ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟಕ್ಕೆ 9 ಜನ ಬಲಿ; ಹಲವರ ಸ್ಥಿತಿ ಗಂಭೀರ - Vistara News

ದೇಶ

ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟಕ್ಕೆ 9 ಜನ ಬಲಿ; ಹಲವರ ಸ್ಥಿತಿ ಗಂಭೀರ

ತಮಿಳುನಾಡಿನ ವಿರುದ್ಧುನಗರ ಜಿಲ್ಲೆಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಇದರಿಂದಾಗಿ 9 ಜನ ಮೃತಪಡುವ ಜತೆಗೆ ಹಲವರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

VISTARANEWS.COM


on

Firecracker Blast
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ತಮಿಳುನಾಡಿನ ವಿರುದ್ಧುನಗರ ಜಿಲ್ಲೆಯಲ್ಲಿರುವ (Virudhunagar District) ಪಟಾಕಿ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ (Firecracker Factory Blast) ಸಂಭವಿಸಿ 11 ಜನ ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರುದ್ಧುನಗರ ಜಿಲ್ಲೆಯ ವೆಂಬಕೊಟ್ಟಾಯಿ (Vembakottai) ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ (ಫೆಬ್ರವರಿ 17) ಮಧ್ಯಾಹ್ನ ಭೀಕರ ಸ್ಫೋಟ ಸಂಭವಿಸಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರೂ ಅಷ್ಟೊತ್ತಿಗಾಗಲೇ ಹಲವು ಜನ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ ಕಾರಣ ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕಾರ್ಖಾನೆಯ ಕೋಣೆಯೊಂದರಲ್ಲಿ ಕೆಮಿಕಲ್‌ ಮಿಶ್ರಣ ಮಾಡುವಾಗ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗತ್ತಿದೆ. ಗಾಯಗೊಂಡಿರುವ ಹಲವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಪಟಾಕಿ ಕಾರ್ಖಾನೆಯು ವಿಜಯ್‌ ಎಂಬುವವರಿಗೆ ಸೇರಿದ್ದು, ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಪಟಾಕಿ ಸ್ಫೋಟದ ತೀವ್ರತೆಗೆ ಕಾರ್ಖಾನೆ ಜತೆಗೆ ಅಕ್ಕಪಕ್ಕದ ನಾಲ್ಕು ಕಟ್ಟಡಗಳಿಗೂ ತೀವ್ರ ರೀತಿಯಲ್ಲಿ ಹಾನಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ, ದುರಂತದ ಕುರಿತು ಇದುವರೆಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 11 ಜನರ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

ಕೆಲ ದಿನಗಳ ಹಿಂದಷ್ಟೇ ಮಧ್ಯಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿ 11 ಜನ ಮೃತಪಟ್ಟಿದ್ದರು. ಮದ್ಯಪ್ರದೇಶದ ಹರ್ದಾ ಪಟ್ಟಣದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಭೀಕರ ದುರಂತ ಸಂಭವಿಸಿತ್ತು. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ್ದು, 11 ಜನ ಮೃತಪಟ್ಟಿದ್ದರು. 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಗೊಂಡವರಲ್ಲಿಯೇ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Stock Market: ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್: 24,250 ಪಾಯಿಂಟ್‌ ತಲುಪಿದ ನಿಫ್ಟಿ

Stock Market: ಭಾರತೀಯ ಷೇರು ಮಾರುಕಟ್ಟೆ ಬುಧವಾರ (ಜುಲೈ 3) ಹೊಸ ಇತಿಹಾಸ ಬರೆದಿದೆ. ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಇದೇ ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿದೆ. ಜತೆಗೆ ನಿಫ್ಟಿ ಕೂಡ 24,291.75 ಅಂಕಗಳ ಹೊಸ ಶಿಖರ ಏರಿದೆ. ಇಂದು ಸೆನ್ಸೆಕ್ಸ್ ಮೊದಲ ಬಾರಿಗೆ ಜೀವಮಾನದ ಗರಿಷ್ಠ ಪಾಯಿಂಟ್‌ 80,039 ಪಾಯಿಂಟ್‌ಗೆ ತಲುಪಿದರೆ, ನಿಫ್ಟಿ 169 ಪಾಯಿಂಟ್‌ಗಳ ಏರಿಕೆ ಕಂಡು 24,292ಕ್ಕೆ ತಲುಪಿದೆ.

VISTARANEWS.COM


on

Stock Market
Koo

ಮುಂಬೈ: ಭಾರತೀಯ ಷೇರು ಮಾರುಕಟ್ಟೆ (Stock Market) ಬುಧವಾರ (ಜುಲೈ 3) ಹೊಸ ಇತಿಹಾಸ ಬರೆದಿದೆ. ಇಂದು ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ (Sensex) 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಇದೇ ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿದೆ. ಜತೆಗೆ ನಿಫ್ಟಿ (Nifty) ಕೂಡ 24,291.75 ಅಂಕಗಳ ಹೊಸ ಶಿಖರ ಏರಿದೆ.

