Deepika Das Reception: ಸದ್ದಿಲ್ಲದೆ ಮದುವೆಯಾದ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ದೀಪಿಕಾ ದಾಸ್‌! - Vistara News

ಸ್ಯಾಂಡಲ್ ವುಡ್

Deepika Das Reception: ಸದ್ದಿಲ್ಲದೆ ಮದುವೆಯಾದ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ದೀಪಿಕಾ ದಾಸ್‌!

Deepika Das Reception: ದೀಪಕ್ ಜತೆ ದೀಪಿಕಾ ದಾಸ್ ಮದುವೆಯಾಗಿದ್ದಾರೆ. ಸ್ನೇಹಿತರು ಮತ್ತು ಆಪ್ತರಿಗಾಗಿ ರಿಸೆಪ್ಷನ್​ ಮಾಡಲಾಗಿದೆ. ಈ ಸಂದರ್ಭದಲ್ಲಿ ದೀಪಕ್​ ಮತ್ತು ದೀಪಿಕಾ ದಾಸ್​ ಅವರು ಮಾಧ್ಯಮಗಳ ಜತೆ ಮಾತನಾಡಿದ್ದಾರೆ.

VISTARANEWS.COM


on

Deepika Das Husband Deepak Background
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇತ್ತೀಚೆಗೆ ಗೋವಾದಲ್ಲಿ ಕುಟುಂಬದವರ ಸಮ್ಮುಖದಲ್ಲಿ ರಿಯಲ್ (Deepika Das Reception)​ ಎಸ್ಟೇಟ್​ ಮತ್ತು ಐಟಿ ಉದ್ಯಮದಲ್ಲಿ ತೊಡಗಿಕೊಂಡಿರುವ ದೀಪಕ್ ಜತೆ ದೀಪಿಕಾ ದಾಸ್ ಮದುವೆಯಾಗಿದ್ದಾರೆ. ಸ್ನೇಹಿತರು ಮತ್ತು ಆಪ್ತರಿಗಾಗಿ ರಿಸೆಪ್ಷನ್​ ಮಾಡಲಾಗಿದೆ. ಈ ಸಂದರ್ಭದಲ್ಲಿ ದೀಪಕ್​ ಮತ್ತು ದೀಪಿಕಾ ದಾಸ್​ ಅವರು ಮಾಧ್ಯಮಗಳ ಜತೆ ಮಾತನಾಡಿದ್ದಾರೆ.

ಕಳೆದ ಒಂದು ವರ್ಷದಿಂದ ದೀಪಕ್‌ ಹಾಗೂ ದೀಪಿಕಾ ದಾಸ್​ ಡೇಟಿಂಗ್​ ಮಾಡುತ್ತಿದ್ದರು. ಇದೀಗ ಮಾಧ್ಯಮದ ಜತೆ ದೀಪಕ್‌ ಮಾತನಾಡಿ ʻʻನಾಲ್ಕು ವರ್ಷಗಳ ಹಿಂದೆ ಭೇಟಿ ಆದೆವು. ಕಳೆದೊಂದು ವರ್ಷದಿಂದ ಕಮಿಟೆಡ್​ ರಿಲೇಷನ್​ಶಿಪ್​ನಲ್ಲಿ ಇದ್ದೆವು. ಮನೆಯವರಿಗೆಲ್ಲ ಗೊತ್ತಿತ್ತು. ಇದರಲ್ಲಿ ಏನೂ ಸಸ್ಪೆನ್ಸ್​ ಇಲ್ಲ. ನಾನು ರಿಯಲ್​ ಎಸ್ಟೇಟ್​ ಡೆವೆಲಪರ್​. ಇಲ್ಲಿಯೇ ಇರುವುದು. ದುಬೈನಲ್ಲಿ ಅಲ್ಲʼʼ ಎಂದರು.

ದೀಪಿಕಾ ಮಾತನಾಡಿ ʻʻದೀಪಕ್‌ ಅವರು ಪಕ್ಕಾ ಗೌಡ, ದೇಸಿ ಹುಡುಗ. ನಾನೇ ಸೈಲೆಂಟ್‌ ಅಂದರೆ ಅವರು ಇನ್ನೂ ಸೈಲೆಂಟ್‌. ದೀಪಕ್​ ಧ್ವನಿ ಜೋರಾಗಿ ಬರಲ್ಲ. ಅವರನ್ನು ಮಾತಾಡಿಸಬೇಕು ಎಂದರೆ ನಾನೇ ಹತ್ತು ಸಲ ಕೇಳಬೇಕು. ನನ್ನ ಬೆಳವಣಿಗೆಯಲ್ಲಿ ಅವರ ಬೆಂಬಲ ಇದ್ದೇ ಇರುತ್ತದೆ ಎಂಬ ನಂಬಿಕೆ ನನಗೆ ಇದೆ. ಅದು ಮಾಡಬೇಡ ಇದು ಮಾಡಬೇಡ ಎಂದು ದೀಪಕ್‌ ಡೇಟ್‌ ಮಾಡುವಾಗಲೂ ಹೇಳಲಿಲ್ಲ. ಪರ್ಸನಲ್​ ಬೇರೆ, ಪ್ರೊಫೆಷನಲ್​ ಬೇರೆ ಅಂತ ನಾವು ಇಟ್ಟುಕೊಂಡಿದ್ದೇವೆ. ಪ್ರೊಡಕ್ಷನ್​ ಮಾಡೋಣ ಎಂಬ ಆಲೋಚನೆ ಇದೆ. ಏನಾಗತ್ತೋ ನೋಡೋಣ. ನಿಮ್ಮೆಲ್ಲರ ಬೆಂಬಲ ಇರಲಿ’ ಎಂದು ದೀಪಿಕಾ ದಾಸ್​ ಹೇಳಿದ್ದಾರೆ.

