Ram Mandir: ನಾಳೆ ಭಾರತೀಯರಿಗೆ ಸುದಿನ; ಈಡೇರಲಿದೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಕ್ಷಣ! - Vistara News

ದೇಶ

Ram Mandir: ನಾಳೆ ಭಾರತೀಯರಿಗೆ ಸುದಿನ; ಈಡೇರಲಿದೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಕ್ಷಣ!

Ram Mandir: ಕೋಟ್ಯಂತರ ಭಾರತೀಯರ ಕನಸು ನಾಳೆ(ಜ.22, ಸೋಮವಾರ) ಮಧ್ಯಾಹ್ನ ಈಡೇರಲಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ.

VISTARANEWS.COM


on

Ram Mandir
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ (Ram Mandir) ಪ್ರಾಣ ಪ್ರತಿಷ್ಠಾಪನೆ (Pran Pratishtha) ಜ.22ರ ಸೋಮವಾರ ಮಧ್ಯಾಹ್ನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಪ್ರತಿಷ್ಠಾಪನೆಯ ಮುಖ್ಯ ಯಜಮಾನರಾಗಿದ್ದು, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿಕೊಡಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ. ಈ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಪೂರ್ಣಗೊಳಿಸಲಾಗಿದ್ದು, ಆಹ್ವಾನಿತ ಗಣ್ಯ ಮಾನ್ಯರು ಭಾನುವಾರದಿಂದಲೇ ಅಯೋಧ್ಯೆಗೆ ಬಂದಿಳಿಯುತ್ತಿದ್ದಾರೆ.

ಸೋಮವಾರ ಮಧ್ಯಾಹ್ನ 12.20 ಕ್ಕೆ ಪ್ರತಿಷ್ಠಾಪನಾ ಸಮಾರಂಭ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಸಮಾರಂಭದ ಕೆಲವು ಆಚರಣೆಗಳು ಜನವರಿ 16 ರಂದು, ಪ್ರಾಣ-ಪ್ರತಿಷ್ಠಾಪನೆಗೆ ಒಂದು ವಾರ ಮೊದಲು ಪ್ರಾರಂಭವಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಗಣ್ಯರು ಭಾಗವಹಿಸಲಿರುವ ಈ ಮೆಗಾ ಕಾರ್ಯಕ್ರಮಕ್ಕೆ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಡೀ ಅಯೋಧ್ಯೆ ನಗರದ ಮೇಲೆ ಭದ್ರತಾ ಪಡೆಗಳು ಕಣ್ಗಾವಲು ಇಟ್ಟಿದೆ.

ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಅಯೋಧ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. ಹೀಗಾಗಿ ಏಕಾಏಕಿ ಅಯೋಧ್ಯೆಗೆ ಬರಬೇಡಿ ಎಂದು ಟ್ರಸ್ಟ್​​ ಮನವಿ ಮಾಡಿದೆ. ವರ್ಚುವಲ್ ಮೂಲಕ ನೋಡುವಂತೆ ಸಲಹೆ ನೀಡಿದೆ. ಈ ಭವ್ಯ ಕಾರ್ಯಕ್ರಮವನ್ನು ದೇಶದ ವಿವಿಧ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ಹೇಳಿದೆ.

ಜ.21 ಭಾನುವಾರ ರಾಮ್ ಲಲ್ಲಾ ವಿರಾಜ್​ಮಾನ್​​ ಮೂಲ ವಿಗ್ರಹವನನು ಶಯನ ಆರತಿಯ ಬಳಿಕ ನೂತನ ರಾಮ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಹನುಮಂತ, ಸಹೋದರರಾದ ಲಕ್ಷ್ಮಣ, ಶತ್ರುಘ್ನ ಮತ್ತು ಭರತನ ಮೂಲ ವಿಗ್ರಹಗಳೂ ದೇವಾಲಯಕ್ಕೆ ಸ್ಥಳಾಂತರವಾದವು. ಅಂದ ಹಾಗೆ ರಾಮ ಮಂದಿರ ವಿವಾದದಲ್ಲಿ ಕೋರ್ಟ್​ ಕೇಸ್​ ಗೆದ್ದಿದ್ದು ಇದೇ ರಾಮ ಲಲ್ಲಾ ವಿರಾಜ್​ಮಾನ್​. ಆ ಮೂರ್ತಿಯ ಬದಲಿಗೆ ಇದೀಗ ಕನ್ನಡಿಗ ಅರುಣ್​ ಯೋಗಿರಾಜ್ ಕೆತ್ತಿರುವ 51 ಇಂಚು ಎತ್ತರದ ಹೊಸ ರಾಮ ಲಲ್ಲಾ ಅವರ ಹೊಸ ವಿಗ್ರಹವನ್ನು ರಾಮ ದೇವಾಲಯದ ಗರ್ಭಗೃಹದೊಳಗೆ (ಗರ್ಭಗುಡಿ) ಪೀಠದ ಮೇಲೆ ಸ್ಥಾಪಿಸಲಾಗಿದೆ. ಈ ವಿಗ್ರಹಕ್ಕೆ ಈಗ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

ರಾಮಮಂದಿರದಲ್ಲಿ 5 ಗಂಟೆ ಕಳೆಯಲಿರುವ ಮೋದಿ

ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಗುಲದಲ್ಲಿ 5 ಗಂಟೆ ಕಳೆಯಲಿದ್ದಾರೆ. ಈ ವೇಳೆ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರ ದೇಗುಲದ ಉದ್ಘಾಟನೆಯ ವೇಳಾಪಟ್ಟಿ ಹೀಗಿದೆ…

ಬೆಳಗ್ಗೆ 10.25: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
10.55: ರಾಮಜನ್ಮಭೂಮಿ ಆವರಣ ತಲುಪಲಿರುವ ಹೆಲಿಕಾಪ್ಟರ್‌
ಬೆಳಗ್ಗೆ 11ರಿಂದ ಮಧ್ಯಾಹ್ನ 12: ರಾಮಮಂದಿರದ ವೀಕ್ಷಣೆ ಮಾಡಲಿರುವ ಪ್ರಧಾನಿ
ಮಧ್ಯಾಹ್ನ 12.05-12.55: ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ. ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ.
ಮಧ್ಯಾಹ್ನ 1-2: ಸಾರ್ವಜನಿಕ ಭಾಷಣ ಮಾಡಲಿರುವ ನರೇಂದ್ರ ಮೋದಿ, ಮೋಹನ್‌ ಭಾಗವತ್‌, ಯೋಗಿ ಆದಿತ್ಯನಾಥ್‌
ಮಧ್ಯಾಹ್ನ 2.10: ರಾಮಜನ್ಮಭೂಮಿ ಆವರಣದಲ್ಲಿರುವ ಶಿವ ಮಂದಿರಕ್ಕೆ ಭೇಟಿ, ವಿಶೇಷ ಪ್ರಾರ್ಥನೆ
ಮಧ್ಯಾಹ್ನ 3.30: ಅಯೋಧ್ಯೆಯಿಂದ ಪ್ರಧಾನಿ ನಿರ್ಗಮನ

ಬೆಳಗ್ಗೆ 6.30ರಿಂದಲೇ ಕಾರ್ಯಕ್ರಮ ಆರಂಭ

ಸೋಮವಾರ ರಾಮಮಂದಿರದಲ್ಲಿ ಬೆಳಗ್ಗೆ 6.30ರಿಂದಲೇ ಧಾರ್ಮಿಕ ವಿಧಿವಿಧಾನಗಳು ಶುರುವಾಗಲಿವೆ. ಬೆಳಗ್ಗೆ 6.30ಕ್ಕೆ ರಾಮಲಲ್ಲಾ ಮೂರ್ತಿಗೆ ಶೃಂಗಾರ ಅಥವಾ ಜಾಗರಣ ಆರತಿ ಬೆಳಗಲಾಗುತ್ತದೆ. ಇನ್ನು 7 ಗಂಟೆಯಿಂದಲೇ ರಾಮನ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ರಾಮಮಂದಿರ ಟ್ರಸ್ಟ್‌ ನೀಡಿರುವ ಪಾಸ್‌ಗಳ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಭಕ್ತರು ದೇವಾಲಯ ಪ್ರವೇಶಿಸಿ ಬೆಳಗ್ಗೆ 7 ಗಂಟೆಯಿಂದ 11.30ರವರೆಗೆ ರಾಮನ ದರ್ಶನ ಪಡೆಯಬಹುದಾಗಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರತಿ ನಡೆಯಲಿದೆ.