ಇಂದು ಸೆನ್ಸೆಕ್ಸ್ ಮೊದಲ ಬಾರಿಗೆ ಜೀವಮಾನದ ಗರಿಷ್ಠ ಪಾಯಿಂಟ್‌ 80,039 ಪಾಯಿಂಟ್‌ಗೆ ತಲುಪಿದರೆ, ನಿಫ್ಟಿ 169 ಪಾಯಿಂಟ್‌ಗಳ ಏರಿಕೆ ಕಂಡು 24,292ಕ್ಕೆ ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸೆನ್ಸೆಕ್ಸ್‌ನಲ್ಲಿ ಗರಿಷ್ಠ ಲಾಭ ಗಳಿಸಿದ್ದು, 1,791.90 ರೂ.ಗೆ ತಲುಪಿದೆ. ಸೆನ್ಸೆಕ್ಸ್‌ನಲ್ಲಿ ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್‌ ಮತ್ತು ಎಂ & ಎಂ ಲಾಭ ಗಳಿಸಿದರೆ, ಟೆಕ್ ಮಹೀಂದ್ರಾ, ಟಿಸಿಎಸ್, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಭಾರ್ತಿ ಏರ್‌ಟೆಲ್‌ ನಷ್ಟ ಅನುಭವಿಸಿವೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 52 ವಾರಗಳ ಗರಿಷ್ಠ ಬೆಲೆ

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಸುಮಾರು 52 ವಾರಗಳ ಬಳಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಇಂದು 60ಕ್ಕೂ ಹೆಚ್ಚು ರೂ. ಅಥವಾ ಶೇ. 3ಕ್ಕೂ ಅಧಿಕ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ʼʼಇಂದು ಮಾರುಕಟ್ಟೆ ಚಟುವಟಿಕೆಯ ಕೇಂದ್ರಬಿಂದು ಎಚ್‌ಡಿಎಫ್‌ಸಿ ಬ್ಯಾಂಕ್ ಆಗಿದ್ದು, ತನ್ನ ಮೇಲ್ಮುಖ ಚಲನೆಯನ್ನು ಮುಂದುವರಿಸಿದೆ. ಇದು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುವ ಸಾಮರ್ಥ್ಯ ಹೊಂದಿದೆʼʼ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಪ್ರಗತಿ ಸಾಧಿಸುದ್ದೇವೆ ಎಂದು ಹೇಳಿಕ ನೀಡಿದ ನಂತರ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳು ಬುಧವಾರ ಬೆಳಿಗ್ಗೆ ಧನಾತ್ಮಕ ಪ್ರದರ್ಶನ ತೋರಿದವು.

ಇದನ್ನೂ ಓದಿ: ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಈ ಸಂಗತಿ ತಿಳಿದಿರಲೇಬೇಕು!

ಮಂಗಳವಾರ ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲಿ ಸೆನ್ಸೆಕ್ಸ್‌ ದಾಖಲೆಯ 79,653.21 ಅಂಕ ತಲುಪಿತ್ತು. ನಿಫ್ಟಿ (Nifty) ಕೂಡ ಹೊಸ ದಾಖಲೆ ಬರೆದಿದ್ದು 24,186.5 ಪಾಯಿಂಟ್‌ ಗಡಿ ಮುಟ್ಟಿತ್ತು. ಮಂಗಳವಾರ ಬೆಳಿಗ್ಗೆ ಎನ್ಎಸ್ಇ ನಿಫ್ಟಿ ಶೇ. 0.21ರಷ್ಟು ಏರಿಕೆ ಕಂಡು 24,186.5 ಪಾಯಿಂಟ್‌ಗೆ ತಲುಪಿದ್ದರೆ, ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.22ರಷ್ಟು ಹೆಚ್ಚಳ ದಾಖಲಿಸಿ 79,653.21 ಪಾಯಿಂಟ್‌ ಗಳಿಸಿತ್ತು. ಐಟಿ ಕಂಪನಿಗಳ ಲಾಭ ಮತ್ತು ಯುಎಸ್ ಫೆಡರಲ್ ಸೆಪ್ಟೆಂಬರ್‌ನಲ್ಲಿ ರಿಸರ್ವ್ ಬಡ್ಡಿದರ ಕಡಿತದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಷೇರುಗಳು ಈ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ.

