ವಿಚ್ಛೇದನ; ಪತ್ನಿಯೇ ಪತಿಗೆ 5 ಸಾವಿರ ರೂ. ಜೀವನಾಂಶ ಕೊಡಲು ಕೋರ್ಟ್‌ ಆದೇಶ! - Vistara News

ವೈರಲ್ ನ್ಯೂಸ್

ವಿಚ್ಛೇದನ; ಪತ್ನಿಯೇ ಪತಿಗೆ 5 ಸಾವಿರ ರೂ. ಜೀವನಾಂಶ ಕೊಡಲು ಕೋರ್ಟ್‌ ಆದೇಶ!

Viral news: ವಿಚ್ಛೇದನ ಸಂದರ್ಭದಲ್ಲಿ ಪತ್ನಿಗೆ ಪತಿ ಜೀವನಾಂಶ ನೀಡುವುದು ವಾಡಿಕೆ. ಆದರೆ ಇಂದೋರ್‌ನ ಕೋರ್ಟ್‌ ಮಹತ್ವದ ತೀರ್ಪು ನೀಡಿ ಪತ್ನಿಯೇ ಪತಿಗೆ ಜೀವನಾಂಶ ಕೊಡಬೇಕು ಎಂದು ಆದೇಶ ಹೊರಡಿಸಿದೆ.

VISTARANEWS.COM


on

divorce
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭೋಪಾಲ್‌: ಮಧ್ಯ ಪ್ರದೇಶದ ಇಂದೋರ್‌ನ ಕೌಟುಂಬಿಕ ನ್ಯಾಯಾಲಯ (Indore family court)ವು ಮಹತ್ವದ ತೀರ್ಪು ನೀಡಿ, ವಿಚ್ಛೇದನದ ಬಳಿಕ ನಿರುದ್ಯೋಗಿ ಪತಿಗೆ ಪ್ರತಿ ತಿಂಗಳು 5 ಸಾವಿರ ರೂ. ಜೀವನಾಂಶ ನೀಡುವಂತೆ ಬ್ಯೂಟಿ ಪಾರ್ಲರ್‌ ಹೊಂದಿರುವ ಪತ್ನಿಗೆ ಆದೇಶಿಸಿದೆ (Viral news).

ʼʼಪತ್ನಿಯ ಒತ್ತಾಯದ ಮೇರೆಗೆ ಕಾಲೇಜು ತೊರೆದು ನಿರುದ್ಯೋಗಿಯಾಗಿದ್ದೆ. ಆದರೆ ತನ್ನ ಪತ್ನಿ ನಂದಿನಿ (22) ಇಂದೋರ್‌ನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆʼʼ ಎಂದು 23 ವರ್ಷದ ಅಮನ್ ಕುಮಾರ್ ನೀಡಿರುವ ಹೇಳಿಕೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಈ ವಿಶೇಷ ತೀರ್ಪು ಪ್ರಕಟಿಸಿದೆ.

ಅಮನ್‌ ಪರ ವಾದ ಮಂಡಿಸಿದ ವಕೀಲ ಮನೀಷ್‌ ಝರೋಲಾ ಈ ಬಗ್ಗೆ ಮಾತನಾಡಿ, ʼʼನಾವು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಜೀವನಾಂಶವಲ್ಲದೆ ವ್ಯಾಜ್ಯ ಮುಂದುವರಿಸುವುದಕ್ಕೆ ಸಂಬಂಧಿಸಿದ ವೆಚ್ಚವನ್ನೂ ನೀಡುವಂತೆ ನಂದಿನಿಗೆ ಸೂಚಿಸಿದೆʼʼ ಎಂದು ತಿಳಿಸಿದ್ದಾರೆ.

ʼʼಉಜ್ಜಯಿನಿ ಮೂಲದ ಅಮನ್‌ಗೆ ಸ್ನೇಹಿತರೊಬ್ಬರ ಮುಖಾಂತರ 2020ರಲ್ಲಿ ನಂದಿನಿಯ ಪರಿಚಯವಾಗಿತ್ತು. ಆ ಪರಿಚಯ ಬಳಿಕ ಸಲುಗೆಗೆ ತಿರುಗಿತ್ತು. ನಂತರ ನಂದಿನಿ ಮದುವೆಯಾಗುವಂತೆ ಕೇಳಿಕೊಂಡಿದ್ದರು. ಆದರೆ ಅಮನ್‌ ಇದಕ್ಕೆ ಆರಂಭದಲ್ಲಿ ಒಪ್ಪಿಗೆ ಸೂಚಿಸಿರಲಿಲ್ಲ. ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕ‍್ಳಳುವುದಾಗಿ ನಂದಿನಿ ಬೆದರಿಕೆ ಒಡ್ಡಿದ್ದರು. ಹೀಗಾಗಿ ಅನಿವಾರ್ಯವಾಗಿ ಅಮನ್‌ 2021ರ ಜುಲೈಯಲ್ಲಿ ಆರ್ಯ ಸಮಾಜ ಮಂದಿರದಲ್ಲಿ ನಂದಿನಿಯನ್ನು ವರಿಸಿದ್ದರು. ಬಳಿಕ ಅವರು ಇಂದೋರ್‌ನಲ್ಲಿ ಜೀವನ ಸಾಗಿಸಲು ಆರಂಭಿಸಿದ್ದರುʼʼ ಎಂದು ಮನೀಷ್‌ ಪ್ರಕರಣದ ಹಿನ್ನೆಲೆ ವಿವರಿಸಿದ್ದಾರೆ.

