INDIA Bloc: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 17, ಎಸ್‌ಪಿ 63 ಕ್ಷೇತ್ರಗಳಲ್ಲಿ ಸ್ಪರ್ಧೆ! ಬಗೆ ಹರಿದ ಸೀಟು ಹಂಚಿಕೆ ಬಿಕ್ಕಟ್ಟು - Vistara News

ದೇಶ

INDIA Bloc: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 17, ಎಸ್‌ಪಿ 63 ಕ್ಷೇತ್ರಗಳಲ್ಲಿ ಸ್ಪರ್ಧೆ! ಬಗೆ ಹರಿದ ಸೀಟು ಹಂಚಿಕೆ ಬಿಕ್ಕಟ್ಟು

INDIA Bloc: ರಾಯ್ ಬರೇಲಿ, ಅಮೇಠಿ ಸೇರಿದಂತೆ ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದ 63 ಕ್ಷೇತ್ರಗಳಲ್ಲಿ ಎಸ್‌ಪಿ ಸ್ಪರ್ಧಿಸಲಿದೆ ಎಂದು ಉಭಯ ಪಕ್ಷಗಳು ತಿಳಿಸಿವೆ.

VISTARANEWS.COM


on

INDIA Bloc, Congress and SP to fight on 17 and 63 in Uttar Pradesh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಕ್ನೋ: ಮುಂಬರುವ ಲೋಕಸಭೆ ಚುನಾವಣೆ(Lok Sabha Election 2024)ಗಾಗಿ ಉತ್ತರ ಪ್ರದೇಶದಲ್ಲಿ (Uttar Pradesh) ಸೀಟು ಹಂಚಿಕೆ (Seat Sharing) ಸಂಬಂಧ ಉದ್ಭವಿಸಿದ್ದ ಬಿಕ್ಕಟ್ಟು ಶಮನಗೊಂಡಿದೆ ಎಂದು ಇಂಡಿಯಾ ಕೂಟದ (INDIA Bloc) ಪ್ರಮುಖ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ (Congress Party) ಹಾಗೂ ಸಮಾಜವಾದಿ ಪಾರ್ಟಿ (Samajwadi Party) ಹೇಳಿವೆ. ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ 63 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಹಾಗೂ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸಲಿದ್ದು, ಜಂಟಿಯಾಗಿ ಚುನಾವಣೆಯನ್ನು ಎದುರಿಸಲಿವೆ.

ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಸೀಟು ಹಂಚಿಕೆ ಗೊಂದಲ ಬಗೆಹರಿದಿದೆ ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಚೌಧರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಅವರು ಮಾಹಿತಿ ನೀಡಿದರು.

ಕಾಂಗ್ರೆಸ್ ತನ್ನ ಭದ್ರಕೋಟೆಗಳಾದ ರಾಯ್ ಬರೇಲಿ ಮತ್ತು ಅಮೇಠಿ ಜೊತೆಗೆ ಕಾನ್ಪುರ ನಗರ, ಫತೇಪುರ್ ಸಿಕ್ರಿ, ಬಸ್ಗಾಂವ್, ಸಹರಾನ್‌ಪುರ್, ಪ್ರಯಾಗ್‌ರಾಜ್, ಮಹಾರಾಜ್‌ಗಂಜ್, ಅಮ್ರೋಹಾ, ಝಾನ್ಸಿ, ಬುಲಂದಶಹರ್, ಘಾಜಿಯಾಬಾದ್, ಮಥುರಾ, ಶಾಜಿಯಾಬಾದ್ , ಬಾರಾಬಂಕಿ ಮತ್ತು ಡಿಯೋರಿಯಾ ಕೇತ್ರಗಳಲ್ಲಿ ಸ್ಪರ್ಧಿಸಲಿದೆ.

ಸಮಾಜವಾದಿ ಪಕ್ಷವು ತನ್ನ ಪಾಲಿಗೆ ದೊರೆತಿರುವ ಕ್ಷೇತ್ರಗಳಲ್ಲೇ ಪ್ರಾದೇಶಿಕ ಪಕ್ಷಗಳಿಗೆ ಸ್ಥಾನಗಳನ್ನು ಹಂಚಿಕೆ ಮಾಡಲಿದೆ. ಕಳೆದ ತಿಂಗಳು ಎಸ್‌ಪಿಯೊಂದಿಗೆ ಏಳು ಸ್ಥಾನಗಳ ಒಪ್ಪಂದಕ್ಕೆ ಒಪ್ಪಿಗೆ ನೀಡಿದ ಹೊರತಾಗಿಯೂ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.

