Viral News: ಬಿಲ್‌ ಗೇಟ್ಸ್ ಮನಗೆದ್ದ ಈ ಡಾಲಿ ಚಾಯ್‌ವಾಲಾ ಯಾರು? ಏನಿವರ ಕಥೆ? - Vistara News

ವೈರಲ್ ನ್ಯೂಸ್

Viral News: ಬಿಲ್‌ ಗೇಟ್ಸ್ ಮನಗೆದ್ದ ಈ ಡಾಲಿ ಚಾಯ್‌ವಾಲಾ ಯಾರು? ಏನಿವರ ಕಥೆ?

Viral News: ಭಾರತದ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ, ಕೋಟ್ಯಧಿಪತಿ ಮತ್ತು ಸಮಾಜಸೇವಕ ಬಿಲ್ ಗೇಟ್ಸ್ ಬೀದಿ ಬದಿ ಚಹಾ ಸೇವಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ. ಪ್ರಸಿದ್ಧ ಚಹಾ ಮಾರಾಟಗಾರ ಡಾಲಿ ಚಾಯ್‌ವಾಲಾ ಬಳಿ ಬಿಲ್ ಗೇಟ್ಸ್ ಚಹಾ ಸೇವಿಸಿದ್ದು, ಅವರ ಹಿನ್ನೆಲೆ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

dolly
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಮೈಕ್ರೋಸಾಫ್ಟ್‌ನ (Microsoft) ಸಹ-ಸಂಸ್ಥಾಪಕ, ಕೋಟ್ಯಧಿಪತಿ ಮತ್ತು ಸಮಾಜಸೇವಕ ಬಿಲ್ ಗೇಟ್ಸ್ (Bill Gates) ಭಾರತದ ಪ್ರವಾಸದಲ್ಲಿದ್ದಾರೆ. ಈ ಬಗ್ಗೆ ಅವರು ಸೋಷಿಯಲ್‌ ಮೀಡಿಯಾದ ಮೂಲಕ ಆಗಾಗ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಬೀದಿ ಬದಿಯ ಚಹಾ ಗಾಡಿಯೊಂದರ ಬಳಿ ಚಹಾ ಮಾಡಿಸಿಕೊಂಡು ಸವಿಯುತ್ತಿರುವ ವಿಡಿಯೊ ಇದೀಗ ವೈರಲ್‌ (Viral News) ಆಗಿದೆ. ಪ್ರಸಿದ್ಧ ಚಹಾ ಮಾರಾಟಗಾರ ಮತ್ತು ಸೋಷಿಯಲ್‌ ಮೀಡಿಯಾದಲ್ಲಿ ಈಗಾಗಲೇ ಸಾಕಷ್ಟು ಪರಿಚಿತರಾಗಿರುವ ʼಡಾಲಿ ಚಾಯ್‌ವಾಲಾʼ (Dolly Chaiwalla) ಅವರ ಜತೆ ಕಾಣಿಸಿಕೊಂಡು ಚಹಾ ಸವಿಯುವ ವಿಡಿಯೊವನ್ನು ಬಿಲ್‌ ಗೇಟ್ಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈ ಡಾಲಿ ಚಾಯ್‌ವಾಲಾ ಯಾರು? ಅವರ ಹಿನ್ನೆಲೆ ಏನು? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಡಾಲಿ ಚಾಯ್‌ವಾಲಾ

ಮಹಾರಾಷ್ಟ್ರ ನಾಗಪುರದ ಸರ್ದಾರ್‌ ಏರಿಯಾದ ಹಳೆ ವಿಸಿಎ ಮೈದಾನ (Old VCA stadium)ದ ಬಳಿ ಬೀದಿ ಬದಿಯ ಚಹಾ ಗಾಡಿ ಇಟ್ಟುಕೊಂಡಿರುವ ಡಾಲಿ ಚಾಯ್‌ವಾಲಾ ತಮ್ಮ ವಿಶಿಷ್ಟ ಶೈಲಿಯ ಚಹಾ ತಯಾರಿಯ ಮೂಲಕವೇ ಜನಪ್ರಿಯರಾಗಿದ್ದಾರೆ. ಅವರ ನಿಜ ಹೆಸರು ಯಾರಿಗೂ ತಿಳಿದಿಲ್ಲ. ಆದರೆ ಅವರ ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಲಕ್ಷಗಟ್ಟಲೆ ಮಂದಿ ವೀಕ್ಷಿಸುತ್ತಾರೆ. ತಮ್ಮದೇ ಅನನ್ಯ ಶೈಲಿಯಲ್ಲಿ ಚಹಾ ಮಾಡುವ ವಿಡಿಯೊಗಳನ್ನು ಅವರು ಆಗಾಗ ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಚಹಾ ಮಾತ್ರವಲ್ಲ ಡಾಲಿ ಚಾಯ್‌ವಾಲಾ ಅಂಗಡಿಯಲ್ಲಿ ಸಿಗರೇಟ್‌ ಕೂಡ ಲಭ್ಯ. ಹೀಗಾಗಿಯೇ ಅವರ ಅಂಗಡಿ ಮುಂದೆ ಯಾವಾಗಲೂ ಜನ ಸಂದಣಿ ಕಂಡು ಬರುತ್ತದೆ.

ಬಿಲ್ ಗೇಟ್ಸ್ ಯಾರೆಂದೇ ಗೊತ್ತಿರಲಿಲ್ಲ!

