Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ? - Vistara News

Fact Check

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

Fact Check: ಸ್ಟಾರ್ ಗುರುತಿರುವ 500 ರೂ. ನೋಟು ನಕಲಿ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಆರ್‌ಬಿಐ ಏನು ಹೇಳಿದೆ?

VISTARANEWS.COM


on

Is 500 note with star symbol is fake, What Fact Check says?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚುಕ್ಕೆ(ಸ್ಟಾರ್) ಗುರುತು ಇರುವ (Star Symbol) 500 ರೂ. ನೋಟುಗಳು ನಕಲಿ (Fake Rs 500 notes), ಆ ನೋಟುಗಳನ್ನು ಬ್ಯಾಂಕ್‌ಗೆ ವಾಪಸ್ ಮಾಡಿ (Return to Bank) ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Social Media) ಜೋರಾಗಿದೆ. ಹಲವರು ಈ ಸುದ್ದಿಯನ್ನು ನಂಬಿ ನೋಟುಗಳನ್ನು ವಾಪಸ್ ಮಾಡಲು ಮುಂದಾದ ಉದಾಹರಣೆಗಳಿವೆ. ಈ ಸುದ್ದಿ ಕಳೆದ ಐದಾರು ತಿಂಗಳಿಂದ ಚಾಲ್ತಿಯಲ್ಲಿದ್ದು, ಈ ಕುರಿತು ಆಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಣೆ ನೀಡಿದೆ(Reserve bank of India). ಆದರೂ ಈ ವದಂತಿ ನಿಲ್ಲುತ್ತಿಲ್ಲ. ಪಿಐಬಿ ಫ್ಯಾಕ್ಟ್ ಚೆಕ್(PIB Fact Check), ಸ್ಟಾರ್‌ ಗುರುತಿರುವ ನೋಟುಗಳು ನಕಲಿ ಅಲ್ಲ; ಅಸಲಿ ಎಂದು ಈಗ ಮತ್ತೆ ಟ್ವೀಟ್ ಮಾಡಿದೆ.

500 ರೂ. ನೋಟು ಕುರಿತು ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ಕುರಿತು ಆರ್‌ಬಿಐ ಈ ಹಿಂದೆಯೇ ಮಾಹಿತಿ ನೀಡಿದೆ. ಸ್ಟಾರ್ ಗುರುತು ಈ ನೋಟುಗಳು ಚಲಾವಣೆಯ ಒಂದು ಭಾಗವಾಗಿದೆ. ನಕ್ಷತ್ರ ಚಿಹ್ನೆಯು ಸರಳವಾಗಿ ಗುರುತಿಸುವಿಕೆಯ ಭಾಗವಾಗಿದೆ. ಅಂದರೆ, ಈ ನೋಟು ಮರುಮುದ್ರಣಗೊಂಡ ಅಥವಾ ಬದಲಿಸಲಾದ ನೋಟಿಗೆ ಬದಲಿಯಾಗಿ ಚಲಾವಣೆಯಾಗುತ್ತಿರುವ ನೋಟು ಎಂದು ಆರ್‌ಬಿಐ ಹೇಳಿದೆ.

ಇದರರ್ಥ ನೋಟು ಮೂಲತಃ ದೋಷದಿಂದ ಮುದ್ರಿಸಲ್ಪಟ್ಟಿರುತ್ತದೆ. ಆ ನೋಟನ್ನು ಸ್ಟಾರ್ ಗುರುತಿನ ಚಿಹ್ನೆ ಹೊಸ ನೋಟಿನೊಂದಿಗೆ ಬದಲಾಯಿಸಲಾಗಿರುತ್ತದೆ. ಈ ನೋಟುಗಳು ಮೌಲ್ಯವು ಕಾನೂನುಬದ್ಧವಾಗಿರುತ್ತದೆ. ನಕ್ಷತ್ರ ಚಿಹ್ನೆಯೊಂದಿಗೆ ನೋಟುಗಳ ಮೊದಲ ಸರಣಿಯು 2006 ರಲ್ಲಿ ಚಲಾವಣೆ ಆಗಲಾರಂಭಿಸಿದವು ಎಂದು ಆರ್‌ಬಿಐ ಹೇಳಿದೆ.

ಸ್ಟಾರ್ ಗುರುತಿರುವ ಈ ನೋಟುಗಳು ನಕಲಿ ಎಂಬ ಕುರಿತು ಸಾಕಷ್ಟು ಪೋಸ್ಟ್‌ಗಳು ಐದಾರು ತಿಂಗಳ ಹಿಂದೆ ಟ್ವಿಟರ್ ಮತ್ತು ಫೇಸ್‍‌ಬುಕ್‌ನಲ್ಲಿ ಹರಿದಾಡಿದ್ದವು. ಜನರು ಈ ಕೂಡ ನಕಲಿ ಸುದ್ದಿಯನ್ನು ನಿಜವೆಂದೇ ನಂಬಿದ್ದರು. ಈಗ ಮತ್ತೆ ಅಂಥದ್ದೇ ಪುಕಾರುಗಳು ಎದ್ದಿವೆ. ಆದರೆ, ಸ್ಟಾರ್ ಗುರುತಿರುವ ನೋಟುಗಳು ಖಂಡಿತವಾಗಿಯೂ ನಕಲಿಯಲ್ಲ, ಅಸಲಿಯಾಗಿದ್ದು, ಕಾನೂನು ಬದ್ಧ ಮಾನ್ಯತೆ ಇದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನೂ ಓದಿ: Fact Check Cell : ಸರ್ಕಾರದ ಫ್ಯಾಕ್ಟ್‌ ಚೆಕ್‌ ಪ್ರಯತ್ನಕ್ಕೆ ಹಿನ್ನಡೆ; ಮಾನ್ಯತೆ ಪಡೆದ ಚೆಕರ್ಸ್‌ ನಿರಾಸಕ್ತಿ, ಯಾಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Mr. Bean: ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದಿದ್ದಾರೆಯೇ? ಭಾರೀ ವೈರಲಾಗ್ತಿದೆ ಈ ಫೋಟೊ

