Viral video: ಗೃಹ ಸಚಿವ ಅಮಿತ್‌ ಶಾ ಕಾರ್‌ಗೂ CAAಗೂ ಇದೆ ಸಂಬಂಧ! - Vistara News

ವೈರಲ್ ನ್ಯೂಸ್

Viral video: ಗೃಹ ಸಚಿವ ಅಮಿತ್‌ ಶಾ ಕಾರ್‌ಗೂ CAAಗೂ ಇದೆ ಸಂಬಂಧ!

Viral video: ಅಮಿತ್‌ ಶಾ ಅವರ ಕಾರಿನ ವಿಡಿಯೋ ಇದೀಗ ವೈರಲ್‌ ಆಗಿದೆ. ಕಾರಣ ನೀವೇ ನೋಡಿ.

VISTARANEWS.COM


on

amit shah car CAA
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಗೃಹ ಸಚಿವ ಅಮಿತ್‌ ಶಾ (Home Minister Amit Shah) ಅವರ ಖಾಸಗಿ ಕಾರಿನ ನಂಬರ್‌ ಎಷ್ಟು? ಇದಕ್ಕೂ ಪೌರತ್ವ ನೋಂದಣಿ ತಿದ್ದುಪಡಿ ಕಾಯಿದೆಗೂ (Citizen Amendment Act – CAA) ಸಂಬಂಧವಿದೆ ಎಂದರೆ ನಂಬುತ್ತೀರಾ? ಇದೀಗ ವೈರಲ್‌ ವಿಡಿಯೋ (viral video) ಆಗಿರುವ ಅಮಿತ್‌ ಶಾ ಅವರ ಕಾರಿನ ವಿಡಿಯೋ ನೋಡಿದರೆ ನೀವೇ ತೀರ್ಮಾನ ಮಾಡಬಹುದು.

ಹೌದು, ಇಂದು ಬಿಜೆಪಿ ಹೈಕಮಾಂಡ್‌ ಸಭೆಗೆ ದಿಲ್ಲಿಯ ಬಿಜೆಪಿ ಕಚೇರಿಗೆ ಅಮಿತ್‌ ಶಾ ಆಗಮಿಸಿದಾಗ ಚಿತ್ರಿಸಿದ ವಿಡಿಯೋ ಇದು. ಅವರ ಕಾರಿನ ನಂಬರ್‌ ಗಮನಿಸಿದವರು ಅಚ್ಚರಿಪಟ್ಟಿದ್ದಾರೆ. ಇದರಲ್ಲಿ ʼCAA’ ಇದೆ. `DL1 CAA 4421′ ಎಂಬುದು ಈ ಕಾರಿನ ನಂಬರ್‌. ಅಮಿತ್‌ ಶಾ ಅವರು ಸಿಎಎ ಜಾರಿಗೆ ಟೊಂಕ ಕಟ್ಟಿದ್ದಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನು ಸೂಕ್ಷ್ಮವಾಗಿ ಗಮನಿಸಿದ ಆನ್‌ಲೈನ್‌ ಜಾಣರು ತಮ್ಮದೇ ಅಭಿಪ್ರಾಯಗಳನ್ನು ಈ ಕುರಿತು ತೇಲಿಬಿಟ್ಟಿದ್ದಾರೆ. “ಅಮಿತ್‌ ಶಾ ಸಿಎಎ ಜಾರಿ ಬಗ್ಗೆ ಎಷ್ಟು ಸೀರಿಯಸ್‌ ಆಗಿದ್ದಾರೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ” ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. “ಇದು ಸೂಕ್ಷ್ಮ ಸಂದೇಶ” “CAA ಬರ್ತಾ ಇದೆ, ದಾರಿ ಬಿಡಿ” “ಇದು ಕಾಕತಾಳೀಯ ಆಗಿರಲಿಕ್ಕಿಲ್ಲ” “ಇದು ಮೊದಲೇ ನಮ್ಮ ಕಣ್ಣಿಗೆ ಯಾಕೆ ಬೀಳ್ಲಿಲ್ಲ?” ಎಂದೂ ಇನ್ನೂ ಹಲವರು ಕಾಮೆಂಟ್‌ ಮಾಡಿದ್ದಾರೆ.

ಇತ್ತೀಚೆಗೆ ಅಮಿತ್‌ ಶಾ ಅವರು ಸಿಎಎ ಲೋಕಸಭೆ ಚುನಾವಣೆಗೂ ಮುನ್ನ ಜಾರಿಯಾಗಲಿದೆ ಎಂದು ಹೇಳಿದ್ದರು. ಇತ್ತೀಚೆಗೆ ಗೃಹ ಸಚಿವಾಲಯ ಸಿಎಎ ಜಾರಿಗೆ ಬೇಕಾದ ನಿಯಮಾವಳಿಗಳನ್ನು ಹೊರಡಿಸಲಿದೆ ಎಂದು ಹೇಳಿತ್ತು.

2019ರಲ್ಲೇ ಸಿಎಎ ತಿದ್ದುಪಡಿ ಜಾರಿಯಾದರೂ ನಿಯಮಗಳ ಅಧಿಸೂಚನೆ ಹೊರಡಿಸಿರಲಿಲ್ಲ. ಈ ಕಾಯ್ದೆಯ ಅನ್ವಯ ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಹಿಂದೂಗಳು, ಸಿಖ್‌ಗಳು, ಬೌದ್ಧರು, ಪಾರ್ಸಿಗಳು, ಜೈನರು ಮತ್ತು ಕ್ರಿಶ್ಚಿಯನ್ನರು ಡಿಸೆಂಬರ್ 31, 2014 ರಂದು ಅಥವಾ ಮೊದಲು ಭಾರತಕ್ಕೆ ಪ್ರವೇಶಿಸಿದ್ದರೆ ಅಂಥವರಿಗೆ ಭಾರತೀಯ ಪೌರತ್ವವನ್ನು ಒದಗಿಸುವ ಅವಕಾಶವನ್ನು ಈ ಸಿಎಎ ಒದಗಿಸುತ್ತದೆ. ಕೇವಲ ಧರ್ಮವೇ ಭಾರತೀಯ ಪೌರತ್ವ ಪಡೆಯಲು ಮಾನದಂಡವಾದ್ದರಿಂದ ದೇಶಾದ್ಯಂತ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು.

