Exit Polls Result 2023: ಬಿಜೆಪಿಗೆ ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣದಲ್ಲಿ ಕೈ ಮೇಲುಗೈ; ಎಂಪಿಯಲ್ಲಿ ಟೈಟ್ ಫೈಟ್ - Vistara News

ದೇಶ

Exit Polls Result 2023: ಬಿಜೆಪಿಗೆ ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣದಲ್ಲಿ ಕೈ ಮೇಲುಗೈ; ಎಂಪಿಯಲ್ಲಿ ಟೈಟ್ ಫೈಟ್

Exit Polls Result 2023: ಲೋಕಸಭೆ ಚುನಾವಣೆಯ ಸೆಮಿಫೈನಲ್‌ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದಿದ್ದು, ಎಕ್ಸಿಟ್‌ ಪೋಲ್ಸ್ ಪ್ರಕಟವಾಗಿವೆ.

VISTARANEWS.COM


on

Telangana, Chhattisgarh to Congress and BJP for Rajasthan Says Exit Polls Result 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 2024ರ ಲೋಕಸಭೆ ಚುನಾವಣೆಯ ಸೆಮಿಫೈನಲ್‌ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದಿದ್ದು, ಎಕ್ಸಿಟ್‌ ಪೋಲ್ಸ್ ಪ್ರಕಟವಾಗಿವೆ. ಮತಗಟ್ಟೆ ಸಮೀಕ್ಷೆಗಳ ಪ್ರಕಾರ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದ್ದರೆ, ತೆಲಂಗಾಣದ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರಕ್ಕೇರುವ ಸಾಧ್ಯತೆಗಳಿವೆ. ಮಧ್ಯ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಫೋಟೋ ಫಿನಿಶ್ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ. ಮಿಜೋರಾಮ್‌ನಲ್ಲಿ ಅತಂತ್ರ ವಿಧಾನಸಭೆಯನ್ನು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

230 ಕ್ಷೇತ್ರಗಳನ್ನು ಹೊಂದಿರುವ ಮಧ್ಯ ಪ್ರದೇಶದಲ್ಲಿ ಅಧಿಕಾರಕ್ಕೇರಲು 116 ಸ್ಥಾನಗಳು ಬೇಕು. ಆದರೆ, ಬಹುತೇಕ ಎಕ್ಸಿಟ್ ಪೋಲ್‌ಗಳು ಬಿಜೆಪಿ ಮತ್ತು ಕಾಂಗ್ರೆಸ್ ತುರುಸಿನ ಸ್ಪರ್ಧೆಯನ್ನು ನಿರೀಕ್ಷಿಸಿವೆ. ಹಾಗಾಗಿ, ರಿಸಲ್ಟ್ ಡೇ ದಿನ ಅನಿರೀಕ್ಷಿತ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ. ಹಾಗೆಯೇ, ಎಕ್ಸಿಟ್ ಪೋಲ್‌ ಪ್ರಕಾರ, ತೆಲಂಗಾಣ ಅಚ್ಚರಿಯ ಫಲಿತಾಂಶವನ್ನು ನೀಡಿದೆ. ಕಾಂಗ್ರೆಸ್ ಪುಟಿದೆದಿದ್ದು, ಬಿಆರ್‌ಎಸ್‌ಗೆ ಹಿನ್ನಡೆಯಾಗುತ್ತಿದೆ. ಕೆಲವು ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ಗೆ ಪೂರ್ಣ ಬಹುಮತ ಕೂಡ ದೊರೆಯಲಿದೆ. ತೆಲಂಗಾಣದಲ್ಲಿ 119 ಬಲಾಬಲ ಇದ್ದು, ಬಹುಮತಕ್ಕೆ 60 ಕ್ಷೇತ್ರಗಳನ್ನು ಗೆಲ್ಲಬೇಕು.

ಇನ್ನು ಛತ್ತೀಸ್‌ಗಢ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಕೆಲವು ಸಮೀಕ್ಷೆಗಳು ಬಿಜೆಪಿ-ಕಾಂಗ್ರೆಸ್ ಫೋಟೋ ಫಿನಿಶ್ ಫಲಿತಾಂಶವನ್ನು ಊಹಿಸಿವೆ. ಮತ್ತೆ ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಪೂರ್ಣ ಬಹುಮತ ನೀಡಿವೆ. ಛತ್ತೀಸ್‌ಗಢ 90 ಸ್ಥಾನಗಳನ್ನು ಹೊಂದಿದ್ದು, ಅಧಿಕಾರ ಪಡೆಯಲು 46 ಕ್ಷೇತ್ರಗಳನ್ನು ಗೆಲ್ಲಬೇಕು. 40 ಕ್ಷೇತ್ರಗಳನ್ನು ಹೊಂದಿರುವ ಮಿಜೋರಾಮ್‌ನಲ್ಲಿ ಅಧಿಕಾರ ಪಡೆಯಲು 21 ಕ್ಷೇತ್ರಗಳನ್ನು ಗೆಲ್ಲಬೇಕು. ಎಕ್ಸಿಟ್ ಪೋಲ್ ಪ್ರಕಾರ ಅತಂತ್ರ ವಿಧಾನಸಭೆ ಆಗುವ ನಿರೀಕ್ಷೆ ಇದೆ.

