಫೆಂಡರ್‌ಗಳಿಗೂ ವಿಸ್ತರಿಸುತ್ತವೆ. ಕಾರ್ ಮುಂಭಾಗದ ಗ್ರಿಲ್ ಮತ್ತು ಫಾಗ್ ಲ್ಯಾಂಪ್‌ಗಳಿಗೆ ಗ್ಲಾಸ್ ಕಪ್ಪು ಬಾಹ್ಯರೇಖೆಯನ್ನು ಪಡೆಯುತ್ತದೆ. ಫಾಗ್ ಲ್ಯಾಂಪ್‌ಗಳ ಪಕ್ಕದಲ್ಲಿ ಕ್ರೋಮ್ ಆಕ್ಸೆಂಟ್‌ಗಳಿವೆ. ಮುಂಭಾಗದ ಫಾಕ್ಸ್ ಸ್ಕಿಡ್ ಪ್ಲೇಟ್ ಅಥವಾ ಬಂಪರ್‌ನ ಕೆಳಗಿನ ಭಾಗದಲ್ಲಿ ನಾವು ಕ್ರೋಮ್ ಸ್ಟ್ರಿಪ್ ನೀಡಲಾಗಿದೆ.

ಸೈಡ್ ಪ್ರೊಫೈಲ್‌ನಲ್ಲಿ, 14-ಇಂಚಿನ ಸ್ಟೀಲ್ ರಿಮ್‌ಗಳಿಗಾಗಿ ಕಾರು ಬ್ಲ್ಯಾಕ್ಡ್-ಔಟ್ ವೀಲ್ ಕ್ಯಾಪ್‌ಗಳನ್ನು ಪಡೆಯುತ್ತದೆ. ಇಂಡಿಕೇಟರ್​ಗಳು ಲೋ ವೇರಿಯೆಂಟ್​ಗಳಿಗೆ ಫೆಂಡರ್‌ನಲ್ಲಿವೆ. ORVM ಗಳು ಗ್ರಾಫಿಕ್ಸ್‌ನೊಂದಿಗೆ ಮಿಂಚುವ ಕಪ್ಪು ಕವರ್‌ಗಳನ್ನು ಪಡೆಯುತ್ತವೆ. ವಿಂಡೋ ಕ್ರೋಮ್ ಅಲಂಕರಿಸಲು ಮತ್ತು ಡೋರ್ ವಿಸರ್ ಕೂಡ ನೀಡಲಾಗಿದೆ. ಕಾರು ಗ್ಲಾಸ್ ಬ್ಲ್ಯಾಕ್ ಡೋರ್ ಬೀಡಿಂಗ್ ಮತ್ತು ಕ್ರೋಮ್ ಡೋರ್ ಹ್ಯಾಂಡಲ್ ಕವರ್‌ಗಳನ್ನು ಪಡೆಯುತ್ತದೆ.

ಹಿಂಬದಿ ಹೇಗಿದೆ?

ಹಿಂಭಾಗದಲ್ಲಿ, ಫಾಗ್​​ LED ಟೈಲ್ ಲ್ಯಾಂಪ್‌ಗಳು ಯಾವುದೇ ಇತರ ಆವೃತ್ತಿಗಳಂತೆಯೇ ಇರುತ್ತವೆ. ಆದಾಗ್ಯೂ, ಕಾರು ಟೈಲ್‌ಗೇಟ್‌ನಲ್ಲಿ ಕ್ರೋಮ್ ಅಪ್ಲಿಕ್ ಅನ್ನು ಮತ್ತು ಹಿಂಭಾಗದ ಬಂಪರ್‌ನಲ್ಲಿ ಕ್ರೋಮ್ ಪಡೆಯುತ್ತದೆ. ಹಿಂಬದಿಯ ವಿಂಡ್‌ಸ್ಕ್ರೀನ್‌ನ ಕೆಳಗಿನ ಭಾಗದಲ್ಲಿ ಕ್ರೋಮ್ ನೀಡಿದ್ದಅರೆ. ಹೊಳಪುಳ್ಳ ಕಪ್ಪು ರೂರ್ಫರ್ -ಮೌಂಟೆಡ್ ಸ್ಪಾಯ್ಲರ್ ಅನ್ನು ಸಹ ಇಲ್ಲಿ ಕಾರಿನ ಮೇಲೆ ಕಾಣಬಹುದು.

