ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು - Vistara News

ಪ್ರಮುಖ ಸುದ್ದಿ

ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು

ವಿಸ್ತಾರ ಮೀಡಿಯಾ ಪ್ರೈ. ಲಿ. ಸಂಸ್ಥೆಯ ಟಿವಿ ಚಾನೆಲ್‌ನ ಲೋಗೊ ಮತ್ತು ವಿಸ್ತಾರ ಡಿಜಿಟಲ್ ನ್ಯೂಸ್ ವೆಬ್‌ಸೈಟ್ ಅನಾವರಣಗೊಂಡಿದೆ. ಈ ಮಾಧ್ಯಮ ಸಂಸ್ಥೆ ಆರಂಭಿಸಿರುವ ಉದ್ದೇಶ ಏನು? ಇದರ ಗುರಿ ಏನು? ಧ್ಯೇಯ ಧೋರಣೆಗಳೇನು ಎಂಬ ಬಗ್ಗೆ ಸಂಸ್ಥೆಯ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಇಲ್ಲಿ ಮುಕ್ತವಾಗಿ ವಿವರಿಸಿದ್ದಾರೆ.

VISTARANEWS.COM


on

Hariprakash Konemane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮಸ್ಕಾರ..
ನಾನು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬರೊಬ್ಬರಿ ಇಪ್ಪತ್ತು ವರ್ಷಗಳಾದವು. ಇದುವರೆಗೆ ಹೆಚ್ಚು ಕಾಲ ಮುದ್ರಣ ಮಾಧ್ಯಮದಲ್ಲಿ, ಅಲ್ಪಕಾಲ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡಿ ಇದೀಗ ಸಂಪೂರ್ಣವಾಗಿ ಡಿಜಿಟಲ್ ಮತ್ತು ಟಿವಿ ಮಾಧ್ಯಮದ ಕಡೆಗೆ ಮುಖ ಮಾಡಿದ್ದೇನೆ.

ಈ ಬದಲಾವಣೆ ಪರ್ವದಲ್ಲಿ ಅನೇಕರು ಅನೇಕ ತೆರನಾದ ಪ್ರಶ್ನೆಗಳನ್ನು ಕೇಳಿದ್ದಾರೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಆ ಎಲ್ಲ ಸಂಗತಿಗಳನ್ನು ಒಂದೆಡೆ ಕ್ರೋಡೀಕರಿಸಿ, ಹಲವು ವಿಚಾರಗಳಿಗೆ ಸಂಬಂಧಿಸಿದ ಅಭಿಪ್ರಾಯ / ನಿಲುವನ್ನು ಹಂಚಿಕೊಳ್ಳುವ ಪುಟ್ಟ ಯತ್ನ ನನ್ನದು. ಇದನ್ನು ನನ್ನೆಲ್ಲ ಓದುಗರು ಹಾಗೂ ವೀಕ್ಷಕರೊಂದಿಗಿನ ಮುಕ್ತ ಮಾತು ಎಂದರೆ ಚೆನ್ನ.

ಪ್ರಶ್ನೆ: ಮುದ್ರಣ ಮಾಧ್ಯಮ ಕ್ಷೇತ್ರದಲ್ಲೇ ಬಹುಕಾಲ ಇದ್ದವರು ನೀವು. ಈ ಹಿಂದೆ ವಿಜಯವಾಣಿ ಸಂಪಾದಕರಾಗಿದ್ದಿರಿ, ಇದೀಗ ವಿಜಯಕರ್ನಾಟಕ ಪತ್ರಿಕೆ ಸಂಪಾದಕ ಸ್ಥಾನ ತೊರೆದು ಡಿಜಿಟಲ್ ಮಾಧ್ಯಮ ಮತ್ತು ಟಿವಿಯತ್ತ ಬಂದಿದ್ದೀರಿ. ಈ ಮಹತ್ವದ ನಿರ್ಧಾರಕ್ಕೆ ಮುಖ್ಯ ಕಾರಣ ಏನು?

ಉತ್ತರ: ಒಟ್ಟಾರೆ ಮಾಧ್ಯಮ ಕ್ಷೇತ್ರವೇ ವೇಗವಾಗಿ ಬದಲಾಗುತ್ತಿದೆ. ಬದಲಾಗುತ್ತಿದೆ ಎಂದರೆ ತಪ್ಪಾಗಬಹುದು. ಅದಕ್ಕಿಂತ ಹೆಚ್ಚಾಗಿ Evolve ಆಗುತ್ತಿದೆ / ವಿಕಾಸವಾಗುತ್ತಿದೆ ಎಂಬುದು ಸರಿಯಾದ ಹೇಳಿಕೆ. ಸಂಘಜೀವಿಯಾದ ಮಾನವ ತನ್ನದೇ ಸ್ಥಳೀಯ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಬೇಕೆಂಬುದರ ಜತೆಗೆ ಪ್ರಪಂಚದ ಬೇರೆಡೆಗಳಲ್ಲೂ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಹಿಂದೆಂದಿಗಿಂತಲೂ ಇಂದು ಹೆಚ್ಚು ಕುತೂಹಲಿಯಾಗಿದ್ದಾನೆ. ಆ ಹಂಬಲದ ಜತೆಗೆ, ಇಂದು, ಆತನಿಗೆ ಅದರ ಅನಿವಾರ್ಯತೆಯೂ ಬಂದೊದಗಿದೆ.

ಕಾಲಾನುಕ್ರಮದಲ್ಲಿ, ತಂತ್ರಜ್ಞಾನ ವಿಕಾಸಗೊಂಡಂತೆ ಮಾಹಿತಿಯನ್ನು ಪಡೆಯುವ ಅಥವಾ ಆ ಮಾಹಿತಿಯನ್ನು Consumption ಮಾಡುವ ವಿಧಾನದಲ್ಲಿ ತೀವ್ರತರವಾದ ಬದಲಾವಣೆ ಆಗುತ್ತಿದೆ. ಜನರು ತಮ್ಮ ಕೈಲಿರುವ ಮೊಬೈಲ್ ಫೋನ್‌, ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಟ್ಯಾಬ್‌ಗಳ ಮೂಲಕವೇ ಇಡೀ ಜಗತ್ತನ್ನು ನೋಡಲು, ತಿಳಿಯಲು ಬಯಸುತ್ತಿದ್ದಾರೆ. ಈ ಹಿಂದೆಲ್ಲ ಓದಲು ಪುಸ್ತಕಗಳು, ಪತ್ರಿಕೆಗಳು ಇತ್ಯಾದಿ; ಆಡಿಯೊ ಕೇಳಲು ರೇಡಿಯೊ; ವಿಡಿಯೊ ವೀಕ್ಷಿಸಲು ಟಿವಿ, ಸಿಡಿಗಳ ಮೊರೆ ಹೋಗಬೇಕಿತ್ತು. ಕೇವಲ ಸಂವಹನ, ಸಂಭಾಷಣೆಯ ಮಾಧ್ಯಮವಾಗಿ ಎಂಟ್ರಿ ಪಡೆದ ಮೊಬೈಲ್ ಲೆಕ್ಕ (Compute) ಮಾಡಲೆಂದು ಬಂದ ಕಂಪ್ಯೂಟರ್‌ಗಳು ಈಗ ಆ ಮೂರೂ ಅಂಶಗಳನ್ನು ಒಳಗೊಂಡಿವೆ. ಅಂದರೆ ಅಕ್ಷರ, ಆಡಿಯೊ, ವಿಡಿಯೊಗಳನ್ನು ಒಟ್ಟಿಗೇ ಒದಗಿಸುತ್ತಿದೆ. ಈ ಕ್ಷೇತ್ರದಲ್ಲಿ ಭವಿಷ್ಯದಲ್ಲೂ ಕೂಡ ಕ್ಷಿಪ್ರಗತಿಯ ಬದಲಾವಣೆ ಆಗುವುದಿದೆ. ಈ ವಾಸ್ತವದ ತಳಹದಿಯಲ್ಲಿ ಮಾಧ್ಯಮ ಸಂಸ್ಥೆ ಕಟ್ಟುವ ಬಯಕೆಯನ್ನು ನಾವು ಹೊಂದಿದ್ದೇವೆ.

ಪ್ರಶ್ನೆ: ಹಾಗಾದರೆ ಪ್ರಿಂಟ್ ಮಾಧ್ಯಮಕ್ಕೆ ಭವಿಷ್ಯವೇ ಇಲ್ಲವೇ?
ಉತ್ತರ: ಪ್ರಿಂಟ್ ಮಾಧ್ಯಮಕ್ಕೆ ಭವಿಷ್ಯ ಇದೆ ಅಥವಾ ಇಲ್ಲ ಎಂಬ ಎರಡೂ ವಾದಗಳು ಸತ್ಯ. ಹೌದು, ಈಗಿರುವ ಫಾರ್ಮೇಟ್‌ನಲ್ಲಿ ಮುಂದುವರಿದರೆ ಪ್ರಿಂಟ್ ಮಾಧ್ಯಮಕ್ಕೆ ಭವಿಷ್ಯ ಇಲ್ಲ. ಫಾರ್ಮೇಟ್ ಬದಲಿಸಿಕೊಂಡರೆ ಪ್ರಿಂಟ್ ಮಾಧ್ಯಮಕ್ಕೆ ಭವಿಷ್ಯ ಇದೆ. ನಿನ್ನೆ ಮೊನ್ನೆ ನಡೆದ ಹಳೆಯ ಘಟನೆಗಳನ್ನು ವರದಿ ಮಾಡುವುದಕ್ಕಷ್ಟೇ ಪತ್ರಿಕೆಗಳನ್ನು ಪ್ರಿಂಟ್ ಮಾಡುವುದು It is a national waste in my opinion! ಇದನ್ನು ಯಾರೂ ಅನ್ಯಥಾ ಭಾವಿಸಬಾರದು.

ಪ್ರಶ್ನೆ: ಈಗಾಗಲೇ ಡಿಜಿಟಲ್ ಮಾಧ್ಯಮದಲ್ಲಿ ಸಾಕಷ್ಟು ಪ್ಲೇಯರ್‌ಗಳಿದ್ದಾರೆ. ಡಿಜಿಟಲ್ ಮಾಧ್ಯಮ ಸಂಸ್ಥೆಗಳಿವೆ. ಟಿವಿ ಚಾನೆಲ್‌ಗಳೂ ಇವೆ. ಇಷ್ಟೆಲ್ಲದರ ನಡುವೆ ಹೊಸ ಮಾಧ್ಯಮಕ್ಕೆ ಸ್ಥಳಾವಕಾಶ (Space) ಇದೆಯೇ?