ವಿವಿಧ ಮತಗಟ್ಟೆ ಸಮೀಕ್ಷೆಗಳ ವಿವರ ಇಲ್ಲಿದೆ…

ಮಧ್ಯ ಪ್ರದೇಶ
ಒಟ್ಟು ಸ್ಥಾನ: 230, ಮ್ಯಾಜಿಕ್ ನಂಬರ್: 116

ಸಿಎನ್ಎನ್ ಎಕ್ಸಿಟ್ ಪೋಲ್ಸ್
ಬಿಜೆಪಿ-112
ಕಾಂಗ್ರೆಸ್-113
ಬಿಎಸ್ಪಿ-0

ರಿಪಬ್ಲಿಕ್ ಟಿವಿ
ಬಿಜೆಪಿ; 118-130
ಕಾಂಗ್ರೆಸ್; 97-107

ಟಿವಿ9 ಭರತವರ್ಷ
ಬಿಜೆಪಿ; 106-116
ಕಾಂಗ್ರೆಸ್;111-121

ರಾಜಸ್ಥಾನ
ಒಟ್ಟು ಸ್ಥಾನ: 200, ಮ್ಯಾಜಿಕ್ ನಂಬರ್: 101

ಸಿಎನ್ಎನ್ ಎಕ್ಸಿಟ್ ಪೋಲ್
ಬಿಜೆಪಿ- 111
ಕಾಂಗ್ರೆಸ್- 74
ಬಿಎಸ್ಪಿ- 0
ಇತರರು- 14

ಜನ್ ಕಿ ಬಾತ್
ಬಿಜೆಪಿ; 100-112
ಕಾಂಗ್ರೆಸ್; 62-85

ಟಿವಿ 9 ಭರತವರ್ಷ ಮತ್ತು ಪೋಲ್‌ಸ್ಟಾರ್ಟ್
ಬಿಜೆಪಿ;100-110
ಕಾಂಗ್ರೆಸ್; 90-100

ಛತ್ತೀಸ್‌ಗಢ
ಒಟ್ಟು ಕ್ಷೇತ್ರ: 90 ಮ್ಯಾಜಿಕ್ ನಂಬರ್: 46

ಸಿಎನ್ಎನ್
ಬಿಜೆಪಿ-40
ಕಾಂಗ್ರೆಸ್- 47
ಇತರರು-03

ಇಂಡಿಯಾ ಟುಡೇ
ಬಿಜೆಪಿ- 36-46
ಕಾಂಗ್ರೆಸ್- 40-50
ಇತರರು- 1-5

ಇಂಡಿಯಾ ಟಿವಿ-ಸಿಎನ್‌ಎಕ್ಸ್
ಬಿಜೆಪಿ-30-40
ಕಾಂಗ್ರೆಸ್-46-56

ಜನ್ ಕಿ ಬಾತ್
ಬಿಜೆಪಿ; 34-45
ಕಾಂಗ್ರೆಸ್: 42-53

ತೆಲಂಗಾಣ
ಒಟ್ಟು ಕ್ಷೇತ್ರ: 119, ಮ್ಯಾಜಿಕ್ ನಂಬರ್: 60

ಸಿಎನ್ಎನ್ ಎಕ್ಸಿಟ್ ಪೋಲ್
ಬಿಆರ್‌ಎಸ್-48
ಕಾಂಗ್ರೆಸ್- 56
ಬಿಜೆಪಿ-0
ಇತರರು-1

ಜನ್ ಕಿ ಬಾತ್
ಬಿಆರ್‌ಎಸ್- 45-55
ಕಾಂಗ್ರೆಸ್- 48-64
ಬಿಜೆಪಿ- 7-13
ಎಐಎಂಐಎಂ- 4-7

ಮಿಜೋರಾಮ್
ಒಟ್ಟು ಕ್ಷೇತ್ರ: 40, ಮ್ಯಾಜಿಕ್ ನಂಬರ್: 21

ಜನ್‌ ಕಿ ಬಾತ್:
ಎಂಎನ್‌ಪಿ-14
ಜೆಪಿಎಂ-15-25
ಕಾಂಗ್ರೆಸ್-5-9
ಬಿಜೆಪಿ-02

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ಪ್ರಜ್ವಲ್‌ ರೇವಣ್ಣ ಅಜ್ಞಾತವಾಸಕ್ಕೆ ಒಂದು ತಿಂಗಳು, ಎಲ್ಲಿದ್ದೀಯಪ್ಪಾ ಪ್ರಜ್ವಲ್?

Prajwal Revanna Case: ಏಪ್ರಿಲ್ 26ರಂದು ನಡೆದ ಎರಡನೇ ಹಂತದ ಮತದಾನ ಮುಗಿಸಿ ಪ್ರಜ್ವಲ್‌ ಮಾರನೇ ದಿನ ಮುಂಜಾನೆ ದೇಶ ಬಿಟ್ಟು ಎಸ್ಕೇಪ್ ಆಗಿದ್ದರು. ತಲೆ ಮರೆಸಿಕೊಂಡು ತಿಂಗಳು ಕಳೆದರೂ ಅವರ ಸುಳಿವು ಪತ್ತೆಯಾಗಿಲ್ಲ. ಒಂದು ತಿಂಗಳಿನಿಂದ ಎಸ್‌ಐಟಿಗೆ (SIT) ಚಳ್ಳೆ ಹಣ್ಣು ತಿನ್ನಿಸಿ ತಲೆ ಮರೆಸಿಕೊಂಡಿರುವ ಪ್ರಜ್ವಲ್‌ ವಿರುದ್ಧ ಮೂರು ಅತ್ಯಾಚಾರ ಆರೋಪ ಕೇಸ್‌ಗಳಿವೆ.

VISTARANEWS.COM


on

Prajwal Revanna Case Will SIT team go abroad for arrest Prajwal
Koo

ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ (pen drive case video viral) ಪ್ರಕರಣಕ್ಕೆ ಸಂಬಂಧಿಸಿ ತನಿಖೆಯಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಹಾರಿರುವ ಪ್ರಜ್ವಲ್ ರೇವಣ್ಣ ಅವರ ದೇಶಾಂತರ ವಾಸಕ್ಕೆ ಒಂದು ತಿಂಗಳು ಪೂರ್ಣವಾಗಿದೆ. ಇನ್ನೂ ಅವರು ದೇಶಕ್ಕೆ ಹಿಂದಿರುಗುವ ಯಾವ ಸುಳಿವನ್ನೂ ಕಾಣಿಸಿಲ್ಲ.

ಏಪ್ರಿಲ್ 26ರಂದು ನಡೆದ ಎರಡನೇ ಹಂತದ ಮತದಾನ ಮುಗಿಸಿ ಪ್ರಜ್ವಲ್‌ ಮಾರನೇ ದಿನ ಮುಂಜಾನೆ ದೇಶ ಬಿಟ್ಟು ಎಸ್ಕೇಪ್ ಆಗಿದ್ದರು. ತಲೆ ಮರೆಸಿಕೊಂಡು ತಿಂಗಳು ಕಳೆದರೂ ಅವರ ಸುಳಿವು ಪತ್ತೆಯಾಗಿಲ್ಲ. ಒಂದು ತಿಂಗಳಿನಿಂದ ಎಸ್‌ಐಟಿಗೆ (SIT) ಚಳ್ಳೆ ಹಣ್ಣು ತಿನ್ನಿಸಿ ತಲೆ ಮರೆಸಿಕೊಂಡಿರುವ ಪ್ರಜ್ವಲ್‌ ವಿರುದ್ಧ ಮೂರು ಅತ್ಯಾಚಾರ ಆರೋಪ ಕೇಸ್‌ಗಳಿವೆ.

