Kannada New Movie: ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ - Vistara News

ಸ್ಯಾಂಡಲ್ ವುಡ್

Kannada New Movie: ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ

Kannada New Movie: ಡೊಳ್ಳು ಸಾರಥಿ ಸಾಗರ್ ಪುರಾಣಿಕ್ ಹಾಗೂ ಪವನ್ ಒಡೆಯರ್ ಮತ್ತೊಂದು ಸಂಗಮದ ಸಿನಿಮಾ ಸೆಟ್ಟೇರಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ.

VISTARANEWS.COM


on

Kannada New Movie Pavan Kumar Wadeyar New Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ (Kannada New Movie) ಯಶ್, ಪುನೀತ್ ರಾಜ್ ಕುಮಾರ್ ಅವರಂತಹ ಸ್ಟಾರ್ ನಟರಿಗೆ ಸಿನಿಮಾ ಮಾಡಿ ಸೈ ಎನಿಸಿಕೊಂಡವರು ಪವನ್ ಒಡೆಯರ್. ನಿರ್ದೇಶನದಲ್ಲಿ ಗೆದ್ದಿರುವ ಪವನ್ ನಿರ್ಮಾಪಕರಾಗಿಯೂ ಮೊದಲ ಹೆಜ್ಜೆಯಲ್ಲಿ ಶಹಬಾಸ್ ಗಿರಿ ಪಡೆದುಕೊಂಡಿದ್ದಾರೆ. ʻಡೊಳ್ಳುʼ ಸಿನಿಮಾ ಮೂಲಕ ನಿರ್ಮಾಣಕ್ಕಿಳಿದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಪವನ್ ಒಡೆಯರ್ ಮತ್ತೊಮ್ಮೆ ಸಾಗರ್ ಪುರಾಣಿಕ್ ಜತೆ ಕೈ ಜೋಡಿಸಿರುವುದು ಗೊತ್ತೇ ಇದೆ.

ಡೊಳ್ಳು ಸಾರಥಿ ಸಾಗರ್ ಪುರಾಣಿಕ್ ಹಾಗೂ ಪವನ್ ಒಡೆಯರ್ ಮತ್ತೊಂದು ಸಂಗಮದ ಸಿನಿಮಾ ಸೆಟ್ಟೇರಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ʻವೆಂಕ್ಯಾʼ ಎಂಬ ಟೈಟಲ್ ಇಡಲಾಗಿದೆ. ವೆಂಕ್ಯಾನಿಗೆ ಸಾಗರ್ ಪುರಾಣಿಕ್ ಆಕ್ಷನ್ ಕಟ್ ಹೇಳುವುದರ ಜತೆಗೆ ನಾಯಕನಾಗಿಯೂ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಿರ್ದೇಶನದ ಜೊತೆಗೆ ಸಾಗರ್ ನಟನೆ ಜವಾಬ್ದಾರಿನ್ನು ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ: Kannada New Movie: ’ಭುವನಂ ಗಗನಂ’ ಸಿನಿಮಾಗೆ ಧ್ರುವ ಸರ್ಜಾ ಸಾಥ್‌!

ವೆಂಕ್ಯಾ ಶೂಟಿಂಗ್ ಈಗಾಗಲೇ ಚಾಲುವಾಗಿದೆ. ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾ. ಉತ್ತರ ಕರ್ನಾಟಕದ ಕಥೆಯಾದ್ರೂ ಅದು ದೇಶ ಎಲ್ಲಾ ಸುತ್ತಲಿದೆ. ಇದೊಂದು ಹೊಸ ಬಗೆಯ ಕಮರ್ಷಿಯಲ್ ಸಿನಿಮಾ ಅಂತಿದೆ ಚಿತ್ರತಂಡ. ಶೀಘ್ರದಲ್ಲೇ ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ಹಣ ಹಾಕುತ್ತಿರುವ ವೆಂಕ್ಯಾ ಚಿತ್ರಕ್ಕೆ ಸ್ನೇಹಿತರಾದ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಸಹ ನಿರ್ಮಾಣವಿರಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Saanvi Sudeep: ಟ್ಯಾಟೂ ಹಾಕಿಸಿಕೊಂಡ ಕಿಚ್ಚ ಸುದೀಪ್‌ ಮುದ್ದಿನ ಮಗಳು: ʻPIKUʼ ಅರ್ಥ ಏನು?

