Chile Wildfires: ವ್ಯಾಪಕ ಕಾಡ್ಗಿಚ್ಚಿಗೆ 110ಕ್ಕಿಂತ ಹೆಚ್ಚು ಮಂದಿ ಬಲಿ; 1,600 ಮನೆ ಭಸ್ಮ - Vistara News

ವಿದೇಶ

Chile Wildfires: ವ್ಯಾಪಕ ಕಾಡ್ಗಿಚ್ಚಿಗೆ 110ಕ್ಕಿಂತ ಹೆಚ್ಚು ಮಂದಿ ಬಲಿ; 1,600 ಮನೆ ಭಸ್ಮ

Chile Wildfires: ತಾಪಮಾನ ಹೆಚ್ಚಳದಿಂದಾಗಿ ಚಿಲಿ ದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿಗೆ 110ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

VISTARANEWS.COM


on

chile
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸ್ಯಾಂಟಿಯಾಗೊ: ತಾಪಮಾನ ಹೆಚ್ಚಳದಿಂದಾಗಿ ಚಿಲಿ ದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿಗೆ (Chile Wildfires) ಇದುವರೆಗೆ 110ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಮನೆಗಳು ಸುಟ್ಟು ಭಸ್ಮವಾಗಿವೆ. ದೇಶದ ಇತಿಹಾಸದಲ್ಲೇ ಇದನ್ನು ಅತ್ಯಂತ ಭೀಕರ ಅಗ್ನಿ ದುರಂತ ಎಂದು ಪರಿಗಣಿಸಲಾಗಿದೆ.

64,000 ಎಕ್ರೆಯಲ್ಲಿ ವ್ಯಾಪಿಸಿದ ಬೆಂಕಿ

ಕೆಲವು ದಿನಗಳ ಹಿಂದೆ ಮಧ್ಯ ಚಿಲಿಯ ವಿನಾ ಡೆಲ್ ಮಾರ್ ಮತ್ತು ವಾಲ್ಪಾರೈಸೊ ಪ್ರದೇಶಗಳಲ್ಲಿ ಕಾಣಿಸಿಕೊಂಡ ಬೆಂಕಿ ಸದ್ಯ 64,000 ಎಕ್ರೆ (26,000 ಹೆಕ್ಟರ್‌)ಯಲ್ಲಿ ವ್ಯಾಪಿಸಿದೆ. ದುರಂತದಲ್ಲಿ ಇದುವರೆಗೆ ಮೃತಪಟ್ಟವರ ಪೈಕಿ ಸುಮಾರು 32 ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ. ಸುಮಾರು 1,600ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಬೆಂಕಿ ನಂದಿಸಲು 19 ಹೆಲಿಕಾಪ್ಟರ್‌ಗಳು ಮತ್ತು 450ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಅದಾಗ್ಯೂ ಈಗಲೂ 40ಕ್ಕೂ ಹೆಚ್ಚು ಕಡೆ ಬೆಂಕಿ ಹೊತ್ತಿ ಉರಿಯುತ್ತಲೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಪ್ರವಾಸಿ ತಾಣವಾಗಿರುವ ವಿನಾ ಡೆಲ್ ಮಾರ್ ಸುಮಾರು 3,00,000 ಜನಸಂಖ್ಯೆಯನ್ನು ಹೊಂದಿದೆ. ಇದು ಜನಪ್ರಿಯ ಬೀಚ್ ರೆಸಾರ್ಟ್ ಹೊಂದಿದ್ದು, ಬೇಸಗೆಯಲ್ಲಿ ಪ್ರಸಿದ್ಧ ಸಂಗೀತ ಉತ್ಸವವನ್ನು ಆಯೋಜಿಸುವ ಮೂಲಕ ಪ್ರವಾಸಿಗರ ಗಮನ ಸೆಳೆಯುತ್ತದೆ. ಇದೀಗ ಅಗ್ನಿ ದುರಂತದಿಂದ ಈ ಪ್ರದೇಶ ಹಾನಿಗೊಳಗಾಗಿದೆ. ಭಾನುವಾರ ಬೆಳಗ್ಗೆ ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಕ್ವಿಲ್ಪೆ ಪಟ್ಟಣಕ್ಕೆ ಭೇಟಿ ನೀಡಿದರು. ಇದು ಕೂಡ ಕಾಡ್ಗಿಚ್ಚಿನಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಸುಮಾರು 64 ಮಂದಿ ಸಾವನ್ನಪ್ಪಿದ್ದಾರೆ. ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ.

ಬೆಂಕಿ ದುರಂತದ ಚಿತ್ರಣ

  • ವಿನಾ ಡೆಲ್ ಮಾರ್‌ನಲ್ಲಿ 1931ರಲ್ಲಿ ಸ್ಥಾಪಿಸಲಾದ ಪ್ರಸಿದ್ಧ ಉದ್ಯಾನವು ಭಾನುವಾರ ಬೆಂಕಿಯಿಂದ ಸಂಪೂರ್ಣ ನಾಶವಾಗಿದೆ.
  • ಚಿಲಿಯಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನ ಪರಿಣಾಮವನ್ನು ಇತರ ಲ್ಯಾಟಿನ್‌ ಅಮೆರಿಕ ದೇಶಗಳೂ ಅನುಭವಿಸುತ್ತಿವೆ. ವಿವಿಧ ದೇಶಗಳಿಗೆ ಶಾಖದ ಅಲೆ ವ್ಯಾಪಿಸಿದೆ.
  • ಚಿಲಿಯ ಕರಾವಳಿ ನಗರಗಳನ್ನು ಹೊಗೆ ಆವರಿಸಿದ್ದು, ಪ್ರಮುಖ ಪ್ರದೇಶಗಳಲ್ಲಿನ ನಿವಾಸಿಗಳು ತಮ್ಮ ಮನೆಗಳನ್ನು ತೊರೆಯುತ್ತಿದ್ದಾರೆ. ಹೀಗಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
  • ಪರಿಸ್ಥಿತಿ ನಿಯಂತ್ರಿಸಲು ವಿನಾ ಡೆಲ್ ಮಾರ್, ಕ್ವಿಲ್ಪು, ವಿಲ್ಲಾ ಅಲೆಮಾನಾ ಮತ್ತು ಲಿಮಾಚೆ ಪಟ್ಟಣಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
  • ಈಗಾಗಲೇ ಸುಮಾರು 112 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
  • ಮಧ್ಯ ಚಿಲಿಯಲ್ಲಿ ದಾಖಲಾದ ತಾಪಮಾನ ಹೆಚ್ಚಳದಿಂದಾಗಿ ಕಳೆದ ವಾರ ಬೆಂಕಿ ಕಾಣಿಸಿಕೊಂಡಿತ್ತು. ಕಳೆದ ಎರಡು ತಿಂಗಳಲ್ಲಿ ಎಲ್ ನಿನೋ ಪರಿಣಾಮ ಪಶ್ಚಿಮ, ದಕ್ಷಿಣ ಅಮೆರಿಕದಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿದ್ದು, ಹೆಚ್ಚಿನ ತಾಪಮಾನಕ್ಕೆ ಕಾರಣವಾಗಿದೆ. ಇದರಿಂದ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
  • ಕಳೆದ ವರ್ಷ ಫೆಬ್ರವರಿಯಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದ ಚಿಲಿಯ 4,00,000 ಹೆಕ್ಟೇರ್‌ ಪ್ರದೇಶ ನಾಶವಾಗಿತ್ತು ಮತ್ತು 22ಕ್ಕಿಂತ ಅಧಿಕ ಮಂದಿ ಅಸುನೀಗಿದ್ದರು.

