Eshani Fashion Interview: ಬಿಗ್ ಬಾಸ್ ಸ್ಪರ್ಧಿ, ಕನ್ನಡ ರ‍್ಯಾಪರ್ ಇಶಾನಿಯ ಫ್ಯಾಷನ್‌ ಟಿಪ್ಸ್ ಹೀಗಿದೆ… - Vistara News

ಫ್ಯಾಷನ್

Eshani Fashion Interview: ಬಿಗ್ ಬಾಸ್ ಸ್ಪರ್ಧಿ, ಕನ್ನಡ ರ‍್ಯಾಪರ್ ಇಶಾನಿಯ ಫ್ಯಾಷನ್‌ ಟಿಪ್ಸ್ ಹೀಗಿದೆ…

ಕನ್ನಡ ರ‍್ಯಾಪರ್ ಇಶಾನಿಯದ್ದು ಕೂಲ್ ಫ್ಯಾಷನ್ ಸ್ಟೇಟ್‌ಮೆಂಟ್‌ (Eshani Fashion interview)! ಸದಾ ಅಲ್ಟ್ರಾ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಅವರಿಗೆ ತಮ್ಮದ್ದೇ ಆದ ನಾನಾ ಸ್ಟೈಲ್ ಸ್ಟೇಟ್‌ಮೆಂಟ್‌ಗಳಿವೆ. ಈ ಕುರಿತಂತೆ ವಿಸ್ತಾರ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

VISTARANEWS.COM


on

Eshani Fashion Interview
ಚಿತ್ರಗಳು : ಇಶಾನಿ, ಕನ್ನಡ ರ‍್ಯಾಪರ್, ಬಿಗ್ಬಾಸ್ ಕಂಟೆಸ್ಟಂಟ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಾಡುವುದು ನನಗಿಷ್ಟ. ಇಂಗ್ಲೀಷ್ ಹಾಡುಗಳನ್ನು ಮಾತ್ರವಲ್ಲ, ಕನ್ನಡದಲ್ಲೂ ರ‍್ಯಾಪ್ ಕಾನ್ಸೆಪ್ಟ್‌ನಲ್ಲಿ ಪ್ರಯೋಗಾತ್ಮಕವಾಗಿ ಹಾಡುವ ಮೂಲಕ ಈ ಜನರೇಷನ್‌ನ್ನ ಮನಗೆದ್ದಿರುವ, ಬಿಗ್ ಬಾಸ್ ಕಂಟೆಸ್ಟಂಟ್ ಹಾಗೂ ಕನ್ನಡ ರ‍್ಯಾಪರ್ ಇಶಾನಿ (Eshani Fashion interview) ಕನಸು ಇನ್ನು ಸಾಕಷ್ಟಿದೆ. ಸದಾ ಖುಷಿ ಖುಷಿಯಾಗಿರುವ ಇಶಾನಿ, ಫ್ಯಾಷೆನಬಲ್ ಗರ್ಲ್. ಸದಾ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಇವರಿಗೆ ತನ್ನದೇ ಆದ ಸ್ಟೈಲ್ ಸ್ಟೇಟ್‌ಮೆಂಟ್‌ ಇದೆ. ಈ ಕುರಿತಂತೆ ವಿಸ್ತಾರ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

Eshani Fashion Statement

ವಿಸ್ತಾರ ನ್ಯೂಸ್: ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್‌ ಏನು?

ಇಶಾನಿ: ಹಿಪ್ಹಾಪ್, ರಾಕ್ ಸ್ಟೈಲ್ ನನ್ನ ಫೆವರೇಟ್ ಫ್ಯಾಷನ್ ಸ್ಟೇಟ್‌ಮೆಂಟ್‌ನಲ್ಲಿದೆ. ಇದು ನೋಡಲು ಎಲ್ಲರಿಗೂ ಡಿಫರೆಂಟ್ ಆಗಿ ಹಾಗೂ ಆಕರ್ಷಕವಾಗಿ ಕಾಣಿಸುತ್ತದೆ.

ವಿಸ್ತಾರ ನ್ಯೂಸ್ : ಸದಾ ನೋಡಲು ಮಾಡರ್ನ್ ಲುಕ್‌ನಲ್ಲಿ ಕಾಣುವ ನಿಮ್ಮ ಯೂನಿಕ್ ಫ್ಯಾಷನ್ ಏನು?

ಕೋ ಆರ್ಡ್ ಸೆಟ್, ಕ್ರಾಪ್ ಟಾಪ್-ಪ್ಯಾಂಟ್, ಮಿನುಗುವ ಗೋಲ್ಡನ್ ಶೇಡ್ ನೆಕ್ ಜ್ಯುವೆಲರಿ, ಫ್ರೀ ಹೇರ್‌ಸ್ಟೈಲ್‌ ನನ್ನ ಯೂನಿಕ್ ಫ್ಯಾಷನ್ ಸ್ಟೇಟ್‌ಮೆಂಟ್‌ ಲಿಸ್ಟ್‌ನಲ್ಲಿದೆ.

Eshani Different fashion

ವಿಸ್ತಾರ ನ್ಯೂಸ್: ರ‍್ಯಾಪರ್ ಎಂದಾಕ್ಷಣ ಕಂಪ್ಲೀಟ್ ಡಿಫರೆಂಟ್ ಫ್ಯಾಷನ್ ಎಂದುಕೊಳ್ಳುತ್ತಾರಲ್ಲ? ಅದಕ್ಕೆ ನೀವು ಹೇಳುವುದೇನು?

ಹೌದು. ನನ್ನ ಲುಕ್ ಕೆಲವೊಮ್ಮೆ ಹಾಗೆಯೇ ಕಾಣಿಸುತ್ತದೆ. ಕೊಂಚ ಅಲ್ಟ್ರಾ ಮಾಡರ್ನ್ ಲುಕ್ ನನ್ನದಾಗಿರುವುದರಿಂದ ಹಾಗೂ ರಾಕ್ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುವುದರಿಂದ ಎಲ್ಲರಿಗೂ ಹಾಗನಿಸುತ್ತದೆ.

ವಿಸ್ತಾರ ನ್ಯೂಸ್: ನಿಮಗೆ ಜ್ಯುವೆಲರಿಗಳೆಂದರೇ ಸಖತ್ ಇಷ್ಟ ಅಂತಲ್ಲ?

