Kiccha Sudeep: ರಕ್ಷಿತ್‌ ಶೆಟ್ಟಿ ಮೇಲೆ ಒತ್ತಡ ಹಾಕುವುದು ನ್ಯಾಯವಲ್ಲ ಎಂದ ಕಿಚ್ಚ ಸುದೀಪ್‌! - Vistara News

ಸ್ಯಾಂಡಲ್ ವುಡ್

Kiccha Sudeep: ರಕ್ಷಿತ್‌ ಶೆಟ್ಟಿ ಮೇಲೆ ಒತ್ತಡ ಹಾಕುವುದು ನ್ಯಾಯವಲ್ಲ ಎಂದ ಕಿಚ್ಚ ಸುದೀಪ್‌!

Kiccha Sudeep: ಈ ಮುಂಚೆ ಕಿಚ್ಚ ಅವರು ʻಥಗ್ಸ್​ ಆಫ್​ ಮಾಲ್ಗುಡಿ ಸಿನಿಮಾ ಮಾಡುತ್ತಾರೆ ಎಂದು ವೈರಲ್‌ ಆಗಿತ್ತು.ಕಿಚ್ಚ ಸುದೀಪ್​ ಅವರು ರಕ್ಷಿತ್​ ಶೆಟ್ಟಿ ಜತೆ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು.

VISTARANEWS.COM


on

Kichcha Sudeep Reaction About Thugs Of Malgudi Filmac
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಿಚ್ಚ ಸುದೀಪ್‌ (Kiccha Sudeep) ಅವರು ಬಿಡುವಿನ ಸಮಯದಲ್ಲಿ ಆಗಾಗ ಅಭಿಮಾನಿಗಳ ಜತೆ ಮಾತುಕತೆ ನಡೆಸುತ್ತಾರೆ. ಫೆಬ್ರವರಿ 15ರ ಬೆಳಗ್ಗೆ ಕೂಡ ಅವರು ಅಭಿಮಾನಿಗಳಿಂದ ಅನೇಕ ಪ್ರಶ್ನೆಗಳನ್ನು ಸ್ವೀಕರಿಸಿದ್ದಾರೆ. ಈ ಮುಂಚೆ ಕಿಚ್ಚ ಅವರು ʻಥಗ್ಸ್​ ಆಫ್​ ಮಾಲ್ಗುಡಿʼ ಸಿನಿಮಾ ಮಾಡುತ್ತಾರೆ ಎಂದು ವೈರಲ್‌ ಆಗಿತ್ತು. ಕಿಚ್ಚ ಸುದೀಪ್​ ಅವರು ರಕ್ಷಿತ್​ ಶೆಟ್ಟಿ ಜತೆ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು. ಇದೀಗ ಫ್ಯಾನ್ಸ್‌ ಒಬ್ಬರು ʻರಕ್ಷಿತ್​ ಶೆಟ್ಟಿ ಅವರ ಜತೆ ಥಗ್ಸ್​ ಆಫ್​ ಮಾಲ್ಗುಡಿ ಮಾಡ್ತೀರಾ? ನೀವಿಬ್ಬರು ಜತೆಯಾದರೆ ಚೆನ್ನಾಗಿರುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸುದೀಪ್‌ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸುದೀಪ್‌ ಈ ಬಗ್ಗೆ ಮಾತನಾಡಿ ʻʻ‘ಅದು ಚೆನ್ನಾಗಿರುತ್ತದೆ ಎಂಬುದರ ಬಗ್ಗೆ ನನಗೆ ಖಾತರಿ ಇದೆ. ಈಗ ಅವರಿಗೆ ಅವರದ್ದೇ ಆದ ಜೀವನ ಇದೆ. ಅವರ ಮೇಲೆ ಒತ್ತಡ ಹಾಕುವುದು ನ್ಯಾಯವಲ್ಲ’ ಎಂದು ಸುದೀಪ್​ ಪೋಸ್ಟ್​ ಮಾಡಿದ್ದಾರೆ.

ಇನ್ನೊಬ್ಬರು. ‘ವರ್ಷಕ್ಕೆ ಎರಡು ಸಿನಿಮಾ ಮಾಡುತ್ತೇನೆ ಅಂತ ಹೇಳಿದ್ದೀರಿ. ಎಲ್ಲಿದೆ ಎರಡು ಸಿನಿಮಾ?’ ಎಂದು ಪ್ರಶ್ನಿಸಿದ್ದಾರೆ. ‘ಪ್ರಯತ್ನಿಸುತ್ತಿದ್ದೇನೆ. ನನ್ನ ತಂಡದವರು ಇದನ್ನು ಕೇಳಿಸಿಕೊಳ್ಳುತ್ತಿದ್ದಾರೆ ಅಂತ ಭಾವಿಸಿದ್ದೇನೆ’ ಎಂದು ಸುದೀಪ್​ ಅವರು ಉತ್ತರಿಸಿದ್ದಾರೆ. ನ ‘ಈಗ’ ಸಿನಿಮಾದ ರೀತಿಯ ಪಾತ್ರದಲ್ಲಿ ಮತ್ತೆ ಯಾವಾಗ ಕಾಣಿಸಿಕೊಳ್ಳುತ್ತೀರಿ’ ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ‘ಇನ್ನೊಬ್ಬರು ಆ ರೀತಿಯ ಕಥೆ ಬರೆದಾಗ’ ಎಂದು ಉತ್ತರಿಸಿದ್ದಾರೆ ಸುದೀಪ್​.