ಕುತೂಹಲಕಾರಿ ಸಂಗತಿಯೆಂದರೆ, ಬಿಲ್ ಗೇಟ್ಸ್ ಬಗ್ಗೆ ಡಾಲಿ ಚಾಯ್‌ವಾಲಾ ಅವರಿಗೆ ಗೊತ್ತೇ ಇರಲಿಲ್ಲವಂತೆ. ʼʼಕೋಟ್ಯಧಿಪತಿಯೊಬ್ಬರಿಗೆ ನಾನು ಚಹಾ ನೀಡುತ್ತಿದ್ದೇನೆ ಎಂಬ ವಿಚಾರ ಆಗ ನನಗೆ ಗೊತ್ತಿರಲಿಲ್ಲ. ಮರುದಿನ ವಿಡಿಯೊ ವೈರಲ್‌ ಆಗಿ ಜನ ಈ ಬಗ್ಗೆ ಮಾತನಾಡಲು ಆರಂಭಿಸಿದಾಗಲೇ ನನಗೆ ಬಿಲ್‌ ಗೇಟ್ಸ್‌ ಬಗ್ಗೆ ಗೊತ್ತಾಗಿದ್ದುʼʼ ಎಂದು ಡಾಲಿ ಚಾಯ್ ವಾಲಾ ಹೇಳಿದ್ದಾರೆ. ಆರಂಭದಲ್ಲಿ ಈ ವಿಡಿಯೊವನ್ನು ಅವರ ಟೀ ಸ್ಟಾಲ್‌ ಇರುವ ನಾಗಪುರದಲ್ಲಿಯೇ ಇದರ ಚಿತ್ರೀಕರಿಸಲಾಗಿತ್ತು ಎಂದು ಭಾವಿಸಲಾಗಿತ್ತು. ಆದರೆ ಈ ವಿಡಿಯೊವನ್ನು ಹೈದರಾಬಾದ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಡಾಲಿ ತಿಳಿಸಿದ್ದಾರೆ. ʼʼಇದನ್ನು ಮೂರು ದಿನಗಳ ಹಿಂದೆ ಚಿತ್ರೀಕರಿಸಲಾಗಿದೆ. ಬಿಲ್ ಗೇಟ್ಸ್ ಅವರ ತಂಡವು ನನ್ನನ್ನು ಸಂಪರ್ಕಿಸಿತು ಮತ್ತು ನನ್ನನ್ನು ಹೈದರಾಬಾದ್‌ಗೆ ಆಹ್ವಾನಿಸಿತು. ಈ ಮೊದಲು, ನನಗೆ ಅವರ ಬಗ್ಗೆ ತಿಳಿದಿರಲಿಲ್ಲ ಮತ್ತು ವಿಡಿಯೊ ವೈರಲ್ ಆದ ಒಂದು ದಿನದ ನಂತರ ಅವರು ಎಷ್ಟು ಪ್ರಸಿದ್ಧ ವ್ಯಕ್ತಿ ಎನ್ನುವುದು ತಿಳಿಯಿತುʼʼ ಎಂದಿದ್ದಾರೆ.

ʼʼದಕ್ಷಿಣ ಭಾರತದ ಚಿತ್ರಗಳನ್ನು ನೋಡಿ ನಾನು ಈ ಶೈಲಿಯನ್ನು ರೂಢಿಸಿಕೊಂಡಿದ್ದೇನೆ. ಮುಂದೊಂದು ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಚಹಾ ನೀಡಬೇಕೆಂಬ ಆಸೆ ಇದೆʼʼ ಎಂದು ಡಾಲಿ ತಿಳಿಸಿದ್ದಾರೆ.

ವಿಡಿಯೊದಲ್ಲೇನಿದೆ?

ಗೇಟ್ಸ್, ಚಾಯ್‌ವಾಲಾ ಅವರಿಗೆ ʼಒಂದು ಚಾಯ್ʼಗಾಗಿ ಆರ್ಡರ್ ಮಾಡುವುದರೊಂದಿಗೆ ವಿಡಿಯೊ ಆರಂಭವಾಗುತ್ತದೆ. ಚಾಯ್‌ವಾಲಾ ನಂತರ ತಮ್ಮ ವಿಶೇಷವಾದ ಗಾಡಿಯಲ್ಲಿರುವ ಸಾಮಗ್ರಿಗಳು ಹಾಗೂ ಸ್ಟವ್‌ ಮೂಲಕ ಚಹಾವನ್ನು ತಯಾರಿಸುತ್ತಾನೆ. ಅಂತಿಮವಾಗಿ ಗೇಟ್ಸ್ ಗಾಜಿನ ಲೋಟದಲ್ಲಿ ಬಿಸಿ ಚಹಾವನ್ನು ಆನಂದಿಸುತ್ತಿರುವುದನ್ನು ತೋರಿಸುತ್ತದೆ. ಡಾಲಿ ಚಾಯ್‌ವಾಲಾನೊಂದಿಗೆ ಗೇಟ್ಸ್‌ ಫೋಟೋಗೆ ಪೋಸ್ ನೀಡುವುದರೊಂದಿಗೆ ವಿಡಿಯೊ ಮುಕ್ತಾಯಗೊಳ್ಳುತ್ತದೆ.

ಇದನ್ನೂ ಓದಿ: Viral Video: ʼಒನ್‌ ಚಾಯ್‌ ಪ್ಲೀಸ್…‌ʼ ಭಾರತದ ಬೀದಿ ಚಹಾ ಸವಿದ ಬಿಲ್‌ ಗೇಟ್ಸ್! ವಿಡಿಯೋ ವೈರಲ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Viral Video: ವಂದೇ ಭಾರತ್ ರೈಲಿನಡಿ ಸಿಲುಕಿದರೂ ಹಸು ಪ್ರಾಣಾಪಾಯದಿಂದ ಪಾರಾಗಿದ್ದು ಹೇಗೆ?