ಹಿಂದಿನ ಸೆಷನ್‌ನಲ್ಲಿ ಶೇ. 2ರಷ್ಟು ಏರಿಕೆ ಕಂಡಿದ್ದ ಐಟಿ ಷೇರುಗಳು ಮತ್ತೆ ಶೇ. 0.7ರಷ್ಟು ಹೆಚ್ಚಳ ದಾಖಲಿಸಿದ್ದವು. ಎಲ್ಲ 13 ಪ್ರಮುಖ ವಲಯಗಳು ಲಾಭವನ್ನು ಕಂಡವು. ಅದರಲ್ಲಿಯೂ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಕ್ರಮವಾಗಿ ಶೇ. 0.4 ಮತ್ತು ಶೇ. 0.2 ಹೆಚ್ಚಳ ಕಂಡವು.

Continue Reading

ದೇಶ

Nitin Gadkari: ರಸ್ತೆಗಿಳಿಯಲಿದೆ 132 ಸೀಟು, ಹೋಸ್ಟೆಸ್‌ ಒಳಗೊಂಡ ಬಸ್‌; ಸಾರಿಗೆ ವಲಯದಲ್ಲಿನ ಯೋಜನೆ ವಿವರಿಸಿದ ಸಚಿವ ನಿತಿನ್‌ ಗಡ್ಕರಿ

Nitin Gadkari: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಸಾರಿಗೆ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಮುಂದಾಗಿದ್ದಾರೆ. ”132 ಸೀಟುಗಳ ಬಸ್‌ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದರಲ್ಲಿ ವಿಮಾನದಲ್ಲಿರುವಂತೆ ಸಕಲ ಸೌಲಭ್ಯಗಳೂ ಇರಲಿದೆ. ಏರ್‌ ಹೋಸ್ಟೆಸ್‌ನಂತೆ ಬಸ್‌ ಹೋಸ್ಟೆಸ್‌ಗಳೂ ಕಾರ್ಯ ನಿರ್ವಹಿಸಲಿದ್ದು, ಈ ಬಸ್‌ನಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

VISTARANEWS.COM


on

Nitin Gadkari
Koo

ಮುಂಬೈ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರು ಸಾರಿಗೆ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಮುಂದಾಗಿದ್ದಾರೆ. ”132 ಸೀಟುಗಳ ಬಸ್‌ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದರಲ್ಲಿ ವಿಮಾನದಲ್ಲಿರುವಂತೆ ಸಕಲ ಸೌಲಭ್ಯಗಳೂ ಇರಲಿದೆ. ಏರ್‌ ಹೋಸ್ಟೆಸ್‌ನಂತೆ ಬಸ್‌ ಹೋಸ್ಟೆಸ್‌ಗಳೂ ಕಾರ್ಯ ನಿರ್ವಹಿಸಲಿದ್ದು, ಈ ಬಸ್‌ನಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ” ಎಂದು ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ʼʼಪರಿಸರ ಮಾಲಿನ್ಯ ಎನ್ನುವುದು ಸದ್ಯ ದೇಶ, ಜಗತ್ತು ಎದುರಿಸುವ ಬಹುದೊಡ್ಡ ಸಮಸ್ಯೆ. ಹೀಗಾಗಿ ಸರ್ಕಾರ ಪರಿಸರಕ್ಕೆ ಹಾನಿ ಉಂಟು ಮಾಡದ ಪರ್ಯಾಯ ವ್ಯವಸ್ಥೆಗಳಿಗೆ ಒತ್ತು ನೀಡಲಿದೆ. ಅದರ ಭಾಗವಾಗಿ ಸಾರ್ವಜನಿಕ ಸಾರಿಗೆ ವಿಭಾಗದಲ್ಲಿಯೂ ಅಮೂಲಾಗ್ರ ಬದಲಾವಣೆ ಜಾರಿಗೆ ತರಲಾಗುವುದುʼʼ ಎಂದು ಹೇಳಿದ್ದಾರೆ.

ಕನಸಿನ ಯೋಜನೆ

ಈ ವೇಳೆ ಅವರು ತಮ್ಮ ಕನಸಿನ 132 ಸೀಟುಗಳ ಬಸ್‌ನ ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼ132 ಆಸನಗಳ ಬಸ್ ಅನ್ನು‌ ಪಚಯಿಸಲು ಮುಂದಾಗಿದ್ದೇವೆ. ಇದರ ಪ್ರಾಯೋಗಿಕ ಸಂಚಾರ ನಾಗ್ಪುರದಲ್ಲಿ ನಡೆಯಲಿದೆ. ಈ ಬಸ್‌ ವಿಮಾನದಂತಹ ಆಸನ ಮತ್ತು ಬಸ್ ಹೋಸ್ಟೆಸ್ ಅನ್ನು ಒಳಗೊಂಡಿದೆ. ಸಾಮಾನ್ಯ ಡೀಸೆಲ್ ಬಸ್‌ಗಳಿಗಿಂತ ಅಗ್ಗವಾಗಿರಲಿದೆ. ಮಾಲಿನ್ಯರಹಿತ ಶಕ್ತಿಯ ಮೂಲಗಳಲ್ಲಿ ಚಲಿಸಲಿದೆʼʼ ಎಂದು ವಿವರಿಸಿದ್ದಾರೆ. ʼʼಭಾರತವನ್ನು ಇಂಧನದ ಆಮದುದಾರ ದೇಶವನ್ನಾಗಿಸುವ ಬದಲು ಬದಲು ರಫ್ತುದಾರ ದೇಶವನ್ನಾಗಿಸುವುದೇ ನಮ್ಮ ಸರ್ಕಾರದ ಗುರಿʼʼ ಎಂದು ಅವರು ತಿಳಿಸಿದ್ದಾರೆ.

