Huge Blast: ಪೊಲೀಸರು ಶೋಧಕ್ಕೆ ಮುಂದಾಗುತ್ತಿದ್ದಂತೆ ಮನೆಯೊಳಗೆ ಭೀಕರ ಸ್ಫೋಟ; ವಿಡಿಯೊ ಇಲ್ಲಿದೆ - Vistara News

ವಿದೇಶ

Huge Blast: ಪೊಲೀಸರು ಶೋಧಕ್ಕೆ ಮುಂದಾಗುತ್ತಿದ್ದಂತೆ ಮನೆಯೊಳಗೆ ಭೀಕರ ಸ್ಫೋಟ; ವಿಡಿಯೊ ಇಲ್ಲಿದೆ

Huge Blast: ಅಮೆರಿಕದ ವಾಷಿಂಗ್ಟನ್ ಡಿಸಿಯ ಉಪನಗರದ ಮನೆಯೊಂದರಲ್ಲಿ ಭಾರೀ ಸ್ಫೋಟ ) ಸಂಭವಿಸಿದೆ. ಪೊಲೀಸರು ಶೋಧ ವಾರಂಟ್ ಜಾರಿಗೊಳಿಸುತ್ತಿದ್ದಾಗ ಈ ಸ್ಫೋಟ ನಡೆದಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

VISTARANEWS.COM


on

dc
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್‌: ಅಮೆರಿಕದ ವಾಷಿಂಗ್ಟನ್ ಡಿಸಿಯ (Washington DC) ಉಪನಗರದ ಮನೆಯೊಂದರಲ್ಲಿ ಭಾರೀ ಸ್ಫೋಟ (Huge Blast) ಸಂಭವಿಸಿದೆ. ಪೊಲೀಸರು ಶೋಧ ವಾರಂಟ್ ಜಾರಿಗೊಳಿಸುತ್ತಿದ್ದಾಗ ಈ ಸ್ಫೋಟ ನಡೆದು ಒಂದು ಮನೆ ಸಂಪೂರ್ಣ ನಾಶವಾಗಿದೆ. ಸರ್ಚ್ ವಾರಂಟ್ ಜಾರಿಗೊಳಿಸಲು ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ ಅಧಿಕಾರಿಗಳ ಮೇಲೆ ಮನೆಯೊಳಗಿನ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಬಳಿಕ ಸ್ಫೋಟ ನಡೆದಿದೆ ಎಂದು ವರ್ಜೀನಿಯಾದ ಆರ್ಲಿಂಗ್ಟನ್ (Arlington) ಪೊಲೀಸರು ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಮನೆಯ ಪರಿಶೀಲನೆಗಾಗಿ ಪೊಲೀಸರು ಆಗಮಿಸಿದ ಈ ವೇಳೆ ಸ್ಫೋಟ ಸಂಭವಿಸಿದೆ. ಸೋಮವಾರ ರಾತ್ರಿ ಸಂಭವಿಸಿದ ಈ ಘಟನೆಯಿಂದ ಸಾವುನೋವುಗಳು ಸಂಭವಿಸಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಂಕಿತನನ್ನು ಬಂಧಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸ್ಥಳೀಯರು, ಸ್ಫೋಟದಿಂದ ತಮ್ಮ ಮನೆಗಳು ನಡುಗುತ್ತಿರುವಂತೆ ಭಾಸವಾಯಿತು ಎಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಕೂಡಲೇ ತಲುಪಿದ್ದು, ಅಧಿಕಾರಿಗಳು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಅಧಿಕಾರಿಗಳು ನಿವಾಸದಲ್ಲಿ ಶೋಧ ನಡೆಸಲು ವಾರಂಟ್ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾಗ ಶಂಕಿತನು ಮನೆಯೊಳಗೆ ಹಲವಾರು ಸುತ್ತು ಗುಂಡು ಹಾರಿಸಿದ. ಬಳಿಕ ನಿವಾಸದಲ್ಲಿ ಸ್ಫೋಟ ಸಂಭವಿಸಿದೆ ಮತ್ತು ಸ್ಫೋಟದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ” ಎಂದು ಆರ್ಲಿಂಗ್ಟನ್ ಕೌಂಟಿ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದೆ.

ಪೊಲೀಸರು ಕೂಡಲೇ ಕೆಲವು ನಿವಾಸಿಗಳನ್ನು ಸ್ಥಳಾಂತರಿಸಿದರು. “ನಾನು 50 ವರ್ಷಗಳಿಂದ ಇಲ್ಲಿದ್ದೇನೆ ಮತ್ತು ನಾನು ಇಂತಹ ಶಬ್ಧವನ್ನು ಎಂದಿಗೂ ಕೇಳಿಲ್ಲ. ಇದು ಹೊಸ ಅನುಭವ” ಎಂದು ಸ್ಥಳೀಯ ನಿವಾಸಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ʼʼ2011ರಲ್ಲಿ ಡಿಸಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಂತೆಯೇ ಇದು ಭಾಸವಾಯಿತುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಪ್ರದೇಶವು ವಿಲ್ಸನ್ ಬೌಲೆವಾರ್ಡ್‌ನ ಉತ್ತರದಲ್ಲಿರುವ ಬಾಲ್‌ಸ್ಟನ್‌-ಎಂಯು ಮೆಟ್ರೋ ನಿಲ್ದಾಣದಿಂದ ಅರ್ಧ ಮೈಲಿ ದೂರದಲ್ಲಿದೆ.

ಕಾರಣ ತಿಳಿದು ಬಂದಿಲ್ಲ

ಸ್ಫೋಟದ ತೀವ್ರತೆಗೆ ಕನಿಷ್ಠ 10ಕ್ಕಿಂತ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ತನಿಖಾಧಿಕಾರಿಗಳು ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ. ಸ್ಫೋಟಕ್ಕೆ ಕಾರಣವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಸದ್ಯ ಸಣ್ಣ ಪುಟ್ಟ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ವಿಧದಲ್ಲೂ ತನಿಖೆ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಸ್ಫೋಟದ ಮೊದಲು ಯಾವುದೇ ಅನಿಲ ಸೋರಿಕೆಯಾದ ಬಗ್ಗೆ ಮಾಹಿತಿ ಇಲ್ಲ.

