Viral Video: ಆರು ಮಹಡಿ ಎತ್ತರದ ರಥ ತರಗೆಲೆಯಂತೆ ಕುಸಿದು ಬಿತ್ತು! - Vistara News

ವೈರಲ್ ನ್ಯೂಸ್

Viral Video: ಆರು ಮಹಡಿ ಎತ್ತರದ ರಥ ತರಗೆಲೆಯಂತೆ ಕುಸಿದು ಬಿತ್ತು!

ಗಾಯಾಳುಗಳ ಸಂಖ್ಯೆ 10ಕ್ಕೂ ಹೆಚ್ಚಿರಬಹುದು ಎಂದು ಶಂಕಿಸಲಾಗಿದೆ. ಬೃಹತ್‌ ರಥ ಕುಸಿಯುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದ್ದು, ವೈರಲ್‌ (viral video) ಆಗಿದೆ.

VISTARANEWS.COM


on

chariot collapse viral video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ದೇವಾಲಯದ ಜಾತ್ರೋತ್ಸವವೊಂದರ ಭಾರಿ ಗಾತ್ರದ ರಥ (Chariot collapse) ತಮಿಳುನಾಡಿನಲ್ಲಿ ಕುಸಿದುಬಿದ್ದಿದೆ ಎಂದು ʼಇಂಡಿಯಾ ಟುಡೇʼ ವರದಿ ಮಾಡಿದೆ. ಅದರಡಿಯಲ್ಲಿ ಹಲವು ಮಂದಿ ಸಿಲುಕಿಹಾಕಿಕೊಂಡಿದ್ದು, ಗಾಯಾಳುಗಳ ಸಂಖ್ಯೆ 10ಕ್ಕೂ ಹೆಚ್ಚಿರಬಹುದು ಎಂದು ಶಂಕಿಸಲಾಗಿದೆ. ಬೃಹತ್‌ ರಥ ಕುಸಿಯುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದ್ದು, ವೈರಲ್‌ (viral video) ಆಗಿದೆ.

ತಮಿಳುನಾಡಿನ ವೆಲ್ಲೂರಿನ ಮಾಯಾನ ಕೊಲ್ಲೈ ಉತ್ಸವಕ್ಕಾಗಿ ನಿರ್ಮಿಸಲಾಗಿದ್ದ 60 ಅಡಿ ಎತ್ತರದ ರಥ ಶನಿವಾರ ಕುಸಿದು ಬಿದ್ದಿದೆ. ಗತಿಸಿದವರ ಗೌರವಾರ್ಥ ನಡೆಸುವ ಮಾಯಾನ ಕೊಲ್ಲೈ ಉತ್ಸವದ ಆಚರಣೆಯ ಅಂಗವಾಗಿ ಎಲೆಯಲಾಗುತ್ತಿದ್ದ ರಥವು ಅಂಗಲಪರಮೇಶ್ವರಿ ಅಮ್ಮನವರ ವಿಗ್ರಹವನ್ನು ಹೊತ್ತಿತ್ತು. ಇದು ಪಾಲಾರ್ ನದಿಯ ದಡದಲ್ಲಿ ಸಾಗುತ್ತಿತ್ತು.

ನೂರಾರು ಸಂಖ್ಯೆಯಲ್ಲಿದ್ದ ಭಕ್ತರು ರಥವನ್ನು ತಿರುಗಿಸಲು ಪ್ರಯತ್ನಿಸಿದಾಗ, ಅದು ಸಮತೋಲನವನ್ನು ಕಳೆದುಕೊಂಡಿತು. ರಥದ ಮೇಲ್ಭಾಗವು ಕುಸಿದು, ಅದರ ಅಡಿಯಲ್ಲಿ ಹಲವರು ಸಿಕ್ಕಿಬಿದ್ದರು. ವೀಕ್ಷಕರು ಅವರನ್ನು ರಕ್ಷಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Drowned in River : ಕುರವತ್ತಿ ಜಾತ್ರೆಗೆ ಬಂದಿದ್ದ ಬಾಲಕ ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Team India Coach Applications: ಭಾರತ ತಂಡದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಸಾವಿರಾರು ಅಭಿಮಾನಿಗಳು; ಪಜೀತಿಗೆ ಸಿಲುಕಿದ ಬಿಸಿಸಿಐ

Team India Coach Applications: ಸೋಮವಾರವಷ್ಟೇ ಬಿಸಿಸಿಐ(BCCI) ತನ್ನ ಅಧಿಕೃತ ಪ್ರಕಟನೆ ಮೂಲಕ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು ಮೇ 27 ಅಂತಿಮ ಗಡುವಾಗಿದೆ. ಬಿಸಿಸಿಐ ಆನ್​ಲೈನ್​ ಮೂಲಕ ಈ ಅರ್ಜಿ ಆಹ್ವಾನಿಸಿ ಇದೀಗ ಪಜೀತಿಗೆ ಸಿಲುಕಿದೆ. ಹೌದು, ಅನೇಕ ಕ್ರಿಕೆಟ್​ ಅಭಿಮಾನಿಗಳು(Cricket Fans Apply For India’s Head Coach) ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತ ಟ್ವೀಟ್​ಗಳು ವೈರಲ್​ ಆಗಿದೆ.

