Deepika Padukone Shimmer Saree Fashion: ಶಿಮ್ಮರ್‌ ಸೀರೆಯಲ್ಲಿ ನಟಿ ದೀಪಿಕಾ ಪಡುಕೋಣೆಯಂತೆ ಮಿನುಗಬೇಕೆ?! ಹಾಗಾದಲ್ಲಿ ಹೀಗೆ ಸ್ಟೈಲಿಂಗ್‌ ಮಾಡಿ! - Vistara News

ಫ್ಯಾಷನ್

Deepika Padukone Shimmer Saree Fashion: ಶಿಮ್ಮರ್‌ ಸೀರೆಯಲ್ಲಿ ನಟಿ ದೀಪಿಕಾ ಪಡುಕೋಣೆಯಂತೆ ಮಿನುಗಬೇಕೆ?! ಹಾಗಾದಲ್ಲಿ ಹೀಗೆ ಸ್ಟೈಲಿಂಗ್‌ ಮಾಡಿ!

ಬ್ರಿಟಿಷ್‌ ಅಕಾಡೆಮಿ ಫಿಲ್ಮ್‌ ಆವಾಡ್ರ್ಸ್ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಉಟ್ಟಿದ್ದ ಶಿಮ್ಮರ್‌ ಸೀರೆ (deepika padukone Shimmer Saree fashion) ಎಲ್ಲರ ಮನಸೆಳೆದಿದೆ. ದೀಪಿಕಾ ಉಟ್ಟಿದ್ದ ಈ ಸೀರೆ ಹೈಲೈಟಾಗಲು ಕಾರಣವೇನು? ಸಾಮಾನ್ಯ ಮಹಿಳೆಯರು ಅವರಂತೆ ಕಾಣಿಸುವುದು ಹೇಗೆ? ಈ ಕುರಿತಂತೆ ಫ್ಯಾಷನ್‌ ಎಕ್ಸ್‌ಫಟ್ರ್ಸ್ ಒಂದಿಷ್ಟು ಡಿಟೇಲ್ಸ್ ನೀಡಿದ್ದಾರೆ.

VISTARANEWS.COM


on

Deepika Padukone Shimmer Saree Fashion
ಚಿತ್ರಗಳು : ದೀಪಿಕಾ ಪಡುಕೋಣೆ, ಬಾಲಿವುಡ್‌ ನಟಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶಿಮ್ಮರ್‌ ಸೀರೆಯಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಜಗಮಗಿಸಿದ್ದಾರೆ. ಹೌದು. ಬ್ರಿಟಿಷ್‌ ಅಕಾಡೆಮಿ ಫಿಲ್ಮ್‌ ಆವಾಡ್ರ್ಸ್ ಸಮಾರಂಭದಲ್ಲಿ ಭಾಗವಹಿಸಿದ್ದ, ದೀಪಿಕಾ ಉಟ್ಟಿದ್ದ ಈ ಶಿಮ್ಮರ್‌ ಸೀರೆ (deepika padukone Shimmer Saree fashion) ಇದೀಗ ಜಗತ್ತಿನಾದ್ಯಂತ ಸೀರೆ ಪ್ರಿಯರನ್ನು ಆಕರ್ಷಿಸಿದೆ.

The specialty of Deepika's saree

ದೀಪಿಕಾ ಉಟ್ಟಿದ್ದ ಸೀರೆಯ ವಿಶೇ‍ಷತೆ

ಸೆಲೆಬ್ರೆಟಿ ಡಿಸೈನರ್‌ ಸಭ್ಯಸಾಚಿ ಲೆಬೆಲ್‌ನ ಆಕರ್ಷಕ ಸಿಲ್ವರ್‌ ಸಿಕ್ವಿನ್‌ ಸೀರೆಯಲ್ಲಿ, ಬಿಎಟಿಎಫ್‌ ಸಮಾರಂಭದಲ್ಲಿ, ಕಾಣಿಸಿಕೊಂಡ ದೀಪಿಕಾ, ಸೆಲೆಬ್ರೆಟಿಗಳ ಡಿಸೈನರ್‌ವೇರ್‌ಗಳ ನಡುವೆಯೂ ಈ ಸೀರೆಯಲ್ಲಿ ಮಿನುಗುತ್ತಿದ್ದರು. ಇದಕ್ಕೆ ಕಾರಣ, ಅವರ ಸ್ಟೈಲಿಂಗ್‌ ! ಲೈಮ್‌ ಲೈಟ್‌ನಲ್ಲಿದ್ದಾಗ ಗೋಲ್ಡನ್‌, ತಿರುಗಿದಾಗ ಸಿಲ್ವರ್‌ ಶೇಡ್‌ನಂತೆ ಕಾಣಿಸುತ್ತಿದ್ದ, ಈ ಸೀರೆಗೆ ಅವರು ಧರಿಸಿದ್ದ ಬ್ಯಾಕ್‌ಲೆಸ್‌ ಸ್ಟ್ರಾಪ್‌ ಬ್ಲೌಸ್‌ ಕಂಪ್ಲೀಟ್‌ ಗ್ಲಾಮರಸ್‌ ಲುಕ್‌ ನೀಡಿತ್ತು. ಇನ್ನು ಲೂಸಾದ ಸ್ಲೀಕ್‌ ಮೆಸ್ಸಿ ಬನ್‌, ಕಿವಿಯಲ್ಲಿದ್ದ ಸ್ಟೇಟ್‌ಮೆಂಟ್‌ ಇಯರಿಂಗ್ಸ್, ಕಣ್ಣಿನ ಕಾಡಿಗೆ, ತುಟಿಯ ನ್ಯೂಡ್‌ ಲಿಪ್‌ಸ್ಟಿಕ್‌ ಅವರನ್ನು ಸಾವಿರ ಜನರ ನಡುವೆಯೂ ಹೈಲೈಟ್‌ ಮಾಡಿತ್ತು ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಫಟ್ರ್ಸ್.