ʼʼಮದುವೆ ಬಳಿಕ ನಂದಿನಿಯ ಮನೆಯವರು ತೊಂದರೆ ಕೊಡಲಾರಂಭಿಸಿದರು. ಮಾತ್ರವಲ್ಲ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳ್ಳುವಂತೆ ಮಾಡಿದರು. ಹೀಗಾಗಿ ಕೆಲವೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್‌ನಲ್ಲಿ ಪೋಷಕರ ಮನೆಗೆ ಮರಳಿದೆ. ಬಳಿಕ ಇಬ್ಬರು ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದೆವುʼʼ ಎಂದು ಅಮನ್‌ ತಿಳಿಸಿದ್ದಾರೆ.

ಅತ್ತ ಅಮನ್‌ ಪೋಷಕರ ಮನೆಗೆ ತೆರಳಿದಾಗ ನಂದಿನಿ ನಾಪತ್ತೆಯ ದೂರು ದಾಖಲಿಸಿದ್ದರು. ಇತ್ತ ಅಮನ್‌ ಉಜ್ಜಯಿನಿ ಪೊಲೀಸ್‌ ಠಾಣೆಗೆ, ನಂದಿನಿ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಜತೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಜೀವನಾಂಶವನ್ನು ಕೋರಿದ್ದರು. ಇದಕ್ಕೆ ಪ್ರತಿಯಾಗಿ 2021ರ ಡಿಸೆಂಬರ್‌ನಲ್ಲಿ ಮತ್ತೊಮ್ಮೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಂದಿನಿ ಅಮನ್‌ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ನೀಡಿದ್ದರು. 2023ರ ಡಿಸೆಂಬರ್‌ನಲ್ಲಿ ಅಮನ್‌ ಇಂದೋರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತನ್ನ ಮದುವೆಯನ್ನು ಅಸಿಂಧು ಎಂದು ಪರಿಗಣಿಸುವಂತೆ ಕೋರಿದ್ದರು. ಫೆಬ್ರವರಿ 21ರಂದು ನಡೆದ ವಿಚಾರಣೆಯ ಸಮಯದಲ್ಲಿ ನಂದಿನಿ ತಾನು ಅಮನ್ ಅವರೊಂದಿಗೆ ವಾಸಿಸಲು ಇಚ್ಛಿಸುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: Viral News: ಅಂಗವೈಕಲ್ಯತೆ ಇದ್ದರೂ ಸ್ವಾಭಿಮಾನದ ಬದುಕು; ಈ ಫುಡ್‌ ಡೆಲಿವರಿ ಏಜೆಂಟ್‌ ವಿಲ್‌ ಪವರ್‌ಗೆ ನೆಟ್ಟಿಗರ ಬಹುಪರಾಕ್‌

ʼʼತಾನು ನಿರುದ್ಯೋಗಿ ಮತ್ತು ಅಮನ್‌ ಉದ್ಯೋಗದಲ್ಲಿದ್ದಾರೆ ಎಂದು ನ್ಯಾಯಾಲಯಕ್ಕೆ ನಂದಿನಿ ಸುಳ್ಳು ಮಾಹಿತಿ ನೀಡಿದ್ದರು. ಅಲ್ಲದೆ ಅವರ ಹೇಳಿಕೆಯಲ್ಲಿ ಅನೇಕ ಗೊಂದಲಗಳಿರುವುದನ್ನು ಗಮನಿಸಿ ನ್ಯಾಯಾಲಯ ನಂದಿನಿ ಅರ್ಜಿಯನ್ನು ತಳ್ಳಿ ಹಾಕಿದೆ. ಅಲ್ಲದೆ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆʼʼ ಎಂದು ಮನೀಷ್‌ ಹೇಳಿದ್ದಾರೆ.

ನಿಯಮ ಏನು ಹೇಳುತ್ತದೆ?

ಹಿಂದೂ ವಿವಾಹ ಕಾಯ್ದೆ 1955 (Hindu Marriage Act, 1955)ರ ಅಡಿಯಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಜೀವನಾಂಶವನ್ನು ಕೋರಬಹುದಾಗಿದೆ. ಜೀವನಾಂಶಕ್ಕಾಗಿ ಲಿಂಗ ಮತ್ತು ಧರ್ಮ ತಟಸ್ಥ ಏಕರೂಪದ ನಿಬಂಧನೆಯನ್ನು ಕೋರಿ 2020ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

Viral Video: ಇಂದಿನ ಯುವಜನಾಂಗಕ್ಕೆ ಸೋಷಿಯಲ್ ಮೀಡಿಯಾದ್ದೇ ಗೀಳು. ಏನೇ ಮಾಡಿದರೂ ಅದನ್ನು ರೀಲ್ಸ್ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಅದಕ್ಕೆ ಬರುವ ಲೈಕ್ಸ್, ಕಮೆಂಟ್‌ಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದ ಆಚೆಗೂ ಒಂದು ಬದುಕಿದೆ, ತಮ್ಮನ್ನು ನಂಬಿಕೊಂಡುವರು ಇದ್ದಾರೆ ಎಂಬ ಸೂಕ್ಷ್ಮ ಕೂಡ ಇಲ್ಲದೇ ಬದುಕುತ್ತಿದ್ದಾರೆ. ರೀಲ್ಸ್‌ಗಾಗಿ ಯಾವ ಸರ್ಕಸ್ ಮಾಡುವುದಕ್ಕೆ ಕೂಡ ಹಿಂದೆ-ಮುಂದೆ ನೋಡಲ್ಲ. ಇಲ್ಲೊಬ್ಬಳು ಹುಡುಗಿ ತನ್ನ ಜೀವವನ್ನೇ ಪಣಕ್ಕಿಟ್ಟು ರೀಲ್ಸ್ ಮಾಡಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