ಇದನ್ನೂ ಓದಿ: ನಿತ್ಯಾನಂದನಿಂದ ಪುತ್ರಿಯರನ್ನು ಬಿಡಿಸಿ ಎಂದು ಕೋರ್ಟ್‌ ಮೊರೆ ಹೋದ ತಂದೆ; ಮುಂದೇನಾಯ್ತು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs ENG: ರಾಂಚಿ ಟೆಸ್ಟ್​ ಪಂದ್ಯಕ್ಕೆ ಖಲಿಸ್ತಾನಿ ಉಗ್ರನಿಂದ ಬೆದರಿಕೆ; ಸ್ಟೇಡಿಯಂಗೆ ಬಿಗಿ ಭದ್ರತೆ!

ಫೆ.23ರಿಂದ ರಾಂಚಿಯಲ್ಲಿ ಆರಂಭಗೊಳ್ಳಲಿರುವ ಭಾರತ ಮತ್ತುಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯವನ್ನು(IND vs ENG) ರದ್ದು ಮಾಡುವಂತೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆಯೊಡ್ಡಿದ್ದಾನೆ.

VISTARANEWS.COM


on

Gurpatwant Singh Pannun
Koo

ರಾಂಚಿ: ಭಾರತ ಮತ್ತು ಇಂಗ್ಲೆಂಡ್​(India vs England 4th test) ನಡುವೆ ಫೆ.23ರಿಂದ ರಾಂಚಿಯಲ್ಲಿ ಆರಂಭಗೊಳ್ಳಲಿರುವ ನಾಲ್ಕನೇ ಟೆಸ್ಟ್​ ಪಂದ್ಯವನ್ನು(IND vs ENG) ರದ್ದು ಮಾಡುವಂತೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆಯೊಡ್ಡಿದ್ದಾನೆ. ಸಿಪಿಐ (ಮಾವೋವಾದಿ)ಗೆ ಗಲಭೆ ಸೃಷ್ಟಿಸುವಂತೆ ವಿಡಿಯೊ ಮೂಲಕ ಒತ್ತಾಯಿಸಿದ್ದಾನೆ.

ಭಾರತ ಮತ್ತು ಇಂಗ್ಲೆಂಡ್ ಆಟಗಾರರು ಈಗಾಗಲೇ ರಾಂಚಿ ತಲುಪಿದ್ದು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಗುರುಪತ್ವಂತ್ ಸಿಂಗ್ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆಯ ಹಿನ್ನೆಲೆಯಲ್ಲಿ ಜಾರ್ಖಂಡ್ ಪೊಲೀಸರು ಅಲರ್ಟ್ ಆಗಿದ್ದು ಪಂದ್ಯ ನಡೆಯುವ ಜೆಎಸ್​ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣ(JSCA International Stadium Complex, Ranchi) ಸಂಕೀರ್ಣದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಿದ್ದಾರೆ ಮಾಡಿದ್ದಾರೆ. ಜತೆಗೆ ಪ್ರಚೋಧನೆ ನೀಡಿರುವ ಗುರುಪತ್ವಂತ್ ವಿರುದ್ಧ ದೂರ್ವಾ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದ ಬಗ್ಗೆ ಪಿಟಿಐಗೆ ಮಾಹಿತಿ ನೀಡಿರುವ ಇಲ್ಲಿನ ಡಿಎಸ್ಪಿ ಪಿ.ಕೆ.ಮಿಶ್ರಾ, ಪಂದ್ಯಕ್ಕೆ ಯಾರು ಅಡ್ಡಿಪಡಿಸದಂತೆ ಸಂಪೂರ್ಣ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಯಾರಿಗೂ ಭಯ ಬೇಡ. ಗುರುಪತ್ವಂತ್ ಸಿಂಗ್ ಈ ರೀತಿಯ ಬೆದರಿಕೆ ಒಡ್ಡುತ್ತಿರುವುದು ಇದೇ ಮೊದಲೆನಲ್ಲ. ಇದಕ್ಕೂ ಮುನ್ನ ಹಲವು ಬಾರಿ ಈ ರೀತಿಯ ಬೆದರಿಕೆ ಹಾಕಿದ್ದಾನೆ. ಈ ಹಿಂದೆ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಬೆದರಿಕೆಯೊಡ್ಡಿದ್ದ. ಈ ಕಾರಣಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಆತನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ Ind vs Eng : ನಾಲ್ಕನೇ ಟೆಸ್ಟ್​ಗೆ ಜಸ್​ಪ್ರಿತ್ ಬುಮ್ರಾ ಬಿಡುಗಡೆ ​, ರಾಹುಲ್ ಔಟ್​