There are sarees that give celebrity look to ordinary girls too

ಸಾಮಾನ್ಯ ಹೆಣ್ಣುಮಕ್ಕಳಿಗೂ ಸೆಲೆಬ್ರೆಟಿ ಲುಕ್‌ ನೀಡುವ ಸೀರೆಗಳಿವು

ಇನ್ನು,ಬಾಲಿವುಡ್‌ ನಟಿಯರ ಫೆವರೇಟ್‌ ಲಿಸ್ಟ್‌ನಲ್ಲಿರುವ ಈ ಶಿಮ್ಮರ್‌ ಸೀರೆಗಳು, ಈಗಾಗಲೇ ಟ್ರೆಂಡ್‌ ಲಿಸ್ಟ್‌ನಲ್ಲಿದ್ದು, ಸಾಮಾನ್ಯ ಮಹಿಳೆಯರನ್ನು ಸವಾರಿ ಮಾಡತೊಡಗಿವೆ. ದೊಡ್ಡ ಲೆಬೆಲ್‌ನ ಈ ಸೀರೆಗಳನ್ನು ಕೊಳ್ಳಲಾಗದಿದ್ದವರಿಗೆ , ಲೋಕಲ್‌ ಬ್ರಾಂಡ್‌ಗಳು ಕಡಿಮೆ ದರದಲ್ಲಿ ಕೈಗೆಟಕುವಂತೆ ಮಾರಾಟ ಮಾಡುತ್ತಿವೆ. ಹಾಗಾಗಿ ಸಾಮಾನ್ಯ ಹೆಣ್ಣುಮಕ್ಕಳು ಕೂಡ ಈ ಸೀರೆ ಖರೀದಿಸುವುದು ಹೆಚ್ಚಾಗಿದೆ. ಎಲ್ಲರಿಗೂ ಗೊತ್ತಿರುವಂತೆ, ಈಗಾಗಲೇ ಕಾಜೋಲ್‌, ಮಾಧುರಿ ದೀಕ್ಷಿತ್‌, ದಿಶಾ ಪಟಾನಿ, ಶ್ರದ್ಧಾ, ಅನನ್ಯಾ ಪಾಂಡೇ ಸೇರಿದಂತೆ ಸಾಕಷ್ಟು ಬಾಲಿವುಡ್‌ ತಾರೆಯರು ಈ ಸೀರೆಯಲ್ಲಿ ಕಾಣಿಸಿಕೊಂಡು ಟ್ರೆಂಡ್‌ ಹುಟ್ಟುಹಾಕಿದ್ದಾರೆ. ಇದೀಗ, ದೀಪಿಕಾ ಸರದಿ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Do this to look like Deepikar in a shimmer saree

ಶಿಮ್ಮರ್‌ ಸೀರೆಯಲ್ಲಿ ದೀಪಿಕಾರಂತೆ ಕಾಣಲು ಹೀಗೆ ಮಾಡಿ

  • ಮೊದಲಿಗೆ ನಿಮ್ಮ ಬಾಡಿ ಟೈಪ್‌ ಹಾಘೂ ಸ್ಕಿನ್‌ ಟೋನ್‌ಗೆ ಹೊಂದುವಂತಹ ಸಿಕ್ವಿನ್ಸ್ ಶಿಮ್ಮರ್‌ ಶೇಡ್ಸ್ ಸೀರೆ ಆಯ್ಕೆ ಮಾಡಿ.
  • ಮಿನಿಮಲ್‌ ಆಕ್ಸೆಸರೀಸ್‌ ರೂಲ್ಸ್ ಫಾಲೋ ಮಾಡಿ.
  • ಸ್ಟೇಟ್‌ಮೆಂಟ್‌ ಆಕ್ಸೆಸರೀಸ್‌ ಧರಿಸಿ.
  • ಫ್ರೀ ಹೇರ್‌ಸ್ಟೈಲ್‌ ಬದಲು ಬನ್‌ ವಿನ್ಯಾಸಕ್ಕೆ ಮೊರೆ ಹೋಗಿ.
  • ಸ್ಲಿವ್‌ಲೆಸ್‌ ಅಥವಾ ಸ್ಟ್ರಾಪ್‌ ಬ್ಲೌಸ್‌ ಗ್ಲಾಮರಸ್‌ ಲುಕ್‌ ನೀಡಬಲ್ಲದು.
  • ಹೈ ಹೀಲ್ಸ್ ಎತ್ತರವಾಗಿರುವಂತೆ ಹಾಗೂ ಸ್ಲಿಮ್‌ ಲುಕ್‌ ನೀಡಬಲ್ಲದು.
  • ಮಿನಿಮಲ್‌ ಮೇಕಪ್‌ ಆಕರ್ಷಕವಾಗಿ ಕಾಣಿಸಬಲ್ಲದು.
  • ಗೋಲ್ಡನ್‌ ಹಾಗೂ ಸಿಲ್ವರ್‌ ನಿಮ್ಮನ್ನೂ ಜಗಮಗಿಸಬಲ್ಲದು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Online Saree Shopping: ಆನ್‌ಲೈನ್‌ನಲ್ಲಿ ಸೀರೆ ಖರೀದಿಸುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕಾದ 5 ಸಂಗತಿಗಳಿವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ (Star Holiday Fashion) ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಅವಳಿ-ಜವಳಿ ಮಕ್ಕಳ ಆರೈಕೆಯಲ್ಲೆ ಮುಳುಗಿ ಹೋಗಿದ್ದ, ಅಮೂಲ್ಯ ಇದೀಗ ಒಂದಿಷ್ಟು ವೆಸ್ಟರ್ನ್ ಡ್ರೆಸ್‌ಗಳಲ್ಲಿ ಫ್ಯಾಷೆನಬಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಫ್ಯಾಷನ್‌ ಸ್ಟೇಟ್‌ಮೆಂಟ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಏನು ಹೇಳಿದ್ದಾರೆ? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Star Holiday Fashion
ಚಿತ್ರಗಳು: ಅಮೂಲ್ಯ, ಸ್ಯಾಂಡಲ್‌ವುಡ್‌ ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ, ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ (Star Holiday Fashion) ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ತಮ್ಮ ಅವಳಿ-ಜವಳಿ ಮಕ್ಕಳ ಆರೈಕೆಯಲ್ಲೆ ಮುಳುಗಿ ಹೋಗಿದ್ದ ಅಮೂಲ್ಯ, ಸಾಕಷ್ಟು ಗ್ಯಾಪ್‌ ನಂತರ ಒಂದಿಷ್ಟು ವೆಸ್ಟರ್ನ್ ಡ್ರೆಸ್‌ಗಳಲ್ಲಿ ಫ್ಯಾಷೆನಬಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ, ಪತಿ ಜಗದೀಶ್‌ರೊಂದಿಗೆ ಕಳೆದ ಹಾಲಿ ಡೇ ಲುಕ್‌ನ ಫೋಟೋಗಳಲ್ಲಿ ಬಿಂದಾಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಅಮೂಲ್ಯ ಫ್ಯಾಷನ್‌ ಸೆನ್ಸ್

