ರಾಮ ಮಾಂಸಾಹಾರಿ ಎಂದ ಜಿತೇಂದ್ರನನ್ನು ಕೊಲ್ಲುವೆ; ಅಯೊಧ್ಯೆ ಸಂತನ ಎಚ್ಚರಿಕೆ - Vistara News

ದೇಶ

ರಾಮ ಮಾಂಸಾಹಾರಿ ಎಂದ ಜಿತೇಂದ್ರನನ್ನು ಕೊಲ್ಲುವೆ; ಅಯೊಧ್ಯೆ ಸಂತನ ಎಚ್ಚರಿಕೆ

ರಾಮ ನಮ್ಮವನು, ನಮ್ಮ ಬಹುಜನ ಸಮುದಾಯಕ್ಕೆ ಸೇರಿದವನು. ರಾಮ ಬೇಟೆಯಾಡಿ ಮಾಂಸ ತಿನ್ನುತ್ತಿದ್ದ. ಎಲ್ಲರನ್ನೂ ಸಸ್ಯಾಹಾರಿಗಳನ್ನಾಗಿ ಬದಲಾಯಿಸುತ್ತಿರುವ ಹೊತ್ತಿನಲ್ಲಿ ನಾವು ಮಟನ್‌ ತಿಂದು ರಾಮನ ಆದರ್ಶಗಳನ್ನು ಪಾಲಿಸೋಣ ಎಂದು ಜಿತೇಂದ್ರ ಅವ್ಹಾದ್‌ ಹೇಳಿದ್ದರು.

VISTARANEWS.COM


on

Ayodhya Seer Paramhans Acharya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಯೋಧ್ಯೆ: ರಾಮಮಂದಿರ ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ “ರಾಮ ಮಾಂಸಾಹಾರಿಯಾಗಿದ್ದ” ಎಂದು ಎನ್‌ಸಿಪಿ ನಾಯಕ (ಶರದ್‌ ಪವಾರ್‌ ಬಣ) ಜಿತೇಂದ್ರ ಅವ್ಹಾದ್‌ (Jitendra Awhad) ನೀಡಿದ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಜಿತೇಂದ್ರ ಅವ್ಹಾದ್‌ ವಿರುದ್ಧ ಬಿಜೆಪಿ ದೂರು ದಾಖಲಿಸಲು ಮುಂದಾಗಿದೆ. ಇದರ ಬೆನ್ನಲ್ಲೇ, “ಜಿತೇಂದ್ರ ಅವ್ಹಾದ್‌ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಾನೇ ಅವನನ್ನು ಕೊಂದುಹಾಕುತ್ತೇನೆ” ಎಂದು ಅಯೋಧ್ಯೆ ಸಂತ ಪರಮಹಂಸ ಆಚಾರ್ಯ (Paramhans Acharya) ಖಡಕ್‌ ಎಚ್ಚರಿಕೆ ನೀಡಿದ್ದಾರೆ.

“ಭಗವಾನ್‌ ಶ್ರೀರಾಮನ ಕುರಿತು ಜಿತೇಂದ್ರ ಅವ್ಹಾದ್‌ ನೀಡಿರುವ ಹೇಳಿಕೆಯು ರಾಮನ ಭಕ್ತರಿಗೆ ನೋವುಂಟು ಮಾಡುವಂತಿದೆ. ರಾಮನ ಬಗ್ಗೆ ತುಚ್ಚವಾಗಿ ಹೇಳಿಕೆ ನೀಡಿದ ಜಿತೇಂದ್ರ ಅವ್ಹಾದ್‌ ವಿರುದ್ಧ ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಾಗೊಂದು ವೇಳೆ ಜಿತೇಂದ್ರ ಅವ್ಹಾದ್‌ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಆತನನ್ನು ನಾನೇ ಕೊಲ್ಲುತ್ತೇನೆ. ಇದು ನಾನು ನೀಡುತ್ತಿರುವ ಎಚ್ಚರಿಕೆಯಾಗಿದೆ” ಎಂದು ಪರಮಹಂಸ ಆಚಾರ್ಯ ಹೇಳಿದ್ದಾರೆ.

ಜಿತೇಂದ್ರ ಅವ್ಹಾದ್‌ ಹೇಳಿದ್ದೇನು?

ರಾಮ ಕಾಡಿನಲ್ಲಿದ್ದಾಗ ಬೇಟೆಯಾಡಿ ಮಾಂಸ ತಿನ್ನುತ್ತಿದ್ದ. ಎಲ್ಲರನ್ನೂ ಸಸ್ಯಾಹಾರಿಗಳನ್ನಾಗಿ ಬದಲಾಯಿಸುತ್ತಿರುವ ಹೊತ್ತಿನಲ್ಲಿ ನಾವು ಮಟನ್‌ ತಿಂದು ರಾಮನ ಆದರ್ಶಗಳನ್ನು ಪಾಲಿಸೋಣ. ಅಷ್ಟಕ್ಕೂ ರಾಮ ಮಾಂಸಾಹಾರಿಯಾಗಿದ್ದ. ಸುಮಾರು 14 ವರ್ಷ ಕಾಡಿನಲ್ಲಿ ಕಳೆದ ರಾಮನಿಗೆ ಸಸ್ಯಾಹಾರ ಸಿಗುವುದಾದರೂ ಹೇಗೆ? ನಾನು ನಿಜ ಹೇಳುತ್ತಿದ್ದೇನೋ ಇಲ್ಲವೋ ನೀವೇ ಹೇಳಿ ಎಂದು ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಿತೇಂದ್ರ ಅವ್ಹಾದ್‌ ಹೇಳಿದ್ದರು.