ಮೈತ್ರಿಯು ದೇಶಕ್ಕೆ ಒಂದು ಸಂದೇಶವಾಗಿದೆ. ಯುಪಿಯಲ್ಲಿ 80 ಲೋಕಸಭಾ ಸ್ಥಾನಗಳಿವೆ. ಉತ್ತರ ಪ್ರದೇಶದ ಸಹಾಯದಿಂದಲೇ ಭಾರತೀಯ ಜನತಾ ಪಾರ್ಟಿಯು ಕೇಂದ್ರದಲ್ಲಿಅಧಿಕಾರಕ್ಕೆ ಬಂದಿದೆ. ಅದೇ ಉತ್ತರ ಪ್ರದೇಶದಿಂದಾಗಿಯೇ ಬಿಜೆಪಿ 2024 ರಲ್ಲಿ ಅಧಿಕಾರವನ್ನು ಕಳೆದುಕೊಳ್ಳುತ್ತದೆ ಎಂದು ಅಖಿಲೇಶ್ ಯಾದವ್ ಅವರು ಹೇಳಿದ್ದಾರೆ.

ದೇಶದಲ್ಲಿ ಪರಿಸ್ಥಿತಿ ತುಂಬಾ ವಿಷಮವಾಗಿದೆ. ರೈತರು ಮತ್ತು ಯುವಕರು ಬೀದಿಗಿಳಿದಿದ್ದಾರೆ. ದೇಶವನ್ನು ಬಿಜೆಪಿಯಿಂದ ರಕ್ಷಣೆ ಮಾಡುವುದೇ ಇಂಡಿಯಾ ಕೂಟದ ಕನಸಾಗಿದೆ ಎಂದು ಎಸ್‌ಪಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಚೌಧರಿ ಹೇಳಿದರು.

ಅಮೇಠಿ ಮತ್ತು ರಾಯ್ಬರೇಲಿ ಸೇರಿದಂತೆ ಕಾಂಗ್ರೆಸ್ ತನ್ನ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಇನ್ನೂ ನಿರ್ಧರಿಸಿಲ್ಲ ಎಂದು ಅವಿನಾಶ್ ಪಾಂಡೆ ಅವರು ಸುದ್ದಿಗಾರರಿಗೆ ತಿಳಿಸಿದರು. ಗಾಂಧಿ ಕುಟುಂಬವು ಈ ಎರಡು ಕ್ಷೇತ್ರಗಳನ್ನು ತಮ್ಮ ಎರಡನೇ ಮನೆ ಎಂದು ಪರಿಗಣಿಸುತ್ತವೆ. ಈ ಕ್ಷೇತ್ರಗಳ ಸಂಬಂಧ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Lok Sabha Pre Poll Survey: ಬಿಹಾರದಲ್ಲಿ ಎನ್‌ಡಿಎಗೆ 32, ಇಂಡಿಯಾ ಕೂಟಕ್ಕೆ 8 ಸ್ಥಾನ ಎಂದ ಸಮೀಕ್ಷೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Padma Awards 2024 : ವೈಜಯಂತಿಮಾಲಾ, ಚಿರಂಜೀವಿ ಸೇರಿದಂತೆ ಹಲವು ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

Padma Awards 2024: 90 ವರ್ಷದ ಬಾಲಿ ಮತ್ತು ಚಿರಂಜೀವಿ ಅವರಿಗೆ ಪದ್ಮವಿಭೂಷಣ, ಬೀವಿ, ಕಾಮಾ, ರಾಜಗೋಪಾಲ್, ವಿಜಯಕಾಂತ್, ರಿಂಪೋಚೆ ಮತ್ತು ವ್ಯಾಸ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಬೀವಿ, ವಿಜಯಕಾಂತ್ ಮತ್ತು ರಿಂಪೋಚೆ ಅವರ ಕುಟುಂಬ ಸದಸ್ಯರು ಪ್ರಶಸ್ತಿಗಳನ್ನು ಸ್ವೀಕರಿಸಿದರು.