ಇಶಾನಿ: ಹೌದು. ಧರಿಸುವ ಯಾವುದೇ ಡ್ರೆಸ್ ಮೇಲೆ ಜ್ಯುವೆಲರಿ ಹಾಕಿದಲ್ಲಿ, ಇಡೀ ಲುಕ್ ಆಕರ್ಷಕವಾಗಿ ಕಾಣುತ್ತದೆ. ಹಾಗಾಗಿ ಸದಾ ನಾನು ಜ್ಯುವೆಲರಿ ಧರಿಸಲು ಇಷ್ಟಪಡುತ್ತೇನೆ. ಇನ್ನು ಮೂಗಿನ ನೋಸ್ ರಿಂಗ್ ಕೂಡ ನನಗೆ ಡಿಫರೆಂಟ್ ಲುಕ್ ನೀಡಿದೆ.

Fashion tips

ವಿಸ್ತಾರ ನ್ಯೂಸ್: ಕನ್ನಡ ರ‍್ಯಾಪ್ ಸಾಂಗ್‌ಗೆ ತಕ್ಕಂತೆ ನಿಮ್ಮ ಲುಕ್ ಬದಲಾಗುತ್ತದಲ್ಲ!

ಇಶಾನಿ: ಖಂಡಿತಾ. ಅದು ಸಾಂಗ್‌ಗೆ ಅಗತ್ಯವಿರುವಂತೆ ಬದಲಾಗುತ್ತದೆ.

ವಿಸ್ತಾರ ನ್ಯೂಸ್: ನಿಮ್ಮ ಅಭಿಮಾನಿಗಳಿಗೆ ನೀವು ನೀಡುವ ಫ್ಯಾಷನ್ ಟಿಪ್ಸ್ ಏನು ?

ನಿಮ್ಮ ಬಾಡಿ ಟೈಪ್ಸ್‌ಗೆ ಮ್ಯಾಚ್ ಆಗುವಂತಹ ಫ್ಯಾಷನ್ ಫಾಲೋ ಮಾಡಿ. ಯಾರೋ ಚೆನ್ನಾಗಿ ಕಾಣುತ್ತಾರೆ, ಅವರಂತೆ ನಾನು ಕಾಣಬೇಕು ಎಂದೆಲ್ಲಾ ಪ್ರಯೋಗ ಮಾಡಬೇಡಿ! ನಿಮಗೆ ಹೊಂದುವಂತದ್ದನ್ನು ಮಾತ್ರ ಧರಿಸಿ.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Tie Up Crop Top Fashion: ವೀಕೆಂಡ್‌ ಹಾಲಿಡೇ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಟೈ-ಅಪ್‌ ಕ್ರಾಪ್‌ ಟಾಪ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Star Cricket Theme Fashion: ಕ್ರಿಕೆಟ್‌ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್‌!

ಇತ್ತೀಚೆಗೆ ನಟಿ ಜಾಹ್ನವಿ ಕಪೂರ್ ಧರಿಸುತ್ತಿರುವ ಒಂದೊಂದು ಬಗೆಯ ಕ್ರಿಕೆಟ್‌ ಥೀಮ್‌ನ ಔಟ್‌ಫಿಟ್‌ಗಳಿಗೆ ಅಭಿಮಾನಿಗಳು ಫಿದಾ ಆಗತೊಡಗಿದ್ದಾರೆ. ಹಾಗಾದಲ್ಲಿ, ಅವರು ಧರಿಸಿರುವ ಔಟ್‌ಫಿಟ್‌ಗಳ್ಯಾವುವು? ಅವುಗಳಲ್ಲಿ ಹೇಗೆಲ್ಲಾ ಕಾಣಿಸಿಕೊಂಡರು? ಎಂಬುದರ ಕುರಿತಾಗಿ (Star Cricket Theme Fashion) ಇಲ್ಲಿದೆ ಡಿಟೇಲ್ಸ್.

VISTARANEWS.COM


on

Star Cricket Theam Fashion
ಚಿತ್ರಗಳು: ನಟಿ ಜಾಹ್ನವಿ ಕಪೂರ್, ಬಾಲಿವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇತ್ತೀಚೆಗೆ ನಟಿ ಜಾಹ್ನವಿ ಕಪೂರ್ ಧರಿಸುತ್ತಿರುವ ಒಂದೊಂದು ಬಗೆಯ ಕ್ರಿಕೆಟ್‌ ಥೀಮ್‌ನ ಫ್ಯಾಷೆನಬಲ್‌ ಔಟ್‌ಫಿಟ್‌ಗಳಿಗೆ ಅಭಿಮಾನಿಗಳು ಫಿದಾ ಆಗತೊಡಗಿದ್ದಾರೆ. ಅಂದಹಾಗೆ, ಇದ್ಯಾಕೆ ಹೀಗೆ? ಎಂದುಕೊಳ್ಳುತ್ತಿದ್ದೀರಾ! ಅವರು ತಮ್ಮ ಮುಂಬರುವ ಕ್ರಿಕೆಟ್‌ ಆಧಾರಿತ ಸಿನಿಮಾ ಮಿಸ್ಟರ್ & ಮಿಸೆಸ್‌ ಮಾಹಿ ಪ್ರಮೋಷನ್‌ಗಾಗಿ ವಿಶೇಷವಾಗಿ ಕ್ರಿಕೆಟ್‌ ಥೀಮ್‌ ಫ್ಯಾಷನ್‌ವೇರ್‌ಗಳನ್ನು ಧರಿಸತೊಡಗಿದ್ದಾರೆ. ಇದು ಅವರ ಕ್ರಿಕೆಟ್‌ ಪ್ರೇಮದ ಜೊತೆಗೆ ಫ್ಯಾಷನ್‌ಗೂ ಸಾಥ್‌ ನೀಡಿದೆ (Star Cricket Theme Fashion) ಎನ್ನುತ್ತಿದ್ದಾರೆ ಫ್ಯಾಷನಿಸ್ಟ್‌ಗಳು.

Star Cricket Theam Fashion

ಕಟೌಟ್‌ ರೆಡ್‌ ಡ್ರೆಸ್‌ ಬ್ಯಾಕ್‌ ವಿನ್ಯಾಸದಲ್ಲಿ ಕ್ರಿಕೆಟ್‌ ಬಾಲ್‌ ಡಿಸೈನ್‌

ಜಾಹ್ನವಿಯ ವೆಸ್ಟರ್ನ್ ಶೈಲಿಯ ಕಟೌಟ್ ರೆಡ್‌ ಡ್ರೆಸ್‌ನ ಬ್ಯಾಕ್‌ ಡಿಸೈನ್‌ ಮಲ್ಟಿ ಕ್ರಿಕೆಟ್‌ ಬಾಲ್‌ಗಳನ್ನು ಜೋಡಿಸಿದಂತಹ ಸ್ಟ್ರಾಪ್‌ನಂತಹ ಡಿಸೈನ್‌ ಫ್ಯಾಷನ್‌ ಪ್ರೇಮಿಗಳನ್ನು ನಿಬ್ಬೆರಗಾಗಿಸಿತು.