ಮೂರು ಕೇಸ್ ದಾಖಲಾದರೂ ತಲೆ ಕೆಡಿಸಿಕೊಳ್ಳದ ಪ್ರಜ್ವಲ್ ತಂದೆ ಎಚ್‌.ಡಿ ರೇವಣ್ಣ (HD revanna) ಅವರ ಬಂಧನವಾದ್ರೂ ಹಿಂದಿರುಗಿಲ್ಲ. ಚಿಕ್ಕಪ್ಪ, ಮಾಜಿ ಸಿಎಂ‌ ಎಚ್‌.ಡಿ ಕುಮಾರಸ್ವಾಮಿ (HD Kumaraswami) ಮನವಿಗೂ ಡೋಂಟ್ ಕೇರ್ ಮಾಡಿದ್ದಾರೆ. ತಾತ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ (HD Deve gowda) ಎಚ್ಚರಿಕೆಗೂ ಸೊಪ್ಪುಹಾಕಿಲ್ಲ. ʼಕೂಡಲೇ ಹಿಂದಿರುಗಿ ಬಾರದಿದ್ದರೆ ಕುಟುಂಬದಲ್ಲಿ ಒಂಟಿಯಾಗಬೇಕಾಗುತ್ತದೆʼ ಎಂದು ದೇವೇಗೌಡರು ಎಚ್ಚರಿಸಿದ್ದರೂ ಪ್ರಜ್ವಲ್‌ ತುಟಿ ಪಿಟಕ್‌ ಎಂದಿಲ್ಲ.

ಪ್ರಜ್ವಲ್ ಎಲ್ಲಿದ್ದಾನೆಂಬ ಖಚಿತ ಮಾಹಿತಿ ಎಸ್ಐಟಿಗೆ ದೊರೆತಿಲ್ಲ. ಜರ್ಮನಿ, ದುಬೈ, ಹಂಗೇರಿ, ಇಂಗ್ಲೆಂಡ್ ಹೀಗೆ ಹಲವು ದೇಶಗಳಲ್ಲಿ ಓಡಾಡಿದ್ದಾರೆ ಎಂದು ಹೇಳಲಾಗಿದೆ. ಜರ್ಮನಿಯಿಂದ ಹಿಂದಿರುಗುವ ಟಿಕೆಟ್‌ ರಿಸರ್ವ್‌ ಮಾಡಿಸಿ ನಂತರ ಕೊನೆಯ ಕ್ಷಣದಲ್ಲಿ ರದ್ದುಪಡಿಸಿದ್ದು ಗೊತ್ತಾಗಿದೆ. ಪ್ರಜ್ವಲ್‌ ಎಲ್ಲಿದ್ದಾರೆ ಎಂಬ ಸುಳಿವು ಹೊಂದಿರಬಹುದಾದ ಭವಾನಿ ರೇವಣ್ಣ (Bhavani revanna) ಕೂಡ ವಿಚಾರಣೆಗೆ ಹಾಜರಾಗಿಲ್ಲ.

ಪ್ರಜ್ವಲ್ ಹೊಂದಿರುವ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದುಗೊಳಿಸಲು ಕೋರಿ ಕೇಂದ್ರ ವಿದೇಶಾಂಗ ಇಲಾಖೆಗೆ ರಾಜ್ಯ ಸರ್ಕಾರ ಎರಡೆರಡು ಸಲ ಪತ್ರ ಬರೆದಿದೆ. ಈ ವಾರ ಪಾಸ್‌ಪೋರ್ಟ್ ರದ್ದಾದರೆ ಪ್ರಜ್ವಲ್ ವಾಪಸ್ ಮರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹೀಗಾಗಿ ಕೇಂದ್ರ ಗೃಹ ಇಲಾಖೆ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

ಇನ್ನೊಂದು ಕಡೆ, ಪ್ರಜ್ವಲ್‌ನ ಕರೆಸಿ ಅಂತ ಪುತ್ರ ರೇವಣ್ಣಗೆ ದೇವೇಗೌಡರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ವಾರ್ನಿಂಗ್ ಬೆನ್ನಲ್ಲೇ ಪ್ರಜ್ವಲ್ ವಾಪಸ್ ಕರೆಸಲು ಕಸರತ್ತು ಜೋರಾಗಿದೆ. ಪ್ರಜ್ವಲ್ ಸಂಪರ್ಕಕ್ಕೆ ರೇವಣ್ಣ ಕುಟುಂಬಸ್ಥರು ಯತ್ನಿಸುತ್ತಿದ್ದು, ಪ್ರಜ್ವಲ್ ತಾಯಿ ಕಡೆಯ ಸಂಬಂಧಿಕರ ಮೂಲಕ ಹಾಗೂ ವಿದೇಶದಲ್ಲಿರುವ ಪ್ರಜ್ವಲ್ ಸ್ನೇಹಿತರ ಮೂಲಕವೂ ಸಂಪರ್ಕಕ್ಕೆ ತೀವ್ರ ಪ್ರಯತ್ನ ನಡೆಯುತ್ತಿದೆ.