ಇದನ್ನೂ ಓದಿ: Lakhbir Singh: ಸಿಖ್​ ಪ್ರತ್ಯೇಕತವಾದಿ ಸಂಘಟನೆ ಮುಖ್ಯಸ್ಥ ಲಖ್ಬೀರ್ ಸಿಂಗ್ ಸಾವು

ಮನೆಯಲ್ಲಿ ಮದ್ದುಗುಂಡುಗಳು ಮತ್ತು ಬಂದೂಕುಗಳನ್ನು ದಾಸ್ತಾನು ಇಡಲಾಗಿತ್ತು ಎಂದು ನೆರೆಹೊರೆಯವರು ಹೇಳಿದ್ದಾರೆ. ಆದರೆ ಇದು ಸ್ಫೋಟಕ್ಕೆ ಕಾರಣವಾಗಿರಲಾರದು ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳುತ್ತಾರೆ. ಸದ್ಯ ಮನೆ ಇದ್ದ ಜಾಗದಲ್ಲಿ ಅವಶೇಷ ಮಾತ್ರ ಇದೆ. “ಇದು ಕೇವಲ ಕೇವಲ ಇಟ್ಟಿಗೆಗಳ ರಾಶಿ. ಮನೆಯಲ್ಲಿ ಏನೂ ಉಳಿದಿಲ್ಲ” ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸದ್ಯ ಸ್ಫೋಟದ ವಿಡಿಯೊ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Fraud Case: 300 ರೂ. ಬೆಲೆಯ ನಕಲಿ ಆಭರಣವನ್ನು ವಿದೇಶಿ ಮಹಿಳೆಗೆ 6 ಕೋಟಿ ರೂ.ಗೆ ಮಾರಿದರು!

Fraud Case: ರಾಜಸ್ಥಾನದ ಜೈಪುರದ ಜೊಹ್ರಿ ಬಜಾರ್ ನಲ್ಲಿರುವ ಅಂಗಡಿಯೊಂದರಲ್ಲಿ ಅಮೇರಿಕಾದ ಮಹಿಳೆ ಚೆರಿಶ್ ಅವರು ಚಿನ್ನ ಖರೀದಿಸಿದ್ದಾರೆ. ಆಗ ಅಂಗಡಿಯ ಮಾಲೀಕ ಚಿನ್ನದ ಪಾಲಿಶ್ ಇರುವ 300 ರೂ ಬೆಲೆಯ ಬೆಳ್ಳಿ ಆಭರಣಕ್ಕೆ 6 ಕೋಟಿ ರೂಪಾಯಿ ಬೆಲೆ ಹೇಳಿ ಮಾರಾಟ ಮಾಡಿದ್ದಾನೆ. ಆ ಮಹಿಳೆ ಅಮೆರಿಕಕ್ಕೆ ಮರಳಿದಾಗ ಈ ಮೋಸ ಬಯಲಾಗಿದೆ.

VISTARANEWS.COM


on

Fraud Case
Koo

ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಚಿನ್ನದ ಮೌಲ್ಯ ಹೆಚ್ಚಾಗಿ ಜನರು ಕಂಡಕಂಡಲ್ಲಿ ಚಿನ್ನದ ವಿಚಾರದಲ್ಲಿ ಮೋಸ, ವಂಚನೆ ಮಾಡುತ್ತಿದ್ದಾರೆ. ಚಿನ್ನಕ್ಕಾಗಿ ಜನರ ಪ್ರಾಣವನ್ನು ತೆಗೆಯುತ್ತಿದ್ದಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಕಳ್ಳತನ ಪ್ರಕರಣ ಹೆಚ್ಚಾಗಿದೆ ಇದರ ಜೊತಗೆ ಚಿನ್ನವೆಂದು ನಂಬಿಸಿ ವಂಚನೆ ಮಾಡುವ ಪ್ರಕರಣ (Fraud Case) ಹೆಚ್ಚಾಗಿದ್ದಾರೆ. ಇಂತಹದೊಂದು ಘಟನೆ ಜೈಪುರದಲ್ಲಿ ನಡೆದಿದೆ.

ರಾಜಸ್ಥಾನದ ಅಂಗಡಿ ಮಾಲೀಕನೊಬ್ಬ 300 ರೂ. ಮೌಲ್ಯದ ಕೃತಕ ಆಭರಣಕ್ಕೆ 6 ಕೋಟಿ ರೂಪಾಯಿ ಬೆಲೆಗೆ ಅಮೇರಿಕಾದ ಮಹಿಳೆಗೆ ಮಾರಾಟ ಮಾಡಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಚಿನ್ನದ ಪಾಲಿಶ್‌ ಇರುವ ಬೆಳ್ಳಿ ಆಭರಣ ಮಾರಾಟ

ರಾಜಸ್ಥಾನದ ಜೈಪುರದ ಜೊಹ್ರಿ ಬಜಾರ್ ನಲ್ಲಿರುವ ಅಂಗಡಿಯೊಂದರಲ್ಲಿ ಅಮೇರಿಕಾದ ಮಹಿಳೆ ಚೆರಿಶ್ ಅವರು ಚಿನ್ನ ಖರೀದಿಸಿದ್ದಾರೆ. ಆಗ ಅಂಗಡಿಯ ಮಾಲೀಕ ಚಿನ್ನದ ಪಾಲಿಶ್ ಇರುವ 300ರೂ ಬೆಲೆಯ ಬೆಳ್ಳಿ ಆಭರಣಕ್ಕೆ 6 ಕೋಟಿ ರೂಪಾಯಿ ಬೆಲೆ ಹೇಳಿ ಮಾರಾಟ ಮಾಡಿದ್ದಾನೆ. ಮಹಿಳೆ ಈ ವರ್ಷ ಏಪ್ರಿಲ್ ನಲ್ಲಿ ಅಮೇರಿಕಾದಲ್ಲಿ ನಡೆದ ಪ್ರದರ್ಶನದಲ್ಲಿ ತಾನು ಜೈಪುರದಲ್ಲಿ ಖರೀದಿಸಿದ ಆಭರಣವನ್ನು ಪ್ರದರ್ಶಿಸಿದಾಗ ಅದು ನಕಲಿ ಎಂಬುದಾಗಿ ತಿಳಿದುಬಂದಿದೆ. ಆಗ ಮಹಿಳೆ ಭಾರತಕ್ಕೆ ಬಂದು ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ಅಂಗಡಿ ಮಾಲೀಕ ಗೌರವ್ ಸೋನಿ ಎಂಬುದಾಗಿ ತಿಳಿದುಬಂದಿದೆ. ಈತ ತನ್ನ ಕೃತ್ಯವನ್ನು ಒಪ್ಪಿಕೊಳ್ಳದ ಕಾರಣ ಮಹಿಳೆ ಜೈಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿಗಳು ಮಹಿಳೆಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ಮಹಿಳೆ ಯುಎಸ್ ನ ರಾಯಭಾರ ಕಚೇರಿಯಿಂದ ಸಹಾಯ ಕೋರಿದ್ದಾಳೆ. ಅವರು ಈ ಬಗ್ಗೆ ತನಿಖೆ ನಡೆಸುವಂತೆ ಜೈಪುರ ಪೊಲೀಸರಿಗೆ ಒತ್ತಾಯಿಸಿದ್ದಾರೆ.

