Team India | ಭಾರತ ಕ್ರಿಕೆಟ್‌ ತಂಡಕ್ಕೆ ಯಾರು ಆಗಬಹುದು ಮುಂದಿನ ಸಾರಥಿ? - Vistara News

ಕ್ರಿಕೆಟ್

Team India | ಭಾರತ ಕ್ರಿಕೆಟ್‌ ತಂಡಕ್ಕೆ ಯಾರು ಆಗಬಹುದು ಮುಂದಿನ ಸಾರಥಿ?

ಭಾರತ ಕ್ರಿಕೆಟ್‌ ತಂಡಕ್ಕೆ ಮುಂದಿನ ದೀರ್ಘಕಾಲದ ನಾಯಕ ಯಾರು ಆಗಬಹುದು? ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ಬಿಸಿಸಿಐ ಕೂಡ ಈ ಬಗ್ಗೆ ಹೆಚ್ಚು ಗಮನ ವಹಿಸಿದ್ದು ಕಂಡುಬರುತ್ತಿದೆ.

VISTARANEWS.COM


on

ಭಾರತ ಕ್ರಿಕೆಟ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: Team India ನಾಯಕರು ಯಾರು ಎಂದು ಕೇಳಿದಾಗ ಯೋಚಿಸಿ ಹೇಳಬೇಕಾದ ಪರಸ್ಥಿತಿ ಸೃಷ್ಟಿಯಾಗದೆ. ಯಾಕೆಂದರೆ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಏಳು ನಾಯಕರು ಬೇರೆಬೇರೆ ಮಾದರಿಯಲ್ಲಿ ಭಾರತ ತಂಡದ ನೇತೃತ್ವ ವಹಿಸಿದ್ದಾರೆ.

ಕೆಲವೊಂದು ಬಾರಿ ಅನಿವಾರ್ಯತೆಗೆ ನಾಯಕತ್ವ ಬದಲಿಸಿದ್ದರೆ ಇನ್ನೂ ಕೆಲವೊಂದು ಬಾರಿ ಭವಿಷ್ಯದ ನಾಯಕನ ಆಯ್ಕೆಗೂ ಹಲವರಿಗೆ ಅವಕಾಶ ನೀಡಲಾಗಿದೆ. ವಾಸ್ತವದಲ್ಲಿ ವಿರಾಟ್‌ ಕೊಹ್ಲಿ ಕಾಯಂ ನಾಯಕತ್ವಕ್ಕೆ ವಿದಾಯ ಹೇಳಿದ ಬಳಿಕ ಇಷ್ಟೊಂದು ಬದಲಾವಣೆ ಉಂಟಾಗಿರುವುದು. ರೋಹಿತ್‌ ಶರ್ಮ ಅವರನ್ನು ಮೂರು ಮಾದರಿಯ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದರೂ ಫಿಟ್ನೆಸ್‌ ಸೇರಿದಂತೆ ನಾನಾ ಕಾರಣಗಳಿಗೋಸ್ಕರ ಅವರು ಎಲ್ಲ ಸರಣಿಗೂ ಲಭ್ಯರಾಗುತ್ತಿಲ್ಲ. ಹೀಗಾಗಿ ಹೊಸಬರು ಅವಕಾಶ ಪಡೆಯುತ್ತಿದ್ದಾರೆ.

ನಾಯಕತ್ವ ಬದಲಾವಣೆ ಬಿಸಿಸಿಐಗೆ ಪರೀಕ್ಷೆಯ ವಿಷಯವಾಗಿದ್ದರೂ, ಕ್ರಿಕೆಟ್‌ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಈ ಕುರಿತ ವಿಶ್ಲೇಷಣೆ ಇಲ್ಲಿದೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದೀರ್ಘಕಾಲ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅಲ್ಲದೆ, ನಾಯಕತ್ವ ಸ್ಥಾನದಲ್ಲಿ ಹೇಗಿರಬೇಕು ಎಂಬುದಕ್ಕೆ ಮಾದರಿಯಾದವರು. ಆಟ ಕೈತಪ್ಪಿ ಹೋಗುತ್ತಿದ್ದ ಸಮಯದಲ್ಲೂ ಸ್ಥಿತಪ್ರಜ್ಞರಾಗಿ ಪಂದ್ಯವನ್ನು ಗೆಲ್ಲಲು ಅವಶ್ಯಕತೆಯಿದ್ದ ಎಲ್ಲ ತಂತ್ರಗಳನ್ನು ಉಪಯೋಗಿಸುವ ಚಾಣಾಕ್ಷ ಎಂದೇ ಹೆಸರಾದವರು. ಭಾರತವು ಮೂರು ಐಸಿಸಿ ಟ್ರೋಫಿಯನ್ನು ಎತ್ತಿದ್ದು ಇವರ ನಾಯಕತ್ವದಲ್ಲಿ.

ಇವರ ಬಳಿಕ ಆ ಪರಂಪರೆಯನ್ನು ವಿರಾಟ್ ಕೋಹ್ಲಿ ಮುಂದುವರಿಸಿದರು. ದೀರ್ಘಕಾಲದ ನಾಯಕರಾಗಿ ಭಾರತ ತಂಡವನ್ನು ಮುನ್ನಡೆಸಿದರು. ಆಟಗಾರನಾಗಿ ವಿರಾಟ್ ಅಗ್ರಸ್ಸಿವ್ ಎಂದು ಪ್ರಸಿದ್ಧರಾಗಿದ್ದರು, ಆದರೆ ನಾಯಕರಾಗಿ ವಿರಾಟ್ ಪ್ರೌಢತೆಯಿಂದ ಕಾರ್ಯ ನಿರ್ವಹಿಸಿದ್ದರು. ವಿರಾಟ್ ನಾಯಕರಾದ ಆರಂಭದ ದಿನಗಳಲ್ಲಿ ಧೋನಿಯವರಿಂದ ಸೂಕ್ತ ಸಲಹೆಗಳನ್ನು ಪಡೆದು ನಿಭಾಯಿಸುತ್ತಿದ್ದದ್ದು ಕಂಡುಬಂದಿತ್ತು. ಭಾರತ ಕ್ರಿಕೆಟ್ ತಂಡವು ವಿರಾಟ್ ನಾಯಕತ್ವದಲ್ಲಿ ವಿಶ್ವ ಕಪ್ ಅಥವಾ ಇನ್ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ವಿರಾಟ್ ನೇತೃತ್ವದಲ್ಲಿ ಬಾರತ ಒಟ್ಟು 95 ಏಕದಿನ ಪಂದ್ಯಗಳನ್ನಾಡಿದ್ದು 65 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮಟ್ಟಿಗೆ ವಿರಾಟ್ ಯಶಸ್ವಿ ಹಾಗೂ ಶ್ರೇಷ್ಠ ನಾಯಕ ಎಂದೇ ಹೇಳಬಹುದು.