ಸಿಎಎ ವಿರೋಧಿಸಿ 2019 ರಲ್ಲಿ ಭಾರೀ ಪ್ರತಿಭಟನೆಗಳು ಕೂಡ ನಡೆದವು. ಅನೇಕ ರಾಜಕೀಯ ನಾಯಕರು ಸಿಎಎ ಅನ್ನು ರಾಷ್ಟ್ರೀಯ ನಾಗರಿಕರ ನೋಂದಣಿ(NRC)ಗೆ ಸಂಪರ್ಕ ಕಲ್ಪಿಸಿದ್ದರಿಂದ ಗೊಂದಲವು ಉಂಟಾಯಿತು. ಈ ಮಧ್ಯೆ, ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಜೋರಾದ್ದರಿಂದ ಪ್ರತಿಭಟನೆಗಳನ್ನು ಕೈ ಬಿಡಲಾಯಿತು.

ಅಲ್ಲದೇ, ಕೋವಿಡ್ ಕಾರಣದಿಂದಾಗಿ ಸಿಎಎ ಜಾರಿ ಸಂಬಂಧ ನಿಯಮಗಳನ್ನು ರೂಪಿಸುವಲ್ಲಿ ಕೇಂದ್ರ ಸರ್ಕಾರ ಕೂಡ ವಿಳಂಬ ಮಾಡಿತು. ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿಭಾಯಿಸುವುದು ಮೊದಲ ಆದ್ಯತೆಯಾದ್ದರಿಂದ ನಿಯಮಗಳನ್ನು ರಚಿಸಲು ಕೇಂದ್ರ ಸರ್ಕಾರವು ಮುಂದಾಗಲಿಲ್ಲ. ಈಗ ಮತ್ತೆ ಸಿಎಎ ಕುರಿತು ಅಧಿಸೂಚನೆ ಹೊರಡಿಸಲು ಸರ್ಕಾರವು ಈಗ ಮುಂದಾಗಿದೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಅದೇ ಕಾರಣಕ್ಕೆ ಕೇಂದ್ರ ಸರ್ಕಾರವು ಮತ್ತೆ ಸಿಎಎಯತ್ತ ತನ್ನ ಕಣ್ಣು ನೆಟ್ಟಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: CAA Rules: ಕೇಂದ್ರ ಸರ್ಕಾರದಿಂದ ಶೀಘ್ರವೇ ಸಿಎಎ ನಿಯಮಗಳ ಅಧಿಸೂಚನೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ನೇತಾಡುವ ಯುವಕ; ಶಾಕಿಂಗ್‌ ವಿಡಿಯೊ ನೋಡಿ

Viral News: ಇತ್ತೀಚೆಗಷ್ಟೇ ಫುಟ್‌ರೆಸ್ಟ್‌ ಮೇಲೆ ಪುಟ್ಟ ಮಗುವನ್ನು ನಿಲ್ಲಿಸಿಕೊಂಡು ಸ್ಕೂಟರ್‌ ಚಲಾಯಿಸುತ್ತಿರುವ ದಂಪತಿಯ ವಿಡಿಯೊ ವೈರಲ್‌ ಆಗಿತ್ತು. ಈಗ ಅಂತಹದ್ದೇ ಮತ್ತೊಂದು ವಿಡಿಯೊ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಯುವಕನೊಬ್ಬ ಚಲಿಸುತ್ತಿರುವ ಕಾರಿಗೆ ಕಟ್ಟಿದ ಪ್ಲಾಸ್ಟಿಕ್‌ ಕವರ್‌ನಲ್ಲಿ ನೇತಾಡುತ್ತಿರುವ ವಿಡಿಯೊ ಇದಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊ ನೋಡಿದ ನೆಟ್ಟಿಗರು ಯುವಕನಿಗೆ ಛೀಮಾರಿ ಹಾಕುತ್ತಿದ್ದಾರೆ.

VISTARANEWS.COM


on

Viral News
Koo

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಗಳಿಸಲು ಯುವ ಜನತೆ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ತಯಾರಿರುತ್ತಾರೆ. ತಮ್ಮ ಜೀವವನ್ನೇ ಅಪಾಯಕ್ಕೆ ತಳ್ಳಿ ಸಾಹಸ ನಡೆಸಿ ಅದನ್ನು ಚಿತ್ರೀಕರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ಮತ್ತೊಂದು ಉದಾಹರಣೆ ಇದು. ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ಯುವಕನೊಬ್ಬ ನೇತಾಡುತ್ತಿರುವುದನ್ನು ತೋರಿಸುವ ವಿಡಿಯೊ ವೈರಲ್‌ (Viral News) ಆಗಿದ್ದು, ನೆಟ್ಟಿಗರು ಒಂದು ಕ್ಷಣ ದಂಗಾಗಿದ್ದಾರೆ. ಜೀವವನ್ನೇ ಅಪಾಯಕ್ಕೆ ತಳ್ಳಬಹುದಾದ ಈ ಹುಚ್ಚು ಸಾಹಸ ನೋಡಿ ಅನೇಕರು ಆ ಯುವಕನಿಗೆ ಛೀಮಾರಿ ಹಾಕುತ್ತಿದ್ದಾರೆ.

ಚಲಿಸುತ್ತಿರುವ ಕಾರಿನ ಬಾಗಿಲಿಗೆ ತೊಟ್ಟಿಲಂತೆ ಕಟ್ಟಿರುವ ಪ್ಲಾಸ್ಟಿಕ್‌ನಲ್ಲಿ ಯುವಕನೊಬ್ಬ ಮಗುವಿನಂತೆ ಮಲಗಿರುತ್ತಾನೆ. ಕಾರು ಚಲಿಸುತ್ತಿರುವಾಗ ಆತ ಅದರಲ್ಲಿ ನೇತಾಡಿಕೊಂಡು ಆನಂದಿಸುತ್ತಾನೆ. ಚಾಲಕ ನಗುತ್ತ ಆ ಯುವಕನೊಂದಿಗೆ ತಮಾಷೆ ಮಾಡುತ್ತಾನೆ. ಹಿಂದಿನ ಸೀಟಿನಲ್ಲಿರುವ ಇನ್ನೋರ್ವ ಯುವಕನೂ ಈ ಹುಚ್ಚು ಸಾಹಸಕ್ಕೆ ಸಾಕ್ಷಿಯಾಗುತ್ತಾನೆ. ಈ ಕಾರು ಹೈವೆಯಲ್ಲಿ ಸಾಗುತ್ತಿರುತ್ತದೆ. ಇದು ವೈರಲ್‌ ವಿಡಿಯೊದಲ್ಲಿ ಕಂಡು ಬರುವ ದೃಶ್ಯ. ಇದನ್ನು ಎಲ್ಲಿ ಚಿತ್ರೀಕರಣಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.