VISTARANEWS.COM


on

Team India Coach Applications
Koo

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ(Team India Coach Applications) ಅರ್ಜಿ ಆಹ್ವಾನಿಸಿರುವ ಬಿಸಿಸಿಐಗೆ ಇದೀಗ ದೊಡ್ಡ ತಲೆನೋವೊಂದು ಎದುರಾಗಿದೆ. ಸೋಮವಾರವಷ್ಟೇ ಬಿಸಿಸಿಐ(BCCI) ತನ್ನ ಅಧಿಕೃತ ಪ್ರಕಟನೆ ಮೂಲಕ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು ಮೇ 27 ಅಂತಿಮ ಗಡುವಾಗಿದೆ. ಬಿಸಿಸಿಐ ಆನ್​ಲೈನ್​ ಮೂಲಕ ಈ ಅರ್ಜಿ ಆಹ್ವಾನಿಸಿ ಇದೀಗ ಪಜೀತಿಗೆ ಸಿಲುಕಿದೆ. ಹೌದು, ಅನೇಕ ಕ್ರಿಕೆಟ್​ ಅಭಿಮಾನಿಗಳು(Cricket Fans Apply For India’s Head Coach) ಗೂಗಲ್​ ಅರ್ಜಿ ಪಡೆದುಕೊಂಡು ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತ ಟ್ವೀಟ್​ಗಳು ವೈರಲ್​ ಆಗಿದೆ.

ಶುಕ್ರವಾರ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಾವು 3 ವರ್ಷಗಳ ದೀರ್ಘ ಅವಧಿಗಾಗಿ ಕೋಚ್​ ಹುಡುಕಾಟದಲ್ಲಿದ್ದೇವೆ ಎಂದು ಹೇಳಿದ್ದರು. ಜತೆಗೆ ದ್ರಾವಿಡ್ ಅವರಿಗೂ​ ಮರು ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದರು. ಆದರೆ, ದ್ರಾವಿಡ್​ ಕೋಚ್​ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಬಿಸಿಸಿಐ ನೂತನ ಕೋಚ್​ ಹುಡುಕಾಟದಲ್ಲಿದೆ.

ಇದನ್ನೂ ಓದಿ Team India Coach: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ; ಮೇ 27 ಕೊನೆಯ ದಿನ

2011ರಲ್ಲಿ ಗ್ಯಾರಿ ಕಸ್ಟನ್ ಮಾರ್ಗದರ್ಶನದಲ್ಲಿ ಭಾರತ 2ನೇ ಬಾರಿಗೆ ವಿಶ್ವಕಪ್​ ಗೆದ್ದಿತ್ತು. ಬಳಿಕ 2013ರಲ್ಲಿ ಡಂಕನ್​ ಪ್ಲೆಚರ್​ ಮಾರ್ಗದರ್ಶನದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಭಾರತ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ರವಿಶಾಸ್ತ್ರಿ ಮತ್ತು ರಾಹುಲ್​ ದ್ರಾವಿಡ್​ ಮಾರ್ಗದರ್ಶನಲ್ಲಿ 2 ಏಕದಿನ ವಿಶ್ವಕಪ್​ ಆಡಿದರೂ ಭಾರತ ಕಪ್​ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ವಿದೇಶಿ ಕೋಚ್​ ಆಯ್ಕೆಯೇ ಉತ್ತಮ ಎಂದು ಬಿಸಿಸಿಐ ಯೋಚಿಸಿದೆ ಎನ್ನಲಾಗಿದೆ.

ಸದ್ಯ ಪ್ಲೆಮಿಂಗ್​ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಕಂಡ ಯಶಸ್ವಿ ಕೋಚ್ ಗಳಲ್ಲಿ ಒಬ್ಬರಾದ ಜಸ್ಟಿನ್ ಲ್ಯಾಂಗರ್ ಹೆಸರು ಕೇಳಿ ಬಂದಿದೆ. ಇದರಲ್ಲಿ ಲ್ಯಾಂಗರ್​ ಅವರು ತಾವಾಗಿಯೇ ಕೋಚಿಂಗ್​ ಬಗ್ಗೆ ಆಸಕ್ತಿ ತೋರಿರುವ ಕಾರಣ ಬಿಸಿಸಿಐ ಅವರಿಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ. ಲ್ಯಾಂಗರ್ ಮಾರ್ಗದರ್ಶನದಲ್ಲಿ ಆಸೀಸ್ ತಂಡ ಟಿ20 ವಿಶ್ವಕಪ್, ಇಂಗ್ಲೆಂಡ್​ ಎದುರಿನ ಪ್ರತಿಷ್ಠಿತ ಆ್ಯಶಸ್​ ಟೆಸ್ಟ್​ ಸರಣಿ ಗೆದ್ದಿತ್ತು. ಮೂರು ವರ್ಷಗಳ ಕಾಲ ಅವರು ಆಸೀಸ್​ ತಂಡದ ಕೋಚ್​ ಆಗಿ ಕರ್ತವ್ಯ ನಿರ್ವಹಿಸಿದ್ದರು. ಒಟ್ಟಾರೆಯಾಗಿ ಟಿ20 ವಿಶ್ವಕಪ್​ ಮುಗಿದ ಬಳಿಕ ಭಾರತ ತಂಡದ ಕೋಚ್​ ಯಾರಾಗಲಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ.

ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಆಯ್ಕೆಯಾದ ಹೊಸ ಕೋಚ್‌ ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ದ್ರಾವಿಡ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕವೇ ಕೋಚ್​ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ಟಿ20 ವಿಶ್ವಕಪ್​ ತನಕ ಅವರನ್ನು ಮುಂದುವರಿಯುವಂತೆ ಒತ್ತಾಯ ಮಾಡಿತ್ತು. ಹೀಗಾಗಿ ದ್ರಾವಿಡ್​ ಟಿ20 ವಿಶ್ವಕಪ್ ತನಕ ಈ ಹುದ್ದೆಯಲ್ಲಿ ಮುಂದುವರಿದರು.

Continue Reading

ಕ್ರಿಕೆಟ್

Crazy MS Dhoni fan: 2100 ಕಿ.ಮೀ ದೂರ ಸೈಕಲ್​ ತುಳಿದು ದಿಲ್ಲಿಯಿಂದ ಚೆನ್ನೈಗೆ ಬಂದ ಧೋನಿ ಅಭಿಮಾನಿ; 23 ದಿನಗಳಲ್ಲಿ ಮಿಷನ್​ ಕಂಪ್ಲೀಟ್​

Crazy MS Dhoni fan: ಬಿಹಾರ ಮೂಲದ ಧೋನಿ ಅಭಿಮಾನಿಯೊಬ್ಬ (Crazy MS Dhoni fan) ತನ್ನ ನೆಚ್ಚಿನ ಆಟಗಾರನ ಆಟ ನೋಡಲೆಂದೇ ದಿಲ್ಲಿಯಿಂದ ಬರೋಬ್ಬರಿ 2100 ಕಿ.ಮೀ ದೂರ ಸೈಕಲ್​ ತುಳಿದು ಚೆನ್ನೈಗೆ ಬಂದು ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.

VISTARANEWS.COM


on

Crazy MS Dhoni fan
Koo

ಚೆನ್ನೈ: ಕೆಲವು ದಿನಗಳ ಹಿಂದಷ್ಟೇ ಶತಾಯುಷಿ 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಧೋನಿಯನ್ನು(MS Dhoni) ನೋಡಲು ಚೆನ್ನೈಯಿಂದ ದೆಹಲಿಯವರೆಗೂ ನಡೆದುಕೊಂಡು ಹೋಗಲು ಸಿದ್ಧ ಎಂದು ಹೇಳಿದ್ದರು. ಇದೀಗ ಧೋನಿಯ ಕ್ರೇಜಿ ಅಭಿಮಾನಿಯೊಬ್ಬ(Crazy MS Dhoni fan) ತನ್ನ ನೆಚ್ಚಿನ ಆಟಗಾರನ ಆಟ ನೋಡಲೆಂದೇ ಬರೋಬ್ಬರಿ 2100 ಕಿ.ಮೀ ದೂರ ಸೈಕಲ್​ ತುಳಿದು ಬಂದು ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.

ಹೌದು, ಬಿಹಾರ ಮೂಲದ ಧೋನಿ ಅಭಿಮಾನಿಯಾಗಿರುವ ಈತ ಡೆಲ್ಲಿಯಲ್ಲಿ ನೆಲೆಸಿದ್ದಾನೆ. ಈ ಬಾರಿ ಧೋನಿ ಐಪಿಎಲ್​ಗೆ ವಿದಾಯ ಹೇಳಲಿದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ಆಟಗಾರನ ಕೊನೆಯ ಆಟವನ್ನು ಕಣ್ತುಂಬಿಕೊಳ್ಳಲು ಪ್ರತಿ ಪಂದ್ಯದಲ್ಲಿಯೂ ಕಾದು ಕುಳಿತಿರುತ್ತಾರೆ.

