ಬಾಲಕಿ ಬಿಡಿಸಿದ ಪೇಂಟಿಂಗ್‌ ಕೇಳಿ ಪಡೆದ ಮೋದಿ; ನೀವು ಇಷ್ಟವಾಗೋದೇ ಇದಕ್ಕೆ ಎಂದ ಜನ - Vistara News

ದೇಶ

ಬಾಲಕಿ ಬಿಡಿಸಿದ ಪೇಂಟಿಂಗ್‌ ಕೇಳಿ ಪಡೆದ ಮೋದಿ; ನೀವು ಇಷ್ಟವಾಗೋದೇ ಇದಕ್ಕೆ ಎಂದ ಜನ

ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡರು. ಸಮಾವೇಶದ ವೇಳೆ ಬಾಲಕಿಯೊಬ್ಬಳು ಭಗವಾನ್‌ ಜಗನ್ನಾಥನ ಪೇಂಟಿಂಗ್‌ ಹಿಡಿದು ನಿಂತಿದ್ದಳು. ಇದನ್ನು ಗಮನಿಸಿದ ಮೋದಿ ಮುಂದೇನು ಮಾಡಿದರು ಎಂಬುದೇ ರೋಚಕವಾಗಿದೆ.

VISTARANEWS.COM


on

Narendra Modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕೊತಾ: ಮಾತಿನ ಮೂಲಕ ಜನರನ್ನು ಮೋಡಿ ಮಾಡುವುದು, ಪುಟ್ಟ ಮಕ್ಕಳಿಂದ ಹಿಡಿದು, ಹಿರಿಯರವರೆಗೆ ಉತ್ತಮ ಸಂವಹನ ಸಾಧಿಸುವುದು, ವಿಭಿನ್ನ ಶೈಲಿ, ಕ್ಷಿಪ್ರ ಸ್ಪಂದನೆ ಮೂಲಕವೇ ಜನರ ಬೆಂಬಲ ಗಳಿಸುವ ಕೌಶಲವು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಕರಗತವಾಗಿದೆ. ಹಾಗಾಗಿಯೇ, ಅವರು ಸಾರ್ವಜನಿಕ ಜೀವನದಲ್ಲಿ ಹೆಚ್ಚು ಪ್ರಶಂಸೆಗೆ ಒಳಗಾಗುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಪಶ್ಚಿಮ ಬಂಗಾಳದಲ್ಲಿ (West Bengal) ನರೇಂದ್ರ ಮೋದಿ ಅವರು ಪುಟ್ಟ ಬಾಲಕಿ ಬಿಡಿಸಿದ ಪೇಂಟಿಂಗ್‌ಅನ್ನು (Girl’s Painting) ಕೇಳಿ ಪಡೆದು, ಬಳಿಕ ಆಕೆಗೆ ತೋರಿಸುವ ಮೂಲಕ ಜನರ ಮನ ಗೆದ್ದಿದ್ದಾರೆ. ಈ ವಿಡಿಯೊ ಕೂಡ ಭಾರಿ ವೈರಲ್‌ ಆಗಿದೆ.

ಪಶ್ಚಿಮ ಬಂಗಾಳದ ಆರಾಮ್‌ಬಾಗ್‌ನಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ನರೇಂದ್ರ ಮೋದಿ ಭಾಗವಹಿಸಿದರು. ಸಮಾವೇಶದ ವೇಳೆ ಅಪಾರ ಜನಸ್ತೋಮದ ಮಧ್ಯೆಯೇ ಪುಟ್ಟ ಬಾಲಕಿಯೊಬ್ಬಳು ಭಗವಾನ್‌ ಜಗನ್ನಾಥನ ಪೇಂಟಿಂಗ್‌ ಹಿಡಿದು ನಿಂತಿದ್ದಳು. ಸುಡುವ ಬಿಸಿಲಿನಲ್ಲೇ ಪೇಂಟಿಂಗ್‌ ಹಿಡಿದು ನಿಂತಿದ್ದ ಬಾಲಕಿಯು, ಅದನ್ನು ನರೇಂದ್ರ ಮೋದಿ ಅವರಿಗೆ ಕೊಡಲು ಪ್ರಯತ್ನಿಸುತ್ತಿದ್ದಳು. ವೇದಿಕೆ ಮೇಲೆ ಕುಳಿತು ಇದನ್ನೆಲ್ಲ ಗಮನಿಸಿದ ಮೋದಿ ಅವರ ನಡೆಯು ಈಗ ಮೆಚ್ಚುಗೆಗೆ ಪಾತ್ರವಾಗಿದೆ.