ಉತ್ತರ: ನೋಡಿ, ಯಾವುದಕ್ಕೂ, ಯಾರೊಬ್ಬರಿಗೂ ಎಲ್ಲೂ ಸ್ಪೇಸ್ ರಿಸರ್ವ್ ಆಗಿರುವುದಿಲ್ಲ. ಭಾರತದಂತಹ ಜನದಟ್ಟಣೆಯ ದೇಶದಲ್ಲಂತೂ ಸ್ಪೇಸ್ ರಿಸರ್ವ್ ಆಗಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ಅದನ್ನೇ ಪಾಸಿಟಿವ್ ಆಗಿ ನೋಡಿದರೆ, ಭಾರತದಂತಹ ದೇಶದಲ್ಲಿ ಅಗಾಧ ಜನಸಂಖ್ಯೆಯ ಅವಶ್ಯಕತೆಗಳನ್ನು ಪೂರೈಸಲು ಅದೆಷ್ಟೇ ಸೇವಾಕರ್ತರು ಬಂದರೂ ಎಲ್ಲ ಕ್ಷೇತ್ರಗಳಲ್ಲಿ ಸ್ಪೇಸ್ ಸಿಕ್ಕೇ ಸಿಗುತ್ತದೆ. ಅಂದರೆ ಎಷ್ಟೇ ಹೊಸ ಹೊಸ ಸಂಸ್ಥೆಗಳು ಬಂದರೂ ಎಲ್ಲರನ್ನೂ ತಲುಪಲಾಗದಷ್ಟು ದೊಡ್ಡ, ಸಂಕೀರ್ಣ, ವೈವಿಧ್ಯಮಯ ದೇಶ ನಮ್ಮದು. ನಾವು ಹೇಗೆ ವಿಚಾರಗಳನ್ನು ಗ್ರಹಿಸುತ್ತೇವೆ ಮತ್ತು ಪ್ರಸ್ತುತಪಡಿಸುತ್ತೇವೆ ಎಂಬುದರ ಮೇಲೆ ಸ್ಪೇಸ್ ಇದೆಯೇ ಇಲ್ಲವೇ ಎಂಬುದು ನಿರ್ಧರಿತವಾಗುತ್ತದೆ. ಉದಾ: ಕನ್ನಡ ಮಾಧ್ಯಮ ಲೋಕದಲ್ಲಿ ವಿಜಯ ಕರ್ನಾಟಕ ಪತ್ರಿಕೆ ಬರುವ ಮುನ್ನ ʼಮುದ್ರಣ ಮಾಧ್ಯಮದಲ್ಲಿ ಈಗಾಗಲೇ ದಿಗ್ಗಜರಿದ್ದಾರೆ ಎಲ್ಲಿ ಸ್ಪೇಸ್ ಇದೆ?ʼ ಎಂಬ ಪ್ರಶ್ನೆ ಇತ್ತು. ಅದರ ಬೆನ್ನಲ್ಲೇ ವಿಜಯವಾಣಿ ಪತ್ರಿಕೆ ಬಂದಾಗಲಂತೂ ಇದೇ ಪ್ರಶ್ನೆಯನ್ನು ಹೋದಲ್ಲಿ ಬಂದಲ್ಲಿ ಕೇಳುತ್ತಿದ್ದರು. ವಿಜಯ ಕರ್ನಾಟಕವನ್ನು ನಂಬರ್ ಒನ್ ಪತ್ರಿಕೆ ಮಾಡಲು ಆರೇಳು ವರ್ಷ ಹಿಡಿಯಿತು. ಆದರೆ ವಿಜಯವಾಣಿ ಪತ್ರಿಕೆ ಕೇವಲ 24 ತಿಂಗಳಲ್ಲಿ ನಂಬರ್ ಒನ್ ಪತ್ರಿಕೆಯಾಗಿ ದೇಶದ ಮಾಧ್ಯಮ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಹೊಸ ಪತ್ರಿಕೆ ಆಗಮನದಿಂದ ಕನ್ನಡದ ಪತ್ರಕರ್ತರಿಗೆ, ಓದುಗರಿಗೆ, ವಿತರಕರಿಗೆ, ಜಾಹೀರಾತುದಾರರಿಗೆ ದೊಡ್ಡ ಲಾಭ ಆಯಿತು. ಕನ್ನಡ ಮಾಧ್ಯಮ ಅಗಾಧವಾಗಿ ವಿಸ್ತಾರವಾಯಿತು. ಆ ವಿಷಯದಲ್ಲಿ ಡಾ. ವಿಜಯ ಸಂಕೇಶ್ವರರಿಗೆ ನನ್ನದೊಂದು ದೊಡ್ಡ ಸಲಾಮು ಸದಾ ಇರುತ್ತದೆ. ಇನ್ನೂ ಒಂದು ವಿಚಾರ ಏನೆಂದರೆ ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು ಬರುವ ಪೂರ್ವದಲ್ಲಿ ಹಾಗೂ ಆನಂತರ ಅನೇಕ ಪತ್ರಿಕೆಗಳು ಬಂದಿದ್ದವು. ಅವೆಲ್ಲವೂ ಬದುಕಲಿಲ್ಲ, ಬಾಳಲಿಲ್ಲ. ವೆರಿ ಸಿಂಪಲ್ ಆಗಿ ಹೇಳಬೇಕೆಂದರೆ ಹುಟ್ಟುವ ಪ್ರತಿ ಮಗು ನನಗೆಲ್ಲಿ ಸ್ಪೇಸ್ ಎಂದು ಕೇಳಿದ್ದರೆ ಜಗತ್ತು ಏನಾಗುತ್ತಿತ್ತು? ಹುಟ್ಟಿದ ಮಕ್ಕಳೆಲ್ಲ ಬಾಳುತ್ತಾರಾ? ಈ ವಿಷಯದಲ್ಲಿ ಡಾರ್ವಿನ್ನನ ಥಿಯರಿ ಹೆಚ್ಚು ಪ್ರಸ್ತುತ. ಫಿಟ್ ಆ್ಯಂಡ್ ಫೈನ್ ಆಗಿರಬೇಕೆನ್ನುವವರಿಗೆ ಸ್ಪೇಸ್ ಸದಾ ಇದ್ದೇ ಇರುತ್ತದೆ.

ಪ್ರಶ್ನೆ: ಹಾಗಾದರೆ ಕರ್ನಾಟಕದ ಡಿಜಿಟಲ್ ಹಾಗೂ ಟಿವಿ ಕ್ಷೇತ್ರದಲ್ಲಿ ಓದುಗರು ಮತ್ತು ವೀಕ್ಷಕರನ್ನು ಪಡೆಯಲು ದೊಡ್ಡ ಹಗ್ಗ ಜಗ್ಗಾಟ ಶುರುವಾಗುತ್ತದೆಯೇ?

ಉತ್ತರ: ಖಂಡಿತ ಇಲ್ಲ, ಇದು ಒಬ್ಬರ ಗ್ರಾಹಕರನ್ನು ಇನ್ನೊಬ್ಬರು ಸೆಳೆಯುವ ಮಾತಲ್ಲ.

ನಾವು ಸ್ಪೇಸ್ ಪಡೆದುಕೊಳ್ಳಲು ಇನ್ನೊಬ್ಬರು ಕಳೆದುಕೊಳ್ಳಬೇಕೆಂದಿಲ್ಲ. ಒಬ್ಬರ ಬೆಳೆವಣಿಗೆಗೆ ಮತ್ತು ಇನ್ನೊಬ್ಬರ ಅವನತಿಗೆ ಅದರದ್ದೇ ಆದ ಕಾರ್ಯಕಾರಣಗಳಿರುತ್ತವೆ.

ಉದಾಹರಣೆಗೆ ನಾನು ಪ್ರಧಾನ ಸಂಪಾದಕನಾಗಿ ಕೆಲಸ ಮಾಡಿದ ವಿಜಯವಾಣಿ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳ ಸಫಲತೆಯಲ್ಲಿ ಒಬ್ಬರ ಗ್ರಾಹಕರನ್ನು ಇನ್ನೊಬ್ಬರು ಕಿತ್ತುಕೊಳ್ಳುವ ಆಟ ನಡೆಯಲೇ ಇಲ್ಲ. ಬದಲಾಗಿ ಸ್ಪರ್ಧಾತ್ಮಕತೆಯಲ್ಲಿ ಎಲ್ಲರೂ ಒಂದಿಷ್ಟು ಹೊಸತನ ಮತ್ತು ಹೊಸ ಗ್ರಾಹಕರನ್ನು ಪಡೆದರು. ಆ ಎರಡೂ ಸಂದರ್ಭಗಳಲ್ಲಿ ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ ಹಿಗ್ಗಿತು. ಹೊಸ ಓದುಗರನ್ನು ಸೆಳೆಯುವ ಯತ್ನದಲ್ಲಿ ಯಶಸ್ಸು ಸಿಕ್ಕಿತು.

ಒಟ್ಟಿನಲ್ಲಿ, ಹೊಸತನ ತರಬಲ್ಲ ಮಾಧ್ಯಮಗಳು ಬಂದರೆ, ಮಾರುಕಟ್ಟೆ ತನ್ನಿಂತಾನೆ ವಿಸ್ತರಿಸುತ್ತದೆ ಎನ್ನುವುದು ಸ್ಥಾಪಿತವಾಗಿದೆ. ಇದರಿಂದ ಇಡೀ ಮಾಧ್ಯಮ ಲೋಕಕ್ಕೆ ಲಾಭವಾಗಿದೆ. ವಿಸ್ತಾರ, ಹೆಸರಿಗೆ ತಕ್ಕಂತೆ ಮಾಧ್ಯಮ ಜಗತ್ತನ್ನೂ, ಜನರ ಮನಸ್ಸನ್ನೂ ವಿಸ್ತರಿಸುವ ಪ್ರಯತ್ನ ಮಾಡಲಿದೆ.  ಇದುವರೆಗೆ ಯಾರೂ ತಲುಪದ ಗಮ್ಯವನ್ನು ತಲುಪಬೇಕೆಂಬ ಹಂಬಲ ಇದೆ, ಗುರಿ ಇದೆ. ಆ ನಿಟ್ಟಿನಲ್ಲಿ ಸ್ಪಷ್ಟವಾದ ಕಾರ್ಯಸೂಚಿಯನ್ನು ಸಿದ್ಧಪಡಿಸಿಕೊಂಡು ಹೆಜ್ಜೆ ಮುಂದಿಡುತ್ತಿದ್ದೇವೆ.