Mr. Bean ಮನಸ್ಸಿಗೆ ಎಷ್ಟೇ ನೋವಾಗಿದ್ದರೂ ತಿಳಿ ಹಾಸ್ಯವೊಂದು ಆ ಘಾಸಿಗೊಳಿಸಿದ ಮನಸ್ಸನ್ನು ತಂಗಾಳಿಯೊಂದು ತಾಕಿ ಹೋದ ಹಾಗೇ ತಂಪನೀಯುತ್ತದೆ. ಮಿಸ್ಟರ್ ಬೀನ್ ಎಷ್ಟೋ ನೊಂದ ಮನಸ್ಸಿನ ನೋವನ್ನು ತಮ್ಮ ಹಾಸ್ಯ ನಟನೆಯ ಮೂಲಕ ಕಡಿಮೆ ಮಾಡಿದ್ದಾರೆಂದರೆ ತಪ್ಪಾಗಲಾರದು. ಅವರ ನಟನೆ ಬಿದ್ದು ಬಿದ್ದು ನಗುವ ಹಾಗೇ ಮಾಡುತ್ತಿತ್ತು. ಈಗ ಮಿಸ್ಟರ್ ಬೀನ್ ಖ್ಯಾತಿಯ ಹಾಲಿವುಡ್ ನಟ ರೋವನ್ ಅಟ್ಕಿನ್ಸನ್ ಆರೋಗ್ಯ ಹದಗೆಟ್ಟು ಬೆಡ್ ಮೇಲೆ ಮಲಗಿರುವ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 69 ವರ್ಷದ ನಟ ಹಾಸಿಗೆ ಮೇಲೆ ಮಲಗಿದ್ದ ಪೋಟೊ ನೋಡಿ ಅವರ ಅಭಿಮಾನಿಗಳು ದಂಗಾಗಿದ್ದಾರೆ.

VISTARANEWS.COM


on

Mr. Bean
Koo


ಲಂಡನ್ :ತಮ್ಮ ವಿಭಿನ್ನ ವಿಚಿತ್ರ ಹಾವಭಾವದೊಂದಿಗೆ ನಟಿಸಿ ಜನರನ್ನು ನಗೆಯ ಕಡಲಿನಲ್ಲಿ ತೇಲುವಂತೆ ಮಾಡುತ್ತಿದ್ದ ಮಿಸ್ಟರ್ ಬೀನ್ ಖ್ಯಾತಿಯ ಹಾಲಿವುಡ್ ನಟ ರೋವನ್ ಅಟ್ಕಿನ್ಸನ್ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರು ಕೂಡ ಇವರ ಹಾಸ್ಯವನ್ನು ನೋಡಿ ನಗುತ್ತಿದ್ದರು ಮತ್ತು ತಮ್ಮ ಎಲ್ಲಾ ನೋವನ್ನು ಮರೆಯುತ್ತಿದ್ದರು. ಅಂತಹ ಮಹಾನ್ ನಟನ ಬಗ್ಗೆ ಕಳೆದ ಕೆಲವು ದಿನಗಳಲ್ಲಿ, ಕೆಟ್ಟ ಸುದ್ದಿಯೊಂದು ಹರಿದಾಡುತ್ತಿತ್ತು. ಅದೇನೆಂದರೆ ಮಿಸ್ಟರ್ ಬೀನ್ (Mr. Bean) ಖ್ಯಾತಿಯ ಹಾಲಿವುಡ್ ನಟ ರೋವನ್ ಅಟ್ಕಿನ್ಸನ್ ಆರೋಗ್ಯ ಹದಗೆಟ್ಟು ಬೆಡ್ ಮೇಲೆ ಮಲಗಿರುವ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಕೂಡಲೇ, ಇದು ಹೆಚ್ಚಿನ ಗಮನ ಸೆಳೆಯುವ ಮೂಲಕ ಸಖತ್ ವೈರಲ್ ಆಯಿತು. 69 ವರ್ಷದ ನಟ ಹಾಸಿಗೆ ಮೇಲೆ ಮಲಗಿದ್ದ ಪೋಟೊ ನೋಡಿ ಅವರ ಅಭಿಮಾನಿಗಳು ದಂಗಾಗಿದ್ದರು.

ಆದರೆ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಮಿಸ್ಟರ್ ಬೀನ್ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡಿದ್ದವು. 2017ರಲ್ಲಿ ಮೊದಲ ಬಾರಿಗೆ ರೋವನ್ ಅಟ್ಕಿನ್ಸನ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಅನ್ನೋ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದು ಅವರ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟುಮಾಡಿತ್ತು. ಆದರೆ ಈ ಸುದ್ಧಿ ಸುಳ್ಳು ಎಂದಾಗ ನಿಟ್ಟುಸಿರು ಬಿಟ್ಟಿದ್ದರು. ಹಾಗಾಗಿ ಅಟ್ಕಿನ್ಸನ್ ಅವರು ಅನಾರೋಗ್ಯದಲ್ಲಿರುವಂತೆ ತೋರಿಸುತ್ತಿದ್ದ ವೈರಲ್ ಆದ ಫೋಟೊದ ಬಗ್ಗೆ ಮಾಹಿತಿ ಕಲೆಹಾಕಿದಾಗ ಆ ಫೋಟೊ ಸಂಪೂರ್ಣವಾಗಿ ನಕಲಿ ಎಂಬುದಾಗಿ ತಿಳಿದುಬಂದಿದೆ. ವರದಿ ಪ್ರಕಾರ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಟೊವನ್ನು ತಂತ್ರಜ್ಞಾನಗಳನ್ನು ಬಳಸಿ ಎಡಿಟ್ ಮಾಡಿರುವುದಾಗಿ ತಿಳಿದುಬಂದಿದೆ. ಅಲ್ಲದೇ ವೈರಲ್ ಪೋಟೋದಲ್ಲಿರುವುದು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಬ್ಯಾರಿ ಬಾಲ್ಡರ್ಸ್ಟೋನ್ ಎಂಬ ವೃದ್ಧನದು ಎಂಬುದು ತಿಳಿದುಬಂದಿದೆ.