ನಟಿ ಅಮೂಲ್ಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಮದುವೆಯಾದ ನಂತರ ಕೆಲಕಾಲ ಮನೆ-ಪತಿ-ಮಕ್ಕಳು ಎಂಬುದರಲ್ಲೆ ಬ್ಯುಸಿಯಾಗಿದ್ದರು. ಈ ಮಧ್ಯೆ ಕೇವಲ ಎಥ್ನಿಕ್‌ ಫೋಟೋಗಳಲ್ಲೆ ಕಾಣಿಸಿಕೊಳ್ಳುತ್ತಿದ್ದರು. ಹಬ್ಬದ ಸಮಯದಲ್ಲಿ ರೇಷ್ಮೆ ಸೀರೆಗಳನ್ನು ಧರಿಸಿ, ಪತಿ ಇಲ್ಲವೇ ಮಕ್ಕಳೊಂದಿಗೆ ಫೋಟೋಶೂಟ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೀಗ ಪತಿಯೊಂದಿಗೆ ಹಾಲಿ ಡೇ ಯಲ್ಲಿ ಸಮ್ಮರ್‌ ಸೀಸನ್‌ನ ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಫ್ಯಾಷನ್‌ ಸ್ಟೇಟ್‌ಮೆಂಟ್‌ ಅವರನ್ನು ಮತ್ತಷ್ಟು ಆಕರ್ಷಕವಾಗಿಸಿದೆ ಎನ್ನುವ ಫ್ಯಾಷನ್‌ ವಿಶ್ಲೇಷಕರು ಹೇಳುವಂತೆ, ಅಮೂಲ್ಯಗೆ ಎಲ್ಲಾ ಶೈಲಿಯ ಉಡುಗೆಗಳು ಹೊಂದುತ್ತವೆ. ಹಾಗಾಗಿ ಅವರು ಸೀರೆಯಲ್ಲೂ ಅಂದವಾಗಿ ಕಾಣಿಸುತ್ತಾರೆ. ವೆಸ್ಟರ್ನ್ ಔಟ್‌ಫಿಟ್‌ನಲ್ಲೂ ಸುಂದರವಾಗಿ ಕಾಣಿಸುತ್ತಾರೆ. ಇದು ಅವರ ಪ್ಲಸ್‌ ಪಾಯಿಂಟ್‌ ಎಂದು ಹೇಳುತ್ತಾರೆ.

Star Holiday Fashion

ಅಮೂಲ್ಯ ಹಾಲಿ ಡೇ ಪ್ರಿಂಟ್‌ ಮ್ಯಾಕ್ಸಿ ಡ್ರೆಸ್ ಡ್ರೆಸ್‌

ಕೆಲವು ದಿನಗಳ ಹಿಂದೆ ಅಮೂಲ್ಯ ಧರಿಸಿದ್ದ ಹಾಲಿ ಡೇ ಪ್ರಿಂಟ್ಸ್ ಇರುವಂತಹ ಲೆನಿನ್‌ ಬ್ಲೆಂಟ್‌ ಆಗಿರುವಂತಹ ಫ್ಯಾಬ್ರಿಕ್‌ನ ಸ್ವಿಂಗ್‌ ಸ್ಪೆಗೆಟಿ ಮ್ಯಾಕ್ಸಿ ಸ್ಟ್ರಾಪ್‌ ಡ್ರೆಸ್‌ ಕೂಡ ಅವರನ್ನು ಆಕರ್ಷಕವಾಗಿ ಬಿಂಬಿಸಿತ್ತು. ಇಡೀ ಡ್ರೆಸ್‌ನಲ್ಲಿದ್ದ ನಾನಾ ಬೀಚ್‌ನ ಚಿತ್ರಗಳು ಸಮ್ಮರ್‌ ಸೀಸನನ್ನು ಹೈಲೈಟ್‌ ಮಾಡಿತ್ತು.

ಕ್ರ್ಯೂಸ್‌ನಲ್ಲಿ ವೈಟ್‌ ಟೀ ಶರ್ಟ್ ಡ್ರೆಸ್‌

ಇನ್ನೊಂದು ಚಿತ್ರದಲ್ಲಿ ಕಾಣಿಸಿಕೊಂಡಿರುವ ಅಮೂಲ್ಯ, ಮಧ್ಯೆ ಮಧ್ಯೆ ಮಿನುಗುವ ವೈಟ್‌ ಸ್ಟೋನ್‌ ಇರುವಂತಹ ಶ್ವೇತ ವರ್ಣದ ಟೀ ಶರ್ಟ್ ಡ್ರೆಸ್‌ ಧರಿಸಿದ್ದಾರೆ. ಮಂಡಿಯಿಂದ ಮೇಲಿರುವ ಈ ಉಡುಪಿಗೆ, ಲೆದರ್‌ ಸ್ಲಿಂಗ್‌ ಬ್ಯಾಗ್‌ ಮ್ಯಾಚ್‌ ಮಾಡಿರುವುದು ಅವರಿಗೆ ಕಂಪ್ಲೀಟ್‌ ಹಾಲಿ ಡೇ ಲುಕ್‌ ನೀಡಿದೆ.

ಇದನ್ನೂ ಓದಿ: Back Button Saree Blouse: ಮತ್ತೆ ಬಂದಿದೆ ರೆಟ್ರೊ ಸ್ಟೈಲ್‌ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌!

ನೋ ಮೇಕಪ್‌ ಮಂತ್ರ

ಈ ಹಾಲಿ ಡೇ ಲುಕ್‌ಗೆ ಅಮೂಲ್ಯ ಮಿನಿಮಲ್‌ ಮೇಕಪ್‌ ಮಾಡಿದ್ದು, ಮತ್ತೊಂದು ಔಟ್‌ಫಿಟ್‌ನಲ್ಲಿ ಮಾತ್ರ ನೋ ಮೇಕಪ್‌ಗೆ ಸೈ ಎಂದಿದ್ದಾರೆ. ಇದು ಅವರನ್ನು ನ್ಯಾಚುರಲ್‌ ಆಗಿ ಬಿಂಬಿಸಿದೆ. ಆಕ್ಸೆಸರೀಸ್‌ ಕೂಡ ಧರಿಸಿಲ್ಲ, ಇದು ಅವರಿಗೆ ವೆಸ್ಟರ್ನ್ ಟಚ್‌ ನೀಡಿದೆ. ಬೀಚ್‌ ಹಾಗೂ ಕ್ರ್ಯೂಸ್‌ ಟೂರ್‌ನ ಸಂದರ್ಭಕ್ಕೆ ಹೊಂದುವ ಅಮೂಲ್ಯ ಅವರ ಈ ಲುಕ್‌, ಹಾಲಿ ಡೇಯ ಪರ್ಫೆಕ್ಟ್ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Back Button Saree Blouse: ಮತ್ತೆ ಬಂದಿದೆ ರೆಟ್ರೊ ಸ್ಟೈಲ್‌ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌!