ಇದನ್ನೂ ಓದಿ: Kiccha Sudeep: ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ಕಿಚ್ಚ ಸುದೀಪ್‌!

ಇದನ್ನೂ ಓದಿ: Deepika Das: ಸದ್ದಿಲ್ಲದೆ ಹಸೆಮಣೆ ಏರಿದ ನಟಿ ದೀಪಿಕಾ ದಾಸ್; ಮದುವೆ ಫೋಟೊಸ್‌ ವೈರಲ್‌

ಬಿಗ್‌ಬಾಸ್‌ ಸೀಸನ್‌ 9ರಲ್ಲಿ ಶೈನ್‌ ಶೆಟ್ಟಿ ಗೆಲುವು ಪಡೆದಿದ್ದರು. ಶೈನ್‌ ಶೆಟ್ಟಿ ಮತ್ತು ದೀಪಿಕಾ ದಾಸ್‌ ಆತ್ಮೀಯರಾಗಿದ್ದರು. ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಇತ್ತು. ಆದರೆ, ದೀಪಿಕಾ ಸದ್ದಿಲ್ಲದೇ ಮದುವೆಯಾಗಿದ್ದಾರೆ. ಕೃಷ್ಣ ರುಕ್ಮಿಣಿ, ನಾಗಿಣಿ ಸೀರಿಯಲ್‌ನಿಂದ ಖ್ಯಾತಿ ಪಡೆದಿದ್ದರು ದೀಪಿಕಾ ದಾಸ್.ಹೊಸ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ನಾಯಕಿಯಾಗಿ ಪಾಯಲ್ ಎಂಬ ಪಾತ್ರದ ಮೂಲಕ ಬರಲು ಸಜ್ಜಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸ್ಯಾಂಡಲ್ ವುಡ್

Chetan Ahimsa: ಉಪೇಂದ್ರ ಬುದ್ಧಿವಂತನಲ್ಲ, ಅವರಿಗೆ ಭ್ರಮೆ; ನಟ ಚೇತನ್ ಗೇಲಿ

Chetan Ahimsa: ‘ಪವನ್‌ ಕಲ್ಯಾಣ್‌ ಅವರನ್ನು ಗೆಲ್ಲಿಸಲು ಆಂಧ್ರ ಜನ 14 ವರ್ಷ ತಗೊಂಡ್ರು, ಉಪೇಂದ್ರ ಅವರನ್ನು (Chetan Ahimsa) ಗೆಲ್ಲಿಸಲು ಕನ್ನಡ ಜನ ಇನ್ನು ಎಷ್ಟು ವರ್ಷ ತಗೋತ್ತಾರೋ ಗೊತ್ತಿಲ್ಲ’ ಎಂಬ ಪೋಸ್ಟ್‌ ವೈರಲ್‌ ಆಗಿತ್ತು. ಈ ಪೋಸ್ಟ್‌ ವೈರಲ್‌ ಆದ ಬೆನ್ನಲ್ಲೇ ಚೇತನ್‌ ಅಹಿಂಸಾ ʻʻನಿಜ ಹೇಳಬೇಕೆಂದರೆ , ನೀವು (ಉಪೇಂದ್ರ) ಎಂದಿಗೂ ಬುದ್ಧಿವಂತರಾಗಿರಲಿಲ್ಲʼʼಎಂದು ಪರೋಕ್ಷವಾಗಿ ಉಪೇಂದ್ರ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

VISTARANEWS.COM


on

Chetan Ahimsa says that Upendra is not intelligent he is delusional
Koo

ಬೆಂಗಳೂರು: ಆಂಧ್ರದಲ್ಲಿ ನಟ ಪವನ್‌ ಕಲ್ಯಾಣ್‌ `ಜನಸೇನಾ’ ಪಕ್ಷ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಉಪ್ಪಿ ಪರ ಪೋಸ್ಟ್‌ವೊಂದು ಹರಿದಾಡುತ್ತಿದೆ. ‘ಪವನ್‌ ಕಲ್ಯಾಣ್‌ ಅವರನ್ನು ಗೆಲ್ಲಿಸಲು ಆಂಧ್ರ ಜನ 14 ವರ್ಷ ತಗೊಂಡ್ರು, ಉಪೇಂದ್ರ ಅವರನ್ನು (Chetan Ahimsa) ಗೆಲ್ಲಿಸಲು ಕನ್ನಡ ಜನ ಇನ್ನು ಎಷ್ಟು ವರ್ಷ ತಗೋತ್ತಾರೋ ಗೊತ್ತಿಲ್ಲ’ ಎಂಬ ಪೋಸ್ಟ್‌ ವೈರಲ್‌ ಆಗಿತ್ತು. ಈ ಪೋಸ್ಟ್‌ ವೈರಲ್‌ ಆದ ಬೆನ್ನಲ್ಲೇ ಚೇತನ್‌ ಅಹಿಂಸಾ ʻʻನಿಜ ಹೇಳಬೇಕೆಂದರೆ , ನೀವು (ಉಪೇಂದ್ರ) ಎಂದಿಗೂ ಬುದ್ಧಿವಂತರಾಗಿರಲಿಲ್ಲʼʼ ಎಂದು ಪರೋಕ್ಷವಾಗಿ ಉಪೇಂದ್ರ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ಉಪ್ಪಿ ಪೋಸ್ಟ್‌ ಏನು?