ಇದನ್ನೂ ಓದಿ: Lord Ram: ಶ್ರೀರಾಮ ಮಾಂಸ ಸೇವಿಸುತ್ತಿದ್ದ; ವಿವಾದದ ಕಿಡಿ ಹೊತ್ತಿಸಿದ ಎನ್‌ಸಿಪಿ ನಾಯಕ

ಜಿತೇಂದ್ರ ಅವ್ಹಾದ್‌ ನೀಡಿದ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. “ರಾಮ ಮಾಂಸಾಹಾರಿ ಎಂದು ಜಿತೇಂದ್ರ ಅವ್ಹಾದ್‌ ಹೇಳಿರುವುದು ಖಂಡನೀಯ. ಜಿತೇಂದ್ರ ಅವ್ಹಾದ್‌ ಅವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇವೆ” ಎಂದು ಬಿಜೆಪಿ ನಾಯಕ ರಾಮ್‌ ಕದಮ್‌ ಹೇಳಿದ್ದಾರೆ. ಇದೇ ವಿವಾದವನ್ನು ಇಟ್ಟುಕೊಂಡು ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಅವರನ್ನು ರಾಮ್‌ ಕದಮ್‌ ಟೀಕಿಸಿದ್ದಾರೆ. “ಉದ್ಧವ್‌ ಠಾಕ್ರೆ ಅವರಿಗೆ ಹಿಂದುಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ವೋಟಿಗಾಗಿ ರಾಜಕೀಯ ಮಾಡುವುದನ್ನೇ ಉದ್ಧವ್‌ ಠಾಕ್ರೆ ರೂಢಿಸಿಕೊಂಡಿದ್ದಾರೆಯೇ ಹೊರತು ಹಿಂದುಗಳ ಭಾವನೆಗಳಿಗೆ ಅವರು ಗೌರವ ನೀಡುವುದಿಲ್ಲ” ಎಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Rahul Gandhi: ಎಲ್ಲರೂ ಬೈಯುವಾಗ ನೀವು ಪ್ರೀತಿ ಕೊಟ್ರಿ; ವಯನಾಡು ಜನತೆಗೆ ರಾಹುಲ್‌ ಗಾಂಧಿ ಭಾವುಕ ಪತ್ರ

Rahul Gandhi: Rahul Gandhiರಾಹುಲ್‌ ಗಾಂಧಿ ಅವರು 2019ರಲ್ಲಿ ಉತ್ತರ ಪ್ರದೇಶ ಅಮೇಥಿ ಹಾಗೂ ವಯನಾಡಿನಿಂದ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋಲನುಭವಿಸಿದ ಕಾರಣ ಅವರು ವಯನಾಡು ಸಂಸದರಾಗಿ ಮುಂದುವರಿದಿದ್ದರು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರು 2004ರಿಂದಲೂ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈಗ ರಾಹುಲ್‌ ಗಾಂಧಿ ಅವರು ರಾಯ್‌ಬರೇಲಿ ಸಂಸದರಾಗಿ ಮುಂದುವರಿಯಲು ತೀರ್ಮಾನಿಸಿದ್ದಾರೆ. ಇದರ ಬೆನ್ನಲ್ಲೇ ವಯನಾಡಿನ ಜನತೆಗೆ ರಾಹುಲ್‌ ಗಾಂಧಿ ಭಾವನಾತ್ಮಕ ಪತ್ರ ಬರೆದಿದ್ದಾರೆ.

VISTARANEWS.COM


on

Rahul Gandhi
Koo

ತಿರುವನಂತಪುರಂ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ರಾಯ್‌ಬರೇಲಿ (Rae Bareli) ಸಂಸದರಾಗಿಯೇ ಮುಂದುವರಿಯಲು ತೀರ್ಮಾನಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ರಾಯ್‌ಬರೇಲಿ ಹಾಗೂ ವಯನಾಡು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ ಅವರು ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ತಾಯಿ ಸೋನಿಯಾ ಗಾಂಧಿ ಅವರು ಇದಕ್ಕೂ ಮೊದಲು ಸ್ಪರ್ಧಿಸುತ್ತಿದ್ದ ರಾಯ್‌ಬರೇಲಿ ಕ್ಷೇತ್ರದ ಸಂಸದರಾಗಿ ಉಳಿಯಲು ತೀರ್ಮಾನಿಸಿದ್ದಾರೆ. ಇದರ ಬೆನ್ನಲ್ಲೇ, ವಯನಾಡಿನ ಜನತೆಗೆ ರಾಹುಲ್‌ ಗಾಂಧಿ ಅವರು ಭಾವನಾತ್ಮಕ ಪತ್ರ ಬರೆದಿದ್ದಾರೆ.