ಇದಕ್ಕೂ ಮೊದಲು ಪನ್ನುನ್ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೇ ಬೆದರಿಕೆ ಹಾಕಿದ್ದ. ಡಿಸೆಂಬರ್ 30ರಂದು ಪ್ರಧಾನಿಯವರ ಅಯೋಧ್ಯೆ ರೋಡ್‌ಶೋ ಅನ್ನು ಹಾಳುಗೆಡಹುವಂತೆ ಮುಸ್ಲಿಮರನ್ನು ಪ್ರಚೋದಿಸಲು ಯತ್ನಿಸಿದ್ದ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Punjab CM Bhagwant Mann) ಮತ್ತು ಡಿಜಿಪಿ ಗೌರವ್ ಯಾದವ್ ಅವರನ್ನು ಕೂಡ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದ. ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದಂದು ಸಿಎಂ ಮಾನ್ ಮೇಲೆ ದಾಳಿ ಮಾಡಲು ಒಟ್ಟಾಗುವಂತೆ ಪನ್ನುನ್‌, ಇತರ ಖಲಿಸ್ತಾನಿ ಗ್ಯಾಂಗ್‌ಸ್ಟರ್‌ಗಳಿಗೆ ಕರೆ ನೀಡಿದ್ದ.

ಜನವರಿ 22ರಂದು ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಶಂಕುಸ್ಥಾಪನೆ ಸಮಾರಂಭದಲ್ಲಿ ವಿಧ್ವಂಸಕ ಕೃತ್ಯ ಎಸಗುವುದಾಗಿ ಬೆದರಿಕೆ ಹಾಕಿದ್ದ. ʼಬಾಬರಿ ಮಸೀದಿಯನ್ನು ನಾಶ ಮಾಡಿ ನಿರ್ಮಿಸಲಾದ ಸಮಾರಂಭವನ್ನು ವಿರೋಧಿಸಿʼ ಎಂದು ಕೂಡ ಈತ ಮುಸ್ಲಿಂ ಸಮುದಾಯವನ್ನು ಒತ್ತಾಯಿಸಿದ್ದಾನೆ. ಹತರಾದ ಸಾವಿರಾರು ಮುಸ್ಲಿಮರ ದೇಹಗಳ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ ಎಂದಿದ್ದಾನೆ ಆತ. ಪ್ರಧಾನಿ ನರೇಂದ್ರ ಮೋದಿ (pm narendra modi) ಅವರನ್ನು ಪನ್ನುನ್‌ ʼಮುಸ್ಲಿಮರ ಜಾಗತಿಕ ಶತ್ರುʼ ಎಂದು ಕರೆದಿದ್ದ.

ಗುರುಪತ್ವಂತ್ ಸಿಂಗ್ ಪನ್ನುನ್ ಅವರು ಸಿಖ್ಸ್ ಫಾರ್ ಜಸ್ಟಿಸ್ (SFJ) ಎಂಬ ಪ್ರತ್ಯೇಕತಾವಾದಿ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದಾನೆ. 2007 ರಲ್ಲಿ ಸ್ಥಾಪಿತವಾದ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯನ್ನು ಭಾರತ ಸರ್ಕಾರ 2019 ರಲ್ಲಿ ನಿಷೇಧಿಸಿತು. ಅಂದಿನಿಂದ ಪನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಕಣ್ಗಾವಲಿನಲ್ಲಿದ್ದ. ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆಯಡಿ 2020 ರಲ್ಲಿ ಭಾರತ ಸರ್ಕಾರವು ಪನ್ನುವನ್ನು ಭಯೋತ್ಪಾದಕ ಎಂದು ಘೋಷಿಸಿತು. ಹೊರಡಿಸಿತು.

Continue Reading

ದೇಶ

18 ವರ್ಷ ದುಬೈ ಜೈಲಲ್ಲಿದ್ದು, ಭಾರತಕ್ಕೆ ಬಂದ ಐವರು; ಕುಟುಂಬಸ್ಥರ ಭಾವುಕ ಕ್ಷಣ ನೋಡಿ

18 ವರ್ಷಗಳ ಹಿಂದೆ ದುಬೈನಲ್ಲಿ ಕೆಲಸಕ್ಕೆ ಸೇರಿದ್ದ ಐವರು ಭಾರತೀಯರು ಕೊಲೆ ಕೇಸ್‌ನಲ್ಲಿ ಜೈಲುಪಾಲಾಗಿದ್ದರು. ಅವರೀಗ ಕೊನೆಗೂ ಭಾರತಕ್ಕೆ ವಾಪಸಾಗಿದ್ದಾರೆ. ಅವರು ಕುಟುಂಬದೊಂದಿಗೆ ಕಳೆದ ಭಾವುಕ ಕ್ಷಣಗಳ ವಿಡಿಯೊ ಇಲ್ಲಿದೆ.

VISTARANEWS.COM


on

Dubai Family
Koo

ಹೈದರಾಬಾದ್:‌ ಯಾರಿಗೇ ಆಗಲಿ ಕುಟುಂಬವನ್ನು ತೊರೆದು ಬದುಕುವುದು ತುಂಬ ಕಷ್ಟ. ಬದುಕಿನ ಅನಿವಾರ್ಯತೆಗೆ ಸಿಲುಕಿ ಒಂದು ತಿಂಗಳು, ಆರು ತಿಂಗಳು ಕಷ್ಟಪಟ್ಟು ಕುಟುಂಬಸ್ಥರಿಂದ ದೂರ ಇರುವವರು ಇದ್ದಾರೆ. ಆದರೆ, ತೆಲಂಗಾಣದ (Telangana) ಐವರು ವ್ಯಕ್ತಿಗಳು ಕೆಲಸಕ್ಕೆಂದು ದುಬೈಗೆ (Dubai) ತೆರಳಿ, ಅಲ್ಲಿ ಸಂಕಷ್ಟಕ್ಕೆ ಸಿಲುಕಿ, ಜೈಲು ಸೇರಿ, ಸುಮಾರು 18 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ್ದಾರೆ. ಅವರು ತೆಲಂಗಾಣಕ್ಕೆ ಆಗಮಿಸುತ್ತಲೇ ಅವರನ್ನು ಕುಟುಂಬಸ್ಥರು ಭಾವುಕ ಕ್ಷಣಗಳ ಮೂಲಕ ಸ್ವಾಗತಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ (Viral Video) ಆಗಿದೆ.