VISTARANEWS.COM


on

Viral Video
Koo

ಪುಣೆ : ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳು ಈಗ ಹೆಚ್ಚು ಟ್ರೆಂಡ್ ಆಗುತ್ತಿದೆ. ಹಾಗಾಗಿ ಯುವಕ-ಯುವತಿಯರು ತಮ್ಮ ಫಾಲೋವರ್ಸ್ ಅನ್ನು ಹೆಚ್ಚಿಸಿಕೊಳ್ಳಲು ಹಾಗೂ ಹೆಚ್ಚು ವೀವ್ಸ್ ಮತ್ತು ಲೈಕ್ಸ್ ಪಡೆಯಲು ಜೀವಕ್ಕೆ ಅಪಾಯವಾಗುವಂತಹ ಸ್ಟಂಟ್ ಗಳನ್ನು ಮಾಡುತ್ತಿದ್ದಾರೆ. ಇದರಿಂದ ಅನೇಕರು ಸಾವನಪ್ಪಿರುವುದು, ಗಾಯಗೊಂಡಿರುವುದು ನಾವು ಆಗಾಗ ನೋಡಿದ್ದೇವೆ. ಆದರೂ ಜನರಿಗೆ ರೀಲ್ಸ್ ಹುಚ್ಚು ಬಿಡುವುದಿಲ್ಲ. ಇದೀಗ ಪುಣೆಯಲ್ಲಿ ಹುಡುಗಿಯೊಬ್ಬಳು, ಹುಡುಗನೊಬ್ಬನ ಕೈಯನ್ನು ಹಿಡಿದುಕೊಂಡು ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡುತ್ತಿರುವ ವಿಡಿಯೊ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಹುಡುಗನೊಬ್ಬ ಕಟ್ಟಡದ ತುದಿಯಲ್ಲಿ ಮಲಗಿದ್ದಾನೆ. ಹುಡುಗಿ ಆತನ ಕೈಯನ್ನು ಹಿಡಿದುಕೊಂಡು ಕಟ್ಟದಿಂದ ಇಳಿಯುತ್ತಿರುವುದನ್ನು ಕಾಣಬಹುದು. ಇನ್ನೊಂದು ಬದಿಯಲ್ಲಿ ಆಕೆಯ ಸ್ನೇಹಿತರು ವಿವಿಧ ಆ್ಯಂಗಲ್ ನಲ್ಲಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೊವನ್ನು ಪುಣೆಯ ಜಂಬುಲ್ವಾಡಿ ಸ್ವಾಮಿನಾರಾಯಣ ಮಂದಿರದ ಬಳಿಯ ಪಾಳುಬಿದ್ದ ಕಟ್ಟಡದಲ್ಲಿ ತೆಗೆಯಲಾಗಿದೆ. ಜೂನ್ 19ರಂದು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಇದಕ್ಕೆ 55,000ಕ್ಕೂ ಹೆಚ್ಚು ವೀವ್ಸ್ ಸಿಕ್ಕಿದೆ ಮತ್ತು ಅನೇಕರು ಅವರ ಮೂರ್ಖತನಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Genitals Removed Case: ಮಲಗುವಾಗ ಗಂಡಾಗಿದ್ದ, ಎದ್ದಾಗ ಹೆಣ್ಣಾಗಿದ್ದ! ಬಲವಂತದಿಂದ ಲಿಂಗ ಪರಿವರ್ತನೆ

ವ್ಯಕ್ತಿಯೊಬ್ಬರು ಈ ವಿಡಿಯೊವನ್ನು ಪುಣೆ ಪೊಲೀಸರಿಗೆ ಟ್ಯಾಗ್ ಮಾಡಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ ಹಲವಾರು ಘಟನೆಗಳು ವರದಿಯಾದ ಮೇಲೂ ಇಂತಹ ಬೇಜವಾಬ್ದಾರಿ ಕೆಲಸ ನಿಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯ. ಫಾಲೋವರ್ಸ್ ಅನ್ನು ಹೆಚ್ಚಿಸಿಕೊಳ್ಳಲು ತನ್ನ ಕುಟುಂಬವನ್ನು ಜೀವನಪರ್ಯಂತ ನರಳುವಂತೆ ಮಾಡುವ ಮನೋಭಾವ ಇದು ಎಂದು ಮತ್ತೊಬ್ಬ ಬಳಕೆದಾರರು ಕಿಡಿಕಾರಿದ್ದಾರೆ.

Continue Reading

Latest

Amithab Bacchan :14ನೇ ವರ್ಷಕ್ಕೆ ಕಾಲಿಟ್ಟ ʼರಾವಣ್ʼ ಚಿತ್ರ; ಮಗನನ್ನು ಹೊಗಳಿ ಸೊಸೆಯನ್ನು ನಿರ್ಲಕ್ಷಿಸಿದ ಅಮಿತಾಭ್!