VISTARANEWS.COM


on

Padma Awards 2024
Koo

ಬೆಂಗಳೂರು: ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ತೆಲುಗು ತಾರೆ ಕೊನಿಡೆಲಾ ಚಿರಂಜೀವಿ, ಸುಪ್ರೀಂ ಕೋರ್ಟ್ ನ ಮೊದಲ ಮಹಿಳಾ ನ್ಯಾಯಾಧೀಶೆ ದಿವಂಗತ ಎಂ ಫಾತಿಮಾ ಬೀವಿ ಮತ್ತು ‘ಬಾಂಬೆ ಸಮಾಚಾರ್’ ಮಾಲೀಕ ಹಾರ್ಮುಸ್ಜಿ ಎನ್ ಕಾಮಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಪದ್ಮ ಪ್ರಶಸ್ತಿಗಳನ್ನು (Padma Awards 2024) ಪ್ರದಾನ ಮಾಡಿದರು. ಕನ್ನಡಿಗ ಶ್ರೀಧರ್ ಕೃಷ್ಣ ಮೂರ್ತಿ ಅವರಿಗೂ ಇದೇ ವೇಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಿಜೆಪಿ ನಾಯಕ ಒ.ರಾಜಗೋಪಾಲ್, ಲಡಾಕ್​ನ ಆಧ್ಯಾತ್ಮಿಕ ನಾಯಕ ತೊಗ್ಡಾನ್ ರಿಂಪೋಚೆ, ತಮಿಳು ನಟ ದಿವಂಗತ ಕ್ಯಾಪ್ಟನ್ ವಿಜಯಕಾಂತ್ (ಇಬ್ಬರೂ ಮರಣೋತ್ತರ), ಗುಜರಾತಿ ಪತ್ರಿಕೆ ‘ಜನ್ಮಭೂಮಿ’ ಸಮೂಹ ಸಂಪಾದಕ ಮತ್ತು ಸಿಇಒ ಕುಂದನ್ ವ್ಯಾಸ್ ಅವರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

90 ವರ್ಷದ ಬಾಲಿ ಮತ್ತು ಚಿರಂಜೀವಿ ಅವರಿಗೆ ಪದ್ಮವಿಭೂಷಣ, ಬೀವಿ, ಕಾಮಾ, ರಾಜಗೋಪಾಲ್, ವಿಜಯಕಾಂತ್, ರಿಂಪೋಚೆ ಮತ್ತು ವ್ಯಾಸ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಬೀವಿ, ವಿಜಯಕಾಂತ್ ಮತ್ತು ರಿಂಪೋಚೆ ಅವರ ಕುಟುಂಬ ಸದಸ್ಯರು ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ.

Continue Reading

Latest

Ranveer Singh: 2 ಕೋಟಿ ರೂ. ಮೌಲ್ಯದ ವಜ್ರದ ನೆಕ್ಲೇಸ್ ಧರಿಸಿ ಗಮನ ಸೆಳೆದ ರಣವೀರ್ ಸಿಂಗ್

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh) ಮುಂಬಯಿನಲ್ಲಿ ಬುಧವಾರ ನಡೆದ ಕ್ಲಾಸಿ ಗಾಲಾದಲ್ಲಿ ಭಾಗವಹಿಸಿದ್ದು ಬಿಳಿ ಬಣ್ಣದ ಧಿರಿಸಿಗೆ ಮ್ಯಾಚಿಂಗ್ ಆಗಿ ಹೈ ಹೀಲ್ಸ್ ಧರಿಸಿದ್ದರು. ಜೊತೆಗೆ ಅವರು ಹಾಕಿದ್ದ ದಪ್ಪನಾದ ವಜ್ರದ ನೆಕ್ಲೇಸ್ ಎಲ್ಲರ ಗಮನ ಅವರತ್ತ ಸೆಳೆಯುವಂತೆ ಮಾಡಿತ್ತು.

VISTARANEWS.COM


on

By

Ranveer Singh
Koo

ಬಹು ದಿನಗಳ ಬಳಿಕ ಮುಂಬಯಿಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh) ದುಬಾರಿ ಮೌಲ್ಯದ ವಜ್ರದ ನೆಕ್ಲೆಸ್ (diamond necklace), ಹೈ ಹೀಲ್ಸ್ ನೊಂದಿಗೆ (high heels) ಬಿಳಿ ಬಣ್ಣದ ದಿರಸಿನಲ್ಲಿ ಜನಮನ ಸೆಳೆದರು. ಬಿಳಿ ಸ್ಯಾಟಿನ್ ಶರ್ಟ್ (white satin shirt) ಮತ್ತು ಮ್ಯಾಚಿಂಗ್ ಪ್ಯಾಂಟ್‌ನಲ್ಲಿ (matching trousers) ರಣವೀರ್ ಸ್ಟೈಲಿಶ್ ಆಗಿ ಕಾಣುತ್ತಿದ್ದರು.

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರು ಮುಂಬಯಿನಲ್ಲಿ ಬುಧವಾರ ನಡೆದ ಕ್ಲಾಸಿ ಗಾಲಾದಲ್ಲಿ ಭಾಗವಹಿಸಿದ್ದರು. ಕೆಲವು ದಿನಗಳ ಬಳಿಕ ನಗರದಲ್ಲಿ ಕಾಣಿಸಿಕೊಂಡ ಅವರು, ಬಿಳಿ ಬಣ್ಣದ ಹೈ ಹೀಲ್ಸ್ ಧರಿಸಿದ್ದು, ಅವರ ದಿರಸಿಗೆ ಮ್ಯಾಚಿಂಗ್ ಆಗಿ ಹೊಳೆಯುತ್ತಿತ್ತು. ದಪ್ಪನಾದ ವಜ್ರದ ನೆಕ್ಲೇಸ್ ಅನ್ನು ಧರಿಸಿದ್ಧ ಅವರು ನಡೆಯುತ್ತಿದ್ದಾಗ ಎಲ್ಲರ ದೃಷ್ಟಿ ಅವರತ್ತ ನೆಟ್ಟಿತ್ತು.

