Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ? - Vistara News

Fact Check

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

Fact Check: ಸ್ಟಾರ್ ಗುರುತಿರುವ 500 ರೂ. ನೋಟು ನಕಲಿ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಆರ್‌ಬಿಐ ಏನು ಹೇಳಿದೆ?

VISTARANEWS.COM


on

Is 500 note with star symbol is fake, What Fact Check says?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚುಕ್ಕೆ(ಸ್ಟಾರ್) ಗುರುತು ಇರುವ (Star Symbol) 500 ರೂ. ನೋಟುಗಳು ನಕಲಿ (Fake Rs 500 notes), ಆ ನೋಟುಗಳನ್ನು ಬ್ಯಾಂಕ್‌ಗೆ ವಾಪಸ್ ಮಾಡಿ (Return to Bank) ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Social Media) ಜೋರಾಗಿದೆ. ಹಲವರು ಈ ಸುದ್ದಿಯನ್ನು ನಂಬಿ ನೋಟುಗಳನ್ನು ವಾಪಸ್ ಮಾಡಲು ಮುಂದಾದ ಉದಾಹರಣೆಗಳಿವೆ. ಈ ಸುದ್ದಿ ಕಳೆದ ಐದಾರು ತಿಂಗಳಿಂದ ಚಾಲ್ತಿಯಲ್ಲಿದ್ದು, ಈ ಕುರಿತು ಆಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಣೆ ನೀಡಿದೆ(Reserve bank of India). ಆದರೂ ಈ ವದಂತಿ ನಿಲ್ಲುತ್ತಿಲ್ಲ. ಪಿಐಬಿ ಫ್ಯಾಕ್ಟ್ ಚೆಕ್(PIB Fact Check), ಸ್ಟಾರ್‌ ಗುರುತಿರುವ ನೋಟುಗಳು ನಕಲಿ ಅಲ್ಲ; ಅಸಲಿ ಎಂದು ಈಗ ಮತ್ತೆ ಟ್ವೀಟ್ ಮಾಡಿದೆ.

500 ರೂ. ನೋಟು ಕುರಿತು ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ಕುರಿತು ಆರ್‌ಬಿಐ ಈ ಹಿಂದೆಯೇ ಮಾಹಿತಿ ನೀಡಿದೆ. ಸ್ಟಾರ್ ಗುರುತು ಈ ನೋಟುಗಳು ಚಲಾವಣೆಯ ಒಂದು ಭಾಗವಾಗಿದೆ. ನಕ್ಷತ್ರ ಚಿಹ್ನೆಯು ಸರಳವಾಗಿ ಗುರುತಿಸುವಿಕೆಯ ಭಾಗವಾಗಿದೆ. ಅಂದರೆ, ಈ ನೋಟು ಮರುಮುದ್ರಣಗೊಂಡ ಅಥವಾ ಬದಲಿಸಲಾದ ನೋಟಿಗೆ ಬದಲಿಯಾಗಿ ಚಲಾವಣೆಯಾಗುತ್ತಿರುವ ನೋಟು ಎಂದು ಆರ್‌ಬಿಐ ಹೇಳಿದೆ.

ಇದರರ್ಥ ನೋಟು ಮೂಲತಃ ದೋಷದಿಂದ ಮುದ್ರಿಸಲ್ಪಟ್ಟಿರುತ್ತದೆ. ಆ ನೋಟನ್ನು ಸ್ಟಾರ್ ಗುರುತಿನ ಚಿಹ್ನೆ ಹೊಸ ನೋಟಿನೊಂದಿಗೆ ಬದಲಾಯಿಸಲಾಗಿರುತ್ತದೆ. ಈ ನೋಟುಗಳು ಮೌಲ್ಯವು ಕಾನೂನುಬದ್ಧವಾಗಿರುತ್ತದೆ. ನಕ್ಷತ್ರ ಚಿಹ್ನೆಯೊಂದಿಗೆ ನೋಟುಗಳ ಮೊದಲ ಸರಣಿಯು 2006 ರಲ್ಲಿ ಚಲಾವಣೆ ಆಗಲಾರಂಭಿಸಿದವು ಎಂದು ಆರ್‌ಬಿಐ ಹೇಳಿದೆ.