ಏನಿದು ಪ್ರಕರಣ?

ತೆಲಂಗಾಣದ ಶಿವರಾತ್ರಿ ಮಲ್ಲೇಶ್‌, ಶಿವರಾತ್ರಿ ರವಿ, ಗೊಲ್ಲೆಮ್‌ ನಾಂಫಳ್ಳಿ, ದುಂಡುಗುಳ ಲಕ್ಷ್ಮಣ್‌ ಹಾಗೂ ಶಿವರಾತ್ರಿ ಹಣಮಂತು ಅವರು 2005ರಲ್ಲಿ ಕೆಲಸಕ್ಕೆಂದು ದುಬೈಗೆ ತೆರಳಿದ್ದರು. ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯವರಾದ ಇವರು ದುಬೈನಲ್ಲಿ ನೇಪಾಳ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಸಿಲುಕಿದ್ದರು. ವಾಚ್‌ಮನ್‌ ಆಗಿದ್ದ ನೇಪಾಳದ ವ್ಯಕ್ತಿಯನ್ನು ಕೊಂದ ಆರೋಪದಲ್ಲಿ ಐವರೂ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ನ್ಯಾಯಾಲಯವು ಇವರಿಗೆ 18 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈಗ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ, ಜೈಲಿನಿಂದ ಬಿಡುಗಡೆಯಾಗಿ ಭಾರತಕ್ಕೆ ವಾಪಸಾಗಿದ್ದಾರೆ.

ಕೆ.ಟಿ.ರಾಮರಾವ್‌ ಪ್ರಯತ್ನದ ಫಲವಾಗಿ ಬಿಡುಗಡೆ

ತೆಲಂಗಾಣದ ಐವರು ವ್ಯಕ್ತಿಗಳು ದುಬೈ ಜೈಲಿನಿಂದ ಬಿಡುಗಡೆಯಾಗಿರುವುದರ ಹಿಂದೆ ಬಿಆರ್‌ಎಸ್‌ ನಾಯಕ, ಮಾಜಿ ಸಚಿವ ಕೆ.ಟಿ.ರಾಮರಾವ್‌ ಅವರ ಶ್ರಮ ಇದೆ ಎಂದು ಬಿಆರ್‌ಎಸ್‌ ಪಕ್ಷವು ತಿಳಿಸಿದೆ. ಹಾಗೆ ನೋಡಿದರೆ, ತೆಲಂಗಾಣದ ಐವರು ವ್ಯಕ್ತಿಗಳಿಗೆ ದುಬೈ ನ್ಯಾಯಾಲಯವು 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಕೆ.ಟಿ.ರಾಮರಾವ್‌ ಅವರು 2011ರಲ್ಲಿ ಐವರ ಕುಟುಂಬಸ್ಥರನ್ನು ಕರೆದುಕೊಂಡು ದುಬೈಗೆ ಹೋಗಿದ್ದರು. ಅಲ್ಲದೆ, ಐವರ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ ಕೊಡಿಸಿದ್ದರು. ಇವರ ಪರಿಶ್ರಮದ ಫಲವಾಗಿ ಐವರೂ ಬೇಗನೆ ಬಿಡುಗಡೆಯಾಗಿದ್ದಾರೆ ಎಂದು ಬಿಆರ್‌ಎಸ್‌ ತಿಳಿಸಿದೆ. ಹಾಗೆಯೇ, ವಿಡಿಯೊವನ್ನು ಕೂಡ ಹಂಚಿಕೊಂಡಿದೆ.

ಇದನ್ನೂ ಓದಿ: IND vs ENG: ಧೋನಿಯ ಶೈಲಿಯಲ್ಲೇ ವಿಕೆಟ್​ ಕೀಪಿಂಗ್​ ನಡೆಸಿದ ಜುರೆಲ್; ವಿಡಿಯೊ ವೈರಲ್​

ಭಾಷೆಯ ಕಾರಣದಿಂದಾಗಿ ಐವರು ವ್ಯಕ್ತಿಗಳು ಕಾನೂನು ಹೋರಾಟ ಮಾಡಲು ಆಗಿರಲಿಲ್ಲ. ಹಾಗೆಯೇ, ಭಾರತದ ರಾಯಭಾರಿಗಳನ್ನು ಕೂಡ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆದರೆ, ಕೆ.ಟಿ.ರಾಮರಾವ್‌ ಅವರು ಹಣಕಾಸು, ರಾಜತಾಂತ್ರಿಕ, ಸಂವಹನದ ಮೂಲಕ ಕ್ಷಿಪ್ರವಾಗಿ ಐವರು ವ್ಯಕ್ತಿಗಳನ್ನು ಬಿಡುಗಡೆಗೊಳಿಸಲು ನೆರವಾಗಿದ್ದಾರೆ ಎಂದು ಪಕ್ಷವು ತಿಳಿಸಿದೆ. ಐವರು ವ್ಯಕ್ತಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ, ಅವರ ಕುಟುಂಬಸ್ಥರು ಹಾರ ಹಾಕಿ, ತಬ್ಬಿಕೊಂಡು, ಕಣ್ಣೀರು ಹಾಕಿ ಸ್ವಾಗತಿಸಿದ್ದಾರೆ. ಇಡೀ ಕುಟುಂಬ ಕೆ.ಟಿ.ರಾಮರಾವ್‌ ಅವರಿಗೆ ಕೃತಜ್ಞತೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವಿದೇಶ

Worst President: ಅಮೆರಿಕ ಇತಿಹಾಸದಲ್ಲೇ ಡೊನಾಲ್ಡ್‌ ಟ್ರಂಪ್‌ ಕೆಟ್ಟ ಅಧ್ಯಕ್ಷ; ಬೆಸ್ಟ್‌ ಯಾರು?

