Supreme Court: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಫ್ ಪರ ಚಲಾವಣೆಯಾಗಿದ್ದ 8 ಮತಗಳು ಸಿಂಧು - Vistara News

ದೇಶ

Supreme Court: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಫ್ ಪರ ಚಲಾವಣೆಯಾಗಿದ್ದ 8 ಮತಗಳು ಸಿಂಧು

Supreme Court: ಕಳೆದ ತಿಂಗಳು ಚಂಡೀಗಢ ಮೇಯರ್ ಚುನಾವಣೆ ನಡೆದಿತ್ತು. ಈ ವೇಳೆ, ಚುನಾವಣಾಧಿಕಾರಿಯೇ ಅಕ್ರಮ ಎಸಗಿದ ಆರೋಪವನ್ನು ಎದುರಿಸುತ್ತಿದ್ದಾರೆ.

VISTARANEWS.COM


on

Supreme Court Sadi that Chandigarh mayor Poll Officer Must Be Prosecuted
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ (Chandigarh Mayor Election) ಅಸಿಂಧುಗೊಳಿಸಲಾಗಿದ್ದ (invalid votes) ಎಂಟು ಮತಗಳನ್ನು ಸುಪ್ರೀಂ ಕೋರ್ಟ್ (Supreme Court) ಸಿಂಧುಗೊಳಿಸಿದೆ. ಈ ಮತಗಳು ಆಪ್‌ನ ಮೇಯರ್ ಅಭ್ಯರ್ಥಿ ಕುಲ್ದೀಪ್ ಕುಮಾರ್ (AAP Candidate Kuldeep Kumar) ಪರವಾಗಿ ಚಲಾವಣೆಯಾಗಿದ್ದವು.

ಮಂಗಳವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್, ಕಳೆದ ತಿಂಗಳು ನಡೆದ ಮೇಯರ್ ಚುನಾವಣೆಯ ಮತ ಎಣಿಕೆಗೆ ಮರು ಸೂಚಿಸಲಾಗುವುದು ಎಂದು ಹೇಳಿತ್ತು. ಚುನಾವಣೆ ವೇಳೆ, ಆಪ್ ಪರವಾಗಿ ಚಲಾವಣೆಯಾಗಿದ್ದ ಎಲ್ಲ ಎಂಟು ಮತಗಳು ವಿರೂಪಗೊಂಡಿದ್ದವು ಎಂದು ಚುನಾವಣಾಧಿಕಾರಿಯಾಗಿದ್ದ ಅನಿಲ್ ಮಸಿಹ್ ಅವರು ಹೇಳಿದ್ದರು. ಚುನಾವಣೆ ವೇಳೆ, ಅಧಿಕಾರಿಯು ಮತ ಪತ್ರಗಳನ್ನು ಗುರುತು ಮಾಡುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ನೇತೃತ್ವದ ಪೀಠವು, ಎಲ್ಲ ಎಂಟು ಮತಪತ್ರಗಳನ್ನು ಮರು ಪರಿಶೀಲಿಸಿತು. ಅಲ್ಲದೇ, ಅನಿಲ್ ಮಸಿಹ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಚುನಾವಣಾಧಿಕಾರಿಯಾಗಿದ್ದ ಮಸಿಹ್ ಅವರು ಹೇಗೆ ಎಂಟು ಮತಪತ್ರಗಳನ್ನು ವಿರೂಪಗೊಳಿಸಿದರು ಎಂಬುದನ್ನು ವಿಚಾರಣೆ ಮಾಡುವ ಮೂಲಕ ಸುಪ್ರೀಂ ಕೋರ್ಟ್ ತನ್ನ ವಿಚಾರಣೆಯನ್ನು ಆರಂಭಿಸಿದು. ವಿರೂಪಗೊಳಿಸಿದ ಮತಪತ್ರಗಳ ಖಾತ್ರಿಗಾಗಿ ಹಾಗೆ ಮಾಡಿದೆ ಎಂದು ಮಸಿಹ್ ಹೇಳಿದರು.

ನಿನ್ನೆ ಈ ಬ್ಯಾಲೆಟ್ ಪೇಪರ್ ಅನ್ನು ವಿರೂಪಗೊಳಿಸಲಾಗಿದೆ ಎಂದು ನೀವು ಹೇಳಿದ್ದೀರಿ. ನಮಗೆ ಎಲ್ಲಿ ತೋರಿಸುತ್ತೀರಾ?” ಅವರು ಎಂಟು ಮತಪತ್ರಗಳನ್ನು ಮಸಿಹ್ ಮತ್ತು ಅವರ ವಕೀಲರಿಗೆ ಮತ್ತು ವಿಚಾರಣೆಯಲ್ಲಿ ಇತರ ಪಕ್ಷಗಳಿಗೆ ತೋರಿಸಿ ಮುಖ್ಯ ನ್ಯಾಯಮೂರ್ತಿ ಕೇಳಿದರು.

ಎಲ್ಲಾ ಎಂಟು ಮಂದಿ ಕುಲದೀಪ್ ಕುಮಾರ್‌ಗೆ (ಎಎಪಿ ಅಭ್ಯರ್ಥಿ) ಮುದ್ರೆಯನ್ನು ಒತ್ತಿದ್ದಾರೆ. ಮತಗಳು ಕುಮಾರ್‌ಗೆ ಚಲಾವಣೆಯಾದವು. ಅವರು (ಮಸಿಹ್) ಏನು ಮಾಡುತ್ತಾರೆ ಎಂದರೆ… ಅವರು ಒಂದೇ ಸಾಲನ್ನು ಹಾಕುತ್ತಾರೆ. ವೀಡಿಯೊದಲ್ಲಿ ನೋಡಿದಂತೆ ಕೇವಲ ಒಂದು ಸಾಲು ಎಂದು ಪೀಠ ಹೇಳಿತು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಕುಮಾರ್ ಪರ ನ್ಯಾಯವಾದಿ ಅಭಿಷೇಕ್ ಸಿಂಘ್ವಿ ಅವರು, ಮಸಿಹ್ ಅವರ ಕೃತ್ಯವು ನ್ಯಾಯಾಂಗ ನಿಂದನೆಯಾಗುತ್ತದೆ. ಇದೊಂದು ಹೀನಾತಿಹೀನ ಅಪರಾಧ ಎಂದು ಅವರು ಹೇಳಿದರು. ಕೋರ್ಟ್ ಕೂಡ ನ್ಯಾಯಂಗ ನಿಂದನೆ ಎಂದು ಅಭಿಪ್ರಾಯಪಟ್ಟಿತು.