ರಣವೀರ್ ಬಿಳಿ ಸ್ಯಾಟಿನ್ ಶರ್ಟ್ ಮತ್ತು ಮ್ಯಾಚಿಂಗ್ ಪ್ಯಾಂಟ್‌ನಲ್ಲಿ ಕೊಂಚ ಕಪ್ಪಾಗಿ ಕಾಣುತ್ತಿದ್ದರು. ಆದರೆ ಉಬರ್-ಸ್ಟೈಲಿಶ್ ವೈಟ್ ಬೆಲ್ಟ್‌ನೊಂದಿಗೆ ತಮ್ಮ ಧಿರಿಸನ್ನು ಪೂರ್ಣಗೊಳಿಸಿದ ಅವರು ನೀಲಿ ಬಣ್ಣದ ಸನ್ ಗ್ಲಾಸ್ ಧರಿಸಿದ್ದರು. ಆದರೆ ಈ ಸಂದರ್ಭದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು ಅವರು ಧರಿಸಿದ್ದ ಡೈಮಂಡ್ ನೆಕ್ಲೇಸ್.

ಎಷ್ಟು ಮೌಲ್ಯ?

ರಣವೀರ್ ಅವರು ಆಭರಣ ಸಂಗ್ರಹವನ್ನು ಇಷ್ಟಪಡುತ್ತಾರೆ. ಅವರಲ್ಲಿ ಸಾಕಷ್ಟು ಸಂಗ್ರಹವೂ ಇದೆ. ಬಿಳಿ ಬಣ್ಣದ ಸೂಟ್ ನೊಂದಿಗೆ ಅವರು 2 ಕೋಟಿ ರೂಪಾಯಿ ಮೌಲ್ಯದ ಬೆಸ್ಪೋಕ್ ಟಿಫಾನಿ ನೆಕ್ಲೇಸ್ ಅನ್ನು ಧರಿಸಿರುವುದು ಅವರ ಲುಕ್ ಗೆ ಹೆಚ್ಚಿನ ಮೆರುಗು ನೀಡಿತ್ತು. ದಪ್ಪನಾದ ಹೀಲ್ಸ್‌ಗಳನ್ನು ಧರಿಸಿ ಫೋಟೋಗಳಿಗೆ ಪೋಸ್ ನೀಡಿದ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ತಮ್ಮ ಆಭರಣ ಪ್ರೀತಿಯ ಬಗ್ಗೆ ಮಾತನಾಡಿದ ರಣವೀರ್ ಸಿಂಗ್, ವೈಯಕ್ತಿಕ, ಭಾವನಾತ್ಮಕ ಮೌಲ್ಯವನ್ನು ಹೊಂದಿರುವ ಆಭರಣಗಳು ನನ್ನ ನೆಚ್ಚಿನ, ಅತ್ಯಂತ ಪ್ರಿಯವಾದ ತುಣುಕುಗಳಾಗಿವೆ. ಇದರಲ್ಲಿ ಮದುವೆಯ ಉಂಗುರವೂ ಒಂದು. ಇದು ನನ್ನ ಹೆಂಡತಿ ದೀಪಿಕಾ ಪಡುಕೋಣೆ ನನಗೆ ಉಡುಗೊರೆಯಾಗಿ ನೀಡಿರುವುದು. ಇನ್ನೊಂದು ಪ್ಲಾಟಿನಂ ಎಂಗೇಜ್‌ಮೆಂಟ್ ರಿಂಗ್ ಆಗಿದೆ. ತದನಂತರ ಸಹಜವಾಗಿ ನನ್ನ ತಾಯಿಯ ವಜ್ರದ ಕಿವಿಯೋಲೆಗಳು ಮತ್ತು ನನ್ನ ಅಜ್ಜಿಯ ಮುತ್ತುಗಳು ಎಂದು ತಿಳಿಸಿದರು.