ಬಿಹಾರ ಮೂಲದ ಧೋನಿ ಅಭಿಮಾನಿ ಕೂಡ ಹೇಗಾದರೂ ಮಾಡಿ ಧೋನಿಯ ಆಟವನ್ನು ನೋಡಲೇಬೇಕೆಂದು ಆಸೆ ಪಟ್ಟಿದ್ದರು. ಆದರೆ, ಆರ್ಥಿಕ ಸಮಸ್ಯೆಯೂ ದೊಡ್ಡ ಸವಾಲಾಗಿ ಪರಿಣಮಿಸಿತು. ಇದೇ ವೇಳೆ ಸೈಕಲ್ ಆಯ್ಕೆ ಮಾಡಿಕೊಂಡು ದಿಲ್ಲಿಯಿಂದ 23 ದಿನಗಳಲ್ಲಿ ಚೆನ್ನೈಗೆ ತಲುಪಿದರು. ಈ ಪಯಣದ ವೇಳೆ ಅವರು ಬರೋಬ್ಬರಿ 2100 ಕಿ.ಮೀ ​ಸೈಕಲ್​ ತುಳಿದಿದ್ದಾರೆ. ಕೊನೆಗೂ ಅವರು ಚೆನ್ನೈ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ರೋಚಕ ಜರ್ನಿಯ ಕಥೆಯನ್ನು ಈ ಅಭಿಮಾನಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಸೂಪರ್​ ಕಿಂಗ್ಸ್​ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಇತ್ತೀಚೆಗೆ ಅಭಿಮಾನಿಯೊಬ್ಬ ತನ್ನ ಗೆಳತಿಯ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ಬ್ರೇಕಪ್ ಮಾಡಿಕೊಂಡಿದ್ದ.

ಇದನ್ನೂ ಓದಿ MS Dhoni : ಧೋನಿಗೆ ದೇವಸ್ಥಾನ; ಸಿಎಸ್​​ಕೆ ತಂಡದ ಮಾಜಿ ಆಟಗಾರ ಅಭಿಮಾನದ ನುಡಿ

ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸಿಎಸ್‌ಕೆಗಾಗಿ ಧೋನಿ ಆಡುತ್ತಿದ್ದಾರೆ. ಅವರ ಈ ಪ್ರದರ್ಶನವನ್ನು ಪರಿಗಣಿಸಿ, ಚೆನ್ನೈಯಲ್ಲಿ ಧೋನಿಯ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ. ಧೋನಿ ಚೆನ್ನೈನ ದೇವರು ಎಂದ ರಾಯುಡು, ಮುಂಬರುವ ವರ್ಷದಲ್ಲಿ ಚೆನ್ನೈನಲ್ಲಿ ಎಂಎಸ್ ಧೋನಿಯ ಮಂದಿರ ನಿರ್ಮಾಣವಾಗುವುದು ಖಚಿತ ಎಂದು ಹೇಳಿದ್ದಾರೆ.

ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಮೇ 18ರಂದು ನಡೆಯುವ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇ ಬೇಕು. ಒಂದೊಮ್ಮೆ ಚೆನ್ನೈ ಸೋತರೆ ಇದುವೇ ಧೋನಿಗೆ ವಿದಾಯ ಪಂದ್ಯವಾಗಲಿದೆ.

Continue Reading

ವೈರಲ್ ನ್ಯೂಸ್

Viral video: ಚಪ್ಪಲಿಯಲ್ಲಿ ಬಡಿದಾಡಿ ಬಟ್ಟೆ ಹರಿದುಕೊಂಡರು; ಪುಕ್ಕಟೆ ಬಸ್‌ನಲ್ಲಿ ಮಹಿಳೆಯರ ʼಶಕ್ತಿʼ ಪ್ರದರ್ಶನ!

Viral video: ಈ ಘಟನೆ ಬೀದರ್‌ನಿಂದ ಕಲಬುರಗಿಗೆ ತೆರಳುವ ಮಾರ್ಗದ ಬಸ್ಸಿನಲ್ಲಿ ನಡೆದಿದೆ. ತಾನು ಕರ್ಚೀಫ್ ಹಾಕಿಟ್ಟಿದ್ದ ಸೀಟಿನಲ್ಲಿ ಮತ್ತೊಬ್ಬಳು ಬಂದು ಕುಳಿತಿದ್ದರಿಂದ ಸಿಟ್ಟಾದ ಮಹಿಳೆ ಏಳಲು ಹೇಳಿದ್ದಾಳೆ. ಆದರೆ ಕೂತಿದ್ದ ಮಹಿಳೆ ಇದಕ್ಕೆ ಸ್ಪಂದಿಸದೆ ಕಟುವಾಗಿ ಪ್ರತಿಕ್ರಿಯಿಸಿದ್ದು, ಇದರಿಂದ ಮಾತಿಗೆ ಮಾತು ಬೆಳೆದಿದೆ.