Saanvi Sudeep:  ಸಾನ್ವಿ ಇತ್ತೀಚೆಗೆ ಕಿರುಚಿತ್ರವೊಂದರಲ್ಲಿ ನಟನೆ ಮಾಡಿದ್ದಾರೆ. ಸುದೀಪ್​ ಅವರ ಸೋದರಳಿಯನ ‘ಜಿಮ್ಮಿ’ ಸಿನಿಮಾಕ್ಕೆ ಸಾನ್ವಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಜತೆಗೆ ಮ್ಯಾಕ್ಸ್‌ ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿಯೂ ಸಾನ್ವಿ ಕೆಲಸ ಮಾಡಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Saanvi Sudeep New Tattoo Piku meaning
Koo

ಕಿಚ್ಚ ಸುದೀಪ್ (Saanvi Sudeep) ಅವರ ಏಕೈಕ ಮುದ್ದಿನ ಮಗಳು ಸಾನ್ವಿ, ʻಜಿಮ್ಮಿʼ ಸಿನಿಮಾ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದರು. ಸಿನಿಮಾದ ಹಾಡಿನ ಮೂಲಕ ಸಾನ್ವಿ ಅವರಿಗೂ ಸಾಕಷ್ಟು ಮಂದಿ ಫ್ಯಾನ್ಸ್‌ ಇದ್ದಾರೆ.

ಇದೀಗ ಸಾನ್ವಿ ಕತ್ತಿನ ಭಾಗದಲ್ಲಿ ‘ಪೀಕು’ (PIKU) ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಇದನ್ನೂ ಓದಿ: Lok Sabha Election 2024: ಎಕ್ಸಿಟ್‌ ಪೋಲ್‌ ಬಗ್ಗೆ ನಿಮಗೆಷ್ಟು ಗೊತ್ತು? ಅದನ್ನು ನಡೆಸುವವರು ಯಾರು? ಹೇಗಿರುತ್ತೆ ಪ್ರಕ್ರಿಯೆ?

ಪೀಕು ಎಂದರೆ ಯಾವುದೇ ಸಿನಿಮಾ ಹೆಸರಲ್ಲ. ಪೀಕು ಅರ್ಥ ಏನು ಎಂಬುದುನ್ನು ಸ್ವತಃ ಸಾನ್ವಿ ಹೇಳಿಕೊಂಡಿದ್ದಾರೆ.

ʻಪೀಕುʼ, ಸಾನ್ವಿಯ ತಾಯಿ ಪ್ರಿಯಾ ಸುದೀಪ್​ರ ಅಡ್ಡ ಹೆಸರು. ಪ್ರಿಯಾ ಸುದೀಪ್​ ಅವರನ್ನು ಅವರ ತಾತ ಮುದ್ದಾಗಿ ಪೀಕು ಎಂದೇ ಕರೆಯುತ್ತಿದ್ದರಂತೆ. ತಾಯಿಯ ಅಡ್ಡ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ ಸಾನ್ವಿ.

ಸಾನ್ವಿ ಇತ್ತೀಚೆಗೆ ಕಿರುಚಿತ್ರವೊಂದರಲ್ಲಿ ನಟನೆ ಮಾಡಿದ್ದಾರೆ. ಸುದೀಪ್​ ಅವರ ಸೋದರಳಿಯನ ‘ಜಿಮ್ಮಿ’ ಸಿನಿಮಾಕ್ಕೆ ಸಾನ್ವಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Ravichandran Birthday: ಇಂದು ಕನಸುಗಾರನ ಜನುಮದಿನ: ಫ್ಯಾನ್ಸ್‌ಗೆ ಸರ್‌ಪ್ರೈಸ್‌ ಕೊಡ್ತಾರಾ ‘ಕ್ರೇಜಿ ಸ್ಟಾರ್’?

Ravichandran Birthday: ಕ್ರೇಜಿ ಸ್ಟಾರ್‌ ರವಿಚಂದ್ರನ್‌  ಅವರಿಗೆ ಇಂದು ಜನುಮದಿನದ (Ravichandran Birthday) ಸಂಭ್ರಮ. 63ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟ. ಇದೇ ವೇಳೆ ರವಿಚಂದ್ರನ್ ಕೂಡ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಫ್ಯಾನ್ಸ್‌ಗೆ ಅಚ್ಚರಿಯ ಉಡುಗೊರೆಗಳನ್ನು ನೀಡುವುದಕ್ಕೆ ಮುಂದಾಗಿದ್ದಾರೆ. ಸಿನಿಮಾವನ್ನು ಕೂಡ ರವಿಚಂದ್ರನ್ ಅವರು ಘೋಷಣೆ ಮಾಡುವ ಸಾಧ್ಯತೆ ಇದೆ.

