Chile Wildfires: ವ್ಯಾಪಕ ಕಾಡ್ಗಿಚ್ಚಿಗೆ 110ಕ್ಕಿಂತ ಹೆಚ್ಚು ಮಂದಿ ಬಲಿ; 1,600 ಮನೆ ಭಸ್ಮ - Vistara News

ವಿದೇಶ

Chile Wildfires: ವ್ಯಾಪಕ ಕಾಡ್ಗಿಚ್ಚಿಗೆ 110ಕ್ಕಿಂತ ಹೆಚ್ಚು ಮಂದಿ ಬಲಿ; 1,600 ಮನೆ ಭಸ್ಮ

Chile Wildfires: ತಾಪಮಾನ ಹೆಚ್ಚಳದಿಂದಾಗಿ ಚಿಲಿ ದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿಗೆ 110ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

VISTARANEWS.COM


on

chile
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸ್ಯಾಂಟಿಯಾಗೊ: ತಾಪಮಾನ ಹೆಚ್ಚಳದಿಂದಾಗಿ ಚಿಲಿ ದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿಗೆ (Chile Wildfires) ಇದುವರೆಗೆ 110ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಮನೆಗಳು ಸುಟ್ಟು ಭಸ್ಮವಾಗಿವೆ. ದೇಶದ ಇತಿಹಾಸದಲ್ಲೇ ಇದನ್ನು ಅತ್ಯಂತ ಭೀಕರ ಅಗ್ನಿ ದುರಂತ ಎಂದು ಪರಿಗಣಿಸಲಾಗಿದೆ.

64,000 ಎಕ್ರೆಯಲ್ಲಿ ವ್ಯಾಪಿಸಿದ ಬೆಂಕಿ

ಕೆಲವು ದಿನಗಳ ಹಿಂದೆ ಮಧ್ಯ ಚಿಲಿಯ ವಿನಾ ಡೆಲ್ ಮಾರ್ ಮತ್ತು ವಾಲ್ಪಾರೈಸೊ ಪ್ರದೇಶಗಳಲ್ಲಿ ಕಾಣಿಸಿಕೊಂಡ ಬೆಂಕಿ ಸದ್ಯ 64,000 ಎಕ್ರೆ (26,000 ಹೆಕ್ಟರ್‌)ಯಲ್ಲಿ ವ್ಯಾಪಿಸಿದೆ. ದುರಂತದಲ್ಲಿ ಇದುವರೆಗೆ ಮೃತಪಟ್ಟವರ ಪೈಕಿ ಸುಮಾರು 32 ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ. ಸುಮಾರು 1,600ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಬೆಂಕಿ ನಂದಿಸಲು 19 ಹೆಲಿಕಾಪ್ಟರ್‌ಗಳು ಮತ್ತು 450ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಅದಾಗ್ಯೂ ಈಗಲೂ 40ಕ್ಕೂ ಹೆಚ್ಚು ಕಡೆ ಬೆಂಕಿ ಹೊತ್ತಿ ಉರಿಯುತ್ತಲೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಪ್ರವಾಸಿ ತಾಣವಾಗಿರುವ ವಿನಾ ಡೆಲ್ ಮಾರ್ ಸುಮಾರು 3,00,000 ಜನಸಂಖ್ಯೆಯನ್ನು ಹೊಂದಿದೆ. ಇದು ಜನಪ್ರಿಯ ಬೀಚ್ ರೆಸಾರ್ಟ್ ಹೊಂದಿದ್ದು, ಬೇಸಗೆಯಲ್ಲಿ ಪ್ರಸಿದ್ಧ ಸಂಗೀತ ಉತ್ಸವವನ್ನು ಆಯೋಜಿಸುವ ಮೂಲಕ ಪ್ರವಾಸಿಗರ ಗಮನ ಸೆಳೆಯುತ್ತದೆ. ಇದೀಗ ಅಗ್ನಿ ದುರಂತದಿಂದ ಈ ಪ್ರದೇಶ ಹಾನಿಗೊಳಗಾಗಿದೆ. ಭಾನುವಾರ ಬೆಳಗ್ಗೆ ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಕ್ವಿಲ್ಪೆ ಪಟ್ಟಣಕ್ಕೆ ಭೇಟಿ ನೀಡಿದರು. ಇದು ಕೂಡ ಕಾಡ್ಗಿಚ್ಚಿನಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಸುಮಾರು 64 ಮಂದಿ ಸಾವನ್ನಪ್ಪಿದ್ದಾರೆ. ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ.