“ನಾನು ಪ್ರತಿ ದಿನವೂ ಬೈಗುಳ, ನಿಂದನೆಯನ್ನೇ ಕೇಳುತ್ತಿರುವುದರ ಮಧ್ಯೆ ನೀವು ನನಗೆ ನಿಸ್ಪೃಹವಾದ ಪ್ರೀತಿ ನೀಡಿದಿರಿ. ನಿಮ್ಮ ಪ್ರೀತಿಯೇ ನನ್ನನ್ನು ಎಲ್ಲದರಿಂದಲೂ ಕಾಪಾಡಿತು. ನೀವೇ ನನ್ನ ಮನೆ, ನೀವೇ ನನ್ನ ಕುಟುಂಬ ಆಗಿದ್ದಿರಿ. ನೀವು ಒಂದು ಕ್ಷಣವೂ ನನ್ನನ್ನು ಅವಮಾನಿಸಲಿಲ್ಲ. ನೀವು ನನ್ನನ್ನು ನಂಬುತ್ತ ಹೋದಂತೆ ನಾನು ಮತ್ತಷ್ಟು ಗಟ್ಟಿಯಾಗುತ್ತ ಹೋದೆ. ನಿಮ್ಮ ಪ್ರೀತಿಯೇ ನನ್ನನ್ನು ಅನುದಿನವೂ ಮುನ್ನಡೆಸಿತು, ಅನುದಿನವೂ ನನಗೆ ಮಾರ್ಗದರ್ಶನ ನೀಡಿತು, ಪ್ರತಿದಿನವೂ ನನಗೆ ಹೊಸ ಹುಮ್ಮಸ್ಸು ನೀಡಿತು” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಧನ್ಯವಾದ ಹೇಳಲು ಮಾತೇ ಬಾರದು

“ನೀವು ಯಾವ ಧರ್ಮದವರೋ ನನಗೆ ಗೊತ್ತಿಲ್ಲ, ನಿಮ್ಮ ಸಮುದಾಯ ಯಾವುದು ಎಂಬುದು ನನಗೆ ಬೇಕಾಗಿಲ್ಲ, ನೀವು ಆಡುವ ಭಾಷೆ ಯಾವುದು ಎಂಬುದು ಕೂಡ ನನಗೆ ನಗಣ್ಯ. ಆದರೆ, ನೀವು ತೋರಿದ ಪ್ರೀತಿ, ವಾತ್ಸಲ್ಯ, ನೀವು ತುಂಬಿದ ಧೈರ್ಯ, ಪ್ರಾಂಜಲ ಮನಸ್ಸಿನಿಂದ ನೀವು ಹರಸಿದ ರೀತಿಗೆ ನನ್ನ ಮನಸ್ಸು ಉಕ್ಕಿಬಂದಿದೆ. ನಿಮಗೆ ಹೇಗೆ ಧನ್ಯವಾದ ಹೇಳುವುದೋ ತಿಳಿಯದು, ನಿಮ್ಮನ್ನು ಹೇಗೆ ಸಂತೈಸುವುದೋ ಗೊತ್ತಾಗದು. ಆದರೂ, ರಾಯ್‌ಬರೇಲಿಯಲ್ಲಿ ನನ್ನನ್ನು ಇಷ್ಟಪಡುವ ಜನ ಇದ್ದಾರೆ. ನಿಮ್ಮ ಪ್ರೀತಿಯೊಂದಿಗೆ ನಾನು ಅವರ ಬಳಿ ಹೋಗುತ್ತಿದ್ದೇನೆ. ನಿಮ್ಮ ನೆನಪುಗಳ ಬುತ್ತಿ ಕಟ್ಟಿಕೊಂಡು ಮುಂದಡಿ ಇಡುತ್ತಿದ್ದೇನೆ” ಎಂದು ರಾಹುಲ್‌ ಗಾಂಧಿ ಭಾವುಕರಾಗಿದ್ದಾರೆ.

“ವಯನಾಡಿನ ಹಿರಿಯರು, ಯುವಕರು, ಅಪಾರ ಶಕ್ತಿ ಹೊಂದಿರುವ ಯುವತಿಯರು ನನ್ನ ಶಕ್ತಿ ಆಗಿದ್ದರು. ವಯನಾಡಿನ ಜನರ ಪರವಾಗಿ ನಾನು ಸಂಸತ್ತಿನಲ್ಲಿ ಧ್ವನಿ ಎತ್ತಲು ಇದೇ ಸ್ಫೂರ್ತಿಯಾಯಿತು. ಈಗ ವಯನಾಡಿನಲ್ಲಿ ನನ್ನ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ನನಗೆ ನೀಡಿದ ಪ್ರೀತಿಯನ್ನೇ ಅವಳಿಗೆ ನೀಡುತ್ತೀರಿ ಎಂಬ ನಂಬಿಕೆ ಇದೆ. ಆ ಮೂಲಕ ದ್ವೇಷವನ್ನು ಹೊಡೆದೋಡಿಸಲು ಕೈ ಜೋಡಿಸುತ್ತೀರಿ ಎಂಬ ವಿಶ್ವಾಸವಿದೆ” ಎಂಬುದಾಗಿ ಅವರು ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಪ್ರವೇಶ ಪಡೆದಿರುವ ಕಾರಣ ರಾಯ್‌ಬರೇಲಿ ಕ್ಷೇತ್ರದಿಂದ ರಾಹುಲ್‌ ಗಾಂಧಿ ಸ್ಪರ್ಧಿಸುವಂತಾಗಿತ್ತು. ಈಗ ಪ್ರಿಯಾಂಕಾ ವಾದ್ರಾ ಅವರು ವಯನಾಡು ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಇವರಿಗೆ ಇದೇ ಮೊದಲ ಚುನಾವಣೆ ಆಗಿದೆ. ಚುನಾವಣೆಗೂ ಮೊದಲು, ಪ್ರಿಯಾಂಕಾ ವಾದ್ರಾ ಅವರು ರಾಯ್‌ಬರೇಲಿಯಿಂದ, ರಾಹುಲ್‌ ಗಾಂಧಿ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ: UGC-NET: ಯುದ್ಧವನ್ನೇ ನಿಲ್ಲಿಸುವ ಸಾಮರ್ಥ್ಯವಿರುವ ಮೋದಿ ಪ್ರಶ್ನೆ ಪತ್ರಿಕೆ ಸೋರಿಕೆ ಯಾಕೆ ತಡೆಯುತ್ತಿಲ್ಲ? ರಾಹುಲ್‌ ಗಾಂಧಿ ವ್ಯಂಗ್ಯ