ಇದನ್ನೂ ಓದಿ: 2024 Bajaj Pulsar F250 : ಬೆಲೆ ಏರಿಕೆ ಮಾಡದೇ ಹೊಸ ಪಲ್ಸರ್​ 250 ರಸ್ತೆಗಿಳಿಸಲಿದೆ ಬಜಾಜ್​​

ಇಂಟೀರಿಯರ್​

ಬೇಸ್​ ವೇರಿಯೆಂಟ್​ ಪಾರ್ಸೆಲ್ ಟ್ರೇನೊಂದಿಗೆ ಬರುವುದಿಲ್ಲ, ಆದರೆ ಅಗತ್ಯವಿದ್ದರೆ ಅದನ್ನು ಆ್ಯಕ್ಸೆಸರಿಯಾಗಿ ಖರೀದಿಸಬಹುದು. ಬಾಗಿಲಿನ ಮೇಲೆ ಯಾವುದೇ ವರ್ಣರಂಜಿತ ಟ್ರಿಮ್‌ಗಳು ಲಭ್ಯವಿಲ್ಲ. ಎಪಿಕ್ ಆವೃತ್ತಿಯು ವಿಂಡೋ ಶೇರ್​ ಪಡೆಯುತ್ತದೆ. ಇದನ್ನು ಹೊರತುಪಡಿಸಿ, ಕಾರು ಸ್ವಿಫ್ಟ್‌ಗೆ ಹೊಂದಿಕೆಯಾಗುವ ಸೀಟ್ ಕವರ್‌ಗಳನ್ನು ಪಡೆಯುತ್ತದೆ. ಇದಕ್ಕೆ ಆಫ್ಟರ್​ ಮಾರ್ಕೇಟ್​​ ಸೀಟ್ ಕವರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಏಕೆಂದರೆ ಹ್ಯಾಚ್‌ಬ್ಯಾಕ್ ಈಗ ಫ್ಯಾಕ್ಟರಿಯಿಂದಲೇ 6 ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ.

ಎಪಿಕ್ ಎಡಿಷನ್​ನಲ್ಲಿ ಸ್ಟೀರಿಂಗ್ ಕವರ್ ಇದೆ. ಮತ್ತು ಇದು 7-ಇಂಚಿನ ಬೇಸಿಕ್​ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ 4-ಸ್ಪೀಕರ್ ಸಿಸ್ಟಮ್ ಅನ್ನು ಸಹ ನೀಡುತ್ತದೆ. ಬೇಸ್​​ ವೇರಿಯೆಂಟ್​ ಯಾವುದೇ ರೀತಿಯ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೀಡುವುದಿಲ್ಲ. ಇದು ಪ್ಯಾಕೇಜ್‌ನ ಭಾಗವಾಗಿದೆ.

67 ಸಾವಿರ ರೂಪಾಯಿ ಹೆಚ್ಚು

ಮೇಲಿನ ಎಲ್ಲಾ ಬಿಡಿಭಾಗಗಳೊಂದಿಗೆ ಸ್ವಿಫ್ಟ್‌ನ ಬೇಸ್ ವರ್ಷನ್​ ಕಾರನ್ನು ಟಾಪ್ ವರ್ಷನ್​ ರೀತಿ ಕಾಣುವಂತೆ ಪರಿವರ್ತಿಸಬಹುದು. ಈ ಎಪಿಕ್ ಆವೃತ್ತಿಯ ಆಕ್ಸೆಸರಿ ಪ್ಯಾಕ್ ಅನ್ನು ಖರೀದಿಸಲು ಆಸಕ್ತಿ ಹೊಂದಿದ್ದರೆ, 67,000 ರೂಪಾಯಿ ಸ್ವಲ್ಪ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.

ಹೊಸ ಪೀಳಿಗೆಯ ಸ್ವಿಫ್ಟ್ ಹೊಚ್ಚ ಹೊಸ 1.2-ಲೀಟರ್, 3-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್​​ ಪೆಟ್ರೋಲ್ ಎಂಜಿನ್‌ನಿಂದ ಬರುತ್ತದೆ. ಅದು 82 Ps ಮತ್ತು 112 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹ್ಯಾಚ್‌ಬ್ಯಾಕ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ.

Continue Reading

ಸಿನಿಮಾ

CGI Technology In Film: ʼವೆಸ್ಟ್‌ವರ್ಲ್ಡ್‌ʼನಿಂದ ʼಅವತಾರ್‌ʼ ಚಿತ್ರದವರೆಗೆ ಸಿಜಿಐ ತಂತ್ರಜ್ಞಾನದ ರೋಚಕ ಹಾದಿ! ವಿಡಿಯೊಗಳಿವೆ