Worst President: ಅಮೆರಿಕದಲ್ಲಿ ಬೆಸ್ಟ್‌ ಹಾಗೂ ವರ್ಸ್ಟ್‌ ಅಧ್ಯಕ್ಷರು ಯಾರು ಎಂಬ ಕುರಿತು ಸಮೀಕ್ಷೆ ನಡೆದಿದೆ. ಇದರಲ್ಲಿ ಡೊನಾಲ್ಟ್‌ ಟ್ರಂಪ್‌ ಅವರು ಅಮೆರಿಕದ ಅತಿ ಕೆಟ್ಟ ಅಥವಾ ಕಳಪೆ ಆಡಳಿತ ನಡೆಸಿದ ಅಧ್ಯಕ್ಷ ಎನಿಸಿದ್ದಾರೆ. ಹಾಗಾದರೆ, ಬೆಸ್ಟ್‌ ಪ್ರೆಸಿಡೆಂಟ್‌ ಯಾರು? ಇಲ್ಲಿದೆ ಮಾಹಿತಿ.

VISTARANEWS.COM


on

Donald trump
Koo

ವಾಷಿಂಗ್ಟನ್‌: ಅಧಿಕಾರದಲ್ಲಿದಷ್ಟು ದಿನ ವಿವಾದಾತ್ಮಕ ಹೇಳಿಕೆ, ಅಚ್ಚರಿಯ ತೀರ್ಮಾನ, ಮಾಧ್ಯಮದವರ ಮೇಲೆ ನಿಯಂತ್ರಣ ಸೇರಿ ಹಲವು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಅಧ್ಯಕ್ಷ (Worst President) ಎಂಬ ಕುಖ್ಯಾತಿಗೆ ಭಾಜನರಾಗಿದ್ದಾರೆ. ಅಮೆರಿಕ ಕಂಡ 45 ಅಧ್ಯಕ್ಷರಲ್ಲಿ ಯಾರು ಬೆಸ್ಟ್‌, ಯಾರು ವರ್ಸ್ಟ್‌ ಅಧ್ಯಕ್ಷ ಎಂಬ ಕುರಿತು ಸಮೀಕ್ಷೆ (Survey) ನಡೆಸಲಾಗಿದ್ದು, ಡೊನಾಲ್ಡ್‌ ಟ್ರಂಪ್‌ ಅವರು 45ನೇ ಸ್ಥಾನ ಪಡೆಯುವ ಮೂಲಕ ಕುಖ್ಯಾತಿ ಗಳಿಸಿದ್ದಾರೆ.

ರಾಜಕೀಯ ಪರಿಣತರಾದ ಜಸ್ಟಿನ್‌ ವಾನ್‌ ಹಾಗೂ ಬ್ರೆಂಡನ್‌ ರೊಟ್ಟಿಂಘಾಸ್‌ ಅವರು 525 ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರೆಸಿಡೆನ್ಶಿಯಲ್‌ ಗ್ರೇಟ್‌ನೆಸ್‌ ಪ್ರಾಜೆಕ್ಟ್‌ ಎಕ್ಸ್‌ಪರ್ಟ್‌ ಸರ್ವೇ (2024 Presidential Greatness Project Expert Survey) ಎಂಬ ಸಮೀಕ್ಷೆ ಪ್ರಕಟಿಸಿದ್ದಾರೆ. ಸಮೀಕ್ಷೆ ವರದಿ ಪ್ರಕಾರ ಡೊನಾಲ್ಡ್‌ ಟ್ರಂಪ್‌ ಅವರು ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದಾರೆ. ಹಾಲಿ ಅಧ್ಯಕ್ಷ ಜೋ ಬೈಡೆನ್‌ ಅವರು 14ನೇ ಸ್ಥಾನ ಪಡೆದರೆ, ಅಬ್ರಾಹಂ ಲಿಂಕನ್‌ ಅವರು ಮೊದಲ ಸ್ಥಾನ ಪಡೆಯುವ ಮೂಲಕ ಬೆಸ್ಟ್‌ ಅಧ್ಯಕ್ಷ ಎನಿಸಿದ್ದಾರೆ.

ರಾಜಕೀಯ ಸೇರಿ ಹಲವು ಕ್ಷೇತ್ರಗಳ ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಿ ವರದಿ ಪ್ರಕಟಿಸಲಾಗಿದೆ. “ಡೊನಾಲ್ಡ್‌ ಟ್ರಂಪ್‌ ಅವರು ತುಂಬ ಸಾಂಪ್ರದಾಯಿಕ ನಾಯಕತ್ವ ವಿಧಾನ ಅನುಸರಿಸಿದರು. ಅವರ ಅವಧಿಯಲ್ಲಿ ಅತಿ ಕೆಟ್ಟ ಆಡಳಿತ ನೀಡಲಾಯಿತು. ಇದರಿಂದ ಅಮೆರಿಕದ ಘನತೆಗೆ ಧಕ್ಕೆಯಾಯಿತು” ಎಂಬುದಾಗಿ ತಜ್ಞರು ಡೊನಾಲ್ಡ್‌ ಟ್ರಂಪ್‌ ಬಗ್ಗೆ ಸಮೀಕ್ಷೆ ವೇಳೆ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕ ಅಧ್ಯಕ್ಷರಿಗೆ 100ಕ್ಕೆ ಎಷ್ಟು ಅಂಕ ಕೊಡುತ್ತೀರಿ ಎಂದು ಸಮೀಕ್ಷೆ ನಡೆಸಲಾಗಿದೆ. 0 ಅಂಕ ಕೊಟ್ಟರೆ ವಿಫಲ ಅಧ್ಯಕ್ಷ, 50 ಅಂಕ ನೀಡಿದರೆ ಸಾಧಾರಣ ಹಾಗೂ 100 ಅಂಕ ಕೊಟ್ಟರೆ ಅತ್ಯುತ್ತಮ ಅಧ್ಯಕ್ಷ ಎಂಬುದಾಗಿ ಪರಿಗಣಿಸುವುದು ಸಮೀಕ್ಷೆಯ ವಿಧಾನವಾಗಿತ್ತು.