ಈಗಾಗಲೇ ಸುದೀಪ್‌ ಅವರು ಮ್ಯಾಕ್ಸ್‌ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶೂಟಿಂಗ್‌ ಕೂಡ ಮುಗಿದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Rakshit Shetty: ನೂತನ ಗೃಹ ಪ್ರವೇಶ ನಿಮಿತ್ತ ಕೋಲದಲ್ಲಿ ಭಾಗಿಯಾದ ರಕ್ಷಿತ್‌ ಶೆಟ್ಟಿ!

ಜಿಮ್‌, ವರ್ಕೌಟ್‌ ಎಂದರೆ ದೂರವೇ ಇರುತ್ತಿದ್ದ ಕಿಚ್ಚ ಸುದೀಪ್‌, ಪೈಲ್ವಾನ್‌ ಸಿನಿಮಾಗಾಗಿ ದೇಹವನ್ನು ಕಟುಮಸ್ತಾಗಿ ಬೆಳೆಸಿಕೊಂಡಿದ್ದರು. ಆ ಮೂಲಕ ಅಭಿಮಾನಿಗಳಿಗೆ ಸುದೀಪ್‌ (Kichcha Sudeep) ಅಚ್ಚರಿ ನೀಡಿದ್ದರು. ಈಗ ಮ್ಯಾಕ್ಸ್‌ ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿಯೂ ಕಿಚ್ಚ ಸುದೀಪ್‌ ಅವರು ಅವಿರತವಾಗಿ ವರ್ಕೌಟ್‌ ಮಾಡುವ ಮೂಲಕ ಭರ್ಜರಿಯಾಗಿಯೇ ದೇಹವನ್ನು ಅಣಿಗೊಳಿಸಿದ್ದಾರೆ. ಸುದೀಪ್‌ ಅವರು ತಮ್ಮ ಕಟ್ಟುಮಸ್ತು ದೇಹದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Radhika Pandit: ಅಭಿಮಾನಿಗಳ ಪ್ರಶ್ನೆ ಎದುರಿಸಲು ನಟಿ ರಾಧಿಕಾ ಪಂಡಿತ್ ಸಿದ್ಧ; ಹೊಸ ಸಿನಿಮಾ ಘೋಷಿಸ್ತಾರಾ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ?

Radhika Pandit: ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಪಂಡಿತ್‌ ಸದ್ಯ ನಟನೆಯಿಂದ ವಿರಾಮ ಪಡೆದುಕೊಂಡು ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸಿನಿಮಾ ರಂಗಕ್ಕೆ ಮರಳಬೇಕೆಂದು ಆಗ್ರಹಿಸುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಈ ಮಧ್ಯೆ ಅವರು ನೀವು ಇಂದು (ಮೇ 28) ‘ನನಗೆ ಏನಾದರೂ ಕೇಳಬಹುದು’ʼ ಎಂದು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಘೋಷಿಸಿದ್ದು, ಪ್ರಶ್ನೆ ಕೇಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

VISTARANEWS.COM


on

Radhika Pandit
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಪಂಡಿತ್‌ (Radhika Pandit) ಕನ್ನಡದ ಪ್ರತಿಭಾವಂತ ಕಲಾವಿದೆ. ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ ಅವರು ತಮ್ಮ ಅಭಿನಯ ಸಾಮರ್ಥ್ಯದಿಂದಲೇ ಅಭಿಮಾನಿಗಳ ಮನ ಗೆದ್ದವರು. ರಾಜ್ಯ ಪ್ರಶಸ್ತಿ ಪುರಸ್ಕೃತ ನಟಿ ಸದ್ಯ ನಟನೆಯಿಂದ ವಿರಾಮ ತೆಗೆದುಕೊಂಡಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ (Yash) ಜತೆ ಸಪ್ತಪದಿ ತುಳಿದ ಬಳಿಕ ಅವರು ಅಭಿನಯದಿಂದ ವಿಮುಖರಾಗಿದ್ದಾರೆ. ಅದರಲ್ಲಿಯೂ ಎರಡು ಮಕ್ಕಳಾದ ಬಳಿಕ ಅವರು ಸಿನಿಮಾ ರಂಗದಿಂದ ದೂರ ಉಳಿದು ಅವರ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಅವರು ನಟನೆಗೆ ಮರಳಲಿದ್ದಾರಾ? ಎನ್ನುವ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣವಾಗಿದ್ದು ರಾಧಿಕಾ ಪಂಡಿತ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್‌. ಅದೇನು ಎನ್ನುವ ವಿವರ ಇಲ್ಲಿದೆ.

