Winter Wedding Fashion: ವೆಡ್ಡಿಂಗ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಎಥ್ನಿಕ್ ಲೇಯರ್ ಕೋ ಆರ್ಡ್ ಸೂಟ್ ! - Vistara News

ಫ್ಯಾಷನ್

Winter Wedding Fashion: ವೆಡ್ಡಿಂಗ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಎಥ್ನಿಕ್ ಲೇಯರ್ ಕೋ ಆರ್ಡ್ ಸೂಟ್ !

ವಿಂಟರ್ ವೆಡ್ಡಿಂಗ್ ಸೀಸನ್ ಫ್ಯಾಷನ್‌ನಲ್ಲಿ (Winter Wedding Fashion) ಇದೀಗ ನಾನಾ ವಿನ್ಯಾಸದ ಎಥ್ನಿಕ್ ಲೇಯರ್ ಲುಕ್ ನೀಡುವ ಕೋ ಆರ್ಡ್ ಸೂಟ್ ಹಾಗೂ ಸೆಟ್‌ಗಳು ಎಂಟ್ರಿ ನೀಡಿವೆ. ಲಾಂಗ್ ಕೋಟ್‌ಗಳ ಜೊತೆಯಿರುವ ಇವು ಸದ್ಯ ಟ್ರೆಂಡ್ ಲಿಸ್ಟ್‌ನಲ್ಲಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Winter Wedding Fashion
ಚಿತ್ರಗಳು : ಶ್ರದ್ಧಾ ಆರ್ಯಾ, ನಟಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ವೆಡ್ಡಿಂಗ್ ಸೀಸನ್ ಫ್ಯಾಷನ್‌ನಲ್ಲಿ (Winter Wedding Fashion) ಇದೀಗ ನಾನಾ ವಿನ್ಯಾಸದ ಎಥ್ನಿಕ್ ಹಾಗೂ ಟ್ರೆಡಿಷನಲ್ ಲುಕ್ ನೀಡುವಂತಹ ಇಂಡೋ-ವೆಸ್ಟರ್ನ್ ಶೈಲಿಯ ಲೇಯರ್ ಕೋ ಆರ್ಡ್ ಸೂಟ್ ಅಥವಾ ಸೆಟ್‌ಗಳು ಎಂಟ್ರಿ ನೀಡಿವೆ. ಕಾರ್ಡಿಗಾನ್ ಶೈಲಿಯ ಸಿಂಪಲ್ ಕೋಟ್ ಅಥವಾ ಮೇಲುಡುಗೆಯಂತೆ ಕಾಣುವ ಮಂಡಿಯ ಕೆಳಗಿನ ತನಕ ಬರುವ ಲಾಂಗ್ ಲೈಟ್‌ವೇಟ್‌ ಕೋಟ್‌ಗಳನ್ನು ಹೊಂದಿರುವ ಇವು ತ್ರೀ ಪೀಸ್ ಕೋ ಆರ್ಡ್ ಸೆಟ್‌ನಲ್ಲಿ ದೊರೆಯುತ್ತಿವೆ.

Ethnic Style Layer Coord Set

ಎಥ್ನಿಕ್ ಸ್ಟೈಲ್ ಲೇಯರ್ ಕೋ ಆರ್ಡ್ ಸೆಟ್

ಬಹುತೇಕ ಕೋ ಆರ್ಡ್ ಸೂಟ್ ಅಥವಾ ಸೆಟ್‌ಗಳು ಕ್ಯಾಶುವಲ್ ಸ್ಟೈಲ್‌ನಲ್ಲಿ ದೊರೆಯುತ್ತವೆ. ಇತ್ತೀಚೆಗೆ ಇವು ಎಲ್ಲಾ ಕೆಟಗರಿಗಳಲ್ಲೂ ದೊರಕತೊಡಗಿದ್ದು, ಇದೀಗ ಮದುವೆ ಮನೆಗಳಲ್ಲೂ ಧರಿಸಬಹುದಾದ ಹ್ಯಾಂಡ್ ವರ್ಕ್, ಮೆಷಿನ್ ವರ್ಕ್‌ನಂತಹ ವಿನ್ಯಾಸದಲ್ಲಿ ಎಥ್ನಿಕ್ ಲುಕ್‌ನಲ್ಲಿ ದೊರೆಯುತ್ತಿವೆ. ಅದರಲ್ಲೂ ಚಳಿಗಾಲಕ್ಕೆ ಮ್ಯಾಚ್ ಆಗುವಂತೆ ಮೇಲುಡುಗೆ ಇರುವಂತಹ ಕೋಟ್ ಶೈಲಿಯಲ್ಲಿ ತ್ರೀ ಪೀಸ್‌ನಲ್ಲಿ ಸಿಗುತ್ತಿವೆ.

Customized three piece layered suit

ಕಸ್ಟಮೈಸ್ಡ್ ತ್ರೀ ಪೀಸ್ ಲೇಯರ್ ಕೋ ಆರ್ಡ್ ಸೂಟ್

ಅಂದಹಾಗೆ, ವೆಡ್ಡಿಂಗ್ ಸೀಸನ್‌ನಲ್ಲಿ ಇವು ಹೆಚ್ಚು ಟ್ರೆಂಡ್‌ನಲ್ಲಿವೆ. ರೆಡಿಮೇಡ್ ಮಾತ್ರವಲ್ಲದೇ, ಬೋಟಿಕ್‌ನಲ್ಲಿ ಡಿಸೈನರ್‌ಗಳು ಡಿಸೈನ್ ಮಾಡುವ ಡಿಫರೆಂಟ್ ವಿನ್ಯಾಸಗಳಲ್ಲೂ ಲಭ್ಯವಿದೆ. ಕಸ್ಟಮೈಸ್ಡ್ ಡಿಸೈನ್‌ಗಳು ಹೆಚ್ಚು ಪಾಪ್ಯುಲರ್ ಆಗಿವೆ. ಇನ್ನು ಮಾನೋಕ್ರೋಮ್ ಹಾಗೂ ಸಿಲ್ಕ್ ಪ್ರಿಂಟೆಡ್ ಫ್ಯಾಬ್ರಿಕ್‌ನಲ್ಲಿ ಇವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್ ಲಲಿತಾ. ಅವರ ಪ್ರಕಾರ, ಲಾಂಗ್ ಕೋಟ್‌ನಂತಹ ಮೇಲುಡುಗೆ ಈ ಸೀಸನ್‌ಗೆ ಲೇಯರ್ ಲುಕ್ ನಿಡುವುದರೊಂದಿಗೆ ಬೆಚ್ಚಗಿಡುತ್ತವೆ ಎನ್ನುತ್ತಾರೆ.