ಪರಿಸರ ಮಾಲಿನ್ಯ ಪ್ರಮುಖ ಸಮಸ್ಯೆ

ʼʼನಾವು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಪರಿಸರ ಮಾಲಿನ್ಯ ಮುಖ್ಯವಾದುದು. ದೇಶದಲ್ಲಿ ಅದರಲ್ಲಿಯೂ ರಾಜಧಾನಿ ದೆಹಲಿಯಲ್ಲಿ ವಾಯು, ಜಲ, ಶಬ್ದ ಮಾಲಿನ್ಯ ಮಿತಿ ಮೀರಿದೆ. ಹೀಗಾಗಿ ನಾವು ಮಾಲಿನ್ಯ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆ ಪರಿಚಯಿಸಲು ಚಿಂತನೆ ನಡೆಸಿದ್ದೇವೆ. ಅದರ ಭಾಗವಾಗಿ ಇಂಡಿಯನ್ ಆಯಿಲ್ 300 ಎಥೆನಾಲ್ ಪಂಪ್‌ಗಳನ್ನು ಸ್ಥಾಪಿಸಲಿದೆ. ಹೊಸ ಮಾದರಿಯ ವಾಹನ ನಿರ್ಮಾಣಕ್ಕೆ ತಯಾರಕರೂ ಮುಂದಾಗಿದ್ದಾರೆ. ಆದ್ದರಿಂದ 100 ರೂ. ಕೊಟ್ಟು ಒಂದು ಲೀಟರ್‌ ಪೆಟ್ರೋಲ್ ಖರೀದಿಸುವ ಬದಲು, 60 ರೂ. ಪಾವತಿಸಿ ಎಥೆನಾಲ್ ಖರೀದಿಸಬಹುದು. ಈ ಹೊಸ ಮಾದರಿಯ ವಾಹನವು ಶೇ. 60 ವಿದ್ಯುತ್ ಮತ್ತು ಶೇ. 40ರಷ್ಟು ಎಥೆನಾಲ್‌ನಲ್ಲಿ ಚಲಿಸಲಿದೆ. ಇದು ಮಾಲಿನ್ಯವನ್ನು ಸಹ ಕಡಿಮೆ ಮಾಡುತ್ತದೆ” ಎಂದು ಸಚಿವರು ಹೇಳಿದ್ದಾರೆ.

“ನಾವು ಟಾಟಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ನಾಗ್ಪುರದಲ್ಲಿ ಪ್ರಾಯೋಗಿಕ ಯೋಜನೆಯನ್ನು ಜಾರಿಗೊಳಿಸಲಿದ್ದೇವೆ. ಜೆಕ್ ಗಣರಾಜ್ಯದಲ್ಲಿ ಮೂರು ಬಸ್ಸುಗಳನ್ನು ಸೇರಿಸಿ ಓಡಿಸುತ್ತಾರೆ. ಅದರಂತೆ ನಮ್ಮ ಈ ಯೋಜನೆ 132 ಸೀಟುಗಳ ಬಸ್‌ ಅನ್ನು ಹೊಂದಿದೆ. ಈ ಬಸ್‌ ರಿಂಗ್ ರಸ್ತೆಯಲ್ಲಿ 49 ಕಿ.ಮೀ. ಪ್ರಯಾಣಿಸುತ್ತದೆ. ಕೇವಲ 40 ಸೆಕೆಂಡು ಚಾರ್ಜ್ ಮಾಡಿದರೆ 40 ಕಿ.ಮೀ. ದೂರ ಸಂಚರಿಸಲಿದೆʼʼ ಎಂದು ಗಡ್ಕರಿ ತಿಳಿಸಿದ್ದಾರೆ.