Star Cricket Theam Fashion

ಸೀರೆಯಲ್ಲಿ ತ್ರಿಡಿ ಕ್ರಿಕೆಟ್‌ ಬಾಲ್‌ ಬಾರ್ಡರ್ ಚಿತ್ತಾರ

ಇನ್ನು, ಇವೆಂಟ್‌ನಲ್ಲಿ ಜಾಹ್ನವಿ ಧರಿಸಿದ್ದ ಎರಡು ಸೀರೆಗಳು ಕೂಡ ಕ್ರಿಕೆಟ್‌ ಕಾನ್ಸೆಪ್ಟ್ ಡಿಸೈನ್‌ ಹೊಂದಿದ್ದವು. ವಾರಾಣಾಸಿಯಲ್ಲಿ ಉಟ್ಟ ಸೀರೆ ಟ್ರೆಡಿಷನಲ್‌ ಆಗಿದ್ದರೂ, ಅದರ ಪಲ್ಲು ಕಂಪ್ಲೀಟ್‌ ಕ್ರಿಕೆಟ್‌ ಕ್ರೀಡಾಂಗಣದ ವರ್ಲಿ ಶೈಲಿಯ ಚಿತ್ತಾರವನ್ನು ಒಳಗೊಂಡಿತ್ತು. ಜಾಹ್ನವಿ ಧರಿಸಿದ್ದ, ಇನ್ನೊಂದು, ಜಾರ್ಜೆಟ್‌ ರೆಡ್‌ & ವೈಟ್‌ ಸ್ಟ್ರೈಪ್ಸ್ ಸೀರೆಯ ಬಾರ್ಡರ್‌, ಕ್ರಿಕೆಟ್‌ ಬಾಲ್‌ನ ತ್ರಿಡಿ ಚಿತ್ತಾರದಿಂದ ಸಿಂಗಾರಗೊಂಡಿತ್ತು. ಬಾಲ್‌ನ ಫ್ಯಾಬ್ರಿಕ್‌ನಂತೆ ಕಾಣಿಸುವ ಮೆಟೀರಿಯಲ್‌ನಿಂದ ಡಿಸೈನ್‌ ಮಾಡಲಾಗಿತ್ತು.

Star Cricket Theam Fashion

ಕ್ರಿಕೆಟ್‌ ಕ್ರಾಪ್ಡ್ ಜೆರ್ಸಿ ಟಾಪ್‌

ಜಾಹ್ನವಿ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ, ಕ್ರಿಕೆಟಿಗರ ಜೆರ್ಸಿಯಂತೆ ಕಾಣುವ ಕ್ರಾಪ್‌ ಟಾಪ್‌ನಲ್ಲಿ ಕಾಣಿಸಿಕೊಂಡರು. ಎಲ್ಲದಕ್ಕಿಂತ ಹೆಚ್ಚಾಗಿ, ಅದರ ಮೇಲೆ ಬರ್ತ್ ಡೇ ನಂಬರ್‌ ಮೂಡಿಸಿದ್ದು, ಅವರ ಖುಷಿಗೆ ಕಾರಣವಾಗಿತ್ತು.

Star Cricket Theam Fashion

ಜೆನ್‌ ಜಿ ಸೆಳೆದ ಕ್ರಾಪ್ಡ್ ಟೀ ಶರ್ಟ್–ಸ್ಕರ್ಟ್

ಕಾಲೇಜ್‌ವೊಂದರ ಇವೆಂಟ್‌ನಲ್ಲಿ ವೈಟ್‌ ಹಾಗೂ ಬ್ಲ್ಯೂ ಮತ್ತು ರೆಡ್‌ ಸ್ಟ್ರೈಪ್ಸ್ ಇರುವ ಕಾಲರ್‌ ಕ್ರಾಪ್ಡ್ ಟೀ ಶರ್ಟ್ ಜೊತೆಗೆ ವೈಟ್‌ ಸ್ಕರ್ಟ್ ಮಿಕ್ಸ್ ಮಾಡಿರುವ ಕ್ರಿಕೆಟ್‌ ಥೀಮ್‌ ಡ್ರೆಸ್‌ ಅಲ್ಲಿನ ಯಂಗ್‌ಸ್ಟರ್ಸ್‌ಗಳನ್ನು ಸೆಳೆಯಿತು.

Star Cricket Theam Fashion

ಬಾಡಿಕಾನ್‌ ಡ್ರೆಸ್‌ ಮೇಲೆ ಬ್ಯಾಟಿಂಗ್‌ ಸಿಕ್ವೀನ್ಸ್

ಜಾಹ್ನವಿಯ ಹೈ ಫ್ಯಾಷನ್‌ ಸ್ಟೈಲಿಂಗ್‌ನ ಶಿಮ್ಮರ್‌ನ ಬಾಡಿಕಾನ್‌ ಡ್ರೆಸ್‌ ಮೇಲೆ ಇದ್ದ ಬ್ಯಾಟಿಂಗ್‌ ಸಿಕ್ವೀನ್ಸ್ ಪ್ರಿಂಟ್ಸ್ ಚಿತ್ತಾರ ಹೈ ಫ್ಯಾಷನ್‌ ಲುಕ್‌ಗೆ ಸಾಥ್‌ ನೀಡಿತ್ತು.

ಇದನ್ನೂ ಓದಿ: Wedding Fashion: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ ಈ ಮಿರಮಿರ ಮಿನುಗುವ ಲೆಹೆಂಗಾಗಳು!

ಜಾಹ್ನವಿ ಕ್ರಿಕೆಟ್‌ ಥೀಮ್‌ ಆಕ್ಸೆಸರೀಸ್‌

ಕ್ರಿಕೆಟ್‌ ಬಾಲ್‌ ಆಕಾರದ ಕ್ಲಚ್‌, ಹ್ಯಾಂಡ್‌ ಪರ್ಸ್ ಸೇರಿದಂತೆ ನಾನಾ ಆಕ್ಸೆಸರೀಸ್‌ ಅವರನ್ನು ಮತ್ತಷ್ಟು ಕ್ರಿಕೆಟ್‌ ಪ್ರೇಮಿಯನ್ನಾಗಿಸಿತ್ತು. ಹೀಗೆ ಜಾಹ್ನವಿಯ ನಾನಾ ಬಗೆಯ ಕ್ರಿಕೆಟ್‌ ಥೀಮ್‌ ಔಟ್‌ಫಿಟ್‌ ಹಾಗೂ ಆಕ್ಸೆಸರೀಸ್‌ಗಳು, ಕ್ರಿಕೆಟ್‌ ಪ್ರೇಮಿಗಳನ್ನು ಮಾತ್ರವಲ್ಲ, ಫ್ಯಾಷನ್‌ ಪ್ರಿಯರನ್ನು ಸೆಳೆದವು ಎಂದು ವಿಶ್ಲೇಷಿಸಿದ್ದಾರೆ ಫ್ಯಾಷನ್‌ ವಿಮರ್ಶಕರು.