Ethnic look co ord set decoration

ಎಥ್ನಿಕ್ ಲುಕ್ ಕೋ ಆರ್ಡ್ ಸೆಟ್ ಅಲಂಕಾರ

ಎಥ್ನಿಕ್ ಲುಕ್ ನೀಡುವ ಕೋ ಆರ್ಡ್ ಸೆಟ್‌ಗಳನ್ನು ಧರಿಸಿದಾಗ ಆಕ್ಸೆಸರೀಸ್ ಧರಿಸುವುದು ಅಗತ್ಯ. ಫಂಕಿ ಆಭರಣಗಳಿಗಿಂತ ಫ್ಯಾಷನ್ ಜ್ಯುವೆಲರಿಗಳನ್ನು ಧರಿಸಬಹುದು. ಕೆಲವೊಮ್ಮೆ ಇವನ್ನು ಪಾರ್ಟಿಗಳಿಗೂ ಧರಿಸಬಹುದು. ಇದಕ್ಕೆ ತಕ್ಕಂತೆ ಮ್ಯಾಚ್ ಮಾಡಬೇಕಷ್ಟೇ! ಇನ್ನು ಮೇಕಪ್ ವಿಂಟರ್ ಸೀಸನ್‌ಗೆ ಹೊಂದಬೇಕು. ಆಯ್ಕೆ ಮಾಡುವಾಗ ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವಂತಹ ಶೇಡ್ ಚೂಸ್ ಮಾಡಬೇಕು ಎಂದು ಪ್ಯಾಷನ್ ಡಿಸೈನರ್ ಸಲಹೆ ನೀಡುತ್ತಾರೆ.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್‌ ಟ್ರೆಡಿಷನಲ್‌ ಜ್ಯುವೆಲ್‌ ಫ್ಯಾಷನ್‌ಗೆ ಮರಳಿದ ಕಾಸಿನಸರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Fancy Handbags Fashion: ಸ್ಟೈಲಿಶ್‌ ಲುಕ್‌ಗೆ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳ ಸಾಥ್‌!

ಇದೀಗ ಊಹೆಗೂ ಮೀರಿದ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳು (Fancy Handbags Fashion) ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿವೆ. ಮೊದಲಿನಂತೆ ಇದೀಗ ಬ್ಯಾಗ್‌ಗಳು ಅಗತ್ಯ ವಸ್ತುಗಳನ್ನು ಇಡುವ ಹಾಗೂ ಬಳಸುವ ಬ್ಯಾಗ್‌ ಆಗಿ ಉಳಿದಿಲ್ಲ! ಬದಲಿಗೆ ಸ್ಟೈಲಿಶ್‌ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿದೆ. ಈ ಕುರಿತಂತೆ ಬ್ಯಾಗ್‌ ಡಿಸೈನರ್ಸ್ ಒಂದಿಷ್ಟು ವಿವರ ನೀಡಿದ್ದಾರೆ.

VISTARANEWS.COM


on

Fancy Handbags Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿತ್ರ-ವಿಚಿತ್ರ ಡಿಸೈನ್‌ನ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳು (Fancy Handbags Fashion) ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೌದು, ಊಹೆಗೂ ಮೀರಿದ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಭಿನ್ನ-ವಿಭಿನ್ನ ವಿನ್ಯಾಸದಲ್ಲಿ ಇವು ಬಿಡುಗಡೆಗೊಂಡಿವೆ. ಅಂದಹಾಗೆ, ಮೊದಲಿನಂತೆ ಈ ಹ್ಯಾಂಡ್‌ಬ್ಯಾಗ್‌ಗಳು ಅಗತ್ಯ ವಸ್ತುಗಳನ್ನು ಇಡುವ ಹಾಗೂ ಕ್ಯಾರಿ ಮಾಡುವ ಬ್ಯಾಗ್‌ ಆಗಿ ಉಳಿದಿಲ್ಲ! ಬದಲಿಗೆ ಉಡುಪಿನೊಂದಿಗೆ ಸಾಥ್‌ ನೀಡುವ ಸ್ಟೈಲಿಶ್‌ ಆಗಿ ಕಾಣಿಸುವ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿಕೊಂಡಿವೆ. ಅಲ್ಲದೇ, ಬಹುತೇಕ ಫ್ಯಾಷನ್‌ ಪ್ರಿಯರ ಸ್ಟೈಲ್‌ ಸ್ಟೇಟ್‌ಮೆಂಟ್‌ ಲಿಸ್ಟ್‌ಗೆ ಸೇರಿಕೊಂಡಿವೆ.

ಟ್ರೆಂಡ್‌ನಲ್ಲಿರುವ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್ಸ್

ಫ್ಯಾನ್ಸಿ ಹ್ಯಾಂಡ್‌ಬ್ಯಾಗ್‌ಗಳಲ್ಲಿ ಇದೀಗ ಅಸ್ಸೆಮ್ಮಿಟ್ರಿಕಲ್‌ ಡಿಸೈನ್‌ನವು, ಜೆಮೆಟ್ರಿಕಲ್‌ ಆಕಾರದವು, ಚಿತ್ರ-ವಿಚಿತ್ರ ಪ್ರಿಂಟ್ಸ್‌ನವು, ಲೆದರ್‌ನ ಮಿನಿ ಬ್ಯಾಗ್‌ಗಳು ಸಿಲಿಕಾನ್‌ನ ಕ್ಲಚ್‌ ಶೈಲಿಯವು, ಜ್ಯೂಟ್‌ ಹಾಗೂ ಬಂಬು ಸೇರಿದಂತೆ ಪರಿಸರ ಸ್ನೇಹಿ ವಸ್ತುಗಳಿಂದ ಸಿದ್ಧಪಡಿಸಲಾದ ಹ್ಯಾಂಡ್‌ಬ್ಯಾಗ್‌ಗಳು, ಫೈಬರ್‌ ಮೇಟಿರಿಯಲ್‌ನ ಪಿರಮಿಡ್‌ ಸ್ಟ್ರಕ್ಚರ್ ಡಿಸೈನ್‌ ಬ್ಯಾಗ್‌ಗಳು, ಟ್ರಾನ್ಸಫರೆಂಟ್‌, ಕ್ವಿರ್ಕಿ, ಫಂಕಿ ಹ್ಯಾಂಡ್‌ ಬ್ಯಾಗ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದವು ಚಾಲ್ತಿಯಲ್ಲಿವೆ.