ಈ ಪೋಸ್ಟ್ ಅನ್ನು ವಾರದ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ ಇದನ್ನು 90 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಎರಡು ದಶಲಕ್ಷಕ್ಕೂ ಹೆಚ್ಚು ಲೈಕ್‌ ದೊರೆತಿದೆ. ಸದ್ಯ ವಿಡಿಯೊ ನೋಡಿದ ನೆಟ್ಟಿಗರು ಈ ಯುವಕರ ಗುಂಪನ್ನು ತರಾಟೆಗೆ ತೆಗೆದುಕೊಂಡಿದೆ. ಸಾವರ್ಜನಿಕ ಸ್ಥಳಗಳಲ್ಲಿ ಇಂತಹ ಅಪಾಯಕಾರಿ ಸಾಹಸ ಪ್ರದರ್ಶಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಇಂತಹವರು ತಾವು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದ ಜತೆಗೆ ಇತರರನ್ನೂ ಅಪಾಯಕ್ಕೆ ಸಿಲುಕಿಸುತ್ತಾರೆ. ಅಂತಹ ಪ್ರವೃತ್ತಿಗೆ ಕಡಿವಾಣ ಹಾಕಲೇಬೇಕು. ಇಂತಹವರ ಚಾಲನಾ ಪರವಾನಗಿ ರದ್ದು ಪಡಿಸಬೇಕು ಎಂದು ನೆಟ್ಟಿಗರು ಅಧಿಕೃತರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Viral Video: ಮೆರವಣಿಗೆಯಲ್ಲಿ ಸಾಗಿ 200 ಕೋಟಿ ರೂ. ಜನರ ಮೇಲೆ ಸುರಿದ ಜೈನ ದಂಪತಿ; ವಿಡಿಯೊ ವೈರಲ್​

ಫುಟ್‌ರೆಸ್ಟ್‌ ಮೇಲೆ ಮಗು ನಿಲ್ಲಿಸಿಕೊಂಡು ಬೈಕ್‌ ರೈಡ್‌!

ಕೆಲವು ದಿನಗಳ ಹಿಂದೆಯಷ್ಟೇ ಫುಟ್‌ರೆಸ್ಟ್‌ (Foot rest) ಮೇಲೆ ಪುಟ್ಟ ಮಗುವನ್ನು ನಿಲ್ಲಿಸಿಕೊಂಡು ಸ್ಕೂಟರ್‌ ಚಲಾಯಿಸುತ್ತಿರುವ (Bike riding) ದಂಪತಿಯ ವಿಡಿಯೊ ವೈರಲ್‌ ಆಗಿತ್ತು. ಸ್ಕೂಟರ್ ಅಥವಾ ಬೈಕ್‌ನಲ್ಲಿ ಇಬ್ಬರು ಸವಾರರ ನಡುವೆ ಮಕ್ಕಳನ್ನು ಅಪ್ಪಚ್ಚಿಯಾಗುವಂತೆ ಕೂರಿಸುವುದು ಸಾಮಾನ್ಯ. ಆದರೆ ಈ ವಿಲಕ್ಷಣ ಸಾಹಸದ ವಿಡಿಯೊ ಮಾತ್ರ ಸೋಶಿಯಲ್‌ ಮೀಡಿಯಾ ಬಳಕೆದಾರರಲ್ಲಿ ಆತಂಕ ಮೂಡಿಸಿದೆ. ಈ ದಂಪತಿಯ ʼಮೂರ್ಖತನ’ದ ಬಗ್ಗೆ ಆಕ್ರೋಶ ವ್ಯಕ್ತಡಿಸಿದ್ದಾರೆ.

ಬಹುಶಃ ಹಿಂದಿನ ವಾಹನದಲ್ಲಿದ್ದ ಯಾರೋ ಇದನ್ನು ವಿಡಿಯೊ ಮಾಡಿಕೊಂಡಿದ್ದು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಒಬ್ಬ ವ್ಯಕ್ತಿ ಸ್ಕೂಟರ್‌ ಚಲಾಯಿಸುತ್ತಿದ್ದು ಆತನ ಹಿಂದೆ ಮಹಿಳೆ ಕುಳಿತಿದ್ದಾಳೆ. ಪಕ್ಕದಲ್ಲಿರುವ ಫುಟ್‌ರೆಸ್ಟ್‌ನಲ್ಲಿ ಮಗುವನ್ನು ನಿಲ್ಲಿಸಲಾಗಿದೆ. ರಾತ್ರಿ ಬೆಂಗಳೂರಿನ ಬೀದಿಯಲ್ಲಿ ಟ್ರಾಫಿಕ್ ಮೂಲಕ ಸ್ಕೂಟರ್ ಸವಾರಿ ಮಾಡುವುದು ವಿಡಿಯೊದಲ್ಲಿದೆ. ಜನನಿಬಿಡ ರಸ್ತೆಯಲ್ಲಿ ಸಂಚರಿಸುವಾಗ ಮಹಿಳೆ ಮಗುವನ್ನು ಒಂದು ಕೈಯಿಂದ ಹಿಡಿದುಕೊಳ್ಳುತ್ತಾಳೆ. ಸದ್ಯ ಈ ವಿಡಿಯೊಗೆ ಟೀಕೆಗಳ ಸುರಿಮಳೆ ಬಂದಿದೆ.

Continue Reading

ವೈರಲ್ ನ್ಯೂಸ್

Viral News: ಬಿಸಿಗಾಳಿಯ ಸುದ್ದಿ ಓದುತ್ತಿದ್ದಾಗಲೇ ಲೈವ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಟಿವಿ ನಿರೂಪಕಿ

Viral News: ದೇಶದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಈ ತೀವ್ರ ತಾಪಮಾನದ ಝಳ ಇದೀಗ ಟಿವಿ ನಿರೂಪಕಿಯೊಬ್ಬರಿಗೂ ತಟ್ಟಿದೆ. ಹವಾಮಾನ ವರದಿ ನೀಡುತ್ತಿರುವಾಗಲೇ ಡಿಡಿ ದೂರದರ್ಶನದ ವಾರ್ತಾ ವಾಚಕಿಯೊಬ್ಬರು ಲೈವ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಕೋಲ್ಕತಾ ದೂರದರ್ಶನದ ನಿರೂಪಕಿ ಲೋಪಮುದ್ರ ಸಿನ್ಹಾ ಕುಸಿದು ಬಿದ್ದವರು. ಸದ್ಯ ಲೋಪಮುದ್ರ ಸಿನ್ಹಾ ಅವರು ಚೇತರಿಸಿಕೊಂಡಿದ್ದಾರೆ. ರಕ್ತದೊತ್ತಡ ತೀವ್ರವಾಗಿ ಕುಸಿದಿದ್ದರಿಂದ ತನಗೆ ಲೈವ್‌ನಲ್ಲೇ ಪ್ರಜ್ಞೆ ತಪ್ಪಿತ್ತು ಎಂದು ಅವರು ಹೇಳಿದ್ದಾರೆ. ಈ ಘಟನೆಯನ್ನು ಅವರು ಫೇಸ್‌ಬುಕ್‌ನಲ್ಲಿ ವಿವರಿಸಿದ್ದಾರೆ.