ಎಡಿಟ್ ಮಾಡಿದ ಫೋಟೊವನ್ನು ಮೂಲ ಫೋಟೊದೊಂದಿಗೆ ಹೋಲಿಸಿದಾಗ, ‘ಮಿಸ್ಟರ್ ಬೀನ್ ಇನ್ 2024’ ಎಂದು ಹೇಳಿಕೊಳ್ಳುವ ಫೋಟೊಗಳು ನಕಲಿ ಎಂಬುದು ಸ್ಪಷ್ಟವಾಯಿತು. ತಂತ್ರಜ್ಞಾನಗಳು ಪ್ರಗತಿ ಹೊಂದುತ್ತಿರುವ ಈ ಕಾಲದಲ್ಲಿ ಈ ವಿಷಯಗಳು ಸಾಮಾನ್ಯವಾಗಿವೆ. ಹಾಗಾಗಿ ಇಂತಹ ವಿಚಾರಗಳು ಇನ್ನು ಮುಂದೆ ಜನರಲ್ಲಿ ಆಘಾತವನ್ನುಂಟು ಮಾಡುವುದಿಲ್ಲ. ಮುಲ್ತಾನ್ ಸುಲ್ತಾನ್ಸ್ ಮತ್ತು ಇಸ್ಲಾಮಾಬಾದ್ ಯುನೈಟೆಡ್ ನಡುವಿನ ಪಿಎಸ್ಎಲ್ 2024 ಫೈನಲ್ ಪಂದ್ಯದ ವೇಳೆ ಪಾಕ್ ಬೀನ್ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ವೃದ್ಧನ ಗುದದ್ವಾರದಲ್ಲಿತ್ತು 16 ಇಂಚಿನ ಸೋರೆಕಾಯಿ! ವೈದ್ಯರಿಗೇ ಗಾಬರಿ!

ಹಾಲಿವುಡ್ ನಟ ಇತ್ತೀಚೆಗೆ ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಆರೋಗ್ಯಕರವಾಗಿ ಮತ್ತು ಸದೃಢವಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ರೋವನ್ ಅಟ್ಕಿನ್ಸನ್ ಅವರ ಆರೋಗ್ಯದ ಬಗ್ಗೆ ಇನ್ನೂ ಚಿಂತಿಸಬೇಕಾಗಿಲ್ಲ. ಬಿಬಿಸಿ ಕಾಮಿಡಿ ಶೋ ‘ನಾಟ್ ದಿ ನೈನ್ ಒ’ಕ್ಲಾಕ್’ ನ್ಯೂಸ್ ಮೂಲಕ ಖ್ಯಾತಿ ಗಳಿಸಿದ ಹಾಲಿವುಡ್ ನಟ ಜಾನಿ ಇಂಗ್ಲಿಷ್, ಮ್ಯಾನ್ ವರ್ಸಸ್ ಬೀ, ಜಾನಿ ಇಂಗ್ಲಿಷ್ ರೀಬಾರ್ನ್ ಮತ್ತು ದಿ ಥಿನ್ ಬ್ಲೂ ಲೈನ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ.

Continue Reading

Fact Check

Fact Check: ಸೋಲುವ ಭೀತಿಯಲ್ಲಿ ಬ್ಯಾಂಕಾಕ್‌ಗೆ ಹಾರಲು ಸಿದ್ಧರಾದ್ರಾ ರಾಹುಲ್‌ ಗಾಂಧಿ? ವೈರಲ್‌ ಆಗಿರುವ ಬೋರ್ಡಿಂಗ್‌ ಪಾಸ್‌ನ ಅಸಲಿಯತ್ತೇನು?

Fact Check: ಜೂನ್‌ 1ರಂದು ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಈ ಬಾರಿಯೂ ಕಾಂಗ್ರೆಸ್‌ ನಾಯಕತ್ವದ ಪ್ರತಿಪಕ್ಷಗಳ ʼಇಂಡಿಯಾʼ ಒಕ್ಕೂಟಕ್ಕೆ ಅಧಿಕಾರ ಲಭಿಸಲಾರದು ಎಂದೇ ಬಹುತೇಕ ಸಮೀಕ್ಷೆಗಳು ಊಹಿಸಿವೆ. ಈ ಮಧ್ಯೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬ್ಯಾಂಕಾಕ್‌ಗೆ ತೆರಳಲು ಸಿದ್ಧರಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ರಾಹುಲ್ ಗಾಂಧಿ ಅವರ ಹೆಸರಿನಲ್ಲಿ ಜೂನ್ 5ರಂದು ಬ್ಯಾಂಕಾಕ್‌ಗೆ ಬುಕ್ ಮಾಡಲಾಗಿದೆ ಎನ್ನಲಾದ ವಿಸ್ತಾರಾ ವಿಮಾನದ ಬೋರ್ಡಿಂಗ್ ಪಾಸ್‌ನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಸುದ್ದಿಯ ಅಸಲಿಯತ್ತೇನು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Fact Check
Koo

ನವದೆಹಲಿ: ಸುಮಾರು 2 ತಿಂಗಳ ಕಾಲ ನಡೆದ ಲೋಕಸಭಾ ಚುನಾವಣೆ (Lok Sabha Election 2024)ಯ 7 ಹಂತಗಳ ಮತದಾನ ಪೂರ್ಣಗೊಂಡಿದೆ. ನಾಳೆ (ಜೂನ್‌ 4) ಫಲಿತಾಂಶ ಹೊರ ಬೀಳಲಿದೆ. ಜತೆಗೆ ಜೂನ್‌ 1ರಂದು ಚುನಾವಣೋತ್ತರ ಸಮೀಕ್ಷೆ (Exit Poll) ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಈ ಬಾರಿಯೂ ಕಾಂಗ್ರೆಸ್‌ ನಾಯಕತ್ವದ ಪ್ರತಿಪಕ್ಷಗಳ ʼಇಂಡಿಯಾʼ ಒಕ್ಕೂಟಕ್ಕೆ ಅಧಿಕಾರ ಲಭಿಸಲಾರದು ಎಂದೇ ಬಹುತೇಕ ಸಮೀಕ್ಷೆಗಳು ಊಹಿಸಿವೆ. ಈ ಮಧ್ಯೆ ತೀವ್ರ ಮುಖಭಂಗ ಅನುಭವಿಸುವ ಭೀತಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬ್ಯಾಂಕಾಕ್‌ಗೆ ತೆರಳಲು ಸಿದ್ಧರಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ರಾಹುಲ್ ಗಾಂಧಿ (Rahul Gandhi) ಅವರ ಹೆಸರಿನಲ್ಲಿ ಜೂನ್ 5ರಂದು ಬ್ಯಾಂಕಾಕ್‌ಗೆ ಬುಕ್ ಮಾಡಲಾಗಿದೆ ಎನ್ನಲಾದ ವಿಸ್ತಾರಾ ವಿಮಾನದ ಬೋರ್ಡಿಂಗ್ ಪಾಸ್‌ನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಸುದ್ದಿಯ ಅಸಲಿಯತ್ತೇನು (Fact Check) ಎನ್ನುವ ವಿವರ ಇಲ್ಲಿದೆ.