ಇನ್ನು ಎರಡು ಮೂರು ದಿನಗಳಲ್ಲಿ ಪ್ರಜ್ವಲ್‌ನನ್ನು ಕರೆಸಿ ಎಸ್ಐಟಿ ಮುಂದೆ ಹಾಜರು ಮಾಡಿಸಲು ಶತ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಪ್ರಜ್ವಲ್ ರೇವಣ್ಣಗೆ ವಿದೇಶಾಂಗ ಸಚಿವಾಲಯ ಶೋಕಾಸ್ ನೋಟಿಸ್ ನೀಡಿದೆ. ಒಂದು ವೇಳೆ ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದಾದರೆ ಪ್ರಕರಣದಲ್ಲಿ ಪ್ರಜ್ವಲ್‌ಗೆ ಸಂಕಷ್ಟ ಎದುರಾಗಲಿದೆ. ಆಗ ಕುಟುಂಬಕ್ಕೆ ಮತ್ತಷ್ಟು ಮುಜುಗರ ಉಂಟಾಗುತ್ತದೆ. ತೀವ್ರ ಸ್ವರೂಪದ ಮುಜುಗರ ತಪ್ಪಿಸಿಕೊಳ್ಳಲು ಪ್ರಜ್ವಲ್ ವಿದೇಶದಿಂದ ಕರೆಸಲು ರೇವಣ್ಣ ಕುಟುಂಬಸ್ಥರು ಎಲ್ಲಾ ಆಯಾಮದಲ್ಲೂ ಪ್ರಯತ್ನ ಮಾಡುತ್ತಿದ್ದಾರೆ.

ಚುನಾವಣೆ ಫಲಿತಾಂಶ ಜೂನ್‌ 4ರಂದು ಬರಲಿದ್ದು, ಅದಕ್ಕೂ ಮುನ್ನ ಪ್ರಜ್ವಲ್‌ ದೇಶಕ್ಕೆ ಮರಳುವುದು ಅಸಂಭವ ಎನ್ನಲಾಗುತ್ತಿದೆ. ಈ ಸಲದ ಚುನಾವಣೆಯಲ್ಲಿ ಸೋತರೆ ಅನಿವಾರ್ಯವಾಗಿ ಶರಣಾಗಬೇಕಾಗುತ್ತದೆ. ಗೆದ್ದರೆ ಸಂಸದೀಯ ಸ್ಥಾನದ ಪ್ರಭಾವ ಬಳಸುವ ಸಾಧ್ಯತೆಯಿದೆ.

ಇದನ್ನೂ ಓದಿ: Prajwal Revanna Case: ವಿಡಿಯೊ ವೈರಲ್ ಅಪರಾಧದ ಸೆಕ್ಷನ್ ಹೇಳಿದ ಎಚ್‌ಡಿಕೆ; ಸಿಎಂ ಕುರ್ಚಿಯಲ್ಲಿ ಊಸರವಳ್ಳಿ ಎಂದು ಕಿಡಿ

Continue Reading

ದೇಶ

Robert Vadra: “ಮಣಿಶಂಕರ್‌ ಅಯ್ಯರ್‌ ಬಾಯಿ ಬಡುಕ…ಕೇಜ್ರಿವಾಲ್‌ ಅವಕಾಶವಾದಿ”-ರಾಬರ್ಟ್‌ ವಾದ್ರಾ ಅಚ್ಚರಿಯ ಹೇಳಿಕೆ

Robert Vadra: ದೆಹಲಿಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ಜಂಟಿಯಾಗಿ ಚುನಾವಣೆ ಎದುರಿಸುತ್ತಿರುವ ಬಗ್ಗೆ ಸಂದರ್ಶನಕಾರರ ಪ್ರಶ್ನೆಗೆ ಉತ್ತರಿಸಿದ ವಾದ್ರಾ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಒಬ್ಬ ದೊಡ್ಡ ಅವಕಾಶವಾದಿ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೇ ಪಕ್ಷದ ಮುಖಂಡರಾದ ಮಣಿಶಂಕರ್‌ ಅಯ್ಯರ್‌ ಬಾಯಿ ಬಡುಕ ಹಾಗೂ ದಿಗ್ವಿಜಯ್‌ ಸಿಂಗ್‌ ಅನನುಭವಿ ಎಂದು ಹೇಳಿದ್ದಾರೆ.

VISTARANEWS.COM


on

Robert Vadra
Koo

ನವದೆಹಲಿ: ಲೋಕಸಭೆ ಚುನಾವಣೆ ಮುಗಿಯುವ ಹಂತಕ್ಕೆ ಬಂದಿದ್ದರೂ ರಾಜಕೀಯ ಮುಖಂಡ ವಿವಾದಾತ್ಮಕ ಹೇಳಿಕೆಗಳು ಮಾತ್ರ ನಿಲ್ಲುತ್ತಲೇ ಇಲ್ಲ. ಮಣಿಶಂಕರ್‌ ಅಯ್ಯರ್‌(Mani Shankar Aiyar)ರಂತಹ ಹಿರಿಯ ನಾಯಕರ ವಿವಾದಾತ್ಮಕ ಹೇಳಿಕೆಯಿಂದ ತೀವ್ರ ಮುಜುಗರಕ್ಕೀಡಾಗಿರುವ ಕಾಂಗ್ರೆಸ್‌ ಪಕ್ಷಕ್ಕೆ ಇದೀಗ ಉದ್ಯಮಿ, ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ (Robert Vadra) ನೀಡಿರುವ ಹೇಳಿಕೆ ಪಕ್ಷವನ್ನು ಮತ್ತಷ್ಟು ಮುಜುಗರಕ್ಕೀಡು ಮಾಡಿದೆ. ಇಂಡಿಯಾ ಟಿವಿಗೆ ನೀಡಿದ ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರ ವಿರುದ್ಧವೇ ಹೇಳಿಕೆ ನೀಡಿದ್ದಾರೆ. ಇದೀಗ ಅವರ ವಿಡಿಯೋ ವೈರಲ್‌(Viral Video) ಆಗುತ್ತಿದೆ.

ದೆಹಲಿಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ಜಂಟಿಯಾಗಿ ಚುನಾವಣೆ ಎದುರಿಸುತ್ತಿರುವ ಬಗ್ಗೆ ಸಂದರ್ಶನಕಾರರ ಪ್ರಶ್ನೆಗೆ ಉತ್ತರಿಸಿದ ವಾದ್ರಾ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಒಬ್ಬ ದೊಡ್ಡ ಅವಕಾಶವಾದಿ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೇ ಪಕ್ಷದ ಮುಖಂಡರಾದ ಮಣಿಶಂಕರ್‌ ಅಯ್ಯರ್‌ ಬಾಯಿ ಬಡುಕ ಹಾಗೂ ದಿಗ್ವಿಜಯ್‌ ಸಿಂಗ್‌ ಅನನುಭವಿ ಎಂದು ಹೇಳಿದ್ದಾರೆ.