Continue Reading

ದೇಶ

Bomb Threat: ದಿಲ್ಲಿ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ ಕರೆ; ಬಾಲಕ ಅರೆಸ್ಟ್‌

VISTARANEWS.COM


on

Bomb Threat
Koo

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಶಾಲೆ, ವಿಮಾನ ನಿಲ್ದಾಣಗಳಿಗೆ ಬಾಂಬ್‌ ಬೆದರಿಕೆ ಕರೆ(Bomb Threat)ಗಳು ಆಗಾಗ ಬರುತ್ತಲೇ ಇರುತ್ತವೆ. ಎಲ್ಲಾ ಪರಿಶೀಲನೆ ಮಾಡಿ ನೋಡಿದಾಗ ಅದೊಂದು ಹುಸಿಬಾಂಬ್‌ ಕರೆ ಅಂತಾ ಬಯಲಾಗುತ್ತದೆ. ಅತ್ತ ಆರೋಪಿಗಳೂ ಪೊಲೀಸರ ಕೈಗೆ ಸಿಗದೇ ಚಳ್ಳೆ ಹಣ್ಣು ತಿನ್ನಿಸುತ್ತಿರುತ್ತಾರೆ. ಇದೀಗ ದಿಲ್ಲಿ ವಿಮಾನ ನಿಲ್ದಾಣ(Delhi Airport)ಕ್ಕೆ ಬೆದರಿಕೆಯೊಡ್ಡಿದ್ದ ಬಾಲಕನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. 13 ವರ್ಷದ ಬಾಲಕನೋರ್ವ ದಿಲ್ಲಿ ವಿಮಾನ ನಿಲ್ದಾಣಕ್ಕೆ ಇ-ಮೇಲ್‌ ಮೂಲಕ ಹುಸಿಬಾಂಬ್‌ ಕರೆ ಮಾಡಿದ್ದ ಎನ್ನಲಾಗಿದೆ.

ಡೆಪ್ಯೂಟಿ ಪೊಲೀಸ್‌ ಕಮಿಷನರ್‌ ಉಷಾ ರಂಗ್ನಾನಿ ಮಾಹಿತಿ ನೀಡಿದ್ದು, ದುಬೈನಿಂದ ಬಂದಿದ್ದ ವಿಮಾನದಲ್ಲಿ ಬಾಂಬ್‌ ಇಟ್ಟಿರೋದಾಗಿ ಬಾಲಕ ಕೆಲವು ದಿನಗಳ ಹಿಂದೆ ಇ-ಮೇಲ್‌ ಕಳುಹಿಸಿದ್ದ. ತನಿಖೆ ನಡೆಸಿದ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಮಾಶೆಗಾಗಿ ಮೇಲ್‌ ಕಳುಹಿಸಿದಾಗ ಹೇಳಿದ್ದಾನೆ. ಇಮೇಲ್‌ ಕಳುಹಿಸಿದ ಕೆಲವೇ ಗಂಟೆಗಳಲ್ಲಿ ಅದನ್ನು ಡಿಲೀಟ್‌ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ಪ್ರಮುಖ ನಗರಗಳಲ್ಲಿ ಬಾಂಬ್‌ ದಾಳಿಗಳ ಬೆದರಿಕೆಗಳು ಜಾಸ್ತಿಯಾಗಿವೆ. ಬೆಂಗಳೂರಿನ ಶಾಲೆಗಳು ಸೇರಿ ಮುಂಬೈ, ದೆಹಲಿ ಏರ್‌ಪೋರ್ಟ್‌ಗಳು, ಸರ್ಕಾರದ ಕಟ್ಟಡಗಳಿಗೆ ಹುಸಿ ಬೆದರಿಕೆ ಕರೆಗಳು, ಇ-ಮೇಲ್‌ಗಳು ರವಾನೆಯಾಗುತ್ತಲೇ ಇವೆ. ಇದರ ಬೆನ್ನಲ್ಲೇ, ಮಂಗಳವಾರ (ಜೂನ್‌ 18) ಮುಂಬೈನಲ್ಲಿರುವ 50ಕ್ಕೂ ಅಧಿಕ ಆಸ್ಪತ್ರೆಗಳನ್ನು ಸ್ಫೋಟಿಸುವುದಾಗಿ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಹಾಕಲಾಗಿತ್ತು.