ಹಸುವೊಂದು ವಂದೇ ಭಾರತ್ ರೈಲಿನಡಿ ಸಿಲುಕಿಕೊಂಡರೂ ಲೋಕೋ ಪೈಲೆಟ್ ನ ಮುನ್ನೆಚ್ಚರಿಕೆ ಕ್ರಮವಾಗಿ ಬದುಕಿ ಉಳಿದಿದೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ಮುಂಬಯಿ: ರೈಲು ಅಪಘಾತದಿಂದ (rail accident) ಪ್ರಾಣಿಗಳು ಮಾತ್ರವಲ್ಲ ಮನುಷ್ಯರೂ ಸಾವನ್ನಪ್ಪುತ್ತಿರುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಂತೂ ದೇಶದಾದ್ಯಂತ ವೇಗವಾಗಿ ಬರುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (Vande Bharat Express trains) ಹಸುಗಳು ಢಿಕ್ಕಿ ಹೊಡೆದು ಮೃತಪಡುತ್ತಿರುವ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ವೈರಲ್ (Viral Video) ಆಗುತ್ತಿರುತ್ತದೆ.

ವೇಗವಾಗಿ ಬರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಡಿಕ್ಕಿಯಾಗಿ ಹಲವು ಹಸುಗಳು ಸಾವನ್ನಪ್ಪಿವೆ. ಆದರೆ ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಲೋಕೋಮೋಟಿವ್ ಪೈಲಟ್ ತುರ್ತು ಬ್ರೇಕ್ ಹಾಕುವ ಮೂಲಕ ಹಸುವನ್ನು ರಕ್ಷಿಸಿದಘಟನೆ ನಡೆದಿದೆ. ಇದರ ದೃಶ್ಯ ಕೆಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಂದೇ ಭಾರತ್ ರೈಲಿನ ಕೆಳಗೆ ಹಸು ಸಿಲುಕಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್ ರೈಲು ಹಳಿಯ ಮೇಲೆ ಹಸುವನ್ನು ಗುರುತಿಸಿ ಪ್ರಾಣಿಯನ್ನು ರಕ್ಷಿಸಲು ತುರ್ತು ಬ್ರೇಕ್ ಹಾಕಿದರು ಎನ್ನಲಾಗಿದೆ.


ರೈಲಿನಡಿ ಸಿಲುಕಿಕೊಂಡಿತ್ತು

ಲೋಕೋ ಪೈಲಟ್ ಬ್ರೇಕ್ ಹಾಕುವಷ್ಟರಲ್ಲಿ ಹಸುವಿನ ಅರ್ಧ ಭಾಗ ರೈಲಿನ ಕೆಳಗೆ ಸಿಲುಕಿಕೊಂಡಿತ್ತು. ರೈಲಿನ ಮುಂಭಾಗದ ಭಾಗವು ಹಸುವಿನ ಮೇಲೆ ಬಿದ್ದಾಗ ಹಸು ನೋವಿನಿಂದ ಕೂಗಿತ್ತು.

ಅನಂತರ ಚಾಲಕ ರೈಲನ್ನು ಹಿಮ್ಮುಖ ದಿಕ್ಕಿನಲ್ಲಿ ಚಲಿಸಿ ಹಸುವನ್ನು ರಕ್ಷಿಸಿದರು. ಬಳಿಕ ಹಸು ಎದ್ದು ಟ್ರ್ಯಾಕ್‌ನಿಂದ ಹೊರನಡೆದಿದೆ. ಹಸುವಿಗೆ ಯಾವುದೇ ಗಾಯವಾಗಿಲ್ಲ. ಸಕಾಲಕ್ಕೆ ಲೋಕೋ ಪೈಲೆಟ್ ಬ್ರೇಕ್ ಹಾಕಿದ್ದರಿಂದ ಹಸು ಪ್ರಾಣಾಪಾಯದಿಂದ ಪಾರಾಗಿದೆ.


ಚಾಲಕನ ಚಾಲಾಕಿತನಕ್ಕೆ ಶ್ಲಾಘನೆ

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಹಸು ಪ್ರಾಣಾಪಾಯದಿಂದ ಪಾರಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು ಚಾಲಕನಿಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಹರಿದು ಬರುತ್ತಿವೆ.

ಇದನ್ನೂ ಓದಿ: Viral Video: ಬಸ್‌, ರೈಲಿನಲ್ಲಿ ಮಾತ್ರ ಅಲ್ಲ.. ಫ್ಲೈಟ್‌ನಲ್ಲೂ ನಡೆಯುತ್ತೆ ಸೀಟಿಗಾಗಿ ಮಾರಾಮಾರಿ

ತಡವಾದ ರೈಲು, ಬಾಗಿಲುಗಳ ದೋಷಗಳು

ಅಹಮದಾಬಾದ್- ಮುಂಬಯಿ ವಂದೇ ಭಾರತ್‌ನ ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ರೈಲಿನಲ್ಲಿರುವ ಸಮಸ್ಯೆಗಳ ಬಗ್ಗೆಯೂ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಇತ್ತೀಚಿನ ಘಟನೆಯೊಂದರಲ್ಲಿ ಕಾನ್ಪುರದಿಂದ ದೆಹಲಿ ಕಡೆಗೆ ಹೋಗುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದು ಹಸು ಸಾವನ್ನಪ್ಪಿತ್ತು. ರೈಲಿನ ಚಾಲಕ ತುರ್ತು ಬ್ರೇಕ್‌ಗಳನ್ನು ಹಾಕಿದ್ದನು, ಆದರೆ, ಹಸುವಿನ ಮೃತ ದೇಹ ರೈಲಿನಲ್ಲಿ ಸಿಲುಕಿಕೊಂಡಿತು. ರೈಲಿನಿಂದ ಪ್ರಾಣಿಯ ಅವಶೇಷಗಳನ್ನು ತೆಗೆದುಹಾಕಲು ರೈಲನ್ನು ಹತ್ತು ನಿಮಿಷಗಳ ಕಾಲ ನಿಲ್ಲಿಸಬೇಕಾಯಿತು. ದೆಹಲಿ- ಹೌರಾ ಮಾರ್ಗದಲ್ಲಿ ಈ ಘಟನೆ ಸಂಭವಿಸಿದ್ದು, ರೈಲನ್ನು ಅಚಲ್ದಾ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದಾರೆ.