Amithab Bacchan: ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ತಮ್ಮ ಮಗ ಅಭಿಷೇಕ್ ಬಚ್ಚನ್ ಅಭಿನಯದ ‘ರಾವಣ್’ ಚಿತ್ರ 14ನೇ ವರ್ಷಕ್ಕೆ ಕಾಲಿಟ್ಟ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಷೇಕ್ ಅವರ ನಟನೆಯನ್ನು ಹೊಗಳಿದ್ದಾರೆ. ಆದರೆ ಅದರಲ್ಲಿ ನಟಿಸಿದ ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರ ಬಗ್ಗೆ ಉಲ್ಲೇಖ ಮಾಡಲಿಲ್ಲ. ಇದರಿಂದ ಅಮಿತಾಬ್ ಬಚ್ಚನ್ ಅವರ ಕುಟುಂಬದಲ್ಲಿ ಸಮಸ್ಯೆ ಇರಬೇಕು. ಹಾಗಾಗಿ ಅವರು ತಮ್ಮ ಸೊಸೆಯ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

VISTARANEWS.COM


on

Amithab Bacchan
Koo

ಮುಂಬೈ: ಬಾಲಿವುಡ್‌ ಖ್ಯಾತ ನಟ ಅಮಿತಾಭ್‌ ಬಚ್ಚನ್ (Amithab Bacchan) ತಮ್ಮ ನಟನೆಯ ಮೂಲಕ ಎಲ್ಲರ ಮನ ಸೆಳೆದವರು. ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಜನಪ್ರಸಿದ್ಧರಾಗಿದ್ದಾರೆ. ಇನ್ನು ಬಿಗ್‌ ಬಿ ಕುಟುಂಬವು ಕೂಡ ಸಿನಿಮಾ ರಂಗದಲ್ಲಿ ಹೆಸರು ಮಾಡಿದೆ. ಮಗ ಅಭಿಷೇಕ್ ಬಚ್ಚನ್, ಪತ್ನಿ ಜಯಾ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರು ಕೂಡ ಸಿನಿಮಾ ರಂಗದಲ್ಲಿ ಮಿಂಚಿದವರೇ. ಆದರೆ ಇದೀಗ ನಟ ಅಮಿತಾಭ್ ಬಚ್ಚನ್ ಅವರನ್ನು ಜನರು ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.

ಇತ್ತೀಚೆಗೆ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ತಮ್ಮ ಮಗ ಅಭಿಷೇಕ್ ಬಚ್ಚನ್ ಅಭಿನಯದ ‘ರಾವಣ್’ ಚಿತ್ರ 14ನೇ ವರ್ಷಕ್ಕೆ ಕಾಲಿಟ್ಟ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಷೇಕ್ ಅವರ ನಟನೆಯನ್ನು ಹೊಗಳಿದ್ದಾರೆ. ಆದರೆ ಅದರಲ್ಲಿ ನಟಿಸಿದ ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರ ಬಗ್ಗೆ ಎಲ್ಲೂ ಉಲ್ಲೇಖ ಮಾಡಲಿಲ್ಲ.

ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರನ್ನು ಉಲ್ಲೇಖಿಸದೆ ನಿರ್ಲಕ್ಷ್ಯ ಮಾಡಿದ್ದಕ್ಕೆ ನೆಟ್ಟಿಗರು ಅಮಿತಾಭ್ ಬಚ್ಚನ್ ಅವರನ್ನು ಟ್ರೋಲ್ ಮಾಡಿದ್ದಾರೆ. ಮಣಿರತ್ನಂ ಅವರ ನಿರ್ದೇಶನದ ‌ʼರಾವಣ್ʼ ಚಿತ್ರ ಬಿಡುಗಡೆಯಾಗಿ ಜೂನ್ 18, 2024ಕ್ಕೆ 14 ವರ್ಷ ಪೂರೈಸಿದೆ. ಅಭಿಷೇಕ್ ಬಚ್ಚನ್ ಅಭಿಮಾನಿ ಸಂಘವೊಂದು ಈ ದಿನವನ್ನು ಆಚರಿಸಲು ಪೋಸ್ಟ್ ಅನ್ನು ಹಂಚಿಕೊಂಡಿದೆ. ಆಗ ಅಮಿತಾಭ್ ಬಚ್ಚನ್ ಅವರು ಚಿತ್ರವನ್ನು ಪೋಸ್ಟ್ ಮಾಡಿ, “ಅಭಿಷೇಕ್ ಅಭಿನಯ ಮರೆಯಲಾಗದಂತಹದು. ನಿಮ್ಮ ಇತರ ಚಿತ್ರಗಳಿಗಿಂತ ಈ ಚಿತ್ರ ತುಂಬಾ ಭಿನ್ನವಾಗಿದೆ. ಮತ್ತು ಇದು ಕಲಾವಿದನಿಗೆ ನಿಜವಾದ ಮೌಲ್ಯವನ್ನು ನೀಡುತ್ತದೆ” ಎಂದು‌ ಶ್ಲಾಘಿಸಿ ಬರೆದಿದ್ದಾರೆ.