ನೇರ ಪ್ರಸಾರವನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?

ಉತ್ತರ ಪ್ರದೇಶದ ದೇವಾಲಯ ಪಟ್ಟಣದಲ್ಲಿ ಪ್ರತಿಷ್ಠಾಪನಾ ಸಮಾರಂಭವನ್ನು ದೇಶಾದ್ಯಂತ ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿನ ದೇವಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಎಲ್ಲ ಚಾನೆಲ್​ಗಳು​ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಬಹುದು. ಯೂಟ್ಯೂಬ್ ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ. ಮಧ್ಯಾಹ್ನದಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಮಾರಂಭವನ್ನು ದೂರದರ್ಶನ ಚಾನೆಲ್ ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಪ್ರತಿಷ್ಠಾಪನಾ ಸಮಾರಂಭದ ನೇರ ಪ್ರಸಾರಕ್ಕಾಗಿ, ರಾಷ್ಟ್ರೀಯ ಪ್ರಸಾರಕರು ಹೊಸ ರಾಮ್ ದೇವಾಲಯ ಸಂಕೀರ್ಣ ಸೇರಿದಂತೆ ಅಯೋಧ್ಯೆಯ ವಿವಿಧ ಸ್ಥಳಗಳಲ್ಲಿ 40 ಕ್ಯಾಮೆರಾಗಳನ್ನು ಸ್ಥಾಪಿಸಲಿದ್ದಾರೆ ಎಂಬುದಾಗಿ ವರದಿಯಾಗಿದೆ.

ಶೃಂಗಾರಗೊಂಡು, ಸಜ್ಜಾದ ರಾಮ ಮಂದಿರ

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನಾ ದಿನ ದೇವಸ್ಥಾನವನ್ನು ಹೂವುಗಳಿಂದ ಸಿಂಗರಿಸಲಾಗಿದೆ. ಅದೇ ರೀತಿ ದೀಪಾಲಂಕಾರದ ಮೂಲಕವೂ ದೇಗುಲದ ಸೌಂದರ್ಯವನ್ನು ನೂರ್ಮಡಿಗೊಳಿಸಲಾಗಿದೆ. ಶತಕೋಟಿ ಭಾರತೀಯರ ಕನಸಾಗಿರುವ ಈ ರಾಮ ಮಂದಿರ ಉದ್ಘಾಟನೆ ವೇಳೆ ಹೇಗೆ ಸಿಂಗಾರಗೊಂಡಿರಬಹುದು ಎಂಬ ಕೌತುಕವನ್ನು ತಣಿಸಲು ರಾಮಮಂದಿರ ಟ್ರಸ್ಟ್​​ನವರು ಕೆಲವೊಂದು ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಪ್ರಾಣ ಪ್ರತಿಷ್ಠಾಪನೆ ಎಂದರೇನು?

ಪ್ರಾಣ ಪ್ರತಿಷ್ಠಾಪನೆ ಎನ್ನುವುದು ಹಿಂದೂ ಮತ್ತು ಜೈನ ಧರ್ಮದಲ್ಲಿನ ಜನಪ್ರಿಯ ಆಚರಣೆಯಾಗಿದ್ದು, ದೇವರ ವಿಗ್ರಹವನ್ನು ಪವಿತ್ರಗೊಳಿಸಿದ ನಂತರ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹಗಳನ್ನು ಹೀಗೆ ಪ್ರತಿಷ್ಠಾಪಿಸುವ ಸಮಯದಲ್ಲಿ ಪುರೋಹಿತರು ವೈದಿಕ ಸ್ತೋತ್ರಗಳ ಪಠಣ ನಡೆಸುವುದು ವಾಡಿಕೆ. ಪ್ರಾಣ್ ಎಂಬ ಪದದ ಅರ್ಥ ಜೀವಶಕ್ತಿ ಮತ್ತು ಪ್ರತಿಷ್ಠಾ ಎಂದರೆ ಸ್ಥಾಪನೆ. ಪ್ರಾಣ ಪ್ರತಿಷ್ಠಾ ಅಥವಾ ಪ್ರತಿಷ್ಠಾಪನಾ ಸಮಾರಂಭ ಎಂದರೆ ವಿಗ್ರಹಕ್ಕೆ ಜೀವಶಕ್ತಿಯನ್ನು ತುಂಬುವ ಆಚರಣೆ ಎಂದು ಹಿರಿಯರು ಹೇಳುತ್ತಾರೆ. ಪ್ರಾಣ ಪ್ರತಿಷ್ಠಾ ಪ್ರಕ್ರಿಯೆಯ ಮೊದಲು ವಿಗ್ರಹಕ್ಕೆ ಯಾವುದೇ ವಿಶೇಷ ಶಕ್ತಿ ಇರುವುದಿಲ್ಲ ಎನ್ನಲಾಗಿದೆ. ಪ್ರಾಣ ಪ್ರತಿಷ್ಠಾನದ ಮೂಲಕ ವಿಗ್ರಹಕ್ಕೆ ವಿಶೇಷ ಶಕ್ತಿಗಳನ್ನು ತುಂಬಲಾಗುತ್ತದೆ. ಬಳಿಕವೇ ವಿಗ್ರಹ ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ಪ್ರಕ್ರಿಯೆಯ ನಂತರ ಭಕ್ತರು ಈ ವಿಗ್ರಹಗಳನ್ನು ಪೂಜಿಸಬಹುದು ಎಂದು ನಂಬಲಾಗಿದೆ.

ಈ ಸುದ್ದಿಯನ್ನೂ ಓದಿ: Ram Mandir: ರಾಮ ಮಂದಿರ ಸ್ಫೋಟದ ಬೆದರಿಕೆ! ದಾವೂದ್ ಇಬ್ರಾಹಿಂ ಸಹಚರನೆಂದು ಹೇಳಿಕೊಂಡಿದ್ದ ಯುವಕ ಅರೆಸ್ಟ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್‌ ಏರಿಕೆ

Stock Market: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತಪಮ್ಮೆ ಅದಿಕಾರಕ್ಕೆ ಬೆಲಿದ್ದಾರೆ ಎಂದು ಎಕ್ಸಿಟ್‌ ಪೋಲ್‌ಗಳು ಭವಿಷ್ಯ ನುಡಿದಿದ್ದು, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು. ನಿಫ್ಟಿ 50 (807 ಪಾಯಿಂಟ್‌) ಮತ್ತು ಸೆನ್ಸೆಕ್ಸ್ ಸುಮಾರು ಶೇ. 3ರಷ್ಟು (2,622 ಪಾಯಿಂಟ್‌) ಏರಿಕೆಯಾಗಿದ್ದು, ಕ್ರಮವಾಗಿ 23,338.70 ಮತ್ತು 76,738.89ರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ.

VISTARANEWS.COM


on

Stock Market
Koo

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್‌ಡಿಎ (NDA) ಸರ್ಕಾರಕ್ಕೆ ಸ್ಪಷ್ಟ ಜಯವನ್ನು ಸೂಚಿಸುವ ಎಕ್ಸಿಟ್‌ ಪೋಲ್‌ (Exit Poll) ಫಲಿತಾಂಶಗಳ ಹಿನ್ನೆಲೆಯಲ್ಲಿ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಗಳು (Stock Market) ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು. ನಿಫ್ಟಿ 50 (807 ಪಾಯಿಂಟ್‌) ಮತ್ತು ಸೆನ್ಸೆಕ್ಸ್ ಸುಮಾರು ಶೇ. 3ರಷ್ಟು (2,622 ಪಾಯಿಂಟ್‌) ಏರಿಕೆಯಾಗಿದ್ದು, ಕ್ರಮವಾಗಿ 23,338.70 ಮತ್ತು 76,738.89ರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ.