ಹೊಸ ತಂತ್ರಜ್ಞಾನಗಳು, ಆವಿಷ್ಕಾರಗಳು ಚಲನಚಿತ್ರ ಕ್ಷೇತ್ರದಲ್ಲೂ ಸಾಕಷ್ಟು ನಡೆದಿದೆ. ಇದರಲ್ಲಿ ಸಿಜಿಐ (CGI Technology In Film) ಕೂಡ ಒಂದು. 1970ರ ದಶಕದ ಆರಂಭದ ದಿನಗಳಿಂದಲೂ ಕಂಪ್ಯೂಟರ್ ರಚಿತ ಚಿತ್ರಣ (CGI- computer generated imagery) ಸಾಕಷ್ಟು ಪ್ರಯೋಗಗಳಿಗೆ ಒಳಗಾಗಿದೆ. ಇದು ಸಾಕಷ್ಟು ಅದ್ಭುತ ಚಲನಚಿತ್ರಗಳ ಮೇಲೆ ಪ್ರಭಾವವನ್ನು ಬೀರಿದೆ. ಕಥೆ ಹೇಳುವ ಶೈಲಿ ಮತ್ತು ದೃಶ್ಯ ಸಂಯೋಜನೆಯ ಗಡಿಗಳನ್ನು ವಿಸ್ತರಿಸಿದೆ. ಚಲನಚಿತ್ರ ರಂಗದಲ್ಲಿ ಸಿಜಿಐ ನ ಮೈಲುಗಲ್ಲು ಹೇಗಿತ್ತು ಎನ್ನುವ ಕಿರು ನೋಟ ಇಲ್ಲಿದೆ.

VISTARANEWS.COM


on

By

CGI Technology In Film
Koo

ಹಿಂದಿನ ದಿನಗಳಲ್ಲಿ ಚಲನಚಿತ್ರಗಳಲ್ಲಿ (film) ಒಂದು ವಿಶೇಷ ಸನ್ನಿವೇಶವನ್ನು ಚಿತ್ರಿಸಬೇಕಾದರೆ ಸೆಟ್‌ಗಳ ನಿರ್ಮಾಣಕ್ಕೆ ನಿರ್ಮಾಪಕರು (filmmakers), ಕೆಮರಾಮೆನ್‌ಗಳು (camera men) ಸಾಕಷ್ಟು ಕಷ್ಟಪಡುತ್ತಿದ್ದರು. ಆದರೆ ಈಗ ಎಲ್ಲವೂ ಕಂಪ್ಯೂಟರ್ ರಚಿತ ಚಿತ್ರಣ (CGI- computer generated imagery) ತಂತ್ರಜ್ಞಾನದ (CGI Technology In Film) ಮೂಲಕ ನಡೆದುಹೋಗುತ್ತದೆ. ಇದೀಗ ʼಮುಂಜ್ಯಾʼ ಎಂಬ ಭಾರತದ ಚಿತ್ರದಲ್ಲಿ ಈ ತಂತ್ರಜ್ಞಾನ ಬಳಸಲಾಗುತ್ತಿದೆ. ʼಮುಂಜ್ಯಾʼ ಭಾರತದ ಮೊದಲ CGI ಚಿತ್ರ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನದ ಹಿನ್ನೋಟ ಇಲ್ಲಿ ಕೊಡಲಾಗಿದೆ.

ಸಿನಿಮಾ ಜಗತ್ತಿನಲ್ಲಿ ಸಿಜಿಐಯ ವಿಕಾಸ ಒಂದು ಪ್ರಮುಖ ಮೈಲುಗಲ್ಲು ಎಂದರೆ ತಪ್ಪಾಗಲಾರದು. ಇದು ಸಿನಿಮಾದ ಭವಿಷ್ಯವನ್ನೇ ಬದಲಾಯಿಸಿತ್ತು. ಹಿಂದೆ ಚಲನಚಿತ್ರ ನಿರ್ಮಾಪಕರು ಪ್ರೇಕ್ಷಕರ ಗ್ರಹಿಕೆಯನ್ನು ರೂಪಿಸಲು ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದರು ಜೊತೆಗೆ ಆಪ್ಟಿಕಲ್ ತಂತ್ರಗಳನ್ನು ಅವಲಂಬಿಸಿದ್ದರು. ಕೆಮರಾ ಕೋನಗಳು, ಲೆನ್ಸ್ ಆಯ್ಕೆ ಮತ್ತು ವಿಸ್ತಾರವಾಗಿ ವಿನ್ಯಾಸಗೊಳಿಸಿದ ಸೆಟ್‌ ಗಳ ತಂತ್ರಗಳನ್ನು ಬಳಸುತ್ತಿದ್ದರು. ಹಸಿರು ಮತ್ತು ವಾಲ್ಯೂಮೆಟ್ರಿಕ್ ಎಲ್ಇಡಿ ಪರದೆಯನ್ನು ಬಳಸಿ ಹಿಂದೆ ಸೆಟ್ ವಿಸ್ತರಣೆಗಳನ್ನು ಕೈಯಿಂದ ನಿಖರವಾಗಿ ಚಿತ್ರಿಸಲಾಗುತ್ತಿತ್ತು.