ಮಂಗಳವಾರವೇ ದೇಶದ 41 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂಬುದಾಗಿ ಹುಸಿ ಬಾಂಬ್‌ ಬೆದರಿಕೆ ಹಾಕಲಾಗಿತ್ತು. ಆಗಲೂ ಭದ್ರತಾ ಸಿಬ್ಬಂದಿ, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯ ಪರಿಶೀಲನೆ ನಡೆಸಿದ್ದರು. ಇದಾದ ಕೆಲವೇ ಗಂಟೆಯಲ್ಲಿ ಮುಂಬೈನ ಆಸ್ಪತ್ರೆಗಳಿಗೂ ಬಾಂಬ್‌ ಬೆದರಿಕೆ ಹಾಕಲಾಗಿದೆ. ಬಾಂಬ್‌ ಬೆದರಿಕೆಯ ಕುರಿತು ಪೊಲೀಸರೇ ಮಾಹಿತಿ ನೀಡಿದ್ದಾರೆ. ವಿಪಿಎನ್‌ ನೆಟ್‌ವರ್ಕ್‌ ಬಳಸಿ ಬಾಂಬ್‌ ದಾಳಿಯ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಮುಂಬೈನಲ್ಲಿರುವ ಪ್ರತಿಷ್ಠಿತ ಜಸ್ಲೋಕ್‌ ಹಾಸ್ಪಿಟಲ್‌, ರಹೇಜಾ ಹಾಸ್ಪಿಟಲ್‌, ಸೆವೆನ್‌ ಹಿಲ್ಸ್‌, ಕೊಹಿನೂರ್‌, ಕೆಇಎಂ, ಜೆಜೆ ಹಾಸ್ಪಿಟಲ್‌, ಸೇಂಟ್‌ ಜಾರ್ಜ್‌ ಹಾಸ್ಪಿಟಲ್‌ ಸೇರಿ ಹಲವು ಆಸ್ಪತ್ರೆಗಳ ಮೇಲೆ ಬಾಂಬ್‌ ದಾಳಿ ಮಾಡಲಾಗುವುದು ಎಂಬುದಾಗಿ ಬೆದರಿಕೆ ಹಾಕಲಾಗಿದೆ. ಇ-ಮೇಲ್‌ ಮೂಲಕ ಬೆದರಿಕೆ ಒಡ್ಡುತ್ತಲೇ ಪೊಲೀಸರು ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯು ಆಸ್ಪತ್ರೆಗಳಿಗೆ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ, ಭದ್ರತೆಯನ್ನು ಕೂಡ ಹೆಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದಷ್ಟೇ, ದೇಶದ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಗೆ ಬೆದರಿಕೆಯ ಮೇಲ್‌ ಬಂದಿತ್ತು. ಬೆಂಗಳೂರು, ದೆಹಲಿ, ಅಹಮದಾಬಾದ್‌, ಚೆನ್ನೈ ಸೇರಿ ಹಲವು ನಗರಗಳ ಶಾಲೆಗಳನ್ನೂ ಸ್ಫೋಟಿಸುವ ಬೆದರಿಕೆ ಕರೆಗಳು ಬಂದಿದ್ದವು. ಬಳಿಕ ನಕಲಿ ಬಾಂಬ್‌ ಬೆದರಿಕೆ ಎಂಬುದಾಗಿ ತಿಳಿದುಬಂದಿತ್ತು. ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಾಗಲಂತೂ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದಾದ ಬಳಿಕ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುವಂತಾಗಿತ್ತು.

ಇದನ್ನೂ ಓದಿ: Viral Video: ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿ ಲೈವ್ ವಿಡಿಯೊ ಮೂಲಕ ಧಮ್ಕಿ; ಕಾಮುಕನ ಅಟ್ಟಹಾಸಕ್ಕೆ ನೆಟ್ಟಿಗರು ಆಕ್ರೋಶ

Continue Reading

ದೇಶ

NEET UG Retest: ನೀಟ್‌ ಮರುಪರೀಕ್ಷೆಗೆ ಅರ್ಧದಷ್ಟು ಅಭ್ಯರ್ಥಿಗಳು ಗೈರು; ಇವರ ಭವಿಷ್ಯದ ಗತಿ ಏನು?

