Child Artists : ಸೀರಿಯಲ್‌, ರಿಯಾಲಿಟಿ ಶೋದಲ್ಲಿ ಮಕ್ಕಳ ಅಭಿನಯ; ಡಿಸಿ ಅನುಮತಿ ಸಹಿತ ಹಲವು ಕಂಡಿಷನ್ಸ್‌ - Vistara News

ಸಿನಿಮಾ

Child Artists : ಸೀರಿಯಲ್‌, ರಿಯಾಲಿಟಿ ಶೋದಲ್ಲಿ ಮಕ್ಕಳ ಅಭಿನಯ; ಡಿಸಿ ಅನುಮತಿ ಸಹಿತ ಹಲವು ಕಂಡಿಷನ್ಸ್‌

Child artists: ಮನರಂಜನಾ ಕ್ಷೇತ್ರದಲ್ಲಿ ಮಕ್ಕಳನ್ನು ಬಳಕೆ ಮಾಡುವ ವಿಚಾರದಲ್ಲಿ ಕಾರ್ಮಿಕ ಇಲಾಖೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಶೂಟಿಂಗ್ ನಲ್ಲಿ 5 ಗಂಟೆಗಿಂತ ಹೆಚ್ಚು ಅವಧಿ ಮಕ್ಕಳನ್ನು ಬಳಸುವಂತಿಲ್ಲ. ಶಿಕ್ಷಣಕ್ಕೆ ತೊಂದರೆಯಾಗದಂತೆ ಮಕ್ಕಳನ್ನು ನಿರಂತರವಾಗಿ 27 ದಿನಕ್ಕಿಂತ ಹೆಚ್ಚು ದಿನಗಳನ್ನು ಈ ಕೆಲಸಗಳಲ್ಲಿ ತೊಡಗಿಸಬಾರದು ಎಂದು ಸೂಚಿಸಲಾಗಿದೆ.

VISTARANEWS.COM


on

Child Artists labour rules
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಿನಿಮಾ, ಸೀರಿಯಲ್‌, ರಿಯಾಲಿಟಿ ಶೋ ಸೇರಿದಂತೆ ಮನರಂಜನಾ ಕ್ಷೇತ್ರದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ (Child Artists) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಇದರ ಮೂಲಕ ಮಕ್ಕಳು ಮತ್ತು ಪೋಷಕರು ಆದಾಯವನ್ನೂ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಮಕ್ಕಳ ಬಳಕೆಗೆ ಕೆಲವೊಂದು ಷರತ್ತುಗಳನ್ನು ಕಾರ್ಮಿಕ ಇಲಾಖೆ (Labour Department) ವಿಧಿಸಲು ಮುಂದಾಗಿದೆ. 14 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಸೇರಿದಂತೆ ಯಾವುದೇ ಉದ್ಯೋಗದಲ್ಲಿ ಬಳಸಬಾರದು ಎಂಬ ಬಾಲ ಕಾರ್ಮಿಕ ವಿರೋಧಿ ನಿಯಮಗಳನ್ನು (Child labour rules) ಮನರಂಜನಾ ಕ್ಷೇತ್ರಕ್ಕೂ (Entertainment field) ಅನ್ವಯವಾಗಿಸಲು ಸಿದ್ಧತೆ ನಡೆದಿದೆ. ಇದರ ನಿಯಮಗಳಲ್ಲಿ ಅತ್ಯಂತ ಪ್ರಮುಖವಾದುದು ಎಂದರೆ ಮನರಂಜನಾ ಕ್ಷೇತ್ರದಲ್ಲಿ ಮಕ್ಕಳು ನಟಿಸುವ ಮುನ್ನ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು ಮತ್ತು ಈ ರೀತಿಯ ನಟನೆಗೆ ಸಮಯದ ಮಿತಿ ವಿಧಿಸಬೇಕು ಹಾಗೂ ನಟನೆಯಿಂದ ಗಳಿಸಿದ ಹಣದಲ್ಲಿ ಒಂದಂಶವನ್ನು ಅವರ ಹೆಸರಿನಲ್ಲೇ ಠೇವಣಿಯಾಗಿ ಇಡಬೇಕು ಎನ್ನುವುದು.

ಮಕ್ಕಳ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಾಯೋಜಕರು ದಂಡಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಶೂಟಿಂಗ್ ನಲ್ಲಿ 5 ಗಂಟೆಗಿಂತ ಹೆಚ್ಚು ಅವಧಿ ಮಕ್ಕಳನ್ನು ಬಳಸುವಂತಿಲ್ಲ. ಶಿಕ್ಷಣಕ್ಕೆ ತೊಂದರೆಯಾಗದಂತೆ ನಿರಂತರವಾಗಿ 27 ದಿನಕ್ಕಿಂತ ಹೆಚ್ಚು ದಿನಗಳನ್ನು ಈ ಕೆಲಸಗಳಲ್ಲಿ ತೊಡಗಿಸಬಾರದು ಎನ್ನುವುದು ಪ್ರಮುಖ ಸೂಚನೆಗಳಾಗಿವೆ.

ಸದ್ಯ ಈ ಸುತ್ತೋಲೆ ಚಲನಚಿತ್ರ ವಾಣಿಜ್ಯ ಮಂಡಳಿ, ಚಲನಚಿತ್ರ ಅಕಾಡೆಮಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೂ ತಲುಪಿದೆ. ಮುಂದಿನ ದಿನಗಳಲ್ಲಿ ನಿಯಮಾವಳಿ ಹೇಗೆಲ್ಲ ಬಾಲ ಕಾರ್ಮಿಕರ ಅಭಿನಯಕ್ಕೆ ಅನ್ವಯ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಹಾಗಿದ್ದರೆ ಸುತ್ತೋಲೆಯಲ್ಲಿ ಏನೆಲ್ಲ ಅಂಶಗಳನ್ನು ತಿಳಿಸಲಾಗಿದೆ.?

ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಕರ್ನಾಟಕ ನಿಯಮಗಳನ್ವಯ ಮಕ್ಕಳು ಬಾಲ ನಟ/ನಟಿಯಾಗಿ ನಟನಾ ಕೆಲಸ ಮಾಡಲು ಇರುವ ಕಾನೂನಾತ್ಮಕ ಅಂಶಗಳು ಹಾಗೂ ಅನುಷ್ಠಾನ ಮಾಡುವ ಕುರಿತ ಸುತ್ತೋಲೆ ಇದಾಗಿದೆ. ಇದರ ಪ್ರಕಾರ, ಈಗಿರುವ ಕಾಯಿದೆ ಪ್ರಕಾರ ನಟನಾ ಕ್ಷೇತ್ರದಲ್ಲಿ ಮಕ್ಕಳು ತೊಡಗಿಸಿಕೊಳ್ಳಬಹುದು. ಆದರೆ, ಅದಕ್ಕೂ ಕೆಲವೊಂದು ನಿಯಮಗಳಿವೆ ಎಂದು ತಿಳಿಸಲಾಗಿದೆ.

ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ತಿದ್ದುಪಡಿ ಕಾಯ್ದೆ,2016 ರನ್ವಯ ಮಕ್ಕಳ ಶಿಕ್ಷಣದ ಹಕ್ಕಿಗೆ ಮಾರಕವಾಗದಂತೆ ಬಾಲ ನಟ/ನಟಿಯಾಗಿ ನಟನಾ ಕೆಲಸ ನಿರ್ವಹಿಸುವ ಚಟುವಟಿಕೆಗಳನ್ನು ಹೊರತುಪಡಿಸಿ, ಕಾಯ್ದೆಯು ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ ಹಾಗೂ ಕಾಯ್ದೆಯು 14- 18ರ ವಯಸ್ಸಿನ ಕಿಶೋರ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕಿಶೋರಾವಸ್ಥೆಯ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ತಪ್ಪಿತಸ್ಥ ಮಾಲಿಕರಿಗೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ, ರೂ.20,000/- ರಿಂದ ರೂ.50.000/- ರವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ ಎಂದು ಸುತ್ತೋಲೆಯಲ್ಲಿ ನೆನಪಿಸಲಾಗಿದೆ.

ಇದನ್ನೂ ಓದಿ : Jio Cinema : ಜಿಯೋಸಿನಿಮಾದ ‘ಜೀತೋ ಧನ್ ಧನಾ ಧನ್‌’ ಸ್ಪರ್ಧೆಗೆ ಟಿವಿಎಸ್​ ಯೂರೋಗ್ರಿಪ್​ ಪ್ರಾಯೋಜಕತ್ವ

ಹಾಗಿದ್ದರೆ ಬಾಲ ಕಲಾವಿದರಿಗೆ ಅನ್ವಯವಾಗುವ ನಿಯಮಗಳೇನು?

ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಕರ್ನಾಟಕ ನಿಯಮಗಳು ‘2ಸಿ’ ರಲ್ಲಿ ಒಬ್ಬ ಕಲಾವಿದನಾಗಿ ಕೆಲಸ ಮಾಡಬೇಕಾದ ಮಗು(1) ಕಲಂ 3ರ ತಡೆಗಳನ್ವಯ ಕೆಳಗಿನ ಪರಿಸ್ಥಿತಿಗಳಿಗೆ ನಿಯಮಗಳಿಗೆ ಒಳಪಟ್ಟಂತೆ ಮಗು ಕಲಾವಿದನಾಗಿ ಕೆಲಸ ಮಾಡಬಹುದು ಎಂದು ಹೇಳಿದೆ.

  1. ಮಕ್ಕಳನ್ನು ಬಳಸಿ ಚಿತ್ರ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅವರ ನಿರ್ಲಕ್ಷ್ಯ ಅಥವಾ ಶೋಷಣೆ ನಡೆಯದಂತೆ ಕ್ರಮ ಕೈಗೊಂಡಿರಬೇಕು. ಇಲ್ಲವಾದಲ್ಲಿ ಚಲನಚಿತ್ರಗಳ ಅಥವಾ ದೂರದರ್ಶನದ ಪ್ರದರ್ಶನದ ಹಕ್ಕು ನಿರಾಕರಣೆಯ ಅವಕಾಶಗಳಿಗೆ
    ಒಳಪಟ್ಟಿದೆ ಎಂಬುದನ್ನು ನಿರ್ಮಾಪಕರಿಗೆ ಖಚಿತಪಡಿಸುವುದು.
  2. ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಖಾತ್ರಿಪಡಿಸುವುದು.
  3. ಮಗುವಿಗೆ ಸಕಾಲಿಕ ಪೌಷ್ಠಿಕ ಆಹಾರ ಒದಗಿಸುವುದು.
  4. ದೈನಂದಿನ ಅಗತ್ಯಗಳಿಗೆ ಸಾಕಾಗುವಷ್ಟು ಸಾಮಾಗ್ರಿಗಳು, ಸ್ವಚ್ಚ ಮತ್ತು ಸುರಕ್ಷಿತವಾ ಆಶ್ರಯ ಒದಗಿಸುವುದು.
  5. ಶಿಕ್ಷಣದ ಹಕ್ಕು ಸಂರಕ್ಷಣೆ, ಲೈಂಗಿಕ ಅಪರಾಧಗಳಿಂದ ರಕ್ಷಣೆ ಒಳಗೊಂಡಂತೆ ಮಕ್ಕಳ ರಕ್ಷಣೆ ಕುರಿತಾಗಿ ಕಾಲ ಕಾಲಕ್ಕೆ ಜಾರಿಯಲ್ಲಿರುವ ಎಲ್ಲಾ ಕಾನೂನುಗಳ ಮಾಡುವುದು.
  6. ಮಗು ಶಾಲೆಯ ಪಾಠ ಪ್ರವಚನಗಳಿಗೆ ಗೈರಾಗದಂತೆ ಶಿಕ್ಷಣದಲ್ಲಿ ನಿರಂತದ ಮುಂದುವರೆಯಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದನ್ನು ಖಾತರಿಪಡಿಸಬೇಕು ಮತ್ತು ಯಾವುದೇ ಮಗು ನಿರಂತರವಾಗಿ 27 ದಿನಗಳಿಗಿಂತ ಹೆಚ್ಚಿನ ದಿನಗಳು ಕೆಲಸದಲ್ಲಿ ತೂಡಗಲು ಅವಕಾಶ ನೀಡಬಾರದು.
  7. ಮಗುವಿನ ರಕ್ಷಣೆ, ಪೋಷಣೆ ಮತ್ತು ಹಿತಾಸಕ್ತಿಯನ್ನು ಕಾಪಾಡಲು ನಿರ್ಮಾಣ ಆ ಕಾರ್ಯಕ್ರಮದಲ್ಲಿ ತೊಡಗಿರುವ ಪ್ರತಿ 5 ಮಕ್ಕಳಿಗೆ ಒಬ್ಬರಂತೆ ಜವಬ್ದಾರಿ ವ್ಯಕ್ತಿ ನೇಮಿಸುವುದು.
  8. ನಿರ್ಮಾಣ ಅಥವಾ ಕಾರ್ಯಕ್ರಮದಿಂದ ಮಗುವಿಗೆ ಬರುವ ಒಟ್ಟು ಆದಾಯದ ಕನಿಷ್ಠ ಭಾಗವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಗುವಿನ ಹೆಸರಿನಲ್ಲಿ ನಿಶ್ಚಿತ ಠೇವಣಿ ಖಾತೆ ತೆರೆದು ಇಡಬೇಕು. ಅದನ್ನು ಮಗು ಪ್ರಾಯಸ್ಥನಾದಾಗ ಪಡೆಯಲು ಅವಕಾಶ ಕಲ್ಪಿಸುವುದು.
  9. ಯಾವುದೇ ಮಗುವಿನ ಒಪ್ಪಿಗೆ ಮತ್ತು ಇಚ್ಛೆಗೆ ವಿರುದ್ಧವಾಗಿ ಯಾವುದೇ ಧ್ವನಿ, ದೃಶ್ಯ ಕ್ರೀಡಾ ಚಟುವಟಿಕೆ ಅನೌಪಚಾರಿಕ ಮನರಂಜನಾ ಚಟುವಟಿಕೆ ಒಳಗೊಂಡಂತೆ ಭಾಗವಹಿಸುವಂತೆ ಮಾಡಬಾರದು.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Laila Khan: ಮಲತಂದೆಯಿಂದಲೇ ಹತ್ಯೆಯಾದ ಜಗ್ಗೇಶ್‌ ಚಿತ್ರದ ನಾಯಕಿ; 13 ವರ್ಷಗಳ ಬಳಿಕ ತೀರ್ಪು ಪ್ರಕಟ