Continue Reading

ಫ್ಯಾಷನ್

Wedding Fashion: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ ಈ ಮಿರಮಿರ ಮಿನುಗುವ ಲೆಹೆಂಗಾಗಳು!

ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ (Wedding Fashion) ಮಿರಮಿರ ಮಿನುಗುವ ನಾನಾ ಬಗೆಯ ಗ್ರ್ಯಾಂಡ್‌ ಲೆಹೆಂಗಾಗಳು ಟ್ರೆಂಡಿಯಾಗಿವೆ. ಧರಿಸಿದಾಗ ಗ್ರ್ಯಾಂಡ್‌ ಲುಕ್‌ ನೀಡುವ ಈ ಡಿಸೈನರ್‌ವೇರ್‌ಗಳು ವೆರೈಟಿ ಡಿಸೈನ್‌ನಲ್ಲಿ ಬಂದಿವೆ. ಯಾವ್ಯಾವ ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ? ಆಯ್ಕೆ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.

VISTARANEWS.COM


on

Wedding Fashion
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ (Wedding Fashion) ಮಿರ ಮಿರ ಮಿನುಗುವ ಬಗೆಬಗೆಯ ಗ್ರ್ಯಾಂಡ್‌ ಲೆಹೆಂಗಾಗಳು ಟ್ರೆಂಡಿಯಾಗಿವೆ. ಮದುವೆಯಲ್ಲಿ ಧರಿಸಿದಾಗ ಗ್ರ್ಯಾಂಡ್‌ ಲುಕ್‌ ನೀಡುವ ಈ ಡಿಸೈನರ್‌ವೇರ್‌ಗಳು ಸಾದಾ, ಪ್ರಿಂಟೆಡ್‌, ಲೈನ್ಸ್, ಫ್ಲೋರಲ್‌, ಟ್ರಾಪಿಕಲ್‌ ಹಾಗೂ ಜೆಮೆಟ್ರಿಕಲ್‌ ಸೇರಿದಂತೆ ನಾನಾ ವೆರೈಟಿ ಡಿಸೈನ್‌ನಲ್ಲಿ ಆಗಮಿಸಿವೆ. ಪಾಸ್ಟೆಲ್‌ ಶೇಡ್‌ನವು ಹೆಚ್ಚು ಯುವತಿಯರನ್ನು ಸೆಳೆದಿವೆ. ಒಂದಕ್ಕಿಂತ ಒಂದು ಲೆಹೆಂಗಾಗಳು ಮನಮೋಹಕ ಡಿಸೈನ್‌ನಲ್ಲಿ ಆಗಮಿಸಿದ್ದು, ಹ್ಯಾಂಡ್‌ವರ್ಕ್ ಹಾಗೂ ಮೆಷಿನ್‌ ವರ್ಕ್‌ನಲ್ಲೂ ಪ್ರಚಲಿತದಲ್ಲಿವೆ.

ಟ್ರೆಂಡ್‌ನಲ್ಲಿರುವ ಶಿಮ್ಮರ್‌ ಲೆಹೆಂಗಾಗಳು

ಶಿಮ್ಮರ್‌ ಫ್ಯಾಬ್ರಿಕ್‌ನವು, ಸಾದಾ ವರ್ಣದ ,ಮಾನೋಕ್ರೋಮ್‌ ಸಿಕ್ವೀನ್ಸ್‌ನವು, ಮಲ್ಟಿ ಶೇಡ್‌ ಸಿಕ್ವೀನ್ಸ್, ಪ್ರಿಂಟೆಡ್‌ ಶೈನಿಂಗ್‌ ಡಿಸೈನ್‌ನವು, ಶಿಫಾನ್‌ ಶಿಮ್ಮರ್‌ ಪ್ರಿಂಟ್ಸ್, ಜಾರ್ಜೆಟ್‌ ಶಿಮ್ಮರ್‌ ಲೈನ್ಸ್, ಡಿಸೈನರ್‌ ಬಾರ್ಡರ್‌ ಶಿಮ್ಮರ್‌ನ ಲೆಹೆಂಗಾಗಳು ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿವೆ.

Wedding Fashion

ಪಾಸ್ಟೆಲ್‌ ಶೇಡ್ಸ್‌ಗೆ ಬೇಡಿಕೆ

ಶಿಮ್ಮರ್‌ ಡಿಸೈನ್‌ನಲ್ಲಿ ಪಾಸ್ಟೆಲ್‌ ಶೇಡ್ಸ್‌ನ ಲೆಹೆಂಗಾಗಳು, ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಚಾಲ್ತಿಯಲ್ಲಿವೆ. ರೋಸ್‌, ಪಿಸ್ತಾ ಗ್ರೀನ್‌, ಪೀಚ್‌, ಲೈಟ್‌ ಬ್ಲ್ಯೂ, ಹೀಗೆ ನಾನಾ ತಿಳಿ ವರ್ಣದ ಪಾಸ್ಟೆಲ್‌ ಶೇಡ್‌ನ ಗ್ರ್ಯಾಂಡ್‌ ಲೆಹೆಂಗಾಗಳು ಮದುವೆಯಾಗುವ ಮದುಮಗಳನ್ನು ಮಾತ್ರವಲ್ಲ, ಮದುವೆಯಲ್ಲಿ ಪಾಲ್ಗೊಳ್ಳುವ ಮಾನಿನಿಯರನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Wedding Fashion

ಗ್ರ್ಯಾಂಡ್‌ ಶಿಮ್ಮರ್‌ ಮಿಕ್ಸ್ ಮ್ಯಾಚ್‌ ಡಿಸೈನ್‌ ದುಪಟ್ಟಾ

ಈ ಶಿಮ್ಮರ್‌ ಲೆಹೆಂಗಾಗಳು ಕಂಪ್ಲೀಟ್‌ ಶೈನಿಂಗ್‌ ಇರಲಿ, ಬಿಡಲಿ, ಇವುಗಳಿಗೆ ಹೊಂದುವಂತಹ ಮಿಕ್ಸ್ ಮ್ಯಾಚ್‌ ಅಥವಾ ಮಾನೋಕ್ರೋಮ್‌ ಶೇಡ್‌ನ ಮಿರಮಿರ ಮಿನುಗುವ ಡಿಸೈನ್‌ ಒಳಗೊಂಡ ದುಪಟ್ಟಾಗಳು ಈ ಶೈಲಿಯ ಲೆಹೆಂಗಾಗಳ ಸೌಂದರ್ಯವನ್ನು ಹೆಚ್ಚಿಸಿವೆ.