ಇದನ್ನೂ ಓದಿ: Radhika Pandit: ಹೇಗಿತ್ತು ರಾಧಿಕಾ ಪಂಡಿತ್‌ ಬರ್ತಡೇ ಸೆಲೆಬ್ರೇಷನ್‌? ಇಲ್ಲಿದೆ ವಿಡಿಯೊ!

Continue Reading

ಸ್ಯಾಂಡಲ್ ವುಡ್

Kiccha Sudeep: ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್ ಭೇಟಿ; ಇವರನ್ನು ನೋಡಲು ಜನವೋ ಜನ!

Kiccha Sudeep: ಕೆಲವು ದಿನಗಳ ಹಿಂದೆ ಸುದೀಪ್‌ ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಕಂಪ್ಲೀಟ್‌ ಆಗಿದೆ ಎಂದು ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಮ್ಯಾಕ್ಸ್‌ ಟ್ರೈಲರ್‌ ರಿಲೀಸ್‌ ಮಾಡಲಿದ್ದಾರೆ ಎನ್ನಲಾಗಿದೆ. ಇದೀಗ ಚಾಮುಂಡಿ ಬೆಟ್ಟಕ್ಕೆ ನಟ ಕಿಚ್ಚ ಸುದೀಪ್ (Kiccha Sudeep) ಇಂದು (ಮೇ.27) ಬೆಳಗ್ಗೆ ಭೇಟಿ ನೀಡಿದ್ದಾರೆ.

VISTARANEWS.COM


on

Kiccha Sudeep visit chamundeshwari temple
Koo

ಮೈಸೂರು: ಚಾಮುಂಡಿ ಬೆಟ್ಟಕ್ಕೆ ನಟ ಕಿಚ್ಚ ಸುದೀಪ್ (Kiccha Sudeep) ಇಂದು (ಮೇ 27) ಬೆಳಗ್ಗೆ ಭೇಟಿ ನೀಡಿದ್ದಾರೆ. ನಾಡ ಅದಿದೇವತೆ ದರ್ಶನ ಪಡೆದಿದ್ದಾರೆ ಕಿಚ್ಚ ಸುದೀಪ್. ಕಿಚ್ಚ ಸುದೀಪ್ ನೋಡಲು ಅಭಿಮಾನಿಗಳು ಸಾಗರವೇ ನೆರೆದಿತ್ತು. ಕಿಚ್ಚ ಸುದೀಪ್‌ ಕಂಡೊಡನೆ (Kiccha Sudeep visit chamundeshwari temple) ಫ್ಯಾನ್ಸ್‌ ಜೈಕಾರ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಸುದೀಪ್‌ ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಕಂಪ್ಲೀಟ್‌ ಆಗಿದೆ ಎಂದು ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಮ್ಯಾಕ್ಸ್‌ ಟ್ರೈಲರ್‌ ರಿಲೀಸ್‌ ಮಾಡಲಿದ್ದಾರೆ ಎನ್ನಲಾಗಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರೆಸ್ಟ್ ಆಯೋಜಿಸಿದ್ದ, ಯಕ್ಷ ಧ್ರುವ ಪಟ್ಲ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಮಾತಾಡುತ್ತಿದ್ದ ಕಿಚ್ಚ ಸುದೀಪ್ ತಮಗಿರುವ ತುಳುನಾಡಿನ ಕನೆಕ್ಷನ್ ಬಗ್ಗೆ ಮಾತಾಡಿದ್ದರು. ಅವರ ತಾಯಿ ತುಳುನಾಡಿನವರಾಗಿದ್ದು, ಅವರು ತುಂಬಾ ಚೆನ್ನಾಗಿ ತುಳು ಮಾತಾಡುತ್ತಾರೆ. ಆದರೆ, ತಮಗೆ ಮಾತ್ರ ಎರಡೇ ಎರಡು ತುಳು ಪದಗಳನ್ನು ಹೇಳಿಕೊಟ್ಟಿದ್ದಾರಷ್ಟೇ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: Kiccha Sudeep: ʻಮ್ಯಾಕ್ಸ್ʼ ಪ್ರಿ- ಕ್ಲೈಮ್ಯಾಕ್ಸ್ ಫೋಟೊ ಲೀಕ್‌? ಬೆಂಕಿ ಬಿರುಗಾಳಿ ಅಂದ್ರು ಫ್ಯಾನ್ಸ್‌!