ಬಾಲಕಿ ಹಾಗೂ ಆಕೆಯ ಪೇಂಟಿಂಗ್‌ ಗಮನಿಸಿದ ನರೇಂದ್ರ ಮೋದಿ ಅವರು ಸೆಕ್ಯುರಿಟಿ ಅಧಿಕಾರಿಗಳಿಗೆ ಆ ಬಾಲಕಿ ಬಳಿ ತೆರಳಿ, ಪೇಂಟಿಂಗ್‌ ತೆಗೆದುಕೊಂಡು ಬನ್ನಿ ಎಂದು ಸೂಚಿಸಿದರು. ಕೂಡಲೇ ಭದ್ರತಾ ಅಧಿಕಾರಿಗಳು ಬಾಲಕಿಯಿಂದ ಪೇಂಟಿಂಗ್‌ ಪಡೆದರು. ಆ ಪೇಂಟಿಂಗ್‌ ತಂದ ಕೂಡಲೇ ನರೇಂದ್ರ ಮೋದಿ ಅವರು ವೇದಿಕೆ ಮೇಲೆಯೇ ಎದ್ದು ನಿಂತು, ಆ ಬಾಲಕಿಗೆ ಪೇಂಟಿಂಗ್‌ ತೋರಿಸಿ, ನೀನು ಕೊಟ್ಟಿದ್ದನ್ನು ನಾನು ಸ್ವೀಕರಿಸಿದ್ದೇನೆ ಎಂಬುದನ್ನು ಸನ್ನೆ ಮೂಲಕ ಹೇಳಿದರು. ಆಗ ಅಲ್ಲಿ ನೆರೆದಿದ್ದ ಎಲ್ಲರೂ ಚಪ್ಪಾಳೆ ಮೂಲಕ ಮೋದಿ ಅವರ ನಡೆಯನ್ನು ಶ್ಲಾಘಿಸಿದರು.

ಇದನ್ನೂ ಓದಿ: Narendra Modi: ಬಿಜೆಪಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಚುನಾವಣೆಗೆ ಮೋದಿ ಸಂದೇಶ; ಏನದು?

ನರೇಂದ್ರ ಮೋದಿ ಅವರು ಬಾಲಕಿಯಿಂದ ಪೇಂಟಿಂಗ್‌ ಪಡೆದು, ಅದನ್ನು ಎಲ್ಲರಿಗೂ ತೋರಿಸಿದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. “ನರೇಂದ್ರ ಮೋದಿ ಅವರೇ, ನೀವು ಇಷ್ಟವಾಗುವುದೇ ಈ ಕಾರಣಕ್ಕೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಹಿರಿಯರಿಂದ ಹಿಡಿದು, ಕಿರಿಯರವರೆಗೆ ಎಲ್ಲರೊಂದಿಗೂ ಹೇಗೆ ವರ್ತಿಸಬೇಕು, ಅವರ ಮನಸ್ಸನ್ನು ಹೇಗೆ ಗೆಲ್ಲಬೇಕು ಎಂಬುದನ್ನು ನರೇಂದ್ರ ಮೋದಿ ಅವರಿಂದ ಕಲಿಯಬೇಕು” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಹೀಗೆ ಸಾವಿರಾರು ಜನ ನರೇಂದ್ರ ಮೋದಿ ಅವರ ನಡೆಯನ್ನು ಹೊಗಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Real Estate: ಹಲವರಿಗೆ ಮನೆ ಇಲ್ಲ, ಇದ್ದವರು ಬಳಸುತ್ತಿಲ್ಲ! ದೇಶದಲ್ಲಿ 1 ಕೋಟಿಗೂ ಹೆಚ್ಚು ಫ್ಲ್ಯಾಟ್ ಗಳು ಖಾಲಿ ಬಿದ್ದಿವೆ!

ಖರೀದಿ ಮಾಡಿರುವ ಒಂದು ಕೋಟಿಗೂ ಹೆಚ್ಚು ಫ್ಲ್ಯಾಟ್ ಗಳು ದೇಶದಲ್ಲಿ ಖಾಲಿ ಇವೆ. ಮಾತ್ರವಲ್ಲದೆ ದೇಶದಲ್ಲಿ ಅಗ್ಗದ ಮನೆಗಳಿಗೆ ಬೇಡಿಕೆ ವೇಗವಾಗಿ ಕುಸಿಯುತ್ತಿದ್ದು, ದುಬಾರಿ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಅರ್ಥ ಎಲ್ಲರೂ ಶ್ರೀಮಂತರಾಗಿದ್ದಾರೆ ಎಂದಲ್ಲ. ರಿಯಲ್ ಎಸ್ಟೇಟ್ (Real Estate) ಉದ್ಯಮಿಗಳು ಶೇ. 10ರಷ್ಟಿರುವ ಶ್ರೀಮಂತರಿಗೆ ತಮ್ಮ ಆಸ್ತಿ ಮಾರಾಟಕ್ಕೆ ಆಸಕ್ತಿ ವಹಿಸಿರುವುದು ಇದಕ್ಕೆ ಮುಖ್ಯ ಕಾರಣ ಎಂದಿದ್ದಾರೆ ಭಾರತದ ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ (ನರೆಡ್ಕೊ) ಅಧ್ಯಕ್ಷ ಜಿ. ಹರಿಬಾಬು.