‘ರಿಯಲ್​ ಸ್ಟಾರ್​’ ಉಪೇಂದ್ರ ಅವರು ಉತ್ತಮ ಪ್ರಜಾಕೀಯ ಪಕ್ಷದ (Uttama Prajakeeya Party) ಮೂಲಕ ರಾಜಕೀಯದ ಕೆಲಸಗಳ ಕಡೆಗೆ ಗಮನ ಹರಿಸಿದ್ದಾರೆ. ಆದರೆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಸೂಕ್ತ ಜನಬೆಂಬಲ ಸಿಕ್ಕಿಲ್ಲ.ಪವನ್ ಕಲ್ಯಾಣ್ (Pawan Kalyan)​ ಅವರು ಜಯಭೇರಿ ಬಾರಿಸಿ ಬಳಿಕ ನೆಟ್ಟಿಗರು ಉಪೇಂದ್ರ ಅವರಿಗೆ ಹೋಲಿಕೆ ಮಾಡಿದ್ದಾರೆ.

ಇದಾದ ಬಳಿಕ ಈ ಟ್ರೋಲ್‌ ಪೋಸ್ಟ್‌ಗೆ ಸ್ವತಃ ಉಪ್ಪಿ ಅವರೇ ಪ್ರತಿಕ್ರಿಯೆ ನೀಡಿ ʻʻವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್.. ಉಪೇಂದ್ರ ಸೋಲು ಗೆಲುವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ! ಎಂಥ ನಿಸ್ವಾರ್ಥ! ಎಂಥಾ ತ್ಯಾಗ ಮನೋಭಾವ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ. ಡೋಂಟ್ ವರೀ. ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ. ಗೆದ್ದೇ ಗೆಲ್ತೀನಿ. ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ…ನೆಕ್ಸ್ಟ್ ಎಲೆಕ್ಷನ್​ನಲ್ಲಿ ನನಗ್ ಕೆಲ್ಸಾ ಕೊಡ್ತೀರ ಅಂದ್ರೆ ನಿಲ್ತೀನಿ. ಆಗ್ಲೂ ನೀವ್ ಎಮೋಷನಲ್ ಪ್ರಚಾರ ಮಾಡ್ರಿ. ಸಭೆ ಸಮಾರಂಭ ಎಲ್ಲಾ ಮಾಡ್ರಿ. ಕಷ್ಟ ಪಡ್ರಿ. ಆಮೇಲೆ ಐದು ವರ್ಷ ನೀವೇನ್ ಬೇಕಾದ್ರೂ ಮಾಡ್ಕಳಿ ನಾವ್ ಕೇಳಕ್ ಬರಲ್ಲ ಅಂದ್ರೆ. ಉಸ್.. ಏನ್ ಬರೀಬೇಕೋ ಗೊತ್ತಾಗ್ತಿಲ್ಲರಪ್ಪೋ. ಈ ದಡ್ ನನ್ ಮಗಂಗೇ ಯಾವೋನಾದ್ರು ಇನ್ಮೇಲೆ ಬುದ್ಧಿವಂತ ಅಂದ್ರೇ ಅಷ್ಟೇ… ಸೆಂದಾಗಿರಕ್ಕಿಲ್ಲ’ ಎಂದು ಉಪೇಂದ್ರ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: Actor Chetan Ahimsa: ಮತ್ತೆ ಮೋದಿಯೇ ಪ್ರಧಾನಿ, ಆದರೆ ಬಿಜೆಪಿಗಿದು ಪಾಠ ಎಂದ ನಟ ಚೇತನ್!

ಉಪೇಂದ್ರ ಎಂದಿಗೂ ಬುದ್ಧಿವಂತರಾಗಿರಲಿಲ್ಲ!

ಇದೀಗ ಚೇತನ್‌ ಅಹಿಂಸಾ ಅವರು ಉಪೇಂದ್ರ ಅವರಿಗೆ ಪರೋಕ್ಷವಾಗಿ ಟೀಕಿಸಿ ಪೋಸ್ಟ್‌ವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ʻʻಉಪೇಂದ್ರ: ‘ಈ ದಡ್ ನನ್ ಮಗಂಗೆ ಇನ್ಮೆಲೆ ಬುದ್ಧಿವಂತ ಅಂದ್ರೆ ಅಷ್ಟೆ’

ನಿಜ ಹೇಳಬೇಕೆಂದರೆ, ನೀವು ಎಂದಿಗೂ ಬುದ್ಧಿವಂತರಾಗಿರಲಿಲ್ಲ— ನಿಮ್ಮ ಅಸಂಬದ್ಧ ಕಲ್ಪನೆಯ ಭ್ರಮೆ ಅಷ್ಟೇ”ಎಂದು ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಈ ಪೋಸ್ಟ್‌ಗೆ ನೆಟ್ಟಿಗರು ತರಹೇವಾರಿ ಕಮೆಂಟ್ಸ್ ಮಾಡಿದ್ದಾರೆ. ಇನ್ನು ಕೆಲವರು ʻಚೇತನ್ ಮೊದಲು ಕನ್ನಡ ಬರೆಯೋದು ಕಲೀರಿ, ಆಮೇಲೆ ಕಾಲೆಳೆಯುವ ಕೆಲಸ ಮಾಡಿʼ ಎಂದಿದ್ದಾರೆ.

ಮತ್ತೆ ಮೋದಿಯೇ ಪ್ರಧಾನಿ, ಆದರೆ ಬಿಜೆಪಿಗಿದು ಪಾಠ ಎಂದಿದ್ದ ನಟ ಚೇತನ್!

ನಿರೀಕ್ಷೆಯಂತೆ ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಆದರೆ, ಸಕಾರಾತ್ಮಕವಾಗಿ ಬಿಜೆಪಿಗೆ ಅಧಿಕಾರಕ್ಕೆ ಬರಲು ಎನ್‌ಡಿಎ ಅಗತ್ಯವಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಎಕ್ಸ್‌ ಮೂಲಕ ನಟ ಚೇತನ್‌ ಅವರು ಹೇಳಿಕೊಂಡಿದ್ದರು.