VISTARANEWS.COM


on

Ravichandran Birthday will give surprise To Fans
Koo

ಬೆಂಗಳೂರು: ಚಂದನವನದ ಕ್ರೇಜಿ ಸ್ಟಾರ್‌ ರವಿಚಂದ್ರನ್‌  ಅವರಿಗೆ ಇಂದು ಜನುಮದಿನದ (Ravichandran Birthday) ಸಂಭ್ರಮ. 63ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟ. ಅಭಿಮಾನಿಗಳ ಜತೆ ಬರ್ತ್‌ಡೇ ಸೆಲೆಬ್ರೇಟ್ ಮಾಡಲಿದ್ದಾರೆ ರವಿಚಂದ್ರನ್‌. ರಾಜಾಜಿನಗರದ ನಿವಾಸದಲ್ಲಿ ಆಚರಣೆ ಮಾಡಲಿದ್ದಾರೆ ಫ್ಯಾನ್ಸ್‌. ಹೊಸಕೇರೇಹಳ್ಳಿಯ ಹೊಸ ಫ್ಲಾಟ್‌ಗೆ ಶಿಫ್ಟ್ ಆಗಿದ್ದರಿಂದ ರವಿಚಂದ್ರನ್ ಕುಟುಂಬ 9.30ಕ್ಕೆ ರಾಜಾಜಿನಗರದಲ್ಲಿ ಬರಲಿದೆ ಎಂದು ವರದಿಯಾಗಿದೆ. ಕಳೆದ ವಾರ ರವಿಚಂದ್ರನ್‌ ಅವರ ʻದಿ ಜಡ್ಜ್ ಮೆಂಟ್ʼ ಸಿನಿಮಾ ತೆರೆಕಂಡಿತ್ತು. ಇಂದೇ ರವಿಚಂದ್ರನ್‌ ಅವರ ಹೊಸ ಸಿನಿಮಾ ‘ಪ್ರೇಮಲೋಕ 2’ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

ಇದರ ಜತೆಗೆ ಮತ್ತೊಂದು ಸಿನಿಮಾವನ್ನು ಕೂಡ ರವಿಚಂದ್ರನ್ ಅವರು ಘೋಷಣೆ ಮಾಡುವ ಸಾಧ್ಯತೆ ಇದೆ. ಇದು ಕೂಡ ಅವರೇ ನಿರ್ದೇಶನ ಮಾಡಲಿದ್ದು, ನಟನೆಯನ್ನೂ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಸಿನಿಮಾ ಯಾವುದು? ಇದರ ಶೀರ್ಷಿಕೆ ಏನು ಎಂಬುದು ಇನ್ನೂ ಗೌಪ್ಯವಾಗಿ ಇಡಲಾಗಿದೆ.

ಇದನ್ನೂ ಓದಿ: Actor  Ravichandran: ಯಶ್, ದರ್ಶನ್ ವರ್ಷಕ್ಕೆ 3 ಸಿನಿಮಾ ಮಾಡಿಬಿಟ್ರೆ ಕಥೆ ಅಷ್ಟೇ ಎಂದ ರವಿಚಂದ್ರನ್‌!

ಕನಸುಗಾರನ ʻಪ್ರೇಮಲೋಕ 2’ 

ಹಂಪಿ ಉತ್ಸವದ ಸಮಯದಲ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್‌ (Actor Ravichandran) ಅವರು ಒಂದು ವರ್ಷದಿಂದ ಪ್ರೇಮಲೋಕ ಸಿನಿಮಾಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ‘ಪ್ರೇಮಲೋಕ 2’ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆ ಎಂಬ ಸುಳಿವು ನೀಡಿದ್ದರು. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಲಿದೆ. ಪುತ್ರ ಮನೋರಂಜನ್ ಹೀರೊ ಆಗಿ ನಟಿಸಲಿದ್ದಾರೆ. ಸದ್ಯ ರವಿಚಂದ್ರನ್ ‘ಪ್ರೇಮಲೋಕ’-2 ಚಿತ್ರದ ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ.

ಪ್ರೇಮಲೋಕ’ ಚಿತ್ರಕ್ಕಾಗಿ ಜ್ಯೂಹಿ ಚಾವ್ಲಾ ಕನ್ನಡಕ್ಕೆ ಬಂದಿದ್ದರು. ಆದರೆ ಈ ಬಾರಿ ಮನೋರಂಜನ್ ಜತೆ ಚೆನ್ನೈ ಚೆಲುವೆ ತೇಜು ಅಶ್ವಿನಿ ರೊಮ್ಯಾನ್ಸ್ ಮಾಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈ ಚಿತ್ರದಲ್ಲಿ 20-25 ಸಾಂಗ್​ಗಳು ಇರಲಿವೆ ಎಂದು ತಂಡ ಹೇಳಿಕೊಂಡಿದೆ.

1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ ರವಿಚಂದ್ರನ್ ಅವರೇ ನಿರ್ಮಾಣ ಮಾಡಿ, ನಟಿಸಿ, ನಿರ್ದೇಶನ ಮಾಡಿದ್ದರು. ಅಂದಿನ ಕಾಲಕ್ಕೆ ಈ ಸಿನಿಮಾ ಬರೋಬ್ಬರಿ 11 ಹಾಡುಗಳನ್ನು ಹೊಂದಿತ್ತು. ಈ ಕಾರಣಗಳಿಂದಾಗಿ ಯಾರೋಬ್ಬ ನಿರ್ಮಾಪಕರು ಮುಂದೆ ಬರಲೇ ಇಲ್ಲ. ಹೀಗಾಗಿ ರವಿಚಂದ್ರನ್‌ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ವೇಳೆ ಬೆಂಬಲಕ್ಕೆ ನಿಂತಿದ್ದು ರವಿಚಂದ್ರನ್ ತಂದೆ ವೀರಸ್ವಾಮಿ. ಇದಾದ ಬಳಿಕ ಸಿನಿಮಾ ಗೆಲುವು ಕಂಡಿತ್ತು.