ಬಸ್‌ನ ವೈಶಿಷ್ಟ್ಯ

“ಬಸ್‌ನಲ್ಲಿ ಎಲ್ಲ ಸೌಲಭ್ಯಗಳನ್ನು ಅಳವಡಿಸುವಂತೆ ಸೂಚಿಸಿದ್ದೇನೆ. ಸೀಟಿನ ಮುಂದೆ ಲ್ಯಾಪ್‌ಟಾಪ್‌ ಇಡಲು ಸ್ಥಳಾವಕಾಶ, ಹವಾನಿಯಂತ್ರಣ ವ್ಯವಸ್ಥೆ, ಆರಾಮದಾಯಕ ಕುರ್ಚಿಗಾಗಿ ಬೇಡಿಕೆ ಇಟ್ಟಿದ್ದೇನೆ. ಏರ್ ಹೋಸ್ಟೆಸ್‌ಗಳಂತೆ ಪ್ರಯಾಣಿಕರಿಗೆ ಹಣ್ಣು, ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳನ್ನು ನೀಡಲು ಬಸ್ ಹೋಸ್ಟೆಸ್‌ಗಳು ಇರಲಿದ್ದಾರೆ. ನನ್ನ ಲೆಕ್ಕಾಚಾರದ ಪ್ರಕಾರ ಈ ಬಸ್‌ನ ವೆಚ್ಚ ಡೀಸೆಲ್ ಬಸ್‌ಗಿಂತ ಶೇ. 30ರಷ್ಟು ಕಡಿಮೆ ಇರಲಿದೆ. ಸೌರಶಕ್ತಿಯನ್ನು ಬಳಸಿದರೆ, ವೆಚ್ಚ ಇನ್ನೂ ಕಡಿಮೆಯಾಗುತ್ತದೆ” ಎಂದು ಅವರು ಹೇಳಿದ್ದಾರೆ.

ತಮ್ಮ ಸಲಹೆಯನ್ನು ಸ್ವೀಕರಿಸಿದ್ದಕ್ಕಾಗಿ ಪೆಟ್ರೋಲಿಯಂ ಸಚಿವ ಹರ್ದೀಪ್ ಪುರಿ ಅವರಿಗೆ ಧನ್ಯವಾದ ಅರ್ಪಿಸಿದ ಗಡ್ಕರಿ, ʼʼಇಂಡಿಯನ್ ಆಯಿಲ್ ಕಸದಿಂದ 1 ಲಕ್ಷ ಲೀಟರ್ ಎಥೆನಾಲ್ ಮತ್ತು ಜೈವಿಕ ಬಿಟುಮೆನ್ ಉತ್ಪಾದಿಸುವ ಯೋಜನೆಯನ್ನು ಪ್ರಾರಂಭಿಸಿದೆ. 76,000 ಟನ್ ಜೈವಿಕ ವಾಯುಯಾನ ಇಂಧನವನ್ನು ಸಹ ಉತ್ಪಾದಿಸುತ್ತದೆʼʼ ಎಂದಿದ್ದಾರೆ.

ಇದನ್ನೂ ಓದಿ: Nitin Gadkari : ಕೆಟ್ಟದಾಗಿರುವ ಹೈವೆಗಳಿಗೆ ಟೋಲ್​ ಶುಲ್ಕ ಕಟ್ಟಬೇಡಿ; ನಿತಿನ್​ ಗಡ್ಕರಿ ಸೂಚನೆ

Continue Reading

ದೇಶ

Encounter in UP: ಯೋಗಿನಾಡಲ್ಲಿ ಮತ್ತೋರ್ವ ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ನ ಎನ್‌ಕೌಂಟರ್‌

Encounter in UP: ಸುಮಿತ್‌ ವಿರುದ್ಧ ಕೊಲೆ, ಅತ್ಯಾಚಾರ ಸೇರಿದಂತೆ ಬರೋಬ್ಬರಿ 24 ಕೇಸ್‌ಗಳಿವೆ. ಆತನ ವಿರುದ್ಧ ಘಾಜಿಪುರ, ಬಲ್ಲಿಯಾ, ಜೌನ್‌ಪುರ ಮತ್ತು ಬಿಹಾರದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಈತ ಶಾಹಪುರ ಗ್ರಾಮದ ಸಮೀಪ ಇರುವ ಪಿಲ್ಲಿ ನದಿ ಹತ್ತಿತ ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ದೊರೆತಿತ್ತು. ಅದರ ಆಧಾರದಲ್ಲಿ ರೇಡ್‌ ನಡೆಸಲಾಗಿತ್ತು ಎಂದಿದ್ದಾರೆ.

VISTARANEWS.COM


on

Encounter in UP
Koo

ಜೌನ್‌ಪುರ: ಯೋಗಿ(Yogi adityanath)ನಾಡು ಉತ್ತರಪ್ರದೇಶ(Uttar Pradesh)ದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಗ್ಯಾಂಗ್‌ಸ್ಟರ್‌(Gangster)ವೊಬ್ಬನನ್ನು ಎನ್‌ಕೌಂಟರ್‌(Encounter in UP) ಮಾಡಲಾಗಿದೆ. ಜೌನ್‌ಪುರ ಜಿಲ್ಲೆಯ ಬರ್ಲಾಪುರದಲ್ಲಿ ಪೊಲೀಸರು ಮತ್ತು ವಿಶೇಷ ಟಾಸ್ಕ್‌ ಫೋರ್ಸ್‌(STF) ಜಂಟಿಯಾಗಿ ಕೈಗೆತ್ತಿಕೊಂಡಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಿತ್‌ ಕುಮಾರ್‌ ಅಲಿಯಾಸ್‌ ಮೋನು ಛವನ್ನಿಯನ್ನು ಹೊಡೆದುರುಳಿಸಲಾಗಿದೆ. ಇನ್ನು ಈತನ ಪತ್ತೆಗೆ ಪೊಲೀಸರು ಬರೋಬ್ಬರಿ 1 ಲಕ್ಷ ರೂ ಬಹುಮಾನ ಘೋಷಿಸಿದ್ದರು.