ಈ ವಿಧಾನಕ್ಕೆ ಈಗ ಡಿಜಿಟಲ್ ಸ್ಪರ್ಶ ಸಿಕ್ಕಿದೆ. ಇಲ್ಲಿ ಕಂಪ್ಯೂಟರ್‌ಗಳು ಮತ್ತು ವಿವಿಧ ಸಾಫ್ಟ್‌ವೇರ್‌ಗಳು ಊಹಿಸುವ ಯಾವುದೇ ವಿನ್ಯಾಸವನ್ನು ರಚಿಸಲು ಇದು ಸಹಾಯ ಮಾಡುತ್ತದೆ. ಡಿಜಿಟಲ್ ಸೃಜನಶೀಲತೆಯೆಡೆಗಿನ ಈ ಬದಲಾವಣೆಯು ಸಿಜಿಐ ತಂತ್ರಜ್ಞಾನದ ಪ್ರಗತಿ ವೇಗವನ್ನು ಹೆಚ್ಚಿಸಿತ್ತು.


ಕಂಪ್ಯೂಟರ್ ಗ್ರಾಫಿಕ್ಸ್ ಬಳಸಿ ಈಗಾಗಲೇ ಹಲವಾರು ಚಿತ್ರಗಳನ್ನು ನಿರ್ಮಿಸಲಾಗಿದೆ. ಉದಾಹರಣೆಗೆ ಮಾರ್ವೆಲ್‌ನ ದಿ ಅವೆಂಜರ್ಸ್‌ನಲ್ಲಿ ಮಾರ್ಕ್ ರುಫಲೋ ಧರಿಸಿರುವ ಸೂಟ್ ಮತ್ತು ಸುತ್ತಲಿನ ದೃಶ್ಯಗಳಿಗೆ ಮತ್ತೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ.

ಸಿಜಿಐಯ ಮೊದಲ ಪ್ರಯೋಗ ಯಾವಾಗ?

ಸಿಜಿಐ ಅನ್ನು ಆಧುನಿಕ ಚಲನಚಿತ್ರಗಳಲ್ಲಿ ಮಾತ್ರ ನಾವು ಗಮನಿಸಿದ್ದೇವೆ. ಆದರೆ ಇದು 2000 ರ ದಶಕದಿಂದ ಹಾಲಿವುಡ್‌ನ ಚಿತ್ರೀಕರಣದಲ್ಲಿ ಬಳಕೆಯಾಗುತ್ತಿದೆ. ಕಂಪ್ಯೂಟರ್ ರಚಿತ ಚಿತ್ರಣ 1973ರ ವೆಸ್ಟ್‌ವರ್ಲ್ಡ್ ಮತ್ತು 1977ರ ಸ್ಟಾರ್ ವಾರ್ಸ್‌ನಲ್ಲೂ ಮಾಡಲಾಗಿದೆ.

ವೆಸ್ಟ್‌ವರ್ಲ್ಡ್ ( 1973)

ವೆಸ್ಟ್‌ವರ್ಲ್ಡ್ ಚಲನಚಿತ್ರದಲ್ಲಿ ಸಿಜಿಐ ಸಂಕ್ಷಿಪ್ತವಾಗಿ ಸರಿಸುಮಾರು 10 ಸೆಕೆಂಡ್ ನಷ್ಟೇ ಬಳಕೆ ಮಾಡಲಾಗಿದೆ. ಚಿತ್ರದಲ್ಲಿ ಇದು ಬಣ್ಣಗಳನ್ನು ಬದಲಾಯಿಸುವುದು, ಸಂಕುಚಿತಗೊಳಿಸುವುದು ಮತ್ತು ಚಿತ್ರಣವನ್ನು ವಿಸ್ತರಿಸುವುದು ಸೇರಿದೆ.


ಸ್ಟಾರ್ ವಾರ್ಸ್ (1977)

ಇದರಲ್ಲಿ ಚಿಕಣಿ ಮಾದರಿಗಳು ಮತ್ತು ಬೆಳಕಿನ ತಂತ್ರಗಳ ಮಿಶ್ರಣವನ್ನು ಮಾಡಲಾಗಿದೆ. ಚಿತ್ರದ ಪ್ರಮುಖ ಕ್ಷಣವೊಂದರಲ್ಲಿ ಲ್ಯೂಕ್ ಸ್ಕೈವಾಕರ್ ಮತ್ತು ಇತರ ಎಕ್ಸ್-ವಿಂಗ್ ಪೈಲಟ್‌ಗಳು ಡೆತ್ ಸ್ಟಾರ್‌ನ ಮೇಲೆ ತಮ್ಮ ಆಕ್ರಮಣಕ್ಕೆ ತಯಾರಿ ನಡೆಸುತ್ತಿರುವಾಗ ಇದನ್ನು ಪ್ರಯೋಗಿಸಲಾಗಿದೆ. ಇದರಲ್ಲಿ 3ಡಿ ಯುದ್ಧತಂತ್ರದ ನಕ್ಷೆಯನ್ನು ತೋರಿಸಲಾಗಿದೆ. ಇದನ್ನು ಇಲಿನಾಯ್ಸ್ ವಿಶ್ವವಿದ್ಯಾಲಯವು ಚಿಕಾಗೋದ ಎಲೆಕ್ಟ್ರಾನಿಕ್ ದೃಶ್ಯೀಕರಣ ಪ್ರಯೋಗಾಲಯ ತಂಡದೊಂದಿಗೆ ಅಭಿವೃದ್ಧಿಪಡಿಸಿದೆ.