ಕೆಡಿ ಸಿನಿಮಾ

ಸ್ಯಾಂಡಲ್‌ವುಡ್‌ ನಟ, ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿನೇಶನ್‌ ಸಿನಿಮಾ ʻಕೆಡಿ’ಗೆ ಕ್ರೇಜಿ ಸ್ಟಾರ್ ರವಿಚಂದ್ರನ್‌ ಅಭಿನಯಿಸುತ್ತಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಸಿನಿಮಾಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಈಗ ರವಿಚಂದ್ರನ್ `ʻಕೆಡಿ’ ಸಿನಿಮಾದಲ್ಲಿನ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಫ್ಯಾಂಟ್‌ನಲ್ಲಿ ರವಿಚಂದ್ರನ್ ಖಡಕ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಸಿನಿಮಾ ಡಿಸೆಂಬರ್‌ನಲ್ಲಿ ತೆರೆ ಕಾಣುತ್ತಿದೆ.

Continue Reading

ಸ್ಯಾಂಡಲ್ ವುಡ್

Ambareesh Birthday: ಸಿಹಿ ಸುದ್ದಿ ಕೊಡಲಿದ್ದಾರಾ ಅಭಿಷೇಕ್‌-ಅವಿವಾ? ಸುಮಲತಾ ಹೇಳಿದ್ದೇನು?

Ambareesh Birthday: ಇನ್ನು ರೆಬಲ್‌ ಸ್ಟಾರ್‌ ಹುಟ್ಟುಹಬ್ಬ ನಟ ದರ್ಶನ್‌ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ. ಅಂಬರೀಶ್‌ ಅವರ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ದರ್ಶನ್‌ ಶುಭಕೋರಿದ್ದಾರೆ. ಎಕ್ಸ್‌ನಲ್ಲಿ ಸ್ಪೆಷಲ್ ಆಗಿ ಅಂಬರೀಶ್ ಅಪ್ಪಾಜಿಗೆ ದರ್ಶನ್ (Darshan) ವಿಶ್ ಮಾಡಿದ್ದಾರೆ. ಅಭಿಷೇಕ್‌ ಅಂಬರೀಶ್‌ ಕಂಠೀರವ ಸ್ಟುಡಿಯೋದಲ್ಲಿರೋ ಅಂಬರೀಶ್ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದ್ದಾರೆ. ಮಾಧ್ಯಮಗಳ ಬಳಿ ಅಂಬರೀಶ್ ಅವರ ನೆನಪುಗಳ ಕುರಿತಾಗಿ ಸುಮಲತಾ ಮಾತನಾಡಿದರು.

VISTARANEWS.COM


on

Ambareesh Birthday during Sumalatha Ambareesh Talks About Abhishek Ambareesh And Aviva
Koo

ಬೆಂಗಳೂರು: ಇಂದು ರೆಬೆಲ್ ಸ್ಟಾರ್ ಅಂಬರೀಶ್ ಜನ್ಮ ದಿನ (Ambareesh Birthday). ಅಂಬಿ ನಮ್ಮನ್ನಗಲಿ ಐದು ವರ್ಷಗಳು ಕಳೆದರೂ ಬದುಕಿದ್ದಾಗ ಅವರು ಅದೆಷ್ಟು ಅಭಿಮಾನಿ ಬಳಗ ಹೊಂದಿದ್ದರೋ ಅಷ್ಟೇ ಫ್ಯಾನ್‌ ಬೇಸ್‌ ಇವತ್ತಿಗೂ ಅವರಿಗಿದೆ. ಇಂದು ಅವರ 72 ನೇ ಜನ್ಮ ದಿನವಾದ ಇಂದು ಪತ್ನಿ ಸುಮಲತಾ ಅಂಬರೀಶ್‌, ಪುತ್ರ ಅಭಿಷೇಕ್‌ ಅಂಬರೀಶ್‌ ಕಂಠೀರವ ಸ್ಟುಡಿಯೋದಲ್ಲಿರೋ ಅಂಬರೀಶ್ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದ್ದಾರೆ. ಮಾಧ್ಯಮಗಳ ಬಳಿ ಅಂಬರೀಶ್ ಅವರ ನೆನಪುಗಳ ಕುರಿತಾಗಿ ಸುಮಲತಾ ಮಾತನಾಡಿದರು. ಈ ಸಮಯದಲ್ಲಿ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಅಪ್ಪ ಆಗುತ್ತಿದ್ದಾರೆಯೇ? ನೀವು ಅಜ್ಜಿ ಆಗುತ್ತಿದ್ದೀರಿಯೇ? (Abhishek Ambareesh And Aviva) ಎಂಬ ಪ್ರಶ್ನೆ ಬಂತು. ಆಗ ಸಮಲತಾ ಅವರು ʻʻಸದ್ಯಕ್ಕೆ ಇಲ್ಲ. ಸಿಹಿ ಸುದ್ದಿ ಇದ್ದಾಗ ಖಂಡಿತ ಹೇಳುತ್ತೇನೆʼʼಎಂದರು.