ಬೆಂಕಿ ದುರಂತದ ಚಿತ್ರಣ

  • ವಿನಾ ಡೆಲ್ ಮಾರ್‌ನಲ್ಲಿ 1931ರಲ್ಲಿ ಸ್ಥಾಪಿಸಲಾದ ಪ್ರಸಿದ್ಧ ಉದ್ಯಾನವು ಭಾನುವಾರ ಬೆಂಕಿಯಿಂದ ಸಂಪೂರ್ಣ ನಾಶವಾಗಿದೆ.
  • ಚಿಲಿಯಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನ ಪರಿಣಾಮವನ್ನು ಇತರ ಲ್ಯಾಟಿನ್‌ ಅಮೆರಿಕ ದೇಶಗಳೂ ಅನುಭವಿಸುತ್ತಿವೆ. ವಿವಿಧ ದೇಶಗಳಿಗೆ ಶಾಖದ ಅಲೆ ವ್ಯಾಪಿಸಿದೆ.
  • ಚಿಲಿಯ ಕರಾವಳಿ ನಗರಗಳನ್ನು ಹೊಗೆ ಆವರಿಸಿದ್ದು, ಪ್ರಮುಖ ಪ್ರದೇಶಗಳಲ್ಲಿನ ನಿವಾಸಿಗಳು ತಮ್ಮ ಮನೆಗಳನ್ನು ತೊರೆಯುತ್ತಿದ್ದಾರೆ. ಹೀಗಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
  • ಪರಿಸ್ಥಿತಿ ನಿಯಂತ್ರಿಸಲು ವಿನಾ ಡೆಲ್ ಮಾರ್, ಕ್ವಿಲ್ಪು, ವಿಲ್ಲಾ ಅಲೆಮಾನಾ ಮತ್ತು ಲಿಮಾಚೆ ಪಟ್ಟಣಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
  • ಈಗಾಗಲೇ ಸುಮಾರು 112 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
  • ಮಧ್ಯ ಚಿಲಿಯಲ್ಲಿ ದಾಖಲಾದ ತಾಪಮಾನ ಹೆಚ್ಚಳದಿಂದಾಗಿ ಕಳೆದ ವಾರ ಬೆಂಕಿ ಕಾಣಿಸಿಕೊಂಡಿತ್ತು. ಕಳೆದ ಎರಡು ತಿಂಗಳಲ್ಲಿ ಎಲ್ ನಿನೋ ಪರಿಣಾಮ ಪಶ್ಚಿಮ, ದಕ್ಷಿಣ ಅಮೆರಿಕದಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿದ್ದು, ಹೆಚ್ಚಿನ ತಾಪಮಾನಕ್ಕೆ ಕಾರಣವಾಗಿದೆ. ಇದರಿಂದ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
  • ಕಳೆದ ವರ್ಷ ಫೆಬ್ರವರಿಯಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದ ಚಿಲಿಯ 4,00,000 ಹೆಕ್ಟೇರ್‌ ಪ್ರದೇಶ ನಾಶವಾಗಿತ್ತು ಮತ್ತು 22ಕ್ಕಿಂತ ಅಧಿಕ ಮಂದಿ ಅಸುನೀಗಿದ್ದರು.

ಇದನ್ನೂ ಓದಿ: ನಿತ್ಯಾನಂದನಿಂದ ಪುತ್ರಿಯರನ್ನು ಬಿಡಿಸಿ ಎಂದು ಕೋರ್ಟ್‌ ಮೊರೆ ಹೋದ ತಂದೆ; ಮುಂದೇನಾಯ್ತು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಅಂತ್ಯಕ್ರಿಯೆ ವೇಳೆ ಬದುಕಿ ಬಂದ ಮಗಳು; ಖುಷಿಯಾಗಿದ್ದ ಪೋಷಕರಿಗೆ ಮತ್ತೆ ಶಾಕ್‌!

Viral News:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೆಕ್ಸಿಕೋದ ಕ್ಯಾಮಿಲಾ ರೊಕ್ಸಾನಾ ಮರಿನೇಜ್‌ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಇದಾದ ಬಳಿಕ 12 ಗಂಟೆಗಳ ಬಳಿಕ ಆಕೆ ಜೀವಂತವಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ. ಮಗಳು ಇನ್ನೇನು ಬದುಕಿದಳಲ್ಲಾ ಎಂದು ಪೋಷಕರು ಬಹಳ ಖುಷಿಯಲ್ಲಿದ್ದರು. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಕ್ಯಾಮಿಲಾ ಕೊನೆಯುಸಿರೆಳೆದಿದ್ದಾಳೆ.

VISTARANEWS.COM


on

Viral News
Koo

ಮೆಕ್ಸಿಕೋ: ಪ್ರೀತಿಪಾತ್ರರಾದವರನ್ನು ಕಳೆದುಕೊಳ್ಳುವಂತಹ ನೋವು ಬೇರೊಂದಿಲ್ಲ. ಅದರಲ್ಲೂ ಮನೆಯಲ್ಲಿ ನಗು ನಗುತ್ತಾ ಆಟ ಆಡುತ್ತಿದ್ದ ಮಕ್ಕಳು ಡಿಢೀರ್‌ ಸಾವನ್ನಪ್ಪಿದ್ದರೆ ಅದರ ನೋವು ಊಹಿಸೋಕೆ ಸಾಧ್ಯವಿಲ್ಲ. ಇನ್ನು ಕೆಲವೊಮ್ಮೆ ಸತ್ತಿದ್ದಾರೆಂದು ವೈದ್ಯರು ಹೇಳಿದ ಬಳಿಕ ಮತ್ತೆ ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಾಗ ಬದುಕಿ ಬಂದಿದ್ದೂ ಇದೆ. ಅಂತಹದ್ದೇ ಒಂದು ಅಪರೂಪವಾದ ಘಟನೆ(Viral News)ಯೊಂದು ಮೆಕ್ಸಿಕೋ(Mexico)ದಲ್ಲಿ ನಡೆದಿದೆ. ಆದರೆ ಸತ್ತು ಬದುಕಿದ ಬಾಲಕಿ ಮತ್ತೆ ಕೊನೆಯುಸಿರೆಳೆದಿದ್ದು, ಪೋಷಕರು ಎರಡೆರಡು ಬಾರಿ ನೋವು ಅನುಭವಿಸುವಂತಾಗಿದೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೆಕ್ಸಿಕೋದ ಕ್ಯಾಮಿಲಾ ರೊಕ್ಸಾನಾ ಮರಿನೇಜ್‌ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಇದಾದ ಬಳಿಕ 12 ಗಂಟೆಗಳ ಬಳಿಕ ಆಕೆ ಜೀವಂತವಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ. ಮಗಳು ಇನ್ನೇನು ಬದುಕಿದಳಲ್ಲಾ ಎಂದು ಪೋಷಕರು ಬಹಳ ಖುಷಿಯಲ್ಲಿದ್ದರು. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಕ್ಯಾಮಿಲಾ ಕೊನೆಯುಸಿರೆಳೆದಿದ್ದಾಳೆ.