ಇದನ್ನೂ ಓದಿ: Summer Star Fashion: ಏನಿದು ನಟಿ ಅದಿತಿ ರಾವ್‌ ಹೈದರಿಯ ಕೋ-ಆರ್ಡ್ ಕೊಸ್ಟಾ ಪ್ಯಾಂಟ್‌ ಟ್ರೆಂಡ್‌?

ಶಿಮ್ಮರ್‌ ಲೆಹೆಂಗಾ ಆಯ್ಕೆಗೆ 7 ಸೂತ್ರ

 • ಒಂದೇ ಶೇಡ್‌ನ ಶಿಮ್ಮರ್‌ ಲೆಹೆಂಗಾಗಳು ಹೆಚ್ಚು ಡಿಸೈನ್‌ನಲ್ಲಿ ಲಭ್ಯ.
 • ಪಾಸ್ಟೆಲ್‌ ಶೇಡ್‌ನವನ್ನು ಸ್ಕಿನ್‌ಟೋನ್‌ಗೆ ತಕ್ಕಂತೆ ಆಯ್ಕೆ ಮಾಡಿ.
 • ದುಪಟ್ಟಾ ಕೂಡ ಗ್ರ್ಯಾಂಡ್‌ ಆಗಿರುವುದನ್ನು ಚೂಸ್‌ ಮಾಡಿ.
 • ಬಾರ್ಡರ್ ಲೆಹೆಂಗಾಗಳು ನೋಡಲು ಆಕರ್ಷಕವಾಗಿ ಕಾಣುತ್ತವೆ.
 • ಸಿಕ್ವಿನ್ಸ್‌ನವು ದುಬಾರಿಯಾದರೂ ನೋಡಲು ಸೆಲೆಬ್ರೆಟಿ ಲುಕ್‌ ನೀಡುತ್ತವೆ.
 • ಆದಷ್ಟೂ ಲೈಟ್‌ವೈಟ್‌ ಗ್ರ್ಯಾಂಡ್‌ ಲೆಹೆಂಗಾ ಆಯ್ಕೆ ನಿಮ್ಮದಾಗಿರಲಿ.
 • ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಲೆಹೆಂಗಾ ನೋಡಿಕೊಳ್ಳಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Summer Star Fashion: ಏನಿದು ನಟಿ ಅದಿತಿ ರಾವ್‌ ಹೈದರಿಯ ಕೋ-ಆರ್ಡ್ ಕೊಸ್ಟಾ ಪ್ಯಾಂಟ್‌ ಟ್ರೆಂಡ್‌?

ಈ ಬಾರಿಯ ಸಮ್ಮರ್‌ ಎಂಡ್‌ನಲ್ಲಿ ಕೋ-ಆರ್ಡ್ ಕೊಸ್ಟಾ ಪ್ಯಾಂಟ್‌ ಸೆಟ್‌ಗಳು (Summer Star Fashion) ಬಿಡುಗಡೆಗೊಂಡಿವೆ. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್‌ ನಟಿ ಅದಿತಿ ರಾವ್‌ ಹೈದರಿ ಈ ಔಟ್‌ಫಿಟ್‌ ಧರಿಸಿ, ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಇದ್ಯಾವ ಬಗೆಯ ಫ್ಯಾಷನ್‌? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Summer Star Fashion
ಚಿತ್ರಗಳು: ಅದಿತಿ ರಾವ್‌ ಹೈದರಿ, ಬಾಲಿವುಡ್‌ ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ ನಟಿ ಅದಿತಿ ರಾವ್‌ ಹೈದರಿ ಧರಿಸಿದ, ಸಮ್ಮರ್‌ ಕೋ ಆರ್ಡ್ ಪ್ರಿಂಟೆಡ್‌ ಕೊಸ್ಟಾ ಪ್ಯಾಂಟ್‌ ಸೆಟ್ ಇದೀಗ ಸೀಸನ್‌ ಎಂಡ್‌ನಲ್ಲಿ ಟ್ರೆಂಡಿಯಾಗಿದೆ. ಅಂದಹಾಗೆ, ಇದ್ಯಾವ ಬಗೆಯ ಕೋ ಆರ್ಡ್ ಸೆಟ್ ಫ್ಯಾಷನ್‌ (Summer Star Fashion) ಎಂದು ಯೋಚಿಸುತ್ತಿದ್ದೀರಾ? ಅಂತಹದ್ದೇನಿಲ್ಲ! ಇವು ಸೆಲೆಬ್ರೆಟಿ ಲುಕ್‌ ನೀಡುವ ಶೋಲ್ಡರ್ಲೆಸ್‌ ಬಟನ್‌ ಟಾಪ್‌ ಹೊಂದಿರುವ ಕೋ ಆರ್ಡ್ ಸೆಟ್‌ಗಳಿವು. ಈಗಾಗಲೇ, ಈ ಬಾರಿಯ ಸಮ್ಮರ್‌ನಲ್ಲಿ ನಾನಾ ಬಗೆಯ ಕೋ ಆರ್ಡ್ ಪ್ಯಾಂಟ್‌ ಸೆಟ್‌ಗಳು ಬಿಡುಗಡೆಗೊಂಡಿದ್ದವು. ಅವುಗಳಲ್ಲಿ, ಇದೀಗ ಬಾಲಿವುಡ್‌ ಸೆಲೆಬ್ರೆಟಿಗಳು ಹಾಗೂ ಫ್ಯಾಷನ್‌ ಕ್ಷೇತ್ರದ ಮಾಡೆಲ್‌ಗಳು ಧರಿಸುತ್ತಿರುವ, ಈ ಡಿಸೈನ್‌ನ ಕೋ ಆರ್ಡ್ ಪ್ಯಾಂಟ್‌ ಸೆಟ್‌ಗಳು ಸದ್ಯ ಟ್ರೆಂಡಿಯಾಗಿವೆ. ಇದಕ್ಕೆ ಪೂರಕ ಎಂಬಂತೆ, ನಟಿ ಅದಿತಿ ರಾವ್‌ ಹೈದರಿ, ಕೂಡ ಈ ಔಟ್‌ಫಿಟ್‌ ಧರಿಸಿದ್ದು, ಪರಿಣಾಮ, ಈ ಶೈಲಿಯ ಪ್ರಿಂಟ್ಸ್ ಇರುವಂತಹ ಕೋ ಆರ್ಡ್ ಕೊಸ್ಟಾ ಪ್ಯಾಂಟ್‌ ಸೆಟ್‌ ಫ್ಯಾಷನ್‌ ಇದ್ದಕ್ಕಿದ್ದಂತೆ ಅಲ್ಟ್ರಾ ಮಾಡರ್ನ್ ಹುಡುಗಿಯರನ್ನು ಆವರಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Summer Star Fashion

ಏನಿದು ಕೊಸ್ಟಾ ಪ್ಯಾಂಟ್‌ ಕೋ -ಆರ್ಡ್ ಸೆಟ್?