ಸಿಜಿಐನ ಸಂಪೂರ್ಣ ಬಳಕೆ

ಸಂಪೂರ್ಣವಾಗಿ ಸಿಜಿಐ ಪಾತ್ರವನ್ನು ಸ್ಟಾರ್ ವಾರ್ಸ್ ಮತ್ತೊಮ್ಮೆ ಪರಿಚಯಿಸಿದ್ದು 1999ರ ಸ್ಟಾರ್ ವಾರ್ಸ್ ಸಂಚಿಕೆ 1: ದಿ ಫ್ಯಾಂಟಮ್ ಮೆನೇಸ್‌ನಲ್ಲಿ ಜಾರ್ ಜಾರ್ ಬಿಂಕ್ಸ್ ಮೂಲಕ.

ಸ್ಟಾರ್ ವಾರ್ಸ್: ಎ ನ್ಯೂ ಹೋಪ್ (1977)

1977ರಲ್ಲಿ ಬಿಡುಗಡೆಯಾದ ಜಾರ್ಜ್ ಲ್ಯೂಕಾಸ್‌ನ ಸ್ಟಾರ್ ವಾರ್ಸ್: ಎ ನ್ಯೂ ಹೋಪ್‌ ಪ್ರಾಯೋಗಿಕ ಮತ್ತು ಚಿಕಣಿ ಪರಿಣಾಮಗಳೊಂದಿಗೆ ಬೆರೆಸಿದ ಸಿಜಿಐ ಅಂಶಗಳ ಮನಮುಟ್ಟುವ ಬಳಕೆಯ ಮೂಲಕ ಚಲನಚಿತ್ರ ನಿರ್ಮಾಣದ ಹೊಸ ಯುಗವನ್ನು ಪ್ರಾರಂಭಿಸಿತು. 80ರ ದಶಕದಲ್ಲಿ ಇದು ಟ್ರಾನ್, ಪ್ರಿಡೇಟರ್, ಸೂಪರ್‌ಮ್ಯಾನ್, ಇ.ಟಿ. ಮತ್ತು ಏಲಿಯನ್ಸ್‌ನಂತಹ ಚಲನಚಿತ್ರಗಳ ಮೇಲೆ ಇದು ಪ್ರಭಾವ ಬೀರಿತು.


ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ (1991)

ಹೆಚ್ಚಿನ ಚಲನಚಿತ್ರ ಶಾಲೆಗಳಲ್ಲಿ ಒಂದು ಸಾಮಾನ್ಯ ಮಾತು ಇದೆ. ಸ್ಟಾರ್ ವಾರ್ಸ್ ಆಟವನ್ನು ಪ್ರಾರಂಭಿಸಿತು ಮತ್ತು ನಂತರ ಜುರಾಸಿಕ್ ಪಾರ್ಕ್ ಅದನ್ನು ಬದಲಾಯಿಸಿತು. ಇದಕ್ಕೆ ಸರಿಯಾದ ಒಂದು ಚಿತ್ರ ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ. ಈ ಚಿತ್ರದಲ್ಲಿ ಸಿಜಿಐ ಬಳಕೆಯಲ್ಲಿ ಇದು ಒಂದು ಅತ್ಯಂತ ಪ್ರಭಾವಶಾಲಿ ಚಲನಚಿತ್ರ. ಯಾಕೆಂದರೆ ಇಲ್ಲಿ ಖಳನಾಯಕನನ್ನು ಸಿಜಿಐ ಮೂಲಕ ಸಂಪೂರ್ಣ ಲಿಕ್ವಿಡ್ ಮೆಟಲ್ ಪಾತ್ರದಲ್ಲಿ ರಚಿಸಲಾಗಿದೆ. ಈ ಮೂಲಕ ಇದು ಯಾವುದೇ ಆಕಾರವನ್ನು ಮಾರ್ಫ್ ಮಾಡಬಹುದು ಎಂಬುದನ್ನು ನಿರೂಪಿಸಿತ್ತು.