‘ವಿಕ್ರಾಂತ್ ರೋಣ’ ಬಳಿಕ ಕಿಚ್ಚ ಸುದೀಪ್ (Kiccha Sudeep) ಒಪ್ಪಿಕೊಂಡಿರುವ ಸಿನಿಮಾ ಮ್ಯಾಕ್ಸ್ (MAX). ಹೀಗಾಗಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಕಿಚ್ಚ ಸುದೀಪ್‌ ಎಕ್ಸ್‌ನಲ್ಲಿ ʻʻಮಹಾಬಲಿಪುರಂನಲ್ಲಿ ʻಮ್ಯಾಕ್ಸ್‌ʼಗಾಗಿ ಒಂದು ಸುತ್ತು. ಸುದೀರ್ಘ 10 ತಿಂಗಳ ಪ್ರಯಾಣ. ನಾನು‌ ಪ್ರತಿ ಘಳಿಗೆಯನ್ನು ಆನಂದಿಸಿದೆ. ಸೆಟ್‌ನಲ್ಲಿ ಅದ್ಭುತ ತಂಡ ಮತ್ತು ಸುಂದರ ತಾರೆಯನ್ನು ಒಳಗೊಂಡಿತ್ತು. ಧನ್ಯವಾದಗಳು ಧನು ಸರ್. ನನ್ನನ್ನು ಚೆನ್ನಾಗಿ ಹೋಸ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು, ವಿಜಯ್ ಮತ್ತು ಇಡೀ ತಂಡಕ್ಕೆ ಧನ್ಯವಾದʼʼಎಂದು ಬರೆದುಕೊಂಡಿದ್ದರು.

ಇದಕ್ಕೂ ಕೆಲವು ದಿನಗಳ ಹಿಂದೆ ಟ್ರೈಲರ್ ರಫ್ ಕಟ್ ಆಗಿರುವ ಬಗ್ಗೆ ಸುದೀಪ್ ಮಾಹಿತಿ ಹಂಚಿಕೊಂಡಿದ್ದರು. ಸುದೀಪ್‌ ಎಕ್ಸ್‌ನಲ್ಲಿ ʻʻಮ್ಯಾಕ್ಸ್ (Max) ಕ್ಲೈಮ್ಯಾಕ್ಸ್‌ನ ಪ್ರಮುಖ ಭಾಗ ಪೂರ್ಣಗೊಳಿಸಲಾಗಿದೆ. ಇಲ್ಲಿಯವರೆಗೆ ಚಿತ್ರೀಕರಿಸಿದ ಅಷ್ಟೂ ಶಾಟ್‌ಗಳನ್ನು ನೋಡಿದೆ. ಚಿತ್ರದ ಪ್ರತಿ ಬಿಟ್ ನೋಡಿ, ತಂಡದ ಎಫರ್ಟ್‌ ಕಂಡು ಸಂತೋಷವಾಗಿದೆ. ಸ್ವಲ್ಪ ಭಾಗ ಚಿತ್ರೀಕರಣ ಬಾಕಿ ಇದೆ. ಟ್ರೈಲರ್ ವೇಳೆ ರಫ್ ಕಟ್ ಸಹ ನೋಡಿದೆ ಮತ್ತು ಅದು ನನ್ನನ್ನು ರೋಮಾಂಚನಗೊಳಿಸಿತುʼʼ ಎಂದು ಬರೆದುಕೊಂಡಿದ್ದರು.

ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪೊಲೀಸ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಪಾತ್ರದ ಹೆಸರು ವಿಭಿನ್ನವಾಗಿಯೇ ಇದೆ. ʻಅರ್ಜುನ್ ಮಹಾಕ್ಷಯ್ʼ ಹೆಸರಿನ ಸುದೀಪ್ ಪಾತ್ರ ಸ್ಪೆಷಲ್ ಆಗಿಯೇ ಇರಲಿದೆ ಎಂದು ವರದಿಯಾಗಿದೆ. ʻಮ್ಯಾಕ್ಸ್ʼ ಸಿನಿಮಾದಲ್ಲಿ ಸುದೀಪ್ ಭರ್ಜರಿ ಸಾಹಸಗಳನ್ನ ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಈ ಸಾಹಗಳನ್ನ ಕಂಪೋಸ್ ಮಾಡಿದ್ದಾರೆ. ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ಇವೆ ಎನ್ನಲಾಗಿದೆ.