ಸಂಸ್ಥೆಯ ಚೇರ್ಮನ್‌ ಮತ್ತು ಎಂ.ಡಿ. ಎಚ್. ವಿ. ಧರ್ಮೇಶ್, ಸಂಸ್ಥೆಯ ನಿರ್ದೇಶಕರಾದ ಶ್ರೀನಿವಾಸ ಹೆಬ್ಬಾರ್ ಅವರ ಜತೆ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ

ಪ್ರಶ್ನೆ: ಮಾಧ್ಯಮ ಸಂಸ್ಥೆ ಆರಂಭಕ್ಕೆ ದೊಡ್ಡ ಮಟ್ಟದ ಹೂಡಿಕೆ ಬೇಕಾಗುತ್ತದಲ್ಲವೇ? ಬರೀ ಪತ್ರಕರ್ತರಾಗಿದ್ದ ನೀವು ಮಾಧ್ಯಮ ಸಂಸ್ಥೆ ಆರಂಭಿಸುವುದರ ಹಿಂದಿನ ಹೂಡಿಕೆದಾರರು ಯಾರು? ರಾಜಕೀಯದವರೇನಾದರೂ…

ಉತ್ತರ: ಪ್ರಸಕ್ತ ಸನ್ನಿವೇಶದಲ್ಲಿ ಇದು ಎಲ್ಲರೂ ಕೇಳುವ ಮತ್ತು ಉತ್ತರಿಸಲೇಬೇಕಾದ ಮುಖ್ಯ ವಿಚಾರ. ಮಾಧ್ಯಮವೂ ಸೇರಿದಂತೆ ಯಾವುದೇ ಸಂಸ್ಥೆಯನ್ನು ಆರಂಭಿಸಲು ಈಗ ಬಂಡವಾಳ ಅಥವಾ ಹೂಡಿಕೆ ಸಮಸ್ಯೆಯೇ ಅಲ್ಲ. ಶ್ರೀಮಂತರು ಮಾತ್ರ ಸಂಸ್ಥೆ ಕಟ್ಟಬಹುದು ಎಂಬ ಹಳೆಯ ಸೂತ್ರ ಈಗ ಬದಲಾಗಿದೆ. ಕೈಯಲ್ಲಿ ಒಂದು ರೂ. ಇಲ್ಲದಿದ್ದರೂ ಪ್ರತಿಭೆ, ಐಡಿಯಾ ಮತ್ತು ಕೌಶಲ ಇದ್ದರೆ ಈಗ ಯಾರು ಬೇಕಾದರು ಹೊಸ ಸಂಸ್ಥೆಯನ್ನು ಕಟ್ಟಿ ಬೆಳೆಸಬಹುದು. ಇಂಥ ಕಡೆ ಹಣ ಹೂಡಲು ದೇಶದಿಂದ ಮಾತ್ರವಲ್ಲ, ವಿದೇಶಗಳಿಂದಲೂ ಸಾಕಷ್ಟು ಉತ್ಸಾಹಿಗಳು ಮುಂದೆ ಬರುತ್ತಾರೆ. ವೃತ್ತಿಪರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಈ ವ್ಯವಸ್ಥೆಯಲ್ಲಿನ ಮತ್ತೊಂದು ಹೆಚ್ಚುಗಾರಿಕೆ. ನಮ್ಮ ದೇಶದಲ್ಲಿ ಹಲವಾರು ಪ್ರತಿಭಾವಂತರು ಯಾವುದೇ ಸ್ವಂತ ಬಂಡವಾಳದ ಬಲ ಇಲ್ಲದೆ ಸ್ಟಾರ್ಟ್ಅಪ್ ಆರಂಭಿಸಿ ಸಾವಿರ ಕೋಟಿ ರೂ. ವಹಿವಾಟು ದಾಟಿರುವ ಸಾಧನೆ ನಮ್ಮ ಕಣ್ಣ ಮುಂದೆಯೇ ಇದೆ.

ಖಡಾಖಂಡಿತವಾಗಿ ಹೇಳಬೇಕಾದ ಸಂಗತಿಯೆಂದರೆ ನಮ್ಮ ಸಂಸ್ಥೆ ರಾಜಕೀಯದವರ ಹಣವನ್ನು ಇಲ್ಲಿಯವರೆಗೆ ಪಡೆದಿಲ್ಲ ಮತ್ತು ಮುಂದೆಯೂ ಪಡೆಯುವುದಿಲ್ಲ. ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಕೇಂದ್ರ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಾಯಿತ ಸಂಸ್ಥೆ. ಹೀಗಾಗಿ ನಮ್ಮ ಸಂಸ್ಥೆಯ ಪ್ರಮೋಟರ್, ಡೈರೆಕ್ಟರ್ ಮಂಡಳಿ, ಹೂಡಿಕೆ, ನೆಟ್‌ವರ್ತ್ , ಆಡಿಟ್ ರಿಪೋರ್ಟ್ ಎಲ್ಲವೂ ಆಸಕ್ತರ ವೀಕ್ಷಣೆಗೆ ಲಭ್ಯವಿದೆ. ಮುಖ್ಯವಾಗಿ ನಮ್ಮ ಸಂಸ್ಥೆಯ ಎಂ.ಡಿ. ಶ್ರೀ ಎಚ್. ವಿ. ಧರ್ಮೇಶ್ ಮೊದಲ ತಲೆಮಾರಿನ ಯಶಸ್ವೀ ಉದ್ಯಮಿ. ನಮ್ಮೊಂದಿಗೆ ಸೇರಿ ಈಗ ಮಾಧ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಅವರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರಾಜಕೀಯದ ಸಂಬಂಧ ಇಲ್ಲವೇ ಇಲ್ಲ. ನಮ್ಮ ಸಂಸ್ಥೆಯ ನಿರ್ದೇಶಕರಾದ ಶ್ರೀ ಶ್ರೀನಿವಾಸ ಹೆಬ್ಬಾರ್​ ಅವರು ಟ್ರಾನ್ಸ್​ಪೋರ್ಟ್​ ಉದ್ಯಮದ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರು. ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಗೋ ಸಂರಕ್ಷಣೆ, ಸ್ವಚ್ಛತೆ ಮೊದಲಾದ ಕ್ಷೇತ್ರಗಳಲ್ಲಿ ಕೊಡುಗೆ ಸಲ್ಲಿಸುತ್ತಿರುವವರು. ಇದೀಗ ನಾವು ಹೊಸ ಮಾಧ್ಯಮ ಸಂಸ್ಥೆ ಆರಂಭಿಸಿದ್ದೇವೆ. ಈ ಡಿಜಿಟಲ್ ಮಾಧ್ಯಮ ಕ್ಷೇತ್ರ ಅತ್ಯಂತ ಪಾರದರ್ಶಕತೆ ಬಯಸುತ್ತದೆ ಮತ್ತು ರಾಜಕೀಯ ಸತ್ಯನಿಷ್ಠುರತೆ ನಿರೀಕ್ಷಿಸುತ್ತದೆ ಎಂಬ ಅರಿವು ನಮಗಿದೆ.

ಪ್ರಶ್ನೆ: ನೀವು ಆರಂಭಿಸಿರುವ ಪತ್ರಿಕೋದ್ಯಮದ ಸ್ವರೂಪ ಹೇಗಿರುತ್ತದೆ? ನಿಮ್ಮ ವೈಚಾರಿಕ ನಿಲುವು ಯಾವುದು?

ಉತ್ತರ: ಕೆಲ ವರ್ಷಗಳಿಂದೀಚೆಗೆ ಮಾಧ್ಯಮ ಸಂಸ್ಥೆಗಳ ಸುತ್ತ ಅನುಮಾನದ ಹುತ್ತ ಆವರಿಸಿಕೊಳ್ಳುತ್ತಿರುವುದು ನಿಜ. ಕೆಲ ಮಾಧ್ಯಮ ಸಂಸ್ಥೆಗಳು ಪಕ್ಷಗಳ, ರಾಜಕಾರಣಿಗಳ ಪರ ಇದ್ದಾರೆ ಎಂಬ ಭಾವನೆ ಇದೆ. ಕೆಲ ಸಂದರ್ಭಗಳಲ್ಲಿ ಕೆಲವು ಪತ್ರಕರ್ತರೇ ಭ್ರಷ್ಟಾಚಾರದಂತಹ ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳೂ ಬಂದಿವೆ. ಆಗಲೇ ಪ್ರಸ್ತಾಪಿಸಿದಂತೆ, ನಾವು ಪ್ರಾರಂಭಿಸಿರುವ ಡಿಜಿಟಲ್ ಮಾಧ್ಯಮ ಕ್ಷೇತ್ರದ ಅತಿ ದೊಡ್ಡ ಗ್ರಾಹಕರು ಸಾಮಾಜಿಕ ಜಾಲತಾಣದ ಸಕ್ರಿಯ ಬಳಕೆದಾರರು. ಈ ಬಳಕೆದಾರರು ಜಗತ್ತಿನ ಎಲ್ಲರನ್ನೂ ಪ್ರಶ್ನಿಸಬಲ್ಲರು. ಅವರು ಮಾಧ್ಯಮ ಕ್ಷೇತ್ರವನ್ನೂ ಪ್ರಶ್ನಿಸುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಪ್ರಮಾದ, ಲೋಪಗಳನ್ನು ಬಯಲಿಗೆಳೆಯುತ್ತಿದ್ದಾರೆ. ಇದನ್ನು ನಾನು ಮುಕ್ತಮನಸ್ಸಿನಿಂದ ಸ್ವಾಗತಿಸುತ್ತೇನೆ. ಅಂತಹ ನಾಗರಿಕರ ಕಣ್ಣಲ್ಲಿ ಮಾಧ್ಯಮ ಘನತೆ ಕಳೆದುಕೊಳ್ಳುವಂತಾಗಿದೆ. ಅದಕ್ಕೆ ನಾನಾ ಕಾರಣಗಳಿವೆ. ಅದರ ಗೋಜಿಗೆ ನಾನು ಹೋಗುವುದಿಲ್ಲ. ಆದರೆ ನಮ್ಮ ಮುಖ್ಯ ಗಮನ ಮಾಧ್ಯಮಕ್ಕೆ ಘನತೆ ತಂದುಕೊಡುವುದರ ಕಡೆಗೆ ಮಾತ್ರ.

ಬಾಲಗಂಗಾಧರ ತಿಲಕರು, ಮಹಾತ್ಮಾ ಗಾಂಧೀಜಿ, ಡಾ. ಬಿ. ಆರ್. ಅಂಬೇಡ್ಕರ್, ಡಿ. ವಿ. ಗುಂಡಪ್ಪನವರೆಲ್ಲ ಪತ್ರಕರ್ತರಾಗಿದ್ದವರು. ಆ ನಂತರವೂ ಪತ್ರಿಕೋದ್ಯಮದ ಘನತೆಯ ತೇರನ್ನು ಅನೇಕ ಮಹನೀಯರು ಮುಂದಕ್ಕೆ ಎಳೆದಿದ್ದಾರೆ. ಅವರು ಹಾಕಿದ ಮಾರ್ಗದಲ್ಲಿ ಮುಂದೆ ಸಾಗಿ ಈ ಕ್ಷೇತ್ರದ ಘನತೆ, ಗೌರವ ಹಾಗೂ ಹೊಣೆಗಾರಿಕೆಯನ್ನು ಮೆರೆಯುವುದು ನಮ್ಮ ಪರಮ ಧ್ಯೇಯ.