ಭಾರತ ತಂಡಕ್ಕೆ ಸಮರ್ಥ ನಾಯಕನ ಅಗತ್ಯತೆ

ವಿರಾಟ್ ಮೂರು ಮಾದರಿಯ ಕ್ರಿಕೆಟ್‌ನ ನಾಯಕ ಸ್ಥಾನದಿಂದ ಕೆಳಗಿಳಿದ ಬಳಿಕ ರೋಹಿತ್ ಶರ್ಮ ನಾಯಕರಾದರು. ಆದರೆ, ಈಗಿನ ಸನ್ನಿವೇಶಗಳನ್ನು ಗಮನಿಸಿದರೆ ರೋಹಿತ್ ದೀರ್ಘಕಾಲದ ನಾಯಕರಾಗಿ ಮುಂದುವರಿಯುವುದು ಅನುಮಾನ ಎನ್ನಬಹುದು. ಮುಂಬರುವ 2023ರ ಬಳಿಕ ಭಾರತ ಕ್ರಿಕೆಟ್‌ ತಂಡದ ನಾಯಕರ ಸ್ಥಾನದಲ್ಲಿ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತದೆ. ಈಗಾಗಲೇ ರೋಹಿತ್ ಶರ್ಮಾ ಪ್ರಮುಖ ಸರಣಿಯಿಂದ ದೂರವಿದ್ದರು. ಹೀಗಾಗಿ, ಘಟಾನುಘಟಿಗಳ ಅನುಪಸ್ಥಿತಿಯಲ್ಲಿ ತಂಡವನ್ನು ಯುವ ಆಟಗಾರರು ಮುನ್ನಡೆಸುವ ಸನ್ನಿವೇಶ ಎದುರಾಗಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ರಿಷಭ್ ಪಂತ್ ನಾಯಕರಾಗಿದ್ದರು, ಐರ್ಲೆಂಡ್ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಪಂದ್ಯವೊಂದರಲ್ಲಿ ಬುಮ್ರಾ ನಾಯಕರಾಗಿದ್ದರು ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಶಿಖರ್ ಧವನ್ ನಾಯಕರಾಗಿದ್ದಾರೆ. ಇದನ್ನೆಲ್ಲ ಗಮನಿಸಿದಾಗ ಬಿಸಿಸಿಐ ಭಾರತ ತಂಡದ ಮುಂದಿನ ನಾಯಕನ ಆಯ್ಕೆಯಲ್ಲಿರುವುದು ತಿಳಿಯಬಹುದಾಗಿದೆ. ಹೀಗೆ ಒಂದೊಂದು ಸರಣಿಗೆ ಒಬ್ಬೊಬ್ಬ ನಾಯಕನನ್ನು ಆಯ್ಕೆ ಮಾಡಲು ಕೆಲವೊಂದು ಅನಿರೀಕ್ಷಿತ ಘಟನೆಗಳೂ ಕಾರಣವಾಗಿತ್ತು. ಹಿರಿಯ ಆಟಗಾರರು ಲಭ್ಯವಿರಲಿಲ್ಲ, ಕೆಲವರು ಗಾಯಗೊಂಡು ಆಡಲು ಸಾಧ್ಯವಿರಲಿಲ್ಲ. ಹೀಗೆ ಅನೇಕ ಕಾರಣಗಳಿದ್ದವು. ಆದರೆ, ಭಾರತಕ್ಕೆ ಒಬ್ಬ ಸಮರ್ಥ ನಾಯಕನ ಅಗತ್ಯವಿರುವುದು ಮಾತ್ರ ಸತ್ಯದ ಸಂಗತಿಯಾಗಿದೆ. ಈ ಹಿಂದೆ ಭಾರತದ ಕೋಚ್ ರಾಹುಲ್ ದ್ರಾವಿಡ್ ಕೂಡ ಭಾರತ ತಂಡಕ್ಕೆ ಸೂಕ್ತ ನಾಯಕನ ಅವಶ್ಯಕತೆಯ ಬಗ್ಗೆ ಅಭಿಪ್ರಾಯ ಪಟ್ಟಿದ್ದರು.

ಯಾರೆಲ್ಲ ಇದ್ದಾರೆ ಈ ರೇಸ್‌ನಲ್ಲಿ?

ಮುಂದಿನ ನಾಯಕನನ್ನು ಆಯ್ಕೆ ಮಾಡುವುದು ತಿಳಿದಷ್ಟು ಸುಲಭವಾಗಿಲ್ಲ. ಏಕೆಂದರೆ ಈ ರೇಸ್‌ನಲ್ಲಿ ಅನೇಕರು ಭಾಗಿಯಾಗಿದ್ದಾರೆ. ಯಾರಿಗೆಲ್ಲ ಅವಕಾಶದ ಬಾಗಿಲು ತೆರೆದಿದೆ? ಯಾರು ಹೊಸ್ತಿಲಲ್ಲಿ ನಿಂತಿದ್ದಾರೆ? ಯಾರು ಅನಿರೀಕ್ಷಿತವಾಗಿ ಒಳ ಬರಬಹುದು ಎಂಬುದು ಪ್ರಶ್ನೆಯಾಗಿದೆ. ಈ ಬಗ್ಗೆ ಈಗಾಗಲೇ ಆಟಗಾರರ ಪರೀಕ್ಷೆ ನಡೆಯುತ್ತಿರುವುದನ್ನು ಗಮನಿಸಬಹುದು.

ಕೆ. ಎಲ್ ರಾಹುಲ್

ಕೆ.ಎಲ್ ರಾಹುಲ್ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಸಮರ್ಥ ಪ್ರದರ್ಶನ ನೀಡುವ ಆಟಗಾರ. ಇವರ ಆಟದ ಶೈಲಿ ಉತ್ತಮವಾಗಿದ್ದು ಈಗಾಗಲೇ ಭಾರತ ತಂಡದ ಆರಂಭಿಕ ಬ್ಯಾಟರ್ ಆಗಿ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ. ಆದರೆ, ನಾಯಕರಾಗಿ ತಂಡ ಮನ್ನಡೆಸಲು ಎಷ್ಟು ಸಮರ್ಥರು? ಸಾಧಕ-ಬಾಧಕಗಳೇನು? ಎಂಬ ಪ್ರಶ್ನೆಯಿದೆ. ಈಗಾಗಲೇ ಐಪಿಎಲ್‌ನಲ್ಲಿ ಪಂಜಾಬ್ ಹಾಗೂ ಲಖನೌ ತಂಡವನ್ನು ನಾಯಕರಾಗಿ ಮನ್ನಡೆಸಿದ ಅನುಭವ ಇವರಿಗಿದೆ. ಒಟ್ಟು 42 ಪಂದ್ಯಗಳಲ್ಲಿ 20 ಪಂದ್ಯಗಳಲ್ಲಿ ಕೆ.ಎಲ್ ರಾಹುಲ್ ನೇತೃತ್ವದ ತಂಡ ಗೆಲುವು ಸಾಧಿಸಿದೆ. ಆದರೆ, ಈವರೆಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಂಡದ ಜವಾಬ್ದಾರಿಯನ್ನು ನಿರ್ವಹಿಸಿಲ್ಲ. ಮೂರು ಮಾದರಿಯಲ್ಲಿ ಒಳ್ಳೆಯ ಫಾರ್ಮ್‌ನಲ್ಲಿದ್ದು, ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತ ಬಂದಿರುವ ಬಲಿಷ್ಠ ಆಟಗಾರ ಎನಿಸಿಕೊಂಡ ಕೆ.ಎಲ್ ರಾಹುಲ್ ಅವರಿಗೆ ನಾಯಕರಾಗಿ ಸಾಮರ್ಥ್ಯವನ್ನು ಸಾಬೀತು ಪಡಿಸಲು ಒಂದು ಸುವರ್ಣಾವಕಾಶ ದೊರಕಿತ್ತು. ಆದರೆ, ರಾಹುಲ್ ಗಾಯಗೊಂಡ ಕಾರಣದಿಂದ ಈ ಅವಕಾಶ ಕೈತಪ್ಪಿತ್ತು.

ಕೆ.ಎಲ್‌ ರಾಹುಲ್

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಕೆ.ಎಲ್. ರಾಹುಲ್ ನಾಯಕರಾಗಬೇಕಿತ್ತು, ಆದರೆ ದುರದೃಷ್ಟವಷಾತ್ ಅದು ಆಗಲಿಲ್ಲ. ರಿಷಭ್ ಪಂತ್ ಹೆಗಲಿಗೆ ಈ ಜವಾಬ್ದಾರಿ ನೀಡಲಾಗಿತ್ತು. ಈ ಮುಂದೆ ಗುಣಮುಖರಾಗಿ ಬಂದ ನಂತರ ಉತ್ತಮ ಫಾರ್ಮ್ ಇದ್ದರೆ ಕೆ.ಎಲ್ ರಾಹುಲ್ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿರುತ್ತಾರೆ. ಕೆ.ಎಲ್‌ ರಾಹುಲ್‌ ಕೆಲವೊಂದು ಆನ್‌ಫೀಲ್ಡ್‌ ನಿರ್ಣಯಗಳನ್ನು ಮಾಡುವಲ್ಲಿ ಸಫಲರಾದ ದಾಖಲೆಗಳ ಸಂಖ್ಯೆ ಕಡಿಮೆ. ಅಲ್ಲದೆ, ಅವರ ಮದುವೆಯ ಸುದ್ದಿ ಕೇಳಿಬರುತ್ತಿದೆ. ಇದು ಕೂಡ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು. ರೋಹಿತ್ ಶರ್ಮ ಬಳಿಕ ನಾಯಕ ಸ್ಥಾನಕ್ಕೆ ಕೇಳಿಬರುವ ಮೊದಲ ಹೆಸರು ಕೆ.ಎಲ್ ರಾಹುಲ್ ಅವರದ್ದು. ಹೀಗಾಗಿ ಏನಾಗಬಹುದು ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಿಗಿದೆ.