Laila Khan: ಜಗ್ಗೇಶ್‌ ಅಭಿನಯದ ಕನ್ನಡದ ʼಮೇಕಪ್‌ʼ ಸೇರಿದಂತೆ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದ ಲೈಲಾ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಸೆಷನ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಮಲತಂದೆ ಪರ್ವೀನ್ ತಾಕ್ ದೋಷಿ ಎಂದು ಪ್ರಕಟಿಸಿದೆ. 2011ರ ಫೆಬ್ರವರಿಯಲ್ಲಿ ಮುಂಬೈಯ ಇಗ್ತಪುರಿಯಲ್ಲಿರುವ ಬಂಗಲೆಯಲ್ಲಿ ನಟಿ ಲೈಲಾ ಖಾನ್ ಹಾಗೂ ಆಕೆಯ ತಾಯಿ ಸೆಲೀನಾ ಹಾಗೂ ನಾಲ್ವರು ಒಡಹುಟ್ಟಿದವರು ಸೇರಿ ಒಟ್ಟು 6 ಮಂದಿಯನ್ನು ಪರ್ವೀನ್ ತಾಕ್ ಬರ್ಬರವಾಗಿ ಹತ್ಯೆ ಮಾಡಿದ್ದ.

VISTARANEWS.COM


on

Laila Khan
Koo

ಮುಂಬೈ: ಜಗ್ಗೇಶ್‌ ಅಭಿನಯದ ಕನ್ನಡದ ʼಮೇಕಪ್‌ʼ ಸೇರಿದಂತೆ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದ ಲೈಲಾ ಖಾನ್ (Laila Khan) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಸೆಷನ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಮಲತಂದೆ ಪರ್ವೀನ್ ತಾಕ್ (Parvez Tak) ದೋಷಿ ಎಂದು ಪ್ರಕಟಿಸಿದೆ. ಘಟನೆ ನಡೆದು ಸುಮಾರು 13 ವರ್ಷಗಳ ಬಳಿಕ ಈ ತೀರ್ಪು ಹೊರಬಿದ್ದಿದೆ.

2011ರ ಫೆಬ್ರವರಿಯಲ್ಲಿ ಮುಂಬೈಯ ಇಗ್ತಪುರಿಯಲ್ಲಿರುವ ಬಂಗಲೆಯಲ್ಲಿ ನಟಿ ಲೈಲಾ ಖಾನ್ ಹಾಗೂ ಆಕೆಯ ತಾಯಿ ಸೆಲೀನಾ ಹಾಗೂ ನಾಲ್ವರು ಒಡಹುಟ್ಟಿದವರು ಸೇರಿ ಒಟ್ಟು 6 ಮಂದಿಯನ್ನು ಪರ್ವೀನ್ ತಾಕ್ ಬರ್ಬರವಾಗಿ ಹತ್ಯೆ ಮಾಡಿದ್ದ. ಅಚ್ಚರಿ ಎಂದರೆ ಪರ್ವೀನ್ ತಾಕ್ ಲೈಲಾ ಖಾನ್‌ ತಾಯಿ ಸೆಲೀನಾ ಅವರ ಮೂರನೇ ಪತಿ.

ಸೆಲೀನಾ ಹೆಸರಿನಲ್ಲಿರುವ ಭೂಮಿಗೆ ಸಂಬಂಧಿಸಿದಂತೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಮೊದಲು ಪರ್ವೀನ್ ತಾಕ್ ಪತ್ನಿ ಸೆಲೀನಾ ಅವರನ್ನು ಕೊಲೆ ಮಾಡಿದ್ದ. ಬಳಿಕ ಮನೆಯಲ್ಲಿದ್ದ ಲೈಲಾ ಖಾನ್‌ ಹಾಗೂ ಆಕೆಯ ನಾಲ್ವರು ಒಡಹುಟ್ಟಿದವರ ಹತ್ಯೆ ಮಾಡಿ ಪರಾರಿಯಾಗಿದ್ದ. 2012ರಲ್ಲಿ ಆತನನ್ನು ಬಂಧಿಸಲಾಗಿತ್ತು. ಮೇ 14ರಂದು ಕೋರ್ಟ್‌ ಶಿಕ್ಷೆ ಪ್ರಕಟಿಸಲಿದೆ.