ಈ ಕಾರಣಕ್ಕಾಗಿ ಮೊದಲಿಗೆ ನಾವು ಯಾವುದೇ ಪಕ್ಷ ಮತ್ತು ರಾಜಕಾರಣಿಗಳ ಪರ ವಹಿಸುವುದಿಲ್ಲ. ಯಾವುದೇ ಸಮುದಾಯದ ಪಕ್ಷಪಾತಿಗಳಾಗುವುದಿಲ್ಲ. ಸತ್ಯ ಹಾಗೂ ರಾಷ್ಟ್ರಹಿತದ ಪ್ರಶ್ನೆ ಬಂದಾದ ಯಾವುದೇ ಮುಲಾಜಿಗೆ ಒಳಗಾಗುವುದಿಲ್ಲ. ನಮಗೆ ದೇಶ ಮೊದಲೇ ಹೊರತು ಬೇರೇನೂ ಅಲ್ಲ. ಜನಪರ ಮತ್ತು ಜನಪ್ರಿಯತೆ ಈ ಎರಡರಲ್ಲಿ ಆಯ್ಕೆ ಪ್ರಶ್ನೆ ಬಂದಾಗ ಜನಪರವೇ ಮಿಗಿಲಾಗುತ್ತದೆ. ಮುಖ್ಯವಾಗಿ ನಾವು ಕಿರುಚಾಡುವುದಿಲ್ಲ. ನಮ್ಮ ಮಾಧ್ಯಮ ಸಂಸ್ಥೆಯ ಸುದ್ದಿಯಲ್ಲಿ ಸತ್ಯದ ಶಕ್ತಿ ಮತ್ತು ನಿಖರತೆ ಇರುತ್ತದೆ. ಸುದ್ದಿಯೇ ಮಾತನಾಡಿ, ಪತ್ರಕರ್ತ ಕಡಿಮೆ ಮಾತನಾಡುವಂತೆ ನೋಡಿಕೊಳ್ಳುತ್ತೇವೆ. ಹೀಗಾಗಿಯೇ, ನಿಖರ. ಜನಪರ. – ಇವೇ ಮೌಲ್ಯಗಳನ್ನು ನಮ್ಮ ಮಾಧ್ಯಮಸಂಸ್ಥೆಯ ಧ್ಯೇಯವಾಕ್ಯವಾಗಿಯೂ ನಮ್ಮ ವಿಸ್ತಾರ ಬ್ರ್ಯಾಂಡ್‌ನ ಟ್ಯಾಗ್‌ಲೈನ್‌ ಆಗಿಯೂ ಇಟ್ಟುಕೊಂಡಿದ್ದೇವೆ.

ಪ್ರಶ್ನೆ: ಕನ್ನಡ‌‌ ಭಾಷೆ, ನೆಲ, ಜಲ, ಸಂಸ್ಕೃತಿಯ ಹಿತರಕ್ಷಣೆಯ ವಿಚಾರದಲ್ಲಿ ನಮ್ಮ ನಿಲುವೇನು?
ಉತ್ತರ: ಈ‌ ವಿಷಯದಲ್ಲಿ ನಾವು ಅಪ್ಪಟ ಕನ್ನಡಿಗರು ಮತ್ತು ಕನ್ನಡಪರರು. ಭಾಷೆ, ನೆಲ, ಜಲ, ಸಂಸ್ಕೃತಿ ಹಿತದ ವಿಚಾರದಲ್ಲಿ ರಾಜಿಯೇ ಇಲ್ಲದ ಕಠಿಣ ನಿಲುವು ನಮ್ಮದು. ಈ ವಿಷಯದಲ್ಲಿ ನಾವೇ ಮುಂಚೂಣಿಯಲ್ಲಿ ನಿಲ್ಲುತ್ತೇವೆ. ಇನ್ನೂ ಸ್ಪಷ್ಟಪಡಿಸಬೇಕೆಂದರೆ ಕನ್ನಡ – ಕರ್ನಾಟಕದ ವಿಷಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ನಿಲುವೇ ನಮ್ಮ ನಿಲುವು. ಜೈ ಭಾರತ ಜನನಿಯ ತನುಜಾತೇ, ಜಯ ಹೇ ಕರ್ನಾಟಕ ಮಾತೆ. ಕರ್ನಾಟಕ ಮಾತೆ, ಆ ಮೂಲಕ ಭಾರತ ಮಾತೆ…

ಕರ್ನಾಟಕ ಇಲ್ಲದೇ ಭಾರತ ಇಲ್ಲ. ಭಾರತ ಇರದೇ ಕರ್ನಾಟಕ ಇರಲಾರದು. ರಾಜ್ಯ‌ ಮತ್ತು ರಾಷ್ಟ್ರದ ಸಂಬಂಧ ಎಂದೆಂದಿಗೂ ಅವಿನಾಭಾವ, ಅವಿಚ್ಛಿನ್ನ.  ಭಾಷೆಯ ವಿಚಾರದಲ್ಲೂ ನಮ್ಮ ನಿಲುವು ಅದೇ. ಕನ್ನಡದ‌ ಪರ ಸದಾ ಕೈ ಎತ್ತುತ್ತೇವೆ. ಧ್ವನಿ ಎತ್ತುತ್ತೇವೆ. ಕನ್ನಡಕ್ಕಾಗಿ ಬೇರೆ ಭಾಷೆಯನ್ನು ದ್ವೇಷಿಸುವುದಿಲ್ಲ. ಭಾಷೆ ಎಂದರೆ ಕೇವಲ ಸಂವಹನ ಸಾಧನ ಅಲ್ಲ, ಅದು ಸಂಸ್ಕೃತಿಯ ವಾಹಕ. ಅದು ಸಣ್ಣದೇ ಇರಲಿ, ದೊಡ್ಡದೇ ಇರಲಿ. ಭಾರತದ ಎಲ್ಲ ಭಾಷೆಗಳೂ ಸಮಾನ ಮತ್ತು ಸರ್ವಶಕ್ತ. ನಾವು ಮೊದಲು ಕನ್ನಡಪರರು.

ಪ್ರಶ್ನೆ: ಸಂಸ್ಥೆಯನ್ನು ಯಶಸ್ವಿಯಾಗಿ ಕಟ್ಟಿ ಬೆಳೆಸಲು ಉತ್ತಮ ತಂಡ ಬೇಕು. ‌ನಿಮ್ಮ ಜತೆ ಅಂತಹ ತಂಡ ಇದೆಯೆ?

ಉತ್ತರ: ನಮ್ಮ ಆಲೋಚನೆಗಳು ಎಷ್ಟೇ ಉದಾತ್ತವಾಗಿದ್ದರೂ, ಕಾರ್ಯಸಾಧುವಾಗಿದ್ದರೂ, ಅದನ್ನು ಕಾರ್ಯರೂಪಕ್ಕೆ ತರಲು ಉತ್ತಮ ಮಾನವ ಸಂಪನ್ಮೂಲ, ಅಂದರೆ ಪಕ್ವಗೊಂಡ ಮೆದುಳುಗಳು ಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಅತ್ಯಂತ ಸಂತೋಷದ ಸಂಗತಿ ಎಂದರೆ ನಾವು ನವ ಮಾಧ್ಯಮ ಸಂಸ್ಥೆ ಕಟ್ಟಲು ಮುಂದಾದಾಗ ಕನ್ನಡ ಪತ್ರಿಕೋದ್ಯಮದಲ್ಲಿ ಪಳಗಿದ, ಶುದ್ಧ ಮನಸ್ಸಿನ ಅತ್ಯುತ್ತಮ ಪತ್ರಕರ್ತರು ನಮ್ಮ ಜತೆಯಾದದ್ದು. ಹಿರಿಯರು, ಮಧ್ಯಮ ಅನುಭವಿಗಳು ಮತ್ತು ಯುವಕರು ಹೀಗೆ ಮೂರು ಜನರೇಶನ್ನಿಗೆ ಈ ಕಂಪನಿಯನ್ನು ಸದೃಢವಾಗಿ ಮುನ್ನಡೆಸಬಲ್ಲ ಬ್ಲೆಂಡೆಡ್ ಪತ್ರಕರ್ತರ ತಂಡ ನಮ್ಮ ಸಂಸ್ಥೆಯ ಭವಿಷ್ಯದ ಸೂಚನೆ. ಇಲ್ಲಿ ನಾವು ಡಿಜಿಟಲ್, ಪ್ರಿಂಟ್ ಹಾಗೂ ಟಿವಿ ಮಾಧ್ಯಮದಿಂದ ಆಯ್ದ ಪತ್ರಕರ್ತರ ಸಮತೋಲಿತ ತಂಡವನ್ನು ಕಟ್ಟಿದ್ದೇವೆ.

ಪ್ರಶ್ನೆ: ಎಲ್ಲ ಸುದ್ದಿ ಸಂಸ್ಥೆಗಳೂ ತಾವು ಜನಪರ, ಪಕ್ಷಪಾತ ರಹಿತ ಎಂದೇ ಕಾರ್ಯ ಆರಂಭಿಸುತ್ತವೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಯಾವ ರೀತಿ ಬೆಳವಣಿಗೆಗಳಾಗಿವೆ ಎಂಬುದನ್ನು ನಾವು ನೋಡಿದ್ದೇವೆ. ನಿಮ್ಮ ಮೇಲೆ ಹೇಗೆ ನಂಬಿಕೆ ಇಡುವುದು?

