boat capsizes: ದೋಣಿ ಮಗುಚಿ 13 ಶಾಲಾ ಮಕ್ಕಳು, ಇಬ್ಬರು ಶಿಕ್ಷಕರ ದುರ್ಮರಣ - Vistara News

ದೇಶ

boat capsizes: ದೋಣಿ ಮಗುಚಿ 13 ಶಾಲಾ ಮಕ್ಕಳು, ಇಬ್ಬರು ಶಿಕ್ಷಕರ ದುರ್ಮರಣ

boat capsizes: ವಡೋದರಾದ ಹರಿಣಿ ಸರೋವರದಲ್ಲಿ ಮಗುಚಿದ ಬೋಟ್‌ನಲ್ಲಿ 27 ಶಾಲಾ ಮಕ್ಕಳು ಪಿಕ್‌ನಿಕ್ ಮಾಡಲು ಬಂದಿದ್ದರು.

VISTARANEWS.COM


on

boat capsizes in gujarat and 13 School student and 2 teacher dead
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಡೋದರಾ: ಗುಜರಾತ್‌ನ (Gujarat) ವಡೋದಾರದ (Vadodara) ಹರಿಣಿ ಸರೋವರದಲ್ಲಿ (Harni Lake) ಬೋಟ್ ಮಗುಚಿ (boat capsizes) 13 ಶಾಲಾ ಮಕ್ಕಳು (School Student Dead) ಹಾಗೂ ಇಬ್ಬರು ಶಿಕ್ಷಕರು ಮೃತಪಟ್ಟ (Teachers Dead) ಘಟನೆ ಗುರುವಾರ ನಡೆದಿದೆ. ನ್ಯೂ ಸನ್‌ರೈಸ್ ಶಾಲೆಯ ಮಕ್ಕಳು ಪಿಕ್‌ನಿಕ್‌ಗಾಗಿ ಕೆರೆಗೆ ಆಗಮಿಸಿದ್ದರು.

ಈ ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ, ಕಾಣೆಯಾಗಿರುವ ಮಕ್ಕಳನ್ನು ರಕ್ಷಿಸುವ ಪ್ರಯತ್ನ ಮಾಡಿದರು. ನೀರಿನಲ್ಲಿ ಮುಳುಗಿದ್ದ 15 ವರ್ಷ ಬಾಲಕಿ ಮತ್ತು ಬಾಲಕ ಹಾಗೂ 45 ವರ್ಷದ ಇಬ್ಬರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆ ಸಾಗಿಸಲಾಯಿತಾದರೂ, ಅವರು ಬದುಕುಳಿಯಲಿಲ್ಲ. ಬೋಟ್‌ನಲ್ಲಿ 27 ವಿದ್ಯಾರ್ಥಿಗಳಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ವಡೋದರಾ ಜಿಲ್ಲಾಧಿಕಾರಿ ಎ ಬಿ ಗೋರ್, “ನಾವು ಕಾಣೆಯಾಗಿರುವ ಮಕ್ಕಳನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಸುದ್ದಿ ಸಂಸ್ಥೆ, ಪಿಟಿಐಗೆ ತಿಳಿಸಿದ್ದಾರೆ. ದೋಣಿಯು ಪಿಕ್‌ನಿಕ್‌ಗಾಗಿ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿತ್ತು. ನಂತರ ಮಧ್ಯಾಹ್ನ ಹರಣಿ ಕೆರೆಯಲ್ಲಿ ಮುಗುಚಿ ಬಿದ್ದಿದ್ದು, ಮಕ್ಕಳು ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ತಿಳಿದು ಬಂದಿದೆ.

ಅಗ್ನಿ ಶಾಮಕ ದಳ ದುರ್ಘಟನಾ ಸ್ಥಳಕ್ಕೆ ಆಗಮಿಸುವ ಮೊದಲು ಕೆಲವು ಸ್ಥಳೀಯರು ಮಕ್ಕಳನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ರಕ್ಷಿಸಲು ಅವರಿಂದ ಸಾಧ್ಯವಾಗಿಲ್ಲ. ವರದಿಗಳ ಪ್ರಕಾರ, ಸರೋವರದಲ್ಲಿ ಮಗುಚಿದ ದೋಣಿಯಲ್ಲಿ ನ್ಯೂ ಸನ್‌ರೈಸ್ ಶಾಲೆಯ 27 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ಮಕ್ಕಳ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತ ಮಕ್ಕಳ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೇ, ಈ ಘಟನೆಯಲ್ಲಿ ಗಾಯಗೊಂಡವರಿಗೆ 50 ಸಾವಿರ ರೂ. ಘೋಷಿಸಿದ್ದಾರೆ.