VISTARANEWS.COM


on

viral video shakti scheme women fight
Koo

ಬೀದರ್‌: ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದ (Shakthi scheme women fight) ಸೀಟಿಗಾಗಿ ಕೆಲವು ಮಹಿಳೆಯರು ಕಿತ್ತಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (viral video) ಆಗಿದೆ. ಒಂದು ಸೀಟಿಗಾಗಿ ಪರಸ್ಪರ ಮಾನ ಮರ್ಯಾದೆ ಬಿಟ್ಟು ಚಪ್ಪಲಿ ಹಿಡಿದು ಬಡಿದಾಡಿಕೊಂಡಿದ್ದಾರೆ. ಅಂಗಿ- ರವಿಕೆ ಹರಿದುಕೊಂಡಿದ್ದಾರೆ.

ಈ ಘಟನೆ ಬೀದರ್‌ನಿಂದ ಕಲಬುರಗಿಗೆ ತೆರಳುವ ಮಾರ್ಗದ ಬಸ್ಸಿನಲ್ಲಿ ನಡೆದಿದೆ. ತಾನು ಕರ್ಚೀಫ್ ಹಾಕಿಟ್ಟಿದ್ದ ಸೀಟಿನಲ್ಲಿ ಮತ್ತೊಬ್ಬಳು ಬಂದು ಕುಳಿತಿದ್ದರಿಂದ ಸಿಟ್ಟಾದ ಮಹಿಳೆ ಏಳಲು ಹೇಳಿದ್ದಾಳೆ. ಆದರೆ ಕೂತಿದ್ದ ಮಹಿಳೆ ಇದಕ್ಕೆ ಸ್ಪಂದಿಸದೆ ಕಟುವಾಗಿ ಪ್ರತಿಕ್ರಿಯಿಸಿದ್ದು, ಇದರಿಂದ ಮಾತಿಗೆ ಮಾತು ಬೆಳೆದಿದೆ. ಅವಾಚ್ಯ ಬೈಗುಳಗಳು ವಿನಿಮಯ ಆಗಿದ್ದು, ಪರಸ್ಪರರ ಅಂಗಿ ಹಿಡಿದು ಎಳೆದಾಡಿಕೊಂಡಿದ್ದಾರೆ. ನಂತರ ಚಪ್ಪಲಿ ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಜೊತೆಗಿದ್ದ ಹಲವರು ಇವರ ಜಗಳ ಬಿಡಿಸಲು ಯತ್ನಿಸಿದರೆ, ಇನ್ನು ಹಲವರು ತಾವೂ ಎರಡು ಪಕ್ಷ ವಹಿಸಿ ಕಿತ್ತಾಡಿಕೊಂಡಿದ್ದಾರೆ!

ಈ ಘಟನೆಯನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದ್ದಾರೆ. ಫನ್ನೀ ಕಾಮೆಂಟ್‌ಗಳು ಇದಕ್ಕೆ ಬಂದಿವೆ. “ಜಡೆಗಳು ಕಿತ್ತುಬರುವುದೊಂದೇ ಬಾಕಿ” ಎಂದು ಒಬ್ಬರು, “ಇದು ಗ್ಯಾರಂಟಿ ಹೊಡೆದಾಟ” ಎಂದು ಇನ್ನು ಕೆಲವರು ವಿನೋದವಾಡಿದ್ದಾರೆ. ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಜಾರಿಯ ಬಳಿಕ ಇಂಥ ಹಲವಾರು ಹೊಡೆದಾಟಗಳು ಸೋಶಿಯಲ್‌ ಮೀಡಿಯಾಗಳಲ್ಲಿ ದಾಖಲಾಗಿವೆ.

ಖಾಸಗಿ ಬಸ್‌ಗಳಿಗೂ ವಿಸ್ತರಣೆ?

ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ (Free Bus service) ಅವಕಾಶವನ್ನು ಒದಗಿಸಿರುವ ಶಕ್ತಿ ಯೋಜನೆ (Shakthi Scheme) ಖಾಸಗಿ ಬಸ್‌ಗಳಿಗೂ (Private Buses) ವಿಸ್ತರಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ (Karnataka High Court) ಮಹತ್ವದ ಸೂಚನೆ ನೀಡಿದ್ದು, ಎರಡು ತಿಂಗಳೊಳಗೆ ಕಾನೂನು ರೀತ್ಯಾ ಪರಿಶೀಲಿಸಲು ನಿರ್ದೇಶನ ನೀಡಿದೆ.

ರಾಜ್ಯದ ಕೆಲವು ಭಾಗಗಳಲ್ಲಿ ಸರ್ಕಾರಿ ಬಸ್‌ ಸೌಲಭ್ಯ ಇಲ್ಲ. ಹೀಗಾಗಿ ಅಲ್ಲಿನ ಜನರಿಗೂ ಯೋಜನೆಯ ಲಾಭ ದೊರೆಯುವಂತಾಗಲು ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ ಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಕೆಲವು ಕಡೆ ಕೇಳಿಬಂದಿತ್ತು. ಖಾಸಗಿ ಬಸ್‌ ಮಾಲೀಕರೊಬ್ಬರು ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ.

ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಉಡುಪಿ ಜಿಲ್ಲೆ ಕಾರ್ಕಳದ ಖಾಸಗಿ ಬಸ್ ಆಪರೇಟರ್ ಶರತ್‌ಕುಮಾರ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಎರಡು ತಿಂಗಳೊಳಗೆ ಕಾನೂನು ರೀತ್ಯಾ ಪರಿಶೀಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿ ನ್ಯಾಯಾಲಯ ಆದೇಶಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ರಮೇಶ್ ವಾದಿಸಿದರು.

ಇದನ್ನೂ ಓದಿ: Electric Bus : ಶಕ್ತಿ ಯೋಜನೆ ಟೀಕಿಸುವ ಬಿಜೆಪಿಗೆ ಹೆಣ್ಮಕ್ಕಳೇ ಉತ್ತರ ಕೊಡಿ ಎಂದ ಸಿದ್ದರಾಮಯ್ಯ

Continue Reading

ವೈರಲ್ ನ್ಯೂಸ್

Viral video: ʼಅಸಹ್ಯಕರ!ʼ ಬೆಂಗಳೂರಿನ ರಸ್ತೆಗಳ ಕಸದ ವಿಡಿಯೋ ಪೋಸ್ಟ್‌ ಮಾಡಿದ ಕಿರಣ್ ಮಜುಂದಾರ್ ಶಾ

Viral video: ಈ ಕಸದ ರಾಶಿಯನ್ನು ತ್ವರಿತವಾಗಿ ಕ್ಲೀನ್‌ ಮಾಡಿಸುವಂತೆ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರೆ ನೀಡಿದ್ದಾರೆ. ಅವರು ಮಾಡಿದ ಪೋಸ್ಟ್‌ನಲ್ಲಿ ಕಸದ ರಾಶಿಯಿಂದ ತುಂಬಿದ ಹೊರ ವರ್ತುಲ ರಸ್ತೆಯ ವಿಡಿಯೋ ಕಂಡುಬಂದಿದೆ. ಈ ದೃಶ್ಯವನ್ನು “ಅಸಹ್ಯಕರ” ಎಂದು ಕರೆದಿರುವ ಬಯೋಕಾನ್ ಮುಖ್ಯಸ್ಥೆ, “ಕೊಳಕು ಅವ್ಯವಸ್ಥೆಯನ್ನು ತ್ವರಿತವಾಗಿ ತೆರವುಗೊಳಿಸುವಂತೆ” ಬಿಬಿಎಂಪಿಗೆ ಕೋರಿದ್ದಾರೆ.

VISTARANEWS.COM


on

viral video garbage bengaluru roads
Koo

ಬೆಂಗಳೂರು: ರಾಜಧಾನಿ ಮೂಲದ ಖ್ಯಾತ ಬಿಟಿ ಕಂಪನಿ ಬಯೋಕಾನ್ (Biocon)‌ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (Kiran Mazumdar Shaw) ಅವರು ಮಂಗಳವಾರ ಬೆಂಗಳೂರಿನ ರಸ್ತೆಗಳ (Bengaluru Roads) ಪಕ್ಕದ ಕಸದ ರಾಶಿಗಳ (garbage) ವಿಡಿಯೋಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ (Social media) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಬಿಬಿಎಂಪಿಗೆ (BBMP) ಮುಜುಗರ ಸೃಷ್ಟಿಸಿದ್ದಾರೆ. ಈ ವಿಡಿಯೋ ಈಗ ವೈರಲ್‌ (Viral video) ಆಗಿದೆ.

ಈ ಕಸದ ರಾಶಿಯನ್ನು ತ್ವರಿತವಾಗಿ ಕ್ಲೀನ್‌ ಮಾಡಿಸುವಂತೆ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರೆ ನೀಡಿದ್ದಾರೆ. ಅವರು ಮಾಡಿದ ಪೋಸ್ಟ್‌ನಲ್ಲಿ ಕಸದ ರಾಶಿಯಿಂದ ತುಂಬಿದ ಹೊರ ವರ್ತುಲ ರಸ್ತೆಯ ವಿಡಿಯೋ ಕಂಡುಬಂದಿದೆ. ಈ ದೃಶ್ಯವನ್ನು “ಅಸಹ್ಯಕರ” ಎಂದು ಕರೆದಿರುವ ಬಯೋಕಾನ್ ಮುಖ್ಯಸ್ಥೆ, “ಕೊಳಕು ಅವ್ಯವಸ್ಥೆಯನ್ನು ತ್ವರಿತವಾಗಿ ತೆರವುಗೊಳಿಸುವಂತೆ” ಬಿಬಿಎಂಪಿಗೆ ಕೋರಿದ್ದಾರೆ.