ಜುರಾಸಿಕ್ ಪಾರ್ಕ್ (1995)

ಜುರಾಸಿಕ್ ಪಾರ್ಕ್ ಒಂದು ಬ್ಲಾಕ್ಬಸ್ಟರ್ ಚಿತ್ರ. ಇದು ಸಿಜಿಐ ಇತಿಹಾಸದಲ್ಲೊಂದು ಮೈಲುಗಲ್ಲು ಸ್ಥಾಪಿಸಿತ್ತು. ಇದರಲ್ಲಿ ಡೈನೋಸಾರ್‌ಗಳು ಕಲಾವಿದರೊಂದಿಗೆ ಸಂವಾದ ನಡೆಸುವುದನ್ನು ಕಾಣಬಹುದು. ಇದರಲ್ಲಿ ಮಾನವನ ಪಕ್ಕದಲ್ಲಿ ಡೈನೋಸಾರ್ ತಲೆಯ ಕ್ಲೋಸ್-ಅಪ್ ಅಗತ್ಯವಿರುವಾಗ ಪ್ರಾಯೋಗಿಕ ಡೈನೋಸಾರ್ ಮಾದರಿಯನ್ನು ಬಳಸಿದ್ದರೆ ದೂರದ ಶಾಟ್ ಗಳಿಗಾಗಿ ಡೈನೋಸಾರ್‌ಗಳ ಸಿಜಿಐ ಆವೃತ್ತಿಗಳನ್ನು ಬಳಸಲಾಗಿತ್ತು.


ದಿ ಮ್ಯಾಟ್ರಿಕ್ಸ್ (1999)

ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ ದೃಶ್ಯ ದಿ ಮ್ಯಾಟ್ರಿಕ್ಸ್ ಚಿತ್ರದ ತುಣುಕು ಚಿತ್ರ ನೋಡಿದವರೆಲ್ಲರಿಗೂ ನೆನಪಿರಬಹುದು. 360 ಡಿಗ್ರಿ ಕ್ಯಾಮರಾ ರಿಗ್‌ನ ಬಳಕೆ, ಮಧ್ಯದಲ್ಲಿ ಕೀನು ರೀವ್ಸ್‌ನ ಪ್ರತ್ಯೇಕ ಫೋಟೋಗಳನ್ನು ತೆಗೆಯುವ ಮೂಲಕ ನಟರು ಮತ್ತು ಸಿಜಿಐ ಒಟ್ಟಿಗೆ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಈ ಚಿತ್ರ ತೋರಿಸಿಕೊಟ್ಟಿದೆ. ಸಿಜಿಐ ಅನ್ನು ದೋಷರಹಿತವಾಗಿ ಕಾರ್ಯಗತಗೊಳಿಸಿದ ಕೀರ್ತಿ ಈ ಚಿತ್ರ ತಂಡದ್ದು.


ಅವತಾರ್ (2009)

ಅವತಾರ್ ಚಿತ್ರದ ದೃಶ್ಯಾವಳಿಗಳು ಎಲ್ಲರ ಕಣ್ಣ ಮುಂದಿದೆ. ಇದರಲ್ಲಿ ಮೋಷನ್ ಕ್ಯಾಪ್ಚರ್ ಮತ್ತು ಸಿಜಿಐ ಸಂಪೂರ್ಣ ಮಿಶ್ರಣವಾಗಿತ್ತು.ಇದರಲ್ಲಿ ಕ್ಯಾಮರಾಗಳನ್ನು ಬಳಸಿಕೊಂಡು ನಟರ ಹೆಚ್ಚು ವಿವರವಾದ ಫೇಸ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಆ ಡೇಟಾವನ್ನು ಬಳಿಕ ಕಂಪ್ಯೂಟರ್ ರಚಿತ ಅಕ್ಷರ ಮಾದರಿಗಳಿಗೆ ವರ್ಗಾಯಿಸುತ್ತದೆ. ಸಂಪೂರ್ಣ ಮೂರು ಗಂಟೆಗಳ ಚಿತ್ರದಲ್ಲಿ ಶೇ. 60ರಷ್ಟನ್ನು ಸಿಜಿಐ ಮೂಲಕವೇ ಚಿತ್ರಣ ಮಾಡಲಾಗಿದೆ. ಈ ಚಿತ್ರವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ.

ಇನ್ಸೆಪ್ಶನ್ (2010)

ಕ್ರಿಸ್ಟೋಫರ್ ನೋಲನ್ ಅವರ ಇನ್ಸೆಪ್ಶನ್ ನಲ್ಲಿ ಸಿಜಿಐನೊಂದಿಗೆ ಸಂಕೀರ್ಣ ನಿರೂಪಣಾ ರಚನೆಯ ನವೀನ ಅಪ್ಲಿಕೇಶನ್‌ ಅನ್ನು ಬಳಸಲಾಗಿದೆ. ಇದು ಕನಸಿನ ಕುಶಲತೆಯ ಮೂಲಕ ಮಾನವ ಮನಸ್ಸಿನ ಆಳವನ್ನು ಪರಿಶೋಧಿಸುತ್ತದೆ. ವೀಕ್ಷಕರ ವಾಸ್ತವತೆಯ ಗ್ರಹಿಕೆಗೆ ಸವಾಲು ಹಾಕುವ ಈ ಚಿತ್ರ ಪ್ರೇಕ್ಷಕರನ್ನು ತನ್ನ ಕಥೆಯೊಳಗೆ ಲೀನ ವಾಗುವಂತೆ ಮಾಡುತ್ತದೆ.