ಏನಿದು ಘಟನೆ?

ಈ ಘಟನೆ ಕಳೆದ ವರ್ಷ ಮೆಕ್ಸಿಕೋದ ಸ್ಯಾನ್‌ ಲೂಯಿಸ್‌ ಪೋಟೋಸಿಯಲ್ಲಿ ನಡೆದಿದ್ದು, ಕ್ಯಾಮಿಲಾ ತಾಯಿ ಮೇರಿ ಜೇನ್‌ ಮೆಂಡೋಜಾ ಈ ಬಗ್ಗೆ ಮಾಹಿತಿ ನೀಡಿದ್ದಾಳೆ.ಅವರು ಹೇಳುವ ಪ್ರಕಾರ, ಹೊಟ್ಟೆ ನೋವು ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದ ಕ್ಯಾಮಿಲಾ ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಳು. ತಕ್ಷಣ ಆಕೆಯನ್ನು ಮಕ್ಕಳ ತಜ್ಞ ವೈದ್ಯರ ಬಳಿಗೆ ಕರೆದೊಯ್ಯಲಾಗಿತ್ತು. ಅವರ ಸಲಹೆ ಮೇರೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಕೆಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ. ಕೇವಲ ಹಣ್ಣು ಮತ್ತು ನೀರು ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದರು.

ಆದರೆ ಅವಳ ಸ್ಥಿತಿ ದಿನೇ ದಿನೇ ಹದಗೆಡುತ್ತಲೇ ಹೋಗಿತ್ತು.ವೈದ್ಯರ ಚಿಕಿತ್ಸೆ ಯಾವುದೇ ರೀತಿಯಲ್ಲಿ ಫಲಕಾರಿಯಾಗಲೇ ಇಲ್ಲ. ಅವಳನ್ನು ವೆಂಟಿಲೇಟರ್‌ನಲ್ಲಿ ಇಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕ್ಯಾಮಿಲಾ ಕೊನೆಯುಸಿರೆಳೆದಿದ್ದಾಳೆ. ಆಕೆ ಸಾವನ್ನಪ್ಪಿರುವ ಬಗ್ಗೆ ಸ್ವತಃ ವೈದ್ಯರೇ ದೃಢಪಡಿಸಿದ್ದರು. ಡಿಹೈಡ್ರೇಶನ್‌ನಿಂದಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು. ಇದಾದ ಬಳಿಕ ಮಗುವಿನ ದೇಹದೊಂದಿಗೆ ಪೋಷಕರು ಮನೆಗೆ ವಾಪಾಸಾಗಿ, ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು.

ಇದನ್ನೂ ಓದಿ:Viral Video: ಅಬ್ಬಾ.. ಮದ್ವೆ ಮಂಟಪದಲ್ಲೇ ಬಿಗ್‌ ಫೈಟ್‌; ವರನಿಗಾಗಿ ಯುವತಿಯರ ಮಾರಾಮಾರಿ-ವಿಡಿಯೋ ವೈರಲ್‌

ಅಂತ್ಯಕ್ರಿಯೆ ತಯಾರಿ ನಡೆಸುತ್ತಿದ್ದ ಪೋಷಕರಿಗೆ ಮತ್ತು ಕುಟುಂಬಸ್ಥರಿಗೆ ಶಾಕ್‌ವೊಂದು ಕಾದಿತ್ತು. ಕಾಫಿನ್‌ನನ್ನು ಮಲಗಿಸಿದ್ದ ಮಗಳ ದೇಹದಲ್ಲಿ ಚಲನೆಗಳನ್ನು ಕಂಡು ಎಲ್ಲರೂ ಒಂದು ಕ್ಷಣಕ್ಕೆ ದಂಗಾಗಿದ್ದರು. ಮಗುವಿನ ನಾಡಿ ಹಿಡಿದು ಪರಿಶೀಲನೆ ನಡೆಸಿದಾಗ ಕ್ಯಾಮಿಲಾ ಬದುಕಿರುವುದು ತಿಳಿಯಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದುರಾದೃಷ್ಟವಶಾತ್‌ ಆಕೆ ಎರಡನೇ ಬಾರಿ ಸಾವನ್ನಪ್ಪಿದ್ದಾಳೆ. ಅಂತೂ ಇಂತೂ ಮಗು ಮತ್ತ ಬದುಕಿ ಬಂದಲ್ಲ ಎಂಬ ಖುಷಿಯಲ್ಲಿದ್ದ ಪೋಷಕರ ನೋವು ಊಹಿಸಲು ಸಾಧ್ಯವಿರಲಿಲ್ಲ.