ಒಂದೆರೆಡು ದಶಕಗಳ ಹಿಂದೆ ಟ್ರೆಂಡಿಯಾಗಿದ್ದ ರೆಟ್ರೋ ಸ್ಟೈಲ್‌ನ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ಗಳು (Back Button Saree Blouse) ಇದೀಗ ಮತ್ತೊಮ್ಮೆ ಫ್ಯಾಷನ್‌ನಲ್ಲಿ ವೆರೈಟಿ ಡಿಸೈನ್‌ನಲ್ಲಿ ಮರಳಿವೆ. ಸೀರೆಪ್ರಿಯ ಮಹಿಳೆಯರನ್ನು ಸಿಂಗರಿಸಿವೆ. ಯಾವ್ಯಾವ ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ? ಸ್ಟೈಲಿಂಗ್‌ ಹೇಗೆ ಎಂಬುದರ ಬಗ್ಗೆ ಬ್ಲೌಸ್‌ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Back button saree blouse
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಒಂದೆರೆಡು ದಶಕಗಳ ಹಿಂದೆ ಸಖತ್‌ ಟ್ರೆಂಡಿಯಾಗಿದ್ದ, ರೆಟ್ರೋ ಸ್ಟೈಲ್‌ನ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ಗಳು (Back Button Saree Blouse) ಇದೀಗ ಮತ್ತೊಮ್ಮೆ ವೆರೈಟಿ ಡಿಸೈನ್‌ನಲ್ಲಿ ತಮ್ಮ ಜಾದೂ ಮಾಡಿವೆ. ಸೀರೆ ಪ್ರಿಯ ಮಾನಿನಿಯರನ್ನು ಸಿಂಗರಿಸಲಾರಂಭಿಸಿವೆ.

Back button saree blouse

ಬ್ಯಾಕ್‌ ಬಟನ್ ಬ್ಲೌಸ್‌ ಪುರಾಣ

“ಬಹುತೇಕ ಸೀರೆ ಬ್ಲೌಸ್‌ಗಳಿಗೆ ಫ್ರಂಟ್‌ ಬಟನ್‌ ಡಿಸೈನ್‌ ಇರುವುದು ಸಾಮಾನ್ಯ. ಎಲ್ಲರಿಗೂ ತಿಳಿದಿರುವಂತೆ ಈ ಡಿಸೈನ್‌ ಮೊದಲಿನಿಂದಲೂ ಎವರ್‌ಗ್ರೀನ್‌ ವಿನ್ಯಾಸದಲ್ಲಿ ಸೇರಿ ಹೋಗಿದೆ. ವಯಸ್ಸಿನ ಪರಿಮಿತಿಯಿಲ್ಲದೇ ಎಲ್ಲರೂ ಈ ಡಿಸೈನ್‌ನ ಸೀರೆಯನ್ನು ಉಡುವುದು ಸಾಮಾನ್ಯವಾಗಿದೆ. ಇನ್ನು, ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ ವಿಷಯಕ್ಕೆ ಬಂದಲ್ಲಿ, ಒಂದೆರೆಡು ದಶಕಗಳ ಹಿಂದೆ ಈ ಫ್ಯಾಷನ್‌ ಬಂತು. ಈ ಫ್ಯಾಷನ್‌ ಯಾವ ಮಟ್ಟಿಗೆ ಹಿಟ್‌ ಆಯಿತೆಂದರೇ, ಅಂದು ಈ ಶೈಲಿಯ ಸೀರೆ ಬ್ಲೌಸ್‌ ಧರಿಸಿದವರನ್ನು ಮಾಡರ್ನ್ ಹುಡುಗಿಯರು ಎಂದು ಗುರುತಿಸಲಾಗುತ್ತಿತ್ತು. ಆ ಮಟ್ಟಿಗೆ ಈ ರೀತಿಯ ಬ್ಲೌಸ್‌ಗಳು ಜನಪ್ರಿಯಗೊಂಡಿದ್ದವು” ಎನ್ನುತ್ತಾರೆ ಬ್ಲೌಸ್‌ ಡಿಸೈನರ್ಸ್ ರಾಘವ್‌.

Back button saree blouse

ಟ್ರೆಂಡ್‌ನಲ್ಲಿರುವ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌

ಅಂದಹಾಗೆ, ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ಗಳಲ್ಲಿ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ. ಅವುಗಳಲ್ಲಿ ಡೀಪ್‌ ಹಾರ್ಟ್ ಶೇಪ್‌ ಕಟ್‌ ಇರುವಂತಹ ಡಿಸೈನ್‌ನವು, ಹೈ ನೆಕ್‌ ಬಟನ್‌ ಬ್ಲೌಸ್‌, ಡೀಪ್‌ ನೆಕ್‌ ಬ್ಯಾಕ್‌ ಬಟನ್‌ ಬ್ಲೌಸ್‌, ಟ್ಯಾಸೆಲ್ಸ್ & ಬಟನ್‌ ಬ್ಯಾಕ್‌ ಲೆಸ್‌ ಬ್ಲೌಸ್, ವೈಡ್‌ ಕಟ್ ಬಟನ್‌ ಬ್ಲೌಸ್‌, ಟೈಯಿಂಗ್‌ ಬ್ಯಾಕ್‌ ಬಟನ್‌ ಬ್ಲೌಸ್‌, ಕ್ರಾಪ್‌ ಟಾಪ್‌ ಶೈಲಿಯ ಬ್ಯಾಕ್‌ ಬಟನ್‌ ಬ್ಲೌಸ್‌ ಸೇರಿದಂತೆ ನಾನಾ ವಿನ್ಯಾಸದವು ಮಾನಿನಿಯರನ್ನು ಸಿಂಗರಿಸಿವೆ. ಆಯಾ, ಸೀರೆಯ ಫ್ಯಾಬ್ರಿಕ್‌ನ ಆಧಾರದ ಮೇಲೆ ಬ್ಲೌಸ್‌ ಡಿಸೈನರ್‌ಗಳು ಇಂತಹ ವಿನ್ಯಾಸವನ್ನು ನಿರ್ಧರಿಸುತ್ತಿದ್ದಾರೆ. ಅದರಲ್ಲೂ ಯಂಗ್‌ ಹೆಣ್ಣುಮಕ್ಕಳು ಈ ವಿನ್ಯಾಸದ ಸೀರೆ ಬ್ಲೌಸ್‌ಗಳನ್ನು ಅತಿ ಹೆಚ್ಚು ಧರಿಸುತ್ತಿದ್ದಾರೆ ಎನ್ನುತ್ತಾರೆ ಬ್ಲೌಸ್‌ ಡಿಸೈನರ್‌ ದಿಯಾ ಹಾಗೂ ರಕ್ಷಾ. ಅವರ ಪ್ರಕಾರ, ಬ್ಯಾಕ್‌ ಬಟನ್‌ ಬ್ಲೌಸ್‌ಗಳು ಮಾಡರ್ನ್ ಲುಕ್‌ ನೀಡುವುದರೊಂದಿಗೆ ಯಂಗ್‌ ಲುಕ್‌ ನೀಡುತ್ತವಂತೆ.