ಈ ಸುದ್ದಿಯನ್ನೂ ಓದಿ: Supreme Court: ಚಂಡೀಗಢ ಮೇಯರ್ ಚುನಾವಣಾಧಿಕಾರಿಗೆ ಸುಪ್ರೀಂ ಗುದ್ದು; ವಿಚಾರಣೆ ಎದುರಿಸಿ ಎಂದ ಕೋರ್ಟ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Modi 3.0 Government: ನರೇಂದ್ರ ಮೋದಿ ಮುಂದೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಇಟ್ಟಿರುವ ಬೇಡಿಕೆಗಳು ಇಷ್ಟು!

Modi 3.0 Government: ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯು ಕೇಂದ್ರ ಸಚಿವ ಸಂಪುಟದಲ್ಲಿ ಕನಿಷ್ಠ 3-4 ಸ್ಥಾನಗಳನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಸರ್ಕಾರಕ್ಕೆ ತಮ್ಮ 16 ಸ್ಥಾನಗಳೊಂದಿಗೆ ಬೆಂಬಲ ನೀಡಿದ್ದ ಟಿಡಿಪಿ ಒಂದು ಕೇಂದ್ರ ಸಚಿವ ಸ್ಥಾನ ಹಾಗೂ ಒಂದು ರಾಜ್ಯ ಖಾತೆ ಸಚಿವ ಸ್ಥಾನ ಗಿಟ್ಟಿಸಿಕೊಂಡಿತ್ತು. 2018 ರಲ್ಲಿ ಪಕ್ಷವು ಎನ್‌ಡಿಎ ಸರ್ಕಾರದಿಂದ ಹೊರಬರುವವರೆಗೂ ನಾಗರಿಕ ವಿಮಾನಯಾನ ಸಚಿವರು ಮತ್ತು ರಾಜ್ಯ ಐಟಿ ಸಚಿವರು ಟಿಡಿಪಿ ಪಕ್ಷದವರಾಗಿದ್ದರು. ಈ ಬಾರಿ ಹಣಕಾಸು ರಾಜ್ಯ ಖಾತೆಯನ್ನು ಕೇಳುವ ಸಾಧ್ಯತೆ ಇದೆ.

VISTARANEWS.COM


on

Modi 3.0 Government
Koo

ನವದೆಹಲಿ: ಈ ಬಾರಿ ಸಂಪೂರ್ಣ ಬಹುಮತದೊಂದಿಗೆ ಎನ್‌ಡಿಎ(NDA) ಸರ್ಕಾರ(Modi 3.0 Government) ಅಧಿಕಾರಕ್ಕೆ ಬಂದಿದೆಯಾದರೂ ಜೆಡಿಯುನ ನಿತೀಶ್‌ ಕುಮಾರ್‌(Nithish Kumar) ಮತ್ತು ಟಿಎಂಸಿಯ ಚಂದ್ರಬಾಬು ನಾಯ್ಡು(Chandrababu Naidu) ಅವರೇ ಕಿಂಗ್‌ಮೇಕರ್ಸ್.‌ ಈ ಸರ್ಕಾರದಲ್ಲಿ ತಾವೇ ಪ್ರಮುಖ ಪಾತ್ರವಹಿಸಲಿರುವ ಕಾರಣ ಈ ಇಬ್ಬರು ನಾಯಕರು ನರೇಂದ್ರ ಮೋದಿ ಎದುರು ಇಟ್ಟಿರುವ ಬೇಡಿಕೆಯಾದರೂ ಏನು? ಯಾವ್ಯಾವ ಬೇಡಿಕೆಗಳಿಗೆ ಬಿಜೆಪಿ ಅಸ್ತು ಅನ್ನಲಿದೆ?

ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯು ಕೇಂದ್ರ ಸಚಿವ ಸಂಪುಟದಲ್ಲಿ ಕನಿಷ್ಠ 3-4 ಸ್ಥಾನಗಳನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಸರ್ಕಾರಕ್ಕೆ ತಮ್ಮ 16 ಸ್ಥಾನಗಳೊಂದಿಗೆ ಬೆಂಬಲ ನೀಡಿದ್ದ ಟಿಡಿಪಿ ಒಂದು ಕೇಂದ್ರ ಸಚಿವ ಸ್ಥಾನ ಹಾಗೂ ಒಂದು ರಾಜ್ಯ ಖಾತೆ ಸಚಿವ ಸ್ಥಾನ ಗಿಟ್ಟಿಸಿಕೊಂಡಿತ್ತು. 2018 ರಲ್ಲಿ ಪಕ್ಷವು ಎನ್‌ಡಿಎ ಸರ್ಕಾರದಿಂದ ಹೊರಬರುವವರೆಗೂ ನಾಗರಿಕ ವಿಮಾನಯಾನ ಸಚಿವರು ಮತ್ತು ರಾಜ್ಯ ಐಟಿ ಸಚಿವರು ಟಿಡಿಪಿ ಪಕ್ಷದವರಾಗಿದ್ದರು. ಈ ಬಾರಿ ಹಣಕಾಸು ರಾಜ್ಯ ಖಾತೆಯನ್ನು ಕೇಳುವ ಸಾಧ್ಯತೆ ಇದೆ.