ಈ ವೇಳೆ ಸುಮಲತಾ ಮಾತನಾಡಿ ʻʻಅಂಬಿ ಅಗಲಿ ಆರು ವರ್ಷ ಆಗಿದೆ. ಆದರೆ ಅಂಬಿ ಇದ್ದಾಗ ಎಷ್ಟು ಪ್ರೀತಿ ತೋರಿಸುತ್ತಿದ್ದರೋ ಅಷ್ಟೇ ಪ್ರೀತಿ ಈಗಲೂ ಅಭಿಮಾನಿಗಳು ತೋರಿಸುತ್ತಿದ್ದಾರೆ. ಅಂಬರೀಶ್ ಮಾಡಿದ ಸಮಾಜಮುಖಿ ಕೆಲಸಗಳನ್ನ ನೆನಪಲ್ಲಿಟ್ಕೊಂಡಿದ್ದಾರೆ ಜನ. ಕಳೆದ ವರ್ಷ ಅಂಬರೀಶ್ ಫೌಂಡೇಶನ್ ಶುರು ಮಾಡಿದ್ವಿ. ಫೌಂಡೇಶನ್ ವತಿಯಿಂದ ಸಾಧಕರನ್ನ ಗುರ್ತಿಸಿ ಸನ್ಮಾನಿಸುವ ಕೆಲಸ ಆಗ್ತಿದೆ. ಸಮಾಜಮುಖಿ ಕೆಲಸ ಮಾಡಿದವರಿಗೆ, ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಅಂಬರೀಶ್ ಫೌಂಡೇಶನ್ ವತಿಯಿಂದ ಸನ್ಮಾನ ಆಗುತ್ತಿದೆ. ಮಂಡ್ಯದಲ್ಲಿ ಇಂದು ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಹೋದ ಕಡೆಯಲೆಲ್ಲ ಅಂಬರೀಶ್ ಅವರ ಬಗ್ಗೆ ನಮಗೆ ಗೊತ್ತಿಲ್ಲದ ಕೆಲಸಗಳ ಬಗ್ಗೆ ಹೇಳ್ತಾರೆʼʼಎಂದರು.

ಇದನ್ನೂ ಓದಿ: Ambareesh Birthday: ರೆಬಲ್‌ ಸ್ಟಾರ್‌ 72 ನೇ ಹುಟ್ಟುಹಬ್ಬ; ಅಂಬಿ ಸ್ಮರಣಾರ್ಥ ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ

ಸುಮಲತಾ ಅಂಬರೀಷ್ ಅವರು ಬೆಳಿಗ್ಗೆಯೇ ಮಗ ಅಭಿಷೇಕ್ ಹಾಗೂ ಸೊಸೆ ಅವಿವಾ ಜತೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ.

ಅಂಬರೀಶ್‌ರನ್ನು ನೆನೆದ ಡಿ ಬಾಸ್‌

ಇನ್ನು ರೆಬಲ್‌ ಸ್ಟಾರ್‌ ಹುಟ್ಟುಹಬ್ಬ ನಟ ದರ್ಶನ್‌ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ. ಅಂಬರೀಶ್‌ ಅವರ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ದರ್ಶನ್‌ ಶುಭಕೋರಿದ್ದಾರೆ. ಎಕ್ಸ್‌ನಲ್ಲಿ ಸ್ಪೆಷಲ್ ಆಗಿ ಅಂಬರೀಶ್ ಅಪ್ಪಾಜಿಗೆ ದರ್ಶನ್ (Darshan) ವಿಶ್ ಮಾಡಿದ್ದಾರೆ.

ನಮ್ಮೆಲ್ಲರ ಅಚ್ಚುಮೆಚ್ಚಿನ ಸಹೃದಯಿ, ರೆಬೆಲ್ ಸ್ಟಾರ್ ಅಂಬಿ ಅಪ್ಪಾಜಿರವರ ಹುಟ್ಟುಹಬ್ಬದ (Birthday) ಪ್ರಯುಕ್ತ ಮೂಡಿಬಂದಿರುವ CDP ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟ ಅಭಿಮಾನಿ ಸಮೂಹಕ್ಕೆ ಧನ್ಯವಾದಗಳು. ನಮ್ಮ ನಿಷ್ಠೆಯ ಕೆಲಸ-ಕಾರ್ಯಗಳಲ್ಲಿ ಸದಾ ಬೆನ್ನೆಲುಬಾಗಿ ಅಂಬಿ ಅಪ್ಪಾಜಿ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ದರ್ಶನ್‌ ಅಂಬರೀಶ್‌ಗೆ ಶುಭಕೋರಿದ್ದಾರೆ.