Back button saree blouse

ಸೀರೆಗೆ ತಕ್ಕ ಡಿಸೈನ್‌ ಆಯ್ಕೆ

ಉಡುವ ಸೀರೆಗೆ ತಕ್ಕಂತೆ ಈ ಬ್ಯಾಕ್‌ ಬಟನ್‌ ಬ್ಲೌಸ್‌ ಡಿಸೈನ್‌ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಸ್‌. ಡಿಸೈನರ್‌ ಸೀರೆಗೆ ಕಾಕ್‌ಟೈಲ್‌ ಡಿಸೈನ್ಸ್, ರೇಷ್ಮೆ ಸೀರೆಗೆ ಡೀಪ್‌ ನೆಕ್‌ ಹಾಗೂ ಟಾಸೆಲ್ಸ್ ಇರುವಂತವು, ಎಂಬ್ರಾಯ್ಡರಿ ಹ್ಯಾಂಡ್‌ ವರ್ಕ್ ಇರುವಂತವು, ಸಾದಾ ಸೀರೆಗೆ ಹೈ ನೆಕ್‌ ಶೈಲಿಯವು ಮ್ಯಾಚ್‌ ಆಗುತ್ತವೆ ಎನ್ನುತ್ತಾರೆ.

ಇದನ್ನೂ ಓದಿ: Star Cricket Theme Fashion: ಕ್ರಿಕೆಟ್‌ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್‌!

ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ ರೆಟ್ರೋ ಲುಕ್‌ಗೆ 3 ಟಿಪ್ಸ್

  • ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ನಲ್ಲಿ ರೆಟ್ರೋ ಲುಕ್‌ ಪಡೆಯಲು ವಿಂಟೇಜ್‌ ಲುಕ್‌ ನೀಡುವ ಮೇಕಪ್‌ ಮಾಡಬೇಕು.
  • ಹೇರ್‌ಸ್ಟೈಲ್‌ ಕೂಡ ಆದಷ್ಟೂ ಈ ಲುಕ್‌ಗೆ ಮ್ಯಾಚ್‌ ಆಗಬೇಕು.
  • ಸೀರೆ ಡ್ರೇಪಿಂಗ್‌, ರೆಟ್ರೋ ಲುಕ್‌ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star Cricket Theme Fashion: ಕ್ರಿಕೆಟ್‌ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್‌!

ಇತ್ತೀಚೆಗೆ ನಟಿ ಜಾಹ್ನವಿ ಕಪೂರ್ ಧರಿಸುತ್ತಿರುವ ಒಂದೊಂದು ಬಗೆಯ ಕ್ರಿಕೆಟ್‌ ಥೀಮ್‌ನ ಔಟ್‌ಫಿಟ್‌ಗಳಿಗೆ ಅಭಿಮಾನಿಗಳು ಫಿದಾ ಆಗತೊಡಗಿದ್ದಾರೆ. ಹಾಗಾದಲ್ಲಿ, ಅವರು ಧರಿಸಿರುವ ಔಟ್‌ಫಿಟ್‌ಗಳ್ಯಾವುವು? ಅವುಗಳಲ್ಲಿ ಹೇಗೆಲ್ಲಾ ಕಾಣಿಸಿಕೊಂಡರು? ಎಂಬುದರ ಕುರಿತಾಗಿ (Star Cricket Theme Fashion) ಇಲ್ಲಿದೆ ಡಿಟೇಲ್ಸ್.

VISTARANEWS.COM


on

Star Cricket Theam Fashion
ಚಿತ್ರಗಳು: ನಟಿ ಜಾಹ್ನವಿ ಕಪೂರ್, ಬಾಲಿವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇತ್ತೀಚೆಗೆ ನಟಿ ಜಾಹ್ನವಿ ಕಪೂರ್ ಧರಿಸುತ್ತಿರುವ ಒಂದೊಂದು ಬಗೆಯ ಕ್ರಿಕೆಟ್‌ ಥೀಮ್‌ನ ಫ್ಯಾಷೆನಬಲ್‌ ಔಟ್‌ಫಿಟ್‌ಗಳಿಗೆ ಅಭಿಮಾನಿಗಳು ಫಿದಾ ಆಗತೊಡಗಿದ್ದಾರೆ. ಅಂದಹಾಗೆ, ಇದ್ಯಾಕೆ ಹೀಗೆ? ಎಂದುಕೊಳ್ಳುತ್ತಿದ್ದೀರಾ! ಅವರು ತಮ್ಮ ಮುಂಬರುವ ಕ್ರಿಕೆಟ್‌ ಆಧಾರಿತ ಸಿನಿಮಾ ಮಿಸ್ಟರ್ & ಮಿಸೆಸ್‌ ಮಾಹಿ ಪ್ರಮೋಷನ್‌ಗಾಗಿ ವಿಶೇಷವಾಗಿ ಕ್ರಿಕೆಟ್‌ ಥೀಮ್‌ ಫ್ಯಾಷನ್‌ವೇರ್‌ಗಳನ್ನು ಧರಿಸತೊಡಗಿದ್ದಾರೆ. ಇದು ಅವರ ಕ್ರಿಕೆಟ್‌ ಪ್ರೇಮದ ಜೊತೆಗೆ ಫ್ಯಾಷನ್‌ಗೂ ಸಾಥ್‌ ನೀಡಿದೆ (Star Cricket Theme Fashion) ಎನ್ನುತ್ತಿದ್ದಾರೆ ಫ್ಯಾಷನಿಸ್ಟ್‌ಗಳು.

Star Cricket Theam Fashion

ಕಟೌಟ್‌ ರೆಡ್‌ ಡ್ರೆಸ್‌ ಬ್ಯಾಕ್‌ ವಿನ್ಯಾಸದಲ್ಲಿ ಕ್ರಿಕೆಟ್‌ ಬಾಲ್‌ ಡಿಸೈನ್‌

ಜಾಹ್ನವಿಯ ವೆಸ್ಟರ್ನ್ ಶೈಲಿಯ ಕಟೌಟ್ ರೆಡ್‌ ಡ್ರೆಸ್‌ನ ಬ್ಯಾಕ್‌ ಡಿಸೈನ್‌ ಮಲ್ಟಿ ಕ್ರಿಕೆಟ್‌ ಬಾಲ್‌ಗಳನ್ನು ಜೋಡಿಸಿದಂತಹ ಸ್ಟ್ರಾಪ್‌ನಂತಹ ಡಿಸೈನ್‌ ಫ್ಯಾಷನ್‌ ಪ್ರೇಮಿಗಳನ್ನು ನಿಬ್ಬೆರಗಾಗಿಸಿತು.