Continue Reading

ವಿದೇಶ

Pakistan: ಟಾಪ್‌ ಕಂಪನಿಗಳಲ್ಲಿ ಭಾರತೀಯರೇ CEO; ಆದರೆ ನಮ್ಮ ಮಕ್ಕಳು? ಪಾಕ್‌ ಸಂಸದನ ವಿಡಿಯೊ ವೈರಲ್‌

Pakistan: ಭಾರತ 30ವರ್ಷಗಳ ಹಿಂದೆಯೇ ಇಂದಿಗೆ ಏನು ಪ್ರಸ್ತುತವೋ ಅದನ್ನೇ ಮಕ್ಕಳಿಗೆ ಕಲಿಸಿದೆ. ಹೀಗಾಗಿಯೇ ಪ್ರಪಂಚದ 25ಕಂಪನಿಗಳ ಸಿಇಒಗಳು ಭಾರತೀಯರೇ ಆಗಿದ್ದಾರೆ. ಇಂಉ ಭಾರತ ಇಡೀ ಪ್ರಪಂಚದಲ್ಲಿ ಪ್ರಕಾಶಿಸುತ್ತಿದೆ. ಅವರಿಗೆ ಗೊತ್ತಿದೆ ಮಕ್ಕಳಿಗೆ, ಜನರಿಗೆ ಏನು ಕಲಿಸಬೇಕು ಎನ್ನುವುದು. ನಮ್ಮ ಐಟಿ ರಫ್ತು ಕೇವಲ 7ಅರಬ್‌ ಡಾಲರ್‌, ಆದರೆ ಭಾರತದ ಐಟಿ ರಫ್ತಿನ ಮೌಲ್ಯ 270ಡಾಲರ್ಸ್‌. ಪ್ರಪಂಚಕ್ಕೆ ಇಂದು ಯಾವುದರ ಅಗತ್ಯ ಇದೆಯೋ ಅದನ್ನೇ ಭಾರತ ಹಲವು ವರ್ಷಗಳ ಹಿಂದೆಯೇ ಭಾರತೀಯರಿಗೆ ಕಲಿಸಿತ್ತು ಎಂದು ಹೇಳಿದ್ದಾರೆ. ಮುಸ್ತಾಫಾ ಕಮಲ್‌ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

VISTARANEWS.COM


on

Pakistan
Koo

ಪಾಕಿಸ್ತಾನ: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಮಕ್ಕಳು ಚರಂಡಿ ಬೀಳುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದೇವೆ ಎಂದು ಸಂಸತ್‌ನಲ್ಲೇ ಹೇಳಿಕೆ ನೀಡಿದ್ದ ಪಾಕಿಸ್ತಾನ(Pakistan)ದ ಸಂಸದ ಸಯ್ಯದ್‌ ಮುಸ್ತಾಫಾ ಕಮಲ್‌(Syed Mustafa Kamal) ಅವರ ಮತ್ತೊಂದು ವಿಡಿಯೋ ವೈರಲ್‌(Viral Video) ಆಗಿದೆ. ಸಂಸತ್‌ನಲ್ಲಿ ಪಾಕಿಸ್ತಾನದ ಪ್ರಸ್ತುತ ಸ್ಥಿತಿಗತಿ ಬಗ್ಗೆ ವಿವರಿಸುತ್ತಾ ಭಾರತದ ಜೊತೆ ಪಾಕಿಸ್ತಾನವನ್ನು ಹೋಲಿಕೆ ಮಾಡಿದ ಮುಸ್ತಾಫಾ ಕಮಲ್‌, ಭಾರತೀಯರು ಪ್ರಪಂಚ ಟಾಪ್‌ ಕಂಪನಿಗಳ ಸಿಇಒ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ. ಇಲ್ಲಿ ಮಕ್ಕಳು ಹೊಟ್ಟೆಗಿಲ್ಲದೇ, ಸರಿಯಾದ ಶಿಕ್ಷಣವಿಲ್ಲದೇ ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಾರತ 30ವರ್ಷಗಳ ಹಿಂದೆಯೇ ಇಂದಿಗೆ ಏನು ಪ್ರಸ್ತುತವೋ ಅದನ್ನೇ ಮಕ್ಕಳಿಗೆ ಕಲಿಸಿದೆ. ಹೀಗಾಗಿಯೇ ಪ್ರಪಂಚದ 25ಕಂಪನಿಗಳ ಸಿಇಒಗಳು ಭಾರತೀಯರೇ ಆಗಿದ್ದಾರೆ. ಇಂದು ಭಾರತ ಇಡೀ ಪ್ರಪಂಚದಲ್ಲಿ ಪ್ರಕಾಶಿಸುತ್ತಿದೆ. ಅವರಿಗೆ ಗೊತ್ತಿದೆ ಮಕ್ಕಳಿಗೆ, ಜನರಿಗೆ ಏನು ಕಲಿಸಬೇಕು ಎನ್ನುವುದು. ನಮ್ಮ ಐಟಿ ರಫ್ತು ಕೇವಲ 7ಅರಬ್‌ ಡಾಲರ್‌, ಆದರೆ ಭಾರತದ ಐಟಿ ರಫ್ತಿನ ಮೌಲ್ಯ 270ಡಾಲರ್ಸ್‌. ಪ್ರಪಂಚಕ್ಕೆ ಇಂದು ಯಾವುದರ ಅಗತ್ಯ ಇದೆಯೋ ಅದನ್ನೇ ಭಾರತ ಹಲವು ವರ್ಷಗಳ ಹಿಂದೆಯೇ ಭಾರತೀಯರಿಗೆ ಕಲಿಸಿತ್ತು ಎಂದು ಹೇಳಿದ್ದಾರೆ. ಮುಸ್ತಾಫಾ ಕಮಲ್‌ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಮಕ್ಕಳು ಚರಂಡಿ ಬೀಳುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದೇವೆ. ಕರಾಚಿಯಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದಲ್ಲಿ 2.6 ಕೋಟಿ ಮಕ್ಕಳಿದ್ದು, ಅವರಿಗೆ ಶಿಕ್ಷಣ ಸೌಲಭ್ಯವೂ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ

ಕರಾಚಿ ಪಾಕಿಸ್ತಾನದ ಆದಾಯದ ಮೂಲ. ಆದರೇ ಕಳೆದ 15ವರ್ಷಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ಕರಾಚಿಗೆ ಸಾಧ್ಯವಾಗುತ್ತಿಲ್ಲ. ನೀರು ಬಂದರೂ ಟ್ಯಾಂಕರ್‌ ಮಾಫಿಯಾ ಶುರುವಾಗುತ್ತದೆ. ಇನ್ನು ನಾವು 48,000 ಶಾಲೆಗಳಿವೆ. ಆದರೆ ವರದಿ ಪ್ರಕಾರ 11,000 ಶಾಲೆಗಳು ಮುಚ್ಚಿವೆ. ಸಿಂಧ್‌ ಪ್ರಾಂತ್ಯದಲ್ಲಿ 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ದೇಶದಲ್ಲಿ ಒಟ್ಟು 2,62,00,000 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಆದರೂ ಸರ್ಕಾರ ಮಾತ್ರ ನಿದ್ದೆಯಿಂದ ಏಳುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ಪಾಕಿಸ್ತಾನ ತನ್ನನ್ನು ತಾನು ಅಫ್ಘಾನಿಸ್ತಾನ, ಬಾಂಗ್ಲಾದೇಶದ ಜೊತೆಗೆ ನಾವು ನಮ್ಮನ್ನು ಹೋಲಿಸಿಕೊಳ್ಳಬೇಕಿದೆ. ಭಾರತದ ಜೊತೆಗೆ ನಮ್ಮ ಹೋಲಿಕೆ ಸಾಧ್ಯವೇ ಇಲ್ಲ. ಭಾರತದ ಬಹಳ ಎತ್ತರದಲ್ಲಿದೆ. ಆಪಲ್‌ ಜೊತೆ ಆರೆಂಜ್‌ ಹೋಲಿಗೆ ಸಾಧ್ಯವೇ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:Lok Sabha Election 2024: ಬಿಜೆಪಿಯ 400+ ಲೆಕ್ಕಾಚಾರ ಉಲ್ಟಾ? ಚುನಾವಣೆ ಹೊತ್ತಲ್ಲೇ ಪಕ್ಷಕ್ಕೆ ಬಿಗ್‌ ಶಾಕ್‌!

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಒಪ್ಪಿಕೊಂಡರೆ ಸಾಲದು, ಪಾಕ್‌ ತನ್ನನ್ನು ಸರಿಪಡಿಸಿಕೊಳ್ಳಲಿ

ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಕಾಶ್ಮೀರ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸುತ್ತ ಭಾರತಕ್ಕೆ ಮುಜುಗರ ಸೃಷ್ಟಿಸಲು ವಿಫಲ ಪ್ರಯತ್ನ ಮಾಡುತ್ತಿರುವ ಪಾಕ್‌ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ಗಮನಿಸಲಿ.