ಸ್ಟಾರ್ ಗುರುತಿರುವ ಈ ನೋಟುಗಳು ನಕಲಿ ಎಂಬ ಕುರಿತು ಸಾಕಷ್ಟು ಪೋಸ್ಟ್‌ಗಳು ಐದಾರು ತಿಂಗಳ ಹಿಂದೆ ಟ್ವಿಟರ್ ಮತ್ತು ಫೇಸ್‍‌ಬುಕ್‌ನಲ್ಲಿ ಹರಿದಾಡಿದ್ದವು. ಜನರು ಈ ಕೂಡ ನಕಲಿ ಸುದ್ದಿಯನ್ನು ನಿಜವೆಂದೇ ನಂಬಿದ್ದರು. ಈಗ ಮತ್ತೆ ಅಂಥದ್ದೇ ಪುಕಾರುಗಳು ಎದ್ದಿವೆ. ಆದರೆ, ಸ್ಟಾರ್ ಗುರುತಿರುವ ನೋಟುಗಳು ಖಂಡಿತವಾಗಿಯೂ ನಕಲಿಯಲ್ಲ, ಅಸಲಿಯಾಗಿದ್ದು, ಕಾನೂನು ಬದ್ಧ ಮಾನ್ಯತೆ ಇದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನೂ ಓದಿ: Fact Check Cell : ಸರ್ಕಾರದ ಫ್ಯಾಕ್ಟ್‌ ಚೆಕ್‌ ಪ್ರಯತ್ನಕ್ಕೆ ಹಿನ್ನಡೆ; ಮಾನ್ಯತೆ ಪಡೆದ ಚೆಕರ್ಸ್‌ ನಿರಾಸಕ್ತಿ, ಯಾಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Lok Sabha Election: ಏ.19ರವರೆಗೆ ಲೋಕಸಭೆ ಚುನಾವಣೆ; ಮೇ 22ಕ್ಕೆ ರಿಸಲ್ಟ್?

Lok Sabha Election: ಮಾರ್ಚ್ 12ರಂದು ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭವಾಗಿ, ಏಪ್ರಿಲ್ 19ರಂದು ಮತದಾನ ನಡೆಯಲಿದೆ ಮತ್ತು ಮೇ 22ರಂದು ಫಲಿತಾಂಶ ಪ್ರಕಟವಾಗಲಿದೆ ಎಂಬ ವಾಟ್ಸಾಪ್ ಮೆಸೇಜ್ ಭಾರೀ ವೈರಲ್ ಆಗಿದೆ. ಅಸಲಿ ಸಂಗತಿ ಏನು?

VISTARANEWS.COM


on

Lok Sabha Election on April 19 and Result on May 22
Koo

ನವದೆಹಲಿ: ಲೋಕಸಭೆ ಚುನಾವಣಾ (Lok Sabha Election) ವೇಳಾ ಪಟ್ಟಿ ಕುರಿತು ಎಲ್ಲರಲ್ಲೂ ಕುತೂಹಲವಿದೆ(Election Schedule). ಯಾವಾಗ ದಿನಾಂಕ ಪ್ರಕಟವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ, ಏಪ್ರಿಲ್ 19ರಂದು ಚುನಾವಣೆ ನಡೆದು, ಮೇ 22ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ವಾಟ್ಸಾಪ್‌ ಮೆಸೇಜ್‌ವೊಂದು ಭಾರೀ ವೈರಲ್ ಆಗಿದೆ(WhatsApp Message Viral). ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಚುನಾವಣಾ ಆಯೋಗವು(Election Commission of India), ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಾಗುತ್ತದೆಯೇ ಹೊರತು, ಪಠ್ಯ ಅಥವಾ ವಾಟ್ಸಾಪ್ ಮೆಸೇಜ್ ಮೂಲಕ ಅಲ್ಲ. ಹಾಗಾಗಿ ಇದೊಂದು ಫೇಕ್ ನ್ಯೂಸ್ (Fake News) ಎಂದು ಕೇಂದ್ರ ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.

ಸಾರ್ವತ್ರಿಕ ಚುನಾವಣೆಯ ಸಂಪೂರ್ಣ ವೇಳಾಪಟ್ಟಿಯ ನಕಲಿ ಸಂದೇಶವೊಂದು ಹರಿದಾಡುತ್ತಿದೆ. ಮಾದರಿ ನೀತಿ ಸಂಹಿತೆ ಜಾರಿಗೆ ತರುವ ಮೂಲಕ ಮಾರ್ಚ್ 12 ರಂದು ಚುನಾವಣೆಯನ್ನು ಅಧಿಸೂಚಿಸಲಾಗುವುದು ಎಂದು ಅದರಲ್ಲಿ ತಿಳಿಸಲಾಗಿದೆ. ನಾಮಪತ್ರ ಸಲ್ಲಿಸಲು ಮಾರ್ಚ್ 28 ಕೊನೆಯ ದಿನಾಂಕ ಮತ್ತು ಏಪ್ರಿಲ್ 19 ಮತದಾನ ಮತ್ತು ಮೇ 22ರಂದು ಫಲಿತಾಂಶ ನಡೆಯಲಿದೆ ಎಂದು ನಕಲಿ ಸುದ್ದಿಯಲ್ಲಿ ತಿಳಿಸಲಾಗಿದೆ.

ಚುನಾವಣಾ ಆಯೋಗದ ಲೆಟರ್‌ಹೆಡ್‌‌ನಲ್ಲಿ ನಕಲಿ ಸಂದೇಶವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡಲು ಪ್ರಾರಂಭಿಸಿತು. ಸಾರ್ವತ್ರಿಕ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವುದು ಹೇಗೆ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ.