Fancy Handbags Fashion

ದುಬಾರಿ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳ ರಿಪ್ಲಿಕಾ ಲಭ್ಯ

ಬ್ರಾಂಡೆಡ್‌ ಹ್ಯಾಂಡ್‌ಬ್ಯಾಗ್‌ಗಳಲ್ಲೂ ಇದೀಗ ಇಂತಹ ಡಿಸೈನ್‌ಗಳು ಬಂದಿರುವುದು ಸೆಲೆಬ್ರೆಟಿಗಳು ಹಾಗೂ ಫ್ಯಾಷನ್‌ ಮಾಡೆಲ್‌ಗಳು ಬಳಸುವುದನ್ನು ಕಾಣಬಹುದು. ಇನ್ನು, ಸಾಮಾನ್ಯ ಹುಡುಗಿಯರು ಕೂಡ ಇಂತಹ ಬ್ಯಾಗ್‌ಗಳನ್ನು ಹಿಡಿದು ಓಡಾಡತೊಡಗಿದ್ದಾರೆ. ಹಾಗೆಂದು ಸಾವಿರಗಟ್ಟಲೇ ಬೆಲೆ ಬಾಳುವ ಈ ಫ್ಯಾನ್ಸಿ ಬ್ಯಾಗ್‌ಗಳನ್ನು ಕೊಳ್ಳುತ್ತಾರೆಂದಲ್ಲ! ಅದೇ ಶೈಲಿಯ ರಿಪ್ಲಿಕಾ ಹ್ಯಾಂಡ್‌ ಬ್ಯಾಗ್‌ಗಳು ಕೂಡ ಇದೀಗ ಕೈಗೆಟಕುವ ದರದಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಎಕ್ಸ್‌ಫರ್ಟ್ಸ್‌. ಅವರ ಪ್ರಕಾರ, ಫ್ಯಾನ್ಸಿ ಹ್ಯಾಂಡ್‌ಬ್ಯಾಗ್‌ಗಳಲ್ಲಿ ಹೆಚ್ಚು ಜಾಗದ ಅವಕಾಶವಿರುವುದಿಲ್ಲ. ನೋಡಲು ಹಾಗೂ ಶೋ ಆಫ್‌ಗಾಗಿ ಇಂತಹ ಬ್ಯಾಗನ್ನು ಬಳಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ.

Fancy Handbags Fashion

ತಾರೆಯರ ಲಕ್ಷುರಿ ಫ್ಯಾನ್ಸಿ ಹ್ಯಾಂಡ್‌ಬ್ಯಾಗ್ಸ್

ಇನ್ನು, ತಾರೆಯರ ಫ್ಯಾನ್ಸಿ ಹ್ಯಾಂಡ್‌ಬ್ಯಾಗ್‌ಗಳ ಬೆಲೆ ಕೇಳಿದರೇ ಬೆಚ್ಚಿ ಬೀಳುತ್ತೀರಾ! ಎಲ್ಲವೂ ಲಕ್ಷ ರೂಪಾಯಿಗಳ ಮೇಲಿರುತ್ತದೆ. ಉದಾಹರಣೆಗೆ ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾ ಕೈಯಲ್ಲಿ ಹಿಡಿದಿದ್ದ ಒಂದು ಹ್ಯಾಂಡ್‌ ಬ್ಯಾಗ್‌ಗೆ ಎರಡು ಲಕ್ಷಕ್ಕೂ ಹೆಚ್ಚು ದರ ಇತ್ತು. ಇನ್ನು ದೀಪಿಕಾ ಪಡುಕೋಣೆ ಬಳಸುವುದು ಇಂಟರ್ನ್ಯಾಷನಲ್‌ ಬ್ರಾಂಡ್‌ನದ್ದೇ! ಇದೇ ರೀತಿ, ಅನನ್ಯಾ, ಜಾನ್ವಿ ಕಪೂರ್‌, ಸುಹಾನಾ ಎಲ್ಲರೂ ಲಕ್ಷುರಿ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ ಪ್ರಿಯರು ಎನ್ನಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Parachute Pants Fashion: ಪ್ಯಾರಾಶೂಟ್‌ ಪ್ಯಾಂಟ್ಸ್; ಟೀನೇಜ್‌ ಹುಡುಗಿಯರ ಹೊಸ ಟ್ರೆಂಡ್‌!

ಫ್ಯಾನ್ಸಿ ಹ್ಯಾಂಡ್‌ಬ್ಯಾಗ್‌ ಬಗ್ಗೆ ತಿಳಿದಿರಬೇಕಾದ್ದು

  • ನಿಮ್ಮ ಬಳಕೆಗೆ ತಕ್ಕಂತೆ ಡಿಸೈನ್‌ ಆಯ್ಕೆ ಮಾಡುವುದು ಉತ್ತಮ.
  • ನೋಡಲು ಫ್ಯಾನ್ಸಿಯಾಗಿರುವ ಬ್ಯಾಗ್‌ಗಳು ಹೆಚ್ಚು ಬಾಳಿಕೆ ಬರದು.
  • ಆದಷ್ಟೂ ನ್ಯೂಟ್ರಲ್‌ ಶೇಡ್‌ ಆಯ್ಕೆ ಉತ್ತಮ. ಎಲ್ಲಾ ಡ್ರೆಸ್‌ಗಳಿಗೂ ಮ್ಯಾಚ್‌ ಆಗುವುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Parachute Pants Fashion: ಪ್ಯಾರಾಶೂಟ್‌ ಪ್ಯಾಂಟ್ಸ್; ಟೀನೇಜ್‌ ಹುಡುಗಿಯರ ಹೊಸ ಟ್ರೆಂಡ್‌!