ರಿಷಭ್ ಪಂತ್

ರಿಷಭ್‌ ಪಂತ್ ಭಾರತದ ಅಗ್ರೆಸ್ಸಿವ್ ಯುವ ಎಡಗೈ ಬ್ಯಾಟರ್ ಹಾಗೂ ಕೀಪರ್! ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಒಟ್ಟು 56% ರಷ್ಟು ಗೆಲುವು ಸಾಧಿಸಿದ ದಾಖಲೆ ರಿಷಭ್ ಹೆಸರಲ್ಲಿತ್ತು. ಕೆ.ಎಲ್ ರಾಹುಲ್ ಲಭ್ಯವಿಲ್ಲದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಮುನ್ನಡೆಸುವ ಅವಕಾಶ ದಕ್ಕಿತ್ತು. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡವು ಕಳಪೆ ಪ್ರದರ್ಶನ ನೀಡಿದ್ದು, ಸೋಲಿಗೆ ಕಾರಣವಾಗಿತ್ತು. ಆದರೆ, ನಂತರದ ಎರಡು ಪಂದ್ಯಗಳಲ್ಲಿ ಭಾರತ ರೋಚಕ ಆಟವಾಡಿತ್ತು. ಆದರೆ, ಇದೊಂದೇ ಸರಣಿಯಿಂದ ರಿಷಭ್ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ ಎಂಬ ಧ್ವನಿ ಕೂಡ ಕೇಳಿ ಬರುತ್ತಿದೆ. ನಾಯಕ ಸ್ಥಾನಕ್ಕೆ ಹೊಸಬರಾದ ರಿಷಭ್‌ಗೆ ಈ ಸರಣಿಯಲ್ಲಿ ಸೂಕ್ತ ಮಾರ್ಗದರ್ಶನ ಮಾಡಲು ಹಿರಿಯ ಆಟಗಾರರು ಇರಲಿಲ್ಲ. ಈಗಾಗಲೇ ಅನೇಕ ಸಾಧನೆಗಳನ್ನು ಮಾಡುತ್ತಿರುವ ರಿಷಭ್ ಹಿರಿಯರ ಮಾರ್ಗದರ್ಶನವಿದ್ದರೆ ಉತ್ತಮ ನಾಯಕರಾಗಬಹುದು ಎಂಬ ಮಾತು ಒಂದೆಡೆ ಕೇಳುತ್ತಿದೆ. ಆದರೆ, ಮತ್ತೊಂದೆಡೆ ರಿಷಭ್ ಪಂತ್ ಎದುರಿರುವ ಬಾಧಕಗಳ ಕುರಿತು ಚರ್ಚೆ ನಡೆಯುತ್ತಿದೆ.

ಭಾರತ ಕ್ರಿಕೆಟ್‌
ರಿಷಭ್‌ ಪಂತ್

ರಿಷಭ್ ಕೂಡ ಧೋನಿಯವರಂತೆ ವಿಕೆಟ್ ಹಿಂದೆ ನಿಂತು ತಂಡವನ್ನು ನಿಭಾಯಿಸುವವರು. ಆದರೆ, ಧೋನಿ ಹಾಗೆ ಸೂಕ್ಷ್ಮತೆಗಳನ್ನು ಗಮನಿಸಿ ನಿರ್ಣಯಗಳನ್ನು ಕೈಗೊಳ್ಳುವಷ್ಟು ಪ್ರೌಢತೆ ಬಂದಿಲ್ಲ. ಅದಕ್ಕೆ, ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅವರು ಬೌಲಿಂಗ್‌ನಲ್ಲಿ ಮಾಡಿದ ಬದಲಾವಣೆಗಳು ಸಾಕ್ಷಿ ಎನ್ನಲಾಗಿದೆ. ಈ ಸರಣಿಯಲ್ಲಿ ನಾಯಕರಾಗಿದ್ದಾಗ ರಿಷಭ್ ಇಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕೂಡ ಕಂಡಿಬಂದಿಲ್ಲ. ಹೀಗಾಗಿ ಅವರಿಗೆ ತಂಡದ ಜವಾಬ್ದಾರಿಯನ್ನು ಹೊತ್ತಾಗ ಒತ್ತಡವನ್ನು ನಿಭಾಯಿಸುವ ತಂತ್ರದ ಬಗ್ಗೆ ಇನ್ನೂ ಕಲಿಯಬೇಕಿದೆ. ಎಲ್ಲದಕ್ಕಿಂತ ಮುಖ್ಯವಾಗಿ ರಿಷಭ್ ಇನ್ನೂ ಕಿರಿಯರು ಎಂಬ ಭಾವನೆಯಿದೆ. ತಂಡದಲ್ಲಿ ಬುಮ್ರಾ, ದಿನೇಶ್ ಕಾರ್ತಿಕ್ ಸೇರಿದಂತೆ ಅನೇಕ ಹಿರಿಯ ಆಟಗಾರರಿದ್ದಾಗ ಅವರನ್ನು ನಿಭಾಯಿಸುವ ಹೊಣೆ ತಂಡದ ಅತಿ ಕಿರಿಯ ಆಟಗಾರ ಪಡೆಯುವುದು ಎಷ್ಟು ಸರಿ? ಎಂಬ ಪ್ರಶ್ನೆಯಿದೆ. ಆದರೆ, ರಿಷಭ್ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರೆ ಇದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ ಎಂಬುದು ಸುಳ್ಳಲ್ಲ. ಕಿರಿಯ ಆಟಗಾರನಾದ ಕಾರಣದಿಂದ ಕ್ರಿಕೆಟ್‌ನಲ್ಲಿ ಇನ್ನೂ ಮುಂದುವರಿದು ದೀರ್ಘಕಾಲದ ನಾಯಕರಾಗಿ ಉಳಿಯಬಹುದು.

ಹಾರ್ದಿಕ್ ಪಾಂಡ್ಯ

ಒಂದು ಟೂರ್ನಿ ಭವಿಷ್ಯವನ್ನು ಬದಲಾಯಿಸಬಹುದು ಎಂಬುದಕ್ಕೆ ಹಾರ್ದಿಕ್ ಪಾಂಡ್ಯ ಸಾಕ್ಷಿಯಾಗಿದ್ದಾರೆ. ಈ ಹಿಂದೆ ನಾಯಕ ಸ್ಥಾನಕ್ಕೆ ಹೆಸರನ್ನು ಯೋಚಿಸುವಾಗ ಎಲ್ಲಿಯೂ ಹಾರ್ದಿಕ್ ಪಾಂಡ್ಯ ಹೆಸರು ಕೇಳಿಬಂದಿಲ್ಲ. ಆದರೆ, 2022ರ ಐಪಿಎಲ್‌ನಲ್ಲಿ ಗುಜರಾತ್ ತಂಡವನ್ನು ಮುನ್ನಡೆಸಿದ್ದಲ್ಲದೆ, ಟ್ರೋಫಿಯನ್ನು ಗೆದ್ದರು. ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ನಾಯಕ ಸ್ಥಾನಕ್ಕೂ ಸಿದ್ಧ ಎಂದು ಸಾಬೀತು ಮಾಡಿದರು. ಇದರ ಪರಿಣಾಮವಾಗಿ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ನಾಯಕರಾದರು. ಐರ್ಲೆಂಡ್ ವಿರುದ್ಧ ಭಾರತವು ಸುಲಭಧ ಗೆಲುವು ಸಾಧಿಸಿತು. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಬಿರುಸಿನ ಆಟವನ್ನಾಡುವ ಮೂಲಕ ಆಲ್ ರೌಂಡರ್ ಆಗಿ ಮಿಂಚಿದ್ದರು. ಭಾರತಕ್ಕೆ ಒಬ್ಬ ಆಲ್ ರೌಂಡರ್ ನಾಯಕ ಇದ್ದರೆ ಅನುಕೂಲವೇ ಸರಿ. ಈ ನಿಟ್ಟನಿಲ್ಲಿ ಚಿಂತಿಸಿದಾಗ ಹಾರ್ದಿಕ್‌ ಪಾಂಡ್ಯ ಹೆಸರು ಮೊದಲು ಕೇಳಿಬರುತ್ತದೆ.