ಬೋಟ್ ಮಗುಚಿದ್ದರಿಂದ ಕಾಣೆಯಾಗಿದ್ದ ಅನೇಕ ಮಕ್ಕಳನ್ನು ಈಗಾಗಲೇ ರಕ್ಷಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸಯಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣೆ ಮಾಡಲಾದ ಮಕ್ಕಳ ಸ್ಥಿತಿಯು ಗಂಭೀರವಾಗಿದೆ ಎಂದು ತಿಳಿದುಬಂದಿದೆ. ದುರ್ಘಟನೆ ನಡೆದ ಸರೋವರಕ್ಕೆ ಸ್ಥಳೀಯ ನಾಯಕರು ಮತ್ತು ಶಾಸಕರು ಧಾವಿಸಿ ನೆರವು ನೀಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: boat capsizes: ಬೋಟ್ ಮುಗುಚಿ 6 ಶಾಲಾ ಮಕ್ಕಳ ದುರ್ಮರಣ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!

Narendra Modi 3.0 : ಚುನಾವಣೆಯಲ್ಲಿ ಅವರು ಮತ್ತೊಂದು ಬಾರಿ ಆರಿಸಿ ಬರದಿರಲಿ ಎಂದು ಆಶಿಸಿದ್ದರು. ಅದರೆ, ಪಾಕ್​ನ ಲೆಕ್ಕಾಚಾರ ಉಲ್ಟಾ ಆಗಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನೀಗ ಶುಭಾಶಯ ಹೇಳದೆ ವಿಧಿಯಿಲ್ಲ. ಹೀಗಾಗಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಭಿನಂದನೆ ಸಲ್ಲಿಸಿದ್ದಾರೆ

VISTARANEWS.COM


on

Narendra Modi 3.20
Koo

ಬೆಂಗಳೂರು: ನರೇಂದ್ರ ಮೋದಿ ಮತ್ತೊಂದು ಅವಧಿಗೆ ಭಾರತದ ಪ್ರಧಾನಿಯಾಗುವುದು (Narendra Modi 3.0) ಪಾಕಿಸ್ತಾನದ ಸರ್ಕಾರಕ್ಕೆ ಇಷ್ಟವಿರಲಿಲ್ಲ. ಹಿಂದೂಸ್ತಾನದಲ್ಲೀಗ ಮೋದಿ ಯುಗ, ‘ಮೋದಿಯ ಭಾರತ’ ಎಂದು ಆಗಾಗ ಕರೆಯುತ್ತಿದ್ದರು. ಚುನಾವಣೆಯಲ್ಲಿ ಅವರು ಮತ್ತೊಂದು ಬಾರಿ ಆರಿಸಿ ಬರದಿರಲಿ ಎಂದು ಆಶಿಸಿದ್ದರು. ಅದರೆ, ಪಾಕ್​ನ ಲೆಕ್ಕಾಚಾರ ಉಲ್ಟಾ ಆಗಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನೀಗ ಶುಭಾಶಯ ಹೇಳದೆ ವಿಧಿಯಿಲ್ಲ. ಹೀಗಾಗಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಭಿನಂದನೆ ಸಲ್ಲಿಸಿದ್ದಾರೆ. “ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ @narendramodi ಅವರಿಗೆ ಅಭಿನಂದನೆಗಳು” ಎಂದು ಷರೀಫ್ ಎಕ್ಸ್​ ಪೋಸ್ಟ್​ ಮಾಡಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಅವರು ಶನಿವಾರ ಪ್ರಧಾನಿ ಮೋದಿಯವರನ್ನು ಅಭಿನಂದಿಸುವ ಬಗ್ಗೆ ಕೇಳಿದಾಗ, “ಅವರ ಚುನಾವಣಾ ಪ್ರಕ್ರಿಯೆಯ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆಗಳನ್ನು ಹೊಂದಿಲ್ಲ” ಎಂದು ಹೇಳಿದ್ದರು. ಹೊಸ ಭಾರತ ಸರ್ಕಾರ ಅಧಿಕೃತವಾಗಿ ಪ್ರಮಾಣವಚನದ ಪ್ರಕಟಣೆ ಹೊರಡಿಸದ ಕಾರಣ, ಅಭಿನಂದನಾ ಸಂದೇಶಗಳನ್ನು ಚರ್ಚಿಸಲು ಕಾಲ ಪಕ್ವವಾಗಿಲ್ಲ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ, ಲೋಕಸಭೆ ಚುನಾವಣೆಯಲ್ಲಿ 543 ಸ್ಥಾನಗಳಲ್ಲಿ 293 ಸ್ಥಾನಗಳನ್ನು ಗೆಲ್ಲುವ ಮೂಲಕ ನಿರ್ಣಾಯಕ ಗೆಲುವು ಸಾಧಿಸಿದೆ.