Continue Reading

ಸ್ಯಾಂಡಲ್ ವುಡ್

Shakhahaari Movie: ಪ್ರೇಕ್ಷಕರನ್ನು ಆವರಿಸಿದ ‘ಶಾಖಾಹಾರಿ’: ಪರಭಾಷಿಕರಿಂದಲೂ ಚಿತ್ರಕ್ಕೆ ಮೆಚ್ಚುಗೆ!

Shakhahaari Movie : ಚಿತ್ರಮಂದಿರದಲ್ಲಿ ದಕ್ಕದ ಪ್ರೀತಿ ಶಾಖಾಹಾರಿ ಚಿತ್ರಕ್ಕೆ ಒಟಿಟಿಯಲ್ಲಿ ದೊರೆಯುತ್ತಿದೆ. ಅಮೇಜಾನ್ ಪ್ರೈಮ್‌ಗೆ ಎಂಟ್ರಿ ಕೊಟ್ಟ ಬರೀ 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡಿರುವ ಸಿನಿಮಾ.. ಎಲ್ಲಾ ಜಾಲತಾಣಗಳಲ್ಲು ಬಹಳಷ್ಟು ಜನ ದಿನೇ ದಿನೇ ಮೆಚ್ಚುಗೆ ವ್ಯಕ್ತಪಡಿಸುತ್ತ ಇರುವುದು ಗಮನಾರ್ಹ.

VISTARANEWS.COM


on

Shakhahaari Movie 1 cr minutes of streaming amazon prime
Koo

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಿನ್ನ-ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಹೊಸಬರ ಜತೆಗೆ ಅನುಭವಿ ತಾರಾಬಳಗ ಕೈ ಜೋಡಿಸಿದಾಗ ಒಂದೊಳ್ಳೆ ಅದ್ಭುತ ಸಿನಿಮಾ ಹೊರಹೊಮ್ಮಲಿದೆ ಎಂಬುದಕ್ಕೆ ʻಶಾಖಾಹಾರಿʼ ಚಿತ್ರ (Shakhahaari Movie) ತಾಜಾ ಉದಾಹರಣೆ. ತನ್ನ ಒಳ್ಳೆಯ ಕಂಟೆಂಟ್‌ನಿಂದಲೇ ಭಾರೀ ಸದ್ದು ಮಾಡಿದ್ದ ಈ ಚಿತ್ರವೀಗ ಅಮೇಜಾನ್ ಪ್ರೈಮ್‌ನಲ್ಲಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಶಾಖಾಹಾರಿ ನೋಡಿದವರೆಲ್ಲಾ ಇಂತಹ ಸಿನಿಮಾವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡ್ವಲ್ಲಾ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಫೆಬ್ರವರಿ 16ರಂದು ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದ ಶಾಖಾಹಾರಿ ಸಿನಿಮಾವೀಗ ಮೂರು ತಿಂಗಳ ಬಳಿಕ ಒಟಿಟಿಗೆ ಲಗ್ಗೆ ಇಟ್ಟಿದೆ. ಶುಕ್ರವಾರದಿಂದ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮ್ ಆಗಿರುವ ಈ ಚಿತ್ರವನ್ನು ನೋಡಿದವರೆಲ್ಲಾ ವಾವ್ ಇಂತಹ ಪ್ರಯತ್ನಗಳು ಮಾಲಿವುಡ್‌ನಲ್ಲಿ ಮಾತ್ರವಲ್ಲ ನಮ್ಮಲ್ಲಿಯೂ ನಡೆಯುತ್ತವೆ. ಅದಕ್ಕೆ ಪ್ರೇಕ್ಷಕಪ್ರಭು ಬೆನ್ನುತಟ್ಟಬೇಕಷ್ಟೇ.

ಚಿತ್ರಮಂದಿರದಲ್ಲಿ ದಕ್ಕದ ಪ್ರೀತಿ ಶಾಖಾಹಾರಿ ಚಿತ್ರಕ್ಕೆ ಒಟಿಟಿಯಲ್ಲಿ ದೊರೆಯುತ್ತಿದೆ. ಅಮೇಜಾನ್ ಪ್ರೈಮ್‌ಗೆ ಎಂಟ್ರಿ ಕೊಟ್ಟ ಬರೀ 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡಿರುವ ಸಿನಿಮಾ.. ಎಲ್ಲಾ ಜಾಲತಾಣಗಳಲ್ಲು ಬಹಳಷ್ಟು ಜನ ದಿನೇ ದಿನೇ ಮೆಚ್ಚುಗೆ ವ್ಯಕ್ತಪಡಿಸುತ್ತ ಇರುವುದು ಗಮನಾರ್ಹ.

ಇದನ್ನೂ ಓದಿ: Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್‌!