VISTARANEWS.COM


on

Viral News
Koo

ಕೋಲ್ಕತ್ತಾ: ದೇಶದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಮನೆಯಿಂದ ಹೊರಗಿಳಿಯಲೂ ಮುನ್ನ ಎರಡೆರಡು ಬಾರಿ ಯೋಚಿಸುವಂತಾಗಿದೆ. ಭಾರತದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ನಿಂದ 46 ಡಿಗ್ರಿ ಸೆಲ್ಸಿಯಸ್‌ವರೆಗೆ ಇದೆ. ಈ ತೀವ್ರ ತಾಪಮಾನದ ಝಳ ಇದೀಗ ಟಿವಿ ನಿರೂಪಕಿಯೊಬ್ಬರಿಗೂ ತಟ್ಟಿದೆ. ಹವಾಮಾನ ವರದಿ ನೀಡುತ್ತಿರುವಾಗಲೇ ಡಿಡಿ ದೂರದರ್ಶನದ ವಾರ್ತಾ ವಾಚಕಿಯೊಬ್ಬರು ಲೈವ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಸೇರಿದ ಬೆಂಗಾಲಿ ದೂರದರ್ಶನದ ಲೈವ್‌ನಲ್ಲಿ ಈ ಘಟನೆ ನಡೆದಿದೆ (Viral News).

ಕೋಲ್ಕತಾ ದೂರದರ್ಶನದ ನಿರೂಪಕಿ ಲೋಪಮುದ್ರ ಸಿನ್ಹಾ ಕುಸಿದು ಬಿದ್ದವರು. ದೂರದರ್ಶನ ಚಾನೆಲ್‌ನಲ್ಲಿ ಪ್ರತಿದಿನದಂತೆ ಅಂದೂ (ಗುರುವಾರ) ರಾಜ್ಯದ ಹವಾಮಾನದ ಬಗ್ಗೆ ಅವರು ವರದಿ ಮಾಡುತ್ತಿದ್ದಾಗ ಲೈವ್‌ನಲ್ಲೇ ಪ್ರಜ್ಞಾಶೂನ್ಯರಾಗಿದ್ದಾರೆ. ತೀವ್ರ ಬಿಸಿಲಿನ ಝಳಕ್ಕೆ ಹೀಗಾಗಿದೆ ಎಂದು ಮೂಲಗಳು ತಿಳಿಸಿವೆ.

ಚೇತರಿಸಿಕೊಂಡಿದ್ದಾರೆ

ಸದ್ಯ ಲೋಪಮುದ್ರ ಸಿನ್ಹಾ ಅವರು ಚೇತರಿಸಿಕೊಂಡಿದ್ದಾರೆ. ರಕ್ತದೊತ್ತಡ ತೀವ್ರವಾಗಿ ಕುಸಿದಿದ್ದರಿಂದ ತನಗೆ ಲೈವ್‌ನಲ್ಲೇ ಪ್ರಜ್ಞೆ ತಪ್ಪಿತ್ತು ಎಂದು ಅವರು ಹೇಳಿದ್ದಾರೆ. ಆ ಘಟನೆಯನ್ನು ಅವರು ಹೀಗೆ ವಿವರಿಸುತ್ತಾರೆ: ʼʼನ್ಯೂಸ್ ಓದಲು ಆರಂಭಿಸುವುದಕ್ಕೆ ಮೊದಲೇ ನನಗೆ ಸ್ವಲ್ಪ ನಿತ್ರಾಣವಾದಂತಾಗಿತ್ತು. ಆದರೆ ಅದನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆ ವೇಳೆ ನೀರು ಕುಡಿಯಲೂ ಸಮಯವಿಲ್ಲದ್ದರಿಂದ ಹಾಗೆಯೇ ಸ್ಟುಡಿಯೋಗೆ ತೆರಳಿದೆ. ಕಾಕತಾಳೀಯವಾಗಿ ಹವಾಮಾನ ವರದಿಯಲ್ಲಿ ಬಿಸಿಗಾಳಿಯ ಬಗ್ಗೆ ಸುದ್ದಿ ಓದುತ್ತಿರುವ ವೇಳೆ ಲೈವ್‌ನಲ್ಲೇ ಇದಕ್ಕಿದ್ದಂತೆ ಕುಸಿದು ಬಿದ್ದೆʼʼ ಎಂದು ಲೋಪಮುದ್ರ ಸಿನ್ಹಾ ಹೇಳಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೂಲಿಂಗ್ ಸಿಸ್ಟಮ್‌ನಲ್ಲಿನ ದೋಷದಿಂದಾಗಿ ಸ್ಟುಡಿಯೋ ಒಳಗೆ ತೀವ್ರ ಶಾಖವಿತ್ತು. ಅಸ್ವಸ್ಥತೆಗೆ ಇದೂ ಕಾರಣವಿರಬಹುದು ಎಂದು ಅವರು ತಿಳಿಸಿದ್ದಾರೆ.

“ನಾನು ಎಂದಿಗೂ ವಾರ್ತೆ ಓದುವಾಗ ನೀರಿನ ಬಾಟಲಿಯನ್ನು ಇಟ್ಟುಕೊಳ್ಳುವುದಿಲ್ಲ. ಅದು ಹದಿನೈದು ನಿಮಿಷ ಅಥವಾ ಅರ್ಧ ಗಂಟೆಯ ಪ್ರಸಾರವಾಗಿರಲಿ, ನನ್ನ 21 ವರ್ಷಗಳ ವೃತ್ತಿ ಜೀವನದಲ್ಲಿ ಪ್ರಸಾರದ ಸಮಯದಲ್ಲಿ ಎಂದಿಗೂ ನೀರು ಕುಡಿದಿರಲಿಲ್ಲ. ಆದರೆ ಮೊನ್ನೆ ವಾರ್ತಾ ಪ್ರಸಾರ ಕೊನೆಗೊಳ್ಳಲು 15 ನಿಮಿಷಗಳು ಉಳಿದಿರುವಂತೆ ತೀವ್ರ ಬಾಯಾರಿಕೆಯಾಗತೊಡಗಿತು. ಟಿವಿಯಲ್ಲಿ ನನ್ನ ಮುಖವನ್ನು ತೋರಿಸದೆ ಇದ್ದಾಗ ನಾನು ಫ್ಲೋರ್ ಮ್ಯಾನೇಜರ್ ಕಡೆಗೆ ತಿರುಗಿ ನೀರಿನ ಬಾಟಲಿಯನ್ನು ಕೇಳಿದ್ದೆ” ಎಂದು ಅವರು ವಿವರಿಸಿದ್ದಾರೆ.