ಅವತಾರ್: ದಿ ವೇ ಆಫ್ ವಾಟರ್ (2022)

ಜೇಮ್ಸ್ ಕ್ಯಾಮರೂನ್ ಅವರ ಅವತಾರ್‌ನ ಬಹುನಿರೀಕ್ಷಿತ ಮುಂದುವರಿದ ಭಾಗ ದಿ ವೇ ಆಫ್ ವಾಟರ್ ಸಿನಿಮೀಯ ತಂತ್ರಜ್ಞಾನ ಮತ್ತು ಕಥೆ ಹೇಳುವಿಕೆಯನ್ನು ಮೀರಿ ಮತ್ತಷ್ಟು ಅಭಿವೃದ್ಧಿ ಹೊಂದಿದೆ. ಅತ್ಯಾಧುನಿಕ ಸಿಜಿಐ ಮತ್ತು ಕಾರ್ಯಕ್ಷಮತೆ ಕ್ಯಾಪ್ಚರ್ ತಂತ್ರಜ್ಞಾನದ ಪ್ರಭಾವಶಾಲಿ ಪರಾಕಾಷ್ಠೆಯನ್ನು ಈ ಚಿತ್ರದಲ್ಲಿ ಕಾಣಬಹುದು.


ಸಿಜಿಐ ಪ್ರಭಾವ ಹೇಗಿದೆ?

ಇತ್ತೀಚಿನ ವರ್ಷಗಳಲ್ಲಿ ಸ್ಟುಡಿಯೋಗಳು ಮತ್ತು ಚಲನಚಿತ್ರ ನಿರ್ಮಾಪಕರು ಸಿಜಿಐ ಅನ್ನು ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಿಜಿಐ ಬಳಕೆಯಿಂದ ನಿಜವಾದ ಅನುಭವ, ಸಂತೃಪ್ತಿ ಕಲಾವಿದನಿಗೆ ಸಿಗುವುದಿಲ್ಲ. ಕಲಾವಿದರೊಬ್ಬರ ಪ್ರಕಾರ ಶೂಟಿಂಗ್ ವೇಳೆ ನಾನು ಜೆಟ್ ಗಳಲ್ಲಿ ಹಾರಲು ಬಯಸಿದರೆ ಸಿಜಿಐನಲ್ಲಿ ಜೆಟ್‌ಗಳೇ ಇರುವುದಿಲ್ಲ ಎನ್ನುತ್ತಾರೆ. ಈ ಹೇಳಿಕೆ ಚಿತ್ರರಂಗದ ಮಾರುಕಟ್ಟೆಯಲ್ಲಿ ಬಹುದೊಡ್ಡ ಪ್ರಭಾವವನ್ನು ಬೀರಿದೆ. ಯಾಕೆಂದರೆ ಚಿತ್ರಗಳಲ್ಲಿ ನೋಡುವ ದೃಶ್ಯಗಳು ಯಾವುದು ನಿಜವಲ್ಲ ಎಂದು ಪ್ರೇಕ್ಷಕರಿಗೆ ಗೊತ್ತಾದರೆ ಅವರು ಚಿತ್ರದ ಮೇಲಿನ ಆಸಕ್ತಿ ಕಳೆದುಕೊಳ್ಳಬಹುದು ಎನ್ನುವ ವಾದವೂ ಇದೆ.

ಇದನ್ನೂ ಓದಿ: Munjya Teaser: ʻಮುಂಜ್ಯಾʼ ಟೀಸರ್‌ ಔಟ್‌; ಇದು ಭಾರತದ ಮೊದಲ CGI ಚಿತ್ರ!

ಸಿಜಿಐನ ಭವಿಷ್ಯವೇನು?