ಈ ಬೋರ್ಡಿಂಗ್‌ ಪಾಸ್‌ ಅನ್ನು ಪರಿಶೀಲಿಸಿದ ವೇಳೆ ಅಸಲಿಯತ್ತು ಬೆಳಕಿಗೆ ಬಂದಿದೆ. ಇದು ಹಳೆ ಫೋಟೊ ಆಗಿದ್ದು, ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬೋರ್ಡಿಂಗ್‌ ಪಾಸ್‌ ಸುಮಾರು 5 ವರ್ಷಗಳ ಹಿಂದಿನದ್ದು ಎಂದು ತಿಳಿದು ಬಂದಿದೆ. 2019ರಲ್ಲಿ ಅಜಯ್ ಅವ್ತಾನೆ ಅವರ ಹೆಸರಿನಲ್ಲಿ ಬುಕ್‌ ಮಾಡಲಾದ ಪಾಸ್‌ ಇದಾಗಿದ್ದು, ರಾಹುಲ್‌ ಗಾಂಧಿ ಹೆಸರನ್ನು ಎಡಿಟ್‌ ಮಾಡಿ ಕಿಡಿಗೇಡಿಗಳು ಹಂಚಿಕೊಂಡಿದ್ದಾರೆ.

ರಾಹುಲ್‌ ಗಾಂಧಿ ಜೂನ್‌ 5ರಂದು ಬ್ಯಾಂಕಾಕ್‌ಗೆ ಪಲಾಯನ ಮಾಡಲಿದ್ದಾರೆ ಎನ್ನುವ ಕ್ಯಾಪ್ಶನ್‌ನೊಂದಿಗೆ ಎಡಿಟ್‌ ಮಾಡಿದ ಪಾಸ್‌ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ತಪ್ಪಾದ ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿರುವ ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಎಕ್ಸಿಟ್‌ ಪೋಲ್‌ ಹೇಳಿದ್ದೇನು?

ಇಂಡಿಯಾ ನ್ಯೂಸ್ ಡೈನಾಮಿಕ್ಸ್ ಸಮೀಕ್ಷಾ ವರದಿ ಎನ್‌ಡಿಎ 371, ಇಂಡಿಯಾ ಮೈತ್ರಿ 125 ಇತರರು 47 ಸ್ಥಾನಗಳನ್ನು ಪಡೆದರೆ, ಜನ್ ಕಿ ಬಾತ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 377, ಇಂಡಿಯಾ ಒಕ್ಕೂಟ 151, ಇತರರು 15, ಎನ್‌ಡಿಟಿವಿ ಇಂಡಿಯಾ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 365, ಇಂಡಿಯಾ ಒಕ್ಕೂಟ 142, ಇತರರು 36, ನ್ಯೂಸ್ ನೇಷನ್ ಸಮೀಕ್ಷಾ ವರದಿ ಪ್ರಕಾರ, ಎನ್‌ಡಿಎ 342-378, ಇಂಡಿಯಾ ಒಕ್ಕೂಟ 153-169, ಇತರರು 21-23, ರಿಪ್ಲಬಿಕ್ ಭಾರ್ ಮ್ಯಾಟ್ರಿಜ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 353-368, ಇಂಡಿಯಾ ಒಕ್ಕೂಟ 118-133, ಇತರರು 43-48 ಸ್ಥಾನಗಳನ್ನು ಗಳಿಸಲಿದೆ. ಇನ್ನು ಪಿಮಾರ್ಕ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 359, ಇಂಡಿಯಾ ಒಕ್ಕೂಟ 154, ಇತರರು 30 ಕ್ಷೇತ್ರಗಳಲ್ಲಿ ಗೆಲ್ಲಲಿದೆ.

ಇದನ್ನೂ ಓದಿ: Exit Poll 2024: ಗುಜರಾತ್‌ನಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್‌, ಉತ್ತರ ಪ್ರದೇಶದಲ್ಲಿ ಮೇಲುಗೈ; ರಾಜ್ಯವಾರು ಎಕ್ಸಿಟ್‌ ಪೋಲ್‌ ವರದಿ ಇಲ್ಲಿದೆ

ಇನ್ನು ನ್ಯೂಸ್ 18 ಮೆಗಾ ಎಕ್ಸಿಟ್ ಪೋಲ್ ಪ್ರಕಾರ, ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 23-26 ಸ್ಥಾನ ಬರಲಿದೆ. ಕಾಂಗ್ರೆಸ್ ಕೇವಲ 3-7 ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ ಗೆಲುವು ದಾಖಲಿಸಬಹುದು ಎಂದು ಹೇಳಿದೆ. ರಿಪಬ್ಲಿಕ್ ಟೀವಿ ಸಮೀಕ್ಷೆ ಪ್ರಕಾರ ಬಿಜೆಪಿ ಜೆಡಿಎಸ್ 22, ಕಾಂಗ್ರೆಸ್ 6 ಸ್ಥಾನ ಗೆಲ್ಲಲಿವೆ. ಇಂಡಿಯಾ ಟುಡೇ, ಎಬಿಪಿ ನ್ಯೂಸ್ ಎರಡೂ ಸಮೀಕ್ಷೆಗಳುಎನ್‌ಡಿಗೆ 23-25, ಕಾಂಗ್ರೆಸ್‌ಗೆ 3-5 ಸ್ಥಾನ ನೀಡಿವೆ.

Continue Reading

ಪ್ರಮುಖ ಸುದ್ದಿ

Fact Check : ಕರ್ನಾಟಕದವರು ಪಾಪಿಗಳು ಅಂಥ ಹೇಳಿದ್ರಾ ಮೋದಿ; ಕಾಂಗ್ರೆಸ್ ಮಾಡಿದ ಪೋಸ್ಟ್​ ಸುಳ್ಳಾ? ಇಲ್ಲಿದೆ ನಿಜಾಂಶ

ಕ್ಲಿಪ್​ನಲ್ಲಿ ಪ್ರಧಾನಿ ಮೋದಿ ಹಿಂದಿಯಲ್ಲಿ ಹೇಳುತ್ತಿರುವುದು ಈ ರೀತಿ ಕೇಳಿಸುತ್ತದೆ, “ಚುನಾವಣೆಯಲ್ಲಿ ಮಾಡಿದ ಪಾಪಗಳಿಗಾಗಿ ನೀವು ಕರ್ನಾಟಕದ ಜನರನ್ನು ಶಿಕ್ಷಿಸಬೇಕು. ಮುಂಬರುವ ವರ್ಷಗಳಲ್ಲಿ ಮೋದಿ ನಿಮಗೆ ಗ್ಯಾರಂಟಿ ನೀಡುತ್ತಾರೆ. ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಓಡಾಡಿದೆ. “ಕನ್ನಡಿಗರು ಬಿಜೆಪಿಗೆ ಮತ ಹಾಕುತ್ತಾರೆ. ಆದರೆ ಮೋದಿ ಮಾತ್ರ ಕನ್ನಡಿಗರನ್ನು ಪಾಪಿಗಳು ಎಂದು ಕರೆಯುತ್ತಾರೆ, ಎಂದು ಉಲ್ಲೇಖಿಸಲಾಗಿದೆ.