ಆಂಧ್ರಕ್ಕೆ ವಿಶೇಷ ಸ್ಥಾನಮಾನ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬುದು ಟಿಡಿಪಿಯ ಮತ್ತೊಂದು ಬೇಡಿಕೆ ಇಡುವ ಸಾಧ್ಯತೆ ಇದೆ. ಆದರೆ ಈ ಹಿಂದಿನಿಂದಲೂ ಇದಕ್ಕೆ ಎನ್‌ಡಿಎ ಒಪ್ಪದ ಕಾರಣ ಅದರ ಬದಲಾಗಿ, ಆಂಧ್ರಪ್ರದೇಶಕ್ಕೆ ಸಾಕಷ್ಟು ಹಣವನ್ನು ಒದಗಿಸುವ ಭರವಸೆ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಬೇಡಿಕೆ ಇಟ್ಟು 2018 ರಲ್ಲಿ ನಾಯ್ಡು ಎನ್‌ಡಿಎಯಿಂದ ಹೊರಬಂದಿತ್ತು.

ಜೆಡಿಯು ಬೇಡಿಕೆ ಏನು?

ಅವರು 2019 ರಲ್ಲಿ ಜೆಡಿಯು 16 ಸಂಸದರೊಂದಿಗೆ ಜೆಡಿಯುಗೆ ಬೆಂಬಲ ನೀಡಿದ್ದ ನಿತೀಶ್‌ ಕುಮಾರ್‌, ನಾಲ್ಕು ಪ್ರಮುಖ ಕ್ಯಾಬಿನೆಟ್‌ ಹುದ್ದೆಗಳಿಗೆ ಬೇಡಿಕೆ ಇಟ್ಟಿತ್ತು. ಇದಕ್ಕೆ ಬಿಜೆಪಿ ಒಪ್ಪದ ಕಾರಣ ಅವರ ಮೈತ್ರಿಕೂಟದಿಂದ ಹೊರನಡೆದಿದ್ದರು. ಇದಾದ ಬಳಿಕ ಎನ್‌ಡಿಎಗೆ ಮರು ಸೇರ್ಪಡೆಯಾಗುವ ಸಂದರ್ಭದಲ್ಲಿ ಬಿಜೆಪಿ ಜೆಡಿಯುನ ಆರ್‌ಸಿಪಿ ಸಿಂಗ್‌ ಅವರಿಗೆ ಒಂದು ಸಚಿವ ಸ್ಥಾನ ನೀಡಿತ್ತು. ಬಳಿಕ ಅವರು ಬಿಜೆಪಿ ಪಕ್ಷಾಂತರಗೊಂಡಿದ್ದರು. ಈ ಬಾರಿ ಜೆಡಿಯು ಮೂರು ಕ್ಯಾಬಿನೆಟ್‌ ಸ್ಥಾನಗಳು ಮತ್ತು ರಾಜ್ಯ ಖಾತೆ ಸಚಿವಾಲಯಗಳ ಮೇಲೆ ಕಣ್ಣಿಟ್ಟಿದೆ. ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಜಲಶಕ್ತಿ ಖಾತೆಗಳನ್ನು ಕೇಳುವ ಸಾಧ್ಯತೆ ಇದೆ.

ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಅವರು ತಮ್ಮ ತಂದೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರಂತೆ ಪೂರ್ಣ ಸಮಯದ ಸಚಿವರಾಗುವ ನಿರೀಕ್ಷೆಯಿದೆ, ಏಕೆಂದರೆ ಅವರ ಪಕ್ಷವು ಸ್ಪರ್ಧಿಸಿದ ಎಲ್ಲಾ ಐದು ಸ್ಥಾನಗಳನ್ನು ಗೆದ್ದಿದೆ. ಏಳು ಸ್ಥಾನಗಳೊಂದಿಗೆ ಏಕನಾಥ್ ಶಿಂಧೆ ಅವರ ಶಿವಸೇನೆ ಕೂಡ ಸಚಿವ ಮತ್ತು MoS ಸ್ಥಾನದೊಂದಿಗೆ ಕೇಂದ್ರ ಸಂಪುಟಕ್ಕೆ ಸೇರಬಹುದು. ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಮತ್ತು ಶ್ರೀರಂಗ್ ಬಾರ್ನೆ ಹೆಸರುಗಳು ಸದ್ದು ಮಾಡುತ್ತಿವೆ.

ಇದನ್ನೂ ಓದಿ: Lok Sabha Election 2024: ಒಬ್ಬ ಅಭ್ಯರ್ಥಿ ಎರಡೂ ಕ್ಷೇತ್ರಗಳಲ್ಲೂ ಗೆದ್ದರೆ ಏನಾಗುತ್ತದೆ?

Continue Reading

Lok Sabha Election 2024

Election Results 2024: ಠೇವಣಿ ಕಳೆದುಕೊಂಡ ದೆಹಲಿಯ 148 ಅಭ್ಯರ್ಥಿಗಳು; ಏನಿದು ಠೇವಣಿ ನಷ್ಟ?

Election Results 2024: ದೆಹಲಿಯ 7 ಲೋಕಸಭಾ ಸೀಟುಗಳಿಗೆ ಸ್ಪರ್ಧಿಸಿದ್ದ 162 ಅಭ್ಯರ್ಥಿಗಳ ಪೈಕಿ 148 (ಶೇ. 91) ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ಹಾಗಾದರೆ ಠೇವಣಿ ಎಂದರೇನು? ಇದು ಹೇಗೆ ನಷ್ಟವಾಗುತ್ತದೆ? ಇದಕ್ಕಿರುವ ನಿಯಮ ಏನು? ಇಲ್ಲಿದೆ ಉತ್ತರ.