ಲೋಪಮುದ್ರ ಸಿನ್ಹಾ ಕುಸಿದು ಬೀಳುತ್ತಿದ್ದಂತೆ ಅಲ್ಲಿದ್ದವರು ಅವರ ಸಹಾಯಕ್ಕೆ ಧಾವಿಸಿ ಬಂದು ಮುಖಕ್ಕೆ ನೀರು ಚಿಮುಕಿಸಿ ಎಚ್ಚರಗೊಳಿಸಿದ್ದಾರೆ. ಪ್ರಸ್ತುತ ತಾನು ಆರೋಗ್ಯವಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅವರ ಸ್ನೇಹಿತರು, ಆತ್ಮೀಯರು ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಇದನ್ನೂ ಓದಿ: Viral News: ಫೋಟೊ ನೋಡಿ ಮದುವೆಯಾಗಲು ಒಪ್ಪಿದಳು, ವರ ಎದುರು ಬಂದಾಗ ಒಲ್ಲೆ ಎಂದಳು!

ತೀವ್ರ ತಾಪಮಾನದಿಂದ ರಕ್ಷಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಬೇಕು. ಮನೆಯೊಳಗಿದ್ದರೂ ಸಾಕಷ್ಟು ದ್ರವಾಹಾರ ಸೇವಿಸುತ್ತಿರಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಶನಿವಾರ ಕೆಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಏಳರಿಂದ ಎಂಟು ಡಿಗ್ರಿ ಹೆಚ್ಚಾಗಿತ್ತು. ಪಶ್ಚಿಮ ಬಂಗಾಳದ ಮಿಡ್ನಾಪುರ ಮತ್ತು ಬಂಕುರಾದಲ್ಲಿ ಕ್ರಮವಾಗಿ 44.5 ಡಿಗ್ರಿ ಸೆಲ್ಸಿಯಸ್ ಮತ್ತು 44.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.

Continue Reading

ದೇಶ

Donkey Milk: ಕತ್ತೆಗೂ ಬಂತು ಕಾಲ; ಕತ್ತೆ ಹಾಲು ಮಾರಾಟದಿಂದ ತಿಂಗಳಿಗೆ 3 ಲಕ್ಷ ರೂ. ಆದಾಯ!

Donkey Milk: ಸಾಮಾನ್ಯವಾಗಿ ಯಾರನ್ನಾದರೂ ಹೀಯಾಳಿಸಲು ಕತ್ತೆ ಎಂಬ ಪದವನ್ನು ಬಳಸುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಬೂಯ್ಯುವಂತಿಲ್ಲ. ಯಾಕೆಂದರೆ ಕತ್ತೆ ಹಾಲಿಗೆ ಬಹು ಬೇಡಿಕೆ ಸೃಷ್ಟಿಯಾಗಿದೆ. ಇದು ಇತರ ಹಾಲಿಗಿಂತ ಸುಮಾರು 70 ಪಟ್ಟು ಅಧಿಕ ದರ ಹೊಂದಿದೆ. ಗುಜರಾತ್‌ನ ರೈತರೊಬ್ಬರು ಕತ್ತೆ ಹಾಲು ಮಾರಾಟದಿಂದ ಪ್ರತಿ ತಿಂಗಳು ಸುಮಾರು 2-3 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಗುಜರಾತ್‌ನ ಪಟಾನ್ ಜಿಲ್ಲೆಯ ಧೀರೇನ್ ಸೋಲಂಕಿ 42 ಕತ್ತೆಗಳನ್ನು ಸಾಕುತ್ತಿದ್ದಾರೆ. ಕತ್ತೆ ಫಾರ್ಮ್ ಹೊಂದಿರುವ ಅವರು, ದಕ್ಷಿಣದ ರಾಜ್ಯಗಳ ಗ್ರಾಹಕರಿಗೆ ಕತ್ತೆ ಹಾಲನ್ನು ಪೂರೈಸುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಅವರ ಯಶೋಗಾಥೆಯ ಪರಿಚಯ ಇಲ್ಲಿದೆ.

VISTARANEWS.COM


on

Donkey Milk
Koo

ಗಾಂಧಿನಗರ: ಸಾಮಾನ್ಯವಾಗಿ ಕತ್ತೆ ಎಂದರೆ ಹೀಯಾಳಿಸುವವರೇ ಅಧಿಕ. ಆದರೆ ಈಗ ಕತ್ತೆಗೂ ಬೇಡಿಕೆ ಸೃಷ್ಟಿಯಾಗಿದೆ. ಯಾಕೆಂದರೆ ಕತ್ತೆಯ ಹಾಲಿ(Donkey Milk)ನಲ್ಲಿ ಅಪಾರ ಔಷಧೀಯ ಗುಣಗಳಿದ್ದು, ಜನರು ನಿಧಾನವಾಗಿ ಇದರತ್ತ ಮುಖ ಮಾಡುತ್ತಿದ್ದಾರೆ. ಪರಿಣಾಮವಾಗಿ ಕತ್ತೆ ಹಾಲು ಇತರ ಹಾಲಿಗಿಂತ ಸುಮಾರು 70 ಪಟ್ಟು ಅಧಿಕ ದರ ಹೊಂದಿದೆ. ಗುಜರಾತ್‌ನ ರೈತರೊಬ್ಬರು ಕತ್ತೆ ಹಾಲು ಮಾರಾಟದಿಂದ ಪ್ರತಿ ತಿಂಗಳು ಸುಮಾರು 2-3 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು (Viral News).

ಗುಜರಾತ್‌ನ ಪಟಾನ್ ಜಿಲ್ಲೆಯ ಧೀರೇನ್ ಸೋಲಂಕಿ 42 ಕತ್ತೆಗಳನ್ನು ಸಾಕುತ್ತಿದ್ದಾರೆ. ಕತ್ತೆ ಫಾರ್ಮ್ ಹೊಂದಿರುವ ಅವರು, ದಕ್ಷಿಣದ ರಾಜ್ಯಗಳ ಗ್ರಾಹಕರಿಗೆ ಕತ್ತೆ ಹಾಲನ್ನು ಪೂರೈಸುವ ಮೂಲಕ ತಿಂಗಳಿಗೆ 2-3 ಲಕ್ಷ ರೂ. ಗಳಿಸುತ್ತಿದ್ದಾರೆ.