2022ರಲ್ಲಿ ಇನ್ ಸ್ಟಾಗ್ರಾಂನಲ್ಲಿ ಗೌರವ್ ಸೋನಿಯನ್ನು ಸಂಪರ್ಕಿಸಿದ ಮಹಿಳೆ ಕಳೆದ 2 ವರ್ಷಗಳಲ್ಲಿ ಈ ಕೃತಕ ಆಭರಣಗಳಿಗಾಗಿ 6 ಕೋಟಿ ರೂಪಾಯಿಗಳನ್ನು ಪಾವತಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಗೌರವ್ ಮತ್ತು ಆತನ ತಂದೆ ರಾಜೇಂದ್ರ ಸೋನಿ ಇಬ್ಬರು ಪರಾರಿಯಾಗಿದ್ದಾರೆ. ಹಾಗಾಗಿ ಪೊಲೀಸರು ಅವರಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದು, ಅದಕ್ಕಾಗಿ ವಿಶೇಷ ತಂಡವನ್ನು ರಚಿಸಿದ್ದಾರೆ. ಹಾಗೇ ಆಭರಣಕ್ಕೆ ನಕಲಿ ಪ್ರಮಾಣಪತ್ರ ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:Anupam Kher-Rajinikanth: ಮೋದಿ ಪ್ರಮಾಣವಚನ ವೇಳೆ ರಜನಿಕಾಂತ್‌ಗೆ ಅನುಪಮ್ ಖೇರ್ ಹೇಳಿದ್ದೇನು? ವಿಡಿಯೊ ನೋಡಿ!

ಅಲ್ಲದೇ ಅಂಗಡಿ ಮಾಲೀಕರು ಇತ್ತೀಚೆಗೆ 3 ಕೋಟಿ ರೂ. ಮೌಲ್ಯದ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಒಟ್ಟಾರೆ ಈ ಪ್ರಕರಣದಿಂದ ವಿದೇಶದವರ ಮುಂದೆ ಭಾರತದ ಮರ್ಯಾದೆ ತೆಗೆದ ಹಾಗಾಗಿದೆ. ವಿದೇಶಿ ಮಹಿಳೆಗೆ ನಮ್ಮ ದೇಶದಲ್ಲಿ ಈ ರೀತಿ ವಂಚಿಸಿದ್ದು, ಘೋರ ಕೃತ್ಯವೇ ಸರಿ. ಹಾಗಾಗಿ ಈ ಪ್ರಕರಣವನ್ನು ಪೊಲೀಸರು ಬೇಗನೆ ತನಿಖೆ ನಡೆಸಿ ಅದರ ಸತ್ಯವನ್ನು ಕಂಡುಹಿಡಿಯುವುದು ಬಹಳ ಮುಖ್ಯವಾಗುತ್ತದೆ. ಇಲ್ಲವಾದರೆ ವಿದೇಶದಲ್ಲಿ ಭಾರತೀಯರ ಮರ್ಯಾದೆ ಹರಾಜಾಗುವುದಂತು ಖಂಡಿತ.

Continue Reading

ಪ್ರಮುಖ ಸುದ್ದಿ

Joe Biden : ಬಂದೂಕು ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಪುತ್ರ ತಪ್ಪಿತಸ್ಥ; ಕಾದಿದೆ 25 ವರ್ಷ ಜೈಲು ಶಿಕ್ಷೆ

Joe Biden : ಹಂಟರ್ ಬೈಡನ್ ಪ್ರಕರಣದಲ್ಲಿ 12 ನ್ಯಾಯಾಧೀಶರ ತಮಡ ಸೋಮವಾರ ವಿಚಾರಣೆ ಪ್ರಾರಂಭಿಸಿದ್ದರು. ಡೆಲಾವೇರ್​ನ ವಿಲ್ಮಿಂಗ್ಟನ್​​ನಲ್ಲಿರುವ ಫೆಡರಲ್ ನ್ಯಾಯಾಲಯವು ಮಂಗಳವಾರ ಹಂಟರ್ ಬೈಡನ್​​ಗೆ ಶಿಕ್ಷೆ ವಿಧಿಸಿದೆ. ಹಂಟರ್ ಅಮೆರಿಕದ ಹಾಲಿ ಅಧ್ಯಕ್ಷರ ಮೊದಲ ಪುತ್ರ.

VISTARANEWS.COM


on

Joe Biden
Koo

ಬೆಂಗಳೂರು: ಬಂದೂಕು ಖರೀದಿ ಮಾಡುವ ವೇಳೆ ಸುಳ್ಳು ಮಾಹಿತಿ ನೀಡಿರುವ ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರ ಪುತ್ರ ಹಂಟರ್ ಬೈಡನ್ (Hunter Biden) ತಪ್ಪಿತಸ್ಥರೆಂದು ಸಾಬೀತಾಗಿದೆ. ಬಂದೂಕು ಖರೀದಿ ವೇಳೆ ತಾವು ಮಾದಕ ವಸ್ತುಗಳನ್ನು(Banned Drug) ಬಳಸುತ್ತಿಲ್ಲ ಎಂದು ಸುಳ್ಳು ಹೇಳಿದೆ ಆರೋಪ ಅವರ ಮೇಲಿತ್ತು. ಆ ಪ್ರಕರಣದಲ್ಲಿ ಹಂಟರ್ ಬೈಡನ್ ತಪ್ಪಿತಸ್ಥರೆಂದು ತೀರ್ಪುಗಾರರು ತೀರ್ಪು ನೀಡಿದ್ದಾರೆ. ಹಂಟರ್ ಬೈಡನ್ ಮೊದಲ ಪ್ರಕರಣದಲ್ಲಿ 10 ವರ್ಷಗಳವರೆಗೆ, ಎರಡನೇ ಪ್ರಕರಣದಲ್ಲಿ ಐದು ವರ್ಷಗ ಮತ್ತು ಮೂರನೇ ಪ್ರಕರಣದಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಎಲ್ಲ ಪ್ರಕರಣಗಳು ಸಾಬೀತಾದರೆ ಅವರು ತಮ್ಮ ಜೀವಿತಾವಧಿಯ 25 ವರ್ಷವನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ.