“ಪ್ರಧಾನಿ ಮೋದಿ ಮೂರನೇ ಬಾರಿ ಅಧಿಕಾರ ಮುಂದುವರಿಸಬಹುದು. ಆದರೆ ಬಿಜೆಪಿಗೆ ಇದೊಂದು ದೊಡ್ಡ ಪಾಠ. ಇದರರ್ಥ ಬಿಜೆಪಿ ಹಿಂದುತ್ವ ಮತ್ತು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯಂತಹ ಒಕ್ಕೂಟ ವಿರೋಧಿ ನೀತಿಗಳನ್ನು ಅಷ್ಟು ಸುಲಭವಾಗಿ ಜಾರಿಗೆ ತರುವುದಿಲ್ಲ. ಇದು ಒಳ್ಳೆಯದೇ. ಇದು ಮೋದಿಯವರ ವಿಜಯವಲ್ಲ, ಪ್ರಜಾಪ್ರಭುತ್ವದ ವಿಜಯ” ಎಂದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಚೇತನ್ ಬರೆದುಕೊಂಡಿದ್ದರು.

Continue Reading

ಸ್ಯಾಂಡಲ್ ವುಡ್

Kannada New Movie: ಹೊಸ ಸಿನಿಮಾಗೆ ಕಥೆ ಬರೆಯಿರಿ: 1 ಲಕ್ಷ ರೂ. ಬಹುಮಾನ ಗೆಲ್ಲಿರಿ!

Kannada New Movie: ಇದು ಸಿನಿಮಾವೊಂದಕ್ಕೆ ಬೇಕಾಗಿರುವ ಬರಹ. ಹಾಗಾಗಿ ರೋಚಕ ಎನಿಸುವ ಬರಹಕ್ಕೆ ಸೂಕ್ತ ಬಹುಮಾನವಿದೆ ಎಂದು ತಂಡ ಹೇಳಿಕೊಂಡಿದೆ. ಬರವಣಿಗೆ ಸ್ವಾರಸ್ಯಕರವಾಗಿದ್ದರೆ ಪ್ರಥಮ ಆದ್ಯತೆ, ಪೂರ್ತಿ ಕಥೆ ಬೇಡ. ಅನುಭವಿಸಿರುವ ಕೆಲ ಸನ್ನಿವೇಶಗಳನ್ನು ವಿವರವಾಗಿ ಬರೆದು ಕಳುಹಿಸಿದರೆ ಸಾಕು ಎಂದು ಹೇಳಿಕೊಂಡಿದೆ.ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸುವವರು ಸಿನೆಮಾದ ಚಿತ್ರಕಥೆ ವಿಭಾಗದಲ್ಲಿ ಬರೆಯುವರ ಹೆಸರನ್ನು ಬಳಸಲಾಗುವುದು ಎಂದು ಹೇಳಿದೆ ಚಿತ್ರತಂಡ.

VISTARANEWS.COM


on

Write a story for a new movie one lakh rupees Win a prize kishore megalamane movie
Koo

ಬೆಂಗಳೂರು: ಇತ್ತೀಚೆಗಷ್ಟೇ ಕಿಶೋರ್ ಮೇಗಳಮನೆ (Kannada New Movie) ನಿರ್ದೇಶನದ ಹಾಗೂ ಆದಿತ್ಯ ಅಭಿನಯದ “ಕಾಂಗರೂ” ಚಿತ್ರವನ್ನು ನಿರ್ಮಿಸಿದ್ದ ಆರೋಹ ಪ್ರೊಡಕ್ಷನ್ಸ್ ಸಂಸ್ಥೆ ತನ್ನ ಎರಡನೇ ನಿರ್ಮಾಣದ ಚಿತ್ರಕ್ಕೆ ಮುಂದಾಗಿದೆ. ಈ ಚಿತ್ರಕ್ಕೆ ಕಥೆ ಬರೆಯಲು ಸಂಸ್ಥೆ ಹೊಸ ಕಥೆಗಾರರಿಗೆ ಆಹ್ವಾನ ನೀಡಿದೆ‌.

ಸ್ಟೋರಿ ಏನು?

ಶಾಲಾ ಕಾಲೇಜು ದಿನದಲ್ಲಿ ನೀವು ಮಾಡಿದ ಮೋಜು ಮಸ್ತಿ ಬಗ್ಗೆ ಕಥೆ ಬರೆಯಬೇಕು. ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ನಿಮ್ಮ ಸ್ನೇಹಿತರ ಜತೆ ನೀವು ಸಂಭ್ರಮಿಸಿದ ಖುಷಿಯ ಕ್ಷಣಗಳು ಮತ್ತು ನೀವು ಮಾಡಿರುವ ಕಿರಿಕ್ ಗಳು ಹಾಗೂ ನಿಮ್ಮ ಹಳೆಯ ಲವ್ ಸ್ಟೋರಿಗಳ ಬಗ್ಗೆ ಮೂರು ಪುಟ ಮೀರದಂತೆ ಬರೆದು ಕಳುಹಿಸಿಬೇಕು. ಆಯ್ಕೆಯಾದ ಬರಹಕ್ಕೆ ಒಂದು ಲಕ್ಷ ಬಹುಮಾನ ಕೊಡಲಿದೆ ಚಿತ್ರತಂಡ.

