Uttara Kannada News: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಸ್ಟ್ಯಾಂಡರ್ಡ್ ಇಲ್ಲ: ಸಚಿವ ಮಂಕಾಳ ವೈದ್ಯ ತೀವ್ರ ಅಸಮಾಧಾನ - Vistara News

ಉತ್ತರ ಕನ್ನಡ

Uttara Kannada News: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಸ್ಟ್ಯಾಂಡರ್ಡ್ ಇಲ್ಲ: ಸಚಿವ ಮಂಕಾಳ ವೈದ್ಯ ತೀವ್ರ ಅಸಮಾಧಾನ

Uttara Kannada News: ಕಾರವಾರದ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾಉಸ್ತುವಾರಿ ಸಚಿವ ಮಂಕಾಳ ಎಸ್‌. ವೈದ್ಯ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ. ಸಭೆ ಜರುಗಿತು.

VISTARANEWS.COM


on

No standard in national highway works says Minister mankala s Vaidya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಾರವಾರ: ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ (National Highway) ಕಾಮಗಾರಿಗಳಲ್ಲಿ ಯಾವುದೇ ಸ್ಟ್ಯಾಂಡರ್ಡ್ ಕಂಡುಬರುತ್ತಿಲ್ಲ, ಇದರಿಂದಾಗಿ ಅಪಘಾತಗಳು ಸಂಭವಿಸಿ ಸಾರ್ವಜನಿಕರು ಸಾವಿಗೀಡಾಗುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್‌. ವೈದ್ಯ ತೀವ್ರ ಕಳವಳ (Uttara Kannada News) ವ್ಯಕ್ತಪಡಿಸಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಯಲ್ಲಿ ದಾರಿದೀಪ ಅಳವಡಿಸುವ ಕುರಿತಂತೆ ಹಲವು ಬಾರಿ ಸೂಚನೆಗಳನ್ನು ನೀಡಿದ್ದರೂ ಸಹ ಯಾವುದೇ ಪ್ರಗತಿ ಕಂಡುಬಂದಿಲ್ಲ. ಹಲವು ಮಂದಿ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಈ ಎಲ್ಲಾ ಅನಾಹುತಗಳಿಗೆ ನೀವೇ ಜವಾಬ್ದಾರರು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳಲ್ಲಿ ಸರಿಯಾದ ಸ್ಟ್ಯಾಂಡರ್ಡ್ ಅನ್ನು ಪಾಲನೆ ಮಾಡುತ್ತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: KL Rahul: ಐಪಿಎಲ್​ಗೆ ಕೆ.ಎಲ್​ ರಾಹುಲ್ ಫಿಟ್; ನಾಯಕನಾಗಿ ಕಣಕ್ಕೆ

ಜಿಲ್ಲೆಯಲ್ಲಿ ಕೆ.ಪಿ.ಟಿ.ಸಿ.ಎಲ್ ವತಿಯಿಂದ ಸುಮಾರು 1000 ಕೋಟಿ ರೂ ಮೊತ್ತದ ಕಾಮಗಾರಿಗಳು ನಡೆಯುತ್ತಿವೆ ಆದರೆ ಈ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ.. ಈ ಎಲ್ಲಾ ಕಾಮಗಾರಿಗಳ ಪ್ರಗತಿ ಬಗ್ಗೆ 15 ದಿನಗಳಿಗೊಮ್ಮೆ ಸಭೆ ನಡೆಸಿ, ನಿಗದಿತ ಅವಧಿಯೊಳಗೆ ಯೋಜನೆಯನ್ನು ಪೂರ್ಣಗೊಳಿಸಿ, ಜಿಲ್ಲೆಯ ಜನತೆಗೆ 24 ಗಂಟೆ ನಿರಂತರ ವಿದ್ಯುತ್ ಒದಗಿಸಬೇಕು. ಇಡೀ ರಾಜ್ಯಕ್ಕೆ ಅಗತ್ಯವಿರುವ ಶೇ.22ರಷ್ಟು ವಿದ್ಯುತ್ ನಮ್ಮ ಜಿಲ್ಲೆಯಿಂದ ಸರಬರಾಜು ಆಗುತ್ತಿದ್ದು ಜಿಲ್ಲೆಗೆ ವಿದ್ಯುತ್ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.

ಸರ್ಕಾರದ ಮಹತ್ವಾಕಾಂಕ್ಷಿಯ ಗ್ಯಾರಂಟಿ ಯೋಜನೆಗಳ ಕುರಿತಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಾವೇಶಗಳನ್ನು ಆಯೋಜಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಗ್ಯಾರಂಟಿ ಯೋಜನೆಗಳು ತಲುಪಿರುವ ಮತ್ತು ತಲುಪದೇ ಇರುವವರ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸೂಚನೆ ನೀಡಿದರು. ಆರ್.ಟಿ.ಒ ಕಛೇರಿಯಿಂದ ಚಾಲನಾ ಪರೀಕ್ಷೆ ನಡೆಸಲು ಸೂಕ್ತ ಸ್ಥಳ ಗುರುತಿಸುವ ಕುರಿತಂತೆ ತಹಸೀಲ್ದಾರ್ ಜತೆ ಚರ್ಚಿಸಿ ಸ್ಥಳ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಮಂಗನ ಕಾಯಿಲೆಯ 57 ಪ್ರಕರಣಗಳು ವರದಿಯಾಗಿದ್ದು ಒಟ್ಟು 5 ಸಾವು ಸಂಭವಿಸಿವೆ. ಮಂಗನ ಕಾಯಿಲೆಯಿಂದ ಮೃತಪಟ್ಟ ಕುಟುಂಬಗಳಿಗೆ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ನೆರವು ಸೇರಿದಂತೆ ಎಲ್ಲಾ ರೀತಿಯ ನೆರವು ದೊರಕಿಸುವಂತೆ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಕ್ರಿಮ್ಸ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ನೇಮಕಾತಿ ಕುರಿತಂತೆ ವಿಳಂಬ ಧೋರಣೆ ಮಾಡಬೇಡಿ. ತಕ್ಷಣದಲ್ಲಿ ತಜ್ಞ ವೈದ್ಯರ ಸೇವೆ ರೋಗಿಗಳಿಗೆ ದೊರೆಯುವಂತೆ ನೋಡಿಕೊಳ್ಳಿ ಎಂದರು.