ಧೀರೇನ್ ಸೋಲಂಕಿ ಹಿನ್ನೆಲೆ

ಈ ಯಶಸ್ಸಿನ ಪಯಣವನ್ನು ಧೀರೇನ್‌ ವಿವರಿಸುವುದು ಹೀಗೆ: ʼʼನಾನು ಆರಂಭದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿದೆ. ಆದರೆ ಸಿಕ್ಕಿರಲಿಲ್ಲ. ಖಾಸಗಿ ಕಂಪೆನಿಯೊಂದರಲ್ಲಿ ಸಿಕ್ಕ ಉದ್ಯೋಗ ನನ್ನ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಇದೇ ವೇಳೆ ನನಗೆ ದಕ್ಷಿಣ ಭಾರತದಲ್ಲಿ ಕತ್ತೆ ಹಾಲು ಜನಪ್ರಿಯವಾಗಿರುವ ಬಗ್ಗೆ ತಿಳಿಯಿತು. ಈ ಬಗ್ಗೆ ಅನುಭವಿರುವ ಕೆಲವು ವ್ಯಕ್ತಿಗಳನ್ನು ಭೇಟಿಯಾಗಿ ಹೆಚ್ಚಿನ ವಿವರ ತಿಳಿದುಕೊಂಡೆ. ಅದರಂತೆ ಸುಮಾರು 8 ತಿಂಗಳ ಹಿಂದೆ ನನ್ನ ಹಳ್ಳಿಯಲ್ಲಿ ಈ ಕತ್ತೆ ಫಾರ್ಮ್ ಅನ್ನು ಸ್ಥಾಪಿಸಿದೆ” ಎಂದು ಅವರು ಹೇಳಿದ್ದಾರೆ. ಆರಂಭದಲ್ಲಿ 20 ಕತ್ತೆಗಳೊಂದಿಗೆ ಫಾರ್ಮ್‌ ಆರಂಭಿಸಿದ್ದ ಅವರು ಅದಕ್ಕಾಗಿ 22 ಲಕ್ಷ ರೂ.ಗಳ ಬಂಡವಾಳ ಹೂಡಿಕೆ ಮಾಡಿದ್ದರು.

ಕಷ್ಟದ ಹಾದಿ

ಆದರೆ ಧೀರೇನ್‌ ಅವರ ಆರಂಭಿಕ ದಿನಗಳು ಸುಲಭದ್ದಾಗಿರಲಿಲ್ಲ. ಗುಜರಾತ್‌ನಲ್ಲಿ ಕತ್ತೆ ಹಾಲಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಮೊದಲ 5 ತಿಂಗಳು ಯಾವುದೇ ಆದಾಯ ಬಂದಿರಲಿಲ್ಲ. ಬಳಿಕ ಅವರು ಕತ್ತೆ ಹಾಲಿಗೆ ಬೇಡಿಕೆ ಇರುವ ದಕ್ಷಿಣ ಭಾರತದ ಕಂಪೆನಿಗಳನ್ನು ಸಂಪರ್ಕಿಸಿದರು. ಈಗ ಅವರು ಕರ್ನಾಟಕ ಮತ್ತು ಕೇರಳದ ಗ್ರಾಹಕರಿಗೆ ಕತ್ತೆ ಹಾಲನ್ನು ಪೂರೈಸುತ್ತಿದ್ದಾರೆ. ಕೆಲವು ಸೌಂದರ್ಯ ವರ್ಧಕ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಕತ್ತೆ ಹಾಲನ್ನು ಬಳಕೆ ಮಾಡುತ್ತಿವೆ. ಹೀಗಾಗಿ ಧೀರೇನ್‌ ಅವರ ಉದ್ಯಮ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ.

ದುಬಾರಿ ದರ

ದರದ ಬಗ್ಗೆ ವಿವರಿಸುವ ಅವರು, ಕತ್ತೆ ಹಾಲಿಗೆ ಸದ್ಯ ಲೀಟರ್‌ಗೆ 5,000 ರೂ.ಯಿಂದ 7,000 ರೂ.ವರೆಗೆ ಇದೆ ಎಂದು ಹೇಳುತ್ತಾರೆ. ಹಾಲನ್ನು ಒಣಗಿಸಿ ಪುಡಿ ರೂಪದಲ್ಲಿಯೂ ಮಾರಾಟ ಮಾಡಲಾಗುತ್ತದೆ. ಇದರ ಬೆಲೆ ಕೆ.ಜಿ.ಗೆ ಸುಮಾರು ಒಂದು ಲಕ್ಷ ರೂ.ವರೆಗೆ ಇದೆ. ಸದ್ಯ ಅವರ ಫಾರ್ಮ್‌ನಲ್ಲಿ 42 ಕತ್ತೆಗಳಿವೆ. ಇದುವರೆಗೆ ಸುಮಾರು 38 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರದ ಯಾವುದೇ ನೆರವು ಪಡೆದುಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಕತ್ತೆ ಹಾಲಿನ ಪ್ರಯೋಜನ

ಕತ್ತೆ ಹಾಲು ಚರ್ಮ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಹಸು, ಮೇಕೆ, ಕುರಿ, ಎಮ್ಮೆ ಮತ್ತು ಒಂಟೆಗಳ ಹಾಲಿಗೆ ಹೋಲಿಸಿದರೆ ಕತ್ತೆ ಹಾಲು ಮಾನವನ ಎದೆ ಹಾಲನ್ನು ಹೋಲುತ್ತದೆ ಎನ್ನುವುದು ಹಲವು ಅಧ್ಯಯನಗಳ ಮೂಲಕ ಸಾಬೀತಾಗಿದೆ. ಇದರಲ್ಲಿ ವಿಟಮಿನ್‌ಗಳು, ಖನಿಜ ಮತ್ತು ಪ್ರಮುಖ ಕೊಬ್ಬಿನಾಮ್ಲಗಳಿವೆ. ಜತೆಗೆ ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿದೆ. ಆದರೆ ಕತ್ತೆ ಹಾಲು ವಿರಳವಾಗಿರುವುದರಿಂದ ದುಬಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಪ್ರಾಚೀನ ಕಾಲದಲ್ಲೂ ಇತ್ತು ಬಳಕೆ

ಪ್ರಾಚೀನ ಕಾಲದಿಂದಲೇ ಕತ್ತೆ ಹಾಲನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಈಜಿಪ್ಟಿನ ರಾಣಿ ಕ್ಲಿಯೋಪಾತ್ರಾ ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು ಎಂದು ಕೆಲವು ದಾಖಲೆಗಳು ಹೇಳುತ್ತವೆ. ವೈದ್ಯಶಾಸ್ತ್ರದ ಪಿತಾಮಹ, ಗ್ರೀಕ್ ವೈದ್ಯ ಹಿಪ್ಪೊಕ್ರೇಟ್ಸ್ ಯಕೃತ್ತಿನ ತೊಂದರೆಗಳು, ಮೂಗಿನ ರಕ್ತಸ್ರಾವ, ವಿಷ, ಸಾಂಕ್ರಾಮಿಕ ರೋಗಗಳು ಮತ್ತು ಜ್ವರಗಳಿಗೆ ಕತ್ತೆ ಹಾಲು ಉತ್ತಮ ಔಷಧ ಎಂದು ಹೇಳಿದ್ದಾನೆ ಎಂದು ಇತಿಹಾಸದ ತಿಳಿಸುತ್ತದೆ.