“ಪಾಕಿಸ್ತಾನವು ಯಾವಾಗಲೂ ಭಾರತ ಸೇರಿದಂತೆ ತನ್ನ ಎಲ್ಲಾ ನೆರೆಹೊರೆಯವರೊಂದಿಗೆ ಸಹಕಾರ ಸಂಬಂಧವನ್ನು ಬಯಸುತ್ತದೆ. ಜಮ್ಮು ಮತ್ತು ಕಾಶ್ಮೀರದ ಪ್ರಮುಖ ವಿವಾದ ಸೇರಿದಂತೆ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ರಚನಾತ್ಮಕ ಮಾತುಕತೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ನಾವು ನಿರಂತರವಾಗಿ ಪ್ರತಿಪಾದಿಸಿದ್ದೇವೆ” ಎಂದು ಬಲೂಚ್ ಹೇಳಿದ್ದರು.

ಇದನ್ನೂ ಓದಿ: Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!

ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬಯಸುವುದಾಗಿ ಭಾರತ ಸಮರ್ಥಿಸಿಕೊಂಡಿದೆ, ಇಸ್ಲಾಮಾಬಾದ್ ಮೊದಲು ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣವನ್ನು ಸೃಷ್ಟಿಸಬೇಕು ಎಂದು ಒತ್ತಿಹೇಳಿದೆ.

Continue Reading

ಪ್ರಮುಖ ಸುದ್ದಿ

Reasi Terror Attack : ಉಗ್ರರ ಮುಂದೆ ಸತ್ತಂತೆ ನಟಿಸಿ ಬದುಕುಳಿದ ಹಿಂದೂ ಯಾತ್ರಿಗಳು…

Reasi Terror Attack : ತಂಡದಲ್ಲಿ 6ರಿಂದ 7 ಭಯೋತ್ಪಾದಕರು ಇದ್ದರು. ಅವರು ಮಾಸ್ಕ್​ನಿಂದ ಮುಖ ಮುಚ್ಚಿದ್ದರು. ಆರಂಭದಲ್ಲಿ, ಅವರು ಬಸ್ ಹಿಂದೆ – ಮುಂದೆ ಚಲಿಸದಂತೆ ರಸ್ತೆಯ ಎಲ್ಲಾ ಬದಿಗಳಿಂದ ಮುಚ್ಚಿದರು. ಬಳಿಕ ಗುಂಡು ಹಾರಿಸಲು ಆರಂಭಿಸಿದರು. ಬಸ್ ಕಮರಿಗೆ ಹತ್ತಿರ ಬಂದು ಎಲ್ಲರೂ ಸಾಯುವಂತೆ ನಿರಂತ ಗುಂಡು ಹಾರಿಸುತ್ತಲೇ ಇದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

VISTARANEWS.COM


on

Reasi Terror Attack
Koo

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಹಿಂದೂ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ (Reasi Terror Attack) ಬದುಕುಳಿದವರು ಆ ಭಯಾನಕ ಕ್ಷಣವನ್ನು ವಿವರಿಸಿದ್ದಾರೆ. ಎಲ್ಲರನ್ನೂ ಸಾಯಿಸಬೇಕು ಎಂಬ ಉದ್ದೇಶದಿಂದ ಭಯೋತ್ಪಾದಕರು ಬಸ್​ ಕಮರಿಗೆ ಬಿದ್ದಿದ್ದರೂ ಗುಂಡು ಹಾರಿಸುತ್ತಲೇ ಇದ್ದರು ಎಂದು ಅವರು ಹೇಳಿದ್ದಾರೆ. ನಾವೆಲ್ಲರೂ ಗುಂಡು ಬಿದ್ದು ಸತ್ತಂತೆ ನಟಿಸಿ ಬದುಕಿಕೊಂಡೆವು ಎಂದು ಅವರು ಭಯಭೀತ ಘಟನೆಯನ್ನು ವಿವರಿಸಿದ್ದಾರೆ.