ಉತ್ತರ: ಈಗಾಗಲೇ ಹೇಳಿದಂತೆ, ಕನ್ನಡದ ಅತ್ಯುತ್ತಮ, ಅನುಭವಿ ಹಾಗೂ ಗೌರವಯುತ ಪತ್ರಕರ್ತರ ತಂಡ ನಮ್ಮ ಜತೆಗಿದೆ. ಹೀಗಾಗಿ ಉತ್ತಮ ವಿಷಯ (Content) ನಮ್ಮಿಂದ ನಿಮಗೆ ದೊರಕುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ವಿಷಯ ವಸ್ತುವನ್ನು ಈಗಿನ ಕಾಲಕ್ಕೆ, ಜನರ ಅನುಕೂಲಕ್ಕೆ ತಕ್ಕಂತೆ ಪ್ರಸ್ತುತಪಡಿಸುವಲ್ಲೂ ನಾವು ಸಫಲರಾಗುತ್ತೇವೆ ಎಂಬ ನಂಬಿಕೆ ಮತ್ತು ಸ್ಪಷ್ಟತೆ ನಮಗಿದೆ. ಇನ್ನು ವಿಶ್ವಾಸ ಗಳಿಸುವುದು ಕಾಲಕ್ಕೆ ಬಿಟ್ಟ ವಿಚಾರ. ಯಾವುದೇ ವ್ಯಕ್ತಿ, ವಿಚಾರದ ಮೇಲೆ ನಂಬಿಕೆ, ವಿಶ್ವಾಸ ಮೂಡಲು ಅದರದ್ದೇ ಆದ ಸಮಯ ಬೇಕು. ಈ ಸಮಯದಲ್ಲಿ ನಮ್ಮ ನಡವಳಿಕೆಯನ್ನು ಸಮಾಜ ಅಳೆಯುತ್ತದೆ. ನಡೆ ಹಾಗೂ ನುಡಿಯಲ್ಲಿನ ವ್ಯತ್ಯಾಸವನ್ನು ಅದೇ ಸಮಾಜ ಅಳೆದು ನೋಡುತ್ತದೆ. ನಡೆ ಹಾಗೂ ನುಡಿಯಲ್ಲಿ ವ್ಯತ್ಯಾಸ ಇಲ್ಲದೇ ಇದ್ದಲ್ಲಿ ಮಾತ್ರ ಸಮಾಜ ನಮ್ಮನ್ನು ನಂಬುತ್ತದೆ. ಆ ವಿಶ್ವಾಸ ಗಳಿಸಲು ನಾವು ಪ್ರತಿ ಕ್ಷಣವೂ ಶ್ರಮಿಸುತ್ತೇವೆ. ಇಂದು ವಿಸ್ತಾರ ಡಿಜಿಟಲ್ ಆವೃತ್ತಿಯನ್ನು ಲೋಕಾರ್ಪಣೆ ಮಾಡಿದ್ದೇವೆ. ಇಷ್ಟರಲ್ಲೇ ಟಿವಿ ಮೂಲಕವೂ ನಿಮ್ಮ ಮನೆ ಹಾಗೂ ಮನವನ್ನು ತಲುಪುತ್ತೇವೆ.

ಪ್ರಶ್ನೆ: ಈಗಿನ ʼಸೋಷಿಯಲ್ ಮೀಡಿಯಾ ಜಮಾನಾʼದಲ್ಲಿ ಸಾಂಸ್ಥಿಕ ಡಿಜಿಟಲ್ ಮೀಡಿಯಾದ ಪ್ರಸ್ತುತತೆ ಏನು?
ಉತ್ತರ: ನಾವು ಡೆಮಾಕ್ರಟಿಕ್ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ  ಸಂವಿಧಾನಬದ್ಧ ಮಾನ್ಯತೆ ಇದೆ. ಅದೇ ಸಂದರ್ಭದಲ್ಲಿ ಸಾಂಸ್ಥಿಕ ವ್ಯವಸ್ಥೆಗೂ ಅದೇ ಸಂವಿಧಾನ ಅವಕಾಶ ನೀಡಿದೆ. ಸಾಮಾಜಿಕ ಮಾಧ್ಯಮದ ವಿಚಾರಕ್ಕೆ ಬರುವುದಾದರೆ, ವ್ಯಕ್ತಿ ತನ್ನ ಅನಿಸಿಕೆಯನ್ನು ಇತಿಮಿತಿಯಲ್ಲಿ ವ್ಯಕ್ತಪಡಿಸಬಹುದು. ಆದರೆ ಮಾಧ್ಯಮ ಸಂಸ್ಥೆಯಲ್ಲಿ ಅನಿಸಿಕೆ ಎನ್ನುವುದು ವಿವಿಧ ಹಂತಗಳಲ್ಲಿ ಪರಿಷ್ಕರಣೆಗೆ ಒಳಪಡುತ್ತದೆ.

ಅದಕ್ಕಿಂತ ಮುಖ್ಯವಾಗಿ ಸಾಂಸ್ಥಿಕ ವ್ಯವಸ್ಥೆಯಲ್ಲಿ ಒಡಮೂಡುವ ಸುದ್ದಿ ಹೊಣೆಗಾರಿಕೆಯಿಂದ ಕೂಡಿರುತ್ತದೆ. ಅಭಿಪ್ರಾಯ-ಕೇಂದ್ರಿತ ಸಾಮಾಜಿಕ ಮಾಧ್ಯಮಗಳ ಸಂಖ್ಯೆ ಹೆಚ್ಚಾದಷ್ಟೂ ಸಾಂಸ್ಥಿಕ ಮಾದ್ಯಮಗಳ ಈ ಹೊಣೆಗಾರಿಕೆ ಪ್ರಜ್ಞೆಯೂ‌ ಹೆಚ್ಚಾಗುತ್ತಲೇ ಹೋಗುತ್ತದೆ. ಎಲ್ಲರೂ ವಿಶ್ವಾಸಾರ್ಹ ಮಾಹಿತಿ / ಸುದ್ದಿ ಬಯಸುವ ಕಾಲಮಾನದಲ್ಲಿ, ಸಾಂಸ್ಥಿಕ ಮೀಡಿಯಾದ ಮಹತ್ವ ಮುಂಬರುವ ದಿನಗಳಲ್ಲಿ‌ ಇನ್ನಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನ ಬೇಡ.

ವಿಶ್ವಾಸವಿರಲಿ
ವಿಸ್ತಾರ ವೆಬ್‌ಸೈಟ್  : www.vistaranews.com
ಸೋಷಿಯಲ್ ಮೀಡಿಯಾ ವಿವರಗಳು:
Face book: www.facebook.com/vistaranews
Instagram: www.instagram.com/vistaranews/
Twitter: twitter.com/VistaraNews
Koo : www.kooapp.com/profile/vistaranews

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಭವಿಷ್ಯ

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ ನವಮಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಕುಂಭ ರಾಶಿಯಿಂದ ಗುರುವಾರ ಮಧ್ಯಾಹ್ನ 02:51ಕ್ಕೆ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ಕನ್ಯಾ, ಧನಸ್ಸು, ಕುಂಭ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರು ದೈಹಿಕವಾಗಿ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ. ಬ್ಯಾಂಕ್ ವ್ಯವಹಾರಗಳಲ್ಲಿ ಕಾಳಜಿ ವಹಿಸಬೇಕು. ನಿಮ್ಮ ಬಳಗದಲ್ಲಿ ಯಾವುದಾದರೂ ದುಃಖದ ಸನ್ನಿವೇಶ ನಡೆಯಬಹುದು. ವೃಷಭ ರಾಶಿಯವರು ಆಂತರಿಕ ಭಯ ನಿಮ್ಮ ಸಂತೋಷವನ್ನು ಹಾಳುಗೆಡವಬಹುದು. ನಕಾರಾತ್ಮಕ ಆಲೋಚನೆಗಳನ್ನು ಮಾಡಬೇಡಿ, ಆಗ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ದಿನ ಕೊನೆಯ ಭಾಗದಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (02-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ.
ತಿಥಿ: ನವಮಿ 25:52 ವಾರ: ಗುರುವಾರ
ನಕ್ಷತ್ರ: ಧನಿಷ್ಠಾ 25:47 ಯೋಗ: ಶುಕ್ಲ 17:17
ಕರಣ: ತೈತುಲ 14:59 ಅಮೃತಕಾಲ: ಸಂಜೆ 04:00 ರಿಂದ 05:31
ದಿನದ ವಿಶೇಷ: ಕೊರಗಜ್ಜ ಉತ್ಸವ

ಸೂರ್ಯೋದಯ : 05:58   ಸೂರ್ಯಾಸ್ತ : 06:35

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ದೈಹಿಕವಾಗಿ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ. ಬ್ಯಾಂಕ್ ವ್ಯವಹಾರಗಳಲ್ಲಿ ಕಾಳಜಿ ವಹಿಸಬೇಕು. ನಿಮ್ಮ ಬಳಗದಲ್ಲಿ ಯಾವುದಾದರೂ ದುಃಖದ ಸನ್ನಿವೇಶ ನಡೆಯಬಹುದು. ನಿಮ್ಮ ಶ್ರಮ ಮತ್ತು ಸಮರ್ಪಣೆ ನಿಮ್ಮ ಪರವಾಗಿ ಮಾತನಾಡುತ್ತವೆ ಮತ್ತು ನಿಮಗೆ ವಿಶ್ವಾಸ, ಬೆಂಬಲ ಗಳಿಸಿಕೊಡುತ್ತವೆ. ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಆಂತರಿಕ ಭಯ ನಿಮ್ಮ ಸಂತೋಷವನ್ನು ಹಾಳುಗೆಡವಬಹುದು. ನಕಾರಾತ್ಮಕ ಆಲೋಚನೆಗಳನ್ನು ಮಾಡಬೇಡಿ, ಆಗ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ದಿನ ಕೊನೆಯ ಭಾಗದಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಆರೋಗ್ಯ ಕೊಂಚಮಟ್ಟಿಗೆ ಕೆಡುವ ಸಾಧ್ಯತೆ ಇದೆ. ಆರ್ಥಿಕವಾಗಿ ಪ್ರಗತಿ.
ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಬೇರೆಯವರ ಮಾತನ್ನು ಕೇಳಿಕೊಂಡು ನಿಮ್ಮನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಗಳನ್ನು ದ್ವೇಷಿಸುವುದು ಬೇಡ. ಇತರರ ಸಮಸ್ಯೆಗಳನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಾವಶ್ಯಕ ಖರ್ಚು ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಅನಿವಾರ್ಯ ಪ್ರಸಂಗಗಳು ನಿಮಗೆ ಕೋಪವನ್ನು ತರಿಸುವ ಸಾಧ್ಯತೆ ಇದೆ. ಭಾವನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಉತ್ತಮ. ಕಠಿಣ ಪರಿಶ್ರಮ ನಿಮಗೆ ಫಲ ನೀಡಲಿದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ಉದ್ಯೋಗಿಗದ ಸ್ಥಳದಲ್ಲಿ ಒತ್ತಡ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಸಿಂಹ: ನಿಮ್ಮ ಸಭ್ಯ ನಡವಳಿಕೆ ಇತರರಿಂದ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಬಹುದು. ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡಬಹುದು. ಇತರರಿಗೆ ಪ್ರತಿಫಲಗಳು ತರುವ ನಿಮ್ಮ ಸಾಮರ್ಥ್ಯ ಪ್ರತಿಫಲ ತರುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆ ಅವಕಾಶ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಒತ್ತಡದಿಂದ ವಿಮುಕ್ತಿ ಹೊಂದಿ ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ದೀರ್ಘಕಾಲದ ದೃಷ್ಟಿಕೋನದಿಂದ ಮಾಡಿದ ಹೂಡಿಕೆಯಿಂದ ಲಾಭ ತರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದ ಸಂಪೂರ್ಣ ಸಹಕಾರ ಸಿಗಲಿದೆ. ಉದ್ಯೋಗಿಗಳಿಗೆ ಅದೃಷ್ಟ ಖುಲಾಯಿಸಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ದಿಢೀರ್‌ ಧನಾಗಮನದಿಂದ ಸಂತೋಷ ಇಮ್ಮಡಿಯಾಗಲಿದೆ. ಅನೇಕ ಸಮಸ್ಯೆಗಳು ಇಂದು ಪರಿಹಾರವಾಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಬಹಳ ದಿನಗಳಿಂದ ಕಂಡ ಕನಸು ನನಸಾಗಲಿದೆ. ಉದ್ಯೋಗಿಗಳಿಗೆ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ಇಂದು ಪ್ರಮುಖ ನಿರ್ಧಾರಗಳಿಂದಾಗಿ ಮಾನಸಿಕವಾಗಿ ನೀವು ಬಳಲುವ ಸಾಧ್ಯತೆ ಇದೆ. ಅನಾವಶ್ಯಕ ಖರ್ಚು ಮಾಡಿ ಕೊರಗುವ ಸಾಧ್ಯತೆ ಇದೆ. ಆದಷ್ಟು ನಿಯಂತ್ರಣದಲ್ಲಿರಿ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭಫಲ, ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 2