ಮೊದಲ ಮಗುವಿನ ನಿರೀಕ್ಷೆ

ಪತ್ನಿ ದೀಪಿಕಾ ಪಡುಕೋಣೆ ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಣವೀರ್ ದೀರ್ಘ ಸಮಯದ ಬಳಿಕ ಬುಧವಾರ ಮುಂಬಯಿಗೆ ಮರಳಿದ್ದಾರೆ. ಗರ್ಭಧಾರಣೆಯ ಘೋಷಣೆಯ ಅನಂತರ ದಂಪತಿ ತಮ್ಮ ಸಂಪೂರ್ಣ ಗಮನವನ್ನು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಕೇಂದ್ರೀಕರಿಸಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.

ಇದನ್ನೂ ಓದಿ: Janhvi Kapoor: ಕ್ರಿಕೆಟ್ ಥಿಮ್‌ ಡ್ರೆಸ್‌ನಲ್ಲಿ ಪೋಸ್‌ ಕೊಟ್ಟ ಜಾನ್ವಿ ಕಪೂರ್; ಚೆಂಡಿದೆ ಬೆನ್ನ ಹಿಂದೆ!

ಚಿತ್ರೀಕರಣದಲ್ಲೂ ಬ್ಯುಸಿ

ಸದ್ಯ ರಣವೀರ್ ಫರ್ಹಾನ್ ಅಖ್ತರ್ ಅವರ ಡಾನ್ ಫ್ರ್ಯಾಂಚೈಸ್‌ನಲ್ಲಿ ಹೊಸ ಡಾನ್ ಆಗಲು ಸಿದ್ಧರಾಗಿದ್ದಾರೆ. ಇದನ್ನು ಮೊದಲು ಶಾರುಖ್ ಖಾನ್ ಗಾಗಿ ನಿರ್ಮಿಸಲಾಗಿತ್ತು. ಇದಲ್ಲದೇ ರಣವೀರ್ ಹನುಮಾನ್ ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಮುಂದಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

Continue Reading

ಪ್ರಮುಖ ಸುದ್ದಿ

Racist Comment : ಭಾರತದಲ್ಲಿ ನೀಗ್ರೊಗಳಿದ್ದಾರೆ…; ಇದೀಗ ಬಂಗಾಳ ಕಾಂಗ್ರೆಸ್​​ ಅಧ್ಯಕ್ಷರ ಸರದಿ

Racist Comment: ಭಾರತದಲ್ಲಿ ಹಲವಾರು ಜನಾಂಗಗಳು ಇರುವುದನ್ನು ನಮಗೆ ಶಾಲೆಗಳಲ್ಲಿ ಕಲಿಸಲಾಗಿದೆ. ಎಲ್ಲರೂ ಒಂದೇ ರೀತಿ ಕಾಣುವುದಿಲ್ಲ. ಕೆಲವರು ಕಪ್ಪು ಹಾಗೂ ಇನ್ನುಳಿದವರು ಬಿಳಿ ಬಣ್ಣದವರು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಪಿತ್ರೋಡಾ ಹೇಳಿಕೆ ನೀಡಿದ ಬಳಿಕ ಸಾಗರೋತ್ತರ ಕಾಂಗ್ರೆಸ್​್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

VISTARANEWS.COM


on

Racial Comments
Koo

ನವದೆಹಲಿ: ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಗುರುವಾರ ಸ್ಯಾಮ್ ಪಿತ್ರೋಡಾ (Sam Pitroda) ಅವರ “ಜನಾಂಗೀಯ” ಹೇಳಿಕೆಯನ್ನು (Racist Comment) ಸಮರ್ಥಿಸಿಕೊಂಡಿದ್ದು, ಭಾರತದಲ್ಲೂ ಕಪ್ಪು ಚರ್ಮದವರನ್ನು (ನಿಗ್ರೊಗಳು) ಹೋಲುವ ಜನರಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ವಿವಾದಕ್ಕೆ ಇನ್ನಷ್ಟು ತುಪ್ಪ ಸುರಿದಿದೆ. ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಕಾಣುತ್ತಾರೆ ಎಂಬ ಸ್ಯಾಮ್​ ಪಿತ್ರೊಡಾ ಹೇಳಿಕೆಯು ಬಿಜೆಪಿಯಿಂದ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಚರ್ಮದ ಬಣ್ಣವನ್ನು ಆಧರಿಸಿ ಭಾರತೀಯರಿಗೆ ಅಗೌರವ ತೋರಿದೆ ಎಂಬ ಆರೋಪ ಮಾಡಿತ್ತು. ಅದರ ಬೆನ್ನಲ್ಲೇ ಚೌಧರಿ ತನ್ನ ಹೇಳಿಕೆ ನೀಡಿದ್ದಾರೆ.