ಹಂಟರ್ ಬೈಡನ್ ಪ್ರಕರಣದಲ್ಲಿ 12 ನ್ಯಾಯಾಧೀಶರ ತಂಡ ಸೋಮವಾರ ವಿಚಾರಣೆ ಪ್ರಾರಂಭಿಸಿದ್ದರು. ಡೆಲಾವೇರ್​ನ ವಿಲ್ಮಿಂಗ್ಟನ್​​ನಲ್ಲಿರುವ ಫೆಡರಲ್ ನ್ಯಾಯಾಲಯವು ಮಂಗಳವಾರ ಹಂಟರ್ ಬೈಡನ್​​ಗೆ ಶಿಕ್ಷೆ ವಿಧಿಸಿದೆ. ಹಂಟರ್ ಅಮೆರಿಕದ ಹಾಲಿ ಅಧ್ಯಕ್ಷರ ಮೊದಲ ಪುತ್ರ.

ಹಂಟರ್ ಬೈಡನ್ ಅವರು ಕೋಲ್ಟ್ ಕೋಬ್ರಾ 38-ಕ್ಯಾಲಿಬರ್ ರಿವಾಲ್ವರ್ ಖರೀದಿಸಿದ್ದರು. ಈ ವೇಳೆ ಅಕ್ರಮ ಮಾದಕವಸ್ತುಗಳ ಬಳಕೆಯನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ. ಹೀಗಾಗಿ ಅದು ಅಕ್ರಮವಾಗುತ್ತದೆ. ಅಕ್ಟೋಬರ್ 2018 ರಲ್ಲಿ 11 ದಿನಗಳ ಕಾಲ ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಹೊಂದಿದ್ದರು ಎಂಬ ಗಂಭೀರ ಆರೋಪಗಳನ್ನು ಒಪ್ಪಿಕೊಂಡಿದ್ದರು.

ನ್ಯಾಯಾಧೀಶರು ಮಂಗಳವಾರ ಹಂಟರ್ ಬೈಡನ್ ಅವರ ಶಿಕ್ಷೆಯ ದಿನಾಂಕವನ್ನು ನಿಗದಿಪಡಿಸಲಿಲ್ಲ. ಇನ್ನೂ 120 ದಿನಗಳಲ್ಲಿ ಶಿಕ್ಷೆ ಪ್ರಕಟಗೊಳ್ಳಲಿದೆ. ನವೆಂಬರ್ 5 ರಂದು ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಶಿಕ್ಷೆ ಪ್ರಕಟಗೊಳ್ಳಲಿದೆ.

ಏನಿದು ಪ್ರಕರಣ?

2018ರಲ್ಲಿ ಹಂಟರ್ ಬೈಡನ್ ಬಂದೂಕು ಖರೀದಿಸಿದ್ದರು. ಅಮೆರಿಕದಲ್ಲಿ ಬಂದೂಕು ಖರೀದಿಸುವಾಗ ಒಬ್ಬ ವ್ಯಕ್ತಿಯು ಅರ್ಜಿಯೊಂದನ್ನು ಅನ್ನು ಭರ್ತಿ ಮಾಡಬೇಕು. ಈ ವೇಳೆ ಮಾದಕವಸ್ತು ಬಳಕೆಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಬೇಕು. ಅಂದರೆ ಮಾದಕ ವಸ್ತುಗಳನ್ನು ಸೇವಿಸುವುದಿಲ್ಲ ಎಂದು ಖಾತರಿ ಕೊಡಬೇಕು. ಮಾದಕ ವಸ್ತುಗಳನ್ನು ಹೊಂದಿರುವವರಿಗೆ ಅಲ್ಲಿ ಬಂದೂಕು ಲೈಸನ್ಸ್ ಸಿಗುವುದಿಲ್ಲ. ಹಂಟರ್ ಬೈಡನ್ ಮಾದಕವಸ್ತು ಬಳಕೆಯ ಪ್ರಶ್ನೆಗೆ “ಇಲ್ಲ” ಎಂದು ಉತ್ತರಿಸಿದ್ದರು. ಆದರೆ ಅವರು ಆ ಸಮಯದಲ್ಲಿ ಅವುಗಳನ್ನು ಬಳಸುತ್ತಿದ್ದರು ಎಂದು ವರದಿಯಾಗಿದೆ.

ಸೆಪ್ಟೆಂಬರ್ 2023ರಲ್ಲಿ, ಹಂಟರ್ ಬೈಡನ್ ವಿರುದ್ಧ ಈ ಬಂದೂಕು ಖರೀದಿಗೆ ಸಂಬಂಧಿಸಿದ ಮೂರು ಕ್ರಿಮಿನಲ್ ಆರೋಪಗಳನ್ನು ಹೊರಿಸಲಾಯಿತು. ಈ ಆರೋಪಗಳಲ್ಲಿ ಅವರ ಮಾದಕವಸ್ತು ಬಳಕೆಯ ಬಗ್ಗೆ ಸುಳ್ಳು ಹೇಳುವುದು ಮತ್ತು ಮಾದಕವಸ್ತು ಬಳಕೆದಾರರಾಗಿದ್ದಾಗ ಬಂದೂಕು ಹೊಂದಿರುವುದು ಸೇರಿಕೊಂಡಿದೆ. 2023 ರಲ್ಲಿ, ಹಂಟರ್ ವಿಚಾರಣೆಗೆ ಹೋಗಿರಲಿಲ್ಲ. ಕಾನೂನು ಪಾಲನೆಯಲ್ಲೂ ಅವರು ವಿಫಲಗೊಂಡಿದ್ದರು.