ಪ್ರಥಮ ಬಹುಮಾನ 1,00,000 ರೂ.
ದ್ವಿತೀಯ ಬಹುಮಾನ 50,000 ರೂ.
ತೃತೀಯ ಬಹುಮಾನ 10 ಬರಹಗಳಿಗೆ ತಲಾ 25,000 ರೂ.

ಇದು ಸಿನಿಮಾವೊಂದಕ್ಕೆ ಬೇಕಾಗಿರುವ ಬರಹ. ಹಾಗಾಗಿ ರೋಚಕ ಎನಿಸುವ ಬರಹಕ್ಕೆ ಸೂಕ್ತ ಬಹುಮಾನವಿದೆ ಎಂದು ತಂಡ ಹೇಳಿಕೊಂಡಿದೆ. ಬರವಣಿಗೆ ಸ್ವಾರಸ್ಯಕರವಾಗಿದ್ದರೆ ಪ್ರಥಮ ಆದ್ಯತೆ, ಪೂರ್ತಿ ಕಥೆ ಬೇಡ. ಅನುಭವಿಸಿರುವ ಕೆಲ ಸನ್ನಿವೇಶಗಳನ್ನು ವಿವರವಾಗಿ ಬರೆದು ಕಳುಹಿಸಿದರೆ ಸಾಕು ಎಂದು ಹೇಳಿಕೊಂಡಿದೆ.ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸುವವರು ಸಿನೆಮಾದ ಚಿತ್ರಕಥೆ ವಿಭಾಗದಲ್ಲಿ ಬರೆಯುವರ ಹೆಸರನ್ನು ಬಳಸಲಾಗುವುದು ಎಂದು ಹೇಳಿದೆ ಚಿತ್ರತಂಡ.

ಲೇಖನವನ್ನು 9844460128 ಈ ವಾಟ್ಸ್‌ಆಪ್‌ ನಂಬರ್ ಕಳುಹಿಸಿಬೇಕು ಅಥವಾ kishore.megalamane@gmail.com ಇದಕ್ಕೆ ಮೇಲ್ ಮಾಡಬಹುದು.

ಇದನ್ನೂ ಓದಿ: Hamare Baarah: ಮುಸ್ಲಿಂ ಮಹಿಳೆಯರ ಕುರಿತಾದ ‘ಹಮಾರೆ ಬಾರಾ’ ಸಿನಿಮಾ ಬ್ಯಾನ್‌ ಮಾಡಿದ ಕರ್ನಾಟಕ ಸರ್ಕಾರ

ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆಯುವ ಬರಹಗಾರರಿಗೆ ಕನ್ನಡದ ಸೂಪರ್ ಸ್ಟಾರ್ ನಟಿಸಲಿರುವ ಆರೋಹ ಪ್ರೊಡಕ್ಷನ್ ನಿರ್ಮಾಣದ ದ್ವಿತೀಯ ಚಿತ್ರದಲ್ಲಿ ಕೆಲಸ ಮಾಡಲು ಚಿತ್ರತಂಡ ಅವಕಾಶ ಕೊಡಲಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಕಾಂಗರೂ ಚಿತ್ರದ ನಿರ್ದೇಶಕರು ಕಿಶೋರ್ ಮೇಗಳಮನೆ,ಕಥೆಗಾರ, ಸಂಭಾಷಣೆಗಾರ ಮಾಸ್ತಿ, ಹಿರಿಯ ನಿರ್ದೇಶಕರು ಶಿವಮಣಿ,ಪದೇ ಪದೇ ಚಿತ್ರದ ನಿರ್ದೇಶಕರು ಪೀಣ್ಯ ನಾಗರಾಜ್,ಆಪರೇಷನ್ ನಕ್ಷತ್ರ ಚಿತ್ರದ ನಿರ್ದೇಶಕರು ಮಧುಸೂಧನ ತೀರ್ಪುಗಾರರ ಮಂಡಳಿಯಲ್ಲಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ ಚಿತ್ರತಂಡ.

Continue Reading

ಸ್ಯಾಂಡಲ್ ವುಡ್

Kannada New Movie: ನಾಳೆಯಿಂದ ʻಸಹಾರಾʼ ಆಟ ಶುರು; ಕನ್ನಡದ ಮೊದಲ ಮಹಿಳಾ ಕ್ರಿಕೆಟ್ ಕಥೆಯಾಧಾರಿತ ಸಿನಿಮಾ!

Kannada New Movie: ಕಳೆದ ಎಂಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜೇಶ್ ಭಗವತ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತು ಈ ಚಿತ್ರವನ್ನು ಹೊರತರುತ್ತಿದ್ದಾರೆ. ಮಾ ಕ್ರಿಯೆಷನ್ಸ್ ಪ್ರಥಮ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ- ಚಿತ್ರಕಥೆ – ಸಂಭಾಷಣೆ ರಚಿಸಿದ್ದಾರೆ.