VISTARANEWS.COM


on

Election Results 2024
Koo

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ (Election Results 2024) ಜೂನ್‌ 4ರಂದು ಹೊರ ಬಂದಿದ್ದು, ಸುಮಾರು ಎರಡು ತಿಂಗಳುಗಳ ಕಾಲ ಕಾಡುತ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಎನ್‌ಡಿಎ (NDA) ಒಕ್ಕೂಟ 294 ಸೀಟುಗಳನ್ನು ಗೆದ್ದುಕೊಂಡು ಸರ್ಕಾರ ರಚಿಸಲು ಮುಂದಾಗಿದೆ. ಸತತ ಮೂರನೇ ಬಾರಿಗೆ ನರೇಂದ್ರ ಮೋದಿ (Narendra Modi) ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಕುತೂಹಲಕಾರಿ ಸಂಗತಿಯೊಂದು ಹೊರ ಬಿದ್ದಿದ್ದು, ದೆಹಲಿಯ 7 ಲೋಕಸಭಾ ಸೀಟುಗಳಿಗೆ ಸ್ಪರ್ಧಿಸಿದ್ದ 162 ಅಭ್ಯರ್ಥಿಗಳ ಪೈಕಿ 148 (ಶೇ. 91) ಮಂದಿ ತಮ್ಮ ಠೇವಣಿ (Security Deposits) ಕಳೆದುಕೊಂಡಿದ್ದಾರೆ (Delhi Lok Sabha Elections). ಹಾಗಾದರೆ ಠೇವಣಿ ಎಂದರೇನು? ಇದು ಹೇಗೆ ನಷ್ಟವಾಗುತ್ತದೆ? ಇದಕ್ಕಿರುವ ನಿಯಮ ಏನು? ಇಲ್ಲಿದೆ ಉತ್ತರ.

ದೆಹಲಿಯಲ್ಲಿನ ಎಲ್ಲ ಸೀಟುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಇಲ್ಲಿನ ಚಾಂದನಿ ಚೌಕ್‌ನಲ್ಲಿ 23, ನವದೆಹಲಿಯಲ್ಲಿ 15, ದಕ್ಷಿಣ ದೆಹಲಿಯಲ್ಲಿ 20, ಪೂರ್ವ ದೆಹಲಿಯಲ್ಲಿ 18, ಪಶ್ಚಿಮ ದೆಹಲಿಯಲ್ಲಿ 22, ಈಶಾನ್ಯ ದೆಹಲಿಯಲ್ಲಿ 26 ಮತ್ತು ವಾಯುವ್ಯ ದೆಹಲಿಯಲ್ಲಿ 24 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಇನ್ನು ದೇಶಾದ್ಯಂತ 7,193 ಅಭ್ಯರ್ಥಿಗಳ ಠೇವಣಿ ನಷ್ಟವಾಗಿದೆ.

ಏನಿದು ಠೇವಣಿ?

ನಿಯಮದ ಪ್ರಕಾರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿ 25,000 ರೂ. (ಸಾಮಾನ್ಯ ವಿಭಾಗ) ಮತ್ತು 12,500 ರೂ. (ಎಸ್‌ಸಿ ವಿಭಾಗ) ಠೇವಣಿ ಇರಿಸಬೇಕು. ಅಭ್ಯರ್ಥಿಯಿಂದ ಹಣ ಪಡೆದು, ಅದನ್ನು ಸರ್ಕಾರದ ಖಾತೆಗೆ ಜಮೆ ಮಾಡಲಾಗುತ್ತದೆ. ಫಲಿತಾಂಶ ಹೊರಬಂದ ಬಳಿಕ ಠೇವಣಿ ಉಳಿಸಿಕೊಂಡ ಅಭ್ಯರ್ಥಿಗಳಿಗೆ ಅಷ್ಟೂ ಹಣ ಮರಳಿ ನೀಡಲಾಗುತ್ತದೆ. ಠೇವಣಿ ಕಳೆದುಕೊಂಡವರ ಹಣವನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳುತ್ತದೆ. ಹಾಗಾದರೆ ಠೇವಣಿ ಕಳೆದುಕೊಳ್ಳುವುದು ಎಂದರೇನು? ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಚುನಾವಣಾ ಆಯೋಗ ನಿಯಮವನ್ನು ರೂಪಿಸಿದೆ.

ಪ್ರತಿ ಕ್ಷೇತ್ರದಲ್ಲಿ ಚಲಾವಣೆಯಾಗುವ ಒಟ್ಟು ಮತಗಳ ಪೈಕಿ ಆರನೇ ಒಂದರಷ್ಟು ಮತ ಪಡೆದ ಅಭ್ಯರ್ಥಿಯ ಠೇವಣಿ ಮರಳಿ ದೊರೆಯುತ್ತದೆ. ಅಂದರೆ ಒಟ್ಟು ಒಂದು ಲಕ್ಷ ಮತಗಳು ಚಲಾವಣೆಯಾಗಿದೆ ಎಂದಿಟ್ಟುಕೊಳ್ಳೋಣ. ಆ ಪೈಕಿ ಅಭ್ಯರ್ಥಿ 16,667 ಮತ ಪಡೆದರೆ ಠೇವಣಿ ಇಟ್ಟ ಹಣ ದೊರೆಯುತ್ತದೆ. ಅದಕ್ಕೂ ಕಡಿಮೆ ಮತ ಪಡೆದರೆ ಹಣ ಸರ್ಕಾರದ ಪಾಲಾಗುತ್ತದೆ. ಇನ್ನು ಠೇವಣಿ ಇರಿಸುವ ಮೊತ್ತ ವಿಧಾನಸಭೆ ಮತ್ತು ಪಂಚಾಯತ್‌ ಮಟ್ಟದ ಚುನಾವಣೆಗಳಿಗೆ ಬೇರೆ ಬೇರೆಯಾಗಿರುತ್ತದೆ.

ದೆಹಲಿಯಲ್ಲಿ ಏನಾಯ್ತು?