Horoscope Today

ಧನಸ್ಸು: ಆರೋಗ್ಯದ ಆರೈಕೆ ಇಂದು ಅಗತ್ಯವಿದೆ. ಆಪ್ತರೊಂದಿಗೆ ಸೇರಿಕೊಂಡು ಮಾಡುವ ವ್ಯಾಪಾರ ನಷ್ಟ ತಂದಿತು ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಆಂತರಿಕ ಶಕ್ತಿ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 8

Horoscope Today

ಮಕರ: ಆಹಾರ ಕ್ರಮದ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು ಸಾಧ್ಯತೆ ಇದೆ. ಆದಷ್ಟು ಆಹಾರ ನಿಯಂತ್ರಣ ಮಾಡಿ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ದಿಢೀರ್ ಪ್ರಯಾಣ ಬೆಳೆಸುವಿರಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ನಿಮ್ಮ ಸಾಧನೆಗೆ ಇಂದು ಪ್ರೋತ್ಸಾಹ ಸಿಗಲಿದೆ. ಅನೇಕ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ವ್ಯಾಪಾರದ ಉದ್ದೇಶಕ್ಕಾಗಿ ಕೈಕೊಂಡ ಪ್ರಯಾಣ ಲಾಭವನ್ನು ತಂದುಕೊಡಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ ,ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಮೀನ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ ಹೊಂದುವಿರಿ. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಟೀಕಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ವಿದೇಶ

Danesh Palyani: ಪಾಕಿಸ್ತಾನದಲ್ಲಿ ಹಿಂದು ಯುವತಿಯರ ಮತಾಂತರ; ಕರಾಳ ಮುಖ ಬಿಚ್ಚಿಟ್ಟ ಸಂಸದ!

Danesh Palyani: ಪಾಕಿಸ್ತಾನದ ಪ್ರಮುಖ ಹಿಂದು ನಾಯಕರೂ ಆಗಿರುವ ದಾನೇಶ್‌ ಕುಮಾರ್‌ ಪಲ್ಯಾನಿ ಅವರು, ಪಾಕ್‌ನಲ್ಲಿ ಹೇಗೆ ಹಿಂದು ಯುವತಿಯರನ್ನು ಹೇಗೆ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ, ಹೇಗೆ ಮುಸ್ಲಿಮರು ದೌರ್ಜನ್ಯ ಎಸಗುತ್ತಿದ್ದಾರೆ ಎಂಬುದರ ಕುರಿತು ಸಂಸತ್‌ನಲ್ಲಿಯೇ ಬೆಳಕು ಚೆಲ್ಲಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Danesh Palyani
Koo

ಇಸ್ಲಾಮಾಬಾದ್:‌ ಪಾಕಿಸ್ತಾನದಲ್ಲಿ (Pakistan) ಹಿಂದುಗಳನ್ನು, ಹಿಂದು ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡುವ ಹೀನ ಕೃತ್ಯವು ಮೊದಲಿನಿಂದಲೂ ನಡೆಯುತ್ತಿದೆ. ಭಾರತ ಹಾಗೂ ಪಾಕಿಸ್ತಾನ ವಿಭಾಜನೆಯಾದಾಗಿನಿಂದಲೂ ಮುಸ್ಲಿಮರು ಮತಾಂತರಗೊಳಿಸಿದ ಕಾರಣ ನೆರೆ ರಾಷ್ಟ್ರದಲ್ಲಿ ಹಿಂದುಗಳ ಸಂಖ್ಯೆಯು ಗಣನೀಯವಾಗಿ ಕುಸಿದಿದೆ. ಪಾಕಿಸ್ತಾನದ ಹಿಂದು ಸಂಸದ, ಹಿಂದುಗಳ ನಾಯಕರೂ ಆದ ದಾನೇಶ್‌ ಕುಮಾರ್‌ ಪಲ್ಯಾನಿ (Danesh Kumar Palyani) ಅವರೀಗ ಹಿಂದು ಯುವತಿಯರನ್ನು ಹೇಗೆ ಬಲವಂತವಾಗಿ ಮತಾಂತರ (Conversion) ಮಾಡಲಾಗುತ್ತಿದೆ ಎಂಬುದನ್ನು ಸಂಸತ್‌ನಲ್ಲಿಯೇ ಬಹಿರಂಗಪಡಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಸಂಸತ್‌ನಲ್ಲಿ ಮಾತನಾಡಿದ ದಾನೇಶ್‌ ಕುಮಾರ್‌ ಪಲ್ಯಾನಿ, “ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಧಕ್ಕೆಯಾಗುತ್ತಿದೆ. ಅದರಲ್ಲೂ, ಹಿಂದು ಯುವತಿಯರನ್ನು ಮುಸ್ಲಿಮರು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ. ಹಿಂದು ಯುವತಿಯನ್ನು ಅಪಹರಣ ಮಾಡಿ, ಬಳಿಕ ಅವರನ್ನು ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದೆ. ಪಾಕಿಸ್ತಾನವು ಹಿಂದುಗಳನ್ನು ಬಲವಂತವಾಗಿ ಮಾತನಾಡಬಾರದು ಎಂಬ ಹಕ್ಕು ನೀಡಿದೆ. ಆದರೆ, ಸಿಂಧ್‌ ಪ್ರಾಂತ್ಯದಲ್ಲಿ ಹಿಂದುಗಳ ಸ್ಥಿತಿಯು ದುಸ್ಥರವಾಗಿದೆ” ಎಂದು ಹೇಳಿದ್ದಾರೆ.

“ಬಲವಂತವಾಗಿ ಧರ್ಮವನ್ನು ಹೇರಬಾರದು ಎಂಬುದಾಗಿ ಕುರಾನ್‌ ಕೂಡ ಹೇಳುತ್ತದೆ. ನಿಮ್ಮ ಧರ್ಮ ನಿಮ್ಮದು, ನಮ್ಮ ಧರ್ಮ ನಮ್ಮದು ಎಂಬ ಸಂದೇಶ ಸಾರಲಾಗಿದೆ. ಆದರೆ, ಇಸ್ಲಾಂ ಧರ್ಮದ ದುಷ್ಕರ್ಮಿಗಳು ಪಾಕಿಸ್ತಾನದ ಸಂವಿಧಾನವನ್ನೂ ನಂಬಲ್ಲ, ಕುರಾನ್‌ ಷರೀಫ್‌ಅನ್ನು ಕೂಡ ನಂಬುವುದಿಲ್ಲ. ಇದರಿಂದಾಗಿ ಪಾಕಿಸ್ತಾನದಲ್ಲಿ ಹಿಂದು ಯುವತಿಯರು ಬಲವಂತವಾಗಿ ತಮ್ಮ ಧರ್ಮವನ್ನು ಬದಲಾಯಿಸಬೇಕಾಗಿದೆ. ಪ್ರಿಯಾ ಕುಮಾರಿ ಎಂಬ ಯುವತಿಯನ್ನು ಅಪಹರಿಸಿ ಎರಡು ವರ್ಷಗಳೇ ಕಳೆದಿವೆ. ಆದರೂ, ಸರ್ಕಾರ ಇಂತಹ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ದೂರಿದರು.

“ಪಾಕಿಸ್ತಾನದ ಸಂವಿಧಾನವಾಗಲಿ, ಪವಿತ್ರ ಕುರಾನ್‌ ಆಗಲಿ ಬಲವಂತದ ಮತದಾನವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಹೀಗಿದ್ದರೂ, ನಮ್ಮ ಮಾತೃಭೂಮಿಯಾದ ಪಾಕಿಸ್ತಾನದ ಘನತೆಗೆ ದುಷ್ಕರ್ಮಿಗಳು ಧಕ್ಕೆ ತರುತ್ತಿದ್ದಾರೆ. ಇಂತಹವರ ವಿರುದ್ಧ ಪಾಕಿಸ್ತಾನ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂಬುದಾಗಿ ಆಗ್ರಹಿಸಿದ್ದಾರೆ. ಪಾಕಿಸ್ತಾನದಲ್ಲಿ ಬಲವಂತದ ಮತಾಂತರ, ಯುವತಿಯರ ಅಪಹರಣ, ಮಕ್ಕಳ ಕಳ್ಳ ಸಾಗಣೆ, ಬಾಲ್ಯ ವಿವಾಹದಂತಹ ಸಮಸ್ಯೆಗಳು ತಲೆದೋರಿರುವ ಕುರಿತು ಕೆಲ ದಿನಗಳ ಹಿಂದಷ್ಟೇ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: Forced Conversion : ಮಹಿಳೆಯ ಖಾಸಗಿ ವಿಡಿಯೊ ಮಾಡಿ, ಇಸ್ಲಾಂಗೆ ಮತಾಂತರ ಮಾಡಲು ಯತ್ನಿಸಿದ ನೀಚ ದಂಪತಿ

Continue Reading

ಕರ್ನಾಟಕ

Prajwal Revanna: ಜರ್ಮನಿಯಲ್ಲಿ ಪ್ರಜ್ವಲ್‌ ಅಜ್ಞಾತವಾಸ, ಮಲೇಷ್ಯಾದಲ್ಲಿ ಕಾರ್ತಿಕ್‌ ಹಾಲಿಡೇಸ್?