ಇನ್ನು ಅವರು ಇದೇ ವೇಳೆ ಭಾರತೀಯರಬಣ್ಣದ ಕುರಿತು ಮಾತನಾಡುವ ಮೂಲಕ ಭಾರಿ ವಿವಾದಕ್ಕೆ ಕಾರಣವಾಗಿದ್ದ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದು, ನಿವೃತ್ತಿ ಬಳಿಕ ಎಲ್ಲಾ ವಿಚಾರಗಳಿಂದಲೂ ನಿವೃತರಾಬೇಕು ಎಂದರು.

ಇತ್ತೀಚೆಗೆ ರಾಬರ್ಟ್‌ ವಾದ್ರಾ ಅವರು ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, “ನನ್ನ ಹೆಸರು, ನನ್ನ ಕೆಲಸದಿಂದ ರಾಜಕೀಯ ಪ್ರವೇಶಿಸುತ್ತೇನೆ. ಗಾಂಧಿ ಕುಟುಂಬದ ಹೆಸರು ಬಳಸಿ ರಾಜಕೀಯಕ್ಕೆ ಬರಲ್ಲ” ಎಂದಿದ್ದರು. ಎಎನ್‌ಐ ಜತೆ ಮಾತನಾಡುವಾಗ, ನೀವು ರಾಜಕೀಯ ಪ್ರವೇಶಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. “ನಾನು ದೇಶದ ಸೇವೆ ಮಾಡುತ್ತಿದ್ದೇನೆ. ನಾನು ರಾಜಕೀಯ ಪ್ರವೇಶಿಸುವುದಿದ್ದರೆ, ನನ್ನ ಸಮಾಜ ಸೇವೆ, ನನ್ನ ಕೆಲಸ ಹಾಗೂ ನನ್ನ ಹೆಸರು ಬಳಸಿ ಪ್ರವೇಶಿಸುತ್ತೇನೆ. ಗಾಂಧಿ ಕುಟುಂಬದ ಹೆಸರು ಬಳಸಿಕೊಂಡು ನಾನು ರಾಜಕೀಯ ಪ್ರವೇಶಿಸುವುದಿಲ್ಲ. ಹೀಗೆ ಹೇಳಿದ ಮಾತ್ರಕ್ಕೆ ನಾನು ಗಾಂಧಿ ಕುಟುಂಬದ ಸದಸ್ಯ ಅಲ್ಲ ಎಂಬ ಅರ್ಥವಲ್ಲ. ಆದರೆ, ನನ್ನ ಹೆಸರು ಬಳಸಿಯೇ ನಾನು ರಾಜಕೀಯ ಪ್ರವೇಶಿಸುತ್ತೇನೆ” ಎಂದು ಹೇಳಿದರು.

ರಾಜಕೀಯದಲ್ಲಿ ಬದಲಾವಣೆಯಾಗಬೇಕಿದೆ. ನಾನು ರೈತರು, ಬಡವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹೌದು, ಸೋನಿಯಾ ಗಾಂಧಿ ಸೇರಿ ಗಾಂಧಿ ಕುಟುಂಬದ ಹೆಸರು ಬಳಸಿದರೆ, ಅವರಿಂದ ಸಲಹೆ ಪಡೆದರೆ ನನಗೆ ಅನುಕೂಲವಾಗಬಹುದು. ಆದರೆ, ನನ್ನ ಕೆಲಸದಿಂದ ನಾನು ರಾಜಕೀಯಕ್ಕೆ ಬರಲು ಇಷ್ಟಪಡುತ್ತೇನೆ. ಹಾಗಂತ, ರಾಜಕೀಯ ಪ್ರವೇಶಿಸಲು ನಾನು ಸಮಾಜ ಸೇವೆ ಮಾಡುತ್ತಿಲ್ಲ. ಸೇವೆಯು ನನಗೆ ಖುಷಿ ಕೊಡುವ ವಿಚಾರವಾಗಿದೆ” ಎಂದು ಸಂದರ್ಶನದ ವೇಳೆ ಹೇಳಿದರು.

Continue Reading

ದೇಶ

Pune Porsche accident: ಕಾರು ಗುದ್ದಿ ಇಬ್ಬರನ್ನು ಸಾಯಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ; ಇಬ್ಬರು ವೈದ್ಯರು ಅರೆಸ್ಟ್‌

Pune Porsche accident: ಪುಣೆಯ ಸಾಸೂನ್‌ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಅಜಯ್‌ ತಾವರೆ ಮತ್ತು ಡಾ. ಶ್ರೀಹರಿ ಹರ್ನೂರ್‌ ಆರೋಪಿಯ ರಕ್ತದ ಮಾದರಿಯನ್ನೇ ಬದಲಿಸಿದ್ದಾರೆ. ಆಮೂಲಕ ಈ ಪ್ರರಕಣದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಅವರಿಬ್ಬರನ್ನೂ ಇದೀಗ ಬಂಧಿಸಲಾಗಿದೆ

VISTARANEWS.COM


on

Pune Porsche accident
Koo

ಪುಣೆ: ಪುಣೆ ನಗರದಲ್ಲಿ 17 ವರ್ಷದ ಬಾಲಕನ (juvenile) ಐಷಾರಾಮಿ ಪೋರ್ಷೆ ಕಾರನ್ನು (Pune Porsche accident) ಚಲಾಯಿಸಿ ಇಬ್ಬರು ಐಟಿ ವೃತ್ತಿಪರರನ್ನು (IT Engineers) ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರಿಬ್ಬರು ಬಾಲಾಪರಾಧಿಯ ರಕ್ತದ ಮಾದರಿಯನ್ನು ಬದಲಾಯಿಸಿರುವುದು ಬೆಳಕಿಗೆ ಬಂದಿದ್ದು, ಇಬ್ಬರನ್ನೂ ಅರೆಸ್ಟ್‌ ಮಾಡಲಾಗಿದೆ.