ಈ ಗೊಂದಲದ ನಡುವೆಯೇ ನಿನ್ನೆ ಚುನಾವಣಾ ಆಯೋಗ ವೈರಲ್ ಸಂದೇಶ ನಕಲಿ ಎಂದು ಸ್ಪಷ್ಟಪಡಿಸಿದೆ. ಲೋಕಸಭಾ ಚುನಾವಣೆಯ ವೇಳಾಪಟ್ಟಿಯ ಕುರಿತು ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ನಕಲಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶವು ನಕಲಿಯಾಗಿದೆ. ಆಯೋಗವು ಇಲ್ಲಿಯವರೆಗೆ ಯಾವುದೇ ದಿನಾಂಕಗಳನ್ನು ಘೋಷಿಸಿಲ್ಲ ಎಂದು ಎಕ್ಸ್ ವೇದಿಕೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಪೋಸ್ಟ್ ಮಾಡಿದೆ.

ಎಲೆಕ್ಷನ್ ವೇಳಾಪಟ್ಟಿಯನ್ನು ಆಯೋಗವು ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡುತ್ತದೆ. #VerifyBeforeYouAmplify ಎಂಬ ಹ್ಯಾಷ್ ಟ್ಯಾಗ್ ಬಳಸಿರುವ ಆಯೋಗವು, ವಾಟ್ಸಾಪ್ ಸಂದೇಶಗಳನ್ನು ಫಾರ್ವರ್ಡ್ ಮಾಡುವಾಗ ದೃಢೀಕರಿಸಬೇಕು ಎಂದು ಹೇಳಿದೆ.

ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯಿಂದ ಪ್ರಸಾರವಾದ ಆಂತರಿಕ ಟಿಪ್ಪಣಿ ಗೊಂದಲಕ್ಕೆ ಕಾರಣವಾದ ಒಂದು ತಿಂಗಳ ಬಳಿಕ ಈ ನಕಲಿ ಸಂದೇಶವೂ ವೈರಲ್ ಆಗಿದೆ. ಈ ಆಂತರಿಕ ಟಿಪ್ಪಣಿಯಲ್ಲಿ ಏಪ್ರಿಲ್ 16 ಅನ್ನು ತಾತ್ಕಾಲಿಕ “ಚುನಾವಣೆ ದಿನಾಂಕ” ಎಂದು ಉಲ್ಲೇಖಿಸಲಾಗಿದ್ದು ಮತ್ತು ಅಧಿಕಾರಿಗಳಿಗೆ ಸಿದ್ಧತೆಗಳನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿತ್ತು.

ಈ ಸುದ್ದಿಯನ್ನೂ ಓದಿ: Lok Sabha Election: ಈ ದಿನಾಂಕದಂದು ಲೋಕಸಭೆ ಚುನಾವಣಾ ವೇಳಾಪಟ್ಟಿ ಪ್ರಕಟ

Continue Reading

Fact Check

Fact Check: ಭಿಂದ್ರನ್‌ವಾಲೆಗೆ ಭಾರತ ರತ್ನ ಗೌರವ ಎಂದು ರಾಹುಲ್ ಗಾಂಧಿ ಹೇಳಿದರೆ?

Fact Check: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಲಿಸ್ತಾನಿ ಉಗ್ರ ನಾಯಕ ಭಿಂದ್ರನ್‌ವಾಲೆಗೆ ಭಾರತ ರತ್ನ ನೀಡಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದರೇ? ಇದರ ಅಸಲಿಯತ್ತೇನು?

VISTARANEWS.COM


on

Rahul Gandhi
Koo

ನವದೆಹಲಿ: ಇತ್ತೀಚೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು (Central Government) ಐವರು ಸಾಧಕರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿತು(Bharat Ratna Award). ಇದೇ ವೇಳೆ, ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ರಾಹುಲ್ ಗಾಂಧಿ (Rahul Gandhi) ಅವರು ಖಲಿಸ್ತಾನ ಉಗ್ರ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಗೆ (Jarnail Singh Bhindranwale) ಭಾರತ ರತ್ನ ನೀಡಲಾಗುವುದು ಎಂದು ಹೇಳಿದ್ದಾರೆಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ರಾಹುಲ್ ಗಾಂಧಿ ಅವರು ನಿಜವಾಗಿಯೂ ಹಾಗೆ ಹೇಳಿದ್ದರೇ, ಫ್ಯಾಕ್ಟ್ ಚೆಕ್ (Fact Check) ಏನು ಹೇಳುತ್ತದೆ ನೋಡೋಣ ಬನ್ನಿ.

ಎಕ್ಸ್ ವೇದಿಕೆಯಲ್ಲಿ ಸಕ್ರಿಯವಾಗಿರುವ ದಿ ಬೈಂಗನ್ ಎಂಬ ಹೆಸರಿನ ಖಾತೆಯಲ್ಲಿ ಮಾಡಲಾದ ಪೋಸ್ಟ್ ಇಷ್ಟಕ್ಕೆಲ್ಲ ಕಾರಣ. ಈ ಪೋಸ್ಟ್‌ನಲ್ಲಿ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಗೆ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂದು ತಿಳಿಸಲಾಗಿತ್ತು.