ಇದನ್ನೂ ಓದಿ: ವಿಸ್ತಾರ Explaienr: ಹಲವು ಅಣುಬಾಂಬ್‌ ಏಕಕಾಲಕ್ಕೆ ಕೊಂಡೊಯ್ಯಬಲ್ಲ Agni-V ಕ್ಷಿಪಣಿ! ಏನಿದರ ವಿಶೇಷತೆ?

ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಈ ಬಾರಿ ಜಿಲ್ಲೆಯು ರಾಜ್ಯದಲ್ಲಿ ಕನಿಷ್ಠ 3ನೇ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿನ ಕುಡಿಯುವ ನೀರು ಕಾಮಗಾರಿಗಳನ್ನು ಶೀಘ್ರದಲ್ಲೇ ಮುಕ್ತಾಯಗೊಳಿಸಿ, ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರರಿಗೆ ನೀಡುವ ವಿವಿಧ ಪರಿಹಾರ ಯೋಜನೆಗಳ ಮೊತ್ತವನ್ನು ಹೆಚ್ಜಿಸಲಾಗಿದ್ದು, ಪರಿಷ್ಕ್ರತ ಮೊತ್ತವನ್ನು ಫಲಾನುಭವಿಗಳಿಗೆ ನೀಡುವ ಬಗ್ಗೆ ಅಧಿಕಾರಿಗಳು ಗಮನಹರಿಸಿ, ಯಾವುದೇ ಅರ್ಜಿಗಳ ವಿಳಂಬ ವಿಲೇವಾರಿಗೆ ಆಸ್ಪದ ನೀಡಬೇಡಿ ಎಂದರು.

ಮಂಜುಗುಣಿ- ಗಂಗಾವಳಿ ಸೇತುವೆ ನಿರ್ಮಾಣ ಕುರಿತಂತೆ ವಿಳಂಬ ಧೋರಣೆ ಅನುಸರಿಸುತ್ತಿರುವ ಕೆ.ಆರ್.ಡಿ.ಸಿ.ಎಲ್. ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಗುತ್ತಿಗೆದಾರರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಿ ಎಂದು ಸೂಚನೆ ನೀಡಿದರು.

ಇದನ್ನೂ ಓದಿ: Akka Cafe : ಇದು ಸರ್ಕಾರಿ ಕೆಫೆ; ಸ್ವಾದಿಷ್ಟ, ಒಲವಿನ ಊಟ ಕೊಡಲು ಬಂದಿದ್ದಾಳೆ ʻಅಕ್ಕʼ

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿರುವ ಕಸದ ಸಮಸ್ಯೆಯ ಸಮರ್ಪಕ ನಿವಾರಣೆ ಕುರಿತಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕನಿಷ್ಠ 5 ಎಕರೆ ಪ್ರದೇಶವನ್ನು ಗುರುತಿಸಿ, ಅಲ್ಲಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಾಣ ಮಾಡುವ ಮೂಲಕ ತಾಲೂಕಿನ ಗ್ರಾಮಗಳ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ಬರ ನಿರ್ವಹಣೆ ಕುರಿತಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಮೇವು ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ತಿಳಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜು ನಿರ್ವಹಣೆಯ ಉಚಿತ ಸಹಾಯವಾಣಿ ಸಂಖ್ಯೆ 8277237100 ನ್ನು ಮತ್ತು ಪಂಚತಂತ್ರ ಪೋರ್ಟಲ್ ಸೇವೆಯ ಬಿತ್ತಿಪತ್ರವನ್ನು ಬಿಡುಗಡೆ ಮಾಡಿದ ಸಚಿವರು, ಪಿಡಿಒ ಅಫ್ ದ ಮಂತ್ ಪ್ರಶಸ್ತಿಯನ್ನು ರಾಮನಗರದ ಪಿಡಿಒ ಅಮರೇಶ್ ರಾಥೋಡ್ ಅವರಿಗೆ ನೀಡಿದರು.