ತಂಡದಲ್ಲಿ 6ರಿಂದ 7 ಭಯೋತ್ಪಾದಕರು ಇದ್ದರು. ಅವರು ಮಾಸ್ಕ್​ನಿಂದ ಮುಖ ಮುಚ್ಚಿದ್ದರು. ಆರಂಭದಲ್ಲಿ, ಅವರು ಬಸ್ ಹಿಂದೆ – ಮುಂದೆ ಚಲಿಸದಂತೆ ರಸ್ತೆಯ ಎಲ್ಲಾ ಬದಿಗಳಿಂದ ಮುಚ್ಚಿದರು. ಬಳಿಕ ಗುಂಡು ಹಾರಿಸಲು ಆರಂಭಿಸಿದರು. ಬಸ್ ಕಮರಿಗೆ ಹತ್ತಿರ ಬಂದು ಎಲ್ಲರೂ ಸಾಯುವಂತೆ ಕೂಗುತ್ತಾ ನಿರಂತರ ಗುಂಡು ಹಾರಿಸುತ್ತಲೇ ಇದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ನಾವೆಲ್ಲರೂ ಸತ್ತಿದ್ದೇವೆ ಎಂದು ಅವರನ್ನು ನಂಬಿಸಲು ನಾವು ಮೌನವಾಗಿಯೇ ಇದ್ದೆವು. ಸಂಜೆ 6 ಗಂಟೆಗೆ ಶಿವಖೋರ್ಹಿಯಿಂದ (ರಿಯಾಸಿ) ವೈಷ್ಣೋದೇವಿಗೆ ಬಸ್ ಮೂಲಕ ಬರುವಾಗ 30 ನಿಮಿಷಗಳ ದಾರಿಯ ನಡುವೆ ಘಟನೆ ನಡೆದಿದೆ. ನಾವು ಭಯಭೀತರಾಗಿದ್ದೆವು. ಬಸ್ಸಿನಲ್ಲಿ ಮಕ್ಕಳು ಮತ್ತು ಮಹಿಳೆಯರು ಸಹ ಇದ್ದರು. ಎಲ್ಲರೂ ಗಾಯಗೊಂಡಿದ್ದಾರೆ. ದಾಳಿ ನಡೆದ 10 ರಿಂದ 15 ನಿಮಿಷಗಳ ನಂತರ ಪೊಲೀಸರು ಮತ್ತು ಸ್ಥಳೀಯರು ನಮ್ಮನ್ನು ರಕ್ಷಿಸಲು ಬಂದರು ಎಂದು ಯಾತ್ರಿಯೊಬ್ಬರು ಹೇಳಿದರು.

20 ನಿಮಿಷ ಗುಂಡು ಹಾರಿಸಿದ್ದರು

ಭಯಾನಕ ದಾಳಿಯನ್ನು ವಿವರಿಸಿದ ಸಂತ್ರಸ್ತರೊಬ್ಬರು “ಭಯೋತ್ಪಾದಕರಲ್ಲಿ ಒಬ್ಬ ಬಸ್ ಮೇಲೆ ಗುಂಡು ಹಾರಿಸುವುದನ್ನು ನಾನು ನೋಡಿದ್ದೇನೆ. ಬಸ್ ಕಮರಿಗೆ ಬಿದ್ದ ನಂತರವೂ ಅವರು 20 ನಿಮಿಷಗಳ ಕಾಲ ಗುಂಡು ಹಾರಿಸುತ್ತಲೇ ಇದ್ದರು. ಬಸ್ ಚಾಲಕನಿಗೆ ಗುಂಡು ತಗುಲಿದ ಕಾರಣ ನಿಯಂತ್ರಣ ಕಳೆದುಕೊಂಡು ವಾಹನವು ಕಮರಿಗೆ ಬಿದ್ದಿದೆ.

ಮಕ್ಕಳೂ ಎಂದೂ ನೋಡದೆ ಕೊಂಡಿದ್ದರು

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ದೇವಾಲಯದಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ಪರಿಣಾಮ 10 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 33 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Narendra Modi 3.0 : ಅಧಿಕಾರ ಸ್ವೀಕರಿಸಿದ ಮರುದಿನವೇ ಮೊದಲ ಫೈಲ್​ಗೆ ಸಹಿ ಹಾಕಿದ ಪ್ರಧಾನಿ ಮೋದಿ; ಯಾವ ಕಡತ ಅದು?

ರಿಯಾಸಿ ಬಸ್ ದಾಳಿಯಲ್ಲಿ ಎರಡರಿಂದ ಮೂರು ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ರಾಜೌರಿ ಮತ್ತು ಪೂಂಛ್​​ನಲ್ಲಿ ದಾಳಿಗಳನ್ನು ನಡೆಸಿದ ಲಷ್ಕರ್ ಉಗ್ರರ ಗುಂಪು ಟಿಆರ್​ಎಫ್​ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

ಭಯೋತ್ಪಾದಕರನ್ನು ಪತ್ತೆಹಚ್ಚಲು ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ದಾಳಿಯ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್ಐಎ) ನಿಯೋಜಿಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

Continue Reading

ಪ್ರಮುಖ ಸುದ್ದಿ

PM Narendra Modi: ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ! ವಿಡಿಯೋ ಇದೆ ನೋಡಿ

PM Narendra Modi: ಜೂನ್ 9ರಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಡೆದ ಈ ಪ್ರಮುಖ ರಾಜಕೀಯ ಘಟನೆಗೆ ವಿವಿಧ ಕ್ಷೇತ್ರಗಳ ಹಲವಾರು ಪ್ರಮುಖರು ಸಾಕ್ಷಿಯಾಗಿರುವಂತೆಯೇ, ನಾಲ್ಕು ಕಾಲಿನ ಒಂದು ಅನಿರೀಕ್ಷಿತ ಅತಿಥಿಯೂ ಕಂಡುಬಂದಿರುವುದು ಅಚ್ಚರಿಗೊಳಿಸಿದೆ.