ಬ್ರೇಕಿಂಗ್: ಒಂದು ವೇಳೆ 2024ರಲ್ಲಿ ಕಾಂಗ್ರೆಸ್‌ ಪಕ್ಷವು ಗೆದ್ದರೆ ಭಿಂದ್ರನ್‌ವಾಲೆಗೆ ಭಾರತ ರತ್ನ ನೀಡುವ ಭರವಸೆಯನ್ನು ರಾಹುಲ್ ಗಾಂಧಿ ಅವರು ನೀಡಿದ್ದಾರೆ ಎಂದು ದಿ ಬೈಂಗನ್ ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಈ ಪೋಸ್ಟ್‌ ಭಾರೀ ವೈರಲ್ ಆಗುತ್ತಿದೆ.

ಆದರೆ, ಈ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಹಲವರು ಭಿಂದ್ರನ್‌ವಾಲೆಗೆ ಭಾರತ ರತ್ನ ನೀಡಬೇಕು ಎಂದು ಹೇಳಿದ್ದಾರೆ. ಆದರೆ, ಈ ಹೇಳಿಕೆಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ, ಇದೊಂದು ಸುಳ್ಳು ಸುದ್ದಿಯಾಗಿದ್ದು, ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುವ ಪ್ರಯತ್ನವಾಗಿದೆ ಎಂದು ಹೇಳಬಹುದು. ಆಗಾಗ ರಾಹುಲ್ ಗಾಂಧಿ ಹೆಸರಿನಲ್ಲಿ ಇಂಥ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತದೆ. ಕೆಲವೊಮ್ಮೆ ಅವರ ಭಾಷಣದ ತುಣುಕಗಳನ್ನು ಕತ್ತರಿಸಿ, ಬೇರೆಯದ್ದೇ ಅರ್ಥ ಬರುವ ರೀತಿಯಲ್ಲಿ ಪ್ರಸೆಂಟ್ ಮಾಡಲಾಗುತ್ತದೆ.

ಭಾರತದ ಇತಿಹಾಸದಲ್ಲಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ವಿವಾದತ್ಮಾಕ ವ್ಯಕ್ತಿಯಾಗಿದ್ದಾರೆ. ಅಮೃತಸರದ ಸ್ವರ್ಣ ಮಂದಿರದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಭಿಂದ್ರನ್‌ವಾಲೆ ಅಡಗಿಕೊಂಡಿದ್ದ. ಆತನನ್ನು ಹೊರ ಹಾಕಲು ಅಂದಿನ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವು ಆಪರೇಷನ್ ಬ್ಲೂ ಸ್ಟಾರ್ ನಡೆಸಿತ್ತು.

3 ಜೂನ್ 1984 ರಂದು ಭಾರತದ ಪ್ರಧಾನಿ ಇಂದಿರಾ ಗಾಂಧಿ ಅವರು ಆಪರೇಷನ್ ಬ್ಲೂ ಸ್ಟಾರ್ ಅನ್ನು ಪ್ರಾರಂಭಿಸಿದರು ಮತ್ತು ಶಸ್ತ್ರಸಜ್ಜಿತ ಸಿಖ್ ಉಗ್ರಗಾಮಿಗಳನ್ನು ಸಂಕೀರ್ಣದಿಂದ ತೆಗೆದುಹಾಕಲು ಗೋಲ್ಡನ್ ಟೆಂಪಲ್ ಸಂಕೀರ್ಣದ ಮೇಲೆ ದಾಳಿ ಮಾಡಲು ಭಾರತೀಯ ಸೇನೆಗೆ ಆದೇಶಿಸಿದರು. ಕಾರ್ಯಾಚರಣೆಯಲ್ಲಿ ಭಿಂದ್ರನ್‌ವಾಲೆ ಕೊಲ್ಲಲ್ಪಟ್ಟರು. ಇದಕ್ಕೆ ಪ್ರತಿಯಾಗಿ ಇಂದಿರಾ ಗಾಂಧಿ ಅವರ ಹತ್ಯೆ ಕೂಡ ನಡೆಯಿತು. ಅವರು ತಮ್ಮ ಸಿಖ್ ಅಂಗರಕ್ಷಕರಿಂದಲೇ ಹತ್ಯೆಗೀಡಾದರು.

ಈ ಸುದ್ದಿಯನ್ನೂ ಓದಿ: Fact Check: ಮೊಹಮ್ಮದ್​ ಶಮಿ-ಸಾನಿಯಾ ಮಿರ್ಜಾ ನಿಶ್ಚಿತಾರ್ಥ ಫೋಟೊ ವೈರಲ್​; ಅಸಲಿಯತ್ತು ಇಲ್ಲಿದೆ 

Continue Reading

Fact Check

Ram Mandir: ಬಾಬರಿ ಮಸೀದಿ ಇದ್ದ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಿಲ್ಲವೇ?