ಇದನ್ನೂ ಓದಿ: Rishabh Pant:​ ಫಿಟ್​ನೆಸ್​ ಪಾಸ್​ ಆದ ರಿಷಭ್​ ಪಂತ್; ಐಪಿಎಲ್​ನಲ್ಲಿ ಕೀಪರ್​ ಆಗಿ ಕಣಕ್ಕೆ ​

ಸಭೆಯಲ್ಲಿ ಎಂ.ಸಿ.ಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಜಿ.ಪಂ. ಸಿಇಒ ಈಶ್ವರ ಕಾಂದೂ, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳ ಅನುಷ್ಠಾನಧಿಕಾರಿಗಳು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Actor Darshan : ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋದ ನಟ ದರ್ಶನ್‌ ಕುಟುಂಬಸ್ಥರು

Actor Darshan : ಕೊಲೆ ಕೇಸ್‌ನಲ್ಲಿ (Renukaswamy murder case) ಬಂಧಿಯಾಗಿರುವ ನಟ ದರ್ಶನ್‌ ಸಂಕಷ್ಟದಿಂದ ದೂರ ಆಗಲಿ ಎಂದು ಕುಟುಂಬಸ್ಥರು ದೇವರ ಮೊರೆ ಹೋಗಿದ್ದಾರೆ. ದರ್ಶನ್‌ ಅವರ ಸಹೋದರಿಯ ಪತಿಯಿಂದ ವಿಶೇಷ ಪೂಜೆ ಸಲ್ಲಿಸಿದ್ದಾರೆ.

VISTARANEWS.COM


on

By

Actor darshan
Koo

ಕಾರವಾರ: ಚಿತ್ರನಟ ದರ್ಶನ್ (Actor Darshan) ರೇಣುಕಾಸ್ವಾಮಿ ಹತ್ಯೆ (Renukaswamy murder case) ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪೊಲೀಸ್ ತನಿಖೆ ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಅವರ ಕುಟುಂಬಸ್ಥರು ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾದಲ್ಲಿ ಉದ್ಯೋಗದಲ್ಲಿರುವ ದರ್ಶನ್ ಸಹೋದರಿ ದಿವ್ಯಾ ಅವರ ಪತಿ ಮಂಜುನಾಥ, ದರ್ಶನ್ ಒಳಿತಿಗಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೈಗಾದ ಟೌನ್‌ಶಿಪ್‌ನಲ್ಲಿರುವ ರಾಮಲಿಂಗೇಶ್ವರ, ಶನೇಶ್ವರ ದೇವಸ್ಥಾನದಲ್ಲಿ ದರ್ಶನ್ ಹೆಸರಿನಲ್ಲಿ ನವಗ್ರಹ ಪೂಜೆ, ಶನಿಶಾಂತಿ ಪೂಜೆ ಹಾಗೂ ವಿಶೇಷ‌ ಹೂವಿನ ಅಲಂಕಾರ ಪೂಜೆ ನೆರವೇರಿಸಿದ್ದಾರೆ. ದರ್ಶನ್ ಆದಷ್ಟು ಬೇಗ ಆರೋಪ ಮುಕ್ತರಾಗಿ ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: Snake Bite : ನಿದ್ದೆಗೆ ಜಾರಿದ 3 ವರ್ಷದ ಬಾಲಕನನ್ನು ಕಚ್ಚಿ ಸಾಯಿಸಿದ ನಾಗರಹಾವು

ಸಸ್ಯಾಹಾರಿ ಅಂದ್ರೂ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ಮೂಳೆ ತುರುಕಿದ್ದ ಆರೋಪಿಗಳು!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renuka Swamy murder case) ಇನ್ನಿಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಈ ನಡುವೆ ಪ್ರಕರಣದಲ್ಲಿ (Actor Darshan) ಹೇಗೆಲ್ಲಾ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂಬ ವಿಷಯಗಳು ಒಂದೊಂದಾಗೆ ಬೆಳಕಿಗೆ ಬರುತ್ತಿವೆ. ಕಿಡ್ನ್ಯಾಪ್‌ ಆಗಿದ್ದ ದಿನ ಊಟ ಕೊಡಿಸಿದ್ದ ಡಿ ಗ್ಯಾಂಗ್, ನಾನು ಶಾಖಾಹಾರಿ ಎಂದರೂ ಬಿಡದೇ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ಮೂಳೆ ತುರುಕಿದ್ದರು ಎನ್ನಲಾಗಿದೆ.

ಚಿತ್ರದುರ್ಗದಿಂದ ಜೂನ್‌ 8ರಂದು ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು. ನಂತರ ಆತನನ್ನು ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿಹಾಕಿ ಟಾರ್ಚರ್‌ ನೀಡಲಾಗಿದೆ. ಮಧ್ಯಾಹ್ನ ಊಟ ಕೊಡಿಸಿದಾಗ ನಾನು ಸಸ್ಯಹಾರಿ ಎಂದು ರೇಣುಕಾಸ್ವಾಮಿ ಹೇಳಿದ್ದಾನೆ. ಆದರೂ ಬಿಡದೆ ಆರೋಪಿಗಳು ಬಿರಿಯಾನಿ ತಿನ್ನಿಸಿದ್ದಾರೆ.