VISTARANEWS.COM


on

Pakistan
Koo

ಕೆಲವು ದಿನಗಳ ಹಿಂದೆ ಪಾಕ್‌(Pakistan) ಸಂಸತ್‌ನಲ್ಲೇ ಅಲ್ಲಿನ ವಿಪಕ್ಷ ನಾಯಕನೇ ಭಾರತವನ್ನು ಹಾಡಿ ಹೊಗಳಿರುವ ವಿಡಿಯೋವೊಂದು ವೈರಲ್‌(Viral Video) ಆಗಿತ್ತು. ಇದೀಗ ಮತ್ತೊಬ್ಬ ಸಂಸದ ಭಾರತದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ಸಂಸದ ಸಯ್ಯದ್‌ ಮುಸ್ತಾಫಾ ಕಮಲ್‌ ಭಾರತ ಮತ್ತು ಪಾಕಿಸ್ತಾನವನ್ನು ಹೋಲಿಕೆ ಮಾಡಿ ಮಾತನಾಡಿದ್ದು, ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನದ ಸ್ಥಿತಿ ಹೇಗಿದೆ ನೋಡಿ ಎಂದು ಹೇಳಿದ್ದಾರೆ. ಇದೀಗ ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಮಕ್ಕಳು ಚರಂಡಿ ಬೀಳುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದೇವೆ. ಕರಾಚಿಯಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದಲ್ಲಿ 2.6 ಕೋಟಿ ಮಕ್ಕಳಿದ್ದು, ಅವರಿಗೆ ಶಿಕ್ಷಣ ಸೌಲಭ್ಯವೂ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಇಡೀ ಪ್ರಪಂಚದಲ್ಲೇ ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ನಾವು ಮಾತ್ರ ಹಣಕಾಸಿನ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಮೌಲಾನ ಫಜ್ಲೂರ್‌ ರೆಹಮಾನ್‌ ಹೇಳಿದ್ದರು. ಅವರು ಪಾಕಿಸ್ತಾನ ಸಂಸತ್‌ನಲ್ಲಿ ಸರ್ಕಾರ ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಭಾರತ ಜಾಗತಿಕ ಮಟ್ಟದಲ್ಲಿ ಸೂಪರ್‌ ಪವರ್‌ಫುಲ್‌ ರಾಷ್ಟ್ರವಾಗಿ ಬೆಳೆಯುತ್ತಿದೆ ಪಾಕಿಸ್ತಾನ ಮಾತ್ರ ದಿವಾಳಿತನದತ್ತ ಸಾಗುತ್ತಿದೆ. 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಇಂದು ಭಾರತದ ಸ್ಥಿತಿ ಎಲ್ಲಿದೆ ಹಾಗೂ ನಮ್ಮ ಸ್ಥಿತಿ ಎಲ್ಲಿದೆ? ಇಷ್ಟಕ್ಕೆಲ್ಲಾ ಯಾರು ಹೊಣೆ ಎಂದು ಕಟುವಾಗಿ ಪ್ರಶ್ನಿಸಿದ್ದರು.

ಪಾಕಿಸ್ತಾನದ ವೈಫಲ್ಯಗಳ ಪಟ್ಟಿ ಮಾಡಹೊರಟರೆ ಮುಗಿಯುವುದೇ ಇಲ್ಲ. ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ಆಧುನಿಕ ಶಿಕ್ಷಣ ಕಲಿಸುವ ಶಾಲೆಗಳಿಲ್ಲ. ಸಿಂಧ್‌ ಪ್ರಾಂತ್ಯದಲ್ಲಿ 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಅಲ್ಲಿ ಒಟ್ಟು 2.62 ಕೋಟಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಮತಾಂಧತೆ ಕಲಿಸುವ ಮದ್ರಸ ಶಿಕ್ಷಣ ಮಾತ್ರ ವ್ಯಾಪಕವಾಗಿದೆ. ಹಣದುಬ್ಬರದ ಏರಿಕೆಯಿಂದಾಗಿ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಯು ದಿನೇದಿನೆ ಜಾಸ್ತಿಯಾಗುತ್ತಿದ್ದು, ಜನ ಹೈರಾಣಾಗುತ್ತಿದ್ದಾರೆ. ಒಂದು ಲೀಟರ್‌ ಪೆಟ್ರೋಲ್‌ಗೆ 290 ರೂ. (ಪಾಕಿಸ್ತಾನದ ರೂಪಾಯಿ) ಆದರೆ, ಒಂದು ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ಕೊಡಬೇಕಾಗಿದೆ. ಒಂದು ರೊಟ್ಟಿಗೆ 25 ರೂ. ನೀಡಬೇಕಾಗಿದೆ. ಇದರಿಂದಾಗಿ ಸಾಮಾನ್ಯ ಜನ ಮೂರು ಹೊತ್ತು ಊಟ ಮಾಡಲು ಕೂಡ ತೊಂದರೆಯಾಗುತ್ತಿದೆ. ಹಣಕಾಸಿನ ಕೊರತೆಯಿಂದ ಬಳಲುತ್ತಿರುವ ಪಾಕ್‌ನ ವಿದೇಶಿ ವಿನಿಮಯ ಮೀಸಲು ನಿಧಿ ಆಮದನ್ನು ಪೂರೈಸಲು ಸಾಕಾಗುತ್ತಿಲ್ಲ.

ಉಗ್ರರ ಪೋಷಣೆ, ಅವರಿಗೆ ಹಣಕಾಸು ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದ ಪಾಕಿಸ್ತಾನ ದಿವಾಳಿಯಾಗಿದೆ. ಇದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಎದುರು ಹಣಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಈಗಾಗಲೇ ಐಎಂಎಫ್‌ 3 ಶತಕೋಟಿ ಡಾಲರ್‌ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಮೂರು ವರ್ಷಗಳವರೆಗೆ 6 ಶತಕೋಟಿ ಡಾಲರ್‌ ಸಾಲ ನೀಡಿ ಎಂದು ಪಾಕಿಸ್ತಾನ ಮನವಿ ಮಾಡುತ್ತಿದೆ. ಆದರೆ, ಪಾಕ್‌ನಲ್ಲಿ ದಿನೇದಿನೆ ಹಣದುಬ್ಬರದ ಏರಿಕೆಯಾಗುತ್ತಿರುವ ಕಾರಣ ಸಾಲ ನೀಡಲು ಐಎಂಎಫ್‌ ಹಿಂದೇಟು ಹಾಕುತ್ತಿದೆ. ಇದಕ್ಕಾಗಿಯೇ, ಆಡಳಿತ ಕಾರ್ಯತಂತ್ರದ ಘಟಕಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಐಎಂಎಫ್‌ ಪಾಕಿಸ್ತಾನಕ್ಕೆ ಸೂಚಿದ ಶಿಫಾರಸ್ಸಿನ ಪಟ್ಟಿಯಲ್ಲಿ ನಷ್ಟದಲ್ಲಿರುವ ಸರ್ಕಾರಿ ಉದ್ಯಮಗಳ ಖಾಸಗೀಕರಣವೂ ಸೇರಿದೆ.

ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಕಾಶ್ಮೀರ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸುತ್ತ ಭಾರತಕ್ಕೆ ಮುಜುಗರ ಸೃಷ್ಟಿಸಲು ವಿಫಲ ಪ್ರಯತ್ನ ಮಾಡುತ್ತಿರುವ ಪಾಕ್‌ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ಗಮನಿಸಲಿ. ಅಲ್ಲಿನ ರಾಜಕೀಯ ನಾಯಕರೇ ತಮ್ಮ ಸ್ಥಿತಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಾಗ, ತಿದ್ದಿಕೊಳ್ಳಲು ಸರಿಯಾದ ಕಾಲ ಬಂದಿದೆ ಎಂದರ್ಥ.

ಇದನ್ನೂ ಓದಿ: CAA: ಪಾಕಿಸ್ತಾನದಿಂದ ಬಂದ ಹಿಂದುಗಳಿಗೆ ಸಿಎಎ ಅನ್ವಯ ಭಾರತದ ಪೌರತ್ವ; ದೆಹಲಿಯಲ್ಲಿ ಸಂಭ್ರಮ, Video ಇಲ್ಲಿದೆ

Continue Reading

ದೇಶ

CAA: ಪಾಕಿಸ್ತಾನದಿಂದ ಬಂದ ಹಿಂದುಗಳಿಗೆ ಸಿಎಎ ಅನ್ವಯ ಭಾರತದ ಪೌರತ್ವ; ದೆಹಲಿಯಲ್ಲಿ ಸಂಭ್ರಮ, Video ಇಲ್ಲಿದೆ

CAA: ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ಪಡೆಯುವುದನ್ನು ಸಿಎಎ ಜಾರಿಯಿಂದ ಸುಲಭಗೊಳಿಸುತ್ತದೆ. ಡಿಸೆಂಬರ್ 31, 2014 ರಂದು ಮತ್ತು ಅದಕ್ಕೂ ಮೊದಲು ಭಾರತಕ್ಕೆ ಆಗಮಿಸಿದ ಮುಸ್ಲಿಮರನ್ನು ಹೊರತುಪಡಿಸಿ ವಲಸಿಗರಿಗೆ ಈ ಕಾನೂನು ಅನ್ವಯಿಸುತ್ತದೆ. ಈಗ ಸಿಎಎ ನಿಯಮಗಳ ಅಡಿಯಲ್ಲಿ 14 ಜನರಿಗೆ ಕೇಂದ್ರ ಸರ್ಕಾರ ಪ್ರಮಾಣಪತ್ರ ನೀಡಿದೆ. ಪೌರತ್ವ ಪಡೆದ ಹಿಂದುಗಳು ಸಂತಸ ವ್ಯಕ್ತಪಡಿಸಿದ್ದಾರೆ.

VISTARANEWS.COM


on

CAA
Koo

ನವದೆಹಲಿ: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಯಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ (Indian Citizenship) ನೀಡುವುದು ಕಾಯ್ದೆಯ ಉದ್ದೇಶವಾಗಿದ್ದು, ಕೇಂದ್ರ ಸರ್ಕಾರವು (Central Government) 300 ಜನರಿಗೆ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರ ಭಾಗವಾಗಿಯೇ 14 ಜನರಿಗೆ ಪೌರತ್ವ ಪ್ರಮಾಣಪತ್ರಗಳನ್ನು (Citizenship Papers) ಹಸ್ತಾಂತರಿಸಲಾಗಿದೆ. ಹೀಗೆ, ಪಾಕಿಸ್ತಾನದಲ್ಲಿ ಬಹುಸಂಖ್ಯಾತರಿಂದ ಸಂಕಷ್ಟ ಅನುಭವಿಸಿ, ಭಾರತಕ್ಕೆ ಬಂದು ನೆಲೆಸಿದ ಹಿಂದುಗಳಿಗೆ ಪೌರತ್ವ ದೊರೆತಿದ್ದು, ಅವರ ಇಡೀ ಕುಟುಂಬವು ಸಂತಸ ವ್ಯಕ್ತಪಡಿಸಿದೆ.