ಭಾರತ ಕ್ರಿಕೆಟ್‌
ಹಾರ್ದಿಕ್‌ ಪಾಂಡ್ಯ

ಶಿಖರ್ ಧವನ್ ಅಥವಾ ಬುಮ್ರಾ?

ಭಾರತ ಕ್ರಿಕೆಟ್ ತಂಡವು ಮೂರು ಮಾದರಿಗೂ ಒಬ್ಬರನ್ನೇ ನಾಯಕರನ್ನಾಗಿ ಮಾಡುಬಹುದೇ? ಅಥವಾ ಮೂರಕ್ಕೂ ಪ್ರತ್ಯೇಕ ನಾಯಕರನ್ನು ನೇಮಿಸಬಹುದೇ? ಎಂಬ ಒಂದು ಚಿಂತನೆಯಿದೆ. ಮೂರು ಮಾದರಿಗೂ ಒಬ್ಬರೇ ನಾಯಕರಾಗುವುದಾದರೆ ಕೆ.ಎಲ್ ರಾಹುಲ್, ರಿಷಭ್ ಪಂತ್ ಅವರಿಗೆ ಅವಕಾಶ ಹೆಚ್ಚಿದೆ ಎನ್ನಬಹುದು. ಆದರೆ, ಇನ್ನೆರಡು ಸಾಧ್ಯತೆಗಳು ತೆರದುಕೊಂಡಿವೆ. ಈ ಬಾರಿಯ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬುಮ್ರಾ ಕೂಡ ನಾಯಕರಾಗಿ ಯಶಸ್ವಿಯಾಗಿದ್ದರು. ಹೀಗಾಗಿ ಬುಮ್ರಾ ಕೂಡ ಬಿಸಿಸಿಐಗೆ ಇರುವ ಒಂದು ಆಯ್ಕೆ ಎನ್ನಬಹುದು. ಅಂತೆಯೇ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಶಿಖರ್ ಧವನ್‌ಗೆ ಕ್ಯಾಪ್ಟನ್ ಪಟ್ಟ ನೀಡಿದ್ದು, ಅವರ ಸಾಮರ್ಥ್ಯದ ಪರೀಕ್ಷೆ ನಡೆಯಲಿದೆ. ಆದರೆ, ಈಗಿನ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದು ಬುಮ್ರಾ ಅಥವಾ ಶಿಖರ್ ಧವನ್ ಅವರಿಗೆ ಮುಂದೆ ಅವಕಾಶ ಕಡಿಮೆಯಾಗಬಹುದು. ಇವರಿಬ್ಬರಲ್ಲಿ ಯಾರಾದರೂ ನಾಯಕರಾದರೆ ಬಹುಶಃ 2023ರ ವಿಶ್ವ ಕಪ್ ಮಟ್ಟಿಗೆ ಆಗುವ ಸಾಧ್ಯತೆಯಿದೆ.

ಅಚ್ಚರಿಯ ಸಾಧ್ಯತೆ ಏನಿರಬಹುದು?

ಈ ಎಲ್ಲ ಸಾಧ್ಯತೆಗಳನ್ನು ಬದಿಗೊತ್ತಿ ಇನ್ನೊಬ್ಬ ಆಟಗಾರ ಈ ರೇಸ್‌ನಲ್ಲಿ ಗೆಲ್ಲಬಹುದು. ಎಲ್ಲರೂ ನಾಯಕ ಸ್ಥಾನದ ಬಾಗಿಲಲ್ಲಿ ಕಾಯುತ್ತಿರುವಾಗ ಶ್ರೇಯಸ್ ಅಯ್ಯರ್ ಮುನ್ನುಗ್ಗಿ ಒಳಗೆ ಹೋಗಬಹುದು. ಶ್ರೇಯಸ್ ಅಯ್ಯರ್ ಕೂಡ ಉತ್ತಮ ನಾಯಕ ಎಂದು ಐಪಿಎಲ್‌ನಲ್ಲಿ ಸಾಬೀತು ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ವಿರಾಟ್ ಕೊಹ್ಲಿಯ ಸ್ಥಾನ ತುಂಬಲು ಸಮರ್ಥರು ಎಂದು ಸಾಬೀತು ಮಾಡಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶ್ರೇಯಸ್ ನಾಯಕತ್ವದ ಪರೀಕ್ಷೆ ಇನ್ನೂ ಆಗಬೇಕಿದೆ. ಒಳ್ಳೆಯ ಫಾರ್ಮ್‌ನಲ್ಲಿದ್ದು, ಶಿಸ್ತಿನ ಆಟವನ್ನು ಪ್ರದರ್ಶಿಸುವ ಶ್ರೇಯಸ್ ಅಯ್ಯರ್ ಕೂಡ ನಾಯಕ ಸ್ಥಾನಕ್ಕೆ ಸೂಕ್ತ ಆಯ್ಕೆಯಾಗಬಹುದು.

ಭಾರತ ಕ್ರಿಕೆಟ್‌

ಇದನ್ನೂ ಓದಿ: Commonwealth Games ; ಇದೇ ಮೊದಲ ಬಾರಿಗೆ ಮಹಿಳೆಯರ ಕ್ರಿಕೆಟ್‌, ಭಾರತ ತಂಡ ಪ್ರಕಟ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Virat Kohli: ಮಗಳು ವಮಿಕಾ ಕೂಡ ಕ್ರಿಕೆಟ್​ ಪ್ರಿಯೆ; ಬ್ಯಾಟಿಂಗ್​ ಅಚ್ಚುಮೆಚ್ಚು ಎಂದ ಕೊಹ್ಲಿ​

Virat Kohli: ದಾನೀಶ್ ಸೇಠ್ ಅವರು ಸಂದರ್ಶನದ ವೇಳೆ ಕೊಹ್ಲಿ ಜತೆ ಹಲವು ತರ್ಲೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದೇ ವೇಳೆ ನ್ಯಾಗ್ಸ್ ಒಂದು ಐಪಿಎಲ್​ಗೆ ಇನ್ನೊಂದು ಡಬ್ಲ್ಯುಪಿಎಲ್​ಗೆ ಎಂದು ಹೇಳುವ ಮೂಲಕ ಕೊಹ್ಲಿಯ ಕಾಲೆಳೆದಿದ್ದಾರೆ.

VISTARANEWS.COM


on

Virat Kohli
Koo

ಬೆಂಗಳೂರು: ಆರ್​ಸಿಬಿ(RCB) ತಂಡ ನಾಳೆ ನಡೆಯುವ 17ನೇ ಆವೃತ್ತಿಯ ಐಪಿಎಲ್​ನಲ್ಲಿ(IPL 2024) ತನ್ನ ಕೊನೆಯಲೀಗ್​ ಪಂದ್ಯವನ್ನು ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಈ ಪಂದ್ಯಕ್ಕೂ ಮುನ್ನ ಆರ್​ಸಿಬಿಯ ಇನ್‌ಸೈಡರ್ ​ಮಿಸ್ಟರ್, ನ್ಯಾಗ್ಸ್(mr nags) ಖಾತಿಯ ದಾನೀಶ್ ಸೇಠ್(danish sait) ಅವರು ವಿರಾಟ್​ ಕೊಹ್ಲಿ(Virat Kohli) ಜತೆಗೆ ಸಂದರ್ಶನವೊಂದನ್ನು ಮಾಡಿದ್ದಾರೆ. ಈ ಸಂದರ್ಶನದಲ್ಲಿ ಕೊಹ್ಲಿ ತಮ್ಮ ಮಗಳು ವಮಿಕಾ(vamika) ಕೂಡ ಕ್ರಿಕೆಟ್​ ಪ್ರಿಯೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ದಾನೀಶ್ ಸೇಠ್ ಅವರು ಸಂದರ್ಶನದ ವೇಳೆ ಕೊಹ್ಲಿ ಜತೆ ಹಲವು ತರ್ಲೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದೇ ವೇಳೆ ಪಾಪು ಹೇಗಿದೆ ಎಂದು ಕೇಳಿದಾಗ ಪಾಪು ಅದು ಯಾರು ಎಂದು ಕೊಹ್ಲಿ ಮರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನ್ಯಾಗ್ಸ್ ಅಕಾಯ್​ ಎಂದು ಹೇಳಿದ್ದಾರೆ. ಹೋ.. ಮಗನಾ ಆರೋಗ್ಯವಾಗಿದ್ದಾನೆ ಎಂದು ಹೇಳುತ್ತಾರೆ. ಇದೇ ವೇಳೆ ನ್ಯಾಗ್ಸ್ ಒಂದು ಐಪಿಎಲ್​ಗೆ ಇನ್ನೊಂದು ಡಬ್ಲ್ಯುಪಿಎಲ್​ಗೆ ಎಂದು ಕೊಹ್ಲಿಯ ಕಾಲೆಳೆದಿದ್ದಾರೆ. ಈ ಮಾತು ಕೇಳಿದ ಕೊಹ್ಲಿ ಅರೇ ಏನು ಹೇಳುತ್ತಿದ್ದಿಯಾ ಮಾರಾಯ ಎಂದು ಹಿಂದಿಯಲ್ಲಿ ಹೇಳುವ ಮೂಲಕ ನಗಾಡಿದ್ದಾರೆ.