“ನಮ್ಮಲ್ಲಿ ಪ್ರೋಟೋ ಆಸ್ಟ್ರಲಾಯ್ಡ್ಗಳು, ಮಂಗೋಲಾಯ್ಡ್ಗಳು ಮತ್ತು ನೆಗ್ರಿಟೊ ವರ್ಗದ ಜನರಿದ್ದಾರೆ. ನಮ್ಮ ದೇಶದ ಜನರ ಪ್ರಾದೇಶಿಕ ಲಕ್ಷಣಗಳು ವಿಭಿನ್ನವಾಗಿವೆ. ಪಿತ್ರೋಡಾ ಅವರು ನೀಡಿರುವುದು ವೈಯಕ್ತಿಕ ಅಭಿಪ್ರಾಯ. ಅದರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ” ಎಂದು ಚೌಧರಿ ಪಕ್ಷದ ಕಚೇರಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಭಾರತದಲ್ಲಿ ಹಲವಾರು ಜನಾಂಗಗಳು ಇರುವುದನ್ನು ನಮಗೆ ಶಾಲೆಗಳಲ್ಲಿ ಕಲಿಸಲಾಗಿದೆ. ಎಲ್ಲರೂ ಒಂದೇ ರೀತಿ ಕಾಣುವುದಿಲ್ಲ. ಕೆಲವರು ಕಪ್ಪು ಹಾಗೂ ಇನ್ನುಳಿದವರು ಬಿಳಿ ಬಣ್ಣದವರು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಪಿತ್ರೋಡಾ ಹೇಳಿಕೆ ನೀಡಿದ ಬಳಿಕ ಸಾಗರೋತ್ತರ ಕಾಂಗ್ರೆಸ್​್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಚೌಧರಿ ಹೇಳಿಕೆಗೆ ಕಾಂಗ್ರೆಸ್ ಇನ್ನೂ ಪ್ರತಿಕ್ರಿಯಿಸಿಲ್ಲ.

ದಿ ಸ್ಟೇಟ್ಸ್​ಮನ್​​ಗೆ ಪಿತ್ರೋಡಾ ನೀಡಿದ್ದ ಸಂದರ್ಶನದ ಆಯ್ದ ಭಾಗವನ್ನು ಬುಧವಾರ ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಅವರು ಭಾರತವನ್ನು ವೈವಿಧ್ಯಮಯ ದೇಶ. ಪೂರ್ವದ ಜನರು ಚೀನೀಯರಂತೆ ಕಾಣುತ್ತಾರೆ. ಉತ್ತರದ ಜನರು ಬಿಳಿಯರಂತೆ ಕಾಣುತ್ತಾರೆ ಮತ್ತು ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ ಎಂದು ಹೇಳಿಕೆ ನೀಡಿದ್ದರು. ಪಿತ್ರೊಡಾ ಅವರ ವಿವಾದಾತ್ಮಕ ಹೇಳಿಕೆಯ ನಂತರ ಕಾಂಗ್ರೆಸ್ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಚರ್ಮದ ಬಣ್ಣದ ಆಧಾರದ ಮೇಲೆ ಅಗೌರವವನ್ನು ಸಹಿಸುವುದಿಲ್ಲ ಎಂದು ಟೀಕಿಸಿದ್ದರು.

ಈ ಹೇಳಿಕೆಯ ಕೆಲವೇ ಗಂಟೆಗಳ ನಂತರ ಪಿತ್ರೋಡಾ ಅವರು ಕಾಂಗ್ರೆಸ್ ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪಿತ್ರೋಡಾ ಅವರ ಸ್ವಂತ ಇಚ್ಛೆಯಿಂದ ರಾಜೀನಾಮೆ ನೀಡಲಾಗಿದೆ ಎಂದು ಪಕ್ಷದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Maldives anti-India stance : ಭಾರತ ವಿರೋಧಿ ಕ್ರಮಕ್ಕೆ ಪಶ್ಚಾತಾಪ ವ್ಯಕ್ತಪಡಿಸಿದ ಮಾಲ್ಡೀವ್ಸ್​​

Maldives anti-India stance: ಭಾರತ ವಿರೋಧಿ ಹೇಳಿಕೆಗಳು ನಮ್ಮ ಸರ್ಕಾರದ ನಿಲುವಲ್ಲ ಎಂದು ನಾವು ಆರಂಭದಲ್ಲಿಯೇ ಹೇಳಿದ್ದೇವೆ. ಅದನ್ನು ಮಾಡಬಾರದಿತ್ತು ಎಂಬುದನ್ನೂ ಅರಿತುಕೊಂಡಿದ್ದೇವೆ. ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ನಾವು ಸರಿಯಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪು ತಿಳುವಳಿಕೆ ಸೃಷ್ಟಿಯಾಗಿದೆ. ಏನಾಯಿತು ಎಂದು ಮಾಲ್ಡೀವ್ಸ್ ಮತ್ತು ಭಾರತದ ಸರ್ಕಾರಗಳು ಅರ್ಥಮಾಡಿಕೊಂಡಿವೆ” ಎಂದು ಮಾಲ್ಡೀವ್ಸ್ ಸಚಿವರು ಹೇಳಿಕೆ ನೀಡಿದ್ದಾರೆ.