ನೋಡಲು ಕಾರ್ಗೋ ಪ್ಯಾಂಟ್‌ನಂತೆಯೇ ಕಾಣಿಸುವ ಪ್ಯಾರಾಶೂಟ್‌ ಪ್ಯಾಂಟ್‌ಗಳು (Parachute Pants Fashion) ಇದೀಗ ಡಾರ್ಕ್ ಶೇಡ್‌ನಲ್ಲಿ ಬಿಡುಗಡೆಗೊಂಡಿವೆ. ಟೀನೇಜ್‌ ಹುಡುಗಿಯರನ್ನು ಸವಾರಿ ಮಾಡುತ್ತಿವೆ. ಈ ಪ್ಯಾಂಟ್‌ನೊಂದಿಗೆ ಯಾವ್ಯಾವ ಬಗೆಯ ಟಾಪ್‌ಗಳನ್ನು ಮಿಕ್ಸ್ ಮ್ಯಾಚ್‌ ಮಾಡಬಹುದು ಎಂಬುದರ ಕುರಿತಂತೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Parachute Pants Fashion
ಚಿತ್ರಗಳು: ಪಶ್ಮಿನಾ ರೋಷನ್‌, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಾಶೂಟ್‌ ಪ್ಯಾಂಟ್‌ಗಳು ಫ್ಯಾಷನ್‌ (Parachute Pants Fashion) ಲೋಕಕ್ಕೆ ರೀ ಎಂಟ್ರಿ ನೀಡಿವೆ. ಹೌದು, ನೋಡಲು ಕಾರ್ಗೋ ಪ್ಯಾಂಟ್‌ನಂತೆಯೇ ಕಾಣಿಸುವ ಈ ಪ್ಯಾರಾಶೂಟ್‌ ಪ್ಯಾಂಟ್‌ಗಳು ಇದೀಗ ನಾನಾ ಡಾರ್ಕ್ ಶೇಡ್‌ನಲ್ಲಿ ಬಿಡುಗಡೆಗೊಂಡಿವೆ. ಕಾಲೇಜು ಹುಡುಗಿಯರು ಹಾಗೂ ಟೀನೇಜ್‌ ಹುಡುಗಿಯರನ್ನು ಸವಾರಿ ಮಾಡುತ್ತಿವೆ.

Parachute Pants Fashion

ಕಾರ್ಗೋ ಪ್ಯಾಂಟ್‌ನಂತೆ ಕಾಣುವ ಪ್ಯಾಂಟ್‌ಗಳಿವು

“ಎಲ್ಲರ ಬಳಿಯಲ್ಲೂ ಒಂದಲ್ಲ ಒಂದು ಪ್ಯಾರಾಶೂಟ್‌ ಪ್ಯಾಂಟ್‌ಗಳು ಇದ್ದೇ ಇರುತ್ತವೆ. ಆದರೆ, ಬಹಳಷ್ಟು ಮಂದಿ ಇವನ್ನು ಕಾರ್ಗೋ ಪ್ಯಾಂಟ್‌ಗಳೆಂದುಕೊಂಡಿರುತ್ತಾರೆ. ಪ್ಯಾಂಟ್‌ನ ಹಿಂದೆ –ಮುಂದೆ ಪ್ಯಾಕೆಟ್‌ಗಳಿರುವುದರಿಂದ ಕೆಲವರು ಇವನ್ನು ಪೇಂಟರ್‌ ಪ್ಯಾಂಟ್‌ಗಳೆಂದು ಕೂಡ ಅಂದುಕೊಂಡಿರುತ್ತಾರೆ. ಇವೆಲ್ಲವೂ ಒಂದೇ ಡಿಸೈನ್‌ನ ನಾನಾ ರೂಪಗಳಾಗಿದ್ದು, ಹೆಸರು ಮಾತ್ರ ಬೇರೆಬೇರೆಯದ್ದಾಗಿರುತ್ತದೆ. ಡಿಸೈನರ್‌ಗಳು ಮಾತ್ರ ಇವನ್ನು ಬಲು ಸುಲಭವಾಗಿ ಕಂಡು ಹಿಡಿಯುತ್ತಾರೆ. ಈ ಲಿಸ್ಟ್‌ನಲ್ಲಿ ಇದೀಗ ಪ್ಯಾರಾಶೂಟ್‌ ಪ್ಯಾಂಟ್‌ಗಳು ಇವೆ. ಸದ್ಯ ಹುಡುಗಿಯರ ವಾರ್ಡ್ರೋಬ್‌ನಲ್ಲಿ ಸೇರಿವೆ. ಅಚ್ಚರಿ ಎಂಬಂತೆ ಇವುಗಳಲ್ಲಿ ಡಾರ್ಕ್ ಶೇಡ್‌ನವು ಅತಿ ಹೆಚ್ಚು ಚಾಲ್ತಿಯಲ್ಲಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ಜಿಖರ್‌.

Parachute Pants Fashion

ಟ್ರೆಂಡ್‌ನಲ್ಲಿರುವ ಪ್ಯಾರಾಶೂಟ್‌ ಪ್ಯಾಂಟ್‌ಗಳಿವು

ಅಂದಹಾಗೆ, ಪ್ಯಾರಾಶೂಟ್‌ ಪ್ಯಾಂಟ್‌ಗಳಲ್ಲಿ ಇದೀಗ ರಾಯಲ್‌ ಬ್ಲ್ಯೂ ಕರೆಂಟ್‌ ಬ್ಲ್ಯೂ, ಪೀಚ್‌, ಪಿಂಕ್‌, ಬಬ್ಬಲ್‌ಗಮ್‌ ಪಿಂಕ್‌, ಸನ್‌ ಕಲರ್‌ ಸೇರಿದಂತೆ ಎದ್ದು ಕಾಣುವಂತಹ ಶೇಡ್‌ಗಳು ಬಂದಿವೆ. ಕೆಲವಕ್ಕೆ ಹಿಂದೆ ಮುಂದೆ 4-6 ಪ್ಯಾಕೆಟ್‌ಗಳು ಇರುತ್ತವೆ. ಬೆಲ್ಟ್‌ ಇವಕ್ಕೆ ಧರಿಸಲಾಗುವುದಿಲ್ಲ. ಬದಲಿಗೆ ಈ ಪ್ಯಾಂಟ್‌ಗಳು ವೇಸ್ಟ್‌ಲೇನ್‌ನಲ್ಲಿ ಎಲಾಸ್ಟಿಕ್‌ ಹೊಂದಿರುತ್ತವೆ. ಟೈಯಿಂಗ್‌ ಆಪ್ಷನ್‌ ಕೂಡ ಇರುತ್ತದೆ. ಇನ್ನು ದೊಗಲೆಯಾಗಿರುವ ಈ ಪ್ಯಾಂಟ್‌ಗಳು ಕೆಲವೊಮ್ಮೆ ನೋಡಲು ಹಾರೆಮ್‌ ಪ್ಯಾಂಟ್‌ನಂತೆಯೂ ಕಾಣುತ್ತವೆ.