ʻಮ್ಯಾಕ್ಸ್ʼ ಸಿನಿಮಾಕ್ಕೆ ಕನ್ನಡದ ತಾರೆಯರು ಇದ್ದಾರೆ. ಕನ್ನಡದ ಟೆಕ್ನಿಷಿಯನ್‌ಗಳೂ ಇದ್ದಾರೆ. ಹಾಗೆಯೇ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಶೇಖರ್‌ಚಂದ್ರ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ ಕೂಡ ಈ ಸಿನಿಮಾದಲ್ಲಿ ಇದ್ದಾರೆ.

ವರಲಕ್ಷ್ಮಿ ಶರತ್ ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

Continue Reading

ಸ್ಯಾಂಡಲ್ ವುಡ್

Dhruva Sarja: ಜಿಮ್ ಟ್ರೈನರ್ ಮೇಲೆ ಹಲ್ಲೆ; ಧ್ರುವ ಸರ್ಜಾ ನೀಡಿದ ಸ್ಪಷ್ಟನೆ ಏನು?

Dhruva Sarja: ನಂಬರ್ ಪ್ಲೇಟ್ ಇಲ್ಲದ ಗಾಡಿಯಲ್ಲಿ ಮುಖ ಮುಚ್ಚಿ ಕೊಂಡು ಪ್ರಶಾಂತ್‌ ಮೇಲೆ ಇಬ್ಬರು ಅಪರಿಚಿತರು ಬೈಕ್‌ ಮೇಲೆ ಬಂದು ದಾಳಿ ನಡೆಸಿದ್ದಾರೆ. ಈಗಾಗಲೇ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಪ್ರಶಾಂತ್‌. ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ ಅವರು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

VISTARANEWS.COM


on

Dhruva Sarja Trainer Prashanth Was Attacked First Reaction
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ (Dhruva Sarja) ಜತೆಗಿದ್ದ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಭಾನುವಾರ (ಮೇ 26) ರಾತ್ರಿ ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಸ್ಥಳೀಯ ಹುಡುಗರ ಜತೆ ಗಲಾಟೆ (Dhruva Sarja Trainer Prashanth) ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ ಅವರು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಹಲ್ಲೆ ಬಗ್ಗೆ ಬನಶಂಕರಿ ಪೊಲೀಸರಿಗೆ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವೊಂದಕ್ಕೆ ಧ್ರುವ ಸರ್ಜಾ ಮಾಹಿತಿ ನೀಡಿ ʻʻಪ್ರಶಾಂತ್‌ ಅವರು ಕೆಡಿ ಸಿನಿಮಾ ಈವೆಂಟ್‌ನಲ್ಲಿ ನನ್ನ ಜತೆಯೇ ಇದ್ದರು. ಹೌದು, ಹಲ್ಲೆ ನಡೆದಿದ್ದು ನಿಜ. ಅವರ ವೈಯಕ್ತಿಕ ವಿಚಾರಕ್ಕೆ ಪ್ರಶಾಂತ್ ಮೇಲೆ ಹಲ್ಲೆಯಾಗಿದೆ. ಪ್ರಶಾಂತ್ ನಮ್ ಹುಡುಗ, ಅವನ ಜತೆಗಿರುತ್ತೇನೆ. ಇದು ಮೇಲ್ನೋಟಕ್ಕೆ ಪ್ರಿ ಪ್ಲಾನ್‌ ಅನ್ನಿಸುತ್ತದೆ. ಈ ವಿಚಾರ ದೊಡ್ಡದು ಮಾಡೋದು ಬೇಡʼʼ ಎಂದಿದ್ದಾರೆ.. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಶಾಂತ್‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಂಬರ್ ಪ್ಲೇಟ್ ಇಲ್ಲದ ಗಾಡಿಯಲ್ಲಿ ಮುಖ ಮುಚ್ಚಿಕೊಂಡು ಪ್ರಶಾಂತ್‌ ಮೇಲೆ ಇಬ್ಬರು ಅಪರಿಚಿತರು ಬೈಕ್‌ ಮೇಲೆ ಬಂದು ದಾಳಿ ನಡೆಸಿದ್ದಾರೆ. ಈಗಾಗಲೇ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಪ್ರಶಾಂತ್‌. ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಿನಿಮಾ ವಿಚಾರಕ್ಕೆ ಬಂದರೆ ಪ್ರೇಮ್‌ ಹಾಗೂ ಧ್ರುವ ಸರ್ಜಾ (Dhruva Sarja) ಈಗಾಗಲೇ ʻಕೆಡಿʼ ಸಿನಿಮಾ (KD movie) ಬಿಡುಗಡೆ ಯಾವಾಗ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರರಂಗಕ್ಕೆ ಬಂದ 12 ವರ್ಷಗಳಲ್ಲಿ ಧ್ರುವ ಸರ್ಜಾ 4 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ ಎನ್ನುವ ಬೇಸರ ಕೆಲವರದ್ದು. ಇದೀಗ ಹೊಸ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಬಾಲಿವುಡ್‌ಗೆ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Dhruva Sarja:  ಧ್ರುವ ಸರ್ಜಾ ಜತೆಗಿದ್ದ ಜಿಮ್ ಟ್ರೈನರ್ ಮೇಲೆ ಮಚ್ಚಿನಿಂದ‌ ಹಲ್ಲೆ?