ಈ ಬಗ್ಗೆ ಪುಣೆ ಪೊಲೀಸ್‌ ಕಮಿಷನರ್‌ ಅಮಿತೇಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದು, ಪುಣೆಯ ಸಾಸೂನ್‌ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಅಜಯ್‌ ತಾವರೆ ಮತ್ತು ಡಾ. ಶ್ರೀಹರಿ ಹರ್ನೂರ್‌ ಆರೋಪಿಯ ರಕ್ತದ ಮಾದರಿಯನ್ನೇ ಬದಲಿಸಿದ್ದಾರೆ. ಆಮೂಲಕ ಈ ಪ್ರರಕಣದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಅವರಿಬ್ಬರನ್ನೂ ಇದೀಗ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ಪ್ರರಕಣವನ್ನು ಕ್ರೈಂ ಬ್ರ್ಯಾಂಚ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಪ್ರಕರಣದ ದಾರಿ ತಪ್ಪಿಸಲು ಪ್ರಯತ್ನಿಸಿದ್ದ ಎರವಾಡ ಪೊಲೀಸ್‌ ಠಾಣೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು.

ಕಳೆದ ಭಾನುವಾರ ಕಲ್ಯಾಣಿನಗರ ಪ್ರದೇಶದಲ್ಲಿ ಬಾರ್‌ನಲ್ಲಿ ಮದ್ಯ ಸೇವಿಸಿ ಪಾನಮತ್ತರಾಗಿದ್ದ 17 ವರ್ಷದ ಬಾಲಕ ಚಾಲನೆ ಮಾಡುತ್ತಿದ್ದ ಪೋರ್ಶೆ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮೃತಪಟ್ಟಿದ್ದರು. ಇದಾದ ಬಳಿಕ ಪೊಲೀಸರು ಬಾಲಾಪರಾಧಿ ನ್ಯಾಯಾಲಯದ ತೀರ್ಪಿನಂತೆ ಬಾಲಕನನ್ನು ಬಂಧಿಸಿ ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಬಳಿಕ ತಂದೆ ವಿಶಾಲ್​ ಅಗರ್ವಾಲ್​ರನ್ನು ಬಂಧಿಸಿದ್ದರು.

ಎಲ್ಲೆಡೆ ಪೊಲೀಸರ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಾಮೀನನ್ನು ರದ್ದುಗೊಳಿಸಿ ಮತ್ತೆ ಬಂಧಿಸಲಾಗಿತ್ತು. ಮೊದಲು ವಿಶಾಲ್ ಅಗರ್ವಾಲ್​ ನನ್ನ ಮಗ ಕಾರು ಓಡಿಸುತ್ತಿರಲಿಲ್ಲ ಕಾರಿಗೆ ಬೇರೆ ಡ್ರೈವರ್​ ಇದ್ದಾರೆ ಎಂದು ಹೇಳಿದ್ದರು.ಇನ್ನು ಬಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿರುವ ಶಂಕೆ ವ್ಯಕ್ತವಾಗಿತ್ತು. ಇದಕ್ಕೆ ಪೂರಕ ಎಂಬಂತೆ ಘಟನೆಗೂ ಮುನ್ನ ಆತ ಸ್ನೇಹಿತರ ಜೊತೆಗೂಡಿ ಬಾರ್‌ನಲ್ಲಿ ಕುಡಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ಹೀಗಾಗಿ ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಹಿಸಲಾಗಿತ್ತು. ಇದೆಲ್ಲಾ ನಡೆದ ಬಳಿಕ ಆತ ಮದ್ಯಪಾನ ಮಾಡಿರಲಿಲ್ಲ ಎನ್ನುವ ವರದಿ ಆಸ್ಪತ್ರೆಯಿಂದ ಹೊರಬಿದ್ದಿತ್ತು. ಇದೀಗ ವೈದ್ಯರು ದುಡ್ಡಿನ ಆಸೆಗೆ ಬಿದ್ದು ಬಾಲಕನ ರಕ್ತದ ಮಾದರಿಯನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಅರಿತ ಪೊಲೀಸರು ರಕ್ತದ ಮಾದರಿಯನ್ನು ತಿರುಚಿದ ಆರೋಪದ ಮೇಲೆ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಕಾರು ಚಾಲಕನನ್ನು ಅಕ್ರಮವಾಗಿ ಮನೆಯಲ್ಲಿ ಕೂಡಿ ಹಾಕಿದ್ದಕ್ಕಾಗಿ ಆರೋಪಿ ಬಾಲಕನ ಅಜ್ಜನನ್ನು ಬಂಧಿಸಲಾಗಿತ್ತು. ಕುಟುಂಬದ ಚಾಲಕನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡು, ಅಪಘಾತದ ಹೊಣೆ ಹೊತ್ತುಕೊಳ್ಳುವಂತೆ ಆತನಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಬಾಲಕನ ಅಜ್ಜ ಸುರೇಂದ್ರ ಕುಮಾರ್ ಅಗರವಾಲ್ ಅವರನ್ನು ಬಂಧಿಸಲಾಗಿದೆ. ಅಜ್ಜನ ವಿರುದ್ಧ ಪೊಲೀಸರು ಅಪಹರಣ ಮತ್ತು ಅಕ್ರಮ ಬಂಧನದ ಆರೋಪದಲ್ಲಿ ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಬಾಲಕನ ತಂದೆ ವಿಶಾಲ್ ಅಗರ್ವಾಲ್ ಅವರ ಹೆಸರೂ ಇದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

ಬಾಲಕನ ಅಜ್ಜ ಮತ್ತು ತಂದೆ ಇಬ್ಬರೂ ಚಾಲಕನ ಫೋನ್ ಕಿತ್ತುಕೊಂಡಿದ್ದರು. ತಮ್ಮ ಬಂಗಲೆ ಆವರಣದಲ್ಲಿ ಇರುವ ಆತನ ಮನೆಯಲ್ಲಿ ಮೇ 19 ಮತ್ತು 20ರಂದು ಆತನನ್ನು ಕೂಡಿ ಹಾಕಿದ್ದರು. ಚಾಲಕನನ್ನು ಆತನ ಪತ್ನಿ ಬಂಧ ಮುಕ್ತಗೊಳಿಸಿದ್ದಳು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Continue Reading

ದೇಶ

Fire Accident: 32 ಜನರನ್ನು ಬಲಿ ಪಡೆದ ಅಗ್ನಿ ದುರಂತ; ವೈರಲ್‌ ಆಗ್ತಿದೆ ಸಿಸಿಟಿವಿ ದೃಶ್ಯ!