ಸುಮಾರು 360 ಸ್ಥಾನಗಳೊಂದಿಗೆ ಎನ್‌ಡಿಎ ಸ್ಪಷ್ಟ ಬಹಮತ ದೊರೆಯಲಿದೆ ಎನ್ನುವ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಮೇ ತಿಂಗಳಲ್ಲಿ ಮಾರುಕಟ್ಟೆಗಳ ಮೇಲೆ ಆವರಿಸಿದ್ದ ಆತಂಕವನ್ನು ನಿವಾರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲ ಪ್ರಮುಖ ವಲಯಗಳು ಏರಿಕೆ ದಾಖಲಿಸಿವೆ. ಸಣ್ಣ ಮತ್ತು ಮಧ್ಯಮ ಕ್ಯಾಪ್‌ಗಳು ಸಹ ಗಮನಾರ್ಹ ಲಾಭವನ್ನು ಕಂಡಿವೆ. ಎಲ್ಲ 13 ಪ್ರಮುಖ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿದ್ದವು. ನಿಫ್ಟಿ ಎನರ್ಜಿ, ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ನಿಫ್ಟಿ ರಿಯಾಲ್ಟಿ ತಲಾ ಶೇ. 4-5ರಷ್ಟು ಏರಿಕೆ ಕಂಡಿವೆ. ನಿಫ್ಟಿ ಫಾರ್ಮಾ ಮತ್ತು ನಿಫ್ಟಿ ಹೆಲ್ತ್‌ಕೇರ್‌ ಎರಡೂ ಸೂಚ್ಯಂಕಗಳು ಶೇಕಡಾ 1.2ರಷ್ಟು ಏರಿಕೆಯೊಂದಿಗೆ ಅತಿ ಕಡಿಮೆ ಲಾಭವನ್ನು ದಾಖಲಿಸಿವೆ. ಏತನ್ಮಧ್ಯೆ ಬಿಎಸ್ಇಯಲ್ಲಿ ಎಲ್ಲ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ(capitalisation)ವು 11.1 ಲಕ್ಷ ಕೋಟಿ ರೂ.ಗಳಿಂದ 423.21 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ.

ವೈಯಕ್ತಿಕ ಸ್ಟಾಕ್‌ಗಳಲ್ಲಿ ಅದಾನಿ ಪೋರ್ಟ್ಸ್, ಶ್ರೀರಾಮ್ ಫೈನಾನ್ಸ್ ಮತ್ತು ಪವರ್ ಗ್ರಿಡ್ ಆರಂಭಿಕ ವಹಿವಾಟಿನಲ್ಲಿ ಟಾಪ್ ಪರ್ಫಾರ್ಮರ್‌ಗಳಾಗಿದ್ದು, ಪ್ರತಿಯೊಂದೂ 6-9 ಪ್ರತಿಶತದಷ್ಟು ಏರಿವೆ. ಅದಾನಿ ಇಂಟರ್‌ನ್ಯಾಶನಲ್ ಪೋರ್ಟ್ಸ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ (AIPH) ಟಾಂಜಾನಿಯಾದ ಡಾರ್ ಎಸ್ ಸಲಾಮ್ ಬಂದರಿನಲ್ಲಿ ಕಂಟೈನರ್ ಟರ್ಮಿನಲ್ 2 ಅನ್ನು ನಿರ್ವಹಿಸಲು ತಾಂಜಾನಿಯಾ ಪೋರ್ಟ್ಸ್ ಅಥಾರಿಟಿಯೊಂದಿಗೆ 30 ವರ್ಷಗಳ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅದಾನಿ ಪೋರ್ಟ್ಸ್ ಷೇರುಗಳು ಸುಮಾರು ಶೇ. 9ರಷ್ಟು ಲಾಭ ಗಳಿಸಿದವು.

“ಎಲ್ಲ ಎಕ್ಸಿಟ್‌ ಪೋಲ್‌ಗಳು ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಿದೆ. ಇದು ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಂತಿಮವಾಗಿ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳೊಂದಿಗೆ ಹೊಂದಿಕೆಯಾದರೆ ಸಂಭಾವ್ಯ ಏರಿಕೆಯ ಬಗ್ಗೆ ಆಶಾವಾದಿಗಳಾಗಿರಬಹುದು” ಎಂದು ಆರ್ಥಿಕ ತಜ್ಞ ಡಾ. ರವಿ ಸಿಂಗ್‌ ಹೇಳಿದ್ದಾರೆ.

ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್‌ವೆಸ್ಟರ್ಸ್‌ (Foreign institutional investors) ಮೇ 31ರಂದು 1,613.24 ಕೋಟಿ ರೂ.ಗಳ ಭಾರತೀಯ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು 2,114.17 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸಿದ್ದರು. ಚುನಾವಣೋತ್ತರ ಸಮೀಕ್ಷೆಗಳು ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ ಎಂದು ಸೂಚಿಸಿದ ನಂತರ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ 42 ಪೈಸೆ ಏರಿಕೆಯಾಗಿ 83ಕ್ಕೆ ತಲುಪಿದೆ.

ಇದನ್ನೂ ಓದಿ: Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Continue Reading

ದೇಶ

Lok Sabha Election Result 2024: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ; ಯಾರಿಗೆ ಅಧಿಕಾರ? ನಿಮ್ಮ ಅಭಿಪ್ರಾಯ ತಿಳಿಸಿ

Lok Sabha Election Result 2024: ಮಂಗಳವಾರ ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಆರಂಭವಾಗಿದೆ. ಮತಎಣಿಕೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಒಟ್ಟು 543 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 272 ಮ್ಯಾಜಿಕ್‌ ನಂಬರ್‌ ಆಗಿದೆ. ನರೇಂದ್ರ ಮೋದಿ ಹ್ಯಾಟ್ರಿಕ್‌ ಬಾರಿಸುವರೋ ಇಲ್ಲವೇ ಇಂಡಿಯಾ ಒಕ್ಕೂಟ ಮುನ್ನಡೆ ಪಡೆಯುವುದೋ ಎಂಬ ಚರ್ಚೆ, ನಿರೀಕ್ಷೆ, ಕುತೂಹಲ ಹೆಚ್ಚಾಗಿದೆ.

VISTARANEWS.COM


on

Lok Sabha Election Result 2024
Koo

ನವದೆಹಲಿ: ಕಳೆದ ಕೆಲ ತಿಂಗಳಿಂದ ದೇಶಾದ್ಯಂತ ತೀವ್ರ ಚರ್ಚೆ, ಕುತೂಹಲ, ರಾಜಕಾರಣಿಗಳ ಅಬ್ಬರದ ಪ್ರಚಾರ, ವಾದ, ವಾಗ್ವಾದ, ವಿವಾದಗಳಿಗೆ ಕಾರಣವಾಗಿದ್ದ ಲೋಕಸಭೆ ಚುನಾವಣೆಯು (Lok Sabha Election 2024) ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಮಂಗಳವಾರ ಲೋಕಸಭೆ ಚುನಾವಣೆ ಫಲಿತಾಂಶ (Lok Sabha Election Result 2024) ಪ್ರಕಟವಾಗಲಿದ್ದು, ದೇಶದ ಭವಿಷ್ಯಕ್ಕೆ ಇದು ದಿಕ್ಸೂಚಿ ಎನಿಸಲಿದೆ. ಸಹಜವಾಗಿಯೇ ರಾಜಕಾರಣಿಗಳು, ಅಭ್ಯರ್ಥಿಗಳ ಜತೆಗೆ ದೇಶದ ನಾಗರಿಕರ ಕುತೂಹಲವೂ ಜಾಸ್ತಿಯಾಗಿದೆ.

ಮಂಗಳವಾರ ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಆರಂಭವಾಗಿದೆ. ಮತಎಣಿಕೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಒಟ್ಟು 543 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 272 ಮ್ಯಾಜಿಕ್‌ ನಂಬರ್‌ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹ್ಯಾಟ್ರಿಕ್‌ ಬಾರಿಸುವ ಉತ್ಸಾಹದಲ್ಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವೇ ಗೆಲುವು ಸಾಧಿಸಲಿದೆ ಎಂಬುದಾಗಿ ಬಹುತೇಕ ಮತಗಟ್ಟೆ ಸಮೀಕ್ಷೆಗಳು ತಿಳಿಸಿವೆ.

ಬಿಜೆಪಿಗೆ ಒಲಿಯುವುದೇ ಗೆಲುವು?