ಬಹುನಿರೀಕ್ಷಿತ ‘ವಾರ್-2’ ಚಿತ್ರದಲ್ಲಿ ಕನ್ನಡದ ನಟ ಬಣ್ಣ ಹಚ್ಚುತ್ತಾರೆ ಎನ್ನಲಾಗುತ್ತಿದೆ. ತೆಲುಗು ಮಾಧ್ಯಮಗಳಲ್ಲಿ ಕೂಡ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ಜ್ಯೂ. ಎನ್‌ಟಿಆರ್ ಸಹೋದರನ ಪಾತ್ರದಲ್ಲಿ ಧ್ರುವ ನಟಿಸುತ್ತಾರೆ ಎಂದು ಎಂದು ವರದಿಯಾಗುತ್ತಿದೆ. ಧ್ರುವ ಸರ್ಜಾ ಈ ಚಿತ್ರದಲ್ಲಿ ನಟಿಸುತ್ತಾರೆ, ಆ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ವರದಿಯ ಪ್ರಕಾರ, ಜ್ಯೂನಿಯರ್‌ ಎನ್‌ಟಿಆರ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಬಳಿಕ ಆದಿತ್ಯ ಚೋಪ್ರಾ ಅವರು ಅಯನ್ ಮುಖರ್ಜಿ ಅವರ ನಿರ್ದೇಶಕ್ಕೆ ಮನಸೋತು, ಈ ಸಿನಿಮಾ ಮಾಡಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

ಸಿದ್ದಾರ್ಥ್ ಆನಂದ್ ಅವರು ‘ವಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ಮೊದಲ ಪಾರ್ಟ್​​ನಲ್ಲಿ ಟೈಗರ್ ಶ್ರಾಫ್ ಪಾತ್ರ ಕೊನೆಗೊಂಡಿದೆ. ಹೀಗಾಗಿ ‘ವಾರ್-2’ ಚಿತ್ರದಲ್ಲಿ ಹೃತಿಕ್ ಮಾಡಿರುವ ಕಬೀರ್ ಪಾತ್ರ ಮುಂದುವರಿಯುತ್ತಿದೆ. ಜ್ಯೂನಿಯರ್‌ ಎನ್‌ಟಿಆರ್‌ ಅವರು ತಮ್ಮ ಮೊದಲ ಬಾಲಿವುಡ್​ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ವಿಶೇಷ. ವಾರ್‌-2 ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಉತ್ತರ ಮತ್ತು ದಕ್ಷಿಣ ಭಾಗದ ಸೂಪರ್‌ಸ್ಟಾರ್‌ಗಳನ್ನು ಹೊಂದಿದೆ. ಕಿಯಾರಾ ಆಡ್ವಾಣಿ ಈ ಸಿನಿಮಾ ನಾಯಕಿ. ʼವಾರ್ 2ʼ 2025ರ ಆಗಸ್ಟ್ 14ರಂದು ಬಿಡುಗಡೆಯಾಗಲಿದೆ.

Continue Reading

ಸ್ಯಾಂಡಲ್ ವುಡ್

Dhruva Sarja:  ಧ್ರುವ ಸರ್ಜಾ ಜತೆಗಿದ್ದ ಜಿಮ್ ಟ್ರೈನರ್ ಮೇಲೆ ಮಚ್ಚಿನಿಂದ‌ ಹಲ್ಲೆ?

Dhruva Sarja: ವೈಯಕ್ತಿಕ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಗಲಾಟೆ ಆಗಿದೆ ಎನ್ನಲಾಗಿದೆ. ಸಿಟ್ಟಿನಲ್ಲಿ ಮಚ್ಚಿನಿಂದ ಪ್ರಶಾಂತ್ ಮೇಲೆ ಏರಿಯಾ ಹುಡುಗರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸಿನಿಮಾ ವಿಚಾರಕ್ಕೆ ಬಂದರೆ ಪ್ರೇಮ್‌ ಹಾಗೂ ಧ್ರುವ ಸರ್ಜಾ (Dhruva Sarja) ಈಗಾಗಲೇ ʻಕೆಡಿʼ ಸಿನಿಮಾ ( KD movie) ಬಿಡುಗಡೆ ಯಾವಾಗ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರರಂಗಕ್ಕೆ ಬಂದ 12 ವರ್ಷಗಳಲ್ಲಿ ಧ್ರುವ ಸರ್ಜಾ 4 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ ಎನ್ನುವ ಬೇಸರ ಕೆಲವರದ್ದು.