Continue Reading

ದೇಶ

Adhir Ranjan: ಅಂಬಾನಿ ದುಡ್ಡು ಕೊಟ್ಟರೆ ನಾವೂ ಸುಮ್ಮನಾಗುತ್ತೇವೆ ಎಂದ ಕಾಂಗ್ರೆಸ್‌ ನಾಯಕ; ವಿಡಿಯೊ ವೈರಲ್

Adhir Ranjan: ಅಂಬಾನಿ-ಅದಾನಿ ಹಣದ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಅಂಬಾನಿ ಹಾಗೂ ಅದಾನಿ ದುಡ್ಡು ಕಳುಹಿಸಿದರೆ, ನಾವೂ ಅವರ ವಿರುದ್ಧ ಮಾತನಾಡುವುದಿಲ್ಲ” ಎಂದು ಹೇಳಿರುವ ವಿಡಿಯೊ ಈಗ ಸಂಚಲನ ಮೂಡಿಸಿದೆ. ಇದಕ್ಕೆ ಬಿಜೆಪಿಯು ತಿರುಗೇಟು ನೀಡಿದೆ.

VISTARANEWS.COM


on

Adhir Ranjan
Koo

ಕೋಲ್ಕೊತಾ: ಉದ್ಯಮಿಗಳಾದ ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಅವರಿಂದ ಕಾಂಗ್ರೆಸ್‌ಗೆ ಟೆಂಪೋಗಟ್ಟಲೆ ಹಣ ಸಂದಾಯವಾಗಿದೆ. ಇದೇ ಕಾರಣಕ್ಕಾಗಿ ಅದಾನಿ-ಅಂಬಾನಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಮಾತನಾಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ದೂರಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (Adhir Ranjan Chowdhury) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಅಂಬಾನಿ ಹಾಗೂ ಅದಾನಿ ದುಡ್ಡು ಕಳುಹಿಸಿದರೆ, ನಾವೂ ಅವರ ವಿರುದ್ಧ ಮಾತನಾಡುವುದಿಲ್ಲ” ಎಂದು ಹೇಳಿರುವ ವಿಡಿಯೊ ಈಗ ಸಂಚಲನ ಮೂಡಿಸಿದೆ.

ಯುಟ್ಯೂಬ್‌ ಚಾನೆಲ್‌ನ ನಿರೂಪಕರೊಬ್ಬರ ಜತೆ ಮಾತನಾಡಿದ ಅಧೀರ್‌ ರಂಜನ್‌ ಚೌಧರಿ, “ಅಂಬಾನಿ ಹಾಗೂ ಅದಾನಿ ಅವರಿಂದ ಹಣ ಸಿಕ್ಕರೆ ನಾನು ಸಂತೋಷದಿಂದ ಇರುತ್ತೇನೆ. ಅಷ್ಟಕ್ಕೂ ನಾನು ಬಡತನ ರೇಖೆಗಿಂತ ಕೆಳಗಿರುವ (BPL) ಸಂಸದನಾಗಿದ್ದೇನೆ. ಚುನಾವಣೆ ಪ್ರಚಾರಕ್ಕಾಗಿ ನನಗೆ ಹಣ ಬೇಕು. ಟೆಂಪೋಗಟ್ಟಲೆ ಹಣ ಬಿಡಿ, ಒಂದು ಬ್ಯಾಂಗ್‌ ತುಂಬ ಅವರು ಹಣ ಕಳುಹಿಸಿದರೂ ನನಗೆ ಸಾಕು” ಎಂಬುದಾಗಿ ಕಾಂಗ್ರೆಸ್‌ ನಾಯಕ ತಮಾಷೆಯಾಗಿ ಉತ್ತರ ನೀಡಿದ್ದಾರೆ.

ಉದ್ಯಮಿಗಳ ವಿರುದ್ಧ ಸಂಸತ್ತಿನಲ್ಲಿ ನೀವು ಮಾತನಾಡುತ್ತೀರಲ್ಲ ಎಂದು ಯುಟ್ಯೂಬರ್‌ ಕೇಳಿದ ಪ್ರಶ್ನೆಗೆ, “ಅವರು ನಮಗೆ ಹಣ ಕಳುಹಿಸುವುದಿಲ್ಲ. ಹಾಗಾಗಿ, ನಾವು ಅವರ ವಿರುದ್ಧ ಮಾತನಾಡುತ್ತೇವೆ” ಎಂದರು. “ಅವರು ಹಣ ಕಳುಹಿಸಿದರೆ ನೀವು ಅವರ ವಿರುದ್ಧ ಮಾತನಾಡುವುದಿಲ್ಲವೇ” ಎಂದು ಕೇಳಿದ ಪ್ರಶ್ನೆಗೆ, “ಅವರು ನಮಗೆ ಹಣ ಕಳುಹಿಸಿದಾಗ ನೋಡೋಣ” ಎಂದು ಹಾರಿಕೆಯ ಉತ್ತರ ನೀಡಿದರು. ಈ ವಿಡಿಯೊ ಭಾರಿ ವೈರಲ್‌ ಆಗಿದ್ದು, ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗುತ್ತಿವೆ.