ದೆಹಲಿಯ ಆಡಳಿತರೂಢ ಆಮ್‌ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ ಒಪ್ಪಂದ ಮಾಡಿಕೊಂಡು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಅದರಂತೆ ಆಪ್‌ನ 4 ಅಭ್ಯರ್ಥಿಗಳು ಮತ್ತು ಕಾಂಗ್ರೆಸ್‌ನ 3 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಜಯ ಗಳಿಸಿದ ಬಿಜೆಪಿ ಮತ್ತು ಎರಡನೇ ಸ್ಥಾನ ಗಳಿಸಿದ ಕಾಂಗ್ರೆಸ್‌-ಆಪ್‌ ಮೈತ್ರಿಯ ಅಭ್ಯರ್ಥಿಗಳನ್ನು ಬಿಟ್ಟು ಉಳಿದವರು ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ವಿಶೇಷ ಎಂದರೆ ಚಾಂದಿನಿ ಚೌಕ್‌ನಲ್ಲಿ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿ ಅಶೋಕ್‌ ಕುಮಾರ್‌ ಅವರಿಗೆ ಕೇವಲ 140 ವೋಟು ಲಭಿಸಿದ್ದು, ಅತ್ಯಂಕ ಕಡಿಮೆ ಮತ ಗಳಿಸಿದ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: NDA Meeting: ಮೋದಿ ನಿವಾಸದಲ್ಲಿ ಎನ್‌ಡಿಎ ಸಭೆ; ಯಾವೆಲ್ಲ ವಿಚಾರಗಳನ್ನು ಚರ್ಚಿಸಲಾಯ್ತು? ಇಲ್ಲಿದೆ ವಿವರ

Continue Reading

ಪ್ರಮುಖ ಸುದ್ದಿ

Rahul Gandhi: ನಾಳೆ ಬೆಂಗಳೂರಿನಲ್ಲಿ ಕೋರ್ಟ್‌ ಕಟಕಟೆ ಏರಲಿರುವ ರಾಹುಲ್‌ ಗಾಂಧಿ

Rahul Gandhi: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಮಾನನಷ್ಟ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕಳೆದ ಬಾರಿ ಇದರ ವಿಚಾರಣೆಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DCM DK Shivakumar) ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು.

VISTARANEWS.COM


on

rahul gandhi
Koo

ಬೆಂಗಳೂರು: ಬಿಜೆಪಿಗೆ ಮಾನನಷ್ಟ (defamation case) ಮಾಡಿದ ಪ್ರಕರಣದಲ್ಲಿ ನಾಳೆ ಬೆಂಗಳೂರಿನಲ್ಲಿ ನ್ಯಾಯಾಧೀಶರ ಮುಂದೆ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ (Rahul Gandhi) ಹಾಜರಾಗಬೇಕಿದೆ. ಈ ಕುರಿತು ಕೋರ್ಟ್‌ ನಿರ್ದೇಶನ ನೀಡಿದ್ದು, ರಾಹುಲ್‌ ಬೆಂಗಳೂರಿಗೆ ಆಗಮಿಸಿ ಕೋರ್ಟ್ ಕಲಾಪದಲ್ಲಿ ಖುದ್ದು ಹಾಜರಾಗುವ ಸಾಧ್ಯತೆ ಇದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಮಾನನಷ್ಟ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕಳೆದ ಬಾರಿ ಇದರ ವಿಚಾರಣೆಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DCM DK Shivakumar) ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಇವರಿಬ್ಬರಿಗೂ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಆದರೆ ರಾಹುಲ್‌ ಗಾಂಧಿ ಆಗಮಿಸಿರಲಿಲ್ಲ. ಇದರಿಂದ ಗರಂ ಆಗಿದ್ದ ನ್ಯಾಯಾಧೀಶರು, ಮುಂದಿನ ಬಾರಿ ರಾಹುಲ್‌ ಖುದ್ದು ಹಾಜರಿರುವಂತೆ ನಿರ್ದೇಶನ ನೀಡಿತ್ತು.

ಈ ಪ್ರಕರಣದ ದಾಖಲಿಸಿರುವ ಬಿಜೆಪಿ ಕಾರ್ಯದರ್ಶಿ, ಎಂಎಲ್‌ಸಿ ಕೇಶವಪ್ರಸಾದ್, “ಸಾಮಾನ್ಯರಂತೆ ರಾಹುಲ್‌ ಅವರಿಗೂ ಕಾನೂನು ಒಂದೇ” ಎಂದು ಹೇಳಿದ್ದಾರೆ. “ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಸುಳ್ಳು ಜಾಹೀರಾತು ನೀಡಿದ್ದರು. ರಾಹುಲ್‌ ಗಾಂಧಿ ಅದನ್ನು ರಿಟ್ವೀಟ್ ಮಾಡಿಕೊಂಡರು. ಹಾಗಾಗಿ ಮೂವರ ವಿರುದ್ಧ ದೂರು ನೀಡಲಾಗಿತ್ತು. ಕೋರ್ಟ್ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.‌ ಸಿಎಂ, ಡಿಸಿಎಂ ಹಾಜರಾಗಿದ್ದರು. ರಾಹುಲ್‌ ಏಳನೇ ತಾರೀಕು ಹಾಜರಾಗುವುದಾಗಿ ಹೇಳಿದ್ದಾರೆ. ಮೊದಲ ದಿನವೇ ಅವರು ಹಾಜರಾಗಬೇಕಿತ್ತು. ಬರದಿದ್ದಾಗ ಕೋರ್ಟ್‌ ಅವರಿಗೆ ಒಂದು ಅವಕಾಶ ಕೊಟ್ಟಿದೆ. ಬರದಿದ್ದರೆ, ಜಾಮೀನುರಹಿತ ವಾರೆಂಟ್ ಇಶ್ಯೂ ಮಾಡಬೇಕು ಅಂತ ನಾವು ವಾದ ಮಂಡಿಸಿದ್ದೆವು” ಎಂದಿದ್ದಾರೆ.