ಒಂದೇ ಬಗೆಯ ಶೇಡ್‌ ಅಥವಾ ಪ್ರಿಂಟ್ಸ್ ಇರುವ ಕೋ -ಆರ್ಡ್ ಸೆಟ್‌ ಪ್ಯಾಂಟ್‌ ಫ್ಯಾಷನ್‌ಗೆ ಇವು ಸೇರುತ್ತವೆ. ಆದರೆ, ಪ್ಯಾಂಟ್‌ ಮಾತ್ರ ಪಲ್ಹಾಜೊ ರೀತಿಯಲ್ಲಿರುತ್ತವೆ. ನೋಡಲು ಫ್ಲೇರ್‌ ಇದ್ದರೂ, ಲೂಸಾಗಿರುವುದಿಲ್ಲ. ಬೇಸಿಗೆಗೆ ಹೊಂದುವಂತಿರುತ್ತವೆ. ಇನ್ನು ಇವಕ್ಕೆ ಶೋಲ್ಡರ್ ಲೆಸ್‌ ಅಥವಾ ಬಾರ್ಡಾಟ್ ಶೈಲಿಯ ಬಾಡಿ ಫಿಟ್‌ ಇರುವ ಬಟನ್‌ ಟಾಪ್‌ ಮ್ಯಾಚ್‌ ಮಾಡಲಾಗಿರುತ್ತದೆ. ಈ ಔಟ್‌ಫಿಟ್‌ಗಳನ್ನು ಸೆಲೆಬ್ರೆಟಿಗಳು ಅತಿ ಹೆಚ್ಚಾಗಿ ಧರಿಸುವುದರಿಂದ ಇವು ಸೆಲೆಬ್ರೆಟಿ ಔಟ್‌ಫಿಟ್ಸ್ ಎಂದೇ ಕರೆಸಿಕೊಳ್ಳುತ್ತವೆ. ಆದರೆ, ಇದೀಗ, ಹಾಲಿ ಡೇ, ಔಟಿಂಗ್‌ ಎಂದೆಲ್ಲಾ ಅಲೆದಾಡುವ ಯುವತಿಯರು ಈ ಉಡುಗೆಯನ್ನು ಧರಿಸುವುದು ಸಾಮಾನ್ಯವಾಗತೊಡಗಿದ್ದು, ಸೀಸನ್‌ ಎಂಡ್‌ನ ಟಾಪ್‌ ಲಿಸ್ಟ್‌ನಲ್ಲಿವೆ. ಫ್ಲೋರಲ್‌ ಪ್ರಿಂಟ್ಸ್ ಅಥವಾ ಟ್ರಾಪಿಕಲ್‌ ಪ್ರಿಂಟ್ಸ್‌ನವು ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ಗಳು.

Summer Star Fashion

ಅದಿತಿ ರಾವ್‌ ಹೈದರಿ ಸಮ್ಮರ್‌ ಕೋ ಆರ್ಡ್ ಸೆಟ್‌ ಲುಕ್‌

ಇನ್ನು, ಸದ್ಯ ಹೀರಾ ಮಂಡಿ ಬಾಲಿವುಡ್‌ ಚಿತ್ರದಲ್ಲಿ ಎಥ್ನಿಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ, ನಟಿ ಅದಿತಿ ರಾವ್‌ ಹೈದರಿಯವರಿಗೆ ಈ ಇಮೇಜ್‌ನಿಂದ ಕೊಂಚ ಬ್ರೇಕ್‌ ಬೇಕಿತ್ತು. ಹಾಗಾಗಿ ವೆಸ್ಟರ್ನ್ ಲುಕ್‌ ನೀಡುವ ಕೊಸ್ಟಾ ಪ್ಯಾಂಟ್‌ ಔಟ್‌ಫಿಟ್‌ ಧರಿಸಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Summer Star Fashion

ಕೋ -ಆರ್ಡ್ ಕೊಸ್ಟಾ ಪ್ಯಾಂಟ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳು

 • ಹಾಲಿ ಡೇ, ಔಟಿಂಗ್‌ ಹಾಗೂ ಲಂಚ್‌-ಬ್ರಂಚ್‌ ಪಾರ್ಟಿಗಳಿಗೆ ಧರಿಸಲು ಮಾತ್ರ ಇವು ಸೂಕ್ತ.
 • ಫಿಟ್ಟಿಂಗ್‌ ಸರಿಯಾಗಿದ್ದಲ್ಲಿ ಮಾತ್ರ ಕಂಫರ್ಟಬಲ್‌ ಫೀಲ್‌ ನೀಡಬಲ್ಲವು.
 • ಶೋಲ್ಡರ್ ಲೆಸ್‌ ಆಗಿರುವುದರಿಂದ ಎಕ್ಸ್ಪೋಸ್‌ ಆಗುವ ಸಾಧ್ಯತೆ ಹೆಚ್ಚು.
 • ನೋಡಲು ಆಕರ್ಷಕವಾದರೂ ಟ್ರಯಲ್‌ ನೋಡದೇ ಧರಿಸುವುದು ಸೂಕ್ತವಲ್ಲ.
 • ತೀರಾ ಸ್ಲಿಮ್‌, ತೀರಾ ಪ್ಲಂಪಿ ಇಬ್ಬರಿಗೂ ನಾಟ್‌ ಓಕೆ. ಸರಿಯಾದ ಬಿಎಂಐ ಹೊಂದಿರುವವರಿಗೆ ಚೆನ್ನಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Cannes Star Fashion: ಕ್ರಾಪ್‌ ಟುಕ್ಸೆಡೊ ಧರಿಸಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ ಪ್ರತೀಕ್‌ ಬಬ್ಬರ್

Continue Reading

ಫ್ಯಾಷನ್

Cannes Star Fashion: ಕ್ರಾಪ್‌ ಟುಕ್ಸೆಡೊ ಧರಿಸಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ ಪ್ರತೀಕ್‌ ಬಬ್ಬರ್