VISTARANEWS.COM


on

Kannada New Movie sahara movie release tomorrow
Koo

ಬೆಂಗಳೂರು: ಕನ್ನಡದಲ್ಲಿ ಮಹಿಳಾ ಕ್ರಿಕೆಟ್ ಆಧಾರಿತ ಸಿನಿಮಾ ʻಸಹಾರಾʼ (Kannada New Movie) ನಾಳೆ (ಜೂನ್ 7) ತೆರೆ ಕಾಣುತ್ತಿದೆ. ಸಾರಿಕಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಸಹಾರಾ” ಚಿತ್ರ ಕನ್ನಡ ಚಿತ್ರರಂಗಲ್ಲೇ ಮೊದಲ ಪ್ರಯತ್ನ ಎಂದರೆ ಉತ್ಪ್ರೇಕ್ಷೆಯಲ್ಲ. ಯಾಕೆಂದರೆ ಚಿತ್ರಕಥೆಯು ಮಹಿಳಾ ಕ್ರಿಕೆಟ್ ಪಟು ಕುರಿತಾದದ್ದು.
ಮಂಡ್ಯದ ಹುಡುಗಿ ಒಬ್ಬಳು ಮಹಿಳಾ ಕ್ರಿಕೆಟ್ ಪಟು ಆಗುವ‌ ಕನಸನ್ನು ಕಂಡು, ಅದನ್ನು ನನಸಾಗಿಸುವ ಹಾದಿಯಲ್ಲಿ ಆಕೆ ಎದುರಿಸುವ ಅಡೆತಡೆಗಳು, ಹೇಗೆ ಅವುಗಳನ್ನು ಮೀರಿ‌ ಸಾಧನೆಯ ಮೆಟ್ಟಿಲೇರುತ್ತಾಳೆ,ಎಲ್ಲವನ್ನೂ ಕಥೆ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಈ‌ ನಿಟ್ಟಿನಲ್ಲಿ “ಸಹಾರಾ” ಚಿತ್ರ ಸಿನಿ‌ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲದೆ, ಗೋಲ್ಡನ್ ಸ್ಟಾರ್ ಗಣೇಶ್ “ಸಹಾರಾ” ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿರುವುದು ಎಲ್ಲೆಡೆ ಸದ್ದು ಮಾಡುತ್ತಿದೆ.

“ಸಹಾರಾ” ಚಿತ್ರಕ್ಕೆ ಮಂಜೇಶ್ ಭಗವತ್ ಆಕ್ಷನ್ ಕಟ್ ಹೇಳಿದ್ದು, ಅಂಕುಶ್ ರಜತ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ಮಾಡಿದ್ದು, ಆಂಟೊನಿ ರುತ್ ವಿನ್ಸೆಂಟ್ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ವಿಜಯ್ ಎಂ ಕುಮಾರ್ ಸಂಕಲನಕಾರರಾಗಿದ್ದಾರೆ. ಪಾತ್ರಕ್ಕಾಗಿಯೇ ಸಾರಿಕಾ ಅವರು ರಣಜಿ ಆಟಗಾರರಾದ. ಕೆ.ಬಿ. ಪವನ್ ಬಳಿ ಕ್ರಿಕೆಟ್ ಆಟದ ಬಗ್ಗೆ ತರಬೇತಿ ಪಡೆದುಕೊಂಡು ಬಂದು ನಂತರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜೇಶ್ ಭಗವತ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತು ಈ ಚಿತ್ರವನ್ನು ಹೊರತರುತ್ತಿದ್ದಾರೆ. ಮಾ ಕ್ರಿಯೆಷನ್ಸ್ ಪ್ರಥಮ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ- ಚಿತ್ರಕಥೆ – ಸಂಭಾಷಣೆ ರಚಿಸಿದ್ದಾರೆ.

ಇದನ್ನೂ ಓದಿ: Sahara Movie Trailer: ಕ್ರಿಕೆಟ್ ಆಧಾರಿತ `ಸಹಾರಾ’ ಸಿನಿಮಾ ಟ್ರೈಲರ್‌ ಔಟ್‌ ಮಾಡಿದ RCB ಮಾಜಿ ಆಟಗಾರ

ಉಳಿದಂತೆ ತಾರಾಬಳಗದಲ್ಲಿ ಮಂಜುನಾಥ ಹೆಗಡೆ, ಕುರಿ ಸುನಿಲ್, ಅಂಕುಶ್ ರಜತ್, ರಂಜನ್, ಮಂಜುಳಾ ರೆಡ್ಡಿ, ಪ್ರಕಾಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಮಹಿಳಾ ಕ್ರಿಕೆಟ್ ಆಧರಿಸಿದ ಈ ಚಿತ್ರಕ್ಕೆ ಪಿ.ಆರ್.ಸಂಸ್ಥೆ ಸಪೋರ್ಟ್ ಮಾಡಿದೆ. ಆಡಿಯೋ ಹಕ್ಕನ್ನು ಕೂಡ ಪಡೆದುಕೊಂಡಿದೆ. ಕೆಆರ್.ಜಿ ಸಂಸ್ಥೆ ಚಿತ್ರ ವಿತರಣೆ ಮಾಡುತ್ತಿದೆ.

ಕ್ರಿಕೆಟ್ ಆಧರಿಸಿದ ಈ ಚಿತ್ರಕ್ಕೆ ಕಿಚ್ಚ ಸುದೀಪ್ ನಿರೂಪಣೆ ಮಾಡಿದ್ದಾರೆ. ಮಂಡ್ಯದ ಹುಡುಗಿಯ ಕ್ರಿಕೆಟ್ ಕನಸಿನ ಕಥೆಯನ್ನ ನಿರೂಪಿಸಿದ್ದಾರೆ. ಇದರೊಟ್ಟಿಗೆ ಚಿತ್ರಕ್ಕೆ ಆಂಥೋನಿ ರುತ್ ವಿನ್ಸೆಂಟ್ ಕ್ಯಾಮರಾವರ್ಕ್ ಮಾಡಿದ್ದಾರೆ. ಸೂರಜ್ ಜೋಯಿಸ್ ಸಂಗೀತ ಕೊಟ್ಟಿದ್ದಾರೆ. ಥ್ರಿಲ್ಲರ್ ಮಂಜು ಸಾಹಸ, ಸಂತೋಷ್ ಶೇಖರ್ ಕೊರಿಯೋಗ್ರಫಿ ಚಿತ್ರದಲ್ಲಿದೆ.