VISTARANEWS.COM


on

pm narendra modi leopord
Koo

ಹೊಸದಿಲ್ಲಿ: ನರೇಂದ್ರ ಮೋದಿ (PM Narendra Modi) ಅವರು ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ (Prime minister) ಪ್ರಮಾಣ ವಚನ (Oath taking) ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದ್ದಾಗ ಹಿನ್ನೆಲೆಯಲ್ಲಿ ಚಿರತೆಯಂಥ (leopord) ಪ್ರಾಣಿಯೊಂದು ವೇದಿಕೆಯ ಹಿಂಭಾಗದಲ್ಲೇ ಓಡಾಡಿರುವುದು ಇದೀಗ ಕಂಡುಬಂದಿದೆ. ಸಮಾರಂಭದ ವಿಡಿಯೋದಲ್ಲಿ ಇದು ಕಂಡುಬಂದಿದ್ದು, ಇದೀಗ ಎಲ್ಲರ ಆಶ್ಚರ್ಯ, ಆತಂಕಗಳಿಗೆ ಕಾರಣವಾಗಿದೆ. ವಿಡಿಯೋ ವೈರಲ್‌ (viral video) ಆಗುತ್ತಿದೆ.

ಜೂನ್ 9ರಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಡೆದ ಈ ಪ್ರಮುಖ ರಾಜಕೀಯ ಘಟನೆಗೆ ವಿವಿಧ ಕ್ಷೇತ್ರಗಳ ಹಲವಾರು ಪ್ರಮುಖರು ಸಾಕ್ಷಿಯಾಗಿರುವಂತೆಯೇ, ನಾಲ್ಕು ಕಾಲಿನ ಒಂದು ಅನಿರೀಕ್ಷಿತ ಅತಿಥಿಯೂ ಕಂಡುಬಂದಿರುವುದು ಅಚ್ಚರಿಗೊಳಿಸಿದೆ. ಭಾರತದ ಪ್ರಧಾನ ಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಹಜವಾಗಿ ಬಿಗಿ ಭದ್ರತೆಯ ಕಾರ್ಯಕ್ರಮವಾಗಿದ್ದು, ರಾಷ್ಟ್ರದ ಮುಖಂಡರು, ರಾಜಕೀಯ ನಾಯಕರು, ಉದ್ಯಮಿಗಳು, ಪ್ರಮುಖ ಚಲನಚಿತ್ರ ನಟರು ಸಾಕ್ಷಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಚಿರತೆ ಕಂಡುಬಂದಿದೆ.

ಬಿಜೆಪಿಯ ದುರ್ಗಾ ದಾಸ್ ಉಯಿಕೆ ಅವರು ಕೇಂದ್ರ ಸಚಿವರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ, ವೇದಿಕೆಯ ಹಿನ್ನೆಲೆಯಲ್ಲಿ ಬೆಕ್ಕಿನ ಸ್ವರೂಪದ ಪ್ರಾಣಿಯೊಂದು ಓಡಾಡಿದ್ದನ್ನು ಹೆಚ್ಚಿನವರು ಗುರುತಿಸಲಿಲ್ಲ. ಆದರೆ ವೇದಿಕೆಯ ಹಿಂದೆಯೇ ಅದರ ಮಿಂಚಿನ ಓಡಾಟವನ್ನು ಅನೇಕರು ಗಮನಿಸಿದರು. ದೂರದರ್ಶನದಲ್ಲಿ ಪ್ರಮಾಣವಚನ ಸಮಾರಂಭ ನೇರ ಪ್ರಸಾರವಾಗಿದ್ದು, ಇದೀಗ ಆ ಕ್ಷಣದ ವಿಡಿಯೋಗಳು ಮರುಪ್ರಸಾರವಾಗುತ್ತಿವೆ.

ಈ ವರ್ಷದ ಅತಿದೊಡ್ಡ ರಾಜಕೀಯ ಇವೆಂಟ್‌ ಆಗಿರುವ ಈ ಕಾರ್ಯಕ್ರಮದಲ್ಲಿ ಈ ಅನಪೇಕ್ಷಿತ, ಅನಿರೀಕ್ಷಿತ ಅತಿಥಿಯ ಆಗಮನ ಇದೀಗ ಇಂಟರ್ನೆಟ್‌ನಲ್ಲಿ ಬಿರುಗಾಳಿಯಂತೆ ಗಮನ ಸೆಳೆಯುತ್ತಿದೆ. ಅನೇಕ X ಬಳಕೆದಾರರು ತಮ್ಮ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ. ಹಲವರು ಅಚ್ಚರಿ ಹಾಗೂ ಆತಂಕ ಹೊರಸೂಸಿದ್ದಾರೆ.