Star Cricket Theam Fashion

ಸೀರೆಯಲ್ಲಿ ತ್ರಿಡಿ ಕ್ರಿಕೆಟ್‌ ಬಾಲ್‌ ಬಾರ್ಡರ್ ಚಿತ್ತಾರ

ಇನ್ನು, ಇವೆಂಟ್‌ನಲ್ಲಿ ಜಾಹ್ನವಿ ಧರಿಸಿದ್ದ ಎರಡು ಸೀರೆಗಳು ಕೂಡ ಕ್ರಿಕೆಟ್‌ ಕಾನ್ಸೆಪ್ಟ್ ಡಿಸೈನ್‌ ಹೊಂದಿದ್ದವು. ವಾರಾಣಾಸಿಯಲ್ಲಿ ಉಟ್ಟ ಸೀರೆ ಟ್ರೆಡಿಷನಲ್‌ ಆಗಿದ್ದರೂ, ಅದರ ಪಲ್ಲು ಕಂಪ್ಲೀಟ್‌ ಕ್ರಿಕೆಟ್‌ ಕ್ರೀಡಾಂಗಣದ ವರ್ಲಿ ಶೈಲಿಯ ಚಿತ್ತಾರವನ್ನು ಒಳಗೊಂಡಿತ್ತು. ಜಾಹ್ನವಿ ಧರಿಸಿದ್ದ, ಇನ್ನೊಂದು, ಜಾರ್ಜೆಟ್‌ ರೆಡ್‌ & ವೈಟ್‌ ಸ್ಟ್ರೈಪ್ಸ್ ಸೀರೆಯ ಬಾರ್ಡರ್‌, ಕ್ರಿಕೆಟ್‌ ಬಾಲ್‌ನ ತ್ರಿಡಿ ಚಿತ್ತಾರದಿಂದ ಸಿಂಗಾರಗೊಂಡಿತ್ತು. ಬಾಲ್‌ನ ಫ್ಯಾಬ್ರಿಕ್‌ನಂತೆ ಕಾಣಿಸುವ ಮೆಟೀರಿಯಲ್‌ನಿಂದ ಡಿಸೈನ್‌ ಮಾಡಲಾಗಿತ್ತು.

Star Cricket Theam Fashion

ಕ್ರಿಕೆಟ್‌ ಕ್ರಾಪ್ಡ್ ಜೆರ್ಸಿ ಟಾಪ್‌

ಜಾಹ್ನವಿ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ, ಕ್ರಿಕೆಟಿಗರ ಜೆರ್ಸಿಯಂತೆ ಕಾಣುವ ಕ್ರಾಪ್‌ ಟಾಪ್‌ನಲ್ಲಿ ಕಾಣಿಸಿಕೊಂಡರು. ಎಲ್ಲದಕ್ಕಿಂತ ಹೆಚ್ಚಾಗಿ, ಅದರ ಮೇಲೆ ಬರ್ತ್ ಡೇ ನಂಬರ್‌ ಮೂಡಿಸಿದ್ದು, ಅವರ ಖುಷಿಗೆ ಕಾರಣವಾಗಿತ್ತು.

Star Cricket Theam Fashion

ಜೆನ್‌ ಜಿ ಸೆಳೆದ ಕ್ರಾಪ್ಡ್ ಟೀ ಶರ್ಟ್–ಸ್ಕರ್ಟ್

ಕಾಲೇಜ್‌ವೊಂದರ ಇವೆಂಟ್‌ನಲ್ಲಿ ವೈಟ್‌ ಹಾಗೂ ಬ್ಲ್ಯೂ ಮತ್ತು ರೆಡ್‌ ಸ್ಟ್ರೈಪ್ಸ್ ಇರುವ ಕಾಲರ್‌ ಕ್ರಾಪ್ಡ್ ಟೀ ಶರ್ಟ್ ಜೊತೆಗೆ ವೈಟ್‌ ಸ್ಕರ್ಟ್ ಮಿಕ್ಸ್ ಮಾಡಿರುವ ಕ್ರಿಕೆಟ್‌ ಥೀಮ್‌ ಡ್ರೆಸ್‌ ಅಲ್ಲಿನ ಯಂಗ್‌ಸ್ಟರ್ಸ್‌ಗಳನ್ನು ಸೆಳೆಯಿತು.

Star Cricket Theam Fashion

ಬಾಡಿಕಾನ್‌ ಡ್ರೆಸ್‌ ಮೇಲೆ ಬ್ಯಾಟಿಂಗ್‌ ಸಿಕ್ವೀನ್ಸ್

ಜಾಹ್ನವಿಯ ಹೈ ಫ್ಯಾಷನ್‌ ಸ್ಟೈಲಿಂಗ್‌ನ ಶಿಮ್ಮರ್‌ನ ಬಾಡಿಕಾನ್‌ ಡ್ರೆಸ್‌ ಮೇಲೆ ಇದ್ದ ಬ್ಯಾಟಿಂಗ್‌ ಸಿಕ್ವೀನ್ಸ್ ಪ್ರಿಂಟ್ಸ್ ಚಿತ್ತಾರ ಹೈ ಫ್ಯಾಷನ್‌ ಲುಕ್‌ಗೆ ಸಾಥ್‌ ನೀಡಿತ್ತು.

ಇದನ್ನೂ ಓದಿ: Wedding Fashion: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ ಈ ಮಿರಮಿರ ಮಿನುಗುವ ಲೆಹೆಂಗಾಗಳು!