ಈ ಬಗ್ಗೆ ಮಾಹಿತಿ ನೀಡಿದ್ದ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅಜಯ್‌ಪಾಲ್‌ ಶರ್ಮಾ ಮಾಹಿತಿ ನೀಡಿದ್ದು, ಗ್ಯಾಂಗ್‌ಸ್ಟರ್‌ನ ಬಂಧನಕ್ಕೆ ಪೊಲೀಸರು ರೇಡ್‌ ನಡೆಸಿದ್ದರು. ಸುಮಿತ್‌ ವಿರುದ್ಧ ಕೊಲೆ, ಅತ್ಯಾಚಾರ ಸೇರಿದಂತೆ ಬರೋಬ್ಬರಿ 24 ಕೇಸ್‌ಗಳಿವೆ. ಆತನ ವಿರುದ್ಧ ಘಾಜಿಪುರ, ಬಲ್ಲಿಯಾ, ಜೌನ್‌ಪುರ ಮತ್ತು ಬಿಹಾರದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಈತ ಶಾಹಪುರ ಗ್ರಾಮದ ಸಮೀಪ ಇರುವ ಪಿಲ್ಲಿ ನದಿ ಹತ್ತಿತ ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ದೊರೆತಿತ್ತು. ಅದರ ಆಧಾರದಲ್ಲಿ ರೇಡ್‌ ನಡೆಸಲಾಗಿತ್ತು ಎಂದಿದ್ದಾರೆ.

ಕಾರ್ಯಾಚರಣೆ ವೇಳೆ ಸುಮಿತ್‌ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದ. ರಕ್ಷಣೆಗಾಗಿ ಪೊಲೀಸರು ನಡೆಸಿದ ದಾಳಿಯಲ್ಲಿ ಸುಮಿತ್‌ಗೆ ಗಂಭೀರವಾಗಿ ಗಾಯಗಳಾಗಿದ್ದವು ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತಾದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಇನ್ನು ಆತನ ಇಬ್ಬರು ಸಹಚರರು ಸ್ಥಳದಿಂದ ಎಸ್ಕೇಪ್‌ ಆಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗಿದೆ. ಘಟನಾ ಸ್ಥಳದಿಂದ ಎಕೆ-47 ಬಂದೂಕುಗಳು, ಪಿಸ್ತೂಲ್‌ ಮತ್ತು ಎಸ್‌ಯುವಿ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಒಂದು ತಿಂಗಳ ಹಿಂದೆಯಷ್ಟೇ ಮೊಸ್ಟ್‌ ವಾಟೆಂಡ್‌ ಗ್ಯಾಂಗ್‌ಸ್ಟರ್‌ನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದರು. ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ಉತ್ತರಪ್ರದೇಶ ಮತ್ತು ಬಿಹಾರದ ವಿಶೇಷ ಕಾರ್ಯಪಡೆಗಳು ಜಂಟೀ ಕಾರ್ಯಾಚರಣೆ ನಡೆಸಿ ನೀಲೇಶ್‌ ರೈ ಎಂಬಾತನನ್ನು ಹೊಡೆದುರುಳಿಸಿದ್ದವು. ಮುಜಾಫರ್‌ನಗರದ ರತನ್‌ಪುರಿ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.

ಇನ್ನು ನೀಲೇಶ್‌ ರೈ ಪತ್ತೆಗೆ ಉತ್ತರಪ್ರದೇಶ ಪೊಲೀಸರು 2.25 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಮೂಲತಃ ಈ ಬಿಹಾರಸ ಬೇಗಸರೈ ಜಿಲ್ಲೆಯವನಾಗಿದ್ದು, ಬರೋಬ್ಬರಿ 16 ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದವು. ಆತನ ವಿರುದ್ಧ ಕೊಲೆ, ಲೂಟಿ ಮತ್ತು ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಆತನ ಪತ್ತೆಗಾಗಿ ಪೊಲೀಸರು ಭಾರೀ ಬಹುಮಾನ ಘೋಷಿಸಿದ್ದರು.