ಇದೇ ವೇಳೆ ತನ್ನ ಮಗಳಿಗೂ ಕ್ರಿಕೆಟ್​ ಎಂದರೆ ಅಚ್ಚು ಮೆಚ್ಚು ಅವಳು ಈಗಲೇ ಬ್ಯಾಟಿಂಗ್​ ಮಾಡುತ್ತಾ ಆಡುತ್ತಿದ್ದಾಳೆ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆಯೋ ತಿಳಿದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ಅವರ ಈ ಮಾತನ್ನು ಗಮನಿಸುವಾಗ ಮಗಳಿಗೆ ಯಾವ ಕ್ಷೇತ್ರದಲ್ಲಿಯೂ ಮುಂದುವರಿಯುವ ಸಂಪೂರ್ಣ ಸ್ವಾತಂತ್ರ್ಯ ಕೊಹ್ಲಿ ನೀಡಲಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಅಪ್ಪನಂತೆ ಮಗಳು ಕೂಡ ಭಾರತ ಮಹಿಳಾ ಕ್ರಿಕೆಟ್​ನಲ್ಲಿ ಸಾಧನೆ ಮಾಡಲಿ ಎಂದು ಕೊಹ್ಲಿಯ ಅಭಿಮಾನಿಗಳು ಹಾರೈಸಲಾರಂಭಿಸಿದ್ದಾರೆ.

ಇದನ್ನೂ ಓದಿ IPL Ticket Scam: ಆನ್​ಲೈನ್​ ಟಿಕೆಟ್​ ಖರೀದಿಸಲು ಹೋಗಿ 3 ಲಕ್ಷ ರೂ ಕಳೆದುಕೊಂಡ ಆರ್​ಸಿಬಿ ಅಭಿಮಾನಿ

ಕೊಹ್ಲಿ ತಮ್ಮ ನಿವೃತ್ತಿ(Virat Kohli restaurant) ವಿಚಾರದ ಬಗ್ಗೆ ಮಾತನಾಡಿದ್ದು, ಒಬ್ಬ ಕ್ರೀಡಾಪಟುವಾದ ಮೇಲೆ ಇಂದಲ್ಲ ನಾಳೆ, ತಮ್ಮ ವೃತ್ತಿಜೀವನದ ಅಂತಿಮ ದಿನಾಂಕವನ್ನು ನೋಡಲೇಬೇಕಿದೆ ಎಂದು ಹೇಳಿದ್ದಾರೆ. ಇದು  ಅವರ ಅಭಿಮಾನಿಗಳಿಗೆ ಭಾರೀ ಆತಂಕ ಉಂಟುಮಾಡುವಂತೆ ಮಾಡಿದೆ. 

ಸಂದರ್ಶನವೊಂದರಲ್ಲಿ ಕೊಹ್ಲಿಗೆ ಸಕ್ಸಸ್​​ ಹಿಂದೆ ಯಾಕಿಷ್ಟು ಹಸಿವಿನಿಂದ ಓಡುತ್ತಿದ್ದೀರಿ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಒಬ್ಬ ಕ್ರೀಡಾಪಟು ಇಂದಲ್ಲ ನಾಳೆ ತಮ್ಮ ವೃತ್ತಿಜೀವನದ ಅಂತಿಮ ದಿನಾಂಕವನ್ನು ನೋಡಲೇಬೇಕಿದೆ. ಆದ್ದರಿಂದಲೇ ನಾನು ಈ ರೀತಿ ಹೆಚ್ಚು ಶ್ರಮವಹಿಸಿ, ಮಿತಿಮೀರಿ ಕೆಲಸ ಮಾಡುತ್ತಿದ್ದೇನೆ. ನೀವೃತ್ತಿಯ ಬಳಿಕ ನಾನು ಸಾಧನೆ ಮಾಡದರ ಕುರಿತು ಚಿಂತಿಸ ಬಾರದು. ಅಂತಹ ಪರಿಸ್ಥಿತಿ ನನಗೆ ಬರಬಾರದು ಎಂದರೆ, ಇಂದು ಅದ್ಭುತ ಆಟ ಆಡಲೇಬೇಕಿದೆ’ ಎಂದು ಹೇಳಿದರು.

‘ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ನನಗೆ ಯಾವುದೇ ವಿಷಾದ ಇರಬಾರದು. ಖಂಡಿತವಾಗಿ ಆ ರೀತಿ ನಾನು ಮಾಡಿಕೊಳ್ಳುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಒಮ್ಮೆ ನಾನು ಕ್ರಿಕೆಟ್​ನಿಂದ ದೂರ ಸರಿದರೆ ಖಂಡಿತ ಮತ್ತೆ ನೀವು ನನ್ನನ್ನು ನೋಡೋದಿಲ್ಲ. ನಾನು ಆಡುವ ಕೊನೆವರೆಗೂ ನನ್ನಲ್ಲಿರುವ ಬೆಸ್ಟ್​ ಅನ್ನು ನೀಡಲು ಬಯಸುತ್ತೇನೆ. ಅದೊಂದೇ ನನ್ನನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ’ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿಯ ಬಗೆಗಿನ ಸ್ಪಷ್ಟತೆಯನ್ನು ತಿಳಿಸಿದರು. ಕೊಹ್ಲಿಯ ಈ ಹೇಳಿಕೆ ಕಂಡು ಅವರ ಅಭಿಮಾನಿಗಳು ಆತಂಕಕ್ಕೆ ಒಳಪಟ್ಟಿದ್ದು, ಶೀಘ್ರದಲ್ಲೇ ಕೊಹ್ಲಿ ನಿವೃತ್ತಿ ಹೇಳಲಿದ್ದಾರಾ? ಎಂದು ಚಿಂತೆ ಪಡುವಂತೆ ಮಾಡಿದೆ.

Continue Reading

ಕ್ರೀಡೆ

IPL Ticket Scam: ಆನ್​ಲೈನ್​ ಟಿಕೆಟ್​ ಖರೀದಿಸಲು ಹೋಗಿ 3 ಲಕ್ಷ ರೂ ಕಳೆದುಕೊಂಡ ಆರ್​ಸಿಬಿ ಅಭಿಮಾನಿ

IPL Ticket Scam:ಚೆನ್ನೈ ಮತ್ತು ಆರ್​ಸಿಬಿ ನಡುವಣ ಪಂದ್ಯಕ್ಕೆ ಹವಾಮಾನ ಇಲಾಖೆ ಶೇ.89 ರಷ್ಟು ಮಳೆ(Rain forecast for Bengaluru) ಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಭಾರೀ ಮಳೆಯೂ ಆಗಿದೆ. ಹೀಗಾಗಿ ಶನಿವಾರವೂ ಮಳೆ ಇರುವುದು ಖಚಿತಗೊಂಡಿದೆ.

VISTARANEWS.COM


on

IPL Ticket Scam
Koo

ಬೆಂಗಳೂರು: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​(CSK)​ ಮತ್ತು ಆರ್​ಸಿಬಿ(RCB vS CSK) ಪಂದ್ಯದ ಟಿಕೆಟ್​ ಖರೀದಿಸಲು(IPL Ticket Scam) ಹೋಗಿ ಬೆಂಗಳೂರು ಮೂಲದ ಅಭಿಮಾನಿಯೊಬ್ಬ ಬರೋಬ್ಬರಿ 3 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ. ಬದ್ಧ ಎದುರಾಳಿಗಳಾಗಿರುವ, ಪ್ಲೇ ಆಫ್​(IPL 2024) ಹಂತಕ್ಕೇರಲು ಮಹತ್ವದ ಪಂದ್ಯವಾಗಿರುವ ಕಾರಣ ಈ ಪಂದ್ಯದ ಕಾವು ಹೆಚ್ಚಾಗಿದೆ. ಹೀಗಾಗಿ ಈ ಪಂದ್ಯ ನೋಡಲು ಅಭಿಮಾನಿಗಳು ಕಾಳಸಂತೆಯಲ್ಲಿ ದುಬಾರಿ ಬೆಲೆ ಕೊಟ್ಟು ಟಿಕೆಟ್​ ಖರೀದಿ ಮಾಡುತ್ತಿದ್ದಾರೆ.