ಘಟನೆಯ ವಿವರ

2011ರಲ್ಲಿ ಲೈಲಾ ಖಾನ್‌, ಆಕೆಯ ತಾಯಿ ಸೆಲೀನಾ ಮತ್ತು ಲೈಲಾ ಖಾನ್‌ ಒಡಹುಟ್ಟಿದವರಾದ ಆಮಿನಾ, ಅವಳಿಗಳಾದ ಝಾರ ಮತ್ತು ಇಮ್ರಾನ್‌, ಕಸಿನ್‌ ರೇಷ್ಮಾ ನಾಪತ್ತೆಯಾಗಿದ್ದಾರೆಂದು ಲೈಲಾ ಖಾನ್‌ ತಂದೆ ನಾದಿರ್‌ ಪಟೇಲ್‌ ಪೊಲೀಸರಿಗೆ ದೂರು ನೀಡಿದ್ದರು.

ಅದರಂತೆ ತನಿಖೆ ಆರಂಭವಾಗಿತ್ತು. ತನಿಖೆ ಭಾಗವಾಗಿ ನಾಸಿಕ್ ಬಳಿಯ ಇಗ್ತಪುರಿಯಲ್ಲಿರುವ ಕುಟುಂಬದ ತೋಟದ ಮನೆ ಪರಿಶೀಲಿಸಲು ಅಧಿಕಾರಿಗಳು ನಿರ್ಧರಿಸಿದ್ದರು. ಆ ಬಂಗಲೆ ಬೆಂಕಿಯಲ್ಲಿ ಭಾಗಶಃ ಹಾನಿಯಾಗಿತ್ತು. ಅಲ್ಲದೆ ಲೈಲಾ ಖಾನ್‌ ಅವರ ಮೊಬೈಲ್‌ ನಾಪತ್ತೆಯಾಗುವ ವೇಳೆ ನಾಸಿಕ್‌ನಲ್ಲೇ ಇತ್ತು ಎನ್ನುವುದು ಕಂಡು ಬಂದಿತ್ತು. ಇದೇ ವೇಳೆ ಲೈಲಾ ಖಾನ್‌ಗೆ ಸೇರಿದ ವಾಹನ ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿತ್ತು. ಪರ್ವೀನ್ ತಾಕ್ ಮೂಲತಃ ಕಾಶ್ಮೀರದವನು. ಹೀಗಾಗಿ ಪೊಲೀಸರಿಗೆ ಆತನ ಮೇಲೆ ಸಂಶಯ ಬಲವಾಗಿತ್ತು. ಬಳಿಕ ಆತನನ್ನು ಬಂಧಿಸಲಾಯಿತು. ಈ ವೇಳೆ ಆತ ಆಸ್ತಿ ವಿಚಾರದಲ್ಲಿ ಕೊಲೆ ಮಾಡಿರುವ ಸಂಗತಿ ಹೊರ ಬಿದ್ದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸೆಲೀನಾ ಅವರ ಇಬ್ಬರು ಮಾಜಿ ಪತಿಯರು ಸೇರಿದಂತೆ ಸುಮಾರು 40 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು.

ಲೈಲಾ ಖಾನ್‌ ಮೊದಲ ಬಾರಿಗೆ 2002ರಲ್ಲಿ ತೆರೆಕಂಡ ಜಗ್ಗೇಶ್‌ ಅಭಿನಯದ ʼಮೇಕಪ್‌ʼ ಕನ್ನಡ ಸಿನಿಮಾದಲ್ಲಿ ಲೈಲಾ ಪಟೇಲ್‌ ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಅಷ್ಟೇನೂ ಸದ್ದು ಮಾಡಿರಲಿಲ್ಲ. ಬಳಿಕ ಲೈಲಾ 2008ರಲ್ಲಿ ರಾಜೇಶ್‌ ಖನ್ನಾ ನಟನೆಯ ʼವಫಾ: ಎ ಡೆಡ್ಲಿ ಲವ್‌ ಸ್ಟೋರಿʼ ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿದ್ದರು. ಇದು ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಆದರೆ ಲೈಲಾಗೆ ಒಂದಷ್ಟು ಜನಪ್ರಿಯತೆ ತಂಡುಕೊಟ್ಟಿತ್ತು. ಲೈಲಾ ಬಾಂಗ್ಲಾ ದೇಶ ಮೂಲದ ಮುನೀರ್‌ ಖಾನ್‌ ಎನ್ನುವವನನ್ನು ವರಿಸಿದ್ದರು.

ಇದನ್ನೂ ಓದಿ: Roopa Iyer: ನಿರ್ದೇಶಕಿ ರೂಪಾ ಅಯ್ಯರ್‌ಗೂ ಆನ್‌ಲೈನ್‌ ಕಳ್ಳರ ಕಾಟ; ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ 30 ಲಕ್ಷ ರೂ.ಗೆ ಬೇಡಿಕೆ

Continue Reading

ಸಿನಿಮಾ

Kannada New Movie: ‘ಗಾಡ್ ಪ್ರಾಮಿಸ್’ ಚಿತ್ರಕ್ಕೆ ಮುನ್ನುಡಿ; ಆನೆಗುಡ್ಡೆ ಗಣಪತಿ ದೇಗುಲದಲ್ಲಿ ಮುಹೂರ್ತ

Kannada New Movie: ಯುವ ಪ್ರತಿಭೆ ಸೂಚನ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಪ್ರಯತ್ನ ʼಗಾಡ್ ಪ್ರಾಮಿಸ್ʼ ಸಿನಿಮಾಕ್ಕೆ ಉಡುಪಿ ಜಿಲ್ಲೆಯ ಕುಂದಾಪುರದ ಆನೆಗುಡ್ಡೆ ಗಣಪತಿ ದೇಗುಲದಲ್ಲಿ ಮುಹೂರ್ತ ನೆರವೇರಿದೆ. ʼಕಾಂತಾರʼ ಸರಣಿ ಸಿನಿಮಾಗಳ ಮುಹೂರ್ತ ಕೂಡ ಇದೇ ದೇಗುಲದಲ್ಲಿ ನಡೆದಿರುವುದು ವಿಶೇಷ.