ಜಾಹ್ನವಿ ಕ್ರಿಕೆಟ್‌ ಥೀಮ್‌ ಆಕ್ಸೆಸರೀಸ್‌

ಕ್ರಿಕೆಟ್‌ ಬಾಲ್‌ ಆಕಾರದ ಕ್ಲಚ್‌, ಹ್ಯಾಂಡ್‌ ಪರ್ಸ್ ಸೇರಿದಂತೆ ನಾನಾ ಆಕ್ಸೆಸರೀಸ್‌ ಅವರನ್ನು ಮತ್ತಷ್ಟು ಕ್ರಿಕೆಟ್‌ ಪ್ರೇಮಿಯನ್ನಾಗಿಸಿತ್ತು. ಹೀಗೆ ಜಾಹ್ನವಿಯ ನಾನಾ ಬಗೆಯ ಕ್ರಿಕೆಟ್‌ ಥೀಮ್‌ ಔಟ್‌ಫಿಟ್‌ ಹಾಗೂ ಆಕ್ಸೆಸರೀಸ್‌ಗಳು, ಕ್ರಿಕೆಟ್‌ ಪ್ರೇಮಿಗಳನ್ನು ಮಾತ್ರವಲ್ಲ, ಫ್ಯಾಷನ್‌ ಪ್ರಿಯರನ್ನು ಸೆಳೆದವು ಎಂದು ವಿಶ್ಲೇಷಿಸಿದ್ದಾರೆ ಫ್ಯಾಷನ್‌ ವಿಮರ್ಶಕರು.

Continue Reading

ಫ್ಯಾಷನ್

Wedding Fashion: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ ಈ ಮಿರಮಿರ ಮಿನುಗುವ ಲೆಹೆಂಗಾಗಳು!

ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ (Wedding Fashion) ಮಿರಮಿರ ಮಿನುಗುವ ನಾನಾ ಬಗೆಯ ಗ್ರ್ಯಾಂಡ್‌ ಲೆಹೆಂಗಾಗಳು ಟ್ರೆಂಡಿಯಾಗಿವೆ. ಧರಿಸಿದಾಗ ಗ್ರ್ಯಾಂಡ್‌ ಲುಕ್‌ ನೀಡುವ ಈ ಡಿಸೈನರ್‌ವೇರ್‌ಗಳು ವೆರೈಟಿ ಡಿಸೈನ್‌ನಲ್ಲಿ ಬಂದಿವೆ. ಯಾವ್ಯಾವ ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ? ಆಯ್ಕೆ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.

VISTARANEWS.COM


on

Wedding Fashion
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ (Wedding Fashion) ಮಿರ ಮಿರ ಮಿನುಗುವ ಬಗೆಬಗೆಯ ಗ್ರ್ಯಾಂಡ್‌ ಲೆಹೆಂಗಾಗಳು ಟ್ರೆಂಡಿಯಾಗಿವೆ. ಮದುವೆಯಲ್ಲಿ ಧರಿಸಿದಾಗ ಗ್ರ್ಯಾಂಡ್‌ ಲುಕ್‌ ನೀಡುವ ಈ ಡಿಸೈನರ್‌ವೇರ್‌ಗಳು ಸಾದಾ, ಪ್ರಿಂಟೆಡ್‌, ಲೈನ್ಸ್, ಫ್ಲೋರಲ್‌, ಟ್ರಾಪಿಕಲ್‌ ಹಾಗೂ ಜೆಮೆಟ್ರಿಕಲ್‌ ಸೇರಿದಂತೆ ನಾನಾ ವೆರೈಟಿ ಡಿಸೈನ್‌ನಲ್ಲಿ ಆಗಮಿಸಿವೆ. ಪಾಸ್ಟೆಲ್‌ ಶೇಡ್‌ನವು ಹೆಚ್ಚು ಯುವತಿಯರನ್ನು ಸೆಳೆದಿವೆ. ಒಂದಕ್ಕಿಂತ ಒಂದು ಲೆಹೆಂಗಾಗಳು ಮನಮೋಹಕ ಡಿಸೈನ್‌ನಲ್ಲಿ ಆಗಮಿಸಿದ್ದು, ಹ್ಯಾಂಡ್‌ವರ್ಕ್ ಹಾಗೂ ಮೆಷಿನ್‌ ವರ್ಕ್‌ನಲ್ಲೂ ಪ್ರಚಲಿತದಲ್ಲಿವೆ.

ಟ್ರೆಂಡ್‌ನಲ್ಲಿರುವ ಶಿಮ್ಮರ್‌ ಲೆಹೆಂಗಾಗಳು

ಶಿಮ್ಮರ್‌ ಫ್ಯಾಬ್ರಿಕ್‌ನವು, ಸಾದಾ ವರ್ಣದ ,ಮಾನೋಕ್ರೋಮ್‌ ಸಿಕ್ವೀನ್ಸ್‌ನವು, ಮಲ್ಟಿ ಶೇಡ್‌ ಸಿಕ್ವೀನ್ಸ್, ಪ್ರಿಂಟೆಡ್‌ ಶೈನಿಂಗ್‌ ಡಿಸೈನ್‌ನವು, ಶಿಫಾನ್‌ ಶಿಮ್ಮರ್‌ ಪ್ರಿಂಟ್ಸ್, ಜಾರ್ಜೆಟ್‌ ಶಿಮ್ಮರ್‌ ಲೈನ್ಸ್, ಡಿಸೈನರ್‌ ಬಾರ್ಡರ್‌ ಶಿಮ್ಮರ್‌ನ ಲೆಹೆಂಗಾಗಳು ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿವೆ.

Wedding Fashion

ಪಾಸ್ಟೆಲ್‌ ಶೇಡ್ಸ್‌ಗೆ ಬೇಡಿಕೆ

ಶಿಮ್ಮರ್‌ ಡಿಸೈನ್‌ನಲ್ಲಿ ಪಾಸ್ಟೆಲ್‌ ಶೇಡ್ಸ್‌ನ ಲೆಹೆಂಗಾಗಳು, ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಚಾಲ್ತಿಯಲ್ಲಿವೆ. ರೋಸ್‌, ಪಿಸ್ತಾ ಗ್ರೀನ್‌, ಪೀಚ್‌, ಲೈಟ್‌ ಬ್ಲ್ಯೂ, ಹೀಗೆ ನಾನಾ ತಿಳಿ ವರ್ಣದ ಪಾಸ್ಟೆಲ್‌ ಶೇಡ್‌ನ ಗ್ರ್ಯಾಂಡ್‌ ಲೆಹೆಂಗಾಗಳು ಮದುವೆಯಾಗುವ ಮದುಮಗಳನ್ನು ಮಾತ್ರವಲ್ಲ, ಮದುವೆಯಲ್ಲಿ ಪಾಲ್ಗೊಳ್ಳುವ ಮಾನಿನಿಯರನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Wedding Fashion

ಗ್ರ್ಯಾಂಡ್‌ ಶಿಮ್ಮರ್‌ ಮಿಕ್ಸ್ ಮ್ಯಾಚ್‌ ಡಿಸೈನ್‌ ದುಪಟ್ಟಾ

ಈ ಶಿಮ್ಮರ್‌ ಲೆಹೆಂಗಾಗಳು ಕಂಪ್ಲೀಟ್‌ ಶೈನಿಂಗ್‌ ಇರಲಿ, ಬಿಡಲಿ, ಇವುಗಳಿಗೆ ಹೊಂದುವಂತಹ ಮಿಕ್ಸ್ ಮ್ಯಾಚ್‌ ಅಥವಾ ಮಾನೋಕ್ರೋಮ್‌ ಶೇಡ್‌ನ ಮಿರಮಿರ ಮಿನುಗುವ ಡಿಸೈನ್‌ ಒಳಗೊಂಡ ದುಪಟ್ಟಾಗಳು ಈ ಶೈಲಿಯ ಲೆಹೆಂಗಾಗಳ ಸೌಂದರ್ಯವನ್ನು ಹೆಚ್ಚಿಸಿವೆ.