ನರೇಂದ್ರ ಮೋದಿ ಅವರ ಅಲೆ, ಕಳೆದ 10 ವರ್ಷಗಳ ಅಭಿವೃದ್ಧಿ ಕೆಲಸಗಳು, ರಾಮಮಂದಿರ, 370ನೇ ವಿಧಿ ರದ್ದು ಸೇರಿ ಹಲವು ಪ್ರಮುಖ ತೀರ್ಮಾನಗಳನ್ನು ಮುಂದಿಟ್ಟುಕೊಂಡು ಬಿಜೆಪಿಯು ಚುನಾವಣೆ ಎದುರಿಸಿದೆ. ಅದರಲ್ಲೂ, ಮೋದಿ ಅವರು 200ಕ್ಕೂ ಅಧಿಕ ಸಮಾವೇಶಗಳ ಮೂಲಕ ದೇಶದ ಮೂಲೆ ಮೂಲೆಯಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ನಾಯಕರು, ಕಾರ್ಯಕರ್ತರು ಕೂಡ ಇದಕ್ಕೆ ಶ್ರಮಿಸಿದ್ದಾರೆ. ಹಾಗಾಗಿ, ಬಿಜೆಪಿಯು ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯು ಕನಸು ಕಾಣುತ್ತಿದೆ.

Lok Sabha Election 2024 PM Narendra Modi roadshow on April 14 route map is ready

ಕುತೂಹಲ ಘಟ್ಟದಲ್ಲಿ ಇಂಡಿಯಾ ಒಕ್ಕೂಟ

ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್‌ ಮುಂದಾಳತ್ವದಲ್ಲಿ ಇಂಡಿಯಾ ಒಕ್ಕೂಟವನ್ನು ರಚಿಸಿ, ಪ್ರತಿಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸಿವೆ. ಮತಗಟ್ಟೆ ಸಮೀಕ್ಷೆಗಳ ವರದಿಗಳ ಆಚೆಯೂ ಅಚ್ಚರಿಯ ಫಲಿತಾಂಶವನ್ನು ಇಂಡಿಯಾ ಒಕ್ಕೂಟದ ಪಕ್ಷಗಳು ನಿರೀಕ್ಷಿಸುತ್ತಿವೆ. ಹಾಗೊಂದು ವೇಳೆ, ಮತಗಟ್ಟೆ ಸಮೀಕ್ಷೆಗಳು ಉಲ್ಟಾ ಹೊಡೆದರೆ, ಇಂಡಿಯಾ ಮೈತ್ರಿಕೂಟವು ಮುನ್ನಡೆ ಸಾಧಿಸಲಿದೆ.

ಸಮೀಕ್ಷೆಗಳು ಹೇಳಿರುವುದೇನು?

ಎಲ್ಲ ಸಮೀಕ್ಷಾ ವರದಿಗಳನ್ನು ವಿಶ್ಲೇಷಿಸಿದಾಗ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಒಟ್ಟು 543 ಕ್ಷೇತ್ರಗಳ ಪೈಕಿ 355-380 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 2019ರ ಲೋಕಸಭೆ ಚುನಾವಣೆ ಫಲಿತಾಂಶವೇ ಮರುಕಳಿಸಲಿದೆ ಎಂದು ಹೇಳಲಾಗುತ್ತಿದೆ. 2019ರಲ್ಲಿ ಎನ್‌ಡಿಎ ಮೈತ್ರಿಕೂಟವು 353 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿಯೊಂದೇ 303 ಕ್ಷೇತ್ರಗಳಲ್ಲಿ ಜಯ ಕಂಡಿತ್ತು.

Kharage or Rahul may be pm candidate for India bloc Sasy Shashi Shashi Tharoor

200 ಸಮೀಪವೂ ಬಾರದ ಇಂಡಿಯಾ ಒಕ್ಕೂಟ

ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟವು ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ 125-165 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದು ಮತಗಟ್ಟೆ ಸಮೀಕ್ಷೆಗಳ ಒಟ್ಟು ಸಾರವಾಗಿದೆ. ಇದರೊಂದಿಗೆ ಇಂಡಿಯಾ ಒಕ್ಕೂಟವು ಮ್ಯಾಜಿಕ್‌ ನಂಬರ್‌ (272) ಬಿಡಿ, 200 ಕ್ಷೇತ್ರಗಳನ್ನೂ ತಲುಪುವುದಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದರೊಂದಿಗೆ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳಿಗೆ ಸತತ ಮೂರನೇ ಬಾರಿಯೂ ಹಿನ್ನಡೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಲಾಭ

ದಕ್ಷಿಣ ಭಾರತದಲ್ಲಿ, ಅದರಲ್ಲೂ ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಬಹುತೇಕ ಸಮೀಕ್ಷೆಗಳು ತಮಿಳುನಾಡಿನಲ್ಲಿ ಬಿಜೆಪಿ 1-3 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅಂದಾಜಿಸಿವೆ. ಕಾಂಗ್ರೆಸ್ 8-11, ಬಿಜೆಪಿ 36-39 ಮತ್ತು ಇತರರು 0-2 ಸ್ಥಾನಗಳನ್ನು ಪಡೆಯಲಿವೆ. ಬಹು ಕಟ್ಟರ್ ಪ್ರಾಂತೀಯವಾದಿ ಮತದಾರರು ಇರುವ ತಮಿಳುನಾಡಿನಲ್ಲಿ ಖಾತೆ ತೆರೆಯುವುದು ಬಿಜೆಪಿಗೆ ಸುಲಭ ಮಾತಲ್ಲ. ಹೀಗಾಗಿ ಈ ಸಲ ಗೆದ್ದರೆ ಅದೊಂದು ಐತಿಹಾಸಿಕ ಸಾಧನೆಯಾಗಲಿದೆ.

ಎನ್​ಡಿಎ ಕೇರಳದಲ್ಲಿ ಒಂದರಿಂದ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆಯಲು ಸಜ್ಜಾಗಿದೆ ಎಂಬುದಾಗಿ ಸಮೀಕ್ಷೆಗಳು ಅಂದಾಜಿಸಿವೆ. ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆದಿದ್ದು, 2019ರಲ್ಲಿ ಶೇ.77.84ರಷ್ಟಿದ್ದ ಮತದಾನ ಪ್ರಮಾಣ ಈ ಬಾರಿ ಶೇ.70.35ಕ್ಕೆ ಕುಸಿದಿತ್ತು.

ಇದನ್ನೂ ಓದಿ: PM Narendra Modi: ವಿಕಸಿತ ಭಾರತಕ್ಕೆ ಭದ್ರ ಅಡಿಪಾಯ; ದೇಶದ ಜನತೆಗೆ ಮೋದಿ ಭಾವುಕ ಪತ್ರ

Continue Reading

ವಿದೇಶ

Maldives: ಇಸ್ರೇಲಿಗರ ಪ್ರವೇಶವನ್ನು ನಿಷೇಧಿಸಿದ ಮಾಲ್ಡೀವ್ಸ್‌; ಭಾರತದ ಬೀಚ್‌ಗೆ ತೆರಳಿ ಎಂದು ತಿರುಗೇಟು ನೀಡಿದ ಇಸ್ರೇಲ್‌

Maldives: ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ ಮಾಲ್ಡೀವ್ಸ್‌ ಸರ್ಕಾರ ಇಸ್ರೇಲ್‌ ಪಾಸ್‌ಪೋರ್ಟ್‌ ಹೊಂದಿರುವವರ ಪ್ರವೇಶವನ್ನು ನಿಷೇಧಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಇಸ್ರೇಲ್‌ ಇದೀಗ ತನ್ನ ದೇಶದ ಪ್ರವಾಸಿಗರಿಗೆ ಮಾಲ್ಡೀವ್ಸ್‌ಗೆ ತೆರಳುವ ಬದಲು ಭಾರತಕ್ಕೆ ತೆರಳಿ ಎಂದು ಕರೆ ನೀಡಿದೆ.