VISTARANEWS.COM


on

Kannada New Movie
Koo

ಬೆಂಗಳೂರು: ಯುವ ಪ್ರತಿಭೆ ಸೂಚನ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಪ್ರಯತ್ನ ʼಗಾಡ್ ಪ್ರಾಮಿಸ್ʼ (God Promise) ಸಿನಿಮಾಕ್ಕೆ ಮುನ್ನುಡಿ ಸಿಕ್ಕಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಆನೆಗುಡ್ಡೆಯ ಗಣಪತಿ ದೇಗುಲದಲ್ಲಿ ಮುಹೂರ್ತ ನೆರವೇರಿದದ್ದು, ನಟ ಪ್ರಮೋದ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ಸೂಚನ್ ಕನಸಿಗೆ ಸಾಥ್ ಕೊಟ್ಟಿದ್ದಾರೆ. ‘ಗಾಡ್ ಪ್ರಾಮಿಸ್’ ಸಿನಿಮಾಗೆ ರವಿ ಬಸ್ರೂರ್ ಕ್ಲ್ಯಾಪ್ ಮಾಡಿದ್ದು, ಪ್ರಮೋದ್ ಶೆಟ್ಟಿ ಕ್ಯಾಮರಾಕ್ಕೆ ಚಾಲನೆ ನೀಡಿದರು. ʼಕಾಂತಾರʼ ಸರಣಿ ಸಿನಿಮಾಗಳ ಮುಹೂರ್ತ ಕೂಡ ಇದೇ ದೇಗುಲದಲ್ಲಿ ನಡೆದಿರುವುದು ವಿಶೇಷ.

ಸೂಚನ್ ಶೆಟ್ಟಿ ಮಾತನಾಡಿ, ʼʼಗಾಡ್ ಪ್ರಾಮಿಸ್ʼ ಚಿತ್ರದ ಮುಹೂರ್ತ ಇಂದು ನೆರವೇರಿದೆ. ಕಳೆದ ಆರೇಳು ತಿಂಗಳಿನಿಂದ ಈ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸ ಶುರು ಮಾಡಿದ್ದೇವೆ. 2015ರಿಂದ ರವಿ ಬಸ್ರೂರು ಜತೆ ಕೆಲಸ ಮಾಡುತ್ತಿದ್ದೇನೆ. ಈಗ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ. ಸಿನಿಮಾ ಕುಂದಾಪುರ ಸುತ್ತಮುತ್ತ ನಡೆಯುತ್ತಿದೆ. ಫ್ಯಾಮಿಲಿ ಡ್ರಾಮಾ ಕಥೆಯನ್ನು ಒಳಗೊಂಡಿದೆ. ಆಡಿಷನ್ ನಡೆಸಿದ್ದೇವೆ. ಯಾರು ಆಯ್ಕೆಯಾಗಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ರವಿ ಸರ್‌ಗೆ ನನಗೆ ಗುರುಗಳು. ಡೈರೆಕ್ಟನ್ ತಂಡದ ಜತೆಗೆ ʼಕಟಕʼ, ʼಗಿರ್ಮಿಟ್ʼ ಸಿನಿಮಾಗಳ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದೆ. ಹೀಗಾಗಿ ಆ ಅನುಭವದ ಇಟ್ಟುಕೊಂಡು ನಿರ್ದೇಶನಕ್ಕೆ ಇಳಿದಿದ್ದೇನೆʼʼ ಎಂದರು.

ರವಿ ಬಸ್ರೂರ್ ಮಾತನಾಡಿ, ʼʼಒಂದು ಸಿನಿಮಾ ಮಾಡುವುದರಿಂದ ಎಷ್ಟೋ ಜನ ಕಲಾವಿದರ ಭವಿಷ್ಯ ನಿರ್ಧಾರವಾಗುತ್ತದೆ. ನಮ್ಮ ಕರಾವಳಿಯವರಿಗೆ ಒಳ್ಳೆ ಫ್ಲಾಟ್ ಫಾರಂ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ನಮ್ಮ ಜತೆ ಬಂದವರಿಗೆ ಎಲ್ಲ ಕೆಲಸ ಕಲಿಯಿರಿ ಎಂದು ಹೇಳುತ್ತೇನೆ. ಒಂದು ಸಿನಿಮಾದಿಂದ ಎಷ್ಟೋ ಜನರ ಬದುಕು ಹಸನಾಗಲಿ. ಇವರ ರೀತಿ ನಮ್ಮ ಭಾಗದಲ್ಲಿ ನೂರಾರು ಸಿನಿಮಾಗಳು ಆಗಲಿ. ಇಡೀ ತಂಡಕ್ಕೆ ಒಳ್ಳೆದಾಗಲಿʼʼ ಎಂದು ಹಾರೈಸಿದರು.

ನಟ ಪ್ರಮೋದ್ ಶೆಟ್ಟಿ ಮಾತನಾಡಿ, ʼʼಸೂಚನ್ ಯಾವುದೇ ಕೆಲಸ ಮಾಡಿದ್ರೂ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತಾರೆ. ನಟನೆ, ನಿರ್ದೇಶನ ಎರಡು ಒಟ್ಟಿಗೆ ಮಾಡುತ್ತಿರುವುದರಿಂದ ಎಲ್ಲರೂ ಒಟ್ಟಿಗೆ ಸೇರಿ ಮುಂದುವರಿಯಲಿ. ಒಂದೊಳ್ಳೆ ತಂಡವಾಗಿ ಹೊರ ಹೊಮ್ಮಲಿ. ನನ್ನ ಪ್ರಕಾರ ಈ ಸಿನಿಮಾ ತುಂಬಾ ಚೆನ್ನಾಗಿ ಬರಲಿದೆ ಎಂಬ ಭರವಸೆ ಇದೆ. ಒಳ್ಳೆ ಬಜೆಟ್ ಕೂಡ ಇದೆ. ಸೂಚನ್ ನಮ್ಮ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾನೆ. ಇಡೀ ತಂಡದ ಮೇಲೆ ನಿಮ್ಮ ಬೆಂಬಲ ಇರಲಿದೆʼʼ ಎಂದು ಹೇಳಿದರು.

ನಿರ್ಮಾಪಕ ಮೈತ್ರಿ ಮಂಜುನಾಥ್ ಮಾತನಾಡಿ, ʼʼನಾವು ಈ ಹಿಂದೆ ʼಹಫ್ತಾʼ ಸಿನಿಮಾ ಮಾಡಿದ್ದೇವೆ. ಇದು ನನ್ನ ಎರಡನೇ ಸಿನಿಮಾ. ಗಾಡ್ ಪ್ರಾಮಿಸ್ ಸಿನಿಮಾದ ಸ್ಕ್ರೀಪ್ಟ್ ತುಂಬಾ ಚೆನ್ನಾಗಿದೆ. ಒಳ್ಳೆ ಅನುಭವ ತಂಡದೊಂದಿಗೆ ಕೈ ಜೋಡಿಸಿದೆʼʼ ಎಂದರು.