NEET UG Retest: ನೀಟ್‌ ಯುಜಿ ಪರೀಕ್ಷೆಯಲ್ಲಿ ಕೃಪಾಂಕ ಪಡೆದ 1,563 ವಿದ್ಯಾರ್ಥಿಗಳಿಗೆ ಭಾನುವಾರ (ಜೂನ್‌ 23) ಮರುಪರೀಕ್ಷೆ ನಡೆಸಲಾಗಿದೆ. ದೇಶದ ಆರು ನಗರಗಳಲ್ಲಿ ಪರೀಕ್ಷೆ ನಡೆದಿದ್ದು, ಅರ್ಧದಷ್ಟು ಅಭ್ಯರ್ಥಿಗಳು ಗೈರಾಗಿದ್ದಾರೆ. ಜೂನ್‌ 30ರೊಳಗೆ ಮರು ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಆದರೆ, ಗೈರಾದ ವಿದ್ಯಾರ್ಥಿಗಳ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

VISTARANEWS.COM


on

NEET UG Retest
Koo

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG Retest) ಕೃಪಾಂಕ (Grace Marks) ಪಡೆದ 1,563 ವಿದ್ಯಾರ್ಥಿಗಳಿಗೆ ಭಾನುವಾರ (ಜೂನ್‌ 23) ಮರು ಪರೀಕ್ಷೆ ನಡೆಸಲಾಗಿದ್ದು, ಅರ್ಧದಷ್ಟು ಅಭ್ಯರ್ಥಿಗಳು ಗೈರಾಗಿದ್ದಾರೆ. ಆ ಮೂಲಕ ಅಭ್ಯರ್ಥಿಗಳು ನೀಟ್‌ ಪರೀಕ್ಷೆ ಕುರಿತೇ ಆಸಕ್ತಿ ಕಳೆದುಕೊಂಡರೇ ಎಂಬ ಪ್ರಶ್ನೆ ಉದ್ಭವಿಸಿದೆ. ಗ್ರೇಸ್‌ ಮಾರ್ಕ್ಸ್‌ ಪಡೆದ 1,563 ಅಭ್ಯರ್ಥಿಗಳ ಪೈಕಿ 750 ಅಭ್ಯರ್ಥಿಗಳು ಮರು ಪರೀಕ್ಷೆಗೆ ಗೈರಾಗಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೇ (NTA) ತಿಳಿಸಿದೆ.

ಚಂಡೀಗಢ, ಗುಜರಾತ್‌, ಹರಿಯಾಣ, ಮೇಘಾಲಯ ಸೇರಿ ಆರು ರಾಜ್ಯಗಳ ನಗರಗಳಲ್ಲಿ ಮರು ಪರೀಕ್ಷೆ ನಡೆದಿದ್ದು, 813 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದಾರೆ. ಛತ್ತೀಸ್‌ಗಢದಲ್ಲಿ 602 ಅಭ್ಯರ್ಥಿಗಳ ಪೈಕಿ 291 ವಿದ್ಯಾರ್ಥಿಗಳು ಹಾಜರಾದರೆ, ಹರಿಯಾಣದಲ್ಲಿ 494 ಅಭ್ಯರ್ಥಿಗಳ ಪೈಕಿ 287, ಮೇಘಾಲಯದಲ್ಲಿ 464 ವಿದ್ಯಾರ್ಥಿಗಳ ಪೈಕಿ 234 ಅಭ್ಯರ್ಥಿಗಳು ಮಾತ್ರ ಹಾಜರಾದರು. ಗುಜರಾತ್‌ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಮರು ಪರೀಕ್ಷೆಗೆ ಹಾಜರಾದ ಎಂದು ಎನ್‌ಟಿಎ ತಿಳಿಸಿದೆ.

ನೀಟ್‌ ಪರೀಕ್ಷೆ ವೇಳೆ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಹಾಜರಿದ್ದು, ಮರುಪರೀಕ್ಷೆಯ ಮೇಲ್ವಿಚಾರಣೆ ನಡೆಸಿದರು. 2024ರ ಮೇ 5ರಂದು 14 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 571 ನಗರಗಳಲ್ಲಿ, 4,750 ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,563 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರಿ ಸುದ್ದಿ ಆಯಿತು.

ಗ್ರೇಸ್ ಅಂಕದ ವಿವಾದ ದೇಶಾದ್ಯಂತ ಹರಡುತ್ತಿದ್ದಂತೆ ಕೇಂದ್ರ ಸರ್ಕಾರ ಗ್ರೇಸ್ ಅಂಕಗಳನ್ನು ಪಡೆದ 1,563 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. 1,563 ಅಭ್ಯರ್ಥಿಗಳಲ್ಲಿ ಯಾರಾದರೂ ಮರುಪರೀಕ್ಷೆಯಿಂದ ಹೊರಗುಳಿದಿದ್ದರೆ ಗ್ರೇಸ್ ಅಂಕಗಳಿಲ್ಲದ ಅವರ ಹಿಂದಿನ ಅಂಕಗಳನ್ನು ಫಲಿತಾಂಶಗಳಿಗಾಗಿ ಬಳಸಲಾಗುತ್ತದೆ ಎಂದೂ ಕೇಂದ್ರ ಕೋರ್ಟ್‌ಗೆ ತಿಳಿಸಿತ್ತು. ಅದರಂತೆ ಇಂದು ಪರೀಕ್ಷೆ ನಡೆಸಿದ್ದು, ಜೂನ್‌ 30ರೊಳಗೆ ಫಲಿತಾಂಶ ಪ್ರಕಟಿಸಲಿದೆ.