“ಅಸಹ್ಯಕರ ನೋಟ. @BBMPSWMSplComm ಈ ಕೊಳಕು ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ತ್ವರಿತವಾಗಿ ಕಾರ್ಯನಿರ್ವಹಿಸಬೇಕಾಗಿದೆ” ಎಂದು ಅವರು ಮೂಲ ವೀಡಿಯೊವನ್ನು ಟ್ವೀಟ್ ಮಾಡಿ Xನಲ್ಲಿ ಬರೆದಿದ್ದಾರೆ. ಕಿರಣ್‌ ಶಾ ಅವರ ಪೋಸ್ಟ್‌ಗೆ ತೀಕ್ಷ್ಣವಾದ ಕಾಮೆಂಟ್‌ಗಳು ಎಕ್ಸ್‌ನಲ್ಲಿ ಬಳಕೆದಾರರಿಂದ ಬಂದಿವೆ. ವೀಡಿಯೊ ಈಗ ವೈರಲ್ ಆಗುತ್ತಿದೆ. ಅನೇಕ X ಬಳಕೆದಾರರು ತಕ್ಷಣದ ಕ್ರಮಕ್ಕಾಗಿ ಕರೆ ನೀಡಿದ್ದಾರೆ.

ಹಲವಾರು ಜನರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ದೃಶ್ಯವು ಇತರ ನಗರಗಳಲ್ಲಿಯೂ ದುರದೃಷ್ಟವಶಾತ್ ಸಾಮಾನ್ಯವಾಗಿದೆ ಎಂದಿದ್ದಾರೆ ಕೆಲವರು. ಆದಾಗ್ಯೂ, ನಾಗರಿಕರು ಮೂಲಭೂತ ನಾಗರಿಕ ಪ್ರಜ್ಞೆಯನ್ನು ಹೊಂದಿರಬೇಕು ಮತ್ತು ಬೀದಿಗಳನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕು ಎಂದು ಕೆಲವರು ಹೇಳಿದ್ದಾರೆ.

“ಇನ್ನೂ ನಾಚಿಕೆಗೇಡಿನ ಸಂಗತಿಯೆಂದರೆ ಹೆಚ್ಚಿನ ಅನಿವಾಸಿಗಳು, ಕಾನ್ಸುಲೇಟ್‌ಗಳು, ಮಂತ್ರಿಗಳು, ಬಿಬಿಎಂಪಿಯ ಉನ್ನತ ಅಧಿಕಾರಿಗಳು ಸಹ ಈ ಪ್ರದೇಶದಲ್ಲಿಯೇ ಇರುತ್ತಾರೆ ಮತ್ತು ಅವರು ಪ್ರತಿದಿನ ಈ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ! ಇಂತಹ ಕೊಳಕು ಅಭ್ಯಾಸಗಳನ್ನು ಪ್ರದರ್ಶಿಸುವ ಮೂಲಕ ನಾವು ನಮ್ಮ ನಗರವನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರವನ್ನೂ ಸಹ ಹತಾಶಗೊಳಿಸುತ್ತಿದ್ದೇವೆ” ಎಂದಿದ್ದಾರೆ ಬಳಕೆದಾರರೊಬ್ಬರು.

ಮತ್ತೊಬ್ಬರು, “ಪ್ರತಿಯೊಂದು ಮೊದಲ ಹಂತದ ಹಾಗೂ ಎರಡನೇ ಹಂತದ ನಗರಗಳಲ್ಲಿ ಇದು ಇಂದು ಕಾಣಬರುವ ದುರಂತ ಸನ್ನಿವೇಶ. ಸಾರ್ವಜನಿಕ ಕಸದ ತೊಟ್ಟಿಗಳಿಲ್ಲ. ಆದ್ದರಿಂದ ಜನರು ತಮಗಿಷ್ಟ ಬಂದ ಕಡೆ ಕಸ ಎಸೆಯುತ್ತಾರೆ. ನಾಗರಿಕ ಸಂಸ್ಥೆಗಳು ಸಾರ್ವಜನಿಕ ಕಸದ ಬುಟ್ಟಿಗಳನ್ನು ಸ್ಥಾಪಿಸಲು, ಬಳಸಲು ಮತ್ತು ನಿರ್ವಹಿಸಲು ಮುಂದಾಗದ ಹೊರತು ಇದು ಮುಂದುವರಿಯುತ್ತದೆ” ಎಂದಿದ್ದಾರೆ.