VISTARANEWS.COM


on

By

Real Estate
Koo

ಬಳಕೆಯಾಗದ ಆಸ್ತಿಯನ್ನು (assets) ಇಟ್ಟುಕೊಳ್ಳುವುದು ಒಂದು ರಾಷ್ಟ್ರೀಯ ಅಪರಾಧ (national crime) ಎಂದು ನಾನು ಭಾವಿಸುತ್ತೇನೆ. ದೇಶದಲ್ಲಿ ಒಂದೆಡೆ ವಸತಿ ಕೊರತೆಯಿದೆ. ಇನ್ನೊಂದೆಡೆ 1.14 ಕೋಟಿ ಫ್ಲಾಟ್‌ಗಳು ಖಾಲಿ ಇವೆ ಎಂದು ಭಾರತದ ರಾಷ್ಟ್ರೀಯ ರಿಯಲ್ ಎಸ್ಟೇಟ್ (Real Estate) ಅಭಿವೃದ್ಧಿ ಮಂಡಳಿ (NAREDCO) ಅಧ್ಯಕ್ಷ ಜಿ. ಹರಿಬಾಬು (G. Haribabu) ತಿಳಿಸಿದ್ದಾರೆ.

ಪ್ರಸ್ತುತ ದೇಶದಲ್ಲಿ ಸುಮಾರು ಒಂದು ಕೋಟಿ ಮನೆಗಳು ಖಾಲಿ ಬಿದ್ದಿವೆ. ಒಂದೆಡೆ ದುಬಾರಿ ಮನೆಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಮತ್ತೊಂದೆಡೆ ದೇಶದ ದೊಡ್ಡ ನಗರಗಳಲ್ಲಿ ಅಗ್ಗದ ಮನೆಗಳ ಬೇಡಿಕೆ ವೇಗವಾಗಿ ಕುಸಿಯುತ್ತಿದೆ ಎಂದು ಅವರು ಹೇಳಿದ್ದಾರೆ.

ಅಂಕಿಅಂಶಗಳ ಪ್ರಕಾರ 2019 ಮತ್ತು 2023 ರ ನಡುವೆ 1.5 ಕೋಟಿ ರೂ. ಗಿಂತ ಹೆಚ್ಚು ವೆಚ್ಚದ ಮನೆಗಳ ಬೇಡಿಕೆಯು ಸುಮಾರು 1000 ಪ್ರತಿಶತದಷ್ಟು ಹೆಚ್ಚಾಗಿದೆ. ಶ್ರೀಮಂತರು ಮತ್ತು ಸಾಂಸ್ಥಿಕ ಹೂಡಿಕೆದಾರರು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಜಿಗಿದಿರುವುದರಿಂದ ಈ ರೀತಿಯಾಗಿದೆ. ಆದರೆ, ದೇಶಕ್ಕೆ ಅಗ್ಗದ ಮನೆಗಳ ಅಗತ್ಯವಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದ ಅಭಿವೃದ್ಧಿಗೆ ಅವರ ಬೇಡಿಕೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.


ಬಿಲ್ಡರ್‌ ಗಳಿಗೆ ಕೇವಲ ಶೇ. 10ರಷ್ಟು ಜನರಷ್ಟೇ ಗುರಿ

2022ರಲ್ಲಿ ಹೈದರಾಬಾದ್‌ನಲ್ಲಿ 5,300 ಅಗ್ಗದ ಮನೆಗಳನ್ನು ಮಾರಾಟ ಮಾಡಲಾಗಿದೆ. 2023ರಲ್ಲಿ ಈ ಸಂಖ್ಯೆ ಕೇವಲ 3,800 ಕ್ಕೆ ಇಳಿಕೆಯಾಗಿದೆ. ಕೆಲವೇ ಜನರಲ್ಲಿ ಹಣವು ವೇಗವಾಗಿ ಹೆಚ್ಚುತ್ತಿದೆ. ದೇಶದ ಜನಸಂಖ್ಯೆಯ ಶೇ. 10ರಷ್ಟು ಮಂದಿಯಲ್ಲಿ ಶೇ. 63ರಷ್ಟು ಸಂಪತ್ತು ಸಂಗ್ರಹವಾಗಿದೆ. ಈ ಸಂಖ್ಯೆ 14 ಕೋಟಿ ಜನರದ್ದು. ಈ ಸಮಯದಲ್ಲಿ ಹೆಚ್ಚಿನ ಬಿಲ್ಡರ್‌ಗಳು ಈ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ಸುಮಾರು 1.14 ಕೋಟಿ ಮನೆಗಳು ಖಾಲಿ ಬಿದ್ದಿರುವುದಕ್ಕೆ ಇದೇ ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ.