ಇದನ್ನೂ ಓದಿ: NTA Website: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಎನ್‌ಟಿಎ ವೆಬ್‌ಸೈಟ್‌ ಹ್ಯಾಕ್‌? ಸಂಸ್ಥೆ ಹೇಳೋದಿಷ್ಟು

Continue Reading

ದೇಶ

NTA Website: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಎನ್‌ಟಿಎ ವೆಬ್‌ಸೈಟ್‌ ಹ್ಯಾಕ್‌? ಸಂಸ್ಥೆ ಹೇಳೋದಿಷ್ಟು

NTA Website: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೇಂದ್ರ ಸರ್ಕಾರವು ಸಿಬಿಐಗೆ ವಹಿಸಿದೆ. ಇದರ ಬೆನ್ನಲ್ಲೇ, ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿದೆ. ಇದರ ಮಧ್ಯೆಯೇ ಎನ್‌ಟಿಎ ವೆಬ್‌ಸೈಟ್‌ ಹ್ಯಾಕ್‌ ಮಾಡಲಾಗಿದೆ ಎಂಬ ಸುದ್ದಿಗಳು ಹರಡಿದ್ದು, ಇದನ್ನು ಎನ್‌ಟಿಎ ಅಧಿಕಾರಿಗಳು ನಿರಾಕರಿಸಿದ್ದಾರೆ.

VISTARANEWS.COM


on

NTA Website
Koo

ನವದೆಹಲಿ: ದೇಶದಲ್ಲಿ ನೀಟ್‌ (NEET UG) ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ಭಾರಿ ಸುದ್ದಿಯಾಗಿದ್ದು, ಪರೀಕ್ಷೆಯನ್ನೇ ರದ್ದುಗೊಳಿಸಿರುವ ಕೇಂದ್ರ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಇದರ ಬೆನ್ನಲ್ಲೇ, ಪರೀಕ್ಷಾ ಅಕ್ರಮಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವೆಬ್‌ಸೈಟ್‌ಅನ್ನೇ ಹ್ಯಾಕ್‌ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಎನ್‌ಟಿಎ ಸ್ಪಷ್ಟನೆ ನೀಡಿದ್ದು, “ವೆಬ್‌ಸೈಟ್‌ (NTA Website) ಹ್ಯಾಕ್‌ ಮಾಡಿಲ್ಲ. ವೆಬ್‌ಸೈಟ್‌ ಸುರಕ್ಷಿತವಾಗಿದೆ” ಎಂದು ತಿಳಿಸಿದೆ.

ಎನ್‌ಟಿಎ ವೆಬ್‌ಸೈಟ್‌ ಹ್ಯಾಕ್‌ ಆಗಿಲ್ಲ. ಎಲ್ಲ ಪೋರ್ಟಲ್‌ಗಳು ಸೇಫ್‌ ಆಗಿವೆ. ಎನ್‌ಟಿಎ ವೆಬ್‌ಸೈಟ್‌ ಹ್ಯಾಕ್‌ ಮಾಡಲಾಗಿದೆ ಎಂಬ ವರದಿಗಳು ಕೇಳಿಬಂದಿದ್ದು, ಇವು ಸತ್ಯಕ್ಕೆ ದೂರವಾಗಿವೆ. ಜನರ ದಾರಿ ತಪ್ಪಿಸುವ ದಿಸೆಯಲ್ಲಿ ಇಂತಹ ವದಂತಿಗಳನ್ನು ಹರಡಲಾಗುತ್ತಿದೆ” ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಎನ್‌ಟಿಎ ದೇಶದಲ್ಲಿ ನೀಟ್‌, ನೆಟ್‌ ಸೇರಿ ಹಲವು ಪರೀಕ್ಷೆಗಳನ್ನು ನಡೆಸುತ್ತಿದೆ. ಎನ್‌ಟಿಎ ಅಧಿಕಾರಿಗಳು ಶಾಮೀಲಾದ ಕಾರಣವೇ ನೀಟ್‌ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದೇ ಕಾರಣಕ್ಕಾಗಿ ಎನ್‌ಟಿಎದಲ್ಲಿ ಕೆಲ ಸುಧಾರಣೆ ತರಲು ಕೇಂದ್ರ ಶಿಕ್ಷಣ ಸಚಿವಾಲಯವು ತಜ್ಞರ ಸಮಿತಿ ಕೂಡ ರಚಿಸಿದೆ.

ನೀಟ್‌ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮದ ಕುರಿತು ತನಿಖೆ ಆರಂಭಿಸಿರುವ ಸಿಬಿಐ, ನೀಟ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿಕೊಂಡಿದೆ. ಹಾಗೆಯೇ, ಇನ್ನೂ ಹಲವು ರಾಜ್ಯಗಳಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಇದರ ಜತೆಗೆ, ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತಂಡಗಳು ಬಿಹಾರ ಹಾಗೂ ಗುಜರಾತ್‌ಗೆ ತೆರಳಲಿವೆ ಎಂದು ಹೇಳಲಾಗುತ್ತಿದೆ. ಇನ್ನು, ನೀಟ್‌ ಪಿಜಿ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ. ಯುಜಿಸಿ ನೆಟ್‌ ಪರೀಕ್ಷೆಯನ್ನೂ ರದ್ದುಗೊಳಿಸಲಾಗಿದೆ.