“ಬೆಂಗಳೂರಿನ ಪ್ರತಿಯೊಂದು ಪ್ರದೇಶವೂ ಈ ರೀತಿಯ ರಸ್ತೆಗಳನ್ನು ಹೊಂದಿದೆ. ಮೊದಲು ಜನರಿಗೆ ಶಿಕ್ಷಣ ನೀಡಬೇಕು ಮತ್ತು ಶಿಕ್ಷೆ ನೀಡಬೇಕು” ಎಂದಿದ್ದಾರೆ ಮತ್ತೊಬ್ಬರು. “ಮೆಟ್ರೋ ನಿಲ್ದಾಣಗಳು, ಡಿವೈಡರ್‌ಗಳ ಬಳಿ ಜನರು ತ್ಯಾಜ್ಯವನ್ನು ಎಸೆಯುವುದನ್ನು ನಾನು ಗಮನಿಸಿದ್ದೇನೆ. ಇದು ರಾತ್ರಿ ಸಮಯದಲ್ಲಿ ನಡೆಯುತ್ತದೆ. ಈ ಸ್ಥಳಗಳಲ್ಲಿ ಪದೇ ಪದೆ ಕಸ ಸುರಿಯುವವರನ್ನು ಗುರುತಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರ ಜೊತೆಗೆ ಅಪರಾಧಿಗಳಿಗೆ ಭಾರಿ ದಂಡ ವಿಧಿಸಬೇಕಾಗಿದೆ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Crowd Funding: ಕಂದಮ್ಮನ ಚಿಕಿತ್ಸೆಗೆ ಹರಿದು ಬಂದ ನೆರವು; 3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

Continue Reading
Advertisement
Sandeep Lamichhane
ಕ್ರೀಡೆ8 seconds ago

Sandeep Lamichhane: ಅತ್ಯಾಚಾರ ಆರೋಪದಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ಲಮಿಚಾನೆಗೆ ರಿಲೀಫ್; ನಿರಪರಾಧಿ ಎಂದ ಕೋರ್ಟ್​

Shyam Rangeela
ದೇಶ8 mins ago

Shyam Rangeela: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದ ಕಲಾವಿದನ ನಾಮಪತ್ರ ತಿರಸ್ಕಾರ!

Terrorist Arrested
ಕರ್ನಾಟಕ52 mins ago

Terrorist Arrested: ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರನ ಬಂಧನ

Monsoon 2024
ದೇಶ60 mins ago

Monsoon 2024: ರೈತರಿಗೆ ಗುಡ್‌ ನ್ಯೂಸ್;‌ ಮುಂಗಾರು ಮಳೆ ಆಗಮನಕ್ಕೆ ಫಿಕ್ಸ್‌ ಆಯ್ತು ದಿನಾಂಕ!

DP Manu
ಕ್ರೀಡೆ1 hour ago

DP Manu: ಫೆಡರೇಷನ್ ಕಪ್‌ನಲ್ಲಿ ನೀರಜ್​ ಚೋಪ್ರಾಗೆ ಬೆವರಿಳಿಯುವಂತೆ ಮಾಡಿದ ಕನ್ನಡಿಗ ಮನು; ಇವರ ಹಿನ್ನೆಲೆ, ಸಾಧನೆ ಏನೇನು?

Davanagere News
ಕರ್ನಾಟಕ2 hours ago

Davanagere News: ದಾವಣಗೆರೆ ಸಮೀಪದ ಕೆರೆಯಲ್ಲಿ ಲಕ್ಷಕ್ಕೂ ಅಧಿಕ ಮೀನುಗಳ ಮಾರಣಹೋಮ; ವಿಷಪ್ರಾಶನ ಶಂಕೆ

Robert Fico
ವಿದೇಶ2 hours ago

Robert Fico: ಸ್ಲೊವಾಕಿಯಾ ಪ್ರಧಾನಿ ರಾಬರ್ಟ್‌ ಫಿಕೊ ಮೇಲೆ ಗುಂಡಿನ ದಾಳಿ; ಭೀಕರ ವಿಡಿಯೊ ಇಲ್ಲಿದೆ

Federation Cup 2024
ಕ್ರೀಡೆ2 hours ago

Federation Cup 2024: ಕನ್ನಡಿಗ ಮನು ಎದುರು ತೀವ್ರ ಪೈಪೋಟಿ ಎದುರಿಸಿ ಚಿನ್ನ ಗೆದ್ದ ನೀರಜ್ ಚೋಪ್ರಾ

Tips For Healthy Skin
ಆರೋಗ್ಯ2 hours ago

Tips For Healthy Skin: ಈ ಐದು ಸಲಹೆಗಳನ್ನು ಪಾಲಿಸಿ, ಮೊಡವೆಗಳಿಂದ ಪಾರಾಗಿ!

Driving Tips
ಕ್ರೈಂ2 hours ago

Driving Tips: ವಾಹನ ಚಾಲನೆ ಮಾಡುತ್ತಿರುವಾಗ ಪ್ರಾಣಿಗಳಿಂದಾಗುವ ಅಪಘಾತ ತಪ್ಪಿಸಿಕೊಳ್ಳುವುದು ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ15 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ17 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ1 day ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