ಬಾಲಿವುಡ್‌ ನಟ ಹಾಗೂ ಮಾಡೆಲ್‌ ಪ್ರತೀಕ್‌ ಬಬ್ಬರ್‌ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ (Cannes Star Fashion) ತಾಯಿ ಹಿರಿಯ ನಟಿ ಸ್ಮಿತಾ ಪಾಟೀಲ್‌ ಅವರಿಗೆ ಟ್ರಿಬ್ಯೂಟ್‌ ಅರ್ಪಿಸುವ ಸಲುವಾಗಿ ಬ್ಲ್ಯಾಕ್‌ ಕ್ರಾಪ್‌ ಟುಕ್ಸೆಡೊನಲ್ಲಿ, ಕತ್ತಿಗೆ ಸ್ಕಾರ್ಫ್ ಧರಿಸಿ ಕಾಣಿಸಿಕೊಂಡರು. ಅವರ ಈ ಔಟ್ಫಿಟ್‌ ಸ್ಟೈಲಿಂಗ್‌ ಮಾಡಿರುವ ಮೆನ್ಸ್ ಸ್ಟೈಲಿಸ್ಟ್ ರಾಹುಲ್‌ ಈ ಬಗ್ಗೆ ವಿವರಿಸಿದ್ದಾರೆ.

VISTARANEWS.COM


on

Cannes Star Fashion
ಚಿತ್ರಗಳು: ಪ್ರತೀಕ್‌ ಬಬ್ಬರ್‌, ಬಾಲಿವುಡ್‌ ನಟ, ಮಾಡೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ ನಟ ಹಾಗೂ ಮಾಡೆಲ್‌ ಪ್ರತೀಕ್‌ ಬಬ್ಬರ್‌ (Prateek Babbar) ಬ್ಲ್ಯಾಕ್‌ ಕ್ರಾಪ್‌ ಟುಕ್ಸೆಡೊ/ಸೂಟ್‌ನಲ್ಲಿ, ಕತ್ತಿಗೆ ಸ್ಕಾರ್ಫ್ ಧರಿಸಿ, ರೆಡ್‌ ಕಾರ್ಪೆಟ್‌ ವಾಕ್‌ ಮಾಡಿದ್ದಾರೆ. ಪ್ರತೀಕ್‌ಗೆ ಪ್ರಶಂಸೆ: ಕಾನ್ ಫಿಲ್ಮ್‌ ಫೆಸ್ಟಿವಲ್‌ (Cannes Star Fashion) ಈ ಬಾರಿ ವಾಕ್‌ ಮಾಡಿದ ಭಾರತೀಯ ನಟರ ಪೈಕಿ ಪ್ರತೀಕ್‌, ಅತಿ ಹೆಚ್ಚು ಹ್ಯಾಂಡ್‌ಸಮ್‌ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ ಫ್ಯಾಷನ್‌ ವಿಮರ್ಶಕರು. ಯಂಗ್‌ & ಎನರ್ಜಿಟಿಕ್‌ ಆಗಿರುವ ಪ್ರತೀಕ್‌ ಈ ಜನರೇಷನ್‌ನ ಹುಡುಗರನ್ನು ಪ್ರತಿಬಿಂಬಿಸಿದ್ದಾರೆ. ತೀರಾ ಸೀರಿಯಸ್‌ ಆಗಿಯೂ ಕಾಣಿಸದೇ, ತೀರಾ ಫಂಕಿಯಾಗಿಯೂ ಕಾಣಿಸದೇ, ಜಂಟಲ್‌ಮೆನ್‌ ಲುಕ್‌ನಲ್ಲಿ ಆಗಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ ಎಂದು ವಿಶ್ಲೇಶಿಸಿದ್ದಾರೆ.

ತಾಯಿ ಸ್ಮಿತಾ ಪಾಟೀಲ್‌ಗೆ ಅರ್ಪಣೆ

ಅಂದಹಾಗೆ, ಪ್ರತೀಕ್‌ ಬಬ್ಬರ್‌ ಅವರು ಇದೇ ಮೊತ್ತ ಮೊದಲ ಬಾರಿಗೆ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ವಾಕ್‌ ಮಾಡಿದ್ದಾರೆ. ಮೊದಲ ಬಾರಿಯಲ್ಲೆ ಎಲ್ಲರ ಗಮನ ಸೆಳೆದಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ತಾಯಿ ನಟಿ ಸ್ಮಿತಾ ಪಾಟೀಲ್‌ ಅವರಿಗೆ ಟ್ರಿಬ್ಯೂಟ್‌ ಅರ್ಪಿಸುವ ಸಲುವಾಗಿ ಬ್ಲ್ಯಾಕ್‌ ಕ್ರಾಪ್‌ ಟುಕ್ಸೆಡೊ ಅಂದರೇ, ಸೂಟ್‌ ಜೊತೆಗೆ ಕತ್ತಿಗೆ ಸ್ಕಾರ್ಫ್ ಧರಿಸಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ ಅವರ ಸ್ಟೈಲಿಸ್ಟ್ ರಾಹುಲ್‌ ವಿಜಯ್‌. ಅವರು ಹೇಳುವಂತೆ, ಫಿಲ್ಮ್ ಫೆಡರೇಷನ್‌ ಆಫ್‌ ಇಂಡಿಯಾ, ಈ ಬಾರಿ ಮತ್ತೊಮ್ಮೆ ಸ್ಕ್ರೀನ್‌ ಮಾಡಿದ ಸ್ಮಿತಾ ಪಾಟೀಲ್‌ ಅವರ ಹಳೆಯ ಚಿತ್ರ ಮನ್ನತ್‌ ಶೋಗಾಗಿ ಪುತ್ರ ಪ್ರತೀಕ್‌ ಈ ಕಾನ್‌ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಹಿರಿಯ ನಟ-ನಟಿಯರಾದ, ನಾಸಿರುದ್ದೀನ್‌ ಶಾ ಹಾಗೂ ನಟಿ ರತ್ನಾ ಪಾಠಕ್‌ ಕೂಡ ಸಿನಿಮಾದ ಸ್ಕ್ರೀನಿಂಗ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