Fire Accident: ವೆಲ್ಡಿಂಗ್‌ ನಡೆಯುತ್ತಿದ್ದ ಪ್ರದೇಶದಲ್ಲಿ ಬೆಂಕಿ ಕಿಡಿ ಕಾಣಿಸಿಕೊಳ್ಳುತ್ತದೆ. ನೋಡ ನೋಡ್ತಿದ್ದಂತೆ ಕಿಡಿ ಬೆಂಕಿಯ ಜ್ವಾಲೆಯಾಗಿ ಹೊತ್ತಿಕೊಳ್ಳುತ್ತದೆ. ಕೆಲವು ಕಿಡಿಗಳು ಅಲ್ಲೇ ಇದ್ದ ಪ್ಲಾಸ್ಟಿಕ್‌ಗೆ ಬಿದ್ದು, ಜೋರಾಗಿ ಹೊತ್ತಿಕೊಳ್ಳುತ್ತದೆ. ಬೆಂಕಿ ಆವರಿಸಿಕೊಳ್ಳುವುದುನ್ನು ತಡೆಯಲು ಅಲ್ಲೇ ಇದ್ದ ಸಿಬ್ಬಂದಿ ಅದನ್ನು ನಂದಿಸುವ ಪ್ರಯತ್ನಪಟ್ಟರೂ ಯಶಸ್ವಿಯಾಗಲಿಲ್ಲ. ಅಲ್ಲದೇ ನಿರ್ಮಿಸಲಾಗಿದ್ದ ತಾತ್ಕಾಲಿಕ ಅಲಂಕಾರಿಕಾ ವಸ್ತುಗಳಿಗೆ ಬೆಂಕಿ ಆವರಿಸಿದ ಪರಿಣಾಮವಾಗಿ ಈ ಭೀಕರ ದುರಂತ ಸಂಭವಿಸಿದೆ

VISTARANEWS.COM


on

Fire accident
Koo

ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ (Rajkot) ನಗರದಲ್ಲಿರುವ ಗೇಮಿಂಗ್‌ ಜೋನ್‌ (Gaming Zone) ಒಂದರಲ್ಲಿ ಶನಿವಾರ (ಮೇ 25) ಸಂಜೆ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ (Fire Accident) ನಿಜವಾದ ಕಾರಣ ಏನೆಂಬುದು ಬಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಯೊಂದು ವೈರಲ್‌ ಆಗಿದ್ದು, ವೆಲ್ಡಿಂಗ್‌ ನಡೆಯುತ್ತಿದ್ದ ಜಾಗದಲ್ಲಿ ಅಚಾನಕ್ಕಾಗಿ ಬೆಂಕಿ ಕಾಣಿಸಿಕೊಂಡಿದ್ದು, ಏಕಾಏಕಿ ಬೆಂಕಿ ಕೆನ್ನಾಲಿಗೆ ಜೋರಾಗುತ್ತಲೇ ಹೋಗುತ್ತದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಡಿಯೋದಲ್ಲಿ ಏನಿದೆ?

ವೆಲ್ಡಿಂಗ್‌ ನಡೆಯುತ್ತಿದ್ದ ಪ್ರದೇಶದಲ್ಲಿ ಬೆಂಕಿ ಕಿಡಿ ಕಾಣಿಸಿಕೊಳ್ಳುತ್ತದೆ. ನೋಡ ನೋಡ್ತಿದ್ದಂತೆ ಕಿಡಿ ಬೆಂಕಿಯ ಜ್ವಾಲೆಯಾಗಿ ಹೊತ್ತಿಕೊಳ್ಳುತ್ತದೆ. ಕೆಲವು ಕಿಡಿಗಳು ಅಲ್ಲೇ ಇದ್ದ ಪ್ಲಾಸ್ಟಿಕ್‌ಗೆ ಬಿದ್ದು, ಜೋರಾಗಿ ಹೊತ್ತಿಕೊಳ್ಳುತ್ತದೆ. ಬೆಂಕಿ ಆವರಿಸಿಕೊಳ್ಳುವುದುನ್ನು ತಡೆಯಲು ಅಲ್ಲೇ ಇದ್ದ ಸಿಬ್ಬಂದಿ ಅದನ್ನು ನಂದಿಸುವ ಪ್ರಯತ್ನಪಟ್ಟರೂ ಯಶಸ್ವಿಯಾಗಲಿಲ್ಲ. ಅಲ್ಲದೇ ನಿರ್ಮಿಸಲಾಗಿದ್ದ ತಾತ್ಕಾಲಿಕ ಅಲಂಕಾರಿಕಾ ವಸ್ತುಗಳಿಗೆ ಬೆಂಕಿ ಆವರಿಸಿದ ಪರಿಣಾಮವಾಗಿ ಈ ಭೀಕರ ದುರಂತ ಸಂಭವಿಸಿದೆ. ಇನ್ನು ಗೇಮಿಂಗ್‌ ಜೋನ್‌ನಲ್ಲಿ ಕೇವಲ ಒಂದೇ ಎಮರ್ಜೆನ್ಸಿ ಬಾಗಿಲು ಇದ್ದ ಕಾರಣ ಅನೇಕರು ಅದರ ಒಳಗೇ ಸಿಲುಕುವಂತೆ ಆಯಿತು. ಅದೂ ಅಲ್ಲದೇ ಫೈರ್‌ ಸೇಫ್ಟಿ ವಸ್ತುಗಳೂ ಸ್ಥಳದಲ್ಲಿರಲಿಲ್ಲ.

ಶನಿವಾರ ರಾಜ್‌ಕೋಟ್‌ನಲ್ಲಿರುವ ಗೇಮಿಂಗ್‌ ಜೋನ್‌ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. 9 ಮಕ್ಕಳು, ಮಹಿಳೆಯರು ಸೇರಿ 32 ಮಂದಿ ಮೃತಪಟ್ಟಿರುವ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿದೆ. ಗೇಮಿಂಗ್‌ ಜೋನ್‌ ಕಟ್ಟಡದಲ್ಲಿ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ವೀಕೆಂಡ್‌ ಇರುವ ಕಾರಣ ಮಕ್ಕಳು ಆಟವಾಡಲಿ ಎಂಬುದಾಗಿ ಟಿಆರ್‌ಪಿ ಗೇಮಿಂಗ್‌ ಜೋನ್‌ಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಏಕಾಏಕಿ ಅಗ್ನಿ ದುರಂತ ಸಂಭವಿಸಿದ ಕಾರಣ 32 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ.