VISTARANEWS.COM


on

Maldives anti-India stance
Koo

ನವ ದೆಹಲಿ: ಭಾರತದ ವಿರುದ್ಧ ನೀಡಿರುವ ಹೇಳಿಕೆ ಬಗ್ಗೆ ಮಾಲ್ಡೀವ್ಸ್ ಪಶ್ಚಾತಾಪ ವ್ಯಕ್ತಪಡಿಸಿದೆ. ಅವಹೇಳನಕಾರಿ ಹೇಳಿಕೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ದ್ವೀಪ ರಾಷ್ಟ್ರ ವಿದೇಶಾಂಗ ಸಚಿವ ಮೂಸಾ ಜಮೀರ್ ಗುರುವಾರ ಭರವಸೆ ನೀಡಿದ್ದಾರೆ. ಭಾರತ ಭೇಟಿಯಲ್ಲಿರುವ ಜಮೀರ್, ಮಾಲ್ಡೀವ್ಸ್ ಮತ್ತು ಭಾರತ ಸರ್ಕಾರಗಳು ಆಗಿರುವ ವಿಷಯಗಳನ್ನು ಅರ್ಥಮಾಡಿಕೊಂಡಿವೆ. ಆ ಹಂತವನ್ನು ದಾಟಿದ್ದೇವೆ. ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

“ಭಾರತ ವಿರೋಧಿ ಹೇಳಿಕೆಗಳು ನಮ್ಮ ಸರ್ಕಾರದ ನಿಲುವಲ್ಲ ಎಂದು ನಾವು ಆರಂಭದಲ್ಲಿಯೇ ಹೇಳಿದ್ದೇವೆ. ಅದನ್ನು ಮಾಡಬಾರದಿತ್ತು ಎಂಬುದನ್ನೂ ಅರಿತುಕೊಂಡಿದ್ದೇವೆ. ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ನಾವು ಸರಿಯಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪು ತಿಳುವಳಿಕೆ ಸೃಷ್ಟಿಯಾಗಿದೆ. ಏನಾಯಿತು ಎಂದು ಮಾಲ್ಡೀವ್ಸ್ ಮತ್ತು ಭಾರತದ ಸರ್ಕಾರಗಳು ಅರ್ಥಮಾಡಿಕೊಂಡಿವೆ” ಎಂದು ಮಾಲ್ಡೀವ್ಸ್ ಸಚಿವರು ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರು ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಮೋದಿ ಲಕ್ಷ್ಮ ದ್ವೀಪಕ್ಕೆ ಭೇಟಿ ನೀಡಿದ್ದ ಬಳಿಕ ಅವರು ಈ ಅನಪೇಕ್ಷಿತ ಹೇಳಿಕೆಗಳನ್ನು ಕೊಟ್ಟಿದ್ದರು. ನಂತರ ಉಭಯ ದೇಶಗಳ ನಡುವಿನ ಸಂಬಂಧದ ಹದಗೆಟ್ಟಿತ್ತು.

ಭಾರತೀಯ ಮಿಲಿಟರಿ ಸಿಬ್ಬಂದಿ ಮಾಲ್ಡೀವ್ಸ್ ತೊರೆಯಲು ಮೊಹಮ್ಮದ್ ಮುಯಿಝು ಮೇ 10 ರ ಗಡುವನ್ನು ನಿಗದಿಪಡಿಸಿದ ನಂತರ ಸಂಬಂಧಗಳು ಮತ್ತಷ್ಟು ಹಾಳಾಗಿದ್ದವು. ಏತನ್ಮಧ್ಯೆ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮೂಸಾ ಜಮೀರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತ-ಮಾಲ್ಡೀವ್ಸ್ ಸಂಬಂಧಗಳ ಅಭಿವೃದ್ಧಿಯು “ಪರಸ್ಪರ ಹಿತಾಸಕ್ತಿಗಳನ್ನು” ಆಧರಿಸಿದೆ ಎಂದು ಒಪ್ಪಿಕೊಂಡಿದ್ದಾರೆ.