“ರಾಷ್ಟ್ರೀಯ ನಾಯಕರಾಗಿ ಅವರು ಕೋರ್ಟ್ ಸಮನ್ಸ್‌ಗೆ ಎಷ್ಟು ಗೌರವ ಕೊಡ್ತಾರೆ ಅಂತ ಮೊದಲ ದಿನವೇ ತೋರಿಸಬಹುದಿತ್ತು. ನೆಲದ ಕಾನೂನಿಗೆ ಗೌರವ ಕೊಟ್ಟು, ನಾಳೆ ಬರಲೇಬೇಕು. ಇಲ್ಲದಿದ್ದರೆ ನಾನ್ ಬೇಲಬಲ್ ವಾರೆಂಟ್ ಇಶ್ಯೂ ಆಗಲಿದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತನಿಗೂ ಎಲ್ಲಾ ಹೋರಾಟ ಮಾಡುವ ಕ್ಷಮತೆ ಇದೆ. ನಮ್ಮ ವಿರುದ್ಧ ಹಾಕಿರುವ ಜಾಹೀರಾತು ಸುಳ್ಳು. ಅವರು ಅದಕ್ಕೆ ದಾಖಲೆ ಕೊಡಬೇಕು. ಜನರ ದಾರಿ ತಪ್ಪಿಸಬಹುದು, ಆದರೆ ಕೋರ್ಟ್ ದಾರಿ ತಪ್ಪಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

08-05-2023ರಂದು 42ನೇ ವಿಶೇಷ ನ್ಯಾಯಾಲಯದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.‌ ಕೇಶವ ಪ್ರಸಾದ್ ಖಾಸಗಿ ದೂರ ದಾಖಲು ಮಾಡಿದ್ದರು. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ A4 ಆರೋಪಿಯಾಗಿ ರಾಹುಲ್ ಗಾಂಧಿ ಅವರನ್ನು ಹೆಸರಿಸಲಾಗಿದೆ.

“ಬಿಜೆಪಿ ಸರ್ಕಾರ 2019ರಿಂದ 2023ರವರೆಗೆ ಭ್ರಷ್ಟ ಆಡಳಿತ ನಡೆಸಿತ್ತು. ಆಗಿನ ಸಿಎಂ ಹುದ್ದೆ ರೂ. 2500 ಕೋಟಿಗೆ ಮಾರಾಟವಾಗಿತ್ತು. ಮಂತ್ರಿಗಳ ಹುದ್ದೆ ರೂ. 500 ಕೋಟಿ ಬಿಜೆಪಿ ಹೈಕಮಾಂಡ್‌ಗೆ ನೀಡಿ ಪಡೆದಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ. ಇದಲ್ಲದೆ ಕೋವಿಡ್ ಕಿಟ್ ಪೂರೈಕೆ ಟೆಂಡರ್‌ನಲ್ಲಿ 75% ಡೀಲ್ ನಡೆದಿದೆ. ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್‌ಗಳಲ್ಲಿ 40% ಡೀಲ್, ಮಠಕ್ಕೆ ನೀಡುವ ಅನುದಾನದಲ್ಲಿ 30% ಡೀಲ್, ಉಪಕರಣಗಳ ಪೂರೈಕೆಯಲ್ಲಿ 40% ಡೀಲ್, ಮಕ್ಕಳಿಗೆ ನೀಡುವ ಮೊಟ್ಟೆ ಪೂರೈಕೆಯ ಟೆಂಡರ್‌ನಲ್ಲಿ 30% ಡೀಲ್, ರಸ್ತೆ ಕಾಮಗಾರಿಗಳ ಟೆಂಡರ್‌ನಲ್ಲಿ 40% ಡೀಲ್ ನಡೆದಿದೆ” ಎಂದು ಆರೋಪಿಸಿದ್ದರು.

ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ಪಡೆದ ಆರೋಪ ಮಾಡಿ ಈ ಬಗ್ಗೆ ಅನೇಕ ಜಾಹೀರಾತುಗಳನ್ನೂ ಕಾಂಗ್ರೆಸ್‌ ನೀಡಿತ್ತು. ಇದರಿಂದ ಬಿಜೆಪಿ ಪಕ್ಷಕ್ಕೆ ಅಪಮಾನವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಐಪಿಸಿ 499, 500 ಅಡಿ ಖಾಸಗಿ ದೂರು ದಾಖಲು ಮಾಡಿದ್ದರು. ಈ ಬಗ್ಗೆ ವಾದ ಆಲಿಸಿ ಆರೋಪಿಗಳನ್ನು ಹಾಜರು ಪಡಿಸಲು ಕೋರ್ಟ್‌ ಸೂಚಿಸಿತ್ತು.

ಇದನ್ನೂ ಓದಿ: CM Siddaramaiah: ಸಿಎಂ, ಡಿಸಿಎಂ ಕೂಡ ಇಂದು ಕೋರ್ಟ್‌ ಕಟಕಟೆಯಲ್ಲಿ! ಏನಿದು ಕೇಸ್?‌

Continue Reading

ಶಿಕ್ಷಣ

NEET UG 2024: ನೀಟ್‌ನಲ್ಲಿ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು? ಈ ಟಾಪರ್‌ ಹೇಳೋದು ಕೇಳಿ

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (NEET UG 2024) ಮಹಾರಾಷ್ಟ್ರ ನಾಗ್ಪುರದ ವೇದ್ ಸುನೀಲ್‌ಕುಮಾರ್ ಶೆಂದೆ ಅವರು ಭಾರತದಲ್ಲೇ ಅಗ್ರ ಸ್ಥಾನವನ್ನು ಗಳಿಸಿದ್ದು, ಇವರು ಶೇ. 99.99 ಅಂಕಗಳೊಂದಿಗೆ ಅಖಿಲ ಭಾರತ ಶ್ರೇಣಿ (AIR) 1 ಅನ್ನು ಗಳಿಸಿದ್ದಾರೆ. ಈ ಕುರಿತು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

VISTARANEWS.COM


on

By

NEET UG 2024
Koo

ಮಹಾರಾಷ್ಟ್ರ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿರುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (NEET-UG) ಮಹಾರಾಷ್ಟ್ರ (maharastra) ನಾಗ್ಪುರದ ವೇದ್ ಸುನೀಲ್‌ಕುಮಾರ್ ಶೆಂದೆ (Ved Sunilkumar Shende) ಅವರು ಭಾರತದಲ್ಲೇ (India) ಅಗ್ರ ಸ್ಥಾನವನ್ನು ಗಳಿಸಿದ್ದಾರೆ. ಇವರು ಶೇ. 99.99 ಅಂಕಗಳನ್ನು ಗಳಿಸಿ ಅಖಿಲ ಭಾರತ ಶ್ರೇಣಿ (AIR) 1 ಅನ್ನು ಗಳಿಸಿದ್ದಾರೆ.