ಇದನ್ನೂ ಓದಿ: ಮೋದಿ ಇರುವ ಸಿರಿಧಾನ್ಯಗಳ ಹಾಡು ಗ್ರ್ಯಾಮಿ ಅವಾರ್ಡ್‌ಗೆ ನಾಮಿನೇಟ್!

ಅಮೆರಿಕದ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವರದಿಯ ಪ್ರಕಾರ, ಹಸುವಿನ ಹಾಲಿಗೆ ಹೋಲಿಸಿದರೆ ಕತ್ತೆ ಹಾಲಿನ ಸಂಯೋಜನೆಯು ಮಾನವ ಹಾಲನ್ನು ಹೆಚ್ಚು ಹೋಲುತ್ತದೆ. ಇದು ಶಿಶುಗಳಿಗೆ, ವಿಶೇಷವಾಗಿ ಹಸುವಿನ ಹಾಲಿನ ಅಲರ್ಜಿ ಹೊಂದಿರುವವರಿಗೆ ಉತ್ತಮ ಆಯ್ಕೆ. ಒಟ್ಟಿನಲ್ಲಿ ಇನ್ನು ಮುಂದೆ ಕತ್ತೆ ಎಂದು ಬೈಯ್ಯುವ ಮುನ್ನ ಎಚ್ಚರಿಕೆ ವಹಿಸಿ.

Continue Reading

ದೇಶ

Viral News: ಫೋಟೊ ನೋಡಿ ಮದುವೆಯಾಗಲು ಒಪ್ಪಿದಳು, ವರ ಎದುರು ಬಂದಾಗ ಒಲ್ಲೆ ಎಂದಳು!

Viral News: ಮಧ್ಯಪ್ರದೇಶದಲ್ಲಿ ಯುವತಿಯೊಬ್ಬಳು ಮದುವೆ ದಿನವೇ ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಹುಡುಗನು ಫೋಟೊದಲ್ಲಿ ತೋರಿಸಿದಷ್ಟು ಸುಂದರವಾಗಿಲ್ಲ ಎಂಬ ಕಾರಣದಿಂದಾಗಿ ಮದುವೆ ದಿನವೇ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಮಧುಚಂದ್ರದ ಕನಸಿನಲ್ಲಿದ್ದ ಯುವಕನೀಗ ನಿರಾಸೆಯ ಮಡುವಿನಲ್ಲಿ ಸಿಲುಕಿದ್ದಾನೆ ಎಂದು ತಿಳಿದುಬಂದಿದೆ.

VISTARANEWS.COM


on

Viral News
Koo

ಭೋಪಾಲ್:‌ ಸಾವಿರ ಸುಳ್ಳು ಹೇಳಿ ಒಂದು ಮದುವೆ (Marriage) ಮಾಡು ಎಂಬ ಹಿರಿಯರ ಮಾತು ಶತಮಾನಗಳಿಂದಲೂ ಜನಮಾನಸದಲ್ಲಿದೆ. ಹಾಗೆಯೇ, ದೇಶದಲ್ಲಿ ಯಾವುದೇ ಮದುವೆಯಾಗುವಾಗ ಒಂದಷ್ಟು ಸುಳ್ಳುಗಳು ತೇಲಿಬರುತ್ತವೆ. ಆದರೆ, ಮಧ್ಯಪ್ರದೇಶದಲ್ಲಿ (Madhya Pradesh) ಯುವಕನೊಬ್ಬನ ಪೋಷಕರು ಹೇಳಿದೆ ಒಂದೇ ಒಂದು ಸುಳ್ಳು, ಹುಡುಗಿ ಕಡೆಯವರಿಗೆ ತೋರಿಸಿದ ಒಂದೇ ಒಂದು ಫೋಟೊ ಈಗ ಆತನ ಮದುವೆಗೇ ಕುತ್ತು ತಂದಿದೆ. ಹೌದು, ಹುಡುಗನು ಫೋಟೊದಲ್ಲಿ ಇದ್ದಷ್ಟು ಸುಂದರವಾಗಿಲ್ಲ ಎಂದು ಯುವತಿಯು ಹಸೆಮಣೆ (Viral News) ಏರುವ ದಿನವೇ ಮದುವೆ ಕ್ಯಾನ್ಸಲ್‌ ಮಾಡಿದ್ದಾಳೆ.

ಮಧ್ಯಪ್ರದೇದ ಗ್ವಾಲಿಯರ್‌ ಜಿಲ್ಲೆಯ ಉತಿಲಿಯಾ ಗ್ರಾಮದಲ್ಲಿ ಶುಕ್ರವಾರ (ಏಪ್ರಿಲ್‌ 19) ಮದುವೆ ನಿಶ್ಚಯವಾಗಿತ್ತು. ಗಂಡು-ಹೆಣ್ಣಿನ ಕಡೆಯವರು ಒಗ್ಗೂಡಿ, ಮದುವೆ ಸಂಭ್ರಮದಲ್ಲಿದ್ದರು. ವರನೂ ಸೂಟು-ಬೂಟು ಹಾಕಿಕೊಂಡು ತಾಳಿ ಕಟ್ಟಲು ತುದಿಗಾಲ ಮೇಲೆ ನಿಂತಿದ್ದ. ಆದರೆ, ವರನು ಕಣ್ಣೆದುರು ಬರುತ್ತಲೇ ವಧು ಕಂಗಾಲಾಗಿದ್ದಾಳೆ. ನನಗೆ ಫೋಟೊದಲ್ಲಿ ತೋರಿಸಿದಷ್ಟು ಈತ ಸುಂದರವಾಗಿಲ್ಲ. ನನಗೆ ಸುಳ್ಳು ಹೇಳಿ ಮದುವೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಮದುವೆಯನ್ನೇ ರದ್ದುಪಡಿಸಿದ್ದಾಳೆ. ಇದು ಈಗ ವರನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಷ್ಟಕ್ಕೂ ಆಗಿದ್ದೇನು?