ಖರೀದಿಸಿ ಬಳಕೆಯಾಗದ ಮನೆಗಳು

ಹೂಡಿಕೆದಾರರು ಖರೀದಿಸುವ ಮನೆಗಳನ್ನು ಬಳಸುತ್ತಿಲ್ಲ ಎಂದು ತಿಳಿಸಿರುವ ಹರಿಬಾಬು, ಈ ಮನೆಗಳನ್ನು ಬಾಡಿಗೆಗೆ ಸಹ ನೀಡುತ್ತಿಲ್ಲ. ಒಂದೆಡೆ ಜನ ಮನೆ ಹುಡುಕಿಕೊಂಡು ಅಲೆದಾಡುತ್ತಿದ್ದರೆ, ಮತ್ತೊಂದೆಡೆ ಈ ಮನೆಗಳು ಖಾಲಿ ಬಿದ್ದಿವೆ. ಹೂಡಿಕೆಗಾಗಿ ಖರೀದಿಸಿದ ಈ ಮನೆಗಳು ಬಳಕೆಯಾಗುತ್ತಿಲ್ಲ. ಇದೊಂದು ರೀತಿಯ ಅಪರಾಧ. ಅಂತಹ ಮನೆಗಳ ಮೇಲಿನ ಆಸ್ತಿ ತೆರಿಗೆಯನ್ನು ಎರಡು ಅಥವಾ ಮೂರು ಪಟ್ಟು ಹೆಚ್ಚಿಸಬೇಕು. ಇದರಿಂದ ಈ ಆಸ್ತಿಯನ್ನು ಬಳಸಬಹುದು. ನಮ್ಮ ಜನಸಂಖ್ಯೆಯ ಶೇ.60ರಷ್ಟು ಮಂದಿಗೆ ಮನೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅವರು ಸಂಪೂರ್ಣವಾಗಿ ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Water Price Hike : ತೈಲ ದರ ಬಳಿಕ ಕುಡಿಯುವ ನೀರು ದುಬಾರಿ! ನೀರಿನ ದರ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ!

ಶುಲ್ಕಗಳಲ್ಲಿ ರಿಯಾಯಿತಿ

ಕೈಗೆಟಕುವ ದರದಲ್ಲಿ ಮನೆ ನಿರ್ಮಿಸಲು ಬಿಲ್ಡರ್ ಗಳ ಮೇಲೆ ಸರಕಾರ ಒತ್ತಡ ಹೇರಬೇಕು ಎಂದ ಅವರು, ಕೈಗೆಟಕುವ ಬೆಲೆಯ ಮನೆಗಳಿಗೆ ಜಿಎಸ್‌ಟಿ, ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡಬೇಕು. ಈ ಬದಲಾವಣೆಗಳು ಕೈಗೆಟುಕುವ ದರದ ವಸತಿ ವಲಯದಲ್ಲಿ ಶೇ. 25ರಷ್ಟು ಬೆಳವಣಿಗೆಯನ್ನು ತರುವ ನಿರೀಕ್ಷೆಯಿದೆ. ಕೆಳಮಧ್ಯಮ ಮತ್ತು ಮಧ್ಯಮ ವರ್ಗದವರ ಬಗ್ಗೆ ಸರಕಾರ ಚಿಂತನೆ ನಡೆಸಬೇಕಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ನಾವು ಸಾಗುತ್ತಿದ್ದೇವೆ. ನಮ್ಮ ಜನಸಂಖ್ಯೆಯ ಶೇ. 40ರಷ್ಟು ಮಂದಿ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದರೆ, ನಾವು ಅಭಿವೃದ್ಧಿ ಹೊಂದಿದ ದೇಶ ಎಂದು ಹೇಗೆ ಕರೆಯಬಹುದು ಎಂದು ಅವರು ಪ್ರಶ್ನಿಸಿದ್ದಾರೆ.

Continue Reading

ದೇಶ

Train Accident: ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್​ ರೈಲು ಡಿಕ್ಕಿ; 5 ಮಂದಿ ಸಾವು

Train Accident: ಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್​ಪ್ರೆಸ್​ ರೈಲಿಗೆ ಗೂಡ್ಸ್​ ರೈಲು ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಗೂಡ್ಸ್ ರೈಲು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

VISTARANEWS.COM


on

Train Accident
Koo

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್​ಪ್ರೆಸ್​ (Kanchanjunga Express) ರೈಲಿಗೆ ಗೂಡ್ಸ್​ ರೈಲು ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಗೂಡ್ಸ್ ರೈಲು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ (Train Accident).

ʼʼಅಪಘಾತದಲ್ಲಿ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 20-25 ಮಂದಿಗೆ ಗಂಭೀರ ಗಾಯವಾಗಿವೆ. ಪರಿಸ್ಥಿತಿ ಗಂಭೀರವಾಗಿದೆ. ಗೂಡ್ಸ್ ರೈಲು ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ” ಎಂದು ಡಾರ್ಜಿಲಿಂಗ್ ಎಸ್‌ಪಿ ಅಭಿಷೇಕ್ ರಾಯ್ ಮಾಹಿತಿ ನೀಡಿದ್ದಾರೆ. ಗಾಯಗೊಂಡಿರುವವರನ್ನು ನ್ಯೂ ಜಲ್‌ಪೈಗುರಿ ಜಂಕ್ಷನ್‌ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗರ್ತಲಾದಿಂದ ಸೀಲ್ದಾಹ್‌ಗೆ ಪ್ರಯಾಣಿಸುತ್ತಿದ್ದ 13174 ಸಂಖ್ಯೆಯ ಕಾಂಚನಜುಂಗಾ ಎಕ್ಸ್‌ಪ್ರೆಸ್ ರಂಗಪಾಣಿ ಮತ್ತು ಚಥರ್‌ಹತ್ ನಿಲ್ದಾಣದ ಮಧ್ಯೆ ಅಪಘಾತಕ್ಕೀಡಾಗಿ ಹಳಿ ತಪ್ಪಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ʼʼಡಾರ್ಜಿಲಿಂಗ್ ಜಿಲ್ಲೆಯ ಫನ್ಸಿಡೆವಾ ಪ್ರದೇಶದಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದ ಬಗ್ಗೆ ತಿಳಿದು ಆಘಾತವಾಯಿತು. ಕಾಂಚನಜುಂಗಾ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ವೈದ್ಯಕೀಯ ನೆರವಿಗಾಗಿ ಡಿಎಂ, ಎಸ್ಪಿ, ವೈದ್ಯರು, ಆಂಬ್ಯುಲೆನ್ಸ್‌ಗಳು ಮತ್ತು ವಿಪತ್ತು ತಂಡಗಳು ಸ್ಥಳಕ್ಕೆ ಧಾವಿಸಿವೆʼʼ ಎಂದು ತಿಳಿಸಿದ್ದಾರೆ.