ಆದರೆ ಈ ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅಭಿಷೇಕ್ ಜೊತೆ ಮುಖ್ಯ ಪಾತ್ರದಲ್ಲಿ ನಟಿಸಿದ್ದರು ಮತ್ತು ಅವರ ಅಭಿನಯವನ್ನು ಅಭಿಮಾನಿಗಳು ಹೊಗಳಿದ್ದರು. ಆದರೆ ಈ ಪೋಸ್ಟ್ ನಲ್ಲಿ ಅಮಿತಾಭ್‌ ಬಚ್ಚನ್ ಅವರು ಎಲ್ಲೂ ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಉಲ್ಲೇಖಿಸಿಲ್ಲ. ಹೀಗಾಗಿ ಈ ಬಗ್ಗೆ ನೆಟ್ಟಿಗರು ಅಮಿತಾಭ್ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Working Hours: ಅತಿ ಹೆಚ್ಚು ಕೆಲಸದ ಸಮಯ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

Amithab Bacchan

ಈ ಹಿಂದೆ ಕೂಡ ಕಜಾ ರಾರೇ ಹಾಡು 19ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಅಮಿತಾಭ್ ಅವರು ಅಭಿಷೇಕ್ ಅವರನ್ನು ಹೊಗಳಿ ತಮ್ಮ ಸೊಸೆ ನಟಿ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಉಲ್ಲೇಖಿಸಿರಲಿಲ್ಲ. ಕಜಾ ರಾರೇ ಹಾಡಿನಲ್ಲಿ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯಾ ರೈ ಬಚ್ಚನ್ ಕಾಣಿಸಿಕೊಂಡಿದ್ದರು.
ಇದರಿಂದ ಅಮಿತಾಭ್ ಬಚ್ಚನ್ ಅವರ ಕುಟುಂಬದಲ್ಲಿ ಸಮಸ್ಯೆ ಇರಬೇಕು. ಹಾಗಾಗಿ ಅವರು ತಮ್ಮ ಸೊಸೆಯ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Continue Reading

Latest

Viral Video: ಗಡ್ಡ, ಮೀಸೆ ಬೋಳಿಸಿ ಶಿಸ್ತಾಗಿ ಬಂದ ಮಗನಿಗೆ ಅಪ್ಪನ ಕಪಾಳಮೋಕ್ಷ! ನೆಟ್ಟಿಗರ ಆಕ್ರೋಶ

Viral Video: ಮಗನೊಬ್ಬ ತಂದೆಯನ್ನು ಅಚ್ಚರಿಗೊಳಿಸಬೇಕು ಎಂದು ಹೋಗಿ ಕಪಾಳಮೋಕ್ಷ ಮಾಡಿಸಿಕೊಂಡ ಘಟನೆ ನಡೆದಿದೆ. ಕ್ಲೀನ್ ಶೇವ್ ಮಾಡಿಕೊಂಡು ಮಗ ತನ್ನ ಹೊಸ ಲುಕ್ ಅನ್ನು ತಂದೆಗೆ ತೋರಿಸಿ ಅವರಿಗೆ ಆಶ್ವರ್ಯವನ್ನುಂಟುಮಾಡಬೇಕು ಎಂಬ ಉತ್ಸಾಹದಿಂದ ತಂದೆಯ ಮುಖ ನೋಡಿದ್ದಾನೆ. ಆದರೆ ಮಗ ಕ್ಲೀವ್ ಶೇವ್ ಮಾಡಿದ್ದಕ್ಕೆ ಕೋಪಗೊಂಡ ತಂದೆ ಆತನ ಕೆನ್ನೆಗೆ ಬಾರಿಸಿದ್ದಾರೆ. ನಂತರ ಒಂದು ಸೆಕೆಂಡುಗಳ ಕಾಲ ಅವನನ್ನು ದಿಟ್ಟಿಸಿ ನೋಡುತ್ತಾ ಅವನ ಕುತ್ತಿಗೆ ಹಿಡಿದು ‘’ನಾನು ಹೇಳುವುದನ್ನು ನೀನು ಎಂದಿಗೂ ಕೇಳುವುದಿಲ್ಲ” ಎಂದು ಬೈಯುತ್ತಾ ಮತ್ತೊಮ್ಮೆ ಕೆನ್ನೆಗೆ ಬಾರಿಸಿದ್ದಾರೆ.

VISTARANEWS.COM


on

Viral Video
Koo

ಮಕ್ಕಳ ಭವಿಷ್ಯದ ಬಗೆಗಿನ ಕಾಳಜಿ ಪೋಷಕರಿಗೆ ಇರುತ್ತದೆ. ಹಾಗಾಗಿ ಪೋಷಕರಿಗೆ ತಮ್ಮ ಮಕ್ಕಳನ್ನು ದಂಡಿಸುವ , ಶಿಕ್ಷಿಸುವ ಹಕ್ಕು ಇರುತ್ತದೆ. ಅಂದಮಾತ್ರಕ್ಕೆ ಪೋಷಕರು ಮಕ್ಕಳನ್ನು ತಮಗೆ ಮನಬಂದಂತೆ ಶಿಕ್ಷಿಸುವ ಹಾಗೇ ಇಲ್ಲ. ಅವರು ಮಕ್ಕಳನ್ನು ದಂಡಿಸುವ ರೀತಿ ಎಲ್ಲೆ ಮೀರಬಾರದು. ಇಲ್ಲವಾದರೆ ಇದರಿಂದ ಮುಂದೆ ದೊಡ್ಡ ಸಮಸ್ಯೆ ಉದ್ಭವಿಸಬಹುದು. ಇದಕ್ಕೆ ಉದಾಹರಣೆ ಎಂಬಂತೆ ಇದೀಗ ತಂದೆ- ಮಗನಿಗೆ ಸಂಬಂಧಪಟ್ಟ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್(Viral Video) ಆಗಿದೆ.