VISTARANEWS.COM


on

Maldives
Koo

ನವದೆಹಲಿ: ಇಸ್ರೇಲ್‌-ಪ್ಯಾಲೆಸ್ತೀನ್‌ ನಡುವಿನ ಸಂಘರ್ಷ ಇನ್ನೂ ಮುಂದುವರಿದಿದೆ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ ಮಾಲ್ಡೀವ್ಸ್‌ (Maldives) ಸರ್ಕಾರ ಇಸ್ರೇಲ್‌ (Israel) ಪಾಸ್‌ಪೋರ್ಟ್‌ ಹೊಂದಿರುವವರ ಪ್ರವೇಶವನ್ನು ನಿಷೇಧಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಇಸ್ರೇಲ್‌ ಇದೀಗ ತನ್ನ ದೇಶದ ಪ್ರವಾಸಿಗರಿಗೆ ಮಾಲ್ಡೀವ್ಸ್‌ಗೆ ತೆರಳುವ ಬದಲು ಭಾರತಕ್ಕೆ ತೆರಳಿ ಎಂದು ಕರೆ ನೀಡಿದೆ. ಭಾರತದ ವಿವಿಧ ಪ್ರವಾಸೋದ್ಯಮ ಸ್ಥಳಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ಮಾಲ್ಡೀವ್ಸ್‌ ತನ್ನಲ್ಲಿರುವ ಮನಮೋಹಕ ಬೀಚ್‌ಗಳಿಗೆ ಹೆಸರುವಾಸಿ. ಹೀಗಾಗಿ ಈ ದ್ವೀಪ ರಾಷ್ಟ್ರಕ್ಕೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದೀಗ ಮಾಲ್ಡೀವ್ಸ್‌ ಸರ್ಕಾರ ಇಸ್ರೇಲಿಗರನ್ನು ನಿಷೇಧಿಸಿದ್ದು, ಇದಕ್ಕೆ ಭಾರತದಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಠಕ್ಕರ್‌ ನೀಡಿದೆ. ಲಕ್ಷ ದ್ವೀಪ, ಗೋವಾ, ಕೇರಳ ಮುಂತಾದೆಡೆಗಳ ಸುಂದರ ಕಡಲ ತೀರಗಳ ಫೋಟೊವನ್ನು ಹಂಚಿಕೊಂಡಿದೆ.

ʼʼಮಾಲ್ಡೀವ್ಸ್‌ ಇನ್ನು ಮುಂದೆ ಇಸ್ರೇಲಿಗರನ್ನು ಸ್ವಾಗತಿಸುವುದಿಲ್ಲ. ಹೀಗಾಗಿ ಇಸ್ರೇಲಿ ಪ್ರವಾಸಿಗರು, ಆತ್ಮೀಯವಾಗಿ ಸ್ವಾಗತಿಸುವ, ಅತ್ಯುತ್ತಮ ಆತಿಥ್ಯ ನೀಡುವ ಸುಂದರ ಮತ್ತು ಅದ್ಭುತ ಕಡಲ ತೀರಗಳಿರುವ ಭಾರತಕ್ಕೆ ಭೇಟಿ ನೀಡಿ. ಲಕ್ಷ ದ್ವೀಪ, ಗೋವಾ, ಅಂಡಾಮಾನ್‌ & ನಿಕೋಬಾರ್‌ ಮತ್ತು ಕೇರಳದ ಸುಂದರ ಕಡಲ ತೀರಗಳನ್ನು ಸಂದರ್ಶಿಸಿʼʼ ಎಂದು ರಾಯಭಾರ ಕಚೇರಿ ಪ್ರವಾಸಿಗರಿಗೆ ಶಿಫಾರಸ್ಸು ಮಾಡಿದೆ.

ಇಸ್ರೇಲಿ ಪಾಸ್‌ಪೋರ್ಟ್‌ ಹೊಂದಿರುವ ವ್ಯಕ್ತಿಗಳು ಮಾಲ್ಡೀವ್ಸ್‌ಗೆ ಪ್ರವೇಶಿಸುವುದನ್ನು ನಿಷೇಧಿಸುವ ನಿರ್ಧಾರವನ್ನು ಮಾಲ್ಡೀವ್ಸ್ ಭಾನುವಾರ (ಜೂನ್‌ 2) ಪ್ರಕಟಿಸಿದೆ. ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯಲ್ಲಿ ಮಾತನಾಡಿದ ಸಚಿವ ಅಲಿ ಇಹ್ಸಾನ್ ಈ ನಿರ್ಧಾರವನ್ನು ಪ್ರಕಟಿಸಿದರು. ಇಸ್ರೇಲ್‌ ಪಾಸ್‌ಪೋರ್ಟ್‌ ಹೊಂದಿರುವವರು ಮಾಲ್ಡೀವ್ಸ್‌ ಪ್ರವೇಶಿಸುವುದನ್ನು ತಡೆಯಲು ಅಗತ್ಯವಾದ ಕಾನೂನುಗಳನ್ನು ಜಾರಿಗೆ ಸರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದರ ಮೇಲ್ವಿಚಾರಣೆಯನ್ನು ನಡೆಸಲು ಉಪಸಮಿತಿ ರಚಿಸಲೂ ನಿರ್ಧರಿಸಲಾಗಿದೆ.

ಭಾರತವನ್ನು ಕೆಣಕಿ ಪೆಟ್ಟುತಿಂದ ಮಾಲ್ಡೀವ್ಸ್‌

ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ನ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಹಾಗೂ ಮೋದಿ ಕುರಿತು ಮಾಲ್ಡೀವ್ಸ್‌ ಅಸಮಾಧಾನದ ಹೇಳಿಕೆ ನೀಡಿದ ಬಳಿಕ ದೇಶದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಶುರುವಾದ ಕಾರಣ ಆಾಲ್ಲಿಗೆ ತೆರಳುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿದಿದೆ.

ಇದನ್ನೂ ಓದಿ: Maldives Tourism: ಪರಿಣಾಮ ಬೀರಿದ ಮಾಲ್ಡೀವ್ಸ್ ಬಹಿಷ್ಕಾರದ ಕೂಗು; ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಕುಸಿತ

ಭಾರತೀಯರ ಭೇಟಿ ಕುಸಿತ

ಮಾಲ್ಡೀವ್ಸ್‌ಗೆ ತೆರಳುವ ಪ್ರವಾಸಿಗರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿತ್ತು. ಆದರೆ ಬಾಯ್ಕಾಟ್‌ ಅಭಿಯಾನದ ಬಳಿಕ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2024ರ ಏಪ್ರಿಲ್‌ 10ರವರೆಗೆ ಮಾಲ್ಡೀವ್ಸ್‌ಗೆ 6.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಚೀನಾದ 71 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಬ್ರಿಟನ್‌, ರಷ್ಯಾ, ಇಟಲಿ, ಜರ್ಮನಿ ಹಾಗೂ ಭಾರತದ ಪ್ರವಾಸಿಗರಿದ್ದಾರೆ. ಇದೀಗ ಮತ್ತೆ ದ್ವೀಪ ರಾಷ್ಟ್ರಕ್ಕೆ ಮತ್ತೊಂದು ಸುತ್ತಿನ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಲಾಗುತ್ತಿದೆ.

Continue Reading

ದೇಶ

Samsung: ಸ್ಯಾಮ್‌ಸಂಗ್‌ನ ʼಬಿಗ್‌ ಟಿವಿ ಡೇಸ್‌ʼ ಸೇಲ್‌; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌!

Samsung: ಸ್ಯಾಮ್‌ಸಂಗ್ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್‌ಇಡಿ, ಓಎಲ್‌ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ ಟಿವಿಗಳು ಸೇರಿದಂತೆ ತನ್ನ ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌ಗಳನ್ನು ಘೋಷಿಸಿದೆ. ಟಿ20 ವಿಶ್ವಕಪ್‌ ಕ್ರಿಕೆಟ್ ಸಮೀಪಿಸುತ್ತಿದ್ದಂತೆ ಗ್ರಾಹಕರು ದೊಡ್ಡ ಟಿವಿಗಳಲ್ಲಿ ಕ್ರೀಡಾಂಗಣದ ಅನುಭವ ಪಡೆಯಲು ‘ಬಿಗ್ ಟಿವಿ ಡೇಸ್’ ಮಾರಾಟ ಪರಿಚಯಿಸಲಾಗಿದೆ.

VISTARANEWS.COM


on

Samsung Big TV Days Sale Exciting offer on big TVs
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ (Samsung) ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್‌ಇಡಿ, ಓಎಲ್‌ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ ಟಿವಿಗಳು ಸೇರಿದಂತೆ ತನ್ನ ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌ಗಳನ್ನು ಘೋಷಿಸಿದೆ. ಟಿ20 ವಿಶ್ವಕಪ್‌ ಕ್ರಿಕೆಟ್ ಸಮೀಪಿಸುತ್ತಿದ್ದಂತೆ ಗ್ರಾಹಕರು ದೊಡ್ಡ ಟಿವಿಗಳಲ್ಲಿ ಕ್ರೀಡಾಂಗಣದ ಅನುಭವ ಪಡೆಯಲು ‘ಬಿಗ್ ಟಿವಿ ಡೇಸ್’ ಮಾರಾಟ ಪರಿಚಯಿಸಲಾಗಿದೆ.