ಇದನ್ನೂ ಓದಿ | Actor Darshan: ಚಿನ್ನುಮರಿ ತಂಟೆಗೆ ಹೋದ್ರೆ ಒದೆ, ಪವಿತ್ರಾ ಗೌಡ ತಂಟೆಗೆ ಬಂದ್ರೆ ಕೊಲೆ; ಟ್ರೋಲ್ ಆಗುತ್ತಿದೆ ​ ದರ್ಶನ್​ ಕೊಲೆ ಕೇಸ್​​

ಬಲವಂತ ಮಾಡಿದಾಗ ಬಿರಿಯಾನಿ ತಿನ್ನದೆ ಕೆಳಗೆ ಉಗಿದಿದ್ದರಿಂದ ರೇಣುಕಾ ಸ್ವಾಮಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದ ಗ್ಯಾಂಗ್, ಬಾಸ್ ಬರುತ್ತಾರೆ ಒದೆ ತಿನ್ನಲು ರೆಡಿಯಾಗು. ಬಿರಿಯಾನಿ ತಿಂದ್ರೆ ಶಕ್ತಿ ಬರುತ್ತೆ ಎಂದು ಬಿರಿಯಾನಿ ತಿನ್ನಿಸಲು ಯತ್ನಿಸಿದ್ದಾರೆ. ಈ ಬಗ್ಗೆ ಪೊಲೀಸರ ಮುಂದೆ ಆರೋಪಿ ದೀಪಕ್ ಹೇಳಿಕೆ ಕೊಟ್ಟಿದ್ದಾನೆ.

ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತಿದ್ದ ಸಿಸಿಟಿವಿ ಫುಟೇಜ್‌ ಲಭ್ಯ

ಡಿ ಗ್ಯಾಂಗ್‌ನಿಂದ ದುರ್ಗದ ಹುಡುಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿದ್ದ ಸಂದರ್ಭದ ಸ್ಫೋಟಕ ವಿಡಿಯೊ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. KA-11-B-7939 ಕಾರಿನಲ್ಲಿ ಜೂನ್ 8 ಬೆಳಗ್ಗೆ 11:30ಕ್ಕೆ ಗುಯಿಲಾಳ್ ಟೋಲ್ ಅನ್ನು ಗ್ಯಾಂಗ್ ಕ್ರಾಸ್ ಮಾಡಿತ್ತು. ಕಾರಿನ ಮುಂಭಾಗ ಡ್ರೈವರ್ ರವಿ ಮತ್ತು ರಾಘವೇಂದ್ರ ಕೂತಿರುವ ದೃಶ್ಯ ಸೆರೆಯಾಗಿದೆ.

ಹಿರಿಯೂರು ಮಾರ್ಗವಾಗಿ ಬೆಂಗಳೂರು ಕಡೆ ಪ್ರಯಾಣ ಮಾಡಿದ್ದ ಟೀಂ, ಟೋಲ್‌ನಲ್ಲಿ ವಿಐಪಿ ಕಾರ್ಡ್ ಪ್ರದರ್ಶನ ಮಾಡಿ, ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂದು ರಾಘವೇಂದ್ರ ಬಿಲ್ಡಪ್ ಕೊಟ್ಟು ಹೋಗಿದ್ದರು. ಬೆಂಗಳೂರಿಗೆ ಬಿಟ್ಟು ವಾಪಸ್ ಹೋಗುವಾಗ ಡ್ರೈವರ್ ರವಿ ಮಾತ್ರ ವಾಹನದಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್‌ 9 ಬೆಳಗಿನ ಜಾವ 4:30 ಕ್ಕೆ ಚಿತ್ರದುರ್ಗದತ್ತ ರವಿ ತೆರಳಿದ್ದ. ಈತ ಇನ್ನುಳಿದ ನಾಲ್ಕು ಮಂದಿ ಜೊತೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಬಿಟ್ಟು ಹೋಗಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಬೆಂಗಳೂರಲ್ಲಿ ವೀಕೆಂಡ್‌ಗೆ ಬ್ರೇಕ್‌ ಕೊಟ್ಟ ವರುಣ! ಈ 3 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ

Rain News : ವಾರಾಂತ್ಯದಲ್ಲಿ ಮಳೆ ಮುಂದುವರಿದಿದೆ. ದಕ್ಷಿಣ ಒಳನಾಡಿನಲ್ಲಿ ಕೊಂಚ ತಗ್ಗಿದ್ದರೆ, ಕರಾವಳಿ-ಮಲೆನಾಡು, ಉತ್ತರ ಒಳನಾಡಿನಲ್ಲಿ ಮಳೆಯು (Karnataka Weather Forecast) ಜೋರಾಗಿ ಇರಲಿದೆ.

VISTARANEWS.COM


on

By

karnataka weather forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಚುರುಕಾಗಿದ್ದು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ (Karnataka Weather Forecast) ಸಾಮಾನ್ಯವಾಗಿದೆ. ವಾರಾಂತ್ಯದಲ್ಲಿ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ.

ಉಳಿದ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಬಿರುಗಾಳಿ ಬೀಸಲಿದೆ. ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಕೆಲವೆಡೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಬೆಂಗಳೂರಲ್ಲಿ ಮೋಡ ಕವಿ ವಾತಾವರಣ

ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ ಸೂರ್ಯ ತನ್ನ ದರ್ಶನ ಕೊಡಲಿದ್ದಾನೆ. ಪ್ರತ್ಯೇಕ ಕಡೆಗಳಲ್ಲಿ ಗುಡುಗು ಸಹಿತ ಹಗುರದಿಂದ ಕೂಡಿದ ಮಳೆಯಾಗಲಿದೆ.