Ram Mandir: ರಾಮ ಮಂದಿರವನ್ನು ಧ್ವಂಸ ಮಾಡಲಾದ ಬಾಬರಿ ಮಸೀದಿ ಜಾಗದಲ್ಲಿ ನಿರ್ಮಾಣ ಮಾಡುತ್ತಿಲ್ಲ ಎಂದು ಹಲವರು ಆರೋಪಿಸಿದ್ದಾರೆ. ಹಾಗಾದರೆ, ನಿಜವಾಗಿಯೂ ರಾಮ ಮಂದಿರವನ್ನು ಎಲ್ಲಿ ನಿರ್ಮಾಣ ಮಾಡಲಾಗುತ್ತಿದೆ?

VISTARANEWS.COM


on

Wasn't a Ram Mandir built on the site of the Babri Masjid?
Koo

ನವದೆಹಲಿ: ಬಾಬರಿ ಮಸೀದಿ (Babri Masjid) ಇದ್ದ ಜಾಗದಲ್ಲಿ ರಾಮ ಮಂದಿರ (Ram Mandir) ನಿರ್ಮಾಣವಾಗಿಲ್ಲವೇ? ಹೌದು ಇಂಥದೊಂದು ಪ್ರಶ್ನೆ ಮೂಡಲು ಕಾರಣವಿದೆ. ಉದ್ದವ್ ಠಾಕ್ರೆ ಬಣದ ಸಂಜಯ್ ರಾವುತ್ ಹಾಗೂ ಕಾಂಗ್ರೆಸ್ ಪಕ್ಷದ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವರು ರಾಮ ಮಂದಿರವನ್ನು ಬಾಬರಿ ಮಸೀದಿ ಇದ್ದ ಜಾಗದಿಂದ 2ರಿಂದ 3 ಕಿ.ಮೀ ದೂರದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಷ್ಟು ದೂರದಲ್ಲಿ ಮಂದಿರ ನಿರ್ಮಾಣ ಮಾಡುವುದಾಗಿದ್ದರೆ, ಬಾಬರಿ ಮಸೀದಿಯನ್ನು ಏಕೆ ಧ್ವಂಸ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಹಲವರು ಗೂಗಲ್ ಮ್ಯಾಪ್‌ಗಳನ್ನು (Google Map) ಷೇರ್ ಮಾಡಿಕೊಂಡು, ಗೊಂದಲವನ್ನು ಮೂಡಿಸುತ್ತಿದ್ದಾರೆ. ಆದರೆ, ಫ್ಯಾಕ್ಟ್‌ಚೆಕರ್ಸ್ ಪ್ರಕಾರ(Fact Check), ಬಾಬರಿ ಮಸೀದಿ ಇದ್ದ ಜಾಗದಲ್ಲೇ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ.

ಫ್ಯಾಕ್ಟ್ ಚೆಕ್ ಮಾಡುವ ಅಲ್ಟ್ ನ್ಯೂಸ್ ಈ ಕುರಿತು ಫ್ಯಾಕ್ಟ್ ಚೆಕ್ ಮಾಡಿದ್ದು, ಬಾಬರಿ ಮಸೀದಿ ಇದ್ದ ಜಾಗದಲ್ಲೇ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದೆ. ಗೂಗಲ್ ಮ್ಯಾಪ್ ಮತ್ತು ಗೂಗಲ್ ಅರ್ಥ್ ಪ್ರೋ ಬಳಸಿಕೊಂಡು ಬಾಬರಿ ಮಸೀದಿ ಜಾಗ ಮತ್ತು ಮಂದಿರ ನಿರ್ಮಾಣ ಆಗುತ್ತಿರುವ ಜಾಗವನ್ನು ಗುರುತಿಸಲಾಗಿದೆ ಮತ್ತು ಮಸೀದಿ ಇದ್ದ ಜಾಗದಲ್ಲೇ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಖಚಿತಪಡಿಸಲಾಗಿದೆ.

ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ, ಅದನ್ನು “ಬಾಬರ್ ಮಸೀದಿ” ಎಂದು ಉಲ್ಲೇಖಿಸಲಾಗಿದೆ ಮತ್ತು “ಬಾಬರಿ ಮಸೀದಿ” ಅಲ್ಲ. ಈಗ, ಗೂಗಲ್ ಮ್ಯಾಪ್‌ನಲ್ಲಿ ಹುಡುಕಿದಾಗ, ಸೀತಾ-ರಾಮ್ ಬಿರ್ಲಾ ದೇವಾಲಯವನ್ನು ರಾಮ ಮಂದಿರ ಎಂದು “ತಪ್ಪಾಗಿ ಗುರುತಿಸಲಾಗಿದೆ” ಎಂದು ಕಂಡುಬಂದಿದೆ. ಅಲ್ಲದೆ, ಈ ಮಸೀದಿಯ ಜಾಗದಲ್ಲಿ ಬಾಬರಿ ಮಸೀದಿಯ ಚಿತ್ರವನ್ನು ಅಪ್‌ಲೋಡ್ ಮಾಡಲಾಗಿದೆ. ನಾನಾ ರೀತಿಗಳಿಂದ ಫ್ಯಾಕ್ಟ್ ಚೆಕ್ ಮಾಡಿರುವ ಫ್ಯಾಕ್ಟ್ ನ್ಯೂಸ್, ಬಾಬರಿ ಮಸೀದಿ ಇದ್ದ ಜಾಗದಲ್ಲೇ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿದೆ.