VISTARANEWS.COM


on

Fact check
Koo

ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುಳ್ಳುಗಳ ಭರಾಟೆ ಜೋರಾಗಿದೆ. ಡೀಪ್​ಫೇಕ್​ ಸೇರಿದಂತೆ ಎಡಿಟಿಂಗ್​ ತಾಂತ್ರಿಕತೆ ಮಿತಿಮೀರಿ ಅಭಿವೃದ್ಧಿಯಾಗಿರುವ ಕಾರಣ ಸತ್ಯ ಯಾವುದು ಸುಳ್ಳು ಯಾವುದು ಎಂದು ಒಂದೇ ನೋಟಕ್ಕೆ ತಿಳಿದುಕೊಳ್ಳುವುದು ಕೂಡ ಕಷ್ಟವಾಗಿದೆ. ಇದೇ ಮಾದರಿಯಲ್ಲಿ ರೀತಿ ಪ್ರಧಾನಿ ಮೋದಿ (Narendra Modi) ಕರ್ನಾಟಕದ ಜನತೆಯನ್ನು ಪಾಪಿಗಳು ಎಂದು ಕರೆದಿದ್ದಾರೆ ಎಂಬ ವಿಡಿಯೊವೊಂದು ವೈರಲ್​ ಆಗಿದೆ. ಪ್ರಧಾನಿ ಆ ರೀತಿ ಹೇಳಿದ್ದಾರೆ ಎಂಬುದಾಗಿ ಕೇರಳ ಕಾಂಗ್ರೆಸ್​ ಸೇರಿದಂತೆ ಪ್ರತಿಪಕ್ಷಗಳ ಹಲವರ ಎಕ್ಸ್​ ಹ್ಯಾಂಡಲ್​ನಲ್ಲಿ ವಿಡಿಯೊ ಶೇರ್​ ಆಗಿದೆ. ಹಾಗಾದರೆ ಮೋದಿ ಕನ್ನಡದ ಮಂದಿಯನ್ನು ಪಾಪಿಗಳು ಅಂಥ ಹೇಳಿದ್ದು ಹೌದಾ? ಕಾಂಗ್ರೆಸ್​ ಪೋಸ್ಟ್​ ಮಾಡಿದ ವಿಡಿಯೊದ ಸಾಚಾತನವೇನು (Fact Check) ಎಂಬುದನ್ನು ಗಮನಿಸೋಣ.

2024 ರ ಲೋಕಸಭಾ ಚುನಾವಣೆಯ (Lok Sabha Election) ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 29, 2024 ರಂದು ದಾವಣಗೆರೆ ಮತ್ತು ಬೆಳಗಾವಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು. ಈ ಸಭೆಗಳಲ್ಲಿ ಅವರು ಮಾಡಿದ ಭಾಷಣದ ಕ್ಲಿಪ್​ಗಳೇ ಚರ್ಚೆಯ ವಿಷಯವಾಗಿರುವುದು. ಹಿಂದಿನ ಚುನಾವಣೆಯಲ್ಲಿ ಮತದಾನ ಮಾಡಿದ ಕರ್ನಾಟಕದ ಜನ ಪಾಪಿಗಳು. ಅವರನ್ನು ಶಿಕ್ಷಿಸಬೇಕು ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೊ ವೈರಲ್​ ಆಗಿದೆ.

ಪ್ರತ್ಯೇಕ ಮಾಡಿ ಹಂಚಲಾದ ವಿಡಿಯೊದಲ್ಲಿ ಪ್ರಧಾನಿ ಮೋದಿ ಹಿಂದಿಯಲ್ಲಿ ಹೇಳುತ್ತಿರುವುದು ಈ ರೀತಿ ಕೇಳಿಸುತ್ತದೆ; “ಚುನಾವಣೆಯಲ್ಲಿ ಮಾಡಿದ ಪಾಪಗಳಿಗಾಗಿ ನೀವು ಈ ಕರ್ನಾಟಕದ ಜನರನ್ನು ಶಿಕ್ಷಿಸಬೇಕು. ಮುಂಬರುವ ವರ್ಷಗಳಲ್ಲಿ ಮೋದಿ ನಿಮಗೆ ಗ್ಯಾರಂಟಿ ಕೊಡುತ್ತಾರೆ. ಇದನ್ನೇ ಎತ್ತಿಕೊಂಡು “ಕನ್ನಡಿಗರು ಬಿಜೆಪಿಗೆ ಮತ ಹಾಕುತ್ತಾರೆ. ಆದರೆ ಮೋದಿ ಮಾತ್ರ ಕನ್ನಡಿಗರನ್ನು ಪಾಪಿಗಳು ಎಂದು ಕರೆಯುತ್ತಾರೆ, ಎಂದು ಉಲ್ಲೇಖಿಸಿ ಪ್ರತಿಪಕ್ಷಗಳು ಪೋಸ್ಟ್​ಹಾಕಿಕೊಂಡಿವೆ.