ಯೆಲ್ಲೋ ಅಲರ್ಟ್‌ ಘೋಷಣೆ

ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಾಳಿ ವೇಗವು ಗಂಟೆಗೆ 40-50 ವ್ಯಾಪ್ತಿಯಲ್ಲಿ ಬೀಸಲಿದೆ. ಹೀಗಾಗಿ ಉತ್ತರ ಒಳನಾಡಿನ ಬೀದರ್‌, ವಿಜಯಪುರ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಇದನ್ನೂ ಓದಿ: Bus Accident : ವಾಹನ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ತಲೆಸುತ್ತು; ರಸ್ತೆ ಬಿಟ್ಟು ಜಮೀನಿಗೆ ನುಗ್ಗಿದ ಬಸ್‌

ಮುಂಗಾರು ಮಳೆಗೆ ಪಪ್ಪಾಯಿ ಬೆಳೆ ಹಾನಿ

ಬಾಗಲಕೋಟೆಯಲ್ಲೂ ಮುಂಗಾರು ಮಳೆ ಅಬ್ಬರಕ್ಕೆ ತೋಟಗಾರಿಕಾ ಬೆಳೆ ಹಾನಿಯಾಗಿದ್ದು ರೈತರು ಆತಂಕದಲ್ಲಿದ್ದಾರೆ. ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಗ್ರಾಮದಲ್ಲಿ ಫಸಲು ಕೈಗೆಟಕುವ ಮುನ್ನವೇ ಮಳೆಗೆ ಪಪ್ಪಾಯಿ ಆಹುತಿಯಾಗಿದೆ. ಅಧಿಕ ಮಳೆಯಿಂದಾಗಿ ತೇವಾಂಶದಿಂದ ಗಿಡದಿಂದ ಪಪ್ಪಾಯಿ ಉದುರುತ್ತಿದೆ.

ಪಪ್ಪಾಯಿ ಬೆಳೆದ ಹೊನ್ನಾಕಟ್ಟಿ ರೈತ ಯಲ್ಲಪ್ಪ ಜಿವೊಜಿ ಕಂಗಾಲಾಗಿದ್ದಾರೆ. 2 ಎಕರೆ ಜಮೀನಿನಲ್ಲಿ 2 ಲಕ್ಷ ರೂ. ಹೆಚ್ಚು ಖರ್ಚು ಮಾಡಿ ಪಪ್ಪಾಯಿ ಬೆಳೆಯಲಾಗಿತ್ತು. ಆದರೆ ಪಪ್ಪಾಯಿ ಫಸಲು ಚನ್ನಾಗಿ ಬಂದಿದ್ದರೂ, ಮಳೆಯಿಂದ ಪಪ್ಪಾಯಿಗೆ ಕೊಳೆ ರೋಗಕ್ಕೆ ಉದುರುತ್ತಿದೆ. 7- 8 ಲಕ್ಷ ರೂ ಲಾಭದ ನಿರೀಕ್ಷೆಯಲ್ಲಿದ್ದ ರೈತ ಯಲ್ಲಪ್ಪನಿಗೆ ಇದೀಗ ಸಾಲದ ಹೊರೆ ಹೆಚ್ಚಾಗಿದೆ. ನಿರಂತರ ಮಳೆಯಿಂದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಸದ್ಯ ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಮುಲ್ಲಾಮಾರಿ ಜಲಾಶಯದಿಂದ ನೀರು ಬಿಡುಗಡೆ; ಗ್ರಾಮಸ್ಥರಿಗೆ ಎಚ್ಚರಿಕೆ

ಕಲಬುರಗಿಯ ಚಿಂಚೊಳ್ಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ನಾಗರಾಳ‌ ಬಳಿ ಇರುವ ಮುಲ್ಲಾಮಾರಿ ಜಲಾಶಯದ ಒಳಹರಿವು 1,500 ಕ್ಯೂಸೆಕ್ ಹೆಚ್ಚಾಗಿದೆ. ಜಲಾಶಯದ ಗರಿಷ್ಠ ಮಟ್ಟ 491 ಮೀಟರ್ ಇದ್ದು, ಯಾವುದೇ ಕ್ಷಣದಲ್ಲಾದರೂ ಜಲಾಶಯದ ನೀರು ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಮುಲ್ಲಾಮಾರಿ ಕೆಡದಂಡೆ ಗ್ರಾಮಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ ಸೇರಿ ಹಲವು ಗ್ರಾಮಗಳಿಗೆ ನದಿ ‌ದಡದಲ್ಲಿ ಹೋಗದಂತೆ ಎಇ‌ ಸೂಚನೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Karnataka Weather forecast : ಕರಾವಳಿ, ಉತ್ತರ ಒಳನಾಡಿನಲ್ಲಿ ಮಳೆಯು (Rain News) ಅಬ್ಬರಿಸುತ್ತಿದ್ದು, ಇನ್ನೊಂದು ವಾರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು/ಕಾರವಾರ: ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಶುಕ್ರವಾರ ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ವರುಣಾರ್ಭಟ ಮುಂದುವರಿದಿದೆ. ಕರಾವಳಿ ತಾಲೂಕುಗಳಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಭಾಗಗಳಲ್ಲಿ ಭಾರೀ ಗಾಳಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಒಂದು ತಾಸಿಗೂ ಬಿರುಗಾಳಿ ಸಹಿತ ಭಾರಿ ಮಳೆಗೆ ಹಲವೆಡೆ ಮರಗಳು ನೆಲಕ್ಕುರುಳಿತ್ತು.