ಸಿಜಿಐ ಭವಿಷ್ಯವು ಸ್ಟುಡಿಯೋದ ಮಿತಿಯಲ್ಲಿರುವುದು ಸ್ಪಷ್ಟ. ಚಿತ್ರೀಕರಣದಲ್ಲಿ ಈಗ ಅದ್ಧೂರಿ ಬಜೆಟ್‌ಗಳ ಯುಗವು ಕ್ಷೀಣಿಸುತ್ತಿದೆ. ಆದರೆ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ನೈಜ ಸಮಯದ ಫೋಟೊರಿಯಾಲಿಸ್ಟಿಕ್ ಹಿನ್ನೆಲೆಗಳನ್ನು ಪ್ರದರ್ಶಿಸುವ ಎಲ್ಇಡಿ ಪರದೆಗಳನ್ನು ಒಳಗೊಂಡಿರುವ ವರ್ಚುವಲ್ ಸೆಟ್ ಗಳ ಆಗಮನವು ಅಭೂತಪೂರ್ವ ಉನ್ನತ ಗುಣಮಟ್ಟದ ಸಿಜಿಐ ಯುಗವನ್ನು ಸೂಚಿಸುತ್ತದೆ.

ದಿ ಬ್ಯಾಟ್‌ಮ್ಯಾನ್, ಡ್ಯೂನ್ ಮತ್ತು ದಿ ಮ್ಯಾಂಡಲೋರಿಯನ್‌ನಂತಹ ಕೃತಿಗಳಲ್ಲಿ ಈ ನವೀನ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸುವ ಗ್ರೀಗ್ ಫ್ರೇಸರ್‌ನಂತಹ ಸಿನಿಮಾಟೋಗ್ರಾಫರ್‌ಗಳು ಮುಂಚೂಣಿಯಲ್ಲಿದ್ದಾರೆ.

Continue Reading
Advertisement
lok sabha election 2024 jaishankar rahul sonia murmu
ಪ್ರಮುಖ ಸುದ್ದಿ12 mins ago

Lok Sabha Election: ಮತ ಚಲಾಯಿಸಿದ ರಾಷ್ಟ್ರಪತಿ ಮುರ್ಮು, ಸೋನಿಯಾ, ರಾಹುಲ್;‌ ಮತಕ್ಕಾಗಿ ಸರ್ಟಿಫಿಕೇಟ್ ಪಡೆದ ಜೈಶಂಕರ್‌!

Konark Tourist Destination
ಪ್ರವಾಸ14 mins ago

Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

Karthi next film Suriya to produce Meiyazhagan
ಕಾಲಿವುಡ್23 mins ago

Karthi next film: ಇಂದು ನಟ ಕಾರ್ತಿ ಬರ್ತ್‌ಡೇ: ತಮ್ಮನ ಚಿತ್ರಕ್ಕೆ ಅಣ್ಣ ಸೂರ್ಯ ಬಂಡವಾಳ!

IPL 2024
ಕ್ರೀಡೆ23 mins ago

IPL 2024: ಐಪಿಎಲ್​ ಟ್ರೋಫಿಯಲ್ಲಿರುವ ಸಂಸ್ಕೃತ ಶ್ಲೋಕದ ಮೂಲ ಸಾರವೇನು?

Best Tourist Places In Tamilnadu
ಪ್ರವಾಸ41 mins ago

Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

rave party culprit with jagan mohan reddy
ಪ್ರಮುಖ ಸುದ್ದಿ48 mins ago

Rave Party: ರೇವ್‌ ಪಾರ್ಟಿ ಆರೋಪಿಗೆ ಆಂಧ್ರ ಸಿಎಂ ಜಗನ್‌ ಜೊತೆ ಸ್ನೇಹ!

IPL 2024 Prize money
ಕ್ರೀಡೆ1 hour ago

IPL 2024 Prize money: ಐಪಿಎಲ್​ ವಿನ್ನರ್​ಗೆ ಸಿಗುವ ಬಹುಮಾನ ಮೊತ್ತವೆಷ್ಟು? 4ನೇ ಸ್ಥಾನಿ ಆರ್​ಸಿಬಿಗೆ ಸಿಕ್ಕ ಹಣವೆಷ್ಟು?

South Indian Monsoon Destinations
ಪ್ರವಾಸ1 hour ago

South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

Kiccha Sudeep Max cinema Pre climax Photo leak
ಸ್ಯಾಂಡಲ್ ವುಡ್1 hour ago

Kiccha Sudeep: ʻಮ್ಯಾಕ್ಸ್ʼ ಪ್ರಿ- ಕ್ಲೈಮ್ಯಾಕ್ಸ್ ಫೋಟೊ ಲೀಕ್‌? ಬೆಂಕಿ ಬಿರುಗಾಳಿ ಅಂದ್ರು ಫ್ಯಾನ್ಸ್‌!

lok sabha election 2024 jaishankar mufti
Lok Sabha Election 20242 hours ago

Lok Sabha Election: 58 ಕ್ಷೇತ್ರಗಳಲ್ಲಿ 6ನೇ ಹಂತದ ಮತದಾನ ಆರಂಭ; ಜೈಶಂಕರ್‌ ಮತಗಟ್ಟೆ ಗೊಂದಲ, ಮುಫ್ತಿ ಪ್ರತಿಭಟನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