VISTARANEWS.COM


on

Dhruva Sarja Gym trainer prashanth attacked
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ (Dhruva Sarja) ಜತೆಗಿದ್ದ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಅಟ್ಯಾಕ್ ಆಗಿದೆ ಎಂದು ವರದಿಯಾಗಿದೆ. ಭಾನುವಾರ (ಮೇ 26) ರಾತ್ರಿ ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಸ್ಥಳೀಯ ಹುಡುಗರ ಜತೆ ಗಲಾಟೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ ಅವರು ಸ್ಪಷ್ಟನೆ ಕೊಡಬೇಕಿದೆ. ಸದ್ಯಕ್ಕೆ ಮಚ್ಚಿನಿಂದ‌ ಪ್ರಶಾಂತ್ ಮೇಲೆ ಹಲ್ಲೆ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈಯಕ್ತಿಕ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಗಲಾಟೆ ಆಗಿದೆ ಎನ್ನಲಾಗಿದೆ. ಸಿಟ್ಟಿನಲ್ಲಿ ಮಚ್ಚಿನಿಂದ ಪ್ರಶಾಂತ್ ಮೇಲೆ ಸ್ಥಳೀಯ ಹುಡುಗರು ಹಲ್ಲೆ ಮಾಡಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಶಾಂತ್‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿನಿಮಾ ವಿಚಾರಕ್ಕೆ ಬಂದರೆ ಪ್ರೇಮ್‌ ಹಾಗೂ ಧ್ರುವ ಸರ್ಜಾ (Dhruva Sarja) ಈಗಾಗಲೇ ʻಕೆಡಿʼ ಸಿನಿಮಾ (KD movie) ಬಿಡುಗಡೆ ಯಾವಾಗ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರರಂಗಕ್ಕೆ ಬಂದ 12 ವರ್ಷಗಳಲ್ಲಿ ಧ್ರುವ ಸರ್ಜಾ 4 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ ಎನ್ನುವ ಬೇಸರ ಕೆಲವರದ್ದು. ಇದೀಗ ಹೊಸ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಬಾಲಿವುಡ್‌ಗೆ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Dhruva Sarja: ಬಾಲಿವುಡ್‌ ಸಿನಿಮಾಗೆ ಎಂಟ್ರಿ ಕೊಡ್ತಾರಾ ಧ್ರುವ ಸರ್ಜಾ? ಬಿಗ್‌ ಬಜೆಟ್‌ ಚಿತ್ರದಲ್ಲಿ ಸಹೋದರನ ಪಾತ್ರ?

ಬಹುನಿರೀಕ್ಷಿತ ‘ವಾರ್-2’ ಚಿತ್ರದಲ್ಲಿ ಕನ್ನಡದ ನಟ ಬಣ್ಣ ಹಚ್ಚುತ್ತಾರೆ ಎನ್ನಲಾಗುತ್ತಿದೆ. ತೆಲುಗು ಮಾಧ್ಯಮಗಳಲ್ಲಿ ಕೂಡ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ಜ್ಯೂ. ಎನ್‌ಟಿಆರ್ ಸಹೋದರನ ಪಾತ್ರದಲ್ಲಿ ಧ್ರುವ ನಟಿಸುತ್ತಾರೆ ಎಂದು ಎಂದು ವರದಿಯಾಗುತ್ತಿದೆ. ಧ್ರುವ ಸರ್ಜಾ ಈ ಚಿತ್ರದಲ್ಲಿ ನಟಿಸುತ್ತಾರೆ, ಆ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ವರದಿಯ ಪ್ರಕಾರ, ಜ್ಯೂನಿಯರ್‌ ಎನ್‌ಟಿಆರ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಬಳಿಕ ಆದಿತ್ಯ ಚೋಪ್ರಾ ಅವರು ಅಯನ್ ಮುಖರ್ಜಿ ಅವರ ನಿರ್ದೇಶಕ್ಕೆ ಮನಸೋತು, ಈ ಸಿನಿಮಾ ಮಾಡಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