ʼಗಾಡ್ ಪ್ರಾಮಿಸ್ʼ ಸಿನಿಮಾ ಮೂಲಕ ಸೂಚನ್ ಶೆಟ್ಟಿ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದು, ಅವರ ಹೊಸ ಪಯಣಕ್ಕೆ ಮೈತ್ರಿ ಮಂಜುನಾಥ್ ಬಲ ತುಂಬಿದ್ದಾರೆ. ಚಿತ್ರವನ್ನು ಮೈತ್ರಿ ಪ್ರೊಡಕ್ಷನ್‌ನಡಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ʼಹಫ್ತಾʼ ಸಿನಿಮಾವನ್ನು ಇದೇ ಸಂಸ್ಥೆ ನಿರ್ಮಾಣ ಮಾಡಿತ್ತು. ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಸಿನಿಮಾಗೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಭರತ್ ಮಧುಸೂದನನ್ ಸಂಗೀತ ನಿರ್ದೇಶನ, ನವೀನ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ. ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

ಇದನ್ನೂ ಓದಿ: Kannada New Movie: ಭಾರಿ ಮೊತ್ತಕ್ಕೆ ಸೇಲ್ ಆಯ್ತು ರೂಪೇಶ್ ಶೆಟ್ಟಿ-ಜಾಹ್ನವಿ ಸಿನಿಮಾ ಆಡಿಯೊ ರೈಟ್ಸ್!

Continue Reading

ಕ್ರೈಂ

Roopa Iyer: ನಿರ್ದೇಶಕಿ ರೂಪಾ ಅಯ್ಯರ್‌ಗೂ ಆನ್‌ಲೈನ್‌ ಕಳ್ಳರ ಕಾಟ; ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ 30 ಲಕ್ಷ ರೂ.ಗೆ ಬೇಡಿಕೆ

Roopa Iyer: ಸ್ಯಾಂಡಲ್‌ವುಟ್‌ ನಿರ್ದೇಶಕಿ, ನಟಿ ಅವರಿಗೂ ಆನ್‌ಲೈನ್‌ ಕಳ್ಳರು ಕಾಟ ಕೊಟ್ಟಿದ್ದಾರೆ. ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ವಂಚನೆಯ ವಾಸಗೆ ಬರುತ್ತಿದ್ದಂತೆ ಎಚ್ಚೆತ್ತ ಅವರು ಇದೀಗ ಸೈಬರ್‌ ಕ್ರೈಂಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

VISTARANEWS.COM


on

Roopa Iyer
Koo

ಬೆಂಗಳೂರು: ಸೈಬರ್‌ ಕ್ರೈಮ್‌ (Cyber Crime)ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬ್ಲ್ಯಾಕ್‌ ಮೇಲ್‌, ವಿಶೇಷ ಕೊಡುಗೆ, ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡುವ ಅಪರಾಧಿಗಳು ಹಣ ದೋಚುವ ಅದೆಷ್ಟೋ ಪ್ರಸಂಗಗಳು ವರದಿಯಾಗುತ್ತಿವೆ. ಪೊಲೀಸರು ಎಷ್ಟು ಕ್ರಮ ಕೈಗೊಂಡರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದೀಗ ಸ್ಯಾಂಡಲ್‌ವುಡ್‌ ನಿರ್ದೇಶಕಿ, ನಟಿ ರೂಪಾ ಅಯ್ಯರ್ (Roopa Iyer) ಅವರಿಗೂ ಇಂತಹದ್ದೇ ಅನುಭವವಾಗಿದೆ. ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ಅಪರಾಧಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಎಚ್ಚೆತ್ತ ರೂಪಾ ಅಯ್ಯರ್ ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ (ಮೇ 8) ಮಧ್ಯಾಹ್ನದಿಂದ ಗುರುವಾರ ಬೆಳಗ್ಗೆ ತನಕವೂ ತಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಪ್ರಕರಣದ ವಿವರ

ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯರ್ ಮನಿ ಲ್ಯಾಂಡ್ರಿಂಗ್ ಪ್ರಕರಣದ ವಿಚಾರಣೆ ನೆಪದಲ್ಲಿ ಕರೆ ಮಾಡಿದ್ದ ವಂಚಕರು 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ರೂಪಾ ಅಯ್ಯರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ʼʼಬುಧವಾರ ಮಧ್ಯಾಹ್ನ ಅಪರಿಚಿತ ನಂಬರ್‌ನಿಂದ ಕರೆ ಬಂತು. ತಾವು ಸಿಸಿಬಿ ಅಧಿಕಾರಿಗಳೆಂದು ಕರೆ ಮಾಡಿದ್ದವರು ತಿಳಿಸಿದರು. ಗಾಬರಿಯಿಂದ ಯಾಕೆಂದು ಪ್ರಶ್ನಿಸಿದೆ. ನರೇಶ್ ಗೋಯಲ್ ಮನಿ ಲ್ಯಾಂಡ್ರಿಂಗ್ ಕೇಸ್‌ನಲ್ಲಿ ನಿಮ್ಮ ಹೆಸರಿದೆ. ಹೀಗಾಗಿ ವಿಚಾರಣೆ ನಡೆಸಬೇಕಿದೆ ಎಂದು ಹೇಳಿದ್ದರುʼʼ ಎಂದು ರೂಪಾ ತಿಳಿಸಿದ್ದಾರೆ.

ʼʼಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೇಶದಲ್ಲಿ 247 ಮಂದಿಯನ್ನು ಗುರುತಿಸಲಾಗಿದೆ. ಈ ಪೈಕಿ ನೀವು ಕೂಡ ಒಬ್ಬರು. ನಿಮ್ಮ ಆಧಾರ್‌ ಕಾರ್ಡ್ ಬಳಸಿಕೊಂಡು ಸಿಮ್ ಖರೀದಿಸಲಾಗಿದೆ. ಅದರ ಮೂಲಕ ದೇಶದ್ರೋಹದ ಚಟುವಟಿಕೆ ನಡೆಸಲಾಗಿದೆ. ಈಗಾಗಲೇ ಈ ಕುರಿತು ಮುಂಬೈಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಕರೆ ಮಾಡಿದ್ದವರು ಹೆದರಿಸಿದ್ದರು. ಇದರಿಂದ ಗಾಬರಿಯಾಯಿತುʼʼ ಎಂದು ರೂಪಾ ಘಟನೆಯ ವಿವರ ನೀಡಿದ್ದಾರೆ.