ಪದ್ಮ ಸಿನ್ಹಾ ವಿಜಯ್‌ ಕುಮಾರ್‌ ಎನ್ನುವಾತ ipl_2024_tickets_24 ಎಂಬ ಖಾತೆಯ ಮೂಲಕ ಪಂದ್ಯಗಳ ಟಿಕೆಟ್​ ಬುಕ್ಕಿಂಗ್​ ಮಾಡಿಕೊಡಲಾಗುವುದು ಎಂದು ಹೇಳಿ ತನ್ನ ಮೊಬೈಲ್‌ ಸಂಖ್ಯೆ ಮತ್ತು ಆಧಾರ್‌ ಮಾಹಿತಿ ಎಲ್ಲವನ್ನೂ ಹಂಚಿಕೊಂಡು, ಪ್ರತಿ ಟಿಕೆಟ್‌ಗೆ 2,300 ರೂ. ದರದಂತೆ 3 ಟಿಕೆಟ್‌ಗೆ 7,900 ರೂ. ನಿಗದಿ ಪಡಿಸಿದ್ದ. ಈ ಮೂಲಕ ಟಿಕೆಟ್‌ ಖರೀದಿಸಲು ಬರುವವರ ವಿಶ್ವಾಸ ಸಂಪಾದಿಸಿದ್ದ. ಇದನ್ನು ನಂಬಿದ ಬೆಂಗಳೂರು ಮೂಲದ 28 ವರ್ಷದ ಅಭಿಮಾನಿಯೊಬ್ಬ ಟಿಕೆಟ್​ ಖರೀದಿಸಲು ಮುಂದಾಗಿ ತನ್ನ ಖಾತೆಯಲ್ಲಿದ್ದ 3 ಲಕ್ಷ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ RCB vs CSK: ಅದೇ ದಿನ, ಅದೇ ವಾರ, ಮಳೆ ಭೀತಿ; ಇದೆಂಥಾ ಕಾಕತಾಳೀಯ! ಆರ್​ಸಿಬಿಗೆ ಇದು ಅದೃಷ್ಟವಾ?

ವಿಜಯ್‌ ಕುಮಾರ್‌ ಆನ್‌ಲೈನ್‌ ಪಾವತಿ ಭರವಸೆ ನೀಡಿದ್ದಂತೆ ಈ ಅಭಿಮಾನಿಗೆ 3 ಇ-ಟಿಕೆಟ್‌ಗಳನ್ನು ವರ್ಗಾಯಿಸಿದ್ದಾನೆ. ಆದರೆ, ಹಣ ಪಾವತಿ ನಿಲ್ಲದೆ ಆಗಾಗ ಈ ಅಭಿಮಾನಿಯ ಖಾತೆಯಿಂದ 7,900 ರೂ.ಗಳಂತೆ ಹಣ ವರ್ಗಾವಣೆ ಆಗಿ 3 ಲಕ್ಷ ರೂ,ಗಳಿಗೂ ಅಧಿಕ ಮೊತ್ತ ವಂಚಕನ ಖಾತೆಗೆ ಸೇರಿದೆ. ಈ ವೇಳೆ ಅಭಿಮಾನಿ ವಿಜಯ್‌ ಕುಮಾರ್‌ಗೆ ಕರೆ ಮಾಡಿ ವಿಚಾರಿಸಿದಾಗ ತಾಂತ್ರಿಕ ದೋಷ ಕಾರಣ ಹೀಗಾಗಿದ್ದು, ಹಣವನ್ನು ಹಿಂದಿರುಗಿಸುವುದಾಗಿ ಹೇಳಿಕೊಂಡಿದ್ದಾನೆ. ಆ ಬಳಿಕವೂ ಕೂಡ ಹಣ ವರ್ಗಾವಣೆ ನಡೆದ ಕಾರಣ ಅನುಮಾನಗೊಂಡ ಅಭಿಮಾನಿ ಪೊಲೀಸರಿಗೆ ದೂರು ನೀಡಿದ್ದಾನೆ. ಹಣ ಪಾವತಿಯನ್ನು ತಡೆಯುವ ಹೊತ್ತಿಗಾಗಲೇ 3 ಲಕ್ಷ ರೂ. ಗಳಿಗೂ ಅಧಿಕ ಮೊತ್ತವನ್ನು ಕಳೆದುಕೊಂಡಿದ್ದ. ಸದ್ಯ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

​ಭಾರೀ ಮಳೆ ಎಚ್ಚರಿಕೆ


ಚೆನ್ನೈ ಮತ್ತು ಆರ್​ಸಿಬಿ ನಡುವಣ ಪಂದ್ಯಕ್ಕೆ ಹವಾಮಾನ ಇಲಾಖೆ ಶೇ.89 ರಷ್ಟು ಮಳೆ(Rain forecast for Bengaluru) ಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಭಾರೀ ಮಳೆಯೂ ಆಗಿದೆ. ಹೀಗಾಗಿ ಶನಿವಾರವೂ ಮಳೆ ಇರುವುದು ಖಚಿತಗೊಂಡಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಆರ್​ಸಿಬಿ ಪ್ಲೇ ಆಫ್​ನಿಂದ ಹೊರಬೀಳಲಿದೆ. 15 ಅಂಕ ಪಡೆಯುವ ಚೆನ್ನೈ ಪ್ಲೇ ಆಫ್​ಗೆ ಎಂಟ್ರಿ ಕೊಡಲಿದೆ. ಈಗಾಗಲೇ ಮೂರು ತಂಡಗಳಾದ ಕೆಕೆಆರ್​, ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಾಜಸ್ಥಾನ್​ ಪ್ಲೇ ಆಫ್​ ತಲುಪಿದೆ.

ಒಂದೊಮ್ಮೆ ಆರ್​ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದರೂ ಕೂಡ ಪ್ಲೇ ಆಫ್​ ಟಿಕೆಟ್​ ಖಚಿತವಾಗುವುದಿಲ್ಲ. ರನ್‌ರೇಟ್‌ ಲೆಕ್ಕಾಚಾರದಲ್ಲಿ ಚೆನ್ನೈಯನ್ನು ಆರ್‌ಸಿಬಿ ಕನಿಷ್ಠ 18 ರನ್ನುಗಳಿಂದ ಮಣಿಸಬೇಕಿದೆ. ಚೇಸಿಂಗ್‌ ಲೆಕ್ಕಾಚಾರ ಬೇರೆಯೇ ಇದೆ. ಕನಿಷ್ಠ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು. ಸಣ್ಣ ಅಂತರದ ಗೆಲುವು ಕಂಡರೆ ಕಷ್ಟ.

Continue Reading

ಕ್ರೀಡೆ

Viral Video: ಗಲ್ಲಿ ಕ್ರಿಕೆಟ್​ನಲ್ಲಿ ಎಡಗೈ ಬ್ಯಾಟಿಂಗ್​ ನಡೆಸಿದ ಕೆ.ಎಲ್​ ರಾಹುಲ್​

Viral Video: ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ತಂಡ ಮುಂಬೈ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆದ್ದರೂ ಅಂತಿಮ ನಾಲ್ಕರ ಘಟಕ್ಕೆ ತೇರ್ಗಡೆಯಾಗುವ ಅವಕಾಶ ಲಕ್ನೋ ತಂಡಕ್ಕೆ ಬಹಳ ಕಡಿಮೆ. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಕಾರಣ ತಂಡದ ರನ್‌ರೇಟ್​ ಕಳಪೆಯಾಗಿದೆ

VISTARANEWS.COM


on

Viral Video
Koo

ಮುಂಬಯಿ: ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕ ಕೆ.ಎಲ್ ರಾಹುಲ್(KL Rahul) ಗಲ್ಲಿ ಕ್ರಿಕೆಟ್​ ಆಡಿದ ವಿಡಿಯೊವೊಂದು ವೈರಲ್​ ಆಗಿದೆ(Viral Video). ಅಚ್ಚರಿ ಎಂದರೆ ಅವರು ಎಡಗೈ ಶೈಲಿಯಲ್ಲಿ ಬ್ಯಾಟಿಂಗ್​ ನಡೆಸಿದ್ದು. ಇಂದು ನಡೆಯುವ ಐಪಿಎಲ್​(IPL 2024) ಪಂದ್ಯದಲ್ಲಿ ಲಕ್ನೋ ತಂಡ ಮುಂಬೈ(Mumbai Indians) ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಮುಂಬೈಗೆ ಬಂದ ವೇಳೆ ರಾಹುಲ್​ ಇಲ್ಲಿನ ಗಲ್ಲಿಯೊಂದರಲ್ಲಿ ಕ್ರಿಕೆಟ್​ ಆಡಿದ್ದಾರೆ.