ಹೌದು, ಪಾಕಿಸ್ತಾನದಿಂದ ಬಂದು, ದೆಹಲಿಯ ಆದರ್ಶ ನಗರದಲ್ಲಿ ವಾಸಿಸುತ್ತಿರುವ ಹಲವರಿಗೆ ಭಾರತದ ಪೌರತ್ವ ನೀಡಲಾಗಿದ್ದು, ಅವರೀಗ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಹಾಗೂ ಮಕ್ಕಳು ಸೇರಿ ಹಲವರು ಭಾರತದ ಪೌರತ್ವ ಹಿಡಿದಿರುವ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. “ಪಾಕಿಸ್ತಾನದಲ್ಲಿ ಹಿಂದು ಹೆಣ್ಣುಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಹಿಂದು ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಬಿಡಿ, ಮನೆಯಿಂದಲೂ ಹೊರಗೆ ಬರಲು ಆಗುವುದಿಲ್ಲ. ಮುಸ್ಲಿಮರು ಹಿಂದು ಹೆಣ್ಣುಮಕ್ಕಳನ್ನು ಅಪಹರಣ ಮಾಡುತ್ತಾರೆ. ಬಲವಂತವಾಗಿ ಮತಾಂತರ ಮಾಡುತ್ತಾರೆ, ಕಿರುಕುಳ ನೀಡುತ್ತಾರೆ. ಈಗ ಭಾರತದ ಪೌರತ್ವ ಸಿಕ್ಕಿರುವುದು ಖುಷಿಯಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಧನ್ಯವಾದಗಳು” ಎಂದು ಸಿಎಎ ಅಡಿಯಲ್ಲಿ ಪೌರತ್ವ ಪಡೆದ ಭಾವನಾ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019 ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

Continue Reading
Advertisement
prajwal revanna case bhavani revanna hd revanna
ಕ್ರೈಂ11 seconds ago

Prajwal Revanna Case: ಕಷ್ಟಕ್ಕಾಗದ ಭವಾನಿ ರೇವಣ್ಣ ಮೇಲೆ ದೇವೇಗೌಡ ಫ್ಯಾಮಿಲಿ ಕೆಂಡಾಮಂಡಲ

Murder Case in Anekla
ಬೆಂಗಳೂರು ಗ್ರಾಮಾಂತರ8 mins ago

Murder case : ಬಯಲು ಶೌಚಾಲಯಕ್ಕೆ ಹೋದ ಬಾಲಕನ ದೊಣ್ಣೆಯಿಂದ ಹೊಡೆದು ಕೊಂದರು

Kannada New Movie tanush shivannas mr natwarlal In OTT
ಸ್ಯಾಂಡಲ್ ವುಡ್9 mins ago

Kannada New Movie: ಒಟಿಟಿಗೆ ಲಗ್ಗೆ ಇಟ್ಟ ತನುಷ್ ಶಿವಣ್ಣ ಅಭಿನಯದ ಕ್ರೈಮ್-ಆ್ಯಕ್ಷನ್ ಸಿನಿಮಾ ʻMr ನಟ್ವರ್ ಲಾಲ್ʼ!

Viral News
ವೈರಲ್ ನ್ಯೂಸ್12 mins ago

Viral News: ಅಂತ್ಯಕ್ರಿಯೆ ವೇಳೆ ಬದುಕಿ ಬಂದ ಮಗಳು; ಖುಷಿಯಾಗಿದ್ದ ಪೋಷಕರಿಗೆ ಮತ್ತೆ ಶಾಕ್‌!

Aniruddha Jatkar Chef Chidambara Release Date announce
ಸ್ಯಾಂಡಲ್ ವುಡ್22 mins ago

Aniruddha Jatkar: ಅನಿರುದ್ದ್ ನಟನೆಯ “Chef ಚಿದಂಬರ” ರಿಲೀಸ್‌ ಡೇಟ್‌ ಅನೌನ್ಸ್‌!

Viral Video
ಕ್ರೀಡೆ41 mins ago

Viral Video: ಗಲ್ಲಿ ಕ್ರಿಕೆಟ್​ನಲ್ಲಿ ಎಡಗೈ ಬ್ಯಾಟಿಂಗ್​ ನಡೆಸಿದ ಕೆ.ಎಲ್​ ರಾಹುಲ್​

Physical Abuse
ಕ್ರೈಂ57 mins ago

Physical Abuse: ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅರ್ಚಕನಿಂದ ನಿರೂಪಕಿ ಮೇಲೆ ಅತ್ಯಾಚಾರ

anjali murder suspect girish2
ಕ್ರೈಂ58 mins ago

Anjali Murder Case: ಥಳಿಸಿದವರಿಗೆ ಈತ ಅಂಜಲಿ ಹಂತಕ ಎಂದು ಗೊತ್ತೇ ಇರಲಿಲ್ಲ! ಕೊಲೆಗಾರ ಸಿಕ್ಕಿಬಿದ್ದಿದ್ದು ಹೀಗೆ

Viral video
ವೈರಲ್ ನ್ಯೂಸ್1 hour ago

Viral Video: ಅಬ್ಬಾ.. ಮದ್ವೆ ಮಂಟಪದಲ್ಲೇ ಬಿಗ್‌ ಫೈಟ್‌; ವರನಿಗಾಗಿ ಯುವತಿಯರ ಮಾರಾಮಾರಿ-ವಿಡಿಯೋ ವೈರಲ್‌

T20 World Cup 2024
ಕ್ರೀಡೆ1 hour ago

T20 World Cup 2024: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತದ ಎದುರಾಳಿ ಯಾರು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ5 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ6 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ21 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