ʼʼನೀವು ಸೆಲೆಬ್ರಿಟಿ ಆಗಿರುವುದರಿಂದ ನಾವು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ. ಒಂದು ವೇಳೆ ಈ ಪ್ರಕರಣದಿಂದ ನೀವು ತಪ್ಪಿಸಿಕೊಳ್ಳಬೇಕು ಎಂದಾದರೆ 30 ಲಕ್ಷ ರೂ. ನೀಡಿ ಎಂದು ಕರೆ ಮಾಡಿದ್ದವರು ಹೇಳಿದರು. ಯಾವಾಗ ಅವರು ಹಣದ ಬೇಡಿಕೆ ಇಟ್ಟರೋ ಆಗ ಅನುಮಾನ ಶುರುವಾಯ್ತು. ಕೂಡಲೇ ಎಚ್ಚೆತ್ತು ಸೈಬರ್ ಕ್ರೈಂಗೆ ದೂರು ನೀಡಿದೆʼʼ ಎಂದು ಅವರು ಹೇಳಿದ್ದಾರೆ.

ʼʼಆನ್‌ಲೈನ್ ವಂಚಕರು ಪ್ರಭಾವಿಗಳನ್ನು ಯಾಮಾರಿಸಿ ಹಣ ದೋಚಲು ಮುಂದಾಗಿದ್ದಾರೆ. ವಂಚಕರು ನನ್ನನ್ನು ನಂಬಿಸಲು ಸಿಬಿಐ ಹೆಸರಿನಲ್ಲಿ ನಕಲಿ ನೋಟಿಸ್ ಕೂಡ ಕಳುಹಿಸಿದ್ದಾರೆ. ಒಂದು ವೇಳೆ ಅವರ ಮಾತನ್ನು ನಂಬಿದ್ದರೆ ಲಕ್ಷಾಂತರ ರೂ. ಕಳೆದುಕೊಳ್ಳಬೇಕಾಗಿತ್ತುʼʼ ಎಂದು ರೂಪಾ ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಿಮಗೂ ಇಂತಹ ಕರೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳು ಸಾವರ್ಜನಿಕರು, ಸೆಲೆಬ್ರಿಟಿಗಳಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Cyber Crime : ಸೈಬರ್‌ ಕ್ರೈಂನಡಿ ಬಂಧನದಿಂದ ಮಾಳವಿಕಾ ಅವಿನಾಶ್ ಪಾರು; ಕೆಜಿಎಫ್‌ನಲ್ಲಿ ನಟಿಸಿದ್ದೇ ವರವಾಯ್ತು!

Continue Reading

ಕಿರುತೆರೆ

Star Suvarna: ಬಹುಮಾನದ ಜತೆಗೆ ಮನೋರಂಜನೆ ಹೊತ್ತು ಬರುತ್ತಿದೆ ʼಸುವರ್ಣ ಗೃಹಮಂತ್ರಿʼ; ಯಾವಾಗ ಪ್ರಸಾರ?

Star Suvarna: ಸದಾ ಹೊಸತನದ ಧಾರಾವಾಹಿ, ಕಾರ್ಯಕ್ರಮ, ರಿಯಾಲಿಟಿ ಶೋ ನೀಡುವ ಮೂಲಕ ಗಮನ ಸೆಳೆಯುವ ಸ್ಟಾರ್‌ ಸುವರ್ಣ ಇದೀಗ ಮತ್ತೊಂದು ವಿಭಿನ್ನ ಕಾನ್ಸೆಪ್ಟ್‌ ಹೊತ್ತು ಬಂದಿದೆ. ಕರುನಾಡಿನ ಗೃಹಿಣಿಯರಿಗಾಗಿ ‘ಸುವರ್ಣ ಗೃಹಮಂತ್ರಿ’ ಎನ್ನುವ ಶೋ ಆರಂಭಿಸಲಿದೆ. ಇದೇ ಮೊದಲ ಬಾರಿಗೆ ಜನಪ್ರಿಯ ನಿರೂಪಕ ಮುರಳಿ ಸ್ಟಾರ್ ಸುವರ್ಣ ವಾಹಿನಿಗೆ ಲಗ್ಗೆಯಿಟ್ಟಿದ್ದು, ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ಸಾರಥಿಯಾಗಿ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಮುರಳಿ ಅವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆ, ಬೆಳ್ಳಿ-ಬಂಗಾರ ನೀಡಲಿದ್ದಾರೆ. ಈ ಕಾರ್ಯಕ್ರಮ ಮೇ 13ರಿಂದ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ.

VISTARANEWS.COM


on

Star Suvarna
Koo

ಬೆಂಗಳೂರು: ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ (Star Suvarna) ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು ಇನ್ನಷ್ಟು ದುಪ್ಪಟ್ಟುಗೊಳಿಸಲು ‘ಸುವರ್ಣ ಗೃಹಮಂತ್ರಿ’ (Suvarna GruhaMantri) ಎಂಬ ಹೊಸದೊಂದು ರಿಯಾಲಿಟಿ ಶೋ ಅನ್ನು ಪ್ರಸಾರ ಮಾಡಲು ಸಜ್ಜಾಗಿದೆ.

ಇದೊಂದು ವಿಭಿನ್ನ ರೀತಿಯ ರಿಯಾಲಿಟಿ ಶೋ. ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡುವ ಗೃಹಿಣಿಯರನ್ನು/ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ. ಮನೆ ಮಂದಿಯನ್ನು ಅವರು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ‘ಥ್ಯಾಂಕ್ ಯೂ’ ಕೂಡ ಯಾರೂ ಹೇಳುವುದಿಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರನ್ನು ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜತೆ ರೇಷ್ಮೆ ಸೀರೆ, ಚಿನ್ನ, ಬೆಳ್ಳಿ ಹಾಗೂ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ ʼಸುವರ್ಣ ಗೃಹಮಂತ್ರಿʼ ಕಾರ್ಯಕ್ರಮದ ಕಾನ್ಸೆಪ್ಟ್‌.