ಪ್ರತೀಕ್‌ ಬ್ಲ್ಯಾಕ್‌ ಕ್ರಾಪ್‌ ಟುಕ್ಸೆಡೊ

ರೋಹಿತ್‌ ಗಾಂಧಿ & ರಾಹುಲ್‌ ಖನ್ನಾ ಜಂಟಿಯಾಗಿ ಡಿಸೈನ್‌ ಮಾಡಿರುವ ಈ ಕಸ್ಟಮೈಸ್ಡ್ ಟುಕ್ಸೆಡೊ ಅಥವಾ ಬ್ಲ್ಯಾಕ್‌ ಸೂಟ್‌, ಪ್ರತೀಕ್‌ ಅವರಿಗೆ ಸಖತ್‌ ಹ್ಯಾಂಡ್‌ಸಮ್‌ ಆಗಿ ಬಿಂಬಿಸಿದೆ. ಇನ್ನು, ಬೋ ಅಥವಾ ಟೈ ಬದಲು ಅವರು ಧರಿಸಿರುವ ವಿಂಟೇಜ್‌ ಸ್ಕಾರ್ಫ್ ಅವರ ಲುಕ್ಕನ್ನು ಮತ್ತಷ್ಟು ಡಿಫರೆಂಟ್‌ ಆಗಿಸಿದೆ. ಇತರರಿಗಿಂತ ವಿಭಿನ್ನವಾಗಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಇದನ್ನೂ ಓದಿ: Sequins Partywear Fashion: ಪಾರ್ಟಿಪ್ರಿಯರಿಗೆ ಬಂತು ಮಿರಮಿರ ಮಿನುಗುವ ಸಿಕ್ವೀನ್ಸ್‌ ಔಟ್‌ಫಿಟ್ಸ್‌

ಪ್ರತೀಕ್‌ ಮೊದಲ ಕಾನ್‌ ವಾಕ್‌

“ಇದು ನನ್ನ ಮೊದಲ ಅಂತಾರಾಷ್ಟ್ರೀಯ ಮಟ್ಟದ ರೆಡ್‌ ಕಾರ್ಪೆಟ್‌ ವಾಕ್‌. ಹಾಗಾಗಿ ನಾನು ಆಕರ್ಷಕವಾಗಿ ಕಾಣಿಸುವುದರೊಂದಿಗೆ ನನ್ನ ತಾಯಿಗೆ ಟ್ರಿಬ್ಯೂಟ್‌ ಕೂಡ ಸಲ್ಲಿಸಬೇಕಿತ್ತು. ಹಾಗಾಗಿ ಕತ್ತಿಗೆ ವಿಂಟೇಜ್‌ ಸ್ಕಾರ್ಫ್‌ ಧರಿಸಿ, ಕಾಣಿಸಿಕೊಂಡೆ. ಇದು ಎಲ್ಲರಿಗೂ ಇಷ್ಟವಾಯಿತು” ಎಂದು ಪ್ರತೀಕ್‌ ಮಾಧ್ಯಮದವರೆದುರು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಈ ಬಾರಿಯ ಕಾನ್‌ ಫೆಸ್ಟಿವಲ್‌ ಮೂಲಕ ಭಾರತೀಯ ಮೆನ್ಸ್ ಫ್ಯಾಷನ್‌ನಲ್ಲಿ ಪ್ರತೀಕ್‌ ಕ್ರಾಪ್‌ ಟುಕ್ಸೆಡೊ ಟ್ರೆಂಡ್‌ ಹುಟ್ಟು ಹಾಕಿದ್ದಾರೆ ಎಂದು ವಿಮರ್ಶಿಸಿದ್ದಾರೆ ಫ್ಯಾಷನಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
IPL 2024
ಕ್ರಿಕೆಟ್8 mins ago

IPL 2024 : ಅಮ್ಮನನ್ನು ಆಸ್ಪತ್ರೆಯಲ್ಲಿ ಮಲಗಿಸಿ ಕೆಕೆಆರ್​ ಪರ ಕ್ವಾಲಿಫೈಯರ್ ಆಡಿದ ಆಫ್ಘನ್​ ಕ್ರಿಕೆಟಿಗ

Star Cricket Theam Fashion
ಫ್ಯಾಷನ್15 mins ago

Star Cricket Theme Fashion: ಕ್ರಿಕೆಟ್‌ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್‌!

Harish Poonja Govt responsible for disaster if MLA Harish Poonja is arrested says BY Vijayendra
ರಾಜಕೀಯ16 mins ago

Harish Poonja: ಶಾಸಕ ಹರೀಶ್‌ ಪೂಂಜಾರನ್ನು ಬಂಧಿಸಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ: ಗುಡುಗಿದ ವಿಜಯೇಂದ್ರ

Virat kohli
ಕ್ರೀಡೆ34 mins ago

IPL 2024 : ಕೊಹ್ಲಿಯನ್ನು ಹೊಗಳಿ ಆರ್​​ಸಿಬಿಗೆ ವಿದಾಯ ಹೇಳಿದ ವಿಜಯ್​ ಮಲ್ಯ

WhatsApp Update
ತಂತ್ರಜ್ಞಾನ41 mins ago

WhatsApp Update: ವಾಟ್ಸ್ ಆಪ್ ಬಳಕೆದಾರರಿಗೆ ಸಂತಸದ ಸುದ್ದಿ; ಮೆಸೆಜ್‌ಗೆ ಸಂಬಂಧಿಸಿ ಮಹತ್ವದ ಅಪ್‌ಡೇಟ್‌!

Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!
ಆರೋಗ್ಯ45 mins ago

Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

Blink Movie in half centuru with good in OTT
ಸ್ಯಾಂಡಲ್ ವುಡ್48 mins ago

Blink Movie: ಹಾಫ್ ಸೆಂಚುರಿ ಬಾರಿಸಿದ ʻಬ್ಲಿಂಕ್ ʼ ಸಿನಿಮಾ; ಒಟಿಟಿಯಲ್ಲಿಯೂ ʻಬಹುಪರಾಕ್ʼ!

Money Guide
ಮನಿ-ಗೈಡ್49 mins ago

Money Guide: ಜನಪ್ರಿಯವಾಗುತ್ತಿದೆ ʼಈಗ ಖರೀದಿಸಿ, ನಂತರ ಪಾವತಿಸಿʼ ಆಯ್ಕೆ: ಏನಿದು ಬಿಎನ್‌ಪಿಎಲ್‌? ಬಳಕೆ ಹೇಗೆ? ಇಲ್ಲಿದೆ ವಿವರ

Virat Kohli
ಕ್ರೀಡೆ57 mins ago

IPL 2024 : ವಿನೂತನ ದಾಖಲೆಯ ಹೊಸ್ತಿಲಲ್ಲಿ ವಿರಾಟ್​ ಕೊಹ್ಲಿ; ಇಲ್ಲಿದೆ ಅದರ ವಿವರ

ಕರ್ನಾಟಕ1 hour ago

Prajwal Revanna Case: ನಿಖಿಲ್ ಎಲ್ಲಿದ್ದೀಯಪ್ಪಾ ಎಂದಿದ್ದಾಯ್ತು, ಈಗ ಪ್ರಜ್ವಲ್ ಎಲ್ಲಿದ್ದೀಯಪ್ಪಾ ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ11 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ24 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