ಕಾಲೆಳೆದ ಬಿಜೆಪಿ

ಅಂಬಾನಿ-ಅದಾನಿ ಕುರಿತು ಅಧೀರ್‌ ರಂಜನ್‌ ಚೌಧರಿ ಹೇಳಿಕೆ ನೀಡುತ್ತಲೇ ಬಿಜೆಪಿ ಟಾಂಗ್‌ ನೀಡಿದೆ. “ಉದ್ಯಮಿಗಳಿಂದ ಬ್ಯಾಗ್‌ ತುಂಬ ಹಣ ಸಿಕ್ಕರೆ ಸಂಸತ್ತಿನಲ್ಲಿ ಅವರ ವಿರುದ್ಧ ಮಾತನಾಡುವುದಿಲ್ಲ ಎಂಬುದಾಗಿ ಕಾಂಗ್ರೆಸ್‌ ನಾಯಕ ಹೇಳಿದ್ದಾರೆ. ಉದ್ಯಮಿಗಳಿಗೆ ಹಣ ಕೊಡಿ ಎಂಬುದಾಗಿ ಪರೋಕ್ಷವಾಗಿ ಹೇಳುವ ಜತೆಗೆ ಅವರನ್ನು ಟಾರ್ಗೆಟ್‌ ಮಾಡುತ್ತಿರುವುದನ್ನೂ ಒಪ್ಪಿಕೊಂಡಿದ್ದಾರೆ. ಇದು ಹಫ್ತಾ ವಸೂಲಿ ಕಾಂಗ್ರೆಸ್‌ ಹಾಗೂ ಇಂಡಿಯಾ ಒಕ್ಕೂಟ” ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲಾ ಟೀಕಿಸಿದ್ದಾರೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಅಧೀರ್‌ ರಂಜನ್‌ ಚೌಧರಿ, “ಬಿಜೆಪಿಯವರಿಗೆ ಜೋಕ್‌ ಯಾವುದು, ಸೀರಿಯಸ್‌ ಯಾವುದು ಎಂಬುದರ ಪರಿಜ್ಞಾನವೇ ಇಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: “ಅದಾನಿ-ಅಂಬಾನಿ… ಕಾಪಾಡಿ..ಕಾಪಾಡಿ ಅಂತಿದ್ದಾರೆ ಪ್ರಧಾನಿ ಮೋದಿ” ; ರಾಹುಲ್‌ ಗಾಂಧಿ ವ್ಯಂಗ್ಯ

Continue Reading

ಕ್ರೈಂ

Road Accident : ತಂದೆ ಜತೆಗೆ ಕಾರ್‌ ವಾಶ್‌ ಮಾಡುವಾಗ ಎಕ್ಸಿಲೇಟರ್‌ ತುಳಿದ ಬಾಲಕ; ಆಟವಾಡುತ್ತಿದ್ದ ಮಗು ಅಪ್ಪಚ್ಚಿ

Road Accident : ದುರಂತಗಳು ಹೇಗೆಲ್ಲ ನಡೆದುಹೋಗುತ್ತವೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.. ತಂದೆ ಜತೆಗೆ ಕಾರ್‌ ವಾಶ್‌ ಮಾಡುತ್ತಿದ್ದ 15 ವರ್ಷದ ಬಾಲಕನೊರ್ವ ಏಕಾಏಕಿ ಎಕ್ಸಿಲೇಟರ್‌ ತುಳಿದಿದ್ದ. ಪರಿಣಾಮ ಕಾರಿನ ಮುಂದೆ ಆಟವಾಡುತ್ತಿದ್ದ 5 ವರ್ಷದ ಮಗುವೊಂದು ಕಾರಿನಡಿ ಸಿಲುಕಿ ಮೃತಪಟ್ಟಿದೆ.

VISTARANEWS.COM


on

By

Road Accident
Koo

ಬೆಂಗಳೂರು: ಒಂದು ಸಣ್ಣ ನಿರ್ಲಕ್ಷ್ಯಕ್ಕೆ 5 ವರ್ಷದ ಮಗುವೊಂದು ಕಾರು ಅಪಘಾತದಲ್ಲಿ (Road Accident) ದುರ್ಮರಣ ಹೊಂದಿದೆ. ಆರವ್ (5) ಮೃತ ದುರ್ದೈವಿ. ಬೆಂಗಳೂರಿನ ಓಲ್ಡ್ ಏರ್ ಪೋರ್ಟ್ ರಸ್ತೆ ಮುರುಗೇಶಪಾಳ್ಯ ರಸ್ತೆಯಲ್ಲಿ ಘಟನೆ ನಡೆದಿದೆ.

ನಿನ್ನೆ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಈ ದುರಂತ ನಡೆದಿದೆ. 15 ವರ್ಷದ ಬಾಲಕನೊರ್ವ ತಂದೆಯ ಜತೆ ಕಾರ್ ವಾಶ್ ಮಾಡುತ್ತಿದ್ದ. ಇದೇ ವೇಳೆ ಕಾರಿನ ಡ್ರೈವಿಂಗ್‌ ಸೀಟ್‌ನಲ್ಲಿ ಕುಳಿತ ಬಾಲಕ ಏಕಾಏಕಿ ಎಕ್ಸಿಲೇಟರ್ ಒತ್ತಿದ್ದಾನೆ. ಪರಿಣಾಮ ಕಾರು ರಭಸವಾಗಿ ಚಲಿಸಿದೆ. ಅಲ್ಲೇ ಕಾರ್ ಬಳಿ ಆಟವಾಡುತ್ತಿದ್ದ 5 ವರ್ಷದ ಆರವ್ ಮೇಲೆ ಗುದ್ದಿದೆ.

ಕಾರು ಗುದ್ದಿದ ರಭಸಕ್ಕೆ ಆರವ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆರವ್ ಸಹೋದರ ಧನರಾಜ್ ಹಾಗೂ ತಾಯಿ ಲಲಿತಾಗೂ ಗಂಭೀರ ಗಾಯವಾಗಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಮೃತದೇಹವು ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮಣಿಪಾಲ್ ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಘಟನೆಯಲ್ಲಿ ಬಾಲಕಿಗೆ ಗುದ್ದಿ ನಂತರ ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳಿಗೂ ಕಾರು ಗುದ್ದಿದೆ. ಪರಿಣಾಮ ಸಂಪೂರ್ಣ ಜಖಂಗೊಂಡಿದೆ. ಜೆಬಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಘಾತ ಮಾಡಿದ ಕಾರಿನೊಳಗೆ ಪೊಲೀಸ್ ಎಂಬ ನೇಮ್ ಬೋರ್ಡ್ ಇದೆ. ಕಚೇರಿ ಕೆಲಸಕ್ಕಾಗಿ ಪೊಲೀಸರು ಖಾಸಗಿ ವಾಹನ ಬಳಕೆ ಮಾಡುತ್ತಾರೆ ಎನ್ನಲಾಗಿದೆ.