ಕೇರಳ ಕಾಂಗ್ರೆಸ್​ನ ಅಧಿಕೃತ ಎಕ್ಸ್ ಖಾತೆಯಲ್ಲೂ ಇದನ್ನು ಪೋಸ್ಟ್ ಮಾಡಲಾಗಿದೆ “ಮೋದಿ ಸರ್ವಸ್ಸ ಕಳೆದುಕೊಂಡಿದ್ದಾರೆ. ಅವರು ತಮ್ಮ ಸ್ವಯಂ ಗೋಲ್ ಹೊಡೆಯುತ್ತಿದ್ದಾರೆ. ಅವರು ಈಗ ಕರ್ನಾಟಕದ ಜನರನ್ನು ಪಾಪಿಗಳು ಎಂದು ಕರೆದಿದ್ದಾರೆ. ಇಂತಹ ಅವಮಾನಗಳಿಗೆ ಕರ್ನಾಟಕದ ಜನರು ಕಪಾಳಮೋಕ್ಷ ಮಾಡದೇ ಬಿಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗಲಿದೆ’ ಎಂದು ಬರೆದುಕೊಂಡಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯ ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಸಂಯೋಜಕ ಗೌರವ್ ಪಾಂಧಿ ಅವರು ಈ ವೀಡಿಯೊಗೆ “ಕರ್ನಾಟಕದ ಜನರು ಬಿಜೆಪಿ ವಿರುದ್ಧ ಮತ ಚಲಾಯಿಸಿದ ಮಾತ್ರಕ್ಕೆ, ಅವರು ಪಾಪಿಗಳು ಎಂದು ಪ್ರಧಾನಿ ಮೋದಿ ಭಾವಿಸುತ್ತಾರೆ.” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Manish Sisodia : ಕೇಜ್ರಿವಾಲ್ ಜತೆಗಾರ ಮನೀಶ್ ಸಿಸೊಡಿಯಾ ಮತ್ತಷ್ಟು ದಿನ ಜೈಲಿನಲ್ಲೇ; ಜಾಮೀನು ಅರ್ಜಿ ವಜಾ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಪ್ರಧಾನಿ ಮೋದಿ ಅವರ ಈ ಹೇಳಿಕೆ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಹತಾಶೆಯೇ? ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರು ಬಿಜೆಪಿಯನ್ನು ತಿರಸ್ಕರಿಸುತ್ತಿದ್ದಾರೆ ಎಂಬ ಭಯವೇ? ಎಂದು ಟ್ವೀಟ್​ ಮಾಡಿದ್ದಾರೆ.

ವಾಸ್ತವಾಂಶಗಳು ಯಾವುವು?

ಪ್ರಧಾನಿ ಮೋದಿ ಅವರ ಅಧಿಕೃತ ಯೂಟ್ಯೂಬ್​ ಪೇಜ್​ನಲ್ಲಿ ಭಾಷಣ ನೇರ ಪ್ರಸಾರ ವಿಡಿಯೊ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ ಸುಮಾರು 29:00 ರಿಂದ 31:04 ನಿಮಿಷ ತನಕ ಪಿಎಂ ಮೋದಿ ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಾರೆ. ಬಿಜೆಪಿ ಆಡಳಿತದಲ್ಲಿ ಭಾರತೀಯ ರೈತರು ಅನುಭವಿಸಿದ ವಿವಿಧ ಪ್ರಯೋಜನಗಳ ಬಗ್ಗೆ ಮಾತನಾಡಿದ ಮೋದಿ “ಕಾಂಗ್ರೆಸ್ ಇಲ್ಲಿನ ರೈತರಿಗೆ ಮಾಡಿದ ದ್ರೋಹವು ದೊಡ್ಡ ಪಾಪ” ಎಂದು ಹೇಳುತ್ತಾರೆ. ‘ಇಲ್ಲಿ’ ಎಂಬುದು ಕರ್ನಾಟಕ ಎಂಬರ್ಥವಾಗಿದೆ.

“ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಖಾತೆಗಳಿಗೆ 10,000 ರೂ.ಗಳನ್ನು ಜಮಾ ಮಾಡಲಾಗುತ್ತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ₹ 4,000 ನೀಡುವುದನ್ನು ನಿಲ್ಲಿಸಿತು. ಅವರು ತಮ್ಮ ಮತವನ್ನು ಪಡೆಯುವಲ್ಲಿ ಯಶಸ್ವಿಯಾದ ನಂತರ, ಅವರು ರೈತರು ಮತ್ತು ಅವರ ಕೆಲಸದ ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸಿದರು. ಉಳಿದ 6,000 ರೂ.ಗಳನ್ನು ಮೋದಿ ಸರ್ಕಾರ ಕಳುಹಿಸುತ್ತದೆ. ಅದನ್ನು ರೈತರು ಪಡೆಯುತ್ತಾರೆ. ಅವರು ಇಲ್ಲಿ ನೀಡಿದ ಹಣದ ಒಂದು ಭಾಗವನ್ನು ಕಡಿತಗೊಳಿಸಿದರು.” ಎಂದು ಟೀಕಿಸಿದ್ದಾರೆ.

ಮುಂದುವರಿದ ಅವರು “ಈ ಚುನಾವಣೆಯಲ್ಲಿ ಅವರು ಮಾಡಿದ ಪಾಪಗಳಿಗಾಗಿ ನೀವು ಈ ಕರ್ನಾಟಕದ ಜನರು ಶಿಕ್ಷಿಸಬೇಕು. ದೆಹಲಿಯಿಂದ ಕಳುಹಿಸಿದ ಎಲ್ಲವೂ ಮುಂದಿನ ವರ್ಷಗಳಲ್ಲಿ ಮುಂದುವರಿಯುತ್ತದೆ ಎಂಬುದು ಮೋದಿಯ ಭರವಸೆ ” ಎಂದು ಅವರು ಹೇಳಿದ್ದಾರೆ. 31:00ರ ನಿಮಿಷದ ನಂತರ ನೋಡಿದಾಗ ಇದು ಕರ್ನಾಟಕ ಸರ್ಕಾರದ ವಿರುದ್ಧದ ಟೀಕೆ ಎಂಬುದು ಖಾತರಿಯಾಗುತ್ತದೆ.

ಪ್ರಧಾನಿ ಮೋದಿಯವರ ವೆಬೆ್​ಸೈಟ್​ನಲ್ಲಿ ಲಭ್ಯವಿರುವ ಭಾಷಣದ ಟ್ರಾನ್​ಸ್ಕ್ರಿಪ್ಟ್​​ ಈ ಮಾಹಿತಿಯನ್ನು ದೃಢಪಡಿಸುತ್ತದೆ. “ಈ ಚುನಾವಣೆಯಲ್ಲಿ ಮಾಡಿದ ಪಾಪಗಳಿಗಾಗಿ ಈ ಕಾಂಗ್ರೆಸ್ ನಾಯಕರಿಗೆ ಶಿಕ್ಷೆಯಾಗಬೇಕು” ಎಂದು ಅಲ್ಲಿ ಬರೆಯಲಾಗಿದೆ.