ನಾಯಕರು ಹೇಳಿದ್ದೇನು?

ಬಾಬರಿ ಮಸೀದಿ ಇದ್ದ ಜಾಗದಿಂದ ಮೂರು ಕಿ.ಮೀ ದೂರದಲ್ಲಿ ಮಂದಿರವನ್ನು ಏಕೆ ನಿರ್ಮಾಣ ಮಾಡಲಾಗುತ್ತಿದೆ? ಹಾಗಿದ್ದರೆ, ಹಿಂದೂ-ಮುಸ್ಲಿಮ್ ನಡುವೆ ದ್ವೇಷವನ್ನು ಏಕೆ ಹರಡಲಾಯಿತು ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಅವರು, ಕೋಮ ವಿವಾದವನ್ನು ಸೃಷ್ಟಿಸುವುದಕ್ಕಾಗಿಯೇ ಮಸೀದಿಯನ್ನು ಧ್ವಂಸ ಮಾಡಲಾಯಿತು. ಬಿಜೆಪಿ, ವಿಎಚ್‌ಪಿ ಮತ್ತು ಆರೆಸ್ಸೆಸ್‌ಗೆ ಮಸೀದಿಯನ್ನು ಧ್ವಂಸ ಮಾಡುವುದಷ್ಟೇ ಬೇಕಾಗಿತ್ತು ಹೊರತು ರಾಮ ಮಂದಿರ ನಿರ್ಮಾಣವಲ್ಲ. ಯಾಕೆಂದರೆ, ಮಸೀದಿಯನ್ನು ಧ್ವಂಸ ಮಾಡದೇ ಹೊರತು ಅದು ಹಿಂದೂ-ಮುಸ್ಲಿಮ್ ವಿವಾದವಾಗಿ ಮಾರ್ಪಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Fact Check: ಅಮುಲ್‌ನಿಂದ ʼಶರಮ್‌ʼ ಹೆಸರಿನ ಚೀಸ್ ಬಿಡುಗಡೆ?

Continue Reading

Fact Check

Masood Azhar : ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಸತ್ತಿದ್ದಾನೆಯೇ? ಫ್ಯಾಕ್ಟ್​ ಚೆಕ್​ ಇಲ್ಲಿದೆ

ನವೆಂಬರ್ 3 ರಂದು ಡೇರಾ ಇಸ್ಮಾಯಿಲ್ ಖಾನ್​ನಲ್ಲಿ ಪೊಲೀಸ್ ವ್ಯಾನ್ ಅನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ 6 ಮಂದಿ ಮೃತಪಟ್ಟಿದ್ದರು. ಅದರಲ್ಲಿ ಮಸೂದ್ ಕೂಡ ಒಬ್ಬ ಎಂದು ಹೇಳಲಾಗುತ್ತಿದೆ.

VISTARANEWS.COM


on

Masod Azar
Koo

ನವದೆಹಲಿ: ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿರುವ ಪಾಕಿಸ್ತಾನ ಮೂಲದ ಭಯೋತ್ಪಾದಕ ಮಸೂದ್ ಅಜರ್ (Masood Azhar) ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ ಎಂಬುದಾಗಿ ಸುದ್ದಿ ಹರಡುತ್ತಿದೆ. ಅದೇ ಸುದ್ದಿಯೀಗ ಚರ್ಚೆಯ ವಿಷಯವಾಗಿದೆ ಈಗ ಸಾಮಾಜಿಕ ಆ ರೀತಿಯ ಮಾಧ್ಯಮದಲ್ಲಿ ಹಲವಾರು ಪೋಸ್ಟ್​ಗಳು ವೈರಲ್ ಆಗುತ್ತಿವೆ. ದಶಕಗಳಿಂದ ಭಾರತದಲ್ಲಿ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಷಪ್ರಾಶನಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ ಎಂಬುವ ಪೋಸ್ಟರ್​ಗಳು ಹರಿದಾಡಿದ ಬೆನ್ನಲ್ಲೇ ಮಸೂದ್ ವಿಡಿಯೊಗಳು ಹರಿದಾಡುತ್ತಿವೆ.