ಆದರೂ ವಿಸ್ತಾರವಾದ ರಾಜಪಥ ಹಾಗೂ ರಾಷ್ಟ್ರಪತಿ ಭವನದ ಆವರಣದಲ್ಲಿ ಚಿರತೆ ಬಂದು ಹುದುಗಿಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯಾಲಗುವುದಿಲ್ಲ. ʼಅಮೃತ್ ಉದ್ಯಾನ್ʼ ಎಂದು ಕರೆಯಲಾಗುವ ಉದ್ಯಾನ 15 ಎಕರೆಗಳಷ್ಟು ಹರಡಿದ್ದು, ಹಲವು ಕಡೆ ದಟ್ಟವಾದ ಕಾಡು ಇದೆ. ಈಸ್ಟ್ ಲಾನ್, ಸೆಂಟ್ರಲ್ ಲಾನ್, ಲಾಂಗ್ ಗಾರ್ಡನ್ ಮತ್ತು ಸರ್ಕ್ಯುಲರ್ ಗಾರ್ಡನ್ ಇದರ ಮೂಲ ಆಕರ್ಷಣೆಗಳಾಗಿವೆ. ಹರ್ಬಲ್ ಗಾರ್ಡನ್, ಟ್ಯಾಕ್ಟೈಲ್ ಗಾರ್ಡನ್, ಬೋನ್ಸಾಯ್ ಗಾರ್ಡನ್ ಮತ್ತು ಆರೋಗ್ಯ ವನಂಗಳು ಇಲ್ಲಿವೆ.

ಅಮೃತ್ ಉದ್ಯಾನ್‌ನ ಸಸ್ಯವರ್ಗದ ಜೊತೆಗೆ ರಾಷ್ಟ್ರಪತಿ ಭವನವು ಚಿಟ್ಟೆ ಪಾರ್ಕ್‌, ನವಿಲು ಪಾರ್ಕ್‌, ಕೊಳ ಇತ್ಯಾದಿ ಒಳಗೊಂಡಿದೆ. ವೈವಿಧ್ಯಮಯ ಪ್ರಾಣಿಗಳಿಗೂ ನೆಲೆಯಾಗಿದೆ. ಭವನದ ಆವರಣದ ಉದ್ಯಾನವು 111 ಜಾತಿಯ ಪಕ್ಷಿಗಳನ್ನೂ ಹೊಂದಿದೆ. ಸೋಮವಾರ ಮತ್ತು ನಿರ್ದಿಷ್ಟ ರಜಾದಿನಗಳನ್ನು ಹೊರತುಪಡಿಸಿ, ಅಮೃತ್‌ ಉದ್ಯಾನವು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸಾರ್ವಜನಿಕರಿಗೆ ತೆರೆದಿದೆ.

ಇದೀಗ ಈ ಚಿರತೆ ಎಲ್ಲಿಂದ ಬಂದಿರಬಹುದು, ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಸೆಕ್ಯುರಿಟಿ ಅದನ್ನು ಸಮಾರಂಭ ನಡೆಯುವ ಜಾಗದವರೆಗೂ ಹೇಗೆ ಬರಲು ಬಿಟ್ಟರು, ನಿಜಕ್ಕೂ ಈ ವಿಡಿಯೋದಲ್ಲಿ ಕಾಣಿಸಿರುವುದು ನಿಜವೇ ಎಂಬಿತ್ಯಾದಿ ಚರ್ಚೆಗಳು ಆರಂಭವಾಗಿವೆ. ಒಂದು ವೇಳೆ ಇಲ್ಲಿ ಚಿರತೆ ಇರುವುದು ನಿಜವೇ ಆಗಿದ್ದರೆ, ಅದು ದೇಶವಿದೇಶದ ಗಮನ ಸೆಳೆಯುವ ದೊಡ್ಡ ಸುದ್ದಿಯೇ ಆಗಲಿದೆ.

ಇದನ್ನೂ ಓದಿ: Narendra Modi 3.0 : ಅಧಿಕಾರ ಸ್ವೀಕರಿಸಿದ ಮರುದಿನವೇ ಮೊದಲ ಫೈಲ್​ಗೆ ಸಹಿ ಹಾಕಿದ ಪ್ರಧಾನಿ ಮೋದಿ; ಯಾವ ಕಡತ ಅದು?

Continue Reading

ದೇಶ

Suresh Gopi : ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗೆ ಸಚಿವ ಸ್ಥಾನ ಬೇಡ ಎಂದ ಸುರೇಶ್​ ಗೋಪಿ!