ಡಿಕ್ಕಿ ಹಿಡೆದ ರಭಸಕ್ಕೆ ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿದುಬಂದಿದೆ. ಕಾಂಚನಜುಂಗಾ ಎಕ್ಸ್‌ಪ್ರೆಸ್‌ ಬಂಗಾಳವನ್ನು ಈಶಾನ್ಯ ನಗರಗಳಾದ ಸಿಲ್ಚಾರ್ ಮತ್ತು ಅಗರ್ತಲಾದೊಂದಿಗೆ ಸಂಪರ್ಕಿಸುತ್ತದೆ. ಈ ಮಾರ್ಗವು ಚಿಕನ್ಸ್ ನೆಕ್ ಕಾರಿಡಾರ್‌ನಲ್ಲಿದೆ. ಈ ಮಾರ್ಗದಲ್ಲಿನ ಅಪಘಾತವು ಹಲವು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಸಹಾಯವಾಣಿ

ರೈಲ್ವೆ ಇಲಾಖೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. 033-23508794 ಮತ್ತು 033-23833326 (ಸೀಲ್ಡಾ) ಹಾಗೂ 03612731621, 03612731622 ಮತ್ತು 03612731623 (ಗುವಾಹಟಿ) ಸಂಖ್ಯೆಯನ್ನು ಸಂಪರ್ಕಿಸಬಹುದು.

ರಕ್ಷಣಾ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ಪ್ರಾರಂಭವಾಗಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್ ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. “ಎನ್ಎಫ್ಆರ್ ವಲಯದಲ್ಲಿ ಅಪಘಾತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ರೈಲ್ವೆ, ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಕಾರ್ಯನಿರ್ವಹಿಸುತ್ತಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ” ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ 238ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು, ಬೆಂಗಳೂರು-ಹೌರಾ ರೈಲು ಹಾಗೂ ಗೂಡ್ಸ್‌ ರೈಲು ಡಿಕ್ಕಿಯಾಗಿದ್ದು ಈ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅದೇ ವರ್ಷ ಅಕ್ಟೋಬರ್‌ನಲ್ಲಿ ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಸಂಭವಿಸಿದ ಎರಡು ರೈಲುಗಳ ಡಿಕ್ಕಿಯಲ್ಲಿ 13 ಮಂದಿ ಅಸುನೀಗಿದ್ದರು. ಆ ಆಘಾತಗಳು ಮರೆಯುವ ಮುನ್ನ ಮತ್ತೊಂದು ದೊಡ್ಡ ದುರಂತ ನಡೆದಿದೆ.

ಇದನ್ನೂ ಓದಿ: Andhra train accident: 13 ಜನರ ಬಲಿ ಪಡೆದ ಆಂಧ್ರ ರೈಲು ಅಪಘಾತದ‌ ಮೂಲ ಕಾರಣ ಬಹಿರಂಗ

Continue Reading

ದೇಶ

Maoists Killed: ಭದ್ರತಾ ಪಡೆಗಳ ಕಾರ್ಯಾಚರಣೆ; ಮತ್ತೆ 4 ಮಾವೋವಾದಿಗಳ ಹತ್ಯೆ

Maoists Killed: ಭದ್ರತಾ ಪಡೆ ಸೋಮವಾರ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ 4 ಮಾವೋವಾದಿಗಳನ್ನು ಹೊಡೆದುರುಳಿಸಿದೆ. ಹತ್ಯೆಗೀಡಾದವರ ಪೈಕಿ ಓರ್ವ ಮಹಿಳಾ ಮಾವೋವಾದಿಯೂ ಇದ್ದಾಳೆ ಎಂದು ಮೂಲಗಳು ತಿಳಿಸಿವೆ. ಛತ್ತೀಸ್‌ಗಢದ ಅಬುಜ್ಮಾರ್ಹ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ಜೂನ್‌ 15ರಂದು ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 8 ಮಾವೋವಾದಿಗಳು ಸಾವನ್ನಪ್ಪಿದ್ದರು. ಅದಾಗಿ ಎರಡನೇ ದಿನಗಳಲ್ಲಿ ಈ ಬೆಳವಣಿಗೆ ಕಂಡು ಬಂದಿದೆ.