ರಾಹುಲ್​ ಬಲಗೈ ಬ್ಯಾಟರ್​ ಆಗಿದ್ದರೂ ಕೂಡ ಎಡಗೈನಲ್ಲಿ ಬ್ಯಾಟಿಂಗ್​ ನಡೆಸಿದ್ದು ಅಚ್ಚರಿ ತಂದಿದೆ. ಸ್ಟಾರ್​ ಸ್ಪೋರ್ಟ್ಸ್​ ನಡೆಸಿದ ಕಾರ್ಯಕ್ರಮ ಇದಾಗಿತ್ತು. ರಾಹುಲ್​ ಅವರ ಈ ಬ್ಯಾಟಿಂಗ್​ ಫೋಟೊ ಕಂಡ ನೆಟ್ಟಿಗರು ಕೆಲ ತಮಾಷೆಯ ಕಮೆಂಟ್​ಗಳನ್ನು ಮಾಡಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಅವಕಾಶ ಸಿಗದ ಕಾರಣ ಅವರು ಎಡಗೈನಲ್ಲಿ ಬ್ಯಾಟಿಂಗ್​ ನಡೆಸಿ ತಂಡದಲ್ಲಿ ಸ್ಥಾನ ಪಡೆಯುವ ಪ್ರಯತ್ಮ ಪಡುತಿದ್ದಾರೆ ಎಂದು ನಗುವ ಎಮೊಜಿಯೊಂದಿಗೆ ಕಮೆಂಟ್​ ಮಾಡಿದ್ದಾರೆ.


ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ 10 ವಿಕೆಟ್​ಗಳ ಹೀನಾಯ ಸೋಲು ಕಂಡ ಬೇಸರದಲ್ಲಿ ಸಿಟ್ಟಿಗೆದ್ದ ಫ್ರಾಂಚೈಸಿ ಮಾಲಿಕ ಸಂಜೀವ್ ಗೋಯೆಂಕಾ(Sanjiv Goenka) ಮೈದಾನದಲ್ಲೇ ನಾಯಕ ಕೆ.ಎಲ್​ ರಾಹುಲ್(KL Rahul)​ ಜತೆ ಜಗಳವಾಡಿದ್ದರು. ಈ ಘಟನೆ ಬಳಿಕ ಅನೇಕ ಮಾಜಿ ಆಟಗಾರರು ಗೋಯೆಂಕಾ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿ ರಾಹುಲ್​ ಲಕ್ನೋ ತಂಡ ತೊರೆಯಲಿದ್ದಾರೆ, ಆರ್​ಸಿಬಿ ಸೇರಲಿದ್ದಾರೆ, ತಂಡದ ಆಟಗಾರರೊಂದಿಗೆ ಪ್ರಯಾಣಿಸದೆ ಪ್ರತ್ಯೇಕವಾಗಿ ಪ್ರಯಾಣಿಸಿದ್ದಾರೆ ಹೀಗೆ ಹಲವು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. 

ಇದನ್ನೂ ಓದಿ Viral Video: ವಿಚ್ಛೇದನ ಕೇಸ್​ ಹೆಚ್ಚಳಕ್ಕೆ ಇದುವೇ ಪ್ರಮುಖ ಕಾರಣ ಎಂದ ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ

ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ಮಾತ್ರವಲ್ಲದೆ, ಬೌಲಿಂಗ್​ನಲ್ಲಿಯೂ ಲಕ್ನೋ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಕನಿಷ್ಠ 1 ವಿಕೆಟ್​ ಕೂಡ ಕೀಳಲಾಗದ ಘೋರ ವೈಫಲ್ಯ ಕಂಡಿತ್ತು. ಈ ಹೀನಾಯ ಸೋಲಿನಿಂದ ಸಿಟ್ಟಿಗೆದ್ದ ಸಂಜೀವ್ ಗೋಯೆಂಕಾ ನಾಯಕ ರಾಹುಲ್ ಅವರೊಂದಿಗೆ ಕೋಪದಲ್ಲಿ ಮಾತನಾಡುತ್ತಿರುವಂತೆ ಕಂಡುಬಂದಿತ್ತು. ಇವರಿಬ್ಬರ ನಡುವಣ ಮಾತುಕತೆ ಏನು ಎಂಬುದು ಸ್ಪಷ್ಟವಾಗಿ ಕೇಳಿಸಿಲ್ಲವಾಗಿದ್ದರೂ, ಈ ದೃಶ್ಯ ನೋಡುವಾಗ ಇದು ಅಸಮಾಧಾನದ ನುಡಿ ಎಂದು ತಿಳಿದು ಬಂದಿತ್ತು. ಗೋಯೆಂಕಾ ಮಾತಿಗೆ ರಾಹುಲ್ ಪ್ರತಿಕ್ರಿಯೆ ನೀಡಲು ಮುಂದಾದರೂ ಕೂಡ ಇದನ್ನು ಗೋಯೆಂಕಾ ಒಪ್ಪಿಕೊಳ್ಳದೆ ಏನೋ ಬೈಯುತ್ತಿರುವಂತೆ ದೃಶ್ಯದಲ್ಲಿ ಕಂಡುಬಂದಿತ್ತು. ಗೋಯೆಂಕಾ ವರ್ತನೆಗೆ ಆಕ್ರೋಶ ವ್ಯಕ್ತವಾದ ಕಾರಣ ಗೋಯೆಂಕಾ ಅವರು ರಾಹುಲ್​ ಅವರನ್ನು ಮನೆಗೆ ಕರೆದು ಜತೆಯಾಗಿ ಡಿನ್ನರ್​ ನಡೆಸಿದ್ದರು. ಇದರ ಫೋಟೊ ಕೂಡ ವೈರಲ್​ ಆಗಿತ್ತು.

ಮುಂಬೈ ಎದುರಾಳಿ


ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ತಂಡ ಮುಂಬೈ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆದ್ದರೂ ಅಂತಿಮ ನಾಲ್ಕರ ಘಟಕ್ಕೆ ತೇರ್ಗಡೆಯಾಗುವ ಅವಕಾಶ ಲಕ್ನೋ ತಂಡಕ್ಕೆ ಬಹಳ ಕಡಿಮೆ. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಕಾರಣ ತಂಡದ ರನ್‌ರೇಟ್​ ಕಳಪೆಯಾಗಿದೆ. ಒಂದೊಮ್ಮೆ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದಿದ್ದರೆ ಲಕ್ನೋಗೆ ಈ ಪಂದ್ಯ ಪ್ಲೇ ಆಫ್​ ಹಂತಕ್ಕೇರಲು ಮಹತ್ವದ ಪಂದ್ಯವಾಗಿರುತ್ತಿತ್ತು.

Continue Reading

ಕ್ರೀಡೆ

T20 World Cup 2024: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತದ ಎದುರಾಳಿ ಯಾರು?

T20 World Cup 2024: ಅಭ್ಯಾಸ ಪಂದ್ಯಗಳು ಮೇ 27ರಿಂದ ಜೂನ್ 1ರವರೆಗೆ ನಡೆಯಲಿದೆ. ಭಾರತ ಮಾತ್ರ ಏಕೈಕ ಪಂದ್ಯ ಆಡಲಿದ್ದು, ಉಳಿದ ತಂಡಗಳು ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಭಾರತ ಜೂನ್​ 1 ರಂದು ಬಾಂಗ್ಲಾದೇಶ ವಿರುದ್ಧ ತನ್ನ ಅಭ್ಯಾಸ ಪಂದ್ಯವನ್ನು ಆಡಲಿದೆ.