ಇನ್ನು ಎರಡು ಅಂತಸ್ತಿನ ಶೆಡ್‌ನಲ್ಲಿ ನಿರ್ಮಿಸಲಾಗಿದ್ದ ರಾಜ್‌ಕೋಟ್‌ ಗೇಮಿಂಗ್‌ ಜೋನ್‌ಗೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವೇ ಸಿಕ್ಕಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ರಾಜ್‌ಕೋಟ್‌ ಮೇಯರ್‌ ನಯನಾ ಪೆಢಾದಿಯಾ ಅವರೇ ಮಾಹಿತಿ ನೀಡಿದ್ದಾರೆ. “ನೋ ಅಬ್ಜೆಕ್ಷನ್‌ ಸರ್ಟಿಫಿಕೇಟ್‌ ಇಲ್ಲದೆಯೇ ಗೇಮಿಂಗ್‌ ಜೋನ್‌ ಕಾರ್ಯನಿರ್ವಹಿಸುತ್ತಿದ್ದ ಕುರಿತು ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೇ ರೀತಿಯಾದ ರಾಜಕೀಯ ನುಸುಳದಂತೆ ತನಿಖೆ ನಡೆಸಲಾಗುತ್ತದೆ. ಇದು ಸಣ್ಣ ಸಂಗತಿ ಅಲ್ಲ” ಎಂಬುದಾಗಿ ಮಾಹಿತಿ ನೀಡಿದ್ದಾರೆ.ಖ್ಯೆ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: Fire Accident: ಗುಜರಾತ್‌ ಅಗ್ನಿ ದುರಂತ; ಸಾವಿನ ಸಂಖ್ಯೆ 32ಕ್ಕೆ ಏರಿಕೆ; SIT ತನಿಖೆಗೆ ಆದೇಶ

Continue Reading
Advertisement
Prajwal Revanna Case Will SIT team go abroad for arrest Prajwal
ಕ್ರೈಂ7 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಜ್ಞಾತವಾಸಕ್ಕೆ ಒಂದು ತಿಂಗಳು, ಎಲ್ಲಿದ್ದೀಯಪ್ಪಾ ಪ್ರಜ್ವಲ್?

Robert Vadra
ದೇಶ7 mins ago

Robert Vadra: “ಮಣಿಶಂಕರ್‌ ಅಯ್ಯರ್‌ ಬಾಯಿ ಬಡುಕ…ಕೇಜ್ರಿವಾಲ್‌ ಅವಕಾಶವಾದಿ”-ರಾಬರ್ಟ್‌ ವಾದ್ರಾ ಅಚ್ಚರಿಯ ಹೇಳಿಕೆ

Gautam Gambhir
ಕ್ರೀಡೆ21 mins ago

Gautam Gambhir : ಟ್ರೋಫಿ ಗೆದ್ದ ಸಂಭ್ರಮ; ಗಂಭೀರ್​ಗೆ ಖಾಲಿ ಚೆಕ್​ ಕೊಟ್ಟರೇ ಶಾರುಖ್​ ಖಾನ್​ ?

Netraa Jadhav Out From Serial perform Yakshagana on the special occasion
ಕಿರುತೆರೆ35 mins ago

Netraa Jadhav: ಸೀರಿಯಲ್‌ನಿಂದ ಔಟ್‌ ಆಗುತ್ತಿದ್ದಂತೆ ʻಯಕ್ಷಗಾನʼದಲ್ಲಿ ಶಾರ್ವರಿ ಶೈನ್‌!

Pune Porsche accident
ದೇಶ54 mins ago

Pune Porsche accident: ಕಾರು ಗುದ್ದಿ ಇಬ್ಬರನ್ನು ಸಾಯಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ; ಇಬ್ಬರು ವೈದ್ಯರು ಅರೆಸ್ಟ್‌

Chris Gayle
ಕ್ರಿಕೆಟ್55 mins ago

Chris Gayle : ಎಣ್ಣೆ ಹೊಡಿತಾ ಕೆಕೆಆರ್ ತಂಡಕ್ಕೆ ಶುಭಾಶಯ ತಿಳಿಸಿದ ಕ್ರಿಸ್​ ಗೇಲ್; ಇಲ್ಲಿದೆ ವಿಡಿಯೊ

Comedy Khiladigalu anchor anushree and Jaggesh Remembers Dogs
ಕಿರುತೆರೆ1 hour ago

Comedy Khiladigalu: ನನ್ನ ಮಗ ಚಿನ್ನುವನ್ನು ಇದೇ ಕೈಯಲ್ಲಿ ಕಳ್ಕೊಂಡೆ: ಅನುಶ್ರೀ ಭಾವುಕ!

kalaburagi illegal relationship
ಕ್ರೈಂ1 hour ago

Illegal Relationship:`ಅತ್ತಿಗೆಯಿಂದ ದೂರ ಇರುʼ ಎಂದ ಮೈದುನನ ಬರ್ಬರವಾಗಿ ಹತ್ಯೆ ಮಾಡಿದ ಪ್ರಿಯಕರ

IPL 2024
ಕ್ರೀಡೆ1 hour ago

IPL 2024 : ಕೆಕೆಆರ್​ ಗೆದ್ದ ಬಳಿಕ ವಿವಾದಿತ ಫ್ಲೈಯಿಂಗ್ ಕಿಸ್​ ಕೊಟ್ಟ ಶಾರುಖ್ ಖಾನ್​; ಇದಕ್ಕೂ ಒಂದು ಕಾರಣವಿದೆ

Ranbir Kapoor and Alia Bhatt flew to Italy
ಬಾಲಿವುಡ್2 hours ago

Anant Ambani Radhika: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌: ಇಟಲಿಗೆ ಹೊರಟ ಆಲಿಯಾ ಭಟ್ ದಂಪತಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ17 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು18 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ7 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