ಹುಡುಗನೊಬ್ಬ ಕ್ಲೀನ್ ಶೇವ್ ಮಾಡಿಕೊಂಡು ತನ್ನ ತಂದೆಗೆ ತೋರಿಸಿ ಅವರ ಮೆಚ್ಚುಗೆ ಗಳಿಸಬೇಕು ಎಂದು ಹೋಗಿ ಕಪಾಳಮೋಕ್ಷಕ್ಕೆ ಒಳಗಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆಗುತ್ತಿದೆ.
ವಿಡಿಯೊದಲ್ಲಿ ಹುಡುಗ ಕ್ಲೀನ್ ಶೇವ್ ಮಾಡಿ ಕ್ಯಾಮರಾಕ್ಕೆ ಮುಖ ಮಾಡಿ ನಿಂತಿದ್ದಾಗ ತಂದೆ ‘’ಏನಾಗುತ್ತಿದೆ’’ ಎಂದು ಕೇಳುತ್ತಾ ಆತನ ಹಿಂದೆ ಬಂದಿದ್ದಾರೆ. ಆಗ ಆತ ತನ್ನ ತಂದೆಗೆ ತನ್ನ ಹೊಸ ಲುಕ್ ಅನ್ನು ತೋರಿಸಿ ಅವರಿಗೆ ಆಶ್ವರ್ಯವನ್ನುಂಟುಮಾಡಬೇಕು ಎಂಬ ಉತ್ಸಾಹದಿಂದ ಹಿಂದೆ ತಿರುಗಿದ್ದಾನೆ. ಆದರೆ ಮಗ ಕ್ಲೀವ್ ಶೇವ್ ಮಾಡಿದ್ದಕ್ಕೆ ಕೋಪಗೊಂಡ ತಂದೆ ಆತನ ಕೆನ್ನೆಗೆ ಬಾರಿಸಿದ್ದಾರೆ. ನಂತರ ಒಂದು ಸೆಕೆಂಡುಗಳ ಕಾಲ ಅವನನ್ನು ದಿಟ್ಟಿಸಿ ನೋಡುತ್ತಾ ಅವನ ಕುತ್ತಿಗೆ ಹಿಡಿದು ‘’ನಾನು ಹೇಳುವುದನ್ನು ನೀನು ಎಂದಿಗೂ ಕೇಳುವುದಿಲ್ಲ” ಎಂದು ಬೈಯುತ್ತಾ ಮತ್ತೊಮ್ಮೆ ಕೆನ್ನೆಗೆ ಬಾರಿಸಿದ್ದಾರೆ.

ಈ ವಿಡಿಯೊ ಘರ್ ಕೆ ಕಾಲೆಶ್ ಎಂಬ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ಪೋಸ್ಟ್ ಆಗಿದ್ದು, ತಕ್ಷಣವೇ ವೈರಲ್ ಆಗಿದೆ. ಈ ಪೋಸ್ಟ್ ಗೆ 3 ಮಿಲಿಯನ್ ವೀವ್ಸ್ ಬಂದಿದ್ದು, ಮಗನ ಮೇಲೆ ತಂದೆ ಕೈ ಮಾಡಿದ್ದಕ್ಕೆ ಹಲವರು ಟೀಕೆ ಮಾಡಿದ್ದಾರೆ. ಇದು ವಿವಾದವನ್ನು ಹುಟ್ಟುಹಾಕಿದೆ ಎನ್ನಲಾಗಿದೆ.

ಅನೇಕರು ಈ ವಿಡಿಯೊ ನೋಡಿ ‘ಇದು ಕೆಟ್ಟ ನಡತೆಯ ಪೋಷಕರಿಗೆ ಪರಿಪೂರ್ಣ ಉದಾಹರಣೆಯಾಗಿದೆ’ ಎಂದು ಬರೆದಿದ್ದಾರೆ. ಇನ್ನೂ ಕೆಲವರು ‘ತನ್ನ ಗಡ್ಡ ಮೀಸೆ ಮಾತ್ರ ಬೋಳಿಸಿದ್ದಕ್ಕೆ ತಂದೆ ತಮ್ಮ ಮಗನಿಗೆ ಹೊಡೆಯುವುದು ಇದು ಮಿತಿ ಮೀರಿದ ವರ್ತನೆಯಾಯಿತು’ ಎಂದು ಕಿಡಿಕಾರಿದ್ದಾರೆ. ‘ಜಗತ್ತಿನಲ್ಲಿ ಲೈಂಗಿಕ ಶಿಕ್ಷಣಕ್ಕಿಂತ ಪೋಷಕರಿಗೆ ಶಿಕ್ಷಣ ನೀಡುವ ಅಗತ್ಯವಿದೆ’ ಎಂದು ಒಬ್ಬ ಬಳಕೆದಾರರು ತಿಳಿಸಿದ್ದಾರೆ. ‘ಹೆಚ್ಚಿನ ಭಾರತೀಯ ಪೋಷಕರು ತಮ್ಮ ಹತಾಶೆ ಮತ್ತು ವೈಫಲ್ಯವನ್ನು ತಮ್ಮ ಸ್ವಂತ ಮಕ್ಕಳ ಮೂಲಕ ಹೊರಹಾಕುತ್ತಾರೆ’ ಎಂದು ಮತ್ತೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Actor Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಪವಿತ್ರಾ ಗೌಡ ಮಾಜಿ ಪತಿಯಿಂದ ಕೇಸ್!