ಬೆಳಗಾವಿಯಲ್ಲಿ ಪ್ರಧಾನಿ ಮೋದಿಯವರ ಭಾಷಣದ ಈ ಕ್ಲಿಪ್ ಅನ್ನು ಆಯ್ದು ಎಡಿಟ್ ಮಾಡಲಾಗಿದೆ ಮತ್ತು ಹಿಂದೆ ಮುಂದೆ ಏನೂ ಇಲ್ಲದೆ ಪ್ರಸಾರ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತಿದೆ. ಪಿಎಂ ಮೋದಿ ನಿಖರವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂಬುದಾಗಿ ಹೇಳಿದ್ದರೂ ಕರ್ನಾಟಕದ ಜನರು ಎಂದು ತಪ್ಪುದಾರಿಗೆಳೆಯುವ ವ್ಯಾಖ್ಯಾನ ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ.

Continue Reading

ವೈರಲ್ ನ್ಯೂಸ್

Fact Check: ಓವೈಸಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮಹಿಳೆ ಅಲ್ಲವೆ?

Fact Check: ತಾವು ಮಹಿಳೆಯೇ ಅಲ್ಲ ಎಂದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಹೈದರಾಬಾದ್ ನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ತಾವು ಮಹಿಳೆಯೇ ಅಲ್ಲ ಎಂದು ಹೇಳಿರುವುದು ನಿಜವೇ, ಅವರು ಯಾಕೆ ಹಾಗೆ ಹೇಳಿದರು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದ ನಿಜಾಂಶ ಏನು? ಇಲ್ಲಿದೆ ಸಂಪೂರ್ಣ ವಿವರ.

VISTARANEWS.COM


on

By

Viral Video
Koo

ಹೈದರಾಬಾದ್: ಭಾರತೀಯ ಜನತಾ ಪಕ್ಷದ (BJP) ಹೈದರಾಬಾದ್ ನ (Hyderabad) ಅಭ್ಯರ್ಥಿ ಮಾಧವಿ ಲತಾ (Madhavi Latha) ಅವರು ತಾವು ಮಹಿಳೆಯೇ ಅಲ್ಲ ಎಂದು ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದ್ದು, ಇದನ್ನು ನೋಡಿರುವ ನೆಟ್ಟಿಗರು (Fact Check) ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾಧವಿ ಲತಾ ಅವರು “ನಾನು ಮಹಿಳೆ ಅಲ್ಲ” ಎಂದು ಹೇಳುವ ವಿಡಿಯೋವನ್ನು ಕತ್ತರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ. ಹೈದರಾಬಾದ್‌ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಮಹಿಳೆ ಅಲ್ಲ ಎಂದು ಸುಳ್ಳು ಪ್ರಚಾರವನ್ನೂ ಮಾಡಲಾಗುತ್ತಿದೆ. ಇದರ ಮೂಲ ಸಂದರ್ಶನದಲ್ಲಿ ಲತಾ ಅವರು ತಾನು ಕೇವಲ ಮಹಿಳೆಯಲ್ಲ ಆದರೆ ಶಕ್ತಿ ಎಂದು ಹೇಳಿದ್ದರು.

ಓವೈಸಿ ವಿರುದ್ಧ ಕಣಕ್ಕೆ

ತೆಲಂಗಾಣದ ಹೈದರಾಬಾದ್‌ನಲ್ಲಿ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನ ಹಾಲಿ ಸಂಸದ ಅಸಾದುದ್ದೀನ್ ಓವೈಸಿ ವಿರುದ್ಧ ಬಿಜೆಪಿಯಿಂದ ಕಣಕ್ಕೆ ಇಳಿದಿರುವ ನಟಿ ಲತಾ ಅವರು ಇತ್ತೀಚೆಗೆ ಪ್ರಚಾರ ಕಾರ್ಯಕ್ರಮವೊಂದರಲ್ಲಿ 221 ಕೋಟಿ ರೂ. ಮೌಲ್ಯದ ಕುಟುಂಬದ ಆಸ್ತಿಯನ್ನು ಘೋಷಿಸಿದ ನಂತರ ಹೈದರಾಬಾದ್ ಕ್ಷೇತ್ರದ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral News: ಸಿಂಗಾಪುರ ಏರ್‌ಲೈನ್ಸ್‌ ಪೈಲಟ್‌ ಅಂತಾ ಹೇಳ್ಕೊಂಡು ಪೋಸ್‌ ಕೊಡ್ತಿದ್ದವ ಲಾಕ್‌!

ವಿಡಿಯೋದಲ್ಲಿ ಏನಿದೆ?

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಲತಾ ಅವರು ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ಮಹಿಳೆಯಾಗಿ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, “ನಾನು ಮಹಿಳೆ ಅಲ್ಲ, ದಯವಿಟ್ಟು ನನ್ನನ್ನು ಮಹಿಳೆ ಎಂದು ಕರೆಯಬೇಡಿ”’ ಎಂದು ನೇರವಾಗಿ ಹೇಳಿದ್ದಾರೆ. ಆದರೆ ಮುಂದೆ ಅವರು, ನಾನು ಮಹಿಳೆ ಅಲ್ಲ, ಕೇವಲ ಮಹಿಳೆ ಅಲ್ಲ, ಮಹಾ ಶಕ್ತಿ ಎಂದು ಮಾಧವಿ ಲತಾ ಹೇಳಿದ್ದರು. ಆದರೆ ಈ ಭಾಗ ತೋರಿಸದೆ ತಾವು ಮಹಿಳೆ ಅಲ್ಲ ಎಂದ ದೃಶ್ಯವನ್ನಷ್ಟೇ ಕಟ್ ಮಾಡಿ ಶೇರ್ ಮಾಡಲಾಗುತ್ತದೆ.

ಈ ಕುರಿತು ಹಲವಾರು ಮಂದಿ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಹಾಗಾದರೆ ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಹಿಳೆ ಅಲ್ಲವೇ, ಮುಖ ನೋಡುವಾಗ ಮಹಿಳೆಯಂತೆ ಕಾಣುತ್ತಾರೆ, ಹಾಗಾದರೆ ಅವರು ಮಂಗಳಮುಖಿಯೇ… ಹೀಗೆ ಹಲವು ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ.


ಸತ್ಯ ಏನು?