ಇನ್ನೂ ಮಗನನ್ನು ಬಚಾವ್ ಮಾಡಲು ತಾನೇ ಕಾರು ಓಡಿಸಿದ್ದು ಎಂದು ತಂದೆ ತ್ಯಾಮರೇಕಣ್ಣನ್‌ ಹೇಳಿಕೊಂಡಿದ್ದಾರೆ. ಆದರೆ ಕಾರು ಓಡಿಸಿದ್ದು ತಂದೆಯಲ್ಲ ಆ ಬಾಲಕನೇ ಕಾರು ಓಡಿಸಿದ್ದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಪಘಾತವಾದ ಬಳಿಕ ತ್ಯಾಮರೇಕಣ್ಣನ್‌ ಓಡಿಬಂದು ಕಾರು ಹತ್ತಿದರು. ಬಾಲಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಆಕಸ್ಮಿಕ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಆಕಸ್ಮಿಕ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಮೂಕಿಹಾಳ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಹುಸೇನಭಾಷಾ ಎಂಬುವವರು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟವರು.

ಮೂಕಿಹಾಳ ಗ್ರಾಮದ ಹೊರವಲಯದಿಂದ ಶಿವಪೂರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ದುರ್ಘಟನೆ ನಡೆದಿದೆ. ತಾಳಿಕೋಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Dead Body Found : ಡ್ಯಾಂನಲ್ಲಿ ಬಿದ್ದಿತ್ತು ವ್ಯಕ್ತಿ ಶವ; ರೈಲು ಬೋಗಿ ಒಳಗೆ ಕೊಳೆಯುತ್ತಿತ್ತು ಮಹಿಳೆಯ ಡೆಡ್‌ಬಾಡಿ

ತುಮಕೂರಿನಲ್ಲಿ ಕಾರು ಪಲ್ಟಿ; ಮದುವೆಗೆ ಹೋಗಿದ್ದ ಇಬ್ಬರು ಶಿಕ್ಷಕರು ಸ್ಥಳದಲ್ಲೇ ಸಾವು

ತುಮಕೂರು: ಜಿಲ್ಲೆಯ (Tumkur) ಪಾವಗಡ ತಾಲೂಕಿನಲ್ಲಿ ಕಾರೊಂದು (Pavagada Accident) ಪಲ್ಟಿಯಾಗಿದ್ದು, ಇಬ್ಬರು ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಶಿಕ್ಷಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿರುವ ಕಾರಣ ಅವರನ್ನು ಬೆಂಗಳೂರಿನ (Bengaluru) ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕಣಿವೆನಹಳ್ಳಿ ಗೇಟ್‌ ಬಳಿ ಕಾರು ಪಲ್ಟಿಯಾಗಿದೆ. ನಾಲ್ವರೂ ತುಮಕೂರಿನಲ್ಲಿ ಮದುವೆ ಆರತಕ್ಷತೆ ಮುಗಿಸಿಕೊಂಡು ಪಾವಗಡಕ್ಕೆ ತೆರಳುತ್ತಿದ್ದರು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮಗುಚಿದೆ. ಕಾರು ಪಲ್ಟಿಯಾದ ತೀವ್ರತೆಗೆ ಒ. ಧನಂಜಯ ಹಾಗೂ ಶ್ರೀಕೃಷ್ಣ ಅವರು ಮೃತಪಟ್ಟಿದ್ದಾರೆ. ಶಿಕ್ಷಕರಾದ ನರಸಿಂಹ ಹಾಗೂ ವೆಂಕಟಾಚಲಪತಿ ಎಂಬುವರು ಗಾಯಗೊಂಡಿದ್ದಾರೆ.

ಒ. ಧನಂಜಯ ಅವರು ಪಾವಗಡ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾಗಿದ್ದರು. ಇನ್ನು ಶ್ರೀಕೃಷ್ಣ ಅವರು ಪಾವಗಡ ತಾಲೂಕಿನ ಗೌಡೇಟಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಪಲ್ಟಿಯಾದ ತೀವ್ರತೆಗೆ ಕಾರು ಕೂಡ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪಾವಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶನಿವಾರವಷ್ಟೇ (ಮೇ 11) ಮಹಾರಾಷ್ಟ್ರದ ಸಾಂಗೋಲಾ- ಜತ್ತ ಮಾರ್ಗದ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಮಹಿಳೆಯರು ಮೃತರಾಗಿದ್ದರು. ಬಳ್ಳಿಗೇರಿ ಗ್ರಾಮದ ನಿವಾಸಿಗಳಾದ ಮಹಾದೇವಿ ಚೌಗಲಾ, ಗೀತಾ ದೊಡಮನಿ, ಕಸ್ತೂರಿ ಮೃತರು. ಬಳ್ಳಿಗೇರಿ ಗ್ರಾಮದಿಂದ ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕ್ರೂಸರ್ ವಾಹನದ ಎಡಬದಿಯ ಟೈರ್ ಸ್ಫೋಟಗೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್‌ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ

Viral News: ಚಿಕ್ಕ ಹೆಣ್ಣು ಮಗುವಿಗೆ ತಾಯಿಯೊಬ್ಬಳು ಮನೆಯಲ್ಲಿ ಕ್ರೂರವಾಗಿ ಹೊಡೆಯುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮಗುವಿನ ತಾಯಿ ಸೌಟಿನಿಂದ ಕ್ರೂರವಾಗಿ ಹಲ್ಲೆ ನಡೆಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಗಾಬರಿ ಬಿದ್ದಿದ್ದಾರೆ. ಇಂತಹ ತಾಯಂದಿರೂ ಇರುತ್ತಾರ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಮಹಿಳೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