ಮುಂಗಾರು ಮಳೆಗೆ ಪಪ್ಪಾಯಿ ಬೆಳೆ ಹಾನಿ

ಬಾಗಲಕೋಟೆಯಲ್ಲೂ ಮುಂಗಾರು ಮಳೆ ಅಬ್ಬರಕ್ಕೆ ತೋಟಗಾರಿಕಾ ಬೆಳೆ ಹಾನಿಯಾಗಿದ್ದು ರೈತರು ಆತಂಕದಲ್ಲಿದ್ದಾರೆ. ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಗ್ರಾಮದಲ್ಲಿ ಫಸಲು ಕೈಗೆಟಕುವ ಮುನ್ನವೇ ಮಳೆಗೆ ಪಪ್ಪಾಯಿ ಆಹುತಿಯಾಗಿದೆ. ಅಧಿಕ ಮಳೆಯಿಂದಾಗಿ ತೇವಾಂಶದಿಂದ ಗಿಡದಿಂದ ಪಪ್ಪಾಯಿ ಉದುರುತ್ತಿದೆ.

ಪಪ್ಪಾಯಿ ಬೆಳೆದ ಹೊನ್ನಾಕಟ್ಟಿ ರೈತ ಯಲ್ಲಪ್ಪ ಜಿವೊಜಿ ಕಂಗಾಲಾಗಿದ್ದಾರೆ. 2 ಎಕರೆ ಜಮೀನಿನಲ್ಲಿ 2 ಲಕ್ಷ ರೂ. ಹೆಚ್ಚು ಖರ್ಚು ಮಾಡಿ ಪಪ್ಪಾಯಿ ಬೆಳೆಯಲಾಗಿತ್ತು. ಆದರೆ ಪಪ್ಪಾಯಿ ಫಸಲು ಚನ್ನಾಗಿ ಬಂದಿದ್ದರೂ, ಮಳೆಯಿಂದ ಪಪ್ಪಾಯಿಗೆ ಕೊಳೆ ರೋಗಕ್ಕೆ ಉದುರುತ್ತಿದೆ. 7- 8 ಲಕ್ಷ ರೂ ಲಾಭದ ನಿರೀಕ್ಷೆಯಲ್ಲಿದ್ದ ರೈತ ಯಲ್ಲಪ್ಪನಿಗೆ ಇದೀಗ ಸಾಲದ ಹೊರೆ ಹೆಚ್ಚಾಗಿದೆ. ನಿರಂತರ ಮಳೆಯಿಂದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಸದ್ಯ ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಭಾರಿ ಮಳೆಗೆ ಕೆರೆಯಂತಾದ ಕಾಲಕಾಲೇಶ್ವರ ಗ್ರಾಮ

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮದ ಸುತ್ತಮುತ್ತ ಭಾರಿ‌ ಮಳೆಯಾಗುತ್ತಿದ್ದು, ಕಾಲಕಾಲೇಶ್ವರ ಗ್ರಾಮದ ರಸ್ತೆಗಳು ಕೆರೆಯಂತಾಗಿದೆ. ರಸ್ತೆ ತುಂಬ ನೀರು ನಿಂತು ಜನರು ಓಡಾಡಲು ಪರದಾಡುವಂತಾಗಿತ್ತು. ಇತ್ತ ಕಾಲಕಾಲೇಶ್ವರ ಗುಡ್ಡದಲ್ಲಿ ಕಿರು ಜಲಪಾತ ಸೃಷ್ಟಿಯಾಗಿದ್ದು, ಜನರು ವೀಕ್ಷಣೆಗಾಗಿ ಬರುತ್ತಿದ್ದ ದೃಶ್ಯ ಕಂಡು ಬಂತು.

ಮುಲ್ಲಾಮಾರಿ ಜಲಾಶಯದಿಂದ ನೀರು ಬಿಡುಗಡೆ; ಗ್ರಾಮಸ್ಥರಿಗೆ ಎಚ್ಚರಿಕೆ

ಕಲಬುರಗಿಯ ಚಿಂಚೊಳ್ಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ನಾಗರಾಳ‌ ಬಳಿ ಇರುವ ಮುಲ್ಲಾಮಾರಿ ಜಲಾಶಯದ ಒಳಹರಿವು 1,500 ಕ್ಯೂಸೆಕ್ ಹೆಚ್ಚಾಗಿದೆ. ಜಲಾಶಯದ ಗರಿಷ್ಠ ಮಟ್ಟ 491 ಮೀಟರ್ ಇದ್ದು, ಯಾವುದೇ ಕ್ಷಣದಲ್ಲಾದರೂ ಜಲಾಶಯದ ನೀರು ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಮುಲ್ಲಾಮಾರಿ ಕೆಡದಂಡೆ ಗ್ರಾಮಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ ಸೇರಿ ಹಲವು ಗ್ರಾಮಗಳಿಗೆ ನದಿ ‌ದಡದಲ್ಲಿ ಹೋಗದಂತೆ ಎಇ‌ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