ತಮ್ಮ ಈ ಸಾಧನೆಯ ಕುರಿತು ಮಾತನಾಡಿರುವ ಅವರು, ನೀಟ್ ಫಲಿತಾಂಶದಿಂದ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಎರಡು ವರ್ಷಗಳ ಕಾಲ ಶ್ರದ್ಧೆಯಿಂದ ಪರೀಕ್ಷೆಗೆ ತಯಾರಿ ನಡೆಸಿರುವ ಅವರು ತಮ್ಮ ಅನುಭವವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಅಧ್ಯಯನ ಮತ್ತು ಮಾದರಿ ಪ್ರಶ್ನೆಗಳನ್ನು ಅಭ್ಯಾಸ ಮಾಡುವುದರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ನಿರಂತರ ಪರೀಕ್ಷೆಗಳನ್ನು ನಡೆಸಿ ಅಭ್ಯಾಸ ನಡೆಸುತ್ತಿದ್ದೆ. ನಿರಂತರ ಪರೀಕ್ಷೆಗಳನ್ನು ಬರೆಯುತ್ತಿದ್ದೆ. ಪರೀಕ್ಷೆಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಆರು ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಡುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.

ಸಮಯ ನಿರ್ವಹಣೆಯ ಕುರಿತು ಮಾತನಾಡಿರುವ ಅವರು, ಬೆಳಗ್ಗೆ 4 ಗಂಟೆಗೆ ಎದ್ದು ಪೂರ್ಣ ಪಠ್ಯಕ್ರಮ ಪರೀಕ್ಷೆಗಳನ್ನು ಅಭ್ಯಾಸ ಮಾಡುತ್ತೇನೆ. ಆಗಾಗ ವಿರಾಮದೊಂದಿಗೆ ಮತ್ತು ನಿಗದಿತ ಸಮಯವಿಲ್ಲದೆ ಒಟ್ಟು ಆರರಿಂದ ಎಂಟು ಗಂಟೆಗಳ ಕಾಲ ಅಧ್ಯಯನ ಮಾಡಿದ್ದೇನೆ ಹೇಳಿದ್ದಾರೆ.

ನನಗೆ ಯಾವುದೇ ಒತ್ತಡವಿರಲಿಲ್ಲ. ಕೊನೆಯವರೆಗೂ ಆಸಕ್ತಿಯಿಂದಲೇ ಅಧ್ಯಯನ ನಡೆಸಿದ್ದೇನೆ ಎಂದು ಹೇಳಿದ ಅವರು, ಅಧ್ಯಯನದ ವೇಳೆಯಲ್ಲಿ ನಾನು ಯಾವುದೇ ಒತ್ತಡವನ್ನು ಅನುಭವಿಸಲಿಲ್ಲ. ಆದರೆ ಹೆಚ್ಚು ಅಧ್ಯಯನಕ್ಕೆ ಒತ್ತು ಕೊಟ್ಟಿದ್ದರಿಂದ ನನಗೆ ಆಯಾಸವಾಗಿದ್ದು ನಿಜ ಎಂದಿದ್ದಾರೆ.

ಒತ್ತಡ ನಿರ್ವಹಣೆ ಹೇಗಿತ್ತು?

ಒತ್ತಡ ನಿರ್ವಹಣೆ ಕುರಿತು ಮಾತನಾಡಿರುವ ಅವರು, ದೈನಂದಿನ ಓದಿನಿಂದ ಒತ್ತಡ ಉಂಟಾದಾಗ ಅದನ್ನು ನಿರ್ವಹಿಸುವಲ್ಲಿ ಸ್ನೇಹಿತರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಉತ್ತಮ ಸ್ನೇಹಿತರನ್ನು ಹೊಂದುವುದು ಮುಖ್ಯ ಮತ್ತು ನಾನು ಉತ್ತಮ ಸ್ನೇಹಿತರನ್ನು ಹೊಂದಲು ಅದೃಷ್ಟಶಾಲಿಯಾಗಿದ್ದೇನೆ. ನನ್ನ ಸ್ನೇಹಿತರೊಬ್ಬರು ಸಹ 720 ಅಂಕಗಳನ್ನು ಗಳಿಸಿದರು ಮತ್ತು AIR 1 ಗಳಿಸಿದರು. ಅವರ ಸಮರ್ಪಣೆಯನ್ನು ನೋಡಿ ನನಗೆ ಪ್ರೇರಣೆಯಾಯಿತು. ಯಾಕೆಂದರೆ ಅವರು ನನಗಿಂತ ಹೆಚ್ಚು ಅಧ್ಯಯನ ಮಾಡಿದ್ದಾರೆ. ಅವರು 10-12-14 ಗಂಟೆಗಳ ಕಾಲ ಅಧ್ಯಯನಕ್ಕೆ ಸಮಯ ಮೀಸಲು ಇಟ್ಟಿದ್ದರು. ಆದರೆ ಪರೀಕ್ಷೆಗಳಲ್ಲಿ ನಮ್ಮ ಅಂಕಗಳನ್ನು ಹೋಲಿಸಲಾಗುವುದಿಲ್ಲ ಎಂದರು.