VISTARANEWS.COM


on

Maoists Killed
Koo

ರಾಂಚಿ: ಭದ್ರತಾ ಪಡೆ ಸೋಮವಾರ (ಜೂನ್‌ 17) ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ 4 ಮಾವೋವಾದಿಗಳನ್ನು ಹೊಡೆದುರುಳಿಸಿದೆ. ಹತ್ಯೆಗೀಡಾದವರ ಪೈಕಿ ಓರ್ವ ಮಹಿಳಾ ಮಾವೋವಾದಿಯೂ ಇದ್ದಾಳೆ ಎಂದು ಮೂಲಗಳು ತಿಳಿಸಿವೆ (Maoists Killed).

ಪೊಲೀಸರು ಹಾಗೂ ಭದ್ರತಾ ಪಡೆ ಈ ಜಂಟಿ ಕಾರ್ಯಾಚರಣೆ ಕೈಗೊಂಡಿದೆ. ಹತರಾದ ಮಾವೋವಾದಿಗಳಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಇಬ್ಬರನ್ನು ಬಂಧಿಸಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ಅವರು ಈ ಬಗ್ಗೆ ಮಾಹಿತಿ ನೀಡಿ, “ಗುವಾ ಮತ್ತು ಜೆಟೆಯಾ ಪಿಎಸ್ ಪ್ರದೇಶಗಳ ಗಡಿಯಲ್ಲಿರುವ ಸರಂದಾ ಅರಣ್ಯಗಳಲ್ಲಿ ಸೋಮವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ನಮ್ಮ ಜಂಟಿ ಪಡೆಗಳು ಮಾವೋವಾದಿ ವಲಯ ಕಮಾಂಡರ್, ಉಪ-ವಲಯ ಕಮಾಂಡರ್, ಪ್ರದೇಶ ಕಮಾಂಡರ್ ಮತ್ತು ಮಹಿಳಾ ಮಾವೋವಾದಿ ಸೇರಿದಂತೆ ನಾಲ್ವರು ಮಾವೋವಾದಿಗಳನ್ನು ಹೊಡೆದುರುಳಿಸಿವೆ. ಕಾರ್ಯಾಚರಣೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಜಂಟಿ ತಂಡವು ಸೋಮವಾರ ಮುಂಜಾನೆ ಸರಂದಾ ಮೀಸಲು ಅರಣ್ಯದೊಳಗಿನ ಲುಕುಂಗ್ ರೈಕೆಲಾ ಕಾಡುಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ದಟ್ಟವಾದ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಮಾವೋವಾದಿಗಳು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದರು. ಈ ವೇಳೆ ಎನ್‌ಕೌಂಟರ್‌ ಆರಂಭವಾಗಿತ್ತು.

8 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಅಬುಜ್ಮಾರ್ಹ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ಜೂನ್‌ 15ರಂದು ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 8 ಮಾವೋವಾದಿಗಳು ಸಾವನ್ನಪ್ಪಿದ್ದರು. ಈ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದರು. ಕಳೆದ ಕೆಲವು ದಿನಗಳಿಂದ ಅಬುಜ್ಮಾರ್ಹ್‌ ಒಳಗೊಂಡ ನಾರಾಯಣಪುರ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಅಬುಜ್ಮಾರ್ಹ್ ಒಂದು ಗುಡ್ಡಗಾಡು ಅರಣ್ಯ ಪ್ರದೇಶವಾಗಿದ್ದು, ಇದು ನಾರಾಯಣಪುರ, ಬಿಜಾಪುರ ಮತ್ತು ದಾಂತೇವಾಡ ಜಿಲ್ಲೆಗಳ ಮಧ್ಯದಲ್ಲಿದೆ. ಇದು 4,000 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದ್ದು ಮಾವೋವಾದಿಗಳ ಅಡುಗುತಾಣವಾಗಿ ಬದಲಾಗಿದೆ. ಜನ ಸಂಚಾರ ಕಡಿಮೆ ಇರುವ, ಭೌಗೋಳಿಕವಾಗಿ ಪ್ರತ್ಯೇಕವಾಗಿರುವ ಈ ಪ್ರದೇಶವನ್ನು ಮಾವೋವಾದಿಗಳ ಚಟುವಟಿಕೆಗಳ ಕೇಂದ್ರವೆಂದು ಪರಿಗಣಿಸಲಾಗಿದೆ.

ನಾರಾಯಣಪುರ, ಕಂಕರ್, ದಾಂತೇವಾಡ ಮತ್ತು ಕೊಂಡಗಾಂವ್ ಜಿಲ್ಲೆಗಳ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಅಬುಜ್ಮಾರ್ಹ್ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಈ ನಾಲ್ಕು ಜಿಲ್ಲೆಗಳ ಜಿಲ್ಲಾ ರಿಸರ್ವ್ ಗಾರ್ಡ್ (DRG), ವಿಶೇಷ ಕಾರ್ಯಪಡೆ (STF) ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)ನ 53ನೇ ಬೆಟಾಲಿಯನ್ ಸಿಬ್ಬಂದಿಯನ್ನು ಒಳಗೊಂಡ ತಂಡ ಜೂನ್ 12ರಂದೇ ಇಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಮಾವೋವಾದಿಗಳು ದಾಳಿ ನಡೆಸಿದಾಗ ಗುಂಡಿನ ಚಕಮಕಿ ಆರಂಭವಾಗಿತ್ತು.