ಇದನ್ನೂ ಓದಿ: Priyanka Gandhi : ವಾರಾಣಸಿಯಲ್ಲಿ ಪ್ರಿಯಾಂಕ ಸ್ಪರ್ಧಿಸಿದ್ದರೆ ಮೋದಿ ಸೋಲುತ್ತಿದ್ದರು; ರಾಹುಲ್​ ಗಾಂಧಿ

ಹಂಟರ್ ಬೈಡನ್ ತಮ್ಮ ಆರೋಪಗಳನ್ನು ಮೊದಲಿಗೆ ಒಪ್ಪಿಕೊಂಡಿರಲಿಲ್ಲ. ವಿಚಾರಣೆಯ ವೇಳೆ ಹಂಟರ್ ಅವರ ವಿರುದ್ಧ ಸಾಕ್ಷಿಗಳು ದಾಖಲಾಗಿದ್ದವು. ಅವರ ಮಾಜಿ ಪತ್ನಿ, ಮಾಜಿ ಗೆಳತಿ ಮತ್ತು ಅತ್ತಿಗೆಯ ಹೇಳಿಕೆಯ ಪ್ರಕಾರ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು. ಅವರು ಅಕ್ಟೋಬರ್ 2018 ರಲ್ಲಿ ಬಂದೂಕು ಖರೀದಿಸುವ ಮೊದಲು ಮತ್ತು ನಂತರದ ವಾರಗಳಲ್ಲಿ ಮಾದಕ ವಸ್ತುಗಳನ್ನ ಸೇವಿಸಿದ್ದು ಗೊತ್ತಾಗಿತ್ತು.

Continue Reading

ವೈರಲ್ ನ್ಯೂಸ್

YouTuber Dhruv Rathee: ಧ್ರುವ ರಾಥಿಯ ಮೋದಿ ವಿರೋಧಿ ವಿಡಿಯೊ ಗೊತ್ತು; ಅವರ ಲವ್‌ ಸ್ಟೋರಿ ಗೊತ್ತಾ?

ಜರ್ಮನಿ ಕನ್ಯೆಯೊಂದಿಗಿನ ಪ್ರೇಮ ಆರಂಭದಿಂದ ವಿವಾಹದ ಬಂಧನದವರೆಗಿನ ಕಥೆಯನ್ನು ಭಾರತೀಯ ಯೂಟ್ಯೂಬರ್ ಧ್ರುವ ರಾಥಿ (YouTuber, Dhruv Rathee) ಹೇಳಿಕೊಂಡಿದ್ದಾರೆ. ಜರ್ಮನ್ ನ ಜೂಲಿ ಎಲ್ಬ್ರ್ ಅವರೊಂದಿಗಿನ ಮೊದಲ ಭೇಟಿ, ಮದುವೆ ಯಾವಾಗ, ಹೇಗೆ ನಡೆಯಿತು ಮೊದಲಾದ ವಿಷಯಗಳನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

By

YouTuber Dhruv Rathee
Koo

ಮೋದಿ ಅಭಿಮಾನಿಗಳು ಮತ್ತು ವಿರೋಧಿಗಳಿಬ್ಬರಿಗೂ ಯೂಟ್ಯೂಬರ್‌ ಧ್ರುವ ರಾಥಿ ಗೊತ್ತು. ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಹರಿತ ವಿಡಿಯೊಗಳನ್ನು ಮಾಡುವ ಮೂಲಕ ಇವರು ಖ್ಯಾತರಾಗಿದ್ದಾರೆ. ಆದರೆ ಇವರ ಪ್ರೀತಿ, ಪ್ರೇಮ, ಪ್ರಣಯದ ಕತೆ ನಿಮಗೆ ಗೊತ್ತೆ? ಯೂಟ್ಯೂಬರ್ ಧ್ರುವ ರಾಥಿ (YouTuber Dhruv Rathee) ತಮ್ಮ ಪ್ರೇಮ ಕಥೆಯನ್ನು (Love story) ಹಂಚಿಕೊಂಡಿದ್ದಾರೆ. ಜರ್ಮನ್‌ನ (Germany) ಜೂಲಿ ಎಲ್ಬ್ರ್ (Juli Lbr) ಅವರೊಂದಿಗಿನ ಮೊದಲ ಭೇಟಿ, ಯಾವಾಗ ಪ್ರೀತಿಯಾಯಿತು, ಮದುವೆ ಯಾವಾಗ, ಹೇಗೆ ನಡೆಯಿತು ಮೊದಲಾದ ವಿಷಯಗಳನ್ನು ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

17.3 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಧ್ರುವ ರಾಥಿ ಪ್ರಸಿದ್ಧ ಭಾರತೀಯ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಪ್ರವಾಸದ ವಿಷಯದ ಕುರಿತೂ ಅವರು ಸದಾ ಮಾಹಿತಿಗಳನ್ನು ನೀಡುತ್ತಿರುತ್ತಾರೆ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರಿಯಾಣದ ಶಾಲೆಯಲ್ಲಿ ಪೂರ್ಣಗೊಳಿಸಿದರು. ಜರ್ಮನಿಯಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರೆಸಿದ ಅವರು ನವೀಕರಿಸಬಹುದಾದ ಇಂಧನ ವಿಷಯದಲ್ಲಿ ಎಂಜಿನಿಯರಿಂಗ್‌ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ.

ಧ್ರುವ ಅವರ ವೃತ್ತಿಪರ ಜೀವನ ಮತ್ತು ವ್ಲಾಗ್‌ಗಳ ಬಗ್ಗೆ ಅವರ ಅಭಿಮಾನಿಗಳಿಗೆ ತಿಳಿದಿದ್ದರೂ ಅವರ ಜರ್ಮನ್ ಪತ್ನಿ ಜೂಲಿ ಎಲ್ಬ್ರ್ ಅವರೊಂದಿಗಿನ ಪ್ರೇಮಕಥೆಯ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. 2021ರಲ್ಲಿ ಧ್ರುವ ಮತ್ತು ಜೂಲಿ ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಬೆಲ್ವೆಡೆರೆ ಅರಮನೆಯಲ್ಲಿ ವಿವಾಹವಾದರು. ಅದೂ ಒಂದೆರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ಬಳಿಕ. ಆದರೂ ಅವರು ತಮ್ಮ ಸಂಬಂಧವನ್ನು ಮಾಧ್ಯಮದಿಂದ ಮತ್ತು ಅಭಿಮಾನಿಗಳ ಊಹಾಪೋಹಗಳಿಂದ ದೂರವಿಟ್ಟಿದ್ದರು. 2022ರಲ್ಲಿ ಅವರು ಹಿಂದೂ ಸಂಸ್ಕೃತಿಯಂತೆ ಮತ್ತೆ ವಿವಾಹವಾದರು.