ಮಾಲ್ಡೀವ್ಸ್ ಮತ್ತು ಭಾರತದ ನಡುವೆ ದ್ವಿಪಕ್ಷೀಯ ಮತ್ತು ಅಂತರರಾಷ್ಟ್ರೀಯ ಸಂಬಂಧ ವೃದ್ಧಿಸುವ ಮತ್ತು ಪರಸ್ಪರ ವಿನಿಮಯ ಹೆಚ್ಚಿಸುವ ಬಗ್ಗೆ ನಾವು ನಮ್ಮ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ಜಮೀರ್ ಸಭೆಯ ನಂತರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್​ 1100 ಅಂಕಗಳಷ್ಟು ಪತನ

ಪ್ರವಾಸೋದ್ಯಮ ಕುಸಿತದ ಬಗ್ಗೆ ಪ್ರತಿಕ್ರಿಯೆ

ಮಾಲ್ಡೀವ್ಸ್ ಗೆ ಪ್ರಯಾಣಿಸಲು ಬಯಸುವ ಎಲ್ಲಾ ಭಾರತೀಯರಿಗೆ ವೈಯಕ್ತಿಕವಾಗಿ ಮತ್ತು ಮಾಲ್ಡೀವ್ಸ್ ಜನರ ಪರವಾಗಿ ಆತ್ಮೀಯ ಸ್ವಾಗತ ನೀಡಲು ಬಯಸುತ್ತೇನೆ ಎಂದು ಪ್ರವಾಸೋದ್ಯಮ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಮಾಲ್ಡೀವ್ಸ್​ಗೆ ಭೇಟಿ ನೀಡುವುದನ್ನು ಮುಂದುವರಿಸಲು ನಾವು ಎಲ್ಲಾ ಭಾರತೀಯ ಪ್ರವಾಸಿಗರನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಭಾರತೀಯ ಪ್ರಯಾಣಿಕರು ನಿಜವಾಗಿಯೂ ಮಾಲ್ಡೀವ್ಸ್​​​ಗೆ ಗಮನಾರ್ಹ ಸಂಖ್ಯೆಯಲ್ಲಿ ಆಗಮಿಸಿದರು. ಆ ಪ್ರವೃತ್ತಿ ಮುಂದುವರೆದಿದೆ. ಕಳೆದ ಎರಡು ತಿಂಗಳುಗಳಲ್ಲಿ, ನಾವು 16 ರಿಂದ 17% ಹೆಚ್ಚಳ ಕಂಡಿದ್ದೇವೆ. ಭಾರತೀಯ ಮಾರುಕಟ್ಟೆಗಳಲ್ಲಿ ಇಳಿಕೆ ಕಂಡುಬಂದಿದ್ದರೂ, ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

Continue Reading
Advertisement
IPL 2024
ಪ್ರಮುಖ ಸುದ್ದಿ42 mins ago

IPL 2024 : ಆರ್​ಸಿಬಿಗೆ ಐದನೇ ವಿಜಯ, ಪಂಜಾಬ್​ ವಿರುದ್ಧ 60 ರನ್ ಭರ್ಜರಿ ಗೆಲುವು

Padma Awards 2024
ಪ್ರಮುಖ ಸುದ್ದಿ1 hour ago

Padma Awards 2024 : ವೈಜಯಂತಿಮಾಲಾ, ಚಿರಂಜೀವಿ ಸೇರಿದಂತೆ ಹಲವು ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

Prajwal Revanna Case
ಪ್ರಮುಖ ಸುದ್ದಿ2 hours ago

Prajwal Revanna Case : ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ಲೈಂಗಿಕ ಕಿರುಕುಳ ಕೇಸ್​ ದಾಖಲು

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ3 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

T20 World Cup 2024
ಪ್ರಮುಖ ಸುದ್ದಿ3 hours ago

T20 World Cup : ವಿಶ್ವ ಕಪ್​ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್​​ಕೆ ಆಟಗಾರನಿಗೂ ಚಾನ್ಸ್​​

ಉತ್ತರ ಕನ್ನಡ3 hours ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾರ್ವಭೌಮ ಗುರುಕುಲಕ್ಕೆ ಶೇ.100 ಫಲಿತಾಂಶ

Yallapur Vishwadarshana Group of institutions performed well in SSLC Result 2024
ಉತ್ತರ ಕನ್ನಡ3 hours ago

SSLC Result 2024: ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

women's Cricket team
ಕ್ರೀಡೆ3 hours ago

Womens Cricket Team : ಬಾಂಗ್ಲಾ ವಿರುದ್ಧ 5-0 ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

Mother passed SSLC exam with her son in Hassan
ಕರ್ನಾಟಕ4 hours ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್!

Failed in SSLC Exam Student suicide in mandya
ಮಂಡ್ಯ4 hours ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌; ನೇಣಿಗೆ ಶರಣಾದ ವಿದ್ಯಾರ್ಥಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ3 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ4 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ5 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ11 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ11 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ12 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು12 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ12 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು14 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

ಟ್ರೆಂಡಿಂಗ್‌