ಭಾರತದ ಗುಪ್ತಚರ ಸಂಸ್ಥೆಗಳು ವಿದೇಶಿ ನೆಲದಲ್ಲಿ ಹತ್ಯೆಗಳನ್ನು ನಡೆಸುತ್ತಿವೆ ಎಂದು ಆರೋಪಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಪಾಕಿಸ್ತಾನದಲ್ಲಿ, ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ವರದಿಗಳಲ್ಲಿ ಅನೇಕವು ಸುಳ್ಳು ಎಂದು ತಿಳಿದುಬಂದಿದೆ. ಕಳೆದ ತಿಂಗಳು, ಮತ್ತೊಬ್ಬ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ವಿಷಪ್ರಾಶನದಿಂದ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿತ್ತು, ಆದರೆ ದಾವೂದ್ ಸಹಚರರು ಈ ಹೇಳಿಕೆಗಳನ್ನು ತಿರಸ್ಕರಿಸಿದ್ದರು.

2001ರ ಸಂಸತ್ ದಾಳಿ ಸೇರಿದಂತೆ ಹಲವು ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಬೇಕಾಗಿದ್ದ ಮಸೂದ್ ಅಜರ್ ಪ್ರಕರಣದಲ್ಲಿ ಪಾಕಿಸ್ತಾನದ ಟ್ವಿಟರ್ ಹ್ಯಾಂಡಲ್​ಗಳು ಮೃತಪಟ್ಟಿದ್ದಾರೆ ಎಂದು ಘೋಷಿಸಿವೆ. ಜೈಶ್-ಎ-ಮೊಹಮ್ಮದ್ ಮುಖ್ಯಸ್ಥರು ಬೆಳಿಗ್ಗೆ 5 ಗಂಟೆಗೆ ಮಸೀದಿಯಿಂದ ಹಿಂದಿರುಗುತ್ತಿದ್ದಾಗ ಬಹವಾಲ್ಪುರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಗಳು ಈ ಸ್ಫೋಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಪಾಕಿಸ್ತಾನದ ಯಾವುದೇ ಮುಖ್ಯವಾಹಿನಿಯ ಮಾಧ್ಯಮಗಳು ಇದನ್ನು ವರದಿ ಮಾಡಿಲ್ಲ.

ಸತ್ಯಾಂಶ ಏನಿದೆ?

ಉರಿಯುತ್ತಿರುವ ಕಾರಿನ ಫೋಟೋವನ್ನು ಮೊದಲು ಪೋಸ್ಟ್ ಮಾಡಿದವರಲ್ಲಿ ಟೈಮ್ಸ್ ಅಲ್​ಜಿಬ್ರಾ ಎಂಬ ಹ್ಯಾಂಡಲ್ ಕೂಡ ಒಂದು. ಮುಜಫರಾಬಾದ್ ಸುದ್ದಿ ಬುಲೆಟಿನ್ ಕೂಡ ಫೋಟೋವನ್ನು ಬಳಸಿದೆ. ನವೆಂಬರ್ 3 ರಂದು ಡೇರಾ ಇಸ್ಮಾಯಿಲ್ ಖಾನ್​ನಲ್ಲಿ ನಡೆದ ದಾಳಿಯಲ್ಲಿ ಪೊಲೀಸ್ ವ್ಯಾನ್ ಅನ್ನು ಗುರಿಯಾಗಿಸಿಕೊಂಡು 6 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಜನರು ಗಾಯಗೊಂಡಿದ್ದಾರೆ ಎಂದು ಒಎಸ್ಐಎನ್​ಟಿ ಎಂಬ ಟ್ವಿಟರ್ ಹ್ಯಾಂಡಲ್ ಪೋಸ್ಟ್ ಮಾಡಿದೆ.

ಟ್ವಿಟರ್​ ಹ್ಯಾಂಡಲ್​ಗಳು ಮರುಬಳಕೆ ಮಾಡಿದ ವೀಡಿಯೊವನ್ನು ಸಹ ಬಳಸಿವೆ. ಇದು 2019 ರ ವೀಡಿಯೊ ಎಂದು ತಿಳಿದುಬಂದಿದೆ. ಸ್ಫೋಟದಲ್ಲಿ 3 ಸಾಮಾಜಿಕ ಮಾಧ್ಯಮ ಇನ್​ಫ್ಲ್ಯುನ್ಸರ್​ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ವೀಡಿಯೊದ ಬಗ್ಗೆ ಆ ಬಿಟ್ ಸಹ ನಿಜವೇ ಎಂದು ದೃಢಪಡಿಸಲಾಗಿಲ್ಲ.

ಮಸೂದ್ ಅಜರ್ ಹಲವು ವರ್ಷಗಳಿಂದ ಭಾರತದಲ್ಲಿ ಬೇಕಾಗಿದ್ದಾನೆ. 2001 ರಲ್ಲಿ ಸಂಸತ್ತಿನ ಮೇಲಿನ ದಾಳಿಯ ಹೊರತಾಗಿ, ಜುಲೈ 2005 ರಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯ ಮತ್ತು ಫೆಬ್ರವರಿ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಸಿಬ್ಬಂದಿಯ ಮೇಲೆ ನಡೆದ ದಾಳಿ ನಡೆಸಿದ್ದ. 2016ರ ಜನವರಿಯಲ್ಲಿ ಅಫ್ಘಾನಿಸ್ತಾನದ ಮಜರ್-ಇ-ಶರೀಫ್ನಲ್ಲಿರುವ ಭಾರತೀಯ ದೂತಾವಾಸದ ಮೇಲೆ ದಾಳಿ ನಡೆಸಿದ್ದ.

ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕನಿಗೆ ಪಾಕಿಸ್ತಾನವು ಸುರಕ್ಷಿತ ಬಂದರನ್ನು ಒದಗಿಸುತ್ತದೆ ಎಂದು ತಿಳಿದಿದೆ. ಆದರೆ ಇತ್ತೀಚಿನ ವರದಿಗಳ ಪ್ರಕಾರ, ಮಸೂದ್ ಅಜರ್ ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದಾನೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಇತ್ತೀಚೆಗೆ ಬರೆದ ಪತ್ರದಲ್ಲಿ, ಮಸೂದ್ ಅಜರ್ ಹೆಚ್ಚಾಗಿ ನಂಗರ್ಹಾರ್ ಪ್ರಾಂತ್ಯ ಅಥವಾ ಕುನಾರ್ ಪ್ರಾಂತ್ಯದಲ್ಲಿ ಅಡಗಿದ್ದಾನೆ ಎಂದು ಪಾಕಿಸ್ತಾನ ಹೇಳಿದೆ.

Continue Reading
Advertisement
Modi GDP
ಪ್ರಮುಖ ಸುದ್ದಿ35 mins ago

GDP Growth : ಜಿಡಿಪಿಯ ಭರ್ಜರಿ ಏರಿಕೆಗೆ ಮೋದಿ ಸಂತಸ; ಏನಂದ್ರು ಅವರು?

2nd PU Exam from tomorrow what are the conditions
ಶಿಕ್ಷಣ35 mins ago

2nd PU Exam: ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ; ವಿದ್ಯಾರ್ಥಿಗಳಿಗೆ ಇಲ್ಲಿದೆ ಕಂಡಿಷನ್!

insurance
ಮನಿ-ಗೈಡ್38 mins ago

Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

Budget session Siddaramaiah
ವಿಧಾನಮಂಡಲ ಅಧಿವೇಶನ49 mins ago

Budget Session : ಬಿಜೆಪಿಯ ಜೈ ಶ್ರೀರಾಮ್‌ VS ಸಿದ್ದರಾಮಯ್ಯರ ಜೈ ಸೀತಾರಾಮ್‌!

Nitasha Kaul
ದೇಶ1 hour ago

Nitasha Kaul : ಬ್ರಿಟನ್​ ಲೇಖಕಿಯನ್ನು ಏರ್​ಪೋರ್ಟ್​​ನಿಂದಲೇ ವಾಪಸ್​ ಕಳಿಸಿದ್ದಕ್ಕೆ ಕಾರಣ ಕೊಟ್ಟ ಕೇಂದ್ರ ಸರ್ಕಾರ

Siddaramaiah plan behind accepting Caste Census Report Sunil Kumar reveals reason
ರಾಜಕೀಯ1 hour ago

‌Caste Census Report: ಜಾತಿ ಗಣತಿ ಸ್ವೀಕಾರದ ಹಿಂದೆ ಸಿದ್ದರಾಮಯ್ಯ ಪ್ಲ್ಯಾನ್‌ ಏನು? ಕಾರಣ ಬಿಚ್ಚಿಟ್ಟಿದ್ದಾರೆ ಸುನಿಲ್‌ ಕುಮಾರ್!

Rowdy sheeter kidnaps cricket bookie
ಕ್ರಿಕೆಟ್2 hours ago

WPL 2024 : ಮಹಿಳಾ ಐಪಿಎಲ್‌ನಲ್ಲಿ ಬೆಟ್ಟಿಂಗ್ ಕಟ್ಟಿದ ಬುಕ್ಕಿಯೇ ಕಿಡ್ನ್ಯಾಪ್‌!

GDP Growth
ಪ್ರಮುಖ ಸುದ್ದಿ2 hours ago

GDP Growth : ನಿರೀಕ್ಷೆಗೂ ಮೀರಿ ಭಾರತದ ಜಿಡಿಪಿ ಬೆಳವಣಿಗೆ; ಕಳೆದ ತ್ರೈಮಾಸಿಕದಲ್ಲಿ ಭರ್ಜರಿ ಪ್ರಗತಿ

film festival
ಸಿನಿಮಾ2 hours ago

Bengaluru Film Festival: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

BJP protest demanding action against those who shouted pro Pak slogan
ಉತ್ತರ ಕನ್ನಡ2 hours ago

Uttara Kannada News: ಪಾಕ್‌ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಲ್ಲಾಪುರದಲ್ಲಿ ಬಿಜೆಪಿ ಪ್ರತಿಭಟನೆ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ16 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ3 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ4 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