ಜೂಲಿ ಎಲ್ಬ್ರ್ ಅವರೊಂದಿಗೆ ಮೊದಲ ಭೇಟಿ

ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ನೀಡಿರುವ ಧ್ರುವ, 2014ರಲ್ಲಿ ಜೂಲಿಯೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಅವರು ಮೊದಲ ಬಾರಿಗೆ ರೈಲಿನಲ್ಲಿ ಜೂಲಿ ಅವರನ್ನು ಭೇಟಿಯಾಗಿದ್ದರು. ಆಗ ತಮ್ಮಿಬ್ಬರಿಗೂ 19 ವರ್ಷ ವಯಸ್ಸಾಗಿತ್ತು ಎಂದು ಹೇಳಿದರು. ಧ್ರುವ ತಮ್ಮ ಇಂಟರ್ನ್‌ಶಿಪ್‌ಗಾಗಿ ರೈಲು ಮೂಲಕ ಹೋಗುತ್ತಿದ್ದಾಗ ಜೂಲಿ ಶಾಲೆಗೆ ಹೋಗುತ್ತಿದ್ದರು. ಅವರು ಪ್ರತಿದಿನ ರೈಲಿನಲ್ಲಿ ಪರಸ್ಪರ ಭೇಟಿಯಾಗುತ್ತಿದ್ದರು ಮತ್ತು ಮಾತನಾಡಲು ಪ್ರಾರಂಭಿಸಿದರು. ಧ್ರುವ ಅವರು ತಮ್ಮ ಯೂಟ್ಯೂಬ್ ಪ್ರಯಾಣವನ್ನು ಪ್ರಾರಂಭಿಸಿದ್ದು ಅದೇ ವರ್ಷ ಎಂದು ಹೇಳಿದ್ದಾರೆ.


ಕನಸಿನಂತೆ ಮದುವೆ

2021ರ ನವೆಂಬರ್ 24ರಂದು, ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಬೆಲ್ವೆಡೆರೆ ಅರಮನೆಯಲ್ಲಿ ಆತ್ಮೀಯರ ಸಮ್ಮುಖದಲ್ಲಿ ಧ್ರುವ ಅವರು ತಮ್ಮ ದೀರ್ಘಕಾಲದ ಗೆಳತಿ ಜೂಲಿಯನ್ನು ವಿವಾಹವಾದರು. ಈ ಕುರಿತು ಇನ್ ಸ್ಟಾ ಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ಕೆಲವೇ ಕ್ಷಣದಲ್ಲಿ ಅದು ಭಾರೀ ವೈರಲ್ ಆಗಿತ್ತು. ಜೂಲಿ ಅವರು ಬಿಳಿ ಗೌನ್ ಧರಿಸಿದ್ದು, ಧ್ರುವ ನೇವಿ ಬ್ಲೂ ಧಿರಿಸಿನಲ್ಲಿ ಮಿಂಚಿದ್ದರು.

ಕೋವಿಡ್ ಸಾಂಕ್ರಾಮಿಕದ ಸಮಯವಾದ್ದರಿಂದ ಇವರ ಮದುವೆಯಲ್ಲಿ ಕೇವಲ 22 ಮಂದಿ ಆತ್ಮೀಯರು ಮಾತ್ರ ಪಾಲ್ಗೊಂಡಿದ್ದರು. ಮದುವೆಯ ಅನಂತರ ದಂಪತಿ ಕೆಲ ಕಾಲ ಜರ್ಮನಿಯ ಬರ್ಲಿನ್‌ನಲ್ಲಿ ನೆಲೆಸಿದ್ದರು. ಅವರು ಆಗಾಗ್ಗೆ ತಮ್ಮ ಜೀವನದ ಕೆಲವೊಂದು ಸುಂದರ ಕ್ಷಣಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.


ಹಿಂದೂ ಸಂಸ್ಕೃತಿಯಂತೆ ವಿವಾಹ

ಧ್ರುವ ಅವರು ಪತ್ನಿ ಜೂಲಿಯೊಂದಿಗೆ 2022ರಲ್ಲಿ ಭಾರತಕ್ಕೆ ಬಂದರು. ಬಳಿಕ ಇಲ್ಲಿ ದಂಪತಿ ಹಿಂದೂ ಸಂಪ್ರದಾಯಗಳ ಪ್ರಕಾರ ಎರಡನೇ ಬಾರಿಗೆ ವಿವಾಹವಾದರು. ಈ ಕುರಿತು ಧ್ರುವ ಅವರು ವಿಡಿಯೋವನ್ನು ತಮ್ಮ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ಜೂಲಿ ಅವರು ಭಾರವಾದ ಕಸೂತಿ ಇರುವ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದರು. ಇದರೊಂದಿಗೆ ಚೋಕರ್, ಕಿವಿಯೋಲೆ ಮತ್ತು ಮೂಗುತಿ ಯೊಂದಿಗೆ ಹಿಂದೂ ವಧುವಿನಂತೆ ಕಂಗೊಳಿಸಿದ್ದಾರೆ. ಮತ್ತೊಂದೆಡೆ ಧ್ರುವ ಅವರು ಪೇಟದೊಂದಿಗೆ ಶೇರ್ವಾನಿ ಧರಿಸಿದ್ದರು.