ಶಾಖಾಹಾರಿಗೆ ಜೈ ಎಂದ ಸತೀಶ್

ನೀನಾಸಂ ಸತೀಶ್ ಶಾಖಾಹಾರಿ ಸಿನಿಮಾವನ್ನು ಬಾಯ್ ತುಂಬಾ ಹೊಗಳಿದ್ದಾರೆ. ಯಾವ ನೀರಿಕ್ಷೆಯು ಇಲ್ಲದೆ ಸುಮ್ಮನೆ ಸಿನಿಮಾ ನೋಡುತ್ತಾ ಹೋದಾಗ,ಸಿನಿಮಾ ನಮ್ಮನ್ನು ಒಳಗೆ ಸೆಳೆದೊಯ್ಯುತ್ತದೆ,ಸುಳಿಯಂತೆ. ಪ್ರಾಮಾಣಿಕವಾದ, ಯಾರನ್ನೂ ಮೆಚ್ಚಿಸಲು ಅಲ್ಲದೆ ತಮ್ಮಷ್ಟಕ್ಕೆ ತಂಡ ಧ್ಯಾನಿಸಿದೆ. ಸಿನಿಮಾ ಬರೀ ನಿರ್ದೇಶಕ,ಅಥವಾ ನಟರಲ್ಲದೆ ಸಮೂಹದ ಕೆಲಸ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.ಗೆಳೆಯ ಗೋಪಿ ವಾವ್! ರಘು ಅಣ್ಣ ನಮ್ಮ ಹೆಮ್ಮೆ! ನಿರ್ದೇಶಕ ಸಂದೀಪ್ ,ಮತ್ತು ಛಾಯಾಗ್ರಹಣ, ಸಂಗೀತ ಎಲ್ಲವೂ ಅದ್ಭುತ.ನೋಡಲೇಬೇಕಾದ ನಮ್ಮ ಚಿತ್ರ ಎಂದು ಟ್ವೀಟ್ ಮಾಡಿದ್ದಾರೆ.

ಕ್ಲೈಮ್ಯಾಕ್ಸ್ ಚಿಂದಿ ಎಂದ ಪೃಥ್ವಿ

ನಟ ಪೃಥ್ವಿ ಅಂಬಾರ್ ಕೂಡ ಚಿತ್ರವನ್ನು ನೋಡಿ ಮನಸಾರೆ ಕೊಂಡಾಡಿದ್ದಾರೆ. ಶಾಖಾಹಾರಿ ಬಿಡುಗಡೆ ಸಮಯದಲ್ಲಿ ನನ್ನ ಚಿತ್ರ ಬಿಡುಗಡೆಯಾಗಿತ್ತು. ಹೀಗಾಗಿ ಇಂತಹ ಒಳ್ಳೆ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದೇನೆ. ಅದಕ್ಕಾಗಿ ನನಗೆ ಬೇಸರವಿದೆ. ಚಿತ್ರದ ಕಥೆ, ಟ್ವಿಸ್ಟ್, ಕ್ಲೈಮ್ಯಾಕ್ಸ್ ಎಲ್ಲವೂ ಅದ್ಭುತ. ರಂಗಾಯಣ ರಘು ಸರ್ ಹಾಗೂ ಗೋಪಾಲ್ ದೇಶಪಾಂಡೇ ಸರ್ ಅಭಿನಯ ಸೂಪರ್ ಎಂದಿದ್ದಾರೆ.

ಸಂದೀಪ್ ಸುಂಕದ್ ನಿರ್ದೇಶನದ ‘ಶಾಖಾಹಾರಿ’ ಸಿನಿಮಾದ ಸೂತ್ರಧಾರಿ. ಕನ್ನಡ ಚಿತ್ರರಂಗದ ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಪೊಲೀಸ್ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಅತ್ಯದ್ಬುತವಾಗಿ ನಟಿಸಿದ್ದರು. ಉಳಿದಂತೆ ವಿನಯ್, ನಿಧಿ ಹೆಗಡೆ, ಸುಜಯ್ ಶಾಸ್ತ್ರೀ, ಹರಿಣಿ ಹಾಗೂ ಕಾನ್‌ಸ್ಟೇಬಲ್ ಮಮತಕ್ಕನ ಪಾತ್ರಧಾರಿಯಾಗಿ ಪ್ರತಿಭಾ ನಾಯಕ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಕೀಲಂಬಿ ಮೀಡಿಯಾ ಲ್ಯಾಬ್ ಬ್ಯಾನರ್ ನಡಿ ರಾಜೇಶ್ ಕೀಲಾಂಬಿ, ರಂಜಿನಿ ಪ್ರಸನ್ನ ಶಾಖಾಹಾರಿಗೆ ಬಂಡವಾಳ ಹೂಡಿದ್ದಾರೆ.