‘ಬಿಗ್ ಟಿವಿ ಡೇಸ್’ ಆಫರ್ ಸಮಯದಲ್ಲಿ ಸ್ಯಾಮ್‌ಸಂಗ್ ಟಿವಿಗಳನ್ನು ಖರೀದಿಸುವ ಗ್ರಾಹಕರು, ಅವರು ಖರೀದಿಸಿದ ಟಿವಿಯನ್ನು ಅವಲಂಬಿಸಿ ರೂ. 89990 ಮೌಲ್ಯದ ಸೆರಿಫ್ ಟಿವಿ ಅಥವಾ ರೂ. 79990 ಮೌಲ್ಯದ ಸೌಂಡ್‌ಬಾರ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಗ್ರಾಹಕರು ರೂ.2990 ದಿಂದ ಆರಂಭವಾಗುವ ಸುಲಭ ಇಎಂಐ ಸೌಲಭ್ಯವನ್ನು ಪಡೆಯಬಹುದು ಮತ್ತು 20% ವರೆಗಿನ ಕ್ಯಾಶ್‌ಬ್ಯಾಕ್ ಅನ್ನು ಕೂಡ ಪಡೆಯಬಹುದು. ಈ ಆಫರ್‌ಗಳು Samsung.com, ಪ್ರಮುಖ ರಿಟೇಲ್ ಅಂಗಡಿಗಳು ಮತ್ತು ಹಲವಾರು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತವೆ. ರಾಷ್ಟ್ರವ್ಯಾಪಿ ಇರುವ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ಆಫರ್‌ಗಳು ಜೂನ್ 1 ರಿಂದ ಆರಂಭವಾಗುತ್ತದೆ ಮತ್ತು ಜೂನ್ 30, 2024ಕ್ಕೆ ಕೊನೆಗೊಳ್ಳಲಿದೆ. ಆಫರ್‌ಗಳು 98″/85″/83″/77″/75″ ಗಾತ್ರಗಳ ನಿಯೋ ಕ್ಯೂಎಲ್‌ಇಡಿ, ಓಎಲ್‌ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ ಶ್ರೇಣಿಯ ಆಯ್ದ ಮಾಡೆಲ್‌ಗಳ ಮೇಲೆ ಲಭ್ಯವಿದೆ.

ಇದನ್ನೂ ಓದಿ: Mysore News: ಶಾಸ್ತ್ರ ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ: ಮಂತ್ರಾಲಯ ಶ್ರೀ

ಸ್ಯಾಮ್‌ಸಂಗ್ ಗ್ರಾಹಕರ ಟಿವಿ ವೀಕ್ಷಣೆ ಅನುಭವವನ್ನು ಅತ್ಯುನ್ನತಗೊಳಿಸಲು ಮತ್ತು ಅಸಾಧಾರಣ ವೀಕ್ಷಣೆಯ ಅನುಭವಗಳನ್ನು ಒದಗಿಸಲು ಟಿವಿಗಳಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಕ್ರಾಂತಿಕಾರಕ ಶಕ್ತಿಯನ್ನು ಪರಿಚಯಿಸಿದೆ. ಈ ಟೆಲಿವಿಷನ್‌ಗಳು ಎಐ ಬಳಕೆಯ ಮೂಲಕ ಮನೆಯ ಮನರಂಜನಾ ಅನುಭವಕ್ಕೆ ಹೊಸ ರೂಪ ನೀಡಲಿದೆ. ಸುಸ್ಥಿರತೆ ಮತ್ತು ಹೆಚ್ಚಿನ ಭದ್ರತೆ ಒದಗಿಸುತ್ತದೆ.

ಸ್ಯಾಮ್‌ಸಂಗ್ ಇಂಡಿಯಾದ ವಿಷುಯಲ್ ಡಿಸ್‌ಪ್ಲೇ ಬ್ಯುಸಿನೆಸ್‌ನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ಈ ಕುರಿತು ಮಾತನಾಡಿ, ಟಿ20 ವಿಶ್ವಕಪ್‌ ಕ್ರಿಕೆಟ್ ಸಂದರ್ಭದಲ್ಲಿ ದೊಡ್ಡ ಗಾತ್ರದ ಪರದೆ ಮತ್ತು ಪ್ರೀಮಿಯಂ ವೀಕ್ಷಣೆಯ ಅನುಭವಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ‘ಬಿಗ್ ಟಿವಿ ಡೇಸ್’ ಮಾರಾಟವನ್ನು ಸೂಕ್ತವಾಗಿ ಆಯೋಜಿಸಲಾಗಿದೆ.

ನಿಯೋ ಕ್ಯೂಎಲ್‌ಇಡಿ, ಓಎಲ್‌ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ ಟಿವಿಗಳು ಸೇರಿದಂತೆ ನಮ್ಮ ಅಲ್ಟ್ರಾ-ಪ್ರೀಮಿಯಂ ಶ್ರೇಣಿಯ ಟಿವಿಗಳನ್ನು ಅತ್ಯಾಕರ್ಷಕ ಕೊಡುಗೆಗಳ ಜತೆಗೆ ನೀಡುವ ಮೂಲಕ ನಮ್ಮ ಗ್ರಾಹಕರಿಗೆ ತಮ್ಮ ಮನೆಗಳಲ್ಲಿ ನೇರವಾಗಿ ಕ್ರೀಡಾಂಗಣದಲ್ಲಿಯೇ ಕ್ರಿಕೆಟ್ ನೋಡುವಂತೆ ಅನ್ನಿಸುವ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ನಮ್ಮ ಅತ್ಯಾಧುನಿಕ ಎಐ-ಚಾಲಿತ ಟೆಲಿವಿಷನ್‌ಗಳಲ್ಲಿ ನಮ್ಮ ಗ್ರಾಹಕರು ಅಸಾಧಾರಣ ದೃಶ್ಯ ಗುಣಮಟ್ಟ, ಅಪೂರ್ವ ಆಡಿಯೋ ಮತ್ತು ಸಪೂರ ವಿನ್ಯಾಸಗಳನ್ನು ನಿರೀಕ್ಷೆ ಮಾಡಬಹುದು. ಇದಲ್ಲದೆ ಎಐ ಬಳಕೆಯಿಂದ 8ಕೆ ಎಐ ಅಪ್‌ಸ್ಕೇಲಿಂಗ್ ಮತ್ತು ಎಐ ಮೋಷನ್‌ ಎನ್ ಹ್ಯಾನ್ಸರ್ ಪ್ರೊ ನಂತಹ ಫೀಚರ್‌ಗಳು ಕ್ರಿಕೆಟ್ ನೇರಪ್ರಸಾರದ ಸಂದರ್ಭದಲ್ಲಿ ಬಾಲ್ ಅನ್ನು ಸ್ಪಷ್ಟವಾಗಿ ಕಾಣಿಸುವ ಮೂಲಕ ಗ್ರಾಹಕರಿಗೆ ಅದ್ಭುತ ಕ್ರಿಕೆಟ್ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ ಎಂದು ತಿಳಿಸಿದ್ದಾರೆ.

ಸ್ಯಾಮ್‌ಸಂಗ್ ಕಂಪನಿಯು ಭಾರತೀಯ ಗ್ರಾಹಕರಿಗಾಗಿಯೇ ಪ್ರಾದೇಶಿಕವಾಗಿ ಸಿದ್ಧಗೊಳಿಸಲಾದ ಸ್ಮಾರ್ಟ್ ಅನುಭವಗಳನ್ನು ನೀಡಲು ಈ ಟಿವಿಗಳಲ್ಲಿ ಗೇಮಿಂಗ್, ಮನರಂಜನೆ, ಶಿಕ್ಷಣ ಮತ್ತು ಫಿಟ್‌ನೆಸ್‌ನಂತಹ ಸೌಲಭ್ಯಗಳನ್ನು ಒದಗಿಸಿದೆ. ಕ್ಲೌಡ್ ಗೇಮಿಂಗ್ ಸೇವೆಯು ಬಳಕೆದಾರರಿಗೆ ಯಾವುದೇ ಕನ್ಸೋಲ್ ಅಥವಾ ಪಿಸಿ ಅಗತ್ಯವಿಲ್ಲದೆಯೇ ಎಎಎ ಗೇಮ್‌ಗಳನ್ನು ಪ್ಲಗ್ ಮತ್ತು ಪ್ಲೇ ಮೂಲಕ ಆಡಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: Battery Life Tips: ಈ 5 ಸಲಹೆ ಪಾಲಿಸಿ; ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಿ!