Prajwal Revanna: ಜರ್ಮನಿಗೆ ತೆರಳಿರುವ ಪ್ರಜ್ವಲ್‌ ರೇವಣ್ಣ, ಅಲ್ಲಿಯೇ ಆಶ್ರಯ ಪಡೆದಿದ್ದಾರೆ. ಎಸ್‌ಐಟಿ ವಿಚಾರಣೆಗೆ ಹಾಜರಾಗದೆ, ಭಾರತಕ್ಕೆ ವಾಪಸಾಗದೆ ಅಲ್ಲಿಯೇ ಅವರು ತಲೆಮರೆಸಿಕೊಂಡಿದ್ದರೆ, ಅವರ ಕಾರು ಓಡಿಸಿಕೊಂಡಿದ್ದ ಕಾರ್ತಿಕ್‌ ಮಲೇಷ್ಯಾದಲ್ಲಿ ಮಜಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಅವರು ಕಾರ್ತಿಕ್‌ ಬಗ್ಗೆ ಹೇಳಿಕೆ ನೀಡಿದ ಬಳಿಕವಂತೂ ಹಲವು ಚರ್ಚೆಗಳು ನಡೆಯುತ್ತಿವೆ.

VISTARANEWS.COM


on

Prajwal Revanna
Koo

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅವರ ಕಾಮಕೇಳಿಯ ವಿಡಿಯೊಗಳು ಬಹಿರಂಗವಾದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಪೆನ್‌ಡ್ರೈವ್‌ ಪ್ರಕರಣವು (Pen Drive Case) ಕರ್ನಾಟಕದಲ್ಲಿ (Karnataka) ಜೆಡಿಎಸ್‌ ಹಾಗೂ ಬಿಜೆಪಿಗೆ ಮುಜುಗರ ತಂದರೆ, ಕಾಂಗ್ರೆಸ್‌ಗೆ ಅಸ್ತ್ರವಾಗಿದೆ. ಇದರ ಬೆನ್ನಲ್ಲೇ, ಪ್ರಜ್ವಲ್‌ ರೇವಣ್ಣ ಜರ್ಮನಿಯಲ್ಲಿ ಅಜ್ಞಾತವಾಸ ಅನುಭವಿಸುತ್ತಿದ್ದರೆ, ವಿಡಿಯೊ, ಫೋಟೊಗಳು ಎಲ್ಲೆಡೆ ಹರಡಲು ಕಾರಣರಾದ ಮಾಜಿ ಚಾಲಕ ಕಾರ್ತಿಕ್‌ ಮಲೇಷ್ಯಾದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್‌ ಅಜ್ಞಾತಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿ, ಕೆಲ ಸ್ಪಷ್ಟನೆ ನೀಡಿದ್ದಾರೆ. ಇದರ ಬೆನ್ನಲ್ಲೇ, “ಕಾರ್ತಿಕ್‌ನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು” ಎಂಬುದಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇದರೊಂದಿಗೆ ಕಾರ್ತಿಕ್‌ ಮಲೇಷ್ಯಾಗೆ ತೆರಳಿದ್ದು ದೃಢಪಟ್ಟಿದ್ದು, ಕಾರು ಚಾಲಕನೊಬ್ಬ ಮಲೇಷ್ಯಾದಲ್ಲಿ ಕಾಲ ಕಳೆಯುವುದು, ಅಲ್ಲಿಯೇ ಹಾಲಿಡೇಸ್‌ ಎಂಜಾಯ್‌ ಮಾಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಮೂಡಿವೆ.

ಪ್ರಜ್ವಲ್‌ ರೇವಣ್ಣ ಲೈಂಗಿಕ ಶೋಷಣೆ ಮಾಡಿರುವ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ಇನ್ನು ಸಾವಿರಾರು ಅಶ್ಲೀಲ ವಿಡಿಯೊಗಳಿರುವ ಪೆನ್‌ಡ್ರೈವ್‌ ಎಲ್ಲೆಂದರಲ್ಲಿ ಸಿಕ್ಕಿರುವುದು ಹಲವು ಅನುಮಾನ ಮೂಡಿಸಿವೆ. ಇದರ ಮಧ್ಯೆಯೇ, ಜರ್ಮನಿಗೆ ತೆರಳಿರುವ ಪ್ರಜ್ವಲ್‌ ರೇವಣ್ಣ, ಅಲ್ಲಿಯೇ ಆಶ್ರಯ ಪಡೆದಿದ್ದಾರೆ. ಎಸ್‌ಐಟಿ ವಿಚಾರಣೆಗೆ ಹಾಜರಾಗದೆ, ಭಾರತಕ್ಕೆ ವಾಪಸಾಗದೆ ಅಲ್ಲಿಯೇ ಅವರು ತಲೆಮರೆಸಿಕೊಂಡಿದ್ದರೆ, ಅವರ ಕಾರು ಓಡಿಸಿಕೊಂಡಿದ್ದ ಕಾರ್ತಿಕ್‌ ಮಲೇಷ್ಯಾದಲ್ಲಿ ಮಜಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಈಗ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಕಾರ್ತಿಕ್‌ ಬಗ್ಗೆ ಎಚ್‌ಡಿಕೆ ಸಿಡಿಮಿಡಿ

ಬೆಂಗಳೂರಿನ ಪದ್ಮನಾಭನಗರದ ನಿವಾಸದ ಗೇಟ್‌ ಮುಂಭಾಗದಲ್ಲಿ ಪ್ರಕರಣದ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ಗರಂ ಆದರು. ಪದೇಪದೇ ಏನು ಕೇಳುತ್ತೀರಿ, ನಿಮಗೆ ಏನು ಕೆಲಸ, ಇಲ್ಲಿ ಯಾಕೆ ಬಂದಿದ್ದೀರಾ? ಸುದ್ದಿ ಬಿಡುವವರ ಜತೆ ಹೋಗಿ ಎಂದು ಕಿಡಿಕಾರಿದರು. ನಿನ್ನೆ ಡ್ರೈವರ್ ಒಬ್ಬ ವಿಡಿಯೋ ಮಾಡಿ ಹೇಳಿದನಲ್ಲಾ? ಯಾರು ಆ ವಿಡಿಯೊ ಮಾಡಿದ್ದು? ಇಲ್ಲಿ ಚಿಲ್ಲರೆ ಅಣ್ಣ ತಮ್ಮ ಇದ್ದಾರಲ್ಲವೇ? ಅವರು ಏನ್ ಹೇಳಿದರು? ಕುಮಾರಸ್ವಾಮಿ ಬಿಟ್ಟಿದ್ದು ಎನ್ನುತ್ತಾರೆ. ಡ್ರೈವರ್ ಕಾರ್ತಿಕ್ ಎಲ್ಲಿದ್ದಾನೆ ಈಗ? ಮಲೇಷ್ಯಾದಲ್ಲಿ ಇದಾನೆ, ಆತನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು ಎಂದು ಪ್ರಶ್ನಿಸಿದರು.

ಆ ಡ್ರೈವರ್‌ ಕಾರ್ತಿಕ್ ಏನು ಹೇಳಿಕೆ ಕೊಟ್ಟಾ? ದೇವರಾಜೇಗೌಡ ಕೈಯಲ್ಲಿ ಪೆನ್ ಡ್ರೈವ್ ಕೊಟ್ಟಿದ್ದೆ ಅಂತ ಹೇಳಿದ್ದ. ಇಂದು ಬೆಳಗ್ಗೆ ಈ ಚಿಲ್ಲರೆ ಅಣ್ಣ ತಮ್ಮ ಇದಾರಲ್ವಾ (ಡಿಕೆಶಿ ಹಾಗೂ ಡಿ.ಕೆ ಸುರೇಶ್), ಕುಮಾರಸ್ವಾಮಿನೇ ಬಿಟ್ಟಿರಬೇಕು ಅಂತ ಹೇಳಿಕೆ ಕೊಟ್ಟಿದ್ದಾರೆ. ಕುಮಾರಸ್ವಾಮಿಯನ್ನು ಈ ಮೊದಲು ದೇವರಾಜೇಗೌಡ ಭೇಟಿಯಾಗಿದ್ದ ಎಂದು ಈ 420ಗಳು ಹೇಳಿದ್ದಾರೆ. ಹಾಗಾದರೆ ಎಲ್ಲಿದ್ದಾನೆ ಈ ಕಾರ್ತಿಕ್? ಯಾರು ಕಳುಹಿಸಿದರು? ಎಲ್ಲಿಂದ ವಿಡಿಯೋ ಮಾಡಿ ಬಿಟ್ಟದ್ದಾನೆ, ಅದನ್ನು ಮೊದಲು ತಿಳಿದುಕೊಳ್ಳಿ. ನನ್ನ ಕೆಣಕಿದ್ದಾರೆ, ಸುಮ್ಮನೆ ಬಿಡಲ್ಲ ನಾನು ಎಂದು ಡಿಕೆ ಬ್ರದರ್ಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Prajwal Revanna Case: ಸಿಂಗಾಪುರ ಮಾಧ್ಯಮಗಳಲ್ಲೂ ಪ್ರಜ್ವಲ್‌ ರೇವಣ್ಣ ಕೇಸ್‌ ಸದ್ದು!

Continue Reading

ಕ್ರೀಡೆ

CSK vs PBKS: ಚೆನ್ನೈಗೆ ತವರಿನಲ್ಲೇ ಆಘಾತವಿಕ್ಕಿ ಪ್ಲೇ ಆಫ್​ ಆಸೆ ಜೀವಂತವಿರಿಸಿದ ಪಂಜಾಬ್​

CSK vs PBKS: ಈ ಆವೃತ್ತಿಯಲ್ಲಿ ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ ಶಿವಂ ದುಬೆ ಎಲ್ಲ ಪಂದ್ಯಗಳಲ್ಲಿಯೂ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಆದರೆ ಟಿ20 ವಿಶ್ವಕಪ್​ಗೆ ಆಯ್ಕೆಯಾದ ಮರು ಪಂದ್ಯದಲ್ಲಿಯೇ ಗೋಲ್ಡನ್​ ಡಕ್​ ಸಂಕಟಕ್ಕೆ ಸಿಲುಕಿದರು

VISTARANEWS.COM


on

CSK vs PBKS
Koo

ಚೆನ್ನೈ: ಪ್ಲೇ ಆಫ್​ ಆಸೆಯನ್ನು ಜೀವಂತವಿರಿಸಲು ಗೆಲ್ಲಲೇ ಬೇಕಾದ ಮಹತ್ವದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(CSK vs PBKS)​ ತಂಡ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಅವರದ್ದೇ ನೆಲದಲ್ಲಿ 7 ವಿಕೆಟ್​ಗಳಿಂದ ಮಗುಚಿ ಹಾಕಿದೆ. ಇದು ಈ ಆವೃತ್ತಿಯಲ್ಲಿ ಚೆನ್ನೈಗೆ ತವರಿನಲ್ಲಿ ಎದುರಾದ 2ನೇ ಸೋಲಾಗಿದೆ. ಇದಕ್ಕೂ ಮುನ್ನ ಲಕ್ನೋ ವಿರುದ್ಧ ಸೋಲು ಕಂಡಿತ್ತು. ಜಾನಿ ಬೇರ್​ಸ್ಟೋ(46 ರನ್​) ಮತ್ತು ರಾಹುಲ್​ ಚಹರ್​ (16ಕ್ಕೆ 2 ವಿಕೆಟ್​) ಪಂಜಾಬ್​ ಗೆಲುವಿನ ಪ್ರಮುಖ ರೂವಾರಿಗಳಾಗಿ ಮೂಡಿಬಂದರು.