Continue Reading

ಸ್ಯಾಂಡಲ್ ವುಡ್

Kannada New Movie: ಮಹಿಳಾ ಪ್ರಧಾನ ಮರ್ಡರ್ ಮಿಸ್ಟ್ರಿ “ಕ್ಯಾನ್ಬೆರಿ ಬೇಬೀಸ್”ಗೆ ಮುಹೂರ್ತ

Kannada New Movie: ಐದು ಜನ ಯುವತಿಯರ ಸುತ್ತ ನಡೆಯುವ ಕಥೆ ಹೊಂದಿದ ʻಕ್ಯಾನ್ಬೆರಿ ಬೇಬೀಸ್ʼ ಚಿತ್ರದ ಮುಹೂರ್ತ ಸಮಾರಂಭ ಕಳೆದ ಗುರುವಾರ ಬೆಂಗಳೂರಿನ ಶ್ರೀ ಬಲಮುರಿ ಬಾಲಚಂದ್ರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.ಇನ್ನು ಈ ಚಿತ್ರಕ್ಕೆ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಎಸ್.ನಾಗು ಅವರ ಸಂಗೀತವಿದ್ದು, ರಾಮ್ ನಾರಾಯಣ್ ಸಾಹಿತ್ಯ ರಚಿಸಿದ್ದಾರೆ. ಎಸ್.ಎಸ್.ಈಶ್ವರ್ ಹಿನ್ನೆಲೆ ಸಂಗೀತ ಒದಗಿಸುತ್ತಿದ್ದಾರೆ. ಆರ್ಯನ್ ರೋಷನ್ ಅವರ ಕೊರಿಯೋಗ್ರಫಿ, ಧನುಷ್ ಅವರ ಸಂಕಲನ, ವೀರೇಶ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

VISTARANEWS.COM


on

Kannada New Movie cranberry babies movie On set
Koo

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ (Kannada New Movie) ಮಹಿಳಾ ನಿರ್ದೇಶಕಿಯರ ಸಂಖ್ಯೆ ತೀರ ವಿರಳ ಎನ್ನಬಹುದು. ಇತ್ತೀಚೆಗೆ ಕೆಲ ಮಹಿಳಾ ತಂತ್ರಜ್ಞರುಗಳು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅಂಥವರಲ್ಲಿ ಶ್ರೀಪಲ್ಲವಿ ಕೂಡ ಒಬ್ಬರು. ಇವರೊಂದು ಮಹಿಳಾ ಪ್ರಧಾನ ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಾನ್ಸೆಪ್ಟ್ ಇಟ್ಟುಕೊಂಡು “ಕ್ಯಾನ್ಬೆರಿ ಬೇಬೀಸ್” ಎಂಬ ಚಿತ್ರವನ್ನು ನಿರ್ದೇಶನ ಮಾಡಹೊರಟಿದ್ದಾರೆ.

ಐದು ಜನ ಯುವತಿಯರ ಸುತ್ತ ನಡೆಯುವ ಕಥೆ ಹೊಂದಿದ ʻಕ್ಯಾನ್ಬೆರಿ ಬೇಬೀಸ್ʼ ಚಿತ್ರದ ಮುಹೂರ್ತ ಸಮಾರಂಭ ಕಳೆದ ಗುರುವಾರ ಬೆಂಗಳೂರಿನ ಶ್ರೀ ಬಲಮುರಿ ಬಾಲಚಂದ್ರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕಿ ಶ್ರೀಪಲ್ಲವಿ ʻʻನಾನು ಚಿತ್ರರಂಗಕ್ಕೆ ಬಂದು ಎಂಟು ವರ್ಷವಾಯ್ತು. ಕೆಲ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ ನಂತರ ಮಾಯಾಜಾಲ ಎಂಬ ಸಿನಿಮಾ ಡೈರೆಕ್ಟ್ ಮಾಡಿದ್ದೆ. ಇದು ಎರಡನೇ ಚಿತ್ರ. ದೊಡ್ಡ ಕನಸಿಟ್ಟುಕೊಂಡು ಬೆಂಗಳೂರಿಗೆ ಬರುವ ಐವರು ಯುವತಿಯರು ಇಲ್ಲಿ ಬಂದಮೇಲೆ ಏನೆಲ್ಲ ತೊಂದರೆ ರಿಸ್ಕ್ ಗಳನ್ನು ಎದುರಿಸಿದರು ಎಂದು ಚಿತ್ರದಲ್ಲಿ ಹೇಳಿದ್ದೇವೆ. ಬೆಂಗಳೂರು ಸುತ್ತಮುತ್ತ 25ರಿಂದ 30 ದಿನಗಳ ಕಾಲ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದ್ದೇವೆʼʼ ಎಂದರು.

Kannada New Movie:

ಇದನ್ನೂ ಓದಿ: Kannada New Movie: ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ ‘ಆಪರೇಷನ್ ಲಂಡನ್ ಕೆಫೆ’!