ಕಲಬುರಗಿಯಲ್ಲಿ ಮನೆಗಳಿಗೆ ನುಗ್ಗಿದ ನೀರು

ಕಲಬುರಗಿಯ ಶಹಾಬಾದ್, ಆಳಂದ, ಚಿಂಚೊಳ್ಳಿ ಸೇರಿ ಹಲವು ಭಾಗದಲ್ಲಿ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಚಿತ್ತಾಪೂರ ತಾಲೂಕಿನ ತರ್ಕಸ್ ಪೇಟೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ, ಶೇಖರಿಸಿಟ್ಟಿದ್ದ ದವಸ ಧಾನ್ಯಗಳು ನೀರುಪಾಲಾಗಿದ್ದವು. ಜತೆಗೆ ಚಂದಾಪುರ ಪಟೇಲ್ ಕಾಲೋನಿಯಲ್ಲಿ ಇಪ್ಪತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿತ್ತು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ‌ ಕಾರಣ‌ ಮಳೆ‌ ನೀರು ಮನೆಗೆ ನುಗ್ಗಿತ್ತು. ಪುರಸಭೆ ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕಿದರು.

ಮಳೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ

ಭಾರಿ ಮಳೆಗೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿತ್ತು. ಮರ ಬಿದ್ದ ಪರಿಣಾಮ ಕಿ.ಮೀ ಗಟ್ಟಲೆ ವಾಹನ ದಟ್ಟಣೆ ಉಂಟಾಗಿತ್ತು. ಅಡ್ಡಲಾಗಿ ಬಿದ್ದ ಮರದ ಕೆಳಗಡೆಯಿಂದ ಸವಾರರು ರಸ್ತೆ ದಾಟುತ್ತಿದ್ದರು. ಮರ ಬಿದ್ದು ಗಂಟೆಗಟ್ಟಲೆ ಸಮಯ ಕಳೆದರೂ ಸ್ಥಳಕ್ಕೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಸ್ಥಳೀಯರಿಂದಲೇ ಮರ ತೆರವುಗೊಳಿಸಲಾಯಿತು.

ಗುಡುಗು ಸಹಿತ ಮಳೆ ಎಚ್ಚರಿಕೆ

ಜೂನ್‌ 15ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಹಗುರದೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗಾಳಿವೇಗವು ಒಂದು ಎರಡು ಕಡೆಗಳಲ್ಲಿ 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಬೆಂಗಳೂರು ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನವು ಕ್ರಮವಾಗಿ 30-21 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Self Harming : ಪಿಎಸ್‌ಐ ಕಿರುಕುಳ; ಕುಡಿದ ಅಮಲಿನಲ್ಲಿ ಠಾಣೆ ಎದುರೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ

Self Harming : ಕುಡಿದ ಅಮಲಿನಲ್ಲಿ ಠಾಣೆಗೆ ಬಂದ ವ್ಯಕ್ತಿಯೊಬ್ಬ ಪಿಎಸ್‌ಐ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಠಾಣೆ ಎದುರೇ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

VISTARANEWS.COM


on

By

Self Harming
ಸಾಂದರ್ಭಿಕ ಚಿತ್ರ
Koo

ಕಾರವಾರ: ಪಿಎಸ್ಐ ಮಾನಸಿಕ ಕಿರುಕುಳ (Self Harming) ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ರಾಮನಗರ ಪೊಲೀಸ್ ಠಾಣೆ ಬಳಿ ಘಟನೆ ನಡೆದಿದೆ.

ರಾಮನಗರ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಆತ್ಮಹತ್ಯೆಗೆ ಯತ್ನಿಸಿದವರು. ಜೂಜಾಟ ಆರೋಪದಡಿ ಭಾಸ್ಕರ್‌ ವಿರುದ್ಧ ರಾಮನಗರ ಪಿಎಸ್ಐ ಬಸವರಾಜ್ ಮಗನೂರು ಪ್ರಕರಣ ದಾಖಲಿಸಿದ್ದರು. ನಿನ್ನೆ ಗುರುವಾರ ಜಮೀನು ವಿಚಾರಕ್ಕೆ ಭಾಸ್ಕರ್‌ ಮದ್ಯ ಸೇವಿಸಿ ಬೈಕ್‌ ಮೂಲಕ ಠಾಣೆಗೆ ತೆರಳಿದ್ದಾನೆ.

ಮದ್ಯ ಸೇವಿಸಿದ್ದರಿಂದ ಬೈಕ್ ಠಾಣೆಯಲ್ಲಿ ಬಿಟ್ಟು ಹೋಗುವಂತೆ ಪಿಎಸ್ಐ ಬಸವರಾಜ್‌ ಸೂಚಿಸಿದ್ದಾರೆ. ಇಷ್ಟಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮದ್ಯದ ಅಮಲಿನಲ್ಲಿ ಭಾಸ್ಕರ್‌ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಗಂಭೀರವಾಗಿ ಗಾಯಗೊಂಡ ಭಾಸ್ಕರ್‌ನನ್ನು ಬೆಳಗಾವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: Udupi News : ತಂದೆ ಸಾವಿನಿಂದ ಖಿನ್ನತೆಗೆ ಜಾರಿದವಳು ಬಾವಿಗೆ ಹಾರಿ ಆತ್ಮಹತ್ಯೆ; ಮಕ್ಕಳಿಬ್ಬರು ಅನಾಥ