ಇದನ್ನೂ ಓದಿ: Donald Trump: ದಂಗೆಗೆ ಪ್ರಚೋದನೆ; ಅಧ್ಯಕ್ಷ ಚುನಾವಣೆ ಮತದಾನದಿಂದ ಡೊನಾಲ್ಡ್‌ ಟ್ರಂಪ್‌ ಅನರ್ಹ

ಸಮೀಕ್ಷೆ ವೇಳೆ ಅಬ್ರಾಹಂ ಲಿಂಕನ್‌ ಅವರಿಗೆ 95.03 ಅಂಕ ಸಿಕ್ಕವು. ಇನ್ನು ಡೊನಾಲ್ಡ್‌ ಟ್ರಂಪ್‌ ಅವರು ಕೇವಲ 10.92 ಅಂಕಗಳನ್ನು ಗಳಿಸಿ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದರು. ಬೆಸ್ಟ್‌ ಅಧ್ಯಕ್ಷರಲ್ಲಿ ನಂತರದ ಸ್ಥಾನವು ಫ್ರಾಂಕ್ಲಿನ್‌ ರೂಸ್‌ವೆಲ್ಟ್‌, ಜಾರ್ಜ್‌ ವಾಷಿಂಗ್ಟನ್‌, ಟೆಡ್ಡಿ ರೂಸ್‌ವೆಲ್ಟ್‌, ಥಾಮಸ್‌ ಜೆಫರ್‌ಸನ್‌, ಹ್ಯಾರಿ ಟ್ರುಮನ್‌, ಬರಾಕ್‌ ಒಬಾಮ ಇದ್ದಾರೆ. ಇನ್ನು ಜೇಮ್ಸ್‌ ಬುಚಾನನ್‌, ಆಂಡ್ರ್ಯೂ ಜಾನ್ಸನ್‌, ಫ್ರಾಂಕ್ಲಿನ್‌ ಪೀಯರ್ಸ್‌, ವಿಲಿಯಂ ಹೆನ್ರಿ ಹ್ಯಾರಿಸನ್‌ ಹಾಗೂ ವಾರೆನ್‌ ಹಾರ್ಡಿಂಗ್‌ ಅವರು ಪಟ್ಟಿಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ತಂತ್ರಜ್ಞಾನ

ವಿಸ್ತಾರ Explainer: Elon Musk: ಮೆದುಳಿಗೆ ಚಿಪ್‌ ಅಳವಡಿಸಿದ ವ್ಯಕ್ತಿ ಯೋಚನೆಯ ಮೂಲಕವೇ ಮೌಸ್‌ ಅಲ್ಲಾಡಿಸಿದ! ಏನಿದು ಎಲಾನ್‌ ಮಸ್ಕ್‌ ಪ್ರಯೋಗ?

Elon Musk: ‌ ಕಳೆದ ತಿಂಗಳು ‌ನ್ಯೂರಾಲಿಂಕ್ ಕಂಪನಿಯು ʼಮಾನವ ಪ್ರಯೋಗʼಕ್ಕೆ ಅನುಮೋದನೆ ಪಡೆದ ನಂತರ ಮೊದಲ ವ್ಯಕ್ತಿಗೆ ಮೆದುಳಿನ ಚಿಪ್ ಅನ್ನು ಯಶಸ್ವಿಯಾಗಿ ಅಳವಡಿಸಿತು.

VISTARANEWS.COM


on

elon musk neuralink
Koo

ಹೊಸದಿಲ್ಲಿ: ‘ನ್ಯೂರಾಲಿಂಕ್ (Neuralink) ಬ್ರೈನ್ ಚಿಪ್‌ (Brain Chip) ಅಳವಡಿಸಿದ ಮೊದಲ ವ್ಯಕ್ತಿ ಇದೀಗ ಯೋಚನೆಯಿಂದಲೇ ಕಂಪ್ಯೂಟರ್‌ ಪರದೆಯ ಮೇಲಿನ ಕರ್ಸರ್‌ ಅನ್ನು ಚಲಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾನೆʼ ಎಂದು ಟೆಕ್‌ ದೈತ್ಯ ಎಲಾನ್‌ ಮಸ್ಕ್‌ (Elon Musk) ಹೇಳಿದ್ದಾರೆ.

ಇದು ನಿಜವಾಗಿದ್ದರೆ, ಇದೊಂದು ಐತಿಹಾಸಿಕ ತಂತ್ರಜ್ಞಾನ ಬೆಳವಣಿಗೆ ಎನಿಸಲಿದೆ. ಈ ಪ್ರಯೋಗವನ್ನು ಮುಂದುವರಿಸಿ ಮನುಷ್ಯನ ನರರೋಗಗಳನ್ನು ನಿವಾರಿಸುವ, ಮಾನವ ಮೆದುಳು- ಕಂಪ್ಯೂಟರ್‌ ಸುಲಲಿತ ಸಂಪರ್ಕವನ್ನು ಸಾಧ್ಯವಾಗಿಸುವ ಕನಸನ್ನು ಎಲಾನ್‌ ಮಸ್ಕ್‌ ಹೊಂದಿದ್ದಾನೆ.

“ಮೆದುಳಿನ ಚಿಪ್‌ ಅಳವಡಿಕೆ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಈಗ ಪೂರ್ಣ ಚೇತರಿಸಿಕೊಂಡಿದ್ದಾನೆ. ನಿರೀಕ್ಷಿತ ನರಚಲನೆ ಪರಿಣಾಮಗಳನ್ನು ತೋರಿಸಿದ್ದಾನೆ. ಕೇವಲ ಯೋಚಿಸುವ ಮೂಲಕ ಪರದೆಯಲ್ಲಿ ಮೌಸ್ ಅನ್ನು ಚಲಿಸಲು ಆತನಿಂದ ಸಾಧ್ಯವಾಗಿದೆ” ಎಂದು ನ್ಯೂರಾಲಿಂಕ್‌ ಸ್ಟಾರ್ಟಪ್‌ನ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿದ್ದಾರೆ.