ಶಿವಮೊಗ್ಗದ ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ರೋಚಕ ಕಥೆಯೇ ಶಾಖಾಹಾರಿ. ಸಿನಿಮಾದಲ್ಲಿ ಮಾಸ್ತಿಕಟ್ಟೆ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ (ರಂಗಾಯಣ ರಘು)ಗೆ ಹಿಂದೆ-ಮುಂದೆ ಯಾರೂ ಇರುವುದಿಲ್ಲ. ಹೋಟೆಲ್ ಮಾಲೀಕನಾಗಿರುವ ಸುಬ್ಬಣ್ಣ, ಬಾಣಸಿಗನಾಗಿಯೂ ಕೆಲಸ ಮಾಡಿಕೊಂಡಿರುತ್ತಾರೆ. ಇವರದ್ದು ಶುದ್ಧ ಶಾಕಾಹಾರಿ ಹೋಟೆಲ್… ಹೀಗಿರುವಾಗ, ಅಲ್ಲಿ ನಡೆಯುವ ಕೆಲ ಘಟನೆಗಳಿಂದ ಸುಬ್ಬಣ್ಣನ ಹೋಟೆಲ್ ಹೇಗೆ ‘ಶಾಖಾ’ಹಾರಿ ಆಗುತ್ತೆ ಎಂಬುದೆ ರೋಚಕ ವಿಷಯ.

Continue Reading
Advertisement
cylinder blast in Bengaluru
ಕ್ರೈಂ2 mins ago

Fire Accident : ಗಾಢ ನಿದ್ರೆಯಲ್ಲಿರುವಾಗಲೇ ಸಿಲಿಂಡರ್‌ ಸ್ಫೋಟ; ಬೆಂಕಿಯ ಕೆನ್ನಾಲಿಗೆಗೆ ಐವರು ಗಂಭೀರ

T20 World Cup 2007
ಕ್ರಿಕೆಟ್23 mins ago

T20 World Cup 2007: ಚೊಚ್ಚಲ ಟಿ20 ವಿಶ್ವಕಪ್ ಭಾರತ-ಪಾಕ್​ ಫೈನಲ್​ ಪಂದ್ಯದ ಮೆಲುಕು ನೋಟ

Gold Rate Today
ಚಿನ್ನದ ದರ24 mins ago

Gold Rate Today: ತುಸು ಇಳಿಕೆ ಕಂಡ ಚಿನ್ನದ ಬೆಲೆ; ಇಲ್ಲಿದೆ ದರದ ವಿವರ

Munawar Faruqui second wife Mehzabeen Coatwala single mom and makeup artist
ಬಾಲಿವುಡ್24 mins ago

Munawar Faruqui:  ʻಬಿಗ್ ಬಾಸ್ 17ʼರ ವಿಜೇತ  ಮುನಾವರ್ ಫಾರೂಕಿ ಎರಡನೇ ಪತ್ನಿ ಸಿಂಗಲ್‌ ಪೇರೆಂಟ್‌!

Lokayukta Raid
ಕ್ರೈಂ44 mins ago

Lokayukta Raid : ಲಂಚಕ್ಕೆ ಕೈವೊಡ್ಡಿದ ಕೆಆರ್‌ ಆಸ್ಪತ್ರೆ ವೈದ್ಯನಿಗೆ 4 ವರ್ಷ ಶಿಕ್ಷೆ, 50 ಸಾವಿರ ರೂ. ದಂಡ

Illegal Bangla Immigrants
ಕ್ರೈಂ56 mins ago

Illegal Bangla Immigrants: ಸಿಸಿಬಿ ದಾಳಿ, ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Viral News
ವೈರಲ್ ನ್ಯೂಸ್59 mins ago

Viral News: ಸರ ಕದ್ದು ಪರಾರಿಯಾಗಲು ಬೈಕ್‌ ಏರಿದವರಿಗೆ ಕಾದಿತ್ತು ಶಾಕ್‌; ವಿಡಿಯೊ ಇಲ್ಲಿದೆ

PM Narendra Modi
ದೇಶ1 hour ago

PM Narendra Modi: ಮೋದಿ ಧ್ಯಾನ ಮಾಡುವುದು ನೀತಿ ಸಂಹಿತೆ ಉಲ್ಲಂಘನೆಯೆ? ಕಾನೂನು ತಜ್ಞರ ಅಭಿಪ್ರಾಯ ಹೀಗಿದೆ

Saanvi Sudeep New Tattoo Piku meaning
ಸ್ಯಾಂಡಲ್ ವುಡ್1 hour ago

Saanvi Sudeep: ಟ್ಯಾಟೂ ಹಾಕಿಸಿಕೊಂಡ ಕಿಚ್ಚ ಸುದೀಪ್‌ ಮುದ್ದಿನ ಮಗಳು: ʻPIKUʼ ಅರ್ಥ ಏನು?

Nandamuri Balakrishna Pushes Away Actress Anjali
ಟಾಲಿವುಡ್1 hour ago

Nandamuri Balakrishna: ಕುಡಿದು ಬಂದು ವೇದಿಕೆ ಮೇಲೆ ನಟಿ ಅಂಜಲಿಯನ್ನು ತಳ್ಳಿದ್ರಾ ಬಾಲಯ್ಯ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