ಇಲ್ಲಿನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು.

​ಚೇಸಿಂಗ್​ ವೇಳೆ ಕಳೆದ ಪಂದ್ಯದ ಶತಕ ವೀರ ಜಾನಿ ಬೇರ್​ಸ್ಟೋ 46 ರನ್​ ಬಾರಿಸಿ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್​ ಪ್ರತಾಪ ತೋರಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಅವರು ಪ್ರತಿ ಓವರ್​ನಲ್ಲಿಯೂ ಕನಿಷ್ಠ ಒಂದು ಬೌಂಡರಿ ಅಥವಾ ಸಿಕ್ಸರ್​ ಬಾರಿಸುತ್ತಲೇ ಮುನ್ನುಗಿದರು. ಇವರಿಗೆ 2ನೇ ಕ್ರಮಾಂಕದಲ್ಲಿ ಆಡಲಿಳಿದ ದಕ್ಷಿಣ ಆಫ್ರಿಕಾದ ಹಾರ್ಡ್​ ಹಿಟ್ಟರ್​ ರೀಲಿ ರೂಸೊ ಉತ್ತಮ ಸಾಥ್​ ನೀಡಿದರು. ಬೇರ್​ಸ್ಟೋ ವಿಕೆಟ್​ ಪತನದ ಬಳಿಕ ಇವರು ತಂಡವನ್ನು ಆಧರಿಸಿದರು. 23 ಎಸೆತ ಎದುರಿಸಿ 43(5 ಬೌಂಡರಿ, 2 ಸಿಕ್ಸರ್​) ರನ್​ ಬಾರಿಸಿದರು. ಅಂತಿಮವಾಗಿ ಶಶಾಂಕ್​ ಸಿಂಗ್​(25) ಮತ್ತು ಹಂಗಾಮಿ ನಾಯಕ ಸ್ಯಾಮ್​ ಕರನ್​(26) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೇ ವೇಳೆ ಶಶಾಂಕ್ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ರನ್​ಗಳ ಗಡಿ ದಾಡಿದರು.

ಚೆನ್ನೈಗೆ ಗಾಯಕ್ವಾಡ್​ ಆಸರೆ


ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ತಂಡ ಉತ್ತಮ ಆರಂಭವೇನೊ ಪಡೆಯಿತು. ನಾಯಕ ಋತುರಾಜ್​ ಗಾಯಕ್ವಾಡ್​ ಮತ್ತು ಅನುಭವಿ ಹಾಗೂ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಸೇರಿಕೊಂಡು ಮೊದಲ ವಿಕೆಟ್​ಗೆ 64 ರನ್​ ಒಟ್ಟುಗೂಡಿಸಿದರು. ರಹಾನೆ 29 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ರಹಾನೆ ವಿಕೆಟ್​ ಪತನದ ಬಳಿಕ ದಿಢೀರ್​ ಕುಸಿತ ಕಂಡಿತು. ಸತತವಾಗಿ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಒಂದೆಡೆ ಸಹ ಆಟಗಾರರ ವಿಕೆಟ್ ಬೀಳುತ್ತಿದ್ದರೂ ಕೂಡ ಮತ್ತೊಂದು ತುದಿಯಲ್ಲಿ ಕ್ರೀಸ್​ ಕಚ್ಚಿ ನಿಂತ ಗಾಯಕ್ವಾಡ್​ ತಮ್ಮ ಶಕ್ತಿ ಮೀರಿದ ಬ್ಯಾಟಿಂಗ್​ ಪ್ರದರ್ಶನದ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮುಂದುವರಿಸಿದರು. ಒಂದು ಹಂತದಲ್ಲಿ ಸಮೀರ್ ರಿಜ್ವಿ ಅವರಿಂದ ಸಣ್ಣ ಮಟ್ಟದ ಜತೆಯಾಟದ ಬೆಂಬಲ ಸಿಕ್ಕರೂ ಕೂಡ ಇದು ಹೆಚ್ಚು ಹೊತ್ತು ಸಾಗಲಿಲ್ಲ. 21 ರನ್​ ಗಳಿಸಿದ್ದ ವೇಳೆ ರಿಜ್ವಿ ಕೂಡ ಔಟಾದರು. ಗಾಯಕ್ವಾಡ್​ 48 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್​ ಬಾರಿಸಿ 62 ರನ್​ ಗಳಿಸಿದರು.

ಇದನ್ನೂ ಓದಿ IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

ದುಬೆ ಬ್ಯಾಟಿಂಗ್​ ವಿಫಲ


ಈ ಆವೃತ್ತಿಯಲ್ಲಿ ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ ಶಿವಂ ದುಬೆ ಎಲ್ಲ ಪಂದ್ಯಗಳಲ್ಲಿಯೂ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಆದರೆ ಟಿ20 ವಿಶ್ವಕಪ್​ಗೆ ಆಯ್ಕೆಯಾದ ಮರು ಪಂದ್ಯದಲ್ಲಿಯೇ ಗೋಲ್ಡನ್​ ಡಕ್​ ಸಂಕಟಕ್ಕೆ ಸಿಲುಕಿದರು. ಹರ್​ಪ್ರೀತ್​ ಬ್ರಾರ್​ ಎಸೆತದಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. ಮೊಯಿನ್​ ಅಲಿ ಕ್ಯಾಚ್​ನಿಂದ ಒಂದು ಜೀವದಾನ ಪಡೆದರೂ ಕೂಡ ಇದರ ಲಾಭವೆತ್ತಲು ವಿಫಲರಾದರು. 15 ರನ್​ ಗಳಿಸಿ ರಾಹುಲ್​ ಚಹರ್​ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು. ಮಹೇಂದ್ರ ಸಿಂಗ್​ ಧೋನಿ 11 ಎಸೆತಗಳಿಂದ 14 ರನ್​ ಗಳಿಸಿ ರನೌಟ್​ ಆದರು.

ಇದುವರೆಗೆ ದ್ವಿತೀಯ ಕ್ರಮಾಂಕದಲ್ಲಿ ಆಡುತ್ತಿದ್ದ ಡೇರಿಯಲ್​ ಮಿಚೆಲ್​ ಅವರನ್ನು ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಆಡಿಸಲಾಯಿತು. ಈ ಪ್ರಯೋಗ ಚೆನ್ನೈಗೆ ಭಾರೀ ಹಿನ್ನಡೆ ಉಂಟುಮಾಡಿತು. ಅವರನ್ನು ಎಂದಿನಂತೆ 2ನೇ ಕ್ರಮಾಂಕದಲ್ಲಿ ಆಡಿಸುತ್ತಿದ್ದರೆ ದೊಡ್ಡ ಮೊತ್ತವನ್ನು ಕಲೆಹಾಕಬಹುದಾಗಿತ್ತು. ಪಂಜಾಬ್​ ಪರ ರಾಹುಲ್​ ಚಹರ್​ ಮತ್ತು ಹರ್​ಪ್ರೀತ್​ ಬ್ರಾರ್​ ತಲಾ 2 ವಿಕೆಟ್​ ಉರುಳಿಸಿದರು.

Continue Reading
Advertisement
Dina Bhavishya
ಭವಿಷ್ಯ31 mins ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

Benefits of Tender Coconut
ಆರೋಗ್ಯ31 mins ago

Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

Bhajanotsava
ಬೆಂಗಳೂರು4 hours ago

Bhajanotsava: ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವ ಸಂಪನ್ನ

Shata Chandika Yaga
ಚಿಕ್ಕಬಳ್ಳಾಪುರ5 hours ago

ಚಿಕ್ಕಬಳ್ಳಾಪುರದ ವಾಯುದೇವ, ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಶತ ಚಂಡಿಕಾ ಯಾಗ ಸಂಪನ್ನ

Prajwal Revanna Case
ಕರ್ನಾಟಕ5 hours ago

Prajwal Revanna Case: ಸಂಸದ ಪ್ರಜ್ವಲ್ ರೇವಣ್ಣ ಗೆಸ್ಟ್ ಹೌಸ್‌ನಲ್ಲಿಲ್ಲ ಸಿಸಿ ಕ್ಯಾಮೆರಾ?; ಹಲವು ಅನುಮಾನ

Danesh Palyani
ವಿದೇಶ6 hours ago

Danesh Palyani: ಪಾಕಿಸ್ತಾನದಲ್ಲಿ ಹಿಂದು ಯುವತಿಯರ ಮತಾಂತರ; ಕರಾಳ ಮುಖ ಬಿಚ್ಚಿಟ್ಟ ಸಂಸದ!

Bangalore University
ಕರ್ನಾಟಕ6 hours ago

Bangalore University: ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

Prajwal Revanna
ಕರ್ನಾಟಕ6 hours ago

Prajwal Revanna: ಜರ್ಮನಿಯಲ್ಲಿ ಪ್ರಜ್ವಲ್‌ ಅಜ್ಞಾತವಾಸ, ಮಲೇಷ್ಯಾದಲ್ಲಿ ಕಾರ್ತಿಕ್‌ ಹಾಲಿಡೇಸ್?

CSK vs PBKS
ಕ್ರೀಡೆ6 hours ago

CSK vs PBKS: ಚೆನ್ನೈಗೆ ತವರಿನಲ್ಲೇ ಆಘಾತವಿಕ್ಕಿ ಪ್ಲೇ ಆಫ್​ ಆಸೆ ಜೀವಂತವಿರಿಸಿದ ಪಂಜಾಬ್​

Neha Murder Case
ಕರ್ನಾಟಕ6 hours ago

Neha Murder Case: ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ: ಅಮಿತ್‌ ಶಾಗೆ ನೇಹಾ ತಂದೆ ಮನವಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ31 mins ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