“ಈ ವ್ಯಕ್ತಿಯು ಸಾಧಿಸಿದ ಮೌಸ್ ಬಟನ್ ಕ್ಲಿಕ್‌ಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವುದು ನ್ಯೂರಾಲಿಂಕ್‌ನ ಪ್ರಸ್ತುತ ಗುರಿಯಾಗಿದೆ” ಎಂದು ಮಸ್ಕ್ ಹೇಳಿದ್ದಾರೆ. ಕಳೆದ ತಿಂಗಳು ಕಂಪನಿಯು ʼಮಾನವ ಪ್ರಯೋಗʼಕ್ಕೆ ಅನುಮೋದನೆ ಪಡೆದ ನಂತರ ಮೊದಲ ವ್ಯಕ್ತಿಗೆ ಮೆದುಳಿನ ಚಿಪ್ ಅನ್ನು ಯಶಸ್ವಿಯಾಗಿ ಅಳವಡಿಸಿತು. ವ್ಯಕ್ತಿಯ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ.

ಬನ್ನಿ, ನ್ಯೂರಾಲಿಂಕ್‌ ಹಾಗೂ ಅದು ನಡೆಸುತ್ತಿರುವ ಪ್ರಯೋಗದ ವಿವರಗಳನ್ನು ಇಲ್ಲಿ ನೋಡೋಣ.

ನ್ಯೂರಾಲಿಂಕ್ ಎಂದರೇನು?

2016ರಲ್ಲಿ ಎಲೋನ್ ಮಸ್ಕ್ ಸ್ಥಾಪಿಸಿದ ನ್ಯೂರಾಲಿಂಕ್ ಒಂದು ನ್ಯೂರೋಟೆಕ್ನಾಲಜಿ ಕಂಪನಿ. ʼನ್ಯೂರಾಲಿಂಕ್ʼ ಮಾನವನ ಮೆದುಳಿನಲ್ಲಿ ಅಳವಡಿಸಬಹುದಾದ ಒಂದು ಚಿಕ್ಕ ಕಂಪ್ಯೂಟರ್ ಚಿಪ್‌. ನ್ಯೂರಾಲಿಂಕ್‌ನ ಆರಂಭಿಕ ಪ್ರಯೋಗವೆಂದರೆ ʼಟೆಲಿಪತಿʼ. ಇದು ಬಳಕೆದಾರರು ತಮ್ಮ ಮನಸ್ಸಿನಿಂದಲೇ ನೇರವಾಗಿ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಜೊತೆಗೆ ನರವೈಜ್ಞಾನಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುತ್ತವೆ.

ನಮ್ಮ ದೇಹವನ್ನು ನಿಯಂತ್ರಿಸಲು ನಮ್ಮ ಮಿದುಳುಗಳು ವಿದ್ಯುತ್ ಸಂಕೇತಗಳನ್ನು ಬಳಸುವಂತೆಯೇ, ನ್ಯೂರಾಲಿಂಕ್‌ ಮೆದುಳಿನ ಚಿಪ್ ನಮ್ಮ ಆಲೋಚನೆಗಳು ಮತ್ತು ಡಿಜಿಟಲ್ ಪ್ರಪಂಚದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಜನವರಿಯಲ್ಲಿ ಎಲಾನ್ ಮಸ್ಕ್ ಮೊದಲ ಮಾನವನಿಗೆ ಚಿಪ್‌ನ ಯಶಸ್ವಿ ಅಳವಡಿಕೆಯಾಯಿತು ಎಂದು ಘೋಷಿಸಿದರು. ಕಂಪನಿಯು ಸೆಪ್ಟೆಂಬರ್‌ನಲ್ಲಿ ಮಾನವ ಪ್ರಯೋಗಕ್ಕೆ ಅನುಮೋದನೆಯನ್ನು ಪಡೆದುಕೊಂಡಿತ್ತು.

Raja Marga Column Elon Musk Chip Market

ಮೆದುಳನ್ನು ಕಂಪ್ಯೂಟರ್‌ಗೆ ಸಂಪರ್ಕಿಸುವುದು ಏಕೆ?

ʼದಿ ಲಿಂಕ್ʼ ಎಂದು ಕರೆಯಲ್ಪಡುವ ಇದು ಮೆದುಳು ಮತ್ತು ಕಂಪ್ಯೂಟರ್ ನಡುವಿನ ತಡೆರಹಿತ ಸಂವಹನವನ್ನು ಉಂಟುಮಾಡುವ ಗುರಿಯನ್ನು ಹೊಂದಿದೆ. ನಮ್ಮ ಮೆದುಳನ್ನು ಕಂಪ್ಯೂಟರ್‌ಗಳಿಗೆ ಸಂಪರ್ಕಿಸುವ ಮೂಲಕ, ನಾವು ನಮ್ಮ ಮನಸ್ಸನ್ನು ವಿಸ್ತರಿಸಬಹುದು ಮತ್ತು ಮಿತಿಗಳನ್ನು ಮೀರಬಹುದು ಎಂದು ಎಲಾನ್‌ ಮಸ್ಕ್‌ ನಂಬುತ್ತಾರೆ. ಇದು ನಮ್ಮ ಬುದ್ಧಿವಂತಿಕೆಯನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯುವಂತಿದೆ. ವಿಷಯಗಳನ್ನು ವೇಗವಾಗಿ ಕಲಿಯಲು, ಮಾಹಿತಿಯನ್ನು ತ್ವರಿತವಾಗಿ ದಕ್ಕಿಸಿಕೊಳ್ಳಲು, ಮಾತಿನ ಅಗತ್ಯವಿಲ್ಲದೇ ನಮ್ಮ ಆಲೋಚನೆಗಳನ್ನು ಮಾತ್ರ ಬಳಸಿಕೊಂಡು ಇತರರೊಂದಿಗೆ ಸಂವಹನ ನಡೆಸಲು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ನ್ಯೂರಾಲಿಂಕ್‌ ಮೂಲಕ ಭವಿಷ್ಯದಲ್ಲಿ ನಮ್ಮ ಮೆದುಳಿನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು, ಮಾನವರು ಮತ್ತು ತಂತ್ರಜ್ಞಾನದ ನಡುವೆ ಇನ್ನಷ್ಟು ಗಾಢ ಸಹಜೀವನ ನಡೆಸಬಹುದು ಎಂಬುದು ಎಲಾನ್‌ ಮಸ್ಕ್‌ ಕನಸು.