VISTARANEWS.COM


on

T20 World Cup 2024
Koo

ದುಬೈ: ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಜೂನ್​ 1ರಿಂದ ಆರಂಭಗೊಂಡು ಜೂನ್​ 29ರ ತನಕ ಸಾಗಲಿದೆ. ಇದೀಗ ಅಭ್ಯಾಸ ಪಂದ್ಯಗಳ(warm up matches schedule) ವೇಳಾಪಟ್ಟಿ ಐಸಿಸಿ ಪ್ರಕಟಿಸಿದ್ದು, ಭಾರತ ಕೇವಲ ಒಂದು ಪಂದ್ಯ ಮಾತ್ರ ಆಡಲಿದೆ.

ಕೆಲವು ದಿನಗಳ ಹಿಂದೆಯೇ ಭಾರತ ತಂಡ ಕೇವಲ ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದೆ ಎಂದು ಕ್ರಿಕ್​ಬಜ್​ ವರದಿ ಮಾಡಿತ್ತು. ಐಪಿಎಲ್​ ಟೂರ್ನಿ ಮೇ 26ಕ್ಕೆ ಮುಕ್ತಾಯ ಕಾಣಲಿದೆ. ಹೀಗಾಗಿ ಆಟಗಾರರಿಗೆ ಮುಂಚಿತವಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಭಾರತೀಯ ಆಟಗಾರರು ವ್ಯಾಪಕ ಪ್ರಯಾಣ ಮತ್ತು ಐಪಿಎಲ್​ನಿಂದ ದಣಿದಿರುವ ಕಾರಣ ಕೇವಲ ಒಂದು ಅಭ್ಯಾಸ ಪಂದ್ಯಕ್ಕೆ ಮೊರೆ ಹೋಗಿದ್ದಾರೆ ಎಂದು ಕ್ರಿಕ್​ಬಜ್ ತಿಳಿಸಿತ್ತು. ಇದೀಗ ಈ ವರದಿ ನಿಜವಾಗಿದೆ. ಭಾರತ ಕೇವಲ ಒಂದು ಪಂದ್ಯ ಮಾತ್ರ ಆಡಲಿದೆ.

ಅಭ್ಯಾಸ ಪಂದ್ಯಗಳು ಮೇ 27ರಿಂದ ಜೂನ್ 1ರವರೆಗೆ ನಡೆಯಲಿದೆ. ಭಾರತ ಮಾತ್ರ ಏಕೈಕ ಪಂದ್ಯ ಆಡಲಿದ್ದು, ಉಳಿದ ತಂಡಗಳು ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಭಾರತ ಜೂನ್​ 1 ರಂದು ಬಾಂಗ್ಲಾದೇಶ ವಿರುದ್ಧ ತನ್ನ ಅಭ್ಯಾಸ ಪಂದ್ಯವನ್ನು ಆಡಲಿದೆ. ಆದರೆ ಪಂದ್ಯದ ತಾಣ ಎಲ್ಲಿ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ. ಮೂಲಗಲ ಪ್ರಕಾರ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ.


ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ‘ನಂದಿನಿ’ ಲಾಂಛನ; ಹರ್ಷ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಉಚಿತ ಪ್ರಸಾರ


ಟಿ20 ವಿಶ್ವಕಪ್​ ಟೂರ್ನಿ ಆರಂಭಕ್ಕೂ ಮುನ್ನವೇ ​ಡಿಸ್ನಿ + ಹಾಟ್‌ಸ್ಟಾರ್(Disney+ Hotstar) ಕ್ರಿಕೆಟ್​ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರರು ಈ ವರ್ಷದ ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಅನ್ನು OTT ಪ್ಲಾಟ್‌ಫಾರ್ಮ್‌ನಲ್ಲಿ ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಡಿಸ್ನಿ + ಹಾಟ್‌ಸ್ಟಾರ್ ಈಗಾಗಲೇ ಘೋಷಿಸಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ಮತ್ತು ಏಷ್ಯಾ ಕಪ್‌ ಟೂರ್ನಿಯನ್ನು ಕೂಡ ಡಿಸ್ನಿ + ಹಾಟ್‌ಸ್ಟಾರ್, ಮೊಬೈಲ್​ ಬಳಕೆ ದಾರರಿಗೆ ಉಚಿತ ವೀಕ್ಷಣೆಯನ್ನು ನೀಡಿತ್ತು. ಇದೀಗ ಟಿ20 ವಿಶ್ವಕಪ್​ ಟೂರ್ನಿಯಲ್ಲಿಯೂ ಇದೇ ನಿಲುವನ್ನು ಮುಂದುವರಿಸಿದೆ.

Continue Reading
Advertisement
Modi v/s Rahul
ರಾಜಕೀಯ4 mins ago

Modi v/s Rahul: ರಾಹುಲ್‌ ಗಾಂಧಿ ಆಸ್ತಿ ಪ್ರಧಾನಿ ಮೋದಿಗಿಂತ ಎಷ್ಟು ಪಟ್ಟು ಹೆಚ್ಚು ಗೊತ್ತೆ?

gold rate today adah
ಚಿನ್ನದ ದರ14 mins ago

Gold Rate Today: ಇಳಿಯಿತು ಚಿನ್ನದ ಬೆಲೆ; ಬಂಗಾರದ ಗ್ರಾಹಕರಿಗೆ ತುಸು ನಿಟ್ಟುಸಿರು; ದರ ಹೀಗಿದೆ

MDH, Everest Spices
ವಿದೇಶ20 mins ago

MDH, Everest Spices: ಸಿಂಗಾಪುರ, ಹಾಂಕಾಂಗ್‌ ಬಳಿಕ ಇದೀಗ ನೇಪಾಳದಲ್ಲಿಯೂ ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ

Virat Kohli
ಕ್ರೀಡೆ23 mins ago

Virat Kohli: ಮಗಳು ವಮಿಕಾ ಕೂಡ ಕ್ರಿಕೆಟ್​ ಪ್ರಿಯೆ; ಬ್ಯಾಟಿಂಗ್​ ಅಚ್ಚುಮೆಚ್ಚು ಎಂದ ಕೊಹ್ಲಿ​

dhruva sarja support C Cinema Kanda Kanda Video Song Release
ಸ್ಯಾಂಡಲ್ ವುಡ್32 mins ago

Dhruva Sarja: ‘ಸಿ’ ಅಂತಿದ್ದಾರೆ ಧ್ರುವ ಸರ್ಜಾ; ಇದು ಅಪ್ಪ-ಮಗಳ ಕಥೆ!

Pushpa 2 Allu Arjun anasuya bharadwaj poster look out
ಟಾಲಿವುಡ್35 mins ago

Pushpa 2: ʻಪುಷ್ಪ 2ʼ ಅನಸೂಯಾ ಭಾರದ್ವಾಜ್ ಪಾತ್ರದ ಫಸ್ಟ್ ಲುಕ್ ಔಟ್!

Viral News
ವೈರಲ್ ನ್ಯೂಸ್37 mins ago

Viral News: ತ್ರಿವಳಿ ತಲಾಖ್‌ನಿಂದ ಬೇಸತ್ತಿದ್ದ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರ; ದೇವಸ್ಥಾನದಲ್ಲಿ ಮರು ಮದುವೆ

Murder case In Bengaluru
ಬೆಂಗಳೂರು46 mins ago

Murder case : ಕಳ್ಳನೆಂದು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್‌ಗಳು; ನೂಕಾಟದಲ್ಲಿ ಬಿದ್ದ ಯುವಕ, ಕರೆಂಟ್‌ ಶಾಕ್‌ನಿಂದ ಸಾವು

IPL Ticket Scam
ಕ್ರೀಡೆ1 hour ago

IPL Ticket Scam: ಆನ್​ಲೈನ್​ ಟಿಕೆಟ್​ ಖರೀದಿಸಲು ಹೋಗಿ 3 ಲಕ್ಷ ರೂ ಕಳೆದುಕೊಂಡ ಆರ್​ಸಿಬಿ ಅಭಿಮಾನಿ

Zakir Naik
ವಿದೇಶ1 hour ago

Zakir Naik: ಹಿಂದುಗಳನ್ನು ಮತಾಂತರಗೊಳಿಸುವ ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕು; ವಿವಾದ ಹುಟ್ಟುಹಾಕಿದ ಮೌಲ್ವಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ6 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ20 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ22 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