Suresh GopiL

VISTARANEWS.COM


on

Suresh Gopi
Koo

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಟಿಕೆಟ್​ ಪಡೆಯುವುದೇ ಹರಸಾಹಸ. ಅದಕ್ಕೆ ನೂರಾರು ಮಾದರಿಯಲ್ಲಿ ಪ್ರಭಾವ ಬೀರಬೇಕು. ಸಿಕ್ಕಿ ಗೆದ್ದರಂತೂ ಆಕಾಶಕ್ಕೆ ಮೂರೇ ಗೇಣು. ಗೆದ್ದ ಮೇಲೆ ಸಚಿವ ಸ್ಥಾನ ದೊರೆತರೆ ಅದು ಅವರ ಜೀವನ ಅತ್ಯುನ್ನತ ಸಾಧನೆಯಾಗುತ್ತದೆ. ರಾಜಕಾರಣಿಗಳ ಪರಿಸ್ಥಿತಿ ಈ ರೀತಿ ಇದೆ ಎಂಬುದು ರಾಜಕಾರಣದಲ್ಲಿ ಇಲ್ಲದವರಿಗೂ ಗೊತ್ತಿರುವ ಸಂಗತಿ. ಇಂಥದ್ದರಲ್ಲಿ ಮೊದಲ ಪ್ರಯತ್ನದಲ್ಲೇ ಗೆದ್ದು ಸಚಿವ ಸ್ಥಾನ ದೊರೆತರೆ ಅದನ್ನು ಒಲ್ಲೆ ಎನ್ನುವುದುಂಟೆ? ಆದರೆ, ಅಚ್ಚರಿ ಎಂಬಂತೆ ಕೇರಳದ ತ್ರಿಶ್ಯೂರ್​ ಸಂಸದ, ಸಿನಿಮಾ ನಟ ಸುರೇಶ್​ ಗೋಪಿ (Suresh Gopi) ಈ ರೀತಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೂ ಮೋದಿ 3.0 ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗೆ. ನನಗೆ ಕೇಂದ್ರದಲ್ಲಿ ಸಚಿವ ಸ್ಥಾನದ ಜವಾಬ್ದಾರಿ ಬೇಡ, ನಾನು ತ್ರಿಶ್ಯೂರ್​ ಸಂಸದನಾಗಿಯೇ ಇರುತ್ತೇನೆ. ಅದಕ್ಕಿಂತಲೂ ಮಿಗಿಲಾಗಿ ನಾನು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಅದನ್ನು ಮುಗಿಸಬೇಕಾಗಿದೆ ಎಂದು ಹೇಳಿದ್ದಾರೆ.

ಮೋದಿ 3.0 ಕ್ಯಾಬಿನೆಟ್​ನಲ್ಲಿ ಭಾನುವಾರ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಸುರೇಶ್ ಗೋಪಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹುದ್ದೆಯಿಂದ ಮುಕ್ತರಾಗಲು ಮತ್ತು ತ್ರಿಶೂರ್ ಜನರಿಗಾಗಿ ಸಂಸದರಾಗಿ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದಾರೆ. ನಟ-ರಾಜಕಾರಣಿ ಸುರೇಶ್ ಗೋಪಿ ಅವರು ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅವುಗಳನ್ನು ಮುಗಿಸಲೇಬೇಕು ಎಂದು ಹೇಳಿದ್ದಾರೆ.

ಸಂಸದನಾಗಿ ಕೆಲಸ ಮಾಡುವುದು ನನ್ನ ಗುರಿ. ನಾನು ಏನನ್ನೂ ಕೇಳಲಿಲ್ಲ. ನನಗೆ ಈ ಹುದ್ದೆ ಅಗತ್ಯವಿಲ್ಲ ಎಂದು ನಾನು ಹೇಳಿದ್ದೆ. ನಾನು ಶೀಘ್ರದಲ್ಲೇ ಹುದ್ದೆಯಿಂದ ಮುಕ್ತನಾಗುತ್ತೇನೆ ಎಂದು ನಾನು ಭಾವಿಸುತ್ತೇನೆ. ತ್ರಿಶೂರ್ ಮತದಾರರಿಗೆ ಯಾವುದೇ ಸಮಸ್ಯೆ ಇಲ್ಲ. ಅವರಿಗೆ ಅದು ತಿಳಿದಿದೆ ಮತ್ತು ಸಂಸದನಾಗಿ ನಾನು ಅವರಿಗಾಗಿ ಕಾರ್ಯನಿರ್ವಹಿಸುತ್ತೇನೆ. ನಾನು ನನ್ನ ಚಲನಚಿತ್ರಗಳನ್ನು ಮುಗಿಸಬೇಕು ಎಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ದೆಹಲಿಯಲ್ಲಿ ಮನೋರಮಾ ಜತೆ ಮಾತನಾಡಿದ ಸುರೇಶ್ ಗೋಪಿ ಹೇಳಿದ್ದಾರೆ.

ಸೋಮವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟದ ಮೊದಲ ನಿಗದಿತ ಸಭೆಗೆ ಮುಂಚಿತವಾಗಿ ಗೋಪಿ ಅವರ ಹೇಳಿಕೆ ಬಂದಿದೆ. ಗೋಪಿ ಮತ್ತು ಪಕ್ಷದ ಹಿರಿಯ ನಾಯಕ ಜಾರ್ಜ್ ಕುರಿಯನ್ ಅವರು ಕೇರಳದಿಂದ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದರು.

ಇದನ್ನೂ ಓದಿ: Election Commission : ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

ಎಡರಂಗದ ಭದ್ರಕೋಟೆಯಾಗಿದ್ದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದು, ಕೇರಳದ ಮೊದಲ ಬಿಜೆಪಿ ಸಂಸದರಾಗಿ ಇತಿಹಾಸ ನಿರ್ಮಿಸಿದ್ದಾರೆ. ಸುರೇಶ್ ಗೋಪಿ ಅವರು ಸಿಪಿಐನ ವಿ.ಎಸ್.ಸುನಿಲ್ ಕುಮಾರ್ ಅವರನ್ನು 74,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕೆ ಮುರಳೀಧರನ್ ಅವರನ್ನು ಕಣಕ್ಕಿಳಿಸಿತ್ತು.

2024 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ಸುರೇಶ್ ಗೋಪಿ ‘ತ್ರಿಶೂರ್​ಗೆ ಕೇಂದ್ರ ಸಚಿವ ಸ್ಥಾನ, ಮೋದಿಯವರ ಗ್ಯಾರಂಟಿ’ ಎಂಬ ಘೋಷಣೆಯೊಂದಿಗೆ ಪ್ರಚಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Continue Reading
Advertisement
Narendra Modi 3.20
ಪ್ರಮುಖ ಸುದ್ದಿ2 mins ago

Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!

Election Results 2024
ಕರ್ನಾಟಕ5 mins ago

Election Results 2024: ಟಾರ್ಗೆಟ್ 20 ರೀಚ್ ಆಗಲು ವಿಫಲ; ಎಐಸಿಸಿಯಿಂದ ಪರಾಮರ್ಶೆ ಸಮಿತಿ, ಸಚಿವರ ಮೇಲೆ ತೂಗುಗತ್ತಿ!

Yuva Rajkumar Allegation of cruelty against wife
ಸ್ಯಾಂಡಲ್ ವುಡ್18 mins ago

Yuva Rajkumar: ರಾಘಣ್ಣ ದಂಪತಿ ವಿರೋಧದ ನಡುವೆಯೂ ಯುವನಿ​ಗೆ ಮದ್ವೆ ಮಾಡಿಸಿದ್ದು ‘ಅಪ್ಪು’!

UGCET 2024
ಬೆಂಗಳೂರು20 mins ago

UGCET 2024: ಸಿಇಟಿ ಅಪ್‌ಡೇಟ್‌; ಮೊದಲ ದಿನ 250 ವಿಕಲಚೇತನರ ವೈದ್ಯಕೀಯ ತಪಾಸಣೆ

Reasi Terror Attack
ಪ್ರಮುಖ ಸುದ್ದಿ26 mins ago

Reasi Terror Attack : ಉಗ್ರರ ಮುಂದೆ ಸತ್ತಂತೆ ನಟಿಸಿ ಬದುಕುಳಿದ ಹಿಂದೂ ಯಾತ್ರಿಗಳು…

murder case
ಮೈಸೂರು43 mins ago

Murder Case : ಮೈಸೂರಿನಲ್ಲಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಕೊಲೆ

pm narendra modi leopord
ಪ್ರಮುಖ ಸುದ್ದಿ43 mins ago

PM Narendra Modi: ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ! ವಿಡಿಯೋ ಇದೆ ನೋಡಿ

Yuva Rajkumar son of raghavendra Rajkumar yuva divorce
ಸ್ಯಾಂಡಲ್ ವುಡ್49 mins ago

Yuva Rajkumar: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಯುವ ರಾಜ್​ಕುಮಾರ್​ ; ಅಣ್ಣಾವ್ರ ಕುಟುಂಬದಲ್ಲಿ ಇದೇ ಮೊದಲ ಪ್ರಕರಣ!

Congress Guaratee
ಕರ್ನಾಟಕ58 mins ago

Congress Guarantee: ಗ್ಯಾರಂಟಿ ನಿಲ್ಲಿಸುವ ಮಾತು ಬೇಡ: ಕೈ ನಾಯಕರಿಗೆ ಎಚ್.ಎಂ ರೇವಣ್ಣ ಎಚ್ಚರಿಕೆ

Suresh Gopi
ದೇಶ58 mins ago

Suresh Gopi : ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗೆ ಸಚಿವ ಸ್ಥಾನ ಬೇಡ ಎಂದ ಸುರೇಶ್​ ಗೋಪಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