VISTARANEWS.COM


on

Viral News
Koo

ಗಾಂಧಿನಗರ: ʼಅಮ್ಮʼ ಎಂಬ ಎರಡಕ್ಷರ ಕೇಳಿದರೆ ಸಾಕು ನೊಂದ ಮನಸ್ಸಿಗೆ ತಂಗಾಳಿ ಬೀಸಿದ ಅನುಭವವಾಗುತ್ತದೆ. ಈ ಜಗತ್ತಿನಲ್ಲಿ ನಿಸ್ವಾರ್ಥ ಇಲ್ಲದೆ ಇತರರಿಗಾಗಿ ಮಿಡಿಯುವ ಜೀವವಿದ್ದರೆ ಅದು ತಾಯಿಯದ್ದು ಮಾತ್ರ. ಇದೇ ಕಾರಣಕ್ಕೆ ನಾವು ತಾಯಿಯನ್ನು ದೇವರೆಂದು ಪೂಜಿಸುತ್ತೇವೆ. ಇಂದು ವಿಶ್ವ ಅಮ್ಮಂದಿರ ದಿನ (Mother’s Day). ತಾಯಂದಿರಿಗೆ ಮನ ತುಂಬಿ ಧನ್ಯವಾದ ಹೇಳುವ ದಿನ. ಆದರೆ ಈಗ ವೈರಲ್‌ ಆಗುತ್ತಿರುವ ಈ ತಾಯಿಯ ವಿಡಿಯೊ ನೋಡಿದರೆ ಮಾತ್ರ ನಮ್ಮ ರಕ್ತ ಕುದಿಯುತ್ತದೆ (Shockong Video). ಇಂತಹ ಅಮ್ಮಂದಿರೂ ಇರುತ್ತಾರ ಎನ್ನುವ ಪ್ರಶ್ನೆ ತನ್ನಿಂದ ತಾನೇ ಹೊರ ಬರುತ್ತದೆ. ಹಾಗಾದರೆ ಈ ವೈರಲ್‌ ವಿಡಿಯೊದಲ್ಲಿ (Viral News) ಏನಿದೆ? ಇಲ್ಲಿದೆ ವಿವರ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ವಿಡಿಯೊ ಇದಾಗಿದ್ದು, ಚಿಕ್ಕ ಹೆಣ್ಣು ಮಗುವಿಗೆ ತಾಯಿಯೊಬ್ಬಳು ಮನೆಯಲ್ಲಿ ಕ್ರೂರವಾಗಿ ಹೊಡೆಯುತ್ತಿರುವುದು ಕಂಡು ಬಂದಿದೆ. ಗುಜರಾತ್‌ನಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೊ ಇದೀಗ ತೀವ್ರ ಚರ್ಚೆಯನ್ನೇ ಹುಟ್ಟು ಹಾಕಿದೆ.

ಶಾಕಿಂಗ್‌ ವಿಡಿಯೊ

ಸುಮಾರು 7-8 ವರ್ಷದ ಹೆಣ್ಣು ಮಗು ಅದು. ನೆಲದಲ್ಲಿ ಮಲಗಿ ಯಾವುದೋ ಕಾರಣಕ್ಕೆ ಅಳುತ್ತಿದೆ. ಅಲ್ಲಿಗೆ ಧಾವಿಸಿ ಬರುವ ಮಹಿಳೆ (ಬಹುಶಃ ಮಗುವಿನ ತಾಯಿ) ಸೌಟಿನಿಂದ ಮುಖ, ಮೂತಿ ನೋಡದೆ ಸರಿಯಾಗಿ ಹೊಡೆಯುತ್ತಾಳೆ. ಒಂದಲ್ಲ ಹಲವು ಬಾರಿ ಈ ರೀತಿ ಹಲ್ಲೆ ನಡೆಸುತ್ತಾಳೆ. ಕ್ರೂರವಾಗಿ ದಾಳಿಗೊಳಗಾದ ಬಾಲಕಿ ಅಸಹಾಯಕತೆಯಿಂದ ಅಳುತ್ತಾಳೆ. ಆಕೆಯ ನೋವಿನ ಕೂಗು ಎಂತಹವರ ಕರಳು ಚುರುಕ್‌ ಎನಿಸುವಂತಿದೆ. ಆದರೆ ತಾಯಿಯ ಕಲ್ಲು ಹೃದಯ ಕರಗುವುದೇ ಇಲ್ಲ. ಮತ್ತಷ್ಟು ಹೊಡೆಯುತ್ತಾಳೆ. ಅಂಗಿಯ ಮೂಲಕ ಮಗುವನ್ನು ಅನಾಮತ್ತಾಗಿ ಎತ್ತಿ ಬೆದಿಕೆ ಹಾಕುತ್ತಾಳೆ. ಒಂದು ಹಂತದಲ್ಲಿ ಬಾಲಕಿಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಲೂ ನೋಡುತ್ತಾಳೆ. ಬಳಿಕ ಆಕೆಯನ್ನು ಎಳೆದುಕೊಂಡು ಮತ್ತೊಂದು ರೂಮಿನೊಳಗೆ ತೆರಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ನೆಟ್ಟಿಗರು ಏನಂದ್ರು?