ಇನ್ನು ಈತ ರತನ್‌ಪುರಿ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಬಿಹಾರ, ಉತ್ತರಪ್ರದೇಶ ಪೊಲೀಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಪೊಲೀಸರ ಗುಂಡೇಟು ಬಿದ್ದು ನೀಲೇಶ್‌ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ:Sudha Murty: ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ!

Continue Reading

ದೇಶ

Hathras Stampede: ಹತ್ರಾಸ್‌ ಕಾಲ್ತುಳಿತ: ಹೆಣಗಳ ರಾಶಿ ನೋಡಿ ಪೊಲೀಸ್‌ಗೆ ಹೃದಯಾಘಾತ; ಸ್ಥಳದಲ್ಲೇ ಸಾವು

Hathras Stampede: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿದ್ದು, ಹೆಣಗಳ ರಾಶಿ ನೋಡಿ ಕರ್ತವ್ಯ ನಿರತ ಪೊಲೀಸ್‌ ಒಬ್ಬರು ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಪೊಲೀಸ್‌ನನ್ನು ಇಟಾಹ್ ಜಿಲ್ಲಾ ಆಸ್ಪತ್ರೆಯಲ್ಲಿ ಭದ್ರತಾ ಡ್ಯೂಟಿಗೆ ನಿಯೋಜನೆಯಾಗಿದ್ದ ರಜನೀಶ್ ಎಂದು ಗುರುತಿಸಲಾಗಿದೆ.

VISTARANEWS.COM


on

Hathras Stampede
Koo

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿದ್ದು, ಸುಮಾರು 121 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ವೇಳೆ ಹೆಣಗಳ ರಾಶಿ ನೋಡಿ ಆಘಾತಗೊಂಡ ಕರ್ತವ್ಯ ನಿರತ ಪೊಲೀಸ್‌ ಒಬ್ಬರು ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಮೃತ ಪೊಲೀಸ್‌ನನ್ನು ರಜನೀಶ್‌ ಎಂದು ಗುರುತಿಸಲಾಗಿದೆ.

ಹತ್ರಾಸ್‌ನ ಸಿಕಂದರ್‌ರಾವ್‌ ಪ್ರದೇಶದ ಮೊಘಲ್‌ಘರಾಹಿ ಗ್ರಾಮದಲ್ಲಿ ಮಂಗಳವಾರ ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ಆಯೋಜಿಸಿದ್ದರು. ಈ ವೇಳೆ ಭೀಕರ ಕಾಲ್ತುಳಿತ ಸಂಭವಿಸಿತು. ಮೃತದೇಹಗಳನ್ನು ಇಟಾಹ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಭದ್ರತಾ ಡ್ಯೂಟಿಗೆ ನಿಯೋಜನೆಯಾಗಿದ್ದ ರಜನೀಶ್ ಬಿದ್ದಿದ್ದ ಹೆಣಗಳ ರಾಶಿಯನ್ನು ನೋಡಿದ ನಂತರ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್‌ ಭೇಟಿ

ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಈಗಾಗಲೇ ಆದೇಶಿಸಿದ್ದಾರೆ. ಹತ್ರಾಸ್ ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಅವರು ಇಂದು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಸಂತ್ರಸ್ತರನ್ನು ಭೇಟಿ ಮಾಡಲಿದ್ದಾರೆ.

ಪರಿಹಾರ ಘೋಷಣೆ

ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಮೃತರ ಕುಟುಂಬಕ್ಕೆ 2 ಲಕ್ಷ ರೂ., ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತಿತರ ನಾಯಕರು ಮೃತರ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

ಕಾರಣ ಏನು?

ದುರಂತ ಯಾಕಾಗಿ ನಡೆಯಿತು ಎನ್ನುವ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಸತ್ಯಂಗ ಆಯೋಜಿಸಿದ್ದ ಜಾಗ ಇಕ್ಕಟ್ಟಿನಿಂದ ಕೂಡಿತ್ತು. ಅಲ್ಲಿ ಸಾಕಷ್ಟು ಸ್ಥಳಾವಕಾಶ ಇರಲಿಲ್ಲ. ಜನಸಮೂಹವು ಹೊರಡಲು ಪ್ರಾರಂಭಿಸುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದೆ ಎಂದು ಸತ್ಸಂಗದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು ತಿಳಿಸಿದ್ದಾರೆ. ಸತ್ಸಂಗದ ನಂತರ ಭಕ್ತರು ಭೋಲೆ ಬಾಬಾ ಅವರ ಪಾದಗಳನ್ನು ಮುಟ್ಟಲು ಧಾವಿಸಿದರು. ಇದರಿಂದಾಗಿ ಒಮ್ಮೆಲೆ ದೊಡ್ಡ ಜನಸಂದಣಿ ಸೃಷ್ಟಿಯಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳಿಂದ ಭಕ್ತರು ಸತ್ಸಂಗಕ್ಕೆ ಆಗಮಿಸಿದ್ದರು.