ಇದನ್ನೂ ಓದಿ: Encounter In Kanker: ಭದ್ರತಾ ಪಡೆಗಳೊಂದಿಗೆ ಎನ್‌ಕೌಂಟರ್‌; ಓರ್ವ ನಕ್ಸಲ್‌ ಸಾವು

ಏಪ್ರಿಲ್‌ನಲ್ಲಿ ಭದ್ರತಾ ಪಡೆಯ ಸಿಬ್ಬಂದಿ 29 ಮಾವೋವಾದಿಗಳನ್ನು ಹತ್ಯೆ ಮಾಡಿದ್ದರು. ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಈ ಎನ್‌ಕೌಂಟರ್‌ ನಡೆದಿತ್ತು. ಗುಪ್ತಚರದ ಖಚಿತ ಮಾಹಿತಿಯ ಮೇರೆಗೆ ಬಿಎಸ್ಎಫ್ (BSF) ಮತ್ತು ಜಿಲ್ಲಾ ರಿಸರ್ವ್ ಗಾರ್ಡ್ (DRG) ಕಂಕರ್‌ನ ಚೋಟೆಬೆಟಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬಿನಗುಂಡ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಮಾವೋವಾದಿಗಳನ್ನು ಕೊಂದಿದ್ದರು.

Continue Reading

ದೇಶ

Encounter In Bandipora: ಬಂಡಿಪೋರಾದಲ್ಲಿ ಎನ್‌ಕೌಂಟರ್‌; ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆ

Encounter In Bandipora: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಒಬ್ಬ ಭಯೋತ್ಪಾದಕ ಹತನಾಗಿದ್ದಾನೆ. ಬಂಡಿಪೋರಾ ಜಿಲ್ಲೆಯ ಅರಗಾಮ್ ಗ್ರಾಮದಲ್ಲಿ ಭಯೋತ್ಪಾದಕರಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸೋಮವಾರ ಮುಂಜಾನೆ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿವೆ.

VISTARANEWS.COM


on

Encounter In Bandipora
Koo

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆ (Security forces)ಗಳೊಂದಿಗೆ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಒಬ್ಬ ಭಯೋತ್ಪಾದಕ ಹತನಾಗಿದ್ದಾನೆ. ಬಂಡಿಪೋರಾ ಜಿಲ್ಲೆಯ ಅರಗಾಮ್ (Aragam) ಗ್ರಾಮದಲ್ಲಿ ಭಯೋತ್ಪಾದಕರಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸೋಮವಾರ ಮುಂಜಾನೆ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿವೆ (Encounter In Bandipora).

“ಭಯೋತ್ಪಾದಕರು ಅವಿತು ಕುಳಿತಿದ್ದ ಅಡಗುತಾಣವನ್ನು ಭದ್ರತಾ ಪಡೆಗಳು ಸುತ್ತುವರಿದಾಗ ಗುಂಡಿನ ಚಕಮಕಿ ಆರಂಭವಾಯಿತು. ಎನ್‌ಕೌಂಟರ್‌ನಲ್ಲಿ ಇದುವರೆಗೆ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಈ ಪ್ರದೇಶದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ” ಎಂದು ಅಧಿಕಾರಿಗಳು ತಿಳಿಸಿದರು. ಹತ್ಯೆಗೀಡಾದ ಭಯೋತ್ಪಾದಕನನ್ನು ಗುರುತು ಕಂಡು ಹಿಡಿಯಲು ಯತ್ನಿಸಲಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದರು.

ಆರಂಭದಲ್ಲಿ ಗ್ರಮಾದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಭದ್ರತಾ ಪಡೆಗಳು ಆಗಮಿಸಿ ಅವರನ್ನು ಸುತ್ತುವರಿದ ಬಳಿಕ ಸುಮ್ಮನಾಗಿದ್ದರು. ಬಳಿಕ ಕಾರ್ಯಾಚರಣೆ ಮುಂದುವರಿಯಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಅವರು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲಾಗುವುದು ಎಂದು ಭರವಸೆ ನೀಡಿದ್ದರು. ಅಲ್ಲದೆ ಅಮರನಾಥ ಯಾತ್ರೆಯ ವೇಳೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳಿಗೆ ಸಲಹೆ ನೀಡಿದ್ದರು. ಸದ್ಯ ಭದ್ರತಾ ಪಡೆಗಳ ಕಾರ್ಯಾಚರಣೆ ಮುಂದುವರಿದಿದೆ.

ಮತ್ತೆ ಉಗ್ರರ ಹಾವಳಿ

ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಹಾವಳಿ ಆರಂಭವಾಗಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಜೂನ್ 9ರಂದು ನಡೆದ ಭೀಕರ ಭಯೋತ್ಪಾದಕರ ದಾಳಿಗೆ ಪುಟ್ಟ ಕಂದಮ್ಮನೂ ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶಿವ ಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ವೇಳೆ ಬಸ್‌ ಆಳವಾದ ಕಮರಿಗೆ ಬಿದ್ದು, ದುರಂತ ಸಂಭವಿಸಿದೆ. ಅದಾದ ಬಳಿಕವೂ ಭಯೋತ್ಪಾದಕರು ದಾಳಿ ನಡೆಸಿದ್ದು ಓರ್ವ ಯೋಧ ಹುತಾತ್ಮರಾಗಿದ್ದಾರೆ. ನಂತರ ಸೇಡು ತೀರಿಸಿಕೊಂಡ ಭಾರತೀಯ ಸೇನೆ ಈಗಾಗಲೇ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ.