ವಿಡಿಯೊ ನೋಡಿ ನೆಟ್ಟಿಗರು ಒಂದು ಕ್ಷಣ ದಂಗಾಗಿದ್ದಾರೆ. ಇಂತಹ ತಾಯಂದಿರೂ ಇರುತ್ತಾರ ಎಂದು ಪ್ರಶ್ನಿಸುತ್ತಿದ್ದಾರೆ. ಹಿಂದೆಲ್ಲ ಬಾಲ್ಯದಲ್ಲಿ ನಮಗೆ ಪೋಷಕರು ಹೊಡೆಯುತ್ತಿದ್ದರು, ಶಿಕ್ಷೆ ನೀಡುತ್ತಿದ್ದರು. ಆದರೆ ಎಂದಿಗೂ ಇಷ್ಟು ಕ್ರೂರವಾಗಿ ನಡೆದುಕೊಳ್ಳುತ್ತಿರಲಿಲ್ಲ. ತಪ್ಪು ಮಾಡಿದಾಗ ಅದನ್ನು ತಿದ್ದಲು ಒಂದೇಟು ಬಿಗಿಯುತ್ತಿದ್ದರು. ಆದರೆ ಇದು ತುಂಬ ಅತಿಯಾಯ್ತು. ಮಕ್ಕಳ ಜೀವಕ್ಕೇ ಅಪಾಯಕಾರಿಯಾಗುವ ಇಂತಹ ಶಿಕ್ಷೆ ನೀಡುವುದು ಎಷ್ಟು ಸರಿ? ಎಂದು ಹಲವರು ಪ್ರಶ್ನಿಸಿದ್ದಾರೆ.

ಜತೆಗೆ ಈ ಘಟನೆ ನಡೆಯುವಾಗ ಅದನ್ನು ತಡೆಯಲು ಮುಂದಾಗದೆ ಚಿತ್ರೀಕರಿಸಿದವರ ಬಗ್ಗೆಯೂ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವಿನ ಮೇಲೆ ಇಷ್ಟು ನಿರ್ದಯವಾಗಿ ನಡೆದುಕೊಳ್ಳುತ್ತಿದ್ದರೂ ತಂದೆ ಮೌನವಾಗಿ ವಿಡಿಯೊ ಶೂಟಿಂಗ್‌ ಮಾಡುತ್ತಿದ್ದಾನೆ. ಮಹಿಳೆ ಜತೆಗೆ ಈತನ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಮಗುವಿನ ತಾಯಿ ತನ್ನ ಪತಿಯ ಜತೆಗೂ ಹೀಗೆ ವರ್ತಿಸುತ್ತಿರಬಹುದು ಎಂದು ಇನ್ನೊಬ್ಬರು ಊಹಿಸಿದ್ದಾರೆ. ಇಂತಹ ಘಟನೆ ಪುನರಾವರ್ತನೆಯಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಗದೊಬ್ಬರು ಆಗ್ರಹಿಸಿದ್ದಾರೆ. ವಿಷಾದದ ಸಂಗತಿ ಎಂದರೆ ಅಮ್ಮಂದಿರ ದಿನವೇ ಈ ವಿಡಿಯೊ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಹಾವಳಿ; ಹಾಡ ಹಗಲೇ ಯುವತಿಗೆ ಅನ್ಯಕೋಮಿನ ಯುವಕರಿಂದ ಕಿರುಕುಳ

Continue Reading
Advertisement
Prajwal Revanna Case
ಕರ್ನಾಟಕ2 hours ago

Prajwal Revanna Case: ಅಶ್ಲೀಲ ವಿಡಿಯೊ ಕೇಸ್; ಚೇತನ್, ಲಿಖಿತ್‌ಗೆ 14 ದಿನ ನ್ಯಾಯಾಂಗ ಬಂಧನ‌

IPL 2024
ಪ್ರಮುಖ ಸುದ್ದಿ2 hours ago

IPL 2024 : ಡೆಲ್ಲಿ ವಿರುದ್ಧ ಆರ್​​ಸಿಬಿ 47 ರನ್ ಗೆಲುವು, ಪ್ಲೇಆಫ್​ಗೆ ಇನ್ನೊಂದು ಗೆಲುವು ಬೇಕು

Chetan Chandra
ಕರ್ನಾಟಕ3 hours ago

Chetan Chandra: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ; ರಕ್ತ ಬರುವಂತೆ ಥಳಿತ

Virat kohli
Latest3 hours ago

Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

Sunil Narine
ಪ್ರಮುಖ ಸುದ್ದಿ4 hours ago

Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

vijay Rao herur
ಸಿನಿಮಾ4 hours ago

Vijay Rao Herur: ‘ವಿಜಯದಾಸರು’ ಚಿತ್ರದ ಸಹ ನಟ ವಿಜಯ್‌ ರಾವ್ ಹೇರೂರು ವಿಧಿವಶ

Virat Kohli
ಪ್ರಮುಖ ಸುದ್ದಿ4 hours ago

Virat kohli: ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ; ವಿಡಿಯೊ ನೋಡಿ

Ravindra Jadeja
ಕ್ರೀಡೆ4 hours ago

Ravindra Jadeja : ವಿಕೆಟ್​ಗೆ ಹೋಗುತ್ತಿದ್ದ ಚೆಂಡು ತಡೆದ ಜಡೇಜಾಗೆ ಔಟ್ ಕೊಟ್ಟ ಅಂಪೈರ್​; ಇಲ್ಲಿದೆ ವಿಡಿಯೊ

Rain News
ಕರ್ನಾಟಕ4 hours ago

Rain News: ಬಾಗಲಕೋಟೆಯಲ್ಲಿ ಸಿಡಿಲಿಗೆ ಬಾಲಕ ಬಲಿ; ಬೆಳಗಾವಿಯ ಮನೆಗಳಿಗೆ ನುಗ್ಗಿದ ಮಳೆ ನೀರು

IPL 2024
ಪ್ರಮುಖ ಸುದ್ದಿ4 hours ago

IPL 2024 : ಅತಿಯಾಗಿ ಸಂಭ್ರಮಿಸುತ್ತಿದ್ದ ಡೆಲ್ಲಿ ಬೌಲರ್​ ರಸಿಕ್ ಸಲಾಮ್​ನನ್ನು ತಳ್ಳಿದ ರಜತ್​ ಪಾಟೀದಾರ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case I was never kidnapped and son has made a false complaint Video of victim goes viral
ಕ್ರೈಂ8 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ8 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ8 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ12 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ13 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ21 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ3 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

ಟ್ರೆಂಡಿಂಗ್‌