Parachute Pants Fashion

ಪ್ಯಾರಾಶೂಟ್‌ ಪ್ಯಾಂಟ್‌ಗೆ ಮಿಕ್ಸ್ – ಮ್ಯಾಚ್‌ ಮ್ಯಾಜಿಕ್‌

ಪ್ಯಾರಾಶೂಟ್‌ ಪ್ಯಾಂಟ್‌ಗೆ ಮಿಕ್ಸ್ ಮ್ಯಾಚ್‌ ಮಾಡುವ ಮ್ಯಾಜಿಕ್‌ ಗೊತ್ತಿದ್ದಲ್ಲಿ ಅತ್ಯಾಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ ಡಿಸೈನರ್ಸ್. ಹೌದು. ಇಂದಿನ ಹುಡುಗಿಯರು ಯಾವುದೇ ಪ್ಯಾಂಟ್‌ಗೂ ಟಮ್ಮಿಯಿಂದ ಕೆಳಗೆ ಬರುವಂತಹ ಟಾಪ್‌ಗಳನ್ನು ಧರಿಸುವುದೇ ಇಲ್ಲ. ಹಾಗಾಗಿ ನೋಡಲು ಗ್ಲಾಮರ್ ಲುಕ್‌ ದೊರೆಯುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡಲ್ಲಿ, ಈ ಪ್ಯಾಂಟ್‌ಗೆ ಕಾರ್ಸೆಟ್‌ ಟಾಪ್‌, ಸ್ಲಿವ್‌ಲೆಸ್‌ ಕ್ರಾಪ್‌ ಟಾಪ್‌, ಬಾರ್ಡಟ್ ಟಾಪ್‌, ಆಫ್‌ ಶೋಲ್ಡರ್‌ ಟಾಪ್‌, ಹಾಲ್ಟರ್‌ ನೆಕ್‌ ಇರುವಂತಹ ಟಾಪ್‌ಗಳನ್ನು ಧರಿಸಬಹುದು. ಇವು ಮಾಡರ್ನ್ ಲುಕ್‌ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Star Street Fashion: ಬೆಂಗಳೂರಿನ ರಸ್ತೆಯಲ್ಲಿ ಕಾಂತಾರ ಬೆಡಗಿಯ ಹೈ ಸ್ಟ್ರೀಟ್‌ ಫ್ಯಾಷನ್‌!

ಪ್ಯಾರಾಶೂಟ್‌ ಪ್ಯಾಂಟ್‌ ಆಯ್ಕೆಗೆ 3 ಸಲಹೆ

  • ಕಾಲಿನ ಕೆಳಗೆ ಪ್ಯಾಂಟ್‌ ಕೆಳಗಿಳಿಯುವಂತಿರಬಾರದು.
  • ಟಾಪ್‌ಗಳು ಫಿಟ್ಟಿಂಗ್‌ ಇದ್ದಲ್ಲಿ ಚೆನ್ನಾಗಿ ಕಾಣಿಸುವುದು.
  • ಪ್ಯಾಂಟ್‌ ತೀರಾ ದೊಗಲೆಯಾಗಿಯೂ ಕಾಣಿಸಬಾರದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Star Street Fashion: ಬೆಂಗಳೂರಿನ ರಸ್ತೆಯಲ್ಲಿ ಕಾಂತಾರ ಬೆಡಗಿಯ ಹೈ ಸ್ಟ್ರೀಟ್‌ ಫ್ಯಾಷನ್‌!

ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಬೆಂಗಳೂರಿನ ರಸ್ತೆಗಳಲ್ಲಿ ಹೈ ಸ್ಟ್ರೀಟ್‌ ಫ್ಯಾಷನ್‌ (Star Street Fashion) ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿರುವ ಮಿನಿ ಸ್ಲಿಟ್‌ ಸ್ಕರ್ಟ್– ಕಾಲರ್‌ ಬಟನ್‌ ಜಾಕೆಟ್‌ ಈಗಾಗಲೇ ಫ್ಯಾಷನ್‌ ಪ್ರಿಯರನ್ನು ಆಕರ್ಷಿಸಿದೆ. ಅವರ ಈ ಲುಕ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ವಿವರ.

VISTARANEWS.COM


on

Star Street Fashion
ಚಿತ್ರಗಳು: ಸಪ್ತಮಿ ಗೌಡ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಸಪ್ತಮಿ ಗೌಡರ ಹೈ ಸ್ಟ್ರೀಟ್‌ ಫ್ಯಾಷನ್‌ಗೆ (Star Street Fashion) ಅಭಿಮಾನಿಗಳು ಫಿದಾ ಆಗಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ, ನೆವಿ ಬ್ಲ್ಯೂ ಶೇಡ್‌ನ ಮಿನಿ ಸ್ಕರ್ಟ್, ಕಾಲರ್‌ ಬಟನ್‌ ಜಾಕೆಟ್‌ ಧರಿಸಿ, ಹೈ ಸ್ಟ್ರೀಟ್‌ ಫ್ಯಾಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅವರ ಈ ಸ್ಟೈಲಿಂಗ್‌ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ.