ಇದನ್ನೂ ಓದಿ: Summer Star Fashion: ಏನಿದು ನಟಿ ಅದಿತಿ ರಾವ್‌ ಹೈದರಿಯ ಕೋ-ಆರ್ಡ್ ಕೊಸ್ಟಾ ಪ್ಯಾಂಟ್‌ ಟ್ರೆಂಡ್‌?

ಶಿಮ್ಮರ್‌ ಲೆಹೆಂಗಾ ಆಯ್ಕೆಗೆ 7 ಸೂತ್ರ

  • ಒಂದೇ ಶೇಡ್‌ನ ಶಿಮ್ಮರ್‌ ಲೆಹೆಂಗಾಗಳು ಹೆಚ್ಚು ಡಿಸೈನ್‌ನಲ್ಲಿ ಲಭ್ಯ.
  • ಪಾಸ್ಟೆಲ್‌ ಶೇಡ್‌ನವನ್ನು ಸ್ಕಿನ್‌ಟೋನ್‌ಗೆ ತಕ್ಕಂತೆ ಆಯ್ಕೆ ಮಾಡಿ.
  • ದುಪಟ್ಟಾ ಕೂಡ ಗ್ರ್ಯಾಂಡ್‌ ಆಗಿರುವುದನ್ನು ಚೂಸ್‌ ಮಾಡಿ.
  • ಬಾರ್ಡರ್ ಲೆಹೆಂಗಾಗಳು ನೋಡಲು ಆಕರ್ಷಕವಾಗಿ ಕಾಣುತ್ತವೆ.
  • ಸಿಕ್ವಿನ್ಸ್‌ನವು ದುಬಾರಿಯಾದರೂ ನೋಡಲು ಸೆಲೆಬ್ರೆಟಿ ಲುಕ್‌ ನೀಡುತ್ತವೆ.
  • ಆದಷ್ಟೂ ಲೈಟ್‌ವೈಟ್‌ ಗ್ರ್ಯಾಂಡ್‌ ಲೆಹೆಂಗಾ ಆಯ್ಕೆ ನಿಮ್ಮದಾಗಿರಲಿ.
  • ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಲೆಹೆಂಗಾ ನೋಡಿಕೊಳ್ಳಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Star Holiday Fashion
ಫ್ಯಾಷನ್7 mins ago

Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

Prajwal Revanna Case Surrender Now Devegowda warning to Prajwal
ರಾಜಕೀಯ11 mins ago

Prajwal Revanna Case: ತಾಳ್ಮೆ ಪರೀಕ್ಷಿಸಬೇಡ, ಈಗಲೇ ಬಂದು ಶರಣಾಗು; ಪ್ರಜ್ವಲ್‌ಗೆ ದೇವೇಗೌಡರ ವಾರ್ನಿಂಗ್‌

IPL 202
ಕ್ರೀಡೆ12 mins ago

IPL 2024: ಮುಂದಿನ ಆವೃತ್ತಿಯಲ್ಲಿ ಕೊಹ್ಲಿ ಈ ಫ್ರಾಂಚೈಸಿ ಪರ ಆಡಿದರೆ ಉತ್ತಮ ಎಂದ ಆರ್​ಸಿಬಿ ಮಾಜಿ ನಾಯಕ

2024 Maruti Swift
ಆಟೋಮೊಬೈಲ್18 mins ago

2024 Maruti Swift : ಹಲವಾರು ಆ್ಯಕ್ಸೆಸರಿ ಪ್ಯಾಕ್​ನೊಂದಿಗೆ ಬಂದಿದೆ ಮಾರುತಿ ಸ್ವಿಫ್ಟ್​​ ಎಪಿಕ್​

West Bengal Violence
ದೇಶ37 mins ago

West Bengal Violence: ಪಶ್ಚಿಮ ಬಂಗಾಳದಲ್ಲಿ ಭಾರೀ ಹಿಂಸಾಚಾರ; ಪೊಲೀಸರಿಂದ ಲಾಠಿಚಾರ್ಜ್‌

Narendra Modi
ದೇಶ50 mins ago

Narendra Modi: ಪಾಕ್‌ ʼಬಂಡವಾಳʼ ಏನೆಂದು ಅಲ್ಲಿಗೇ ಹೋಗಿ ನೋಡಿ ಬಂದಿರುವೆ; ಕಾಂಗ್ರೆಸ್‌ ‘ಬಾಂಬ್’‌ ಹೇಳಿಕೆಗೆ ಮೋದಿ ಟಾಂಗ್!

Money Guide
ಮನಿ-ಗೈಡ್53 mins ago

Money Guide: 1 ಕೋಟಿ ರೂ. ದುಡಿಯಬೇಕೆ? ಈ ಅಪಾಯ ರಹಿತ ಯೋಜನೆಯಲ್ಲಿ ಹೂಡಿಕೆ ಮಾಡಿ

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಸಂಜುಗಿಂತ ಪಂತ್​ ಬೆಸ್ಟ್​ ಎಂದ ಯುವರಾಜ್

ayodhya ram mandir 1
ಪ್ರಮುಖ ಸುದ್ದಿ1 hour ago

Ayodhya Ram Mandir: ಅಯೋಧ್ಯೆ ಶ್ರೀ ರಾಮನಿಗೆ ಬೆಳ್ಳಿಯ ಬಿಲ್ಲು- ಬಾಣ; ಪೂಜಿಸಿ ಕಳಿಸಿಕೊಟ್ಟ ಶೃಂಗೇರಿ ಶ್ರೀಗಳು

Highest Paid CEO
ವಾಣಿಜ್ಯ1 hour ago

Highest Paid CEO: ವಿಪ್ರೊ ಮಾಜಿ ಸಿಇಒ ವಾರ್ಷಿಕ ಸಂಬಳ 166 ಕೋಟಿ ರೂ! ಉಳಿದ ಸಿಇಒಗಳಿಗೆ ಎಷ್ಟು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ12 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