ಇದು ನರವೈಜ್ಞಾನಿಕ ಸಮಸ್ಯೆ, ನರವ್ಯೂಹದ ಅಸ್ವಸ್ಥತೆ, ಮೆದುಳಿನ ಕಾರ್ಯಾಚರಣೆಯ ಸಮಸ್ಯೆಗಳನ್ನು ಹೊಂದಿದ ವ್ಯಕ್ತಿಗಳನ್ನು ಗುಣಪಡಿಸುವ ಚಿಂತನೆಯನ್ನೂ ಹೊಂದಿದೆ. ಎಲೆಕ್ಟ್ರಾನಿಕ್ ಸಾಧನಗಳ ಸಂಪರ್ಕದ ಮೂಲಕ ಮೆದುಳಿನ ನಿಯಂತ್ರಣವನ್ನು ಮರಳಿ ಪಡೆಯಲು ಇದು ಸಹಾಯ ಮಾಡುತ್ತದೆ. ನರಗಳ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಚಿಂತನೆಯನ್ನು ಕಾರ್ಯರೂಪಕ್ಕೆ ತರುತ್ತದೆ.

ಕಂಪನಿ $5 ಶತಕೋಟಿ ಮೌಲ್ಯ ಹೊಂದಿದೆ. ಪ್ರಯೋಗದ ಸುರಕ್ಷತಾ ಕ್ರಮಗಳ ಬಗ್ಗೆ ವಿಜ್ಞಾನಿಗಳಲ್ಲಿ ಕಳವಳವಿದೆ.

ಇದನ್ನೂ ಓದಿ: Elon Musk: ಭಾರತಕ್ಕೆ ವಿಶ್ವಸಂಸ್ಥೆ ಕಾಯಂ ಸ್ಥಾನ ನೀಡಿ; ಎಲಾನ್‌ ಮಸ್ಕ್‌ ಆಗ್ರಹ

Continue Reading
Advertisement
Indus App Store launched by Walmart-owned PhonePe
ದೇಶ9 mins ago

PhonePay: ಫೋನ್‌ಪೇ ಸ್ವದೇಶಿ ಆ್ಯಪ್‌ಸ್ಟೋರ್ ‘ಇಂಡಸ್’ ಲಾಂಚ್; ಗೂಗಲ್‌ ಪ್ಲೇ ಸ್ಟೋರ್‌ಗೆ ಪಂಚ್!

shishya sweekara Mahotsav in shri swarnavalli maha samsthana matha dharmasabhe
ಉತ್ತರ ಕನ್ನಡ20 mins ago

Sirsi News: ಅಪಕಾರ ಮಾಡಿದವರಿಗೂ ಉಪಕಾರ ಬಯಸುವ ಸದ್ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಿ: ಶ್ರೀವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ

Gurpatwant Singh Pannun
ಕ್ರೀಡೆ26 mins ago

IND vs ENG: ರಾಂಚಿ ಟೆಸ್ಟ್​ ಪಂದ್ಯಕ್ಕೆ ಖಲಿಸ್ತಾನಿ ಉಗ್ರನಿಂದ ಬೆದರಿಕೆ; ಸ್ಟೇಡಿಯಂಗೆ ಬಿಗಿ ಭದ್ರತೆ!

Hello-minister-N-chaluvarayaswamy-in-vistara-news-2
ಕರ್ನಾಟಕ40 mins ago

Krishi Bhagya Scheme: 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಮರು ಜಾರಿ: ಎನ್. ಚಲುವರಾಯಸ್ವಾಮಿ

bike accident
ಪ್ರಮುಖ ಸುದ್ದಿ2 hours ago

Road Accident: ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ; ಬಸ್-ಬೈಕ್ ಡಿಕ್ಕಿಯಾಗಿ ನಾಲ್ವರ ದುರ್ಮರಣ

vistara top ten
ಟಾಪ್ 10 ನ್ಯೂಸ್2 hours ago

VISTARA TOP 10 NEWS: ನಾಡಗೀತೆಯಲ್ಲೂ ಸರಕಾರ ಎಡವಟ್ಟು ಪಬ್ಲಿಕ್‌ ಪ್ಲೇಸಲ್ಲಿ ಸೇದಬಾರದು ಸಿಗರೇಟು.. ಮತ್ತು ಇತರ ಸುದ್ದಿಗಳು

Vamshi Krishna hits six sixes
ಕ್ರೀಡೆ2 hours ago

C K Nayudu Trophy: ಒಂದೇ ಓವರ್​ನಲ್ಲಿ 6 ಸಿಕ್ಸರ್ ಬಾರಿಸಿದ ವಂಶಿ ಕೃಷ್ಣ; ವಿಡಿಯೊ ವೈರಲ್​

IT department has withdrawn 65 crore rupees from the Congress party accounts
ದೇಶ2 hours ago

Congress Party: ಕಾಂಗ್ರೆಸ್‌ ಖಾತೆಗಳಿಂದ 65 ಕೋಟಿ ರೂ. ವಿತ್‌ಡ್ರಾ ಮಾಡಿದ ಐಟಿ ಇಲಾಖೆ!

Minister Madhu Bangarappa inauguration by Beneficiaries convention of guarantee schemes in Soraba
ಶಿವಮೊಗ್ಗ2 hours ago

Shivamogga News: ಸೊರಬದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ

No water supply
ಬೆಂಗಳೂರು2 hours ago

No Water Supply: ಫೆ.27, 28ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 21 2024
ಭವಿಷ್ಯ18 hours ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ2 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ3 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ4 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ4 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ5 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

read your daily horoscope predictions for february 16 2024
ಭವಿಷ್ಯ6 days ago

Dina Bhavishya : ಈ ಹಿಂದೆ ಹಣ ಹೂಡಿಕೆ ಮಾಡಿದ್ದರೆ ಇಂದು ಈ ರಾಶಿಯವರಿಗೆ ಡಬಲ್‌ ಲಾಭ

Siddaramaiah
ರಾಜಕೀಯ6 days ago

Karnataka Budget Session 2024: ಬಿಜೆಪಿಯವರು ಗೂಂಡಾಗಳು ಎಂದ ಸಿಎಂ; ತೊಡೆ ತಟ್ಟಿದ್ದು ನಾವಾ – ನೀವಾ ಎಂದ ವಿಪಕ್ಷ!

ಟ್ರೆಂಡಿಂಗ್‌