ಇನ್ನು ಇದೇ ಮೊದಲ ಬಾರಿಗೆ ಜನಪ್ರಿಯ ನಿರೂಪಕ ಮುರಳಿ ಸ್ಟಾರ್ ಸುವರ್ಣ ವಾಹಿನಿಗೆ ಲಗ್ಗೆಯಿಟ್ಟಿದ್ದು, ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ಸಾರಥಿಯಾಗಿ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಮುರಳಿ ಅವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆ, ಬೆಳ್ಳಿ-ಬಂಗಾರ ನೀಡಲಿದ್ದಾರೆ. ಈ ಮೂಲಕ ಮನೆ ಗೃಹಿಣಿಯನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರನ್ನೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ.

ಸದ್ಯ ‘ಸುವರ್ಣ ಗೃಹಮಂತ್ರಿ’ಯ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಈ ಕಾರ್ಯಕ್ರಮದಲ್ಲಿ ಬಹುಮಾನಗಳ ಮಹಾ ಮಳೆಯೇ ಸುರಿಯಲಿದ್ದು ಪ್ರೇಕ್ಷಕರಿಗೆ ಮನೋರಂಜನೆ ಸಿಗುವುದಂತು ಖಚಿತ.

ಯಾವಾಗ ಪ್ರಸಾರ?

ಕರುನಾಡಿನ ಗೃಹಿಣಿಯರನ್ನು ಸಂಭ್ರಮಿಸಲು ರಾಣಿ ಸೀಟಿನೊಂದಿಗೆ ನಿಮ್ಮನೆಗೆ ಬರುತ್ತಿರುವ ಹೊಸ ಶೋ ‘ಸುವರ್ಣ ಗೃಹಮಂತ್ರಿ’ ಇದೇ ಸೋಮವಾರ(ಮೇ 13)ದಿಂದ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಮನೋರಂಜನೆ ಜತೆಗೆ ಬಹುಮಾನ ಗೆಲ್ಲಲು ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕ್ಷಿಸಿ.

ಇದನ್ನೂ ಓದಿ: Suvarna Superstar: ʻಸುವರ್ಣ ಸೂಪರ್ ಸ್ಟಾರ್‌ʼಗೆ 1000 ಸಂಚಿಕೆಗಳ ಸಂಭ್ರಮ!

Continue Reading
Advertisement
IPL 2024
ಪ್ರಮುಖ ಸುದ್ದಿ11 mins ago

IPL 2024 : ರಾಹುಲ್ ದ್ರಾವಿಡ್ ಸೃಷ್ಟಿಸಿದ್ದ 14 ವರ್ಷಗಳ ಹಿಂದಿನ ದಾಖಲೆ ಮುರಿದ ದಿನೇಶ್ ಕಾರ್ತಿಕ್

Madara Channaiah Gurupeeta
ಕರ್ನಾಟಕ14 mins ago

Madara Channaiah Gurupeeta: ಮಾದಾರ ಚನ್ನಯ್ಯ ಗುರುಪೀಠಕ್ಕೆ ನೂತನ ವಟು ಸ್ವೀಕಾರ

Viral News
ವೈರಲ್ ನ್ಯೂಸ್21 mins ago

Viral News: ಕುಡಿದ ಮತ್ತಿನಲ್ಲಿ ಪೊಲೀಸ್‌ ಪೇದೆಯ ಕೈ ಕಚ್ಚಿ, ಬಟ್ಟೆ ಹರಿದು ಹಲ್ಲೆ ಮಾಡಿದ ಮಹಿಳೆಯರು

Laila Khan
ಸಿನಿಮಾ31 mins ago

Laila Khan: ಮಲತಂದೆಯಿಂದಲೇ ಹತ್ಯೆಯಾದ ಜಗ್ಗೇಶ್‌ ಚಿತ್ರದ ನಾಯಕಿ; 13 ವರ್ಷಗಳ ಬಳಿಕ ತೀರ್ಪು ಪ್ರಕಟ

Kantilal Bhuria
ದೇಶ31 mins ago

Kantilal Bhuria: ಒಬ್ಬನಿಗೆ ಇಬ್ಬರು ಹೆಂಡತಿಯರು ಇದ್ದರೆ ಕಾಂಗ್ರೆಸ್‌ನಿಂದ 2 ಲಕ್ಷ ರೂ. ಎಂದ ಕೈ ನಾಯಕ; ಬಿಜೆಪಿ ಟೀಕೆ

Union Minister Pralhad Joshi latest Statement in hubli
ಕರ್ನಾಟಕ43 mins ago

Pralhad Joshi: ದೇಶದಲ್ಲಿ ಹಿಂದೂ ಜನಸಂಖ್ಯೆ ಕುಸಿತ ಆತಂಕಕಾರಿ: ಸಚಿವ ಪ್ರಲ್ಹಾದ್‌ ಜೋಶಿ

Rahul gandhi
ದೇಶ1 hour ago

Rahul Gandhi: “ಅದಾನಿ-ಅಂಬಾನಿ… ಕಾಪಾಡಿ..ಕಾಪಾಡಿ ಅಂತಿದ್ದಾರೆ ಪ್ರಧಾನಿ ಮೋದಿ” ; ರಾಹುಲ್‌ ಗಾಂಧಿ ವ್ಯಂಗ್ಯ

Madhavi Latha
ದೇಶ1 hour ago

ಹೈದರಾಬಾದ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಮುಸ್ಲಿಂ ಗಲ್ಲಿಗಳಲ್ಲಿ ಪ್ರಚಾರ ಮಾಡಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ

Covishield Vaccine
ಪ್ರಮುಖ ಸುದ್ದಿ1 hour ago

Covishield: ಭಾರತದಲ್ಲೂ ಎಲ್ಲಾ ಕೋವಿಡ್ ಲಸಿಕೆಗಳ ಸೈಡ್‌ ಎಫೆಕ್ಟ್‌ ಪರಿಶೀಲಿಸಿ: ವೈದ್ಯರ ಒತ್ತಾಯ

Kannada New Movie
ಸಿನಿಮಾ2 hours ago

Kannada New Movie: ‘ಗಾಡ್ ಪ್ರಾಮಿಸ್’ ಚಿತ್ರಕ್ಕೆ ಮುನ್ನುಡಿ; ಆನೆಗುಡ್ಡೆ ಗಣಪತಿ ದೇಗುಲದಲ್ಲಿ ಮುಹೂರ್ತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ2 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ4 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ5 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ11 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ19 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ20 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ20 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