ನಂತರ ಕಲಾವಿದರು ನಂದಿನಿಗೌಡ, ರಕ್ಷಾ,ಸಿಂಚನ ಶೆಟ್ಟಿ, ಸಂದೀಪ್ ಮಲಾನಿ, ಪ್ರಕಾಶ್, ಸುಶ್ಮಿತಾಗೌಡ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು. ಹಾಸ್ಯನಟ ವಿಜಯ್ ಚೆಂಡೂರ್ ಅವರು ಚಿತ್ರದ ಕಥೆಗೆ ಹೊಸ ತಿರುವು ಕೊಡುವ ಕಾನ್ಸ್‌ಟೇಬಲ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಬ್ಬ ಹಿರಿಯ ನಟ, ಸಂಕಲನಕಾರ ನಾಗೇಂದ್ರ ಅರಸ್ ಈ ಚಿತ್ರದಲ್ಲಿ ಒಬ್ಬ ವಿಜ್ಞಾನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಾಗೇಂದ್ರ ಅರಸ್ ಮಾತನಾಡಿ ʻʻಪಲ್ಲವಿ ಅವರು ಒಳ್ಳೇ ಕಥೆ ಮಾಡಿಕೊಂಡಿದ್ದಾರೆ, ಅಲ್ಲದೆ ಅವರ ಪ್ರಯತ್ನಕ್ಕೆ ಸಪೋರ್ಟ್ ಮಾಡಬೇಕೆಂದು ಈ ಚಿತ್ರ ಒಪ್ಪಿದೆ. ಕನಸಿಟ್ಟುಕೊಂಡು ಬರುವ ಯುವತಿಯರು ತೊಂದರೆಯಲ್ಲಿದ್ದಾಗ ಅವರಿಗೆ ಸಹಾಯ ಮಾಡುವ ಸೈಂಟಿಸ್ಟ್ʼʼ ಎಂದು ಹೇಳಿದರು.

ಇನ್ನು ಈ ಚಿತ್ರಕ್ಕೆ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಎಸ್.ನಾಗು ಅವರ ಸಂಗೀತವಿದ್ದು, ರಾಮ್ ನಾರಾಯಣ್ ಸಾಹಿತ್ಯ ರಚಿಸಿದ್ದಾರೆ. ಎಸ್.ಎಸ್.ಈಶ್ವರ್ ಹಿನ್ನೆಲೆ ಸಂಗೀತ ಒದಗಿಸುತ್ತಿದ್ದಾರೆ. ಆರ್ಯನ್ ರೋಷನ್ ಅವರ ಕೊರಿಯೋಗ್ರಫಿ, ಧನುಷ್ ಅವರ ಸಂಕಲನ, ವೀರೇಶ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

Continue Reading
Advertisement
NDA Meeting
Lok Sabha Election 20246 mins ago

NDA Meeting: ಮತ್ತೊಮ್ಮೆ ಮೋದಿ ಸರ್ಕಾರ; ಜೂ. 9ರಂದು ಪ್ರಮಾಣ ವಚನ ಸ್ವೀಕಾರ

Chetan Ahimsa says that Upendra is not intelligent he is delusional
ಸ್ಯಾಂಡಲ್ ವುಡ್6 mins ago

Chetan Ahimsa: ಉಪೇಂದ್ರ ಬುದ್ಧಿವಂತನಲ್ಲ, ಅವರಿಗೆ ಭ್ರಮೆ; ನಟ ಚೇತನ್ ಗೇಲಿ

Art exhibition
ಬೆಂಗಳೂರು15 mins ago

Art Exhibition : ಜುಲೈ 10ರವರೆಗೆ ಬೆಂಗಳೂರಿನಲ್ಲಿ ಯೂಸುಫ್, ಶಿಬು ಅರಕ್ಕಲ್ ಚಿತ್ರಗಳ ಪ್ರದರ್ಶನ

Prajwal Revanna Case
ಪ್ರಮುಖ ಸುದ್ದಿ17 mins ago

Prajwal Revanna Case: ಮಧ್ಯಂತರ ಜಾಮೀನು ಬೆನ್ನಲ್ಲೇ ಭವಾನಿ ರೇವಣ್ಣ‌ ಪ್ರತ್ಯಕ್ಷ; ಎಸ್ಐಟಿ ವಿಚಾರಣೆಗೆ ಹಾಜರು!

Gold Rate Today
ಚಿನ್ನದ ದರ17 mins ago

Gold Rate Today: ಸತತ ಎರಡನೇ ದಿನವೂ ದುಬಾರಿಯಾದ ಚಿನ್ನ; ಇಂದಿನ ದರದ ಮಾಹಿತಿ ಇಲ್ಲಿದೆ

Assault Case
ಚಿತ್ರದುರ್ಗ39 mins ago

Assault Case : ಚಿಪ್ಸ್ ಕೊಡಿಸುವ ನೆಪದಲ್ಲಿ ಮಗುವಿನ ಕತ್ತು ಕೊಯ್ದ ಕಿರಾತಕ

Posani Krishna Murali End of Career In Tollywood
ಟಾಲಿವುಡ್1 hour ago

Posani Krishna Murali: ಟಾಲಿವುಡ್‌ನಲ್ಲಿ ಪೋಸಾನಿ ಕೃಷ್ಣ ಮುರಳಿ ವೃತ್ತಿಜೀವನ ಅಂತ್ಯ?

Electric shock in vijayanagara
ವಿಜಯನಗರ1 hour ago

Electric shock : ಶಾಲೆಗೆ ಹೋದವಳು ಮಸಣ ಸೇರಿದಳು; ಕರೆಂಟ್‌ ಶಾಕ್‌ಗೆ ಒದ್ದಾಡಿ ಪ್ರಾಣಬಿಟ್ಟಳು

bhavani revanna Prajwal Revanna Case
ಪ್ರಮುಖ ಸುದ್ದಿ1 hour ago

Bhavani Revanna: ಭವಾನಿ ರೇವಣ್ಣಗೆ ಒಂದು ವಾರ ಮಧ್ಯಂತರ ಜಾಮೀನು, ಇಂದು 1 ಗಂಟೆಗೆ ವಿಚಾರಣೆಗೆ ಬರಲೇಬೇಕು!

Mysuru Tragedy
ಮೈಸೂರು2 hours ago

Mysuru Tragedy : ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ತರಲು ಮರವೇರಿ ದಾರುಣ ಅಂತ್ಯ ಕಂಡ ಮಗ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 weeks ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