ಲತಾ ಅವರು ಮಹಿಳೆ ಅಲ್ಲ ಎಂದು ನೀಡಿರುವ ಹೇಳಿಕೆಯನ್ನು ಕತ್ತರಿಸಿ ಹಂಚಿಕೊಳ್ಳಲಾಗಿದೆ ಎಂದು ಬೂಮ್ ಕಂಡುಹಿಡಿದಿದೆ. ‘ನ್ಯೂಸ್ ನೇಷನ್’ ಎಂಬ ಹಿಂದಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಲತಾ ಅವರು, ಓವೈಸಿ ವಿರುದ್ಧ ಸ್ಪರ್ಧಿಸುತ್ತಿರುವ ವಿಚಾರವಾಗಿ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಲ್ಲದೇ ತಾವು ಬಿಜೆಪಿ ಸೇರಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ಹೈದರಾಬಾದ್‌ನ ಹಳೆಯ ನಗರ ಭಾಗದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದಿರುವ ಅವರು, ನಗರದ ಅತಿದೊಡ್ಡ ಕೊಳೆಗೇರಿ ವಸಾಹತುಗಳಲ್ಲಿ ಒಂದಾದ ತಾಲಾಬ್ ಕಟ್ಟಾ ಮುಂತಾದವುಗಳ ಬಗ್ಗೆ ವರದಿಗಾರ ಪ್ರಶ್ನೆಗಳಿಗೆ ಉತ್ತರಿಸಿದರು. ಒಬ್ಬ ಮಹಿಳೆಯಾಗಿ ನೀವು ಆ ಪರಿಸ್ಥಿತಿಯನ್ನು ಹೇಗೆ ಎದುರಿಸಲು ಯೋಜಿಸುತ್ತೀರಿ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಿಟ್ಟಾದ ಸ್ವರದಲ್ಲಿ ನಾನು ಮಹಿಳೆ ಅಲ್ಲ, ನಾನು ಶಕ್ತಿ. ನೀವು ಅದನ್ನು ಮೊದಲು ಸ್ಪಷ್ಟಪಡಿಸಬೇಕು. ನನ್ನನ್ನು ಮಹಿಳೆ ಎಂದು ಪದೇ ಪದೇ ಕರೆಯಬೇಡಿ. ನೀವು ನನ್ನನ್ನು ದುರ್ಬಲ ಎಂದು ಪರಿಗಣಿಸುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ.

ಇದಾದ ನಂತರ ಲತಾ ಕ್ಯಾಮೆರಾದತ್ತ ತಿರುಗಿ, ನೇರವಾಗಿ ವೀಕ್ಷಕರನ್ನು ಉದ್ದೇಶಿಸಿ, ನಾನು ಒಬ್ಬ ಮಹಿಳೆ ಅಲ್ಲ, ತನ್ನ ಸಹೋದರ ಸಹೋದರಿಯರ ಶಕ್ತಿಯಿಂದ ಇಲ್ಲಿರುವ ಶಕ್ತಿ ಸ್ವತಃ ನಾನು. ಅವರ ಶಕ್ತಿಯಿಂದಾಗಿ ನಾನು ಉಳಿದಿದ್ದೇನೆ ಎಂದು ತಿಳಿಸಿದ್ದಾರೆ.

ಶಕ್ತಿ ಎಂಬ ಪದವನ್ನು ಹಿಂದೂ ಧರ್ಮದಲ್ಲಿ ವಿವಿಧ ರೂಪಗಳಲ್ಲಿ ಪೂಜಿಸುವ ದೈವಿಕ ಸ್ತ್ರೀಲಿಂಗ ಶಕ್ತಿಯನ್ನು ಉಲ್ಲೇಖಿಸಲು ಇದನ್ನು ಬಳಸಲಾಗುತ್ತದೆ. ವೈರಲ್ ಆಗಿರುವ ವಿಡಿಯೋದಲ್ಲಿ ಲತಾ ಅವರ ಹೇಳಿಕೆಯನ್ನು ಕತ್ತರಿಸಿ ಹಾಕಲಾಗಿದೆ.

Continue Reading
Advertisement
Vaccin for Hiv
ಆರೋಗ್ಯ21 mins ago

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Physical Assault
ದೇಶ29 mins ago

Physical Assault : ಅಶ್ಲೀಲ ವಿಡಿಯೊಗಳನ್ನು ನೋಡಿ 9 ವರ್ಷದ ತಂಗಿಯನ್ನು ಅತ್ಯಾಚಾರ ಮಾಡಿ ಕೊಂದ 13 ವರ್ಷದ ಬಾಲಕ!

Paris Olympics
ಕ್ರೀಡೆ44 mins ago

Paris Olympics: ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ; ರೆಸ್ಟೋರೆಂಟ್​ನಿಂದ ರೋಟಿ, ದಾಲ್‌ ತರಿಸಿದ ಬಾಕ್ಸರ್​

karnataka Rain
ಮಳೆ47 mins ago

Karnataka Rain : ಮಳೆಗೆ ಮನೆ ಮುಳುಗಡೆಯಾದ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವು

Rahul Gandhi
ದೇಶ47 mins ago

Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Gautam Gambhir
ಕ್ರೀಡೆ56 mins ago

Gautam Gambhir : ಗೌತಮ್​ ಗಂಭೀರ್​ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್​; ಭಾವುಕರಾದ ನೂತನ ಕೋಚ್​!

Kannada New Movie Nava Digantha latest news
ಸಿನಿಮಾ1 hour ago

Kannada New Movie: ನೆರವೇರಿತು ’ನವ ದಿಗಂತ’ ಚಿತ್ರದ ಮುಹೂರ್ತ

DK Shivakumar
ಕರ್ನಾಟಕ1 hour ago

Brand Bengaluru: ‘ಬ್ರ್ಯಾಂಡ್‌ ಬೆಂಗಳೂರು’ ನಿರ್ಮಾಣಕ್ಕೆ ಡಿಕೆಶಿ ಮಾಸ್ಟರ್‌ಪ್ಲಾನ್;‌ ಇಲ್ಲಿದೆ ಸಭೆಯ ವಿವರ

Drone Prathap Eye surgery for an old woman with her own money
ಬಿಗ್ ಬಾಸ್2 hours ago

Drone Prathap: ನುಡಿದಂತೆ ನಡೆದ ‘ಬಿಗ್ ಬಾಸ್’ ಡ್ರೋನ್ ಪ್ರತಾಪ್; ಸ್ವಂತ ಹಣದಿಂದ ವೃದ್ಧೆಗೆ ಕಣ್ಣು ಆಪರೇಷನ್ !

ದೇಶ2 hours ago

Chandipura Virus: ಗುಜರಾತ್‌ನಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್‌ಗೆ 48 ಬಲಿ; 39 ಮಂದಿಗೆ ಚಾಂದಿಪುರ ವೈರಸ್ ದೃಢ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

ramanagara news
ರಾಮನಗರ4 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ5 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ23 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

ಟ್ರೆಂಡಿಂಗ್‌