ನೀಟ್‌ ಸೇರಿ ಹಲವು ಪರೀಕ್ಷೆಗಳನ್ನು ನಡೆಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹಾ ನಿರ್ದೇಶಕ ಸುಬೋಧ್‌ ಕುಮಾರ್‌ ಸಿಂಗ್‌ ಅವರನ್ನು ಕೇಂದ್ರ ಸರ್ಕಾರವು ಹುದ್ದೆಯಿಂದ ಕೆಳಗಿಳಿಸಿದೆ. ಅವರ ಜಾಗಕ್ಕೆ ಪ್ರದೀಪ್‌ ಸಿಂಗ್‌ ಖರೋಲಾ ಅವರನ್ನು ನೇಮಿಸಿದೆ. ಶನಿವಾರ (ಜೂನ್‌ 22) ಸಿಬಿಐ ತನಿಖೆಗೆ ವಹಿಸಿದ ಕೇಂದ್ರ ಸರ್ಕಾರವು, “ಕೆಲವು ಅಕ್ರಮಗಳು, ವಂಚನೆ ಮತ್ತು ದುಷ್ಕೃತ್ಯಗಳ ಪ್ರಕರಣಗಳು ವರದಿಯಾಗಿವೆ ಮತ್ತು ಪರೀಕ್ಷಾ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಪಾರದರ್ಶಕತೆಗಾಗಿ, ಶಿಕ್ಷಣ ಸಚಿವಾಲಯದ ಪರಿಶೀಲನೆಯ ನಂತರ ಈ ಬಗ್ಗೆ ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿತ್ತು.

ಇದನ್ನೂ ಓದಿ: NEET UG: ನೀಟ್‌ ಅಕ್ರಮ; ಎಫ್‌ಐಆರ್‌ ದಾಖಲಿಸಿದ ಸಿಬಿಐ, ತನಿಖೆ ಮತ್ತಷ್ಟು ಚುರುಕು

Continue Reading
Advertisement
IND vs SA
ಪ್ರಮುಖ ಸುದ್ದಿ4 mins ago

IND VS SA : ದಕ್ಷಿಣ ಆಫ್ರಿಕಾ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರ ಕ್ರಿಕೆಟ್ ತಂಡ

T20 world cup 2024
ಪ್ರಮುಖ ಸುದ್ದಿ37 mins ago

T20 World Cup 2024 : ಅಮೆರಿಕ ವಿರುದ್ಧವೂ ಸೋತ್ರಲ್ಲೋ… ಪಾಕ್​ ಪಾರ್ಲಿಮೆಂಟ್​ನಲ್ಲೂ ವಿಶ್ವ ಕಪ್ ಸೋಲಿನ ಚರ್ಚೆ!

Rahul Gandhi
ದೇಶ58 mins ago

Rahul Gandhi: ಎಲ್ಲರೂ ಬೈಯುವಾಗ ನೀವು ಪ್ರೀತಿ ಕೊಟ್ರಿ; ವಯನಾಡು ಜನತೆಗೆ ರಾಹುಲ್‌ ಗಾಂಧಿ ಭಾವುಕ ಪತ್ರ

Babar Azam
ಪ್ರಮುಖ ಸುದ್ದಿ2 hours ago

Babar Azam: ಮ್ಯಾಚ್​ ಫಿಕ್ಸಿಂಗ್ ಆರೋಪ ಮಾಡಿದವನ ಮೇಲೆ 1 ಕೋಟಿ ರೂ. ಮಾನನಷ್ಠ ಮೊಕದ್ದಮೆ ಹೂಡಿದ ಬಾಬರ್ ಅಜಮ್​

Abbi Falls
ಕರ್ನಾಟಕ2 hours ago

Abbi Falls: ಅಬ್ಬಿ ಫಾಲ್ಸ್ ಬಳಿ ಸೆಲ್ಫಿ ಕ್ರೇಜ್‌ಗೆ ಯುವಕ ಬಲಿ; ಕೊಡಗಿನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಹಲ್ಲೆ

Shakib Al Hasan
ಪ್ರಮುಖ ಸುದ್ದಿ2 hours ago

Shakib Al Hasan : ನಿವೃತ್ತಿಯಾಗು ಶಕಿಬ್…, ಬಾಂಗ್ಲಾ ಮಾಜಿ ನಾಯಕನ ಮೇಲೆ ಮತ್ತೆ ಗುಡುಗಿದ ಸೆಹ್ವಾಗ್​

Vashu Bhagnani
ಸಿನಿಮಾ2 hours ago

Vashu Bhagnani: ‘ಬೆಲ್ ಬಾಟಮ್’ ಚಿತ್ರದ ನಿರ್ಮಾಪಕ ದಿವಾಳಿ; ಕಚೇರಿ ಕಟ್ಟಡ ಸೇಲ್!

Sonakshi Sinha
ಬಾಲಿವುಡ್2 hours ago

Sonakshi Sinha: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್;‌ Photos ಇಲ್ಲಿವೆ

Money Guide
ಮನಿ ಗೈಡ್2 hours ago

Money Guide: 30 ಸಾವಿರ ಸಂಬಳ ಪಡೆಯುವವರೂ ಕೆಲವೇ ವರ್ಷಗಳಲ್ಲಿ ಕೋಟ್ಯಧಿಪತಿ ಆಗಲು ಸಾಧ್ಯ!

Bomb Threat
ದೇಶ3 hours ago

Bomb Threat: ದಿಲ್ಲಿ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ ಕರೆ; ಬಾಲಕ ಅರೆಸ್ಟ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