ಭವಿಷ್ಯದ ಕುರಿತು ಮಾತನಾಡಿದ ಅವರು, ಎಐಐಎಂಎಸ್ ದೆಹಲಿಗೆ ಅರ್ಜಿ ಸಲ್ಲಿಸುವ ಯೋಜನೆ ರೂಪಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ: NEET UG Result 2024 : ಮೊದಲ ರ‍್ಯಾಂಕ್‌ ಪಡೆದ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ಮಂದಿ ನೀಟ್‌ ಟಾಪರ್ಸ್‌

ವೈದ್ಯಕೀಯ ವೃತ್ತಿಯ ಒಲವು

ವೈದ್ಯಕೀಯ ವೃತ್ತಿ ಮತ್ತು ಜೀವಶಾಸ್ತ್ರದ ಮೇಲಿನ ಆಸಕ್ತಿಯಿಂದಾಗಿ ಶೆಂಡೆ ಅವರು ನೀಟ್ ಯುಜಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಒಲವು ತೋರಿರುವುದಾಗಿ ಹೇಳಿದರು.

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿಯಾಗಿರುವ ಶೆಂಡೆ ಅವರ ತಾಯಿ ಇಂದಿರಾಗಾಂಧಿ ಮತ್ತು ಶೆಂಡೆ ಅವರ ತಂದೆ ಇಎನ್‌ಟಿ ಶಸ್ತ್ರಚಿಕಿತ್ಸಕರಾದ ಸುನೀಲಕುಮಾರ ಶೆಂದೆ ಮಗನ ಸಾಧನೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಆತನ ಕಠಿಣ ಪರಿಶ್ರಮ ಮತ್ತು ಅಧ್ಯಯನದ ಬಗ್ಗೆ ಸ್ಥಿರತೆ ಅಂತಿಮವಾಗಿ ಫಲ ನೀಡಿದೆ. ಕಲಿಸಿದ ವಿಷಯಗಳನ್ನು ಆತ ನಿರಂತರವಾಗಿ ಅಧ್ಯಯನ ನಡೆಸುತ್ತಿದ್ದ. ಎಂದಿಗೂ ಒತ್ತಡಕ್ಕೆ ಒಳಗಾಗಲಿಲ್ಲ; ಕೆಲವೊಮ್ಮೆ ಒತ್ತಡವನ್ನು ನಿವಾರಿಸಲು ಚೆಸ್ ಆಡುತ್ತಿದ್ದ ಎಂದು ತಿಳಿಸಿದರು.

Continue Reading
Advertisement
A rider standing on a bike and Young man and woman fight in road
ಕ್ರೈಂ8 mins ago

ಯುವಕನ ಕಾಲರ್ ಪಟ್ಟಿ ಹಿಡಿದು ಜಾಡಿಸಿ ಒದ್ದ ಯುವತಿ; ಎರಡು ಕೈ ಮೇಲೆತ್ತಿ ಬೈಕ್‌ ಸವಾರಿ, ಸವಾರನ ಹುಚ್ಚಾಟಕ್ಕೆ ಕಿಡಿ

Valmiki Corporation Scam
ಪ್ರಮುಖ ಸುದ್ದಿ21 mins ago

Valmiki Corporation Scam: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ; ಸಚಿವ ನಾಗೇಂದ್ರ ರಾಜೀನಾಮೆ

David Warner
ಕ್ರೀಡೆ41 mins ago

David Warner: ಕ್ರಿಸ್​ ಗೇಲ್​ ದಾಖಲೆ ಮುರಿದ ಡೇವಿಡ್​ ವಾರ್ನರ್​

Modi 3.0 Government
ದೇಶ41 mins ago

Modi 3.0 Government: ನರೇಂದ್ರ ಮೋದಿ ಮುಂದೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಇಟ್ಟಿರುವ ಬೇಡಿಕೆಗಳು ಇಷ್ಟು!

Amruthadhare Serial goutham bhumika in first night scene
ಕಿರುತೆರೆ41 mins ago

Amruthadhare Serial: ಡುಮ್ಮ ಸರ್ ಎದೆ ಢವ ಢವ! ಗೌತಮ್-ಭೂಮಿಕಾ ಮನಸುಗಳು ಬೆರೆತಾಯ್ತು!

Prajwal Revanna Case
ಕರ್ನಾಟಕ45 mins ago

Prajwal Revanna Case: ಭವಾನಿ ರೇವಣ್ಣ ವಿರುದ್ಧ ಬಂಧನ ವಾರಂಟ್‌ ಹೊರಡಿಸಿದ ಕೋರ್ಟ್

Election Results 2024
Lok Sabha Election 202459 mins ago

Election Results 2024: ಠೇವಣಿ ಕಳೆದುಕೊಂಡ ದೆಹಲಿಯ 148 ಅಭ್ಯರ್ಥಿಗಳು; ಏನಿದು ಠೇವಣಿ ನಷ್ಟ?

rahul gandhi
ಪ್ರಮುಖ ಸುದ್ದಿ1 hour ago

Rahul Gandhi: ನಾಳೆ ಬೆಂಗಳೂರಿನಲ್ಲಿ ಕೋರ್ಟ್‌ ಕಟಕಟೆ ಏರಲಿರುವ ರಾಹುಲ್‌ ಗಾಂಧಿ

NEET UG 2024
ಶಿಕ್ಷಣ1 hour ago

NEET UG 2024: ನೀಟ್‌ನಲ್ಲಿ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು? ಈ ಟಾಪರ್‌ ಹೇಳೋದು ಕೇಳಿ

Valmiki corporation Scam
ಕರ್ನಾಟಕ2 hours ago

Valmiki Corporation Scam: ಸಚಿವ ನಾಗೇಂದ್ರ ಇಂದೇ ರಾಜೀನಾಮೆ: ಖಚಿತಪಡಿಸಿದ ಡಿಸಿಎಂ ಡಿಕೆಶಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