ಇದನ್ನೂ ಓದಿ: MS Dhoni Fan: ಪ್ಯಾರಿಸ್​ನಲ್ಲಿ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಭಿಮಾನಿ

ಜೂಲಿಗೆ ಹಿಂದಿ ಗೊತ್ತು

ಧ್ರುವ ದಂಪತಿ ಪರಸ್ಪರರ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳನ್ನು ಅನುಸರಿಸಲು ಇಷ್ಟಪಡುತ್ತಾರೆ. ಧ್ರುವ ಅವರು ಜರ್ಮನ್ ಭಾಷೆ ತಿಳಿದಿದ್ದು, ಅವರ ಪತ್ನಿ ಜೂಲಿ ಹಿಂದಿ ಕಲಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಧ್ರುವ ಅವರು ತಮ್ಮ ಪತ್ನಿ ಜೂಲಿಗಿಂತ ಉತ್ತಮವಾಗಿ ಜರ್ಮನ್ ಮಾತನಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಜೂಲಿ ಅವರಿಗೆ ಹಿಂದಿ ಸ್ವಲ್ಪ ಕಠಿಣವೆಂದು ಪರಿಗಣಿಸಿದ್ದಾರೆ.

ಧ್ರುವ ರಾಥಿ ಅವರ ಆಸ್ತಿ ಎಷ್ಟು?

ಧ್ರುವ ರಾಥಿ ಅವರು ಕಂಠದಾನ ಮಾಡುತ್ತಾರೆ ಮತ್ತು ಆಗಾಗ ಯೂಟ್ಯೂಬ್‌ನಲ್ಲಿ ತಮ್ಮ ಅನುಭವ, ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅವರ ನಿವ್ವಳ ಸಂಪತ್ತು ಸುಮಾರು 4 ಮಿಲಿಯನ್ ಡಾಲರ್ ಅಂದರೆ, ಸುಮಾರು 33 ಕೋಟಿ ರೂ. ಆಗಿದೆ. ಯೂಟ್ಯೂಬ್ ಚಾನಲ್ ಮತ್ತು ವಿವಿಧ ಬ್ರ್ಯಾಂಡ್‌ಗಳ ಸಹಯೋಗವೇ ಅವರ ಪ್ರಾಥಮಿಕ ಆದಾಯದ ಮೂಲವಾಗಿದೆ.

Continue Reading

ಪ್ರಮುಖ ಸುದ್ದಿ

Amol Kale: ಭಾರತ-ಪಾಕ್‌ ಪಂದ್ಯ ವೀಕ್ಷಿಸಲು ಅಮೆರಿಕಕ್ಕೆ ತೆರಳಿದ್ದ ಎಂಸಿಎ ಅಧ್ಯಕ್ಷ ಅಮೋಲ್‌ ಕಾಳೆ ನಿಧನ

Amol Kale: ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ ಅಧ್ಯಕ್ಷ ಅಮೋಲ್‌ ಕಾಳೆ ಅವರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ತೆರಳಿದ್ದರು. ಎಂಸಿಎ ಕಾರ್ಯದರ್ಶಿ ಅಜಿಂಕ್ಯ ರಹಾನೆ ಸೇರಿ ಹಲವರ ಜತೆ ತೆರಳಿದ್ದ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪಂದ್ಯ ಮುಗಿದ ಬಳಿಕ ಕ್ರೀಡಾಂಗಣದಿಂದ ತೆರಳುವಾಗ ಅವರಿಗೆ ಹೃದಯ ಸ್ತಂಭನ ಉಂಟಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

Amol Kale
Koo

ವಾಷಿಂಗ್ಟನ್:‌ ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup 2024)​ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ (India vs Pakistan Match) ನಡುವಿನ ರೋಚಕ ಪಂದ್ಯವನ್ನು ವೀಕ್ಷಿಸಲು ಅಮೆರಿಕಕ್ಕೆ ತೆರಳಿದ್ದ ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ (MCA) ಅಧ್ಯಕ್ಷ ಅಮೋಲ್‌ ಕಾಳೆ (Amol Kale) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆದ ಭಾನುವಾರವೇ (ಜೂನ್‌ 9) ಅಮೋಲ್‌ ಕಾಳೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಪಂದ್ಯವನ್ನು ವೀಕ್ಷಿಸಲು ಅಮೋಲ್‌ ಕಾಳೆ ಅವರು ನ್ಯೂಯಾರ್ಕ್‌ಗೆ ತೆರಳಿದ್ದರು. ಪಂದ್ಯ ವೀಕ್ಷಿಸಿದ ಬಳಿಕ ಅವರು ಸಹೋದ್ಯೋಗಿಗಳೊಂದಿಗೆ ಕ್ರೀಡಾಂಗಣದಿಂದ ವಾಪಸಾಗುವಾಗ ಹೃದಯ ಸ್ತಂಭನದಿಂದ (Cardiac Arrest) ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೋಲ್‌ ಕಾಳೆ ಅವರ ನಿಧನವನ್ನು ಮಹಾರಾಷ್ಟ್ರ ಪ್ರತಿಪಕ್ಷದ ಉಪ ನಾಯಕ ಜಿತೇಂದ್ರ ಅಹ್ವಾದ್‌ ಅವರು ಖಚಿತಪಡಿಸಿದ್ದಾರೆ. “ಎಂಸಿಎ ಅಧ್ಯಕ್ಷ ಅಮೋಲ್‌ ಕಾಳೆ ಅವರು ಉತ್ತಮ ಸಂಘಟಕರಾಗಿದ್ದರು. ಅವರ ಅಗಲಿಕೆಯಿಂದ ನನಗೆ ವೈಯಕ್ತಿಕ ನಷ್ಟವಾಗಿದೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಮೋಲ್‌ ಕಾಳೆ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.