ಮೂಗುತಿ ತೆಗೆದ ಕಾಂತಾರ ಸುಂದರಿ

ʼಕಾಂತಾರʼ ಚಿತ್ರದಲ್ಲಿ ಟ್ರೆಡಿಷನಲ್‌ ಲುಕ್‌ನಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಸಪ್ತಮಿ ಗೌಡ, ಕೆಲಕಾಲ ಸಿಂಪಲ್‌ ಲುಕ್‌ನಿಂದಲೇ ಎಲ್ಲರನ್ನೂ ಬರ ಸೆಳೆದುಕೊಂಡಿದ್ದರು. ಎಲ್ಲಿಗೆ ಹೋದರೂ ʼಕಾಂತಾರʼ ಸಿನಿಮಾದ ಮೂಗುತಿ ಸುಂದರಿ ಎಂದೇ ಅಭಿಮಾನಿಗಳು ಗುರುತಿಸುತ್ತಿದ್ದರು. ನಂತರದ ಸಿನಿಮಾಗಳಲ್ಲಿ ಮೂಗುತಿ ಇಲ್ಲದೆಯೇ ಕಾಣಿಸಿಕೊಂಡರು. ʼಕಾಂತಾರʼ ಇಮೇಜಿನಿಂದ ಹೊರ ಬಂದು ನಾನಾ ಬಗೆಯ ಹೊಸ ಲುಕ್‌ನಲ್ಲಿಯೂ ಕಾಣಿಸಿಕೊಂಡರು. ಒಂದಿಷ್ಟು ಜಾಹೀರಾತುಗಳಲ್ಲಿ, ಫ್ಯಾಷನ್‌ ಶೋಗಳಲ್ಲೂ ಕಾಣಿಸಿಕೊಂಡರು. ಕೇವಲ ಟ್ರೆಡಿಷನಲ್‌ ಲುಕ್‌ ಮಾತ್ರವಲ್ಲ, ತಾವು ವೆಸ್ಟರ್ನ್ ಲುಕ್‌ನಲ್ಲೂ ಆಕರ್ಷಕವಾಗಿ ಕಾಣಿಸುತ್ತೆನೆಂಬುದನ್ನು ಪ್ರೂವ್‌ ಮಾಡಿದರು. ಮೂಗುತಿ ತೆಗೆದ ನಂತರವೂ ಅವರ ಸೌಂದರ್ಯಕ್ಕೆನೂ ಧಕ್ಕೆಯಾಗಲಿಲ್ಲ! ಎಲ್ಲಾ ಪಾತ್ರಗಳಿಗೂ ಸೈ ಎಂಬಂತೆ, ಅವರು ಮತ್ತಷ್ಟು ಅಂದವಾಗಿ ಕಾಣಿಸಲಾರಂಭಿಸಿದರು. ಮೊದಲು ಹಾಗೂ ಮೂಗುತಿ ತೆಗೆದ ನಂತರ ಡಿಫರೆಂಟ್‌ ಇಮೇಜ್‌ಗಳಲ್ಲಿ ಕಾಣಿಸಿಕೊಂಡರು. ಇದು ಅವರಿಗಿರುವ ಫ್ಯಾಷನ್‌ ಸೆನ್ಸ್‌ ಅನ್ನು ಹೈಲೈಟ್‌ ಮಾಡಿದೆ. ಅವರು ಕೂಡ ಆಯಾ ಇಮೇಜ್‌ಗೆ ತಕ್ಕಂತೆ ಬದಲಾಗಬಲ್ಲರು ಎಂಬುದನ್ನು ತೋರ್ಪಡಿಸಿದೆ ಎಂದು ರಿವ್ಯೂ ಮಾಡಿರುವ ಫ್ಯಾಷನ್‌ ವಿಮರ್ಶಕಿ ನಿಶಾ ಪ್ರಕಾರ, ಮಾಡರ್ನ್ ಲುಕ್‌ ಸಪ್ತಮಿ ಅವರ ಪರ್ಸನಾಲಿಟಿಗೆ ಪರ್ಫೆಕ್ಟಾಗಿ ಹೊಂದುತ್ತದೆ ಎಂದಿದ್ದಾರೆ.

ಸಪ್ತಮಿ ಗೌಡರ ಹೈ ಸ್ಟ್ರೀಟ್‌ ಫ್ಯಾಷನ್‌

ಅಂದಹಾಗೆ, ಸಪ್ತಮಿ ಗೌಡರ ಈ ಹೈ ಸ್ಟ್ರೀಟ್‌ ಫ್ಯಾಷನ್‌ನಲ್ಲಿ ಅವರು ಧರಿಸಿರುವ ಮಿನಿ ಸ್ಲಿಟ್‌ ಸ್ಕರ್ಟ್, ಕಾಲರ್‌ ಬಟನ್‌ ಜಾಕೆಟ್‌ ಹಾಗೂ ವೈಟ್‌ ಟಾಪ್‌ ಕಾಂಬಿನೇಷನ್‌ ಕಾಲೇಜು ಹುಡುಗಿಯರ ಲಕ್ಷುರಿ ಸ್ಟ್ರೀಟ್‌ ಫ್ಯಾಷನ್‌ ನೆನಪಿಸಿದೆ. ಅವರ ಎತ್ತರಕ್ಕೆ ಈ ಸ್ಟೈಲಿಂಗ್‌ ಪರ್ಫೆಕ್ಟ್ ಮ್ಯಾಚ್‌ ಆಗಿದೆ. ಇನ್ನು, ಮೇಕಪ್‌ ಇಲ್ಲದ ಅವರ ವಧನ ನ್ಯಾಚುರಲ್‌ ಲುಕ್‌ ನೀಡಿದೆ. ಲಿಪ್‌ಸ್ಟಿಕ್‌ ಇಲ್ಲದ ತುಟಿಗಳು ಸಿಂಪಲ್‌ ಲುಕ್‌ ನೀಡಿವೆ. ಫ್ರೀ ಹೇರ್‌ಸ್ಟೈಲ್‌ ಕಾಲೇಜು ಹುಡುಗಿಯರ ಬಿಂದಾಸ್‌ ಲುಕ್‌ನಂತೆ ಪ್ರತಿಬಿಂಬಿಸಿದೆ ಎಂದಿದ್ದಾರೆ ಫ್ಯಾಷನ್‌ ವಿಮಶರ್ಕರು. ಟ್ರೆಡಿಷನಲ್‌ ಲುಕ್‌ಗೂ ಸೈ, ವೆಸ್ಟರ್ನ್ ಲುಕ್‌ಗೂ ಸೈ ಎಂಬಂತಿದ್ದಾರೆ ನಟಿ ಸಪ್ತಮಿ ಗೌಡ ಎಂಬುದು ಫ್ಯಾಷನಿಸ್ಟ್‌ಗಳ ಒಟ್ಟಾರೆ ಅಭಿಪ್ರಾಯವಾಗಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: World Environment Day: ಪರಿಸರಕ್ಕೆ ಕೊಡುಗೆ ನೀಡಲು ಫ್ಯಾಷನ್‌ ಪ್ರಿಯರಿಗೆ ಇಲ್ಲಿದೆ ಸಲಹೆ

Continue Reading

ಫ್ಯಾಷನ್

World Environment Day: ಪರಿಸರಕ್ಕೆ ಕೊಡುಗೆ ನೀಡಲು ಫ್ಯಾಷನ್‌ ಪ್ರಿಯರಿಗೆ ಇಲ್ಲಿದೆ ಸಲಹೆ

ಪರಿಸರಪ್ರೇಮಿ ಫ್ಯಾಷನ್‌ ಪ್ರಿಯರು ಸಸ್ಟೈನಬಲ್‌ ಫ್ಯಾಷನ್‌ಗೆ ಸೈ ಎನ್ನುತ್ತಲೇ ಪರಿಸರಕ್ಕೆ ತಮ್ಮದೇ ಆದ ಚಿಕ್ಕ ಕೊಡುಗೆ ನೀಡಬಹುದು. ಅದು ಹೇಗೆ ಅಂತಿರಾ! ಫ್ಯಾಷನಿಸ್ಟ್‌ಗಳು ಈ ಕುರಿತಂತೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಅದರೊಂದಿಗೆ ಒಂದಿಷ್ಟು ಸಿಂಪಲ್‌ ಐಡಿಯಾ ಕೂಡ ನೀಡಿದ್ದಾರೆ. ಈ ಕುರಿತ (World Environment Day) ವಿವರ ಇಲ್ಲಿದೆ.