ಇದನ್ನೂ ಓದಿ: Stampedes in India: ದೇಶದಲ್ಲಿ ಈ ಹಿಂದೆಯೂ ನಡೆದಿವೆ ಭಾರೀ ಕಾಲ್ತುಳಿತ ದುರಂತ; ಇಲ್ಲಿದೆ ಲಿಸ್ಟ್‌

ಹತ್ರಾಸ್‌ನಲ್ಲಿ ಸತ್ಸಂಗ ಆಯೋಜಿಸಿದ್ದ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 80,000 ಜನರಿಗೆ ಅನುಮತಿ ನೀಡಲಾಗಿತ್ತಾದರೂ 2.5 ಲಕ್ಷಕ್ಕೂ ಹೆಚ್ಚು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಎಫ್ಐಆರ್ ತಿಳಿಸಿದೆ. ನಾಪತ್ತೆಯಾದ ಭೋಲೆ ಬಾಬಾ ಅವರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Continue Reading
Advertisement
Tharun Sudhir sonal monteiro marriage update
ಸ್ಯಾಂಡಲ್ ವುಡ್8 mins ago

Tharun Sudhir: ಸೋನಾಲ್-ತರುಣ್ ಮದುವೆ ಯಾವಾಗ? ಭಾವಿ ಸೊಸೆ ಬಗ್ಗೆ ಡೈರೆಕ್ಟರ್ ಅಮ್ಮ ಏನಂದ್ರು?

Stock Market
ವಾಣಿಜ್ಯ31 mins ago

Stock Market: ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್: 24,250 ಪಾಯಿಂಟ್‌ ತಲುಪಿದ ನಿಫ್ಟಿ

bangalore murder case
ಕ್ರೈಂ43 mins ago

Murder Case: ರಾಜಧಾನಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

Team India
ಕ್ರೀಡೆ45 mins ago

Team India: ತವರಿಗೆ ಪ್ರಯಾಣ ಬೆಳೆಸಿದ ಟೀಮ್​ ಇಂಡಿಯಾ; ನಾಳೆ ದಿಲ್ಲಿಗೆ ಆಗಮನ

Actor Darshan V Manohar About Darshan
ಸ್ಯಾಂಡಲ್ ವುಡ್52 mins ago

Actor Darshan: ಹೆಣ್ಣುಮಕ್ಕಳ ಶಾಪ ತಟ್ಟಿದ್ರೆ ಏನಾಗತ್ತೆ ಅನ್ನೋದಕ್ಕೆ ದರ್ಶನ್‌ ಕೇಸ್‌ ಸಾಕ್ಷಿ ಎಂದ ವಿ ಮನೋಹರ್‌!

Nitin Gadkari
ದೇಶ1 hour ago

Nitin Gadkari: ರಸ್ತೆಗಿಳಿಯಲಿದೆ 132 ಸೀಟು, ಹೋಸ್ಟೆಸ್‌ ಒಳಗೊಂಡ ಬಸ್‌; ಸಾರಿಗೆ ವಲಯದಲ್ಲಿನ ಯೋಜನೆ ವಿವರಿಸಿದ ಸಚಿವ ನಿತಿನ್‌ ಗಡ್ಕರಿ

Amarnath Tragedy
Latest1 hour ago

Amarnath Tragedy: ಬಸ್‌ ಬ್ರೇಕ್ ಫೇಲ್; ಜೀವ ಉಳಿಸಿಕೊಳ್ಳಲು ಬಸ್‌ನಿಂದ ಜಿಗಿದ ಅಮರನಾಥ ಯಾತ್ರಿಕರು! ವಿಡಿಯೊ ಇದೆ

Kalki 2898 AD Box Office Collection Day Deepika Padukone's Film
ಟಾಲಿವುಡ್1 hour ago

Kalki 2898 AD: ಕಡಿಮೆ ಆಗಿಲ್ಲ `ಕಲ್ಕಿ’ ಅಬ್ಬರ; ಚಿತ್ರದ ಒಟ್ಟೂ ಗಳಿಕೆ ಎಷ್ಟು?

dengue fever Dinesh Gundu Rao
ಪ್ರಮುಖ ಸುದ್ದಿ2 hours ago

Dengue Fever: ಇನ್ನೂ ಏರಲಿದೆ ಡೆಂಗ್ಯು ಕೇಸ್‌ ಎಂದ ಆರೋಗ್ಯ ಸಚಿವರು; ಇದುವರೆಗೆ 6 ಸಾವು

Suryakumar Yadav Catch
ಕ್ರೀಡೆ2 hours ago

Suryakumar Yadav Catch: ಸೂರ್ಯಕುಮಾರ್​ ಕ್ಯಾಚ್ ಎಡವಟ್ಟು; ವಿಶ್ವಕಪ್​ ವಾಪಸ್​ ನೀಡಬೇಕಾ ಭಾರತ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ17 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