47 ವರ್ಷದ ಅಮೋಲ್‌ ಕಾಳೆ ಅವರು 2022ರ ಅಕ್ಟೋಬರ್‌ನಿಂದಲೂ ಎಂಸಿಎ ಅಧ್ಯಕ್ಷರಾಗಿದ್ದರು. 2022ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಳೆ ಅವರು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸಂದೀಪ್‌ ಪಾಟೀಲ್‌ ಅವರನ್ನು ಸೋಲಿಸಿದ್ದರು. ನಾಗ್ಪುರ ಮೂಲದವರಾದ ಅಮೋಲ್‌ ಕಾಳೆ ಅವರು ಉದ್ಯಮಿಯೂ ಆಗಿದ್ದಾರೆ. ಇವರು ಜೆ ಕೆ ಸೊಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಅರ್ಪಿತಾ ಎಂಟರ್‌ಪ್ರೈಸಸ್‌ನ ಸಂಸ್ಥಾಪಕರೂ ಆಗಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ಪಂದ್ಯವು ಕಡಿಮೆ ಸ್ಕೋರಿಂಗ್ ಥ್ರಿಲ್ಲರ್ ಆಗಿತ್ತು. 2 ನೇ ಇನ್ನಿಂಗ್ಸ್ ನ ಅಂತಿಮ ಎಸೆತದವರೆಗೂ ಸಂಪೂರ್ಣವಾಗಿ ಸಾಗಿತು. ಪಾಕಿಸ್ತಾನಕ್ಕೆ 120 ಎಸೆತಗಳಲ್ಲಿ ಕೇವಲ 120 ರನ್​ಗಳ ಅಗತ್ಯವಿತ್ತು. ಈ ಸಮೀಕರಣ ಬರೆಯಲು ಸರಳವಾಗಿ ಕಂಡರೂ, ಅನುಷ್ಠಾನವು ಅತ್ಯಂತ ಕಳಪೆಯಾಗಿತ್ತು. ಕೊನೆಯಲ್ಲಿ ಗ್ರೀನ್ ಆರ್ಮಿ 6 ರನ್​ಗಳಿಂದ ಸೋತಿತು.

ಸದ್ಯ ‘ಎ’ ಗುಂಪಿನಲ್ಲಿ ಭಾರತ ಮತ್ತು ಆತಿಥೇಯ ಅಮೆರಿಕ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ತಲಾ 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿದೆ. ಒಂದು ಪಂದ್ಯ ಗೆದ್ದ ಕೆನಾಡ ಮೂರನೇ ಸ್ಥಾನದಲ್ಲಿದೆ. ಗೆಲುವೇ ಕಾಣದ ಪಾಕಿಸ್ತಾನ 4ನೇ ಸ್ಥಾನಿಯಾಗಿದೆ. ಪಾಕ್​ ಮುಂದಿನ ಪಂದ್ಯದಲ್ಲಿ ಐರ್ಲೆಂಡ್​ ಮತ್ತು ಕೆನಡಾ ವಿರುದ್ಧ ಆಡಲಿದೆ. ಒಂದು ಗುಂಪಿನಿಂದ ಎರಡು ತಂಡಗಳು ಮಾತ್ರ ಸೂಪರ್ 8ಗೆ ಪ್ರವೇಶ ಪಡೆಯಲಿದೆ.

ಇದನ್ನೂ ಓದಿ: T20 World Cup 2024: ಪಾಕ್​ಗೆ ಇನ್ನೂ ಇದೆ ಸೂಪರ್-8 ಅವಕಾಶ? ಇಲ್ಲಿದೆ ಲೆಕ್ಕಾಚಾರ

Continue Reading
Advertisement
Actor Darshan arrest what about his future project
ಸ್ಯಾಂಡಲ್ ವುಡ್12 mins ago

Actor Darshan: ʻಡೆವಿಲ್‌ʼಗೆ ಜೈಲು ಗ್ಯಾರಂಟಿ ಆದ್ರೆ ಮುಂದಿನ ಸಿನಿಮಾಗಳ ಗತಿಯೇನು? ನಿರ್ಮಾಪಕರಿಗೆ ನಡುಕ!

INDIA Bloc
Lok Sabha Election 202431 mins ago

INDIA Bloc: 6 ಸಂಸದರನ್ನು ಕಳೆದುಕೊಳ್ಳುವ ಭೀತಿಯಲ್ಲಿ ಇಂಡಿ ಒಕ್ಕೂಟ; ಕಾರಣವೇನು?

Actor Darshan a Want To Escape From This Case
ಸ್ಯಾಂಡಲ್ ವುಡ್42 mins ago

Actor Darshan: ಕೊಲೆ ಕೇಸ್‌ನಿಂದ ಎಸ್ಕೇಪ್‌ ಆಗಲು 30 ಲಕ್ಷ ರೂ. ಕೊಟ್ಟಿದ್ದ ʻಡೆವಿಲ್‌ʼ? ಆದರೆ ಫ್ಲ್ಯಾನ್‌ ಆಗಿದ್ದು ಮಾತ್ರ ಉಲ್ಟಾ!

Terroris Attack
ಪ್ರಮುಖ ಸುದ್ದಿ1 hour ago

Terrorist Attack : ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಯೋಧ ಹುತಾತ್ಮ , ಆರು ಯೋಧರಿಗೆ ಗಾಯ

Actor Darshan Murder accusations Chetan Kumar Ahimsa react
ಸಿನಿಮಾ1 hour ago

Actor Darshan: ನಿಜ ಜೀವನದಲ್ಲಿ ನಟ ದರ್ಶನ್‌ನಂತಹ ಖಳನಾಯಕನನ್ನು ಸೃಷ್ಟಿಸಿದ ನಾವೇ ತಪ್ಪಿತಸ್ಥರು; ಚೇತನ್‌ ಅಹಿಂಸಾ!

Bird Flu
ಆರೋಗ್ಯ1 hour ago

Bird Flu: ದೇಶದಲ್ಲಿ ಎರಡನೇ ಹಕ್ಕಿ ಜ್ವರದ ಪ್ರಕರಣ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ

Actor Darshan 10 Biryani For Sent To Police Custody
ಸ್ಯಾಂಡಲ್ ವುಡ್1 hour ago

Actor Darshan: ಆರೋಪಿ ದರ್ಶನ್​ಗೆ 10ಕ್ಕೂ ಹೆಚ್ಚು ದೊನ್ನೆ ಬಿರಿಯಾನಿ ತರಿಸಿದ್ದ ಪೊಲೀಸರು!

Chikkaballapur News
ಪ್ರಮುಖ ಸುದ್ದಿ1 hour ago

Chikkaballapur News : ಒಂದೇ ಗ್ರಾಮದಲ್ಲಿ ನಾಲ್ವರ ಸರಣಿ ಸಾವು ; ಸ್ಥಳೀಯರಲ್ಲಿ ಆತಂಕ

Nagarjuna Sagar
ಪ್ರವಾಸ2 hours ago

Nagarjuna Sagar: ನಾಗಾರ್ಜುನಸಾಗರದ ಈ ಸ್ಥಳಗಳು ವಾರಾಂತ್ಯ ಪ್ರವಾಸಕ್ಕೆ ಸೂಕ್ತ

Actor Darshan
ಪ್ರಮುಖ ಸುದ್ದಿ2 hours ago

ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ19 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ20 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ22 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