VISTARANEWS.COM


on

World Environment Day
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪರಿಸರ ದಿನಾಚಾರಣೆಯಂದು (World Environment Day) ಸಸ್ಟೈನಬಲ್‌ ಫ್ಯಾಷನ್‌ಗೆ ಸೈ ಎನ್ನಿ! ಹಾಗೆನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಇಂದು ವಿಶ್ವ ಪರಿಸರ ದಿನಾಚಾರಣೆ. ಅರರೆ! ಫ್ಯಾಷನ್‌ಗೂ ಪರಿಸರ ದಿನಾಚರಣೆಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ! ಹೌದು, ಸಸ್ಟೈನಬಲ್‌ ಫ್ಯಾಷನ್‌ ಅಳವಡಿಸಿಕೊಳ್ಳುವುದರ ಮೂಲಕ ಫ್ಯಾಷನ್‌ ಪ್ರಿಯರು ಕೂಡ ತಮ್ಮದೇ ಆದ ರೀತಿಯಲ್ಲಿ, ಪರಿಸರಕ್ಕೆ ಚಿಕ್ಕ ಕೊಡುಗೆ ಸಲ್ಲಿಸಬಹುದು ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಫರ್ಟ್ಸ್‌.

World Environment Day

ಫ್ಯಾಷನಿಸ್ಟ್‌ಗಳ ಸಸ್ಟೈನಬಲ್‌ ಫ್ಯಾಷನ್‌ ಟಾಕ್‌

“ಉಡುಗೆಗಳ ಮರು ಬಳಕೆ, ಮರು ವಿನ್ಯಾಸದಿಂದ ಹಾಗೂ ಹಳೆಯ ಫ್ಯಾಷನ್‌ವೇರ್‌ಗಳ ಮರುಬಳಕೆಯಿಂದ, ಫ್ಯಾಷನ್‌ ಲೋಕದಲ್ಲಿ ಹೊಸ ಉತ್ಪಾದನೆಗೆ ತಗುಲುವ ಖರ್ಚು –ವೆಚ್ಚ, ಸಿಂಥೆಟಿಕ್‌ ಫ್ಯಾಬ್ರಿಕ್‌ ಹಾಗೂ ಆಕ್ಸೆಸರೀಸ್‌ಗಳ ಡಂಪಿಂಗ್‌ನಿಂದ ಪರಿಸರಕ್ಕೆ ಉಂಟಾಗುವ ಚಿಕ್ಕ ಪ್ರಮಾಣದ ಹಾನಿ ತಡೆಯಬಹುದು. ಪ್ರತಿಯೊಬ್ಬರು ಇದೇ ರೀತಿ ಯೋಚಿಸಿದಲ್ಲಿ , ಪರಿಸರ ಸ್ನೇಹಿ ಫ್ಯಾಷನ್‌ ನಿರ್ಮಾಣವಾಗುವುದು. ಇದರಿಂದ ಪ್ರಕೃತಿಗೆ ಫ್ಯಾಷನ್‌ ಪ್ರಿಯರ ಕಡೆಯಿಂದ ಕಿರು ಕಾಣಿಕೆ ಸಲ್ಲಿಸಿದಂತಾಗುವುದು” ಎನ್ನುತ್ತಾರೆ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ. ಇನ್ನು ಫ್ಯಾಷನಿಸ್ಟ್‌ ರಾಜ್‌ ಶ್ರಾಫ್‌ ಹೇಳುವಂತೆ, ಇದೀಗ ದೊಡ್ಡ ದೊಡ್ಡ ಬ್ರಾಂಡ್‌ಗಳು ಕೂಡ ಪರಿಸರ ಸ್ನೇಹಿ ಔಟ್‌ಫಿಟ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಅಲ್ಲದೇ, ರಿಸೈಕಲ್‌ ಆಗಿ ಮರು ನಿರ್ಮಾಣಗೊಂಡ ಫ್ಯಾಷನ್‌ವೇರ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಇದು ಪ್ರಶಂಸನೀಯ ಎನ್ನುತ್ತಾರೆ. ಅದೇ ರೀತಿ, ಸ್ಟೈಲಿಸ್ಟ್ ಜಗನ್‌ ಹೇಳುವಂತೆ, ಆನ್‌ಲೈನ್‌ನಲ್ಲೂ ಸಾಕಷ್ಟು ಸಸ್ಟೈನಬಲ್‌ ಫ್ಯಾಷನ್‌ವೇರ್‌ಗಳು ಕಾಲಿಟ್ಟಿವೆ. ಇದು ಫ್ಯಾಷನ್‌ ಪ್ರಿಯರಿಗೆ ಸಹಕಾರಿಯಾಗಿವೆ ಎನ್ನುತ್ತಾರೆ.