ಸ್ಯಾಮ್‌ಸಂಗ್ ಎಜುಕೇಶನ್ ಹಬ್ ಬಳಕೆದಾರರಿಗೆ ಲೈವ್ ತರಗತಿಗಳ ಜತೆಗೆ ದೊಡ್ಡ ಪರದೆಯ ಕಲಿಕೆಯನ್ನು ಒದಗಿಸುತ್ತಿದ್ದು, ನಿಮ್ಮ ಮಕ್ಕಳಿಗೆ ಹೆಚ್ಚು ಸಂವಾದಾತ್ಮಕ ಮತ್ತು ಖುಷಿದಾಯ ಕಲಿಕೆಯ ಸೌಲಭ್ಯ ಒದಗಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಟಿವಿ ಕೀ ಕ್ಲೌಡ್ ಸೇವೆಯ ಮೂಲಕ ಕ್ಲೌಡ್ ಮೂಲಕ ವಿಷಯದ ನೇರ ಪ್ರಸಾರವನ್ನು ಒದಗಿಸುವುದರಿಂದ ಗ್ರಾಹಕರಿಗೆ ಇನ್ನು ಮುಂದೆ ಸೆಟ್-ಟಾಪ್ ಬಾಕ್ಸ್ ಅಗತ್ಯ ಇರುವುದಿಲ್ಲ. ಸ್ಯಾಮ್‌ಸಂಗ್ ಟಿವಿ ಪ್ಲಸ್ ಫೀಚರ್ ಸುದ್ದಿ, ಚಲನಚಿತ್ರಗಳು, ಮನರಂಜನೆ ಮತ್ತು ಇತ್ಯಾದಿಗಳನ್ನು ವೀಕ್ಷಿಸಲು 100+ ಚಾನೆಲ್‌ಗಳನ್ನು ಉಚಿತವಾಗಿ ಒದಗಿಸುತ್ತದೆ.

ನಿಯೋ ಕ್ಯೂಎಲ್ಇಡಿ 8ಕೆ

ನಿಯೋ ಕ್ಯೂಎಲ್ಇಡಿ 8ಕೆ ಶ್ರೇಣಿಯು ಎನ್‌ಕ್ಯೂ8 ಎಐ ಜೆನ್2 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಅದು ಎಐ-ಆಧರಿತ ಅನುಭವವನ್ನು ಒದಗಿಸುತ್ತದೆ ಮತ್ತು ಸ್ಪಷ್ಟವಾಗಿರುವ ಚಿತ್ರ ಗುಣಮಟ್ಟವನ್ನು ನೀಡುತ್ತದೆ. ಎನ್‌ಕ್ಯೂ8 ಎಐ ಜೆನ್2 ಪ್ರೊಸೆಸರ್, 256 ಎಐ ನ್ಯೂರಲ್ ನೆಟ್‌ವರ್ಕ್‌ಗಳಿಂದ ಚಾಲಿತವಾಗಿದ್ದು, ನೀವು ಓಟಿಟಿ ನೋಡುತ್ತಿರಲಿ, ನಿಮ್ಮ ಮೆಚ್ಚಿನ ವೀಡಿಯೊ ಗೇಮ್ ಗಳನ್ನು ಆಡುತ್ತಿರಲಿ ಅಥವಾ ಲೈವ್ ಕ್ರೀಡೆಗಳನ್ನು ವೀಕ್ಷಿಸುತ್ತಿರಲಿ ಎಲ್ಲಾ ಸಂದರ್ಭಗಳಲ್ಲೂ 8ಕೆ ಅನುಭವವನ್ನು ನೀಡುವಂತಹ ದೃಶ್ಯ ಮತ್ತು ಆಡಿಯೋ ಎರಡನ್ನೂ ಒದಗಿಸಲು ಸಹಾಯ ಮಾಡುತ್ತದೆ. ಸ್ಯಾಮ್‌ಸಂಗ್‌ನ ನಿಯೋ ಕ್ಯೂಎಲ್ಇಡಿ 8ಕೆ ಟಿವಿಗಳು ಮೋಷನ್ ಆಕ್ಸಲೇಟರ್ ಟರ್ಬೋ ಪ್ರೋ ಫೀಚರ್ ಹೊಂದಿದ್ದು, ಅದು ಹೆಚ್ಚಿನ ವೇಗದ ಗೇಮಿಂಗ್‌ ಆಡುವ ಸಂದರ್ಭದಲ್ಲಿ ದೃಶ್ಯಗಳನ್ನು ಸ್ಥಿರವಾಗಿ ಕಾಣಿಸುತ್ತದೆ ಮತ್ತು ಅಪೂರ್ವ ವೇಗವನ್ನು ಒದಗಿಸುತ್ತದೆ.

ನಿಯೋ ಕ್ಯೂಎಲ್ಇಡಿ 4ಕೆ 2024

ನಿಯೋ ಕ್ಯೂಎಲ್ಇಡಿ 4ಕೆ ಉತ್ಪನ್ನ ಶ್ರೇಣಿಯು ಎನ್‌ಕ್ಯೂ4 ಎಐ ಜೆನ್2 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಈ ಪ್ರೊಸೆಸರ್ ಯಾವುದೇ ವಿಷಯವನ್ನು ಅದ್ಭುತವಾದ 4ಕೆ ದೃಶ್ಯಾವಳಿಯಲ್ಲಿ ತೋರಿಸುತ್ತದೆ ಮತ್ತು ಪ್ರತೀ ದೃಶ್ಯಕ್ಕೂ ಜೀವ ತುಂಬುತ್ತದೆ. ಕ್ವಾಂಟಮ್ ಮ್ಯಾಟ್ರಿಕ್ಸ್ ತಂತ್ರಜ್ಞಾನದಿಂದ ಮತ್ತಷ್ಟು ಶಕ್ತಿ ತುಂಬಲ್ಪಟ್ಟಿದ್ದು, ಸಂಕೀರಣ ದೃಶ್ಯಗಳಲ್ಲಿಯೂ ಅತ್ಯುತ್ತಮ ದೃಶ್ಯ ವೈಭವವನ್ನು ಒದಗಿಸುತ್ತದೆ. ಆಡಿಯೋ ಅನುಭವ ಉನ್ನತೀಕರಿಸಲು ಡಾಲ್ಬಿ ಅಟ್ಮೋಸ್ ವ್ಯವಸ್ಥೆ ಇದೆ. ಒಟ್ಟಾರೆ ನಿಯೋ ಕ್ಯೂಎಲ್ಇಡಿ 4ಕೆ ಶ್ರೇಣಿಯ ಟಿವಿಗಳು ಅತ್ಯದ್ಭುತ 4ಕೆ ಅನುಭವ ನೀಡುತ್ತವೆ.

ಕ್ಯೂಎಲ್ಇಡಿ ಟಿವಿ

ಸ್ಯಾಮ್‌ಸಂಗ್‌ನ ಕ್ಯೂಎಲ್ಇಡಿ ಟಿವಿ ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ ಅತ್ಯದ್ಭುತ ದೃಶ್ಯ ಗುಣಮಟ್ಟವನ್ನು ಒದಗಿಸುತ್ತದೆ. 100% ಬಣ್ಣ ಸ್ಪಷ್ಟತೆ ಹೊಂದಿರುವುದರಿಂದ ಈ ಟಿವಿ, ಎಷ್ಟೇ ಬ್ರೈಟ್‌ನೆಸ್ ಇದ್ದರೂ ಜಾಸ್ತಿ ಮಾಡಿದರೂ ಕಡಿಮೆ ಇದ್ದರೂ ಸೂಕ್ತವಾದ ಬಣ್ಣಗಳನ್ನೇ ಕಾಣಿಸುತ್ತವೆ. ಇದರ ಅಲ್ಟ್ರಾ-ಸ್ಲಿಮ್ ವಿನ್ಯಾಸವು ಯಾವುದೇ ರೀತಿ ಮನೆಯೊಳಗೆ ಸುಂದರವಾಗಿ ಕಾಣಿಸುತ್ತದೆ. ನೀವು ವಾಸಿಸುವ ಸ್ಥಳದ ಸೊಬಗನ್ನು ಹೆಚ್ಚಿಸುತ್ತದೆ.