ಅನಿಲ್‌ ಚೌಹಾಣ್‌ ಎಂಬ ಯುವಕ ಹಾಗೂ ಮಮತಾ ಎಂಬ ಯುವಕನ ಕುಟುಂಬಸ್ಥರು ಕೆಲ ತಿಂಗಳ ಹಿಂದೆ ಭೇಟಿಯಾಗಿದ್ದಾರೆ. ಆಗ ಹುಡುಗನ ಕಡೆಯವರಿಗೆ ಹುಡುಗಿಯ ಫೋಟೊ, ಹುಡುಗಿಯ ಕಡೆಯವರಿಗೆ ಹುಡುಗನ ಫೋಟೊ ತೋರಿಸಲಾಗಿದೆ. ಆಗ, ಹುಡುಗನು ಯುವತಿಯನ್ನು ಮದುವೆಯಾಗಲು ಒಪ್ಪಿದ್ದಾನೆ. ಮನೆಗೆ ಬಂದು ಅನಿಲ್‌ ಚೌಹಾಣ್‌ ಫೋಟೊ ತೋರಿಸಿದಾಗ ಮಮತಾ ಕೂಡ ಮದುವೆಗೆ ಒಪ್ಪಿದ್ದಾಳೆ. ಆದರೆ, ಮದುವೆ ಫಿಕ್ಸ್‌ ಆಗುವ ಮೊದಲು ಒಬ್ಬರನ್ನೊಬ್ಬರು ಭೇಟಿಯಾಗದಿರುವುದು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಮದುವೆ ದಿನ ಹುಡುಗ ನೋಡಲು ಚೆನ್ನಾಗಿಲ್ಲ ಎಂದು ಆಕೆಯು ಮದುವೆಯನ್ನು ಮೊಟಕುಗೊಳಿಸಿದ್ದಾಳೆ.

ಶುಕ್ರವಾರ ಇಬ್ಬರೂ ಭೇಟಿಯಾಗಿದ್ದಾರೆ. ಇನ್ನೇನು ಹಾರ ಬದಲಾಯಿಸಬೇಕು ಎನ್ನುವಷ್ಟರಲ್ಲಿಯೇ ಮಮತಾ ಕೆರಳಿ ಕೆಂಡವಾಗಿದ್ದಾಳೆ. ನನಗೆ ಎಡಿಟ್‌ ಮಾಡಲಾದ ಫೋಟೊ ತೋರಿಸಿ ಮೋಸ ಮಾಡಿದ್ದಾರೆ. ಯುವಕನು ಫೋಟೊದಲ್ಲಿ ಇರುವಷ್ಟು ಸ್ಮಾರ್ಟ್‌ ಆಗಿ, ಎದುರು ಇಲ್ಲ. ನಾನು ಸತ್ತರೂ ಪರವಾಗಿಲ್ಲ. ಈತನನ್ನು ಮದುವೆಯಾಗುವುದಿಲ್ಲ ಎಂಬುದಾಗಿ ಹೇಳಿದ್ದಾಳೆ. ಕೊನೆಗೆ ಮದುವೆ ರದ್ದಾಗಿದೆ. ಮದುವೆ, ಮಧುಚಂದ್ರದ ಕನಸು ಕಾಣುತ್ತಿದ್ದ ಯುವಕನು ಈಗ ಬೇಸರದ ಮಡುವಿನಲ್ಲಿ ಸಿಲುಕಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್

Continue Reading
Advertisement
Viral News
ವೈರಲ್ ನ್ಯೂಸ್6 seconds ago

Viral News: ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ನೇತಾಡುವ ಯುವಕ; ಶಾಕಿಂಗ್‌ ವಿಡಿಯೊ ನೋಡಿ

Sportsmanship
ಕ್ರೀಡೆ18 mins ago

Sportsmanship : ಭಾರತದವರನ್ನೇ ಸೋಲಿಸಿ ತ್ರಿವರ್ಣ ಧ್ವಜವನ್ನೂ ಎತ್ತಿ ಹಿಡಿದ ಪಾಕ್ ಕರಾಟೆ ಪಟು!

DK Suresh
ಬೆಂಗಳೂರು41 mins ago

DK Suresh: ಬೆಲೆ ಏರಿಕೆ, ಜಿಎಸ್‌ಟಿ ಹೊರೆಯೇ ಮೋದಿ ಗ್ಯಾರಂಟಿ: ಡಿ.ಕೆ. ಸುರೇಶ್

soil
ಕೃಷಿ47 mins ago

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

Narendra modi
ದೇಶ1 hour ago

Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

Bulldozer Justice
ದೇಶ2 hours ago

Bulldozer Justice Video: ಅತ್ಯಾಚಾರ ಎಸಗಿ ಕ್ರೂರಹಿಂಸೆ; ಆರೋಪಿ ಅಯಾನ್‌ ಪಠಾಣ್‌ ಮನೆ ಧ್ವಂಸಗೊಳಿಸಿದ ಬುಲ್ಡೋಜರ್‌!

ಕರ್ನಾಟಕ2 hours ago

Lok Sabha Election 2024: ಭ್ರಷ್ಟಾಚಾರ ನಿರ್ಮೂಲನೆಗೆ ಮೋದಿ ಸರ್ಕಾರ ಪಣ: ಸಚಿವ ಪ್ರಲ್ಹಾದ್‌ ಜೋಶಿ

Car Crash
ಕ್ರೀಡೆ2 hours ago

Car Accident : ರೇಸ್ ವೇಳೆ ಪ್ರೇಕ್ಷಕರ ಮೇಲೆ ಹರಿದ ಕಾರು; 7 ಮಂದಿ ಸಾವು; ವಿಡಿಯೊ ಇದೆ

Yuva Rajkumar
ಸಿನಿಮಾ3 hours ago

Yuva Rajkumar: ಯುವ ಅಭಿಮಾನಿಗಳಿಗೆ ನಿರಾಸೆ; ಹುಟ್ಟುಹಬ್ಬ ಆಚರಣೆಗೆ ಬ್ರೇಕ್‌

Lok Sabha Election 2024 Bengaluru Rural Lok Sabha constituency is the most sensitive Election Commission deploys paramilitary forces
Lok Sabha Election 20243 hours ago

Lok Sabha Election 2024: ಬೆಂಗಳೂರು ಗ್ರಾಮಾಂತರ ಕ್ಷೇತ್ರವೀಗ ಅತಿ ಸೂಕ್ಷ್ಮ; ಅರೆ ಸೇನಾ ಪಡೆ ನಿಯೋಜಿಸಿದ ಚುನಾವಣಾ ಆಯೋಗ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ18 hours ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ1 day ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20241 day ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20241 day ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ1 day ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ1 day ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ2 days ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ3 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ5 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

ಟ್ರೆಂಡಿಂಗ್‌