ಸಿದ್ದಾರ್ಥ್ ಆನಂದ್ ಅವರು ‘ವಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ಮೊದಲ ಪಾರ್ಟ್​​ನಲ್ಲಿ ಟೈಗರ್ ಶ್ರಾಫ್ ಪಾತ್ರ ಕೊನೆಗೊಂಡಿದೆ. ಹೀಗಾಗಿ ‘ವಾರ್-2’ ಚಿತ್ರದಲ್ಲಿ ಹೃತಿಕ್ ಮಾಡಿರುವ ಕಬೀರ್ ಪಾತ್ರ ಮುಂದುವರಿಯುತ್ತಿದೆ. ಜ್ಯೂನಿಯರ್‌ ಎನ್‌ಟಿಆರ್‌ ಅವರು ತಮ್ಮ ಮೊದಲ ಬಾಲಿವುಡ್​ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ವಿಶೇಷ. ವಾರ್‌-2 ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಉತ್ತರ ಮತ್ತು ದಕ್ಷಿಣ ಭಾಗದ ಸೂಪರ್‌ಸ್ಟಾರ್‌ಗಳನ್ನು ಹೊಂದಿದೆ. ಕಿಯಾರಾ ಆಡ್ವಾಣಿ ಈ ಸಿನಿಮಾ ನಾಯಕಿ. ʼವಾರ್ 2ʼ 2025ರ ಆಗಸ್ಟ್ 14ರಂದು ಬಿಡುಗಡೆಯಾಗಲಿದೆ.

Continue Reading
Advertisement
Veer Savarkar
ದೇಶ2 mins ago

Veer Savarkar: ಸ್ವಾತಂತ್ರ್ಯ ಯೋಧ ವೀರ್ ಸಾವರ್ಕರ್ ಜೀವನದ ಕುತೂಹಲಕರ ಸಂಗತಿಗಳಿವು

Drain pipe collapse
ದೇಶ4 mins ago

Drain Pipe collapse: 700 ಮೀಟರ್‌ ಉದ್ದದ ಕಬ್ಬಿಣದ ಪೈಪ್ ಕುಸಿತ; ವಾಹನಗಳು ಸಂಪೂರ್ಣ ಜಖಂ; ವಿಡಿಯೋ ವೈರಲ್‌

Umar Khalid
ದೇಶ8 mins ago

Umar Khalid: ದೆಹಲಿ ಗಲಭೆಯ ‘ಮಾಸ್ಟರ್‌ ಮೈಂಡ್‌ʼ ಉಮರ್ ಖಾಲಿದ್ ಜಾಮೀನು ಅರ್ಜಿ ವಜಾ

Physical Abuse
ಚಿಕ್ಕಬಳ್ಳಾಪುರ10 mins ago

Physical Abuse: 7ನೇ ಕ್ಲಾಸ್‌ ಹುಡುಗಿ 3 ತಿಂಗಳ ಗರ್ಭಿಣಿ! ಅತ್ಯಾಚಾರವೆಸಗಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಅರೆಸ್ಟ್‌

Veer Savarkar flyover
ಕರ್ನಾಟಕ30 mins ago

Veer Savarkar flyover: ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ; ಎನ್‌ಎಸ್‌ಯುಐ ಕಾರ್ಯಕರ್ತರು ವಶಕ್ಕೆ

T20 World Cup 2024
ಕ್ರೀಡೆ53 mins ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟರ್​ಗಳಿವರು

Viral Video
ವೈರಲ್ ನ್ಯೂಸ್54 mins ago

Viral Video: ವಿಮಾನದ ರೆಕ್ಕೆ ಮೇಲೆ ನಡೆದುಕೊಂಡು ಹೊರ ಬಂದ ಪ್ರಯಾಣಿಕರು; ವೈರಲಾಯ್ತು ವಿಡಿಯೋ

self harming chandrashekar ವಾಲ್ಮೀಕಿ
ಪ್ರಮುಖ ಸುದ್ದಿ58 mins ago

ವಾಲ್ಮೀಕಿ ನಿಗಮ ಅಧೀಕ್ಷಕ ಆತ್ಮಹತ್ಯೆ ಪ್ರಕರಣ: ಮೂವರ ಮೇಲೆ ಎಫ್‌ಐಆರ್; ಡೆತ್‌ ನೋಟ್‌ನಲ್ಲಿರುವ ಸಚಿವ ಯಾರು?

Chetan and Naveen gowda
ಕರ್ನಾಟಕ1 hour ago

Prajwal Revanna Case: ಪೆನ್ ಡ್ರೈವ್ ಹಂಚಿಕೆ ಪ್ರಕರಣ; ಚೇತನ್, ನವೀನ್ ಗೌಡ ಎಸ್ಐಟಿ ವಶಕ್ಕೆ

Pushpa 2
ಸಿನಿಮಾ2 hours ago

Pushpa 2: ʼಪುಷ್ಪ 2ʼ ಸಿನಿಮಾ ತಂಡದಿಂದ ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ಎರಡನೇ ಹಾಡು ರಿಲೀಸ್‌ಗೆ ಮುಹೂರ್ತ ಫಿಕ್ಸ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ22 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