ಕಥುವಾ ಜಿಲ್ಲೆಯ ಸೈದಾ ಸುಖಲ್ ಗ್ರಾಮದಲ್ಲಿ ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಅಡಗಿದ್ದ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಸಿಆರ್‌ಪಿಎಫ್‌ ಸಿಬ್ಬಂದಿಯೊಬ್ಬರು ಹತರಾಗಿದ್ದರು. ಬಳಿಕ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದರು.

ಇದನ್ನೂ ಓದಿ: Kathua Terror Attack: ಯೋಧನ ಹತ್ಯೆಗೆ ಪ್ರತಿಕಾರ; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಜಮ್ಮುವಿನಿಂದ 60 ಕಿ.ಮೀ ದೂರದಲ್ಲಿರುವ, ಅಂತಾರಾಷ್ಟ್ರೀಯ ಗಡಿ ಬಳಿಯ ಗ್ರಾಮದಲ್ಲಿ ಜೂನ್‌ 11ರ ಸಂಜೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಓರ್ವ ನಾಗರಿಕ ಗಾಯಗೊಂಡಿದ್ದ. ನಂತರ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಒಬ್ಬ ಭಯೋತ್ಪಾದಕನನ್ನು ಕೊಂದಿದೆ. ಇನ್ನೊಬ್ಬನನ್ನು ಜೂನ್‌ 12ರ ಮುಂಜಾನೆ ಗುಂಡಿಕ್ಕಿ ಕೊಲ್ಲಲಾಯಿತು. ಈ ಮಧ್ಯೆ ಪೊಲೀಸರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

Continue Reading
Advertisement
Gold Rate Today
ಚಿನ್ನದ ದರ8 mins ago

Gold Rate Today: ಆಭರಣ ಖರೀದಿಸುವವರಿಗೆ ರಿಲೀಫ್‌; ಇಳಿದ ಚಿನ್ನದ ದರ

GPF Interest
ಕರ್ನಾಟಕ9 mins ago

GPF Interest: 5 ಲಕ್ಷ ಮೀರಿದ ಜಿಪಿಎಫ್‌ಗೆ ಬಡ್ಡಿ ಪಾವತಿಸಲು ರಾಜ್ಯ ಸರ್ಕಾರ ಆದೇಶ

Actor Darshan
ಮೈಸೂರು9 mins ago

Actor Darshan : ಕೊಲೆ ಕೇಸ್‌ ಬೆನ್ನಲ್ಲೆ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Actor Darshan Police To Serve Notice To sandalwood comedy actor
ಸ್ಯಾಂಡಲ್ ವುಡ್24 mins ago

Actor Darshan: ದರ್ಶನ್ ಪ್ರಕರಣ; ಸ್ಯಾಂಡಲ್‌ವುಡ್‌ ಖ್ಯಾತ ಹಾಸ್ಯ ನಟ ಚಿಕ್ಕಣ್ಣಗೂ ನೋಟಿಸ್‌?

Viral Video
ಪ್ರಮುಖ ಸುದ್ದಿ26 mins ago

Viral Video: ಬಕ್ರೀದ್ ಬಲಿ ಕೊಡುವ ಮೇಕೆಯ ಮೈಮೇಲೆ ʼರಾಮʼ ನಾಮ; ಹಿಂದೂಗಳನ್ನು ಕೆಣಕಿದ ವ್ಯಕ್ತಿ ಅರೆಸ್ಟ್

Sandeep Lamichhane
ಕ್ರೀಡೆ28 mins ago

Sandeep Lamichhane: ಪಾಕ್​ ಆಟಗಾರನನ್ನು ಹಿಂದಿಕ್ಕಿ ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ನೇಪಾಳ ಸ್ಪಿನ್ನರ್​

Yogi Adithyanath
Latest30 mins ago

Yogi Adithyanath: ಎರಡು ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್

Reasi Terror Attack
ವೈರಲ್ ನ್ಯೂಸ್41 mins ago

Reasi Terror Attack: ಪಾಕಿಸ್ತಾನದಲ್ಲಿ ರಿಯಾಸಿ ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ನ ಹತ್ಯೆ; ವಿಡಿಯೊ ವೈರಲ್‌

Bakrid 2024
ಬೆಂಗಳೂರು54 mins ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Actor Darshan Please leave Pavitra Darshan request to police
ಸಿನಿಮಾ1 hour ago

Actor Darshan: ಪ್ಲೀಸ್‌ ಪವಿತ್ರಾಳನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿರುವ ದರ್ಶನ್‌?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bakrid 2024
ಬೆಂಗಳೂರು54 mins ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ19 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ20 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

ಟ್ರೆಂಡಿಂಗ್‌