ಸಾಲದ ಶೂಲಕ್ಕೆ ಮನನೊಂದ ರೈತ; ಕೆರೆಗೆ ಹಾರಿ ಆತ್ಮಹತ್ಯೆ

ಮೈಸೂರು: ಬೆಳೆ ಸಾಲ ತೀರಿಸಲಾಗದೆ ಕೆರೆಗೆ ಹಾರಿ ರೈತರೊಬ್ಬರು (Farmer Death) ಆತ್ಮಹತ್ಯೆ (Self Harming) ಮಾಡಿಕೊಂಡು ಮೃತಪಟ್ಟಿದ್ದಾರೆ. ಮೈಸೂರು (Mysuru News) ಜಿಲ್ಲೆಯ ಹುಣಸೂರು ತಾಲೂಕಿನ ಮನುಗನಹಳ್ಳಿಯಲ್ಲಿ ಘಟನೆ ನಡೆದಿದೆ. ಅಣ್ಣೇಗೌಡ (57) ಮೃತ ದುರ್ದೈವಿ.

ಅಣ್ಣೇಗೌಡ ಮೂರು ಎಕರೆಯಲ್ಲಿ ತಂಬಾಕು ಮತ್ತಿತರೆ ಬೆಳೆ ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಗಾಗಿ ಪಂಚವಳ್ಳಿಯ ಐಒಬಿ ಬ್ಯಾಂಕ್‌ನಲ್ಲಿ 10 ಲಕ್ಷ ರೂ. ಸಾಲ ಪಡೆದಿದ್ದರು. ಖಾಸಗಿ ಬ್ಯಾಂಕ್‌ನಲ್ಲಿ 14 ಲಕ್ಷ ರೂ. ಹಾಗೂ 5 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು. ಬೆಳೆ ಕೈ ಹತ್ತದ ಕಾರಣ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆರೆಯಿಂದ ರೈತನ ಮೃತದೇಹವನ್ನು ಮೇಲಕ್ಕೆತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Chahal-Dhanashree
ಕ್ರಿಕೆಟ್3 mins ago

Chahal-Dhanashree: ನ್ಯೂಯಾರ್ಕ್​ನಲ್ಲಿ ಪತ್ನಿ ಜತೆ ಪ್ರವಾಸಿ ತಾಣ ಸುತ್ತಿ ಎಂಜಾಯ್​ ಮಾಡಿದ ಚಹಲ್​

Self Harming
ಕ್ರೈಂ23 mins ago

Self Harming: ಅತ್ತೆ ಮಗಳು ಪ್ರೀತಿ ‌ನಿರಾಕರಿಸಿದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ

Fathers Day 2024
ಪ್ರಮುಖ ಸುದ್ದಿ37 mins ago

Fathers Day 2024: ʼಅಪ್ಪʼನೆಂದರೆ ಆಕಾಶ… ಎನ್ನುವವರು ಈ ಭಾನುವಾರ ತಪ್ಪದೇ ವಿಶ್‌ ಮಾಡಿ!

Drown in Quarry
ಕರ್ನಾಟಕ55 mins ago

Drown in Quarry: ಕ್ವಾರಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು‌

Kannada New Movie hiranys song out
ಸ್ಯಾಂಡಲ್ ವುಡ್1 hour ago

Kannada New Movie: ರಾಜವರ್ಧನ್ ನಟನೆಯ ‘ಹಿರಣ್ಯ’ ಸಿನಿಮಾದ ಮೆಲೋಡಿ ಹಾಡು ರಿಲೀಸ್

Actor Darshan
ಯಾದಗಿರಿ1 hour ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Narendra Modi
ವೈರಲ್ ನ್ಯೂಸ್1 hour ago

Narendra Modi: ನಗು ನಗುತ್ತಾ ಸೆಲ್ಫಿಗೆ ಪೋಸ್‌ ಕೊಟ್ಟ ಮೋದಿ, ಮೆಲೋನಿ; ಸೋಷಿಯಲ್‌ ಮೀಡಿಯಾದಲ್ಲಿ ʼಮೆಲೋಡಿʼಯದ್ದೇ ಸದ್ದು

Viral Video
ಕ್ರಿಕೆಟ್2 hours ago

Viral Video: ಪಾಕ್​ ಕ್ರಿಕೆಟಿಗ ವಾಸಿಂ ಅಕ್ರಮ್ ಜತೆ​ ಬ್ರೇಕ್​ ಡ್ಯಾನ್ಸ್​ ಮಾಡಿದ ಸುನಿಲ್ ಗಾವಸ್ಕರ್

ಪ್ರಮುಖ ಸುದ್ದಿ2 hours ago

Karnataka Politics: ಶಾಸಕ ಸ್ಥಾನಕ್ಕೆ ಎಚ್‌.ಡಿ. ಕುಮಾರಸ್ವಾಮಿ, ಬೊಮ್ಮಾಯಿ ರಾಜೀನಾಮೆ

Kannappa Teaser Kannada Vishnu Manchu Mohan Babu
ಟಾಲಿವುಡ್2 hours ago

Kannapp Teaser : ವಿಷ್ಣು ಮಂಚು ನಾಯಕನಾಗಿ ನಟಿಸಿರುವ `ಕಣ್ಣಪ್ಪ’ ಚಿತ್ರದ ಟೀಸರ್‌ ಬಿಡುಗಡೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ1 hour ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ21 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು22 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು23 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ23 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