ಸಸ್ಟೈನಬಲ್‌ ಫ್ಯಾಷನ್‌ಗೆ 7 ಸಿಂಪಲ್‌ ಐಡಿಯಾಗಳು

  1. ನಿಮ್ಮ ಬಳಿಯಿರುವ ಉಡುಗೆಗಳಿಗೆ ಹೊಸ ರೂಪ ನೀಡಿ, ಮರುಬಳಕೆ ಮಾಡಬಹುದು. ಮೇಕೋವರ್‌ನಿಂದ ಡಿಫರೆಂಟ್‌ ಲುಕ್‌ ನೀಡಬಹುದು.
  2. ಹಳೆಯ ಸೀರೆಗಳಿಗೆ ಹೊಸ ರೂಪ ನೀಡಬಹುದು. ಉದಾಹರಣೆಗೆ., ಹಳೆಯ ರೇಷ್ಮೆ ಸೀರೆಯನ್ನು ಲೆಹೆಂಗಾ ಅಥವಾ ದಾವಣಿ-ಲಂಗವಾಗಿ ಪರಿವರ್ತಿಸಬಹುದು. ಬಾರ್ಡರ್‌ ಸೀರೆಗಳನ್ನು ಎಥ್ನಿಕ್‌ ಗೌನ್‌ಗಳಾಗಿಸಬಹುದು. ತಾಯಿ-ಮಗಳಿಗೆ ಟ್ವಿನ್ನಿಂಗ್‌ ಡ್ರೆಸ್ ಮಾಡಬಹುದು.
  3. ಹಳೆ ಫ್ಯಾಬ್ರಿಕ್‌ನಿಂದ ಕ್ಲಾತ್‌ ಆಕ್ಸೆಸರೀಸ್‌ಗಳನ್ನು ಸಿದ್ಧಗೊಳಿಸಬಹುದು. ಮ್ಯಾಚಿಂಗ್‌ ಕಮರ್‌ಬಾಂದ್‌ ರೆಡಿ ಮಾಡಬಹುದು.
  4. ಕಾಟನ್‌ ದುಪಟ್ಟಾಗಳಿಂದ ವೆಸ್ಟರ್ನ್ ಲುಕ್‌ ನೀಡುವ ಟಾಪ್‌ ಅಥವಾ ಫ್ರಾಕ್‌ಗಳನ್ನು ವಿನ್ಯಾಸಗೊಳಿಸಿ ಧರಿಸಬಹುದು.
  5. ಸಸ್ಟೈನಬಲ್‌ ಫ್ಯಾಷನ್‌ಗೆ ಸಾಥ್‌ ನೀಡುವಂತಹ ಬ್ರಾಂಡ್‌ಗಳ ಡಿಸೈನರ್‌ವೇರ್‌ಗಳನ್ನು ಆಯ್ಕೆ ಮಾಡಬೇಕು.
  6. ಹಳೆಯ ಜೀನ್ಸ್ ಅಥವಾ ಡೆನಿಮ್‌ ಪ್ಯಾಂಟ್‌ಗಳಿದ್ದಲ್ಲಿ , ಅವುಗಳನ್ನು ಬಳಸಿ ಹೊಸ ಡಿಸೈನರ್‌ವೇರ್‌ ತಯಾರಿಸಿ, ಧರಿಸಬಹುದು. ಉದಾಹರಣೆ., ಕ್ರಾಪ್‌ ಟಾಪ್‌, ಟೊರ್ನ್ ಶಾರ್ಟ್ಸ್ ಇತ್ಯಾದಿ.
  7. ( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Jumka Bangles Fashion: ಡಿಸೈನರ್‌ ಬಳೆಗಳಿಗೆ ಜುಮ್ಕಾ ಅಲಂಕಾರ!

Continue Reading
Advertisement
T 20 Wordl Cup
ಕ್ರೀಡೆ2 hours ago

T20 World Cup : ಕ್ರಿಕೆಟ್​ ಕೂಸು ಅಮೆರಿಕ ತಂಡದ ವಿರುದ್ಧ ಸೋತ ಪಾಕಿಸ್ತಾನ

Stock Market Crash
ಪ್ರಮುಖ ಸುದ್ದಿ5 hours ago

Stock Market Crash : ವಿದೇಶಿ ಹೂಡಿಕೆಗಳು ಬರದಂತೆ ರಾಹುಲ್ ಗಾಂಧಿ ಪಿತೂರಿ ಮಾಡುತ್ತಿದ್ದಾರೆ; ಬಿಜೆಪಿಯಿಂದ ತಿರುಗೇಟು

sunil chhetri
ಪ್ರಮುಖ ಸುದ್ದಿ5 hours ago

Sunil Chhetri : ಕಣ್ಣೀರು ಹಾಕುತ್ತಲೇ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಡಿ ವಿದಾಯ ಹೇಳಿದ ಸುನಿಲ್​ ಛೆಟ್ರಿ

Shri Bhandara Keri Mutt Shri Vidyesh Theertha Swamiji ashirvachan
ಕರ್ನಾಟಕ5 hours ago

Mysore News: ಅಧ್ಯಯನದಲ್ಲಿ ಆನಂದ ಕಾಣುವವರು ಮಾತ್ರ ಉನ್ನತ ಮಟ್ಟದ ಜ್ಞಾನಾರ್ಜನೆ ಮಾಡಲು ಸಾಧ್ಯ: ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ

Gadag News
ಕರ್ನಾಟಕ6 hours ago

Gadag News : ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಮನೆಗಳಿಗೆ ನುಗ್ಗಿ ದೊಣ್ಣೆ, ಬಡಿಗೆಗಳಿಂದ ಹಲ್ಲೆ

Rain News
ಕರ್ನಾಟಕ7 hours ago

Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ಬಾಲಕ, ಮಹಿಳೆ ದುರ್ಮರಣ

Disciplinary action if cases of mother and child deaths recur DC Diwakar warns
ಆರೋಗ್ಯ7 hours ago

Vijayanagara News: ತಾಯಿ, ಶಿಶು ಮರಣ ಪ್ರಕರಣ ಮರುಕಳಿಸಿದರೆ ಶಿಸ್ತು ಕ್ರಮ: ಡಿಸಿ ದಿವಾಕರ್

BJP State Spokesperson Hariprakash konemane pressmeet at yallapura
ಕರ್ನಾಟಕ7 hours ago

Uttara Kannada News: ಉ.ಕ ಜಿಲ್ಲೆ ಬಿಜೆಪಿಯ ಗಟ್ಟಿನೆಲ ಎಂಬುದು ಮತ್ತೊಮ್ಮೆ ಸಾಬೀತು: ಹರಿಪ್ರಕಾಶ್‌ ಕೋಣೆಮನೆ

Trekking tragedy
ಬೆಂಗಳೂರು7 hours ago

Trekking Tragedy: ಉತ್ತರಾಖಂಡ ಚಾರಣ ದುರಂತದಲ್ಲಿ ಪಾರಾದ 13 ಚಾರಣಿಗರು ಬೆಂಗಳೂರಿಗೆ ವಾಪಸ್

Unemployment Rate
ಪ್ರಮುಖ ಸುದ್ದಿ7 hours ago

Unemployment Rate : ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಒಂದೇ ವರ್ಷದಲ್ಲಿ ಶೇಕಡಾ 4 ಇಳಿಕೆ; ವರದಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ16 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