ಒಎಲ್ಇಡಿ ಟಿವಿ

ಪ್ರಪಂಚದ ಮೊದಲ ಗ್ಲೇರ್-ಫ್ರೀ ಓಎಲ್ಇಡಿ ಟಿವಿ ಯಾವುದೇ ರೀತಿಯ ಬೆಳಕು ಇದ್ದರೂ ಗಾಢ ಕಪ್ಪು ಮತ್ತು ಸ್ಪಷ್ಟ ದೃಶ್ಯಗಳನ್ನು ಪ್ರಸಾರ ಮಾಡುವಾಗ ಯಾವುದೇ ರೀತಿಯ ಅನಗತ್ಯ ರಿಫ್ಲೆಕ್ಷನ್‌ಗಳನ್ನು (ಪ್ರತಿಬಿಂಬ) ಕಾಣಿಸುವುದಿಲ್ಲ. ಈ ಟಿವಿಗಳೂ ಅದೇ ಅಸಾಧಾರಣ ಎನ್‌ಕ್ಯೂ4 ಎಐ ಜೆನ್2 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ.

ಸ್ಯಾಮ್‌ಸಂಗ್‌ನ ಓಎಲ್ಇಡಿ ಟಿವಿಗಳು ರಿಯಲ್ ಡೆಪ್ತ್ ಎನ್‌ಹಾನ್ಸರ್ ಮತ್ತು ಒಎಲ್ಇಡಿ ಎಚ್‌ಡಿಆರ್ ಪ್ರೊನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಅದರಿಂದ ದೃಶ್ಯದ ಗುಣಮಟ್ಟವನ್ನು ಮತ್ತಷ್ಟು ಉನ್ನತೀಕರಿಸುತ್ತದೆ. ಜತೆಗೆ ಮೋಷನ್ ಆಕ್ಸಲೇಟರ್ 144 ಹರ್ಟ್ಜ್ ಫೀಚರ್ ಸುಗಮ ಚಲನೆ ಮತ್ತು ವೇಗದ ತ್ವರಿತ ಪ್ರತಿಕ್ರಿಯೆ ಸೌಲಭ್ಯ ಒದಗಿಸುತ್ತಿದ್ದು, ಆದ್ದರಿಂದಲೇ ಸ್ಯಾಮ್ ಓಎಲ್ಇಡಿ ಗೇಮಿಂಗ್‌ಗೆ ಸೂಕ್ತ ಆಯ್ಕೆಯಾಗಿದೆ. ಸಪೂರವಾದ ವಿನ್ಯಾಸ ಹೊಂದಿರುವ ಈ ಓಎಲ್ಇಡಿ ಟಿವಿಗಳು ಮನೆಯಲ್ಲಿ ಎಲ್ಲಿ ಟಿವಿ ಇಟ್ಟಿದ್ದೀರೋ ಆ ಸ್ಥಳದ ಸೊಬಗು ಹೆಚ್ಚಿಸುತ್ತದೆ.

ಇದನ್ನೂ ಓದಿ: World Bicycle Day: ಸೈಕಲ್‌ ಹೊಡೆಯುವುದರ ಲಾಭಗಳು ನಾವಂದುಕೊಂಡಿದ್ದಕ್ಕಿಂತ ಹೆಚ್ಚು!

ಯುಎಚ್‌ಡಿ ಟಿವಿ

ಸ್ಯಾಮ್‌ಸಂಗ್‌ನ ಯುಎಚ್‌ಡಿ ಟಿವಿ ವಿಶಿಷ್ಟವಾದ ಕ್ರಿಸ್ಟಲ್ ಕಲರ್ ತಂತ್ರಜ್ಞಾನ ಹೊಂದಿದ್ದು, ಬಣ್ಣಗಳಿಗೆ ಜೀವ ತುಂಬುತ್ತದೆ, ಪ್ರತಿ ಛಾಯೆಯಲ್ಲೂ ಸೂಕ್ಷ್ಮ ವಿವರಗಳನ್ನು ಕಾಣಿಸುತ್ತದೆ ಮೋಷನ್ ಆಕ್ಸಲೇಟರ್ ಫೀಚರ್ ವೇಗವಾಗಿ ಚಲಿಸುವ ದೃಶ್ಯಗಳನ್ನು ಸುಗಮವಾಗಿ ಮತ್ತು ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರತಿ ಗೇಮ್, ಚಲನಚಿತ್ರ ಅಥವಾ ಯಾವುದೋ ಶೋ ಅನ್ನು ಹೆಚ್ಚು ಸೊಗಸಾಗಿ ಕಾಣಿಸುತ್ತದೆ ಮತ್ತು ಆನಂದಿಸುವಂತೆ ಮಾಡುತ್ತದೆ.

Continue Reading
Advertisement
IND vs PAK
ಕ್ರಿಕೆಟ್6 mins ago

IND vs PAK: ಭಾರತ ವಿರುದ್ಧ ಶಾಂತ ಚಿತ್ತರಾಗಿ ಆಡುವ ಉಪಾಯ ಮಾಡಿದ ಕುತಂತ್ರಿ ಪಾಕ್​

Bangalore Rain
ಪ್ರಮುಖ ಸುದ್ದಿ13 mins ago

Bangalore Rain: ರಾಜಕಾಲುವೆ ಒತ್ತುವರಿ; ಮುಲಾಜಿಲ್ಲದೆ ತೆರವು ಮಾಡಲು ಡಿಕೆಶಿ ಸೂಚನೆ

Stock Market
ವಾಣಿಜ್ಯ24 mins ago

Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್‌ ಏರಿಕೆ

Dharwad Lok Sabha Constituency
ಧಾರವಾಡ33 mins ago

Dharwad Lok Sabha Constituency: ಜೋಶಿ vs ಅಸೂಟಿ; ಯಾವ ಅಭ್ಯರ್ಥಿಗೆ ಧಾರವಾಡ ಪೇಡಾ?

Anant Ambani Radhika Merchant Pre Wedding
ಫ್ಯಾಷನ್46 mins ago

Anant Ambani Radhika Merchant Pre Wedding: ಅಂಬಾನಿ ಫ್ಯಾಮಿಲಿಯ ಕ್ರ್ಯೂಸ್ ಟೂರ್‌ನಲ್ಲಿ ಸ್ಟಾರ್‌ಗಳ ಮಕ್ಕಳ ಲುಕ್‌ ಹೇಗಿದೆ ನೋಡಿ!

Vijaypur Lok Sabha Constituency
ವಿಜಯಪುರ52 mins ago

Vijaypur Lok Sabha Constituency: ವಿಜಯಪುರದಲ್ಲಿ ಅಧಿಕಾರದ ‘ಗೋಲ ಗುಮ್ಮಟ’ ಯಾರಿಗೆ?

IND vs PAK
ಕ್ರಿಕೆಟ್1 hour ago

IND vs PAK: ಸ್ನೈಪರ್ ಗನ್​ ಕಣ್ಗಾವಲಿನಲ್ಲಿ ಭಾರತ-ಪಾಕ್ ಟಿ20​ ವಿಶ್ವಕಪ್​ ಪಂದ್ಯ

Lok Sabha Election Result 2024
ದೇಶ1 hour ago

Lok Sabha Election Result 2024: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ; ಯಾರಿಗೆ ಅಧಿಕಾರ? ನಿಮ್ಮ ಅಭಿಪ್ರಾಯ ತಿಳಿಸಿ

Maldives
ವಿದೇಶ1 hour ago

Maldives: ಇಸ್ರೇಲಿಗರ ಪ್ರವೇಶವನ್ನು ನಿಷೇಧಿಸಿದ ಮಾಲ್ಡೀವ್ಸ್‌; ಭಾರತದ ಬೀಚ್‌ಗೆ ತೆರಳಿ ಎಂದು ತಿರುಗೇಟು ನೀಡಿದ ಇಸ್ರೇಲ್‌

Cow including lineman dies of electric shock
ಉಡುಪಿ2 hours ago

Electric shock : ಪ್ರತ್ಯೇಕ ಕಡೆ‌ ಕರೆಂಟ್‌ ಶಾಕ್‌ಗೆ ಲೈನ್‌ಮ್ಯಾನ್‌ ಸೇರಿ ಹಸು ಬಲಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