ಈ ವಿಡಿಯೊದಲ್ಲಿ ಆ ತಂದೆ ಮಗ ಮೀಸೆ , ಗಡ್ಡ ಬೋಳಿಸಿದ್ದಕ್ಕೆ ಯಾಕೆ ಕೋಪಗೊಂಡು, ಹೊಡೆದರು ಎಂಬುದಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ಭಾರತೀಯ ಸಂಪ್ರದಾಯದ ಪ್ರಕಾರ ಗಂಡು ಮಕ್ಕಳು ತನ್ನ ತಂದೆ ಅಥವಾ ತಾಯಿ ತೀರಿಕೊಂಡಾಗ ಮಾತ್ರ ಗಡ್ಡ, ಮೀಸೆ, ತಲೆ ಬೋಳಿಸುತ್ತಾರೆ. ಹಾಗಾಗಿ ತಮ್ಮ ಸಂಪ್ರದಾಯದ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ತಂದೆ ಮಗನಿಗೆ ಹೊಡೆದಿರಬಹುದು ಎನ್ನಲಾಗಿದೆ.

Continue Reading

ಕ್ರೀಡೆ

Smriti Mandhana: ಕೊಹ್ಲಿಯ ಶೈಲಿಯಲ್ಲಿ ಬೌಲಿಂಗ್​ ನಡೆಸಿ ವಿಕೆಟ್​ ಕಿತ್ತ ಸ್ಮೃತಿ ಮಂಧಾನ

Smriti Mandhana: ಸ್ಮೃತಿ ಮಂಧಾನ ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಸತತ 2 ಏಕದಿನ ಪಂದ್ಯಗಳಲ್ಲಿ ಸೆಂಚುರಿ ಹೊಡೆದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು

VISTARANEWS.COM


on

Smriti Mandhana
Koo

ಬೆಂಗಳೂರು: ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 4 ರನ್​ಗಳ ಗೆಲುವು ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿತು. ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ ಸ್ಮೃತಿ ಮಂಧಾನ(Smriti Mandhana) ಬೌಲಿಂಗ್​ನಲ್ಲಿಯೂ ಒಂದು ವಿಕೆಟ್​ ಕಿತ್ತು ಮಿಂಚಿದ್ದರು. ಸ್ಮೃತಿ ಅವರು ವಿರಾಟ್ ಕೊಹ್ಲಿಯ(Virat Kohli) ಶೈಲಿಯಲ್ಲೇ ಬೌಲಿಂಗ್​ ನಡೆಸಿದ ವಿಡಿಯೊ ಮತ್ತು ಫೋಟೊಗಳು ಇದೀಗ ವೈರಲ್​ ಆಗಿದೆ.

​ವಿರಾಟ್​ ಕೊಹ್ಲಿ ಅವರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಅವರು ಬೌಲಿಂಗ್​ ನಡೆಸುತ್ತಿದ್ದ ವೇಳೆ ಗಾಯಗೊಂಡು ಪಂದ್ಯದಿಂದ ಹೊರಗುಳಿದಾಗ ವಿರಾಟ್​ ಕೊಹ್ಲಿ ಅವರು ಈ ಓವರ್​ ಪೂರ್ಣಗೊಳಿಸಿದ್ದರು. ಈ ವೇಳೆ ಕೊಹ್ಲಿ ನಡೆಸಿದ ಬೌಲಿಂಗ್​ ಶೈಲಿಯಲ್ಲೇ ಇದೀಗ ಸ್ಮೃತಿ ಕೂಡ ಬೌಲಿಂಗ್​ ನಡೆಸಿದ್ದಾರೆ. ಉಭಯ ಕ್ರಿಕೆಟರ್​ಗಳ ಬೌಲಿಂಗ್​ ಶೈಲಿಯ ಫೋಟೊವನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.

ವಿರಾಟ್​ ಮತ್ತು ಸ್ಮೃತಿ ಐಪಿಎಲ್​ನಲ್ಲಿ ಆರ್​ಸಿಬಿ ಫ್ರಾಂಚೈಸಿ ಪರ ಆಡುತ್ತಿದ್ದಾರೆ. ಅಲ್ಲದೆ ಸ್ಮೃತಿ ಅವರು ಕೊಹ್ಲಿಯ ಅಪ್ಪಟ್ಟ ಅಭಿಮಾನಿ ಕೂಡ ಹೌದು. ಹಿಂದೊಮ್ಮೆ ಅವರು ಸಂದರ್ಶನಲ್ಲಿ ಕೊಹ್ಲಿ ನನ್ನ ಕ್ರಿಕೆಟ್ ಸ್ಫೂರ್ತಿ ಎಂದು ಹೇಳಿದ್ದರು. ಕೊಹ್ಲಿಯಂತೆ ಸ್ಮೃತಿ ಕೂಡ ಭಾರತ ಮಹಿಳಾ ಕ್ರಿಕೆಟ್​ ತಂಡದಲ್ಲಿ ಸ್ಟಾರ್​ ಆಟಗಾರ್ತಿಯಾಗಿದ್ದಾರೆ. ಜತೆಗೆ ಹಲವು ದಾಖಲೆಯನ್ನು ಕೂಡ ಹೊಂದಿದ್ದಾರೆ. ಶತಕ ಬಾರಿಸಿದಾಗಲೂ ಕೂಡ ಮಂಧಾನ ಅವರು ಕೊಹ್ಲಿಯಂತೆ ಮೇಲಕ್ಕೆ ಜಿಗಿದು ಸಂಭ್ರಮಿಸಿದರು.

​ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಮತ್ತು ದ್ವಿತೀಯ ಏಕದಿನ ಪಂದ್ಯದಲ್ಲಿಯೂ ಸ್ಮೃತಿ ಶತಕ ಬಾರಿಸಿ ಮಿಂಚಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ 2 ಓವರ್​ ಎಸೆದ ಮಂಧಾನ 13 ರನ್​ಗೆ ಒಂದು ವಿಕೆಟ್ ಕಿತ್ತರು. ಪ್ರಚಂಡ ಬ್ಯಾಟಿಂಗ್ ನಡೆಸಿದ ಅವರು 136 ರನ್​ ಬಾರಿಸಿದರು. ಒಟ್ಟು 4 ಶತಕಗಳು ಈ ಪಂದ್ಯದಲ್ಲಿ ದಾಖಲಾಯಿತು. ಭಾರತ ಪರ ಹರ್ಮನ್​ಪ್ರೀತ್​ ಮತ್ತು ಮಂಧಾನ ಶತಕ ಬಾರಿಸಿದರೆ ದಕ್ಷಿಣ ಆಫ್ರಿಕಾ ಪರ ನಾಯಕಿ ಲಾರಾ ವೋಲ್ವಾರ್ಟ್‌ ಮತ್ತು ಮರಿಜಾನ್‌ ಕಾಪ್‌ ಶತಕ ಬಾರಿಸಿದರು. ಆದರೆ ಪಂದ್ಯವನ್ನು ಕೇವಲ 4 ರನ್​ ಅಂತರದಿಂದ ಕಳೆದುಕೊಂಡರು.

ದಾಖಲೆ ಬರೆದ ಸ್ಮೃತಿ


ಸ್ಮೃತಿ ಮಂಧಾನ ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಸತತ 2 ಏಕದಿನ ಪಂದ್ಯಗಳಲ್ಲಿ ಸೆಂಚುರಿ ಹೊಡೆದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. ಜತೆಗೆ 7ನೇ ಶತಕ ಪೂರ್ತಿಗೊಳಿಸಿ ಮಿಥಾಲಿ ರಾಜ್‌(7) ಜತೆ ಜಂಟಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 3 ವಿಕೆಟಿಗೆ 325 ರನ್‌ ಬಾರಿಸಿತು. ಬೃಹತ್​ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 321 ರನ್‌ ಮಾಡಿ ಶರಣಾಯಿತು. ಸರಣಿಯ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ

Continue Reading
Advertisement
IRCTC Ticket Booking
Latest11 mins ago

IRCTC Ticket Booking: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!

Viral Video
Latest14 mins ago

Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

Israel-Hamas Conflict
ವಿದೇಶ19 mins ago

Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Actor Darshan case sanjana galrani Reaction about ramya statement
ಸ್ಯಾಂಡಲ್ ವುಡ್47 mins ago

Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್‌ ಕೊಟ್ಟ ಸಂಜನಾ ಗಲ್ರಾನಿ!

Liquor Price Karnataka
ಪ್ರಮುಖ ಸುದ್ದಿ54 mins ago

Liquor Price Karnataka: ಮದ್ಯ ಪ್ರಿಯರಿಗೆ ಕಿಕ್‌ ಏರಿಸುವ ನ್ಯೂಸ್‌; ಜುಲೈ 1ರಿಂದ ಬೆಲೆ ಇಳಿಕೆ

Pakistan Violence
ವಿದೇಶ1 hour ago

Pakistan Violence: ಕುರಾನ್‌ಗೆ ಅಪಮಾನ; ಪೊಲೀಸ್‌ ಸ್ಟೇಶನ್‌ಗೆ ಬೆಂಕಿ..ಠಾಣೆಯೊಳಗೇ ಆರೋಪಿಯ ಬರ್ಬರ ಕೊಲೆ

Actor Darshan was careful at every step to escape from Renuka case
ಸ್ಯಾಂಡಲ್ ವುಡ್2 hours ago

Actor Darshan: ಕೇಸ್‌ನಿಂದ ತಪ್ಪಿಸಿಕೊಳ್ಳೋಕೆ ಪ್ರತಿ ಹಂತದಲ್ಲೂ ಎಚ್ಚರವಹಿಸಿದ್ದ ದರ್ಶನ್; ಬೇಟೆಯ ಹಿಂದೆ ಭರ್ಜರಿ ಮಾಸ್ಟರ್‌ ಪ್ಲ್ಯಾನ್‌!

pm narendra modi international yoga day 2024
ಪ್ರಮುಖ ಸುದ್ದಿ2 hours ago

International Yoga Day 2024: ಯೋಗ ದಿನಚರಿಯ ಭಾಗವಾಗಲಿ: ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ

Darshan Arrested troll of pavithra darshan in SSE A
ಸ್ಯಾಂಡಲ್ ವುಡ್2 hours ago

Darshan Arrested: ಇದು ʻಸಪ್ತ ಶೆಡ್ಡಿನಾಚೆ SSE side ‘D’! ಟ್ರೋಲ್‌ ಆದ್ರು ದರ್ಶನ್‌-ಪವಿತ್ರಾ!

Pavithra Gowda is restless without proper food and sleep in Parappa Agrahara
ಕ್ರೈಂ2 hours ago

Pavithra Gowda: ಪರಪ್ಪನ ಅಗ್ರಹಾರದಲ್ಲಿ ಸರಿಯಾಗಿ ಊಟ, ನಿದ್ರೆ ಮಾಡದೆ ಚಡಪಡಿಸುತ್ತಿರುವ ಪವಿತ್ರ ಗೌಡ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ17 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು4 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು4 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ5 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ5 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ6 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ7 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